Monday 6 November 2017

Malesaavira Daiva © Dr Lakshmi G Prasad

Tulunadu tales: The story of Malesaavira daiva




Most deities in Tulu folk tales have a human origin, and Malesaavira Daiva, also known as Antayya Baidyya, is no different

‌Dr Lakshmi G Prasad


In Tulunadu's folk tales, most deities are basically humans. People who suffered unnatural death, blessings or curses of deities are later transformed and worshipped as deities. Some examples are Koti-Chennaya, Mugerlu, Ali Bhuta, Mukambi Guliga - all of these deities were previously humans.

Same is the case with Anta Baidya/Antayya Baidyya, who is worshipped as Male Chamundi, Male Jumadi and Malesaavira Daiva.

According to Bannanje Baabu Ameen, who has researched on the subject, there are two stories on the creation of this daiva.




A man named Antha Baidya was a big devotee of Lord Shiva. One day, when he had climbed a tree to remove the Amruth (Kallu), he falls and breaks his legs and arms; he also loses his eyes. Later, when he asks the Lord, the Lord says, "In future, you will take a human form and go to earth. You will be worshipped as Malesaavira, and when you are being worshipped, let 1000 deities too get worshipped." So Anta Baidya turns into Malesavira Daiva.




The is a slight difference in the second tale.




In the south, there is a place called Belaadi, where a black magician named Antayya Baidya lived.

One day, Baidya goes to Shirva Nudibettu Chavadi and asks land on lease. Baidya is given land on donation basis. According to the arrangement, he has to give percentage of crops grown to the land owner. The land given is located in a place called Kattangeri.

Baidya honoured the arrangement. But once his crop failed and so he couldn't pay. With the help of black magic, he bundles water and sends it as donation to the land owner. The landlord complains this to Keenyadka Jumaadi deity, who makes Baidya disappear.

"A place near Kattangeri is said to be where his funeral took place. In the northern part, he is worshipped as Male Sara (MaleSaavira) and in southern parts he is worshipped as Male Jumaadi. In the eastern part, he is worshipped as Antya Baidya," says Bannanje Babu Ameen.

He is also worshipped as Male Chamundi.


