Sunday 6 December 2015

ಸಾವಿರದ ಇನ್ನೂರ ಐದು ಭೂತ/ದೈವಗಳ ಹೆಸರುಗಳು –© ಡಾ.ಲಕ್ಷ್ಮೀ ಜಿ ಪ್ರಸಾದ

ಧನ್ಯತೆಯ ನಿರಾಳ ಕ್ಷಣ ..
ಅಂತೂ ಇಂತೂ ಹಿಡಿದ ಒಂದು ಕೆಲಸವನ್ನು ಒಂದು ಹಂತಕ್ಕೆ ಮುಟ್ಟಿಸಿದೆ ,
ಕಳೆದ ಹತ್ತು ಹನ್ನೆರಡು ವರ್ಷಗಳ ಕ್ಷೇತ್ರ ಕಾರ್ಯದಲ್ಲಿ ಸಿಕ್ಕ ಮಾಹಿತಿಗಳು ಮುಖ ಪುಟ ಸ್ನೇಹಿತರು ಹಾಗೂ ಇತರ ಆತ್ಮೀಯರು ನೀಡಿದ ಮಾಹಿತಿ ,ಇತರೆ ಸಂಶೋಧಕರ ಕೃತಿಗಳಲ್ಲಿನ ಮಾಹಿತಿ ಎಲ್ಲವನ್ನೂ ಒಟ್ಟು ಹಾಕಿದಾಗ ಒಟ್ಟು ಸಾವಿರದ ಇನ್ನೂರ ಐದು ದೈವಗಳ ಹೆಸರು ಸಿಕ್ಕವು .ವಾರದಿಂದ ಪಟ್ಟು ಹಿಡಿದು ಕುಳಿತು ಇವನ್ನು ವರ್ಣಮಾಲಿಕೆಗೆ ಅನುಕ್ರಮವಾಗಿ ಜೋಡಿಸಿ ಸಂಖ್ಯೆ ಕೊಟ್ಟಾಗ ನಿಖರ ಸಂಖ್ಯೆ ದೊರೆಯುತು ,ಎರಡು  ವರ್ಷಹಿಂದೆ  ಪ್ರಕಟವಾದ  ಭೂತಗಳ ಅದ್ಭುತ ಜಗತ್ತು ಕೃತಿಯ ಎಲ್ಲ ಪ್ರತಿಗಳು ಮುಗಿದಿದ್ದು ಅನೇಕರು ಮತ್ತೆ ಪ್ರಕಟಿಸುವಂತೆ ಕೇಳಿದ್ದರು .ಹಾಗಾಗಿ ಆ ಕೃತಿಯನ್ನು ಪರಿಷ್ಕರಿಸಿದ್ದು  ಮತ್ತೆ ಪ್ರಕಟಿಸುತ್ತಿದ್ದು   ಅದರಲ್ಲಿ ನಾನು ಸಂಗ್ರಹಿಸಿದ ಸಾವಿರದ ಇನ್ನೂರ ಐದು ದೈವಗಳ ಹೆಸರುಗಳು  ಲಭ್ಯವಿರುತ್ತದೆ


ತುಳುವರ ಭೂತ ಕನ್ನಡದ ಭೂತವಲ್ಲ. ತುಳುವರ ಭೂತ ಪದ ದೇವತಾ ವಾಚಿ ಪದ .ದುಷ್ಟ ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಸತ್ಯದ ಶಕ್ತಿಗಳು ಇವು.
ತುಳುವಿನ ಭೂತ ಪದಕ್ಕೆ ಕನ್ನಡದ ಭೂತ ಎಂಬ ಪದಕ್ಕೆ  ಇರುವಂತೆ ಭೂತ ಪ್ರೇತ ಪಿಶಾಚಿ ಎಂಬ ಕೆಟ್ಟ ಶಕ್ತಿಗಳು ಎಂಬ ಅರ್ಥವಿಲ್ಲ.ತುಳುವರ ಭೂತಗಳು ಜನರನ್ನು ಹೆದರಿಸಿ ಬೆದರಿಸಿ ಕಾಡುವ ಕೆಟ್ಟ ,ಕ್ಷುದ್ರ ಶಕ್ತಿಗಳಲ್ಲ . ಸಂಸ್ಕೃತ ಮೂಲದ ಪೂತಮ್ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ವರ್ಣ ವ್ಯತ್ಯಯ ಗೊಂಡು ಸಂಸ್ಕೃತೀಕರಣಕ್ಕೊಳಗಾಗಿ ಬೂತೊ>ಭೂತೋ>ಭೂತ ಆಗಿದೆ .ಕೊಡವರು ಇಂದಿಗೂ ಭೂತವನ್ನು ಪೂದ ಎಂದೇ ಕರೆಯುತ್ತಾರೆ.ತುಳುವಿನಲ್ಲಿ ಪೂ >ಭೂ ಆದರೆ ಕೊಡವರಲ್ಲಿ ತ>ದ ಆಗಿ ವರ್ಣ ಬದಲಾವಣೆ ಆಗಿದೆ
ತುಳು ಭೂತಗಳಲ್ಲಿ ಹೆಚ್ಚಿನವರು ಅಸಾಮಾನ್ಯ ಸಾಹಸ ಮರೆದು ದುರಂತವನ್ನಪ್ಪಿ ಮಾಯವಾಗಿ ದೈವತ್ವ ಪಡೆದ ಸಾಂಸ್ಕೃತಿಕ ನಾಯಕರೇ ಆಗಿದ್ದಾರೆ.ಆದ್ದರಿಂದ ಹಿಂದೆ ಇದ್ದವರು ಎಂಬ ಅರ್ಥದಲ್ಲಿಯೂ ಭೂತ ಪದ ಬಳಕೆಗೆ ಬಂದಿರುವ ಸಾಧ್ಯತೆ ಇದೆ
.ತುಳುನಾಡಿನಲ್ಲಿ ದೈವತ್ವ ಪಡೆದು ಭೂತವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ,ಇಲ್ಲಿ ಭೂತ ದೈವ ದೇವರು ಎಲ್ಲವೂ ಸಮಾನರ್ಥಕ ಪದಗಳಾಗಿವೆ.
ನನ್ನ ಆಸಕ್ತಿಯ ಕ್ಷೇತ್ರವಿದು ,ಹಾಗಾಗಿಯೇ ತುಳುನಾಡಿನ ಎಲ್ಲ ದೈವ/ಭೂತಗಳ ಬಗ್ಗೆ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿ ಬರೆಯುವ ಯತ್ನ ಮಾಡುತ್ತಿದ್ದೇನೆ .


