ಕಳೆದ ವರ್ಷ ವೈರಲ್ ಆಗಿರುವ ಲಕ್ಷಾಂತರ ಮಂದಿ ಓದಿದ ಬರಹ
https://m.facebook.com/story.php?story_fbid=4388294387962495&id=100003459322515&mibextid=Nif5oz
ತುಳುನಾಡಿನಲ್ಲಿ ಮಾಯವಾಗುವವರು ಏನಾಗುತ್ತಾರೆ?
- ಡಾ.ಲಕ್ಷ್ಮೀ ಜಿ ಪ್ರಸಾದ್
ಆಧಾರ
#ಕರಾವಳಿಯ_ಸಾವಿರದೊಂದು_ದೈವಗಳು
ಮಾಯ ಮತ್ತು ಜೋಗದ ಬೆಳಕಿನಲ್ಲಿ " ಕರಾವಳಿಯ ಸಾವಿರದೊಂದು ದೈವಗಳು ಲೇ: ಡಾ.ಲಕ್ಷ್ಮೀ ಜಿ ಪ್ರಸಾದ್ ,
ಪುಸ್ತಕ ಬೇಕಾಗಿದ್ದವರು
ಮೊಬೈಲ್ 9480516684 ಗೆ ವಾಟ್ಸಪ್ ಮೆಸೇಜ್ ಅಥವಾ ಕರೆ ಮಾಡಿ
#ಕಾಂತಾರ Rishab Shetty
ನನ್ನ ಸಹೋದ್ಯೋಗಿ ಗಣಿತ ಉಪನ್ಯಾಸಕಿ ಮಂಜುಳಾ ಅವರು ಇಂದು ಕೇಳಿದ ಪ್ರಶ್ನೆ ಇದು.ಕಾಂತಾರ ಸಿನೇಮ ನೋಡಿದ ಅನೇಕರು ಇದೇ ಪ್ರಶ್ನೆಯನ್ನು ನನ್ನಲ್ಲಿ ಕೇಳಿದ್ದಾರೆ.
ಇದಕ್ಕೆ ಸರಳವಾಗಿ ಉತ್ತರಿಸುವ ಯತ್ನ ಮಾಡಿದ್ದೇನೆ.
ತುಳುನಾಡಿನ ದೈವಾರಾಧನೆ ಒಂದು ವಿಶಿಷ್ಟವಾದ ಆರಾಧನಾ ರಂಗ ಕಲೆ,ಧಾರ್ಮಿಕ ಆರಾಧನಾ ಪದ್ಧತಿ.ಹಿಂದು,ಮುಸ್ಲಿಂ ,ಜೈನ ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಜಾತಿ ಮತಗಳ ಜನರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ.ಎಲ್ಲ ಜಾತಿಮತಗಳ ಜನರೂ ಇಲ್ಲಿನ ದೈವಗಳ ಆರಾಧನೆ ಮಾಡುತ್ತಾರೆ.ಇಲ್ಲಿ ದೈವಗಳಾಗುವ ಮೊದಲು ಇವರು ಏನಾಗಿದ್ದರು ಯಾರಾಗಿದ್ದರು ?ಎಂಬುದು ಗಣನೆಗೆ ಬರುವುದಿಲ್ಲ.ದೈವಗಳಾದ ನಂತರ ಇವರು ನಮ್ಮನ್ನು ಕಾಯುವ ಶಕ್ತಿಗಳು.ಎಲ್ಲ ದೈವಗಳಿಗೂ ಸಮಾನ ಆದರ, ಗೌರವ ,ಭಕ್ತಿಯ ಆರಾಧನೆ.ಹೀಗೆ ಜಾತಿ ಮತಗಳ ಸಾಮರಸ್ಯ ತುಳು ಸಂಸ್ಕೃತಿಯ ವೈಶಿಷ್ಟ್ಯ .
ತುಳು ಸಂಸ್ಕೃತಿಯಲ್ಲಿ ಮಾಯವಾಗುವುದು ಎಂದರೆ ಸಾಯುವುದು ಅಲ್ಲ ,ದುರಂತವೂ ಅಲ್ಲ ಬರೀ ಅದೃಶ್ಯವಾಗುವುದಲ್ಲ ,ಕರಗಿ ಹೋಗುವುದಲ್ಲ ಅಥವಾ ಇಲ್ಲವಾಗುವುದೂ ಅಲ್ಲ
ಇಲ್ಲಿ ಮಾಯಕಕ್ಕೆ ಸಲ್ಲುದು ( ಮಾಯಕೊಗ್ / ಮಾಯೊಗ್ ಸಂದುನೆ) ಎಂದು ಹೇಳುತ್ತಾರೆ.ಅದರರ್ಥ
ದೈವದ ಸಾನ್ನಿಧ್ಯಕ್ಕೆ ಸೇರುವುದು ಎಂದಾಗಿದೆ.ತುಳುವರ ಪರಿಕಲ್ಪನೆಯ ಮೋಕ್ಷ ಇದು. ಪುರಾಣ ಪರಿಕಲ್ಪನೆಯ ಮೋಕ್ಷಕ್ಕೂ ಮಾಯಕಕ್ಕೆ ಸಲ್ಲುವುದಕ್ಕೂ ವ್ಯತ್ಯಾಸವಿದೆ.
© ಡಾಲಕ್ಷ್ಮೀ ಜಿ ಪ್ರಸಾದ್
ಈ ಪರಿಕಲ್ಪನೆಯ ಮಾಯಕ ಅಥವಾ ಮೋಕ್ಷವೆಂದರೆ ಆ ದೈವದ ಜೊತೆ ಐಕ್ಯವಾಗುವುದಲ್ಲ ಬದಲಿಗೆ ಆ ದೈವದಂತೆಯೇ ಶಕ್ತಿ ಪಡೆದು ಇನ್ನೊಂದು ದೈವವಾಗುವುದು ಎಂದರೆ ಶಿಷ್ಟ ರಕ್ಷಕ ದುಷ್ಟ ಶಿಕ್ಷಕರಾಗಿ ಜನರನ್ನು ಕಾಪಾಡುವ ಒಲವಿನ ಶಕ್ತಿಗಳಾಗುವುದು.ಇದನ್ನೇ ದೈವತ್ವ ಪ್ರಾಪ್ತಿ ಅಥವಾ ದೈವತ್ವ ಪಡೆಯುವುದು ಎನ್ನುತ್ತೇವೆ ಯಾವ ದೈವದ ಸಾನ್ನಿದ್ಯವನ್ನು ಪಡೆದಿರುವರೋ ಆ ದೈವದ ಸೇರಿಗೆ ದೈವ/ ಪರಿವಾರ ದೈವ ಎಂದು ಈ ದೈವವನ್ನು ಗುರುತಿಸುತ್ತಾರೆ .ಹಾಗಾಗಿಮಾಯವಾದಾಗ ಅಶೌಚದ ಆಚರಣೆ ಇರುವುದಿಲ್ಲ,ಅಂತ್ಯ ಸಂಸ್ಕಾರ ಇರುವುದಿಲ್ಲ ಬದಲಿಗೆ ದೈವದ ಆರಾಧನೆ ಇರುತ್ತದೆ ಯಾಕೆಂದರೆ ಅವರು ಸತ್ತದ್ದಲ್ಲ.ದೈವ ಸಾನ್ನಿಧ್ಯಕ್ಕೆ ಸೇರಿ ದೈವವೇ ಆಗಿರುತ್ತಾರೆ© ಡಾ.ಲಕ್ಷ್ಮೀ ಜಿ ಪ್ರಸಾದ್
ಇನ್ನು ತುಳುನಾಡಿನಲ್ಲಿ ಯಾರಿಗೆ ಯಾವಾಗ ಹೇಗೆ ಯಾಕೆ ದೈವತ್ವ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ಸಿದ್ಧ ಸೂತ್ರವಿಲ್ಲ.ಸಾಮಾನ್ಯವಾಗಿ ಎಲ್ಲರಂತೆ ಮಾನವರಾಗಿ ಹುಟ್ಡಿ ಅತಿಮಾನುಷ ಸಾಹಸ ಮೆರೆದವರು ಮಾಯಕಕ್ಕೆ ಸಂದು ದೈವತ್ವ ಪಡೆದು ದೈವಗಳಾಗಿ ಆರಾಧನೆ ಪಡೆದಿದ್ದಾರೆ ,
ಕೋಟಿ -ಚೆನ್ನಯರು,ಮುದ್ದ -ಕಳಲರು ಎಣ್ಮೂರು ದೆಯ್ಯು -ಕೇಲತ್ತ ಪೆರ್ನೆ,ಕಾನದ- ಕಟದರು ಕೋಟೆದ ಬಬ್ಬು- ತನ್ನಿ ಮಾಣಿಗ ಮೊದಲಾದ ಅತಿಮಾನುಷ ಸಾಹಸಿಗಳು ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ
© ಡಾಲಕ್ಷ್ಮೀ ಜಿ ಪ್ರಸಾದ್
ಇನ್ನು ದೈವಗಳ ಆರಾಧನೆ ಮಾಡಿದ ಅನನ್ಯ ಭಕ್ತರನ್ನು ದೈವಗಳು ಅನುಗ್ರಹಿಸಿ ಅವರನ್ನು ಮಾಯ ಮಾಡಿ ತನ್ನ ಸೇರಿಗೆಗೆ / ಸಾನ್ನಿಧ್ಯಕ್ಕೆ ಸೇರಿಸಿಕೊಳ್ಳುತ್ತವೆ
ತನ್ನ ಅನನ್ಯ ಭಕ್ತೆಯಾದ ಅಕ್ಕ ಅರಸು ಎಂಬ ಜೈನ ಅರಸಿಯನ್ನು ರಕ್ತೇಶ್ವರಿ ದೈವವು ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ ,ಈ ಜೈನ ರಾಣಿ ಅಕ್ಕಚ್ಚು ದೈವವಾಗಿ ಆರಾಧನೆ ಹೊಂದುತ್ತಾಳೆ
ಕೋಟೆದ ಬಬ್ಬು ಸ್ವಾಮಿಯ ಅನನ್ಯ ಭಕ್ತೆಯಾದ ಅಜ್ಜಿ ಬೆರೆಂತೊಲು ಅನ್ನು ದೈವ ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಂಡ ಕಥೆ ಇದೆ.ಕೋಟೆದ ಬಬ್ಬು ಸ್ವಾಮಿಯ ಸಾನ್ನಧ್ಯ ಪಡೆದ ಅಜ್ಜಿ ಬೆರೆಂತೊಲು ಕೂಡ ಸೇರಿಗೆ ದೈವವಾಗಿ ಆರಾಧನೆ ಪಡೆಯುತ್ತಾಳೆ
ತನ್ನ ಅನನ್ಯ ಭಕ್ತೆಯಾದ ಓರ್ವ ಬಾಣಿಯೆತ್ತಿ ( ಮಲಯಾಳ ಗಾಣಿಗ ಸಮುದಾಯದ ಸ್ತ್ರೀ) ಯನ್ನು ಭಗವತಿ ದೈವ ತನ್ನ ಸಾನ್ನಿಧ್ಯಕ್ಕೆ ಸೇರಿಸಿಕೊಂಡಿದೆ,ಈ ಸ್ತ್ರೀ ಒರು ಬಾಣಿಯೆತ್ತಿ ಹೆಸರಿನಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ
ತನ್ನನ್ನು ಬಹಳ ಭಕ್ತಿ ನಿಷ್ಠೆಯಿಂದ ಆರಾಧನೆ ಮಾಡುತ್ತಿದ್ದ ಬ್ರಾಹ್ಮಣ ಅರ್ಚಕನನ್ನು ಪಂಜುರ್ಲಿ ದೈವವು ಮಾಯ ಮಾಡಿ ದೈವತ್ವ ನೀಡುತ್ತದೆ ಆತ ದೇವರ ಪೂಜಾರಿ ಪಂಜುರ್ಲಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ,ಇಪ್ಪತಜ್ಜ ,ಕಾನಲ್ತಾಯ ಭಟ್ರು ಭೂತ,ಕಚ್ಚೆ ಭಟ್ಟ,ಬ್ರಾಣ ಭೂತ ಮೊದಲಾದವರು ಈ ರೀತಿಯಾಗಿ ದೈವತ್ವ ಪಡೆದವರು.