Translation by Aravinda Bhat



Friday 20 October 2017

ಮಾಹಿತಿ ಇರುವ 415 ದೈವಗಳು ©ಡಾ.ಲಕ್ಷ್ಮೀ ಜಿ ಪ್ರಸಾದ

2013 ರಲ್ಲಿ ನನ್ನ ಮದಲ ಪಿಎಚ್ ಡಿ ಪ್ರಬಂಧ ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ - ಒಂದು ವಿಶ್ಲೇಷಣಾತ್ಮಕ ಅಧ್ಯಯನ ಕೃತಿಯ ಪ್ರಕಟಣೆಯ ಸಂದರ್ಭದಲ್ಲಿ  ರೆವೆರೆಂಡ್ ಮ್ಯಾನರ್ ಹಾದಿಯಲ್ಲಿ ಸಾವಿರದೊಂದು ಗುರಿಯೆಡೆಗೆ ಎಂಬ ಮುನ್ನುಡಿ ಯನ್ನು ಬರೆದುಕೊಟ್ಟ ಡಾ.ವಾಮನ ನಂದಾವರ ಅವರು ಸಾವಿರದೊಂದು ಗುರಿಯೆಡೆಗೆ ಸರಣಿ ಆರಂಭಿಸಲು ಬೆಂಬಲ ನೀಡಿದರು.ನನ್ನ ಮೊದಲ‌ಪಿಎಚ್ ಡಿ ಪ್ರಬಂಧ ನಾಗಾರಾಧನೆ ಮತ್ತು ಕಂಬಳಕ್ಕೆ ಸಂಬಂಧಿಸಿದ್ದಾಗಿದೆ.ಎರಡನೆಯ ಪಿಎಚ್ ಡಿ ಪ್ರಬಂಧ ಪಾಡ್ದನ ಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ.
ಈ ಎರಡು ಮಹಾ ಪ್ರಬಂಧಗಳನ್ನು ಸಿದ್ಧ ಪಡಿಸುವಾಗ ನಾನು ವ್ಯಾಪಕ‌ಕ್ಷೇತ್ರ ಕಾರ್ಯ ಮಾಡಬೇಕಾಯಿತು. ಆಗ ನನ್ನ ಅನೇಕ ಈ ತನಕ ಹೆಸರು ಕೂಡ ದಾಖಲಾಗ ದೈವಗಳ ಕುರಿತು ಮಾಹಿತಿ ಸಿಕ್ಕವು.ಆದರೆ ನನ್ನ  ಎರಡೂ ಪಿಎಚ್ ಡಿ‌ ಪ್ರಬಂಧದ ವಿಚಾರಗಳು ಭೂತಾರಾಧನೆಗೆ ನೇರವಾಗಿ ಸಂಬಂಧಿಸಿದ್ದಲ್ಲ .ಹಾಗಾಗಿ ಈ ಅಪರೂಪದ ದೈವಗಳ ಬಗ್ಗೆ ಅಲ್ಲಿ ಅಧ್ಯಯನ ಮಾಡಲು ಅವಕಾಶವಿರಲಿಲ್ಲ ಹಾಗಾಗಿ ನಾನು  ಪಿಎಚ್ ಡಿ‌ಪ  ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಗಮನ ಹರಿಸಿದೆ.
ನಂತರದ ದಿನಗಳಲ್ಲಿ ಆಗ ಸಿಕ್ಕ ದೈವಗಳಲ್ಲಿ ಎಂಬತ್ತು ದೈವಗಳ ಬಗ್ಗೆ ಬರೆದು ತುಳುನಾಡಿನ ಅಪೂರ್ವ ಭೂತಗಳು ಕೃತಿ ಪ್ರಕಟಿಸಿದೆ.ನನಗೆ ಇಂತಹ ಹೆಸರು ಕೂಡ ದಾಖಲಾಗದ ದೈವಗಳ ಮಾಹಿತಿ ಸಂಗ್ರಹ ಹವ್ಯಾಸ ಇರುವುದನ್ನು ತಿಳಿದ ಡಾ.ವಾಮನ ನಂದಾವರ ಅವರು ಒಂದು ಸರಣಿಯಾಗಿ ಬರೆಯಲು ಪ್ರೇರಣೆ ನೀಡಿದರು.
ಅದಕ್ಕೂ ಮೊದಲೇ ನನ್ನ ತುಂಡು ಭೂತಗಳು ಒಂದು ಅಧ್ಯಯನ ಕೃತಿ ಗೆ ಮುನ್ನುಡಿ ಬರೆದು‌ಕೊಟ್ಟ ಡಾ.ಅಮೃತ ಸೋಮೇಶ್ವರರು ಇಂತಹ ಅಪರೂಪದ ದೈವಗಳ ಮಾಹಿತಿ ಸಂಗ್ರಹ ಅತ್ಯಗತ್ಯವಾಗಿದೆ.ಪಾಡ್ದನ ಗಳು ಐತಿಹ್ಯಗಳು ಕಳೆದು ಹೋಗುತ್ತಿವೆ.ಈ ನಿಟ್ಟಿನಲ್ಲಿ ಇಂತಹ ದೈವಗಳ ಮಾಹಿತಿ ಸಂಗ್ರಹ ಒಳ್ಳೆಯ ಹವ್ಯಾಸ ,ಮುಂದುವರಿಸಿ ಎಂದು ಹೇಳಿದ್ದರು.
ಹಾಗಾಗಿ
 ಸುಮಾರು ಮೂರು ವರ್ಷ ಎಂಟು ತಿಂಗಳ ಮೊದಲು ನಾನು ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು ಸರಣಿ ಆರಂಭಿಸಿದೆ.ತುಳು ವಿದ್ವಾಂಸರ ಕೃತಿ ಗಳನ್ನು ಒಟ್ಟು ಹಾಕಿ ಹುಡುಕಿದಾಗ ಸುಮಾರು ನೂರು ನೂರೈವತ್ತು ದೈವಗಳ ಮಾಹಿತಿ ಸಿಕ್ಕವು.ನನ್ನ ಕ್ಷೇತ್ರ ಕಾರ್ಯದಲ್ಲಿ ಸುಮಾರು ನೂರ ಐವತ್ತು ನೂರೆಂಬತ್ತು ದೈವಗಳ ಮಾಹಿತಿ ಸಿಕ್ಕಿದ್ದವು.ಹಾಗಾಗಿ ಇನ್ನೂರೈವತ್ತು ದೈವಗಳ ಬಗ್ಗೆ ಬರೆಯಲು ಸಾಧ್ಯವಾಗಬಹುದು ಎಂದು ಭಾವಿಸಿದ್ದೆ ಬರೆಯುತ್ತಾ ಹೋದಂತೆಲ್ಲ  ಅನೇಕ ದೈವಗಳ ಮಾಹಿತಿ ಸಿಕ್ಕವು.ಈಗ ಒಟ್ಟು ನಾನ್ನೂರ ಹದಿನೈದು ದೈವಗಳ ಬಗ್ಗೆ ಬ್ಲಾಗ್ ನಲ್ಲಿ ಬರೆದೆ. ಈ ಕಥಾನಕಗಳು ಕಾಲ್ಪನಿಕ ಕಥೆಗಳಲ್ಲ ,ಪಾಡ್ದನ ಐತಿಹ್ಯ ಆಧಾರಿತ ಲೇಖನಗಳಿವು.ವಿಶ್ಲೇಷಣೆ ಮಾತ್ರ ನನ್ನದು ಇನ್ನೂ ಐವತ್ತು ಅರುವತ್ತು ದೈವಗಳ ಬಗ್ಗೆ ಬರೆಯಲು ಬಾಕಿ ಇದೆ ಸಮಯ ಸಿಕ್ಕಾಗ ಬರೆಯುತ್ತೇನೆ .ಕಾಪಿ ಮಾಡುವ ಕೃತಿಚೋರರ ಹಾವಳಿಯಿಂದಾಗಿ ಹೆಚ್ಚಿನ ಬರಹಗಳನ್ನು ಹಿಂದೆ ತೆಗೆದಿರುವೆ.ಈ ದೈವಗಳ ಕುರಿತಾಗಿ ಮಾಹಿತಿಗಾಗಿ ಆಸಕ್ತರು ಸಂಪರ್ಕಿಸಿದರೆ ನನ್ನಲ್ಲಿ ಇರುವ ಮಾಹಿತಿಯನ್ನು ಕೊಡುತ್ತೇನೆ. ಈ ಮಾಹಿತಿಗಳು ಸಮಗ್ರವಲ್ಲ,ನನಗೆ ಸಿಕ್ಕಷ್ಟು ಮಾಹಿತಿ ಸಂಗ್ರಹಿಸಿ ಬರೆದಿದ್ದೇನೆ.ಒಟ್ಟು ಒಂದು ಸಾವಿರದ ಐದುನೂರ ಹನ್ನೆರಡು ದೈವಗಳ ಹೆಸರುಗಳು ಸಿಕ್ಕಿವೆ.ನನ್ನ ಸಂಗ್ರಹದ   ಸಾವಿರದ ನಾನ್ನೂರ ಮೂವತ್ತೈದು ಹೆಸರುಗಳು ಅಣಿ ಅರದಲ ಸಿರಿ ಸಿಂಗಾರ ಗ್ರಂಥದಲ್ಲಿ ಪ್ರಕಟವಾಗಿವೆ .ಆಸಕ್ತರು ನೋಡಬಹುದು.ಮಾಹಿತಿ ಸಂಗ್ರಹದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು
http://laxmipras.blogspot.in/2017/10/415.html?m=1

