Saturday, 30 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು:225 ಗುದ್ದೊಲಿ ಮೀರಾ (ಗದ್ದುಗೆ ಬೀರೆ )(c)ಡಾ.ಲಕ್ಷ್ಮೀ ಜಿ ಪ್ರಸಾದ

           
 ಚಿತ್ರ ಕೃಪೆ :ಮಹೇಶ್ ಮೈಸೆ
©boloorgarodi@gmail.com
 ನೀರೆ ಗರೊಡಿಯಲ್ಲಿ ಮಾಯಂದಾಲ್ ಪಕ್ಕ ಇರುವ ಬಾಲಕನ ಮೂರ್ತಿಗೆ ಗುದ್ದೊಲಿ ಮೀರಾ ಎಂದು ಹೆಸರು ಇದೆ .ಇಲ್ಲಿ ಆರಾಧಿಸಲ್ಪಡುವ ಗುದ್ದೊಲಿ ಮೀರಾ ಎಂಬ ಆರಾಧ್ಯ ಶಕ್ತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ .ತುಳುನಾಡಿನ ಗರೊಡಿಗಳ ಬಗ್ಗೆ ಸಚಿತ್ರ ಮಾಹಿತಿ ಸಂಗ್ರಹಿಸಿರುವ ಮಹೇಶ ಅವರು ಈ ಬಗ್ಗೆ ಹೀಗೆ ಹೇಳಿದ್ದಾರೆ
 "ನೀರೆ ಬೈಲೂರಿನ ಗರೋಡಿಯಲ್ಲಿ ಮಯಾಂದಾಲ್ ಮೂರ್ತಿಯ ಎಡಬದಿಯಲ್ಲಿ ಗುದ್ದೊಲಿ ಮೀರಾಎಂದು ಇಲ್ಲಿನ ಜನರು ಕರೆಯುವ, ನಿಂತ ಭಂಗಿಯಲ್ಲಿ ಬಾಲಕನ ಮರದ ಮೂರ್ತಿ ಇದೆ. ಇದು ಇತರ ಕಡೆ ಕುಮಾರಎಂಬ ನಾಮದಿಂದ ಕರೆಯಲ್ಪಡುತ್ತದೆ. ಕಳೆದುಹೋದ ವಸ್ತುಗಳನ್ನು ಹಾಗೂ ತಾನು ಮರೆತು ಹೋಗಿ ವಸ್ತುಗಳನ್ನು ಎಲ್ಲಿ ಇಟ್ಟಿದ್ದೇನೆ ಎಂಬುದು ಗೊತ್ತಾಗದೆ ಇದ್ದಾಗ ಇಲ್ಲಿಯ ಜನರು ಗುದ್ದೆಲ್ ಮೀರಾನ ಕೈಯಲ್ಲಿ ಬಾಳೆಹಣ್ಣು ಕೊಡುತ್ತೇನೆ, ಹುಡುಕಿಕೊಡು ಎಂದು ಹರಕೆ ಹೇಳುವ ಪದ್ದತಿ ಇಲ್ಲಿದೆ. (ಮಾಹಿತಿ ಕೃಪೆ: ನೀರೆ ಗರಡಿ ಇತಿಹಾಸ. ಸಂ: ಪ್ರೋ. ಕೆ ನಾರಾಯಣ ಶೆಟ್ಟಿ) -ಚಿತ್ರ: ಮಹೇಶ್- ಮೈಸೆ ©boloorgarodi@gmail.com"

ತುಳುನಾಡಿನ ಗರೊಡಿಗಳಲ್ಲಿ ಮಾಯಂದಾಲ್ ಎಂಬ ಸ್ತ್ರೀ ದೈವತಕ್ಕೆ ಆರಾಧನೆ ಇದೆ .ಅವಳ ಒಂದು ಮೂರ್ತಿ ಕೂಡ ಗರೊಡಿಗಳಲ್ಲಿ ಇವೆ 
.ಮಾಯಂದಾಲ್ ಎಂದರೆ ಮಾಯವಾದವಳು ಎಂದರ್ಥ. ಪಾಂಗುಲ್ಲ ಬನ್ನಾರರ ಬೀಡಿಗೆ ಒಂದು ದೈವ ಬಂದು ಕೋಲತಜುಮಾದಿ ಎಂದು ಆರಾಧನೆ ಪಡೆಯುತ್ತದೆ. ಆಗ ಪಾಂಗುಲ್ಲ ಬನ್ನಾರರು ದೈವಕ್ಕೆ ಕೊಡಬೇಕಾದ ಸಿರಿ ಬಾಳೆ,ಸೀಯಾಳಗಳನ್ನು ಕೊಡುವುದಿಲ್ಲ copy rights reserved (c)Dr.Laxmi g Prasad. ಆಗ
ಪಾಂಗುಲ್ಲ ಬನ್ನಾರರ ಸೋದರ ಸೊಸೆ ಹತ್ತುದಿನದ ಬಾಣಂತಿಯಗಿದ್ದಳು .

