Tuesday, 29 July 2014

ಭಾರತದ ಜನಪದರಲ್ಲಿ ಲೈಂಗಿಕ ಶಿಕ್ಷಣವಿತ್ತೇ?- ಡಾ.ಲಕ್ಷ್ಮೀ ಜಿ ಪ್ರಸಾದ 30 ಜುಲೈ ಕನ್ನಡ ಪ್ರಭ ಪುಟ -7



 | - Kannadaprabha.com:
ಲೈಂಗಿಕ ಶಿಕ್ಷಣ-ಚಿಂತನ ಮಂಥನ
"ಕಣ್ಣಾ ಮುಚ್ಚೆ ಕಾಡೆ ಗೂಡೆ, ಉದ್ದಿನ ಮೂಟೆ ಉರುಳೇ ಹೋಯ್ತು, ನನ್ನಯ ಹಕ್ಕಿ ಬಿಟ್ಟೇ ಬಿಟ್ಟೆ, ನಿಮ್ಮಯ ಹಕ್ಕಿ ರಕ್ಷಿಸಿಕೊಳ್ಳಿ"
ಓಡಿಸಿಕೊಂಡು ಬರುವಾತ ಒಬ್ಬ, ಓಡಿ ತಪ್ಪಿಸಿಕೊಳ್ಳುವವರು ಹಲವರು. ಸಿಕ್ಕಿಹಾಕಿಕೊಳ್ಳುವಾತ ನಂತರ ಓಡಿಸಿ ಹಿಡಿಯುವಾತನಾಗುವ ಈ ಮಕ್ಕಳ ಜನಪದ ಆಟದಲ್ಲಿ ಹುಡುಗ ಹುಡುಗಿಯರ ಮಧ್ಯೆ ಬೇಧವಿಲ್ಲ. ಆದರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜಾಣತನವನ್ನು ಇದು ಹೇಳಿಕೊಡುತ್ತದೆ.
ಇಂದಿನ ದಿನಗಳಲ್ಲಿ ಸಾಕಷ್ಟು ಚರ್ಚಿತವಾಗುತ್ತಿರುವ ಲೈಂಗಿಕ ಶಿಕ್ಷಣ ಜನಪದರಲ್ಲಿ ಇತ್ತೇ? ಇದ್ದರೆ ಯಾವ ಮಾದರಿಯದು? ಅದನ್ನು ಇಂದಿನ ಆಧುನಿಕ ಜಗತ್ತಿನಲ್ಲಿ ಅಳವಡಿಸಲು ಸಾಧ್ಯವೇ, ಅತ್ಯಾಚಾರದಂತಹ ವಿಕೃತಿಗಳಿಗೆ ಕೂಡಾ ಜನಪದ ಸಾಹಿತ್ಯದಲ್ಲಿ ಪರಿಹಾರವಿದೆಯೇ ಎಂದು ಯೋಚಿಸಿದಾಗ ಮೊದಲಿಗೆ ನೆನಪಿಗೆ ಬರುವುದು ಛತ್ತೀಸ್‌ಗಢದ ಬಸ್ತರ್ ಜಿಲ್ಲೆಯಲ್ಲಿ ಪ್ರಚಲಿತವಿರುವ "ಘೋಟುಲ್‌" ಎಂಬ ಒಂದು ಅನೌಪಚಾರಿಕ ಜನಪದ ಶಿಕ್ಷಣ ವ್ಯವಸ್ಥೆ.
ಘೋಟುಲ್ ಎಂಬುದು ಬಸ್ತರ್‌ನಲ್ಲಿ ಪ್ರಚಲಿತವಿರುವ ಹಲ್ಬಿ ಭಾಷೆಯ ಪದವಾಗಿದ್ದು, ಇದರ ಶಬ್ದಶಃ ಅರ್ಥ ಎಲ್ಲೆಡೆ ಎಂದು. ಬಹುಶಃ ಎಲ್ಲೆಡೆ ಇರಲೇಬೇಕಾದ್ದು ಎಂಬರ್ಥದಲ್ಲಿ ಘೋಟುಲ್ ಶಬ್ದ ಬಳಕೆಗೆ ಬಂದಿರುವ ಸಾಧ್ಯತೆ ಇದೆ.
ಜನಪದ ಅಧ್ಯಯನ ಕ್ಷೇತ್ರದಲ್ಲಿ ಘೋಟುಲ್ ಒಂದು ವಿಶಿಷ್ಟ ಮಾದರಿ. ಇದೊಂದು ಬಸ್ತರ್ ಬುಡಕಟ್ಟು ಜನರ ಕಾಡಿನ ಯುವ ವಿಶ್ವ. ಪ್ರಸ್ತುತ ಛತ್ತೀಸ್‌ಗಢಕ್ಕೆ ಸೇರಿರುವ, ಮಧ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿನ ವಿಸ್ತಾರವಾದ ಒಂದು ಜಿಲ್ಲೆ ಬಸ್ತರ್. ಜಗದಲಪುರ ಅದರ ಆಡಳಿತ ಕೇಂದ್ರ. ಹಿಂದೆ ಇಲ್ಲಿ ಅರಸರ ಆಡಳಿತವಿತ್ತು. ಇಲ್ಲಿನ ನಾರಾಯಣಪುರ ತಹಸೀಲದಲ್ಲಿ ಹಳ್ಳಕೊಳ್ಳ, ಬೆಟ್ಟಗಳ ದುರ್ಗಮ ಪ್ರದೇಶವಾದ ಅಬುಜ್‌ಮಾಡ ಹರಡಿಕೊಂಡಿದ್ದು ಅಲ್ಲಿನ ಆದಿವಾಸಿಗಳು ಆಧುನಿಕತೆಯ ಸೋಂಕಿಗೆ ಒಳಗಾಗದೇ ತಮ್ಮ ಸಂಪ್ರದಾಯ, ಹಾಡು, ಹಸೆ, ಕಲೆ ಸಂಸ್ಕೃತಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಇಲ್ಲಿನ ಹಳ್ಳಿಗಳಲ್ಲಿ ಶೇ.72 ಬುಡ ಕಟ್ಟು ಆದಿವಾಸಿ ಜನರು ಬದುಕುತ್ತಿದ್ದಾರೆ.