ನನ್ನಲ್ಲಿ ಮಾಹಿತಿ ಲಭ್ಯವಿರುವ 415 ದೈವಗಳು ©ಡಾ.ಲಕ್ಷ್ಮೀ ಜಿ ಪ್ರಸಾದ
1 ಅಕ್ಕಚ್ಚು
2 ಅಕ್ಕ ಬೋಳಾರಿಗೆ
3 ಅಕ್ಕೆರಸು
4 ಅಕ್ಕೆರಸು ಪೂನ್ಜೆದಿ
5 ಅಕ್ಕೆರ್ಲು
6 ಅಂಬೆರ್ಲು
7 ಅಗ್ನಿ  ಚಾಮುಂಡಿ ಗುಳಿಗ
8 ಅಚ್ಚು ಬಂಗೇತಿ
9 ಅಜ್ಜ ಬೊಳಯ
10 ಅಜ್ಜಿ ಕುಲೆ
11ಅಜ್ಜಿ ಭೂತ
12ಅಜ್ಜಿ ಬೆರೆಂತೊಲು
13ಅಜ್ಜೆರ್
14ಅಜ್ಜೆರ್ ಭಟ್ರು
15ಅಟ್ಟೋಡಾಯೆ
16ಅಡ್ಯಲಾಯ
17 ಅಡ್ಯಂತಾಯ
18ಅಡಿಮಣಿತ್ತಾಯ
19 ಅಡ್ದೊಲ್ತಾಯ,
20 ದೈವ ಸಾದಿಗೆ ,
21ದೈವನ ಮುಟ್ಟುನಾಯೆ
22ಒಲಿಪ್ರಾಂಡಿ
23ಅಣ್ಣಪ್ಪ
24ಅಣ್ಣೋಡಿ ಕುಮಾರ
25ಕಿನ್ಯಂಬು
 26ಅತ್ತಾವರ ದೆಯ್ಯೊಂಗುಳು
 27ಅಮಣ ಬನ್ನಾಯ
28ಅಮೆತೋಡು ಆನೆ ಬೈದ್ಯ
29 ಅಬ್ಬಗೆ
30 ದಾರಗೆ
31ಸೊನ್ನೆ
32ಗಿಂಡೆ
33ಸಿರಿ
34ಕುಮಾರ
35ಸಾಮು
36ಅಬ್ಬೆ ಜಲಾಯ
37 ಅಯ್ಯೆರ್ ಬಂಟೆರ್
38ಅರಬ್ ಭೂತ
39ಬ್ರಾಂದಿ ಭೂತ
40 ಅರಸಂಕಲ
41 ಅರಮನೆ ಜಟ್ಟಿಗ
42ನೇತ್ರಾಣಿ ಜಟ್ಟಿಗ
43ಹೊಗೆವಡ್ಡಿ ಜಟ್ಟಿಗ
44 ಅಸುರಾಳನ್
45 ಅಂಕೆ
46 ಉಮ್ಮಯ
47 ಅಂಗಾರ ಬಾಕುಡ
48ಅಂತ ಬೈದ್ಯ
49ಆಚಾರಿ ಭೂತ
50ಆಟಕಾರ್ತಿ
 51ಆಲಿ ಭೂತ
52ಇಷ್ಟ ಜಾವದೆ
53ಇಲ್ಲತ್ತಮ್ಮ ಕುಮಾರಿ
54ಉಗ್ಗೆದಲ್ತಾಯ
55 ಉಮ್ಮಚ್ಚಿ/ ಐಸಾಬಿ
56ಉಮ್ಮಲ್ತಿ
57ಉಮ್ಮು ಬೋವ
58 ಉಮ್ಮಣ ಬೋವ
58ಎಲ್ಲು ಬೋವ
60 ಎಲ್ಯಣ ಬೋವ
61ಉರವ
62ಎರು ಬಂಟ
63ಎಂಬ್ರಾನ್ ದೇವ
64ಓಣಂ ಪೊಟ್ಟನ್
65ಉಳ್ಳಾಲ್ತಿ
66ಉಳ್ಳಾಯ
67 ಉರವ
68 ಎರುಬಂಟ
69ಉರಿ ಮರ್ಲ
70 ಎಲ್ಯಕ್ಕ
71 ಮಲ್ಲಕ್ಕ
72ಎರು
73 ಶೆಟ್ಟಿ
74ಎಲ್ಯಕ್ಕೇರ್
75 ನೇಲ್ಯಕ್ಕೆರ್
76ಎಲ್ಯನ್ನೇರ್
77ನೇಲ್ಯನ್ನೆರ್
78ಎರಿಯಜ್ಜ
79ಒಕ್ಕು ಬಲ್ಲಾಳ
80ಒರು ಬಾಣಿಯೆತ್ತಿ
81 ನೆಲ್ಲೂರಾಯ
82 ಓಟೆಚಾರಾಯ
83 ಓಣಂ ಪೊಟ್ಟನ್
84ಓಪೆತ್ತಿ ಮದಿಮಾಲ್
85 ಕಚ್ಚೂರ ಮಾಲ್ಡಿ
86 ಕೋಟೆದ ಬಬ್ಬು
87 ಕಚ್ಚೆ ಭಟ್ಟ
88 ಕಟದ
89 ಕಾನದ
90 ಕಟ್ಟು ಎಡ್ತುನ್ ಕುಟ್ಟಿ
©ಡಾ.ಲಕ್ಷ್ಮೀ ಜಿ ಪ್ರಸಾದ
91ಕಟ್ಟೆದಲ್ತಾಯ
92 ಕಡವಿನ‌ ಕುಂಞ
93 ಕಡಂಗಲ್ಲಾಯ
94ಮದಂಗಲ್ಲಾಯ
94ಕಡಂಬಳಿತ್ತಾಯ
96ಕಣ್ಣಗಿ ಭಗವತಿ
97ಕತ್ತಲೆ ಬೊಮ್ಮಯ
98 ಕನ್ನಡ ಬೀರ
99 ಕನ್ನಡ ಭೂತ
100 ಕನ್ಯಾಕುಮಾರಿ
101ಕಪ್ಪಣ ಸ್ವಾಮಿ
102ಕಬಿಲ
103 ಕಾರಿ
104 ಕರ್ನಗೆ
105 ಕರಣಿಕ
106ಕರಿಮಲೆ ಜುಮಾದಿ
107 ಕರಿಯಣ್ಣ
108 ಕೆಂಚಣ್ಣ
109ಪಾಪಣ್ಣ
110ಲಕ್ಷ್ಮೀ ನರಸಿಂಹ
111ಕರಿಯಣ್ಣ ನಾಯಕ
112ಕರೊಟ್ಟಿ
113 ಕುಮ್ಮಲುನ್ನಿ
114ಕಲೆಂಬಿತ್ತಾಯ
115ಭಟ್ರು ನಾಯಕ
116 ಕಲಿಯಾಟ ಅಜ್ಜಪ್ಪ
117 ಕಾಟಾಳ ಬೊಲ್ತು
118ಕಲ್ಕುಡ
119 ಕಲ್ಲುರ್ಟಿ
120ಕಳ್ಳ
121 ಪೋಲಿಸ್
©ಡಾ.ಲಕ್ಷ್ಮೀ ಜಿ ಪ್ರಸಾದ
122 ಸೇನವ
123 ಪಟ್ಲೆರ್
124ಬಲಾಯಿ ಮಾರೆರ್
125 ತಿಗ ಮಾರೆರ್
126 ಶಾನುಭೋಗ
127 ಕಂಡನಾರ ಕೇಳನ್
128ಕಂರ್ಭಿ ಬೈದ್ಯೆದಿ
129 ಕಾಜಿ ಮದಿಮಾಲ್ ಕುಲೆ
130 ಕಾಡೆದಿ
131 ಕಾಂತಬಾರೆ
132 ಬೂದಬಾರೆ
133 ಕಾಂತೇರಿ ಜುಮಾದಿ ಬಂಟ
134 ಕಾನಲ್ತಾಯ
135  ಕಾರಿಂಜೆತ್ತಾಯ
136 ಕಾಳರಾತ್ರಿ
137 ಕಿನ್ನಿದಾರು
138ಕಿನ್ನಿಮಾಣಿ
139 ಪೂಮಾನಿ
140ಕಿಲಮರತ್ತಾಯ
141ದೆಸಿಲು
