© copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ್
ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ ಆಯ್ದ ಭಾಗ
ಹೆಚ್ಚಿನ ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
ಕೊರತಿ ದೈವದ ಪಾಡ್ದನ ಪ್ರಕಾರ ಕೊರತಿ ಮೂಲತಃ ಪಾರ್ವತಿ ದೇವಿ .ಒಮ್ಮೆ ಈಶ್ವರ ದೇವರು ಬೇಟೆಗೆ ಹೋಗುವಾಗ ಪಾರ್ವತಿದೇವಿ ವೇಷ ಮರೆಸಿಕೊಂಡು ಕಾಡಿಗೆ ಹೋಗುತ್ತಾಳೆ. ಅಲ್ಲಿ ಈಶ್ವರದೇವರಿಗೆ ಕೊರಪ್ಪೊಳು ರೂಪದ ಪಾರ್ವತಿಯ ಮೇಲೆ ಮನಸ್ಸಾಗುತ್ತದೆ. ಅವರ ಸಮಾಗಮವಾಗುತ್ತದೆ. ಕೊರಪ್ಪೊಳು ವೇಷದ ಪಾರ್ವತಿ ಈಶ್ವರದೇವರ ಉಂಗುರ, ಬೆಳ್ಳಿ ಬಿರಡೆಯನ್ನು ಕೇಳಿ ಪಡೆಯುತ್ತಾಳೆ. ಆನಂತರ ಈಶ್ವರನಿಗಿಂತ ಮೊದಲು ಅಡ್ಡದಾರಿಯಲ್ಲಿ ಬಂದು ಮನೆ ಸೇರುತ್ತಾಳೆ. ಈಶ್ವರ ಬಂದಾಗ “ನಿಮ್ಮ ಉಂಗುರ, ಬೆಳ್ಳೆ ಬಿರಡೆ ಎಲ್ಲಿ?” ಎಂದು ಕೇಳುತ್ತಾಳೆ. ಹೀಗೆ ಕೊರಪ್ಪೊಳು ವೇಷದ ಪಾರ್ವತಿಯೇ ‘ಕೊರತಿ’ ಎಂಬ ದೈವವಾಗಿ ಆರಾಧನೆ ಪಡೆಯುತ್ತದೆ.
ಆದರೆ ಕೊರತಿ ಭೂತ ಭತ್ತ ಕುಟ್ಟುವ ,ಕೇರುವ,ಅಂಗಳ ಗುಡಿಸುವ ಕಾರ್ಯಗಳ ಅಭಿನಯವನ್ನು ಮಾಡುತ್ತದೆ .ಇದು ಮೂಲತಃ ಮಾನವ ಮೂಲದ ಕೊರತಿಯ ಕೆಲಸಗಳನ್ನು ಸಾಂಕೇತಿಸುತ್ತದೆ .
ತುಳು ನಾಡಿನ ದೈವಗಳ ಮೂಲವನ್ನು ಪುರಾಣ ಮೂಲದ ದೇವರುಗಳೊಂದಿಗೆ ಸಮನ್ವಯ ಮಾಡುವುದು ಎಲ್ಲೆಡ ಕಂಡು ಬರುವ ಸಾಮಾನ್ಯ ವಿಚಾರ .ಇಲ್ಲಿ ಕೂಡ ಕೊರತಿ ಭೂತಕ್ಕೆ ಪಾರ್ವತಿಯ ವೇಷ ಬದಲಾಯಿಸಿದ ಕಥೆ ಸೇರಿರಬಹುದು .ವಾಸ್ತವದಲ್ಲಿ ಇದು ಅಸಾಧ್ಯದ ವಿಚಾರ ದೇವರು ಕಾಡಿಗೆ ಹೋದಾಗ ಪಾರ್ವತಿ ಮೊದಲೇ ವೇಷ ಬದಲಾಯಿಸಿ ಕೊರತಿಯ ರೂಪದಲ್ಲಿ ಕಾಡಿಗೆ ಹೋಗುವುದು .ಅಲ್ಲಿ ಈಶ್ವರ ದೇವರಿಗೆ ಕೊರತಿ ರೂಪದ ಪಾರ್ವತಿ ಮೇಲೆ ಮನಸಾಗುವುದು .ಇಲ್ಲಿ ಈಶ್ವರ ದೇವರಿಗೆ ತನ್ನ ಮಡದಿ ಎಂದು ತಿಳಿಯದೆ ಇರಲು ಸಾಧ್ಯವೇ ?
ಹಾಗಾಗಿ ಇದು ಈಶ್ವರ ಮತ್ತೆ ಪಾರ್ವತಿಯರ ಕಥೆಯಲ್ಲ ಎಂದು ಹೇಳಬಹುದು.
