Saturday 19 July 2014

ಸಾವಿರದೊಂದು ದೈವಗಳು (51-101)- © Dr.LAKSHMI G PRASAD

                             


 copy rights reserved

51 ಉಮ್ಮಯೆ
52 ಉಮ್ಮಳಾಯ
53ಉಮ್ಮಳ್ತಿ
54  ಉರವೆ
55 ಉರಿ ಮರ್ಲ
56 ಉರಿ ಮರ್ತಿ 
57 ಉರಿಮಾರಿ
58 ಉರಿಯಡಿತ್ತಾಯ 
59  ಉಳ್ಳಾಕುಲು
60 ಉಳ್ಳಾಯ
61 ಉಳ್ಳಾಲ್ತಿ
62 ಉಳಿಯತ್ತಾಯ
63 ಎಡ್ಮೇರು ಕಟ್ಟಿಂಗೇರಿ
64 ಎರು 
65 ಎರು ಕನಡೆ
66 ಎರು ಕೋಪಾಳೆ
67ಎರು ಬಂಟ
68 ಎರು ಶೆಟ್ಟಿ
69  ಎರಿಯಜ್ಜ
70 ಎಲ್ಯ ಉಳ್ಳಾಕುಳು
71 ಎಲ್ಯಕ್ಕೇರ್
72 ಎಲ್ಯನ್ನೇರ್
73 ಎಳೆಯ ಭಗವತಿ (ಮಾಹಿತಿ :ರಘುನಾಥ ವರ್ಕಾಡಿ )
74 ಐತ ಮಾಮೆ (ರಘುನಾಥ ವರ್ಕಾಡಿ )
75 ಐವೆರ್ ಬಂಟ್ರ (ರಘುನಾಥ ವರ್ಕಾಡಿ )
76 ಒಕ್ಕು ಬಲ್ಲಾಳ
 77 ಒಡಿಲುತ್ತಾಯೆ
78 ಒಲಿ ಚಾಮುಂಡಿ
79   ಒಲಿ ಪ್ರಾಂಡಿ
80 ಒರು ಬಾಣಿಯೆತ್ತಿ
81 ಒರ್ಮುಗೊತ್ತಾಯೆ
82 ಒರಿ ಉಲ್ಲಾಯೆ
83 ಒರ್ಮಲ್ತಾಯೆ
84 ಒರ್ಮುಲ್ಲಾಯೆ
85 ಒಲಿ ಮರ್ಲೆ
86 ಒಡ್ಡಮರಾಯ 
87 ಒಂಜರೆ ಕಜ್ಜದಾಯೆ
88 ಓಟೆಜರಾಯ
89 ಓಡಿಲ್ತಾಯ
90 ಓಪೆತ್ತಿ ಮದಿಮಾಲ್ /ವಾಪತ್ತಿ ಮದಿಮಾಲ್(ಮಾಹಿತಿ ಸಂಕೇತ ಪೂಜಾರಿ)
91 ಕಚ್ಚೂರ ಮಾಲ್ಡಿ
92   ಕಚ್ಚೆ ಭಟ್ಟ 

93 ಕಟದ
94 ಕಟ್ಟಳ್ತಾಯೆ
95 ಕಡವಿನ ಕುಂಞ
96 ಕಡರುಕಳಿ 
97  ಕಡಂತಾಯ
98 ಕಡಂಬಳಿತ್ತಾಯ
99 ಕಡೆಂಜಿ ಬಂಟ
100  ಕತಂತ್ರಿ
101 ಕನಪಡಿತ್ತಾಯ



51 ಉಮ್ಮಯೆ
52 ಉಮ್ಮಳಾಯ
53ಉಮ್ಮಳ್ತಿ
54  ಉರವೆ
55 ಉರಿ ಮರ್ಲ
56 ಉರಿ ಮರ್ತಿ 
57 ಉರಿಮಾರಿ
58 ಉರಿಯಡಿತ್ತಾಯ 
59  ಉಳ್ಳಾಕುಲು
60 ಉಳ್ಳಾಯ
61 ಉಳ್ಳಾಲ್ತಿ
62 ಉಳಿಯತ್ತಾಯ
63 ಎಡ್ಮೇರು ಕಟ್ಟಿಂಗೇರಿ
64 ಎರು 
65 ಎರು ಕನಡೆ
66 ಎರು ಕೋಪಾಳೆ
67ಎರು ಬಂಟ
68 ಎರು ಶೆಟ್ಟಿ
69  ಎರಿಯಜ್ಜ
70 ಎಲ್ಯ ಉಳ್ಳಾಕುಳು
71 ಎಲ್ಯಕ್ಕೇರ್
72 ಎಲ್ಯನ್ನೇರ್
73 ಎಳೆಯ ಭಗವತಿ
74 ಐತ ಮಾಮೆ
75 ಐವೆರ್ ಬಂಟರ್
76 ಒಕ್ಕು ಬಲ್ಲಾಳ
 77 ಒಡಿಲುತ್ತಾಯೆ
78 ಒಲಿ ಚಾಮುಂಡಿ
79   ಒಲಿ ಪ್ರಾಂಡಿ
80 ಒರು ಬಾಣಿಯೆತ್ತಿ
81 ಒರ್ಮುಗೊತ್ತಾಯೆ
82 ಒರಿ ಉಲ್ಲಾಯೆ
83 ಒರ್ಮಲ್ತಾಯೆ
84 ಒರ್ಮುಲ್ಲಾಯೆ
85 ಒಲಿ ಮರ್ಲೆ
86 ಒಡ್ಡಮರಾಯ 
87 ಒಂಜರೆ ಕಜ್ಜದಾಯೆ
88 ಓಟೆಜರಾಯ
89 ಓಡಿಲ್ತಾಯ
90 ಓಪೆತ್ತಿ ಮದಿಮಾಲ್
91 ಕಚ್ಚೂರ ಮಾಲ್ಡಿ
92   ಕಚ್ಚೆ ಭಟ್ಟ 

93 ಕಟದ
94 ಕಟ್ಟಳ್ತಾಯೆ 
95 ಕಡವಿನ ಕುಂಞ
96 ಕಡರುಕಳಿ 
97  ಕಡಂತಾಯ
98 ಕಡಂಬಳಿತ್ತಾಯ
99 ಕಡೆಂಜಿ ಬಂಟ
100  ಕತಂತ್ರಿ
101 ಕನಪಡಿತ್ತಾಯ







ಸಾವಿರದೊಂದು ಭೂತಗಳ/ದೈವಗಳ ಹೆಸರುಗಳು (1-50) © Dr.LAKSHMI G PRASAD

                   
   
copy rights reserved
1 ಅಕ್ಕಚ್ಚು
2 ಅಕ್ಕಮ್ಮ ದೈಯಾರು 
3 ಅಕ್ಕ ಬೋಳಾರಿಗೆ
4 ಅಕ್ಕೆರಸು
5 ಅಕ್ಕೆರಸು ಪೂಂಜೆದಿ
6 ಅಕ್ಕೆರ್ಲು 
7 ಅಗ್ನಿ ಚಾಮುಂಡಿ ಗುಳಿಗ (ಮುಕಾಂಬಿ ಗುಳಿಗ )
8 ಅಚ್ಚು ಬಂಗೇತಿ
9ಅಜ್ಜ ಬೊಲಯ
10 ಅಜ್ಜಿ ಭೂತ 
11 ಅಜ್ಜೆರ್ 
12 ಅಜ್ಜೆರ್ ಭಟ್ರು
13ಅಟ್ಟೋಡಾಯೆ
14 ಅಡ್ಕತ್ತಾಯ
15 ಅಡ್ಯಲಾಯೆ
16 ಅಡ್ಯಂತಾಯ
17 ಅಡ್ಕದ ಭಗವತಿ
18 ಅಡಿಮಣಿತ್ತಾಯ
19 ಅಡಿಮರಾಯ
20  ಅಡಿಮರಾಂಡಿ
21 ಅಡ್ಡೋಲ್ತಾಯೆ
22 ಅಣ್ಣಪ್ಪ
23 ಅತ್ತಾವರ ದೆಯ್ಯೊಂಗುಳು  (ಅಣ್ಣ )
24 ಅನ್ನರ ಕಲ್ಲುಡೆ
25 ಅಬ್ಬಗ 
26 ಅಬ್ಬೆರ್ಲು
27  ಅಬ್ಬೆ ಜಲಾಯ
28  ಅರಬ್  ಭೂತ
29 ಅರಸಂಕುಳು 
30  ಅರಸಂಕಲ
31 ಅರಸು ಭೂತ
32 ಅರಸು ಮಂಜಿಷ್ಣಾರ್ 
33  ಅಲ್ನತ್ತಾಯೆ/ಅಲ್ಲತ್ತಾಯೆ
34 ಅಂಕೆ
35 ಅಂಗಾರೆ ಕಲ್ಕುಡ
36 ಅಂಗಾರ ಬಾಕುಡ
37 ಅಂಗಣತ್ತಾಯೆ
38 ಅಂಬೆರ್ಲು
39 ಅಂಮಣ ಬನ್ನಾಯ
40 ಆಚಾರಿ ಭೂತ
41ಆನೆ ಕಟ್ನಾಯೆ
42  ಆಲಿ
43 ಆಟಿ ಕಳಂಜೆ 
44 ಇಷ್ಟ ಜಾವದೆ

45 ಈರ ಭದ್ರೆ
46 ಈಸರ ಕುಮಾರೆ 
47 ಉಚ್ಚೆ ಹಂದಿ
48 ಉಡ್ದೋತ್ತಾಯೆ
49 ಉದ್ರಾಂಡಿ  
50 ಉದ್ದ ಕನಡ

Friday 11 July 2014

ಫೇಸ್ ಬುಕ್ ನಲ್ಲಿ ಹೆಣ್ಣು ಮಕ್ಕಳ ಫೇಸ್ ಗಳು (11 ಜುಲೈ 2014 ರಂದು ಉದಯವಾಣಿ ಮಹಿಳಾ ಸಂಪದದಲ್ಲಿ ಪ್ರಕಟಿತ ಲೇಖನ )-ಡಾ.ಲಕ್ಷ್ಮೀ ಜಿ ಪ್ರಸಾದ

                                


ಅತ್ಯಾಚಾರಗಳಲ್ಲಿ ಆಕರ್ಷಣೆಯಿಂದ ನಡೆಯುವ ಅತ್ಯಾಚಾರ, ಮಾನಸಿಕ ಅಸ್ವಸ್ಥರಿಂದ ನಡೆಯುವ ಅತ್ಯಾಚಾರ, ಕುಡುಕರಿಂದ ನಡೆಯುವ ಅತ್ಯಾಚಾರ, ಪ್ರತೀಕಾರಕ್ಕಾಗಿ ನಡೆಯುವ ಅತ್ಯಾಚಾರ ಮೊದಲಾದ ವಿಧಗಳು ಇವೆ. ಪ್ರಸ್ಥುತ ವರದಿಯಲ್ಲಿ ಇರುವುದು ಮಾನಸಿಕ ದೌರ್ಬಲ್ಯಲ್ಯದಿಂದ ಆಗಿರುವುದು. ನಮ್ಮಲ್ಲಿ ಅತಿಹೆಚ್ಚು ಆಕರ್ಷಣೆಯಿಂದ ನಡೆಯುವ ಅತ್ಯಾಚಾರ ನಡೆಯುತ್ತವೆ. ಹೆಣ್ಣುಮಕ್ಕಳ ನಡೆ ಸರಿ ಇದ್ದರೆ ಅದನ್ನು ಸುಲಭವಾಗಿ ನಿಯಂತ್ರಿಸಬಹುದು. ದೇಶದ ಹೆಣ್ಣುಮಕ್ಕಳು ಎಷ್ಟು ಹಾದಿ ತಪ್ಪಿದರೂ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಅತ್ಯಾಚಾರ ನಡೆಯುತ್ತಿದೆ ಎಂದರೆ ನಮ್ಮ ಗಂಡುಮಕ್ಕಳು ನಿಜಕ್ಕೂ ಅಭಿನಂದಾರ್ಹರು.

ಕೋಲಾರದಲ್ಲಿ ಬೆನ್ನು ಬೆನ್ನಿಗೆ ಶಾಲಾ ವಿದ್ಯಾರ್ಥಿನಿಯರ ಮೇಲಾದ ಅತ್ಯಾಚಾರವನ್ನು ಖಂಡಿಸಿ ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಗೆ ಬಂದ ಒಂದು ಪ್ರತಿಕ್ರಿಯೆ ಇದು  !
“ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ ಯಾವುದು ತಿಳಿದಿದೆಯೇ ?ಇಲ್ಲವಾದಲ್ಲಿ  ಒಂದು ಕನ್ನಡಿ ತೆಗೆದು ಬಗ್ಗಿ ನೋಡಿ “ ಎಂಬ ಒಂದು  ಹಾಸ್ಯವನ್ನು  ಫೇಸ್ ಬುಕ್ ನಲ್ಲಿ ಓದಿ ನಗಾಡಿದ್ದೆ ಕೆಲ ದಿನಗಳ ಹಿಂದೆ .
ಮೇಲಿನ ಪ್ರತಿಕ್ರಿಯೆ ಓದಿದಾಗ " ಅದು ತಮಾಷೆಯಲ್ಲ ವಾಸ್ತವ ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ ಮನುಷ್ಯನೇ ಖಂಡಿತಾ" ಎನ್ನಿಸಿತು .
ಅತ್ಯಾಚಾರದಂಥಹ ಅಕ್ಷಮ್ಯ. ಹೇಯ ,ಕ್ರೂರ ಕಾರ್ಯಕ್ಕೂ ಕೂಡ ಹೆಣ್ಣನ್ನೇ ಕಾರಣ ಮಾಡುವ ಹೃದಯ ದಾರಿದ್ರ್ಯತೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.!
ಹೆಂಗಸರ ಬಗ್ಗೆ ಯಾಕೆ ಅವಜ್ಞೆ ಈ ಸಮಾಜಕ್ಕೆ? ..ನನಗೆ ಅರ್ಥವಾಗುತ್ತಿಲ್ಲ .

 “ಹೆಂಗಸರಿಗೆ ಮಾತನಾಡಲು ಬರುವುದಿಲ್ಲ “ ಎನ್ನುತ್ತಾರೆ ವಿಶ್ವವಿದ್ಯಾಲಯವೊಂದರ ನಿವೃತ್ತ ಕನ್ನಡ ಪ್ರೊಫೆಸ್ಸರ್ ಒಬ್ಬರು
“ಬ್ಯಾಟರಿಗೆ ಒಂದು ಪೊಸಿಟಿವ್ ಮತ್ತು ಒಂದು ನೆಗೆಟಿವ್ ತುದಿಗಳು ಇರುತ್ತವೆ ,ಹೆಂಗಸರಿಗೆ ನೆಗೆಟಿವ್ ತುದಿ ಮಾತ್ರ ಇರುತ್ತದೆ “ಎಂದು ತಮ್ಮ ಸಹೋದ್ಯೋಗಿಗಳು ಮಾತನಾಡಿಕೊಳ್ಳುವ ಬಗ್ಗೆ  ವೈದ್ಯ ಉಪನ್ಯಾಸಕರೊಬ್ಬರು ಹೇಳುತ್ತಾರೆ .
ಇತ್ತೀಚೆಗೆ ಭೇಟಿಯಾದ ಖ್ಯಾತ ವೈದ್ಯ ಚಿಂತಕರೊಬ್ಬರು ಸ್ತ್ರೀಯರ ಮೇಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತಾಡುತ್ತಾ ಅದಕ್ಕೆ ಸ್ತ್ರೀಯರ ವೇಷ ಭೂಷಣ ಕೂಡ ಕಾರಣ ಎಂದು ಹೇಳಿದರು !

ಕೋಲಾರದಲ್ಲಿ ಅತ್ಯಾಚಾರಕ್ಕೊಳಗಾದ ಶಾಲಾ ಬಾಲಕಿಯರು ಅಶ್ಲೀಲ ಬಟ್ಟೆ ತೊಟ್ಟಿದ್ದರೆ? ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಆಗಲಿ ,ಸೌಮ್ಯ ಭಟ್ ಆಗಲಿ ಯಾರು ಕೂಡ ಕಾಮಪ್ರಚೋದಕವಾದ ವೇಷ ಭೂಷಣ ಹೊಂದಿರಲಿಲ್ಲ.ಮೂರು ತಿಂಗಳ ಹಸುಳೆ ಯಿಂದ ಹಿಡಿದು ಎಂಬತ್ತು ವರ್ಷದ ಅಜ್ಜಿಯನ್ನು ಬಿಡದೆ ಅತ್ಯಾಚಾರ ಮಾಡಿದ್ದಾರೆ
ಅತ್ಯಾಚಾರಕ್ಕೆ ಒಳಗಾದ ಸ್ತ್ರೀಯರು ಯಾರೂ ತುಂಡು ಬಟ್ಟೆ ಧರಿಸಿರಲಿಲ್ಲ ಎನ್ನುವುದು ವಾಸ್ತವ ..ಇಷ್ಟಿದ್ದೂ ಸುಶಿಕ್ಷಿತರಾದ ಮಂದಿ ಕೂಡ ಅತ್ಯಾಚಾರಕ್ಕೆ ಹೆಣ್ಣನ್ನೇ ಬೊಟ್ಟು ಮಾಡುತ್ತಾರೆ .