ಆಗ ಕೋಪಿಸಿಕೊಂಡ ದೈವ .ಕೋಲತ ಜುಮಾದಿ ಅವಳಿರುವಲ್ಲಿಗೆ ಬಂದು ಅವಳನ್ನು, ಅವಳ ಮಗುವನ್ನು ಮಾಯ ಮಾಡುತ್ತದೆ. ಮಾಯವಾದ ಅವಳು ಗರಡಿಮನೆಯ ಬ್ರಹ್ಮನ ಸೇರಿಗೆಗೆ ಸಂದು, ದೈವವಾಗಿ ಆರಾಧನೆ ಹೊಂದುತ್ತಾಳೆ. ಮಾಯಂದಾಲ್ ಕೋಟಿಚೆನ್ನಯರ ಭಾವನಾತ್ಮಕ  ತಂಗಿ ಎಂಬ ನಂಬುಗೆಯೂ ಇದೆ. ಪ್ರಸವದ ಸಮಯದಲ್ಲಿ ಈ ದೈವಕ್ಕೆ ತಾಯಿ ಮತ್ತು ಮಗುವಿನ ರಕ್ಷಣೆಗಾಗಿ ಹರಿಕೆ ಕೊಟ್ಟು ಆರಾಧಿಸುತ್ತಾರೆcopy rights reserved (c)Dr.Laxmi g Prasad. ಇನ್ನೊಂದು ಪಾಡ್ದನ  ಪಾಠದ ಪ್ರಕಾರ ಮಾಣಿಬಾಲೆಯನ್ನು ಸೋದರ ಮಾವನಾದ ಆಲಿಬಾಲಿ ನಾಯಕನು ರಜಪತಿ ಬೈದ್ಯನ ಮಗನೊಂದಿಗೆ ವಿಜೃಂಭಣೆಯಿಂದ ಮದುವೆ ಮಾಡಿಕೊಡುತ್ತಾನೆ. ಮದುವೆಯಾಗಿ ಕೆಲವು ವರ್ಷ ಕಳೆದರೂ ಸಂತಾನ ಭಾಗ್ಯ ಒದಗದಿರಲು ಬೆರ್ಮರಿಗೆ ಹರಕೆ ಹೇಳಿದ ಮೇರೆಗೆ ಆಕೆ ಗರ್ಭವತಿಯಾಗುತ್ತಾಳೆ. ಸಂಭ್ರಮದ ಸೀಮಂತ ನಡೆದ ಬಳಿಕ ಆಕೆ ಹೆರಿಗೆಗಾಗಿ ತನ್ನ ಸೋದರ ಮಾವನಾದ ಆಲಿಬಾಲಿ ನಾಯಕನ ಮನೆಗೆ ಬರುತ್ತಾಳೆ. ನವ ಮಾಸ ತುಂಬಿದ ಮಾಣಿಬಾಲೆ ಗಂಡು ಮಗುವಿಗೆ ಜನ್ಮ ನೀಡು‍ತ್ತಾಳೆ. ಅದೇ  ಮಾಗಣೆಗೆ  ಸೇರಿದ  ಗುಡ್ಡೆಯ  ಮೂಡಂದಾಲ  ಪಟ್ಟದ  ಬೀಡಿನ  ಪಾಂಗೊಲ್ಲ  ಬನ್ನಾರ  ಎಂಬ  ಜೈನ  ಜಮೀನ್ದಾರನು  ಜುಮಾದಿ  ಭೂತವನ್ನು   ನಂಬಿಕೊಂಡು  ಅದಕ್ಕೆ  ಗುಡಿ  ನಿರ್ಮಿಸಿ  ಕೋಲಕ್ಕೆ  ದಿನ  ನಿಗದಿಪಡಿಸುತ್ತಾನೆ.  ಊರಿನ  ಜನರಿಂದ  ಕೋಲಕ್ಕಾಗಿ ಸಿರಿ  ಸೀಯಾಳ ಕೊಡಲು ಆಲಿ ಬಾಲಿ ನಾಯಕನಿಗೆ ಹೇಳಿ ಕಳುಹಿಸುತ್ತಾನೆ. ಆಲಿ ಬಾಲಿ ನಾಯಕ ಕೊಡುವುದಿಲ್ಲ ದಕ್ಕೆ ದೈವ ಅವನ ಸೊಸೆ ಮಾತು ಮಗುವನ್ನು ಮಾಯ ಮಾಡುತ್ತದೆ.ಮಾಯ ವಾದ ಅವರು ದೈವಗಳಗಿ ನೆಲೆ ನಿಲ್ಲುತ್ತಾರೆ
ತಮಗೆ ಸಲ್ಲ ಬೇಕಾದ ಸೇವೆಯನ್ನು ಸಲ್ಲಿಸದೆ  ಇದ್ದಾಗ ದೈವಗಳು ಕೊಪಿಸ್ಕೊಂದು ಶಿಕ್ಷಿಸುವ ವಿಚಾರ ಅನೇಕ ಪಾದ್ದನಗಳಲ್ಲಿದೆ .ಇಲ್ಲಿ ಕೂಡ ಪಾಂಗುಲ್ಲ ಬಂನಾರಣ ಮೇಲಿನ ಕೋಪದಿಂದ ಅವನನ್ನು ಶಿಕ್ಷಿಸುವ ಸಲುವಾಗಿ ಅವನ ಸೋದರ ಸೊಸೆಯನ್ನು ಮಗುವನ್ನು ದೈವ ಮಾಡಿರಬಹುದು .copy rights reserved (c)Dr.Laxmi g Prasad. 
ವಾಸ್ತವಿಕತೆಯ ನೆಲೆ ಗತ್ತಿನಲ್ಲಿ ಯೋಚಿಸಿದಾಗ ಬಾಣಂತಿ ಮಗು ಆಕಸ್ಮಿಕವಾಗಿ ಮರನವನ್ನ್ನಪ್ಪಿರಬಹುದು ಅದಕ್ಕೆ ದೈವದ ಕಾರಣಿಕದ ಕಥಾನಕ ಸೇರಿ, ಅವಳ ಮಗು ಮತ್ತು ಅವಳು ಕೂಡ ದೈವತ್ವ ಪಡೆದು ಆರಾಧಿಸಲ್ಪಟ್ಟಿರಬಹುದು
ಮಾಯಂದಾಲ್ ದೈವಕ್ಕೆ ಸ್ತ್ರೀ ಸಹಜ ವೇಷದಲ್ಲಿ ಭೂತ ಕಟ್ಟಿ ಕೋಲ ನೀಡುತ್ತಾರೆ .ತಾಯಿಯೊಂದಿಗೆ ಮಗುವಿಗೆ ಸಾಂಕೇತಿಕವಾಗಿ ಕೋಲ ನೀಡುತ್ತಾರೆ.ಈ ಮಗುವಿಗೆ ಗದ್ದುಗೆ ವೀರ(ಗದ್ದುಗೆ ಬೀರೆ) ಎಂದು ಹೆಸರಿದ್ದ ಬಗ್ಗೆ ಪಾದ್ದನಗಾರ್ತಿ ವಾರಿಜ ಅವರು ಹೇಳಿದ್ದಾರೆ .ಅಳಿಯ ಕಟ್ಟು ಇರುವಲ್ಲಿ ಮಾವನ ಗುತ್ತಿ ಯ ಅಧಿಕಾರ ಸೊಸೆಯ ಮಗನಿಗೆ ಬರುವುದು ಸಹಜವೇ .ಆ ಅರ್ಥದಲ್ಲಿ ಆತನಿಗೆ ಗದ್ದುಗೆ ಬೀರೆ ಎಂದು ಕರೆದಿರಬಹುದು .copy rights reserved (c)Dr.Laxmi g Prasad. 
 ಆದರೆ ಮಾಯಂದಾಲ್ ಮಗು ಮತ್ತು ಗುದ್ದೊಲಿ ಮೀರಾ ಒಂದೇ ಶಕ್ತಿಯೇ ಅಥವಾ ಬೇರೆ ಬೇರೆಯೇ ಎಂದು ತಿಳಿದು ಬಂದಿಲ್ಲ ,ಗದ್ದುಗೆ ವೀರ (ಗದ್ದುಗೆ ಬೀರೆ) ಎಂಬುದು ಆಡುಮಾತಿನಲ್ಲಿ ಗುದ್ದೊಲಿ ಮೀರಾ ಆಗಿರಬಹುದೇ ?ಅಥವಾ ಸ್ಥಳೀಯ ವೀರನೊಬ್ಬ ಆರಾಧನೆ ಹೊಂದಿ ಮಾಯಂದಾಲ್ ಮಗುವಿನೊಂದಿಗೆ ಗುದ್ದೊಲಿ ಮೀರಾ ಎಂಬ ಹೆಸರಿನಲ್ಲಿ ಸಮೀಕರಿಸಲ್ಪತ್ತಿರುವ ಸಾಧ್ಯತೆ ಕೂಡ ಇಲ್ಲದಿಲ್ಲ.ಬೇರೆಯೇ ಒಂದು ಶಕ್ತಿ ಇರಲೂ ಬಹುದು
ಈತನಿಗೆ ಬಾಳೆ ಹಣ್ಣು ಹರಿಕೆಯಾಗಿ ಅರ್ಪಿಸುವ ಕಾರಣ ಈತ ಮೂಲತಃ ವೀರ ಬಾಲಕನೇ ಆಗಿದ್ದಿರುವ ಸಾಧ್ಯತೆ ಇದೆ .ಈ ಬಗೆ ಹೆಚ್ಚಿನ ಅಧ್ಯಯನ ನಡೆದರೆ ವಾಸ್ತವ ಸಂಗತಿ ತಿಳಿದು ಬರಬಹುದುcopy rights reserved (c)Dr.Laxmi g Prasad. 