ಎರಡು ವರ್ಷ ಹಿಂದೆ    ನವೆಂಬರ್ ತಿಂಗಳಿನಲ್ಲಿ ನನ್ನ ಪಿಎಚ್ ಡಿ ಸಂಶೋಧನಾ ಮಹಾ ಪ್ರಬಂಧ “ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ “ ಪ್ರಕಟಣೆಯ ಸಂದರ್ಭದಲ್ಲಿ ವಿದ್ವತ್ ಪೂರ್ಣವಾದ ಮುನ್ನುಡಿ ಬರೆದು ಕೊಟ್ಟ ಡಾ.ವಾಮನ ನಂದಾವರ ಅವರು ರೆವರಂಡ್ ಮೇನ್ನರ್ ತೋರಿದ ಹಾದಿಯಲ್ಲಿ ಸಾವಿರದೊಂದು ಗುರಿಯೆಡೆಗೆ   ಎಂಬ ಶೀರ್ಷಿಕೆಯಡಿಯಲ್ಲಿ ನನ್ನ ಸಂಗ್ರಹದ ಸುಮಾರು 180 ದೈವಗಳು ಅವರ ಸಂಗ್ರಹ ಹಾಗೂ ಈ ಹಿಂದೆ ಸಂಗ್ರಹವಾದ ದೈವಗಳ ಪಟ್ಟಿಯನ್ನು ಉಲ್ಲೇಖಿಸಿ ಇದು 552 ಆಗಿದೆ ಮುಂದಕ್ಕೆ ಇದರ ಲೆಕ್ಕಹೆಚ್ಚಾಗಬೇಕೆ ಹೊರತು ಇದಕ್ಕಿಂತ ಕಡಿಮೆ ಆಗಬಾರದು ಎಂದು ತಿಳಿಸಿ ನನಗೊಂದು ಗುರಿಯನ್ನು ತೋರಿಸಿ ಕೊಟ್ಟರು.
ಅದರಂತೆ ನಾನು ಸಾವಿರದೊಂದು ಗುರಿಯೆಡೆಗೆ ಶೀರ್ಷಿಕೆಯಲ್ಲಿ ಅಕಾರಾದಿಯಲ್ಲಿ ದೈವಗಳ ಕುರಿತಾದ ಮಾಹಿತಿ ಸಂಗ್ರಹಿಸಿ ಬರೆಯತೊಡಗಿದೆ .ಈಗ ಸುಮಾರು ಮುನ್ನೂರು  ದೈವಗಳ  ಬಗ್ಗೆ ಬರೆದಿದ್ದೇನೆ
ಜೊತೆಗೆ ಎಲ್ಲ ದೈವಗಳ ಹೆಸರನ್ನು ಒಂದೆಡೆ ಕಲೆ ಹಾಕುವ ಯತ್ನ ಮಾಡಿದೆ .. ನನಗೆ ಆರಂಭದಲ್ಲಿ 460 ಹೆಸರುಗಳು ಸಿಕ್ಕಿವೆ ಅದನು ಬ್ಲಾಗ್ ಗೆ ಹಾಕಿದೆ ಅದನ್ನು ಅನೇಕ ಕೃತಿ ಚೋರರು  ಕಾಪಿಮಾಡಿ ಅವರವರ ಹೆಸರಿನಲ್ಲಿ ವಾಟ್ಸಪ್ ಫೇಸ್ ಬುಕ್ ಗಳಲ್ಲಿ ಈಗಲೂ ಶೇರ್ ಮಾಡುತ್ತಿದ್ದಾರೆ !
ತುಳುನಾಡಿನ 460 ದೈವಗಳ ಹೆಸರುಗಳು

1 ಅಕ್ಕಚ್ಚು
2 ಅಕ್ಕಮ್ಮ ದೈಯಾರು
3 ಅಕ್ಕೆರಸು
4 ಅಕ್ಕೆರಸು ಪೂಂಜೆದಿ
5 ಅಕ್ಕೆರ್ಲು
6 ಅಕ್ಕ ಬೋಳಾರಿಗೆ
6 ಅಚ್ಚು ಬಂಗೇತಿ
7 ಅಜ್ಜ ಬೊಲಯ
8 ಅಜ್ಜಿ ಭೂತ
9 ಅಟ್ಟೋಡಾಯೆ
10 ಅಡಿಮಣಿತ್ತಾಯ
11 ಅಡಿಮರಾಂಡಿ
12 ಅಣ್ಣಪ್ಪ
13ಅಬ್ಬೆರ್ಲು
14 ಅಡ್ಕದ ಭಗವತಿ
15ಅತ್ತಾವರ ದೆಯ್ಯೊಂಗುಳು
16 ಅಡ್ಡೋಲ್ತಾಯೆ
17 ಅಡ್ಕತ್ತಾಯ
18 ಅಡ್ಯಲಾಯೆ
19 ಅಡ್ಯಂತಾಯ
20 ಅಬ್ಬಗ
21 ಅಬ್ಬೆ ಜಲಾಯ
22 ಅರಬ್ಬೀ ಭೂತ
23 ಅರಸಂಕುಳು
24 ಅರಸು ಭೂತ
25 ಅನ್ನರ ಕಲ್ಲುಡೆ
26 ಅಗ್ನಿ ಚಾಮುಂಡಿ ಗುಳಿಗ (ಮುಕಾಂಬಿ ಗುಳಿಗ )
27 ಆಚಾರಿ ಭೂತ
28 ಆನೆ ಕಟ್ನಾಯೆ
29 ಆಲಿ
30 ಆಟಿ ಕಳಂಜೆ ?!
31ಅಂಗಣತ್ತಾಯೆ
32 ಅಮ್ಬೆರ್ಲು
33 ಇಷ್ಟ ಜಾವದೆ
34 ಈರ ಭದ್ರೆ
35 ಈಸರ ಕುಮಾರೆ
36 ಉಮ್ಮಳಾಯ
37 ಉಮ್ಮಳಿ
38 ಉರಿ ಮರ್ತಿ
39 ಉರಿಯಡಿತ್ತಾಯ
40 ಉಳ್ಳಾಯ
41ಉಳ್ಳಾಲ್ತಿ
42 ಉಳಿಯತ್ತಾಯ
43 ಉಳ್ಳಾಕುಲು
44 ಉರವೆ
45 ಉರಿಮರ್ಲ
46 ಎಲ್ಯ ಉಳ್ಳಾಕುಳು

47 ಎರಿಯಜ್ಜ
48 ಎರು ಕನಡೆ
49 ಎರು ಕೋಪಾಳೆ
50 ಎರು ಬಂಟ
51 ಎರು ಶೆಟ್ಟಿ
52 ಎರು
53 ಎಲ್ಯಕ್ಕೆರ್
54 ಎಲ್ಯನ್ನೇರ್
55 ಒಕ್ಕು ಬಲ್ಲಾಳ

56 ಒಲಿ ಚಾಮುಂಡಿ

57 ಒಲಿಪ್ರಾಂಡಿ
58 ಒರು ಬಾಣಿಯೆತ್ತಿ
59 ಓಡಿಲ್ತಾಯ
60 ಒಂಜರೆ ಕಜ್ಜದಾಯೆ
61 ಒರ್ಮುಗೊತ್ತಾಯೆ
62 ಒರಿ ಉಲ್ಲಾಯೆ
63 ಒರ್ಮಲ್ತಾಯೆ
64 ಒರ್ಮುಲ್ಲಾಯೆ
65 ಒಲಿ ಮರ್ಲೆ

