Wednesday, 18 October 2023

ಮಾಪುಳೆ ಮಾಪುಳ್ಚಿ ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್

 

ಮುಸ್ಲಿಂ ಮೂಲದ ಮಾಪುಳೆ ಮಾಪುಳ್ಚಿ ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್

ಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಆಯ್ದ ಭಾಗ 



ತುಳುನಾಡಿನಲ್ಲಿ ಆರಾಧನೆ ಪಡೆಯುವ ದೈವಗಳೆಷ್ಟು?ಈ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟ ಯಾಕೆಂದರೆ ಎಲ್ಲ ದೈವಗಳ ಹೆಸರು ಕೂಡ ಇನ್ನು ಸಂಗ್ರಹವಾಗಿಲ್ಲ ,ನಾನು 1253  ದೈವಗಳ ಮಾಹಿತಿ ಹಾಗೂ 2360 ದೈವಗಳ ಹೆಸರನ್ನು ಅಧ್ಯಯನ ಮಾಡಿ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿ ಬರೆದಿದ್ದೇನೆ.

 ,ಆದರೆ ಇದಾದ ನಂತರ ಕೂಡ  ಬ್ರಹ್ಮನಂದಾರ್ ಬೊಳ್ಳಿ‌ಮಾಣಿಗ   ಮೊದಲಾದ ಅನೇಕ ಹೆಸರುಗಳು ಸಿಕ್ಕಿವೆ ,

ಈ ಹಿಂದೆ ಕುಂಬಳಚ್ಚೇರಿ(ಉತ್ತರ ಕೊಡಗು ಜಿಲ್ಲೆ )ಯಲ್ಲಿ ಆರಾಧನೆ ಪಡೆಯುವ ಮಾಪುಳೆ ಮಾಪುಳ್ತಿ ದೈವಗಳ ಬಗ್ಗೆ ತಿಳಿಸಿದ್ದೆ .
ಇಂದು ಇದೇ ಹೆಸರಿನಲ್ಲಿ ಇನ್ನು ಎರಡು ದೈವತಗಳಿಗೆ ಆರಾಧನೆ ಇರುವ ಬಗ್ಗೆ ಶ್ರೀಯುತ ಶಿವರಾಮ ಭಟ್ ಅವರು ತಿಳಿಸಿದರು .
ಸವಣೂರು ನಲ್ಲಿ ಈ ದೈವಗಳ ಆರಾಧನೆ ಶಿವರಾಮ ಭಟ್ಟರ ಮನೆಯಲ್ಲಿ ನಡೆಯುತ್ತದೆ .ಮಾಪುಳೆ ಮಾಪುಲ್ತಿಯರಿಗೆ ಒಂದು ಕಲ್ಲು ಹಾಕಿ ಆರಾಧಿಸುತ್ತಾರೆ.(C).ಡಾ.ಲಕ್ಷ್ಮೀ ಜಿ ಪ್ರಸಾದ
ಅಲ್ಲಿ ಬಲ್ರಾಂಡಿ ಎಂಬ ಪ್ರಧಾನ ದೈವಕ್ಕೆ ಆರಾಧನೆ ಇದೆ.ಈ ದೈವ ಘಟ್ಟದಿಂದ ಇಳಿದು ಬರುವಾಗ ಹಲಸಿನ ಹಣ್ಣನ್ನು ಒಂದು ಮುಸ್ಲಿ ದಂಪತಿಗಳು ಕದಿಯುತ್ತಾರೆ.ಆಗ ದೈವದ ಆಗ್ರಹಕ್ಕೆ ತುತ್ತಾಗಿ ಅವರು ಕಲ್ಲಾಗಿ ಮಾಯವಾಗುತ್ತಾರೆ ನಂತರ ಅವರು ಅಲ್ಲಿ ಸೇರಿಗೆ ದೈವಗಳಾಗಿ ಮಾಪುಳೆ ಮಾಪುಳ್ಚಿ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ .
ವಿಧಿ ನಿಷೇಧಗಳು ಆದಿ ಮಾನವನ ಅಲಿಖಿತ ಶಾಸನಗಳು.ಇವನ್ನು ಮೀರಿದವರಿಗೆ ಶಿಕ್ಷೆ ನಿಶ್ಚಿತಸಾಮಾನ್ಯವಾಗಿ ನಮ್ಮಲ್ಲಿ ದೈವಕ್ಕೆ ಕುಡಿ ಕಟ್ಟಿ ಇಟ್ಟ ಹಣ್ಣನ್ನು ಕದಿಯಬಾರದು ಎಂಬ ನಂಬಿಕೆ ಇದೆ   ಅಂತೆಯೇ ಇಲ್ಲಿ ನಿಷೇಧವನ್ನು ಮೀರಿದ ವ್ಯಕ್ತಿಗಳು ದುರಂತವನ್ನಪ್ಪಿರಬೇಕು .ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯಲ್ಲಿ ಹಾಸುಹೊಕ್ಕಾದ ವಿಚಾರ ಅಂತೆಯೇ ಈ ಮುಸ್ಲಿಂ ದಂಪತಿಗಳು ದುರಂತವನ್ನಪ್ಪಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ದೈವದ ಅನುಗ್ರಹಕ್ಕೆ ಪಾತ್ರರಾದವರು ದೈವ ದೇವಸ್ಥಾನಗಳನ್ನು ಕಟ್ಟಿಸಿದವರು ಇಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುವುದು ಸಾಮಾನ್ಯ ವಿಚಾರ ಅಂತೆಯೇ ದೈವದ ಆಗ್ರಹಕ್ಕೆ ಸಿಕ್ಕಿ ದುರಂತವನ್ನಪ್ಪಿದವರೂ ಇಲ್ಲಿ ಅದೇ ದೈವದ ಸೇರಿಗೆ ದೈವಗಳಾಗಿ ಆರಾಧನೆ ಪಡೆಯವುದು ತುಳು ಸಂಸ್ಕೃತಿಯ ಅನನ್ಯತೆ .ಇಲ್ಲಿ ಇವರು ದೈವಗಳಾಗುವ ಮೊದಲು ಏನಾಗಿದ್ದರು ಯಾರಾಗಿದ್ದರು ?