ಅದೇ ರೀತಿ ದೈವ ದೇವರುಗಳಿಗೆ ಸ್ಥಾನ ಕಟ್ಟಿಸುವ ಮಹತ್ಕಾರ್ಯ ಮಾಡಿದ ಅನೇಕರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ
ಕಾರಿಂಜೆತ್ತಾಯ,ಅಡ್ಕತ್ತಾಯ ,ಚೆನ್ನಿಗರಾಯ ಸುಜೀರ್ ನ ದೇಯಿ ಬೈದ್ಯೆತಿ,ಜಾನು ನಾಯ್ಕ/ ಬೈದ್ಯ ,ಕಂರ್ಭಿಸ್ಥಾನದ ದೇಯಿ ಬೈದೆತಿ ,ಅಚ್ಚು ಬಂಗೇತಿ ಮೊದಲಾದವರು ಇಂತಹ ಕಾರಣಕ್ಕೆ ದೈವತ್ವ ಪಡೆದವರು.ಜನರಿಗೆ ಉಪಕಾರಿಯಾಗಿ ಹಳ್ಳಿಮದ್ದುಗಳನ್ನು ಕೊಡುತ್ತಿದ್ದ ಬ್ರಾಹ್ಮಣ ಸ್ತ್ರೀ ಇಲ್ಲತಮ್ಮ ದೈವವಾಗಿ ಇನ್ನೋರ್ವ ಸ್ತ್ರೀ ಶ್ರೀಮಂತಿ ದೈವವಾಗಿ ಆರಾಧನೆ ಪಡೆಯುತ್ತಿದ್ದಾರೆ
ಇನ್ನು ದೈವಗಳ ಆಗ್ರಹಕ್ಕೆ ಎಂದರೆ ಕೋಪಕ್ಕೆ ತುತ್ತಾದವರು ಕೂಡ ದೈವತ್ವ ಪಡೆದು ಆರಾಧಿಸಲ್ಪಡುವ ಅನೇಕ ಕಥಾನಕಗಳಿವೆ © ಡಾ.ಲಕ್ಷ್ಮೀ ಜಿ ಪ್ರಸಾದ್
ಚಾಮುಂಡಿ ದೈವಕ್ಕೆ ದ್ರೋಹ ಮಾಡಿದ ಓರ್ವ ಬ್ರಾಹ್ಮಣನನ್ನು ದೈವ ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.ಆತ ಜತ್ತಿಂಗ ದೈವವಾಗಿ ಆರಾಧನೆ ಪಡೆಯುತ್ತಾನೆ.
ತನಗೆ ಆಶ್ರಯ ಕೊಟ್ಟ ಮನೆಯ ಒಡೆಯನ ಮಗಳನ್ನು ತನ್ನ ಮಾಂತ್ರಿಕ ಶಕ್ತಿಯಿಂದ ವಶಪಡಿಸಿಕೊಳ್ಳಲೆತ್ನಿಸಿದ ಆಲಿ ಬ್ಯಾರಿ ಎಂಬ ಮುಸ್ಕಿಂ ವ್ಯಕ್ತಿಯನ್ನು ರಕ್ತೇಶ್ವರಿ ದೈವ ಉಪಾಯದಿಮದ ನೀರಿಗಿಳಿಸಿ ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.ಆತ ಆಲಿ ಭೂತ/ ಆಲಿ ಚಾಮುಂಡಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ.
ಮಂಗಳೂರಿನ ಉರ್ವ ಚಿಲುಂಬಿಯಲ್ಲಿ ಅರಬ್ ವ್ಯಾಪಾರಿಯೊಬ್ಬ ಮಲರಾಯ ದೈವದ ಭಕ್ತೆಯಾದ ಓರ್ವ ಬ್ರಾಹ್ಮಣ ಹುಡುಗಿಗೆ ತೊಂದರೆ ಕೊಡುತ್ತಾನೆ.ಆಗ ತನ್ನ ಭಕ್ತೆಯ ಮಾನ ರಕ್ಷಣೆಗಾಗಿ ಮಲರಾಯ ದೈವ ಆ ಹುಡುಗಿಯನ್ನು ಮಾಯ ಮಾಡುತ್ತದೆ.ಶಿಕ್ಷೆಯಾಗಿ ಅ ಅರಬ್ ವ್ಯಾಪಾರಿಯನ್ನು ಮಾಯ ಮಾಡುತ್ತದೆ.ಮಾಯವಾದ ಈ ಇಬ್ಬರೂ ಅದೇ ದೈವದ ಸೇರಿಗೆಗೆ / ಸಾನ್ನಿಧ್ಯಕ್ಕೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.
© ಡಾಲಕ್ಷ್ಮೀ ಜಿ ಪ್ರಸಾದ್
ಹೇಳಿದ ಹರಕೆಯನ್ನು ಮರೆತ ದೇವು ಪೂಂಜನ ಮೇಲೆ ಕಾಂತೇರಿ ಜುಮಾದಿ ದೈವ ಮುನಿದು ದುರಂತವನ್ನು ಉಂಟು ಮಾಡುತ್ತದೆ.ನಂತರ ದೇವು ಪೂಂಜನೂ ಕಾಂತೇರಿ ಜುಮಾದಿ ದೈವದ ಬಂಟ ದೈವವಾಗಿ ಆರಾಧನೆ ಪಡೆಯುತ್ತಾನೆ ಹೇಳಿದ ಹರಕೆಯನ್ನು ಮರೆತದ್ದಲ್ಲದೆ ಜುಮಾದಿ ದೈವದ ಹಲಸಿನ ಮರದ ಹಣ್ಣನ್ನು ಕೊಯ್ದು ತಿಂದ ಮಂಜನಾಳ್ವರಿಗೆ ಶಿಕ್ಷೆಯ ರೂಪದಲ್ಲಿ ಕಂಬಳದ ಕೋಣಗಳು ಹಾಗೂ ನಾರ್ಯದ ಬಬ್ಬುವನ್ನು ಮಾಯ ಮಾಡುತ್ತದೆ.ಕಂಬಳದ ಕೋಣ ಹಾಗೂ ನಾರ್ಯದ ಬಬ್ಬು ದೈವತ್ಬ ಪಡೆದು ಎರುಬಂಟ ಮತ್ತು ಉರವ ದೈವಗಳಾಗಿ ಆರಾಧನೆ ಪಡೆಯುತ್ತಾರೆ .