142ಕುಕ್ಕೆತ್ತಿ
143 ಬಳ್ಳು ಭೂತ
 144ಕುಜುಂಬ ಕಾಂಜವೆರ್
145ಕುದುರೆತ್ತಾಯ
146 ಕುರವ
147ಕುರೆ ಪೆರ್ಗಡೆ
148 ಕುಲ ಮಹಾ ಸ್ತ್ರೀ
149 ಅಜ್ಜಮ್ಮ
150. ಹಸಲ
151 ಕುಲೆ ಮಾನಿಗ
152ಕುಲೆ ಭೂತ
153 ಕುಂಞಮ್ಮ ಆಚಾರ್ದಿ
154 ಕುಂಞಾಳ್ವ ಬಂಟ
155 ಕುಂಞಿ ಭೂತ
156 ಕುಂಞಿರಾಮ ಕುರಿಕ್ಕಳ್
157  ಕುಂಜ‌ಕುಂಜರಾಯ
158 ಅರಸು ಕುಂಜರಾಯ
159 ದೇವ ಕುಂಜರಾಯ
160ಅಣ್ಣು ಕುಂಜರಾಯ
161 ಜನಾರ್ದನ ಕುಂಜರಾಯ
162ಕುಂಜೂರಂಗಾರ
163 ಕುಂಡ
164 ಮಲ್ಲು
165 ಕುಂಟಲ್ದಾಯ
166 ಕುಂಟಿಕಾನ ಕೊರವ
167 ಕೂಜಿಲು
168 ಕೊನ್ನೋಟು ಕಡ್ತ
169ಕೊರಗ ತನಿಯ
170 ಕೊರತಿ
171 ಸತ್ಯಂಗಳದ ಕೊರತಿ
172 ಕೊಲ್ಲಿ‌ಕುಮಾರ
173ಕೋಟಿ
174ಚೆನ್ನಯ
175ಕೋಟೆರಾಯ
176 ಕೋರಚ್ಚನ್
177 ಕೋಲು ಭಂಡಾರಿ
178 ಗಣಪತಿ ಕೋಲ
179 ಗಂಗಮ್ಮ
180 ಗಂಡಗಣಗಳು
181 ಗಂಧರ್ವ
182 ಗಿಡಿರಾವಂತ
183 ಗಿಳಿರಾಮ
184 ಗಿರಾವು
185 ಗುದ್ದೊಲಿ‌ಮೀರಾ
186 ಗುರು ಕಾರ್ನೂರು
187 ಗುಳಿಗ
188  ರಾವು ಗುಳಿಗ
189 ಸುಬ್ಬಿಯಮ್ಮ ಗುಳಿಗ
190  ಮುಕಾಂಬಿ ಗುಳಿಗ
ಚಾಮುಂಡಿ
191ಕರಿ ಚಾಮುಂಡಿ
192ಕೆರೆ ಚಾಮುಂಡಿ
193 ನಾಗ ಚಾಮುಂಡಿ
194 ರಕ್ತ/ ಪಾಪೆಲು ಚಾಮುಂಡಿ
195 ರುದ್ರ ಚಾಮುಂಡಿ
196ಗುಡಚಾಮುಂಡಿ
197 ಪಿಲಿ ಚಾಮುಂಡಿ
198 ಕೊಮಾರು ಚಾಮುಂಡಿ
ಚಿಕ್ಕು©ಡಾ.ಲಕ್ಷ್ಮೀ ಜಿ ಪ್ರಸಾದ
199 ದೊಟ್ಟೆಕಾಲು ಚಿಕ್ಕು
200 ಮರ್ಲು ಚಿಕ್ಕು
201 ಬಗ್ಗು ಚಿಕ್ಕು
202 ಬಾಲು ಚಿಕ್ಕು
203 ಚೆನ್ನಿಗರಾಯ
204ಚೆಂಬಿಲೋಟ್ ಭಗವತಿ
205 ಚೆಂಬುರ್ಪುನ್ನಾರ್
206ಚೊನ್ನಮ್ಮ ಭಗವತಿ
207  ಜತ್ತಿಂಗ
208 ಜತೆ ಕುಲೆ
209 ಜಮೆಯ
210 ಜಮೇಯತಿ
211 ಜಂಗ ಬಂಟ
212ಜಾನು ನಾಯಕ
213 ಜಾಲ ಬೈಕಾಡ್ತಿ
214 ಜೋಕುಲು ದೈವಗಳು
215 ಡೆಂಜಿ ಪುಕ್ಕ
216 ತಪ್ಪೇದಿ
217 ತಣ್ಣಿ ಮಾನಿಗ
218 ತಂತ್ರಿಗಣ
219 ತಿಮ್ಮಣ್ಣ ನಾಯಕ
220 ತಿಪ್ಪೀಸಾಬ್
221 ತೋಡಕುಕ್ಕಿನಾರ್
222 ದಾರು-1
223 ಕುಂದಯ-1
224 ದಾರು -2
225 ಕುಂದಯ-2
226 ದಾರಂ ಬಳ್ಳಾಲ್ತಿ
227 ದೀಪದ ಮಾಣಿ
228 ದುಗ್ಗಲಾಯ
229 ದೇಬೆ-1
230 ದೇಬೆ -2
231 ದೇವಾನು ಪಂಬೆದಿಯಮ್ಮ
232 ದೇಯಿ ಬೈದ್ಯೆದಿ-1
233 ದೇಯಿ ಬೈದ್ಯೆದಿ-2
234ದೇಸಿಂಗ ಉಳ್ಳಾಕುಲು
235 ನಾಗ ಕನ್ನಿಕೆ
236  ನಾಗ ಭೂತ
237-38ನಾರಾಯಣ ಮಾಣಿಲು
239ನಾರಳತ್ತಾಯ
240 ನುರ್ಗಿ ಮದಿಮಾಲ್
241 ನೆತ್ರಾಂಡಿ
242 ನೇರಳತ್ತಾಯ
243ನೈದಾಲ ಪಾಂಡಿ
244 ಪಟ್ಟೋರಿತ್ತಾಯ
245 ಪಡವೀರನ್
2446ಪತ್ತೊಕ್ಕೆಲು ಜನಾನು ದೈವ
247 ಪರವ
248. ಪರಿವಾರ ನಾಯಕ
249 ಪಂಜುರ್ಲಿ
250 ಸೇಮಕಲ್ಲ ಪಂಜುರ್ಲಿ
251ಬಗ್ಗು ಪಂಜುರ್ಲಿ
252 ಅಲೇರ ಪಂಜುರ್ಲಿ
253ಕುಪ್ಪೆಟ್ಟಿ ಪಂಜುರ್ಲಿ
254 ಪುದ
255ಪುದಿಯ ಭಗವತಿ
2556ಪಾಡಾಂಗರ್ ಕುಂಞರ ವೀರನ್
257ಪುದರ್ಚಿನ್ನ ಬಂಟ
2578ಪುಲಿಮರಂಞತೊಂಡನ್
259 ಪೂಂಕಣಿ ಮಾಲಾ ಭಗವತಿ
260ಬಪ್ಪಿರಿಯನ್
264 ಸಹೋದರರು
265ಪೆರಿಯಾಟ್
266  ಪೆರುಂಬಳಯಚ್ಚನ್
ಪುರುಷ ಭೂತ
267 ಕನ್ನಡ ಯಾನೆ ಪುರುಷ ಭೂತ
268ಕಾಂಬೋಡಿದ ಪುರ್ಷ ಭೂತ
269  ಗರೊಡಿದ ಪುರುಷರಾಯ
