
ಕೇರಳದ ದಕ್ಷಿಣ ಭಾಗದಲ್ಲಿ ಕೋಲಂ ತುಳ್ಳಲ್ ಎಂಬ ಆರಾಧನಾ ಸಂಪ್ರದಾಯವಿದೆ .ಇದನ್ನು ಭಗವತಿ ದೇವಾಲಯಗಳಲ್ಲಿ ಮಾಡುತ್ತಾರೆ . ಪಡೆಯಣಿ ಎಂಬ ವೀರ ಆರಾಧನೆಯ ಸಂದರ್ಭದಲ್ಲಿ ಆಚರಿಸುತ್ತಾರೆ .ಜೊತೆಗೆ ಮನೆಯಲ್ಲಿ ಕೂಡ ಕೆಲವು ದುಷ್ಟ ಶಕ್ತಿಗಳ ನಿವಾರಣೆಗಾಗಿ ಕೂಡ ಮಾಡುತ್ತಾರೆ
ಪಡೆ ಎಂದರೆ ಸೈನಿಕ ಕ್ಷಾತ್ರ ವೀರ ಎಂದರ್ಥ .ಇಲ್ಲಿ ವೀರ ಆರಾಧನೆಯೇ ಭೂತಾರಾಧನೆ ಯ ರೀತಿಯಲ್ಲಿ ಅಭಿವ್ಯಕ್ತಿಸುತ್ತಾರೆ .ಇಲ್ಲಿನ ವೀರರು ದೈವತ್ವ ಪಡೆದು ಆರಾಧಿಸಲ್ಪಡುವ ರೀತಿ ಇದು
ಕೋಲಂ ತುಳ್ಳಲ್ ನಲ್ಲಿ ವಿವಿಧ ಯಕ್ಷಿಗಳು,ದೈವಗಳು ಆರಾಧನೆ ಪಡೆಯುತ್ತಾರೆ .ಮರುತಯಕ್ಷಿ ,ಅಂತರ್ಯಕ್ಷಿ,ಸುಂದರ ಯಕ್ಷಿ,ಆರಕ್ಕಿ ಯಕ್ಷಿ,ಕಾಲ ಯಕ್ಷಿ,ಮಾಯ ಯಕ್ಷಿ,ಅಂಬರ ಯಕ್ಷಿ ,ಪಕ್ಷಿ ಯಕ್ಷಿ,ಕಾಳಮತಂ,ಪುಲಿಮತನ್,ವಟಿಮದನ್,ರಕ್ತ ಚಾಮುಂಡಿ ಅಪಸ್ಮಾರ ಯಕ್ಷಿ ದೇವತ,ಭೈರವಿ ಕಾಲನ್ ಮಂಗಳ ಭೈರವಿ ಯಕ್ಷಿ ಮೊದಲಾದ ಶಕ್ತಿಗಳಿಗೆ ಆರಾಧನೆ ಇದೆ .ಇದು ಪ್ರಧಾನವಾಗಿ ಕಾಳಿಯ ಆರಾಧನೆ ,ದಾರುಕ ವಧೆಯ ನಂತರವೂ ಶಾಂತವಾಗದ ದೇವಿಯನ್ನು ಕೋಲ ಕುನಿತ್ದು ಶಾಂತವಾಗಿಸಿ ಆರಾಧಿಸುತ್ತಾರೆ
ಲ .ಇಲ್ಲಿ ಅನೇಕ ಯಕ್ಷ ಯಕ್ಷಿಯರ ಗಂಧರ್ವರ ಆರಾಧನೆ ಇದೆ
ಇಲ್ಲಿನ ಯಕ್ಷಿಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್
ಈ ಶಕ್ತಿಗಳ ಜೊತೆ ಒಂದು ವಿಶಿಷ್ಟ ಕೋಲ ಇದೆ .ಅದುವೇ ಗಣಪತಿ ಕೋಲ
ಗಣಪತಿಯ ಆರಾಧನೆಯನ್ನು ಮೊದಲು ಮಾಡುವ ಸಂಪ್ರದಾಯ ಎಲ್ಲೆಡೆ ಇದೆ .ಯಾವುದೇ ಕೆಲಸದ ಆರಂಭದಲ್ಲಿ ಆರಾಧನೆಯ ಸಂದರ್ಭದಲ್ಲಿ ಕೂಡ ಗಣಪತಿಗೆ ಆರಾಧನೆ ಇರುತ್ತದೆ
ಅಂತೆಯೇ ಕೋಲಂ ತುಳ್ಳಲ್ ಆರಂಭದಲ್ಲಿ ವಿಘ್ನ ವಿನಾಶಕನ ಪೂಜೆ ಇರುವುದು ಸಹಜ.