ವಿಧಿ ನಿಷೇಧಗಳು ಆದಿಮಾನವನ ಕಾಲದ ಅಲಿಖಿತ ಶಾಸನಗಳಾಗಿದ್ದವು ಎಂಬಂತೆ ನಿಯಮಗಳನ್ನು ಮೀರಿದ ಅನೇಕರು ಮಾಯವಾಗಿ ದೈವತ್ವ ಪಡೆದಿದ್ದಾರೆ.ಬಬ್ಬರ್ಯನ ಕೋಲವನ್ನು ಸ್ತ್ರೀಯರು ನೋಡಬಾರದೆಂಬ ನಿಯಮವನ್ನು ಮೀರಿ ನೋಡಿದ ಮುಸ್ಲಿಂ ಮಹಿಳೆ ಬ್ಯಾರ್ದಿ ಭೂತವಾಗಿ ದೈವತ್ವ ಪಡೆದಿದ್ದಾಳೆ
ಉಳ್ಳಾಕುಲ ದೈವದ ಕೋಲವನ್ನು ಹಲಸಿನ ಮರದ ಎಡೆಯಿಂದ ಬಗ್ಗಿ ನೋಡಿದ ಈರ್ವರು ಬ್ರಾಹ್ಮಣ ಹುಡುಗಿಯರು ನುರ್ಗಿಮದಿಮಾಳ್ ದುರ್ಗಿಮದಿಮಾಳ್ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ ಅರಸು ದೈವದ ಕೋಲವನ್ನು ನೋಡಿದ ಮೀನುಗಾರ್ತಿ ಮಹಿಳೆಯೊಬ್ಬಳನ್ನು ದೈವ ಮಾಯಮಾಡುತ್ತದೆ
© ಡಾಲಕ್ಷ್ಮೀ ಜಿ ಪ್ರಸಾದ್
ಇನ್ನು ಯಾವುದೇ ವಿಶೇಷ ಕಾರಣವಿಲ್ಲದೇ ಇದ್ದಾಗಲೂ ದೈವದ ದೃಷ್ಟಿಗೆ ಬಿದ್ದು ಮಾಯವಾಗಿ ಆಯಾಯ ದೈವಗಳ ಸಾನ್ನಧ್ಯದಲ್ಲಿ ದೈವಗಳಾಗಿ ಆರಾಧಿಸಲ್ಪಡುತ್ತಾರೆ.ಕುಂಞಿ ಭೂತ,ಬ್ಯಾರಿ ಭೂತ,ಮಾಪುಲೆ ಮಾಪುಳ್ತ ಭೂತಗಳು,ಮಾಪುಲ್ತಿ ಧೂಮಾವತಿ ಬ್ರಾಣ ಭೂತ ಮತ್ತು ಮಾಣಿ ಭೂತ ,ದಾರು ಕುಂದಯ ಮೊದಲಾದವರು ಅಕಾರಣವಾಗಿ ದೈವದ ದೃಷ್ಟಿ ತಾಗಿಮಾಯವಾಗಿ ಆಯಾಯ ದೈವಗಳ ಸಾನ್ನಿಧ್ಯ ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ
© ಡಾಲಕ್ಷ್ಮೀ ಜಿ ಪ್ರಸಾದ್
ತುಳುನಾಡಿನಲ್ಲಿ ಅನೇಕ ಕನ್ನಡಿಗರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ ಬಚ್ಚ ನಾಯಕ ತಿಮ್ಮಣ್ಣ ನಾಯಕ ಬೈಸು ನಾಯಕ ಕನ್ನಡ ಬೀರ ಕನ್ನಡ ಭೂತ ,ಕನ್ನಡ ಯಾನೇ ಲುರುಷ ಭೂತ ಮೊದಲಾದ ಅನೇಕರು ಕನ್ನಡ ಮೂಲದ ದೈವಗಳು
ಓರ್ವ ಬ್ರಿಟಿಷ್ ಸುಭೇದಾರ ಕುಡ ಕಾರಣಾಂತರಗಳಿಂದ ದೈವತ್ವ ಪಡೆದು ಕನ್ನಡ ಬೀರ ಎಂಬ ಹೆಸರಿನ ದೈವವಾಗಿ ಆರಾಧನೆ ಪಡೆಯುತ್ತಾನೆ
ದೈವವನ್ನು ಒಂದೆಡೆಯಿಂದ ತನ್ನ ಮನೆಗೆ ಕೊಂಡು ಹೋಗುವ ಸಮಯದಲ್ಲಿ ಕಾರಣಾಂತರದಿಂದ ಆ ವ್ಯಕ್ತಿಯ ಮಡಿಲಲ್ಲಿ ಓರ್ವ ಪೊಲೀಸ್ ಸಾಯುತ್ತಾನೆ ಆತ ದೈವತ್ವ ಪಡೆದು ಪೊಲೀಸ್ ತೆಯ್ಯಂ ಆಗಿ ಆರಾಧಿಸಲ್ಪಡುತ್ತಾನೆ
ಪಿಲಿಚಾಮುಂಡಿ ದೈವ ಮಾವೇರಿ ತೀರ್ಥ ಸ್ನಾನಕ್ಕೆ ಹೋಗುವಾಗ ಎದುರಾಗುವ ಕಳ್ಳ ಪೋಲೀಸ್ ಅವಲಕ್ಕಿ ಮಾರಾಟಗಾರ, ಜೇನುಮಾರಾಟಗಾರ ,ಶ್ಯಾನುಭೋಗ ಸೇನವ ಪಟೇಲ ಗುರಿಕಾರ ಮೊದಲಾದವರನ್ನೆಲ್ಲ ತನ್ನ ಸೇರಿಗೆಗೆ ಸೇರಿಸಿಕೊಂಡು ದೈವತ್ವ ನೀಡುತ್ತದೆ ಇವರೆಲ್ಲ ಪಿಲಿಚಾಮುಂಡಿಯ ಸೇರಿಗೆ/ ಪರಿವಾರ ದೈವಗಳಾಗಿ ಆರಾಧಿಸಲ್ಪಡುತ್ತಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್
ದೈವಗಳ ಅನುಗ್ರಹಕ್ಕೆ ಅಥವಾ ಆಗ್ರಹಕ್ಕೆ ಈಡಾಗಿ ಮಾಯವಾದವರು ಆಯಾಯ ದೈವಗಳ ಸಾನ್ನಿಧ್ಯಕ್ಕೆ ಸೇರಿ ದೈವಗಳಾಗಿ ಆರಾಧನೆ ಪಡೆಯುವ ಕಥಾನಕಗಳು ಅನೇಕ ಕಡೆಗಳಲ್ಲಿ ಪ್ರಚಲಿತವಿವೆ.
ಇಲ್ಲಿ ದೈವತ್ವ ಪಡೆಯುವ ಮೊದಲು ಇವರು ಏನಾಗಿದ್ದರು? ಒಳ್ಳೆಯವರೋ ಕೆಟ್ಟವರೋ ಎಂಬ ವಿಷಯ ಗಣನೆಗೆ ಬರುವುದಿಲ್ಲ .ದೈವವಾದ ನಂತರ ಇವರು ನಮ್ಮನ್ನು ಕಾಯುವ ಶಕ್ತಿಗಳು .ಎಲ್ಲ ದೈವಗಳಿಗೂ ಸಮಾನ ಗೌರವ, ಭಕ್ತಿಯ ಆರಾಧನೆ ಇರುತ್ತದೆ ,ಇದು ತುಳು ಸಂಸ್ಕೃತಿಯ ವಿಶಿಷ್ಟತೆ .ಇಲ್ಲಿ ಎಲ್ಲ ಜಾತಿ ಮತಗಳ ಜನರೂ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ ಹಾಗೆಯೇ ಇಲ್ಲಿ ಎಲ್ಲ ಜಾತಿ ಮತಗಳ ಜನರೂ ದೈವಗಳನ್ನು ನಂಬಿ ಆರಾಧಿಸುತ್ತಾರೆ .ಇಲ್ಲಿನ ದೈವಾರಾಧನೆಯಲ್ಲಿ ಜಾತಿ ಮತಗಳ ಸಾಮರಸ್ಯವಿದೆ.ಹಾಗಾಗಿ ಇದು ಜಗತ್ತಿಗೇ ಮಾದರಿಯಾಗಿರುವ ಶ್ರೇಷ್ಠ ಆರಾಧನಾ ಪದ್ಧತಿಯಾಗಿದೆ
© ಡಾಲಕ್ಷ್ಮೀ ಜಿ ಪ್ರಸಾದ್ ಲೇ :,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ : 9480516684
ದೈವ ಕಟ್ಟಿದವರೂ ಮಾಯವಾಗುತ್ತಾರೆಯೇ ? ಮಾಯವಾದವರು ಏನಾಗುತ್ತಾರೆ ?ಮಾಯ ಆಗುದೆಂದರೇನು ?
ದೈವದ ಕಳದಲ್ಲಿ ಗಾಯಗೊಳ್ಳುವ ಕೋರಚ್ಚನ್ ಎಂಬ ದೈವ ಪಾತ್ರಿ ದೈವತ್ವ ಪಡೆದು ದೈವವಾಗಿ ಆರಾಧಿಸಲ್ಪಡುತ್ತಾನೆ. ದೈವ ಕಟ್ಟಿದಾಗ ಮಾಯ ಹೊಂದಿದ ಫಣಿಯನ್ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ.
ಸುಳ್ಯ ಉತ್ತರ ಕೊಡಗು ಪರಿಸರಲ್ಲಿ ಅಜ್ಜಿ ಭೂತದೊಡನೆ ಕೂಜಿಲು ಹೆಸರಿನ ಎರಡು ದೈವಗಳಿಗೆ ಆರಾಧನೆ ಇದೆ.ಈ ದೈವಗಳ ಕೋಲದ ಕೊನೆಯಲ್ಲಿ ಸೇರಿದ ಜನರೆಲ್ಲ ಸೇರಿ ಕೈ ಕೈ ಹಿಡಿದು ದೈವಗಳ ಸುತ್ತ ಭದ್ರವಾಗಿ ಕೋಟೆ ಕಟ್ಟಿ ನಿಲ್ಲುತ್ತಾರೆ.
ಆಗ ದೈವಗಳು ಇವರ ಕೈಯಿಂದ ತಪ್ಪಿಸಿಕೊಂಡು ಹೊರ ಹೋಗಲು ಪ್ರಯತ್ನ ಪಡುತ್ತವೆ.ಜನರು ಬಿಡುವುದಿಲ್ಲ.
ಒಂದೊಮ್ಮೆ ಈ ಕೂಜಿಲು ದೈವಗಳು ಜನರು ಕಟ್ಟಿದ ಕೋಟೆಯಿಂದ ತಪ್ಪಿಸಿಕೊಂಡು ಹೊರ ಹೋದರೆ ಮತ್ತೆ ಹಿಂದೆ ಬರುವುದಿಲ್ಲ.ಕಾಡಿನೊಳಗೆ ಹೋಗಿ ಮಾಯವಾಗುತ್ತಾರೆ ಎಂಬ ಐತಿಹ್ಯವಿದೆ.
© ಡಾಲಕ್ಷ್ಮೀ ಜಿ ಪ್ರಸಾದ್
© ಡಾಲಕ್ಷ್ಮೀ ಜಿ ಪ್ರಸಾದ್ ಲೇ :,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ : 9480516684
ಮೊದಲು ಹದಿನಾರು ಕೂಜಿಲು ದೈವಗಳಿಗೆ ಕೋಲ ಇತ್ತು.ಕೋಟೆ ತಪ್ಪಿಸಿಕೊಂಡು ಒಬ್ಬೊಬ್ಬರೇ ಹೊರ ಹೋಗಿ ಮಾಯವಾಗಿ ಇಬ್ಬರು ಮಾತ್ರ ಉಳಿದಿದ್ದಾರೆ ಹಾಗಾಗಿ ಈಗ ಎರಡು ಕೂಜಿಲು ದೈವಗಳಿಗೆ ಕೋಲ ಕಟ್ಟಿ ಆರಾಧಿಸುತ್ತಾರೆ.ತಮ್ಮ ಮನೆಯ ಹಿರಿಯರಲ್ಲೊಬ್ಬರು ಹೀಗೆ ಮಾಯಕ ಹೊಂದಿದ್ದಾರೆ ಎಂದು ಭೂತ ಕಟ್ಟುವ ಹಿರಿಯ ಕಲಾವಿದರಾದ ಪೂವಪ್ಪರು ನನ್ನಲ್ಲಿ ಮಾತನಾಡುವಾಗ ಹೇಳಿದ್ದರು.