ಗುದ್ದೊಲಿ ಮೀರಾ ನ ಬಗ್ಗೆ ಸಚಿತ್ರ ಮಾಹಿತಿ ನೀಡಿದ ಮಹೇಶ್ ಅವರಿಗೆ ಕೃತಜ್ಞತೆಗಳು

Thursday, 28 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು 220:ಬಗ್ಗ ಪೂಜಾರಿ (c) ಡಾ.ಲಕ್ಷ್ಮೀ ಜಿ ಪ್ರಸಾದ


ಕೇಂಜ ಗರೋಡಿ:ಚಿತ್ರ ಕೃಪೆ :ತುಳುನಾಡಿನ ಗರೋಡಿಗಳು

ದೇವಸ್ಥಾನ ,ದೈವಸ್ಥಾನ ಗಳನ್ನ ಕಟ್ಟಿಸಿದವರು, ದೈವಗಳನ್ನು ನೆಲೆಗೊಳಿಸಲು ಕಾರಣರಾದವರು ,ದೈವಗಳ ಅನನ್ಯ ಭಕ್ತರು ದೈವತ್ವ ಪಡೆದು ಆರಾಧಿಸಲ್ಪಡುವುದು ತುಳುನಾಡಿನಾದ್ಯಂತ ಅಲ್ಲಲ್ಲಿ  ಕಂಡು ಬರುವ ವಿಶಿಷ್ಟ ವಿಚಾರವಾಗಿದೆ .
ಹಿರಿಯಡಕದಲ್ಲಿ ವೀರ ಭದ್ರ ನನ್ನು ನೆಲೆ ಗೊಳಿಸಿದ ಅದ್ಕತ್ತಾಯ ಎಂಬ ಬ್ರಾಹ್ಮಣ ಅಲ್ಲಿ ದೈವತ್ವ ಪಡೆದು ಆರಾಧಿಸಲ್ಪದುತ್ತಿದ್ದಾನೆ .ಬದಿಯಡ್ಕ ಸಮೀಪದ ಕಾರಿಂಜೇಶ್ವರ ದೇವಾಲಯವನ್ನು ಕಟ್ಟಿಸಿದ ಕಾರಿನ್ಜತ್ತಾಯ ಎಂಬ ಬ್ರಾಹ್ಮಣ ಅಲ್ಲಿ ದೈವವಾಗಿ ನೆಲೆ ಗೊಂಡಿದ್ದಾನೆ. ಮಣಿಕ್ಕರದಲ್ಲಿ ವಿಷ್ಣು ಮೂರ್ತಿಯ ದೇವಾಲಯ ಕಟ್ಟಿಸಿದ ಪಾಲ್ತಾಡು ಬೀಡಿನ ಅಚ್ಚು ಬಂಗೆತಿ ದೈವತ್ವವನ್ನು ಪಡೆದಿದ್ದಾಳೆ .