66 ಕಚ್ಚೆ ಭಟ್ಟ
67 ಕನ್ನಡ ಭೂತ
68 ಕನ್ನಡ ಬೀರ
69 ಕನ್ನಡಿಗ
70 ಕತ್ತಲೆ ಬೊಮ್ಮಯ
71 ಕಡಂಬಳಿತ್ತಾಯ
72 ಕರ್ಮಲೆ ಜುಮಾದಿ (ಬಿರ್ಮಣ ಬೈದ್ಯ)
73 ಕರ್ನಾಲ ದೈವ

74 ಕನಪಡಿತ್ತಾಯ
75 ಕನ್ನಡ ಯಾನೆ ಪುರುಷ ಭೂತ
76 ಕಲ್ಕುಡ
77 ಕಲ್ಲುರ್ಟಿ
78 ಕಂಟಿರಾಯೆ
79 ಕಡನ್ತಾಯೆ
80 ಕನಲ್ಲಾಯೆ
81 ಕನ್ಯಾಕುಮಾರಿ
82 ಕಬಿಲ
83 ಕರಿಯನಾಯಕ
84 ಕರಿಯ ಮಲ್ಲ
85 ಕರಿ ಚಾಮುಂಡಿ
86 ಕಾಲ ಭೈರವ
87 ಕಾಳ ರಾಹು
88 ಕಳರ್ಕಾಯಿ
89 ಕಲ್ಲೂರತ್ತಾಯೆ
90 ಕಲ್ಲೇರಿತ್ತಾಯ
91 ಕುರಿಯಾಡಿತ್ತಾಯ
92 ಕಾಳಮ್ಮ
93 ಕೆರೆ ಚಾಮುಂಡಿ
94 ಕಳಲ‘
95 PÀArUÉvÁÛAiÀÄ’ ಕಳುವೆ
96 ಕಾಂಜವ
97 ಕಾಂತಾ ಬಾರೆ
98 ಕಾಂತು ನೆಕ್ರಿ
99 ಕಾಯರಡಿ ಬಂಟೆ
100 ಕಾರಿ
101 ಕಾಳರಾತ್ರಿ
102 ಕರಿಯಣ್ಣ ನಾಯಕ
103 ಕಾಜಿ ಮದಿಮ್ಮಾಲ್ ಕುಲೆ
104 ಕಾಡೆದಿ
105 ಕಾರಿಂಜೆತ್ತಾಯ
106 ಕಾರ್ಕಳತ್ತಾಯೇ
107 ಕಿನ್ನಿದಾರು
108 ಕಾಜು ಕುಜುಂಬ
109 ಕುಲೆ ಭೂತ
110 ಕುಲೆ ಮಾಣಿಗ
111 ಕುಲೆ ಬಂಟೆತ್ತಿ
112 ಕುರವ
113 ಕುರೆ ಪೆರ್ಗಡೆ
114 ಕುಕ್ಕೆತ್ತಿ
115 ಕುಕ್ಕಿನಂತಾಯ
116 ಕುರ್ಕಲ್ಲಾಯೆ
117 ಕುಮಾರ ಸ್ವಾಮಿ
118 ಕುಂಞÂ ಭೂತ
119 ಕುಂಜೂರಾಯ
120 ಕುಂಜಣಿಗೋ
121 ಕುಟ್ಟಿ ಚಾತು
122 ಕುಮಾರ
123 ಕೂಜು
124 ಕೇತುರ್ಲಾಯೆ
125 ಕೊಟ್ಯದಾಯೆ
126 ಕೇಚರಾವುತ
127 ಕೆಂಜಳ್ತಾಯೆ
128 ಕೊಡನ್ಗೆತ್ತಾಯೆ
129 ಕೊರಗ
130 ಕೊಲ್ಲುರಮ್ಮ
131 ಕೋಡಿದಜ್ಜೆ
132 ಕುಂಟುಕಾನ ಕೊರವ
133 ಕುಂಡ
134 ಕುಂದಯ
135 ಕಿನ್ನಿ ಮಾಣಿ
136 ಕಿರಿಯಾಯೆ

137 ಕೂಜಿಲು
138 ಕೊರಗ ತನಿಯ
139 ಕೊರತಿ
140 ಕೋರ್ದಬ್ಬು /ಕೋಟೆದ ಬಬ್ಬು ಸ್ವಾಮಿ
141 ಕೋಟಿ
142 ಕೋಮರಾಯ
143 ಕೋಮಾರು ಚಾಮುಂಡಿ
144 ಕೋಟೆತ್ತ ಕಲ್ಲಾಳ

145 ಗಂಗನಾಡಿ ಕುಮಾರ
146 ಗಂಡ ಗಣ
147 ಗಡಿರಾವುತೆ
148 ಗಿಂಡೆ
149 ಗಿರಾವು
150 ಗಿಳಿರಾಮ

151 ಗುಳಿಗ
152 ಗುಮ್ಟೆ ಮಲ್ಲ
153 ಗುಳಿಗನ್ನಾಯ
154 ಗುರಮ್ಮ
155 ಗುರಿಕ್ಕಾರ
156 ಗೆಜ್ಜೆ ಮಲ್ಲೆ
157 ಗೋವಿಂದ
158 ಗುರು ಕಾರ್ನೂರು
159 ಚಂಡಿ
160 ಚಿಕ್ಕ ಸದಾಯಿ
161ಚಾಮುಂಡಿ
162 ಚೀನೀ ಭೂತಗಳು
163 ಚೆನ್ನಯ
164 ಚೆನ್ನಿಗರಾಯ
165 ಚೇರಿತ್ತಾಯೆ
166 ಚೈಂಬೆರ್
167 ಜತೆ ಕುಲೆ
168 ಜಂಗ ಬಂಟ
169 ಜಂದರ್ಗತ್ತಾಯೆ
170 ಜಗನ್ನಾಥ ಪುರುಷ
171ಜಟ್ಟಿಗ
172 ಜಟಾ ಧಾರಿ
173 ಜಡೆತ್ತಾರ್
174 ಜದ್ರಾಯೆ
175 ಜಾವದೆ

176 ಜೋಗಿ ಪುರುಷ
178 ಜಾಲಬೈಕಾಡ್ತಿ
179 ಜಾರಂದಾಯ
180 ಜಾನು ನಾಯ್ಕ
181 ಜೂಂಬ್ರ
182 ಡೆಂಜಿ ಪುಕ್ಕೆ
183 ತನ್ನಿ ಮಾಣಿಗ
184 ತಡ್ಯದಜ್ಜೆ
185 ತುಳು ಭೂತ
186 ತೋಮಜ್ಜ
187 ತೋಡ ಕುಕ್ಕಿನಾರ್ /ವೈದ್ಯ ನಾಥ
188 ದರಮ್ ಬಲ್ಲಾಳ್ತಿ , , ,
189 ದಾರಗ
190 ದಾರು
191 ದಾಲ್ಸುರಾಯ
192 ದುಗ್ಗಲಾಯ
193ಧೂಮಾವತಿ
194 ದೇವಾನು ಪಂಬೆದಿಯಮ್ಮ
195 ದೈವನ ಮುಟ್ಟುನಾಯೆ,
196 ದೈವಸಾದಿಗೆ
197 ದೆಯ್ಯಾರ್
198 ದೆಯ್ಯಂಕುಳು
199 ದಂಡೆ ರಾಜ
200 ದರ್ಗಂದಾಯ
201 ದುಗ್ಗಮ್ಮ ದೈಯಾರ್
202 ದುರ್ಗಂತಾಯೆ
203 ದೂರ್ದುಮ
204 ದೇಯಿ
205 ದೇವ ಪುರುಷ
206 ದೇವು ಪುಂಜ
207‘£ÀqÉÆØrvÁÛAiÀÄ

