Sunday, 25 November 2018

ಡಾ.ಲಕ್ಷ್ಮೀ ಜಿ ಪ್ರಸಾದ

ಡಾ.ಲಕ್ಷ್ಮೀ ಜಿ ಪ್ರಸಾದ







ಹೆಸರು: ಡಾ ಲಕ್ಷ್ಮೀ ವಿ
ಕಾವ್ಯನಾಮ -ಡಾ.ಲಕ್ಷ್ಮೀ ಜಿ ಪ್ರಸಾದ]
ಜನನ ದಿನಾಂಕ : 29-10-1972,
 ಜನ್ಮ ಸ್ಥಳ :ಕೋಳ್ಯೂರು ಕಾಸರಗೋಡು ಜಿಲ್ಲೆ ವೃತ್ತಿ :ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿಪೂರ್ವ ಕಾಲೇಜ್ ನೆಲಮಂಗಲ ಬೆಂಗಳೂರು ಗ್ರಾಮಂತರ ಜಿಲ್ಲೆ
ತಂದೆ ತಾಯಿ: ವೇದಮೂರ್ತಿ ನಾರಾಯಣ ಭಟ್ಟ ವಾರಣಾಸಿ ಮತ್ತು ಸರಸ್ವತಿ ಅಮ್ಮ ವಾರಣಾಸಿ
ಪತಿ: ಗೋವಿಂದ ಪ್ರಸಾದ ಪಂಜಿಗದ್ದೆ
ಮಗ: ಅರವಿಂದ ಭಟ್
E mail : samagramahithi@gmail.com
Mobile 9480516684
blogs:-

1 ಭೂತಗಳ ಅದ್ಭುತ ಜಗತ್ತು - 2,60,000 ಕ್ಕಿಂತ ಹೆಚ್ಚಿನ ಓದುಗರಿದ್ದಾರೆ

2 ಶಿಕ್ಷಣ ಲೋಕ

3 ಗಿಳಿ ಬಾಗಿಲು ( ಹವ್ಯಕ ಕನ್ನಡ  ಭಾಷೆಯ ಬ್ಲಾಗ್)

ಶೈಕ್ಷಣಿಕ ಅರ್ಹತೆಗಳು;

೧ ಬಿಎ.ಸ್ಸಿ-ಎಸ್ ಡಿಎಮ್ ಕಾಲೇಜು ಉಜಿರೆ

೨ ಎಂ.ಎ[ಕನ್ನಡ] ನಾಲ್ಕನೇ RANK ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ

೩ ಎಂ.ಎ[ಸಂಸ್ಕøತ] ಪ್ರಥಮ RANK ಮಂಗಳೂರು ವಿಶ್ವ ವಿದ್ಯಾಲಯ

೪ ಎಂಎ[ಹಿಂದಿ] ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ

೫ ಎಂ.ಫಿಲ್[ವಿಷಯ:ಈಜೋ ಮಂಜೊಟ್ಟಿ ಗೋಣ-ಒಂದು -ವಿಶ್ಲೇಷಣಾತ್ಮಕ ಅಧ್ಯಯನ]ವಿ ಎಮ್ ಯುನಿವರ್ಸಿಟಿ

೬ ಪಿಹೆಚ್.ಡಿ[ವಿಷಯ:ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ )ಹಂಪಿ ಕನ್ನಡ ವಿಶ್ವ ವಿದ್ಯಾಲಯ

೬ ಎರಡನೆಯ ಪಿಹೆಚ್.ಡಿ ಪದವಿ [ವಿಷಯ‘ಪಾಡ್ದನಗಳಲ್ಲಿ ತುಳುವ ಸಂಸ್ಕøತಿಯ ಅಭಿವ್ಯಕ್ತಿ’] ದ್ರಾವಿಡ ವಿಶ್ವ ವಿದ್ಯಾಲಯ
೮ .ಎನ್.ಇ.ಟಿ-ಯುಜಿಸಿ
9 ರಾಷ್ಟ್ರ ಭಾಷಾ ಪ್ರವೀಣ( ಮೊದಲ ರ್ಯಾಂಕ್)
1೦ ಶಾಸನ ಮತ್ತು ಲಿಪಿ ಶಾಸ್ತ್ರ ಡಿಪ್ಲೊಮಾ ( ಮೊದಲ ರ್ಯಾಂಕ್)
11 ಕನ್ನಡ ,ತುಳು ,ಹಿಂದಿ ,ಇಂಗ್ಲಿಷ್ ,ಸಂಸ್ಕ್ರತ , ,ಹವಿಗನ್ನಡ ,ಗೌಡ ಕನ್ನಡ ಮಲೆಯಾಳ  ಹೀಗೆ ಒಟ್ಟು 8 ಭಾಷೆಗಳ ತಿಳುವಳಿಕೆ



12 ರಾಷ್ಟ್ರೀಯ /ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮತ್ತು ಭಾಗವಹಿಸುವಿಕೆ- 200 ಕ್ಕಿಂತ ಹೆಚ್ಚು





ಪ್ರಶಸ್ತಿ-ಪುರಸ್ಕಾರಗಳು

1 .ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಮಹಿಳಾ ರತ್ನ-ಬಸವನ ಗುಡಿ ಫೌಂಡೇಶನ್,ಬೆಂಗಳೂರು

2 .ಕರ್ನಾಟಕ ಭೂಷಣ –ಜನತಾ ಸೈನಿಕ ದಳ ಸಾಂಸ್ಕೃತಿಕ ಪ್ರತಿಷ್ಠಾನ

3.ಕಲಾ ಜ್ಯೋತಿ –ಪದ್ಮ ಶ್ರೀ ಕಲಾ ಸಂಘ

4.ತುಳುವೆರೆ ಆಯನೋ 2009[ಸಂಶೋಧನಾ ವಿಭಾಗ]-ತುಳುವೆರ ಆಯನೋ ಕೂಟ ,ಬದಿಯಡ್ಕ

5.ಕಾವ್ಯಶ್ರೀ ಪುರಸ್ಕಾರ[ಕಥಾ ವಿಭಾಗ] .ಕಾಸರಗೋಡು ಸಾಂಸ್ಕೃತಿಕ ಪ್ರತಿಷ್ಠಾನ

6 OUTSTANDING TEACHER AWARD -2013-ಎ ಶಾಮ್ ರಾವ್ ಫೌಂಡೇಶನ್
7 ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ -2015-ಕರ್ನಾಟಕ ಕನ್ನಡ ಕಾವಲು ಪಡೆ
 8 ಪುಲಕೇಶಿ ಪ್ರಶಸ್ತಿ -2015-ಪರಮೇಶ್ವರ ಪುಲಕೇಶಿ ಪ್ರತಿಷ್ಠಾನ
9 ಬಲಿಯೇಂದ್ರ ಪುರಸ್ಕಾರ - 2016 ತುಳುವರೆಂಕುಲು ಸಂಘಟನೆ
10 ಕರಾವಳಿ ರತ್ನ -2017  ದಕ್ಷಿಣ ಕನ್ನಡಿಗರ ಸಂಘ
11  ಕನ್ನಡ ಜಾನಪದ ಪರಿಷತ್ ಪ್ರಶಸ್ತಿ- 2017
12 ಕರ್ನಾಟಕ ಜಾನಪದ ರತ್ನ ‌- 2014 ಅಖಿಲ ಭಾರತ ಬೆಳದಿಂಗಳ ಸಾಹಿತ್ಯ ಸಮ್ಮೇಳನ
13 ಸಾಧನಾ ಪ್ರಶಸ್ತಿ -2018 ಕರ್ನಾಟಕ ಯುವ ವೇದಿಕೆ.
14 ಹವಿಗನ್ನಡದ ಮೊದಲ ನಾಟಕಗಾರ್ತಿ ಎಂಬ ಚಾರಿತ್ರಿಕ ದಾಖಲೆ
15 ತುಳು ಸಂಸ್ಕೃತಿ ಕುರಿತು ಅಧ್ಯಯನ ಮಾಡಿ ಎರಡು ಡಾಕ್ಟರೇಟ್ ಪದವಿ ಪಡೆದ ಮೊದಲ ವ್ಯಕ್ತಿ.
16 ಹವ್ಯಕ ಭಾಷೆಯ ಬ್ಲಾಗ್ ತೆರೆದ ಮೊದಲ ಮಹಿಳೆ.17 ಎರಡೂವರೆ ಲಕ್ಷಕ್ಕಿಂತ ಹೆಚ್ಚಿನ ಓದುಗರನ್ನು ಪಡೆದ ಕರ್ನಾಟಕದ ಮೊದಲ ಮಹಿಳಾ ಬ್ಲಾಗರ್
18 ಮೂರು ಸ್ನಾತಕೋತ್ತರ ಪದವಿ, ಎಂಫಿಲ್ ಮತ್ತು ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದ ಮೊದಲ ಹವ್ಯಕ ಮಹಿಳೆ ಬಹುಶಃ ಮೊದಲ ವ್ಯಕ್ತಿ ಕೂಡ( ಹವ್ಯಕ ಅಧ್ಯಯನ ಕೇಂದ್ರದ ನಿರ್ದೇಶಕರು ತಿಳಿಸಿದಂತೆ)
19 ಗ್ರಂಥ ಗೌರವ: ಅಪೂರ್ವ ತುಳು ಸಂಶೋಧಕಿ - ಡಾ.ಲಕ್ಷ್ಮೀ ಜಿ ಪ್ರಸಾದ- ಪ್ರಧಾನ ಸಂಪಾದಕರು : ಎಚ್ ಬಿ ಎಲ್ ರಾವ್,
ಮುಂಬಯಿ ಸಾಹಿತ್ಯ ಬಳಗ




ಸಂಶೋಧನಾ ಕೃತಿಗಳು-25

1 ತುಂಡು ಭೂತಗಳು-ಒಂದು ಅಧ್ಯಯನ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-0-1

2 ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು ಹೇಮಾಂಶು ಪ್ರಕಾಶನ ಮಂಗಳೂರು 81-86670-73

3 ಬೆಳಕಿನೆಡೆಗೆ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-5-6

4 ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-2-5

5 ತುಳು ಪಾಡ್ದನಗಳಲ್ಲಿ ಸ್ತ್ರೀ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-4-9

6 ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-1-8

7 ತುಳು ಜನಪದ ಕವಿತೆಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-6-3

8 ಪಾಡ್ದನ ಸಂಪುಟ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-3-2

9 ಕಂಬಳ ಕೋರಿ ನೇಮ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-7-6

10 ತುಳು ನಾಡಿನ ಅಪೂರ್ವ ಭೂತಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-8-7

11 ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಪಾಡ್ದನಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-9-4

12 ದೈವಿಕ ಕಂಬಳ ಕೋಣ ಹರೀಶ ಎಂಟರ್ಪ್ರೈಸಸ್ ಬೆಂಗಳೂರ

13 ಅರಿವಿನಂಗಳದ ಸುತ್ತ ಮಾತೃಶ್ರೀ ಪ್ರಕಾಶನ ಬೆಂಗಳೂರು

14 ಮನೆಯಂಗಳದಿ ಹೂ ಮಾತೃಶ್ರೀ ಪ್ರಕಾಶನ ಬೆಂಗಳೂರು

15 ನಾಗ ಬ್ರಹ್ಮ ಆರಾಧನೆ –ಒಂದು ವಿಶ್ಲೇಷಣಾತ್ಮಕ ಅಧ್ಯಯನ ಪ್ರಚೇತ ಬುಕ್ ಹೌಸ್ ,ಬೆಂಗಳೂರು

16 ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು ಪ್ರಚೇತ ಬುಕ್ ಹೌಸ್ ,ಬೆಂಗಳೂರು

17 ಭೂತಗಳ ಅದ್ಭುತ ಜಗತ್ತಿನಲ್ಲಿ ಪ್ರಚೇತ ಬುಕ್ ಹೌಸ್ ,ಬೆಂಗಳೂರು

18 ಶಾರದಾ ಜಿ ಬಂಗೇರರ ಮೌಖಿಕ ಜಾನಪದ ಪ್ರಚೇತ ಬುಕ್ ಹೌಸ್ ,ಬೆಂಗಳೂರು

19 ಬಂಗಲೆ ಗುಡ್ಡ ಸಣ್ಣಕ್ಕ ನ ಮೌಖಿಕ ಜಾನಪದ ಪ್ರಚೇತ ಬುಕ್ ಹೌಸ್ ,ಬೆಂಗಳೂರು

20 ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು
21 ಶಿಕ್ಷಣ ಲೋಕ.                                               
22    ಭೂತಗಳ ಅದ್ಭುತ ಜಗತ್ತು ಭಾಗ ಎರಡು
23 ದೇವೆರೆ ದಾಸಿಮಯ್ಯೆರ ವಚನೊಳು
24      ಹವ್ಯಕ ನುಡಿಗಟ್ಟುಗಳು( ಅಚ್ಚಿನಲ್ಲಿದೆ)
  25 ಕಾರಣಿಕದ ದೈವೊಲು     
    ಅಪೂರ್ವ ತುಳು  ಸಂಶೋಧಕಿ  ಡಾ.ಲಕ್ಷ್ಮೀ ಜಿ ಪ್ರಸಾದ
ವಜ್ರ ಎಲ್ಲಿದ್ದರೂ ಪ್ರಕಾಶಿಸುವಂತೆ ಪ್ರತಿಭೆ ಕೂಡ ಎಲ್ಲಿದ್ದರೂ ಪ್ರಕಾಶಿಸುತ್ತದೆ,ಡಾ.ಲಕ್ಶ್ಮಿ ಜಿ ಪ್ರಸಾದ  ಕೂಡ ಓರ್ವ ಇಂತಹ ಅಸಾಧಾರಣ ಪ್ರತಿಭೆ- ಸ್ವಂತಿಕೆ, ಸ್ವಾಭಿಮಾನಗಳಿಂದ ಕೂಡಿದ ವಿಶಿಷ್ಟ ಮಹಿಳೆ,ಅಲ್ಲದೆ ದಕ್ಷತೆ,ಶ್ರಧ್ಧೆ,ನಿರಂತರ ಅಧ್ಯಯನ ಇವುಗಳಿಂದ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ, ತನ್ಮೂಲಕ ಸಮಾಜದಲ್ಲಿ ಗುರುತಿಸಲ್ಪಟ್ಟಿರುವ, ಸಮಾಜದಿಂದ ಗೌರವಿಸಲ್ಪಟ್ಟಿರುವ ಶಿಕ್ಷಕಿ-ಬರಹಗಾರ್ತಿ-ಸಂಶೋಧಕಿ  ಲಕ್ಷ್ಮಿಯವರ ಹುಟ್ಟೂರು ಗಡಿನಾಡು ಕಾಸರಗೋಡು ಜಿಲ್ಲೆಯ ಕೋಳ್ಯೂರು ಎಂಬ ಪುಟ್ಟ ಗ್ರಾಮ.
  ವೇದಮೂರ್ತಿ ನಾರಾಯಣ ಭಟ್ ವಾರಣಾಸಿ ಮತ್ತು ಸರಸ್ವತಿ ಅಮ್ಮ ವಾರಣಾಸಿ ದಂಪತಿಗಳ ಎರಡನೆಯ ಮಗಳಾಗಿ ಹುಟ್ಟಿದ ಲಕ್ಷ್ಮೀ ಯವರ ಮನೆಯಲ್ಲಿ ಕರೆಯುವ ಹೆಸರು ವಿದ್ಯಾ .ಹೆಸರಿಗೆ ಅನ್ವರ್ಥವಾಗಿ ಕಲಿತ ಇವರ ಛಲ ಯಾರೂ ಕೂಡ ಮೆಚ್ಚುವಂತಹದ್ದು.

ಡಾ.ಲಕ್ಷ್ಮಿಯವರು‌ ಪ್ರಸ್ತುತ  ಬೆಂಗಳೂರು  ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ,.
ಇವರ ಸಾಹಿತ್ಯ ಸಂಶೋಧನಾ ಹಾಗೂ ಶೈಕ್ಷಣಿಕ ಸಾಧನೆಗಳಿಗೆ ಯಾರೇ ಆದರೂ ತಲೆಬಾಗಲೇ ಬೇಕು . ಡಾಕ್ಟರೇಟ್  ಪದವಿಯ ಕನಸು ಕಟ್ಟುವುದು ಸುಲಭ.ಆ ಕನಸನ್ನು ನನಸಾಗಿಸಲು ಅದನ್ನು ಈಡೇರಿಸುವ ಛಲ,ಪರಿಶ್ರಮ,ನಿರಂತರ ಬೇಕು. ಅಪಾರ ಸಾಧನೆ,ಅತೀ ಅಗತ್ಯ. ಅದರಲ್ಲೂ ಹೊರಗೆ ಕಛೇರಿಯಲ್ಲೋ ಸಂಸ್ಥೆಯಲ್ಲೋ ದುಡಿಯುವ ಮಹಿಳೆಯರಿಗೆ ಮನೆ ಜವಾಬ್ದಾರಿಯೊಂದಿಗೆ ಓದಿ ಮಹಾಪ್ರಬಂಧ ರಚಿಸಿ ಮಂಡಿಸುವುದು ಅಷ್ಟು ಸುಲಭದ ಕೆಲಸವಲ್ಲ.ಇಷ್ಟು ಮಾತ್ರವಲ್ಲ, ಇದರೊಂದಿಗೆ ಅನೇಕ ಸಾಹಿತ್ಯ ಕೃಷಿಯನ್ನೂ ಮಾಡುತ್ತಾ ಎಂ.ಎ (ಕನ್ನಡ) ನಾಲ್ಕನೆ ರ‌್ಯಾಂಕ್ , ಎಂ.ಎ(ಸಂಸ್ಕೃತ),ಮೊದಲ ರ‌್ಯಾಂಕ್ ನೊಂದಿಗೆ , ಎಂ.ಎ(ಹಿಂದಿ) ಹೀಗೆ ಮೂರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ , ತುಳು ಸಂಸ್ಕೃತಿ ಬಗ್ಗೆ ಒಂದು ಎಂ.ಫಿಲ್, ಹಾಗೂ ಎರಡು ಪಿ.ಹೆಚ್ ಡಿ ಪದವಿಗಳನ್ನು ಗಳಿಸಿದ ಸಾಧಕಿ ನಮ್ಮ ನಡುವೆ ಇದ್ದಾರೆ. ಅವರೇ ಶ್ರೀಮತಿ ಡಾ. ಲಕ್ಷ್ಮೀ ಜಿ ಪ್ರಸಾದ. ಕಾಸರಗೋಡು ಜಿಲ್ಲೆಯ ಕುಗ್ರಾಮ ಕೋಳ್ಯೂರಿನಲ್ಲಿ  ವಾರಣಾಸಿ, ವೇದಮೂರ್ತಿ ನಾರಾಯಣಭಟ್ ಹಾಗೂ ಸರಸ್ವತಿ ಅಮ್ಮ ದಂಪತಿ ಮಗಳಾಗಿ ಹುಟ್ಟಿದ  ಈಕೆ, ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಸೀನಿಯರ್ ಅಕೌಂಟ್ಸ್ ಮ್ಯಾನೇಜರ್ ಆಗಿರುವ ಪಂಜಿಗದ್ದೆ ಶ್ರೀಯುತ ಗೋವಿಂದ ಪ್ರಸಾದರ ಸಹ ಧರ್ಮಿಣಿ. ಎರಡನೇ ವಿಜ್ಞಾನ ಪದವಿಯಲ್ಲಿ ಓದುತ್ತಿರುವಾಗಲೇ ವಿವಾಹವಾದ ಇವರು ವಿವಾಹನಂತರವೂ ಓದನ್ನು ಮುಂದುವರಿಸಿ ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ ಅನನ್ಯವಾದುದು 

.ಪ್ರಸ್ತುತ ಬೆಂಗಳೂರಿನಲ್ಲಿ ಕನ್ನಡ ಉಪನ್ಯಾಸಕಿ ಆಗಿ ದುಡಿಯುತ್ತಿರುವ ಇವರ ಸಂಶೋಧನೆಕಾರ್ಯವನ್ನು  ಗಮನಿಸಿದರೆ; ಆಶ್ಚರ್ಯದಿಂದ ಕಣ್ಣರಳಿಸಿ ನೋಡುವಂತಾಗುತ್ತದೆ. 
.ಲಕ್ಷ್ಮಿಯವರ ಜ್ಞಾನ ದಾಹ,ಅದಮ್ಯ ಉತ್ಸಾಹ,ಸಾಧಿಸುವ ಛಲ ಇವುಗಳಿಗೆ ಅವರು ಗಳಿಸಿರುವ ಶೈಕ್ಷಣಿಕ ಅರ್ಹತೆಗಳ ದೀರ್ಘ ಪಟ್ಟಿಯೇ ಸಾಕ್ಷಿ

ಉನ್ನತ ಶೈಕ್ಷಣಿಕ ಸಾಧನೆ :
ಕೋಳ್ಯೂರಿನ ಶ್ರೀ ಶಂಕರ ನಾರಾಯಣ ಪ್ರಾಥಮಿಕ ಶಾಲೆಯಲ್ಲಿ ಓದಿ ಮೀಯಪದವಿನ ಶ್ರೀ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು.ಲಕ್ಷ್ಮೀ ಯವರೇ ಹೇಳುವಂತೆ ಈ ಶಾಲೆಯ ಶಿಕ್ಷಕರು ಅವರ ಬದುಕಿನ ದಿಕ್ಕನ್ನು ಬದಲಾಯಿಸಿದರು.ಅತ್ಯುತ್ಸಾಹದ ಮುಂಗೋಪಿ ಹುಡುಗಿಯಲ್ಲಿ‌ನ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಿದರು ‌.ನಂತರ ವಾಣಿವಿಜಯ ಪ್ರೌಢ ಶಾಲೆಯಲ್ಲಿ ಓದಿ ಮುಂದೆ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು.ನಂತರ ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಗಳಿಸಿದರು.

ಎರಡನೇ ವರ್ಷ ಬಿಎಸ್ಸಿ ಓದುತ್ತಿರುವಾಗಲೇ ಮದುವೆ ಆಯಿತು .ವಿವಾಹ ನಂತರವೂ ಅನೇಕ ಸವಾಲುಗಳನ್ನು ಎದುರಿಸಿಕೊಂಡೇ ಓದನ್ನು ಮುಂದುವರಿಸಿದರು .ಮಂಗಳೂರು ವಿಶ್ವವಿದ್ಯಾಲಯದಲ್ಲಿ  ಮೊದಲ ರಾಂಕ್ ನೊಂದಿಗೆ ಸಂಸ್ಕೃತ ಎಂ.ಎ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಾಲ್ಕನೇ ರಾಂಕ್ ನೊಂದಿಗೆ  ಕನ್ನಡ ಎಂ.ಎ, ಹಾಗೂ ಹಿಂದಿ ಎಂ.ಎಪದವಿಗಳನ್ನು ಪಡೆದರು..ದಕ್ಷಿಣ ಭಾರತ ಹಿಂದಿ ಪ್ರಚಾರಸಭಾದ ಮೂಲಕ ರಾಷ್ಟ್ರಭಾಷಾ ಪ್ರವೀಣ , ಡಾ.ಸುರೇಶ ಪಾಟೀಲ್ ಅವರ ಮಾರ್ಗ ದರ್ಶದಲ್ಲಿ ಈಜೋ ಮಂಜೊಟ್ಟಿಗೋಣ –ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನಾ ಪ್ರಬಂಧವನ್ನು ರಚಿಸಿ ಸೇಲಂ ನ ವಿನಾಯಕ ಯುನಿವರ್ಸಿಟಿಗೆ ಸಲ್ಲಿಸಿ  ಎಂ.ಫಿಲ್.ಪದವಿಯನ್ನು ಗಳಿಸಿ ನಂತರ ಡಾ.ಎಸ್ .ನಾಗರಾಜು ಅವರ ಮಾರ್ಗದರ್ಶನದಲ್ಲಿ “ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ-ವಿಶ್ಲೇಷಣಾತ್ಮಕ ಅಧ್ಯಯನ”ಎಂಬ ಸಂಶೋಧನಾ ಮಹಾ ಪ್ರಬಂಧವನ್ನು ರಚಿಸಿ  ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಗಳಿಸಿದ್ದಾರೆ.ಇವರ ಜ್ಞಾನ ದಾಹ ಇಲ್ಲಿಗೆ ತಣಿಯಲಿಲ್ಲ .  

ಒಂದು ಪಿಎಚ್.ಡಿ ಪದವಿ ಗಳಿಕೆಯ ನಂತರವೂ “ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ” ಎಂಬ ಸಂಶೋಧನಾ ಮಹಾ ಪ್ರಬಂಧವನ್ನು ಡಾ.ಶಿವ ಕುಮಾರ್ ಭರಣ್ಯರ ಮಾರ್ಗ ದರ್ಶನದಲ್ಲಿ ಸಿದ್ಧ ಪಡಿಸಿ, ಆಂಧ್ರ ಪ್ರದೇಶದ ಕುಪ್ಪಂ ನಲ್ಲಿರುವ ದ್ರಾವಿಡ ವಿಶ್ವ ವಿದ್ಯಾಲಯದ ತುಳು ವಿಭಾಗಕ್ಕೆ ಸಲ್ಲಿಸಿ   ಎರಡನೆಯ ಪಿ.ಹೆಚ್ ಡಿ ಯನ್ನು ಪಡೆದು ತುಳು ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡಿ ಎರಡು ಪಿ.ಎಚ್.ಡಿ ಪದವಿಗಳನ್ನು ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.  ಇದರೆಡೆಯಲ್ಲಿ ಬಿಡುವು ಮಾಡಿಕೊಂಡು ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಶಾಸನ ಶಾಸ್ತ್ರ ಡಿಪ್ಲೋಮಾ ಪರೀಕ್ಷೆಯಲ್ಲಿ ಮೊದಲ ರಾಂಕ್ ಪಡೆದು ಮಾನ್ಯ ಶಿಕ್ಷಣ ಮಂತ್ರಿಗಳಾದ ಕಿಮ್ಮನೆ ರತ್ನಾಕರ ಅವರಿಂದ ಅಭಿನಂದನೆಯನ್ನು ಪಡೆದಿದ್ದಾರೆ.

ಸಾಹಿತ್ಯ ,ಸಂಶೋಧನಾ  ಪ್ರತಿಭೆಃ- 
ಸಾಹಿತಿ - ಲೇಖಕಿಯಾಗಿ ಲಕ್ಷ್ಮೀ ಜಿ ಪ್ರಸಾದ 
ಆರಂಭಿಕ ದಿನಗಳಲ್ಲಿ ಕಥೆಗಳನ್ನು ಬರೆಯುತ್ತಿದ್ದ ಲಕ್ಷ್ಮೀ ಯವರ ಇಪ್ಪತ್ತಕ್ಕೂ ಹೆಚ್ಚಿನ ಕಥೆಗಳು ಹೊಸದಿಗಂತ ಮಂಗಳ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನರ ಮೆಚ್ಚುಗೆಯನ್ನು ಪಡೆದಿವೆ."ಮನೆಯಂಗಳದಿ ಹೂ" ಎಂಬ ಕಥಾ ಸಂಕಲನ ಕೂಡ ಪ್ರಕಟವಾಗಿದೆ. ನಿದಾನವಾಗಿ ತನ್ನ ಜ್ಞಾನದ ಹರವನ್ನು ವಿಸ್ತರಿಸುತ್ತಾ  ವೈಚಾರಿಕ ಲೇಖನಗಳನ್ನು ಬರೆಯಲು ಆರಂಭಿಸಿದರು. ಇವರ ಇನ್ನೂರಕ್ಕೂ ಹೆಚ್ಚಿನ ವೈಚಾರಿಕ ಶೈಕ್ಷಣಿಕ ಬರಹಗಳು ವಿಜಯ ಕರ್ನಾಟಕ, ಹೊಸ ದಿಗಂತ,ಉದಯವಾಣಿ,ಕನ್ನಡ ಪ್ರಭ,ವಿಶ್ವವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ." ಅರಿವಿನಂಗಳದ ಸುತ್ತ"ಎಂಬ ಶೈಕ್ಷಣಿಕ ಬರಹಗಳ ಸಂಕಲನ ಕೂಡ ಪ್ರಕಟವಾಗಿದೆ‌.

ವೃತ್ತಿಯೊಂದಿಗೆ ಬರವಣಿಗೆಯನ್ನು ಮೈಗೂಡಿಸಿಕೊಂಡ ಲಕ್ಷ್ಮೀ ಯವರು ಕನ್ನಡ ಎಂ.ಎ ಓದುವಾಗ ಜಾನಪದ ಅದರಲ್ಲೂ ತುಳು ಜಾನಪದದತ್ತ ಆಕರ್ಷಿತರಾದ ಇವರು
ಅನೇಕ ಪಾಡ್ದನ ಗಳನ್ನು, ತುಳು ಜನಪದ ಕವಿತೆಗಳನ್ನು ಸಂಪಾದಿಸಿ ,ಅನುವಾದ ಮಾಡಿ ವಿಶ್ಲೇಷಣೆ ಮಾಡಿದ್ದಾರೆ
ಇವನ್ನು ಯುವಜನಾಂಗದೆಡೆಗೆ   ತಲುಪಿಸುವ ಸಲುವಾಗಿ ಪಾಡ್ದನ ಸಂಪುಟ, ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಪಾಡ್ದನಗಳು ,ತುಳು ಜನಪದ ಕವಿತೆಗಳು ಎಂಬ ಕೃತಿಗಳನ್ನು ತನ್ನ ಸ್ವಂತ ಖರ್ಚಿನಲ್ಲಿ ಪ್ರಕಟಿಸಿದರು .
ಕೇವಲ ಪದವಿ ಗಳಿಕೆಗಾಗಿ ಸಂಶೋಧನೆ ಮಾಡದೆ ,ತಮ್ಮ ಸಂಶೋಧನೆಯ ಫಲಿತಗಳನ್ನು ಯುವ ಜನಾಂಗಕ್ಕೆ ತಲುಪಿಸುವ ಸಲುವಾಗಿ ಇಪ್ಪತ್ತು  ಗ್ರಂಥಗಳನ್ನು ರಚಿಸಿ ಪ್ರಕಟಿಸಿದ್ದಾರೆ.ಪ್ರಸ್ತುತ ಐದು ಕೃತಿಗಳು ಅಚ್ಚಿನಲ್ಲಿವೆ .ಇವರು ಸಂಶೋಧನೆಯಲ್ಲದೆ ಕೆಲವು ಸಾಹಿತ್ಯ ಕೃತಿಗಳನ್ನೂ ರಚಿಸಿದ್ದಾರೆ .
ಇವರ  ಪ್ರಕಟಿತ ಕೃತಿಗಳು 
1.ಅರಿವಿನಂಗಳದ ಸುತ್ತ[ಶೈಕ್ಷಣಿಕ ಬರಹಗಳು],2.ಮನೆಯಂಗಳದಿ ಹೂ[ಕಥಾಸಂಕಲನ],
3.ದೈವಿಕ ಕಂಬಳ ಕೋಣ[ತುಳು ಜಾನಪದ ಸಂಶೋಧನೆ]
,4.ಸುಬ್ಬಿ ಇಂಗ್ಲಿಷ್ ಕಲ್ತದು[ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ]
,5ತುಂಡು ಭೂತಗಳು-ಒಂದು ಅಧ್ಯಯನ[ಸಂಶೋಧನೆ],
6 ಕನ್ನಡ-ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು[ತೌಲನಿಕ ಅಧ್ಯಯನ]
,7ತುಳು ಪಾಡ್ದನಗಳಲ್ಲಿ ಸ್ತ್ರೀ[ಸಂಶೋಧನಾತ್ಮಕ ಅಧ್ಯಯನ]
,8 ಪಾಡ್ದನ ಸಂಪುಟ[ಸಂಪಾದನೆ]
,9.ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು[ಸಂಸ್ಕೃತಿ ಸಂಶೋಧನೆ],
10.ತುಳುನಾಡಿನ ಅಪೂರ್ವ ಭೂತಗಳು[ಸಂಶೋಧನೆ],11.ಬೆಳಕಿನೆಡೆಗೆ[ಸಂಶೋಧನಾ ಲೇಖನಗಳು],
12 ತುಳು ಜನಪದ ಕವಿತೆಗಳು[ಸಂಪಾದನೆ],13.ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು[ಸಂಪಾದನೆ],
14.ಕಂಬಳ ಕೋರಿ ನೇಮ[ತುಳು ಜಾನಪದ ಸಂಶೋಧನೆ].
15 ತುಳು ಜಾನಪದ ಕಾವ್ಯಗಳಲ್ಲಿ ಕಾವ್ಯಾಂಶಗಳು
 16 ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ 
,17ಬಂಗ್ಲೆ ಗುಡ್ಡೆ ಸಣ್ಣಕ್ಕನ ಮೌಖಿಕ ಸಾಹಿತ್ಯ
 18 ಭೂತಗಳ ಅದ್ಭುತ ಜಗತ್ತು 
19 ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ (ಪಿಎಚ್.ಡಿ ಸಂಶೋಧನಾ ಮಹಾ ಪ್ರಬಂಧ ) 
20 ಬಸ್ತರ್ ಜಾನಪದ ಸಾಹಿತ್ಯ  ( ಅಚ್ಚಿನಲ್ಲಿದೆ)
21 ಭೂತಗಳ ಅದ್ಭುತ ಜಗತ್ತು ಭಾಗ 2 ( ಅಚ್ಚಿನಲ್ಲಿದೆ)
22 ಶಿಕ್ಷಣ ಲೋಕ ( ಅಚ್ಚಿನಲ್ಲಿದೆ)
23 ಕಾರಣಿಕದ ದೈವೊಲು( ಅಚ್ಚಿನಲ್ಲಿದೆ)
ಹೀಗೆ ಇಪ್ಪತ್ತು ಕೃತಿಗಳನ್ನು ರಚಿಸಿದ್ದು ಇನ್ನೂ ಅನೇಕ ಕೃತಿಗಳನ್ನು ಪ್ರಕಟನೆಗೆ ಸಿದ್ಧಗೊಳಿಸುತ್ತಿದ್ದಾರೆ.ಇದಲ್ಲದೆ ಆರು ನೂರಕ್ಕೂ ಹೆಚ್ಚು ಕಥೆ,ವೈಚಾರಿಕ ಲೇಖನಗಳನ್ನು ಬರೆದಿದ್ದಾರೆ. ಅಷ್ಟು ಮಾತ್ರವಲ್ಲದೆ; ಜ್ಞಾನ ಪಯಸ್ವಿನಿ ಪತ್ರಿಕೆಗೆ “ತುಳು ಜಾನಪದ ಲೋಕ” ,ವಿಜಯ ಕಿರಣ ಪತ್ರಿಕೆಗೆ “ಸಾಮಾಜಿಕ ಕಳಕಳಿ” ಹಾಗೂ ವಿಜಯ ಕರ್ನಾಟಕ ಪತ್ರಿಕೆಯ “ತುಳು ಚಾವಡಿ” ವಿಭಾಗಕ್ಕೆ  ಅಂಕಣ ಬರಹಗಳನ್ನು ಬರೆದ ಹೆಗ್ಗಳಿಕೆ ಇವರಿಗಿದೆ!ಪ್ರಸ್ತುತ ಕನ್ನಡ ಪ್ರಭಪತ್ರಿಕೆಯಲ್ಲಿ ಇವರ  ಶೈಕ್ಷಣಿಕ ಲೇಖನಗಳು ನಿರಂತರವಾಗಿ ಪ್ರಕಟವಾಗುತ್ತಿದ್ದು ,ಕುಡ್ಲ ತುಳು ಪತ್ರಿಕೆಯಲ್ಲಿ “ಕಾರ್ಣಿಕದ ದೈವೊಲು” ಎಂಬ ಅಂಕಣ ಬರೆದಿದ್ದಾರೆ.ಬರವಣಿಗೆಯ ಮೂಲಕ  ತಮ್ಮ ಸಂಶೋಧನೆಯ ಫಲವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.ಅಲ್ಲದೆ ತರಬೇತಿ ಶಿಬಿರ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಿಕೆ,ಅನೇಕ ರಾಷ್ಟ್ರ, ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮಾಡಿದ  ಅಸಾಧಾರಣ ಸಂಶೋಧಕಿಯೂ ಶಿಕ್ಷಣ ತಜ್ಞೆಯಾಗಿಯೂ.ಲೇಖಕಿಯಾಗಿಯೂ ಸಮಾಜದಲ್ಲಿ ಅಪಾರ ಗೌರವವನ್ನು ಅಭಿಮಾನಿ ಬಳಗವನ್ನೂ  ಪಡೆದಿದ್ದಾರೆ.