ಅಂತೆಯೇ ಉಡುಪಿ ತಾಲೂಕಿನ ಕುತ್ಯಾರು ಕೇಂಜದಲ್ಲಿ ಕೋಟಿ ಚೆನ್ನಯರ ಗರೋಡಿ ಸ್ಥಾಪನೆಗೆ ಕಾರಣ ಕರ್ತರಾದ  ಮೈಂದ ಪೂಜಾರಿ ದೈವತ್ವ ಪಡೆದು ಬಗ್ಗ ಪೂಜಾರಿ ಎಂಬ ಹೆಸರಿನಲ್ಲಿ ಆರಾಧನೆ ಹೊಂದುವ ವಿಚಾರ ಅಲ್ಲಿನ ಸ್ಥಳೀಯ ಐತಿಹ್ಯದಿಂದ ತಿಳಿದು ಬರುತ್ತದೆ.
ಕೋಟಿ ಚೆನ್ನಯರು ತಮ್ಮ ಕಾರಣಿಕ ತೋರುವುದಕ್ಕಾಗಿ ಕುತ್ಯಾರಿನ ಅರಸು ಕುಂದ ಹೆಗ್ಗಡೆಯನ್ನು ಹುಡುಕುತ್ತ ಬರುತ್ತಾರೆ .ದಾರಿಯಲ್ಲಿ ಮುಲ್ಕಿ ಸೀಮೆಯ  ಮದ್ಯ ಬೀಡಿಗೆ ತಲುಪಿದಾಗ ಅಲ್ಲಿ ಕಾಂತ ಬಾರೆ ಬೂದಾ ಬಾರೆ ತಡೆಯುತ್ತಾರೆ ಅಲ್ಲಿ ಅವರಿಗೆ ಯುದ್ಧವಾದಾಗ ಬಪ್ಪನಾಡು ದೇವಿ ದುರ್ಗೆ ಪ್ರತ್ಯಕ್ಷಳಾಗಿ ರಾಜಿ ಮಾಡಿಸಿ ಮುಲ್ಕಿ ಒಂಬತ್ತು ಗ್ರಾಮ ಕಾಂತಾ ಬಾರೆ ಬುದಾ ಬಾರೆಯರಿಗೆ ಉಳಿದ ತುಳುನಾಡಿನಲ್ಲಿ ಕೋಟಿ ಚೆನ್ನಯರಿಗೆ ಸ್ಥಾನ ಎಂದು ಸಮಾಧಾನ ಹೇಳಿ ಕಳುಹಿಸುತ್ತಾಳೆ.ಅಲ್ಲಿಂದ ಅವರು ಎಲ್ಲೂರು ದೇವರ ದರ್ಶನಕ್ಕೆ ಬಂದಾಗ ಅಲ್ಲಿ ಕೋಟೆದ ಬಬ್ಬು ದೈವ  ಯುದ್ಧಕ್ಕೆ ಬರುತ್ತದೆ ಕೊನೆಗೆ ಆಟ ಸೋತು ಕೋಟಿ ಚೆನ್ನಯರಿಗೆ ಶರಣಾಗುತ್ತಾನೆ.ದೇವರನ್ನು ಭೇಟಿ ಮಾಡಲು ಬಿಡುತ್ತದೆ   ದೇವರು ಅವರಿಗೆ ಕುತ್ಯಾರು ಕುಂದ ಹೆಗ್ಗಡೆಯಲ್ಲಿಗೆ ಹೋಗಲು ತಿಳಿಸುತ್ತಾನೆ .ಆಗ ಅವರು ಹೆಗ್ಗಡೆಯಲ್ಲಿಗೆ  ಬಂದು ತಮಗೆ ಸ್ಥಾನ ಕಟ್ಟಿಸಬೇಕು ಎಂದು ಹೇಳುತ್ತಾರೆ.ಆಗ ಆತ "ಇಂಥ ಸಾವಿರಾರು ದೈವಗಳು ಬಂದು ಜಾಗ ಕೇಳುತ್ತಾರೆ ಎಲ್ಲರಿಗೂ ಜಗ ಕೊಡಲು ಸಾಧ್ಯವಿಲ್ಲ ,ನಿಮ್ಮ ಕರಣಿಕ ತೋರಿಸಿ: ಎನ್ನುತ್ತಾನೆ.
ಆಗ ಕೋಟಿ ಚೆನ್ನಯರು ಅಲ್ಲಿನ ದೈವ ನಿಷ್ಠ ನಾದ ಮೈಂದ ಪೂಜಾರಿ ಮೇಲೆ ದೃಷ್ಟಿ ಬೀರುತ್ತಾರೆ .ಅವನು ತಾಳೆ ಮರದ ತುದಿಯಲ್ಲಿ ಇದ್ದಾಗ ಅವನಷ್ಟು ಎತ್ತರಕ್ಕೆ ಬೆಳೆದು ಅವನ ಕಿವಿಯಲ್ಲಿ ತಾವು ಬಂದ ಕಾರ್ಯವನ್ನು ತಿಳಿಸಿ ಅರಸರಿಗೆ ಹೇಳಲು ಸೂಚಿತ್ತಾರೆ .
ಅವನು ಅರಸನಲ್ಲಿ ಹೇಳಲು ಭಯ ಪಟ್ಟು  ಹಿಂಜರಿದಾಗ ನಿನಗೇನಾದರೂ ಆದರೆ ನಮ್ಮಿಬ್ಬರಲ್ಲಿ ಒಬ್ಬನಾಗಿ ಸೇರಿಸಿಕೊಳ್ಳುತ್ತೇವೆ"ಎಂಬ ಭರವಸೆ ನೀಡುತ್ತಾರೆ.ಮತ್ತೆ ಪುನಃ ಅವನ ಕನಸಿನಲ್ಲಿ ಬಂದು ಹೇಳುತ್ತಾರೆ.