208 ನಾಗ ಭೂತ
209 ನಾಗಂತಾಯೆ
210 ನಾಗ ಚಾಮುಂಡಿ
210 ನಾಗ ನಂದಿ
211 ನೀಚ /ಅಂಗಾರ ಬಾಕುಡ
212 ನಾಲ್ಕೈತ್ತಾಯ
213 ನಾರಪಾಡಿ ಪೊಸಕಲ್ಲಾಳೆ
214 ನಾರಳತ್ತಾಯ
215 ನಂದಿ ಗೋಣ
216 ನೈದಾಲ ಪಾಂಡಿ
217 ನೆತ್ತರು ಮುಗುಳಿ :
218 ನೇರಳತ್ತಾಯ
219 ನೆಲ್ಯಕ್ಕೇರ್
220 ನೇಲ್ಯನ್ನೆರ್
221 ನೆಲ್ಲುರಾಯ
222 ನುರ್ಗಿಮದಿಮ್ಮಾ
223 ನಾಯರ್ ಭೂತ
224 ನಾರಂಬಡಿ
225 ನಾಲ್ಕೈ ಭದ್ರೆ
226 ನೇಲ್ಯ ರಾಯೆ
227 ನೇಲ್ಯ ರಾಯ ಬವನೊ
228 ನಂದಿ
229 ಪಡ್ಕಂತಾಯ
230 ಪಯ್ಯ ಬೈದ್ಯ
231 ಪಾಡಿರಾಯ
232 ಪಾಲಕತ್ತಾಯ
233 ಪಾಲೆತ್ತಾಯ

234 ಪರವ ಭೂತ
235 ಪರಿವಾರ ನಾಯಕ
236 ಪಟ್ಟಂತರಸು , ,
237 ಪಟ್ಟೋರಿತ್ತಾಯ
238 ಪತ್ತೊಕ್ಕೆಲು ಜನಾನುದೈವ
239 ಪಂಜುರ್ಲಿ
240 ಪಲ್ಲದ ಮುದ್ದ
241 ಪಂಚ ಜುಮಾದಿ
242 ಪಾಪೆಲು ಚಾಮುಂಡಿ
243 ವಿಷ್ಣು ಮೂರ್ತಿ
245 ಪುದೆಲ್ ಪುಂಚ
246 ಪುದ
247 ಪುತ್ತು ಗಿರಾವು
248 ಪುರಲಾಯೆ
249 ಪೆಲದ್ಕತ್ತಾಯೆ
250 ಪೆರ್ದೊಳ್ಳು
251 ಪೊಟ್ಟೋಳು
252 ಪೊಟ್ಟೋರಿತ್ತಾಯ
253 ಪೊಯ್ಯತ್ತಾಯ
254 ಪೊಸಲ್ದಾಯೇ
255 ಪೊಸ ಮಾರಾಯೆ
256 ಪೊಸೊಳಿಗೆ ಅಮ್ಮ
257 ಪಡುವೆಟ್ನಾಯ
258 ಪಿಲಿ ಚಾಮುಂಡಿ
259 ಪುದರುಚಿನ್ನ ಬಂಟ
260 ಪೂಮಾಣಿ
261 ಪೊಟ್ಟ ಪಂಜುರ್ಲಿ
262 ಪೋತಾಳ/ಪುದತ್ತಾಳ
263 ಪೊಯ್ಯೆತ್ತಾಯಿ

264 ಪಿಲೆ
265 ಪೆಲತ್ತಿ
266 ಪೋಲಿಸ್ ಭೂತ
267 ಬಂಟಾಮ್ಡಿ
268 ಬರಮಲ್ತಾಯೆ

269 ಬಲವಂಡಿ
270 ಬಳ್ಳು
271 ಬಚ್ಚ ನಾಯಕ
272 ಬಸ್ತಿ ನಾಯಕ

273 ಬಿರಣ
274 ಬ್ಯಾರಿ ಭೂತ
278 ಬ್ಯಾರ್ದಿ ಭೂತ
279 ಬೀರ್ನಾಚಾರಿ :
280 ಬಿರ್ಮಣಾಚಾರಿ :
281 ಬೀರ್ನಾಳ್ವ
282 ಬೆರ್ಮೆರ್
283 ಬೇಡವ :
284 ಬಂಡಿರಾಮ
285 ಬಂಡಾರಿ
286 ಬಾಕುಡ
287 ಬಾಕುಡ್ತಿ
289 ಬಾಡುರಾಯೆ
290 ಬಾಮ ಕುಮಾರ
291 ಬಾಲ ಕುಮಾರ
292 ಬಿರ್ಮೆರಜ್ಜಿ
293 ಬಿಕ್ರ ಮೇಲಾಂತೆ

294 ಬುದಾ ಬಾರೆ
295 ಬಾಲೆ ಬಾರಗ
296 ಬುದ್ಯಂತಾಯೆ
297 ಬಬ್ಬರ್ಯ
298 ಬಿಲ್ಲಾರ
299 ಬಿಲ್ಲಾರ್ತಿ
300 ಬೂಡು ಬೊಮ್ಮಯ ಸ್ವಾಮಿ
301 ಬೈಸು ನಾಯಕ
302 ಬೈರಾಗಿ
303 ಬೊಂಟೆಗಾರೆರ್
304 ಬೊಮ್ಮರ್ತಾಯೆ
305 ಬೊಲ್ತಾಯ್ತೋಲು
306 ಭಸ್ಮ ಮೂರ್ತಿ
307 ಭೂತ ನಾಗ
308 ಭೂತ ರಾಜ
309 ಬೊಟ್ಟಿ ಭೂತ
310 ಬ್ರಾಣ ಭೂತ

