Sunday 4 March 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು - 431 ಕೇಚ ರಾವುತ © ಡಾ.ಲಕ್ಷ್ಮೀ ಜಿ ಪ್ರಸಾದ




ರೇವಂತ ದೈವದ ಮೂರ್ತಿ ಚಿತ್ರ ಕೃಪೆ ಡಾ.ಇಂದಿರಾ ಹೆಗಡೆ 
ತುಳುನಾಡಿನ  ಉಡುಪಿ ಕುಂದಾಪುರ ಬಾರಕೂರು ಮೊದಲಾದ ಕನ್ನಡ ಪರಿಸರಗಳಲ್ಲಿ ರಾವು ಕೇಚ ರಾವುತ ಎಂಬ ದೈವಕ್ಕೆ ಆರಾಧನೆ ಇದೆ ‌ಕೇಚ ರಾವುತ ಕುದುರೆ ಏರಿದ ಖಡ್ಗ ಹಿಡಿದ ವೀರನನ್ನು ದ್ಯೋತಿಸುವ ಮೂರ್ತಿ ಎಂದು ಡಾ.ಲೀಲಾಭಟ್ ಅವರು ಹೇಳಿದ್ದಾರೆ‌.ರಾವುತನಿಗೆ ಕೋಲ ಕೊಟ್ಟು ಆರಾಧನೆ ಮಾಡುವ ಪದ್ಧತಿ ಮುದ್ದುಮನೆಯಲ್ಲಿ ನಡೆಯುವ ಪಾಣರಾಟದಲ್ಲಿ ಇರುವ ಬಗ್ಗೆ ಲತಾ ಸಂತೋಷ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ‌
ಆದರೆ ಈತ ಯಾರೆಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ .
ಬಾರಕೂರಿನ ಪಂಚಲಿಂಗೇಶ್ವರ ದೆವಾಲಯದ ಹಿಂಭಾಗದಲ್ಲಿ ರೇವಂತ ದೈವದ ಗುಡಿ ಇದೆ ಎಂದು ಡಾ.ಇಂದಿರಾ ಹೆಗಡೆಯವರು ತಿಳಿಸಿದ್ದಾರೆ.
ಇಲ್ಲಿನ ರೇವಂತ ದೈವದ ಮೂರ್ತಿ ಕುದುರೆ ಏರಿದ್ದು ಕೈಯಲ್ಲಿ ಖಡ್ಗ ಹಿಡಿದಿದೆ.ಈತ ಬಾರಕೂರಿನ ಕಾವಲುಗಾರ ದೈವ ಎಂಬ ಐತಿಹ್ಯ ಪ್ರಚಲಿತವಿದೆ‌.ರಾವುತ ಕೇಚ ರಾವುತ ರಾಹುತ ರೇವಂತ ಎಲ್ಲವೂ ಒಂದೇ ದೈವದ ಹೆಸರುಗಳಾಗಿವೆ .
ವಾಸ್ತವದಲ್ಲಿ ಕೂಡ ಈತ ಅರಮನೆ ಕಾಯುವ ವೀರನಾಗಿದ್ದು ಯಾವುದಾದರೂ ಕಾರಣಕ್ಕೆ ದುರಂತವನ್ನಪ್ಪಿ ಅಥವಾ ಸ್ವಾಮಿ ನಿಷ್ಠೆಯ ಕಾರಣಕ್ಕೆ ಮರಣಾನಂತರ ದೈವತ್ವ ಪಡೆದು ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ
ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ
ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ ಗ್ರಂಥಗಳು
ಭೂತನಾಗರ ನಡುವೆ - ಡಾ.ಲೀಲಾ ಭಟ್
ಅಳಿಯ ಕಟ್ಟು ಮತ್ತು ಬಾರ್ಕೂರು - ಡಾ.ಇಂದಿರಾ ಹೆಗಡೆ 

No comments:

Post a Comment