Wednesday 31 May 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 377-384 ಪೂಂಕಣಿ ಭಗವತಿ ಬಪ್ಪಿರಿಯನ್,ಮತ್ತು ಆರು ಸಹೋದರ ದೈವಗಳು © ಡಾ ಲಕ್ಷ್ಮೀ ಜಿ ಪ್ರಸಾದ್

ಪೂಂಕಣಿ ಭಗವತಿ ಮತ್ತು ಆರು ಜನ ಸಹೋದರ ತೆಯ್ಯಂ ಗಳು ಮೂಲತಃ ಬ್ರಾಹ್ಮಣರ ಮಕ್ಕಳು.
ಈ ದೈವದ ಕಥಾನಕವನ್ನು ಕೇಳು ಮಾಸ್ತರ್ ಅಗಲ್ಪಾಡಿ ಅವರು ಹೀಗೆ ನೀಡಿದ್ದಾರೆ.
ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಕುಮಾರಿಯು ಕೋಲತ್ತುನಾಡಿನ ದಕ್ಷಿಣ ಭಾಗದ ಗಡಿ ಭಾಗದಲ್ಲಿ ಅರಿಯಾಂಕರ ಎಂಬಲ್ಲಿ ಪ್ರತಿಷ್ಠಿತ ಬ್ರಾಹ್ಮಣ ದಂಪತಿಗಳ ಮಗಳಾಗಿ ಜನಿಸಿದಳು. ಇವಳಿಗೆ ಪೂಂಕಣಿ ಎಂದು ಹೆಸರಿಟ್ಟು ಮುದ್ದಿನಿಂದ ಸಾಕಿದರು .ಇವಳಿಗೆ ಆರು ಜನ ಅಣ್ಣಂದಿರು ಇದ್ದರು.ಪೂಂಕಣಿಗೆ ವಿವಾಹ ವಯಸ್ಸಾಗಲು ವಿವಾಹ ಪ್ರಸ್ತಾಪಗಳು ಬರತೊಡಗಿದವು.ಆಗ ಪೂಂಕಣಿಗೆ ಕೊರಳಿಗೆ ಧರಿಸಲು ಸಾಕಷ್ಟು ಮುತ್ತುಗಳು ಇರಲಿಲ್ಲ. ಹಾಗಾಗಿ ಅವಳು ಮತ್ತು ಆರು ಮಂದಿ ಅಣ್ಣಂದಿರು ಹಡಗಿನಲ್ಲಿ ಮುತ್ತು ತರಲು ಸಮುದ್ರಕ್ಕೆ ಹೋದರು.ಬಿರುಗಾಳಿಗೆ ಸಿಕ್ಕು ಹಳೆಯ ಹಡಗು‌ಮುರಿದು ಹಡಗಿನ ತುಂಡೊಂದನ್ನು ಹಿಡಿದು ತೇಲಿಕೊಂಡು ದಡ ಸೇರಿದರು.ಆಗ ಪೂಂಕಣಿ ಮತ್ತು ಸಹೋದರರು ಬೇರೆ ಬೇರೆಯಾದರು.ಅಣ್ಣಂದಿರನ್ನು ಹುಡುಕುತ್ತಾ ಅಲೆಯುವಾಗ ದೂರದಲ್ಲಿ ಒಂದು ಹಡಗು ಕಾಣಿಸಿತು.ಅದು ಬಪ್ಪಿರಿಯನ್ ಬ್ಯಾರಿಯ ಹಡಗಾಗಿತ್ತು.ತನ್ನ ಸಹೋದರರನ್ನು ಹುಡುಕಲು ಅವನ ಸಹಾಯ ಯಾಚಿಸಿದಳು.ಅವನು ಅದಕ್ಕೆ ಒಪ್ಪದ
 ಅವಳನ್ನು ಹೀಯಾಳಿಸಿದನು .ಆಗ ಅವಳು ಗಂಗಾ ಮಾತೆಯನ್ನು ಪ್ರಾರ್ಥನೆ ಮಾಡಿದಾಗ ತೆರೆಗಳು ಸರಿದು ದಾರಿ ಮಾಡಿಕೊಟ್ಟವು.ಬಪ್ಪಿರಿಯನ್ ನ ಹಡಗು ತಲುಪಿದಾಗ ಅಲ್ಲಿ ತನಕವೂ ದಾರಿ ಆಯಿತು.ಆಗ ಅವಳ ಕಾರಣಿಕ ತಿಳಿದ ಬಪ್ಪಿರಿಯನ್ ಅವಳ ಸಗೋದರರನ್ನು ಹುಡುಕಲು ಸಹಾಯ‌ಮಾಡಿದನು.ಅವರು ಸಿಕ್ಕಿದರಾದರೂ ಅವರೆಲ್ಲರೂ ಸತ್ತು ಹೋಗಿ ಶವಗಳು ಮಾತ್ರ ಸಿಕ್ಕವು.ಪೂಂಕಣಿ ಯು ತನಗನ ಮಂತ್ರ ಶಕ್ತಿ ಯಿಂದ ಅವರನ್ನು ಅಲ್ಲ‌ನೆಲೆಗೊಳಿಸಿದಳು.ಅ ಆರು‌ಮಂದಿ ಅಣ್ಣಂದಿರು ದೈವಗಳಾಗಿ ಅಲ್ಲಿ ನೆಲೆನಿಂತರು.ಹಡಗಿನಲ್ಲಿ ‌ಮುಂದುವರಿದ ಬಪ್ಪಿರಿಯನ್ ಮತ್ತು ಅವನ ಸಂಗಡಿಗರನ್ನು ಕಡಲ್ಗಳ್ಳರು ಕೊಂದು ಹಾಕಿದರು.ಆಗ ಬಪ್ಪಿರಿಯನ್ ಆತ್ಮವನ್ನು ಅವಾಹಿಇಸಿ ಅವನಿಗೆ ಒಂದು ನೆಲೆ ನೀಡಿದಳು.ತನಗನ ಆಪ್ತನನ್ನಾಗಿಸಿದಳು.
ಅವಳು ಮುಂದೆ ಕುಡಲ್ ಕುನ್ನು ಎಂಬ ಬ್ರಾಹ್ಮಣ ರಿಗಿದ್ದ ತೊಂದರೆಗಳನ್ನು ನಿವಾರಿಸಿ ಅಲ್ಲಿ ನೆಲೆಯಾಗಿ ಅವರಿಂದ ಆರಾಧನೆ ಯನ್ನು ಪಡೆದಳು.
ಇಲ್ಲಿ ಬರುವ ಬಪ್ಪಿರಿಯನ್ ‌ಮತ್ತು ಬಬ್ಬರ್ಯ ದೈವ ಒಂದೇ ಇರಬೇಕು ಕಥಾನಕದಲ್ಲಿ ಸಾಮ್ಯತೆ ಇದೆ
ಆದಾರ ಗ್ರಂಥ - ಕೇರಳ ತೆಯ್ಯಂ ಲೇಖಕರು ಕೇಳು ಮಾಸ್ತರ್ ಅಗಲ್ಪಾಡಿ

No comments:

Post a Comment