 270-77 ಪುಲಿಯೂರ್ ಕಾಳಿ
ಪುಳ್ಳಿಕರಂಕಾಳಿ
ಕರಿಂತಿರಿ ನಾಯರ್
 ಐವರು ಹುಲಿ ದೈವಗಳು
278 ಪೆಲಡ್ಕತ್ತಾಯ
279 ಪೆರುಂಬಳಯಚ್ಚನ್
280 ಪೊಟ್ಟ
281ಬ್ರಾಹ್ಮಣತಿ
282-88ಪೊನ್ನಂಗಾಲತಮ್ಮೆ ಮತ್ತು ಸಹೋದರರು
289 ಪೊಸಮಹರಾಯ
290ಮಾಡ್ಲಾಯಿ
291 ಪೋತಾಳ
292 ಪೋಲಿಸ್ ತೆಯ್ಯಂ
293 ಫುಲಂದಾಯ ಬಂಟ
294 ಬಗ್ಗ ಪೂಜಾರಿ
295 ಬಚ್ಚನಾಯಕ
296 ಕೋಟಿನಾಯಕ
297  ಬೈಸುನಾಯಕ
298   ಬಬ್ಬರ್ಯ-1
299 ಬಬ್ಬರ್ಯ- 2
300  ಬಲವಾಂಡಿ
301ಬಲ್ಲಮಂಜತ್ತಾಯ
302  ಮಂಗಾರದ ಅರಸು
303ಬವನೊ
304 ಬಸ್ತಿ ನಾಯಕ
305 ಬಂಟ ಜಾವದೆ
306 ಬಂಡಿರಾಮ
307 ಬ್ರಾಣ ಕುಲೆ
308 ಬಿಲ್ಲಾರ
309  ಬಿಲ್ಲಾರ್ತಿ
310  ಬಿರಣ ಕೋಲ
311ಬಿರ್ಮಣಾಚಾರಿ
312 ಬೀರಣ್ಣಾಳ್ವ
313ಬೀರ್ನಾಚಾರಿ
314 ಬೆರ್ಮೆರ್
315 ಬೆಲೆಟೆಂಗರಜ್ಜ
316ತಂಗಡಿ
317 ಬೇಡವ
318 ಬೊಲ್ಲ ಬೈದ್ಯ
319  ಭಟ್ರು ಭೂತ
320 ಮಾಣಿ ಭೂತ
321 ಭದ್ರಕಾಳಿ
322 ವಣ್ಣಾತಿ
323  ಭೂತರಾಜ
324 ಮಡಿಕತ್ತಾಯ
325 ಮದನಕ್ಕೆ ದೈಯಾರ್
326  ಮದ್ಮಾಲ್
327  ಮದಿಮ್ಮಾಯ
328 ಮದಿಮ್ಮಾಲ್
329  ಮನವಾಟ್ಟಿ ಅಮ್ಮ
330  ಮನಕೋಟ್ ಅಮ್ಮ
331 ಮರುತಿಯೋಡನ್
332 ಮರ್ಲು ಜುಮಾದಿ
333ಮರ್ಲು ಮಾಣಿ
334 ಮರ್ಲು ಮೈಯೊಂದಿ
335 ಮಲ್ಯಾಳ ಭಟ್ರು
336 ಮಂಡೆಕ್ಕಾರ ಕಲ್ಲುರ್ಟಿ
337 ಮಂತ್ರ ದೇವತೆ
338 ಮಂದ್ರಾಯ
339ಮಾಕ್ಕಂ ಭಗವತಿ,
340 ಚಾತು
341  ಚೀರು
342 ಮಾದ್ರಿತ್ತಾಯ
343ಕಾಯರ್ತಾಯ
344 ಮಾಪುಲ್ತಿ ಧೂಮಾವತಿ
345 ಮಾಪುಳೆ -1
346 ಮಾಪುಲ್ತಿ-1
347ಮಾಪುಳೆ -2
348  ಮಾಪುಲ್ತಿ-2
349  ಮಾಯಂದಾಲ್
359 ಮಾಣಿ ಬಾಲೆ
351 ದುಗ್ಗಮೆ
352ತನ್ನಿಮಾಣಿಗ -2
353 ಮಾಲಿಂಗರಾಯ
354 ಮಾಯೊಲು
355 ಮಾಯೊಲಜ್ಜಿ
356 ಮಾಸ್ತಿಯಮ್ಮ
357ಮಿತ್ತ ಮೊಗರಾಯ
358  ಪಟ್ಟದ ಮುಗೇರ
359 ಬಡಜ
ಮಿತ್ತೂರು ನಾಯರ್ ದೈವಗಳು
360 ಚಾತು
361ಚಾಂದು
362ಭಂಡಾರಿ
363 ಮುಕ್ರಿಪೋಕ್ಕನ್ನಾರ್
364 ಮುಗೇರ ಕಾಳು
365 ಮುಚ್ಚಿಲೋಟ್ ಭಗವತಿ
366 ಮುತ್ತು ಮಾರಿಯಮ್ಮ
367-68ಮುಸ್ಲಿಮರ ಮಕ್ಕಳು
369 ಮುಂಡಂತಾಯ
370 ಮೂಡೊಟ್ನಾರ್
371 ಪಡ್ವೆಟ್ನಾರ್
372ಮೂಲಂಪೆತ್ತಮ್ಮ
373ಮುತ್ತಪ್ಪನ್
374ಮೂವ
375 ಮೇಲಂಟಾಯ
376  ಮೈರೆ
377  ಮೈಸಂದಾಯ
378 ಯಕ್ಷಿ
379 ಯೋಗ್ಯೆರ್ ನಂಬೆಡಿ
380ರಕ್ತೇಶ್ವರಿ
381 ವಡ್ಡಮರಾಯ
382 ವಯನಾಟ್ ಕುಲವನ್
©ಡಾ.ಲಕ್ಷ್ಮೀ ಜಿ ಪ್ರಸಾದ
383ವಿಷ್ಣು ಮೂರ್ತಿ
384 ಪಾಲಂದಾಯ ಕಣ್ಣನ್
385 ವೆಳ್ಳು ಕುರಿಕ್ಕಳ್
386  ಶಗ್ರಿತ್ತಾಯ
387  ಶಂಕರ ಬಡವಣ
388  ಶಿರಾಡಿ ಭೂತ
389 ಸುತ್ತುಕೋಟೆ ಚಾಮುಂಡಿ
390 ಸಂನ್ಯಾಸಿ ಗುಳಿಗ
391 ಸಂನ್ಯಾಸಿ ಮಂತ್ರದೇವತೆ
392 ಸಂಪ್ರದಾಯ
393 ಪನಯಾರ್
394 ಸೀರಂಬಲತ್ತಾಯ
395 ಹನುಮಂತ
396ಹಸರ ತಿಮ್ಮ
397 ಹುಲಿ
398ಹಳ್ಳತ್ತಾಯ
399-409ಹಾಯ್ಗುಳಿ
ಮತ್ತು ಪರಿವಾರ ದೈವಗಳು
410ಹಿರೇ ನಂದಿ
411 ಕಿರೇ ನಂದಿ
412ಹೊಸಮ್ಮ
413ಕುಲೆಬಂಟೆತ್ತಿ
414 ಕ್ಷೇತ್ರ ಉಳ್ಳಾಯ
415 ಕುಪ್ಪೆಟ್ಟಿ ಪಂಜುರ್ಲಿ
© ಡಾ.ಲಕ್ಷ್ಮೀ ಜಿ ಪ್ರಸಾದ
Copy rights reserved