ಇದೇ ರೀತಿಯ ಅಚರಣೆ ಹಾಗೂ ನಂಬಿಕೆಗಳು ವರ್ಣಾರ ಪಂಜುರ್ಲಿ,ದುಗಲಾಯ,ಸುತ್ತು ಕೋಟೆ ಚಾಮುಂಡಿ ದೈವಗಳ ಬಗ್ಗೆಯೂ ಇದೆ
ತಮ್ಮ ಊರು ಹೊಸಬೆಟ್ಟಿನಲ್ಲಿ ರಾವು ಗುಳಿಗ ಆವೇಶ ಬಂದು ಗೋಳಿಮರವನ್ನು ಏರಿ ಮಾಯವಾದ ಬಗ್ಗೆ ಹೊಸಬೆಟ್ಟಿನ ಗಣೇಶ್ ರಾಮ್ ಅವರು ತಿಳಿಸಿದ್ದಾರೆ ಮಾಯವಾದದ್ದಕ್ಕೆ ಸಾಕ್ಷಿಯಾಗಿ ಮರದ ಕೆಳಗೆ ದೈವದ ಗಗ್ಗರ ಸಿಕ್ಕಿತಂತೆ ,
ನಂತರ ಇಲ್ಲಿ ರಾವು ಗುಳಿಗನ ಕೋಲವನ್ನು ನಿಲ್ಲಿಸಿದರಂತೆ.ಆದರೆ ಪದೇ ಪದೇ ಆ ಊರಿನಲ್ಲಿ ಅಪಘಾತಗಳಾಗಲು ಶುರುವಾಗಿ ನಂತರ ಪುನಃ ಈ ದೈವವನ್ನು ಕಟ್ಟಿ ಕೋಲ ಕೊಟ್ಟು ಆರಾಧಿಸಲು ಶುರು ಮಾಡಿದ್ದಾರೆ
© ಡಾಲಕ್ಷ್ಮೀ ಜಿ ಪ್ರಸಾದ್
ಅದೇ ರೀತಿ ಸುಳ್ಯ
ಸುಳ್ಯದ ದೇಂಗೋಡಿಯ ಜಾಲಾಟದಲ್ಲಿ ಬಹಳ ಉಗ್ರ ಸ್ವರೂಪದ ದೈವ ಜಂಗ ಬಂಟ ಆವೇಶದಿಂದ ಓಡಿ ಮಾಯವಾಗುತ್ತದೆ ಬಿದಿರು ಮೆಳೆಯ ತುದಿಯಲ್ಲಿ ಗಗ್ಗರ ಸಿಲುಕಿಕೊಂಡು ಸಿಕ್ಕಿತೆಂಬ ಮಾಹಿತಿಯನ್ನು ಈ ಮನೆಯ ನಿತಿನ್ ಅವರು ತಿಳಿಸಿದ್ದಾರೆ,
ಕೂಜಿಲು ದೈವ ಕಟ್ಟಿರುವವರಲ್ಲಿ ಒಬ್ಬಾತ ತಮ್ಮ ಮನೆಯಲ್ಲಿ ಮಾಯವಾದದ್ದೆಂಬ ಐತಿಹ್ಯ ಇರುವುದನ್ನು ದೀಪಕ ಮುರುಡಿತ್ತಾಯರು ತಿಳಿಸಿದ್ದಾರೆ.ಈ ಕಾರಣದಿಂದ ಅಲ್ಲಿ ಸುಮಾರು ಸಮಯ ಕೂಜಿಲು ದೈವಗಳ ಕೋಲವನ್ನು ನಿಲ್ಲಿಸಿದ್ದರಂತೆ
ಇತ್ತೀಚೆಗೆ ಸುಳ್ಯದಲ್ಲಿ ಹನ್ನೊಂದು ಕೊರಗ ತನಿಯ ದೈವಗಳ ಕೋಲ ಆಗುವಾಗ ಹನ್ನೆರಡನೆಯ ಕೊರಗ ತನಿಯ ದೈವ ಕಾಣಿಸಿಕೊಂಡು ಅದೃಶ್ಯವಾಗಿದೆ ಸಾಕ್ಷಿಯಾಗಿ ಆ ದೈವ ಧರಿಸಿದ್ದ ಮುಟ್ಟಾಳೆ ಇತ್ತು ಎಂಬ ಬಗ್ಗೆ ಕೇಳಿದ್ದೆ.
© ಡಾಲಕ್ಷ್ಮೀ ಜಿ ಪ್ರಸಾದ್ ಲೇ :,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ : 9480516684
ಇಲ್ಲೆಲ್ಲ ಮಾಯವಾದವರು ಏನಾದರು ಎಂಬುದಕ್ಕೆ ಸ್ಪಷ್ಟ ಮಾಹಿತಿ ಸಿಗುವುದಿಲ್ಲ.ಆದರೆ ದೈವದ ಅನುಗ್ರಹಕ್ಕೆ ಪಾತ್ರರಾದ ಇವರುಗಳು ಅಯಾಯ ದೈವವದ ಸಾನ್ನಿಧ್ಯಕ್ಕೆ ಸೇರಿ ದೈವಗಳೇ ಆಗಿರುತ್ತಾರೆ
ಯಾಕೆಂದರೆ ಅನೇಕ ವ್ಯಕ್ತಿಗಳನ್ನು ದೈವಗಳು ಮಾಯ ಮಾಡಿ ತಮ್ಮ ಸೇರಿಗೆಗೆ ಸೇರಿಸಿಕೊಂಡ ವಿಚಾರ ಅನೇಕ ದೈವಗಳ ಕಥೆಯಲ್ಲಿದೆ.ನನಗೆ ಸಿಕ್ಕವನ್ನೆಲ್ಲ 1238 ದೈವಗಳ ಮಾಹಿತಿ ಇರುವ ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಕಿ ದಾಖಲಿಸಿದ್ದೇನೆ ಕಾಂತಾರದಂತಹ ಸಾವಿರ ಸಿನೇಮಗಳಿಗೆ ಸಾಕಾಗುವಷ್ಟು ಕಥಾನಕಗಳು ಇದರಲ್ಲಿದೆ
ಮಾಯ ಆಗುವುದರೆ ಇಲ್ಲವಾಗುವುದಲ್ಲ.ಹಾಗಾಗಿ ಮಾಯವಾದವರ ಪತ್ನಿ ವಿಧವೆ ಎಂದು ಪರಿಗಣಿಸಲ್ಪಡುವುದಿಲ್ಲ.ಆಕೆಗೆ ಅಪಾರ ಗೌರವ ಇರುತ್ತದೆ ಎಂಬ ಮಾಹಿತಿ ಹಿರಿಯರಾದ ದೈವ ಕಟ್ಟುವ ಕಲಾವಿದರಾದ ಪೂವಪ್ಪ ಅವರು ನೀಡಿದ್ದಾರೆ .ಹಾಗಾಗಿ ಮಾಯವಾಗಿ ದೈವತ್ವವ ಪಡೆದವರಿಗೆ ಇತರರಿಗೆ ಮಾಡುವಂತೆ ಅಂತ್ಯ ಸಂಸ್ಕಾರ ಮಾಡುವುದಲ್ಲ.ಅವರಿಗೆ ದೈವದ ರೀತಿಯಲ್ಲಿ ತಂಬಿಲ ಕೋಲ ಕೊಟ್ಟು ಆರಾಧಿಸುತ್ತಾರೆ ಮಾಯವಾದವರ ಮನೆ ಮಂದಿಗೆ ಅಶೌಚದ ಆಚರಣೆಯೂ ಇರುವುದಿಲ್ಲ.
ಮಾಯಕ ಹೊಂದಿದವರ ಮನೆ ಮಂದಿ ಸಂಸಾರದ ಗತಿ ಏನು ಎಂಬುದೊಂದು ಪ್ರಶ್ನೆ ಅನೇಕರಿಗೆ ಕಾಡಿದೆ
ಈ ಭೂಮಿಯಲ್ಲಿ ಯಾರೂ ಶಾಶ್ವತರಲ್ಲ.ಎಲ್ಲರನ್ನೂ ಹೆತ್ತ ತಾಯಿಯಂತೆ ಪೊರೆಯುವ ದೈವ ದೇವರುಗಳು ಈ ಮನೆಮಂದಿಯನ್ನೂ ಸಲಹುವರು ಎಂದಷ್ಟೇ ಹೇಳಬಲ್ಲೆ.ಮಾಯಕ ಹೊಂದಿದವರು ಜನನ ಮರಣ ಚಕ್ರದಿಂದ/ ಭವ ಬಂಧನದಿಂದ ಪಾರಾಗಿ ಶಿಷ್ಟ ಜನರ ರಕ್ಷಣೆ ಮಾಡುವ ಶಕ್ತಿಗಳಾಗಿ ನೆಲೆನಿಲ್ಲುತ್ತಾರೆ
© ಡಾಲಕ್ಷ್ಮೀ ಜಿ ಪ್ರಸಾದ್ ಲೇ :,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ : 9480516684
ಇನ್ನು ಕಾಂತಾರ ಸಿನೇಮದ ಕಥೆ ದಂತ ಕಥೆ ಎಂದಿದ್ದಾರೆ.ನಾನಿಲ್ಲಿ ಹೇಳಿದ ಕಥಾನಕಗಳೂ ಕೂಡ ದಂತ ಕಥೆಗಳೇ..ಇವು ಯಾವುದೋ ಕಾಲದಲ್ಲಿ ನಡೆದಿರಬಹುದಾದ ಘಟನೆಗಳು ಮೌಖಿಕವಾಗಿ ಹರಡಿದ ಕಥಾನಕಗಳು
ಕಾಂತಾರದ ದಂತ ಕಥೆ ಯಾವುದೋ ಕಾಲ ಘಟ್ಟದಲ್ಲಿ ನಡೆದದ್ದೇ ಆಗಿದ್ದರೆ ಅಲ್ಲಿ ದೈವ ಕಟ್ಟಿದಾಗ ಮಾಯವಾಗುವ ತಂದೆ ಮಗ ಇಬ್ಬರೂ ಕೂಡ ಪಂಜುರ್ಲಿ ದೈವದ ಸಾನ್ನಿಧ್ಯಕ್ಕೆ ಸೇರಿದ ಸೇರಿಗೆ ದೈವಗಳೇ ಆಗಿರುತ್ತಾರೆ
ಹಾಗಾಗಿಯೇ ಅವರಿಬ್ಬರು ಮಾಯಕವಾದ ಸ್ಥಳದಲ್ಲಿ ತಂದೆ ಮಗನ ಸಮಾಗಮವನ್ನು ತೋರಿಸಿರಬಹುದು. ಗುರುವ ಸತ್ತಾಗ ಅಳುವ ಧ್ವನಿ ಪಂಜುರ್ಲಿ ದೈವದ ಸಾನ್ನಿಧ್ಯ ಸೇರಿ ಸೇರಿಗೆ ದೈವವಾದ ಗುರುವನ ಚಿಕ್ಕಪ್ಪನದು ಎಂದು ಅರ್ಥೈಸಬಹುದು ಅಥವಾ ತನ್ನ ಅನನ್ಯ ಭಕ್ತ ಗುರುವನ ಸಾವಿಗೆ ದುಃಖಿಸಿದ ಪಂಜುರ್ಲಿಯದೆಂದೂ ಅರ್ಥೈಸಬಹುದು. ಇದು ಸಿನೇಮ ಹಾಗಾಗಿ ಈ ಭಾಗ ಕಲ್ಪನೆಯಾಗಿರಲೂ ಸಾಧ್ಯವಿದೆ
© ಡಾ.ಲಕ್ಷ್ಮೀ ಜಿ ಪ್ರಸಾದ್
ಹೀಗೆ ಮಾಯ ಎಂದರೆ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಅದೃಶ್ಯವಾಗಲು ಸಾಧ್ಯವೇ ? ಎಂಬುದೊಂದು ಪ್ರಶ್ನೆ..