ಇತ್ತೀಚೆಗೆ ಫೇಸ್ ಬುಕ್  ಗುಂಪು ಒಂದರಲ್ಲಿ ಯಾರೋ ಒಬ್ಬರು ಅತ್ಯಾಚಾರಕ್ಕೆ ಯಾರು ಕಾರಣ ?ಹೆಣ್ಣು ಅಥವಾ ಗಂಡು ಎಂದು ಪ್ರಶ್ನೆ ಕೇಳಿದ್ದರು .ಅದಕ್ಕೆ ಅನೇಕ ಮಂದಿ ಹೆಣ್ಣೇ ಕಾರಣ ಎಂದಿದ್ದರೆ ,ಕೆಲ ಮಂದಿ ಇಬ್ಬರೂ ಕಾರಣ ಎಂದಿದ್ದರು .ಗಂಡಿನ ವಿಕೃತ ಮನಸು ಕಾರಣ ಎಂದು ಒಬ್ಬರೂ ಹೇಳಿರಲಿಲ್ಲ.ಬಹುಶ ಇದನ್ನೇ ಪುರುಷ ಪ್ರಧಾನ ಸಮಾಜ ಎನ್ನುವುದು ಇರಬೇಕು .ಗಂಡಿನ ಅಕ್ಷಮ್ಯ ಅಪರಾಧಗಳಿಗೆ ಕೂಡಾ ಹೆಣ್ಣನ್ನು ಹೊಣೆ ಮಾಡುವುದು ಇದರ ಲಕ್ಷಣ ಇರಬೇಕು.

ಇದೇ ರೀತಿ ಒಂದೆರಡು ತಿಂಗಳ ಹಿಂದೆ  ಇನ್ನೊಂದು ಫೇಸ್ ಬುಕ್ ಗುಂಪು ಒಂದರಲ್ಲಿ ಹಾಕಿದ್ದ ಒಂದು ಪೋಸ್ಟ್  ಗಮನ ಸೆಳೆಯಿತು .ಅದು ಕಾಸರಗೋಡು ಪರಿಸರದಲ್ಲಿ ಹುಡುಗಿಯರು ಲವ್ / ಮತಾಂತರದ ಜಾಲಕ್ಕೆ ಬೀಳುವ ಬಗ್ಗೆ ಬಂದ ವಾರ್ತಾ ಪತ್ರಿಕೆಯೊಂದರ ಭಾಗ ಆಗಿತ್ತು .ಇತ್ತೀಚಿಗೆ ಲವ್/ಮತಾಂತರದ ಜಾಲಕ್ಕೆ ಸಿಲುಕಿದ ಯುವತಿಯನ್ನು ಹುಡುಕಿ ಹಿಂದೆ ಕರೆದು ಕೊಂಡು ಬಂದಿದ್ದರು .ಆ ಯುವತಿ ಯಾವ ರೀತಿ ಜಾಲ ಬೀಸುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದು ಅದರಲ್ಲಿ ಇತ್ತು .ಆರಂಭದಲ್ಲಿ ಯುವತಿಯರ ಸ್ನೇಹಿತರ ಮೂಲಕ ಪರಿಚಯ ಮಾಡಿಕೊಂಡು ಮಾದಕ ಪದಾರ್ಥಗಳನ್ನು ಸೇರಿಸಿದ ಸಿಹಿ ತಿಂಡಿ ಚಾಕೋಲೆಟ್ ಗಳನ್ನು ನೀಡುತ್ತಾರೆ .ಆ ಚಾಕೋಲೆಟ್ ಗೆ ಮಾದಕ ವಸ್ತು ಸೇರಿಸಿರುವುದರಿಂದ ಇವರು ಅದಕ್ಕೆ ಅಡಿಕ್ಟ್ ಆಗುತ್ತಾರೆ .ಅವರು ಕೊಡುವ  ಮಾದಕ ವಸ್ತುವಿಗಾಗಿ ಸ್ನೇಹ ಮುಂದುವರಿಯುತ್ತದೆ .ಮತ್ತೆ ಐ ಪ್ಯಾಡ್ ಗಳನ್ನು ಕೊಟ್ಟು ಮನ ಪರಿವರ್ತನೆ ಮಾಡುತ್ತಾರೆ ಇತ್ಯಾದಿ ಮಾಹಿತಿ ಅದರಲ್ಲಿತ್ತು .

ಇದಕ್ಕೆ ಕೆಲವರು ನೀಡಿದ ಪ್ರತಿಕ್ರಿಯೆ ದಿಗ್ಭ್ರಮೆ ಗೊಳಿಸಿತ್ತು !ಒಬ್ಬರು ಹೀಗೆ ಆಗುವುದಕ್ಕೆ ಹೆಣ್ಣು ಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯ ನೀಡಿದ್ದು ಕಾರಣ ,ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರ ಬರುವ ಅವಕಾಶ ಇರಲಿಲ್ಲ .ಈಗ ಇವರಿಗೆ ಅಂತ ಸ್ವಾತಂತ್ರ್ಯ ನೀಡಿದ್ದು ತಪ್ಪು ಎಂದು ಹೇಳಿದರೆ ಇನ್ನೊಬ್ಬರು ಮದುವೆ ವಯಸ್ಸನ್ನು 14 ವರ್ಷಕ್ಕೆ ಇಳಿಸ ಬೇಕು ಎಂದು ಅಭಿಪ್ರಾಯಿಸಿದರು .
ಇನ್ನೊಬ್ಬರು ನನ್ನ ಮೂರು ವರ್ಷದ ಮೊಮ್ಮಗ ಕೂಡಾ ಬೇರೆಯವರು ಕೊಟ್ಟ ತಿಂಡಿ ತೀರ್ಥ ತಿನ್ನುವುದಿಲ್ಲ .ಈ ಹುಡುಗಿಯರಿಗೆ ಅಷ್ಟು ಬುದ್ಧಿ ಇಲ್ಲವೇ ಎಂದು ವಾದಿಸಿದರು! ಮತ್ತೊಬ್ಬರು ಹೆಣ್ಣು ಮಕ್ಕಳನ್ನು ಕೆಟ್ಟ ಭಾಷೆಯಲ್ಲಿ ಬೈದು “ಹೆಣ್ಣು ಮಕ್ಕಳ ಸೊಂಟ ಮುರಿದು ಮನೆಯಲ್ಲಿ ಕೂಡಿ ಹಾಕ ಬೇಕು” ಎಂದು ಹೇಳಿದರು !ಅವಳನ್ನು ಹಿಂದೆ ಕರೆದು ಕೊಂಡು  ಬಂದದ್ದೇಕೆ ?ಅಲ್ಲಿಯೇ ಸಾಯಲಿ ಎಂದು ಬಿಡ ಬೇಕು ಎಂದು ಇನ್ನೊಬ್ಬರು ಹೇಳಿದರು .ಅನೇಕರಿಗೆ  ಇದು ಹಾಸ್ಯದ ವ್ಯಂಗ್ಯದ ವಸ್ತು ಆಯಿತು !

ಯಾರೋ ಒಬ್ಬರು ಫೇಸ್ ಬುಕ್ ಗುಂಪಿನಲ್ಲಿ ಕುಕ್ಕರ್ ಸಿಡಿದು ಗಾಯಗೊಂಡ ಓರ್ವ  ಮಹಿಳೆಯ ಚಿತ್ರ ಹಾಕಿದ್ದರು .ಅದಕ್ಕೆ ಪ್ರತಿಕ್ರಿಯಿಸಿದ ಅನೇಕರು ಈಗಿನ ಹುಡುಗಿಯರು ಅಮ್ಮಂದಿರಿಗೆ ಅಡುಗೆಗೆ ಸಹಾಯ ಮಾಡುವುದಿಲ್ಲ ,ಶೋಕಿ ಡ್ರೆಸ್ ಹಾಕಿಕೊಂಡು ತಿರುಗಾಡುತ್ತಾರೆ  ಇತ್ಯಾದಿಯಾಗಿ  ಅಸಂಬದ್ಧ ಕಾಮೆಂಟ್  ಮಾಡಿದ್ದರು !ಯಾರೊಬ್ಬರೂ ಅದನ್ನು ಪ್ರಶ್ನಿಸಲೂ ಇಲ್ಲ,ಹುಡುಗಿಯರನ್ನು ದೂಷಿಸಲು ಕಾರಣಕ್ಕಾಗಿ ಕಾಯುತ್ತಿರುತ್ತಾಯೇ  ನಮ್ಮ ಸಮಾಜ ಮಂದಿ?! ಎಂದು ಇದನ್ನು ಓದುವಾಗ ಅನ್ನಿಸಿತು .

ಇದನ್ನೆಲ್ಲ ಓದಿದ, ಗಮನಿಸಿದ ಸಹೃದಯರೊಬ್ಬರು “ನಾವು ನಮಗೆ ಹೆಣ್ಣು ಮಗಳು ಬೇಕೇ ಬೇಕು ಎಂದು ದೇವರಿಗೆಲ್ಲ ಹರಿಕೆ ಹಾಕಿ ಹಂಬಲಿಸಿ ಮಗಳನ್ನು ಪಡೆದೆವು .ಈಗ ಅನ್ನಿಸುತ್ತದೆ .ಅದು ತಪ್ಪಾಯಿತು ಎಂದು .ಹೆಣ್ಣು ಹೆತ್ತ ತಪ್ಪಿಗೆ ನಾವು ಏನೆಲ್ಲಾ ಅನುಭವಿಸ ಬೇಕು.ಹೆಣ್ಣು ಮಕ್ಕಳನ್ನು ರಕ್ಷಣೆ ಯೇ ಒಂದು ಸವಾಲು .ಹೆಣ್ಣು ಮಕ್ಕಳಿಗೆ ಏನಾದರು ಆದರೆ ಎಲ್ಲ ಕಡೆಯಿಂದಲೂ ಮಾತು ಕೇಳಬೇಕು ”ಎಂದು ಖೇದದಿಂದ ಹೇಳಿದರು .

ಒಂದೆಡೆ ಆರು ತಿಂಗಳ ಮಗುವಿನ ಮೇಲೆ ಅತ್ಯಾಚಾರ ,ಇನ್ನೊಂದೆಡೆ ಎಲ್ ಕೆ ಜಿ ಮಗುವಿನ ಮೇಲೆ ಶಾಲಾ ವಾಹನ ಚಾಲಕನಿಂದ ಅತ್ಯಾಚಾರ .ಶಾಲೆಯಲ್ಲಿ ಶಿಕ್ಷಕರೇ  ಲೈಂಗಿಕ ಕಿರು ಕುಳ  ಕೊಟ್ಟ ವಿಚಾರಗಳು ಕೇಳಿ ಬರುತ್ತಿವೆ .
ಮುಂದೆ ಹೇಗೋ ಓದಿ ಕೆಲಸಕ್ಕೆ ಸೇರಿದರೆ ಸಹೋದ್ಯೋಗಿಗಳಿಂದ ಮೇಲಧಿಕಾರಿಗಳಿಂದ  ಕಿರು ಕುಳ ,ಲಿಂಗ ತಾರ ತಮ್ಯ !ಮನೆಯಿಂದ ಕಾಲು ಹೊರಗಿಟ್ಟರೆ ಕಾಮುಕರ ಕಾಟ .ಹೆಣ್ಣು ಮಕ್ಕಳಿಗೆ ಮನೆ ಕೂಡ ಸುರಕ್ಷಿತ ತಾಣ ಅಲ್ಲ .ಮಗಳನ್ನೇ ಅತ್ಯಾಚಾರ ಮಾಡುವ ತಂದೆ, ಚಿಕ್ಕಪ್ಪ, ಮಾವಂದಿರು,ಕೆಲಸದವರು  .ಆರು ತಿಂಗಳ ಮಗು ಎಂದು ನೋಡದೆ ಎಂಬತ್ತೈದು ವರ್ಷದ ಅಜ್ಜಿ ಎಂದು ಬಿಡದೆ ಎಲ್ಲ ವಯೋಮಾನದ ಹೆಂಗಸರನ್ನು ಅತ್ಯಾಚಾರ ಮಾಡಿ ಕೊಂದು ಬಿಸಾಡುವುದು ಅಲ್ಲಲ್ಲಿ ಕಂಡು ಬರುತ್ತಿದೆ !

ಒಂದೆಡೆ ಲೈಂಗಿಕ ದೌರ್ಜನ್ಯ ,ಲಿಂಗ ತಾರತಮ್ಯದ ಪಿಶಾಚಿಗಳು ಕಾಡಿದರೆ ಇನ್ನೊಂದೆಡೆ ಲವ್/ಮತಾಂತರದ ಜಾಲ . ಹಾಡು ಹಗಲೇ ಅಪಹರಿಸಿ ಅತ್ಯಾಚಾರ ಮಾಡಿ ಕೊಂದು ಬಿಸಾಡಿದರೂ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸದ ದುರ್ಬಲ ಕಾನೂನು ವ್ಯವಸ್ಥೆ .ದೂರು ಕೊಡಲು ಹೋದವರನ್ನೇ ಅಪರಾಧಿಗಳಂತೆ ಕಾಡುವ ವ್ಯವಸ್ಥೆ ಎಂಬ ಅವ್ಯವಸ್ಥೆ !
 ಇದೆಲ್ಲಕ್ಕೂ  ಹೆಣ್ಣು ಮಕ್ಕಳನ್ನೂ ಅವರ ಹೆತ್ತವರನ್ನೂ ಹೊಣೆ ಮಾಡುವ ಸಮಾಜ ! 

ದೆಹಲಿಯ ಹುಡುಗಿಯ ವಿಚಾರದಲ್ಲಿ “ಅಣ್ಣಾ ಅಂತ ಬೇಡಿ ಕೊಳ್ಳ ಬೇಕಿತ್ತು ,ಅವಳು ಪ್ರತಿಭಟಿಸ ಬಾರದಿತ್ತು” .”ಅವಳು ಪ್ರತಿಭಟಿಸಿದ ಕಾರಣ ಅವಳನ್ನು ಕೊಂದು ಹಾಕಿದರು” .”ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಗೆ ಹೋಗುವ ಕಾರಣವೇ ಹೀಗೆ ಆಗುವುದು .ನನ್ನ ಮಗಳನ್ನು ನಾನು ಹೊರಗೆ ಅಲೆಯಲು ಬಿಡುವುದಿಲ್ಲ .ಅಲೆಯಲು ಹೋಗಿ ರಾತ್ರಿ ಮಾಡಿ ಬಂದರೆ ಮನೆಗೆ ಸೇರಿಸುತ್ತಿರಲಿಲ್ಲ “ಇತ್ಯಾದಿ ನಾನಾ ಮಾತುಗಳು ಆಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ .

 ಹೆಣ್ಣುಮಕ್ಕಳು ಮೈ ಕೈ ಕಾಣುವ ವೇಷ ಭೂಷಣ ಧರಿಸುವುದೇ ಇದಕ್ಕೆ ಕಾರಣ .ಗಂಡಸರ ಮನಸ್ಸು ಇಂಥ ವೇಷ ಭೂಷಣಗಳಿಂದ ಉತ್ತೇಜನ ಗೊಳ್ಳುತ್ತದೆ .ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡಬೇಕು .ಇಲ್ಲದಿದ್ದರೆ ಹೀಗೇ ಆಗುವುದು .ಹೆಣ್ಣು ಮಕ್ಕಳನ್ನು ತಂದೆ ತಾಯಂದಿರು ಹದ್ದು ಬಸ್ತಿನಲ್ಲಿ ಇಡದ ಕಾರಣ ಹೀಗೆ ಆಗುವುದು ಇತ್ಯಾದಿ ಮಾತುಗಳು ಜನರಿಂದ 

ತಮ್ಮ ಮಗಳಿಗೆ ಅನ್ಯಾಯವಾಗಿದೆ ಎಂದು ಸೌಜನ್ಯಾಳ ತಂದೆ ತಾಯಿ ಹೇಳಿದರೆ ಆ ಬಗ್ಗೆ ಮಾತನಾಡುವುದೇ ಅಶ್ಲೀಲತೆ, ನಾಚಿಗೆ ಕೇಡು ಎಂದು ಮಹಿಳಾ ಸಾಹಿತಿ ಯೊಬ್ಬರು ಹೇಳಿದ ವಿಚಾರ ಎಲ್ಲರಿಗೂ ತಿಳಿದದ್ದೇ ಆಗಿದೆ.
ಫೇಸ್ ಬುಕ್ ನಂತಹ  ಸಾಮಾಜಿಕ ಅಂತರ್ಜಾಲ ತಾಣಗಳನ್ನು ಸಾಮಾನ್ಯವಾಗಿ ಸಾಕಷ್ಟು ಶಿಕ್ಷಣ ಪಡೆದವರೇ ಬಳಸುತ್ತಾರೆ.ಆದರೆ ಫೇಸ್ ಬುಕ್ ನಂತಹ  ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಕೂಡಾ  ಹೆಣ್ಣು ಮಕ್ಕಳ ಅವಹೇಳನ ಸಹಿಸಲು ಆಗುವುದಿಲ್ಲ !

ಯಾವಾಗಲೋ ನಮ್ಮ ದೇಶಕ್ಕೆ  ವಿದೇಶಿ ಮಹಿಳೆಯರು ಬಂದಿದ್ದಾಗ ಸೀರೆ ಉಟ್ಟು ತೆಗೆಸಿದ  ಫೋಟೋ ಹಾಗೂ   ಕಾಲೇಜ್ ಕ್ಯಾಂಪಸ್ ನಲ್ಲೋ ಅಥವಾ ಫಲಿತಾಂಶದ ದಿನವೋ ಎಲ್ಲೋ ಒಂದು ಕಡೆ ಒಂದಷ್ಟು ಕುಶಿಯಿಂದ ಸಂಭ್ರಮಿಸುತ್ತಿರುವ ಹುಡುಗಿಯರ ಗುಂಪಿನ ಫೋಟೋ ಅನ್ನು ಎಲ್ಲಿಂದಲೋ ನಕಲು ಮಾಡಿ ಅವರ ಅನುಮತಿ ಪಡೆಯದೇ ಹಾಕಿ ಅವರಿಗೆ(ವಿದೇಶೀಯರಿಗೆ ) ನಮ್ಮ   ಸಂಸ್ಕೃತಿ ಬೇಕು ಇವರಿಗೆ ?(ಆ ಹುಡುಗಿಯರಿಗೆ ) ಎಂದು ಪ್ರಶ್ನಾರ್ಥಕವಾಗಿ ಹಾಕಿ ಶೇರ್ ಮಾಡಿ ಹೆಣ್ಣು ಮಕ್ಕಳನ್ನು ಅವಮಾನಿಸುವುದು ಸಾಮಾನ್ಯ ವಿಚಾರ !ಇಷ್ಟಕ್ಕೂ ಹೀಗೆ ಕೇಳುವವರು ಪುರಾತನ ಭಾರತೀಯ ಸಂಸ್ಕೃತಿಯ ಅನುಸಾರ ಕಚ್ಚೆ ಹಾಕಿ ಜುಟ್ಟು ಬಿಟ್ಟು ಕಿವಿಗೆ ಮತ್ತು ಜುಟ್ಟಿಗೆ ಹೂ ಮುಡಿದ ಗಂಡಸರಲ್ಲ .ಆಧುನಿಕ ಪ್ಯಾಂಟ್ ಶರ್ಟ್ ,ಆಧುನಿಕ ಕೇಶ ಶೈಲಿಯ ವೇಷ ಭೂಷಣ ಹಾಗೂ  ಬದುಕನ್ನು ಅನುಸರಿಸುತ್ತಿರುವ ಇಂದಿನ ಯುವಕರು .