ಘೋಟುಲ್ ಆದಿ ಮಾನವನ ಕಾಲದಿಂದಲೂ ಬೆಳೆದು ಬಂದ ಜೀವನ ಶಿಕ್ಷಣ ಸಂಸ್ಥೆ ಎಂದು ಮಾನವ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬಸ್ತರಿಗೆ ಅಧ್ಯಯನ ಪ್ರವಾಸ ಮಾಡಿರುವ ಡಾ. ಕೃಷ್ಣಾನಂದ ಕಾಮತ್ ಅವರು "ಇದೊಂದು ಜೀವಂತ ವಿದ್ಯಾಲಯ, ಇಲ್ಲಿ ಪುಸ್ತಕದ ಪಾಂಡಿತ್ಯ, ಔಪಚಾರಿಕ ಶಿಕ್ಷಣಕ್ಕೆ ಬೆಲೆ ಇಲ್ಲ. ದಿನವೂ ಬಾಳಿ ಬದುಕುವ ವಿದ್ಯೆ ಹೇಳಿ ಕೊಡಲಾಗುತ್ತದೆ. ಈ ಸಂಸ್ಥೆ ನಾಗರಿಕ ಪ್ರಪಂಚಕ್ಕೊಂದು ವಿಸ್ಮಯವಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುರಿಯಾ ಆದಿ ವಾಸಿಗಳು ಪ್ರತಿ ಹಳ್ಳಿಗೆ ಒಂದರಂತೆ ಒಂದು ಘೋಟುಲ್ ಸಿದ್ಧ ಪಡಿಸಿಕೊಂಡಿರುತ್ತಾರೆ. ಹಳ್ಳಿ ದೊಡ್ಡದಿದ್ದರೆ ಎರಡು ಮೂರು ಘೋಟುಲ್‌ಗಳೂ ಇರುತ್ತವೆ. ಇದು ಅವರ ಕಿರಿಯ ವಿಶ್ವ. ಹಳ್ಳಿಯ ಹೊರಭಾಗದಲ್ಲಿರುವ ಘೋಟುಲ್ ಒಂದು ಗುಡಿಸಲಿನಂತೆ ಅಥವಾ ದೊಡ್ಡ ಬೈಠಕ್ ಖಾನೆಯಂತೆ ಇರುತ್ತದೆ."ಚಳಿಗಾಲಕ್ಕಾಗಿ ಬೆಳಕು ಗಾಳಿಯಾಡದ ಒಂದು ಕಟ್ಟಡ ಹಾಗೂ ಬೇಸಿಗೆಗಾಗಿ ಕೇವಲ ಒಂದು ಮಾಡು ಇರುವ ಪಡಸಾಲೆಯೊಂದಿರುತ್ತದೆ" ಎಂದು ಡಾ.ಕೃಷ್ಣಾನಂದ ಕಾಮತರು ಹೇಳಿದ್ದಾರೆ.
ಗೋಡೆಗಳ ಮೇಲೆ ಆನೆ ನವಿಲು ಮೊದಲಾದ ಉಬ್ಬು ಚಿತ್ರಗಳು, ಜೊತೆಗೆ ಸುಗ್ಗಿ ಸಮಯದಲ್ಲಿ ಅಕ್ಕಿ ಹಿಟ್ಟಿನಿಂದ ರಚಿಸಿದ ರಂಗೋಲಿ ಮಾದರಿಯ ಚಿತ್ರಗಳು (ಧಪ್ಪಾ ) ಇರುತ್ತವೆ. ಇದ್ದಿಲಿನಿಂದ ರಚಿಸಿದ ಹೆಣ್ಣಿನ ಹಲವು ಬಗೆ ಚಿತ್ರಗಳು ಇರುತ್ತವೆ. ಸ್ತನ, ಜನನೇಂದ್ರಿಯಗಳ ಚಿತ್ರಗಳನ್ನು ಬೃಹದಾಕಾರದಲ್ಲಿ ಬಿಡಿಸಿರುತ್ತಾರೆ.
ಇದು ಹಳ್ಳಿಯ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಿರುತ್ತದೆ. ಘೋಟುಲ್‌ಗಳಿಗಾಗಿ ಹೊಲದಲ್ಲಿ ಬತ್ತ  ಮತ್ತು ಇತರ ಬೆಳೆಗಳನ್ನು ಬೆಳೆಯುತ್ತಾರೆ. ಇದರ ಜವಾಬ್ದಾರಿ ಘೋಟುಲ್ ಸದಸ್ಯರದ್ದು. ಇಲ್ಲಿ ಆರು ವರ್ಷಕ್ಕಿಂತ ಹೆಚ್ಚಿನ ಮಕ್ಕಳು ಸದಸ್ಯರು. ವಿವಾಹಿತ ಪ್ರೌಢ ಗೃಹಸ್ಥರಿಗೆ ಇಲ್ಲಿ ಪ್ರವೇಶವಿಲ್ಲ!
ಮುರಿಯಾ ಬುಡಕಟ್ಟಿನ ಮಕ್ಕಳು, ಯುವಕ (ಚಿಲಕ್ ), ಯುವತಿ (ಮೋತಿಯಾರಿ )ಯರು ಘೋಟುಲ್ ಅನ್ನು ತುಂಬಾ ಇಷ್ಟಪಡುತ್ತಾರೆ. ವಾರಕ್ಕೊಮ್ಮೆ ಎರಡು ಬಾರಿ ಹದಿಹರೆಯದ ಕಿಶೋರ- ಕಿಶೋರಿಯರು, ಅವಿವಾಹಿತ ಯುವಕ-ಯುವತಿಯರು ಹಿರಿಯರ ಅನುಮತಿ ಪಡೆದು ಘೋಟುಲ್‌ನಲ್ಲಿ ಒಟ್ಟು ಸೇರುತ್ತಾರೆ.
ಕೃಷಿ, ಬೇಟೆ, ಮೃದಂಗ, ಕೊಳಲು, ಸಾಂಪ್ರದಾಯಿಕ ಹಾಡು, ಕಥೆ ಮೊದಲಾದವುಗಳೊಂದಿಗೆ ಇವರಿಗೆ ಇಲ್ಲಿ ಲೈಂಗಿಕ ಶಿಕ್ಷಣವೂ ದೊರೆಯುತ್ತದೆ.
"ಸರಳತೆ, ಸಮಾನತೆ ಹಾಗೂ ಸ್ವಾತಂತ್ರ್ಯ" ಘೋಟುಲ್ ಜೀವನದ ಜೀವಾಳ. ಇಲ್ಲಿ ಗಂಡು ಹೆಣ್ಣು ಸಮಾನರು. ಇಂದಿನ ಆಧುನಿಕ ಶಿಕ್ಷಣದ ನಡುವೆಯೂ ಪರಿಹರಿಸಲಾಗದ ಯುವ ಜನರ ಸಮಸ್ಯೆಗಳನ್ನು ಬಸ್ತರ್‌ನ ಬುಡಕಟ್ಟು ಜನರಾದ ಮುರಿಯಾಗಳು ಶತಕಗಳ ಹಿಂದೆಯೇ ಸಹಜವಾಗಿಯೇ ಪರಿಹರಿಸಿಕೊಂಡಿದ್ದಾರೆ.
ಘೋಟುಲ್‌ನಲ್ಲಿ ಇವರೆಲ್ಲ ಗಂಡು ಹೆಣ್ಣು ಎಂಬ ಅಂತರವಿಲ್ಲದೆ ಉಂಡು ತಿಂದು ಮಲಗುತ್ತಾರೆ. ಯುವಕ ಯುವತಿಯರು ಜೊತೆಯಲ್ಲಿಯೇ ನದಿಯಲ್ಲಿ ನಗ್ನರಾಗಿ ಈಜಾಡುವಷ್ಟು ಸಮಾನತೆ, ಸಹಜತೆ ಅವರಲ್ಲಿದೆ.