311 ಭಟ್ಟಿ ಭೂತ
312 ಬಂಗಾಡಿ ಮಾಣಿಕೊ
313 ಬಂಟ ಭೂತ
314 ಬಂಟ ಜಾವದೆ
೩೧೫ ಬಲ್ಲ ಮಂಜತ್ತಾಯ
315 ಮಣಿಕಂಟತ್ತಾಯ
316 ಮಲರಾಯ
317 ಮದನಕ್ಕೆ ದೈಯಾರು :
318 ಮಲಾರ್ ಜುಮಾದಿ (ಕರ್ನಗೆ)
319 ಮಹಾ ಕಾಳಿ ,
320 ಮಾಯಂದಾಲ್
321 ಮರ್ಲು ಮೈಯೊಂದಿ
322 ಮರ್ಲು ಜುಮಾದಿ
323 ಮಂತ್ರ ದೇವತೆ
324ಮಂಗಾರ ಮಾಣಿಗ
325 ಮಂಜ ನಾಗ
326ಮಂಜ ಬೊಮ್ಮ
327 ಮಗ್ರಂದಾಯ
328 ಮಡಿಕಡಿತ್ತಾಯ
329 ಮಡಳಾಯೆ
330 ಮದ್ದಡ್ಕತ್ತಾಯೆ
331 ಮಡೆನಾಗ
332 ಮಡ್ಯೋಳೆ
333 ಮಂತ್ರೊದಾಯೆ
334 ಮನ್ಸೆರ್ ಭೂತ
335 ಮಲೆಯಾಳ ಭೂತ
336 ಮಲೆ ಕೊರತಿ
337 ಮದಿಮಾಲ್
338 ಮಲೆರಾಯ
339 ಮಾಣಿ ಬಾಲೆ
340 ಮಾಂದಿ
341 ಮಲ್ಲು
342 ಮರ್ದ ಬಲ್ಲಾಳ್ತಿ
343 ಮಾಪುಳೆ ಭೂತ
344 ಮಾಪುಳ್ತಿ ಭೂತ
345 ಮಾಪುಳ್ತಿ ಧೂಮಾವತಿ
346 ಮಾಲಿಂಗ ರಾಯ
347 ಮಾಣಿ ಭೂತ
348 ಮಾಣೆಚ್ಚಿ
349 ಮಾಯಿಲು
350 ಮಾಯೊದ ಬಾಲೆ
351 ಮಾರಂ ದೈವ
352 ಮಾರಾವಂಡಿ
353 ಮಾರಾಳಮ್ಮ್ಮ
354 ಮಾರಿಯಮ್ಮ
355 ಮಿತ್ತಂತಾಯೆ
356 ಮುಕ್ಕಬ್ಬೆ
357 ಮುಡಿಲ್ತಾಯ
358 ಮುರ್ತುರಾಯ
359 ªÀÄÄPÀÄrvÁÛ¬Ä
360 ಮೂಡಿ ಪಡಿತ್ತಾಯೆ
361ಮೂಡೋತ್ನಾಯೆ
362 ಮೂ ಜುಲ್ನಾಯ
363 ಮೂರ್ತಿಲ್ಲಾಯ

364 ಮಲೆ ಮುದ್ದ
365 ಮುಗೆರ್ಲು
366 ಮಂಗಳೆರ್
367 ಮುಕಾಂಬಿ
368 ಮುಂಡೆ ಬ್ರಾಂದಿ
369 ಮುಡಿಪುನ್ನಾರ್
370 ಮುಸ್ಲಿಮರ ಮಕ್ಕಳು
371 ಮೂವ
372 ಮೈಸಂದಾಯ
373 ಯಡಪಡಿತ್ತಾಯ
374 ಯರ್ಮುಂಜಾಯೆ
375 ಮೇಲ್ಕಾರ್ತಾಯೆ
376 ಮಲ್ಲ ರಾಯೆ
377 ಯೇರ್ಮನ್ನಾಯೆ
378 ರಕ್ತೇಶ್ವರಿ
379 ರಾವು ಗುಳಿಗ
380 ರುದ್ರ ಚಾಮುಂಡಿ

381 ಶಗ್ರಿತ್ತಾಯ
382 ಶಿವರಾಯ
383 ಶಂಕರ ಬಡವಣ
384 ಶಿರಾಡಿ
385 ಸರ್ವೆರ್
386 ಸುಬ್ಬಮ್ಮ
387 ಸೂ ಕತ್ತೆರಿ
388 ಸೊನ್ನೆ
389 ಸ್ವಾಮಿ
390 ಸೆಟ್ಟಿಗಾರ
391 ಸೇಮ ಕಲ್ಲ ಪಂಜುರ್ಲಿ
392 ಸುಬ್ಬಿಯಮ್ಮ ಗುಳಿಗ
393 ಸಾರ್ತ ಮಲ್ಲು
395 ಸತ್ಯನ್ಗಳದ ಕೊರತಿ
396 ಸಂಪಿಗೆತ್ತಾಯ
397 ಸನ್ಯಾಸಿ ಹಿರಿಯಾಯೆ

398 ಹನುಮಂತ ಭೂತ
399 ಹಳ್ಳತ್ತಾಯ

400 ಹೊಸಮ್ಮ,
401 ಕೊಮಾರು ಚಾಮುಂಡಿ
402 ಪೊಲಮರದೆ ಚಾಮುಂಡಿ
403 ಅಮ್ಮಂಗಲ್ಲು ಧೂಮಾವತಿ
405 ಪದ್ದೆಯಿ ಧೂಮಾವತಿ
398 ಪಲ್ಲ ಧೂಮಾವತಿ
399 ಜೆಡೆ ಕಲ್ಲು ಧೂಮಾವತಿ
400 ರತೋಜುಮಾದಿ
401 ಸಾರಾಳ ಜುಮಾದಿ
402 ಕೈರ್ ಜುಮಾದಿ
403 ಕಾಂತೆರಿ ಜುಮಾದಿ
404 ಜುಮ್ರ ಜುಮಾದಿ
405 ಕಾಂತು ನೆಕ್ರಿ ಜುಮಾದಿ
406 ಪಡು ಧೂಮಾವತಿ
407 ಭೂಮಿ ಗುಳಿಗ
408 ಸಂಕೊಲಿಗೆ ಗುಳಿಗ
409 ಜೋಡು ಗುಳಿಗ
410 ಮಂತ್ರ ಗುಳಿಗ
411 ಪಾತಾಳ ಗುಳಿಗ
412 ಒರಿ ಮಾಣಿ ಗುಳಿಗ
413 ಆಕಾಸಗುಳಿಗೆ
414 ಚಾಮುಂಡಿ ಗುಳಿಗ
415 ರಾಜನ್ ಗುಳಿಗ
416 ಮಾರಣ ಗುಳಿಗ
417 ಅಂತ್ರ ಗುಳಿಗ
418 ನೆತ್ತೆರ್ ಗುಳಿಗ
419 ಮುಳ್ಳು ಗುಳಿಗ
420 ಮಂತ್ರ ಗುಳಿಗ
421 ಮಂತ್ರವಾದಿ ಗುಳಿಗ
422 ಬಂಡಾರಿ ಗುಳಿಗ
423 ಚೌಕಾರು ಗುಳಿಗ
424 ನೆತ್ತರು ಗುಳಿಗ