ಆದರೆ ಇಲ್ಲಿ ಗಣಪತಿ ಗೆ ಕೋಲ ಕೊಟ್ಟು ಆರಾಧಿಸುತ್ತಾರೆ .ಹಾಗಾಗಿ ಮೊದಲುಕುಣಿಯುವ ಅಭಿವ್ಯಕ್ತಿಸುವ ಕೋಲವನ್ನು ಗಣಪತಿ ಕೋಲ ಎನ್ನುತ್ತಾರೆ ಎಂಬ ಅಭಿಪ್ರಾಯವೂ ಇದೆ.ಆದರೆ ಕೋಲ ಕಟ್ಟಿಯೇ ಇಲ್ಲಿ ಗಣಪತಿ ಗೆ ಆರಾಧನೆ ಇದೆ .ಬೇರೆ ಯಕ್ಷಿ ಯಾರ ವೇಷ ಭೂಷಣ ಗಳಲ್ಲಿಯೇ ಗಣಪತಿಗೆ ಸಾಂಕೇತಿಕವಾಗಿ ಕೋಲ ಕೊಡುವ ಪದ್ಧತಿಯೂ ಇದೆ .ಬೇರೆ ಬೇರೆ ಯಕ್ಷಿ ಹಾಗೂ ಶಕ್ತಿಗಳು ಕುಣಿದು ಗಣಪತಿಯನ್ನು ಆರಾಧಿಸುತ್ತಾ ಕೋಲ ನೀಡುವ ಪದ್ಧತಿ ಕೂಡ ಇದೆ
ತುಳುವರಲ್ಲಿ ಗಣಪತಿಯಕುರಿತಾದ ಪರಿಕಲ್ಪನೆ ಪುರಾಣ ಕಥೆಗಿಂತ ತುಸು ಭಿನ್ನವಾಗಿದೆ.ಇಲ್ಲಿ ಗಣಪತಿ ಪಾರ್ವತಿಯ ಮಗನಲ್ಲ . ಈಶ್ವರ ದೇವರಿಗೆ ಹೂ ಕೊಯ್ದು ತರುವ ಹುಡುಗ ಒಂದು ದಿನ ಒಂದು ಕಿಸ್ಕಾರ ಹೂವನ್ನು ಬೆನ್ನು ಹತ್ತುತ್ತಾ ಮಿತ್ತು ಸಿರಿಗಳ ಲೋಕಕ್ಕೆ ಹೋಗುತ್ತಾನೆ ಅಲ್ಲಿ ಕಿರಿಯ ಸಿರಿ ಮೈಸಗೆಯನ್ನು ನೋಡಿ ಅವಳ ಅಪಾರ ಸೌಂದರ್ಯವನ್ನು ನೋಡಿ ಮೂರ್ಚೆ ತಪ್ಪಿ ಬೀಳುತ್ತಾನೆ.ಅವವನನ್ನು ನೀರು ಹಾಕಿ ಎಬ್ಬಿಸಿ ಈ ಕಡೆ ನಾರಾ ಮನುಷ್ಯರು ಬರಬಾರದೆಂದು ಎಚ್ಚರಿಸಿ ಕಳುಹಿಸುತ್ತಾಳೆ ಅವಳು .ತಡವಾಗಿ ಬಂದುದಕ್ಕೆ ಕಾರಣವನ್ನು ಕೇಳಿದಾಗ ಈಶ್ವರ ದೇವರಿಗೆ ಮೈಸಗೆಯ ವಿಚಾರ ತಿಳಿಯುತ್ತದೆ .ಅವಳೆಡೆಗೆ ಹೋಗಿ ಅವಳನ್ನು ತನ್ನೊಂದಿಗೆ ಕರೆತರುತ್ತಾನೆ ಹೀಗೆ ಈಶ್ವರ ದೇವರು ಮತ್ತು ಮೈಸಗೆಗೆ ಹುಟ್ಟುವ ಮಗು ಗಣಪತಿ .ಈತನಿಗೆ ಬಾಮ ಕುಮಾರ ಎಂದು ಹೆಸರು ಇದು ತುಳುವರ ಗಣಪತಿಯ ಪರಿಕಲ್ಪನೆ .
ಆದರೆ ಗಣಪತಿ ಯನ್ನು ಭೂತ ಕಟ್ಟಿ ಆರಾಧಿಸುವ ಪದ್ಧತಿ ಇಲ್ಲ ಆದರೆ ಧೂಮಾವತಿ ರಕ್ತೇಶ್ವರಿ ,ಗುಳಿಗ ,ವಾಲಿ,ಸುಗ್ರೀವ ಮೊದಲಾದ ಪುರಾಣ ಮೂಲ ಶಕ್ತಿಗಳಿಗೆ ಭೂತದ ನೆಲೆಯಲ್ಲಿಕೋಲ ನೀಡಿ ಆರಾಧಿಸುತ್ತಾರೆ .
ಕೋಲದ ರೂಪದಲ್ಲಿಯೇ ದೇವತಾ ಆರಾಧನೆ ಪ್ರಚಲಿತ ವಿರುವ ಪ್ರದೇಶಗಳಲ್ಲಿ ಪುರಾಣ ಮೂಲದ ದೈವ್ತ್ವಗಳನ್ನು ಭೂತದ ನೆಲೆಯಲ್ಲಿಯೇ ಆರಾಧಿಸುವುದು ಸಹಜವೇ ಆಗಿದೆ
ಅಂತೆ ಇಲ್ಲಿ ಕೂಡ ಗಣಪತಿ ಗೆ ಕೋಲ ನೀ
ಡಿ ಆರಾಧಿಸುವ ಸಂಪ್ರದಾಯ ಬಳಕೆಗೆ ಬಂದಿದೆ
ಈ ಬಗ್ಗೆ ಹೆಚ್ಚ್ಚಿನ ಅಧ್ಯಯನದ ಅಗತ್ಯವಿದೆ