ಭೂತಾರಾಧನೆ ಮಾಹಿತಿ ಕಣಜ
ಭೂತಾರಾಧನೆಯ ಲಕ್ಷ್ಮೀ ಎಂದೇ ಗುರುತಿಸಲ್ಪಡುತ್ತಿರುವ ಡಾ.ಲಕ್ಷ್ಮೀ ಜಿ ಪ್ರಸಾದರು ಕ್ಷೇತ್ರ ಕಾರ್ಯದ ಮೂಲಕ  ತುಳುನಾಡಿನ ನಾನ್ನೂರ ಐವತ್ತಕ್ಕೂ ಹೆಚ್ಚಿನ ದೈವಗಳ ಕುರಿತು ಮಾಹಿತಿ ಸಂಗ್ರಹಿಸಿ ವಿಶ್ಲೇಷಣೆ ಮಾಡಿದ್ದಾರೆ.ತುಳುನಾಡಿನ ಎಲ್ಲ ಸಂಶೋಧಕರ ಕೃತಿಗಳಲ್ಲಿನ ಮಾಹಿತಿಯನ್ನು ಒಟ್ಟು ಹಾಕಿದಾಗ ಸುಮಾರು ನೂರು ನೂರೈವತ್ತು ಭೂತಗಳ ಮಾಹಿತಿ ಸಿಗುತ್ತದೆ. ಆದರೆ ಲಕ್ಷ್ಮೀ  ಯಾವುದೇ ಸಂಘ ಸಂಸ್ಥೆಗಳ, ವಿಶ್ವವಿದ್ಯಾಲಯಗಳ ಬೆಂಬಲವಿಲ್ಲದೆ  ಏಕಾಂಗಿಯಾಗಿ ನಿರಂತರ ಅಧ್ಯಯನ ಮಾಡಿ ನಾನ್ನೂರೈವತ್ತಕ್ಕೂ ಹೆಚ್ಚಿನ ದೈವಗಳ ಕುರಿತು ಮಾಹಿತಿ ಸಂಗ್ರಹ ಮಾಡಿದ್ದಾರೆ.
ತುಳುನಾಡಿನಲ್ಲಿ ಎಷ್ಟು ಭೂತಗಳಿಗೆ ಆರಾಧನೆ ಇದೆ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ಇದಕ್ಕೆ ಇದಮಿತ್ಥಂ ಎಂಬ ಉತ್ತರವಿಲ್ಲ. ಡಾ.ಗಣನಾಥ ಶೆಟ್ಟಿ ಎಕ್ಕಾರು ,ಡಾ.ಚಿನ್ನಪ್ಪ ಗೌಡರು ಸೇರಿಮದಂತೆ ಅನೇಕ ತುಳುನಾಡಿನ ವಿದ್ವಾಂಸರು ತುಳುನಾಡಿನಲ್ಲಿ ನಾನ್ನೂರರಷ್ಟು ಭೂತಗಳಿಗೆ ಆರಾಧನೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದರು.ತುಳು ಸಂಸ್ಕೃತಿಯ ಕುರಿತಾದ ಅಧ್ಯಯನಕ್ಕೆ ಭದ್ರ ಬುನಾದಿಯನ್ನು ಹಾಕಿರುವ ಡಾ.ಬಿ.ಎ ವಿವೇಕ ರೈಗಳುಅವರ ಪಿ ಎಚ್ ಡಿ ಮಹಾ ಪ್ರಬಂಧ " ತುಳು ಜಾನಪದ " ದಲ್ಲಿ ಸುಮಾರು ಇನ್ನೂರ ಅರುವತ್ತು ಭೂತಗಳ ಹೆಸರಿನ ಪಟ್ಟಿಯನ್ನು ನೀಡಿದ್ದಾರೆ. ಇದನ್ನು ಪರಿಷ್ಕರಿಸಿ ಡಾ.ಚಿನ್ನಪ್ಪ ಗೌಡರು ತಮ್ಮ ಪಿ ಎಚ್ ಡಿ ಮಹಾ ಪ್ರಬಂಧ " ಭೂತಾರಾಧನೆ- ಒಂದು ಜಾನಪದೀಯ ಅಧ್ಯಯನದಲ್ಲಿ ಮುನ್ನೂರು ಭೂತಗಳ ಹೆಸರಿನ ಪಟ್ಟಿಯನ್ನು ಮಾಡಿದ್ದಾರೆ.ಡಾ.ಲಕ್ಷ್ಮೀ ಯವರು ತುಳು ನಾಡಿನಾದ್ಯಂತ ಕ್ಷೇತ್ರ ಕಾರ್ಯ ಮಾಡಿ ಸಾವಿರದ ಐನೂರಕ್ಕಿಂತ ಹೆಚ್ಚಿನ ಭೂತಗಳ ಹೆಸರನ್ನು ಸಂಗ್ರಹ ಮಾಡಿ ತುಳುವರಿಗೆ ವಿಶಿಷ್ಠವಾದ ಕೊಡುಗೆಯನ್ನು ನೀಡಿದ್ದಾರೆ.
ಭೂತಾರಾಧನೆ ಕುರಿತು  ತುಂಡು ಭೂತಗಳು ಒಂದು ಅಧ್ಯಯನ, ದೈವಿಕ ಕಂಬಳ ಕೋಣ,ತುಳುನಾಡಿನ ಅಪೂರ್ವ ಭೂತಗಳು,ಭೂತಗಳ ಅದ್ಭುತ ಜಗತ್ತು ಎಂಬ  ಇವರ ಗ್ರಂಥಗಳು ಪ್ರಕಟವಾಗಿವೆ.
ತುಳು ಸಂಸ್ಕೃತಿಯ ಬಗ್ಗೆ ಮಾಹಿತಿ ಇರುವ ತುಳುನಾಡಿನ ಸಂಸ್ಕಾರಗಳು ಮತ್ತು ವೃತ್ತಿಗಳು ಎಂಬ ಪುಸ್ತಕ ಪ್ರಕಟವಾಗಿದೆ .ಕನ್ನಡ ಮತ್ತು ತುಳು ಜನಪದ ಕಾವ್ಯಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ
ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ಎಂಬ ಕೃತಿಯನ್ನು ರಚಿಸಿದ್ದಾರೆ.
ಇವರ ಅನೇಕ ಸಂಶೋಧನಾ ಪ್ರಬಂಧಗಳು ಸಾಧನೆ,ದ್ರಾವಿಡ ಅಧ್ಯಯನ, ಜಾನಪದ ಅಧ್ಯಯನ, ತುಳುವ ,ಕರ್ನಾಟಕ ಲೋಚನ ಮೊದಲಾದ ವಿದ್ಯುತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನೂರಕ್ಕೂ ಹೆಚ್ಚು ಅಂತರರಾಷ್ಟ್ರೀಯ, ರಾಷ್ಟ್ರೀಯ, ಪ್ರಾದೇಶಿಕ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡನೆ ಮಾಡಿದ್ದಾರೆ.

ಭೂತ ಜಗತ್ತಿನ ಅದ್ಭುತ

ಭೂತಾರಾಧನೆ ಕುರಿತು ಅಧ್ಯಯನ ಮಾಡುವುದೆಂದರೆ ಸಾಮಾನ್ಯವಾದ ವಿಚಾರವಲ್ಲ .ನಡು ರಾತ್ರಿ ಹನ್ನೆರಡು ಗಂಟೆ ಮೇಲೆ ನಡೆಯುವ ಭೂತಾರಾಧನೆ ಬಗ್ಗೆ ರೆಕಾರ್ಡ್ ಮಾಡಿ ಹತ್ತಿರದಿಂದ ಮಾಹಿತಿ ಸಂಗ್ರಹಿಸಿ ಅಧ್ಯಯನ ಮಾಡುವುದು ನಿಜಕ್ಕೂ ಅತ್ಯಂತ ಪರಿಶ್ರಮ ಬೇಡುವ ವಿಚಾರ. 
ಇವರ ಸಾಹಿತ್ಯ ಸಂಶೋಧನಾ ಸಾಧನೆಗಳ ಬಗ್ಗೆ  ಬಗ್ಗೆ ನಾಡಿನ ಹಿರಿಯ ಸಂಶೋಧಕರೂ ,ಸಾಹಿತಿಗಳೂ .ಶಿಕ್ಷಣ ತಜ್ಞರೂ ಆಗಿರುವ ಡಾ.ಅಮೃತ ಸೋಮೇಶ್ವರ ಅವರು “ಅಧ್ಯಯನ ಕ್ಷೇತ್ರದಲ್ಲೂ ಕ್ಷೇತ್ರ ಕಾರ್ಯದಲ್ಲೂ ವಿಶೇಷ ಪರಿಶ್ರಮಿಸಲು ಹಿಂಜರಿಯತಕ್ಕ ಸಾಮಾನ್ಯ ಸಂಶೋಧಕರಿಗಿಂತ ಭಿನ್ನವಾಗಿ ಲಕ್ಷ್ಮೀ ಜಿ ಪ್ರಸಾದ ಅವರು ಬಹುಮಟ್ಟಿಗೆ ಸಂಕೀರ್ಣ ಹಾಗೂ ಕ್ಲೆಶಕರವಾದ ಭೂತಾರಾಧನಾ ರಂಗವನ್ನು ತಮ್ಮ ಅಧ್ಯಯನಕ್ಕೆ ಆರಿಸಿಕೊಂಡಿದ್ದಾರೆ.ಸಾಮಾನ್ಯವಾಗಿ ರಾತ್ರಿ ಕಾಲದಲ್ಲಿ ನಡೆಯುವ ,ವಿವಿಧ ವಿಧಿ ನಿಷೇಧಗಳಿಂದ ಕೂಡಿರುವ ಈ ಆರಾಧನಾ ಪದ್ಧತಿಯ ಕುರಿತಾದ ವಿವರಗಳನ್ನು ಸಮೀಪದಿಂದ ಕಲೆಹಾಕುವುದು ಮಹಿಳೆಯರಿಗಂತೂಕಷ್ಟ ಸಾಧ್ಯ ಕಾರ್ಯ .ಆದರೆ ಲಕ್ಷ್ಮಿಯವರು ಅಂಥ ಸಾಹಸದಲ್ಲಿ ಸಫಲತೆಯನ್ನು ಹೊಂದಿದ್ದಾರೆ.ತಮ್ಮ ಅಧ್ಯಾಪನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಲೇ ಅವರು ಸಂಶೋಧನಾ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ದುಡಿಯುತ್ತಾ ಬಂದಿದ್ದಾರೆ “ಎಂದು ಡಾ.ಲಕ್ಷ್ಮೀ ಜಿ ಪ್ರಸಾದರ ಸಾಧನೆ ಬಗ್ಗೆ ಮುಕ್ತವಾಗಿ ಪ್ರಶಂಸಿಸಿದ್ದಾರೆ.ಕೋಟಿ ಚೆನ್ನಯ ,ಪಂಜುರ್ಲಿ,ಕೋಟೆದ ಬಬ್ಬು ,ಕೊರಗ ತನಿಯ, ಬೀರ್ನಾಲ್ವ,ಮುಗೆರ್ಲು.ಆಲಿ ಭೂತ ಗುಳಿಗ ಮೊದಲಾದ ಪ್ರಸಿದ್ಧ ದೈವಗಳ ಬಗ್ಗೆ ಅದೇ ರೀತಿ  ಅಜ್ಜಿ ಭೂತ, ಅರಬ್ಬೀ ಭೂತ,ಅಬ್ಬೆ ಜಲಾಯ,ಕನ್ನಡ ಬೀರ ,ಕುಕ್ಕೆತ್ತಿ -ಬಳ್ಳು ,ಕುಂಡ-ಮಲ್ಲು. ದಾರು -ಕುಂದಯ. ಹಳ್ಳತ್ತಾಯ,ಮಾಲಿಂಗರಾಯ.ದುಗ್ಗಲಾಯ,ದಾಲ್ಸೂರಾಯ,ಅಕ್ಕಚ್ಚು ,ಅಚ್ಚು ಬಂಗೇತಿ,ಬೆಲೆಟೆಂಗರಜ್ಜ,ಮೂವ,ಕೊಳ್ಳಿ ಕುಮಾರ ,ಬೋವ,ಕಪ್ಪಣ್ಣ ಸ್ವಾಮಿ ,ಮದನಕ್ಕೆ ದೈಯಾರು,ಅಕ್ಕ ಬೋಳಾರಿಗೆ,ಕುರೆ ಪೆರ್ಗಡೆ ,ಉರವ, ಎರು ಬಂಟ ,ಅದ್ಯಲಾಯ,ಅಡ್ಯಂತಾಯ,ಬೈಸುನಾಯಕ ,ಜಂಗ ಬಂಟ,ಚೆನ್ನಿಗ ರಾಯ ,ಕಾರಿಂಜೆತ್ತಾಯ.ದೆಸಿಲು ,ಕಿಲಮರಿತ್ತಾಯ,ಬಲ್ಲ ಮಂಜತ್ತಾಯ,ಮಾದ್ರಿತ್ತಾಯ.ಕುಂಜರಾಯ,ಅಜ್ಜ ಬೊಲಯ.ಕುರವ,ಪರವ ಭೂತ ಪರಿವಾರ ನಾಯಕ,ಉಗ್ಗೆದಲ್ತಾಯ,ಜತ್ತಿಂಗ ,ಒರು ಬಾಣಿಯೆತ್ತಿ-ನೆಲ್ಲೂರಾಯ .ಬವನೋ. ಮರ್ಲು ಮಾಣಿ ಕಡಂಬಳಿತ್ತಾಯ,ಮಾಪುಲೆ-ಮಾಪುಲ್ತಿ ಭೂತಗಳು,ಮಾಪುಲ್ತಿ ,ಧೂಮಾವತಿ,ಅಡ್ಕತ್ತಾಯ.ಸೀರಮ್ಬಲತ್ತಾಯ,ಭಟ್ಟಿ ಭೂತ,ಬ್ರಾಣ ಭೂತ .ಕಚ್ಚೆ ಭಟ್ಟ ಹನುಮಂತ ದೈವ ,ಕನ್ನಡ ಭೂತ .ಜಾನು ನಾಯ್ಕ ,ಬಂಡಿರಾಮ ,ಬಾಕುಡರ ಸರ್ಪಕೋಲ,ಕೃಷ್ಣ ಸರ್ಪ ಕೋಲ,ನಾಗ ಕೋಲ,ಮುಂತಾದ ಹೊರ ಜಗತ್ತು ಈ ತನಕ ಹೆಸರು ಕೂಡ ಕೇಳದ ವಿದ್ವಾಂಸರ ಪಟ್ಟಿಯಲ್ಲಿ ದಾಖಲಾಗದ ,ಈ ತನಕ ಅಧ್ಯಯನವಾಗದ ನಾನ್ನೂರೈವತ್ತಕ್ಕೂ  ಹೆಚ್ಚಿನ ತುಳುನಾಡಿನ ದೈವಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ.  

ಶಿಕ್ಷಕಿಯಾಗಿ ವೃತ್ತಿಯಲ್ಲಿ ಕೂಡ ಯಶಸ್ವಿ 

ಸಾಹಿತ್ಯ , ಸಾಂಸ್ಕೃತಿಕ,  ಸಂಶೋಧನಾ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ವ್ಯಕ್ತಿಗಳು ತಮ್ಮ ವೃತ್ತಿಯನ್ನು ನಿರ್ಲಕ್ಷ್ಯ ಮಾಡುತ್ತಾರೆ ಎಂಬ ಮಾತಿದೆ. ಆದರೆ ಲಕ್ಷ್ಮೀ ಯವರು ಇದಕ್ಕೆ ಅಪವಾದ.ನಿರಂತರವಾಗಿ ಉತ್ತಮ ಫಲಿತಾಂಶ ನೀಡುತ್ತಾ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಗೆಗಳಿಗೆ ಮಾರ್ಗ ದರ್ಶನ ನೀಡುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳಿಗೆ ನಾಟಕ ರಚನೆ,ಅಭಿನಯ,ಸಾಹಿತ್ಯ ರಚನೆ,ಭಾಷಣ,ಏಕಪಾತ್ರಾಭಿನಯ,ಸಂವಹನ ಮೊದಲಾದ ವಿಚಾರಗಳಿಗೆ ತರಬೇತಿ ನೀಡಿ ಬಹುಮಾನ ಪಡೆಯುವಂತೆ ತಯಾರು ಮಾಡುತ್ತಾರೆ‌.ಇವರ ವಿದ್ಯಾರ್ಥಿಗಳು ಜಿಲ್ಲಾ ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದಿದ್ದಾರೆ. ಡಿಡಿ ಒಂದು ಚಾನೆಲ್ ನಲ್ಲಿ  ಖೇಲ್ ಖೇಲ್  ಮೇ ಬದಲೋ ದುನಿಯಾ ಎಂಬ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಸಿದ್ಧ ಪಡಿಸಿ ರಾಷ್ಟ್ರೀಯ ಚಾನೆಲ್ ನಲ್ಲಿ ಭಾಗವಹಿಸಿ ಬಹುಮಾನ ಪಡೆಯುವಂತೆ ಮಾಡಿದ್ದಾರೆ. ಇವರನ್ನು  ಉತ್ತಮ ಶಿಕ್ಷಕಿಯಾಗಿ ಗುರುತಿಸಿ ಮಂಗಳೂರಿನ ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಯು ತನ್ನ ಇಪ್ಪತ್ತೈದನೇ ವರ್ಷದ ಸ್ಥಾಪಕರ ದಿನಾಚರಣೆಯಂದು OUTSTANDING TEAHER AWARD- 2013 ಅನ್ನು ನೀಡಿ ಗೌರವಿಸಿದೆ.ಕನ್ನಡ ಕಾವಲು ಪಡೆಯು ರಾಜ್ಯ ಆದರ್ಶ ಶಿಕ್ಷಕಿ ಪ್ರಶಸ್ತಿ- 2015 ಅನ್ನು ನೀಡಿ ಗೌರವಿಸಿದೆ.
ಇದಲ್ಲದೆ ಇವರ ಶಿಕ್ಷಣ ಸೇವೆಯನ್ನು ಗುರುತಿಸಿ ಬಸವನಗುಡಿ ಪೌಂಡೇಶನ್ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಮಹಿಳಾ ರತ್ನ ಪ್ರಶಸ್ತಿ ನೀಡಿದೆ.ಜನತಾ ಸೈನಿಕ ದಳ ಸಾಂಸ್ಕೃತಿಕ ಪ್ರತಿಷ್ಠಾನವು ಕರ್ನಾಟಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.ಪದ್ಮಶ್ರೀ ಕಲಾ ಸಂಘವು ಕಲಾ ಜ್ಯೋತಿ ಪುರಸ್ಕಾರ ನೀಡಿದೆ.ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕೊಡಮಾಡುವ  ಪರಮೇಶ್ವರ ಪುಲಕೇಶಿ ಪುರಸ್ಕಾರವು 2015ರಲ್ಲಿ ದೊರೆತಿದೆ.
ಎಣ್ಣೆಹೊಳೆಯಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಜಾನಪದ ರತ್ನ ಪುರಸ್ಕಾರ ನೀಡಿ ಗೌರವಿಸಿದ್ದಾರೆ.ತುಳುವರೆಂಕುಲು ಬೆಂಗಳೂರು ಇವರು  ಬಲಿಯೇಂದ್ರ ಪುರಸ್ಕಾರ- 2016 ಅನ್ನು ನೀಡಿ ಇವರ ತುಳು ಸಂಶೋಧನೆಗೆ ಗೌರವ ನೀಡಿದ್ದಾರೆ.ಕನ್ನಡ ಜಾನಪದ ಪರಿಷತ್  ಜಾನಪದ ವಿದ್ವಾಂಸರಿಗೆ ಕೊಡಮಾಡುವ ಜಾನಪದ ಪ್ರಪಂಚ- 2017 ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಬೆಂಗಳೂರಿನ ದಕ್ಷಿಣ ಕನ್ನಡಿಗರ ಸಂಘವು ತುಳು ಭಾಷೆ ಮತ್ತು ಸಂಸ್ಕೃತಿ ಕುರಿತಾದ ಇವರ ಸಂಶೋಧನೆಯನ್ನು ಗುರುತಿಸಿ  ಕರಾವಳಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ .ಕರ್ನಾಟಕ ಯುವ ರಕ್ಷಣಾ ವೇದಿಕೆಯು 2018 ರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ಲಕ್ಷ್ಮೀ ಜಿ ಪ್ರಸಾದರ ಶೈಕ್ಷಣಿಕ ಸೇವೆ ಹಾಗೂ ತುಳು ಭಾಷೆ ಸಂಸ್ಕೃತಿಗೆ ನೀಡಿದ ಕೊಡುಗೆಗಾಗಿ ಕಯುವೇ ಸಾಧನಾ ಪ್ರಶಸ್ತಿ- 2018 ನೀಡಿ ಗೌರವಿಸಿದೆ.


ವಿವಾಹಾನಂತರವೂ ಓದು ಮುಂದುವರಿಸಿದ ಧೀರೆ.

ಲಕ್ಷ್ಮೀ ಯವರ ಸಾಧನೆ ನೋಡಿದರೆ ಯಾರಿಗಾದರೂ ಅಚ್ಚರಿಯಾಗುತ್ತದೆ.ಇವರ ಸಾಧನೆಯ ಹಿಂದೆ ಪತಿ ಗೋವಿಂದ ಪ್ರಸಾದ, ಮಗ ಅರವಿಂದ ತಂದೆ ತಾಯಿ,ಸಹೋದರ ಸಹೋದರಿಯರ ನಿರಂತರ ಬೆಂಬಲವಿದೆ.
ಎರಡನೆಯ ವಿಜ್ಞಾನ ಪದವಿ ಓದುತ್ತಾ ಇರುವಾಗಲೇ ಲಕ್ಷ್ಮೀ ಯವರನ್ನು ಮೆಚ್ಚಿ ಗೋವಿಂದ ಪ್ರಸಾದರು ಮದುವೆಯಾದರು.ವಿವಾಹಕ್ಕೆ ಮೊದಲೇ ಲಕ್ಷ್ಮೀ ಯವರ ಹೆತ್ತವರು " ತಮ್ಮ ಮಗಳು ಓದುವುದರಲ್ಲಿ ಮುಂದಿದ್ದಾಳೆ,ಅವಳನ್ನು ಮುಂದೆ ಓದಿಸಬೇಕು"  ಎಂಬ ನಿರ್ಬಂಧ ಹೇರಿದ್ದರು.ಇದಕ್ಕೆ ಒಪ್ಪಿದ ಗೋವಿಂದ ಪ್ರಸಾದರ ಹಿರಿಯರು ನಂತರ " ಹೆಣ್ಣು ಮಕ್ಕಳು ಪರಿಸ್ಥಿತಿಗೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕು" ಎಂದು ವಿತ್ತಂಡವಾದ ಮಾಡುತ್ತಾ ಮುಂದಕ್ಕೆ ಓದಿಸಲು ನಿರಾಕರಿಸಿದರು.
ಇಲ್ಲಿಂದ ತನ್ನ ಓದಿಗಾಗಿ ಮನೆ ಮಂದಿಯನ್ನು ಎದುರು ಹಾಕಿಕೊಳ್ಳಬೇಕಾಯಿತು.ಮನೆಯವರ ತಿರಸ್ಕಾರದಿಂದ ನೊಂದು  ಪತಿ ಗೋವಿಂದ ಪ್ರಸಾದರೊಂದಿಗೆ ಕೆಟ್ಟು ಪಟ್ಟಣ ಸೇರು ಎಂಬಂತೆ ಮನೆ ಬಿಟ್ಟು ಹೊರನಡೆದರು.

ಅಮವಾಸ್ಯೆಯ ದಿನ ಕೂಡ ಶುಭಗಳಿಗೆಯೇ ಅಯಿತು!
ಅಂದು ಬೆಳಗ್ಗೆ ಗೋವಿಂದ ಪ್ರಸಾದರೊಂದಿಗೆ ಮನೆ ಬಿಟ್ಟು ಹೊರಟಾಗ ಅಮವಾಸ್ಯೆಯಂತೆ.ಹಿಂದಿನ ದಿನ ಬಿಎಸ್ ಸಿ ಯ ಅಂಕ ಪಟ್ಟಿ ತರುವುದಕ್ಕಾಗಿ ಉಜಿರೆಗೆ ಹೋಗಿದ್ದರು.ಅರ್ಧ ದಾರಿ ಬಿಸಿರೋಡು ತನಕ ಗೋವಿಂದ ಪ್ರಸಾದರು ಬಂದು ಬಸ್ಸು ಹತ್ತಿಸಿ ಮಂಗಳೂರು ಕಡೆಗೆ ಹೋಗಿದ್ದರು.
 ಉಜಿರೆಯ ಎಸ್ ಡಿ ಎಂ ಕಾಲೇಜಿಗೆ ಹೋಗಿ ಅಂಕ ಪಟ್ಟಿ ಪಡೆದು ಹಿಂದಿರುಗುವಷ್ಟರಲ್ಲಿ ಕತ್ತಲಾಗಿತ್ತು.ಅಕಾಲಿಕವಾಗಿ ಮಳೆ ಬಂದು ಜೋರಾಗಿ ಸುರಿಯುತ್ತಾ ಇತ್ತು.ಸುರಿವ ಮಳೆಯಲ್ಲಿ ಮನೆಯ ಒಳಗೆ ಬರಲು ಬಿಡದೆ "ಯಾರನ್ನು ಕೇಳಿ ಹೋದೆ ? ಎಂದು ದಬಾಯಿಸಿದ ಲಕ್ಷ್ಮೀ ಯವರ ಅತ್ತೆ ಮಾವ ಅಂಗಳದಲ್ಲಿಯೇ ನಿಲ್ಲಿಸಿದ್ದರು!
ಸುಮಾರು ಎರಡು ಗಂಟೆಯ ಕಾಲ ಮಳೆಯಲ್ಲಿ ಒದ್ದೆಯಾಗಿ ಚಳಿಯಲ್ಲಿ ನಡುಗುತ್ತಾ ನಿಂತಾಗ ಮಂಗಳೂರಿಗೆ ಹೋದ ಪತಿ ಗೋವಿಂದ ಪ್ರಸಾದರಯ ಹಿಂತಿರುಗಿದರು.ಅವರನ್ನು ಕೂಡ ಒಳಬರದಂತೆ ತಡೆದಾಗ ತಂದೆ ತಾಯಿ ಮಕ್ಕಳ ನಡುವಿನ ಸಹಜ ಸಲುಗೆಯಿಂದ ಒಳಗೆ ತಳ್ಳಿ ಲಕ್ಷ್ಮೀ ಯವರ ಕೈಹಿಡಿದು ಒಳಗೆ ಕರೆತಂದು ಮೈ ಒರಸಿಕೊಳ್ಳಲು ಬಟ್ಟೆ ನೀಡಿ,ಹಾಕಿಕೊಳ್ಳಲು  ಒಣಗಿದ ಬಟ್ಟೆಗಳನ್ನು ನೀಡಿದರು.ಎರಡು ಗಂಟೆಗಲ ಕಾಲ ಮಳೆಯಲ್ಲಿ ನೆನೆದ ಪ್ರಭಾವವೋ ಏನೋ ಲಕ್ಷ್ಮೀ ಗೆ ತೀವ್ರ ಜ್ವರ! ಮನೆಯೊಳಗೆ ರಾತ್ರಿಯಿಂದ ಬೆಳಗಿನ ತನಕ ಅಪ್ಪ ಮಕ್ಕಳ ನಡುವೆ ಜಗಳ.
ಬೆಳಗಾಗುತ್ತಲೇ " ನೋಡು ನಾನು ದುಡಿದು ಎರಡು ಹೊತ್ತು ಊಟ ಹಾಕಿಸಬಲ್ಲೆ,ನನ್ನೊಂದಿಗೆ ಬರುವುದಾದರೆ ಬಾ,ಮುಂದೆ ಓದು.ಅಥವಾ ಇವರ ಶ್ರೀಮಂತಿಕೆಯನ್ನು ಅನುಭವಿಸುತ್ತಾ ಗುಲಾಮಳಂತೆ ಇರು,ಆಯ್ಕೆ ನಿನ್ನದು ಎಂದಾಗ ಪತಿ ಗೋವಿಂದ ಪ್ರಸಾದರೊಂದಿಗೆ ಖಾಲಿ ಕೈಯಲ್ಲಿ ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ಕಟೀಲಿಗೆ ಬಂದು ಸಂಸ್ಕೃತ ಎಂ.ಎ ಪದವಿಗೆ ಸೇರಿದರು. ಗೋವಿಂದ ಪ್ರಸಾದರು ಮಂಗಳೂರಿನ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸಕ್ಕೆ ಸೇರಿದರು.ಇವರು ಮನೆ ಬಿಟ್ಟು ಹೊರಗೆ ನಡೆದ ದಿನ ಅಮವಾಸ್ಯೆಯ ದಿನವಂತೆ.ಮನೆ ಬಿಟ್ಟು ಹೊರಗೆ ನಡೆದಾಗ ದೀರ್ಘ ಕಾಲ ಮನೆ ಮಂದಿ ಇವರ ಸಂಪರ್ಕವನ್ನು ಬಿಟ್ಟಿದ್ದರು.ನಂತರ ರಾಜಿಯಾದ ಸಂದರ್ಭದಲ್ಲಿ ಅತ್ತೆಯವರು ಲಕ್ಷ್ಮೀ ಗೆ ಈ ವಿಚಾರವನ್ನು ತಿಳಿಸಿದ್ದರು.ಒಳ್ಳೆಯ ಕಾರ್ಯಕ್ಕೆ ಹೊರಟಾಗ ಕೆಟ್ಟ ಗಳಿಗೆ ಕೂಡ ಶುಭವನ್ನೇ ಮಾಡುತ್ತದೆ ಎಂಬುದಕ್ಕೆ ಲಕ್ಷ್ಮೀ ಸಾಕ್ಷಿಯಾದರು.

ಮೋಟು ಗೋಡೆಯ ಒಂದು ಕೊಠಡಿಯ ವಾಸವೂ ಹಿಮ್ಮೆಟ್ಟಿಸಲಿಲ್ಲ 

ಲಕ್ಷ್ಮೀ ಯವರ ಹೆತ್ತವರು ಕೋಟ್ಯಧಿಪತಿಗಳು ಅಲ್ಲದಿದ್ದರೂ ಹೊಟ್ಟೆಗೆ ಬಟ್ಟೆಗೆ ಕೊರತೆ ಇರಲಿಲ್ಲ.ಬಡತನದ ಬೇಗೆ ಮಕ್ಕಳಿಗೆ ತಾಗದಂತೆ ಹೆತ್ತವರು ಜಾಗ್ರತೆ ವಹಿಸಿದ್ದರು. ಕಟೀಲು ಸಮೀಪದ ಎಕ್ಕಾರಿನಲ್ಲಿ ಒಂದು ಕೋಣೆಯ  ಗೆದ್ದಲು ಹಿಡಿದ ಮೋಟು ಗೋಡೆಯ ಮನೆಯಲ್ಲಿ ಬದುಕುವುದು ಲಕ್ಷ್ಮೀ ಮತ್ತು ಗೋವಿಂದ ಪ್ರಸಾದ ದಂಪತಿಗಳಿಗೆ ಕಷ್ಟವೆನಿಸಲಿಲ್ಲ .ದಂಪತಿಗಳ ನಡುವಿನ ಮಧುರ ಸ್ನೇಹ ಮತ್ತು ಸಾಧನೆಯ ತುಡಿತದ ಎದುರು ಕಷ್ಟಗಳು ದೊಡ್ಡದಾಗಿ ಕಾಣಿಸಲಿಲ್ಲ ‌.ಬದುಕನ್ನು ಸವಾಲಾಗಿ ಎದುರಿಸಿದರು.