ಹಾಗೆ ಅದನ್ನು ಮೈಂದ ಪೂಜಾರಿ ಅರಸನಲ್ಲಿ ಹೇಳಿದಾಗ ಅರಸು "ಇದನ್ನು ನೀನು ಸತ್ಯ ಪ್ರಮಾಣ ಮಾಡಿ ಹೇಳಬೇಕು ,ಏಳು ರಾತ್ರಿ ಎಂಟು ಹಗಲು ಕುದಿಯುತ್ತಿರುವ ಎಣ್ಣೆಯ ಬಾಣಲೆಯಲ್ಲಿ ಮಿಂದು ಏಳಬೇಕು" ಎಂದು ಹೇಳುತ್ತಾರೆ.
ಆತ ಸ್ನಾನ ಮಾಡಿ ಬಂದು ಕೋಟಿ ಚೆನ್ನಯರನ್ನು ನೆನೆದು ಅವರು ಕೊಟ್ಟ ಗಂಧ ವೀಳ್ಯ ಎಲೆಯನ್ನು  ಕುದಿಯುವ ಎಣ್ಣೆಗೆ ಹಾಕಿ ಮೂರು ಬರಿ ಮುಳುಗಿ ಏಳುತ್ತಾನೆ .ಎದ್ದು ಒದ್ದೆ ಕೂದಲನ್ನು ಕೊಡವಿದಾಗ ಅದರ ಬಿಸಿಗೆ ಅರಸು ಹಾಗೂ ಮನೆ ಮಂದಿ ಹೆದರುತ್ತಾರೆ.
ಹೀಗೆ ಕೋಟಿ ಚೆನ್ನಯರ ಕಾರಣಿಕವನ್ನು ಕಣ್ಣಾರೆ ಕಂಡ ಅರಸು ಕುತ್ಯಾರು ಕೇಂಜ ಅವರಿಗೆ ಗರೋಡಿಯನ್ನು ಕಟ್ಟಿಸುತ್ತಾನೆ.
ಮೈಂದ ಪೂಜಾರಿಗೆ ನೂರಾರು ಎಕರೆ ಜಾಗವನ್ನು ಉಂಬಳಿ ಕೊಟ್ಟು ತನ್ನ ಆಸ್ಥಾನದಲ್ಲಿ ಗೌರವದ ಸ್ಥಾನ ಕೊಡುತ್ತಾನೆ.
ಮುಂದೆ ಎಲ್ಲೂರು ಸೀಮೆಯ ಆರು ಮಾಗಣೆಯ ಎಲ್ಲೂರು ಕುತ್ಯಾರು ಕೊಳಚ್ಚೂರು ,ಕಳತ್ತೂರು ಕಣಿಯೂರು,ನಂದಿಕೂರು ಭಿಲ್ಲವ ಪ್ರಮುಖನಾಗಿ ಗರೋಡಿ ನೇಮದಲ್ಲಿ ಮುಖ್ಯಸ್ಥನಾಗಿರುವ ಆತ ಮುಂದೆ  ಮದುಮಗನಂತೆ ಜರಿ ಪೇಟ ,ಕಚ್ಚೆ ಧರಿಸಿ ಅಲಂಕಾರವಾಗಿ ಮುಕ್ಕಾಲಿಗೆಯಲ್ಲಿ  ತೋಟ ಬಗ್ಗ ಪೂಜಾರಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ನೆಲೆಯಾಗುತ್ತಾನೆ .
ಕೋಟಿ ಚೆನ್ನಯರ ಗರೋಡಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಸತ್ಯ ಪ್ರಮಾಣದಂಥ ಅತಿಮಾನುಷ ಸಾಹಸ ಮೆರೆದ ಮೈಂದ ಪೂಜಾರಿ ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ತುಳುವ ಸಂಸ್ಕೃತಿಯಲ್ಲಿ ಸಹಜವಾದುದೇ ಆಗಿದೆ.ಕುತ್ಯಾರು ಕೇಂಜ ಗರೋಡಿಯಲ್ಲಿ ತೋಟ ಬಗ್ಗ ಪೂಜಾರಿಗೆ ದೈವಿಕ ನೆಲೆಯಲ್ಲಿ ಆರಾಧನೆ ಇದೆ .
ಮಾಹಿತಿ ಮೂಲ :http://www.kotichennaya.com/kenjagarodi
ಶ್ರೀಬ್ರಹ್ಮ ಬೈದರ್ಕಳ ಗರೋಡಿ ಕುತ್ಯಾರು ಕೇಂಜ,ಉಡುಪಿ