SUNDAY, 16 FEBRUARY 2014

ಬರ್ನೆಲ್ ಮೇನ್ನರ್ ತೋರಿಸಿದ ಹಾದಿಯಲ್ಲಿ ಸಾವಿರದೊಂದು ಗುರಿಯೆಡೆಗೆ-ಡಾ.ವಾಮನ ನಂದಾವರ ,ಖ್ಯಾತ ಸಂಶೋಧಕರು

ಡಾ. ಲಕ್ಷ್ಮೀ  ವಿ. ಅವರ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ:  ಒಂದು ವಿಶ್ಲೇಷಣಾತ್ಮಕ ಅಧ್ಯಯನವು  ಡಾ. ಎಸ್. ನಾಗರಾಜು ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ 2009ರ ಸಾಲಿನ ಪಿಎಚ್.ಡಿ. ಪದವಿಗಾಗಿ,ಬೆಂಗಳೂರಿನ ಬಿ. ಎಂ. ಶ್ರೀ ಸ್ಮಾರಕ  ಪ್ರತಿಷ್ಠಾನದ ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರದ ಮೂಲಕ ಸಲ್ಲಿಸಿದ ಸಂಪ್ರಬಂಧವಾಗಿದೆ. ಜನಪದ ಸಂಸ್ಕೃತಿ ಸಂಶೋಧನೆಯಲ್ಲಿ ಇದೊಂದು ಮಹತ್ವದ ಮಹಾ ಪ್ರಬಂಧವಾಗಿದ್ದು ಇದೀಗ ಅದು ಪ್ರಕಟವಾಗಿ ಬರುತ್ತಿರುವುದು ಅತ್ಯಂತ ಶ್ಲಾಘನೀಯವಾದುದು