ಮೂಲತಃ ಇದು ಕೊರಗ ಸಮುದಾಯಕ್ಕೆ ಸೇರಿದ ಹೆಣ್ಣು ಮಗಳ ಕಥಾನಕ .ಕೊರತಿಗೇಕೆ ದೈವತ್ವ ದೊರೆಯಿತು ಎಂಬ ಬಗ್ಗೆ ಪ್ರಸ್ತುತ ಮಾಹಿತಿ ಸಿಕ್ಕುತ್ತಿಲ್ಲ .ಆದರೆ ತುಳುನಾಡಿನಲ್ಲಿ ದುರಂತ ಮತ್ತು ದೈವತ್ವ ಒಂದಕ್ಕೊಂದು ತಳುಕು ಹಾಕಿಕೊಂಡಿದೆ .
ಕೊರತಿ ಪಾದ್ದನಲ್ಲಿನ ಪುರಾಣ ದ ಕಥೆಯನ್ನು ಬಿಟ್ಟು ಅಲ್ಲಿನ ಆಶಯವನ್ನು ಗಮನಿಸಿದಾಗ ಕೊರತಿ ಕಾಡಿಗೆ ಹೋದ ಓರ್ವ ಕೊರಗ ಸಮುದಾಯದ ಹೆಣ್ಣು ಮಗಳು .ಅಲ್ಲಿ ಯಾರೋ ಅರಸ ಅಥವಾ ಬಲಿಷ್ಠ ವ್ಯಕ್ತಿ ಕೊರತಿಗೆ ತೊಂದರೆ ಕೊಟ್ಟಿರಬಹುದು .
ಮುಂದೆ ಅವಳು ಕೊರತಿ ದೈವವಾಗಿ ಆರಾಧಿಸಲ್ಪಡುತ್ತಿರ ಬಹುದು .
ಕೊರಗ ತನಿಯನ ತಾಯಿ ಮೈರೆಯೇ ಕೊರತಿ ಎಂದು ಆರಾಧಿಸಲ್ಪಡುತ್ತಿರುವ ಸಾಧ್ಯತೆ ಕೂಡ ಇದೆ .
ಕೋಳ್ಯೂರಿನ ಕುರವ ಕೊರತ್ತಿಯರ ಪಾಡ್ದನ ಭಿನ್ನ ಕಥೆಯನ್ಮು ಹೇಳುತ್ತದೆ
ತುಳುನಾಡಿನ ಹೆಚ್ಚಿನ ದೇವಾಲಯಗಳಿಗೂ ಅಲ್ಲಿನ ಮೂಲ ನಿವಾಸಿಗಳಿಗೂ ಅವಿನ ಭಾವ ಸಂಬಂಧ ಇರುವಂತೆ ಇಲ್ಲಿಯೂ ಅಂತಹ ಒಂದು ಐತಿಹ್ಯ ಪ್ರಚಲಿತ ಇದೆ.ಈ ಊರಿಗೆ ಬೇಟೆಯಾಡುತ್ತಾ ಬಂದ ಕುರವ ಕುರತ್ತಿಯರು (ಕೊರಗ ಸಮುದಾಯದ ಗಂಡು ಮತ್ತು ಹೆಣ್ಣು ) ದೇವರ ಗುಡ್ಡದ ಬಳಿಯಲ್ಲಿ ನೆಲೆಯಾದರು .ಒಂದು ಡಿನ ದೇವರ ಗುಡ್ಡದಲ್ಲಿರುವ ದೇವರ ಕೆರೆಯಲ್ಲಿ ಒಂದು ಆಮೆ ಕಾಣಿಸಿಕೊಳ್ಳುತ್ತದೆ.ದೇವರ ಕೆರೆಯಲ್ಲಿ ಮೀನು ,ಆಮೆ ಮೊದಲಾದವುಗಳನ್ನು ಹಿಡಿಯಬಾರದು ಎಂಬ ನಿಷೇಧ ಇತ್ತು . ccopy rights reserved (c)ಡಾ.ಲಕ್ಷ್ಮೀ ಜಿ © ಡಾ.ಲಕ್ಷ್ಮೀ ಜಿ ಪ್ರಸಾದ್
ಆದರೆ ಇದನ್ನು ಮೀರಿದ ಕೊರತಿ (ಕೊರಗ ಸಮುದಾಯದ ಹೆಂಗಸು )ಆಮೆಯ ಮೇಲೆ ಕತ್ತಿಯಿಂದ ಬಡಿಯುತ್ತಾಳೆ.ಆಗ ಅಲ್ಲಿ ತುಂಬಾ ರಕ್ತ ಹರಿಯುತ್ತದೆ.ಕೊರತಿ ಮಗುಚಿ ಬೀಳುತ್ತಾಳೆ.ಮುಂದೆ ಆವಳ ಮಠದ ದುರ್ಗಾ ದೇವಸ್ಥಾನದ ಸಂನಿಧಿಯಿಂದ ಎದ್ದು ನಿಂತು ಕೋಳ್ಯೂರು ದೇವಸ್ಥಾನದ ಮೇಲಿನ ಭಾಗದಲ್ಲಿರುವ ಸಂತೆ ಗದ್ದೆಯಲ್ಲಿ ನಿಲ್ಲುತ್ತಾಳೆ.