ಗ್ರಹಗತಿಗೇ ಸವಾಲು ಹಾಕಿದರು!
1996 ರಲ್ಲಿಯೇ ಸಂಸ್ಕೃತ ಎಂ.ಎ ಪದವಿಯನ್ನು ಮೊದಲ ರ‌್ಯಾಂಕಿನೊಂದಿಗೆ ಪಡೆದರೂ ಇವರಿಗೆ ಸುಲಭದಲ್ಲಿ ಸರ್ಕಾರಿ ಉದ್ಯೋಗ ದೊರೆಯಲಿಲ್ಲ.  ಓದು ಮುಗಿದ ತಕ್ಷಣವೇ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಸಿಕ್ಕಿತಾದರೂ ಅದು ಅರೆ ಕಾಲಿಕ ಕೆಲಸವಾಗಿತ್ತು. ಎಲ್ಲಿ ಹುಡುಕಿದರೂ ಸಂಸ್ಕೃತಕ್ಕೆ ಪೂರ್ಣಕಾಲಿಕ ಖಾಯಂ ಕೆಲಸವಿಲ್ಲ.ಆಗ ಸಂತ ಅಲೋಶಿಯಸ್ ಕಾಲೇಜಿನ ಹಿಂದಿ ಉಪನ್ಯಾಸಕಿ ಹಿಂದೆ ಎಂ ಎ ಓದುವಂತೆ ಸಲಹೆ ನೀಡಿದರು. ಅದಕ್ಕೂ ಮೊದಲೇ ಲಕ್ಷ್ಮೀ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ನಡೆಸುವ ರಾಷ್ಟ್ರ ಭಾಷಾ ಪ್ರವೀಣ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.ಹಾಗಾಗಿ ಹಿಂದೆ ಎಂಎ ಓದುವುದು ಇವರಿಗೆ ಅಷ್ಟೊಂದು ಕಷ್ಟವೆನಿಸಲಿಲ್ಲ.ಕೆಲಸ ಮಾಡುತ್ತಲೇ ಪುಟ್ಟ ಮಗ ಅರವಿಂದನ ಲಾಲನೆ ಪಾಲನೆ ಮಾಡುತ್ತಲೇ ಖಾಸಗಿಯಾಗಿ ಹಿಂದಿ ಎಂಎ ಗೆ ಕಟ್ಟಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರು ‌.ಅಂಕಗಳೇನೋ ಬಂತು.ಆದರೆ ಹಿಂದಿ ಭಾಷೆ ಸಾಹಿತ್ಯ ಅವರನ್ನು ಆಕರ್ಷಿಸಲಿಲ್ಲ.ಅಸಕ್ತಿ ಇಲ್ಲದ ಕ್ಷೇತ್ರದಲ್ಲಿ ದುಡಿಯುತ್ತಾ ಬದುಕು ಕಳೆಯುವುದು ಲಕ್ಷ್ಮೀ ಗೆ ಸಮ್ಮತವಾಗಲಿಲ್ಲ.ಸಹೋದರ ಗಣೇಶ ಭಟ್ ಸಲಹೆಯಂತೆ ಮತ್ತೆ ಪುನಃ ಕನ್ನಡ ಎಂ.ಎ ಗೆ ಕಟ್ಟಿದರು.ಇಲ್ಲಿ ಇವರು ತನ್ನ ಆಸಕ್ತಿಯ ಕ್ಷೇತ್ರ ಜಾನಪದವನ್ನು ಆಯ್ಕೆ ಮಾಡಿಕೊಂಡರು.ಇಲ್ಲಿಂದ ಇವರ ಬದುಕಿನ ದಿಕ್ಕು ಬದಲಾಯಿತು. ತುಳು ಸಂಸ್ಕೃತಿ ಜಾನಪದ ಇವರ ಅಧ್ಯಯನದ ವಿಚಾರವಾಯಿತು. ಮೂರು ಎಂಎ ಪದವಿಗಳನ್ನು ಎಂಫಿಲ್ ಮತ್ತು ಡಾಕ್ಟರೇಟ್ ಪದವಿಗಳನ್ನೂ ಪಡೆದರೂ ಇವರಿಗೆ ಜಾತಿ ದುಡ್ಡು ಪ್ರಭಾವಗಳ ವ್ಯವಸ್ಥೆಯ ನಡುವೆ ಸರ್ಕಾರಿ ಉದ್ಯೋಗ ದೊರೆಯಲಿಲ್ಲ. ‌ವಯಸ್ಸು ನಿಲ್ಲುವುದಿಲ್ಲ.
1995 ರಲ್ಲಿ ಇವರು ಎರಡನೇ ವರ್ಷದ ಎಂಎ ಓದುತ್ತಿರುವಾಗ ಸರ್ಕಾರಿ  ಪದವಿ ಪೂರ್ವ ಕಾಲೆಜುಗಳ ಉಪನ್ಯಾಸಕ ಹುದ್ದೆಗೆ ಅರ್ಜಿ ಅಹ್ವಾನಿಸಿದ್ದರು.ಅದಾಗಿ ಯಾವುದೋ ಸಮಸ್ಯೆಯಿಂದಾಗಿ  ಹತ್ತು ವರ್ಷಗಳ ಕಾಲ ಅರ್ಜಿ ಅಹ್ವಾನಿಸಿರಲಿಲ್ಲ.ಮತ್ತೆ 2006 ರಲ್ಲಿ ಅರ್ಜಿ ಅಹ್ವಾನಿಸಿದಾಗ  ಲಕ್ಷ್ಮೀಯವರಿಗೆ  ಗರಿಷ್ಠ ವಯೋಮಿತಿ 33 ವರ್ಷ ದಾಟಿತ್ತು.ಆರಂಭದಲ್ಲಿ ತುಂಬಾ ಹತಾಶೆಗೆ ಒಳಗಾದ ಇವರು ಮತ್ತೆ ಆತ್ಮವಿಶ್ವಾಸವನ್ನು ಬಿಡದೆ ಆಗ ಶಿಕ್ಷಣ ಸಚಿವರಾದ ಬಸವರಾಜ ಹೊರಟ್ಟಿಯವರನ್ನು ಭೇಟಿಯಾದರು ‌.ಅದಾಗಲೇ ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ಗರಿಷ್ಠ ವಯೋಮಿತಿ 40 ವರ್ಷಕ್ಕೆ ನಿಗಧಿತವಾಗಿತ್ತು.ಪದವಿ ಕಾಲೇಜುಗಳಿಗೆ 35 ವರ್ಷಗಳು ಗರಿಷ್ಠ ವಯೋಮಿತಿಯಾಗಿತ್ತು ಶಿಕ್ಷಣ ಸಚಿವರಿಗೆ ಇದನ್ನು ಮನವರಿಕೆ ಮಾಡಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಕೂಡ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸುವಂತೆ ಮನವಿ ಮಾಡಿದರು‌.ಅದರಂತೆ ಶಿಕ್ಷಣ ಸಚಿವರು  ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಇರುವಂತೆ  ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಕೂಡ ಗರಿಷ್ಠ ವಯೋಮಿತಿ  40 ವರ್ಷಗಳನ್ನು ನಿಗಧಿಪಡಿಸಿದರು.
2006 ರಲ್ಲಿ ಅರ್ಜಿ ಅಹ್ವಾನಿಸಿದಾಗ ಒಂದೇ ಒಂದು ಸಂಸ್ಕೃತ ಉಪನ್ಯಾಸಕ ಹುದ್ದೆ ಇರಲಿಲ್ಲ ‌.ಕನ್ನಡ ಉಪನ್ಯಾಸಕ ಹುದ್ದೆಗೆ ಇವರಿಗೆ ಸಂದರ್ಶನಕ್ಕೇ ಬರಲಿಲ್ಲ.
ಈಗ ಇವರ ಹೆತ್ತವರು ಇವರ ಜಾತಕ ತೋರಿಸಿ ಅನೇಕ ಜ್ಯೋತಿಷಿಗಳಲ್ಲಿ ಇವರಿಗೆ ಸರ್ಕಾರಿ ಹುದ್ದೆ ದೊರೆಯುತ್ತದೆಯೇ ಎಂದು ಕೇಳಿದರು.ಇವರ ಜಾತಕ ನೋಡಿದ ಎಲ್ಲರೂ ಇವರಿಗೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಇಲ್ಲವೆಂದೇ ಹೇಳಿದರು.ಲಕ್ಷ್ಮೀ ಆಗಲೂ ಕೂಡ ತನ್ನ ಪ್ರಯತ್ನ ಬಿಡಲಿಲ್ಲ. ಮನೋ ಬಲದ ಮುಂದೆ ಯಾವ ಗ್ರಹಗತಿಯೂ ನಿಲ್ಲುವುದಿಲ್ಲ ಎಂದು ಮನಸ್ಸು ಗಟ್ಟಿ ಮಾಡಿಕೊಂಡರು!
 ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ ಪ್ರೌಢಶಾಲಾ ಶಿಕ್ಷಕರಿಗೆ ಇರುವಂತೆ ಲಿಖಿತ ಪರೀಕ್ಷೆಯ ಮೂಲಕ ನೇಮಕಾತಿ ನಡೆಸುವಂತೆ ಮನವಿ ಮಾಡಿದರು. ಈ ಬಗ್ಗೆ ಪತ್ರಾಂದೋಲನ ಮಾಡಿದರು‌.ಸಂದರ್ಶನದ ಮೂಲಕ ಆಯ್ಕೆ ಮಾಡುವಾಗ ಜಾತಿ ದುಡ್ಡು ಪ್ರಭಾವವೇ ಕೆಲಸ ಮಾಡುತ್ತದೆ‌.ಭ್ರಷ್ಟಾಚಾರದ ಕಾರಣದಿಂದ ದುಡ್ಡು ಕೊಡಲು ಅಸಮರ್ಥರಾಗುವ ,ಇನ್ಫ್ಲೂಯೆನ್ಸ್ ಇಲ್ಲದೆ ಇರುವ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಾರೆ.ಹಾಗಾಗಿ ಅನೇಕರು ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಬೇಕೆಂದು ಹೋರಾಟ ಮಾಡಿದರು.ಅದರ ಪರಿಣಾಮವಾಗಿ 2008 ರಲ್ಲಿ ‌ಮತ್ತೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಅರ್ಜಿ ಅಹ್ವಾನಿಸಿದಾಗ ಮಾಡಿದಾಗ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡುವುದೆಂದು ತೀರ್ಮಾನವಾಯಿತು. ಅರ್ಜಿ ಆಹ್ವಾನಿಸಿದ ತಕ್ಷಣವೇ ಹಗಲು ರಾತ್ರಿ ಅಧ್ಯಯನ ಮಾಡಿದ ಲಕ್ಷ್ಮೀ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದರು. ಯಾವುದೇ ಪ್ರಭಾವ ದುಡ್ಡು ರಾಜಕೀಯವಿಲ್ಲದೆ ಪ್ರಾಮಾಣಿಕವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು.ಲಕ್ಷ್ಮೀ ವಿಷಗಳಿಗೆಯಲ್ಲಿ ಹುಟ್ಟಿದ್ದರಂತೆ.ಇವರ ಪ್ರಾಮಣಿಕ ಪ್ರಯತ್ನಕ್ಕೆ ವಿಷ ಗಳಿಗೆ ಕೂಡ ಅಮೃತದ ಫಲವನ್ನೇ ನೀಡಿತು.

ವಿಶ್ವವಿದ್ಯಾಲಯದ  ಭ್ರಷ್ಟ ಆಯ್ಕೆಗೇ ಸವಾಲು ಹಾಕಿದ ಧೀರೆ

2013 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಹಾಯಕ ಉಪನ್ಯಾಸಕ ಹುದ್ದೆಗೆ ಅರ್ಜಿ ಅಹ್ವಾನಿಸಿದರು.ಅದಾಗಲೇ ಇಪ್ಪತ್ತು ಸಂಶೋಧನಾ ಕೃತಿಗಳನ್ನು, ನೂರಾರು ಸಂಶೋಧನಾ ‌ಲೇಖನಗಳನ್ನು‌ ಪ್ರಕಟಿಸಿರುವ,ನೂರಕ್ಕೂ ಹೆಚ್ಚು ಅಂತರಾಷ್ಟ್ರೀಯ, ರಾಷ್ಟ್ರೀಯ, ಪ್ರಾದೇಶಿಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮಾಡಿ ವಿದ್ವಜ್ಜನರಿಂದ ಮೆಚ್ಚುಗೆ ಪಡೆದಿದ್ದ ಲಕ್ಷ್ಮೀ ಸಹಾಯಕ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದರು. ಅದಾಗಲೇ ಅವರು ಎರಡನೇ ಡಾಕ್ಟರೇಟ್ ಪದವಿಗೆ ಮಹಾಪ್ರಬಂಧ ಸಲ್ಲಿಸಿದ್ದರು.ಅರ್ಜಿ ಸಲ್ಲಿಸಿದವರಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ಮಾಡಿರುವ ಹತ್ತು ಜನರು ಸಂದರ್ಶನಕ್ಕೆ ಅಯ್ಕೆ ಆದರು.ಆ ಹತ್ತು ಜನರಲ್ಲಿ ಒಬ್ಬರಾದ ಲಕ್ಷ್ಮೀ ಯವರಿಗೆ ಉಳಿದ ಅಭ್ಯರ್ಥಿಗಳಿಗಿಂತ ತುಂಬಾ ಹೆಚ್ಚು ಶೈಕ್ಷಣಿಕ ನಿರ್ವಹಣಾಂಕಗಳು  ಇದ್ದವು.ಹಾಗಾಗಿ ಅವರಲ್ಲಿ ಪ್ರಥಮರಾದ   ಇವರನ್ನು ಮೊದಲಿಗೆ  ಸಂದರ್ಶನಕ್ಕೆ ಒಳಗೆ ಕರೆದರು.ಉತ್ತಮವಾಗಿ ಸಂದರ್ಶನದಲ್ಲಿ ಉತ್ತರಿಸಿದರು ಕೂಡ. ಆದರೆ ಮತ್ತೆ ದುಡ್ಡು ಸ್ವಕೀಯ ಪ್ರಭಾವಿ ರಾಜಕೀಯದಿಂದ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಹುದ್ದೆ ದೊರೆಯಲಿಲ್ಲ. ಆದರೆ ಇವರು ಕೈ ಕಟ್ಟಿ ಕೂರಲಿಲ್ಲ.ಉಪನ್ಯಾಸಕ ಹುದ್ದೆಯ ಆಯ್ಕೆಯಲ್ಲಿ ತಾರತಮ್ಯ ನಡೆದು ತನಗೆ ಅನ್ಯಾಯವಾದ ಬಗ್ಗೆ ನ್ಯಾಯಾಲಯದ ಮೂಲಕ ಹೋರಾಟ ನಡೆಸುತ್ತಿದ್ದಾರೆ.ನ್ಯಾಯ ದೇವತೆಯ ನ್ಯಾಯಯುತವಾದ ತೀರ್ಪಿಗೆ ಕಾಯುತ್ತಿದ್ದಾರೆ.

ಸಂಘ ಸಂಸ್ಥೆಗಳು ಮಾಡಬೆಕಾದ ಕೆಲಸವನ್ನು ಏಕಾಂಗಿಯಾಗಿ ಮಾಡಿದ ದಿಟ್ಟೆ.
ತುಳು ಸಂಸ್ಕೃತಿ ,ಜಾನಪದದ ಬಗ್ಗೆ ಆಸಕ್ತಿ ಹೊಂದಿದ ಇವರಿಗೆ ತುಳು ಅಕಾಡೆಮಿ ಸೇರಿದಂತೆ ಯಾವುದೇ ಸಂಘ ಸಂಸ್ಥೆಗಳ ,ಯುನಿವರ್ಸಿಟಿ ಗಳ ಬೆಂಬಲ ದೊರೆಯಲಿಲ್ಲ. ಯಾವುದೇ ಫೆಲೋಶಿಪ್ ಬರಲಿಲ್ಲ. ಆದರೆ ಇವರು ಅದಕ್ಕಾಗಿ ಕೈಚಾಚಿ ಕೂರದೆ ಸ್ವಂತ ದುಡ್ಡಿನಲ್ಲಿ ನಿರಂತರ ಕ್ಷೇತ್ರ ಕಾರ್ಯ ಮಾಡುತ್ತಾ ತುಳುನಾಡಿನ ಭೂತಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅಧ್ಯಯನ ಮಾಡುತ್ತಾ ಸಾಗಿದರು.ನಾನ್ನೂರೈವತ್ತಕ್ಕೂ ಹೆಚ್ಚಿನ ತುಳುನಾಡಿನ ದೈವಗಳ ಕುರಿತು ಮಾಹಿತಿ ಸಂಗ್ರಹಿಸಿ ಬ್ಲಾಗ್ ಮೂಲಕ ಆಸಕ್ತರಿಗೆ ತಲುಪಿಸಿದರು.ಸಾವಿರ ಐದುನೂರಕ್ಕಿಂತ ಹೆಚ್ಚಿನ ದೈವಗಳ ಹೆಸರನ್ನು ಸಂಗ್ರಹಿಸಿ ಭೂತಾರಾಧನೆಯ ಲಕ್ಷ್ಮೀ ಎಂದೇ ಗುರುತಿಸಿಕೊಂಡರು.
2010 ರಲ್ಲಿ ತುಳು ಅಕಾಡೆಮಿಯ ಲಕ್ಷ್ಮೀ ಅವರು ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಬೆಳ್ಳಾರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸುಳ್ಯ ತಾಲೂಕು ಮಟ್ಟದ ತುಳು ಮಿನದನ ಎಂಬ ಕಾರ್ಯ ಏರ್ಪಡಿಸಿತ್ತು.ಅದರಲ್ಲಿ ಒಂದು ಪ್ರಬಂಧ ಮಂಡನೆಗೆ ಅವಕಾಶವನ್ನು ನೀಡುವಂತೆ ವಿನಂತಿಸಿದಾಗ
ತುಳು ಅಕಾಡೆಮಿ ಅಧ್ಯಕ್ಷರು ಸ್ಥಳೀಯರಿಗೆ ಅವಕಾಶವಿಲ್ಲ ಎಂಬ ವಿತ್ತಂಡವಾದ ಮಾಡಿದರು.ಆಗ ಸ್ಥಳೀಯರಾದ ಡಾ.ನರೇಂದ್ರ ರೈ ದೇರ್ಲರಿಗೆ ಅವಕಾಶ ನೀಡಿದ್ದೀರಲ್ಲ ಎಂದಾಗ " ಅವರೆಲ್ಲಿ ನೀವೆಲ್ಲಿ? ಅವರು ಇಪ್ಪತ್ತು ಪುಸ್ತಕ ಪ್ರಕಟಿಸಿದ್ದಾರೆ, ನಿಮಗೆ ಹೆಂಗಸರಿಗೆ ರೇಷ್ಮೆ ಸೀರೆ ಉಟ್ಟು ಮೆರೆಯಲು ಸ್ಟೇಜ್ ಬೇಕು " ಎಂದು ತಿರಸ್ಕಾರದಿಂದ ಉತ್ತರಿಸಿದಾಗ ಕೂಡ " ಸರಿ ನಾನು ಡಾ.ನರೇಂದ್ರ ರೈ ದೇರ್ಲರಷ್ಟು ದೊಡ್ಡವಳಲ್ಲ,ಅವರ ವಿದ್ವತ್ ಬಗ್ಗೆ ನನಗೆ ಯಾವುದೇ ಆಕ್ಷೇಪವಿಲ್ಲ,ಆದರೆ ಈಗಾಗಲೇ ನನ್ನ ಏಳು ಪುಸ್ತಕಗಳು ಪ್ರಕಟವಾಗಿವೆ,ಮೊದಲ ಡಾಕ್ಟರೇಟ್ ಪಡೆದಿದ್ದು ತುಳು ಸಂಸ್ಕೃತಿ ಕುರಿತು ಎರಡನೇ ಡಾಕ್ಟರೇಟ್ ಪದವಿಗಾಗಿ ಅಧ್ಯಯನ ಮಾಡುತ್ತಿದ್ದೇನೆ.ಹಾಗಾಗಿ ಇಲ್ಲಿ ನಡೆಯಲಿರುವ ತಾಲೂಕು‌ಮಟ್ಟದ  ತುಳು    ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲು ನನ್ನ ಅರ್ಹತೆ ಸಾಕು.ಇಷ್ಟ ಇದ್ದರೆ ಅವಕಾಶ ಕೊಡಿ,ಇನ್ನು ಐದು ವರ್ಷಗಳ ಸಮಯಾವಕಾಶ ಕೊಡಿ,ನಾನು ಕೂಡ ಇಪ್ಪತ್ತು ಪುಸ್ತಕಗಳನ್ನು ರಚಿಸಿ ಪ್ರಕಟಿಸುತ್ತೇನೆ,ಆಗ ನೀವು ಅಧ್ಯಕ್ಷರಾಗಿರುತ್ತೀರಾ? ನಾನು ಕೆಲಸ ಮಾಡುವ ಕಾಲೇಜು ಸಭಾಂಗಣದಲ್ಲಿ ಮತ್ತೊಮ್ಮೆ ತುಳು ಸಮ್ಮೇಳನ ಮಾಡುತ್ತೀರಾ ? ಎಂದು ದಿಟ್ಟವಾಗಿ ನುಡಿದು ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದರು.ಐದು ವರ್ಷಗಳ  ಸಮಯ ತೆಗೆದುಕೊಳ್ಳಲಿಲ್ಲ,ಕೇವಲ ಮೂರು ವರ್ಷಗಳ ಒಳಗೆ ಇಪ್ಪತ್ತು ಪುಸ್ತಕಗಳನ್ನು ರಚಿಸಿ ಪ್ರಕಟಿಸಿ ತಾನು ಹೇಳಿದ ಮಾತನ್ನು ಉಳಿಸಿಕೊಂಡರು.ಇಂದು ಬ್ಲಾಗ್ ಮೂಲಕ ಪ್ರಸಿದ್ಧಿ ಪಡೆದಿರುವ ಲಕ್ಷ್ಮೀಯವರನ್ನು ನೂರಾರು ಸಂಘ ಸಂಸ್ಥೆಗಳು, ಅನೇಕ ಯುನಿವರ್ಸಿಟಿ ಗಳು  ಕನ್ನಡ ತುಳು ಸಂಸ್ಕೃತಿ, ಜಾನಪದ  ಭೂತಾರಾಧನೆ ಕುರಿತು ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸುತ್ತಿವೆ.ತಿರಸ್ಕಾರಕ್ಕೆ ನೊಂದು ಮುದುಡಿ ಹೋಗುವ ಬದಲು ಸವಾಲಾಗಿ ಸ್ವೀಕರಿಸಿ ಗೆದ್ದ ಲಕ್ಷ್ಮೀ ಸಾಹಸ ನಿಜಕ್ಕೂ ಶ್ಲಾಘನೀಯ

ಶಾಸನ ಮತ್ತು ಲಿಪಿ ಶಾಸ್ತ್ರದೆಡೆಗೆ ಒಲವು
ಲಕ್ಷ್ಮೀಯವರ ಜ್ಞಾನ ದಾಹ ಅದಮ್ಯವಾದುದು.2013 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು  ಸಂಜೆ ಹೊತ್ತು ನಡೆಸುವ ಕನ್ನಡ ಶಾಸನ ಮತ್ತು ಲಿಪಿ ಶಾಸ್ತ್ರ ಕುರಿತಾದ ಡಿಪ್ಲೊಮಾ ತರಗತಿಗೆ ಹಾಜರಾಗಿ ಶಾಸನ ಮತ್ತು ಲಿಪಿಗಳ ಕುರಿತು ಪರಿಣತಿ ಪಡೆದರು‌.ಶಾಸನ ಮತ್ತು ಲಿಪಿ ಶಾಸ್ತ್ರ ಡಿಪ್ಲೊಮಾದಲ್ಲಿ ಪ್ರಥಮ ರ‌್ಯಾಂಕ್ ಪಡೆದು ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಅವರಿಂದ ಅಭಿನಂದನೆ ಪಡೆದಿದ್ದಾರೆ‌.

ತಿಗಳಾರಿ ಲಿಪಿ ಮತ್ತು ತುಳು ಲಿಪಿ‌ ಎರಡೂ ಒಂದೇ 

ಲಿಪಿ ಶಾಸ್ತ್ರ ಅಧ್ಯಯನವನ್ನು ಮಾಡುತ್ತಾ ತಿಗಳಾರಿ  ಲಿಪಿಯ ಬಗ್ಗೆ ಹೆಚ್ಚಿನ ಗಮನವನ್ನು ನೀಡಿದರು.ತಿಗಳಾರಿ ಲಿಪಿಯನ್ನು ದಕ್ಷಿಣ ಕನ್ನಡ ಉಡುಪಿಯ ಕೆಲವೆಡೆ ತುಳು ಲಿಪಿ ಎಂದು ಕೂಡ ಕರೆಯುತ್ತಾರೆ. ಈ ತಿಗಳಾರಿ ಲಿಪಿಯಲ್ಲಿ  ಹದಿನೈದು ಸಾವಿರದಷ್ಟು ಸಂಸ್ಕೃತ ಭಾಷೆಯ ಕೃತಿಗಳು, ಹದಿನೈದು ಹದಿನಾರು ಕನ್ನಡ ಭಾಷೆಯ ಕೃತಿಗಳು ಹಾಗೂ ಆರು ತುಳು ಭಾಷೆಯ ಕೃತಿಗಳು ರಚಿಸಲ್ಪಟ್ಟಿವೆ‌. ಈ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿರುವ ಲಕ್ಷ್ಮೀಯವರು ತಿಗಳಾರಿ ಲಿಪಿ ಮತ್ತು ತುಳು ಲಿಪಿಗಳ ನಡುವಿನ ಗೊಂದಲವನ್ನು ಪರಿಹರಿಸಿದ್ದಾರೆ.ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ,ಇದು ಮೂಲತಃ ಸಂಸ್ಕೃತ ಭಾಷೆಯನ್ನು ಬರೆಯಲು ತಮಿಳು ಬ್ರಾಹ್ಮಣರು ಬಳಕೆಗೆ ತಂದ ಗ್ರಂಥ ಲಿಪಿಯಿಂದ ಆವಿಷ್ಕಾರ ಗೊಂಡ ಲಿಪಿ .ಇದು ತುಳು ಭಾಷೆಯ ಬರವಣಿಗೆಗಾಗಿ ಬಳಕೆಗೆ ಬಂದ ಲಿಪಿಯಲ್ಲ ,ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಬಳಕೆಗೆ ತಂದ ಲಿಪಿ " ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ  ಇತಿಹಾಸಜ್ಞರು, ಲಿಪಿ ತಜ್ಞರ ಮುಂದೆ ಪ್ರಬಂಧ ಮಂಡಿಸಿ ಅಧಾರ ಸಹಿತವಾಗಿ ಸಿದ್ಧ ಪಡಿಸಿದ್ದಾರೆ. ಆಧಾರ ಸಹಿತವಾಗಿ ಸಾಧಿಸಿದಾಗ  ಅದನ್ನು ಅಲ್ಲಗಳೆಯಲು ಸಾಧ್ಯವಾಗದೆ ,ಕೆಲವರು ಹಿಂದಿನಿಂದ ಇವರ ತೇಜೋವಧೆಗೆ ಯತ್ನ ಮಾಡಿದ್ದರೂ ಇವರು ಅದನ್ನು ನಿರ್ಲಕ್ಷ್ಯ ಮಾಡಿದ್ದಾರೆ .ವಿದ್ವಾಂಸರು ಇವರ ಸಿದ್ಧಾಂತವನ್ನು ಒಪ್ಪಿದ್ದಾರೆ.


ಉಚಿತವಾಗಿ ತುಳು ಕಲಿಸುವ ಉಪನ್ಯಾಸಕಿ

ಬೆಂಗಳೂರಿಗೆ ಮಾತ್ರವಲ್ಲ ಇತರರಿಗೂ ಕೂಡ  ಅಲ್ಲಲ್ಲಿ ಉಚಿತ ತುಳು ಸಂಭಾಷಣಾ ಶಿಬಿರಗಳನ್ನು ಆಯೋಜಿಸಿ
ತುಳು ಭಾಷೆಯನ್ನು ಕಲಿಸುತ್ತಾ ತನ್ನ ಮಣ್ಣಿನ ಋಣವನ್ನು ತೀರಿಸುವ ಸ್ತುತ್ಯರ್ಹ ಕಾರ್ಯ ಮಾಡುತ್ತಿದ್ದಾರೆ.ವಾಟ್ಸಪ್ ಗ್ರೂಪುಗಳ ಮೂಲಕವೂ ತುಳು ಭಾಷೆಯನ್ನು ಕಲಿಸುತ್ತಾರೆ.

ಕಾದಂಬರಿಯ ಪ್ರಧಾನ ಪಾತ್ರವಾಗಿ ಲಕ್ಷ್ಮೀ

ಭೂತಾರಾಧನೆಯ ಕುರಿತು ಅಪಾರ ಮಾಹಿತಿ ಇರುವ ಕಾರಣದಿಂದ ಕನ್ನಡದ ಪ್ರಸಿದ್ಧ ಕಾದಂಬರಿಗಾರ ಡಾ.ಕೆ ಎನ್ ಗಣೇಶಯ್ಯ ಅವರ "ಬಳ್ಳಿ ಕಾಳಬೆಳ್ಳಿ" ಎಂಬ ಕಾದಂಬರಿಯಲ್ಲಿ ,ತುಳು ಸಂಶೋಧಕಿಯಾಗಿ  ಡಾ.ಲಕ್ಷ್ಮೀ ಪೋದ್ದಾರ್ ಎಂಬ ಹೆಸರಿನಲ್ಲಿ ಒಂದು ಮುಖ್ಯ ಪಾತ್ರವಾಗಿ ಬಂದಿದ್ದಾರೆ.ಇದು ಅವರ ನಿರಂತರ ಅಧ್ಯಯನ ಫಲವಾಗಿದೆ

ಪ್ರಸಿದ್ಧ ಬ್ಲಾಗರ್  ಆಗಿ ಲಕ್ಷ್ಮೀ ಜಿ ಪ್ರಸಾದ

ತುಳು ಸಂಸ್ಕೃತಿಯ ಕುರಿತಾದ ಅಧ್ಯಯನದ ಫಲವನ್ನು ದೇಶ ವಿದೇಶಗಳ ಆಸಕ್ತ ಜನರಿಗೆ ತಲುಪಿಸುವ ಸಲುವಾಗಿ ಭೂತಗಳ ಅದ್ಭುತ ಜಗತ್ತು ( http://laxmipras.blogspot.com) ಎಂಬ ಬ್ಲಾಗ್ ಅನ್ನು ತೆರೆದಿದ್ದಾರೆ‌.ಈ ಬ್ಲಾಗ್ ತುಂಬಾ ಪ್ರಸಿದ್ಧಿ ಪಡೆದಿದ್ದು   ದೇಶ ವಿದೇಶಗಳ ಎರಡೂವರೆ ಲಕ್ಷಕ್ಕಿಂತ ಹೆಚ್ಚಿನ ಓದುಗರನ್ನು ಪಡೆದಿದೆ .ಈ ಬ್ಲಾಗ್ ಲಕ್ಷ್ಮೀ ಯವರಿಗೆ  ಕನ್ನಡದ ಖ್ಯಾತ ಬ್ಲಾಗರ್ ಎಂಬ ಖ್ಯಾತಿಯನ್ನು ತಂದುಕೊಟ್ಟಿದೆ‌. ಇದರಲ್ಲಿ   ತುಳು ಭಾಷೆ ಸಂಸ್ಕೃತಿ, ಭೂತಾರಾಧನೆಗೆ ಸಂಬಂಧಿಸಿದ ಆರುನೂರಕ್ಕಿಂತ ಹೆಚ್ಚಿನ ಸಂಶೋಧನಾತ್ಮಕ ಬರಹಗಳಿವೆ.  ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಲೋಕ ಎಂಬ ಬ್ಲಾಗ್ ಅನ್ನು ಬರೆಯುತ್ತಾರೆ‌‌‌.ಜೊತೆಗೆ ಹವ್ಯಕ ಕನ್ನಡದ ಅಪರೂಪದ ನುಡಿಗಟ್ಟುಗಳನ್ನು ಸಂಗ್ರಹಿಸಿ ವಿಶ್ಲೇಷಿಸಿ ಗಿಳಿ ಬಾಗಿಲು ಎಂಬ ಬ್ಲಾಗ್ ನಲ್ಲಿ ಬರೆಯುತ್ತಾರೆ.( ಈ ಕುರಿತು ಪುನೀತ್ 
ಸಿದ್ದಕಟ್ಟೆಯವರು ವಿಜಯ ಕರ್ನಾಟಕ ದಲ್ಲಿ ಬರೆದ ಲೇಖನವನ್ನು ಮುಂದೆ ನೀಡಿದೆ) 

 

ಹಲವು ಪ್ರಥಮಗಳ ಒಡತಿ

ಹುಟ್ಟಿದ ಊರು ಕೋಳ್ಯೂರು ಹಾಗೂ ಮದುವೆಯಾಗಿ ಬಂದ ವಿಟ್ಲ ಪಡ್ನೂರು ಗ್ರಾಮಗಳಲ್ಲಿ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದು. ಮೂರು ಸ್ನಾತಕೋತ್ತರ ಪದವಿಗಳೊಂದಿಗೆ
ತುಳು ಸಂಸ್ಕೃತಿ ಕುರಿತು ಅಧ್ಯಯನ ಮಾಡಿ ಎಂ.ಫಿಲ್ ಮತ್ತು ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದ ಮೊದಲ ಮಹಿಳೆ ಮಾತ್ರವಲ್ಲ ಮೊದಲ ವ್ಯಕ್ತಿ ಕೂಡ ಎಂಬ ದಾಖಲೆಯನ್ನು ಹೊಂದಿದ್ದಾರೆ.ಈ ಸಾಧನೆಯನ್ನು ಮಾಡಿದ ಮೊದಲ ಹವ್ಯಕ ಬ್ರಾಹ್ಮಣ ಮಹಿಳೆ ಕೂಡ ಆಗಿದ್ದಾರೆ.