ಇನ್ನು  ಫೇಸ್ ಬುಕ್ ನಂತ ಸಾಮಾಜಿಕ ಜಾಲಗಳಲ್ಲಿ ಹೆಣ್ಣು ಮಕ್ಕಳ  ಅಕೌಂಟ್ ಅನ್ನು ಹ್ಯಾಕ್ ಮಾಡಿ ಅಲ್ಲಿಂದ ಅವರ ಫೋಟೋ ಕದ್ದು ಅದನ್ನು ಕೆಟ್ಟದಕ್ಕೆ ಬಳಸಿ ಆ ಹೆಣ್ಣು ಮಕ್ಕಳ ಬದುಕನ್ನು ಹಾಳು ಗೆಡವುವ ಅನೇಕ ದುಷ್ಟರು ಇದ್ದಾರೆ .ಇಂಥಹಾದ್ದೆ ಕಾರಣಕ್ಕೆ ಜೀವ ಕಳೆದು ಕೊಂಡ ಯುವತಿಯೊಬ್ಬಳ ಫೋಟೋ ಹಾಕಿ “ಹೆಣ್ಣು ಮಕ್ಕಳೇ ಎಚ್ಚರ .ಯಾರು ಹೆಣ್ಣು ಮಕ್ಕಳು ಫೇಸ್ ಬುಕ್ ನಂಥ ಸಾಮಾಜಿಕ ತಾಣಗಳಲ್ಲಿ  ಮುಖ ತೋರಿಸ ಬೇಡಿ !”ಎಂದು ಬರೆದು ಶೇರ್ ಮಾಡಿರುವುದು ಅಲ್ಲಲ್ಲಿ ಕಂಡು ಬರುತ್ತದೆ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಇರುವಂತೆ ತೋರಿಸಿ ಕೊಂಡು ಅದನ್ನು ಸಾವಿರಾರು ಮಂದಿ ಶೇರ್ ಮಾಡುತ್ತಾರೆ .ಆದರೆ ಒಬ್ಬನೇ ಒಬ್ಬ ವ್ಯಕ್ತಿ ಕೂಡಾ “ಹೆಣ್ಣು ಮಕ್ಕಳ ಅಕೌಂಟ್  ನಿಂದ ಕದ್ದು ಅವರ ಫೋಟೋ ತೆಗೆದು ದುರುಪಯೋಗ ಮಾಡ ಬೇಡಿ .ಹೆಣ್ಣು ಮಕ್ಕಳು ನಮ್ಮಂತೆ ಮನುಷ್ಯರು ಅವರಿಗೆ ಎಲ್ಲರಂತೆ ಬದುಕುವ ಹಕ್ಕಿದೆ .ಅವರ ಫೋಟೋಗಳನ್ನು ದುರುಪಯೋಗ ಮಾಡಬೇಡಿ ಎಂದು ಸಂದೇಶ ನೀಡಿದ್ದು ನನ್ನ ಗಮನಕ್ಕೆ ಬಂದಿಲ್ಲ .

ಹೆಂಗಸರು ಸಾಮಾಜಿಕ ಅಂತರ್ಜಾಲ ತಾಣಕ್ಕೆ ಬಂದರೆ ಸಾಕು ಹಾಯ್  ಹಲೋ  ಕಾಫಿ ಆಯ್ತಾ ? ತಿಂಡಿ ಆಯ್ತಾ ?ಅಂತ ವ್ಯರ್ಥವಾಗಿ ಮಾತನಾಡಿ ಕಾಡುವರು  ಅನೇಕರು ! ಕೆಟ್ಟ ಮೆಸೇಜ್ /ಚಿತ್ರಗಳನ್ನು ಕಳುಹಿಸಿ ಕಾಡುವ ಪ್ರೇತಗಳೂ ಇವೆ ಈ
ಎಲ್ಲ ಶೆಲ್ಯಾಣತ್ತು ಕೇಳುವಾಗ ನಿಜವಾಗಿಯೂ ಯಾರಿಗಾದರೂ ಹೆಣ್ಣು ಮಗು ಬೇಕು ಎಂದೆನಿಸಲು ಸಾಧ್ಯವೇ ?!
ಖಂಡಿತಾ ಇಲ್ಲ .ಆದರೆ ಇದರ ಪರಿಣಾಮ ಏನಾದೀತು ಎಂದು ಆಲೋಚಿಸಿದರೆ ವಿಷಾದವಾಗುತ್ತದೆ !!

 ಹೌದು! “ಹೆಣ್ಣು ಮಕ್ಕಳಿಗೆ ತಾಯಿಯ ಗರ್ಭ ಕೂಡ ಸುರಕ್ಷಿತವಲ್ಲ “
 ನಮ್ಮ ಉಪರಾಷ್ಟ್ರ ಪತಿಗಳಾಗಿದ್ದ ಕೆ ಆರ್ ನಾರಾಯಣ್ ಹೇಳಿರುವುದು ನಿಜ .ಹೆಣ್ಣು ಮಕ್ಕಳನ್ನು ತಾತ್ಸಾರದಿಂದ ನೋಡಿ ವರದಕ್ಷಿಣೆ ,ಶೋಷಣೆ ಮಾಡಿದ್ದಲ್ಲದೆ ಹೆಣ್ಣು ಮಗುವನ್ನು ತಾಯಿಯ ಗರ್ಭದಲ್ಲಿರುವಾಗಲೇ ಚಿವುಟಿ ಹಾಕಿದ್ದರಿಂದ ಈಗಾಗಲೇ ಗಣನೀಯವಾಗಿ ಕುಸಿದಿದೆ.2011 ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಪ್ರತಿ ಸಾವಿರ ಗಂಡುಗಳಿಗೆ  978  ಹೆಂಗಸರು ಇದ್ದಾರೆ .ಆದರೆ ಮಕ್ಕಳ  ಅಂಕಿ ಅಂಶ ಪರಿಗಣಿಸಿದಾಗ ಪ್ರತಿ ಸಾವಿರ ಗಂಡು ಮಕ್ಕಳಿಗೆ 948  ಹೆಣ್ಣು ಮಕ್ಕಳು ಇದ್ದಾರೆ 

ಈಗಾಗಲೇ ಲಕ್ಷಾಂತರ ಮಂದಿ ಹೆಣ್ಣು ಮಕ್ಕಳು ಕಡಿಮೆಯಾಗಿದ್ದಾರೆ ! ಹೆಣ್ಣಿನ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ .
ಇದರ ಪರಿಣಾಮ ಸಮಾಜದ ಮೇಲೆ ಈಗಾಗಲೇ ಕಾಣಿಸಿಕೊಂಡಿದೆ .ವಿಶೇಷವಾಗಿ ಒಂದು ಸಮುದಾಯದಲ್ಲಿ ಕನ್ಯೆಯರ ಬರ ಕಾಣಿಸಿಕೊಂಡಿದೆ .ಇದರಿಂದಾಗಿ ಹಳ್ಳಿಯಲ್ಲಿರುವ ಕೃಷಿಕ ಹುಡುಗರಿಗೆ ,ಸಣ್ಣ ಪುಟ್ಟ ಅಂಗಡಿ ಇಟ್ಟು ಬದುಕುವವರಿಗೆ ,ಸಣ್ಣ ಪುಟ್ಟ ಕೆಲಸದಲ್ಲಿ ಇರುವವರಿಗೆಮದುವೆಯಾಗಲು  ಹುಡುಗಿಯರು ಸಿಗುತ್ತಿಲ್ಲ .ತಂದೆ ತಾಯಂದಿರು ತಮ್ಮ ಮಗಳಿಗೆ ಒಳ್ಳೆಯ ಕೆಲಸದಲ್ಲಿರುವ ಪೇಟೆಯಲ್ಲಿರುವ ಸ್ಥಿತಿಗತಿ ಇರುವ ಹುಡುಗರು ಸಿಗುವಾಗ ಹಳ್ಳಿಯಲ್ಲಿ ಇರುವ ,ಸರಿಯಾದ ಉದ್ಯೋಗ ಆರ್ಥಿಕ ಭದ್ರತೆ ಇಲ್ಲದಿರುವ ಹುಡುಗರಿಗೆ ಕೊಡುತ್ತಾರೆಯೇ ?ಕೊಡ ಬೇಕು ಎಂದು ಹೇಳುವುದು ಸರಿಯಲ್ಲ ಅದು ಅವರ ಇಷ್ಟ . ಈ ಬಗ್ಗೆ ಹಳ್ಳಿ ಹುಡುಗರನ್ನು ಮದುವೆಯಾಗಲು ಹುಡುಗಿಯರು ಮುಂದಾಗದ ಬಗ್ಗೆ ಯಾವಾಗಲೂ ಸಾಮಜಿಕ ತಾಣಗಳಲ್ಲಿ ದೂಷಣೆಯ ಮಾತುಗಳು ಆಗಾಗ ಕೇಳಿ ಬರುತ್ತವೆ

ಹುಡುಗರಿಗೆ ಹುಡುಗಿ ಸಿಗದೇ ಇರುವುದಕ್ಕೆ ತಂದೆ ತಾಯಿ ಕೊಡದೇ ಇರುವುದು ಕಾರಣ ಅಲ್ಲ ,ಹುಡುಗರಿಗೆ ಹುಡುಗಿ ಸಿಗದ್ದಕ್ಕೆ ಗಂಡು ಹೆಣ್ಣಿನ ಅನುಪಾತ ಕುಸಿದದ್ದೇಮುಖ್ಯವಾದ  ಕಾರಣ. ತೀರಾ ಇತ್ತೀಚೆಗಿನವರೆಗೂ  ಅಂದರೆ ಹದಿನೈದು ವರ್ಷ ಹಿಂದಿನ ತನಕವೂ   ಕನ್ಯೆಯರ ಕೊರತೆ ಇರುವ ಆ ಸಮುದಾಯದಲ್ಲಿ  ವರ ದಕ್ಷಿಣೆ ತೆಗೆದುಕೊಳ್ಳುತ್ತಿದ್ದರು .ಅದರಲ್ಲೂ ತುಸು ಕಪ್ಪು ಇದ್ದು ಹೆಚ್ಚು ಓದಿರದ ಹುಡುಗಿಗೆ ಮದುವೆಯಾಗ ಬೇಕಿದ್ದರೆ ಕೈ ತುಂಬಾ ವರದಕ್ಷಿಣೆ ನೀಡ ಬೇಕಿತ್ತು ಆದ್ರೆ ಈಗ ಹೆಣ್ಣಿನ ಸಂಖ್ಯೆ ಕಡಿಮೆ ಆದ ಕಾರಣ ವರದಕ್ಷಿಣೆ  ಈಗ ಆ ಸಮುದಾಯದಲ್ಲಿ ಇಲ್ಲವೇ ಇಲ್ಲ .ಇಲ್ಲಿ ನಿದಾನಕ್ಕೆ ವಧೂ  ದಕ್ಷಿಣೆ ಪದ್ಧತಿ ಆರಂಭವಾದರೂ ಆದೀತು! ಆದರೆ .ಇಷ್ಟಾಗಿದ್ದರೂ ಇನ್ನೂ ಕೂಡ ಜನರು ಎಚ್ಚತ್ತು ಕೊಂಡಿಲ್ಲ .ಹೆಣ್ಣಿನ ಶೋಷಣೆ ನಿಂತಿಲ್ಲ .

.ಈಗ ಎಲ್ಲ ಕ್ಷೇತ್ರದಲ್ಲು ಹೆಣ್ಣು  ಮಕ್ಕಳು ಮುಂದುವರಿಯುತ್ತಿದ್ದಾರೆ .ಅವರಿಗೆ ಶಿಕ್ಷಣ ಸಿಗುವಂತೆ ಮಾಡುತ್ತಿದ್ದಾರೆ .ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಿಗೆ ಸಮಾನವಾದ ಸ್ಥಾನ ಮಾನ ಸಿಗುತ್ತಾ ಇದೆ ಆದ್ದರಿಂದ ಇನ್ನು ಹೆಣ್ಣು ಮಕ್ಕಳ ಸಂಖ್ಯೆ ಕುಸಿಯಲಾರದು ಎಂದು ತುಸು ನಿರಾಳತೆ ಇತ್ತು !
ಆದರೆ ಆ ನಿರಾಳತೆ ಹೆಚ್ಚು ಸಮಯ ಇರಲಿಕ್ಕಿಲ್ಲ .ಅಂದು ವರದಕ್ಷಿಣೆ ಶೋಷಣೆ ,ಬಡತನ ದಿಂದಾಗಿ ಹೆಣ್ಣು ಮಗು ಬೇಡ eega ಎಅತ್ಯಾಚಾರ ಕಿರುಕುಳಗಳ ಕಾರಣಕ್ಕೆ ಹೆಣ್ಣು ಮಗು ಬೇಡ ಎನಿಸಿದ್ದರೆ ಅದರಲ್ಲಿ ಆಶ್ಚರ್ಯ ಏನೂ ಇಲ್ಲ.

ಇಂದು ಎಲ್ಲೆಡೆ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ,ಕೊಲೆ ,ಲೈಂಗಿಕ ಕಿರುಕುಳ ,ಲಿಂಗ ತಾರತಮ್ಯ , ಲವ್ /ಮತಾಂತರದ  ಜಾಲ ಮೊದಲಾದ ಕಾರಣಕ್ಕೆ ಹೆಣ್ಣು ಮಗು  ಭಾರ ಎನಿಸುತ್ತಿದೆ .ಆದ್ದರಿಂದ ಎಲ್ಲರೂ ಎಚ್ಚತ್ತು ಕೊಳ್ಳ ಬೇಕಾಗಿದೆ .ಹೆಣ್ಣು ಮಕ್ಕಳ ಸುರಕ್ಷಿತತೆ ಬಗ್ಗೆ ಆಲೋಚಿಸ ಬೇಕು .ಅತ್ಯಾಚಾರ ಮಾಡಿದವರಿಗೆ ,ಕಿರುಕುಳ ನೀಡುವವರಿಗೆ  .ಮತಾಂತರದ ಜಾಲದ ಮೂಲಕ ಹೆಣ್ಣು ಮಕ್ಕಳನ್ನು ಖೆಡ್ಡಾಕ್ಕೆ ಬೀಳಿಸುವವರಿಗೆ, ಶೀಘ್ರವಾಗಿ ಶಿಕ್ಷೆ  ಸಿಗುವಂತೆ ಮಾಡ ಬೇಕು .ಜೊತೆಗೆ ಸಮಾಜದಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸ ಬೇಕು

ಅತ್ಯಾಚಾರಿಗಳಿಗೆ ಬಲವಾದ ಶಿಕ್ಷೆ  ಶೀಘ್ರವಾಗಿ ಆಗಬೇಕು ,ಜೊತೆಗೆ ಸಾಮಾಜಿಕವಾಗಿ ಜಾಗೃತಿ ಮೂಡಿಸಬೇಕು ",ಹೆಣ್ಣು ಭೋಗದ ವಸ್ತುವಲ್ಲ ,ಅವಳಿಗೂ ಎಲ್ಲರಂತೆ ಬದುಕುವ ಸ್ವಾತಂತ್ರ್ಯವಿದೆ" ಎಂಬುದನ್ನು ಮನಗಾಣಿಸಬೇಕು.
ಶಾಲೆಗೆ ಹೋಗಿ ಬರುವ ಹೆಣ್ಣುಮಕ್ಕಳಿಗೆ  ಈ ಬಗ್ಗೆ ತಿಳುವಳಿಕೆ ನೀಡಬೇಕು .ಒಬ್ಬೊಬ್ಬರೇ ಓಡಾಡದೆ ಗುಂಪಿನಲ್ಲಿ ಹೋಗಿ ಬರುವಂತೆ ತಿಳುವಳಿಕೆ ನೀಡಬೇಕು

ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಹೆಣ್ಣು ಮಕ್ಕಳ ಅವಹೇಳನ ನಿಲ್ಲಿಸಬೇಕು.
ಹೆಣ್ಣು ಮಕ್ಕಳ ಮೇಲಿನ ಯಾವುದೇ ತರದ ದೌರ್ಜನ್ಯವನ್ನು ,ಜಾತಿ ಮತ,ಪಂಥ ,ಧರ್ಮ , ಪಕ್ಷ ಎಂಬ ಭೇದವಿಲ್ಲದೆ ಒಗ್ಗಟ್ಟಾಗಿ ವಿರೋಧಿಸ ಬೇಕು .ಪಕ್ಕದ ಮನೆಗೆ ಬಿದ್ದ ಬೆಂಕಿ ನಮ್ಮ ಮನೆಗೂ ಹರಡಬಹುದು ಎಂಬುದನ್ನು ನಾವು ಮರೆಯಬಾರದು .

ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪಿಯು ಕಾಲೇಜು
ಬೆಳ್ಳಾರೆ ,ಸುಳ್ಯ

Sunday 6 July 2014

ನನ್ನ ಮೊದಲ ಕಥೆ -ಕೈಜಾರಿದ ಹಕ್ಕಿ (3 ಜುಲೈ 1994 .ಹೊಸ ದಿಗಂತ )




                       
                         
         

. ಕೈಜಾರಿದ ಹಕ್ಕಿ
© ಡಾ.ಲಕ್ಷ್ಮೀ ಜಿ ಪ್ರಸಾದ್ 
ರೀ ನೋಡ್ರಿ ಯಾವುದೋ ಮಗು ನಮ್ಮ ಹಿಂದೇನೇ ಬರ್ತಿದೇರೀ ..
ಏ ಸುಮ್ನಿರೆ ಎಲ್ಲಿ ಹೋದ್ರೂ ನಿನ್ನು ಗುನುಗು ಇದ್ದೇ ಇದೆ. ಯಾರ ಮಗುವೋ ಏನೊ ಅದರ ತಾಯಿ ಇಲ್ಲೇ ಎಲ್ಲೊ ತರಕಾರಿ ಕೊಳ್ತಾ ಇದ್ದೇಕು. ಬೇಗ ಹೋಗೋಣ. ಮಳೆ ಬೇರೆ ಬರೋ ಹಾಗಿದೆ. ಪ್ರಭಾಕರ್ ಮಡದಿ ಸುಶೀಲಗೆ ಹೇಳುತ್ತಲೆ ಕಾರು ಸ್ಟಾರ್ ಮಾಡಿದ. ಕಾರು ಎರಡು ಮೀಟರ್ ಮುಂದೆ ಹೋಗುತ್ತಲೇ ಸುಶೀಲ ಕಿಟ್ಟನೆ ಕಿರುಚಿದಳು. ಆ ಮಗು ಕಾರಿನ ಎದುರಾಗಿ ಓಡಿ ಬಂದಿತ್ತು. ಪ್ರಭಾಕರ್ ಕೂಡಲೇ ಬ್ರೇಕ್ ಹಾಕಿ ಕಾರು ಮಗುವಿನ ಮೇಲೆ ಹೋಗದಂತೆ ತಡೆಯುವಲ್ಲಿ ಸಫಲನಾಗಿದ್ದರೂ ಮಗು ಬಿದ್ದು ಎಚ್ಚರ ತಪ್ಪಿತ್ತು.

“ಏನ್ರಿ ಕನಸ್ ಕಾಡ್ತ ಕಾರ್ ಬಿಡ್ತೀರೇನ್ರಿ? ಕಣ್ ಕಾಣಿಸಲ್ಲವಾ” ಎಂದೆಲ್ಲ ಸುತ್ತುಮುತ್ತಲಿನ ಜನರ ಬೈಗಳು ಕೇಳುತ್ತಲೇ ಪ್ರಭಾಕರ್ ಅಂಗಡಿಯೊಂದರಿಂದ ನೀರು ಕೇಳಿ ತಂದು ಮಗುವಿನ ಮುಖಕ್ಕೆ ಹಾಕಿ ಎಚ್ಚರ ಬರಿಸಿದ. ಮಗು ಅಮ್ಮ " ಅಳತೊಡಗಿತು. ಇಷ್ಟಾದರೂ ಮಗುವಿನ ತಾಯಿಯ ಪತ್ತೆಯೇ ಇರಲಿಲ್ಲ. ಎಲ್ಲರೂ ಮಗುವಿನ ತಾಯಿಯನ್ನು, ಪ್ರಭಾಕರನನ್ನೂ ಬೈಯುತ್ತಾ ಚದುರಿ ಹೋದರೂ ಮಗುವನ್ನು ಕೇಳಿಕೊಂಡು ಯಾರೂ ಬರಲಿಲ್ಲ, ಸಂತೆಯಿಡೀ ಖಾಲಿಯಾಗಿ ಅಂಗಡಿಗಳು ಮುಚ್ಚತೊಡಗಿದ್ದರೂ ಮಗುವಿನ ಅಳುವೂ ನಿಂತಿರಲಿಲ್ಲ. ಬಿಸ್ಕೆಟ್ ಕೊಟ್ಟು ಸುಶೀಲ ಮಗುವನ್ನು ಸಮಾಧಾನಿಸಲು ಪ್ರಯತ್ನಿಸಿದರೂ ಬಿಸ್ಕೆಟ್ ಕೈಯಲ್ಲಿ ಹಿಡಿದು ಮಗು ಅಳುತ್ತಿತ್ತು. ಸುಶೀಲ ನಿನ್ನ ಹೆಸರೇನು ಮರೀ ಎಂದು ಕೇಳಿದಾಗ ಮಗು ಕಿರಣ ಎಂದುತ್ತರಿಸಿತು. ಮನೆ ಎಲ್ಲಿದೆ ಎಂದು ಕೇಳಲು 'ದೂರ' ಎಂದುತ್ತರಿಸಿತು. ಪ್ರಭಾಕರ್ಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಕತ್ತಲು ಬೇರೆ ಕವಿಯುತ್ತಿತ್ತು. ಕೊನೆಗೆ ಸುಶೀಲ 'ರೀ ಕತ್ತಲಾಗಿದೆ. ಈಗ ಮಗನ ಮನೆಗೆ ಕರೊಂಡು ಹೋಗೋಣ. ನಾಳೆ ಪೋಲೀಸ್ ಕಂಪ್ಲೆಂಟ್ ಕೊಟ್ಟು ಮಗುವಿನ ತಾಯಿನ ಹುಡುಕಿಸೋಣ' ಎಂದು ಹೇಳಿದಾಗ 'ಬೇವಾರ್ಸಿಗಳು, ಮಕ್ಕನ್ನ ಹೆರ್ತಾವೆ, ನೋಡ್ಕೊಳ್ಳೋಕೆ ಆಗಲ್ವ”ಎನ್ನುತ್ತಲೇ ಪ್ರಭಾಕರ್ ಕಾರು ಹತ್ತಿದರು. ಮಗು ಸುಶೀಲಳ ಮಡಿಲಲ್ಲೇ ನಿದ್ದೆ ಮಾಡಿತ್ತು. ಇದೆಲ್ಲವನ್ನೂ ಕಸದ ತೊಟ್ಟಿಯ ಹಿಂದಿನಿಂದ ಜೋಡಿ ಕಂಗಳು ವೀಕ್ಷಿಸುತ್ತಿದ್ದವು.

ಕಿರಣ ಈಗ ಪ್ರಭಾಕರ್ ಮನೆಗೆ ಹಳಬನಾಗಿದ್ದ. ಮಕ್ಕಳಿಲ್ಲದಿದ್ದ ಸುಶೀಲ ಮಗುವನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು ಅವನನ್ನು ಆರೈಕೆ ಮಾಡುತ್ತಾ ತನಗೆ ಮಕ್ಕಳಿಲ್ಲವೆಂಬ ಕೊರಗನ್ನು ಸುಶೀಲ ಮರೆತಿದ್ದಳು. ಪ್ರಭಾಕರ್‌ಗೆ ಮಾತ್ರ ಕಿರಣನನ್ನು ಕಂಡರೆ ಆಗುತ್ತಿರಲಿಲ್ಲ. ಅವನು ಕಿರಣ ಸಿಕ್ಕಿದ ಮರುದಿನವೇ ಸಬ್ ಇನ್ಸ್‌ಪೆಕ್ಟರ್ ಹರೀಶ್ ಅವರಲ್ಲಿ ಕಂಪ್ಲೆಂಟ್ ಕೊಟ್ಟಿದ್ದನು. ಹರೀಶ್ ಮಗುವಿನ ತಾಯಿಯನ್ನು ಹುಡುಕಿಕೊಡುವುದಾಗಿ ಆಶ್ವಾಸನೆಯಿತ್ತು, ಅದುವರೆಗೆ ಮಗು ನಿಮ್ಮಲ್ಲೇ ಇರಲಿ ಎಂದಿದ್ದರು. ಅದರಿಂದ ಪ್ರಭಾಕರ್‌ಗೆ ಕಿರಣನನ್ನು ತನ್ನ ಮನೆಯಲ್ಲಿರಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಇದರಿಂದ ಸುಶೀಲ ಗೆಲುವಾಗಿದ್ದಳು.

ಮದುವೆಯಾದ ಹೊಸದರಲ್ಲಿ ಪ್ರಭಾಕರ್ ಸುಶೀಲಳಿಗೆ ಪ್ರೀತಿಯ ಹೊಳೆಯನ್ನೇ ಹರಿಸಿದ್ದ. ಭಾರತದ ಎಲ್ಲೆಡೆಯಲ್ಲಿಯೂ ಅವರಿಬ್ಬರು ಜೋಡಿ ಹಕ್ಕಿಗಳಂತೆ ವಿಹರಿಸಿದ್ದರು. ಕಾಫಿ ಎಸ್ಟೇಟ್ ಓನರ್ ಆಗಿರುವ ಪ್ರಭಾಕರ್‌ಗೆ ಹಣದ ಕೊರತೆ ಇರಲಿಲ್ಲ. ಆಗ ಅವನ ತಂದೆ ಶೇಷಪ್ಪ ಇದ್ದಿದ್ದರಿಂದ ಜವಾಬ್ದಾರಿಯೂ ಇರಲಿಲ್ಲ. ಒಂದು ದಿನ ಬೇಲೂರು ಹಳೆಬೀಡಿಗೆ ಹೋಗಿ ಶಿಲ್ಪಕಲೆಯ ತವರೂರಿನ ಸೌಂದರ್ಯವನ್ನು ಸವಿದಿದ್ದರೆ ಮತ್ತೊಂದು ದಿನ ಕನ್ಯಾಕುಮಾರಿಗೆ ಹೋಗಿ ಒಂದೆಡೆಯಲ್ಲಿ ಮುಳುಗುವ ಕಾತುರದಲ್ಲಿದ್ದ ಸೂರ್ಯನನ್ನು ಮತ್ತೊಂದೆಡೆಯಲ್ಲಿ ನಿದ್ದೆಯಿಂದ ಆಗ ತಾನೇ ಎಚ್ಚೆತ್ತು ಮೂಡುತ್ತಿದ್ದ ಚಂದ್ರನನ್ನು ನೋಡಿ ಅಲ್ಲಿಯ ರಮಣೀಯತೆಗೆ ಮಾರುಹೋಗಿದ್ದರು. ಪ್ರಭಾಕರ್ ಸುಶೀಲ ಒಬ್ಬರನ್ನೊಬ್ಬರು ಒಂದು ಕ್ಷಣವೂ ಬಿಟ್ಟು ಇರುತ್ತಿರಲಿಲ್ಲ. ಆದರೆ ವಧಿಗೆ ಇದು ಸಹನವಾಗಲಿಲ್ಲವೋ ಏನೋ? ಒಂದು ದಿನ ಹೊರಗೆ ಸುತ್ತಾಡಲೆಂದು ಸ್ಕೂಟರಿನಲ್ಲಿ ಹೋಗಿದ್ದಾಗ ಹುಚ್ಚು ಕಟ್ಟಿ ಓಡಿ ಬರುತ್ತಿದ್ದ ಎತ್ತೊಂದು ಅಡ್ಡ ಸಿಕ್ಕಿ ಇಬ್ಬರೂ ಬಿದ್ದಿದ್ದರು. ಎಚ್ಚರವಾದಾಗ ಇಬ್ಬರೂ ನರ್ಸಿಂಗ್ ಹೋಮ್ ಒಂದರಲ್ಲಿ ಇದ್ದರು.

೧. ಡಾಕ್ಟರ್ ಜಯರಾಮ್ ಬಂದು “ನೀವಿಬ್ಬರೂ ಅದೃಷ್ಟಶಾಲಿಗಳು ಹೆಚ್ಚೇನು ಪೆಟ್ಟಾಗಿಲ್ಲ. ನಿಮಗೆ ಕಿಡ್ನಿಗೆ ಪೆಟ್ಟಾಗುವುದು ಸ್ವಲ್ಪದರಲ್ಲಿ ತಪ್ಪಿಹೋಗಿದೆ. ಕಿಡ್ನಿಗೆ ಪೆಟ್ಟಾಗಿದ್ದರೆ ನಾವು ಏನು ಮಾಡುವ ಹಾಗೂ ಇರಲಿಲ್ಲ. ಸದ್ಯ ನೀವು ಮಕ್ಕಳ ಜೊತೆ ಬಂದಿಲ್ಲವಲ್ಲ. ಎಳೆ ಮಕ್ಕಳಿಗೆ ಪೆಟ್ಟನ್ನು ತಡ್ಕೊಳೋಕೆ ಕಷ್ಟ ಆಗ್ತಿತ್ತು ... ಹೀಗೆ ಡಾ. ಜಯರಾಮ್‌ ಅವರು ಮಾತು ಮುಂದುವರಿಯುತ್ತಲೇ ಪ್ರಭಾಕರ್ ಡಾಕ್ಟರ್.... ನಮ್ಮ ವಿವಾಹವಾಗಿ ಒಂದು ವರ್ಷ ಆಯಿತಷ್ಟೆ. ಮಕ್ಕಳಾಗಿಲ್ಲ. ಎಂದು ಹೇಳುತ್ತಲೇ ಡಾ. ಜಯರಾಮ್‌ ಅವರ ಮುಖ ಸ್ವಲ್ಪ ಏನೋ ಅಹಿತವನ್ನು ಹೇಳಲಿರುವಂತೆ ಯೋಚನಾಕ್ರಾಂತವಾಯಿತು. ಆದರೂ ಅದನ್ನು ತೋರ್ಪಡಿಸದೆ “ನೋಡಿ ಮಕ್ಕಳೇ ಏನು ಜೀವನದಲ್ಲಿ ಪರಮ ಗುರಿ ಅಲ್ಲ. ಮಡದಿ ಮಕ್ಕಳಿಗಿಂತಲೂ ಹೆಚ್ಚಿನದು ಇದೆ. ಅದೆಷ್ಟೋ ಮಕ್ಕಳು ತಂದೆ ತಾಯಂದಿರನ್ನು ಕಳೆದುಕೊಂಡು ಅವರ ಪ್ರೀತಿಯಿಂದ ವಂಚಿತರಾಗಿ ಅನಾಥಾಲಯಗಳಲ್ಲಿ ಇದ್ದಾರೆ. ಮದರ್ ತೆರೇಸಾ ಅವರನ್ನು ನೋಡಿ ... ಡಾ. ಜಯರಾಮ್‌ ಮುಂದುವರಿಸುತ್ತಲೇ ಇದ್ದಾಗ "ಅದೆಲ್ಲ ನಮಗೆ ಏಕೆ ಹೇಳುತ್ತೀರ” ಡಾಕ್ಟರ್ ಎಂದು ಪ್ರಭಾಕರ್ ಪ್ರಶ್ನಿಸಿದ. ಆಗ ಅವರು “ಸ್ವಲ್ಪ ಧೈರ್ಯ ತಂದುಕೊಳ್ಳಿ. ಈ ಅಪಘಾತದಲ್ಲಿ ನೀವು ನಿಮ್ಮ ಪುರುಷತ್ವವನ್ನು ಕಳೆದುಕೊಂಡಿದ್ದೀರ. ನಿಮಗೆ ಮಕ್ಕಳಾಗುವಂತಿಲ್ಲ" ಎಂದು ನುಡಿದಿದ್ದರು.

ಪ್ರಭಾಕರ್ ಸುಶೀಲ ಇಬ್ಬರಿಗೂ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಗಿತ್ತು. ಅವರ ಕನಸುಗಳೆಲ್ಲ ನುಚ್ಚು ನೂರಾಗಿತ್ತು. ಈ ವಾರ್ತೆ ಕೇಳಿದ ಸ್ವಲ್ಪ ದಿನಗಳಲ್ಲೇ ಮಗನಿಗೆ ಕುಲದೀಪಕನು ಹುಟ್ಟಲಾರ ಎಂಬ ಕೊರಗಿನಿಂದ ಶೇಷಪ್ಪನವರು ಸ್ವರ್ಗಸ್ಥರಾಗಿದ್ದರು. ಅಂದಿನಿಂದ ಸುಶೀಲ ಒಂಟಿ, ಪ್ರಭಾಕರ್ ಪೂರ್ತಿ ಬದಲಾಗಿದ್ದ. ಕುಡಿತಕ್ಕೆ ಮರೆ ಹೋಗಿದ್ದ. ಬೇರೆಯವರ ಮಕ್ಕಳನ್ನು ದ್ವೇಷಿಸುತ್ತಿದ್ದ, ಯಾಂತ್ರಿಕವಾಗಿ ಜೀವನ ನಡೆಯುತ್ತಿತ್ತು. ಮೊಲದಂತೆ ವೇಗವಾಗಿ ಓಡಿದ ಮೊದಲ ಒಂದು ವರ್ಷ ಈಗ 2ನೇ ವರುಷ ಆಮೆಯಂತೆ ನಿಧಾನವಾಗಿ ತೆವಳತೊಡಗಿತ್ತು.

