ತುಳುನಾಡಿನ ದೈವಗಳು ಕಾಲ್ಪನಿಕ ಪಾತ್ರಗಳಲ್ಲ..
ಆರು ತಲೆಮಾರುಗಳ ಹಿಂದೆ ಕಾರಣಾಂತರಗಳಿಂದ ದೈವತ್ವ ಪಡೆದು ಅಜ್ಜೆರ್ ಭಟ್ರು ಎಂಬ ಹೆಸರಿನ ದೈವವಾಗಿ ಆರಾಧಿಸಲ್ಪಡುವ ನಾರಾಯಣ ಎಡವಟ್ನಾಯರ ವಂಶಜರಾದ ಗೀತ ಮತ್ತು ಅವರ ಪತಿ ರಾಘವೇಂದ್ರ ಅಸ್ರಣ್ಣರು ತುಳುವರ ದೈವಗಳ ಕಥಾನಕಗಳು ಊಹಾಪೋಹವಲ್ಲ ಕಪೋಲ ಕಲ್ಪತವಲ್ಲ.ನಡೆದು ಹೋದ ಅಲೌಕಿಕ,ಐತಿಹಾಸಿಕ ಸಂಗತಿಗಳು ಎಂಬ ಬಗ್ಗೆ ಪ್ರತ್ಯಕ್ಷ ನಿದರ್ಶನವಾಗಿದ್ದಾರೆ
ಹೀಗೆಯೇ ಅಯ್ಯೆರ್ ಬಂಟೆರ್ ,ಕಚ್ಚೆ ಭಟ್ಟ ,ಬೀರ್ಣಾಳ್ಬ ,,ತಿಮ್ಮಣ್ಣ ನಾಯಕ ,ನೈದಾಲ ಪಾಂಡಿ ,ಮಂಡೆಕ್ಕಾರ ಕಲ್ಲುರ್ಟಿ ದೈವಗಳ ವಂಶಜರು ಈಗಲೂ ಇದ್ದಾರೆ ,ಮುಂದೆ ಸಮಯ ಸಿಕ್ಕಾಗ ಸಚಿತ್ರ ಮಾಹಿತಿ ನೀಡುವೆ ಹುಡುಕಾಡಿದರೆ ಇನ್ನಿತರ ದೈವತ್ವ ಪಡೆದು ಆರಾಧಿಸಲ್ಪಡುವ ಐತಿಹಾಸಿಕ ವ್ಯಕ್ತಿಗಳ ವಂಶಜರ ಬಗ್ಗೆಯೂ ಮಾಹಿತಿ ಸಿಗಬಹುದು
ಹೆಚ್ಚಿನ ಮಾಹಿತಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಗ್ರಂಥದಲ್ಲಿದೆ mobile9480516684