falling to 5 th dimention ಎಂದರೆ ಜನರು ನೋಡುತ್ತಿದ್ದಂತೆಯೇ ವ್ಯಕ್ತಿಗಳು ಅದೃಶ್ಯವಾದ ಸುಮಾರು 163 ಪ್ರಕರಣಗಳು ದಾಖಲಾಗಿವೆ.ಇವು ಮೆಟ ಫಿಸಿಕ್ಸ್ ನಲ್ಲಿ ಬರುತ್ತವೆ.ಉದ್ದ ಅಗಲ ಎತ್ತರ ಕಾಲ ಎಂಬ ನಾಲ್ಕು dimension ನಲ್ಲಿ ನಾವು ಬದುಕುತ್ತಿದ್ದೇವೆ.ಇದನ್ನು ಮೀರಿದ ಐದನೆಯ dimension ಗೆ ಹೋದ ವ್ಯಕ್ತಿ ವಸ್ತು ಅದೃಶ್ಯವಾಗುತ್ತದೆ ಎಂಬ ವಿಚಾರವನ್ನು ಉಜಿರೆಯ ಚಲಿಸುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಫಿಸಿಕ್ಸ್ ಪ್ರೊಫೆಸರ್ ಕೇಶವರು ನಾವು ವಿದ್ಯಾರ್ಥಿಗಳಾಗಿದ್ದಾಗ ಹೇಳಿದ್ದರು
ಅಂತೆಯೇ ಕಪ್ಪು ರಂಧ್ರ/ black holes ಗಳು ಇವೆಯಂತೆ ಇವುಗಳನ್ನು ಪ್ರವೇಶ ಮಾಡಿದ ಬೆಳಕು ಕೂಡ ಹೊರಬರುವುದಿಲ್ಲ ಅಷ್ಟು ಹೆಚ್ಚಿನ ಗುರುತ್ವಾಕರ್ಷಣ ಬಲ ಇರುತ್ತದೆಯಂತೆ
ಇದಲ್ಲದೆ ಬರ್ಮುಡಾ ಟ್ರ್ತಾಂಗಲ್ ನ ಕುರಿತಾಗಿ ಅನೇಕ ಐತಿಹ್ಯಗಳಿವೆ.ಈ ಪ್ರದೇಶವನ್ನು ಸಮೀಪಿಸಿದ ಹಡಗು ವಿಮಾನ ಎಲ್ಲವೂ ಅದೃಶ್ಯವಾಗಿವೆ.ಇವನ್ನು ಪತ್ತೆ ಮಾಡಲು ಹೋದವರೂ ನಾಪತ್ತೆಯಾಗಿದ್ದಾರಂತೆ
ಅಂತೆಯೇ ದೈವ ಕಟ್ಟಿದ ಕಲಾವಿದರಲ್ಲೂ ವಿಶೇಷ ಶಕ್ತಿಯ ಅವೇಶವಾಗಿ / ಶಕ್ತಿ ಉತ್ತೇಜನಗೊಂಡು ಇಂತಹ ಪವಾಡಗಳು ನಡೆಯಬಾರದೆಂದೇನೂ ಇಲ್ಲ.
ನಮಗೆ ಗೊತ್ತಿಲ್ಲದೇ ಇರುವ ಅನೇಕ ವಿಚಾರಗಳಿವೆ.ಗೊತ್ತಿಲ್ಲದೇ ಇರುವುದನ್ನು ಗೊತ್ತಿಲ್ಕ ಎನ್ನಬಹುದೇ ಹೊರತು ಇಲ್ಲವೇ ಇಲ್ಲ ಎನ್ನಲಾಗದು
ಕಳೆದ ಇಪ್ಪತ್ತೊಂದು ವರ್ಷಗಳ ಕ್ಷೇತ್ರ ಕಾರ್ಯ ಅಧ್ಯಯನದಲ್ಲಿ ಇಂತಹ ಅನೇಕ ಕೌತುಕದ ಅಧ್ಯಯನ ಯೋಗ್ಯ ವಿಚಾರಗಳಿವೆ.ವಿಶಿಷ್ಟ ಕಥಾನಕಗಳು ಸಿಕ್ಕಿವೆ
ಇನ್ನು ತುಳುನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂಬುದೊಂದು ಪ್ರಶ್ನೆ.ಇದಕ್ಕೆ ಇದಮಿತ್ಥಂ ಎಂದು ಉತ್ತರಿಸುವುದು ಕಷ್ಟ.ತುಳು ಸಂಸ್ಕೃತಿ ಕುರಿತು ಅಧ್ಯಯನಮಾಡಿದ ಡಾ
ಬಿ ಎ ವಿವೇಕ ರೈಗಳು 260 ದೈವಗಳ ಹೆಸರನ್ನು ಸಂಗ್ರಹಿಸಿಅವರ ಪಿಎಚ್ ಡಿ ನಿಬಂಧ ತುಳು ಜನಪದ ಸಾಹಿತ್ಯ ದಲ್ಲಿ ನೀಡಿದ್ದಾರೆ.ಇದನ್ನು ಪರಿಷ್ಕರಿಸಿ ಡಾ.ಚಿನ್ನಪ್ಪ ಗೌಡರು ಅವರ ಪಿಎಚ್ ಡಿ ನಿಬಂಧ ಭೂತಾರಾಧನೆ- ಒಂದು ಜಾನಪದೀಯ ಅಧ್ಯಯನದಲ್ಲಿ ಮುನ್ನೂರು ದೈವಗಳ ಹೆಸರಿನ ಪಟ್ಟಿ ನೀಡಿದ್ದಾರೆ.ರಘುನಾಥ ವರ್ಕಾಡಿಯವರು 404 ದೈವಗಳ ಹೆಸರನ್ನು ಸಂಗ್ರಹಿಸಿದ್ದಾರೆ ಅದರಲ್ಲಿ ಡಾ.ಚಿನ್ನಪ್ಪ ಗೌಡರು ಸಂಗ್ರಹಿಸಿದ ಹೆಸರುಗಳು ಸೇರಿದೆ
ಈ 404 ಸೇರಿದಂತೆ ನನಗೆ 2330 ದೈವಗಳ ಹೆಸರುಗಳು ಸಿಕ್ಕಿವೆ ,1238 ದೈವಗಳ ಮಾಹಿತಿಯೂ ಸಿಕ್ಕಿದ್ದು ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿ ನನ್ನ ಅರಿವಿಗೆ ನಿಲುಕಿದಂತೆ ನೀಡಿದ್ದೇನೆ
ಇದು.© ಡಾಲಕ್ಷ್ಮೀ ಜಿ ಪ್ರಸಾದ್ ಲೇ :,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ : 9480516684 ಅಂತಿಮವಲ್ಲ.ಈವತ್ತಷ್ಟೇ ಸಂಜೀವ ನೆರಿಯ ಅವರು ಕಲ್ಲ ಮುದರ ಎಂಬ ಎರಡು ದೈವಗಳ ಐತಿಹ್ಯಗಳನ್ನು ತಿಳಿಸಿದ್ದು ಈ ಎರಡು ದೈವಗಳ. ಹೆಸರು ಕೂಡ ಈವತ್ತಷ್ಟೇ ಸಿಕ್ಕಿದೆ.ಈ ಪುಸ್ತಕ ಪ್ರಕಟಣೆಯ ನಂತರ ಕುಂಜಾರತಜ್ಜಿ ಭಟ್ಯೆದಿ ಕರ್ತಜ್ಜ,ಸಂಪಿಗೆತ್ತಾಯ ಸೇರಿದಂತೆ ಹದಿನೈದು ದೈವಗಳ ಮಾಹಿತಿ ಸಿಕ್ಕಿದೆ ,ಏಕಲವ್ಯ ಜುಮಾದಿ ಹನುಮಾನ್ ಪಂಜುರ್ಲಿ ಕೆಮ್ಮಟೆ ಪಂಜುರ್ಲಿ ಮೊದಲಾದ ಹೆಸರುಗಳನ್ನು ಇತ್ತೀಚೆಗೆ ಕದ್ರಿ ನವನೀತ ಶೆಟ್ಟಿಯವರು ನೀಡಿದ್ದಾರೆ
ಹಾಗಾಗಿ ಇಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂದು ಇದಮಿತ್ಥಂ ಹೇಳಲು ಸಾಧ್ಯವಿಲ್ಲ.© ಡಾಲಕ್ಷ್ಮೀ ಜಿ ಪ್ರಸಾದ್
ನನಗೆ ಸಿಕ್ಕ ಮಾಹಿತಿಯನ್ನು ನನ್ನ ಜ್ಞಾನದ ಪರಿಧಿಯೊಳಗೆ ಸಂಶೋಧನಾ ಅಧ್ಯಯನದ ವಿಧಾನಗಳ ತಳಹದಿಯಲ್ಲಿ ಸಂಕ್ಷಿಪ್ತವಾಗಿ ವಿಶ್ಲೇಷಣೆ ಮಾಡಿದ್ದೇನೆ.ಇದರಲ್ಲಿನ ದೈವಗಳ ಕಥೆಗಳು ನನ್ನ ಕಲ್ಪನೆಯ ಸೃಷ್ಟಿಯಲ್ಲ.
ಪ್ರಚಲಿತ ಪಾಡ್ದನ ಐತಿಹ್ಯಗಳ ಮೂಲಕ ವಕ್ತೃಗಳ ಮೂಲಕ ಸಿಕ್ಕ ಮಾಹಿತಿಗಳು ಇವು.ಸಂಗ್ರಹ ಮತ್ತು ವಿಶ್ಲೇಷಣೆ ಮಾತ್ರ ನನ್ನದು ಇದರಲ್ಲಿರುವ ಮಾಹಿತಿಯೇ ಅಂತಿಮವಲ್ಲ.ಒಂದು ದೈವಕ್ಕೆ ಸಂಬಂಧಿಸಿದಂತೆ ಅನೇಕ ಪಾಡ್ದನ ಐತಿಹ್ಯಗಳಿರುತ್ತವೆ.ಇವುಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ..ನನಗೆ ಸಿಕ್ಕಿದ್ದನ್ನು ಒಟ್ಟು ಮಾಡಿ ಅಧ್ಯಯನದ ತಳಹದಿಯಲ್ಲಿ ವಿಶ್ಲೇಷಿಸಿ ಬರೆದಿರುವೆ.ಇದಕ್ಕೆ ಅನೇಕರು ಸಹಕಾರ ನೀಡಿದ್ದಾರೆ
ಇದು ಅನೇಕ ವಿದ್ವಾಂಸರ ಮೆಚ್ಚುಗೆಯನ್ನು ಕೂಡಾ ಪಡೆದಿದೆ.