ಈಗ ಕಿರಣ ಸುಶೀಲಳ ಯಾಂತ್ರಿಕ ಬದುಕಿಗೆ ತಿರುವು ಕೊಟ್ಟಿದ್ದ. ಗುಂಡುಗುಂಡಗೆ ನೋಡಲು ಮುದ್ದಾಗಿದ್ದ ಕಿರಣ ನಕ್ಕರೆ ಕೆನ್ನೆಯಲ್ಲಿ ಗುಳಿ ಮೂಡಿ ದೃಷ್ಟಿ ತಾಕುವಂತೆ ಇದ್ದ. ಅವನ ಮುದ್ದು ಮಾತು ಕೇಳುತ್ತಾ ಸುಶೀಲ ಪ್ರಪಂಚವನ್ನೇ ಮರೆಯುತ್ತಿದ್ದಳು. ಕಿರಣ ಬಂದು ಆಗಲೇ ಮೂರು ತಿಂಗಳು
ಆಗಿತ್ತು. ಯಾರೂ ಅವನನ್ನು ಕೇಳಿಕೊಂಡು ಬಂದಿರಲಿಲ್ಲ. ಪ್ರಭಾಕರ್ ಕಿರಣನನ್ನು ಅನಾಥಾಲಯದಲ್ಲಿ ಬಿಡಲು ನಿರ್ಧರಿಸಿದಾಗ ಸುಶೀಲ ಅದನು ಬಲವಾಗಿ ವಿರೋಧಿಸಿದಳು. ಮಕ್ಕಳಾಗದ ನಮಗೆ ಕಿರಣ ದೇವರಿತ್ತ ಕೊಡುಗೆ. ಅವನನ್ನು ನಾವು ಬೆಳೆಸೋಣ. ಇಲ್ಲವಾದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪ್ರಭಾಕರನಲ್ಲಿ ಜಗಳವಾಡಿದ್ದಳು. ಅದರಿಂದ ಪ್ರಭಾಕರ್ ಸುಮ್ಮನಾಗಿದ್ದರೂ ಅದಕ್ಕೆ ತಕ್ಕ ಸಂದರ್ಭ ಕಾಯುತ್ತಿದ್ದ. ಅದಕ್ಕೆ ಸರಿಯಾಗಿ ಸುಶೀಲಳ ತಂದೆಯಿಂದ ಫೋನ್ ಬಂತು. ಸುಶೀಲಳ ತಾಯಿಗೆ ಹುಷಾರಿರಲಿಲ್ಲ. ಹಾಗೆ ಅವಳು ಕಿರಣನನ್ನು ಕೆಲಸದವಳ ಕೈಗೊಪ್ಪಿಸಿ ಜಾಗ್ರತೆ ಹೇಳಿ 'ವಾರದೊಳಗೆ ಬರುತ್ತೇನೆ' ಎಂದು ತಂದೆ ಮನೆಗೆ ಹೋದಳು. ಪ್ರಭಾಕರ್‌ಗೆ ಕಾಯುತ್ತಿದ್ದ ಸಂದರ್ಭ ಸಿಕ್ಕಿತ್ತು.

ಸುಶೀಲ ಅತ್ತ ಹೋಗುತ್ತಲೇ ಕಿರಣನನ್ನು ಕೂಡಲೇ ಅನಾಥಾಲಯದಲ್ಲಿ ಬಿಟ್ಟು ಬಂದರು. ಮತ್ತೆರಡು ದಿನ ಕಳೆದಿತ್ತು. ಮಧ್ಯಾಹ್ನ ಮಲಗಿರುವಾಗ ಅಂಚೆಯವನು ರಿಜಿಸ್ಟರ್ ಪತ್ರಕ್ಕೆ ಸಹಿ ಹಾಕಿಸಿ ಪತ್ರವನ್ನು ಕೊಟ್ಟು ಹೋದ. ಯಾರಿಂದ ಬಂದಿದೆ ಎಂದು ನೋಡಿದಾಗ ಸುಜಾತ, ನರ್ಸ್ ಪ್ರತಿಮಾ ನರ್ಸಿಂಗ್ ಹೋಂನ ನರ್ಸ್ ನನಗೆ ರಿಜಿಸ್ಟರ್ ಪತ್ರ ಬರೆಯಲು ಏನಿದೆ ಎಂದುಕೊಳ್ಳುತ್ತಲೇ ಕಾಗದ ಒಡೆದು ಓದತೊಡಗಿದ.

ಪ್ರಾರಂಭದಲ್ಲೇ Dear ಪ್ರಭು ಹೀಗೆ ನನ್ನನ್ನು ಹೇಳುವವರು ಯಾರೆಂದು ಯೋಚಿಸುತ್ತಲೇ ಅವನಿಗೆ ನೆನಪಾದಳು ಸುಜಾತ, ಪ್ರಭಾಕರ್‌ನ ಮೊದಲು ಮನಸೋಲಿಸಿದ್ದ ಹುಡುಗಿ ಸುಜಾತ, ಪ್ರಭಾಕರ್, ಸುಜಾತ ಒಬ್ಬರನ್ನೊಬ್ಬರು ಮನಸ್ಸಾರೆ ಪ್ರೀತಿಸುತ್ತಿದ್ದರು. ಅವರಿಬ್ಬರೂ ಮದುವೆ ಆಗುವುದೆಂದೂ ನಿಶ್ಚಯ ಆಗಿತ್ತು. ಇದಕ್ಕೆ ಎರಡು ಕಡೆಯ ಹಿರಿಯರಿಂದಲೂ ಸಮ್ಮತಿಯೂ ಇತ್ತು. ಒಂದು ದಿನ ಅವರಿಬ್ಬರೂ ಹೊರಗೆ ಹೋಗಿದ್ದಾಗ ಯೌವ್ವನ ಸೆಳೆತಕ್ಕೊಳಗಾಗಿ ಅವರಿಬ್ಬರೂ ಒಂದಾಗಿದ್ದರು. ಹೇಗಿದ್ದರೂ ಮುಂದೆ ವಿವಾಹವಾಗುವವರೇ ತಾನೆ ಎಂದು ಇಬ್ಬರು ಗಾಬರಿಯಾಗದಿದ್ದರೂ ಮನದ ಮೂಲೆಯಲ್ಲಿ ಅಳುಕಿತ್ತು. ಆದರೆ ವಿಧಿಯ ಆಟವೇ ಬೇರೆ ಆಗಿತ್ತು. ಸುಜಾತಳ ಮೈಮೇಲೆ ಎದ್ದ ತೊನ್ನಿನ ಕಲೆ ಅವಳ ಜೀವನವನ್ನೇ ಬೇರೆ ಮಾಡಿತ್ತು. ತಾನು ಪ್ರೀತಿಸಿದ್ದ ಪ್ರಭಾಕರ್‌ನ ಬಾಳು ಹಾಳು ಮಾಡಲಿಚ್ಛಿಸದೆ ಅವನಿಂದ ದೂರವಾಗಿ ನರ್ಸಿಂಗ್ ಹೋಂ ಒಂದರಲ್ಲಿ ನರ್ಸ್ ಆಗಿ ಸೇರಿಕೊಂಡಿದ್ದಳು. ಆದರೆ ಪ್ರಭಾಕರ್‌ಗೆ ಅವಳೆಲ್ಲಿದ್ದಾಳೆಂದು ತಿಳಿದಿರಲಿಲ್ಲ. ಮನೆಯವರಿಗೂ ತಿಳಿಸದೇ ಅವಳು ದೂರ
90

ಹೋಗಿದ್ದಳು. ಪ್ರಭಾಕರ್ ಮುಂದೆ ಸುಶೀಲಳನ್ನು ವಿವಾಹವಾಗಿದ್ದ, ಸುಜಾತ ಆ ದಿನದ ತಪ್ಪಿನಿಂದಾಗಿ ಗರ್ಭ ಧರಿಸಿದ್ದಳು. ಅವಳು ಸಮಾಜಕ್ಕೆ ಹೆದರದೆ ಮಗುವನ್ನು ಹೆತ್ತು ಸಾಕಿದ್ದಳು. ಅಪಘಾತ ಆಗಿ ಪ್ರಭಾಕರ್ ನರ್ಸಿಂಗ್ ಹೋಮನಲ್ಲಿದ್ದಾಗ ಅಲ್ಲೇ ನರ್ಸ್‌ ಆಗಿದ್ದ ಸುಜಾತಳಿಗೆ ಅವರಿಗೆ ಮಕ್ಕಳಾಗಿಲ್ಲ. ಇನ್ನು ಆಗುವಂತಿಲ್ಲ ಎಂದು ತಿಳಿದಿತ್ತು. ಅಂದಿನಿಂದ ಅವಳಿಗೆ ಕಿರಣನನ್ನು ಪ್ರಭಾಕರ್‌ಗೆ ಒಪ್ಪಿಸಿ ಈ ಪ್ರಪಂಚದಿಂದ ದೂರವಾಗುವ ಆಸೆ ಪ್ರಬಲವಾಗಿತ್ತು. ಆ ದಿನ ಸಂತೆಗೆ ಹೋಗಿದ್ದಾಗ ಪ್ರಭಾಕರ್ ಸುಶೀಲ ಮುಂದೆ ಹೋಗುತ್ತಿರುವುದನ್ನು ನೋಡಿದ ಅವಳು ಕಿರಣನ ಹತ್ತಿರ ಅವರ ಹಿಂದೆ ಹೋಗು ನಿನಗೆ ಬಿಸ್ಕೆಟು ಕೊಡುತ್ತಾರೆ ಎಂದು ನಂಬಿಸಿ ದೂರ ಸರಿದು ನೋಡುತ್ತಿದ್ದಳು. ಮುಂದಿನದೆಲ್ಲವನ್ನು ಅವಳು ಗಮನಿಸಿದ್ದಳು. ಸುಶೀಲ ಕಿರಣವನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿರುವುದನ್ನು ನೋಡಿ ಅವಳಿಗೆ ತೃಪ್ತಿಯಾಗಿತ್ತು. ಇದನ್ನೆಲ್ಲ ಕಾಗದದಲ್ಲಿ ಬರೆದು ಕೊನೆಗೆ ಪ್ರಭು ... ನಿಮ್ಮಿಂದ ನಾನು ದೂರವಾದುದಕ್ಕೆ ಯಾರ ಹಿಂದೆಯೂ ಓಡಿ ಹೋಗಿರಬಹುದೆಂಬ ಭಾವನೆ ಇರಬಹುದಲ್ಲವೇ. ನಿಮಗೆ ಹೇಳದೆ ಇದ್ದುದ್ದಕ್ಕೆ ಕ್ಷಮಿಸಿ. ಈ ಪತ್ರ ನಿಮಗೆ ತಲುಪುವ ಮೊದಲೇ ನಾನು ಈ ಪ್ರಪಂಚದಿಂದ ದೂರವಾಗಿರುತ್ತೇನೆ. ನಿಮ್ಮ ಮಗು ಕಿರಣನನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮ್ಮಿಬ್ಬರ ಜೀವನದ ಆಶಾಕಿರಣವಾಗಲಿ ಅವನು ಎಂದು ಹಾರೈಸಿ ಇದನ್ನು ಇಲ್ಲಿಗೆ ನಿಲ್ಲಿಸುತ್ತದ್ದೇನೆ.

ಇಂತೀ ನಿಮ್ಮ ಹತಭಾಗ್ಯ 
ಸುಜಾತ

ಸುಜಾತ ನೀನೆಷ್ಟು ವಿಶಾಲ ಹೃದಯಿ, ನಿನ್ನನ್ನು ನಾನು ಅರ್ಥ ಮಾಡಿಕೊಳ್ಳಲೇ ಇಲ್ಲ. ಈಗಲೇ ಕಿರಣನನ್ನು ಅನಾಥಾಲಯದಿಂದ ಕರೆತರುತ್ತೇನೆ ಎಂದು ಪ್ರಲಾಪಿಸುತ್ತಲೇ ಪ್ರಭಾಕರ್ ಅನಾಥಾಲಯಕ್ಕೆ ಧಾವಿಸಿದನು. ಅಲ್ಲಿಯವರಿಗೆ ವಿಷಯ ತಿಳಿಸಿ ಕಿರಣನನ್ನು ಹಿಂದಕ್ಕೆ ಕೊಡುವಂತೆ ಕೇಳಿದರು. ಆದರೆ ಕಾಲ ಮಿಂಚಿ ಹೋಗಿತ್ತು. ಪ್ರಭಾಕರ್ ಕಿರಣನನ್ನು ಅನಾಥಾಶ್ರಮಕ್ಕೆ ಸೇರಿಸಿದ ಅರ್ಧ ಗಂಟೆಯಲ್ಲೇ ಬಂದ, ಮಕ್ಕಳಿಲ್ಲದ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ದಂಪತಿಗಳು ಕಿರಣನನ್ನು ದತ್ತುಪುತ್ರನನ್ನಾಗಿ ಸ್ವೀಕರಿಸಿ ಅಮೆರಿಕಕ್ಕೆ ಅದೇ ದಿನವೇ ಕರೆದೊಯ್ದಿದ್ದರು. ಈಗ ಏನೂ ಮಾಡುವಂತಿಲ್ಲ. ಹಕ್ಕಿ ಕೈ ಜಾರಿಹೋಗಿತ್ತು.
- ಡಾ.ಲಕ್ಷ್ಮೀ ಜಿ ಪ್ರಸಾದ್ 


 ಇಂದು ಬೆಳಗ್ಗೆ ಪ್ರಾಜೆಕ್ಟ್ ವರ್ಕ್  ಗಾಗಿ ನನ್ನ ಸಂದರ್ಶನ ಮಾಡಿದ ಪತ್ರಿಕೋದ್ಯಮ ವಿದ್ಯಾರ್ಥಿ ಒಬ್ಬರು ನಿಮ್ಮ ಮೊದಲ ಕೃತಿ ಯಾವಾಗ ಪ್ರಕಟವಾಯಿತು?ನಿಮಗೆ ಬರೆಯಲುಪ್ರೇರಣೆ ಯಾವುದು ? ಎಂದು ಕೇಳಿದರು .
ತಕ್ಷಣವೇ ನನ್ನ ಮೊದಲ ಕಥೆ ಪ್ರಕಟವಾದ ದಿನದ ವಿಚಾರ ನೆನಪಾಯಿತು .
ನನ್ನ ಮೊದಲ ಕಥೆ "ಕೈಜಾರಿದ ಹಕ್ಕಿ " ಇಪ್ಪತ್ತು ವರ್ಷ  ಹಿಂದೆ 3 ಜುಲೈ 1994ರಂದು  ಹೊಸ ದಿಗಂತದ  ಸಾಹಿತ್ಯ ಸಾಪ್ತಾಹಿಕದಲ್ಲಿ ಪ್ರಕಟಿತವಾಯಿತು .
ಇದರ ಹಿಂದೆಯೂ ನನ್ನ ಬದುಕಿನ ಒಂದು ಕಥೆಯೂ ಇದೆ
ನನ್ನ ಬದುಕಿನ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂದ ದಿನಗಳು ಅವು .ಎರಡನೇ ವರ್ಷದ ಪದವಿ ಕೊನೆಯಲ್ಲಿ ಓದುತ್ತಿದ್ದಾಗ ನನ್ನ ವಿವಾಹ ಆಯಿತು ,
ವಿವಾಹ ಪೂರ್ವದಲ್ಲಿ ತಿಳಿಸಿದಂತೆ ನಾನು ವಿದ್ಯಾಭ್ಯಾಸ ಮುಂದುವರಿಸಿದ್ದು 1994 ಮಾರ್ಚ್ ಗೆ ನನ್ನ ಪದವಿ ಓದು ಮುಗಿದಿತ್ತು .
ಓದಿನ ಬಗ್ಗೆ ಅತ್ಯುತ್ಸಾಹ ಹೊಂದಿದ್ದ ನನಗೆ ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸು

ಇಪ್ಪತ್ತು ವರ್ಷದ ಹಿಂದೆ ಹಳ್ಳಿಯಲ್ಲಿ ವಿವಾಹಿತ ಮಹಿಳೆ ಓದುವುದೆಂದರೆ ಸಣ್ಣ ವಿಷಯ ಆಗಿರಲಿಲ್ಲ !ಎಲ್ಲರಿಂದ ವ್ಯಂಗ್ಯ ದ ಪ್ರಶ್ನೆಗಳು ,ಕುತೂಹಲ ಅವಹೇಳನದ ನೋಟಗಳು !ನಾನು ಮುಂದೆ ಎಂ ಎ ಓದುವ ಆಸೆಯನ್ನು ಹೇಳಿದ್ದೇ ತಡ !ಎಮ್ಮೆ (?!) ಮಾಡಿದವರು ಸಾವಿರ ಮಂದಿ ಕೆಲಸ ಇಲ್ಲದೆ ನಾಯಿಸಂತೆ ಅಲೆಯುತ್ತಿದ್ದಾರೆ ! ಸಂಸ್ಕೃತದಂಥ ಸತ್ತ (?!) ಭಾಷೆಯಲ್ಲಿ ಎಂ ಎ ಓದಿ ಏನು ಕಡಿದು ಹಾಕಲು ಇದೆ ಎಂಬ ತಿರಸ್ಕಾರದ ಮಾತುಗಳು


ನಾನು ಓದಬೇಕಾದರೆ ಮನೆಯವರನ್ನು ಎದುರು ಹಾಕಿಕೊಂಡು ನಾನು ಮತ್ತು ಪ್ರಸಾದ್ ಹೊರನಡೆಯಬೇಕಾದ ಅನಿವಾರ್ಯತೆ !.ನಯ ವಿನಯದಿಂದ ಹಿರಿಯರನ್ನು ಒಪ್ಪಿಸುವ ಪ್ರಯತ್ನ ಯಾವುದೂ ಸಫಲವಾಗಿರಲಿಲ್ಲ .
ಇಂಥ ಒತ್ತಡದ ಸಮಯದಲ್ಲಿ ನನಗೆ ಕಥೆ ಬರೆಯಲು ಪ್ರೇರಣೆ ಗೆಳತಿ ಅನುಪಮ ಉಜಿರೆ ( ಅನುಪಮ ಪ್ರಸಾದ ) ಅವರಿಂದ /

ಸ್ವಭಾವತಃ ಭಾವುಕ ಜೀವಿಯಾಗಿದ್ದ ನನಗೆ ಕಥೆ ಬರೆಯುವುದು ತೀರ ಕಷ್ಟ ಎನಿಸಿರಲಿಲ್ಲ ,ಕಥೆಯೊಂದನ್ನು ಬರೆದು ಹೊಸದಿಗಂತ ಪತ್ರಿಕೆಗೆ ಕಳುಹಿಸಿದ್ದೆ .