425 ಜಾಗೆದ ಪಂಜುರ್ಲಿ
426 ಒರ್ತೆ ಪಂಜುರ್ಲಿ
427 ಮನಿಪ್ಪನ ಪಂಜುರ್ಲಿ
426 ಅಮ್ಬಟಾಡಿ ಪಂಜುರ್ಲಿ
426 ಅಣ್ಣಪ್ಪ ಪಂಜುರ್ಲಿ
428 ಉದ್ಪಿದ ಪಂಜುರ್ಲಿ
429 ಉರಿ ಮರ್ಲೆ ಪಂಜುರ್ಲಿ
430 ವರ್ನರ ಪಂಜುರ್ಲಿ
431 ಒರಿ ಬಂಟೆ ಪಂಜುರ್ಲಿ
432 ಕಡಬದ ಪಂಜುರ್ಲಿ
433 ಕಡೆಕ್ಕಾರ ಪಂಜುರ್ಲಿ
434 ಕಾಡಬೆಟ್ಟು ಪಂಜುರ್ಲಿ
435 ಕುಂತಾಳ ಪಂಜುರ್ಲಿ
436 ಕುಡುಮೊದ ಪಂಜುರ್ಲಿ
437 ಕುಪ್ಪೆ ಪಂಜುರ್ಲಿ
438 ಕೂಳೂರು ಪಂಜುರ್ಲಿ
439 ಕೋರೆ ದಾಂಡ ಪಂಜುರ್ಲಿ
439 ಕೊಟ್ಯದ ಪಂಜುರ್ಲಿ
440 ಗೂಡು ಪಂಜುರ್ಲಿ
441 ಗ್ರಾಮ ಪಂಜುರ್ಲಿ
442 ಚಾವಡಿದ ಪಂಜುರ್ಲಿ
443 ನಾಡ ಪಂಜುರ್ಲಿ
444 ಪಂಜಣತ್ತಾಯ ಪಂಜುರ್ಲಿ
445 ಪಟ್ಟದ ಪಂಜುರ್ಲಿ
446 ಪಾರೆಂಕಿ ಪಂಜುರ್ಲಿ
447 ಜೋಡು ಪಂಜುರ್ಲಿ
448 ರುದ್ರ ಪಂಜುರ್ಲಿ
449 ಮುಗೇರ ಪಂಜುರ್ಲಿ
೪೫೦ ಜೋಡು ಕಲ್ಲುರ್ಟಿ
451 ಉರಿ ಮರ್ತಿ
452 ಅಂಗಾರೆ ಕಲ್ಕುಡ
453 ಸತ್ಯ ಕುಮಾರ
454 ಸತ್ಯ ದೇವತೆ
455 ಇಷ್ಟ ದೇವತೆ
456 ಮಂತ್ರ ದೇವತೆ
457 ಹಾಡಿ ಕಲ್ಲುರ್ಟಿ
458 ಒರ್ತೆ ಕಲ್ಲುರ್ಟಿ
459 ಪಾಷಾಣ ಮೂರ್ತಿ