ತಿರುಗಿ ನೋಡಿದಾಗ ನನಗೇ ಇದೆಲ್ಲವನ್ನು ನಾನು ಬರೆದೆನೇ ? ಎಂದು ಸೋಜಿಗವಾಗುತ್ತದೆ.ಓರ್ವ ಸಾಮಾನ್ಯ ಉಪನ್ಯಾಸಕಿಯಾದ ನನಗೆ ಇದು ಅಸಾಧ್ಯದ ವಿಚಾರ.ದೈವ ದೇವರುಗಳೇ ಕೈಹಿಡಿದು ಬರೆಸಿದ್ದಾರೆ ಎಂದು ನನಗನಿಸುತ್ತದೆ
ನೀನೊಲಿದರೆ ಕೊರಡು ಕೊನರುವುದಯ್ಯ ಎಂದು ಶರಣ ಶ್ರೇಷ್ಠರಾದ ಬಸವಣ್ಣನವರು ಹೇಳಿದಂತೆ ದೈವ ಕಾರುಣ್ಯದಿಂದಲೇ ಇದು ಸಾಧ್ಯವಾಗಿದೆ ಎಂದಷ್ಟೇ ಹೇಳಬಲ್ಲೆ
ಡಾ.ಲಕ್ಷ್ಮೀ ಜಿ ಪ್ರಸಾದ್
ಜಾನಪದ ಅಧ್ಯಯನದ ಆಚಾರ್ಯ ಕೃತಿ
- ಡಾ.ನಾ ಮೊಗಸಾಲೆ
ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು .ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು.
ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.
ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು , ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) ನಾಲ್ಕು ನೂರ ಏಳು ದೈವಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.
ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ಇನ್ನೂರ ಮೂವತ್ತು ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.
ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ.
ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ!
ಡಾ. ಲಕ್ಷ್ಮೀ ಪ್ರಸಾದರು ಸಂಸ್ಕೃತ( ಮೊದಲನೆಯ ರ್ಯಾಂಕ್) ಹಿಂದಿ ಮತ್ತು ಕನ್ನಡ( ನಾಲ್ಕನೆಯ ರ್ಯಾಂಕ್), ದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು ಎಂ.ಫಿಲ್ ಪದವಿ ಹಾಗೂ ಎರಡು ಪಿ.ಹೆಚ್.ಡಿ ಪದವಿಗಳ ಗರಿಯೂ ಅವರ ಸಾಧನೆಗೆ ದಕ್ಕಿದೆ.
ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ.
ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಆಧಾರಿತ ಅಧ್ಯಯನ ಅಪರೂಪದಲ್ಲಿ ಅಪರೂಪದ್ದು.
ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟು ವಿಶ್ಲೇಷಿಸಲ್ಪಟ್ಟ ಅವರ ಸಂಶೋಧನೆಯ ಆಯ್ದ ಸಾವಿರದ ಇನ್ನೂರ ಐವತ್ತೊಂದು(1251) ದೈವಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ.
ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.
ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.
ಸ್ಥಳ : ಕಾಂತಾವರ ಡಾ.ನಾ.ಮೊಗಸಾಲೆ
ಕನ್ನಡ ಸಂಘ, ಕಾಂತಾವರ
ಮಾಯ ಮತ್ತು ಜೋಗದ ಬೆಳಕಿನಲ್ಲಿ
ಕರಾವಳಿಯ ಸಾವಿರದೊಂದು ದೈವಗಳು
ಅನುಕ್ರಮಣಿಕೆ 321 ಅಧ್ಯಾಯಗಳು
1 ಅಕ್ಕಚ್ಚು
2- ಅಕ್ಕ ಬೋಳಾರಿಗೆ
3-4ಅಕ್ಕೆರ್ಲು- ಅಂಬೆರ್ಲು
5-6 ಅಚ್ಚು ಮತ್ತು ಮೆಚ್ಚು ಬಂಗೇತಿಯರು
7 ಅಗ್ನಿ ಕೊರತಿ
8-13 ಅಗ್ನಿ ಭೈರವನ್ ಮತ್ತು ಪರಿವಾರ
13- 15 ಅಜ್ಜ ಬಳಯ ಮತ್ತು ಮಾಮಿ ಕುಲೆ
15-17 ಅಜ್ಜಮ್ಮ ದೇವರು ಮತ್ತು ಪರಿವಾರ
18-26 ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು
27 ಅಜ್ಜಿ ಬೆರೆಂತೊಲು
28-29 ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ
30 ಅಡ್ಯಲಾಯ
31 ಅಡ್ಯಂತಾಯ
32-33 ಅಡಿ ಮಣಿತ್ತಾಯ ಮತ್ತು ಅಡಿಮರಾಂಡಿ
34-35 ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು
36-37 ಅಣ್ಣೋಡಿ ಕುಮಾರ- ಕಿನ್ಯಂಬು
38 ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ
39 -40 ಅರಬ್ಬಿ ಮತ್ತು ಬ್ರಾಂದಿ
41-44 ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು
45 ಅಸುರಾಳನ್/ ಅಸುಳಾನುಂ ಮಕ್ಕಳು
46-47 ಅಂಗಕ್ಕಾರನ್ ಮರುಟೋಳನ್
48 ಅಂಗಾರ ಬಾಕುಡ
49 ಅಂಮಣ ಬನ್ನಾಯ
50-51 ಅಂಕೆ- ಉಮ್ಮಯ
52 ಆಚಾರಿ ಭೂತ
53 ಆಟಕಾರ್ತಿ
54 ಆಟಿ ಕಳೆಂಜ
55-57 ಆದಿ ವೇಡನ್ ಮತ್ತು ಪರಿವಾರ
58 ಇಷ್ಟಜಾವದೆ
59 ಉಗ್ಗೆದಲ್ತಾಯ
60 ಉಮ್ಮಲ್ತಿ
61-62 ಉಪ್ರಝಾಸ್ಸಿ ಮತ್ತು ಉಚ್ಚಬಲಿ ತೆಯ್ಯಂ
63-64 ಉರವ ಎರುಬಂಟ
65-88 ಉಳ್ಳಾಕುಲು ಮತ್ತು ಉಳ್ಳಾಲ್ತಿ ದೈವಗಳು
89-90 ಎರು ಶೆಟ್ಟಿ( ಮಲೆ ಮುದ್ದ)
91-92 ಎಂಬ್ರಾನ್ ದೇವ- ಐಪ್ಪಳ್ಳಿ
93-99 ಏಲುವೆರ್ ಸಿರಿಕುಲು
100 ಒಕ್ಕು ಬಲ್ಲಾಳ
101-102 ಒರುಬಾಣಿಯೆತ್ತಿ ,ನೆಲ್ಲೂರಾಯ
103- 105 ಓಣಂ ದೈವಗಳು
106 ಓಟೆಚರಾಯ
107: ಕಟ್ಟು ಎಡ್ತುನ್ ಕುಟ್ಟಿ
108 ಕಟ್ಟದಲ್ತಾಯ
109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ
111-112 ಕಡಂಬಳಿತ್ತಾಯ,ಕೊಡಂಬಿಲ್ತಾಯ
113-114 ಕನಪಾಡಿತ್ತಾಯ ಮತ್ತು ಮಗ್ರಂದಾಯ
115 ಕನ್ನಡ ಕಲ್ಕುಡ
116 ಕನ್ನಡ ಬೀರ
117 ಕನ್ನಡ ಭೂತ
118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ
120 ಕನಿಯತಿ
121 ಕಪ್ಪಣ್ಣಣಿಕ/ ಕಾರ್ಯಸ್ಥನ್
123-124 ಕರಿಯಣ್ಣ ನಾಯಕ ಮತ್ತು ಕೋಟಿ ನಾಯಕ
125 ಕರಿಯ ಮಲ್ಲಯ್ಯ
126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು
134 -135 ಕರ್ನಗೆ ಮತ್ತು ಮಲಾರ್ ಜುಮಾದಿ
136-137 ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು
138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು
140 ಕಂಡನಾರ ಕೇಳನ್
141 ಕಂರ್ಭಿ ಬೈದ್ಯೆದಿ
142 ಕಾಜಿಗಾರ್ತಿ
143-153 ಕಾಡ್ಯನಾಟದ ದೈವಗಳು
154- 155 ಕಾಡೆದಿ ಮತ್ತು ಕಾಡ್ತಿಯಮ್ನ
156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು
158-160 ಕಾನಲ್ತಾಯ ಮತ್ತು ಪರಿವಾರ ದೈವಗಳು
161-162 ಕಾಯರ್ತಾಯ ಮಾದ್ರಿತ್ತಾಯ
163-167 ಕಾರಿ ಕಬಿಲ ದೈವಗಳು
168 ಕಾಳರಾತ್ರಿ
169-172 ಧರ್ಮಸ್ಥಳದಲ್ಲಿ ನೆಲೆಸಿದ ದೈವಗಳು ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ ಕನ್ಯಾಕುಮಾರಿ
173-178 ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು
179 ಕಾಂತು ನೆಕ್ರಿ ಭೂತ
180 ಕಿನ್ನಿದಾರು
181 ಕೀಳು ದೈವ
183-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು
184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ ದೈವಗಳು
186-190 ಕುಟ್ಟಿಚ್ಚಾತ್ತನ್ ,ಪಮ್ಮಚ್ಚು ಮತ್ತು ಸೇರಿಗೆ ದೈವಗಳು
191 ಕುಡಿ ವೀರನ್
192 ಕುದುರೆತ್ತಾಯ / ಕುದುರೆ ಮುಖ ದೈವ
193-194 ಕುರವ ಮತ್ತು ಸತ್ಯಂಗಳದ ಕೊರತಿ
195 ಕುರುವಾಯಿ ದೈವ
196-203 ಕುಲೆ ಭೂತಗಳು - ತುಳುನಾಡಿನ ವಿಶಿಷ್ಟ ದೈವಗಳು
204 ಕುಂಞಮ್ಮ ಆಚಾರ್ದಿ
205 ಕುಂಞಾಳ್ವ ಬಂಟ
206 ಕುಂಞಿ ಭೂತ
207 ಕುಂಞಿ ರಾಮ ಕುರಿಕ್ಕಳ್
208 - 212 ಕುಂಜಿರಾಯ ದೈವಗಳು
213-214 ಕುಂಜಿ ಮತ್ತು ಅಂಗಾರ ದೈವಗಳು
215 ಕುಂಜೂರಂಗಾರ
216 ಕುಂಟಲ್ದಾಯ
217 ಕುಂಟುಕಾನ ಕೊರವ
218-219 ಕುಂಡ - ಮಲ್ಲು ದೈವಗಳು
220 ಕುಂಡೋದರ
221-224 ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ
225-226 ಕೇಚ ರಾವುತ ಮತ್ತು ರೇವಂತ
227 ಕೇತುರ್ಲಾಯ
228-231 ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು
232 ಕೊಟ್ಟೆದಲ್ತಾಯ
233 ಕೊನ್ನೊಟ್ಟು ಕಡ್ತ
234 ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ
235 ಕೊರತಿ
236 -237 ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ
238-239 ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ
240 ಅಪ್ರತಿಮ ವೀರ ಕೋಚು ಮಲ್ಲಿ
241 242 ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು
243-244 ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ
245 ಕೋಟ್ರ ಗುತ್ತಿನ ಬಬ್ಬು
246-247 ಕೋಟೆರಾಯ ಮತ್ತು ಕೋಟೇಶ್ವರ ದೈವಗಳು
248 ಕೋರಚ್ಚನ್
249 ಕೋಲು ಭಂಡಾರಿ
250 ಕೋಳೆಯಾರ ಮಾಮ
251ಗಣಪತಿ ಕೋಲ
252 ಗಂಗೆ ನಾಡಿ ಕುಮಾರ ,( ಓಡಿಲ್ತಾಯ)
253-254 ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ
255-256 ಗಂಧರ್ವ ದೈವಗಳು
257 ಗಿಳಿರಾಮ
258 ಗಿಡಿರಾವಂತ
259 -260 ಗಿರಾವು ಮತ್ತು ಕೊಡೆಕಲ್ಲಾಯ
261 ಗುರು ಕಾರ್ನವೆರ್
262 ಗುರುನಾಥನ್
263-275 ಗುಳಿಗ ಮತ್ತು ಸೇರಿಗೆ ದೈವಗಳು
( ಒರಿ ಮಾಣಿ ಗುಳಿಗ ,ಮಂತ್ರವಾದಿ ಗುಳಿಗ,ಸನ್ಯಾಸಿ ಗುಳಿಗ ,ತಂರ್ಜಿ ಗುತ್ತಿನ ಗುಳಿಗ ,ಮುಕಾಂಬಿ ಗುಳಿಗ,ಸಂಕೊಲಿಗ ಗುಳಿಗ,ಶಾಂತಿ ಗುಳಿಗ,ಸುಬ್ಬಿಯಮ್ಮ ಗುಳಿಗ,ಕಲಾಲ್ತಾಯ ಗುಳಿಗ ,ಜಾಗೆದ ಖಾವಂದೆರಾವು ಗುಳಿಗ,ಕಲಿಚ್ಚಿ,ಕಾಲನ್ ಗುಳಿಗ )
276-300 ಚಾಮುಂಡಿ ಮತ್ತು ಸೇರಿಗೆದೈವಗಳು
ಅಗ್ನಿ ಚಾಮುಂಡಿ ಗುಳಿಗ, ಕರಿ ಚಾಮುಂಡಿ,ಕೆರೆ ಚಾಮುಂಡಿ,ಚೌಂಡಿ,ಗುಡ್ಡೆ ಚಾಮುಂಡಿ ಅರದರೆ ಚಾಮುಂಡಿ ,ಅಸಗಲ ಚಾಮುಂಡಿ,ನಾಗ ಚಾಮುಂಡಿ,ಪಾಪೆಲು ಚಾಮುಂಡಿ, ನೆತ್ರಾಂಡಿ ,ಮನದಲಾತ್ ಚಾಮುಂಡಿ,ಮಾಪಿಳ್ಳ ಚಾಮುಂಡಿ ಕೋಮಾರು ಚಾಮುಂಡಿ ಇತ್ಯಾದಿ)
301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ
303-314 ಚಿಕ್ಕು/ ಚಿಕ್ಕಮ್ಮ ಪರಿವಾರ ದೈವಗಳು
315 ಚಿನಿಕಾರ/ ಚೀನೀ ಬೂತಗಳು
316 ಚೆನ್ನಿಗರಾಯ
317-319 ಚೆಮ್ಮರತಿ,ಪಡುವೀರನ್ ದೈವಗಳು
320 ಚೆಂಬರ್ಪುನ್ನಾಯ
321-322 ಜಟಾಧಾರಿ ಮತ್ತು ಶಾಂತ ದುರ್ಗೆ
323 -334' ಜಟ್ಟಿಗ ದೈವಗಳು
(ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಮಾಣಿ ಬೀರ ಜಟ್ಟಿಗಮಾಣಿಭದ್ರ ಜಟ್ಟಿಗ ಇತ್ಯಾದಿ)
335-337 ಜಮೆಯ- ಜಮಯತಿ ,ಬಡೆದಿ ದೈವಗಳು
338 ಜಂಗ ಬಂಟ
339-340 ಜಾನು ನಾಯ್ಕ ಮತ್ತು ಬಂಡಿರಾಮ
341 ಜಾರಂದಾಯ
342 ಜಾಲ ಬೈಕಾಡ್ತಿ
343 ಪನ್ನೆ ಬೀಡಿನ ಜಾಲ್ಸೂರಾಯ
344 ಜೋಕುಲು ದೈವೊಲು
345-346 ಜೈನ ಗುಜ್ಜಾರ್ಲು ಮತ್ತು ಜೈನ ಭೂತ
347 ತಪ್ಪೇದಿ
348 ತನ್ನಿಮಾಣಿಗ
349-351 ತಂತ್ರಿಗಣಗಳು
352 ತಿಮ್ಮಣ್ಣ ನಾಯಕ
353-355 ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ
356 ತೋಡ ಕುಕ್ಕಿನಾರ್
357 ದಾರಮ್ಮ ಬಳ್ಳಾಲ್ತಿ
358-361 ದಾರು ಕುಂದಯ ದೈವಗಳು
362 ದೀಪದ ಮಾಣಿ
363 ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ
364 ದೂಮ
365 ದೂಧುರ್ಮ / ದೂರ್ದುಮ
366-367 ದೆಸಿಲು ಮತ್ತು ಕಿಲಮರತ್ತಾಯ
368 ದೇಬೆ ದೈವ,
369-370 ದೇರೆ ಮತ್ತು ಮಾನಿ ದೈವಗಳು
371ದೇವಾನು ಪಂಬೆದಿಯಮ್ಮ
372 ದೇಯಿ ಬೈದೆತಿ
373-374 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್
375-378 ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ
379 ದೈವಂತಿ
380-400 ಧೂಮಾವತಿ ಮತ್ತು ಸೇರಿಗೆ ದೈವಗಳು
ಕಾಂತೇರಿ ಜುಮಾದಿ,ಬಂಟ,ಮರ್ಲು ಜುಮಾದಿ,ಕರ್ಮಲೆ ಜುಮಾದಿ ,ದುರ್ಗಲ್ಲ ಜುಮಾದಿ,ಮಾಪುಳ್ತಿ ಧೂಮಾವತಿ ,ಪಡಿಂಞರೆ ಧೂಮಾವತಿ, ಧೂಮಹಾಸ್ತಿಯಮ್ಮ ,ಮಲಾರ್ ಜುಮಾದಿ ಮತ್ತು ಕರ್ನಗೆ ಇತ್ಯಾದಿ)
401-404 ನಂದಿ ಹೆಸರಿನ ದೈವಗಳು ( ಹಿರೇ ನಂದಿ ಕಿರರ ನಂದಿ ,ಜೋಗಪ್ಪ ಶೆಟ್ಟಿ ,ನಂದಿಕೇಶ್ವರ ,ನಂದಿ ಗೋಣ)
405-408 ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು
409 ನಂದಿಗೆನ್ನಾಯ
410-412 ನಾಗ ಕನ್ನಿಕೆ ಮತ್ತು ನಾಗರಾಜರು
413 ನಾಗ ದೈವ/ಭೂತ
414 ನಾಗ ಬ್ರಹ್ಮ
415 ನಾಗ ಬ್ರಹ್ಮ ಮಂಡಲದ ದೈವಗಳು
416-417 ನಾರಳ್ತಾಯ ಮತ್ತು ಭೂತರಾಜ
418 ನಾಲ್ಕೈತಾಯ
419-420 ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ
421-422 ನುರ್ಗಿಮದಿಮಾಲ್ ಮತ್ತು ದುರ್ಗಿ ಮದಿಮಾಲ್
423-424 ನೆತ್ತರು ಮುಗುಳಿ ಮತ್ತು ಭೈರವ
425 ನೇರಳತ್ತಾಯ
426 -428 ನೈದಾಲ ಪಾಂಡಿ ,ಪೂವತ್ತಿಮಾರ್ ಮತ್ತು ಮಹೇಶ್ವರನ್ ದೈವಗಳು
429 ಪಟ್ಟಾರ್ ತೆಯ್ಯಂ
430 ಪಟ್ಟೋರಿತ್ತಾಯ
431 ಪಡೆ ಬೀರ ಕಣ್ಣಂಡ ದೊಡ್ಡಯ್ಯ
432-433 ಪಡ್ಕಂತಾಯ ಮತ್ತು ಗೆಂಡಕೇತ್ರಾಯ
434 ಪತ್ತೊಕ್ಕೆಲು ಜನನಂದ ದೈವ
435-436:ಪನಯಾರ್ ಮತ್ತು ಸಂಪ್ರದಾಯ ದೈವ
437:ಪಯ್ಯ ಬೈದ್ಯ
438-443'ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ನ ಮತ್ತು ಪರಿವಾರ
444-445 ಪರವ ಮತ್ತು ಪರಿವಾರ ನಾಯಕ
446 ಪಂಜಿ ಭೂತ
447 -462 ಪಂಜುರ್ಲಿ ಮತ್ತು ಸೇರಿಗೆ ದೈವಗಳು
ಅಂಗಣತ್ತಾಯ ಪಂಜುರ್ಲಿ ಅಟ್ಟೊಡಾಯೆ ಪಂಜುರ್ಲಿ
ಅಣ್ಣಪ್ಪ ಪಂಜುರ್ಲಿ ಅಲೇರ ಪಂಜುರ್ಲಿ
ಉಂರ್ದರ ಪಂಜುರ್ಲು ,ಒರಿ ಮರ್ಲೆ ಪಂಜುರ್ಲಿ
ಕಟ್ಟದಲ್ತಾಯ ಪಂಜುರ್ಲಿ ,ಕೆಂಪರ್ನ ಪಂಜುರ್ಲಿ ,ಕುಪ್ಪೆ ಪಂಜುರ್ಲಿ,ಕುಪ್ಪೆಟ್ಟು ಪಂಜುರ್ಲಿ
ಗಣಾಮಣಿ ಪಂಜುರ್ಲಿ,ಜುಂಬುರ್ಲಿ ,ತೆಲ್ಲಾರ್ ಪಂಜುರ್ಲಿ ದಾಸಪ್ಪ ಪಂಜುರ್ಲಿ
ದೆಂದೂರ ಪಂಜುರ್ಲಿ
ದೇವರ ಪೂಜಾರಿ ಪಂಜುರ್ಲಿ
ಪಂಜಣತ್ತಾಯ ಪಂಜುರ್ಲಿ
ಬಗ್ಗು ಪಂಜುರ್ಲಿ,
ಬಗ್ಗು ಮೊಯ್ಲಿದಿ
ವರ್ಣಾರ ಪಂಜುರ್ಲಿ
ಸೇಮಿಕಲ್ಲ ಪಂಜುರ್ಲಿ
468 ಪಾಣರಾಟ
469 ಪಿಲಿ ಭೂತ
470 -471 ಪುದರ್ ಚಿನ್ನ ಬಂಟ ಮತ್ತು ಪಿಲೆ ಪೆಲತ್ತಿ ದೈವಗಳು
472 ಪುದ ಮತ್ತು ಪೋತಾಳ
473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು
491-500ತುಳುನಾಡಿನ ಪುರುಷ ಭೂತಗಳು
501 ಪುಲಂದಾಯ ಬಂಟ
502 ಪುಲಿಮರಂಞ ತೊಂಡನ್
503 -510 ಪುಲಿಯೂರ್ ಕಾಳಿ ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು
511 ಪೆರಿಯಾಟ್ ಕಂಡನ್
512 ಪೆರುಂಬಳಯಚ್ಚನ್
513 ಪೊಟ್ಟನ್
514 520 ಪೊನ್ನಂಗಾಲತಮ್ಮೆ ಮತ್ತು ಆರು ಸಹೋದರರು
521 ಪೊನ್ವಾನ್ ತೊಂಡಚ್ಚನ್
522-525:ಪೊಸಮಹರಾಯ ,ಉಳ್ಳಾಲ್ತಿಯರುಮತ್ತು ಮಾಡ್ಲಾಯಿ
526 -536 ಪೋಲೀಸ್, ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ, ಸೇನವ ದೈವಗಳು
537 ಪೋಲೀಸ್ ತೆಯ್ಯಂ
538-539 ಬಚ್ಚನಾಯಕ ಮತ್ತು ಮಂಞಣ ನಾಯಕ
540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು
545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ
549 ಬಲ್ಲ ಮಂಜತ್ತಾಯ
550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು
556 ಬಲೀಂದ್ರ
557 ಬಸ್ತಿನಾಯಕ
558 ಬಂಕಿ ನಾಯ್ಕ
559-562 ಬಂಟಜಾವದೆ ಮತ್ತು ಉಳ್ಳಾಲ್ತಿ ಪಡಿಕಲ್ಲಾಯ
562 ಬಾಕುಡತಿ
563 ಬಾಲೆ ಕನ್ಯಾಪು
564 -605 ಬ್ರಾಹ್ಮಣ ಮೂಲದ ದೈವಗಳು
606 ಬಿರ್ಮಣಾಚಾರಿ
607 -608 ಬಿಲ್ಲಾರ ಬಿಲ್ಲಾರ್ತಿ ದೈವಗಳು
609 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ
610 ಬೀರ್ನಾಚಾರಿ
611-613 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು
614-616:ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು
617-618 ಬೆಲೆಟಂಗರಜ್ಜ ಮತ್ತು ತಂಗಡಿ
619-620 ಬೇಡವ ಮತ್ತು ಬೇಟೆಗಾರ ದೈವಗಳು
621 ಬೊಟ್ಟಿ ಭೂತ
622 -625:ಬೋವ ದೈವಗಳು .