ಆ ದಿನ ಪ್ರಸಾದ್ ಕೈಯಲ್ಲಿ ಹೊಸದಿಗಂತ ಪತ್ರಿಕೆ ಹಿಡಿದು ಕೊಂಡು ಬಂದರು .ನಿನ್ನ ಕಥೆ ಪ್ರಕಟವಾಗಿದೆ ಎಂದಾಗ ನನಗೆ ನಂಬಲೇ ಅಸಾಧ್ಯವಾಗಿತ್ತು '
ಕಣ್ಣಲ್ಲಿ ನೀರು ಉಕ್ಕಿ ಬಂತು !ನೀರು ತುಂಬಿ ಅಕ್ಷರ ಕಾಣದೆ ಇದ್ದರೂ ಹೇಗೋ ಮತ್ತೆ ಮತ್ತೆ ಓದಿದೆ ,

"ನನ್ನ ಕಥೆಯೂ ಪ್ರಕಟವಾಗುತ್ತದೆ ,ನನಗೂ ನನ್ನದೇ ಆದ ಅಸ್ತಿತ್ವ ಇದೆ "ಎಂದು ಮನವರಿಕೆಯಾಯಿತು !


ಹತಾಶೆಯ ಕೂಪದಲ್ಲಿ ಬಿದ್ದಿದ್ದ ನನಗೆ ಭರವಸೆಯ ಕೋಲ್ಮಿಂಚು !,ಇದ್ದಕ್ಕಿದ್ದ ಹಾಗೆ ಎಲ್ಲರನ್ನೂ ಎದುರಿಸಿ ಬದುಕ ಬಲ್ಲೆ ಎನ್ನುವ ಧೈರ್ಯ  ಎಲ್ಲಿಲ್ಲದ ಆತ್ಮ ವಿಶ್ವಾಸ ಮೂಡಿತು .
ನಾನು ನಿರ್ಧಾರಾತ್ಮಕವಾಗಿ "ನಾನು ಮುಂದೆ ಎಂ ಎ ಗೆ ಸೇರುತ್ತೇನೆ ,ನನಗೆ ಓದಲೇ ಬೇಕು" ಎಂದು ಹೇಳಿದೆ .

ಮುಂದೆ ಓದಿದೆ ಕೂಡಾ

ನಾನು ಸಂಸ್ಕೃತ (ಎಂ ಎ )ಓದಿದೆ ಮೊದಲ ರಾಂಕ್ ತೆಗೆದೆ ಮುಂದೆ ಕನ್ನಡ (ಎಂ ಎ )ಹಾಗೂ ಹಿಂದಿ (ಎಂ ಎ) ಗಳನ್ನೂ ಖಾಸಗಿಯಾಗಿ ಓದಿದೆ.ಎಂಫಿಲ್ ,ಪಿಎಚ್ ಡಿ ಪದವಿಗಳನ್ನೂ ಗಳಿಸಿದೆ ,ಎರಡನೆಯ ಪಿಎಚ್ ಡಿ ಪದವಿಗಾಗಿ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿ ಫಲಿತಾಂಶ ಎದುರು ನೋಡುತ್ತಿದ್ದೇನೆ !
ಸರ್ಕಾರಿ ಕಾಲೇಜಿನಲ್ಲಿ  ಉಪನ್ಯಾಸಕ ಹುದ್ದೆಯೂ ದೊರೆಯಿತು
ಅಂದು ಓದುವ ನಿರ್ಧಾರ ತೆಗೆದುಕೊಳ್ಳಲು ,ಹತಾಶೆಯ ಕೂಪದಲ್ಲಿ ಏನೊಂದೂ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥಳಾಗಿದ್ದ ನನಗೆ ನನ್ನ ಕಥೆಯ ಪ್ರಕಟಣೆಯ ಮೂಲಕ ಒಮ್ಮಿಂದೊಮ್ಮೆಗೆ ಉತ್ಸಾಹ ತುಂಬಿದ ,ಆತ್ಮ ವಿಶ್ವಾಸ ಚಿಗುರಲು ಕಾರಣವಾದ ಹೊಸ ದಿಗಂತ ಪತ್ರಿಕೆಗೆ ನಾನು ಯಾವತ್ತಿಗೂ  ಆಭಾರಿಯಾಗಿದ್ದೇನೆ

ಅಂದು ಮೊದಲ ಕತೆ  ಪ್ರಕಟವಾಯಿತು ಅನಂತರ ಕೂಡ ನನ್ನ 10 -12 ಕಥೆಗಳು ಪ್ರಕಟವಾದವು .ನನ್ನ ಮೊದಲ ವೈಚಾರಿಕ ಲೇಖನ ಕೂಡ ಹೊಸದಿಗಂತ ಪತ್ರಿಕೆಯಲ್ಲಿಯೇ ಪ್ರಕಟವಾಯಿತು .
ಮುಂದೆ ನೂರಕ್ಕೂ ಹೆಚ್ಚು ಲೇಖನಗಳು ಹೊಸದಿಗಂತ ,ವಿಜಯಕರ್ನಾಟಕ ,ಉದಯವಾಣಿ,ಪ್ರಜಾವಾಣಿ ,ಸುಳ್ಯ ಸುದ್ದಿ ಬಿಡುಗಡೆ ಗಳಲ್ಲಿ ಪ್ರಕಟವಾಯಿತು ,ಸಾಮಾಜಿಕ ಕಳಕಳಿ ಎಂಬ ಅಂಕಣ ವಿಜಯ ಕಿರಣದಲ್ಲಿ ಸುಮಾರು ಒಂದು ವರ್ಷಕಾಲ ಬಂತು ,ತುಳುಜನಪದ ಲೋಕ ಎಂಬ ಅಂಕಣ ಜ್ಞಾನ  ಪಯಸ್ವಿನಿಯಲ್ಲಿ ಪ್ರಕಟವಾಯಿತು
ಒಂದು ನಾಟಕ ಸಂಕಲನ ,ಒಂದು ಕಥಾ ಸಂಕಲನ ,ಒಂದು ಶೈಕ್ಷಣಿಕ ಲೇಖನಗಳ ಸಂಕಲನ ,ಹಾಗೂ ಹದಿನೇಳು ಕನ್ನಡ ತುಳು ಜನಪದ ಸಂಸ್ಕೃತಿ ಸಂಶೋಧನಾತ್ಮಕ  ಕೃತಿಗಳು ಪ್ರಕಟವಾದವು .

ಕಳೆದ ಎರಡು -ಮೂರುತಿಂಗಳಿನಿಂದ  ವಿಜಯಕರ್ನಾಟಕದ ತುಳುಚಾವಡಿ ಯಲ್ಲಿ ನನ್ನ ತುಳು ಸಂಶೋಧನಾತ್ಮಕ ಬರಹಗಳು ಪ್ರಕಟವಾಗುತ್ತಿವೆ ,ಇತ್ತೀಚೆಗೆ 6 ಲೇಖನಗಳು ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದವು

ಆದರೆ ಇದೆಲ್ಲಕ್ಕೂ ಗಟ್ಟಿಯಾದ ಅಡಿಪಾಯಹಾಕಿಕೊಟ್ಟದ್ದು ಅಂದು ನನ್ನ ಕಥೆಯನ್ನು ಪ್ರಕಟಿಸಿದ  ಹೊಸ ದಿಗಂತ ಪತ್ರಿಕೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ

Thursday 26 June 2014

ಅವನತಿಯ ಹಾದಿಯಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ .ಲಕ್ಷ್ಮೀ ಜಿ ಪ್ರಸಾದ (ಕನ್ನಡ ಪ್ರಭ , ಪುಟ 6 , ದಿನಾಂಕ 03 ಮೇ 2014)


 http://www.kannadaprabha.com/columns/ದುಡ್ಡು-ಗಳಿಸುವ-ಮಾರ್ಗದಲ್ಲಿ-ರೋಗಿಯ-ಕಾಳಜಿಯೆಲ್ಲಿ/206461.html