460 ರಾಜನ್ ಕಲ್ಕುಡ

ಅನಂತರ ನನಗೆ ಫೇಸ್ ಬುಕ್ ಗೆಳಯ/ಗೆಳತಿಯರಿಂದ ರಿಂದ ಅಪಾರ ಬೆಂಬಲ ದೊರೆತು ನಾನು ಹುಡುಕಾಟ ಮುಂದುವರಿಸಿದೆ ಆಗ ಓಪೆತ್ತಿ ಮದಿಮಾಲ್ ,ಅಜ್ಜೆರ್ ಭಟ್ರ್ ,ಮುಂಡೆ ಬ್ರಾಂದಿ ,ವಾಟೆಜರಾಯ ಮಾಡ್ಲಾಯ ಮೊದಲಾದ ಅಪರೂಪದ ದೈವಗ ಹೆಸರು ಮತ್ತು ಮಾಹಿತಿಯನ್ನು ಆತ್ಮೀಯರಾದ ಯುವ ಸಂಶೋಧಕ ಸಂಕೇತ ಪೂಜಾರಿ ಅವರು ಒದಗಿಸಿ ಕೊಟ್ಟರು ಅದೇ ರೀತಿ ಯುವ ಸಂಶೋಧಕರಾದ ಶಂಕರ್ ಕುಂಜತ್ತೂರು ಅವರು  ದೇಯಿ ,ಕಡನ್ಗಲಾಯ ಸೀರಮ್ಬಲತ್ತಾಯ ಮೊದಲಾದ ದೈವಗಳ ಮಾಹಿತಿ ಕೊಟ್ಟರು.ಭೂತಗಳ ಅದ್ಭುತ ಜಗತ್ತು .ಬ್ಲಾಗ್ ಅನ್ನು ಓದಿದ ಸುಶ್ರುತ್ ಅಡ್ಡೂರು ಅವರು ಮಲೆ ಸಾವಿರ ಬೂತ ,ಮಾನೆಯಪ್ಪು ದೈವಗಳ ಹೆಸರು ನೀಡಿದರು. ಗೀತ ಅವರು ಹರಿ ಹರ ಭೂತ ದ ಹೆಸರನ್ನು ನೀಡಿದರು ಬಾಲಕೃಷ್ಣ ಶಿಬರಾಯ ಅವರು ಕುರುವಾಯಿ ದೈವದ ಬಗ್ಗೆ ಮಾಹಿತಿ ನೀಡಿದರು
ನನ್ನ ಬರವಣಿಗೆಗೆ ಸೂಕ್ತ ಫೋಟೋಗಳನ್ನು ಒದಗಿಸಿ ಕೊಟ್ಟು ತುಂಬು ಪ್ರೋತ್ಸಾಹ ಇತ್ತಿರುವ ನಾಗರಾಜ ಭಟ್ ಬಂಟ್ವಾಳ ಅವರು ಬಂನಡ್ಕತ್ತಾಯ ದೈವದ ಹೆಸರನ್ನು ನೀಡಿದರು ಅದೇ ರೀತಿ ನನ್ನ ಬರವಣಿಗೆಗೆ ಸೂಕ್ತ ಫೋಟೋಗಳನ್ನು ಒದಗಿಸಿ ಕೊಟ್ಟು ತುಂಬು ಪ್ರೋತ್ಸಾಹ ಇತ್ತಿರುವ ಜೀವಿತ್ ಶೆಟ್ಟಿ ಅವರು ನರಯ ದೈವ ,ಬಂಗಾಡಿದ ಅರಸು ಹಾಗೂ ಮಹೇಶ್ ಬೋಳಾರ್ ಅವರು ಗಂಧರ್ವ ದೈವ ಗುದ್ದೊಲಿ ಮೀರಾ ಹೆಸರು ಹಾಗೂ ಇತರ ಮಾಹಿತಿಗಳನ್ನು ನೀಡಿದರು. ಯುವ ಸಂಶೋಧಕ  ಪ್ರಕಾಶ ಮಾರ್ಪಾಡಿಯವರು ಕಾಪು ವಿನಲ್ಲಿರುವ ಪೋಲಿಸ್ ಭೂತ ,ತಿಗ ಮಾರೆರ್ ದೈವಗಳ ಹಾಗೂ ಪಡ್ಕಂತಾಯ,ದಮಯಂತ ದೈವಗಳ ಹೆಸರನ್ನು ನೀಡಿದರು ,ಪೋಲಿಸ್ ಭೂತ, ಸೇನವ ,ಪಟ್ಲರ್, ಕಳ್ಳ ,ಬಲಾಯಿ ಮಾರೆರ್ ಬಗ್ಗೆ ಕುಂದಾಪುರ ತಾಲೂಕು ತಹಶೀಲ್ದಾರಾಗಿರುವ ಕಾಪು  ಮಾರ ಗುರಿಕ್ಕಾರ ಸುಂದರ ಅವರು ಮಾಹಿತಿ ನೀಡಿದರು .ಚಣಿಲ್ ಗೆ ಆರಾಧನೆ ಇರುವ ಬಗ್ಗೆ ಪವನ್ ಕುಮಾರ್, ಸಂತೋಷ ಕುಮಾರ್,ಅಭಿಷೇಕ್ ಶೆಟ್ಟಿ ಅವರು ಅಜ್ಜಿ ಪೆರಂತಲೆ ಎಂಬ ದೈವ ಇರುವ ಬಗ್ಗೆ ತಿಳಿಸಿದರು. ಸಂತೋಷ ಕುಮಾರ್ ಅವರು ಕತ್ತಲೆ ಕಾನದ ಗುಳಿಗನ ಬಗ್ಗೆ ತಿಳಿಸಿದರು ಗಣೇಶ  ಮಂಗಳೂರು ಅವರು  ಕುಂಞಲ್ವ ಬಂಟ ದೈವದ ಬಗ್ಗೆ ಮಾಹಿತಿ ಒದಗಿಸಿದರು ಕರ್ಪುದ ಪಂಜುರ್ಲಿ ದೈವದ ಹೆಸರು ಹಾಗೂ ಹಳ್ಳತ್ತಾಯಿ ದೈವದ ಅಪರೂಪದ ಫೋಟೋ ಅನ್ನು ರಾಜಗೋಪಾಲ ಹೆಬಾರ್ ನೆರಿಯ ಅವರು ನೀಡಿದರು ಮಡಿಕತ್ತಾಯ ದೈವದ ಬಗ್ಗೆ ದಿನೇಶ್ ವರ್ಕಾಡಿ ಅವರು ಮಾಹಿತಿ ನೀಡಿದ್ದಾರೆ . ಮಂತ್ರ ಗಣ ಬಗ್ಗೆ ರವೀಶ್ ಶರ್ಮ ಅವರು  ತಿಳಿಸಿದ್ದಾರೆ.  ರಾಘವ ಕೋಟೇಶ್ವರ ಅವರ ಬ್ಲಾಗ್ ನಲ್ಲಿ ಮೋಟ ,ಮೋಳೆ ತಿರುಮ, ಹಸಲ ದೈವ  ಅಜ್ಜಮ್ಮ .ಗಾಮ ಮೊದಲಾದ ಅಪರೂಪದ ಕನ್ನಡ ಪರಿಸರದ ದೈವತಗಳ ಮಾಹಿತಿ ಸಿಕ್ಕಿತು ಬೋವ ದೈವದ ಹುಡುಕಾಟಕ್ಕೆ ಶ್ರೀನಿವಾಸ ಪ್ರಭು ಅವರು ನೀಡಿದ ಮಾಹಿತಿಯೇ ಪ್ರೇರಣೆಯಾಯಿತು
ಇಗ್ಗುತಪ್ಪ, ಕಲ್ಯಾಟೆ ಅಜ್ಜಪ್ಪ ,ಪರ್ಕೋಟು ಶಾಸ್ತವು ಪಾಲೂರಪ್ಪ  ಪೊನ್ನಾಲತಮ್ಮೆ ಮೊದಲಾದ ಕೊಡಗಿನಲ್ಲಿ ಆರಾಧಿಸಲ್ಪಡುವ ದೈವಗಳ ಹೆಸರನ್ನು ಪೋಡೆಯಂಡ ಕೌಶಿಕ್ ಸುಬ್ಬಯ್ಯ  ಅವರು ನೀಡಿದ್ದಾರೆ
ಜಲ ಕುಮಾರ ದೈವದ ಹೆಸರನ್ನು ವಿಜಯ ಶೆಟ್ಟಿ ಅವರು ನೀಡಿದ್ದಾರೆ.ಅಸುರಾಳನ್ ದೈವದ ಬಗ್ಗೆ ಹರ್ಷ ರಾಜ್ ಅಡ್ಕ ಅವರು ಮಾಹಿತಿ ನೀಡಿದ್ದಾರೆ  ಕಾನಲ್ತಾಯ ಹಾಗೂ ಜಟ್ಟಿಂಗ ದೈವದ ಮಾಹಿತಿಯನ್ನು ಶಶಾಂಕ್ ನೆಲ್ಲಿತ್ತಾಯ ನೀಡಿದ್ದಾರೆ ,ಕುದುರೆತ್ತಾಯ ದೈವದ ಬಗ್ಗೆ ನವೀನ ಕುಮಾರ ಅವರು ತಿಳಿಸಿದ್ದಾರೆ. ಯುವ ಸಂಶೋಧಕ ಯಶ್ವಿನ್ ಅವರ ಪೇಜ್ ಮೂಲಕ ಇಂದ್ರಾಣಿ ,ಗ್ರೀಷ್ಮಂತಾಯ ಮೊದಲಾದ ಅಪರೂಪದ ದೈವಗಳ ಹೆಸರು ಮತ್ತು ಫೋಟೋಗಳು ಸಿಕ್ಕವು ಇನ್ನು ಅನೇಕರು ಮಾಹಿತಿ ನೀಡಿದ್ದಾರೆ.ಎಲ್ಲರ ಹೆಸರು ನೆನಪಿಟ್ಟುಕೊಳ್ಳಲಾಗದ್ದಕ್ಕೆ ಕ್ಷಮೆಯಿರಲಿ  