ಇದರಲ್ಲಿ ಹತ್ತು ಅಧ್ಯಾಯಗಳು ಮತ್ತು ಅನುಬಂಧದ ಪುಟಗಳಿವೆ. ಪ್ರಸ್ತಾವನೆಯ ಮೊದಲನೆಯ  ಅಧ್ಯಾಯಲ್ಲಿ ತುಳುನಾಡಿನ ಭೌಗೋಳಿಕ ಎಲ್ಲೆಗಳ ಮತ್ತು ತುಳುನಾಡಿನ ಸಂಸ್ಕೃತಿಯ ಕುರಿತು ಹೇಳಲಾಗಿದೆ. ಈ ಕ್ಷೇತ್ರದಲ್ಲಿ ಈ ತನಕ ನಡೆದಿರುವ ಕೆಲಸಅಧ್ಯಯನದ ವ್ಯಾಪ್ತಿಉದ್ದೇಶವಿಧಾನಗಳ ಕುರಿತು ತಿಳಿಸಲಾಗಿದೆ. ನಾಗಬ್ರಹ್ಮ ಪರಿಕಲ್ಪನೆಯ ಎರಡನೆಯ ಅಧ್ಯಾಯದಲ್ಲಿ ತುಳುವರ ಆರಾಧ್ಯ ದೈವ ಬೆರ್ಮೆರ್ ಪ್ರಾಚೀನತೆಸ್ವರೂಪಮಹತ್ವಬೆರ್ಮೆರ್ ಪದದ ಅರ್ಥ ಪರಿಕಲ್ಪನೆಬೆರ್ಮೆರ್ ಸೃಷ್ಟಿಯ ಮೂಲ ಮತ್ತು ವೈಶಿಷ್ಟ್ಯಸೃಷ್ಟಿಕರ್ತ ಬೆರ್ಮೆರ್ಆಲಡೆ ಮತ್ತು ಗರಡಿ ಬೆರ್ಮೆರ್ಭೂತಬ್ರಹ್ಮಯಕ್ಷಬ್ರಹ್ಮ ಮತ್ತು ನಾಗಬ್ರಹ್ಮ ಪರಿಕಲ್ಪನೆಯ ಮೂರ್ತಿಗಳು ಮೊದಲಾದುವುಗಳ ಕುರಿತು ಸಾಕಷ್ಟು ಅಧ್ಯಯನ ನಡೆದಿದೆ. ಭೂತಾರಾಧನೆಯ ಪ್ರಾಚೀನತೆಗೆ ಕಾರ್ಕಳದ ಕಾಂತೇಶ್ವರ ದೇವಾಲಯದ ಕ್ರಿ.ಶ. 1379ರ ಶಾಸನದಲ್ಲಿರುವ ದೈವಕ್ಕೆ ತಪ್ಪಿದವರು’ ಎಂದಿರುವ  ದಾಖಲೆಯನ್ನು ಅಧ್ಯಯನಕಾರರು ಇಲ್ಲಿ ಉಲ್ಲೇಖಿಸಿದ್ದಾರೆ.
 
  

ನಾಗಬ್ರಹ್ಮ ಸೇರಿಗೆಯ ಮೂರನೆಯ ಅಧ್ಯಾಯದಲ್ಲಿ ಆಲಡೆ ಸಂಕೀರ್ಣದ ದೈವಗಳಾದ ಬ್ರಹ್ಮ ಲಿಂಗೇಶ್ವರರಕ್ತೇಶ್ವರಿನಾಗನಂದಿಗೋಣಉಲ್ಲಾಯಖಡ್ಗೇಶ್ವರಿಸಿರಿಗಳುಕುಮಾರಪಂಜುರ್ಲಿಅಡ್ಕತ್ತಾಯಧೂಮವತಿಗೆಜ್ಜೆಕತ್ತಿರಾವಣಬ್ರಹ್ಮಸ್ಥಾನದಲ್ಲಿ ಆರಾಧನೆಗೊಳ್ಳುವ ದೈವಗಳಾದ ಬೆರ್ಮೆರ್ನಂದಿಗೋಣರಕ್ತೇಶ್ವರಿನಾಗಭೈರವಗರಡಿ ಸಂಕೀರ್ಣದ ದೈವಗಳಾದ ಬ್ರಹ್ಮಕೋಟಿಚೆನ್ನಯಕಿನ್ನಿದಾರುಮಾಯಂದಾಲ್ಕುಜುಂಬಕಾಂಜಒಕ್ಕುಬಲ್ಲಾಳಜೋಗಿಪುರುಷಶಕ್ತಿ ದೇವತೆಗಳುಮುಗೇರ್ಲು ಸಂಕೀರ್ಣ ದೈವಗಳಾದ ಎಣ್ಮೂರು ದೆಯ್ಯುಕೆಲತ ಪೆರ್ನಲೆತನ್ನಿಮಾಣಿಗ ದೈವಗಳಬಗೆಗೆ ಅಧ್ಯಯನ ನಡೆದಿದೆ.  ಇಲ್ಲಿ ಡಾ. ಲಕ್ಷ್ಮೀ  ವಿ. ಅವರು ಪ್ರಾದೇಶಿಕ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಮುದ್ದ ಕಳಲ ಮತ್ತು ಮಾನ್ಯಲೆ ಪೆರ್ನಲೆ ಎನ್ನುವುದು ಎಣ್ಮೂರು ದೆಯ್ಯು ವೀರರಿಗಿರುವ ಪ್ರಾದೇಶಿಕ ಹೆಸರುಗಳು.
 