ಎಂಬುದು ಮುಖ್ಯವಾಗುವುದೇ ಇಲ್ಲ ದೈವತ್ವ ಪಡೆದ ನಂತರ ಅವರೆಲ್ಲ ನಮ್ಮನ್ನು ಕಾಯುವ ಶಕ್ತಿಗಳು ಎಲ್ಲರಿಗೂ ಒಂದೇ ರೀತಿಯ ಭಕ್ತಿಯ ನೆಲೆ ಇದು ತುಳು ಸಂಸ್ಕೃತಿಯ ಔನ್ನತ್ಯದ ಪ್ರತೀಕ (c)ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ನೀಡಿದ ಶಿವರಾಮ ಭಟ್ ಹಾಗೂ ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಪದ್ಮನಾಭ ಆಚಾರ್ಯ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು

2 comments:

  1. ನೀವು ಇದುವರೆಗೆ ಬರೆದ ದೈವಗಳ ಹೊರತಾಗಿ, ಈಗ ಹೊಸದಾಗಿ ಕಂಡುಬಂದ ದೈವಗಳ ಬಗೆಗೆ ಒಂದು ಪೂರಕ ಕೃತಿಯನ್ನು ರಚಿಸಿದರೆ, ಅಭ್ಯಾಸಿಗಳಿಗೆ ಅನುಕೂಲವಾಗುವುದು.

    ReplyDelete
    Replies
    1. ಇದನ್ನು ಓದುವವರೇ ಇಲ್ಲ..ಪುಸ್ತಕ ತಗೊಳ್ಳುವವರೂ ಇಲ್ಲ
      .ಯಸರಿಗಾಗಿ ಬರೆಯುವುದು ? ನೀವು ಪುಸ್ತಕ ತಗೊಂಡಿದ್ದೀರ ಸರ್

      Delete