ಡಾ.  ಚಿನ್ನಪ್ಪ ಗೌಡ ಅವರ ಭೂತಾರಾಧನೆ ಕೃತಿಯಲ್ಲಿರುವ ಭೂತಗಳ ಹೆಸರಿನ ಪಟ್ಟಿಯಲ್ಲಿನ 360 ದೈವಗಳ ಹೆಸರಿವೆ .  ರಘುನಾಥ ವರ್ಕಾಡಿ ಅವರ ಕೃತಿಯಲ್ಲಿನ ಹೆಸರುಗಳು ,ಡಾ.ಬಿ ಎ ವಿವೇಕ ರೈಗಳ ಕೃತಿಯಲ್ಲಿರುವ ಹೆಸರುಗಳು ,ಕೇಳು ಮಾಸ್ಟರ್ ಅಗಲ್ಪಾಡಿ ಅವರ ಕೃತಿಯಲ್ಲಿನ ಹೆಸರುಗಳು ಡಾ.ವಾಮನ ನಂದಾವರ ಅವರ ಕೃತಿಯಲ್ಲಿರುವ ಹೆಸರುಗಳು ಮತ್ತು ಅವರು ನೀಡಿರುವ ನಡ್ದೊಡಿತ್ತಾಯ ಮೊದಲಾದ ಅಪರೂಪದ ದೈವಗಳ ಹೆಸರುಗಳನ್ನೂ ,ನನ್ನ ಸಂಶೋಧನೆಯ ಕ್ಷೇತ್ರಕಾರ್ಯದಲ್ಲಿ ಸಿಕ್ಕ ಸುಮಾರು 500 ಹೆಸರುಗಳನ್ನೂ ಒಟ್ಟಿಗೆ ಹಾಕಿ ಸಾವಿರದ ಇನ್ನೂರ ಐದು ಭೂತ/ದೈವಗಳ  ಹೆಸರುಗಳನ್ನು ಪಟ್ಟಿ ಮಾಡಿದ್ದೇನೆ
ಇಲ್ಲಿ ಒಂದೇ ದೈವದ ಹೆಸರುಗಳು ಯಾವುವು?” ಎಂದು ನಿರ್ಧರಿಸುವುದು ಸುಲಭದ ವಿಚಾರವಲ್ಲ .ಉದಾಹರಣೆಗೆ ಕೆರೆ ಚಾಮುಂಡಿ ರುದ್ರ ಚಾಮುಂಡಿ ಕರಿ ಚಾಮುಂಡಿ ಪಾಪೆಲು ಚಾಮುಂಡಿ ದೈವಗಳ ಹೆಸರು ಚಾಮುಂಡಿ ಎಂದು ಇರುವುದಾದರೂ ಇವುಗಳಿಗೆ ಬೇರೆ ಬೇರೆ ಮಾನವ ಮೂಲದ ಕಥಾಕನಗಳು ಆಚರಣೆಗಳು ಇದ್ದು ಇವು ಬೇರೆ ಬೇರೆ ಶಕ್ತಿಗಳಾಗಿವೆ ,ಅದೇ ರೀತಿ ಮಂಡ ಕರ ಕಲ್ಲುರ್ಟಿ  ಮೂಲತಃ ಒಬ್ಬ ಬ್ರಾಹ್ಮಣ ಮಂತ್ರವಾದಿ,ಆದರಿಂದ ಯಾವುದು ಒಂದೇ ದೈವದ ಬೇರೆ ಬೇರೆ ಹೆಸರು ಎಂದು ತೀರ್ಮಾನಿಸಲು ಪ್ರತಿಯೊಂದು ಕಡೆಗೆ ಹೋಗಿ ಅಧ್ಯಯನ ಮಾಡಿಯೇ ಆಗಬೇಕು .ಹೆಸರಿನ ಮೇಲೆ ಇದು ಈ ದೈವದ ಇನೊಂದು ಹೆಸರು ಎಂದು ತೀರ್ಮಾನಿಸಲು ಅಸಾಧ್ಯ .
ಈ ಹಿಂದೆ ಒಂದೇ ದೈವಕ್ಕೆ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರಿನಲ್ಲಿ ಆರಾಧನೆ ಇದೆ ಎಂಬ ಭಾವನೆ ಇತ್ತು ,ಆದರೆ ನನ್ನ ಕ್ಷೇತ್ರ ಕಾರ್ಯದಲ್ಲಿ ಒಂದೇ ಹೆಸರಿನಲ್ಲಿ ಬೇರೆ ಬೇರೆ ದೈವಗಳಿಗೆ ಆರಾಧನೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ .
ಹಾಗಾಗಿ ಸಿಕ್ಕಿರುವ ಎಲ್ಲ ಹೆಸರುಗಳನ್ನೂ ಇಲ್ಲಿ ಹಾಕಿದ್ದೇನೆ .
ಇನ್ನುಕೆಲವು ಮೂಲತ ತುಳು ದೈವಗಳೇ ಆಗಿದ್ದು ಮಲೆಯಾಳ ಭಾಷೆ ಸಂಸ್ಕೃತಿಯ ಕಥಕ್ಕಳಿ ಪ್ರಭಾವದಿಂದ ತುಸು ಭಿನ್ನವಾಗಿ  ಕೊಡಗು ಕಾಸರಗೋಡು ಪರಿಸರದಲ್ಲಿ ಆರಾಧಿಸಲ್ಪಡುವ ದೈವಗಳ ಹೆಸರನ್ನೂ ಇಲ್ಲಿ ಸೇರಿಸಿದ್ದೇನೆ
ಅದೇ ರೀತಿ ಉಡುಪಿ ಬಾರಕೂರು ಕುಂದಾಪುರದ ಕನ್ನಡ  ಪರಿಸರದಲ್ಲಿ ತುಸು ಭಿನ್ನವಾಗಿ ಆರಾಧಿಸಲ್ಪಡುವ ಹಳೆಯಮ್ಮ ಮಾಸ್ತಿಯಮ್ಮ  ಹೈಗುಳಿ ಮೊದಲಾದ ದೈವತಗಳನ್ನೂ ಇಲ್ಲಿ ಸೇರಿಸಿದ್ದೇನೆ.  ಬೈನಾಟಿ, ಕುಡಂದರೆ ,ಚಿಕ್ಕು, ಚಿಕ್ಕಮ್ಮ ಮೊದಲಾದ  ಕೆಲವು  ಮಲೆಯಾಳದ ಹಾಗೂ ಕನ್ನಡ ಪರಿಸರದ ದೈವತಗಳ ಹೆಸರನ್ನು  ಡಾ.ಚಿನ್ನಪ್ಪ ಗೌಡ ಹಾಗೂ ಡಾ ,ಬಿ.ಎ ವಿವೇಕ ರೈಗಳು ಅವರ ಕೃತಿಗಳಲ್ಲಿ ಭೂತಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ .ಅಂತೆಯೇ ನಾನು ಕೂಡ ಅನೇಕ ಮಲಯಾಳ ಹಾಗೂ ಕನ್ನಡ ಪರಿಸರದ ದೈವತಗಳ ಹೆಸರನ್ನು ಹುಡುಕಿ ಇಲ್ಲಿ ಸೇರಿಸಿದ್ದೇನೆ
ಎಲ್ಲವನ್ನೂ ಒಟ್ಟು ಮಾಡಿದ್ದಾಗ ನನಗೆ ಸಿಕ್ಕ ಸಂಖ್ಯೆ 1205
 ಈ ಪಟ್ಟಿ ಅಂತಿಮವಲ್ಲ ಇದು ಆರಂಭ ಮಾತ್ರ.ಇನ್ನೂ ಅನೇಕ ದೈವಗಳಿಗೆ ತುಳುನಾಡಿನಲ್ಲಿ ಆರಾಧನೆ ಇರುವ ಸಾಧ್ಯತೆ ಇದೆ .ಅನೇಕ ಹೆಸರುಗಳು ಇದರಲ್ಲಿ ಬಿಟ್ಟು ಹೋಗಿರಬಹುದು
ಇನ್ನು ಅಧ್ಯಯನವಾಗ ಬೇಕಾದ ವಿಚಾರ ಭೂತಾರಾಧನಾ ಕ್ಷೇತ್ರದ ಲ್ಲಿ ತುಂಬಾ ಇದೆ
ಮಾಹಿತಿ ನೀಡಿದ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು
ಸಾವಿರದ ಇನ್ನೂರ ಐದು ಭೂತ/ದೈವಗಳ ಹೆಸರುಗಳು  © ಡಾ.ಲಕ್ಷ್ಮೀ ಜಿ ಪ್ರಸಾದ 
ಕನ್ನಡ ಉಪನ್ಯಾಸಕಿ ,ಸರ್ಕಾರಿ ಪದವಿ ಪೂರ್ವ ಕಾಲೇಜು ,ನೆಲಮಂಗಲ ಬೆಂಗಳೂರು ಗ್ರಾಮಾಂತರ  ಜಿಲ್ಲೆ
samagramahithi@gmail.com