ಕೋಟಿಗಟ್ಟಲೆ ದುಡ್ಡು ಖರ್ಚು ಮಾಡಿ ಕಲಿತು ಹೊರ ಬರುವ ಹೊತ್ತಿಗೆ ಇದು ಅಸಲು ಬಡ್ಡಿ ಸೇರಿ ಎಷ್ಟಾಗುವುದಿಲ್ಲ? ಇದನ್ನು ಇವರುಗಳು ಹಿಂದೆ ಪಡೆಯಬೇಡವೆ?! ಜೊತೆಗೆ ಘನತೆಗೆ ತಕ್ಕಂತೆ ಬಂಗಲೆ ಕಾರು ಇಟ್ಟುಕೊಂಡು ಬದುಕಬೇಡವೇ? ಉನ್ನತ ಶಿಕ್ಷಣದ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕಲೇಬೇಕಾಗಿದೆ.ಒಂದು ವರ್ಷದ ಹಿಂದೆ ಹೊಟ್ಟೆನೋವಿನ ಕಾರಣಕ್ಕೆ ಒಂದು ಖಾಸಗಿ ಆಸ್ಪತ್ರೆಗೆ ಹೋಗಿದ್ದೆ. ದಾಖಲಾಗಬೇಕು ಎಂದು ಹೇಳಿದರು. ದಾಖಲಾದೆ. ಅನೇಕ ಪರೀಕ್ಷೆಗಳನ್ನು ಮಾಡಿದರು. ಕೊನೆಯಲ್ಲಿ "ನಿಮಗೆ ಪೆಲ್ವಿಕ್ಸ್ ಅಪೆಂಡಿಕ್ಸ್  ಆಪರೇಷನ್ ಮಾಡಬೇಕಾಗುತ್ತದೆ" ಎಂದು ಹೇಳಿದರು. 
ವಿಪರೀತ ಗಾಬರಿಯಾಯಿತು. ಏಕೆಂದರೆ ಎರಡು ವರ್ಷಗಳ ಹಿಂದೆಯಷ್ಟೇ ನನಗೆ ಅಪೆಂಡಿಕ್ಸ್ ಆಪರೇಷನ್ ಆಗಿತ್ತು.ಅಲ್ಲದೆ ನನಗೆ ನೋವು ಇದ್ದ್ದುದು ಎಡ ಕಿಬ್ಬೊಟ್ಟೆಯಲ್ಲಿ. ಅಪೆಂಡಿಕ್ಸ್‌ಬಲ ಕಿಬ್ಬೊಟ್ಟೆಯಲ್ಲಿ ಉಂಟಾಗುವ ನೋವು ಎಂದೂ ನನಗೆ ಗೊತ್ತಿತ್ತು. ಪೆಲ್ವಿಕ್ಸ್ ಅಪೆಂಡಿಕ್ಸ್ ಎಂದರೆ ಬೇರೇನೋ ಇರಬಹುದು ಎನಿಸಿತು. ಎಂತಕ್ಕೂ ಇರಲಿ ಎಂದು ನಮ್ಮ ಪರಿಚಿತರಾದ ಇನ್ನೋರ್ವ ವೈದ್ಯರಲ್ಲಿ ಈ ಬಗ್ಗೆ ಕೇಳಿದೆವು. ಆಗ ಅವರು ಒಮ್ಮೆ ಆಪರೇಷನ್ ಆದಮೇಲೆ ಪುನಃ ಅಪೆಂಡಿಕ್ಸ್ ಆಗಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಆಗ ನಾನು ಆ ಆಸ್ಪತ್ರೆಯ ವೈದ್ಯರಲ್ಲಿ ನನಗೆ ಅಪೆಂಡಿಕ್ಸ್ ಆಪರೇಷನ್ ಆಗಿರುವ ಬಗ್ಗೆ ತಿಳಿಸಿದೆ. ಆಗ ಅವರು ಗಾಯದ ಗುರುತು ಎಲ್ಲಿದೆ ಎಂದು ತೋರಿಸಲು ಹೇಳಿದರು. ನನಗೆ ಲಾಪ್ರೋಸ್ಕೋಪಿಕ್ ಸರ್ಜರಿ ಆಗಿರುವ ಕಾರಣ ಗಾಯದ ಗುರುತು ಇಲ್ಲ ಎಂದು ತಿಳಿಸಿದೆ. ಆಗ ಅವರು ಕೂಡಲೇ ಆ ಸ್ಕ್ಯಾನಿಂಗ್ ರಿಪೋರ್ಟ್ ಅನ್ನು ಹಿಂದೆ ಪಡೆದು ಎಡ ಭಾಗದಲ್ಲಿ ಸ್ಟೋನ್ ಇದೆಯೆಂದು ಹೇಳಿ ಬೇರೆ ರಿಪೋರ್ಟ್ ಕೊಟ್ಟರು.ವೈದ್ಯೋ ನಾರಾಯಣೋ ಹರಿಃ. ವೈದ್ಯರನ್ನು ದೇವರೆಂದೇ ಕಾಣುವ ಸಂಸ್ಕೃತಿ ನಮ್ಮದು. ರೋಗ ರುಜಿನಗಳು ಕಾಡಿ ಜೀವನ್ಮರಣದ ಪ್ರಶ್ನೆ ಬಂದಾಗ ವೈದ್ಯನೇ ದೇವರಾಗುತ್ತಾನೆ. ನಮ್ಮ ದೇಶದಲ್ಲಿ ಅತ್ಯಂತ ಗೌರವವನ್ನು ಪಡೆದ ವೃತ್ತಿ ವೈದ್ಯರದು. 
ಇದೊಂದು ವಿಶಿಷ್ಟವಾದ ಪವಿತ್ರ ವೃತ್ತಿ. ಆದರೆ ಇಂದು ಈ ವೃತ್ತಿಯಲ್ಲಿ ಇಂಥ ಪಾವಿತ್ರ್ಯ ಉಳಿದಿದೆಯೇ ಎಂಬುದೊಂದು ಪ್ರಶ್ನೆ. ಇಂದು ಈ ಪವಿತ್ರ ವೃತ್ತಿಯಲ್ಲಿ ವ್ಯಾಪಾರೀಕರಣ ಹೆಚ್ಚುತ್ತಿದೆ ಎನ್ನುವುದು ಖೇದದ ವಿಚಾರ. ನೆಗಡಿ ಜ್ವರ ಬಂದು ವೈದ್ಯರ ಹತ್ತಿರ ಹೋದರೆ ರಕ್ತ ಪರೀಕ್ಷೆಯಿಂದ ಹಿಡಿದು ಎಕ್ಸ್‌ರೇ, ಸ್ಕ್ಯಾನಿಂಗ್ ಎಲ್ಲವನ್ನೂ ಮಾಡಿಸಿಕೊಂಡು ಬರಲು ಚೀಟಿ ಕೊಡುತ್ತಾರೆ! ಈ ಮೊದಲೇ ಬೇರೆ ಕಡೆ ರಕ್ತ ಪರೀಕ್ಷೆ ಮಾಡಿಸಿದ್ದರೂ ತಾವು ಹೇಳಿದಲ್ಲಿಯೇ ಇನ್ನೊಮ್ಮೆ ಮಾಡಿಸಿಕೊಂಡು ಬರಬೇಕು ಎಂದು ತಾಕೀತು ಮಾಡುತ್ತಾರೆ. 
ಈಗಂತೂ ದುಬಾರಿಯಾಗಿರುವ ಸಿಟಿ ಸ್ಕ್ಯಾನಿಂಗ್, ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸುವುದು ಸಾಮಾನ್ಯ ಆಗಿದೆ.ಗ್ರಹಚಾರವೆಂಬಂತೆ ಏನೋ ಕಾಲು ಜಾರಿ ಬಿದ್ದು ಕೈಗೋ ಕಾಲಿಗೋ ಏಟು ಮಾಡಿಕೊಂಡರಂತೂ ಮುಗಿಯಿತು! ಮೂರು ನಾಲ್ಕು ಬಾರಿ ಎಕ್ಸ್‌ರೇ ತೆಗೆಸುವುದು ಅನಿವಾರ್ಯ. ಮೂಳೆಯನ್ನು ಜೋಡಿಸುವ ಆಪರೇಷನ್ ಏನಾದರೂ ಆಗಬೇಕಿದ್ದರಂತೂ ಆಪರೇಷನ್‌ಗೆ ಮೊದಲು, ನಂತರ ಎಂದು 15-20 ಬಾರಿ ಎಕ್ಸ್‌ರೇತೆಗೆಸುವುದು ಸಾಮಾನ್ಯ. ಒಂದೇ ಭಾಗವು ಮೂರಕ್ಕಿಂತ ಹೆಚ್ಚು ಸಲ ಎಕ್ಸ್‌ರೇಗೆ ತೆರೆದುಕೊಂಡರೆ ಕ್ಯಾನ್ಸರ್ ಬರುವ ಸಾಧ್ಯತೆ ತುಂಬಾ ಹೆಚ್ಚು ಎಂದು ಗೊತ್ತಿದ್ದರೂ ಯಾಕೆ ಪ್ರತಿಯೊಂದಕ್ಕೂ ನಾನಾ ತರಹದ ಪರೀಕ್ಷೆ ಮಾಡಿಸುತ್ತಾರೆ? 
ಇದಕ್ಕೆ ಉತ್ತರ ತಿಳಿಯಬೇಕಾದರೆ ವೈದ್ಯಕೀಯ ಶಿಕ್ಷಣದ ಮೂಲವನ್ನು ಕೆದಕಬೇಕಾಗುತ್ತದೆ.ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದಲ್ಲಿ ಪ್ರತಿಭೆಗೆ ಅವಕಾಶವಿಲ್ಲದಾಗಿದೆ. ದೊಡ್ಡ ದೊಡ್ಡ ಕಾಲೇಜ್‌ಗಳನ್ನು ತೆರೆದ ಖಾಸಗಿ ಸಂಸ್ಥೆಗಳ ವ್ಯವಸ್ಥಾಪಕರು ಅದನ್ನು ವ್ಯಾಪಾರವನ್ನಾಗಿ ಮಾಡುತ್ತಿದ್ದಾರೆ. ಹಣದ ದುರಾಸೆ ಇಲ್ಲಿ ತಾಂಡವವಾಡುತ್ತಿದೆ. ಎಲ್ಲಿ ಬುದ್ಧಿಶಕ್ತಿಯ ಆವಶ್ಯಕತೆ ಇದೆಯೋ ಅಲ್ಲಿ ಹಣದ ಬಲದಿಂದ ಶ್ರೀಮಂತರ ಮಕ್ಕಳು ಮಾತ್ರ ವೈದ್ಯಕೀಯ ಕ್ಷೇತ್ರದಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಮುಖ್ಯ ಕ್ಷೇತ್ರಗಳಾದ ಜನರಲ್ ಮೆಡಿಸಿನ್, ಸರ್ಜರಿ,ಅರ್ಥೋಪಿಡಿಕ್ಸ್, ಪೀಡಿಯಾಟ್ರಿಕ್ಸ್, ಅನಸ್ತೇಶಿಯ, ರೇಡಿಯೋ ಡಯಾಗ್ನಾಸಿಸ್, ಇಎನ್‌ಟಿ, ಆಪ್ತಮಾಲಜಿ, ಓಬಿಜೆ ಮೊದಲಾದವುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಪ್ರತಿಭೆಗಳಿಗೆ ಅವಕಾಶ ಸಿಗುವುದೇ ಇಲ್ಲ. ಯಾಕೆಂದರೆ ಹೆಚ್ಚಿನ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಖಾಸಗಿ ವ್ಯಕ್ತಿಗಳ ಹಿಡಿತದಲ್ಲಿವೆ. ವೈದ್ಯಕೀಯ ಶಿಕ್ಷಣ ಸಂಸ್ಥೆ ತೆರೆಯುವುದು ಒಂದು ಲಾಭಕರ ಉದ್ಯಮವಾಗಿದ್ದು ಕೋಟಿಗಟ್ಟಲೆ ಹಣ ಸುರಿದು ಅಲ್ಲಲ್ಲಿ ನಾಯಿಕೊಡೆಗಳಂತೆ ಮೆಡಿಕಲ್ ಶಿಕ್ಷಣ ಕಾಲೇಜ್‌ಗಳು ತಲೆಯೆತ್ತಿವೆ. ಯಾವುದೇ ಸರಿಯಾದ ಸೌಲಭ್ಯ ಇಲ್ಲದಿದ್ದಾಗಲೂ ವಿದ್ಯಾರ್ಥಿಗಳಿಂದ ಕೋಟಿಗಟ್ಟಲೆ ದುಡ್ಡನ್ನು ವಸೂಲಿ ಮಾಡುತ್ತಿವೆ.ಕಾಮೆಡ್-ಕೆಯ ಖಾಸಗಿ ಕಾಲೇಜ್‌ಗಳು, 33 ಪ್ರತಿಶತ ಅಲ್ಪ ಸಂಖ್ಯಾತ ಕಾಲೇಜ್‌ಗಳು, 20 ಪ್ರತಿಶತ ಡೀಮ್ಡ್ ವಿ.ವಿ.ಗಳು 25 ಪ್ರತಿಶತ ಸೀಟುಗಳನ್ನು ಸರಕಾರಕ್ಕೆ ಬಿಟ್ಟುಕೊಡಬೇಕು ಎಂಬ ನಿಯಮವಿದೆ ಮತ್ತು ಉಳಿದ ಸೀಟ್‌ಗಳನ್ನು ಮೆರಿಟ್ ಮೇಲೆ ಕೊಡಬೇಕು ಎಂಬ ನಿಯಮವೂ ಇದೆ. ಇದನ್ನು ಈ ಕಾಲೇಜ್‌ಗಳು ಪಾಲಿಸುತ್ತವಾ? ಬೇಡಿಕೆ ಹೆಚ್ಚಿಲ್ಲದ ಪ್ಯಾರಾ ಮೆಡಿಕಲ್ ಸೀಟ್‌ಗಳನ್ನು ಕೊಟ್ಟು ಕಣ್ಣು ಒರೆಸುವ ನಾಟಕ ಮಾಡುತ್ತಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಾ ಇದೆ. 
ಒಂದೊಮ್ಮೆ ನ್ಯಾಯವಾಗಿ ನಿಯಮಾವಳಿಯಂತೆ ಸೀಟುಗಳನ್ನು ಬಿಟ್ಟುಕೊಟ್ಟರೂ ಕೂಡಾ ಶುದ್ಧ ಪ್ರತಿಭೆಗಳಿಗೆ ಬೆರಳೆಣಿಕೆಯಷ್ಟು ಸೀಟ್‌ಗಳು. ಖಾಸಗಿಯವರು ಸರಕಾರಕ್ಕೆ ಕೊಡುವ ಸೀಟುಗಳಲ್ಲಿ ಅರ್ಧಾಂಶ ಮೀಸಲಾತಿಗೆ ಹೋಗುತ್ತವೆ. ಅಂದರೆ 33-25 -20 ಪ್ರತಿಶತಗಳ ಅರ್ಧಾಂಶ ಎಂದರೆ 16-12-10 ಪ್ರತಿಶತ ಮಾತ್ರ ಜನರಲ್ ಮೆರಿಟ್‌ಗೆ ಸಿಗುತ್ತದೆ. ಅದರಲ್ಲಿಯೂ 30 ಪ್ರತಿಶತ ಗ್ರಾಮೀಣ ಹಾಗೂ ಸರಕಾರೀ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರಿಗೆ ಮೀಸಲಾಗುತ್ತದೆ. ಅಂದರೆ ಶೇ. 10, 8, 7 ಸೀಟುಗಳು ಮಾತ್ರ ಶುದ್ಧ ಪ್ರತಿಭೆಗಳಿಗೆ ಸಿಗುತ್ತವೆ. ಸರ್ಕಾರಿ ಕಾಲೇಜ್‌ಗಳಲ್ಲಿ 50 ಪ್ರತಿಶತ ಸೀಟ್‌ಗಳು ಜನರಲ್ ಮೆರಿಟ್‌ಗೆ ಸಿಗುತ್ತವೆ. 
ಈ ಬಾರಿ ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗೆ ಕುಳಿತ ಓರ್ವ ವಿದ್ಯಾರ್ಥಿಕೊಟ್ಟಿರುವ ಮಾಹಿತಿ ಪ್ರಕಾರ ಪ್ರತಿ ವರ್ಷ ಸುಮಾರು 5000 -6000 ವಿದ್ಯಾರ್ಥಿಗಳು ಉನ್ನತ ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಗೆ ಕಟ್ಟುತ್ತಾರೆ. ಇಲ್ಲಿ ಕ್ಲಿನಿಕಲ್ ಸಬ್ಜೆಕ್ಟ್ ಇರುವ ಒಟ್ಟು ಸೀಟ್‌ಗಳು ಸುಮಾರು 500-600. ಇದರಲ್ಲಿ ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ ಸಿಗುವ ಸೀಟ್‌ಗಳು ಸುಮಾರು  130-150 (ದಶಕದ  ಹಿಂದೆ ಒಟ್ಟು 432 ಸೀಟುಗಳು ಲಭ್ಯವಿದ್ದವು ಅದರಲ್ಲಿ ಜನರಲ್ ಮೆರಿಟ್‌ಗೆ ಲಭ್ಯವಿದ್ದದ್ದು 79 ಸೀಟುಗಳು). 
ಇದರಲ್ಲಿ 30 ಪ್ರತಿಶತ ಸೀಟುಗಳು ಸರ್ಕಾರಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಿದ ವೈದ್ಯರಿಗೆ ಮೀಸಲಾಗಿದ್ದು 90-100 ಸೀಟುಗಳು ಮಾತ್ರ ನಿಜವಾದ ಪ್ರತಿಭಾವಂತರಿಗೆ ಸಿಗುತ್ತಿವೆ. ಅಂದರೆ ಕೇವಲ 10-15 ಪ್ರತಿಶತದಷ್ಟು ಮಾತ್ರ. ಉಳಿದಂತೆ ಎಲ್ಲ ಸೀಟ್‌ಗಳು ದುಡ್ಡು ಇರುವವರ ಪಾಲಾಗುತ್ತಿವೆ. ಉಳಿದ ಸೀಟ್‌ಗಳನ್ನೂ ಕೂಡಾ ಮೆರಿಟ್ ಮೇಲೆ ತುಂಬಬೇಕು ಎಂಬ ನಿಯಮವಿದೆಯಾದರೂ ಅದು ಯಾವುದೂ ಜಾರಿಯಲ್ಲಿಲ್ಲ. ಆದರೆ ಇವನ್ನು ಕೂಡಾ ಅನೇಕ ಡೀಮ್ಡ್ ವಿ.ವಿ.ಗಳು ಹಾಗೂ ಅಲ್ಪ ಸಂಖ್ಯಾತ ಖಾಸಗಿ ಕಾಲೇಜ್‌ಗಳು ಪ್ರಸ್ತುತ ಸರಿಯಾಗಿ ಸೀಟ್ ಹಂಚಿಕೆ ಮಾಡುತ್ತಿಲ್ಲ ಎನ್ನುವುದು ನಿಜಕ್ಕೂ ಚಿಂತನೀಯ ವಿಚಾರ.
ಹೀಗೆ  70-75 ಪ್ರತಿಶತ ಮಂದಿ ಹಣದ ಬಲದಿಂದ ಕಲಿತವರೇ ಆಗಿರುತ್ತಾರೆ. ಇದರಿಂದಾಗಿಯೇ ಬಹುಶಃ ಆಪರೇಷನ್ ಆದಾಗ ಕತ್ತರಿ ರೋಗಿಯ ಹೊಟ್ಟೆಯೊಳಗೆ ಉಳಿದುಬಿಡುತ್ತದೆ! "ಆಪರೇಷನ್ ಸಕ್ಸಸ್ ಬಟ್ ಪೇಷಂಟ್ ಡೆಡ್‌" ಆಗುತ್ತಿರುವುದು!ಕಾಮೆಡ್-ಕೆ ಪ್ರಸ್ತುತ ಕ್ಲಿನಿಕಲ್ ವಿಷಯಗಳ ಸ್ನಾತಕೋತ್ತರ ಶಿಕ್ಷಣಕ್ಕೆ ಮೆರಿಟ್ ಸೀಟ್‌ಗಳಿಗೆ ವರ್ಷಕ್ಕೆ ಸುಮಾರು ಐದು ಲಕ್ಷ (5,01,600 ರು) ಶುಲ್ಕ ನಿಗದಿಪಡಿಸಿದೆ. ಮೂರು ವರ್ಷದ ಶಿಕ್ಷಣಕ್ಕೆ ವಿದ್ಯಾರ್ಥಿ ಹದಿನೈದು ಲಕ್ಷದಷ್ಟು ಶುಲ್ಕವೇ ನೀಡಬೇಕಾಗುತ್ತದೆ. 
ಇದಲ್ಲದೆ ಕಾಲೇಜ್‌ಗಳಲ್ಲಿ ಬೇರೆ ಶುಲ್ಕ, ಖರ್ಚುಗಳು ಇರುತ್ತವೆ. ಎಷ್ಟೇ ಕಡಿಮೆ ಲೆಕ್ಕ ಹಾಕಿದರೂ ಮೂರು ವರ್ಷದಲ್ಲಿ ಸುಮಾರು ಇಪ್ಪತ್ತೈದು ಲಕ್ಷ ಖರ್ಚು ಆಗಿಯೇ ಆಗುತ್ತದೆ.ಪ್ರತಿ ವರ್ಷ ಸರ್ಕಾರೀ ಕಾಲೇಜ್‌ಗಳಲ್ಲಿ ಸೀಟ್ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಕಾಮೆಡ್-ಕೆಯವರು ಸೀಟ್  ಆಯ್ಕೆ ಪ್ರಕ್ರಿಯೆ ನಡೆಸುತ್ತಾರೆ. ಸರ್ಕಾರಿ ಕಾಲೇಜ್‌ಗಳ ಹಾಗೂ ಕಾಮೆಡ್-ಕೆ, ಸರಕಾರಕ್ಕೆ ಬಿಟ್ಟು ಕೊಡುವ ಸೀಟ್‌ಗಳಿಗೆ ಶುಲ್ಕ ಕಡಿಮೆ ಇರುತ್ತದೆ ಮತ್ತು ನುರಿತ ಸಿಬ್ಬಂದಿ, ಗುಣಮಟ್ಟದ ಸೌಲಭ್ಯಗಳು ಇರುವ ಕೆಲವು ಸರ್ಕಾರಿ  ಕಾಲೇಜ್‌ಗಳಿಗೆ ತುಂಬಾ ಬೇಡಿಕೆ ಇದೆ. ಆದರೆ ಈ ಬಾರಿ ಕಾಮೆಡ್-ಕೆ ಸರ್ಕಾರಕ್ಕಿಂತ ಮೊದಲೇ ಕೌನ್ಸಿಲಿಂಗ್ ಮಾಡಿದೆ. ಇದರಿಂದಾಗಿ ಸರ್ಕಾರಿ ಕಾಲೇಜ್ ಸೀಟ್‌ಗಾಗಿ ಕಾಯದೆ ದುಬಾರಿ ಶುಲ್ಕ ನೀಡಿ ಕಾಮೆಡ್-ಕೆ ಸೀಟ್‌ಗಳನ್ನು  ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾಯಿತು. 
ಕಾಮೆಡ್-ಕೆ ಮೆರಿಟ್‌ಗೆ ಕೊಡುವ 42 ಪ್ರತಿಶತ ಸೀಟ್‌ಗಳಿಗೆ ಇಷ್ಟು ಶುಲ್ಕವಿದ್ದರೆ ಇನ್ನು ಉಳಿದ ಸೀಟ್‌ಗಳಿಗೆ ಎಷ್ಟು ಕೊಡಬೇಕಾಗಬಹುದು? ಈ ಬಗ್ಗೆ ಜನ ಸಾಮಾನ್ಯರಿಗೆ ಊಹಿಸುವುದಕ್ಕೂ ಕೂಡಾ ಕಷ್ಟ. ಉನ್ನತ ವೈದ್ಯಕೀಯ ಶಿಕ್ಷಣದ ಸೀಟ್‌ಗಳಿಗೆ ತೀರಾ ಸಾಮಾನ್ಯ ಹೆಸರುಳ್ಳ ಕಾಲೇಜ್‌ಗಳಿಗೆ ಒಂದು ಕೋಟಿಯಷ್ಟು ದುಡ್ಡು ಕೊಡಬೇಕು. ಇನ್ನು ಪ್ರಸಿದ್ಧ ಕಾಲೇಜ್‌ಗಳಲ್ಲಿ ಹೆಚ್ಚು ಬೇಡಿಕೆ ಇರುವ ವಿಭಾಗಗಳಲ್ಲಿ ಸೀಟ್ ಸಿಗಬೇಕಾದರೆ ಎರಡು ಮೂರು ಕೋಟಿಗಳಷ್ಟು ದುಡ್ಡು ಕೊಡಬೇಕಾಗುತ್ತದೆ, ಮೇಜಿನ ಅಡಿಯಿಂದ!ಹೀಗೆ ಕೋಟಿಗಟ್ಟಲೆ ದುಡ್ಡು ಖರ್ಚು ಮಾಡಿ ಕಲಿತು ಹೊರ ಬರುವ ಹೊತ್ತಿಗೆ ಇದು ಅಸಲು ಬಡ್ಡಿ ಸೇರಿ ಎಷ್ಟಾಗುವುದಿಲ್ಲ? ಇದನ್ನು ಇವರುಗಳು ಹಿಂದೆ ಪಡೆಯಬೇಡವೆ?! ಜೊತೆಗೆ ಘನತೆಗೆ ತಕ್ಕಂತೆ ಬಂಗಲೆ ಕಾರು ಇಟ್ಟುಕೊಂಡು ಬದುಕಬೇಡವೇ? ಇವರು ತಾವು ಕಲಿಯಲು ಖರ್ಚು ಮಾಡಿದ ಹಣವನ್ನು ಕೊನೆಯ ಪಕ್ಷ ಹತ್ತು ವರ್ಷಗಳಲ್ಲಿ ಹಿಂದೆ ಪಡೆಯಬೇಕಿದ್ದರೂ ವರ್ಷಕ್ಕೆ ಇಪ್ಪತ್ತು ಮೂವತ್ತು ಲಕ್ಷದಷ್ಟು ಗಳಿಸಬೇಕು ಜೊತೆಗೆ ಆಡಂಬರದ ಬದುಕಿಗೆ ದುಡ್ಡು ಬೇಕು. ಹಾಗಾಗಿ ಇವರು ದುಡ್ಡು ಗಳಿಸುವ ದಾರಿಯತ್ತ ಮಾತ್ರ ನೋಡುತ್ತಾರೆ. 
ಆದ್ದರಿಂದಲೇ ಸ್ವಲ್ಪ ಬಿದ್ದು ತಾಗಿಯೋ, ಶೀತ ನೆಗಡಿಯಾಗಿಯೋ ಅಥವಾ ಇನ್ನೇನೋ ಆಗಿ ಡಾಕ್ಟರ್ ಹತ್ರ ಹೋದರೆ ರಕ್ತ ಪರೀಕ್ಷೆಯಿಂದ ಹಿಡಿದು ಎಕ್ಸ್‌ರೇ,  ಸಿಟಿ ಸ್ಕ್ಯಾನಿಂಗ್, ಎಂಆರ್‌ಐ ಸ್ಕ್ಯಾನಿಂಗ್ ಇತ್ಯಾದಿ ಸಾವಿರ ಪರೀಕ್ಷೆಗಳನ್ನು ಮಾಡಿಸುತ್ತಾರೆ. ಅಲ್ಲಿಂದ ಸಾಕಷ್ಟು ಕಮಿಷನ್ ಬರುತ್ತದೆ. ಇದು ಉತ್ಪ್ರೇಕ್ಷೆಯ ಮಾತುಗಳಲ್ಲ. ಉನ್ನತ ವೈದ್ಯಕೀಯ ಶಿಕ್ಷಣದಲ್ಲಿ ಇಷ್ಟು ದೊಡ್ಡ  ಸಮಸ್ಯೆ ಇದ್ದರೂ ಕೂಡ  ನಾವೆಲ್ಲಾ ಅದು ಮೆಡಿಕಲ್ ಓದುವ ವಿದ್ಯಾರ್ಥಿಗಳ ಸಮಸ್ಯೆ ಮಾತ್ರ ಎಂದು ಸುಮ್ಮನಾಗುತ್ತೇವೆ. ಆದರೆ ಅದರ ದುಷ್ಪರಿಣಾಮ ನಮ್ಮ ಮೇಲೆ ಆಗುತ್ತದೆ ಎಂಬುದನ್ನು ನಾವು ಮರೆಯಬಾರದು. ಉನ್ನತ ಶಿಕ್ಷಣದ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕಲೇಬೇಕಾಗಿದೆ. ಈ ಬಗ್ಗೆ ಧ್ವನಿ ಎತ್ತಲೇಬೇಕಾದ ಅನಿವಾರ್ಯತೆ ಇದೆ. ಸರ್ಕಾರವೇ ಎಲ್ಲ ಉನ್ನತ ಶಿಕ್ಷಣ ಕಾಲೇಜ್‌ಗಳನ್ನು ನಡೆಸಿದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದೆನಿಸುತ್ತದೆ. ಆಗ ವೈದ್ಯರು ಯಮರಾಜನ ಸಹೋದರರಾಗದೆ ನಿಜಕ್ಕೂ ದೇವರಾಗಬಹುದು.-  ಡಾ. ಲಕ್ಷ್ಮೀ .ಜಿ. ಪ್ರಸಾದ, ಉಪನ್ಯಾಸಕರುsamagramahithi@gmail.com
 20 comments +e mail ge banda ayda comments 
ಈ ಲೇಖನಕ್ಕೆ ಕನ್ನಡ ಪ್ರಭ ಪತ್ರಿಕೆಯ ಅಂತರ್ಜಾಲದಲ್ಲಿ ಬಂದ ಪ್ರತಿಕ್ರಿಯೆಗಳು 

1

Thanks for your article in kp

Inbox
x

Dr. B.T.Rudresh <drbtrudresh@gmail.com>

3 May


to me
Thanks again for your lovely article in k p today.medicine is no more in service sector.totally commercial and in the hands of multinationals. Colleges are producing substandard doctors.universities are abetting the rape.doctors should have conscious ness not to practice prostitution which is prevalent allover.who has to bell the cat.
With regards
Dr.b t rudresh.