Tuesday, 12 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು 206-207 :ಕಲೆಂಬಿತ್ತಾಯಮತ್ತು ಭಟ್ರು ನಾಯಕ (c)ಡಾ.ಲಕ್ಷ್ಮೀ ಜಿ ಪ್ರಸಾದ


                    
                                                    ಚಿತ್ರ ;ಅಂತರ್ಜಾಲ
ಪುತ್ತೂರು ತಾಲೂಕಿನ ರಾಮಕುಂಜೇಶ್ವರ ದೇವಾಲಯದಲ್ಲಿ ಆರಾಧನೆಗೊಳ್ಳುವ ಕಲೆಂಬಿತ್ತಾಯ ಮತ್ತು ಭಟ್ರು ನಾಯಕ ಅಪರೂಪದ ಎರಡು ಭೂತಗಳು'
ಈ ದೈವಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ .ಶ್ರೀಯುತ ವೆಂಕರಮಣ ಉಪಾಧ್ಯಾಯರು "ಕಲೆಂಬಿ ತ್ತಾಯ ನೂರಿತ್ತಾಯ ಕುಟುಂಬದವರ ಮನೆ ದೈವ ಎಂದು ಹೇಳಿದ್ದಾರೆ .ಇದು ಅವರ ಧರ್ಮ ದೈವ ಎಂದು ಕುಟ್ಟಿ ಪರವ ಅವರು ಹೇಳಿದ್ದಾರೆ.
ನೂರಿತ್ತಾಯ ಅವರ ಕ್ತುಮ್ಬದ ಹಿರಿಯರು ಏಳು ಗಂಗೆ ಗೆ ಅವರ ಹಿರಿಯರ ಸಂಸ್ಕಾರಕ್ಕಾಗಿ ಹೋಗಿ ಬರುವಾಗ ಈ ದೈವ ಅವರೊಂದಿಗೆ ಹಿಂಬಾಲಿಸಿ ಬಂದು ಅವರ ಮನೆ ದೇವರ ಬಲಭಾಗದಲ್ಲಿ ನೆಲೆ ನಿಲ್ಲುತ್ತದೆ .
ಕಲೆಂಬಿ ತ್ತಾಯ ಎಂಬುದು ಶಿವಳ್ಳಿ ಬ್ರಾಹ್ಮಣರ ಒಂದು ಉಪನಾಮ ಕೂಡ .ಓರ್ವ ಕಲೆಂಬಿತ್ತಾಯ ಉಪನಾಮವಿರುವ ಬ್ರಾಹ್ಮಣ ಯಾವುದೊ ಕಾರಣಕ್ಕೆ ದೈವತ್ವ ಪಡೆದು ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ .
ಇನ್ನು ಭಟ್ರು ನಾಯಕ ಎನ್ನುವ ದೈವದ ಅಬಗ್ಗೆ ಕೂಡ ಯಾವುದೊಂದು ಮಾಹಿತಿ ಲಭ್ಯವಾಗಿಲ್ಲ.ಈ  ಬಗ್ಗೆ ಮಾಹಿತಿ ಇದ್ದವರು ತಿಳಿಸಬೇಕಾಗಿ ವಿನಂತಿ

Friday, 1 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು:203 ಜತ್ತಿಂಗ © ಡಾ.ಲಕ್ಷ್ಮೀ ಜಿ ಪ್ರಸಾದ

                                          
© copy rights reserved(c) ಡಾಲಕ್ಷ್ಮೀ ಜಿ ಪ್ರಸಾದ ಚಿತ್ರ ಕೃಪೆ :ಚಿತ್ತರಂಜನ್ ತುಳುನಾಡು

ಸುಳ್ಯ ,ಪುತ್ತೂರು ,ಕಾರ್ಕಳ ಉಡುಪಿ ಸರಿದಂತೆ ತುಳುನಾಡಿನಾದ್ಯಂತ ಜಟ್ಟಿಗ ಎಂಬ  ಭೂತಕ್ಕೆ ಆರಾಧನೆ ಇದೆ .ಅರಮನೆ ಜಟ್ಟಿಗ ,ಕೋಟೆ ಜಟ್ಟಿಗ ,ಬೂಡು ಜಟ್ಟಿಗ ಇತ್ಯಾದಿ ಅನೇಕ ಹೆಸರುಗಳಿವೆ.ಇವೆಲ್ಲ ಒಂದೇ ದೈವ ಜತಿಗನ ಬೇರೆ ಬೇರೆ ಹೆಸರುಗಳೋ ಅಥವಾ ಬೇರೆ ಬೇರೆ ದೈವತಗಳೋ ಎಂಬ ಬಗ್ಗೆ ಇದಮಿಥ್ಹಂ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ .ಹೆಸರೇ ಸೂಚಿಸುವಂತೆ ಈತ ಮೂಲತಃ ಪೈಲ್ವಾನ ,ಕುಸ್ತಿ ಪಟು ಆಗಿರಬೇಕು
ವೀರ ಆರಾಧನೆ ಎಲ್ಲೆಡೆ ಕಂಡು ಬರುವ ವಿದ್ಯಮಾನ.ಹೊನ್ನಾವರ ,ಭಟ್ಕಳ ,ಗೇರುಸೊಪ್ಪೆ ಮೊದಲಾಡೆಗೆ ಜಟ್ಟಿಗನನ್ನು ಆರಾಧಿಸುತ್ತಾರೆ .ಈ ಬಗ್ಗೆ ಡಾ,ರಹಮತ್ ತರಿಕೆರೆ ಅವರು ಗೇರುಸೊಪ್ಪೆ ಬಸದಿಯ ಸಮೀಪವೇ ಬಯಲಿನಲ್ಲಿ ಇರುವ ಅನೇಕ ಜಟ್ಟಿಗನ ಕಲ್ಲುಗಳ ಬಗ್ಗೆ  " ಬುಡಕಟ್ಟು ಜನರಾದ ಗೊಂಡರ ದೈವಗಳು ಈ ಕಲ್ಲುಗಳು" ಎಂದು ಹೇಳಿದ್ದಾರೆ 