ಘೋಟುಲ್‌ಗಳಲ್ಲಿ  ಹಿರಿಯ ಯುವತಿಯರು (ಮೋತಿಯಾರಿ) ಕಿರಿಯರಿಗೆ (ಚಿಲಕ್) ಲೈಂಗಿಕ ತಿಳಿವಳಿಕೆ ನೀಡುತ್ತಾರೆ. ಶರೀರವನ್ನು ನಿಸರ್ಗಕ್ಕೆ ಹೋಲಿಸಿ ಅಲ್ಲಿಯ ಎತ್ತರ ತಗ್ಗು, ಬೆಟ್ಟ ಕಣಿವೆಗಳಂತೆಯೇ ಶರೀರ. ಮಳೆ, ಗಾಳಿ, ಸಮುದ್ರದಲ್ಲಿ ಏರಿಳಿತ ಇರುವಂತೆಯೇ ಉತ್ತೇಜನ ಉಂಟಾದಾಗ ಮನುಷ್ಯನ ದೇಹ ಸ್ವಭಾವಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ವಸಂತ ಋತುವಿನಲ್ಲಿ ಪ್ರಕೃತಿಯಲ್ಲಿ ಹೂ ಹಣ್ಣು ಬೆಳೆಯುವಂತೆ ಪ್ರತಿ ಹುಡುಗ ಹುಡುಗಿಯರಲ್ಲೂ ವಸಂತ ಕಾಲ ಇರುತ್ತದೆ. ಇತ್ಯಾದಿಯಾಗಿ ದೇಹದ ಬಗ್ಗೆ ತಿಳಿವಳಿಕೆ ನೀಡುತ್ತಾರೆ. ಸ್ವಚ್ಛತೆಯ ಬಗ್ಗೆಯೂ ಪಾಠ ನಡೆಯುತ್ತದೆ.
ಘೋಟುಲ್‌ನಲ್ಲಿ ಪ್ರೇಮ ಕಾಮಗಳು ಹಸಿವೆ ನಿದ್ರೆಯಂತೆಯೇ ಸಹಜವಾದುದು! ಆದ್ದರಿಂದ ಅಲ್ಲಿ ಯಾವುದೇ ವಿಕೃತಿಗೆ ಎಡೆಯೇ ಇಲ್ಲ..
ಬಗ್ಗೆ ಡಾ.ಕೃಷ್ಣಾನಂದ ಕಾಮತರು "ಘೋಟುಲ್‌ನಲ್ಲಿ ರಾತ್ರಿ ಹೊತ್ತು ಹಿರಿಯ ಮೋತಿಯಾರಿ ಚಾಪೆಯ ಜೋಡಿಗಳನ್ನು ತಿಳಿಸುತ್ತಾಳೆ. ಪ್ರತಿ ದಿನ ಜತೆಗಾರರು ಬದಲಾಗುತ್ತಾರೆ. ಪ್ರತಿ ದಿನದ ಚಾಪೆ ಜೋಡಿಗಳನ್ನು  ಹೆಸರಿಸಿದ ನಂತರ ಸದಸ್ಯರೆಲ್ಲರೂ ಸ್ವತಂತ್ರರು. ಚಿಕ್ಕ ಮಕ್ಕಳ ವಿಷಯದಲ್ಲಿ ಇವರು ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ತಮಗೆ ಸರಿ ಕಂಡವರೊಡನೆ ಮಲಗುತ್ತಾರೆ. ಬಾಲ್ಯದಲ್ಲಿ ಅಣ್ಣ ತಂಗಿಯರಂತೆ ಒಟ್ಟಿಗೆ ಮುದುಡಿಕೊಂಡು ಮಲಗಿದರೆ ಸ್ವಲ್ಪ ಸಮಯದ ನಂತರ ಒಬ್ಬರ ಕಾವಿಗೆ ಇನ್ನೊಬ್ಬರು, ಒಬ್ಬರ ಹೃದಯ ಮಿಡಿತ ಕೇಳಿಸುವಂತೆ ಮಲಗುತ್ತಾರೆ. ಒಂದೇ ಕೋಣೆಯಲ್ಲಿ ಸಹೋದರ ಸಹೋದರಿಯರು ತಮ್ಮ ತಮ್ಮ ಪ್ರಿಯೆ ಪ್ರಿಯತಮರೊಡನೆ ವಿರಮಿಸುವ ಅವಕಾಶ ನೀಡುವ ಸಮಾಜ ವಿಶ್ವದಲ್ಲಿ ಇನ್ನೊಂದು ಇದೆಯೋ ಇಲ್ಲವೋ?" ಎನ್ನುತ್ತಾರೆ.
ಇಲ್ಲಿ ಲೈಂಗಿಕ ಕ್ರಿಯೆ ಗೌಪ್ಯ ಎಂದಾಗಲೀ, ಅಪರಾಧ ಎಂಬ ಭಾವಾಗಲೀ ಇಲ್ಲವೇ ಇಲ್ಲ. ಊಟ ತಿಂಡಿ ನಿದ್ರೆಯಂತೆಯೇ ಸಹಜವಾದುದು. ಇದರಿಂದಾಗಿ ಲೈಂಗಿಕ ತಿಳಿವಳಿಕೆ ಇಲ್ಲದೇ ಇರುವವರಿಗೆ, ಚಿಕ್ಕವರಿಗೆ ಲೈಂಗಿಕ ಶಿಕ್ಷಣ ಸಹಜವಾಗಿಯೇ ದೊರೆಯುತ್ತದೆ.
ಅಕ್ಕ ಪಕ್ಕದಲ್ಲಿ ಪ್ರೇಮ ಕಲಹ, ಪ್ರಣಯ ಕ್ರೀಡೆಗಳಲ್ಲಿ ನಿರತರಾಗಿರುವ ಹಿರಿಯ ಜೋಡಿಗಳನ್ನು ನೋಡಿ ಕಿರಿಯರು ಅದನ್ನು ಅನುಸರಿಸುತ್ತಾರೆ. ಇವರ ಪ್ರಣಯಾವಸ್ಥೆ ಬಾಲ್ಯದಿಂದಲೇ ಪ್ರಾರಂಭವಾಗುತ್ತದೆ. ಮೋತಿಯಾರಿ (ಮುರಿಯಾ ಕನ್ಯೆ ) ಎಷ್ಟೇ ಚಿಕ್ಕವಳಿದ್ದರೂ ಈ ವಿಷಯದಲ್ಲಿ ಪ್ರಬುದ್ಧಳು. ಚಿಲಕರು ಹಾಗೂ ಮೋತಿಯಾರಿಗಳು ತಮಗೆ ಬಂದ ಅಡಚಣೆ, ಅಡ್ಡಿ ಆತಂಕ ಸಂಶಯಗಳನ್ನುತಮಗಿಂತ ಹಿರಿಯರಿಗೆ ಕೇಳಿ ಪರಿಹಾರ ಪಡೆಯುತ್ತಾರೆ. ಈ ಬಗ್ಗೆ ಯಾವುದೇ ಅಳುಕು ನಾಚಿಕೆ ಇರುವುದಿಲ್ಲ.
ಘೋಟುಲ್‌ನಲ್ಲಿ ಪ್ರೇಮ, ಪ್ರಣಯ ಯುವತಿಯ ಹಕ್ಕು, ಯುವಕನ ಕರ್ತವ್ಯ. ಅಂತೆಯೇ ಪ್ರಚೋದನೆಯಲ್ಲಿ ಆಕೆಯೇ ಮುಂದಾಗುತ್ತಾಳೆ. ರಾತ್ರಿಯ ಚಾಪೆಯ ಜೋಡಿಗಳಲ್ಲಿ ಪರಸ್ಪರ ಸಹಮತ, ಒಪ್ಪಿಗೆ ಇದ್ದರೆ ಮಾತ್ರ ಪ್ರಣಯ. ಬಲಾತ್ಕಾರದ ಪ್ರಶ್ನೆಯೇ ಇರುವುದಿಲ್ಲ. ಹಾಗೆಂದು ಯಾರೂ ಪಕ್ಷಪಾತ ಮಾಡುವಂತಿಲ್ಲ. ಹಾಗೆ ಮಾಡಿದರೆ ಅವರಿಗೆ ಶಿಕ್ಷೆ ಕೂಡ ಇರುತ್ತದೆ.
