ಪೊಣ್ಣು ಕುಂದಾಡ್ದಿ ದೈವ
ಪುತ್ತೂರು ಸಮೀಪದ ಪುಳಿತ್ತೂರು ಕುತ್ತೆತ್ತೂರಿನಲ್ಲಿ ಆರಾಧನೆ ಪಡೆವ ದೈವ ಪೊಣ್ಣು ಕುಂದಾಡ್ದಿ.
ಸಾಮಾನ್ಯವಾಗಿ ಪ್ರಧಾನ ದೈವಗಳ ಅತೀವ ಭಕ್ತರು, ಪ್ರಧಾನ ದೈವಗಳ ಆರಾಧನೆಯನ್ನು ಪ್ರಾರಂಭ ಮಾಡಿದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.ರಕ್ತೇಶ್ವರಿ ದೈವದ ಭಕ್ತೆಯಾಗಿದ್ದು ದಿನಾಲು ದೈವಕ್ಕೆ ನೀರು ಬೆಳಕು ಇಟ್ಟು ಆರಾಧನೆ ಮಾಡುತ್ತಿದ್ದ ಅಕ್ಕಚ್ಚು ( ಅಕ್ಕ ಅರಸು) ಎಂಬ ಜೈನ ಮಹಿಳೆ ರಕ್ತೇಶ್ವರಿ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.ಅದೇ ರೀತಿಯಲ್ಲಿ ಹಿರಿಯಡ್ಕದಲ್ಲಿ ವೀರಭದ್ರೇಶ್ವರ ನನ್ನು ಪ್ರತಿಷ್ಠಾಪನೆ ಮಾಡಿದ ಅಡ್ಕತ್ತಾಯ ಎಂಬ ಬ್ರಾಹ್ಮಣ ಅರ್ಚಕರೊಬ್ಬರು ಅಡ್ಕತ್ತಾಯ ಎಂಬ ದೈವವಾಗಿ ಆರಾಧನೆ ಪಡೆಯುತ್ತಾರೆ.
ಬದಿಯಡ್ಕ ಸಮೀಪದ ಕಾರಿಂಜೇಶ್ವರ ದೇವಾಲಯವನ್ನು ಕಟ್ಟಿಸಿದ ಕಾರಿಂಜೆತ್ತಾಯ ಎಂಬ ಬ್ರಾಹ್ಮಣ ಕಾರಿಂಜೆತ್ತಾಯ ದೈವವಾಗಿ ಆರಾಧನೆ ಪಡೆಯುತ್ತಾನೆ.ಹಾಗೆಯೇ ಜುಮಾದಿ ದೈವದ ಅನನ್ಯ ಭಕ್ತೆಯಾದ ಪೊನ್ನು ಕುಂದಾಡ್ದಿ ಎಂಬ ಹೆಣ್ಣು ಮಗಳು ಪಾದೆ ಎಂಬಲ್ಲಿ ಬುನಾದಿಯನ್ನು ಭೇಟಿ ಆಗುತ್ತಾಳೆ.ಅಲ್ಲಿ ಜುಮಾದಿ ದೈವ ತನಗೆ ಸ್ಥಾನ ಕಟ್ಟಿಸಿಕೊಡಲು ಹೇಳುತ್ತದೆ. ಹಾಗೆಯೇ ಪೊನ್ನು ಕುಂದಾಡ್ದಿ ಜುಮಾದಿ ದೈವಕ್ಕೆ ಸ್ಥಾನ ಕಟ್ಟಿಸಿ ಆರಾಧನೆ ಮಾಡುತ್ತಾಳೆ.ಆ ಪಾದೆಯಲ್ಲಿ ಅವಳು ಮಾಯಕಹೊಂದಿ ಜುಮಾದಿಯ ಸಾನ್ನಿಧ್ಯವನ್ನು ಸೇರಿ ದೈವತ್ವ ಪಡೆದು ಆರಾಧನೆ ಹೊಂದುತ್ತಾಳೆ.ಅಲ್ಲಿ ಪಾದೆಯಲ್ಲಿ ನೆಲೆ ನಿಂತ ಜುಮಾದಿ ದೈವವನ್ನು ಪಾದೆ ಜುಮಾದಿ ಎಂದು ಕರೆಯುತ್ತಾರೆ.
ಹಿರಿಯರ ಪ್ರಕಾರ ಆ ಪಾದೆಯಲ್ಲಿ ಒಂದು ಹೆಣ್ಣು ಮತ್ತು ಒಂದು ಬುಟ್ಟಿಯ ಚಿತ್ರ ಇತ್ತು.ಅದು ಪೊನ್ನು ಕುಂದಾಡ್ದಿ ಯ ಸಮಾಧಿ ಎಂದು ಹೇಳುತ್ತಾರೆ.

ಮಾಹಿತಿ ಮೂಲ Beauty of Tulunadu ಸಾವಿರದೊಂದು ಗುರಿಯೆಡೆಗೆ : ಗುರಿಯೆಡೆಗೆ : ತುಳುನಾಡ ದೈವಗಳು 438 ಪೊನ್ನು ಕುಂದಾಡ್ದಿ
No comments:
Post a Comment