626 ಬೈನಾಟಿ
627 ಬೈಸು ನಾಯಕ
628-690 ಭಗವತಿ ದೈವಗಳು
692-694 ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ
695 - 696 ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ
697-698 ಭಂಡಾರಿ ಮತ್ತು ಪಿಲಡ್ಕತ್ತಾಯ
699 ಮಡಿಕತ್ತಾಯ
700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು
702-703' ಮದಂಗಲ್ಲಾಯ ಕಡಂಗಲ್ಲಾಯ
704-705 ಮದಿಮಾಯ ಮದಿಮಾಲ್
706ಮನಕ್ಕಡನ್ ಗುರುಕ್ಕಳ್
707 ಮನಕ್ಕೊಟ್ಟ ಅಮ್ಮ
708- 726 ಮನ್ಸರ ದೈವಗಳು
717 ಮರಾಂಗಣೆ
718;ಮರುತಿಯೋಡನ್ ಕುರಿಕ್ಕಳ್
719-720 ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು
721 ಮಲರಾಯ
722 ಮಲೆಕುಡಿಯರ ಅಯ್ಯಪ್ಪ
723-726: ಮಲೆ ತಮ್ಮಚ್ಚ ಮತ್ತು ಪರಿವಾರ
727-730 ಮಲೆರಾಯ ಮತ್ತು ಪರಿವಾರ
731 ಮಲೆಸಾವಿರ ದೈವ
732-733:ಮಂಗಳೆರ್ ಮತ್ತು ಗುರು ಮಂಗೞೆರ್
734 -736:ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು
737 ಮಂದ್ರಾಯ
738-739 ಮಹಾಕಾಳಿ ಮತ್ತು ಮಾಂಕಾಳಿ ದೈವಗಳು
740-745 ಮಾಯಂದಾಲ್ ಮತ್ತು ಪರಿವಾರ
746-747 ಮಾಯೊಲು ಮಾಯೊಲಜ್ಜಿ.
748-760 ಮಾರಿ ಭೂತಗಳು
761 -763 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು
764 ಮಾಸ್ತಿಯಮ್ಮ
765-766 ಮಿತ್ತೂರು ನಾಯರ್ ದೈವಗಳು
768-782 ಮುಗೇರ ದೈವಗಳು
783 ಮುಡದೇರ್ ಕಾಳ ಭೈರವ
784-786 ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ
787 ಮುತ್ತು ಮಾರಿಯಮ್ಮ
788 ಮುನಿಸ್ವಾಮಿ ದೈವ
789 ಮುವ್ವೆ ಮೂವ,ಮೂವಿಗೆ ವಾತೆ
790 - 816ಮುಸ್ಲಿಂ ಮೂಲದ ದೈವಗಳು
817 ಮೂಜಿಲ್ನಾಯ
818-819 ಮೂಡೊಟ್ನಾರ್,ಪಡುವೆಟ್ನಾರ್
820 ಮೂರಿಲು
821 ಮೂರ್ತಿಲ್ಲಾಯ
822- 900 ಮೂಲ ಪುರುಷ ದೈವಗಳು
901 ಮೆಕ್ಕೆ ಕಟ್ಟಿನ ಉರುಗಳು
902-903 ಮೇರ ಮೇತಿಯರು
904 ಮೇಲಂಟಾಯ
905 ಮೈಯೊಂದಿ
906 ಮೈಸಂದಾಯ
907 ಮೋಂದಿ ಕೋಲ
908 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ ಯಕುಮ ಕೋಲ
909 -910 ರಕ್ತೇಶ್ವರಿ ಮತ್ತು ಬವನೊ
911 ರಾಜನ್ ದೈವಗಳು
912 -914 ವಣ್ಣಾತನ್ ವಯನಾಡು ಕುಲವನ್,ಕಣ್ಣನ್
915 ವಡ್ಡಮರಾಯ
916 ವಿದೇಶೀ ಕಾಫ್ರೀ ದೈವಗಳು
917 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್
919 - 920 ವೀರಭದ್ರ/ ವೈರಜಾತ್,ವೀರನ್
921-924 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್
925 ವೆಳ್ಳು ಕುರಿಕ್ಕಳ್
926 ವೇಟಕ್ಕೊರುಮಗನ್
927 ವೈದ್ಯಾಚಾರ್ಯ/ ವೈದ್ಯರಾಜನ್
928 ಶಗ್ರಿತ್ತಾಯ ದೈವ
929 ಶಂಕರ ಬಡವಣ
930 -932 ಶಾಸ್ತಾವು,ಕರಿ ಭೂತ,ಕೋಮಾಳಿ
933 ಶಿರಾಡಿ ಭೂತ.
934 ಶಿವರಾಯ
935 ಶ್ರೀಮಂತಿ ದೈವ
936-937 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ
938 -942 ಬಾಕುಡರ ಸರ್ಪಕೋಲದ ದೈವಗಳು
943 ಸರ್ಪಂಕಳಿ
944 ಸರ್ಪಂತುಳ್ಳಲ್
945 ಸಂನ್ಯಾಸಿ ಮಂತ್ರ ದೇವತೆ
946 ಸಾದಿಕರಾಯ ಮತ್ತು ಹಾದಿಕಾರಾಯ
947 ಸಾರ ಮಾಂಕಾಳಿ
948 ಸ್ವಾಮಿ ದೈವ
949-956 ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ
957: ಸುಬ್ಬರಾಯ
958 ಸೋಣದ ಜೋಗಿ
959 ಹನುಮಂತ/ ಸಾರ ಪುಲ್ಲಿದಾರ್ ದೈವ
960 -961ಹಳ್ಳತ್ತಾಯ ಮತ್ತು ಅಲ್ನತ್ತಾಯ
962 ಹಳೆಯಮ್ಮ
963 -973 ಹಾಯ್ಗುಳಿ ಮತ್ತು ಪರಿವಾರ
ಮೂಕ ಹಾಯ್ಗುಳಿ,ಕೆಪ್ಪ ಹಾಯ್ಗುಳಿ,ತಾತ್ರಯ್ಯ,ಅಕ್ಸಾಲಿ ,ಮೂಡೂರ್ ಹಾಯ್ಗುಳಿ ,ನೆತ್ರ ಹಾಯ್ಗುಳಿ ಇತ್ಯಾದಿ )
974 -995 ಹಿರಿಯಾಯ ದೈವಗಳು
( ಆನೆ ಬೈದ್ಯ,ಸಿದ್ದ ಮರ್ದ ಬೈದ್ಯ,ಬಗ್ಗ ಪೂಜಾರಿ, ನಾಡು ಬೈದ್ಯ, ಬೊಲ್ಲ ಬೈದ್ಯ,ದೇರೆ ಬೈದ್ಯ ,ಚೆನ್ನಪ್ಪ ಪೂಜಾರಿ ,ಸಿದ್ದ ಬೈದ್ಯ,ಕೊರಗ ಬೈದ್ಯ ಇತ್ಯಾದಿ );
996-997 ಹುಲಿ ಮತ್ತು ಹಸರ ತಿಮ್ಮ
998 -1000 ಹೊಸಮ್ಮ ,ಹೊಸಳಿಗಮ್ಮ ಮತ್ತು ಕುಲೆ ಮಾಣಿಕೊ
1001 ಹೌಟಲ್ದಾಯ ಮತ್ತು ಮಾಳದ ಕೊರಗ
ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್
ಅಧ್ಯಯನಾತ್ಮಕ ಗ್ರಂಥ -© ಡಾ.ಲಕ್ಷ್ಮೀ ಜಿ ಪ್ರಸಾದ್
ಮೊಬೈಲ್ 9480516684
ಪುಸ್ತಕಕ್ಕಾಗಿ ಸಂಪರ್ಕಿಸಿ 9480516684
.
No comments:
Post a Comment