"ಚಿಲಕ ಮೋತಿಯಾರಿಗಳು ಪ್ರೇಮ ಬಂಧದಲ್ಲಿ ಸಿಲುಕದಂತೆ ಕಟ್ಟು ಪಾಡು ಇದ್ದರೂ ಆಗೊಮ್ಮೆ ಈಗೊಮ್ಮೆ ಇಂಥ ಪ್ರೇಮಿಗಳ ಉದಾಹರಣೆ ಸಿಗುತ್ತವೆ" ಎಂದು ಕೃಷ್ಣಾನಂದ ಕಾಮತರು ಹೇಳುತ್ತಾರೆ. ಈ ಬಗ್ಗೆ ಒಂದು ಹಾಡು ಹಾಗೂ ಕಥೆ ಅಲ್ಲಿ ಜನಪ್ರಿಯವಾಗಿದೆ:
"ಒಬ್ಬ ಬಡ ಚಿಲಕ (ಮುರಿಯಾ ಯುವಕ ) ಊರ ಕೊತ್ವಾಲನ ಮಗಳನ್ನು ಪ್ರೀತಿಸುತ್ತಾನೆ. ಆದರೆ ಕೊತ್ವಾಲ ಕೇಳಿದಷ್ಟು ವಧು ದಕ್ಷಿಣೆ ಕೊಡಲು ಸಾಧ್ಯವಾಗುವುದಿಲ್ಲ(ಮುರಿಯಾಗಳಲ್ಲಿ ವಧು ದಕ್ಷಿಣೆ ಪದ್ಧತಿ ಜಾರಿಯಲ್ಲಿದೆ ). ಅವರು ಊರು ಬಿಟ್ಟು ಓಡಿ ಹೋಗಿ ಕಾಡು ಮೇಡು ಅಲೆಯುತ್ತಾರೆ. ಕೊನೆಗೆ ಮೋತಿಯಾರಿ ಹುಲಿ ಬಾಯಿಗೆ ಸಿಕ್ಕು ಸಾಯುತ್ತಾಳೆ. ವಿರಹ ತಾಳಲಾಗದೆ ಚಿಲಕನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ."
ಆದರ್ಶ ಪ್ರೇಮಿಗಳ ಕಥೆ ಘೋಟುಲ್‌ನಲ್ಲಿ ಎಲ್ಲರಿಗೂ ಬಹಳ ಪ್ರಿಯವಾದುದಾಗಿದೆ. ಮೂಲತಃ ಈ ಹಾಡು ಹಲ್ಬಿ ಭಾಷೆಯಲ್ಲಿದ್ದು ಅದರ ಕನ್ನಡ ಅನುವಾದವನ್ನು ಕೃಷ್ಣಾನಂದ ಕಾಮತರು ಹೀಗೆ ಮಾಡಿದ್ದಾರೆ:
ದಿನವೆಲ್ಲ ಮೈಮುರಿದು ದುಡಿದಿಹೆನು ಪ್ರಿಯೇ, ಬಳಲಿ ಬೆಂಡಾಗಿ ಮರಳಿ ಬಂದಿಹೆನು/ ಮಿಂದುಂಡು ಒರಗಿರಲು ನಿನ್ನ ನೆನಪಾಗಿಹುದು, ಊರವರ ಕಣ್ಣು ತಪ್ಪಿಸಿ ಕಾಡ ಹಾದಿಯ ತುಳಿದು/ ಕೆರೆಯ ದಂಡೆಯಿಂದ ಪೊದೆಯ ಸಂಧಿಯಿಂದ, ಕತ್ತಲಲ್ಲಿ ಜಾರುತ್ತ ನುಸುಳುತ್ತ ನಿನಗಾಗಿ ಅಲೆದೆ/ ಕುಣಿಯಲಂಗಣವಿಲ್ಲ, ಕೊಳಲು-ಡೋಲುಗಳಿಲ್ಲ/  ಜೊತೆಯ ಹಾಡಿಲ್ಲ, ನೆರೆಕರೆಯವರು ಮಲಗಿಹರು/ ಒಟ್ಟಿಗೆ ಒರಗಿ ರಾತ್ರಿಯಾದರೂ ಕಳೆಯೋಣ/ ಮಂದ ಮಾರುತ, ಹೂಗಳರಳಿಹವು, ಭೂಮಾತೆಯಿಹಳು, ನೀಲ ಗಗನದಡಿ ಮೈ ಮರೆಯೋಣ ಬಾ."
ಇದೇ ರೀತಿ ತನ್ನ ಇನಿಯಳನ್ನು ನೋಡಲು ದುರ್ಗಮವಾದ ಕಾಡಿನಲ್ಲಿ ಬೆಟ್ಟ ಹತ್ತಿ ಇಳಿದು ಬರುವ ಪ್ರಿಯಕರನ ಕುರಿತಾಗಿ "ಸಣ್ಣಲ್ಲ ಕಾಡುಡು ಬಣ್ಣಲ್ಲ ಬಲಿಕೇಡು ಈ ಎಂಚ ಜತ್ತೇಯ ಜತ್ತೆ ಲಿಂಗ" (ಸಣ್ಣದಲ್ಲದ ಕಾಡಿನಲ್ಲಿ ಕಡಿದಾದ ಬೆಟ್ಟದಲ್ಲಿ ನೀನು ಹೇಗೆ ಇಳಿದು ಬಂದೆ ಜತ್ತೆ ಲಿಂಗ ) ಎಂಬ ಒಂದು ತುಳು ಜಾನಪದ ಹಾಡು  ಪ್ರಚಲಿತವಿದೆ.
ಘೋಟುಲ್‌ನಲ್ಲಿ ಮೋತಿಯಾರಿಗಳನ್ನು ಕೆರಳಿಸಲು ಚಿಲಕರು ಇಂಥ ಹಾಡುಗಳನ್ನು ರಾಗವಾಗಿ ದೈನ್ಯತೆಯಿಂದ ಹಾಡುತ್ತಾರೆ. ಪ್ರತಿಯಾಗಿ ಹುಡುಗಿಯರು ಗುದ್ದುತ್ತಾರೆ, ಚಿವುಟುತ್ತಾರೆ. ಆದರೆ ಇದಾವುದನ್ನೂ ಲೆಕ್ಕಿಸದೆ ಚಿಲಕರು ಹಾಡುತ್ತಲೇ ಇರುತ್ತಾರೆ.