ಹವ್ಯಜ  ಕನ್ನಡದ ಮೊದಲ ನಾಟಕಗಾರ್ತಿ

ಲಕ್ಷ್ಮೀಯವರಿಗೆ ಚಿಕ್ಕಂದಿನಿಂದಲೇ ಬರೆಯುವ ಹವ್ಯಾಸವಿತ್ತು.ಇವರು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ರಚಿಸಿದ ' ಸುಬ್ಬಿ ಇಂಗ್ಲಿಷ್ ಕಲ್ತದು'
ಎಂಬ ನಾಟಕ ಮಹಿಳೆ ರಚಿಸಿದ ಮೊದಲ ಹವ್ಯಕ ಕನ್ನಡದ ನಾಟಕವಾಗಿದೆ.ಈ ನಾಟಕ ಇವರಿಗೆ ಹವ್ಯಕ ಕನ್ನಡದ ಮೊದಲ ನಾಟಕಗಾರ್ತಿ ಎಂಬ ಚಾರಿತ್ರಿಕ ಮನ್ನಣೆಯನ್ನು ತಂದು ಕೊಟ್ಟಿದೆ.ಈ ನಾಟಕವನ್ನು ಇವರು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಯುವಜನೋತ್ಸವದಲ್ಲಿ ಸ್ವತಃ  ತಂಡ ಕಟ್ಟಿ,ನಿರ್ದೇಶಿಸಿ ಅಭಿನಯಿಸಿ ಮೊದಲ ಬಹುಮಾನವನ್ನು ಗಳಿಸಿದ್ದಾರೆ.ನಾಟಕದ ನಾಯಕ ಸುಬ್ಬನ ಪಾತ್ರ ಮಾಡಿದ ಇವರ ಉತ್ಸಾಹ,ಆತ್ಮವಿಶ್ವಾಸ,ಕ್ರಿಯಾಶೀಲತೆಯನ್ನು ನೋಡಿದ ಯುವಜನೋತ್ಸವಕ್ಕೆ ಅತಿಥಿಗಳಾಗಿ ಬಂದಿದ್ದ  ವಾಣಿವಿಜಯ ಪ್ರೌಢ ಶಾಲೆಯ ಹಿಂದಿ ಉಪನ್ಯಾಸಕರಾದ ಕವಿ,ಸಾಹಿತಿ ವಿಶ್ವೇಶ್ವರ ಭಟ್ಟರು " ಸುಬ್ಬನ ಪಾತ್ರವನ್ನು ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ" ಎಂದು ಮೂವತ್ತು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು.ಅವರು ಹೇಳಿದ ಮಾತು ಸತ್ಯವಾಗಿ ಇಂದು ಹಳ್ಳಿಯ ಹುಡುಗಿ ಲಕ್ಷ್ಮೀ ಪ್ರಸಿದ್ಧ ತುಳು ಸಂಶೋಧಕರಾಗಿ ಡಾ.ಲಕ್ಷ್ಮೀ ಜಿ ಪ್ರಸಾದರಾಗಿ ನಮ್ಮ ಮುಂದೆ ನಿಂತಿದ್ದಾರೆ.

ಸಮಾಜ  ಸೇವಕಿ ಲಕ್ಷ್ಮೀ

ಮೇಲ್ನೋಟಕ್ಕೆ ನಿಷ್ಠುರವಾಗಿ ಕಾಣುವ ನೇರ ಮಾತಿನ ಲಕ್ಷ್ಮೀ ಯವರ ಮನಸ್ಸು ಬಹಳ ಉದಾರವಾದುದು‌.ಅನೇಕ ಬಡ ಮಕ್ಕಳ ಓದಿಗೆ ಸಹಾಯ ಮಾಡಿದ್ದಾರೆ‌.ಭ್ರಷ್ಟಾಚಾರದ ವಿರುದ್ಧ  ಹೋರಾಡಿದ್ದಾರೆ‌. ಮಾನವ ಹಕ್ಕು ಗ್ರಾಹಕ ಹಕ್ಕುಗಳ ಕುರಿತಾಗಿಯೂ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ
ಶ್ರೀಮತಿ ವಿಜಯಾ ಸುಬ್ರಹ್ಮಣ್ಯ
ಗಣೇಶ ಭಟ್ 


ಪ್ರಕಟಿತ ಸಂಶೋಧನಾ ಲೇಖನಗಳು -ವಿದ್ವತ್ ಪತ್ರಿಕೆಗಳಲ್ಲಿ ಸುಮಾರು ನೂರರಷ್ಟು ಪ್ರಕಟ ವಾಗಿವೆ ,ಇತರೆ ಬರಹಗಳು ಸುಮಾರು ಐದುನೂರರಷ್ಟು ಪ್ರಕಟವಾಗಿವೆ

1 .ತುಳು ಪಾಡ್ದನಗಳಲ್ಲಿ ಸ್ತ್ರೀ ಸಾಧನೆ- ಬೆಂಗಳೂರು ವಿಶ್ವ ವಿದ್ಯಾಲಯ ಜುಲೈ-ಡಿಸೆಂಬರ್2009

2 ಕನ್ನಡ ಮತ್ತು ತುಳು ಭಾಷಾ ಸಾದೃಶ್ಯಗಳು- ಕರ್ನ್ನಾಟಕ ಲೋಚನ ಬಿಎಂ ಶ್ರೀ ಪ್ರತಿಷ್ಠಾನ ಜನವರಿ-ಡಸೆಂಬರ್2010

3 ತುಳು ನಾಡಿನ ನಾಗ ಕೋಲ- ಲೋಚನ ಬಿಎಂ ಶ್ರೀ ಪ್ರತಿಷ್ಠಾನ

4 ಕೆರೆಗೆ ಹಾರ ಹುಳಿಯಾರಿನ ಕೆಂಚವ್ವ ಮತ್ತು ಬಾಲೆ ಮಾಡೆದಿ ಪಾಡ್ದನ- ಕರ್ನ್ನಾಟಕ ಲೋಚನ ಬಿಎಂ ಶ್ರೀ ಪ್ರತಿಷ್ಠಾನ

5 ಕುಲೆ ಭೂತಗಳು -ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಜುಲೈ-ಡಿಸೆಂಬರ್2008 2250/1614

6 ಕೆಲವು ತುಂಡು ಭೂತಗಳು -ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಜನವರಿ-ಜೂನ್2010 2250/1614

7 ವಿಶಿಷ್ಟ ಉಪ ದೈವಗಳು -ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಜನವರಿ-ಜೂನ್2009 2250/1614

8 ಬೈಲ ಮಾರಿ ನಲಿಕೆ -ಜಾನಪದ ಕರ್ನಾಟಕ ಹಂಪಿ ಕನ್ನಡ ವಿಶ್ವ

9 ಅಜ್ಜಿ ಭೂತ ಮತ್ತು ಕೂಜಿಲು= ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ
 10 ಉರವ ಮತ್ತು ಎರು ಬಂಟ  ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ
 11 ಬೆಳ್ಳಾರೆಯ ಅಧ್ಯಯನ ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ
12 ಎಣ್ಮೂರು ಗುತ್ತಿನ ಬಾಲೆ ದೈಯಕ್ಕು ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ
 13 ಅಬ್ಬೆ ಜಲಾಯ ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ
14 ತುಳುನಾಡಿನ ನಾಗ ಭೂತಗಳು ಕಣಿಪುರ ಫೆಬ್ರುವರಿ2012

15 ತುಳು ಜನಪದರ ಸಿರಿ ಕೃಷ್ಣ ತುಳುವ ಉಡುಪಿ

16 ತುಳುನಾಡಿನ ನಾಗ ಭೂತಗಳು ಕಣಿಪುರ ಫೆಬ್ರುವರಿ2012

17 ಕಿರಿಯೋಳು ಹಿರಿದಿಮ್ಮವ್ವ ಮತ್ತು ಪರತಿ

18 ವಾಸ್ತವಿಕ ನೆಲೆಯಲ್ಲಿ ತುಂಡು ಭೂತಗಳು ಕನ್ನಡ ನಾಡು ನುಡಿ ಕನ್ನಡ ಸಾಹಿತ್ಯ ಪರಿಷತ್



 ಆರು ನೂರಕ್ಕಿಂತ ಹೆಚ್ಚಿನ ಪ್ರಕಟಿತ ಲೇಖನಗಳು-(ಶೈಕ್ಷಣಿಕ/ವೈಚಾರಿಕ/ಸಂಶೋಧನಾತ್ಮಕ)


1 ವಿಜಯ ಕರ್ನಾಟಕ ಅಬ್ಬೆ ಜಲಾಯ 8-10-2011

2 ತುಳು ನಾಡಿನ ನಾಗ ಭೂತಗಳು ಉದಯ ವಾಣಿ 5-8-2011

3 ಕನ್ನಡ ಮಾಧ್ಯಮದಲ್ಲಿ ವಿಜ್ಞಾನದ ಶಿಕ್ಷಣ ವಿಜಯ ಕರ್ನಾಟಕ 25-7-2006

4 ಪ್ರಾಥಮಿಕ ಶಿಕ್ಷಣಕ್ಕೆ ಶಾಲೆ ವಿಜಯ ಕರ್ನಾಟಕ

5 ಅವನತಿಯ ಹಾದಿಯಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ ವಿಜಯ ಕರ್ನಾಟಕ 15-3-2002

6 ಉಪನ್ಯಾಸಕರ ಅರ್ಹತೆಗೊಂದು ಮಾನದಂಡ ವಿಜಯ ಕರ್ನಾಟಕ 19-10-2006

7 ದಾರಿ ಯಾವುದಯ್ಯ ಕಾಯಕದ ಕೈಲಾಸಕ್ಕೆ ವಿಜಯ ಕರ್ನಾಟಕ 11-12002

8 ಪರೀಕ್ಷಗಳು ಬರುತ್ತಿವೆ ವಿಜಯ ಕರ್ನಾಟಕ 1-3-2002

9 ಮಕ್ಕಳ ಗಣತಿ ಶಿಕ್ಷಕರಿಗೆ ಪಚೀತಿ ವಿಜಯ ಕರ್ನಾಟಕ 14-3-2003 10 ಶಿಕ್ಶಕ ಈಗ ಲಾಟರಿ ಮಾರಾಟಗಾರ ವಿಜಯ ಕರ್ನಾಟಕ 27-12-2002

11 ಸ್ತ್ರೀ ಲೋಲುಪನೀತ ಸಿರಿ ಕೃಷ್ಣ ಉದಯ ವಾಣಿ 20-8-2011

12 ನಳ ಭೀಮರನ್ನು ನೋಡಿ ಕಲಿಯಿರಿ ಉದಯ ವಾಣಿ

13 ಸಾಮಾನ್ಯ ಪರೀಕ್ಷೆ ಸಾಮಾನ್ಯರಿಗಲ್ಲ ವಿಜಯ ಕಿರಣ

14 ಮಕ್ಕಳ ಗಣತಿಗೆ ಬಂದಾಗ ವಿಜಯ ಕಿರಣ

15 ಬಗೆಹರಿಯದ ಸಿಇಟಿ ಗೊಂದಲ ವಿಜಯ ಕಿರಣ

16 ಕ್ರಿಕೆಟ್ ಮಾತ್ರ ಕ್ರೀಡೆಯಲ್ಲ ವಿಜಯ ಕಿರಣ

17 ಸಾಧಿಸುವ ಛಲವೊಂದದ್ದರೆ ಸಾಕು ವಿಜಯ ಕಿರಣ

18 ಕೋಲಾರದ ಗಣಿ ಇನ್ನೆಸ್ಟು ದಿನ ನಮ್ಮದು ವಿಜಯ ಕಿರಣ

19 ಸಂದರ್ಶನವೆಂಬ ನಾಟಕದಲ್ಲಿ ವಿಜಯ ಕಿರಣ

20 ಪರೀಕ್ಷಗಳು ಬರುತ್ತಿವೆ ವಿಜಯ ಕಿರಣ

21 ಸ್ತ್ರೀಯರಿಗೇನು ಬೇಕು ವಿಜಯ ಕಿರಣ

22 ಮಾತಿಗೆ ಬಡತನವಿಲ ್ಲ ವಿಜಯ ಕಿರಣ

23 ದೂರದ ಫ್ಲ್ಯಾಟ್ ನುಣ್ಣಗೆ ವಿಜಯ ಕರ್ನಾಟಕ

24 ಮಧ್ಯಮ ವರ್ಗಕ್ಕೆ ನಿತ್ಯವೂ ಮೂರ್ಖರ ದಿನ ವಿಜಯ ಕರ್ನಾಟಕ 1-4-2005

25 ಮಲೇರಿಯ ನಿರ್ಮೂಲನೆ ವಿಜಯ ಕಿರಣ

26 ಜಾಣ ಕಿವುಡು ವಿಜಯ ಕರ್ನಾಟಕ
27 ಶಿಕ್ಷಕರ ಜವಾಬ್ದಾರಿ ವಿಜಯ ಕರ್ನಾಟಕ
 28 ಹೊರಲಾರದ ಮಲ್ಲಿಗೆಯ ಹೊರೆ ಹೊಸ ದಿಗಂತ

29 ದಡವರಿಯದ ಅಲೆಗಳು ಹೊಸ ದಿಗಂತ

30 ನಿಮಗೆಂಥ ಶಿÀಕ್ಷಕರು ಬೇಕು? ಹೊಸ ದಿಗಂತ 5-9-2001

31 ತುಳುವರ ಬಲೀಂದ್ರ ಜ್ಞಾನ ಪಯಸ್ವಿನಿ 2-1-2011

32 ಪಾಡ್ದನಗಳ ಸ್ವರೂಪ ಜ್ಞಾನ ಪಯಸ್ವಿನಿ 16-11-211

33 ಜಾನಪದ ಪರಿಕಲ್ಪನೆ ಜ್ಞಾನ ಪಯಸ್ವಿನಿ 1-12-2011

34 ತುಳು ಪಾಡ್ದನಗಳಲ್ಲಿ ಸ್ತ್ರೀ ಜ್ಞಾನ ಪಯಸ್ವಿನಿ 7-12-2011

35 ಬಾಲ ಜೇವು ಮಾಣಿಗ ಜ್ಞಾನ ಪಯಸ್ವಿನಿ 14-12-2011

36 ಬಾಲೆ ಮಧುರಗೆ ಜ್ಞಾನ ಪಯಸ್ವಿನಿ 21-12-2011

37 ತುಳುವ ಸಂಸ್ಕಾರಗಳು ಜ್ಞಾನ ಪಯಸ್ವಿನಿ 6-12012

38 ಪೆರುವಾಜೆಯಲ್ಲಿ ಅಪರೂಪದ ಬುದ್ಧನ ಮೂರ್ತ ಪತ್ತೆ ಪ್ರಜಾವಾಣಿ 30-3-2012

39 ಪಾಜಪಳ್ಳ ಕಲಾವಿದರು ಜ್ಞಾನ ಪಯಸ್ವಿನಿ 20-2-2012

40 ಪೆರುವಾಜೆಯಲ್ಲಿ ಬುದ್ಧನ ಮೂರ್ತಿಪತ್ತೆ ಜ್ಞಾನ ಪಯಸ್ವಿನಿ 13-1-2012

41 ಶಿಕ್ಷಕರಿಂದೇನು ಮಾಡಲು ಸಾಧ್ಯ? ಸುಳ್ಯ ಸುದ್ದಿ ಬಿಡುಗಡೆ 3-9-2012

42 ನಮ್ಮ ಮಕ್ಕಳನ್ನು ರಕ್ಷಸಿ ಕೊಳ್ಳೋಣ ಸುಳ್ಯ ಸುದ್ದಿ ಬಿಡುಗಡೆ 15-10-2012

43 ಬೆಳ್ಳಾರೆಯ ಸಾಂಸ್ಕøತಿಕ ಅಧ್ಯಯನ ಸುಳ್ಯ ಸುದ್ದಿ ಬಿಡುಗಡೆ 15-8-2011

44 ಕೆಮ್ಮಲೆಯ ನಾಗ ಬ್ರಹ್ಮ ಸುಳ್ಯ ಸುದ್ದಿ ಬಿಡುಗಡೆ 25-7-2011

45 ದ್ವಿಚಕ್ರ ವಾಹನ ಮಹಿಳಗೆ ವರದಾನ ಮಂಗಳಾ ವಾರ ಪತ್ರಿಕೆ

46 ಸಂಸ್ಕøತಿಗೆ ಆಶಾ ಕಿರಣ ಮಂಗಳಾ ವಾರ ಪತ್ರಿಕೆ

47 ಸಂಶೋಧನೆಯ ಹೊಸ ಸಾಧ್ಯತೆಗಳು ಪ್ರಣವ ಸ್ಮøತಿ

48 ಅನೇಕ ದೇವತಾ ತತ್ವದಿಂದ ಏಕ ದೇವತಾ ತತ್ವ ತ್ರಿಮೂರ್ತಿ ಕೌಸ್ತುಭ

49 ಕುಲೆ ಭೂತಗಳು ¸ಸ್ಮರಣ ಸಂಚಿಕೆ ದೇವರ ಕಾನ ಶಾಲೆ

50 ಕನ್ನಡ ತುಳು ಭಾಷಾ ಸಾದೃಶ್ಯಗಳು ¸ಸ್ಮರಣ ಸಂಚಿಕೆ ದೇ ವರ ಕಾನ ಶಾಲೆ

51 ಹೊರಲಾರದ ಮಲ್ಲಿಗೆ ಹೊಸ ದಿಗಂತ

52 ಸಂಸ್ಕøತಾಧ್ಯಯನದ ಪ್ರಸ್ತುತತೆ ಸ್ಮರಣ ಸಂಚಿಕೆ ಸಂಸ್ಕøತ ಸಂಘ ಮಂಗಳೂರು
 53 ಯುಜಿಸಿ ನಿಯಮ ಲೆಕ್ಕಕ್ಕ್ಕಿಲ್ಲ ಏತಕ್ಕಿಲ್ಲ ಕ್ರಮ ,ಕನ್ನಡ ಪ್ರಭ
54 ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆಯ ಬೆಲೆ ಎಷ್ಟು ?ಕನ್ನಡ ಪ್ರಭ
55 ಬಿಗಿ ನಿಯಮಗಳಿರದೆ ಸಂಶೋಧನೆಗಿರದು ಬೆಲೆ ಕನ್ನಡ ಪ್ರಭ
 56 ಗಂಡನ ಚಿತೆಯೊಂದಿಗೆ ಬೆಂದು ಹೋದವರೆಷ್ಟೋ ಕನ್ನಡ ಪ್ರಭ
 57 ಭಾರತದ ಜನಪದರಲ್ಲಿ ಲೈಂಗಿಕ ಶಿಕ್ಷಣವಿತ್ತೆ ಕನ್ನಡ ಪ್ರಭ
 58 ಪ್ಲಾಸ್ಟಿಕ್ ಎಂಬ ಬಹುವಿಧ ಮಾರಿ ನಿಷೇಧ ವೆ ಸರಿಯಾದ ದಾರಿ ಕನ್ನಡ ಪ್ರಭ
59 ಉಪನ್ಯಾಸಕರ ಬಿಎಡ್ ಬವಣೆ ಕನ್ನಡ ಪ್ರಭ
60 ದುಡ್ಡು ಗಳಿಸುವ ಮಾರ್ಗದಲ್ಲಿ ರೋಗಿಗಳ ಕಾಳಜಿಯೆಲ್ಲಿಕನ್ನಡ ಪ್ರಭ
61 ದಡವರಿಯದ ಮಕ್ಕಳಿಗೆ ಬೇಕು ಮಾರ್ಗ ದರ್ಶನ ಕನ್ನಡ ಪ್ರಭ
 62 ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ ಕನ್ನಡ ಪ್ರಭ
 63 ಫೇಸ್ ಬುಕ್ ಗಳಲ್ಲಿ ಹೆಣ್ಣುಮಕ್ಕಳ ಫೇಸ್ ಗಳು ಉದಯವಾಣಿ
64 ಹದಗೆಟ್ಟ ಶಿಕ್ಷಣದ ಮನೆಯಲ್ಲಿ ವಿದ್ಯಾರ್ಥಿಯ ಬಾಳು ಹಸನಾದೀತೇ ,ಕನ್ನಡ ಪ್ರಭ
 65 ಪಾಠದಲ್ಲಿ ರುವುದನ್ನು ಬೋಧಿಸುವುದಷ್ಟೇ ಶಿಕ್ಷಕರ ಕೆಲಸವೇ ?,ಕನ್ನಡ ಪ್ರಭ
 66 ಚರಿತ್ರೆಯ ಗರ್ಭ :ಬೆಳ್ಳಾರೆಯ ಇತಿಹಾಸ ತಿಳಿಯುವುದೇ ?
 67 ಸರ್ಪರಾಧನೆ ,ಬಾಕುಡರ ಕುಲ ದೈವ -ಕನ್ನಡ ಪ್ರಭ

68 ಕೊನೆಯ ಓಟ ?ಕಂಬಳದ ಕಳದಲ್ಲಿ ಕಳವಳ -ಕನ್ನಡ ಪ್ರಭ
 69 ಮುಂದೆ ಬೆಟ್ಟವಾಗಬಹುದು ಈ ಪುಟ್ಟ ವಿಚಾರಗಳು - ಕನ್ನಡ ಪ್ರಭ
 69 ಕನ್ನಡೊಡು ನುಡಿಕೊರ್ಪುನ ಕನ್ನಡ ಯಾನೆ ಪುರುಷ ಭೂತ
70 ಅತಿಕಾರೆ ಬುಳೆನ್ ತುಳುನಾಡುಗ್ ಕೊನೊಂದು ಬತ್ತಿನ ಬೀರೆರ್ :ಕಾನದ- ಕಟದೆರ್
71 ಸ್ವಾಮಿ ನಿಷ್ಠೆ ಮೆರೆಯಿನ ಪರವ ಭೂತ
72 ಕಲ್ಲೆಂಬಿ ಬೂಡುದ ಒರು ಬಾಣಿಯೆತ್ತಿ –ನೆಲ್ಲೂರಾಯ ದೈವೊಲು
73 ದಾರು –ಕುಂದಯ
74 ಗುಟ್ಟು ಬುಡ್ದು ಕೊರಂದಿನ ಅಬ್ಬೆ ಜಲಾಯ ಭೂತ-ವಿಜಯಕರ್ನಾಟಕ
75 ನಂಬಿಗೆದ ಕಲೊಟ್ಟು ಅರಬ್ಬಿ ಭೂತ ಚೀನೀ ದೈವ-ವಿಜಯಕರ್ನಾಟಕ
 76 ಪಗೆಕ್ ಬಲಿಯಾಯಳು ಮರ್ಲು ಮಯ್ಯೊಂದಿ-ವಿಜಯಕರ್ನಾಟಕ
 77 ಅಜ್ಜಿ ಭೂತ ಬುಕ್ಕ ಕೂಜಿಲು-ವಿಜಯಕರ್ನಾಟಕ 78 ಉರವ ಬುಕ್ಕ ಎರು ಬಂಟ-ವಿಜಯಕರ್ನಾಟಕ
ಇತ್ಯಾದಿ

Saturday, 8 September 2018

ತಿಗಳಾರಿ(ತುಳು) ಲಿಪಿ- ಒಂದು ವಿಶ್ಲೇಷಣಾತ್ಮಕ ಅಧ್ಯಯನ -©ಡಾ.ಲಕ್ಷ್ಮೀ ಜಿ ಪ್ರಸಾದ

ತಿಗಳಾರಿ(ತುಳು) ಲಿಪಿ- ಒಂದು ವಿಶ್ಲೇಷಣಾತ್ಮಕ ಅಧ್ಯಯನ -ಡಾ.ಲಕ್ಷ್ಮೀ ಜಿ ಪ್ರಸಾದ

( ಕರ್ನಾಟಕ ಇತಿಹಾಸ ಅಕಾಡೆಮಿಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ)
ಭಾಷೆಗೆ ಸ್ವಂತ ಲಿಪಿ ಇರಲೇ ಬೇಕೆಂದೇನೂ ಇಲ್ಲ ಜಗತ್ತಿನ ಹೆಚ್ಚಿನ ಭಾಷೆಗಳಿಗೆ ಸ್ವಂತ ಲಿಪಿ ಇಲ್ಲ.ಭಾಷೆ ಮೊದಲು ರೂಪುಗೊಳ್ಳುತ್ತದೆ. ನಂತರ ಭಾಷೆಯ ಬರವಣಿಗೆಗಾಗಿ ಲಿಪಿ ರೂಪುಗೊಳ್ಳುತ್ತದೆ.ಒಂದೇ ಲಿಪಿ ಹಲವು ಭಾಷೆಗಳ ಬರವಣಿಗೆಗೆ ಬಳಕೆಯಾಗುತ್ತದೆ‌.ಒಂದೇ ಭಾಷೆಯ ಬರವಣಿಗೆ  ಒಂದು ಲಿಪಿಯಲ್ಲಿ ಇದ್ದಾಗ ಆ ಲಿಪಿಗೆ ಆ ಭಾಷೆಯ ಹೆಸರು ಸೇರಿಕೊಳ್ಳುತ್ತದೆ.

" ಮಲೆಯಾಳ ಲಿಪಿಯನ್ನು  ಹೋಲುವ ಆರ್ಯ ಎಳುತ್ತು ಅಥವಾ ತಿಗಳಾರಿ ಲಿಪಿಯೇ ತುಳು ಲಿಪಿ ಎಂದು ಕೆಲವು ವಿದ್ವಾಂಸರ ವಾದ.ತುಳು ಬ್ರಾಹ್ಮಣರು ಈ ಲಿಪಿಯನ್ನು ಶತಮಾನಗಳಿಂದ ಉಪಯೋಗಿಸುತ್ತಾ ಬಂದಿದ್ದಾರೆ ಎಂಬುದು ವಾಸ್ತವದ ಸಂಗತಿ.ಇವರು ಉಪಯೋಗಿಸಿದ ಲಿಪಿ ತುಳು ಇರಬಹುದು ಅಥವಾ ಇಲ್ಲದೇ ಇರಬಹುದು.ಎಲ್ಲಕ್ಕಿಂತಲೂ ಮುಖ್ಯ ವಿಚಾರವೇನೆಂದರೆ ಭಾಷೆಗೂ ಲಿಪಿಗೂ ಯಾವ ಸಂಬಂಧವೂ ಇಲ್ಲ. ಇಂದು ಜಾಗತಿಕ ಭಾಷೆಯಾಗಿ ಮೆರೆಯುತ್ತಿರುವ ಇಂಗ್ಲಿಷ್ ಗೆ ಸ್ವಂತ ಲಿಪಿ ಇಲ್ಲ.ಅದು ರೋಮನ್ ಲಿಪಿಯನ್ನು ಬಳಸುತ್ತಿದೆ‌.ರಾಷ್ಟ್ರ ಭಾಷೆಯಾಗಿರುವ ಹಿಂದಿಗೂ ಸ್ವಂತ ಲಿಪಿ ಇಲ್ಲ. ಅದು ದೇವ ನಾಗರಿ ಲಿಪಿಯನ್ನು ಬಳಸುತ್ತಿದೆ‌.....ಆದ್ದರಿಂದ ತುಳುವರು ಕನ್ನಡ ಲಿಪಿಯನ್ನು ಬಳಸಿದರೆ ತುಳುಭಾಷೆಗೆ ಯಾವುದೇ ರೀತಿಯಲ್ಲಿ ವ್ಯತ್ಯಯವಾಗುವುದಿಲ್ಲ" ಎಂದು ವಿದ್ವಾಂಸರಾದ ಶ್ರೀಪಾದ ಭಟ್ ಹೇಳಿದ್ದಾರೆ‌.

ಹೌದು,ಜಗತ್ತಿನ ಹೆಚ್ಚಿನ ಭಾಷೆಗಳಿಗೆ ಸ್ವಂತ ಲಿಪಿ ಇಲ್ಲ.ಲಿಪಿ ಇಲ್ಲ ಎನ್ನುವುದು ಅವಮಾನದ ವಿಚಾರವಲ್ಲ ಹಾಗೆಯೇ ಲಿಪಿ ಇದೆ ಎಂಬುದು ಹೆಗ್ಗಳಿಕೆಯ ವಿಚಾರ ಕೂಡ ಅಲ್ಲ.ಭಾಷೆಯೆಂಬುದು ಧ್ವನಿ ಸಂಕೇತವಾದರೆ,ಧ್ವನಿಗಳನ್ನು ದಾಖಲಿಸುವ ರೇಖಾ ಸಂಕೇತಗಳೇ ಲಿಪಿಯಾಗಿದೆ‌.ಹಾಗಾಗಿ ಯಾವುದೇ ಲಿಪಿಯನ್ನು ಯಾವುದೇ ಭಾಷೆಗೆ ಬಳಸಬಹುದು. ಆದರೆ ಅದರಲ್ಲಿ ಆ ಭಾಷೆಯ ಎಲ್ಲ ಧ್ವನಿಗಳಿಗೆ ರೇಖಾ ಸಂಕೇತ/ ಅಕ್ಷರ ಇರಬೇಕು.ಇಲ್ಲವಾದಲ್ಲಿ ಭಾಷೆಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಯಾವುದೇ ಲಿಪಿಯೊಂದು ಸ್ವತಂತ್ರವಾಗಿ ರೂಪುಗೊಳ್ಳುವುದಿಲ್ಲ‌.ಚಿತ್ರ ಲಿಪಿಯಿಂದ ಬ್ರಾಹ್ಮೀ ಲಿಪಿ ಹುಟ್ಟಿಕೊಂಡಿತು‌

ಭಾರತದಲ್ಲಿನ ಪ್ರಚಲಿತವಿರುವ ಹೆಚ್ಚಿನ ಲಿಪಿಗಳು ಮೂಲತಃ ಬ್ರಾಹ್ಮೀ ಲಿಪಿಯಿಂದ ಹುಟ್ಟಿಕೊಂಡಿವೆ. ಹಾಗೆಯೇ ತಮಿಳು ನಾಡಿನಲ್ಲಿ ತಮಿಳು ಭಾಷೆಯ ಬರವಣಿಗೆಗಾಗಿ  ಬ್ರಾಹ್ಮಿ ಲಿಪಿಯಿಂದ ತಮಿಳು ಲಿಪಿ ಹುಟ್ಟಿಕೊಂಡಿತು. ತಮಿಳು ಭಾಷೆಯಲ್ಲಿ ಮೂವತ್ತೆರಡು ಸ್ವರ ವ್ಯಂಜನಗಳು/ ಅಕ್ಷರಗಳು  ಮಾತ್ರ ಇರುವ ಕಾರಣ ತಮಿಳು ಲಿಪಿಯಲ್ಲಿ ಕೂಡ ಇಷ್ಟೇ ಸ್ವರ ವ್ಯಂಜನಗಳಿಗೆ ರೇಖಾ ಸಂಕೇತ/ ಅಕ್ಷರ ವಿನ್ಯಾಸವಿದೆ.ಸಂಸ್ಕೃತದಲ್ಲಿ  ಹೆಚ್ಚು  ಸ್ವರ ವ್ಯಂಜನಗಳು ಇರುವ ಕಾರಣ ತಮಿಳು ಲಿಪಿಯಲ್ಲಿ ಸಂಸ್ಕೃತ  ಭಾಷೆಯನ್ನು ಬರೆಯಲು ಸಾಧ್ಯವಿಲ್ಲ. ಹಾಗಾಗಿ ತಮಿಳು ಲಿಪಿಯನ್ನು ಪರಿಷ್ಕರಿಸಿ ಸಂಸ್ಕೃತ ವನ್ನು ಬರೆಯಲು ಸೂಕ್ತವಾಗುವಂತೆ ಮಾಡಿ ಗ್ರಂಥ ಲಿಪಿಯನ್ನು ಬಳಕೆಗೆ ತಂದರು.

ದಕ್ಷಿಣ ಭಾರತದಲ್ಲಿ ವೇದಾಧ್ಯಯನ ಕೇಂದ್ರ ಇದ್ದದ್ದು ತಮಿಳುನಾಡಿನ ತಂಜಾವೂರು ಮತ್ತು ಕಂಚಿಗಳಲ್ಲಿ ಮಾತ್ರ.