  • Corporate exploitation..Hospitals owned by business houses do nothing but this as they have a huge investment , a fat salary packet 4 d personnel. What more can one expect?D very concept of family doctor is dead & burried long ago along with the generation of such physicians...a totally extinct breed they were :(

    Avatar



    ಸತ್ಯದ ತಲೆಯ ಮೇಲೆ ಹೊಡೆದಂತಹ ಪರಿಶುದ್ದ ಲೇಖನ. ಇದು ಇಂದು ಎಲ್ಲೆಡೆಯಲ್ಲಿಯೂ ಸಾರಾಸಗಟಾಗಿ ರಾಜಾರೋಷದಿಂದ ನೆಡೆಯುತ್ತಿರುವ ನೈಜ ಸಂಗತಿ.
    ಉಡುಪಿಯಲ್ಲಿನ ಒಂದು ಹೆಸರಾಂತ ಖಾಸಗಿ ಆಸ್ಪತ್ರೆಯಲ್ಲಿ ರೋಗಿಯೊಬ್ಬ ತಪಾಸಣೆಗಾಗಿ ಹೋದನೆಂದಾದರೆ ಆತನ ಕಿಸೆಯಲ್ಲಿದ್ದ ಹಣವೆಲ್ಲಾ ಖಾಲಿಯಾಗಿ ಮನೆಗೆ ಹಿಂತಿರುಗಲು ಬಸ್ಸಿನ ಟಿಕೆಟ್ ಗಾಗಿಯೂ ಕಾಸು ಉಳಿದಿರುವುದಿಲ್ಲ...
    ಅದಲ್ಲದೇ ಒಂದು ಖಾಹಿಲೆಯ ಪರೀಕ್ಷೆಗಾಗಿ ಹೋದವನಿಗೆ ಕಡಿಮೆಯೆಂದರೂ ಹತ್ತು ಔಷಧಿಗಳನ್ನು ತೆಗೆದುಕೊಳ್ಳುವಂತೆ ಡಾಕ್ಟರ್ ನಿಂದ ಚೀಟಿ ದೊರೆಯುತ್ತದೆ...ನಮ್ಮ ಫಾರ್ಮಸಿಯಲ್ಲಿಯೇ ತೆಗೆದುಕೊಳ್ಳಿರಿ ಎಂಬ ಉಚಿತ ಸಲಹೆ ಬೇರೆ! ಆ ಚೀಟಿ ಕೊಂಡು ಹೋಗಿ ಆ ಫಾರ್ಮಸಿಯಲ್ಲಿ ತೋರಿಸಿದರೆ ಈ ಔಷಧಿಗಳಿಗೆ ಸಾವಿರಕ್ಕೂ ಜಾಸ್ತಿಯಾಗುತ್ತದೆ ಎಂಬ ಉತ್ತರ. ಡಾಕ್ಟರ್ ಬರೆದಿದ್ದಾರೆ... ತೆಗೆದುಕೊಳ್ಳಲೇ ಬೇಕು ಎಂಬ ಒತ್ತಡ ಅವರಿಂದ... ಹಣವಿಲ್ಲದಿದ್ದವರು ಮನೆಗೆ ಹೋಗಿ ಸಾಲಮಾಡಿಯಾದರೂ ಔಷಧಿ ಪಡೆದು ಕೊಂಡು ಹೋಗಿ ಅಷ್ಟೆಲ್ಲ
    ಔಷಧಿ ತಿಂದು ಅದರ ಪರಿಣಾಮ ಬೇರೊಂದು ಕಾಹಿಲೆಗೆ ಆಮಂತ್ರಣ. ಒಟ್ಟಾರೆ ನಿಜವಾಗಿಯೂ ವೈಧ್ಯೋ ನಾರಾಯಣ ಹರಿ ಎಂಬ ಉಕ್ತಿ ಇಂದು ತದ್ವಿರುದ್ದವಾಗಿದೆ. ನೈಜ ಸ್ಥಿತಿಯ ಲೇಖವನ್ನು ಓದುಗರಿಗೆ ನೀಡಿದ ಲೇಖಕಿ ಡಾ. ಲಕ್ಷ್ಮಿ ಜಿ ಪ್ರಸಾದ್ ರವರಿಗೆ ಅಭಿನಂದನೆಗಳು.
    .



  • Avatar



    ಶಿಕ್ಷಣದ ವ್ಯಾಪಾರೀಕರಣ ಕ್ಕೆ ಕಡಿವಾಣ ಹಾಕಲೇ ಬೇಕು ,ಈಗಾಗಲೇ ದುಡ್ಡು ಬಲದಿಂದ ಓದಿದ ಅನರ್ಹರೆ ಎಲ್ಲೆಡೆ ಮೀಸೆತಿರುವುತ್ತಿದ್ದಾರೆ .ಇದು ಇನ್ನು ಮುಂದುವರಿದರೆ ಪ್ರತಿಭೆಗೆ ಯಾವುದೇ ಮನ್ನಣೆ ಇಲ್ಲದಂತೆ ಆಗುತ್ತದೆ .ವೈದ್ಯಕೀಯ ಶಿಕ್ಷಣದಲ್ಲಿ ಅಂತೂ ಪ್ರತಿಭೆ ಮಾತ್ರ ಮಾನದಂಡವಾಗ ಬೇಕು ಇಲ್ಲವಾದರೆ ರೋಗಿಗಳ ಕಥೆ ಎಂಥ ಆದೀತು ?!




    Public should fight against this , otherwise government will support corrupt people only
  • Avatar



    ಉತ್ತಮ ಲೇಖನ ,ಈಗ ಎಷ್ಟೇ ಪ್ರತಿಭೆ ಇದ್ದರೂ ವರಿಗೆ ಉನ್ನತ ಶಿಕ್ಷಣ ಸಿಗಲು ಅಸಾಧ್ಯ !ಕೋಟಿ ಗಟ್ಟಲೆ ಸುರಿದು ಸೀಟನ್ನು ಗಿಟ್ಟಿಸಿಕೊಂಡವರು ಅದನ್ನು ಹಿಂದೆ ಪಡೆಯಲು ನೋಡುವರೇ ಹೊರತು ರೋಗಿಯ ಹಿತವನ್ನಲ್ಲ .ಬೇವನ್ನೇ ಬಿತ್ತಿ ಮಾವು ನಿರೀಕ್ಷಿಸಲು ಸಾಧ್ಯವೇ ?ಮೊದಲಿಗೆ ಶಿಕ್ಷಣದಲ್ಲಿನ ವ್ಯಾಪರೀಕರಣವನ್ನು ತಡೆಯಬೇಕು ಕೇವಲ ಮೆಡಿಕಲ್ ಮಾತ್ರವಲ್ಲ ಇತರ ಶಿಕ್ಷಣಗಳಲ್ಲಿ ಕೂಡಾ ಕುರುಡು ಕಾಂಚಾಣ ಅಟ್ಟಹಾಸ ಮಾಡುತ್ತಿದೆ ,ಈ ಬಗ್ಗೆ ಕೂಡಾ ಒಂದು ಲೇಖನ ಬರೆಯಿರಿ ಮೇಡ




  • I read the article now @ Marsielle, France and see main three issues here.
    1. Exploitation of patients by some hospitals/ doctors by wrong advise of investigations, procedures.
    2. Even after 66 years of Independence, government is unable to provide good health care system for all citizens of the country.
    3. Reforms required in higher education in medicine
    We have some World class medical facilities like Narayana Hrudayala, where treatment is available at affordable costs compared to international costs and some people from abroad also come here for treatment.
    Given the investment to set up such facilities, if we are still able to provide treatment at affordable costs and Government's Yashashwini health care program can help poor people take such treatment, there is need for looking at such model for other hospitals in the state as well. Use of technology like Telemedicine needs to be extensively encouraged.
    There can be complaints on the failures, inefficiency, politics and corruption at Government health care system, but the success stories like providing Emergency Ambulance services in the state should encourage looking at such innovative schemes for providing healthcare to even the remotest places of the state.
    Field of medicine is not just education and higher education. There are many good doctors in the government and private institutions and they need to be identified and encouraged. Research needs to be encouraged on larger scale. When medical service is expected on 24 hours basis, how safe are the doctors and medical staff at work? The mob attacks led by local politicians or relatives of patients are reported in media.
    Reforms in medical education are welcome. But government allowing universities and medical colleges to mushroom is not a viable solution. It is not quantity but quality of education that must be insisted on.
    see more



  • Avatar



    An eye opening article, every one must read







  • ನಾಚಿಕೆಯಾಗಬೇಕು ನಮ್ಮನ್ನಾಳುತ್ತಿರುವ ರಾಜಕಾರಣಿಗಳಿಗೆ! ಇವರಿಗೆ ಒದ್ದು ಬುದ್ಧಿ ಕಲಿಸದ ಹೊರತು ಇದು ಸರಿಯಾಗದು. ಶಿಕ್ಷಣರಂಗದ ವ್ಯಾಪಾರೀಕರಣವೇ ಈ ಎಲ್ಲ ಅವ್ಯವಸ್ಥೆಗೆ ಮೂಲ ಕಾರಣವಾಗಿದೆ. ಪಟ್ಟಭದ್ರರ ಹಿಡಿತದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಪ್ರತಿಭಾವಂತರಿಗೆ, ಪ್ರತಿಭೆಯ ಆಧಾರದಲ್ಲಿ ಮಾತ್ರ ಉನ್ನತ ಶಿಕ್ಷಣಕ್ಕೆ ಅವಕಾಶ ಕೊಡಬೇಕು. ಹಾಗಾದಾಗ ಮಾತ್ರ "ವೈದ್ಯೋ ನಾರಾಯಣೋ ಹರಿಃ" ಅನ್ನುವುದು ಸತ್ಯವಾಗಬಹುದು, ಇಲ್ಲದಿದ್ದಲ್ಲಿ "ವೈದ್ಯೋ ಯಮದೂತ ಹರಿಯೇ" ಅನ್ನಬೇಕಾಗುತ್ತದೆ!!!!






  • ನಾನು ನಿಟ್ಟೆ ಯೂನಿವರ್ಸಿಟಿ ಯಾ k .s . ಮೆಡಿಕಲ್ ಅಕಾಡೆಮಿ ಯಲ್ಲಿ ಕೆಲಸ ಮಾದುಥಿದ್ಧೆ , ಅಲ್ಲಿ ನಡಿಯುತ್ತ ಇದ್ಧ ಅವ್ಯವಹಾರವನ್ನು ಪ್ರಶ್ನಿಸಿದಕ್ಕೆ ನನ್ನನ್ನು ಸಕಾರಣ ನೀಡದೆ ವಜಾ ಮಾಡಿರುತ್ತಾರೆ. ಇದು ನಮ್ಮ ವ್ಯವಸ್ಥೆಯ ದುರವಸ್ಥೆ. ನಾನು ಈ ಸಂಸ್ಥೆಯ ಅವ್ಯವಹಾರ ಬಗ್ಗೆ ಹೋರಾಡುತ ಇದ್ದೇನೆ. ಎಲ್ಲ ಸಾಮಾನ್ಯ ಜನರು ಇಂಥ ಸಂಸ್ಥೆಗಳ ವಿರುದ್ಧ ಹೋರಾಡಿದರೆ ,ಈ ಸಂಸ್ಥೆಗಳನ್ನು ಸರಿ ದಾರಿಗೆ ತರಲು ಸಾಧ್ಯ . ಜನ ಆಂದೋಲನಧ ಅವಶ್ಯಕತೆ ಇದೆ . ಜನ ಎಚ್ಚೆತ್ತು ಕೊಳ್ಳ ಬೇಕಾಗಿದೆ .


    Avatar



    ಓದಿದೆ. ಅಧಿಕಾರದಲ್ಲಿರುವ ರಾಜಕಾರಣಿಗಳೇ ಇಂತಹ ಶೈಕ್ಷಣಿಕ ಸಂಸ್ಥೆಗಳ ಒಡೆಯರು. ಇದೊಂದು ಮಾಫಿಯಾ! ಇನ್ನು ಇವರಿಂದ ಬದಲಾವಣೆ ನಿರೀಕ್ಷಿಸಲಾದೀತೇ? ಕ್ರಾಂತಿಯಾಗಬೇಕು.
  • Avatar



    ಕಣ್ತೆರೆಸುವ ಲೇಖನ ಎಲ್ಲರೂ ಓದಬೇಕಾದದ್ದು ಇದು ಕೇವಲ ವೈದ್ಯಕೀಯ ವಿದ್ಯಾರ್ಥಿಗಳ ಸಮಸ್ಯೆಯಲ್ಲ ಎಂಬುದು ನೆನಪಿಡಬೇಕಾದ ಸಾಲು ಇಂಥ ಬರಹಗಳು ಸದಾ ಇರಲಿ


  • Avatar



    Felt very bad for this..! God has to give me some financial strength for me to start one hospital !






    • I feel, common people should join together and open public medical colleges , where everything should be transparent. I think this will be possible if everyone joins hand together.






      • Such a thing is called Government. But, now it is not maintained properly...







        • People should wake up and conduct huge protest against government , then only government will act !!



      • Avatar



        yes I agree with you



        22 savinaya kumar <savinayadynamic@yahoo.co.in>

        3 May


        to me
        Dear Laxmi G  Prasad 
                                         I read about your article regarding illegal practice in medical field , good one. You have explained it in a such a way that everyone can understand. keep it up. I am posting my press meet link here,I was terminated from job by Nitte University questioning their corrupt system. I have filed the writ petition against Nitte university, waiting for hearing . Your article inspired me a lot.

        Thanks and regards 
        Savinaya 

         

         

        about article published in kannadaprabha today

         

        23 Arun Kantanavar <arunkantanavar@gmail.com>

        3 May


        to me
        To
        Dr Laxmi G Prasad
        Respected madam, I have read your article of the present issue of medical sciences.. I have experienced each and every word of your article. Thankyou for writing such an article on the burning current affairs.
         My son kiran a kantanavar  is a doctor passed MBBS in aims bellur  two  years back. He could not get seat for PG during last year. He is struggling to get the same this year.( in OC i. e. unreserved quota)  and expecting a seat in para clinical subject. my self being a sub  post master could not afford for a payment seat.  any how MBBS deree itself is an acheivement. as i feel.
        I wish you and request you to write and enlight more and more on such issues.
        yours faithfully.
        arun v kantanavar 
        sub post master mukram gunj post office raichur 584102
        h no 7--5-165  jawahar  nagar raichur 584103


        24

        Duddugalisuvamaargadalli rogiyakaalajiyelli. Samvedane.

        Inbox
        x

        Venkata Giriappa <pavan199983@gmail.com>

        3 May


        to me
        Yes Madam the Truth is bitter for both the doctor and the patient. You given the travails of a doctor nicely. The drug part is still horrible and its side effects equally grave. Like england everything can be govt. But money is the criteria. Mps mlas spend huge money for the wasteful junkets but don't like to save it and use for colleges or hospitals. Dishonest rule results in such bloomers. Thanks.






        25 

        Santosh Bukkashetti <santoshb.sdm@gmail.com>

        3 May


        to me
          
        Translate message
        Turn off for: Kannada

        Hi Sir, 

        I read your below article in ಸಂವೇದನೆ column of Kannada Prabha,

        ದುಡ್ಡು ಗಳಿಸುವ ಮಾರ್ಗದಲ್ಲಿ ರೋಗಿಯ ಕಾಳಜಿಯೆಲ್ಲಿ?


        Good article sir. Thanks for writing it. 


        --

        Regards,
        Santosh Bukkashetti 

        ತಮ್ಮ ಅಭಿಪ್ರಾಯ ತಿಳಿಸಿದ ಎಲ್ಲರಿಗು ಅಭಿನಂದನೆಗಳು