ಕಿಶೋರಾವಸ್ಥೆಯನ್ನು ದಾಟಿ ಇವರು ವಿವಾಹಿತರಾಗಿ ಗೃಹಸ್ಥರಾದ ಮೇಲೆ ಅನ್ಯ ಸ್ತ್ರೀ ಪುರುಷ ಮಿಲನ, ಪ್ರೀತಿ- ಪ್ರೇಮ ನಿಷಿದ್ಧವಾಗಿದೆ. ಏಕ ಪತ್ನಿ ಪದ್ಧತಿ ಇವರಲ್ಲಿ ಜಾರಿಯಲ್ಲಿದೆ. ಈ ಬಗ್ಗೆ ಬಿಗಿಯಾದ ನೀತಿ ಸಂಹಿತೆ ಜಾರಿಯಲ್ಲಿದೆ. "ಅನ್ಯ ಸ್ತ್ರೀ ಮೇಲೆ ಕಣ್ಣು ಹಾಕಿದ ಗಂಡನ್ನು ಸಮಾಜದಿಂದ ಬಹಿಷ್ಕಾರ ಹಾಕುತ್ತಾರೆ. ಹಾಗಾಗಿ ಯಾರೂ ಪರ ಸ್ತ್ರೀಗೆ ತೊಂದರೆ ಕೊಡುವ ಪ್ರಶ್ನೆಯೇ ಇಲ್ಲಿರುವುದಿಲ್ಲ" ಎಂದು ಪ್ರೊ. ಉಮಾ ರಾಮ್ ಹೇಳುತ್ತಾರೆ.
ಬಸ್ತರ್ ಜನಪದರಲ್ಲಿ ಬಿಟ್ಟರೆ ಬೇರೆಲ್ಲೂ ಇಷ್ಟು ಸಹಜವಾದ ಲೈಂಗಿಕ ಶಿಕ್ಷಣದ ಮಾದರಿ ಕಾಣುವುದಿಲ್ಲ.
ಇದು ಬಿಟ್ಟರೆ ಕನ್ನಡ ತುಳು ಜನಪದ ಸಾಹಿತ್ಯ ಸೇರಿದಂತೆ ಎಲ್ಲ ಜನ ಪದ ಸಾಹಿತ್ಯದಲ್ಲಿ, ಹೆಣ್ಣು ಗಂಡಿನ ಪ್ರೇಮ, ಗಂಡಿನ ದೌರ್ಜನ್ಯವನ್ನು ಮೆಟ್ಟಿ ನಿಂತ ಹೆಣ್ಣಿನ ಜಾಣ್ಮೆ ಕುರಿತು ಅನೇಕ ಹಾಡು ಕಥೆಗಳು ಲಭ್ಯವಿವೆ.
ನೀರು ತರಲು ಹೋದಾಗ ಅಡ್ಡಗಟ್ಟಿದ ದೇರೆ ಮುಂಡೋರಿಯನ್ನು ಬಡಿದು ಓಡಿಸುವ ಬಂಗಾರಲ್ವಾಗ ಎಂಬ ಹೆಣ್ಣು ಮಗಳ ಸಾಹಸದ ಬಗ್ಗೆ ಒಂದು ತುಳು ಜನಪದ ಹಾಡು ಇದೆ. ತನ್ನನ್ನು ಕಾಮಿಸಿ ಮದುವೆಯಾಗುವಂತೆ ಕಾಡಿದ ಗಂಡನ್ನು ಉಪಾಯದಿಂದ ಕೊಲ್ಲುವ ರಂಗಮೆ, ನೇರವಾಗಿ ಕುದುರೆ ಏರಿ ಯುದ್ಧಮಾಡಿ ಕೊಲ್ಲುವ ಎಣ್ಮೂರು ಗುತ್ತಿನ ಬಾಲೆ ದೈಯಕ್ಕು, ತನ್ನನ್ನು ವಶಪಡಿಸಿಕೊಳ್ಳುವ ಸಲುವಾಗಿಯೇ ತನ್ನ ಗಂಡ ಪರವ ಮೈಂದನನ್ನು ಕೊಂದ ಅರಸು ಬೊಟ್ಟಿಪ್ಪಾಡಿ ಬಲ್ಲಾಳನಿಗೆ ಒಲಿದಂತೆ ನಟಿಸಿ ಅವನ ಸರ್ವ ಸಂಪತ್ತನ್ನೂ ಗಂಡನ ಚಿತೆಗೆ ಸುರಿವಂತೆ ಮಾಡಿ ತಾನೂ ಸತ್ತು ಪ್ರತೀಕಾರ ತೋರುವ ಪರತಿ ಮಂಗನೆ ಕುರಿತು ತುಳು ಜನಪದ ಪಾಡ್ದನಗಳು ರಚಿತವಾಗಿವೆ.
ಅಣ್ಣನೂ ಕೂಡ ತಂಗಿಯನ್ನು ಕಾಮಿಸಬಹುದು ಎಂಬ ಎಚ್ಚರಿಕೆ ನೀಡುವ ಅಣ್ಣ ತಂಗಿ ಕುಚು ಕುಚು, ಬಾಲೆ ಮೀನು ಮುಗುಡು ಮೀನು, ಹರಿವೆ ಬಸಳೆಗಳ ಕಥೆ ಕನ್ನಡ ತುಳು ಜನಪದ ಹಾಡುಗಳ ರೂಪದಲ್ಲಿ ಪ್ರಚಲಿತವಿವೆ. ಬಸ್ತರ್ ಬುಡಕಟ್ಟು ಜನಾಂಗದ ಘೋಟುಲ್ ಮಾದರಿಯ ವಿವಾಹ ಪೂರ್ವ ಮುಕ್ತ ಲೈಂಗಿಕತೆ ಪ್ರಸ್ತುತ ಭಾರತೀಯ ಶಿಷ್ಟ ಸಂಸ್ಕೃತಿಗೆ ಒಲ್ಲದ, ನಿಷಿದ್ಧವಾದ ವಿಚಾರವಾಗಿದೆ. ಆದರೆ ಇವರಲ್ಲಿನ ಲೈಂಗಿಕ ಶಿಕ್ಷಣದ  ಮಾದರಿಯನ್ನು ಸ್ವೀಕರಿಸಬಹುದಾಗಿದೆ.
ಇಂದು ಹದಿ ಹರೆಯದವರಿಗೆ ದೇಹದ ಅಂಗಗಳ ರಚನೆ, ವಯಸ್ಸಿಗನುಗುಣವಾಗಿ ಉಂಟಾಗುವ ಬದಲಾವಣೆ, ಭಾವನೆಗಳ ಏರು ಪೇರು, ಸ್ವಚ್ಛತೆಯ ಕುರಿತು ತಿಳಿವಳಿಕೆ ಮೂಡಬೇಕಿದೆ. ಲೈಂಗಿಕ ವಿಚಾರಗಳ ಕುರಿತು ತಮ್ಮ ಆಸಕ್ತಿ ಕುತೂಹಲಗಳನ್ನು ತಣಿಸುವ, ಸಂಶಯಗಳನ್ನು ಹಿರಿಯರಲ್ಲಿ ಕೇಳಿ ಪರಿಹರಿಸಿಕೊಳ್ಳುವ, ಮನವು ವಿಕೃತವಾಗದಂತೆ ತಡೆಯುವ, ಪರಿಪಕ್ವಗೊಳಿಸುವ ಮಾದರಿಯ ಸಹಜ ಶಿಕ್ಷಣದ ಅಗತ್ಯವಂತೂ ಖಂಡಿತಾ ಇದೆ.
-ಡಾ.ಲಕ್ಷ್ಮೀ ಜಿ. ಪ್ರಸಾದ, ಉಪನ್ಯಾಸಕರು

Sunday, 20 July 2014

ಸಾರಮಾನ್ಯ ಬೂತೊಳು 1-150 © ಡಾ.ಲಕ್ಷ್ಮೀ ಜಿ ಪ್ರಸಾದ


                                                            copy rights reserved
 ನನ್ನ ಬಹು ದಿನಗಳ ಪರಿಶ್ರಮ್ಮಕ್ಕೆ ಒಂದು ಪ್ರತಿಫಲ ಸಿಕ್ಕಿದೆ ..

ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಭೂತಾರಾದನಾ ಅಧ್ಯಯನ ಮಾಡುತ್ತಿದ್ದ ನನ್ನಲ್ಲಿ ತುಳುನಾಡಿನ ದೈವಗಳು ಒಟ್ಟು ಎಷ್ಟು ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ ,ಸಾರಮಾನ್ಯ ಭೂತೊಳು ಎಂಬ ವಾಡಿಕೆಯಂತೆ ನಿಜಕ್ಕೂ ಸಾವಿರದೊಂದು ದೈವಗಳು ಇವೆಯಾ ?ಸಾವಿರದೊಂದು ಹೆಸರುಗಳು ತಿಳಿದವರು ಇದ್ದಾರೆಯೇ ?ಯಾವುದಾದರೂ ಪುಸ್ತಕದಲ್ಲಿ ಈ ಲಿಸ್ಟ್ ಸಿಗುವುದೇ ಎಂದು ಅನೇಕರು ಕುತೂಹಲ ಅಭಿಮಾನದಿಂದ ಕೇಳುವಾಗ ನನಗೆ ಸರಿಯಾದ ಉತ್ತರ ಕೊಡಲು ಆಗದೆ ಪರಿತಪಿಸುತ್ತಿದ್ದೆ .

ಆದ್ದರಿಂದಲೇ ನಾನು ತುಳುನಾಡಿನ ಎಲ್ಲ ದೈವಗಳ ಹೆಸರು ಮತ್ತು ಲಭ್ಯವಿರುವ ಮಾಹಿತಿ ಸಂಗ್ರಹಿಸಲು ಸುರು ಮಾಡಿದೆ .ಸಾವಿರದೊಂದು ದೈವಗಳ ಹೆಸರು ಸಂಗ್ರಹ ಅಸಾಧ್ಯ ಎಂದೇ ನಾನು ಭಾವಿಸಿದ್ದೆ .ಆದರೆ ಪ್ರಸ್ತುತ ನನಗೆ ಸಾವಿರಕ್ಕೂ ಹೆಚ್ಚು ಹೆಸರುಗಳು ಸಿಕ್ಕಿವೆ ,!
ಇದನ್ನು ಅಕ್ಷರಕ್ಕೆ ಅನುಕ್ರಮವಾಗಿ ಜೋಡಿಸುತ್ತಾ ಇದ್ದೇನೆ (ಸಂಗ್ರಹದಷ್ಟೇ ಕಷ್ಟದ ಕೆಲಸ ಇದು ಕೂಡಾ !)450 ದೈವಗಳ ಹೆಸರನ್ನು ಅನುಕ್ರಮವಾಗಿ ಜೋಡಿಸಿ ಬ್ಲಾಗ್ ನಲ್ಲಿ ಹಾಕಿದ್ದೇನೆ(ಉಳಿದವನ್ನು ಒಂದೆರಡು ವಾರದೊಳಗೆ ಹಾಕುತ್ತೇನೆ ) ತುಳು ಅಭಿಮಾನಿಗಳು ನೋಡಬೇಕಾಗಿ ಕೋರುವೆ ,ಈ ನಿಟ್ಟಿನಲ್ಲಿ ಮಾಹಿತಿ ನೀಡಿದವರಲ್ಲಿ ಅನೇಕರು ನನ್ನ ಫೇಸ್ ಬುಕ್ ಸ್ನೇಹಿತರೂ ಇದ್ದಾರೆ ,ಎಲ್ಲರಿಗೂ ಕೃತಜ್ಞತೆಗಳು


1 ಅಕ್ಕಚ್ಚು
2 ಅಕ್ಕಮ್ಮ ದೈಯಾರು 
3 ಅಕ್ಕ ಬೋಳಾರಿಗೆ
4 ಅಕ್ಕೆರಸು
5 ಅಕ್ಕೆರಸು ಪೂಂಜೆದಿ
6 ಅಕ್ಕೆರ್ಲು 
7 ಅಗ್ನಿ ಚಾಮುಂಡಿ ಗುಳಿಗ
8 ಅಚ್ಚು ಬಂಗೇತಿ
9ಅಜ್ಜ ಬೊಲಯ
10 ಅಜ್ಜಿ ಭೂತ 
11 ಅಜ್ಜೆರ್ 
12 ಅಜ್ಜೆರ್ ಭಟ್ರು
13ಅಟ್ಟೋಡಾಯೆ
14 ಅಡ್ಕತ್ತಾಯ
15 ಅಡ್ಯಲಾಯೆ
16 ಅಡ್ಯಂತಾಯ
17 ಅಡ್ಕದ ಭಗವತಿ
18 ಅಡಿಮಣಿತ್ತಾಯ
19 ಅಡಿಮರಾಯ
20  ಅಡಿಮರಾಂಡಿ
21 ಅಡ್ಡೋಲ್ತಾಯೆ
22 ಅಣ್ಣಪ್ಪ
23 ಅತ್ತಾವರದೆಯ್ಯೊಂಗುಳ (ಅಣ್ಣ )
24 ಅನ್ನರ ಕಲ್ಲುಡೆ
25 ಅಬ್ಬಗ 
26 ಅಬ್ಬೆರ್ಲು
27  ಅಬ್ಬೆ ಜಲಾಯ
28  ಅರಬ್  ಭೂತ
29 ಅರಸಂಕುಳು 
30  ಅರಸಂಕಲ
31 ಅರಸು ಭೂತ
32 ಅರಸು ಮಂಜಿಷ್ಣಾರ್ 
33  ಅಲ್ನತ್ತಾಯೆ
34 ಅಂಕೆ
35 ಅಂಗಾರೆ ಕಲ್ಕುಡ
36 ಅಂಗಾರ ಬಾಕುಡ
37 ಅಂಗಣತ್ತಾಯೆ
38 ಅಂಬೆರ್ಲು
39 ಅಂಮಣ ಬನ್ನಾಯ
40 ಆಚಾರಿ ಭೂತ
41ಆನೆ ಕಟ್ನಾಯೆ
42  ಆಲಿ
43 ಆಟಿ ಕಳಂಜೆ 
44 ಇಷ್ಟ ಜಾವದೆ
45 ಈರ ಭದ್ರೆ
46 ಈಸರ ಕುಮಾರೆ 
47 ಉಚ್ಚೆ ಹಂದಿ
48 ಉಡ್ದೋತ್ತಾಯೆ
49 ಉದ್ರಾಂಡಿ  
50 ಉದ್ದ ಕನಡ
 51 ಉಮ್ಮಯೆ
52 ಉಮ್ಮಳಾಯ
53ಉಮ್ಮಳ್ತಿ
54  ಉರವೆ
55 ಉರಿ ಮರ್ಲ
56 ಉರಿ ಮರ್ತಿ 
57 ಉರಿಮಾರಿ
58 ಉರಿಯಡಿತ್ತಾಯ 
59  ಉಳ್ಳಾಕುಲು
60 ಉಳ್ಳಾಯ
61 ಉಳ್ಳಾಲ್ತಿ
62 ಉಳಿಯತ್ತಾಯ
63 ಎಡ್ಮೇರು ಕಟ್ಟಿಂಗೇರಿ
64 ಎರು 
65 ಎರು ಕನಡೆ
66 ಎರು ಕೋಪಾಳೆ
67ಎರು ಬಂಟ
68 ಎರು ಶೆಟ್ಟಿ
69  ಎರಿಯಜ್ಜ
70 ಎಲ್ಯ ಉಳ್ಳಾಕುಳು