"ಗೇರುಸೋಪ್ಪೆಯನ್ನು ಆಳಿದ ಮೆಣಸಿನ ಚೆನ್ನ ಭೈರಾ ದೇವಿಯು ಅರಮನೆ ಕೋಟೆ ಗಳನ್ನು ಕಾಯಲು ದೂರದ ಆಂಧ್ರದ ಗೊಂಡ ಸಮುದಾಯದ ವೀರ ಜಟ್ಟಿಗಳನ್ನು ಕರೆಸಿದಳೆಂದು ಐತಿಹ್ಯವಿದೆ .ಕೋಟೆ ಜಟ್ಟಿ ,ಅರಮನೆ ಜಟ್ಟಿ ಹೆಸರುಗಳು ಇದ ನ್ನು  ದೃಡೀಕರಿಸುತ್ತವೆ.ಅರಮನೆಯ ಜಟ್ಟಿ ಅರಮನೆ ಕಾದವನು ಇರಬಹುದು ,ಕೋಟೆ ಕಾಯುವ ಜಟ್ಟಿ ಕೋಟೆ ಜಟ್ಟಿ ಇರಬಹುದು" ಎಂದು ರಹಮತ್ ತರಿಕೆರೆಯವರು ಅಭಿಪ್ರಾಯ ಪಟ್ಟಿದ್ದಾರೆ .

ಮೆಣಸಿನ ಯುದ್ಧದಲ್ಲಿ ಇವರೆಲ್ಲ ಸ್ವಾಮಿ ನಿಷ್ಠೆಯನ್ನು ಮೆರೆದು ಯುದ್ಧ ಮಾಡಿ ದುರಂತವನ್ನಪ್ಪಿರಬಹುದು .ಇವರ ಸಾಹಸ ಸ್ವಾಮಿ ನಿಷ್ಠೆ ಯಿಂದಾಗಿ ಇವರು ಜನ ಮಾನಸದಲ್ಲಿ ನಿಂತು ಆರಾಧನೆ ಪಡೆದಿರ ಬಹುದು .

ಹಗರಣ (ಒಂದು ದೃಶ್ಯ ಕಾವ್ಯ )ದ ಆರಂಭದಲ್ಲಿ ಜಟ್ಟಿಗರ ಪೂಜೆ ಮಾಡುವ ಸಂಪ್ರದಾಯವಿದೆ.

ಅಲ್ಲಿ ಆರಾಧಿಸಲ್ಪಡುವ ಜಟ್ಟಿಗರೇ ತುಳು ಪರಂಪರೆಯ ಜಟ್ಟಿ ದೈವವಾದರೆ ?ವೀರಾರಾಧನೆಯ ಪ್ರಸರಣ ಇಲ್ಲಿಯವರೆಗೆ ಹಬ್ಬಿ ಇಲ್ಲಿನ ಸಂಸ್ಕೃತಿಯಂತೆ ದೈವಗಳ ನೆಲೆಯಲ್ಲಿ ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ .

ಜಟ್ಟಿಗ ಮತ್ತು ಜತ್ತಿಂಗ ರನ್ನು ಹೆಸರಿನ ಸಾಮ್ಯತೆಯಿಂದಾಗಿ ಒಂದೇ ಭೂತ ಎಂದು ಜನರು ಭಾವಿಸಿದ್ದಾರೆ.
 ಆದ್ರೆ ಇಲ್ಲಿ ಪ್ರಚಲಿತವಿರುವ ಐತಿಹ್ಯದ ಪ್ರಕಾರ ಜತ್ತಿಂಗ  ಭೂತ ಮೂಲತಃ ಒಬ್ಬ ತಂತ್ರಿ .ಚೌಂಡಿ ಆರಾಧನೆಯನ್ನು ಮಾಡುವಾಗ ಓರ್ವ ತಂತ್ರಿ ದ್ರೋಹವನ್ನು ಮಾಡುತ್ತಾರೆ .ಆಗ ಕೋಪಗೊಂಡ ಚೌಂಡಿ /ಚಾಮುಂಡಿ ದೈವ ಆತನನ್ನು ಮಾಯ ಮಾಡಿ ಜಟ್ಟಿಗ ಎಂಬ ಹೆಸರಿನಲ್ಲಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.ಈ ದೈವವನ್ನು ಜತ್ತಿಂಗೆ /ಜಟ್ಟಿಂಗ ಎಂದೂ ಕರೆಯುತ್ತಾರೆ