ಅಲ್ಲಿನ ತಮಿಳು ಲಿಪಿಯಲ್ಲಿ ಮೂವತ್ತೆರಡು ಅಕ್ಷರಗಳು ಮಾತ್ರ ಇದ್ದು ಅದು ಸಂಸ್ಕೃತ ವೇದ ಮಂತ್ರಗಳ ಬರವಣಿಗೆಗೆ ಸೂಕ್ತ ವಾಗಿರಲಿಲ್ಲ ಹಾಗಾಗಿ ಅವರು ತಮಿಳು ಲಿಪಿ ಯನ್ನು ಪರಿಷ್ಕರಿಸಿ ಸಂಸ್ಕೃತ ಕ್ಕೆ ಸೂಕ್ತ ವಾದ ಗ್ರಂಥ ಲಿಪಿ ರೂಪಿಸಿದರು ಅಲ್ಲಿ ನಾಗರಿ ಲಿಪಿ ಪರಿಚಿತವಾಗಿರಲಿಲ್ಲ.ಅಲ್ಲಿಗೆ ವೇದಾಧ್ಯಯನ ಮಾಡಲು ಹೋದ ದಕ್ಷಿಣ ಕನ್ನಡ ಉತ್ತರ ಕನ್ನಡ ಮಲೆನಾಡಿನ  ಬ್ರಾಹ್ಮಣರು ಅಲ್ಲಿನ ಗುರುಗಳಿಂದ ಗ್ರಂಥ ಲಿಪಿ ಕಲಿತು ವೇದ ಮಂತ್ರಗಳ ನ್ನು ಅದರಲ್ಲಿ ಬರೆದರು.ಹಾಗಾಗಿ ಅದನ್ನು ತಿಗಳರ ಎಂದರೆ ತಮಿಳರ ಆರ್ಯ ಎಂದರೆ ಸಂಸ್ಕೃತ ಲಿಪಿ ಎಂದು ಕರೆದರು ಅದು ಹ್ರಸ್ವ ಗೊಂಡು ತಿಗಳಾರಿ ಅಯಿತು .ಇದನ್ನು ಬಳಕೆ ಮಾಡಿದವರಲ್ಲಿ ಕೋಟ ಹವ್ಯಕ ಚಿತ್ಪಾವನ ತುಳು  ಕರಾಡ ಬ್ರಾಹ್ಮಣರು ಶಿವಮೊಗ್ಗ ಕೆಳದಿ ಉತ್ತರ ಕನ್ನಡ ದ ಕನ್ನಡ ಬ್ರಾಹ್ಮಣರು ತಂಜಾವೂರು ಕಂಚಿಯ ಬ್ರಾಹ್ಮಣರು  ಸೇರಿದ್ದಾರೆ ಇವರಲ್ಲಿ ತುಳು ಬ್ರಾಹ್ಮಣರು ಕೇರಳಕ್ಕೆ ದೇವಸ್ಥಾನ ಗಳ ಪೂಜೆಗೆ ಹೋದಾಗ ತಿಗಳಾರಿ ಲಿಪಿ ಅಲ್ಲಿ ಹರಡಿ ಅಲ್ಲಿ ನವರು ಅದನ್ನು ಮಲೆಯಾಳ ಭಾಷೆಗೆ ಸೂಕ್ತ ವಾಗುವಂತೆ ಪರಿಷ್ಕರಿಸಿ ಬಳಸಿದರು ಅವರು ಆರಂಭದಲ್ಲಿ ಅದನ್ನು ತುಲುವನತ್ತಿಲ್ ಎಂದರೆ ತುಲುವರ ಲಿಪಿ ಎಂದು ಕರೆದಿದ್ದು ಅವರು ರೂಪಿಸಿದ ಲಿಪಿ ಯನ್ನು ತುಳು ಮಲೆಯಾಳ ಲಿಪಿ ಎಂದು ಕರೆದು ಕಾಲಾಂತರದಲ್ಲಿ ಮಲೆಯಾಳ ಲಿಪಿ ಎಂದು ಮಾತ್ರ ಹೆಸರು ಉಳಿಯಿತು
ಗ್ರಂಥ ಲಿಪಿಯನ್ನು ತಮಿಳರು ಬಳಕೆ ತಂದ ಕಾರಣ ಅದನ್ನು ತಿಗುಳರ ಆರ್ಯ ಎಳತ್ತು ಎಂದು ಜನರು ಕರೆಯುತ್ತಿದ್ದರು. ( ತಮಿಳರನ್ನು ತಿಗುಳರು,ತಿಗಳರು ಎಂದು ಕೂಡ ಕರೆಯುತ್ತಾರೆ)   ಇದೇ ಕಾಲಾಂತರದಲ್ಲಿ ತಿಗುಳಾರಿ- ತಿಗಳಾರಿ ಎಂಬ ಹೆಸರನ್ನು ಪಡೆಯಿತು.

ತಂಜಾವೂರು ಕಂಚಿಗಳಲ್ಲಿ ವೇದಾಧ್ಯಯನ ಮಾಡಲು ಹೋದ ಬ್ರಾಹ್ಮಣರ ಮೂಲಕ ತಿಗಳಾರಿ ಲಿಪಿ ಮಲೆನಾಡು,ತುಳುನಾಡುಗಳಲ್ಲಿ ಹರಡಿತು.

ಕರ್ನಾಟಕದ ಶಿವಮೊಗ್ಗ, ಉತ್ತರ ಕನ್ನಡ ಮಲೆನಾಡು ಪ್ರದೇಶಗಳಲ್ಲಿ ಹಾಗೂ ದಕ್ಷಿಣ ಕನ್ನಡ ಉಡುಪಿ ಕಾಸರಗೋಡು ಪ್ರದೇಶಗಳಲ್ಲಿ ಕೂಡ ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ತಿಗಳಾರಿ ಲಿಪಿಯನ್ನು ಬಳಕೆ ಮಾಡುತ್ತಿದ್ದರು.ತಂಜಾವೂರು, ಮಹಾರಾಷ್ಟ್ರ ದ ಕೆಲವು ಭಾಗಗಳಲ್ಲಿಯೂ ಈ ಲಿಪಿ ಪ್ರಚಲಿತವಿತ್ತು ಎಂದು ರವಿ‌ಮುಂಡ್ಕೂರು ಅವರು ಹೇಳಿದ್ದಾರೆ.
ತಿಗಳಾರಿ ಲಿಪಿಯ ಸುಮಾರು ಹದಿನೈದು ಸಾವಿರದಷ್ಟು ತಾಳೆಗರಿ ಗ್ರಂಥಗಳು ಸಿಕ್ಕಿದ್ದು ,ಇವುಗಳಲೆಲ್ಲವೂ ಸಂಸ್ಕೃತ ಭಾಷೆಯ ವೇದ ಪುರಾಣ ಮಂತ್ರಗಳ ಗ್ರಂಥಗಳಾಗಿವೆ.ಹತ್ತು ಹನ್ನೆರಡು ಕನ್ನಡ ಕೃತಿಗಳು ಮತ್ತು ಏಳು ತುಳು ಭಾಷೆಯ ಕೃತಿಗಳು ತಿಗಳಾರಿ ಲಿಪಿಯಲ್ಲಿ ಲಭ್ಯವಾಗಿವೆ.
ತಿಗಳಾರಿ ಲಿಪಿಯನ್ನು ಉಡುಪಿಯ  ಅಷ್ಟ ಮಠಗಳಲ್ಲಿ  ಸಂಸ್ಕೃತ ಗ್ರಂಥಗಳ ಬರಹಕ್ಕೆ ಹಾಗೂ ದಾಖಲೆಗಳನ್ನು ಬರೆಯಲು ಬಳಕೆ ಮಾಡಿದ್ದರು.ಉಡುಪಿ ಅಷ್ಟ ಮಠಗಳಲ್ಲಿ ಹಾಗೂ ಕಾಸರಗೋಡಿನ ಕೆಲವೆಡೆ ಇದನ್ನು ತುಳು ಲಿಪಿ ಎಂದು ಕರೆದಿದ್ದಾರೆ.
ಹದಿನೇಳನೇ ಶತಮಾನದಲ್ಲಿ ತುಳು ರಾಮಾಯಣ ಕೃತಿ ತಿಗಳಾರಿ ಲಿಪಿಯಲ್ಲಿ ಬರೆದಿದ್ದು ಅದರಲ್ಲಿ ಕವಿ ತುಳು ಭಾಷೆ ತುಳು ಲಿಪಿಯಲ್ಲಿ ಬರೆದ ಕೃತಿ ಎಂದು ಬರೆದಿದ್ದಾರೆ.ಆದರೆ ಇದನ್ನು ಕೃತಿಯ ಹೊರಭಾಗದಲ್ಲಿ ಬರೆದಿದ್ದು ಗ್ರಂಥದ ಒಳಭಾಗದ ಲಿಪಿವೂ ಹೊರಭಾಗ ಈ ರೀತಿಯಾಗಿ ಬರೆದ ಲಿಪಿಗೂ ವ್ಯತ್ಯಾಸವಿದೆ‌.ಹಾಗಾಗಿ ಇದನ್ನು ಕವಿ ಬರೆದಿರುವ ಸಾಧ್ಯತೆ ತೀರಾ ಕಡಿಮೆ.ಆದರೂ ತಿಗಳಾರಿ ಲಿಪಿಗೆ ತುಳು ಲಿಪಿ ಎಂದು ಕರೆಯುತ್ತಿದ್ದ ಬಗ್ಗೆ ಇದೊಂದು ಮಹತ್ವದ ಸಾಕ್ಷಿಯಾಗಿದೆ.

ತಿಗಳಾರಿ ಲಿಪಿ ಸಂಸ್ಕೃತ ಬರೆಯಲು ರೂಪುಗೊಂಡ ಲಿಪಿಯಾಗಿದ್ದು ತುಳು ಭಾಷೆಯ ಬರವಣಿಗೆಗೆ ಸೂಕ್ತವಾಗಿಲ್ಲ
ತಿಗಳಾರಿ  ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ

ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಬಳಕೆಗೆ ಬಂದ ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ, ಬೇರೆ ಬೇರೆಯಲ್ಲ.ಇದು ತುಳು ಭಾಷೆಯ ಬರವಣಿಗೆಗಾಗಿ ರೂಪುಗೊಂಡ ಲಿಪಿಯಲ್ಲ ‌.ಹಾಗಾಗಿ ಇದು ತುಳು ಭಾಷೆಯ ಬರವಣಿಗೆಗೆ ಸೂಕ್ತವಾಗಿಲ್ಲ.

ತಳ ಮಟ್ಟದ ಅಧ್ಯಯನವನ್ನು ಮಾಡದ  ಕೆಲವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ ಎಂಬ ಸತ್ಯವನ್ನು ಅರಿಯದೆ,ಅಥವಾ ಅರಿತೂ ಮುಚ್ಚಿಟ್ಟು, ತಿಗಳಾರಿ ಮತ್ತು ತುಳು ಲಿಪಿ ಬೇರೆ ಬೇರೆ,ತುಳು ಭಾಷೆಗೆ ಸ್ವಂತ ಲಿಪಿ ಇದೆ ಎಂದು ತಪ್ಪಾಗಿ ಬಿಂಬಿಸುತ್ತಾ ಇದ್ದಾರೆ  .ಆದರೆ ತಿಗಳಾರಿ ಮತ್ತು ತುಳು ಲಿಪಿ ಎರಡೂ  ಒಂದೇ ಎಂದು ಹೆಚ್ಚಿನ ಲಿಪಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಬಗ್ಗೆ ಡಾ.ದೇವರ ಕೊಂಡಾ ರೆಡ್ಡಿಯವರು ತುಳು ಲಿಪಿ ತಿಗಳಾರಿ ಲಿಪಿಯ ಒಂದು ಪ್ರಬೇಧವಾಗಿದೆ ಎಂದು ಹೇಳಿದ್ದಾರೆ.
ಡಾ ದೇವರಾಜ ಸ್ವಾಮಿಯವರ ಲಿಪಿ ಬೆಳವಣಿಗೆ ಕುರಿತಾದ ಗ್ರಂಥದಲ್ಲಿ ತಿಗಳಾರಿ ಮತ್ತು ತುಳು ಲಿಪಿಯನ್ನು ಬೇರೆ ಬೇರೆಯಾಗಿ ಗುರುತಿಸಿದ್ದು ಅದರಲ್ಲಿ ತಿಗಳಾರಿ ಮತ್ತು ತುಳು ಲಿಪಿಯ ವರ್ಣಮಾಲೆಯನ್ನು ನೀಡಿದ್ದಾರೆ.
ಪ್ರಸ್ತುತ ಕರ್ನಾಟಕ ತುಳು ಅಕಾಡಮಿ ವೆಬ್ ನಲ್ಲಿ ಪ್ರಕಟಿಸಿರುವ ಮತ್ತು ತುಳು ಲಿಪಿ ಕಲಿಸುವವರು ಕಲಿಸುತ್ತಿರುವ ಲಿಪಿಯು ದೇವರಾಜ ಸ್ವಾಮಿ ಅವರು ನೀಡಿರುವ ತುಳು ಲಿಪಿ ವರ್ಣಮಾಲೆಯನ್ನು ಹೋಲುತ್ತಾ ಇಲ್ಲ ಬದಲಿಗೆ ತಿಗಳಾರಿ ಲಿಪಿ ವರ್ಣಮಾಲೆಯನ್ನು ಹೋಲುತ್ತದೆ.

ಕರ್ನಾಟಕ ತುಳು ಅಕಾಡೆಮಿಯ ವೆಬ್ ಸೈಟ್‌ನಲ್ಲಿ  ಯಾವುದೇ ಭಾಷೆಗೆ ಸ್ವಂತ ಲಿಪಿ ಇರಲೇಬೇಕು ಎಂದೇನೂ ಇಲ್ಲ, ತುಳು ಭಾಷೆಯನ್ನು ಬರೆಯಲು ತಿಗಳಾರಿ ಲಿಪಿಯನ್ನು ಬಳಸುತ್ತಿದ್ದರು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಇದನ್ನು ತುಳು ಲಿಪಿ ಎಂದು ಕರೆದಿರುವ ಡಾ.ವೆಂಕಟರಾಜ ಪುಣಿಚಿತ್ತಾಯರು

"...ಇದೇ ವೇಳೆಗೆ ವೈದಿಕ ಮಂತ್ರಗಳನ್ನೂ,ಸಂಸ್ಕೃತ ಕಾವ್ಯಗಳನ್ನೂ ಬರೆಯಲು ತುಳುವರು ಉಪಯೋಗಿಸುತ್ತಿದ್ದ ಐವತ್ತು ಅಕ್ಷರಗಳುಳ್ಳ ಗ್ರಂಥ ಲಿಪಿಯು ಆಸ್ಥಾನಗಳಲ್ಲಿ ಸ್ವೀಕೃತವಾಯಿತು.ಹೀಗೆ ಆರ್ಯ ಭಾಷೆ ಅಥವಾ ಸಂಸ್ಕೃತವನ್ನು ಬರೆಯಲು ಉಪಯೋಗಿಸಿರುವ ಆ ಲಿಪಿಯನ್ನೇ ಪರಿಷ್ಕರಿಸಿ ಮಲೆಯಾಳ ಭಾಷೆಯನ್ನು ಬರೆಯಲು ಉಪಯೋಗಿಸಿದಾಗ ಆರ್ಯ ಎಳುತ್ತು ಅಥವಾ ತುಳು ಮಲೆಯಾಳ ಲಿಪಿ ಎಂಬ ಹೆಸರನ್ನು ಗಳಿಸಿತು " ( ತುಳು ನಡೆ ನುಡಿ) ಎಂದು ಹೇಳಿದ್ದಾರೆ‌.ಇಲ್ಲಿ ತುಳು ಲಿಪಿ ಮತ್ತು ಆರ್ಯ ಎಳುತ್ತು ಒಂದೇ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.ಆರ್ಯ ಎಳುತ್ತು ವನ್ನೇ ತಿಗಳಾರಿ ಎಳುತ್ತು/ ಲಿಪಿ ಎಂದು ಕರೆಯಲಾಗುತ್ತದೆ.

ತುಳು ಲಿಪಿ ಪುಸ್ತಕ ರಚಿಸಿದ ಡಾ.ರಾಧಾಕೃಷ್ಣ ಬೆಳ್ಳೂರು ಅವರು " ಆರ್ಯ ಭಾಷೆಯಾಯಿ ಸಂಸ್ಕೃತೊನ್ ಬರೆಪ್ಪಿ ಕಾರಣೊಗ್ ಆರ್ಯ ಎಳುತ್ತು,ತುಳುನ್ ಬರೆವೊಂದಿತ್ತಿ ಕಾರಣೊಗ್ ತುಳು ಲಿಪಿ ಪನ್ಪಿ ಪುದರಿತ್ತಿ ಈ ಲಿಪಿನ್ ಉತ್ತರ ಕನ್ನಡಡ್ ತಿಗಳಾರಿಂದ್ ಲೆಪ್ಪುವೆರ್( ತುಳು ಲಿಪಿ ಕೃತಿಯ ಪ್ರಸ್ತಾವನೆ) ( ಆರ್ಯ ಭಾಷೆಯಾದ ಸಂಸ್ಕೃತವನ್ನು ಬರೆದ ಕಾರಣಕ್ಕಾಗಿ ಆರ್ಯ ಎಳುತ್ತು,ತುಳುವನ್ನು ಬರೆಯುತ್ತಿದ್ದ ಕಾರಣಕ್ಕೆ ತುಳು ಲಿಪಿ ಎಂಬ ಹೆಸರಿದ್ದ ಈ ಲಿಪಿಯನ್ನು ಉತ್ತರ ಕನ್ನಡದಲ್ಲಿ ತಿಗಳಾರಿ ಲಿಪಿ ಎಂದು ಕರೆಯುತ್ತಾರೆ) ಎಂದು ಹೇಳಿದ್ದಾರೆ‌.ಇಲ್ಲಿ ತುಳುವನ್ನು ಬರೆಯುತ್ತಿದ್ದ ಕಾರಣಕ್ಕೆ ತುಳು ಲಿಪಿ ಎಂದು ಹೆಸರಿದೆ ಎಂದು ಹೇಳಿದ್ದಾರೆ. ಆದರೆ ಪ್ರಾಚೀನ ಕಾಲದಲ್ಲಿ ತುಳು ಭಾಷೆಯಲ್ಲಿ ಬರವಣಿಗೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇತ್ತು.ಕೇವಲ ಆರು ತುಳು ಭಾಷೆಯ  ಪ್ರಾಚೀನ ಕೃತಿಗಳು ಮಾತ್ರ ಲಭ್ಯವಾಗಿವೆ‌.ಹಾಗಾಗಿ ತುಳುವಿನ ಬರವಣಿಗೆಗಾಗಿ ಬಳಕೆ ಮಾಡಿದ ಕಾರಣಕ್ಕೆ ಈ ಲಿಪಿಗೆ ತುಳು ಲಿಪಿ ಎಂಬ ಹೆಸರು ಬಂದಿದೆ ಎಂಬುದನ್ನು ಒಪ್ಪಲಾಗದು..

ತುಳು ಲಿಪಿಯನ್ನು ವಿನ್ಯಾಸ ಮಾಡಿರುವ ಡಾ.ವಿಘ್ನರಾಜ ಭಟ್ ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ ಎಂದು ಹೇಳಿದ್ದಾರೆ. ಡಾ.ಪದ್ಮನಾಭ ಕೇಕುಣ್ಣಾಯರು ಕೂಡ ಇದೇ ಅಭಿಪ್ರಾಯ ಪಟ್ಟಿದ್ದಾರೆ.  ಲಿಪಿ ತಜ್ಞರಾದ ಡಾ.ಪಿ.ವಿ ಕೃಷ್ಣ ಮೂರ್ತಿಯವರು ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬನ್ನಂಜೆ ಗೋವಿಂದಾಚಾರ್ಯರು  ಸಂಸ್ಕೃತ ಮತ್ತು ತುಳು ಭಾಷೆಗಳಿಗೆ ಸ್ವಂತ ಲಿಪಿ ಇಲ್ಲ,ತೌಳವ ಬ್ರಾಹ್ಮಣರು ( ತುಳುನಾಡಿನ ಬ್ರಾಹ್ಮಣರು) ಸಂಸ್ಕೃತ ಬರೆಯಲು ಬಳಕೆಗೆ ತಂದ ಕಾರಣ ಈ ಲಿಪಿಗೆ ತುಳು ಲಿಪಿ ಎಂಬ ಹೆಸರು ಬಂದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇದನ್ನು ಕೇವಲ ತೌಳವ ಬ್ರಾಹ್ಮಣರು ಮಾತ್ರ ಸಂಸ್ಕೃತ ಬರೆಯಲು ಬಳಕೆ ಮಾಡಿಲ್ಲ,ಉತ್ತರ ಕನ್ನಡ, ಶಿವಮೊಗ್ಗ, ಮಲೆನಾಡಿನ ಬ್ರಾಹ್ಮಣರು ಕೂಡ ವೈದಿಕ ವೇದ ಮಂತ್ರಗಳನ್ನು ಬರೆಯಲು ಬಳಕೆ ಮಾಡಿದ್ದಾರೆ.ತಂಜಾವೂರಿನಲ್ಲಿ ಕೂಡ ಈ ಲಿಪಿಯಲ್ಲಿ ಬರೆದ ಒಂದೂವರೆ ಸಾವಿರಕ್ಕಿಂತ ಹೆಚ್ಚಿನ ಸಂಸ್ಕೃತ ವೇದ ಮಂತ್ರಗಳ ಹಸ್ತಪ್ರತಿಗಳು ಸಿಕ್ಕಿದ್ದು,ಅಲ್ಲಿನ ಬ್ರಾಹ್ಮಣರು ಕೂಡ ಈ ಲಿಪಿಯನ್ನು ಬಳಕೆ ಮಾಡುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ.ಇಲ್ಲೆಲ್ಲ ಈ ಲಿಪಿಯನ್ನು ತಿಗಳಾರಿ ಎಂದು ಕರೆದಿದ್ದಾರೆ. ತುಳುನಾಡಿನಲ್ಲಿ ಕೂಡ ಸಂಸ್ಕೃತ ಬರೆಯಲು ಬಳಕೆಯಾದ ಈ ಲಿಪಿಯನ್ನು  ಕೆಲವೆಡೆಗಳಲ್ಲಿ ತುಳು ಲಿಪಿ ಎಂದು ಕರೆದಿದ್ದಾರೆ.ಆದರೆ ಹೆಸರು ತುಳು ಲಿಪಿ ಎಂದಿದ್ದರೂ ಇದು ತುಳು ಭಾಷೆಯ ಬರವಣಿಗೆಗಾಗಿ ರೂಪುಗೊಂಡ ಲಿಪಿಯಲ್ಲ ,ಇದು ಸಂಸ್ಕೃತ ಭಾಷೆಯ ವೇದ ಮಂತ್ರಗಳನ್ನು ಬರೆಯಲು ತಮಿಳು  ಬ್ರಾಹ್ಮಣರು ಬಳಕೆಗೆ ತಂದ ಲಿಪಿ  ಎಂದು ಆಂತರಿಕ ಹಾಗೂ ಬಾಹ್ಯ ಸಾಕ್ಷ್ಯಗಳ ಆಧಾರಗಳ ಮೇಲೆ ಖಂಡಿತವಾಗಿ ಹೇಳಬಹುದು
ತಿಗಳಾರಿ ಲಿಪಿ ಸಂಸ್ಕೃತ ಭಾಷೆಯ ಬರವಣಿಗಾಗಿ ರೂಪುಗೊಂಡ ಲಿಪಿ

ಬಾಹ್ಯ ಸಾಕ್ಷ್ಯಗಳು

1

ತಿಗಳಾರಿ ಲಿಪಿಯಲ್ಲಿ ಹದಿನೈದು ಸಾವಿರದಷ್ಟು ತಾಳೆ ಗರಿ ಗ್ರಂಥಗಳು ಲಭಿಸಿದ್ದು ಇವುಗಳಲ್ಲಿ 99.9% ಗ್ರಂಥಗಳು ಸಂಸ್ಕೃತ ಭಾಷೆಯ ಗ್ರಂಥಗಳಾಗಿವೆ‌.

2

ಕೇವಲ ಆರು ತುಳು ಭಾಷೆಯ ಗ್ರಂಥಗಳು, ಆರೇಳು ಕನ್ನಡ ಭಾಷೆಯ ಗ್ರಂಥಗಳು ಮಾತ್ರ ಈ ಲಿಪಿಯಲ್ಲಿ ಲಭ್ಯವಾಗಿವೆ‌

3

ತುಳುನಾಡಿನಲ್ಲಿ ಕೂಡ  ಒಂದೂವರೆ ಸಾವಿರದಷ್ಟು ಈ ಲಿಪಿಯ  ತಾಳೆಗರಿ ಗ್ರಂಥಗಳು ಲಭಿಸಿದ್ದು ಇವುಗಳಲ್ಲಿ ಆರು ತುಳು ಭಾಷೆಯ ಗ್ರಂಥಗಳು, ಒಂದೆರಡು ಕನ್ನಡ ಭಾಷೆಯ ಗ್ರಂಥಗಳು ಬಿಟ್ಟರೆ ಉಳಿದವೆಲ್ಲವೂ ಸಂಸ್ಕೃತ ಭಾಷೆಯ ಗ್ರಂಥಗಳಾಗಿವೆ.

4

ತುಳುನಾಡಿನ ಹೊರ ಭಾಗದಲ್ಲಿ ಎಂದರೆ ಉತ್ತರ ಕನ್ನಡ, ಶಿವಮೊಗ್ಗ, ಮಲೆನಾಡು ಪರಿಸರದಲ್ಲಿ ಕೂಡ ಈ ಲಿಪಿ ಬಳಕೆಯಲ್ಲಿದ್ದು ಇದನ್ನು ಇಲ್ಲಿ ತಿಗಳಾರಿ ಲಿಪಿ ಎಂದು ಕರೆದಿದ್ದಾರೆ.

5

ತುಳುನಾಡಿನ ಹೊರಭಾಗದಲ್ಲಿ ಸಿಕ್ಕ  ಈ ಲಿಪಿಯ ಕೃತಿಗಳು ಸಂಸ್ಕೃತ ಭಾಷೆಯದ್ದೇ ಆಗಿವೆ.

ಕರ್ನಾಟಕದ ಮೈಸೂರಿನಲ್ಲಿ ಸಿಕ್ಕ ಶಾಸನವೊಂದರಲ್ಲಿ ಸಂಸ್ಕೃತ ಬರೆಯಲು ತಿಗುಳಾರಿ ಲಿಪಿಯನ್ನು ಕಲಿಸುತ್ತಿದ್ದ ಬಗ್ಗೆ ದಾಖಲೆಯಿದೆ ಎಂದು ಲಿಪಿ ತಜ್ಞರಾದ ಡಾ.ವೆಂಕಟೇಶ ಜೋಯಿಸ್,ಕೆಳದಿ ಇವರು ತಿಳಿಸಿದ್ದಾರೆ.

6

ಹದಿನೈದನೇ ಶತಮಾನದ ಒಂದು ಕೃತಿಯಲ್ಲಿ ತಿಗಳಾರಿ ಲಿಪಿಯ ವರ್ಣಮಾಲೆಯಿದ್ದು ,ಅದನ್ನು ತಿಗಳಾರಿ ವರ್ಣಮಾಲಾ ಎಂದು ಕರೆದಿರುವ ಬಗ್ಗೆ ಡಾ.ವೆಂಕಟೇಶ ಜೋಯಿಸ್ ಅವರು ಮಾಹಿತಿ ನೀಡಿದ್ದಾರೆ‌.

7

ತೀರ್ಥಹಳ್ಳಿಯ ರಾಮಚಂದ್ರಾಪುರ ಮಠದಲ್ಲಿ ತಿಗಳಾರಿ ಲಿಪಿಯಲ್ಲಿ ಕನ್ನಡ ಭಾಷೆಯಲ್ಲಿ ಬರೆದಿರುವ ಐವತ್ತಕ್ಕೂ ಹೆಚ್ಚಿನ ಪತ್ರಗಳು ಸಿಕ್ಕಿವೆ‌

ಆಂತರಿಕ ಸಾಕ್ಷ್ಯಗಳು

1

ತಿಗಳಾರಿ ಲಿಪಿ ಸಂಸ್ಕೃತ ಬರೆಯಲು ಬಳಕೆಗೆ ಬಂದಿದ್ದು ಸಂಸ್ಕೃತ ಭಾಷೆಯ ಎಲ್ಲ ಸ್ವರ ವ್ಯಂಜನಗಳಿಗೆ/ ಐವತ್ತು ಅಕ್ಷರಗಳಿಗೆ ಇವುಗಳಲ್ಲಿ  ಲಿಪಿ ಸಂಕೇತ/ಅಕ್ಷರ ವಿನ್ಯಾಸಗಳಿವೆ.

2

ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಮತ್ತು ಲೃ ಎನ್ನುವ ವಿಶಿಷ್ಟ ಸ್ವರಗಳಿಗೆ ತಿಗಳಾರಿ ಲಿಪಿಯಲ್ಲಿ ರೇಖಾ ಸಂಕೇತ/ ಅಕ್ಷರ ವಿನ್ಯಾಸವಿದೆ.

3

ಸಂಸ್ಕೃತ ಭಾಷೆಯಲ್ಲಿ ಹ್ರಸ್ವ ,ಎ ಒ ಸ್ವರಗಳು ಇಲ್ಲ.ಆದ್ದರಿಂದ ಸಂಸ್ಕೃತ ಭಾಷೆಯನ್ನು ಬರೆಯಲು ಬಳಕೆ ತಂದ ತಿಗಳಾರಿ ಲಿಪಿಯಲ್ಲಿ ಕೂಡ ಹ್ರಸ್ವ ಎ ಒ ಸ್ವರಗಳಿಗೆ ರೇಖಾ ಸಂಕೇತ/ ಅಕ್ಷರಗಳು ಇಲ್ಲ
ಇದು ತುಳು ಭಾಷೆಯ ಸ್ವಂತ ಲಿಪಿಯಲ್ಲ

ಬಾಹ್ಯ ಸಾಕ್ಷ್ಯಗಳು

1

ಈ ಲಿಪಿಯಲ್ಲಿ ಹದಿನೈದು ಸಾವಿರದಷ್ಟು ಸಂಸ್ಕೃತ ಭಾಷೆಯ ತಾಳೆ ಗರಿ ಗ್ರಂಥಗಳು ಲಭಿಸಿದ್ದು ಕೇವಲ ಆರು ಮಾತ್ರ ತುಳು ಭಾಷೆಯ ಗ್ರಂಥಗಳಾಗಿವೆ‌.

2

ಇದು  ತುಳುನಾಡಿನ ಹೊರಗೆ ತುಳುಭಾಷೆ ಪ್ರಚಲಿತವಿಲ್ಲದೇ ಇರುವ ತಮಿಳುನಾಡಿನ ತಂಜಾವೂರು ,ಕಂಚಿ ಹಾಗೂ ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗ, ಮಲೆನಾಡು ಪರಿಸರದಲ್ಲಿ ಕೂಡ ಸಂಸ್ಕೃತ ಬರೆಯಲು ಬಳಕೆಯಾಗುತ್ತಿದ್ದು,ಇಲ್ಲೆಲ್ಲ ಇದನ್ನು ತಿಗಳಾರಿ ಲಿಪಿ ಎಂದು ಕರೆದಿದ್ದಾರೆ.

3

ತುಳುನಾಡಿನ ಹವ್ಯಕ ಬ್ರಾಹ್ಮಣರು, ಚಿತ್ಪಾವನ,ಕರಾಡ ಬ್ರಾಹ್ಮಣರು ಕೂಡ ಈ ಲಿಪಿಯನ್ನು ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಬಳಸಿದ್ದು ,ಇವರು ಈ ಲಿಪಿಯನ್ನು ತಿಗಳಾರಿ ಎಂದು ಕರೆದಿದ್ದಾರೆ .

4

ತುಳುನಾಡು ಕನ್ನಡ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಆದ್ದರಿಂದ ತುಳು ಭಾಷೆಯಲ್ಲಿ ಆಡಳಿತ ,ಪತ್ರ ವ್ಯವಹಾರಗಳು ಇರಲಿಲ್ಲ. ತುಳು ಭಾಷೆಯಲ್ಲಿ ಸಾಹಿತ್ಯ ರಚನೆ ಕೂಡ ತೀರಾ ಕಡಿಮೆ ಇತ್ತು‌( ಆರು ಕೃತಿಗಳು ಮಾತ್ರ ಸಿಕ್ಕಿವೆ) .ಹಾಗಾಗಿ ತುಳು ಭಾಷೆಯಲ್ಲಿ ಬರವಣಿಗೆ ಇರದ ಕಾರಣ ತುಳು ಭಾಷೆಗೆ ಸ್ವಂತ ಲಿಪಿ ರೂಪುಗೊಳ್ಳುವ ಸಾಧ್ಯತೆಯೇ ಇರಲಿಲ್ಲ.

ಆಂತರಿಕ ಸಾಕ್ಯಗಳು

1

ತುಳು ಭಾಷೆಯು ಮೂಲ ದ್ರಾವಿಡ ಭಾಷೆಯಿಂದ ಕವಲೊಡೆದ ಭಾಷೆಯಾಗಿದ್ದು ಸಂಸ್ಕೃತ ಭಾಷೆಯಿಂದ ಭಿನ್ನವಾಗಿದೆ‌.ಇದರಲ್ಲಿ ಹ್ರಸ್ವ ಎ ಒ ಧ್ವನಿಗಳಿವೆ‌.ತಿಗಳಾರಿ ಲಿಪಿ ತುಳು ಭಾಷೆಯ ಬರವಣಿಗೆಗಾಗಿ ರೂಪುಗೊಂಡ ಲಿಪಿಯಾಗಿದ್ದರೆ ಇದರಲ್ಲಿ ಹ್ರಸ್ವ ಎ ಒ ಸ್ವರಗಳಿಗೆ ಅಕ್ಷರವಿರುತ್ತಿತ್ತು.ಆದರೆ ಈ ಲಿಪಿಯಲ್ಲಿ ಹ್ರಸ್ವ ಎ ಒ  ಅಕ್ಷರಗಳಿಲ್ಲ.

2

ತುಳು ಭಾಷೆಯ ವಿಶಿಷ್ಟ  ಧ್ವನಿಗಳಿಗೆ ಇದರಲ್ಲಿ ಅಕ್ಷರ ವಿನ್ಯಾಸವಿಲ್ಲ.