71 ಎಲ್ಯಕ್ಕೇರ್
72 ಎಲ್ಯನ್ನೇರ್
73 ಎಳೆಯ ಭಗವತಿ
74 ಐತ ಮಾಮೆ
75 ಐವೆರ್ ಬಂಟರ್
76 ಒಕ್ಕು ಬಲ್ಲಾಳ
 77 ಒಡಿಲುತ್ತಾಯೆ
78 ಒಲಿ ಚಾಮುಂಡಿ
79   ಒಲಿ ಪ್ರಾಂಡಿ
80 ಒರು ಬಾಣಿಯೆತ್ತಿ
81 ಒರ್ಮುಗೊತ್ತಾಯೆ
82 ಒರಿ ಉಲ್ಲಾಯೆ
83 ಒರ್ಮಲ್ತಾಯೆ
84 ಒರ್ಮುಲ್ಲಾಯೆ
85 ಒಲಿ ಮರ್ಲೆ
86 ಒಡ್ಡಮರಾಯ 
 87 ಒಂಜರೆ ಕಜ್ಜದಾಯೆ
 88 ಓಟೆಜರಾಯ
89 ಓಡಿಲ್ತಾಯ
90 ಓಪೆತ್ತಿ ಮದಿಮಾಲ್
91 ಕಚ್ಚೂರ ಮಾಲ್ಡಿ
92   ಕಚ್ಚೆ ಭಟ್ಟ 

93 ಕಟದ
94ಕಟ್ಟಳ್ತಾಯೆ
95 ಕಡವಿನ ಕುಂಞ
96 ಕಡರುಕಳಿ 
97  ಕಡಂತಾಯ
98 ಕಡಂಬಳಿತ್ತಾಯ
99 ಕಡೆಂಜಿ ಬಂಟ
100  ಕತಂತ್ರಿ
101ಕನಪಡಿತ್ತಾಯ
102 ಕನ್ನಡ ಭೂತ
103 ಕನ್ನಡ ಬೀರ 
104  ಕನ್ನಡಯಾನೆಪುರುಷ ಭೂತ
105 ಕನ್ನಡಿಗ
106 ಕನಲ್ಲಾಯೆ
107 ಕನ್ಯಾಕುಮಾರಿ
103 ಕರ್ನಾಲ ದೈವ
104 ಕತ್ತಲೆ ಬೊಮ್ಮಯ 
105 ಕರ್ಮಲೆ ಜುಮಾದಿ
106 ಕಬಿಲ
107 ಕಂಟಿರಾಯೆ
 108 ಕಂಡದಾಯ
109 ಕರಿ ಭೂತ 
110  ಕರಿ ಚಾಮುಂಡಿ
111 ಕರಿಮಾರ ಕೊಮಾಳಿ
112 ಕರಿಯ ನಾಯಕ
113 ಕರಿಯ ಮಲ್ಲ
114 ಕರಿಯ ಮಲ್ಲಿ
 115 ಕರಿಯ ಮಲೆಯೆ
 116 ಕರುಂಗೋಲು ದೈವ
117 ಕಳಲ
118 ಕಳರ್ಕಾಯಿ  
119 ಕಲ್ಲೂರತ್ತಾಯೆ
120 ಕಲ್ಲೇರಿತ್ತಾಯ
121 ಕಲ್ಲೆಂಚಿನಾಯೆ
122 ಕಳ್ಳ (ಕಳುವೆ) ಭೂತ
123 ಕಂಚಿನ ದೇವಿ
124 ಕಂಡ ಕರ್ಣಿ
125 ಕಂಬೆರ್ಲು
126 ಕಂಬಳತ್ತಾಯ
127 ಕಂಬಳದ ಬಂಟ
128  ಕಲ್ಕುಡ
129 ಕಲ್ಲುರ್ಟಿ
 130 ಜೋಡು ಕಲ್ಲುರ್ಟಿ
 131 ಹಾದಿ ಕಲ್ಲುರ್ಟಿ
 132 ಒರ್ತೆ ಕಲ್ಲುರ್ಟಿ
 134 ಪಾಷಾಣ ಮೂರ್ತಿ
 135 ರಾಜನ್ ಕಲ್ಕುಡ ...
136 ಉರಿ ಮರ್ತಿ
 137 ಅಂಗಾರೆ ಕಲ್ಕುಡ
 138 ಸತ್ಯ ಕುಮಾರ
139 ಸತ್ಯ ದೇವತೆ
 140 ಇಷ್ಟ ದೇವತೆ
141 ಪ್ರಸನ್ನ ಮೂರ್ತಿ 
142 ಉಗ್ರ ಮೂರ್ತಿ
143 ಒರ್ತೆ 
 145 ಕಾರ್ಕಳತ್ತಾಯ
146ಕಾಚು ಕುಜುಂಬ
147 ಕಾಜಿ ಮದಿಮ್ಮಾಲ್ ಕುಲೆ 
148 ಕಾಡೆದಿ
149 ಕಾನದ
150 ಕಾಯರಡಿ ಬಂಟೆ

ಸಾವಿರದೊಂದು ದೈವಗಳು 151-300 © Dr.LAKSHMI G PRASAD

                                    copy rights reserved

151 ಕಾನಲ್ತಾಯ
152 ಕಾನತ್ತಿಲ 
153 ಕಾರಿ 
154 ಕಾರಿಂಜೆತ್ತಾಯ
155 ಕಾಲ ಭೈರವ
156 ಕಾಲ ಭೈರವಿ
157 ಕಾಳಮ್ಮ
158 ಕಾಳ ರಾಹು
159 ಕಾಳಸ್ತ್ರಿ
160 ಕಾಳಿ
161 ಕಾಳೇಶ್ವರಿ
162  ಕಾಂತಾ ಬಾರೆ 
163  ಕಾಂತು ನೆಕ್ರಿ
164 ಕಿನ್ನಿದಾರು 
165 ಕಿನ್ನಿಮಾಣಿ
166  ಕಿನ್ನಿಲು
167 ಕಿರಾತ ನಂದಿ
 168 ಕಿನ್ನಿ ಮಾಣಿ
169  ಕಿರಿಯಾಯೆ
170  ಕುಕ್ಕೆತ್ತಿ 
171 ಕುಕ್ಕಿನಂತಾಯ
172 ಕುಕ್ಕುಲತ್ತಾಯೆ
173 ಕುರ್ಕಲ್ಲಾಯೆ
174 ಕುಟ್ಟಿ ಚಾತು 
175 ಕುಡಂದರೆ
176 ಕುಡುಮ ದೈವ
177 ಕುಡುಪಾಲ್ 
178 ಕುದುರೆ ಮುಖ ದೈವ
179 ಕುರವ
180 ಕುರಿಯತ್ತಾಯೆ
181 ಕುರಿಯಾಡಿತ್ತಾಯ
182 ಕುರುವಾಯಿ 
183 ಕುಮಾರ
184 ಕುಮಾರ ಸ್ವಾಮಿ
185 ಕುರೆ ಪೆರ್ಗಡೆ 
186 ಕುಲೆ ಭೂತ