ಆಗ ಅವಳನ್ನು ನೋಡಿದ ಶಂಕರ ನಾರಾಯಣ ದೇವರು “ನೀನು ನನ್ನ ಅಂಗಳವನ್ನು ಗುಡಿಸಿಕೊಂಡು ಕೋಳ್ಯೂರು ದೇವಳದಲ್ಲಿ ಇರು” ಎನ್ನುತ್ತಾರೆ.ಹಾಗೆ ಅವಳು ಸತ್ಯಂಗಳದ ಕೊರತಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಕೋಳ್ಯೂರು ದೇವಸ್ಥಾನದ ಕೆಳಭಾಗದಲ್ಲಿ ನೆಲೆಯಾಗುತ್ತಾಳೆ. ccopy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ ©
ಆವಳ ಮಠದ ಕಾಡು ಕೊರತಿ ದೈವದ ಮೂಲಸ್ಥಾನ ಎಂಬ ಅಭಿಪ್ರಾಯವಿದೆ .ಹಾಗಾಗಿ ಕೋಳ್ಯೂರು ದೇವರ ಕೆರೆಯಲ್ಲಿ ಆಮೆ ಹಿಡಿದ ಕೊರಪ್ಪೋಳುವೇ ದೈವತ್ವ ಪಡೆದು ಸತ್ಯನ್ಗಳದ ಕೊರತಿ ದೈವವಾಗಿ ಆರಾಧಿಸಲ್ಪಡುತ್ತಿದ್ದಾಳೆ ಎಂದು ಹೇಳಬಹುದು .
ಇತರೆಡೆ ಆರಾಧಿಸಲ್ಪಡುವ ಕೊರತಿದೈವ ಮತ್ತು ಈ ದೈವ ಒಂದೆಯೇ ಅಥವಾ ಬೇರೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿಗಳು ಸಿಕ್ಕಿಲ್ಲ
ವಿಧಿ ನಿಷೇಧಗಳು ಆಡಿ ಮಾನವನ ಅಲಿಖಿತ ಶಾಸನಗಳಾಗಿದ್ದವು.ಅವುಗಳನ್ನು ಮೀರಿದವರಿಗೆ ಶಿಕ್ಷೆ ಕಾದಿರುತ್ತಿತ್ತು .
ದೇವರ ಕೆರೆಯಲ್ಲಿ ಅಮೆ ಹಿಡಿಯಬಾರದು ಎಂಬ ವಿಧಿಯನ್ನು ಮೀರಿದ ಕೊರತಿ ದುರಂತವನ್ನಪ್ಪಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ.
ಇಂದಿಗೂ ಕೋಳ್ಯೂರು ಗ್ರಾಮದಲ್ಲಿ ಆಮೆ ಹಿಡಿಯಬಾರದು ಕೊಲ್ಲಬಾರದು ತಿನ್ನ ಬರದು ಎಂಬ ಅಲಿಖಿತ ವಿಧಿ ಜಾರಿಯಲ್ಲಿದೆ ಅಲ್ಲಿನ ಜನರು ಯಾರೂ ಆಮೆ ಹಿಡಿಯುದಿಲ್ಲ

ಕೊರತಿ ದೈವ ಕೋಲದ ಸಮಯದಲ್ಲಿ ಮಗುಚಿ ಬೀಳುವ ಬಿದ್ದ ಮಲಗಿಕೊಂಡೇ ನುಡಿ ಕೊಡುವ ಸಂಪ್ರದಾಯ ಕೆಲವೆಡೆ ಇದೆ.ಇದು ಕೊರತಿ ಮೂಲತಃ ಕೋಳ್ಯೂರು ದದವರ ಕೆರೆಯಲ್ಲಿ ಆಮೆಯನ್ನು ಹಿಡಿದು ಮಗುಚಿ ಬಿದ್ದ ಸ್ತ್ರೀ ಎಂಬುದನ್ನು ಸೂಚಿಸುತ್ತದೆ.
ನಿಷೇಧವನ್ನು ಮೀರಿ ಆಮೆ ಹಿಡಿದಕೊರಗ ಸಮುದಾಯದ ಸ್ತ್ರೀ ದುರಂತವನ್ನಪ್ಪಿ ದೈವತ್ವ ಪಡೆದಿರುವ ಕಥಾನಕ ವಾಸ್ತವಕ್ಕೆ ಸಮೀಪವಾಗಿದೆ.
© ಡಾ.ಲಕ್ಷ್ಮೀ ಜಿ ಪ್ರಸಾದ್
ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ ಆಯ್ದ ಭಾಗ
ಹೆಚ್ಚಿನ ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು
No comments:
Post a Comment