3

ಯಾವುದೇ ಲಿಪಿ ತನ್ನಿಂತಾನಾಗಿಯೇ ರೂಪುಗೊಳ್ಳುವುದಿಲ್ಲ.ಅದಕ್ಕೆ ಮೂಲವಾಗಿ ಇನ್ನೊಂದು ಲಿಪಿ ಇರುತ್ತದೆ‌.ಅದು ಕಾಲಾಂತರದಲ್ಲಿ ಬದಲಾಗುತ್ತಾ ಮೂಲದಿಂದ ಭಿನ್ನವಾಗಿ ಇನ್ನೊಂದು ಲಿಪಿಯಾಗಿ ಗುರುತಿಸಲ್ಪಡುತ್ತದೆ‌.ಚಿತ್ರ ಲಿಪಿಯಿಂದ ಬ್ರಾಹ್ಮೀ ಲಿಪಿ ರೂಪುಗೊಂಡಿತು.ಅದರಿಂದ ತಮಿಳು ಲಿಪಿ ಹುಟ್ಟಿತು ‌ಅದು ಸಂಸ್ಕೃತ ಭಾಷೆಯ ಬರವಣಿಗೆಗಾಗಿ ಪರಿಷ್ಕೃತ ಗೊಂಡು ಗ್ರಂಥ ಲಿಪಿ ಆಯಿತು. ಇದನ್ನು ತಮಿಳು ಬ್ರಾಹ್ಮಣರು ರೂಪಿಸಿದ ಕಾರಣ ತಿಗಳಾರಿ ಲಿಪಿ ಎಂಬ ಹೆಸರು ಬಂತು ತಿಗಳಾರಿ ಲಿಪಿ ಆಯಿತು. ತಮಿಳರನ್ನು ತಿಗುಳರು ಎಂದು ಕರೆಯುತ್ತಾರೆ ‌ತಿಗುಳ/ ತಿಗಳರು ಬಳಕೆಗೆ ತಂದ ಲಿಪಿ ತಿಗಳಾರಿ ಎಂಬ ಹೆಸರನ್ನು ಪಡೆಯಿತು. ‌ ಒಂದೊಮ್ಮೆ ಇದು ತುಳು ಭಾಷೆಯ ಲಿಪಿಯಾಗಿದ್ದರೆ ಅದಕ್ಕೆ ಒಂದು ಮೂಲ ಲಿಪಿ ಇರಲೇಬೇಕಿತ್ತು‌.ಆದರೆ  ತುಳುನಾಡಿನಲ್ಲಿ ಇದಕ್ಕೆ ಮೂಲವಾಗಿರುವ,ಇದನ್ನು ಹೋಲುವ ಯಾವುದೇ ಲಿಪಿ ಇಲ್ಲ ‌.
ಇದು ತುಳು ಭಾಷೆಯ ಬರವಣಿಗೆ ಸೂಕ್ತವಾಗಿಲ್ಲ

ಇದು ಸಂಸ್ಕೃತ ಭಾಷೆಯ ಬರವಣಿಗೆಗಾಗಿ ರೂಪುಗೊಂಡಿದ್ದು ಸಂಸ್ಕೃತ ಭಾಷೆಯಲ್ಲಿ ಇಲ್ಲದಿರುವ ಆದರೆ ತುಳುಭಾಷೆಯಲ್ಲಿ ಇರುವ ಹ್ರಸ್ವ ಎ ಒ ಗಳು ಇಲ್ಲ.

ಇದರಿಂದಾಗಿ  ಈ ಲಿಪಿಯಲ್ಲಿ ತುಳು ಭಾಷೆ ಎಂದು ಬರೆಯಲು ಸಾಧ್ಯವೇ ಇಲ್ಲ ಬದಲಿಗೆ ತುಳು ಭಾಷೇ ಎಂದು ಬರೆಯಬೇಕಾಗುತ್ತದೆ ಎಣ್ಣೆ ಬದಲು ಏಣ್ಣೆ ಪೊಣ್ಣು ಬದಲು ಪೋಣ್ಣು ಡೆನ್ನಾನ ಬದಲು ಡೇನ್ನಾನ ಎಡ್ಡೆ ಬದಲು ಏಡ್ಡೆ ,ತೆನೆ ಬದಲು ತೇನೆ ಕೊರಳು ಬದಲು ಕೋರಳು ಕೊಪ್ಪ ಬದಲು ಕೋಪ್ಪ ಕೊರಗಜ್ಜ ಬದಲು ಕೋರಗಜ್ಜ ಕೆರೆ ಬದಲು ಕೇರೆ  ಬರೆಯಬೇಕಾಗುತ್ತದೆ ಕೆರೆ ಕೇರೆಯಾದಾಗ ಕೆಬಿ ಕೇಬಿಯಾಗಿ,ಕೆಪ್ಪೆ ಕೇಪ್ಪೆಯಾಗಿ ಕೊಡಿ ಕೋಡಿಯಾಗಿ ,ಎರು ಏರು ಅಗಿ ,ಎರ್ಮ್ಮೆ ಏರ್ಮ್ಮೆಯಾಗಿ ಎಣ್ಮೆ ಏಣ್ಮೆಯಾಗಿ ಕೆಸರ್ ಕೇಸರ್ ಆಗಿ ರಾಮೆ ರಾಮೇ ಆಗಿ ಕೃಷ್ಷಪ್ಪೆ ಕೃಷ್ಣಪ್ಪೇ ಆಗಿ , ಪೊಸತು ಪೋಸತು ಪೊರ್ಲು ಬದಲು‌ ಪೋರ್ಲು ಆಗಿ ,ಬೆರ್ಮರ್ ಬೇರ್ಮರ್ ಆಗಿ ,ಪೊಡಿ ಬದಲು ಪೋಡಿಯಾಗಿ ಬೊಂಡ ಬದಲು ಬೋಂಡ ಅಗಿ ಕೊಡೆ ಕೋಡೆಯಾಗಿ ಬೆಲೆ ಬೇಲೆಯಾಗಿ ,ಕೆದು ಕೇದುವಾಗಿ ,ಕೆಮ್ಮು ಕೇಮ್ಮುವಾಗಿ ,ಎಡೆ ಏಡೆಯಾಗಿ ಅರ್ಥ ಅನರ್ಥವಾಗಿಬಿಡುತ್ತದೆ  ಯಾಕೆಂದರೆ ಈ ಲಿಪಿಯಲ್ಲಿ ಹ್ರಸ್ವ ಎ ಒ ಗಳು ಇಲ್ಲ‌ ಹೀಗೆ ಬಳಸಿದರೆ  ತುಳು ಭಾಷೆ ತನ್ನ ಮೂಲ ರೂಪವನ್ನು ಕಳೆದುಕೊಂಡು ಅಪಭ್ರಂಶ ಗೊಳ್ಳುತ್ತದೆ ಹಾಗಾಗಿ ಈಗ ಸಂಸ್ಕೃತ ವೇದ ಮಂತ್ರಗಳ ಬಳಕೆಗಾಗಿ ರೂಪುಗೊಂಡ ತಿಗಳಾರಿ ಲಿಪಿಯನ್ನು ತುಳುವಿಗೆ ಬಳಸುವುದೇ   ಆಗಿದ್ದಲ್ಲಿ  ತುಳು ಭಾಷೆಗೆ ಸೂಕ್ತವಾಗುವಂತೆ  ಪರಿಷ್ಕರಿಸಿ ಕಲಿಸುವ ಬಳಸುವ ಅಗತ್ಯವಿದೆ.


ತಿಗಳಾರಿ ಲಿಪಿಯನ್ನು ಉಡುಪಿ ಕಾಸರಗೋಡಿನ ಕೆಲವೆಡೆ ತುಳು ಲಿಪಿ ಎಂದು ಕರೆದಿದ್ದರೂ ಇದು ತುಳು ಭಾಷೆಯ ಬರವಣಿಗೆಗೆ ಬಳಕೆಗೆ ಬಂದ ಲಿಪಿಯಲ್ಲ.
ತುಳು ಭಾಷೆಯ ಬರವಣಿಗೆಗಾಗಿ ರೂಪುಗೊಂಡ ಲಿಪಿ ಇದಾಗಿದ್ದರೆ ತುಳು ಭಾಷೆಯ ಎಲ್ಲಾ ಸ್ವರ ವ್ಯಂಜನಗಳ ಅಭಿವ್ಯಕ್ತಿ ಗೆ ಇದರಲ್ಲಿ ರೇಖಾ ಸಂಕೇತ/ ಅಕ್ಷರಗಳು ಇರುತ್ತಿದ್ದವು. 
ತುಳು ಭಾಷೆಯಲ್ಲಿ ಬರವಣಿಗೆ ಇರಲಿಲ್ಲ ಅಥವಾ  ತೀರಾ ಕಡಿಮೆ ಇತ್ತು.ಅಲ್ಲದೇ ತಿಗಳಾರಿ ಲಿಪಿಯಲ್ಲಿ ಸಿಕ್ಕ ಸುಮಾರು ಹದಿನೈದು ಸಾವಿರ  ಕೃತಿಗಳೆಲ್ಲವೂ ಸಂಸ್ಕೃತ ಭಾಷೆಯದ್ದಾಗಿವೆ( ಹತ್ತು ಹನ್ನೆರಡು ಕನ್ನಡ ,ಏಳು ತುಳು ಭಾಷೆಯ ಕೃತಿಗಳನ್ನು ಹೊರತು ಪಡಿಸಿ ).
"ತುಳು ಭಾಷೆಗೆ ಲಿಪಿಯಿಲ್ಲ,ತೌಳವ ಬ್ರಾಹ್ಮಣರು ಬಳಕೆಗೆ ತಂದ ಕಾರಣ ಇದಕ್ಕೆ ತುಳು ಲಿಪಿ ಎಂಬ ಹೆಸರು ಬಂದಿದೆ.ಇದನ್ನು ತುಳುನಾಡಿನ ಹೊರಭಾಗದಲ್ಲಿ ತಿಗಳಾರಿ ಎಂದು ಕರೆಯುತ್ತಾರೆ" ಎಂದು ಬನ್ನಂಜೆ ಗೋವಿಂದಾಚಾರ್ಯರು ಹೇಳಿದ್ದಾರೆ.
 ತುಳು ಹಸ್ತ ಪ್ರತಿ ಗ್ರಂಥಗಳನ್ನು ಶೋಧನೆ ಮಾಡಿ‌ ಪ್ರಕಟಿಸಿರುವ ಡಾ.ವೆಂಕಟರಾಜ ಪುಣಿಚಿತ್ತಾಯರು ಆರ್ಯ ಎಳುತ್ತು ( ತಿಗಳಾರಿ ಲಿಪಿ) ಮತ್ತು ತುಳು ಲಿಪಿ ಒಂದೇ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Copy rights reserved© Dr Lakshmi G Prasad

ಪ್ರಸ್ತುತ  ತಿಗಳಾರಿ ಲಿಪಿ/ತುಳು ಲಿಪಿಯನ್ನು ತುಳು ಭಾಷೆಯ ಲಿಪಿ ಎಂದು ಅನೇಕರು ತಪ್ಪು ತಿಳಿದಿದ್ದಾರೆ .ಹೆಸರು ತುಳು ಎಂದು ಇದ್ದ ಮಾತ್ರಕ್ಕೆ ಅದು ತುಳು ಭಾಷೆಯ ಲಿಪಿ ಎಂದಾಗುವುದಿಲ್ಲ.ಹಾಗೆಯೇ ತಿಗಳಾರಿ ಎಂಬ ಭಾಷೆ ಇದೆ‌.ಈ ಲಿಪಿಗೆ ತಿಗಳಾರಿ ಎಂಬ ಹೆಸರಿರುವುದಾದರೂ ಇದು ತಿಗಳಾರಿ ಭಾಷೆಯ ಲಿಪಿಯಲ್ಲ ‌.ಇದು ಸಂಸ್ಕೃತ ಭಾಷೆಯ ಬರವಣಿಗೆಗಾಗಿ ತಮಿಳು ಬ್ರಾಹ್ಮಣರು ರೂಪಿಸಿದ ಲಿಪಿ.
 ತಿಗಳಾರಿ ಲಿಪಿಗೆ ತುಳುನಾಡಿನಲ್ಲಿ  ಕೆಲವೆಡೆ ತುಳು ಲಿಪಿ ಎಂಬ ಹೆಸರಿರುವುದಾದರೂ ಅದು ತುಳುಭಾಷೆಯ ಲಿಪಿಯಲ್ಲ ಮತ್ತು ಪ್ರಸ್ತುತ ಅದು ತುಳು ಭಾಷೆಯ ಬರವಣಿಗೆಗೆ ಸೂಕ್ತವಾಗಿಲ್ಲ‌.
ಹಾಗಾಗಿ ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ, ಬೇರೆ ಬೇರೆಯಲ್ಲ,ಮತ್ತು ಇದು ತುಳು ಭಾಷೆಯ ಬರವಣಿಗೆಗಾಗಿ ಬಳಕೆಗೆ ಬಂದ ಲಿಪಿಯಲ್ಲ .ಇದು ಸಂಸ್ಕೃತ ಭಾಷೆಯ ಬರವಣಿಗೆಗಾಗಿ ತಮಿಳರು ಬಳಕೆಗೆ ತಂದ ಲಿಪಿ  ಎಂದು ಸ್ಪಷ್ಟವಾಗಿ ಹೇಳಬಹುದು .ಇದರಲ್ಲಿ ಬಹುತೇಕ ಎಲ್ಲಾ ಕೃತಿಗಳೂ ಕೂಡ ವೇದ ಮಂತ್ರಗಳೇ ಆಗಿವೆ.ಪ್ರಾಚೀನ ಕಾಲದಲ್ಲಿ ವೇದಾಧ್ಯಯನ ವನ್ನು ಮಾಡುತ್ತಿದ್ದವರು ಬ್ರಾಹ್ಮಣರೇ ಆದ ಕಾರಣ   ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಈ ಲಿಪಿಯನ್ನು ಬಳಕೆಗೆ ತಂದವರು ಕೂಡ ಬ್ರಾಹ್ಮಣರೇ ಎಂದು ಸ್ಪಷ್ಟವಾಗುತ್ತದೆ‌.
Copy rights reserved© Dr Lakshmi G Prasad
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜು
ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ

ಮೊಬೈಲ್ 9480516684

Wednesday, 14 March 2018

ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ- ಅಮರ ಸುಳ್ಯದ ಕ್ರಾಂತಿ -©ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು

ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ- ಅಮರ ಸುಳ್ಯದ ಕ್ರಾಂತಿ
© ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮೊಬೈಲ್ 9480516684
ಕೋಲಾರ ಜಿಲ್ಲೆಯ ಮುಳಬಾಗಿಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 14-03-2018 ರಂದು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ

1857ರಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯ ನೇತೃತ್ವದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಅದಕ್ಕೂ ಮೊದಲು ಬ್ರಿಟಿಷರ ದಬ್ಬಾಳಿಕೆಯನ್ನು ಯಾರೂ ಪ್ರಶ್ನಿಸಿಲ್ಲ ಎಂದರ್ಥವಲ್ಲ. ಬ್ರಿಟಿಷ್ ಗವರ್ನರ್ ಜನರಲ್ ಡಾಲ್‍ಹೌಸಿ ಬಳಕೆಗೆ ತಂದ ನಿಯಮಾವಳಿಯ ಪ್ರಕಾರ ಮಕ್ಕಳಿಲ್ಲದ ಭಾರತೀಯ ರಾಜರುಗಳು ಬ್ರಿಟಿಷರ ಅನುಮತಿ ಇಲ್ಲದೆ ದತ್ತು ತೆಗೆದುಕೊಳ್ಳುವಂತಿರಲಿಲ್ಲ. ದತ್ತು ತೆಗೆದುಕೊಳ್ಳುವುದಕ್ಕೆ ಮೊದಲೇ ರಾಜನು ಸತ್ತರೆ ಅಥವಾ ಆತನಿಗೆ ದತ್ತು ತೆಗೆದುಕೊಳ್ಳಲು ಅನುಮತಿ ಸಿಗದೆ ಇದ್ದರೆ ಆ ರಾಜನ ರಾಜ್ಯವು ಬ್ರಿಟಿಷರಿಗೆ ಸೇರುತ್ತಿತ್ತು.  ಡಾಲ್‍ಹೌಷಿ ತಂದ ನಿಯಮದಿಂದಾಗಿ ಕೊಡಗು ರಾಜ್ಯ ಕೂಡ ಬ್ರಿಟಿಷರ ಪಾಲಾಗಬೇಕಾಗುತ್ತದೆ.

ಕೊಡಗಿನ ಕೊನೆಯ ಅರಸ ಚಿಕ್ಕವೀರ ರಾಜೇಂದ್ರನು ಆಡಳಿತ ನಡೆಸುತ್ತಿದ್ದಾಗ ಸಮಯವನ್ನು ಹೊಂಚುಹಾಕುತ್ತಿದ್ದ ಬ್ರಿಟಿಷರು ಚಿಕ್ಕವೀರ ರಾಜೇಂದ್ರವನ್ನು ಪದಚ್ಯುತಗೊಳಿಸುತ್ತಾರೆ. ಕೊಡಗಿನ ಅರಸರ ವಂಶಕ್ಕೆ ಸೇರಿದವರು ಯಾರು ಇಲ್ಲದ್ದರಿಂದ ಕೊಡಗು ರಾಜ್ಯವನ್ನು  ಬ್ರಿಟಿಷರು ವಶಪಡಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಬೆಳ್ಳಾರೆ, ಸುಳ್ಯ ಸೇರಿದಂತೆ ಪಂಜ ಸೀಮೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗಿನ ಭಾಗವಾಗಿದ್ದ ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿದ್ದು ಸುಳ್ಳದ ಜನತೆಗೆ ಇಷ್ಟದ ವಿಚಾರವಾಗಿರಲಿಲ್ಲಿ. ಕೊಡಗರಸರ ಕಾಲದಲ್ಲಿ ಭತ್ತ, ತೆಂಗಿನಕಾಯಿ ಮೊದಲಾದ ವಸ್ತುಗಳ ರೂಪದಲ್ಲಿದ್ದ ಭೂಕಂದಾಯವನ್ನು ಬ್ರಿಟಿಷರು ನಗದಿನ ರೂಪದಲ್ಲಿ ಕೊಡಬೇಕೆಂದು ನಿಯಮ ತಂದರು. ಇದರಿಂದಾಗಿ ಸುಳ್ಯದ ರೈತಾಪಿಜನರು ತೀವ್ರವಾಗಿ ಅಸಮಾಧಾನಗೊಂಡರು. ಸುಳ್ಯದ ಜನರು ಬ್ರಿಟಿಷರನ್ನು ತೊಲಗಿಸಿ ಕೊಡಗನ್ನು ವಶಪಡಿಸಿಕೊಂಡು ಕೊಡಗಿನ ಆಡಳಿತವನ್ನು ಪುನರಾರಂಭಿಸಬೇಕೆಂದು ಒಮ್ಮತದಿಂದ ನಿರ್ಧರಿಸಿದರು. ಇದರ ಫಲವಾಗಿ ಸುಳ್ಯ ಬೆಳ್ಳಾರೆ ಪರಿಸರದಲ್ಲಿ ಒಂದು ಸ್ವಾತಂತ್ರ್ಯ ಸಮರ ಆರಂಭವಾಗಿ 1837 ಎಪ್ರಿಲ್ 5ರಂದು ಮಂಗಳೂರಿನ ಕಲೆಕ್ಟರನ ಆಫೀಸಿನ ಎದುರು ಸ್ವತಂತ್ರ ಧ್ವಜವನ್ನು ಊರಿ, ಹದಿಮೂರು ದಿನಗಳ ಕಾಲ ಕೊಡಗು, ಕಾಸರಗೋಡು, ದ.ಕ.ಜಿಲ್ಲೆಯನ್ನೊಳಗೊಂಡ ಪ್ರದೇಶವು ಸ್ವಾತಂತ್ಯದ ಸಿಹಿಯನ್ನು ಅನುಭವಿಸಿತು. ಇದರ ಫಲವಾಗಿ ಸ್ವತಂತ್ರ ನೆಲಕ್ಕಾಗಿ, ತಾಯ್ನಾಡಿಗಾಗಿ ಮೊದಲ ಸ್ವಾತಂತ್ರ್ಯ ಹೋರಾಟ ನಡೆಯಿತು. ಆದರೆ ಅದನ್ನು ಬ್ರಿಟಿಷರು ಕಲ್ಯಾಣಪ್ಪನ ಕಾಟುಕಾಯಿ ಎಂದು ಕರೆದರು.

ಡಿ. ಎನ್. ಕೃಷ್ಣಯ್ಯನವರು ಹೇಳುವ ಪ್ರಕಾರ 1833ರಲ್ಲಿ ಅಪರಂಪರನೆಂಬ ಜಂಗಮನೊಬ್ಬ ತಾನು ಕೊಡಗಿನ ಲಿಂಗರಾಜೇಂದ್ರ ಒಡೆಯರ ಅಣ್ಣ ಅಪ್ಪಾಜಿಯ ಮಗ ವೀರಪ್ಪ ಒಡೆಯ ಎಂದು ಹೇಳಿಕೊಂಡಾಗ ಕೊಡಗಿನ ಜನರು ಅದನ್ನು ನಂಬುತ್ತಾರೆ. ಆದರೆ ಬ್ರಿಟಿಷರು ಆತನು ರಾಜವಂಶದವನಲ್ಲವೆಂದು ತಿಳಿದು 1835ರಲ್ಲಿ ಆತನನ್ನು ಬಂಧಿಸುತ್ತಾರೆ.

ಅಪರಂಪರನನ್ನು ಬಂಧಿಸಿದಾಗ ಕಲ್ಯಾಣಸ್ವಾಮಿ ಎಂಬಾತನು ತಾನು ಅಪ್ಪಾಜಿಯ ಎರಡನೇ ಮಗ ನಂಜುಂಡಪ್ಪ ಎಂದು ಹೇಳಿಕೊಂಡು ಸುಳ್ಯದಲ್ಲಿ ಜನರು ದಂಗೆ ಏಳುವ ಲಕ್ಷಣ ಕಾಣಿಸಿಕೊಂಡಾಗ ಅವನು ಕೊಡಗಿನವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದನು.ಬ್ರಿಟಿಷರಿಗೆ ಇದು ತಿಳಿದು ಆತನನ್ನು 1837ರಲ್ಲಿ ಬಂಧಿಸಿದರು.

ಸುಳ್ಯದ ರೈತಾಪಿ ಜನರು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಪುಟ್ಟ ಬಸಪ್ಪನೆಂಬ ಜಂಗಮನನ್ನು ಕಲ್ಯಾಣಸ್ವಾಮಿ ಎಂದು ಹೇಳಿ ನಂಬಿಸಿ ಕೆದಂಬಾಡಿ ರಾಮಗೌಡರ ಮನೆಗೆ ಕರೆತಂದು ಆತನನ್ನು ಕಲ್ಯಾಣಸ್ವಾಮಿ ಎಂದು ಬಿಂಬಿಸಿದರು. ರಾಮಗೌಡರಿಗೆ ಓರ್ವ ಬ್ರಿಟಿಷ್ ಅಮಲ್ದಾರನೊಡನೆ ದ್ವೇಷವಿದ್ದು ಆತನನ್ನು ರಾಮಗೌಡರು ಕೊಲ್ಲುತ್ತಾರೆ. ಇದನ್ನೇ ಮಹತ್ಕಾರ್ಯವೆಂದು ಭಾವಿಸಿದ ಸುಳ್ಯದ ಜನರು ದಂಗೆಯೇಳುವುದಕ್ಕೆ ಬೆಂಬಲಿಸಿದರು 1837 ಮಾರ್ಚ್ 30ರಂದು ಹೋರಾಟ ಆರಂಭವಾಯಿತು. ರಾಮಗೌಡರಿಗೆ ಕೂಜಗೋಡು ಮಲ್ಲಪ್ಪಗೌಡರ ಬೆಂಬಲ ದೊರೆಯಿತು. ಇಡೀ ಗೌಡ ಸಮುದಾಯ ಹೋರಾಟಕ್ಕೆ ಬೆಂಬಲ ನೀಡಿತು.

1837ರ ಮಾರ್ಚ್ 30ರಂದು ರಾಮಗೌಡರು ಬೆಳ್ಳಾರೆಗೆ ಕಲ್ಯಾಣಸ್ವಾಮಿಯನ್ನು (ಪುಟ್ಟ ಬಸಪ್ಪ) ಕರೆ ತರುತ್ತಾರೆ. ಬೆಳ್ಳಾರೆಯ ಕೋಟೆಯಲ್ಲಿ ಕಲ್ಯಾಣ ಸ್ವಾಮಿಗೆ ಪಟ್ಟಕಟ್ಟುತ್ತಾರೆ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡರು.ಅಲ್ಲಿ ಭಾರತದ ಸ್ವತಂತ್ರ ಧ್ವಜವನ್ನು ಹಾರಿಸುತ್ತ್ತಾರೆ . ಕೊಡಗಿನ ಬೇರೆ ಬೇರೆ ಭಾಗಗಳಿಗೆ ನಿರೂಪ ಕಳಿಸಿ  ಬೆಂಬಲ ಕೇಳಿದರು. ಬೆಳ್ಳಾರೆಯ ಬೀರಣ್ಣ ಬಂಟರ ನೇತೃತ್ವದಲ್ಲಿ ಒಂದು ಗುಂಪು ಸುಬ್ರಹ್ಮಣ್ಯ ಕಡೆಗೆ ಹೋಯಿತು. ಶ್ರೀ. ಕೆ.ಆರ್. ವಿದ್ಯಾಧರ ಮಡಿಕೇರಿ ಅವರು ‘ಕಂಚುಡ್ಕ ರಾಮಗೌಡ ಹಾಗೂ ಕುಡಕಲ್ಲು ಪುಟ್ಟಗೌಡರ ನೇತೃತ್ವದಲ್ಲಿ ಸೈನ್ಯವನ್ನು ಕುಂಬಳೆ ಕಾಸರಗೋಡಿಗೆ ಕಳುಹಿಸಲಾಯಿತು. ಇನ್ನೊಂದು ತಂಡ ಬಂಟ್ವಾಳ ಕಾರ್ಕಳಕ್ಕೆ ಮತ್ತು ಮತ್ತೊಂದು ತಂಡ ಉಪ್ಪಿನಂಗಡಿ ಬಿಸಲೆಗೆ ಹೋಯಿತೆಂದು’ ಅಭಿಪ್ರಾಯ ಪಟ್ಟಿದ್ದಾರೆ. ಡಿ.ಎನ್. ಕೃಷ್ಣಯನವರ ಪ್ರಕಾರ ಪುತ್ತೂರು, ಪಾಣೆ ಮಂಗಳೂರು ಮತ್ತು ಮಂಗಳೂರಿಗೆ ರಾಮಗೌಡ ಹಾಗೂ ಕಲ್ಯಾಣಸ್ವಾಮಿಯ ನೇತೃತ್ವದಲ್ಲಿ ದಂಡು ಹೊರಟಿತು. ಪುತ್ತೂರನ್ನು ವಶಪಡಿಸಿಕೊಂಡು ಪಾಣೆಮಂಗಳೂರಿಗೆ ಬಂದಾಗ ನಂದಾವರದ ಲಕ್ಷ್ಮಪ್ಪ ಬಂಗರಸನು ಕೂಡಿಕೊಂಡನು. 1837 ಎಪ್ರಿಲ್ 5ರಂದು ಮಂಗಳೂರನ್ನು ವಶಪಡಿಸಿಕೊಂಡು ಬಾವುಟಗುಡ್ಡದಲ್ಲಿ ಧ್ವಜ ಹಾರಿಸಿದರು ಇಲ್ಲಿ 13 ದಿನ ಆಡಳಿತ ನಡೆಸಿದರು.

ಕೊಡಗಿನಲ್ಲಿ ಗುಡ್ಡೆಮನೆ ಅಪ್ಪಯ್ಯ ಹೋರಾಟಕ್ಕೆ ಬೆಂಬಲ ನೀಡಿದರಾದರೂ ಬ್ರಿಟಿಷರ ಕುಮ್ಮಕ್ಕಿನಿಂದಾಗಿ ಇತರರಿಂದ ಬೆಂಬಲ ಸಿಗಲಿಲ್ಲ ಜೊತೆಗೆ ತಲಚೇರಿ-ಕಣ್ಣನ್ನೂರುಗಳಿಂದ ಬ್ರಿಟಿಷ್ ಸೈನ್ಯ ಮಂಗಳೂರು ತಲುಪಿತು. ಇವರಲ್ಲಿ ಸಾವಿರಾರು ಜನರು ಇದ್ದರೂ ಕೂಡ ಕೋವಿಯಂಥ ಮಾರಕಾಯುಧಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಆದ್ದರಿಂದ ಕಲ್ಯಾಣಸ್ವಾಮಿ ತಪ್ಪಿಸಿಕೊಂಡು ಕಡಬದತ್ತ ಸಾಗಿದನು. ಆಧುನಿಕ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತವಾದ ಬ್ರಿಟಿಷ್ ಪರವಾದ ಹಿಂದುಗಳೇ ಇದ್ದ ಸೈನ್ಯವನ್ನು ಎದುರಿಸಲು ಆಗದೆ ಸೋಲಬೇಕಾಯಿತು. ನಾಲ್ಕು ನಾಡಿನ ಉತ್ತು, ಶಾಂತಳ್ಳಿ ಮಲ್ಲಯ್ಯ ಗುಡ್ಡೆಮನೆ ಅಪ್ಪಯ್ಯ, ಚೆಟ್ಟಿಕುಡಿಯ, ಕುರ್ತುಕುಡಿಯ, ಲಕ್ಷ್ಮಣ ಬಂಗರಸ ಮೊದಲಾದವರು ಸೆರೆ ಸಿಕ್ಕಿದರು.

1837 ಮೇ ತಿಂಗಳ ಎರಡನೇ ವಾರದಲ್ಲಿ ಕಲ್ಯಾಣಸ್ವಾಮಿಯನ್ನು ಬ್ರಿಟಿಷ್ ಸೈನಿಕರು ಸೆರೆಹಿಡಿದು ಆತನನ್ನು ಮಡಿಕೇರಿಗೆ ಕರೆತರುತ್ತಾರೆ ಬ್ರಿಟಿಷರು ಕಲ್ಯಾಣಸ್ವಾಮಿ(ಪುಟ್ಟ ಬಸಪ್ಪ) ಮತ್ತು ಲಕ್ಷ್ಮಪ್ಪ ಬಂಗರಸ ಇವರನ್ನು ಮಂಗಳೂರಿನ ಬೀರ್ನಕಟ್ಟೆಯಲ್ಲಿ ಗಲ್ಲಿಗೇರಿಸಿದರು. ಗುಡ್ಡೆ ಮನೆ ಅಪ್ಪಯ್ಯರನ್ನು ಮಡಿಕೇರಿಯಲ್ಲಿ ಗಲ್ಲಿಗೇರಿಸುತ್ತಾರೆ. ಚೆಟ್ಟಿಕುಡಿಯ, ಕುರ್ತುಕುಡಿಯ ಮತ್ತು ಕೃಷ್ಣಯ್ಯ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಶಾಂತಯ್ಯ ಮಲ್ಲಳ್ಳಿ ಮೊದಲಾದವರಿಗೆ 7-14 ವರ್ಷಗಳ ತನಕ ಸೆರೆಮನೆವಾಸದ ಶಿಕ್ಷೆಯಾಯಿತು. ಡಾ ಪ್ರಭಾಕರ ಶಿಶಿಲರು ಹೇಳಿದಂತೆ ``ಸ್ವಾತಂತ್ರ್ಯ ಸಂಗ್ರಾಮವೆಂದಾಗ ಬೇಕಿದ್ದ ಈ ಹೋರಾಟವನ್ನು ಕಲ್ಯಾಣಪ್ಪನ ಕಾಟುಕಾಯಿ(ದರೋಡೆ) ಎಂದು ಬ್ರಿಟಿಷರು ಕರೆದರು.

ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡದ್ದು ಬಿಟ್ಟರೆ ಬೇರೆಯಾರ ಸಂಪತ್ತನ್ನು ಈ ಹೋರಾಟಗಾರರ ಗುಂಪು ದೋಚಲಿಲ್ಲ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಳ್ಳುವ ತನಕ ಬ್ರಿಟಿಷರಿಗೆ ಹೋರಾಟಕ್ಕಾಗಿ ಜನರ ಗುಂಪೊಂದು ಸಂಘಟಿತವಾದದ್ದು ತಿಳಿಯಲಿಲ್ಲ. ಖಜಾನೆಯನ್ನು ವಶಪಡಿಸಿಕೊಂಡಾಗ ಕೂಡ ದರೋಡೆ ಎಂದು ತಿಳಿದರೇ ಹೊರತು, ಅಲ್ಲೊಂದು ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆ ಸಿದ್ಧವಾದುದ್ದು ಬ್ರಿಟಿಷರ ಗಮನಕ್ಕೆ ಬರಲಿಲ್ಲ. ಅಷ್ಟರ ಮಟ್ಟಿಗಿನ ಮುಂಜಾಗರೂಕತೆಯನ್ನು ವಹಿಸಲಾಗಿತ್ತು. ಬೆಳ್ಳಾರೆಯ ಹಿರಿಯರ ಪ್ರಕಾರ ಪುತ್ತೂರು, ಸುಬ್ರಹ್ಮಣ್ಯ ಹಾಗೂ ಇತರೆಡೆಗೆ ದಂಡು ಸಾಗುವಾಗ ಮದುವೆ ದಿಬ್ಬಣದ ರೂಪದಲ್ಲಿ ಸಾಗುತ್ತಿತ್ತು. ಹೀಗೆ ಬ್ರಿಟಿಷ್ ಅಧಿಕಾರಿಗಳಿಗೆ ಚಳ್ಳೆಹಣ್ಣನ್ನು ತಿನ್ನಿಸಿದ್ದರು. ಈ ಹೋರಾಟಗಾರರು ತೆಂಗಿನ ಮಡಲಿನ ಕೊತ್ತಲಿಂಗೆಯ ಮಂಡೆಯನ್ನು ಆಯುಧವಾಗಿ ಉಪಯೋಗಿಸಿಕೊಂಡಿದ್ದರು. ಈ ಹೋರಾಟಗಾರರ ಕೆಚ್ಚೆದೆಗೆ ಸಾಹಸಕ್ಕೆ ಸಾಕ್ಷಿಯಾದ ಬೆಳ್ಳಾರೆಯ ಕೋಟೆ ಈಗ ಕೂಡ ಇದೆ. ಇವರು ವಶಪಡಿಸಿಕೊಂಡ ಬ್ರಿಟಿಷರ ಖಜಾನೆ ಕೂಡ ಇದೆ. ಬೆಳ್ಳಾರೆಯ ಸರಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣಕ್ಕೆ ಸೇರಿಕೊಂಡು ಬೆಳ್ಳಾರೆಯ ಕೋಟೆ ಇದೆ. ಈ ಪ್ರದೇಶವನ್ನು ಈಗ ಬಂಗ್ಲೆಗುಡ್ಡೆ ಎಂದು ಕರೆಯುತ್ತಾರೆ. ಬ್ರಿಟಿಷರ ಖಜಾನೆ ಇದ್ದ ಬಂಗಲೆಯ ಕಾರಣಕ್ಕೆ ಇಲ್ಲಿಗೆ ಬಂಗ್ಲೆಗುಡ್ಡೆ ಎಂ ಬ ಹೆಸರು ಬಂದಿದೆ. ಸ್ವತಂತ್ರ ಧ್ವಜ ಹಾರಾಡಿದ ಬೆಳ್ಳಾರೆಯ ಈ ಕೋಟೆಯನ್ನು ಸ್ಮಾರಕವಾಗಿ ರಕ್ಷಿಸಬೇಕಾಗಿದೆ .ಜೊತೆಗೆ ಇಲ್ಲಿ ಸ್ವತಂತ್ರ ಧ್ವಜ ಹಾರಿಸಿದ ನೆನಪಿಗಾಗಿ ಇದೇ ಜಾಗದಲ್ಲಿ ಪ್ರತಿ ಸ್ವಾತಂ ತ್ರ್ಯ  ದಿನಾಚರಣೆಯಂದು ಇಲ್ಲಿ ನಮ್ಮ ದೇಶದ ಧ್ವಜವನ್ನು ಹಾರಿಸಿ ಈ ಸ್ವಾತಂ ತ್ರ್ಯ ಹೋರಾಟವನ್ನು ಮತ್ತು ಹುತಾತ್ಮರಾದ ಕಲ್ಯಾಣ ಸ್ವಾಮೀ ಹಾಗು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅವರಿಗೆ ಗೌರವ ಸೂಚಿಸುವ ಕಾರ್ಯ ಅಗತ್ಯವಾಗಿ ಆಗ ಬೇಕಾಗಿದೆ .
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮೊಬೈಲ್ 9480516684


ಆಧಾರಗ್ರಂಥಗಳು:


1ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಲೇ| ಗಣಪತಿರಾವ ಐಗಳು


 2 ಚಿಕವೀರ ರಾಜೇಂದ್ರ ( ಐತಿಹಾಸಕ ಕಾದಂಬರಿ) ಲೇ: ಮಾಸ್ತಿ ವೆಂಕಟೇಶ ಅಯ್ಯಂಗಾರ್

3 ಸ್ವಾಮಿ ಅಪರಂಪಾರ ( ಐತಿಹಾಸಿಕ ಕಾದಂಬರಿ)- ಲೇ| ನಿರಂಜನ( ಕುಲ್ಕುಂದ ಶಿವರಾಯ)

4 ಕಲ್ಯಾಣ ಸ್ವಾಮಿ ( ಐತಿಹಾಸಿಕ ಕಾದಂಬರಿ) ಲೇ| ನಿರಂಜನ ( ಕುಲ್ಕುಂದ ಶಿವರಾಯ)

5 ಚೆನ್ನ ಬಸಪ್ಪ ನಾಯಕ ( ಐತಿಹಾಸಿಕ ಕಾದಂಬರಿ) ಲೇ ನಿರಂಜನ( ಕುಲ್ಕುಂದ ಶಿವರಾಯ)


 6 ಅಮರಸುಳ್ಯದ ದಂಗೆ  -ಲೇ|ಎನ್.ಎಸ್ ದೇವಿಪ್ರಸಾದ  ಸಂಪಾಜೆ


7  In pursuits of our roots - Putturu Anantharaja Gowda


8 ರಾಜ ಪರಂಪರೆಯ ಕೊಡಗು ಮತ್ತು ದಕ್ಷಿಣ ಕನ್ನಡದ ಗೌಡರು- ಲೇ ಪುತ್ತೂರು ಅನಂತರಾಜ ಗೌಡ


9 ಪಂಜ ಸೀಮಾ ದರ್ಶನ-ಲೇ|ಕಾನಕುಡೇಲು ಗಣಪತಿ ಭಟ್ಟ  -


10 ತುಳುನಾಡಿನ ಅಪೂರ್ವ ಭೂತಗಳು  ಲೇ|ಡಾ|| ಲಕ್ಷ್ಮೀ ಜಿ. ಪ್ರಸಾದ  

11  ಬೆಳ್ಳಾರೆ - ಒಂದು ಸಾಂಸ್ಕೃತಿಕ ಅಧ್ಯಯನ( ಸಂಶೋದನಾ ಲೇಖನ) - ಲೇ ಡಾ.ಲಕ್ಷ್ಮೀ ಜಿ ಪ್ರಸಾದ ,ತುಳುವ ಪ್ರಾದೇಶಿಕ ಸಂಶೋಧನಾ ಕೇಂದ್ರ ಉಡುಪಿ

12 ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದ ಪ್ರಾಚ್ಯಾವಶೇಷಗಳು(ಸಂಶೋಧಾನಾ ಲೇಖನ) - ಲೇ| ಡಾ.ಲಕ್ಷ್ಮೀ ಜಿ ಪ್ರಸಾದ, ಇತಿಹಾಸ ದರ್ಶನ ಸಂ೨೭/೨೦೧೨,ಕರ್ನಾಟಕ ಇತಿಹಾಸ ಅಕಾಡೆಮಿ

13  ಕೆನರ ಜಿಲ್ಲೆಯ ಕಲೆಕ್ಟರ್ ಎಂ.ಲೆವಿನ್, ಮೇಜರ್ ಜನರಲ್ ವಿಗೋರ್(Vigourheux) ಹಾಗೂ ಚಾರ್ಲ್ಸ್ ರಾಬರ್ಟ್ ಕಾಟನ್ ಅವರಿಗೆ ಒಪ್ಪಿಸಿದ ವರದಿ

14 ಕೊಡಗು ಗಜೇಟಿಯರ್

Friday, 26 January 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 422 ಕಲಂದನ್ ಮುಕ್ರಿ ದೈವ/ತೆಯ್ಯಂ



ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 422 ಕಲಂದನ್ ಮುಕ್ರಿ ದೈವ/ತೆಯ್ಯಂ


ಕಳೆದ ಒಂದು ವಾರದಿಂದ ಒಂದು ಮುಸ್ಲಿಂ ಸ್ವರೂಪದ ದೈವ ಇಬ್ಬರು ಮುಸ್ಲಿಂ ರೀತಿಯ ವೇಷ ಧರಿಸಿದ ಪಾತ್ರಿಗಳ ಜೊತೆ ಕೋಲಾಟವಾಡುವ ವೀಡಿಯೋ ಹರಿದಾಡುತ್ತಾ ಇತ್ತು.ಅನೇಕರು ಅದನ್ನು ಕಳಹಿಸಿ ಈ ದೈವ ಯಾವುದೆಂದು ಕೇಳಿದ್ದರು. ಆಲಿ ಭೂತ ,ಯೋಗ್ಯೆರ್ ನಂಬೆಡಿ ,ಮುಕ್ರಿ ಪೋಕ್ಕರ್,ಬಪ್ಪುರಿಯನ್  ಸೇರಿದಂತೆ ಅನೇಕ ಮುಸ್ಲಿಂ ತೆಯ್ಯಂ ಗಳಿಗೆ ಆರಾಧನೆ ಇರುವುದು ನನಗೆ ತಿಳಿದಿತ್ತಾದರೂ ಈ ತೆಯ್ಯಂ ಯಾರೆಂದು ಗುರುತಿಸಲು ಆಗಿರಲಿಲ್ಲ.ಕೆಲವರು ಅದನ್ನು ಆಲಿ ಭೂತ ಎಂದು ತಪ್ಪಾಗಿ ಗುರುತಿಸಿದ್ದು ತಿಳಿದು ಅದು ಆಲಿ ಭೂತವಲ್ಲ ಎಂದು ತಿಳಿಸಿದ್ದೆ.ಅದು ಮುಕ್ರಿ ಪೋಕ್ಕೆರ್ ದೈವ ಇರಬಹುದು ಎಂದು ಹೇಳಿದ್ದೆ.ವಾಟ್ಸಪ್ ಗ್ರೂಪೊಂದರಲ್ಲಿ ಚಂದ್ರಹಾಸ ಶೆಟ್ಟಿಯವರು ಅದನ್ನು ಮಾಪಿಳ್ಳೆ ದೈವ ಎಂದು ಗುರುತಿಸಿದ್ದರು‌.ಹಾಗಾಗಿ ನಾನು ಮಾಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಕುಂಞಿರಾಮನ್ ಸೇರಿದಂತೆ ಅನೇಕ ಹಿರಿಯರನ್ನು ಸಂಪರ್ಕಿಸಿದೆ‌.ಅದರ ಮಾಹಿತಿ ನೀಡಿದ ಕುಂಞಿರಾಮನ್ ಅವರು ಕಲಂದನ್ ಮುಕ್ರಿ ಎಂಬ ಹೆಸರಿನ ಮುಸ್ಲಿಂ ಮೂಲದ ದೈವಕ್ಕೆ ಆರಾಧನೆ ಇರುವ ಬಗ್ಗೆ ತಿಳಿಸಿದರು.
ಮಾಪ್ಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಹುಡುಕುತ್ತಿರುವುದನ್ನು ತಿಳಿದ ಸ್ನೇಹಿತರಾದ ಶ್ಯಾಮ್ ಅವರು ಒಂದು ಮಲೆಯಾಳ ಬರಹವನ್ನು ಕಳಹಿಸಿ ಅದರಲ್ಲಿ ಮಾಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಇದೆ ಎಂದು ಅವರ ಸ್ನೇಹಿತರು ಹೇಳಿದ್ದನ್ನು ತಿಳಿಸಿದರು.ನನಗೆ ಮಲೆಯಾಳ ಭಾಷೆ ಅರ್ಥವಾಗುವುದಾದರೂ ಓದಲು ತಿಳಿದಿಲ್ಲ. ಹಾಗಾಗಿ ನಾನು ಅದನ್ನು ಗೂಗಲ್ ಟ್ರಾನ್ಸಲೇಶನ್ ಮೂಲಜ ಇಂಗ್ಲಿಷ್ ಗೆ ಅನುವಾದಿತ ರೂಪ ಪಡೆದೆ.ಆಗ ಅದು ಕಲಂದನ್ ಮುಕ್ರಿ ತೆಯ್ಯಂ ಬಗೆಗಿನ  ಮಲೆಯಾಳ ವಿಕಿಪೀಡಿಯ ಮಾಹಿತಿ ಎಂದು ತಿಳಿಯಿತಾದರೂ ಗೂಗಲ್ ಅನುವಾದದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಪ್ಪುಗಳು ಇದ್ದ ಕಾರಣ ಕಥಾನಕ ಪೂರ್ತಿಯಾಗಿ ಅರ್ಥ ಆಗಲಿಲ್ಲ.
ಆಗ ಅದನ್ನು  ಮಲೆಯಾಳ ಬಲ್ಲ ಯುವ ಸಂಶೋಧಕರಾದ ಶಂಕರ್ ಕುಂಜತ್ತೂರಿಗೆ ಕಳಹಿಸಿ ಅನುವಾದ ಮಾಡಿ ಕೊಡಲು ಕೇಳಿದೆ.ಅವರು ಅದರ ಸಂಗ್ರಹ ಅನುವಾದ ಮಾಡಿ ನೀಡಿದರು.
ಈ ದೈವದ/ ತೆಯ್ಯಂ ನ ಸಂಕ್ಷಿಪ್ತ ಕಥಾನಕ ಹೀಗಿದೆ.
ಕಾಸರಗೋಡು ಜಿಲ್ಲೆಯ ಕಂಪಲ್ಲೂರು ಗ್ರಾಮದಲ್ಲಿ ಕಂಪಲ್ಲೂರು ಕೋಟ್ಟಯಿಲ್ ಎಂಬ ಪ್ರಾಚೀನ ತರವಾಡು ಮನೆ ಇದೆ.ಇದು ನಾಯರ್ ಸಮುದಾಯದವರ ತರವಾಡು ಆಗಿದ್ದು ಅವರಿಗೆ ಕೊಡಗಿನಿಂದ ಕಾಸರಗೋಡು ತನಕ ಹದಿನೈದು ಸಾವರ ಎಕರೆಗಳಷ್ಟು ಭೂಮಿ ಇತ್ತು.ಇಲ್ಲಿ ಬೆಳೆ ಬೆಳೆಯುತ್ತಾ ಇದ್ದರು.ಈ ತರವಾಡಿನ ರಕ್ಷಣೆಯನ್ನು ಕರಿಚಾಮುಂಡಿ ದೈವ ಮಾಡುತ್ತಾ ಇತ್ತು.
ಸೈನುದ್ದೀನ್ ಮತ್ತು ಅವರ ಕುಟುಂಬದ ಸದಸ್ಯರು ಈ  ಈ ಪ್ರದೇಶಕ್ಕೆ ಬರುತ್ತಾರೆ.ಆಗ ಈ ಕೋಟ್ಟಯಿಲ್ ತರವಾಡಿನ ನಾಯರ್‌ಗಳು ಅವರಿಗೆ ಸಹಾಯ ಮಾಡುತ್ತಾರೆ. ಅವರ ಧರ್ಮದ ಪಾಲನೆಗಾಗಿ ಒಂದು ಶೆಡ್ ಹಾಕಿ ಪ್ರಾರ್ಥನೆಗೆ ವ್ಯವಸ್ಥೆ ಮಾಡುತ್ತಾರೆ.
ಸೈನುದ್ದೀನ್ ಮತ್ತು ಅವರ ಕುಟುಂಬದವರು ಮತ್ಸ್ಯ ಬೇಟೆಗಾಗಿ ಮತ್ತು ವ್ಯಾಪಾರಕ್ಕಾಗಿ ಪುಲಿಂಗಾಟ್ ನದಿಯನ್ನು ಗೇಣಿಗೆ ಪಡೆಯುತ್ತಾರೆ.ಅವರಿಗೆ ಒಂದು ಮಸೀದಿಯನ್ನು ತರವಾಡಿನ ನಾಯರ್‌ಗಳು ಕಟ್ಟಿಸಿಕೊಡುತ್ತಾರೆ.
ಆ ಮಸೀದಿಯಲ್ಲಿ ಉರೂಸ್ ಗೆ ದಿನ ನಿಶ್ಚಯ ಮಾಡುವ ಮೊದಲೇ ಮಸೀದಿಯ ಮುಖ್ಯಸ್ಥರು ತರವಾಡು ಮನೆಗೆ ಬಂದು ದೈವದಲ್ಲಿ ಉರೂಸ್ ಹಬ್ಬದ ನೇತೃತ್ವ ( ಅಧ್ಯಕ್ಷತೆ)ವಹಿಸುವಂತೆ ಪ್ರಾರ್ಥನೆ ಮಾಡಿ ಅರಶಿನ ಗಂಧ ಪ್ರಸಾದ ಕೊಂಡೊಯ್ಯುತ್ತಾ ಇದ್ದರು.ಈಗಲೂ ಅಲ್ಲಿ ಈ ಪದ್ಧತಿ ಇದೆ.ಅವರು ತರವಾಡಿನ ರಕ್ಷಕ ದೈವ ಕರಿಚಾಮುಂಡಿ ದೈವಕ್ಕೆ ನಿಷ್ಠರಾಗಿ ಗೌರವ ತೋರುತ್ತಿದ್ದರು.ಹಾಗಾಗಿ ಅಲ್ಲಿನ ಮಸೀದಿಯ ಮುಖ್ಯಸ್ಥ ಕಲಂದನ್ ಮುಕ್ರಿಗೆ  ಕರಿ ಚಾಮುಂಡಿ ದೈವ   ಮರಣಾನಂತರ ದೈವತ್ವ ನೀಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.
ಕಲಂದನ್ ಮುಕ್ರಿ ದೈವವನ್ನು ಹಿಂದು ಪಾತ್ರಿಗಳು ಕಟ್ಟುತ್ತಾರೆ. ಒಂದು  ಬಿಳಿ‌ಲುಂಗಿಯ ಮೇಲೆ ,ಸೊಂಟಕ್ಕೆ ಕಟ್ಟಿದ ಕೆಂಪು ಶಾಲು ,ತಲೆಗೆ ಕೆಂಪು ಬಟ್ಟೆಯ ರುಮಾಲು ಹಾಗೂ ಬಿಳಿಯ ಗಡ್ಡದ  ಮಾನವ ಸಹಜವಾ ಅಲಂಕಾರ ,ವೇಷಭೂಷಣ ಈ ದೈವಕ್ಕೆ ಮಾಡುತ್ತಾರೆ.
ಮಾಹಿತಿ ಮೂಲ : ಮಲೆಯಾಳ ವಿಕಿಪೀಡಿಯ
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಶ್ಯಾಮ್, ಅನುವಾದ ಮಾಡಿದ ಶಂಕರ್ ಕುಂಜತ್ತೂರು,ಮಾಹಿತಿ ನೀಡಿದ ಕುಂಞಿರಾಮನ್ ಮಾಸ್ತರ್ ಅವರುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು
ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ಕೋರಿಕೆ
- ಡಾ.ಲಕ್ಷ್ಮೀ ಜಿ ಪ್ರಸಾದ

ನಾನು ಲಕ್ಷ್ಮೀ ಪೋದ್ದಾರ್ ಆದ ಕಥೆ

ನಾನು ಲಕ್ಷ್ಮೀ ಪೋದ್ದಾರ್ ಆದ ಕತೆ...
ಲಕ್ಷ್ಮೀ ಪೊದ್ದಾರ್ c/o ಲಕ್ಷ್ಮಿ ಪ್ರಸಾದ್ © ಜಿ ಎನ್ ಮೋಹನ್
Posted by Avadhi

ಡಾ ಕೆ ಎನ್ ಗಣೇಶಯ್ಯ ಅವರು ನಿಮಗೆ ಗೊತ್ತು.. ಅವರ ಬರವಣಿಗೆಯ ಶೈಲಿಯೂ ಗೊತ್ತು

ಕನ್ನಡಕ್ಕೆ ಹೊಸದೇ ಆದ ಬರವಣಿಗೆಯ ತಂತ್ರ ಪರಿಚಯಿಸಿದ ಹೆಮ್ಮೆ ಅವರದ್ದು

ನಾಗೇಶ್ ಹೆಗಡೆ ಅವರ ಶಹಭಾಷ್ ಗಿರಿಯಿಂದಾಗಿ ಹೊಸದೇ ಶೈಲಿಯೊಂದನ್ನು ರೂಢಿಸಿಕೊಂಡ ಗಣೇಶಯ್ಯ ಅವರು ಹೇಗೆ ಬರೆಯುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ.

ಇತ್ತೀಚಿಗೆ ಹೊರಬಂದ ‘ಬಳ್ಳಿಕಾಳ ಬಳ್ಳಿ’ ಕೃತಿಯಲ್ಲಿ ತುಳು ಸಂಸ್ಕೃತಿಯ ಸಂಶೋಧಕಿ ಡಾ ಲಕ್ಷ್ಮಿ ಜಿ ಪ್ರಸಾದ್ ಅವರ ಪಾತ್ರ ಬದಲಾಗಿರುವ ರೀತಿ ನೋಡಿ.


ಡಾ ಲಕ್ಷ್ಮಿ ಜಿ ಪ್ರಸಾದ್ ಹೇಳುತ್ತಾರೆ-

ನಾನೆಂದೂ ಕಾದಂಬರಿ ಬರೆದಿಲ್ಲ

ಆದರೆ ಖ್ಯಾತ ಸಾಹಿತಿ ಕಾದಂಬರಿಗಾರ ಕೃಷಿ ವಿಜ್ಞಾನಿ ಡಾ.ಗಣೇಶಯ್ಯ ಅವರ ಪತ್ತೆದಾರಿ ಶೈಲಿಯ ಐತಿಹಾಸಿಕ ಕಾದಂಬರಿ “ಬಳ್ಳಿ ಕಾಳ ಬಳ್ಳಿ”ಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಬಂದಿದ್ದೇನೆ

ಇಲ್ಲಿ ನನ್ನ ಪಾತ್ರ ಲಕ್ಷ್ಮೀ ಪೊದ್ದಾರ್ ಎಂಬ ತುಳು ಜಾನಪದ ಸಂಶೋಧಕಿಯದು

ನಾನು ಎಂದಾದರು ಒಂದು ದಿನ ಒಂದು ಕತೆ ಕಾದಂಬರಿಯ ಪಾತ್ರವಾಗಬಹುದು ಕನಸಲ್ಲಿ ಕೂಡ ಊಹಿಸಿರಲಿಲ್ಲ .

ನಾನು ಗಣೇಶಯ್ಯ ಅವರನ್ನು ಭೇಟಿಯಾಗಿದ್ದಾಗ ನನ್ನ ಪಾತ್ರ ಅವರ ಕಾದಂಬರಿಯಲ್ಲಿ ಬರುತ್ತೆ ಎಂದಾಗ ಒಂದೆಡೆ ತುಳುವಿನಿಂದ ಕನ್ನಡಕ್ಕೆ ಒಂದು ಪದ್ಯವನ್ನು ಅನುವಾದ ಮಾಡಿಕೊಡುವ ಚಿಕ್ಕ ಪಾತ್ರ ಇರಬಹುದು ಎಂದುಕೊಂಡಿದ್ದೆ

ಆದರೆ ಇಲ್ಲಿ ಲಕ್ಷ್ಮೀ ಪೋದ್ದಾರ್ ಗೆ ಪ್ರಮುಖ ಪಾತ್ರವಿದೆ

ನಾನು ಭೂತಾರಾಧನೆ ಬಗ್ಗೆ ಹೇಳುವ ವಿಚಾರಗಳನ್ನು ಲಕ್ಷ್ಮಿ ಪೋದ್ದಾರ್ ಮೂಲಕ ಕವಿ ಜನತೆಯ ಎದುರು ಇಟ್ಟಿದ್ದಾರೆ ಭೂತಾರಾಧನೆಯಲ್ಲಿ ಅಡಕವಾಗಿರುವ ಐತಿಹಾಸಿಕ ವಿಚಾರಗಳು ಕೂಡ ಕಾದಂಬರಿಗೆ ಆಕರವಾಗಬಲ್ಲವು ಎಂಬುದನ್ನು ಅವರು ತೋರಿಸಿಕೊಟ್ಟಿದಾರೆ.

ಅದಕ್ಕಾಗಿ ಗಣೇಶಯ್ಯ ಅವರಿಗೆ ಧನ್ಯವಾದಗಳು

ಈ ಹಿಂದೆ ಡಾ .ಅಮೃತ ಸೋಮೇಶ್ವರ ಅವರು ತುಳುವರ ಪಾಡ್ದನ ಹಾಗೂ ಭೂತಾರಾಧನೆ ಕುರಿತು ತಿಳಿಸಲು ನಾಟಕ ಕಾದಂಬರಿ ಕಥೆಗಳನ್ನು ರಚಿಸಿ ಜನರ ಮುಂದಿಡಬೇಕು ಎಂದು ಹೇಳಿದ್ದರು.

ಈಜೋ ಮಂಜೊಟ್ಟಿ ಗೋಣ ಪಾಡ್ದನ ಹಾಗೂ ಉರವ, ಎರಡು ಬಂಟ ದೈವಗಳ ಕಥಾನಕವನ್ನು ಆಧರಿಸಿ ನಾನು ಒಂದು ಸಣ್ಣ ನಾಟಕ ಬರೆದಿದ್ದು ನಮ್ಮ ವಿದ್ಯಾರ್ಥಿಗಳ ಮೂಲಕ ಪ್ರದರ್ಶನ ಮಾಡುವ ಯತ್ನ ಮಾಡಿದ್ದೆ

ಆದರೆ ಇವೆಲ್ಲ ತುಳು ಸಂಸ್ಕೃತಿ ಯ ಅರಿವಿರುವವರಿಗೆ‌ ಮಾತ್ರ ಸ್ಪಷ್ಟವಾಗಿ ಅರ್ಥವಾಗಲು ಸಾಧ್ಯ ಯಾಕೆಂದರೆ ಅಲ್ಲಿ‌ ತುಳುವಿನ ಭೂತ‌ಪದಕ್ಕೆ‌ಇರುವ ಅರ್ಥ ಆರಾಧನಾ ಸ್ವರೂಪದ ಬಗ್ಗೆ ಹೇಳಿಲ್ಲ ಬಹುಶಃ ‌ಮೊದಲ ಬಾರಿಗೆ ತುಳುನಾಡಿನ ಭೂತಾರಾಧನೆ ಬಗ್ಗೆ ಕನ್ನಡ ‌ಕಾದಂಬರಿಯಲ್ಲಿ ಈ ರೀತಿಯ ಮಾಹಿತಿಯನ್ನು ನೀಡಿದವರು ಡಾ. ಗಣೇಶಯ್ಯ ಅವರೇ ಇರಬೇಕು

ಈ ಕಾದಂಬರಿಯಲ್ಲಿ ಚೌಂಡಿ ಮತ್ತು ಜಟ್ಟಿಗ/ ಜತ್ತಿಂಗ ದೈವಗಳ ಕಥಾನದಲ್ಲಿ ಚೆನ್ನ ಭೈರಾದೇವಿಯ ಇತಿಹಾಸದ ಎಳೆಯನ್ನು ಕಂಡುಕೊಂಡದ್ದು ಅವರ ತೀವ್ರ ವಿಚಕ್ಷಣಾ ಗುಣಕ್ಕೆ ಸಾಕ್ಷಿಯಾಗಿದೆ

ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಕುರಿತಾಗಿ ಸಾಕಷ್ಟು ಇತಿಹಾಸದ ಮಾಹಿತಿ ಇದೆ. ನಿಧಿ ಶೋಧದ ಕಥಾನಕ ಬಿಟ್ಟರೆ ಉಳಿದೆಲ್ಲವೂ ಅದರಲ್ಲಿ ಇರುವುದು ನಡೆದು ಹೋದ ಸತ್ಯ ಘಟನೆಗಳು
http://avadhimag.com/2017/01/04/%e0%b2%b2%e0%b2%95%e0%b3%8d%e0%b2%b7%e0%b3%8d%e0%b2%ae%e0%b3%80-%e0%b2%aa%e0%b3%8a%e0%b2%a6%e0%b3%8d%e0%b2%a6%e0%b2%be%e0%b2%b0%e0%b3%8d-co-%e0%b2%b2%e0%b2%95%e0%b3%8d%e0%b2%b7%e0%b3%8d%e0%b2%ae/

**** ಬಳ್ಳಿಕಾಳ ಬೆಳ್ಳಿ *****

ಚರಿತ್ರಕಾರರೂ, ಚರಿತ್ರೆಯೂ ಮರೆತ ಗೇರುಸೊಪ್ಪೆಯ " ಕಾಳುಮೆಣಸಿನ ರಾಣಿ " ಚೆನ್ನಭೈರಾದೇವಿಯ ಚರಿತೆ.

 ಸತ್ಯ ಸಂಗತಿಗಳ ಜೊತೆ ಡಾ ll ಕೆ. ಎನ್ ಗಣೇಶಯ್ಯನವರ ಅದ್ಭುತ ಕಲ್ಪನಾಲಹರಿಯಲ್ಲಿ ಮೂಡಿಬಂದ ಅತ್ಯುತ್ತಮ ಕಾದಂಬರಿ

ಇತ್ತೀಚಿನ ದಿನಗಳಲ್ಲಿ ನಾನು ಓದಿದಂತಹ ಒಂದು ಅತ್ಯುತ್ತಮ ಸಂಶೋಧನಾತ್ಮಕ ಕೃತಿ.......ಪ್ರಾರಂಭದಿಂದ ಹಿಡಿದು ಕೊನೆಯ ತನಕವೂ ಕುತೂಹಲ ಕೆರಳಿಸುತ್ತಾ, ಜೊತೆಗೆ ಅತ್ಯುಪಯುಕ್ತ ಮಾಹಿತಿಗಳನ್ನುಕೂಡಾ ನೀಡುತ್ತಾ ಸಾಗಿದ ಕಾದಂಬರಿಯನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿದೆ.

ಸಾಗರ, ಗೇರುಸೊಪ್ಪೆ,ಹೊನ್ನಾವರ, ಭಟ್ಕಳ, ಮುರುಡೇಶ್ವರ, ಗೇರುಸೊಪ್ಪೆಯ ನಗರಬಸದಿಕೇರಿಯ ಚತುರ್ಮುಖ ಬಸದಿ, ಅಳ್ಳಂಕಿಯ ಹೈಗುಂದ, ನೇತ್ರಾಣಿಗುಡ್ಡಗಳನ್ನು ಸುತ್ತಿ ಬಳಸಿಕೊಂಡು ಸಾಗುವ ಕಥೆ , ಗಣೇಶಯ್ಯನವರ ವಿಶಿಷ್ಟ ಶೈಲಿಯಲ್ಲಿ , ಅವರ ಹಿಂದಿನ ಕೃತಿಗಳಾದ " ಕನಕ ಮುಸುಕು" " ಕರಿಸಿರಿಯಾನ " ಕೃತಿಗಳಂತೇ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಾ,  ನಡುವೆ  ನಾವರಿಯದ ಸಂಶೋಧನಾತ್ಮಕ ವಿವರಗಳನ್ನು ನೀಡುತ್ತಾ, ಓದುಗರನ್ನು ಚಿಂತನೆಗೆ ಹಚ್ಚುತ್ತಾ ಸಾಗುತ್ತದೆ.
ಇದರ ಜೊತೆಗೆ " ಭೂತಗಳ ಅದ್ಭುತ ಜಗತ್ತಿನ" ತುಳುನಾಡ ಭೂತಗಳ ಬಗೆಗೆ ಸಂಶೋಧನೆ ನಡೆಸಿ ಖ್ಯಾತರಾದ ಡಾ.ಲಕ್ಷ್ಮಿ.ಜಿ ಪ್ರಸಾದ ( Lakshmi V ) ಅವರೂ ಕೂಡಾ ಕಥೆಯಲ್ಲಿ ಒಂದು ಪಾತ್ರವೇ ಆಗಿ ಓದುಗರಿಗೆ ಹಲವಾರು ವಿಷಯಗಳ ಬಗೆಗೆ ಪರಿಚಯಿಸುತ್ತಾ ಸಾಗುತ್ತಾರೆ. ಅವರ ಪಾತ್ರ ಚಿತ್ರಣವೂ ಕೂಡಾ ಕಥೆಯಲ್ಲಿ ಹಾಸುಹೊಕ್ಕಾಗಿ ಅದ್ಭುತವಾಗಿ ಮೂಡಿಬಂದಿದೆ.

ನಮ್ಮೂರಿನ ಬಗೆಗೆ ನಾವರಿಯದ ವಿವರಗಳ ವಿಶಿಷ್ಟ ಕೃತಿ... ಮನಸ್ಸಿಗೆ ಮುದ ನೀಡಿತು.

ಗಣೇಶಯ್ಯನವರ ಕೃತಿಗಳ ಬಗೆಗೆ ಹೇಳುವುದಕ್ಕಿಂತ ಅದನ್ನು ಓದಿಯೇ ಆಸ್ವಾದಿಸಬೇಕು.....