187 ಕುಲೆ ಮಾಣಿಗ
188 ಕುಲೆ ಬಂಟೆತ್ತಿ 
189  ಕುಂಞÂ ಭೂತ
190  ಕುಂಞಲ್ವ ಬಂಟ
191 ಕುಂಜಣಿಗೋ
 192 ಕುಂಜೂರಾಯ
193 ಕುಂಟಲ್ದಾಯ
194 ಕೂಜಿಲು 
195 ಕುಂಟುಕಾನ ಕೊರವ 
196 ಕುಂಡ
197 ಕುಂಡಾಯೆ
198 ಕುಂಡೋದರ
199 ಕುಂದಯ

200 ಕೆರೆ ಚಾಮುಂಡಿ
201 ಕೆಂಚರಾಯ
202 ಕೆಂಚಿ ಕೆಲುತ್ತಾಯೆ
203 ಕೆಂಜಲ್ತಾಯೆ
204 ಕೇತುರ್ಲಾಯೆ
205  ಕೇಚರಾವುತ
206 ಕ್ಷೇತ್ರ ಪಾಲ 
207 ಕೊಟ್ಯದಾಯೆ
 208 ಕೊಡನ್ಗೆತ್ತಾಯೆ
 209 ಕೊರಗ 
210  ಕೊರತಿ 
211ಕೊರಪೊಳು
212ಕೊಲ್ಯತ್ತಾಯ
213 ಕೊಲ್ಲುರಮ್ಮ
 214 ಕೋಡಿದಜ್ಜೆ
215 ಕೋಡಂಬ ದೈವ 
216 ಕೊಂಡೆಲ್ತಾಯೆ
217  ಕೋಟಿ -ಚೆನ್ನಯ 
218  ಕೋಟಿ ದೈವ
219 ಕೋಟೆ ಜಟ್ಟಿಗ 
220 ಕೋರ್ದಬ್ಬು /ಕೋಟೆದ ಬಬ್ಬು ಸ್ವಾಮಿ
221 ಕೋಟೆತ್ತ ಕಲ್ಲಾಳ
222 ಕೋಟೆರಾಯ/ಕೋಟೆದಾರ್
223 ಕೋಮರಾಡಿ
224 ಕೋಮರಾಯ
225 ಕೋಮಾರು
226 ಕೋಟಿ -ಚೆನ್ನಯ
227 ಕೊಂಕಣಿಭೂತ  
228 ಖಡ್ಗೆಶ್ವರ
229 ಖಡ್ಗೆಶ್ವರಿ
230 ಖ/ಕಂಡಿಗೆತ್ತಾಯ
231 ಗಡಿರಾವುತೆ
232 ಗಂಗೆನಾಡಿ ಕುಮಾರ
233 ಗಂಡ ಗಣ
234 ಗಂಧರ್ವ
235  ಗಿರಾವು
236 ಗಿಳಿರಾಮ
237 ಗಿಲ್ಕಿಂದಾಯೆ
238 ಗಿಂಡೆ
239 ಗುಳಿಗ 
240 ಒಕ್ಕಣ್ಣ ಗುಳಿಗ 
241 ಕಲ್ಲಾಲ್ತಿ ಗುಳಿಗ 
242 ಕಲ್ಲಾತ್ ಗುಳಿಗ 
243 ಕತ್ತಲೆ ಕಾನದ ಗುಳಿಗ 
244 ಪಾತಾಳ ಗುಳಿಗ 
245 ಕಲ್ಲಾಲ್ತಾಯ ಗುಳಿಗ 
246 ಮಾರಣ ಗುಳಿಗ 
247 ಚೌಕಾರು ಗುಳಿಗ 
248 ಪೊಟ್ಟ ಗುಳಿಗ 
248 ಮಾರಣ ಗುಳಿಗ 
250 ಕುರುವ ಗುಳಿಗ 
251 ರಾಜ ಗುಳಿಗ 
252 ಮುಕಾಂಬಿ ಗುಳಿಗ 
253 ಸುಬ್ಬಿ ಗುಳಿಗ 
254 ರುದ್ರಾಂಡಿ ಗುಳಿಗ 
255 ಪಂಜುರ್ಲಿ ಗುಳಿಗ 
256 ರಕ್ತೇಶ್ವರಿ ಗುಳಿಗ 
 257  ಮಂತ್ರ ಗುಳಿಗ
 258 ಪಾತಾಳ ಗುಳಿಗ
 259 ಒರಿ ಮಾಣಿ ಗುಳಿಗ
 260 ಆಕಾಸಗುಳಿಗೆ
261  ಚಾಮುಂಡಿ ಗುಳಿಗ
262  ರಾಜನ್ ಗುಳಿಗ
263  ಮಾರಣ ಗುಳಿಗ
264  ಅಂತ್ರ ಗುಳಿಗ
265  ನೆತ್ತೆರ್ ಗುಳಿಗ
266  ಮುಳ್ಳು ಗುಳಿಗ
267  ಮಂತ್ರ ಗುಳಿಗ
268  ಮಂತ್ರವಾದಿ ಗುಳಿಗ
269 ಭಂ ಡಾರಿ ಗುಳಿಗ
270 ಚೌಕಾರು ಗುಳಿಗ
271  ನೆತ್ತರು ಗುಳಿಗ
272 ಕೋಚು ಗುಳಿಗ
273  ಭೂಮಿ ಗುಳಿಗ
274  ಸಂಕೊಲಿಗೆ ಗುಳಿಗ
275  ಜೋಡು ಗುಳಿಗ
276 ಗುಮ್ಟೆ ಮಲ್ಲ
277  ಗುಳಿಗನ್ನಾಯ
278  ಗುರಮ್ಮ
279  ಗುರಿಕ್ಕಾರ  
280 ಗುರು ಕಾರ್ನೂರು
281  ಗೆಜ್ಜೆ ಮಲ್ಲೆ
282  ಗೋವಿಂದ
283 ಘಂಟಾ ಕರ್ಣ
284 ಚಂಡಿ
285 ಚಾಮುಂಡಿ 
286 ಕೆರೆ ಚಾಮುಂಡಿ 
287 ಪಿಲಿ ಚಾಮುಂಡಿ 
288 ಕರಿ ಚಾಮುಂಡಿ 
289 ರಕ್ತ ಚಾಮುಂಡಿ 
290 ಪಾಪೆಲು ಚಾಮುಂಡಿ 
291 ಒಲಿ ಚಾಮುಂಡಿ 
292 ಮುಡ ಚಾಮುಂಡಿ 
293 ಅಕ್ರಮಲೆ ಚಾಮುಂಡಿ 
294 ನಾಗ ಚಾಮುಂಡಿ 
295 ನೆತ್ತೆರ್ ಚಾಮುಂಡಿ 
296 ಮಲೆಯಾಳ ಚಾಮುಂಡಿ 
297 ರುದ್ರ ಚಾಮುಂಡಿ 
298 ಪೊಲಮರದ ಚಾಮುಂಡಿ 
299 ಕೋಮಾರು ಚಾಮುಂಡಿ
300 ಪೊಯಿಚಾಮುಂಡಿ
301 ಚಿಕ್ಕ ಸದಾಯಿ