 ಈ ಬಗ್ಗೆ ಶಶಾಂಕ ನೆಲ್ಲಿತ್ತಾಯರು ನೀಡಿದ ಒಂದು ಮದಿಪಿನಲ್ಲೂ ಮಾಹಿತಿ ಇದೆ 
 
ಸ್ವಾಮಿ ಅಪ್ಪೆ ಚೌoಡಿ...........
ಆನಿದ ಕಾಲೋಡ್ ಗಟ್ಟದ ರಾಜ್ಯೋಡ್ ಬೀಮರಾಯೇ ತೋಟದ ಕಾರಂಬಡೆ ಮರತ ಮುದೆಲ್ ಪೊಟ್ಟು ಕಲ್ಲುಡ್ ನಿಲೆಯದ್ ಬೀಮರಾಯೇ ಚೌoಡಿ ಪಂಡುದ್ ಗೋಚರ ಮಲ್ಪಯಿ ದೈವದು ಉಲ್ಲ .
ಅನಿದ ಕಾಲೋಡ್ ನಿನನ್ ನಿಲೆ ಮಲ್ಪರೆ ಬತ್ತಿನ ತಂತ್ರಿಲು ಮೋಸ ಮಲ್ತೆರುಂದು ಪನ್ಪಿನೈಕದ್ ಅರೆನ್ ಮಾಯಾ ಮಲ್ತದು ಜಟ್ಟಿಗರಾಯೆ ಪನ್ಪಿನ ದೈವ ಸಗ್ತಿಯಾದ್ ನಿನ ಮರ್ಗಿಲ್ದ್ ನಂಬೊಂದು ಬರ್ಪಿಲೆಕ್ಕ ಮಲ್ತೊಂದು , ತುಳುನಾಡ ಪಂಚ ವರ್ಣದ ಪುಣ್ಯ ಬೂಮಿಡ್ ಬಡಕಾಯಿ ಅಂಕೋಲಾ ಗಡಿದುರ್ದ್ ತೆಂಕಾಯಿ ರಾಮೆಸರ ಗಡಿ ಮುಟ್ಟ ಜಾಗ್ ಜಾಗೆಡ್ ಸಂಚಾರೋಗ್ ಪಿದದೊಂಡ..

ಈತನನ್ನು ಜಟ್ಟಿಗರಾಯ ಎಂದು ಕರೆಯಬೇಕಿದ್ದರೆ ,ಇಲ್ಲಿ ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ ತಂತ್ರಿ ಜಟ್ಟಿಯೂ ಆಗಿದ್ದನೇ?ಎಂಬ ಸಂದೇಹ ಉಂಟಾಗುತ್ತದೆ .ಚಾಮುಂಡಿದೈವದಆಗ್ರಹಕ್ಕೆತುತ್ತಾಗಿಮಾಯವಾಗಿ  ದೈವತ್ವ ಪಡೆದ ತಂತ್ರಿ ಗೆ ಜಟ್ಟಿಗ ಎಂದು ಹೆಸರು ಬರಬೇಕಿದ್ದರೆ ಆತ ಜಟ್ಟಿ ಕೂಡಾ ಆಗಿದ್ದಿರಬೇಕು .
ಅಥವಾ ತಂತ್ರಿಗಳು/ತಂತ್ರಿದಾರ್ ಎಂಬುದು ಕಾಲಾಂತರದಲ್ಲಿ ತಂತ್ರಿಗ >ಜತ್ತಿಂಗ >ಜಟ್ಟಿಗ ಆಗಿ ಬದಲಾಗಿರುವ ಸಾಧ್ಯತೆ ಇದೆ ಅರಮನೆ ಜಟ್ಟಿಗ .ಕೋಟೆ ಜಟ್ಟಿಗ ಮೊದಲಾದ ದೈವಗಳು ಮೂಲತಃ ಜಟ್ಟಿಗರೇ/ಕುಸ್ತಿ ಪಟುಗಳೇ ಆಗಿರಬೇಕು /ಆದರೆ ಜತ್ತಿಂಗ ಮಾತ್ರ ಮೂಲತ ಓರ್ವ ಬ್ರಾಹ್ಮಣ ತಂತ್ರಿ .ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ್ದಕ್ಕೆ ದೈವ ಆತನನ್ನು ಮಾಯಾ ಮಾಡಿದೆ .ದೈವದ ಆಗ್ರಹಕ್ಕೆ ಸಿಲುಕಿ ಮಯವದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ತುಳುವ ಸಂಸ್ಕೃತಿಯಲ್ಲಿ ಅಸಹಜವೇನೂ ಅಲ್ಲ.ಹಾಗೆಯೇ ಇಲ್ಲಿ ಕೂಡ ದ್ರೋಹವೆಸಗಿ ಚಾಮುಂಡಿ ದೈವದ ಆಗ್ರಹಕ್ಕೆ ತುತ್ತಾದ ಬ್ರಾಹ್ಮ ತಂತ್ರಿ ದೈವತ್ವ ಪಡೆದು ಜತ್ತಿಂಗ ದೈವವಾಗಿ ಆರಾಧಿಸಲ್ಪಡುತ್ತಿರುವ ಸಾಧ್ಯತೆ ಹೆಚ್ಚಾಗಿದೆ .
ಈ ಭೂತದ ವೇಷ ಭೂಷಣ ಅಭಿನಯ ಅಭಿವ್ಯಕ್ತಿಗಳು ಕೂಡ ಇದನ್ನು ಸಮರ್ಥಿಸುತ್ತದೆ .
ಜತ್ತಿಂಗ ಭೂತಕ್ಕೆ ಸಾಮಾನ್ಯವಾಗಿ ಬ್ರಾಹ್ಮಣರು ಧರಿಸುವ   ಜನಿವಾರ ಕಚ್ಚೆ ನಾಮ ಹಾಕಿ ಭೂತ ಕಟ್ಟುತ್ತಾರೆ .

ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಸ್ಪಷ್ಟ ಮಾಹಿತಿ ತಿಳಿದು ಬರಬಹುದು