ಉತ್ತಮವಾದಂತಹ ಕೃತಿ......ಕೊಂಡು ಓದಿ.... !
- ಗಣೇಶ್ ಭಟ್
https://m.facebook.com/story.php?story_fbid=1356393794395471&id=100000745909480

Thursday, 25 January 2018

ಸಾವಿರದೊಂದು ಗುರಿಯೆಡೆಗೆ, ತುಳು ನಾಡ ದೈವಗಳು 421 ಮಾಪ್ಪಿಳ್ಳ ಚಾಮುಂಡಿ © ಡಾ.ಲಕ್ಷ್ಮೀ ಜಿ ಪ್ರಸಾದ



ಚಿತ್ರ ಕೃಪೆ: folkstudioin.blogspot. com

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 421 ಮಾಪ್ಪಿಳ್ಳ ಚಾಮುಂಡಿ © ಡಾ.ಲಕ್ಷ್ಮೀ ಜಿ ಪ್ರಸಾದ
ಮಾಪ್ಪಿಳ್ಳ ಚಾಮುಂಡಿ ಯನ್ನು ಕೋಲ್ತಾಯಿಲ್ ತರವಾಡು ಕುಟುಂಬದವರು ಕೋಲ ಕಟ್ಟಿಸಿ ಆರಾಧನೆ ಮಾಡುತ್ತಾರೆ.ಹೆಸರೇ ತಿಳಿಸುವಂತೆ ಈ ದೈವ ಮೂಲತಃ ಮುಸ್ಲಿ ಮಹಿಳೆ.
ದೈವಗಳು ಎದ್ದು ನಿಂತಾಗ ಗಮನಿಸದೆ ಗೌರವಿಸದೆ ಅವರಷ್ಟಕ್ಕೆ ಇದ್ದವರನ್ನು ದೈವಗಳು ಮಾಯಮಾಡಿ ತನ್ನ ಸೇರಿಗೆಗೆ ಸಲ್ಲಿಸುವ ವಿಚಾರ ತುಳು ನಾಡಿನ ಅನೇಕ ದೈವಗಳ ವೃತ್ತಾಂತಗಳಲ್ಲಿ ಇದೆ.ಭಾಗಮಂಡಲದಿಂದ ದೈವ ಬರುವಾಗ ದಾರಿಯಲ್ಲಿ ಬತ್ತ ಬಡಿಯುತ್ತಾ ಇದ್ದ ಮುಸ್ಲಿಂ ಮಹಿಳೆಯನ್ನು ತನ್ನ ಸೇರಿಗೆಗೆ ಸೇರಿಸಿಕೊಂಡ ಬಗ್ಗೆ ಮಾಪುಲ್ತಿ ಧೂಮಾವತಿ ದೈವದ ವೃತ್ತಾಂತದಿಂದ ತಿಳಿದು ಬರುತ್ತದೆ.ಅದೇ ರೀತಿಯಲ್ಲಿ ಉಳ್ಳಾಕುಲು ನೇಮವಾಗುವಾಗ ದಾರಿ ಬಿಡದ ತೊಟ್ಟಿಲು ಮಗುವನ್ನು ಕರೆದೊಯ್ಯುತ್ತಿದ್ದ ದಂಪತಿಗಳನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಂಡ ಬಗ್ಗೆ ಮಾಪುಲೆ ಮಾಪುಲ್ತಿ ದೈವಗಳ ಬಗೆಗಿನ ಐತಿಹ್ಯದಿಂದ ತಿಳಿದುಬರುತ್ತದೆ.
ಅದೇ ರೀತಿಯ ಐತಿಹ್ಯ ಮಾಪ್ಪಿಳ್ಳ ಚಾಮುಂಡಿ ದೈವದ ಬಗ್ಗೆ ಪ್ರಚಲಿತವಿದೆ.
ಚಾಮುಂಡಿ ದೈವ ಎದ್ದು ನಿಂತು ಆವೇಶಕ್ಕೆ ಒಳಗಾಗಿದ್ದಾಗ ಓರ್ವ ಮುಸ್ಲಿಂ ಮಹಿಳೆ ಪ್ರಾರ್ಥನೆಗೆ ಕರೆ ಕೊಟ್ಟು ನಮಾಜ್ ಮಾಡುತ್ತಾಳೆ
ಆಗ ಅವಳ ಮೇಲೆ ದೃಷ್ಟಿ ಹಾಯಿಸಿದ ದೈವ ಅವಳನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸಂದಾಯ ಮಾಡಿಕೊಳ್ಳುತ್ತದೆ.ಅವಳು ಮುಂದೆ ದೈವತ್ವ  ಪಡೆದು ಮಾಪ್ಪಿಳ್ಳ ಚಾಮುಂಡಿ ಎಂಬ ಹೆಸರಿನಲ್ಲಿ ದೈವವಾಗಿ ಆರಾಧನೆ ಪಡೆಯುತ್ತಾಳೆ.ಈ ದೈವಕ್ಕೆ ಪ್ರತಿವರ್ಷ ತುಲಾಮಾಸದ ಹನ್ನೊಂದನೇ ದಿನ ರಾತ್ರಿ ಕೋಲ ನೀಡಿ ಆರಾಧಿಸುತ್ತಾರೆ
ಮಾಹಿತಿ ಮೂಲ-  ಹಿರಿಯರಾದ ಕುಂಞಿರಾಮನ್,ಎನ್ ಕೃಷ್ಣನ್  ಮತ್ತು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯರು ನೀಡಿದ ಮೌಖಿಕ ಮಾಹಿತಿ  ಹಾಗೂ folkstudioin ಬ್ಲಾಗ್ http://folkstudioin.blogspot.in/2013/11/mappila-theyyam-i-t-is-presence-of.html?m=1

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 419-420 ಮನದಲಾತ್ ಚಾಮುಂಡಿ ಮತ್ತು ಮುಕ್ರಿ ಪೋಕ್ಕೆರ್ ತೆಯ್ಯಂ© ಡಾ.ಲಕ್ಷ್ಮೀ ಜಿ ಪ್ರಸಾದ

ಚಿತ್ರ ಕೃಪೆ: ಅಂತರ್ಜಾಲ
 ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 419-20 ಚಾಮುಂಡಿ ಮತ್ತು ಮುಕ್ರಿ ಪೋಕ್ಕೆರ್ ತೆಯ್ಯಂ © ಡಾ.ಲಕ್ಷ್ಮೀ ಜಿ ಪ್ರಸಾದ
ಕಾಸರಗೋಡು ಸಮೀಪದ ವೆಲ್ಲಿಕುಂಡ್ತ್ ನಲ್ಲಿ ಮಲ್ಲೊಮ್ ಕೊಲ್ಲೊತ್ ತರವಾಡು ಕುಟುಂಬದವರು ಮುಕ್ರಿ ಪೋಕ್ಕೆರ್ ತೆಯ್ಯಂ ಮತ್ತು ಚಾಮುಂಡಿ ದೈವವನ್ನು ಆರಾಧನೆ ಮಾಡುತ್ತಾರೆ.ಹೆಸರೇ ಸೂಚಿಸುವಂತೆ ಮುಕ್ರಿ ಪೋಕ್ಕೆರ್ ಮುಸ್ಲಿಂ ಮೂಲದ ದೈವತ.
ಸ್ಥಳೀಯ ಐತಿಹ್ಯದ ಪ್ರಕಾರ ಈತ ಒಂದು ನಾಯರ್ ಕುಟುಂಬದ ರಕ್ಷಕನಾಗಿರುವ ವ್ಯಕ್ತಿ. ಈತ ಓರ್ವ ಮಂತ್ರವಾದಿ ಕೂಡ.ಆತನಿಗೂ ಆ ನಾಯರ್ ಕುಟುಂಬದ ಓರ್ವ ಯುವತಿಗೂ ಪ್ರೇಮ ಉಂಟಾಗುತ್ತದೆ.ಇದನ್ನು ತಿಳಿದ ನಾಯರ್ ಕುಟುಂಬದ ಹಿರಿಯ ಈತನಿಗೆ ಗುಂಡಿಕ್ಕುತ್ತಾನೆ.ಆದರೂ ಆತ ಸಾಯುವುದಿಲ್ಲ.ನಂತರ ಆತನನ್ನು ಕತ್ತಿಯಿಂದ ಹೊಡೆಯುತ್ತಾರೆ.ಆಗಲೂ ಆತ ಸಾಯುವುದಿಲ್ಲ.ಆಗ ಆತನೇ ತನ್ನ ಕುತ್ತಿಗೆಯಲ್ಲಿರುವ ತಾಯಿತವನ್ನು ತೆಗೆಯಲು ಹೇಳುತ್ತಾನೆ.ಆ ತಸಯಿತದ ಕಾರಣದಿಂದ ಆತನಿಗೆ ಸಾವು ಬರುವುದಿಲ್ಲ. ಆತನನ್ನು ನೋವಿನಿಂದ ಪಾರು ಮಾಡುವ ಸಲುವಾಗಿ ಆತನ ಕುತ್ತಿಗೆಯಿಂದ ಮಾಂತ್ರಿಕ ಶಕ್ತಿ ಇರುವ ತಾಯಿತವನ್ನು ಬೇರ್ಪಡಿಸುತ್ತಾರೆ. ಆತ ಮರಣವನ್ನಪ್ಪಿ ನಂತರ ದೈವತ್ವವನ್ನು ಪಡೆಯುತ್ತಾನೆ.
ಆತನಿಗೆ ಗುಂಡಿಕ್ಕಿದ ನಾಯರ್ ಗೆ ಮತಿವಭ್ರಮಣೆಯಾಗುತ್ತದೆ.ಮನೆಯಲ್ಲಿ ನಾನಾವಿಧವಾದ ಉಪದ್ರಗಳು ಕಾಣಿಸಿಕೊಳ್ಳುತ್ತದೆ
ಆಗ ಅವರು ಜ್ಯೋತಿಷಿಗಳಲ್ಲಿ ಕೇಳಿದಾಗ ಆ ವ್ಯಕ್ತಿ ಮುಕ್ರಿ ಪೋಕ್ಕೆರ್ ದೈವವಾಗಿ ಉದಿಸಿರುವುದು ಕಂಡುಬರುತ್ತದೆ.ನಂತರ ಆತನಿಗೆ ಕೋಲ ಕೊಟ್ಟು ಆರಾಧನೆ ಮಾಡಿ ಸಂಪ್ರೀತಗೊಳಿಸುತ್ತಾರೆ.ಆತನನ್ನು ಪ್ರೀತಿಸಿದ ಯುವತಿಯನ್ನು ಮನೆಯಿಂದ ಹೊರಗೆ ಹಾಕಿರುತ್ತಾರೆ.ಆಕೆ ಕೂಡ ಮಾಯಕವಾಗಿ ಮುಕ್ರಿ ಪೋಕ್ಕೆರ್ ಜೊತೆಯಲ್ಲಿ ಸೇರಿಕೊಂಡು ದೈವವಾಗಿ ಆರಾಧನೆ ಪಡೆಯುತ್ತಾಳೆ.ಮುಕ್ರಿ ಪೋಕ್ಕೆರ್ ಜೊತೆಗೆ ಆರಾಧನೆ ಪಡೆಯುವ ಚಾಮುಂಡಿ ದೈವ ಈಕೆಯೇ ಎಂಬ ಅಭಿಪ್ರಾಯವಿದೆ.ಮಾಪ್ಪಿಳ್ಳೆ ತೆಯ್ಯಂ ಮತ್ತು ಮುಕ್ರಿ ಪೋಕ್ಕೆರ್ ದೈವ ಎರಡೂ ಒಂದೇ ಎಂಬ ಅಭಿಪ್ರಾಯವನ್ನು ಎನ್ ಕೃಷ್ಣನ್ ಮೊದಲಾದವರು ನೀಡಿದ್ದಾರೆ.
ಈ ದೈವ ಕೋಲದ ಸಂದರ್ಭದಲ್ಲಿ ಪ್ರಾರ್ಥನೆಗೆ ಕರೆ ಕೊಡುವ ( ಆಝಾನ್) ಸಂಪ್ರದಾಯವಿದೆ.ಈ ದೈವ ಬಿಳಿಯ ನಿಲುವಂಗಿ ಮತ್ತು ದಾರಿಯನ್ನು ತೊಟ್ಟು ಮಾನವ ಸಹಜ ಅಲಂಕಾರದಲ್ಲಿ ಇರುತ್ತದೆ.ತಲೆಗೆ ಮುಂಡಾಸು ಮತ್ತು ಮುಖದಲ್ಲಿ ಗಡ್ಡ ಇರುತ್ತದೆ.ಕಾಲಿಗೆ ಗಗ್ಗರ ಧಿರಿಸುತ್ತದೆ.
ಮಾಹಿತಿ ಮೂಲ-  ಹಿರಿಯರಾದ ಕುಂಞಿರಾಮನ್,ಎನ್ ಕೃಷ್ಣನ್  ಮತ್ತು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯರು ನೀಡಿದ ಮೌಖಿಕ ಮಾಹಿತಿ  ಹಾಗೂ folkstudioin ಬ್ಲಾಗ್ http://folkstudioin.blogspot.in/2013/11/mappila-theyyam-i-t-is-presence-of.html?m=1

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 418 ಅಗ್ನಿ ಕೊರತಿ © ಡಾ.ಲಕ್ಷ್ಮೀ ಜಿ ಪ್ರಸಾದ


‌ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 418 : ಅಗ್ನಿ ಕೊರತಿ
‌ಒಂದೆರಡು ವರ್ಷಗಳ ಹಿಂದೆ ಅಗ್ನಿ ಕೊರತಿ ದೈವದ ಫೋಟೋ ಕಳಹಿಸಿ ಈ ದೈವದ ಮಾಹಿತಿ ಇದೆಯೇ ಎಂದು ಸ್ನೇಹಿತರಾದ ಸಿಂಚನಾ ಶ್ಯಾಮ್ ಕೇಳಿದ್ದರು.ಅಗ್ನಿ ಕೊರತಿ ಓರ್ವ ಬೆಂಕಿಯಲ್ಲಿ ಆತ್ಮಾಹುತಿ ಮಾಡಿಕೊಂಡ ಸ್ತ್ರೀ ಎಂಬ ಐತಿಹ್ಯ ಸಿಕ್ಕಿತ್ತಾದರೂ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ.ತಿಂಗಳ ಮೊದಲು ಈ ಬಗ್ಗೆ ಅಭಿಲಾಷ್ ಚೌಟ ಅವರು ಸರಿಯಾದ ಮಾಹಿತಿ ನೀಡಿದರು.
‌ಹೆಸರು ಒಂದೇ ಇದ್ದರೂ ದೈವ ಒಂದೇ ಇರಬೇಕಾಗಿಲ್ಲ .ಅಗ್ನಿ ಕೊರತಿ ಕೊರತಿ ದೈವವಲ್ಲ .ಸಸಿಹಿತ್ತಿಲಿನಲ್ಲಿ ಗುಳಿಗನ ಜೊತೆ ಸೇರಿರುವ ದೈವವಿದು.ಗುಳಿಗನ ಜೊತೆ ಸೇರಿದ ಕಾರಣ ಅಗ್ನಿ ಗುಳಿಗನೆಂದು ಕೂಡ ಕರೆಯುತ್ತಾರೆ.
‌ಈ ದೈವದ ಹಿನ್ನೆಲೆಯಲ್ಲಿ ವರ್ಗ ಸಂಘರ್ಷದ ಸೂಚನೆ ಇರುವ ಕಥಾನಕ ಇದೆ
‌ಪೂಲ ಪೊಂಜೋವು ಮತ್ತು  ಗಾಳಿಭದ್ರ ದೇವರಿಗೆ ಸತ್ಯಭಾರಿ ಎಂಬ ಹೆಸರಿನ ಮಗಳಾಗಿ ಹುಟ್ಟುತ್ತಾಳೆ.ಹುಡುಗಿ ಹೋಗಿ ದೊಡ್ಡವಳಾದ ಶುದ್ಧ ನೀರಿಗಾಗಿ ಕಾಂತೇಶ್ವರ ದೇವಾಲಯಕ್ಕೆ ಬರುತ್ತಾಳೆ.ಅಲ್ಲಿ ಇಬ್ಬರು ಬ್ರಾಹ್ಮಣ ಬ್ರಹ್ಮಚಾರಿಗಳು ಅವಳನ್ನು ಅಟ್ಟಿಸಿಕೊಂಡು ಹಿಂಬಾಲಿಸಿ ಕೊಂಡು ಬರುತ್ತಾರೆ.ಆಗ ಅವಳು ಬೆಂಕಿಗೆ ಪ್ರವೇಶ ಮಾಡಿ ಆತ್ಮಾಹುತಿ ಮಾಡಿಕೊಳ್ಳುತ್ತಾಳೆ.ನಂತರ ದೈವವಾಗಿ ಎದ್ದು ನಿಂತು ಮುಳಿಹಿತ್ತಿಲಿಗೆ ಹೋಗಿ ಭಗವತಿ ಸಾನ್ನಿಧ್ಯದಲ್ಲಿ ಅಗ್ನಿ ಕೊರತಿ/ ಅಗ್ನಿ ಗುಳಿಗನಾಗಿ ಆರಾಧನೆ ಪಡೆಯುತ್ತಾಳೆ. ಅಲ್ಲಿಂದ ಭಗವತಿಯೊಡನೆ ಬೇರೆಡೆಗೆ ಪ್ರಸರಣಗೊಳ್ಳುತ್ತಾಳೆ.
‌ಕುಂದಣ್ಣ ಉರೊಲಿ  ಎಂಬವರು ಅಗ್ನಿ ಕೊರತಿಯ ಉಪಾಸನೆ ಮಾಡಿತ್ತಾರೆ.ನಂತರ ಒಂದು ಗುತ್ತಿನ ಮನೆಯವರು ಕಳ್ಳ ಕಾಕರಿಂದ ರಕ್ಷಣೆ ಪಡೆಯುವ ಸಲುವಾಗಿ ಅಗ್ನಿ ಕೊರತಿಯನ್ನು ಕೇಳಿ ಕರೆದುಕೊಂಡು ಹೋಗಿ ಆರಾಧನೆ ಮಾಡುತ್ತಾರೆ.

‌ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವವಾಗಿ ಹೇಳುವುದಾದರೆ ಕೊರತಿ ಎಂಬ ಹೆಸರು ಜಾತಿ ಸೂಚಕವಾಗಿದ್ದು ಆಕೆ ಮೂಲತಃ ಕೊರಗ ಸಮುದಾಯಕ್ಕೆ ಸೇರಿದವಳು ಎಂಬುದನ್ನು ಸೂಚಿಸುತ್ತದೆ.
‌ವಿಧಿ ನಿಷೇಧ ಗಳು ಆದಿ ಮಾನವನ ಅಲಿಖಿತ ಶಾಸನಗಳಾಗಿದ್ದವು.
‌ಅಂತೆಯೇ ಕೊರಗ ಸಮುದಾಯದ ಹೆಣ್ಣು ಮಗಳು ಒಬ್ಬಳು ಶುದ್ಧವಾಗಲು ದೇವಾಲಯಕ್ಕೆ ಬರುವುದನ್ನು ಒಪ್ಪುವುದಿಲ್ಲ .ಹಾಗಾಗಿ ಅವಳನ್ನು ಅಲ್ಲಿ ಅಟ್ಟಿಸಿಕೊಂಡು ಹೋದಾಗ ಅವಳು ಅಗ್ನಿ ಪ್ರವೇಶಿಸಿ ದುರಂತವನ್ನಪ್ಪಿರಬಹುದು.ದುರಂತ ಮತ್ತು ದೈವತ್ವ ಒಟ್ಟೊಟ್ಟಿಗೆ ಸಾಗುವಂತೆ ಅವಳು ದೈವತ್ವ ಪಡೆದು ಆರಾಧನೆ ಹೊಂದಿರಬಹುದು.© ಡಾ.ಲಕ್ಷ್ಮೀ ಜಿ ಪ್ರಸಾದ
‌ಅಗ್ನಿಕೊರತಿ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಪ್ರೇರಣೆ ನೀಡಿದ  ಸಿಂಚನಾ ಶ್ಯಾಮ್ ಮತ್ತು ಮಾಹಿತಿ ನೀಡಿದ ಅಭಿಲಾಷ್ ಚೌಟರಿಗೆ ಕೃತಜ್ಣತೆಗಳು
‌ಚಿತ್ರ ಕೃಪೆ: ಧರ್ಮ ದೈವ

Tuesday, 23 January 2018

ಸಾವಿರದೊಂದು ಗುರಿಯೆಡೆಗೆ 417 ಮಾಪ್ಪಿಳ್ಳೆ ತೆಯ್ಯಂ© ಡಾ.ಲಕ್ಷ್ಮೀ ಜಿ ಪ್ರಸಾದ




ಚಿತ್ರ ಕೃಪೆ : ಅಂತರ್ಜಾಲದ

ಸಾವಿರದೊಂದು ಗುರಿಯೆಡೆಗೆ 417
ಮಾಪ್ಫಿಳ್ಳೆ ತೆಯ್ಯಂ© ಡಾ.ಲಕ್ಷ್ಮೀ ಜಿ ಪ್ರಸಾದ
ಕಳೆದ ಒಂದು ವಾರದಿಂದ ವಾಟ್ಸಪ್ ಹಾಗೂ ಪೇಸ್ ಬುಕ್ ಗಳಲ್ಲಿ  ಒಂದು ದೈವ ಇಬ್ಬರು ಮುಸ್ಲಿಂ ವೇಷಭೂಷಣ ಧರಿಸಿದ ಪಾತ್ರಿಗಳ ಜೊತೆ ಕೋಲಾಟವನ್ನು ಹೋಲುವ ಆಟ ಆಡುವ ವೀಡಿಯೋ ಹರಿದಾಡುತ್ತಾ ಇತ್ತು.ಇದು ಯಾವ ದೈವ ಎಂದು ಕೆಲವರು ನನ್ನಲ್ಲಿ ಕೇಳಿದ್ದರು.ಅದು ಮುಸ್ಲಿಂ ಮೂಲದ ದೈವ ಎಂದು ಊಹಿಸಿದ್ದೆನಾದರೂ ಯಾವ ದೈವ ಎಂದು ತಿಳಿದಿರಲಿಲ್ಲ. ಕೆಲವರು ಅದನ್ನು ಆಲಿ ಚಾಮುಂಡಿ ಎಂದಿದ್ದು ಅದು ಆಲಿ ಚಾಮುಂಡಿ ಅಲ್ಲ ಮುಕ್ರಿ ಪೋಕ್ಕನ್ನಾರ್/ ಪೋಕ್ಕೆರ್ ದೈವ ಇರಬಹುದು ಎಂದು ಊಹಿಸಿ ಹೇಳಿದ್ದೆ .ವಾಟ್ಸಪ್ ಗ್ರೂಪೊಂದರಲ್ಲಿ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಹಾಗೂ ತುಳುವೆರೆಂಕುಲು ಸಂಘದ ಗತ  ಕಾರ್ಯದರ್ಶಿ ಗಳಾದ ಚಂದ್ರಹಾಸ ಶೆಟ್ಟಿಯವರು ಅದನ್ನು ಮಾಪಿಲ್ಳೆ ತೆಯ್ಯಂ ಎಂದು ಹೆಸರಿಸಿದ್ದರು.ಆ ನಿಟ್ಟಿನಲ್ಲಿ ನಾನು ಮಾಹಿತಿ ಸಂಗ್ರಹಕ್ಕೆ ಶುರು ಮಾಡಿದೆ .ಆಗ ಕುಂಞಿ ರಾಮನ್ ಅವರು ಕೆಲ ಮಾಹಿತಿ ನೀಡಿದರುಅಂತರ್ಜಾಲದಲ್ಲೂ ಸ್ವಲ್ಪ  ಮಾಹಿತಿ ದೊರೆಯಿತು

ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ,ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದ ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ  ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ  ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ.ಹೀಗೆ ಆಲಿ ಚಾಮುಂಡಿ ಕೂಡಾ ಮಂತ್ರ ದೇವತೆಯ   ಆಗ್ರಹಕ್ಕೆ ತುತ್ತಾಗಿ ದುರಂತವನ್ನಪ್ಪಿ ನಂತರ ದೈವತ್ವವನ್ನು ಆರಾಧಿಸಲ್ಪಡುವ ಭೂತ    



ತುಳುವರ ಭೂತಾರಾಧನೆಯಲ್ಲಿ ಯಾವುದೇ ಜಾತಿ ಭೇದ ಅಂತ ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೋಕ್ಕೊಟು  ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ  ಅವರು ತಿಳಿಸಿದ್ದಾರ


 ಅಂತೆಯೇ ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. ಅನೇಕ ಕನ್ನಡ ಮೂಲದ ವ್ಯಕ್ತಿಗಳು. ತುಳುನಾಡಿನಲ್ಲಿ ಭೂತ ಗಳಾಗಿ ಆರಾಧಿಸಲ್ಪಡುತ್ತಿದ್ದಾರೆ   ಕನ್ನಡ ಬೀರ, ಬಚ್ಚನಾಯಕ, ಬೈಸು ನಾಯಕ, ಕರಿಯಣ್ಣ ನಾಯಕ, ಕಚ್ಚೆ ಭಟ್ಟ, ಕನ್ನಡ ಭೂತ, ಕನ್ನಡ ಭೂತ ಯಾನೆ ಪುರುಷ  ಭೂತ,ಕನ್ನಡಿಗ ಭೂತ ಮೊದಲಾದವರು ಮೂಲತಃ ಕನ್ನಡ ಭಾಷಿಗರು ಆಗಿದ್ದವರು      © copy rights reserved(c)Dr.Laxmi g Prasad

 .ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಪಡೆಯುವುದಕ್ಕೆ ಯಾವುದೇ ಜಾತಿ ಧರ್ಮದ ಮಿತಿ ಇಲ್ಲ. ಇಲ್ಲಿ ಬ್ರಾಹ್ಮಣರೂ ಭೂತವಾಗಿದ್ದಾರೆ.ಚಾಮುಂಡಿ,ಭಟ್ಟಿ ಭೂತ ,ಕಚ್ಚೆ ಭಟ್ಟ  ,ನಾರಳತ್ತಾಯ ಮೊದಲಾದ ಭೂತ ಗಳು ಬ್ರಾಹ್ಮಣ ಮೂಲದ ದೈವತಗಳು . ರಾಮ ಶೆಟ್ಟಿ ಎಂಬ ವೀರ ಶೈವ  ಲಿಂಗಾಯತ ವ್ಯಕ್ತಿ ನೆತ್ತರು ಮುಗಳಿ ಎಂಬ ಭೂತವಾಗಿದ್ದಾನೆ .ನೈದಾಲ ಪಾಂಡಿ ಕೂಡ ಮೂಲತಃ ಲಿಂಗಾಯತನಾಗಿ ಪರಿವರ್ತಿತನಾದ ರಾಜ ಕುಮಾರ . . ಅಚ್ಚುಬಂಗೇತಿ,ಅಕ್ಕಚ್ಚು ಭೂತ, ಬೊಟ್ಟಿ ಭೂತಗಳು ಮೂಲತಃ ಜೈನ ಧರ್ಮದವರಾಗಿದ್ದಾರೆ.   © copy rights reserved(c)Dr.Laxmi g Prasad

 ಕ್ರಿಶ್ಚಿಯನ್ ತೆಯ್ಯಂಗೆ ಆರಾಧನೆ ಇರುವ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರು ತಿಳಿಸಿದ್ದಾರೆ . ಅಂತೆಯೇ ತುಳುನಾಡಿನ ಅನೇಕ ಮುಸ್ಲಿಂ ಮೂಲದ ವ್ಯಕ್ತಿಗಳು ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಬಬ್ಬರ್ಯ, ,ಬ್ಯಾರ್ದಿ ಭೂತ, ಬ್ಯಾರಿ ಭೂತ,ಮಾಪುಲೇ ಮಾಪುಳ್ತಿ ಭೂತೊಳು,ಮಾಪುಳ್ತಿ  ಧೂಮಾವತಿ  ಮೊದಲಾದವರು ಮುಸ್ಲಿಂ ಮೂಲದ ದೈವತಗಳು. ಹೀಗೆ  ಆಲಿ ಭೂತ ಕೂಡಾ ಮುಸ್ಲಿಂ ಮೂಲದ ದೈವ .ಭೂತಗಳಾದ ನಂತರ ಇವರು ಹಿಂದೆ ಯಾರಾಗಿದ್ದರು ಎಂಬ ಪ್ರಶ್ನೆಯೇ ಇರುವುದಿಲ್ಲ .ಎಲ್ಲ ದೈವಗಳೂ ಸಮಾನ .ಎಲ್ಲ ದೈವಗಳಿಗೂ ಒಂದೇ ರೀತಿಯ ಗೌರವ ,ಭಕ್ತಿಯ ನೆಲೆ .ಇದು ತುಳು ನಾಡಿನ ವೈಶಿಷ್ಟ್ಯ .

   ©
ಮಾಪ್ಪಿಳ್ಳೆ ದೈವ ಕೂಡ ಜಾತ ಧರ್ಮ ಮತಗಳನ್ನು ಮೀರಿದ ಶಕ್ತಿ


ಹೆಸರೇ ಸೂಚಿಸುವಂತೆ ಮಾಪ್ಫಿಳ್ಳೆ ದೈವ ಮುಸ್ಲಿಂ ಮೂಲದ ದೈವತ.ಕಾಸರಗೋಡು ಸುತ್ತ ಮುತ್ತ ಈ ದೈವಕ್ಕೆ ಆರಾಧನೆ ಇದೆ. ಮಾವಿಲ‌ ಸಮುದಾಯದವರು ಈ ದೈವವನ್ನು ಕಟ್ಟುತ್ತಾರೆ.
ಈ ದೈವ ಮೂಲತಃ ಕೋಯಿ ಮೊಹಮ್ಮದ್ ಎಂಬ ಮುಸ್ಲಿಂ ಸಮುದಾಯದ ಪರಿಸರ ಪ್ರೇಮಿ.ಅಲ್ಲಿ ಒಮ್ಮೆ ಮಲೆ ಚಾಮುಂಡಿ ಕೋಲವನ್ನು ಏರ್ಪಡಿಸುವ ಸಲುವಾಗಿ‌ ಮರವನ್ನು ಕಡಿಯಲು ಸಿದ್ಧತೆ ಮಾಡುತ್ತಾರೆ. ಆಗ ಕೋಯಿ ಮೊಹಮ್ಮದ್ ಮರ ಕಡಿಯದಂತೆ ತಡೆಯುತ್ತಾನೆ.ಆಗ ಆತ ಮಲೆ ಚಾಮುಂಡಿ ದೈವದ ಕೋಪಕ್ಕೆ ಪಾತ್ರನಾಗುತ್ತಾನೆ.ಅದರ ಪರಿಣಾಮವಾಗಿ ಆತನ ಮೇಲೆ‌ ಮರ ಬಿದ್ದು ಆತ ಮರಣವನ್ನಪ್ಪುತ್ತಾನೆ.ದೈವಗಳ ಅನುಗ್ರಹಕ್ಕೆ ಪಾತ್ರ ರಾದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.ಅಂತೆಯೇ ದೈವಗಳ ಆಗ್ರಹಕ್ಕೆ ತುತ್ತಾದವರು ಕೂಡ ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುವ ವಿದ್ಯಮಾನ ತುಳುನಾಡಿನ ಹಲವೆಡೆ ಕಾಣಿಸುತ್ತದೆ.ಆಲಿ ಭೂತ, ಅರಬ್ಬಿ ಭೂತ, ಜತ್ತಿಂಗ ಮೊದಲಾದವರು ಪ್ರಧಾನ ದೈವಗಳ ಕೋಪಕ್ಕೆ ಈಡಾಗಿ ಮಾಯಕವಾಗಿ ದೈವತ್ವ ಪಡೆದು ದೈವಗಳಾಗಿ ಆರಾಧನೆ ಪಡೆಯುತ್ತಿದ್ದಾರೆ.ಹಾಗೆಯೇ ಕೋಯಿ ಮೊಹಮ್ಮದ್ ಕೂಡ ಮಲೆ ಚಾಮುಂಡಿ ದೈವದ ಸೇರಿಗೆ ದೈವವಾಗಿ ಮಾಪ್ಪಿಳ್ಳೆ ದೈವ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ.
ಅಲೌಕಿನ ನೆಲೆಯನ್ನು ಬಿಟ್ಟು ವಾಸ್ತವಿಕವಾಗಿ ಆಲೋಚಿಸುವಾಗ ಈತನಿಗೆ ಮತ್ತು ಮರ ಕಡಿಯುವವರ ನಡುವೆ ಸಂಘರ್ಷ ಉಂಟಾಗಿ ದುರಂತ‌ಮರಣಕ್ಕೀಡಾಗಿರಬಹುದು.ಅದಕ್ಕೆ ದೈವದ ಕಾರಣಿಕ ಸೇರಿರಬಹುದು, ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ವಿಶಿಷ್ಟತೆ ಆಗಿದೆ.ಅಂತೆಯೇ ದುರಂತವನ್ನಪ್ಪಿದ ಕೋಯಿ ಮೊಹಮ್ಮದ್ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ. ಆತ ಮುಸ್ಲಿಂ ಸಮುದಾಯದ ವ್ಯಕ್ತಿ ಆಗಿದ್ದಾನೆ‌ .ಕಾಸರಗೋಡು ಪರಿಸರದ‌‌ ಮುಸ್ಲಿಮರನ್ನು ಮಾಪ್ಪಿಳ್ಳೆ ಎಂದು ಕರೆಯುತ್ತಾರೆ. ಆದ್ದರಿಂದ ಕೋಯಿ ಮುಹಮ್ಮದ್ ಮಾಪ್ಪಿಳ್ಳೆ ಎಂಬ ಹೆಸರಿನ ದೈವ ಆಗಿ ಆರಾಧನೆ ಪಡೆಯುತ್ತಾನೆ.ಈ ದೈವ ಮುಸ್ಲಿಮರಂತೆ ವೇಷಭೂಷಣ ಧರಿಸಿದ ದೈವ ಪಾತ್ರಿಗಳ ಜೊತೆಗೆ ಮಾಪಿಳ್ಳೆ ಕಳಿ ಎಂಬ ವಿಶಿಷ್ಟ ನೃತ್ಯವನ್ನು ಮಾಡುತ್ತದೆ
ಈ ಮಾಪಿಳ್ಳೆ ದೈವ ಮತ್ತು ಮುಕ್ರಿ ಪೋಕ್ಕರ್ ದೈವ ಎರಡೂ ಒಂದೇ ಎಂಬ ಅಭಿಪ್ರಾಯ ಇದೆ.ಆದರೆ ವೇಷ ಭೂಷಣ, ಕಥಾನಕ ,ಆರಾಧನೆಯ ತಾಣ ಎಲ್ಲವನ್ನೂ ಗಮನಿಸಿದಾಗ ಇವೆರಡೂ ಬೇರೆ ಬೇರೆ ದೈವಗಳು ಎಂದು ತಿಳಿದು ಬರುತ್ತದೆ
© ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ -  ಹಿರಿಯರಾದ ಕುಂಞಿರಾಮನ್ ಮತ್ತು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯರು ನೀಡಿದ ಮೌಖಿಕ ಮಾಹಿತಿ  ಹಾಗೂ folkstudioin ಬ್ಲಾಗ್ http://folkstudioin.blogspot.in/2013/11/mappila-theyyam-i-t-is-presence-of.html?m=1