ನಾಗಬ್ರಹ್ಮ ಆರಾಧನಾ ಪ್ರಕಾರಗಳ ನಾಲ್ಕನೆಯ ಅಧ್ಯಾಯದಲ್ಲಿ ವೈದಿಕ ಮೂಲ ಪ್ರಕಾರಗಳನ್ನು ಮತ್ತು ತಾಂತ್ರಿಕ ಮೂಲ ಪ್ರಕಾರಗಳನ್ನುಜನಪದ ಮೂಲ ಪ್ರಕಾರಗಳನ್ನು ದಾಖಲಿಸುತ್ತಾ ಸರ್ಪ ಸಂಸ್ಕಾರನಾಗಪ್ರತಿಷ್ಟಾಪನೆಬ್ರಹ್ಮ ಸಮಾರಾಧನೆಸುಬ್ರಹ್ಮಣ್ಯಮೂರಿಳುಸರ್ಪಂತುಳ್ಳಲ್ಸರ್ಪಂಕಳಿ ಮೊದಲಾದ ಮೂವತ್ತೊಂದು ವಿಧದ ಆರಾಧನಾ ವೈವಿಧ್ಯ ಲೋಕವನ್ನು ಪರಿಚಯಿಸಿರುವುದು ಈ ಅಧ್ಯಯಯನದ ಹೆಚ್ಚುಗಾರಿಕೆ. ವೇದೇತಿಹಾಸ ಪುರಾಣಗಳ ನಾಗಬ್ರಹ್ಮ ಎಂಬ ಐದನೆಯ ಅಧ್ಯಾಯದಲ್ಲಿ  ನಾಗ-ಗರುಡಾವತಾರಜರತ್ಕಾರು ವಿವಾಹ ಮೊದಲಾದುವುಗಳನ್ನು ಚರ್ಚಿಸಿದ್ದಾರೆ.
ತುಳು ಜನಪದ ಸಾಹಿತ್ಯದ ನಾಗಬ್ರಹ್ಮ ಎನ್ನುವ ಆರನೆಯ ಅಧ್ಯಾಯದಲ್ಲಿ  ಸಿರಿ ಪಾಡ್ದನದಲ್ಲಿ ಬರುವ ಲಂಕೆ ಲೋಕನಾಡಿನ ಬೆರ್ಮೆರ್ಕೋಟಿಚೆನ್ನಯ ಪಾಡ್ದನದಲ್ಲಿ ಬರುವ ಬೆರ್ಮೆರ್ಮುಗೇರ್ಲು ಪಾಡ್ದನದಲ್ಲಿ ಬರುವ ಬೆರ್ಮೆರ್ ಮೊದಲಾದ ಬ್ರಹ್ಮರ ಪರಿಕಲ್ಪನೆಗಳ ಕುರಿತು ಅಧ್ಯಯನ ನಡೆಸಿದ್ದಾರೆ.
 

 
 
ಅಧ್ಯಾಯ ಏಳರಲ್ಲಿ ಕಂಬಳದ ಪ್ರಾಚೀನತೆಕಂಬಳ ಪದದ ನಿಷ್ಪತ್ತಿಕಂಬಳದ ಮಹತ್ವ ಮೌಖಿಕ ಪರಂಪರೆಯಲ್ಲಿ ಕಂಬಳಕಂಬಳದ ಪ್ರಕಾರಗಳುಕಂಬಳದಲ್ಲಿ ದೈವಾರಾಧನೆ ಮೊದಲಾದುವುಗಳ ಕುರಿತ ಅಧ್ಯಯನವಿದೆ.
ಅಧ್ಯಾಯ ಎಂಟರಲ್ಲಿ ಕಂಬಳಕೋರಿ ನೇಮ ಮತ್ತು ಆ ಹೊತ್ತು ಅಲ್ಲಿ ನಡೆಯುವ ಒಂದು ಕುಂದು ನಲುವತ್ತು ದೈವಗಳು’, ಕಿನ್ನಿಮಾಣಿ ಪೂಮಾಣಿಕೋಮರಾಯಬಬ್ಬರ್ಯಪಂಜುರ್ಲಿಕಲ್ಕುಡ-ಕಲ್ಲುರ್ಟಿರಕ್ತೇಶ್ವರಿ ಮೊದಲಾದ ದೈವಗಳ ವೈವಿಧ್ಯ ವೈಶಿಷ್ಟ್ಯಗಳ ನಿರೂಪಣೆಯಿದೆ. 
 
 
ಬೆರ್ಮೆರ್ ಆರಾಧನೆಯ ಮೇಲೆ ಇತರ ಸಂಪ್ರದಾಯಗಳ ಪ್ರಭಾವ ಎನ್ನುವ  ಒಂಬತ್ತನೆಯ ಅಧ್ಯಾಯದಲ್ಲಿ  ಬೆರ್ಮೆರ್ ಆರಾಧನೆಯ ಮೇಲೆ ಯಕ್ಷಾರಾಧನೆಯ ಪ್ರಭಾವ,ಬ್ರಹ್ಮಯಕ್ಷ-ಬೆರ್ಮೆರ್ಅರಸು ಆರಾಧನೆವೀರ ಆರಾಧನೆನಾಥ ಸಂಪ್ರದಾಯ ಮತ್ತು ನಾಗ ಬ್ರಹ್ಮ ಹಾಗು ಇವುಗಳ ಮೇಲೆ ಬೇರೆ ಬೇರೆ ಸಂಪ್ರದಾಯಗಳ ಪ್ರಭಾವಗಳ  ವಿವರಗಳನ್ನು  ನೀಡಿದ್ದಾರೆ.
ಹತ್ತನೆಯ ಅಧ್ಯ್ಯಾಯ ಉಪಸಂಹಾರದಲ್ಲಿ ತಮ್ಮ ಅಧ್ಯಯನದ ನಿಲುವನ್ನು ಮಂಡಿಸಿ ಸಮರ್ಥನೆ ನೀಡಿದ್ದಾರೆ. ಪೆರಿಯಾರ್>ಬೆರ್ಮೆರ್ಬೆರ್ಮೆ>ಬ್ರಮ್ಮೆ>ಬ್ರಹ್ಮ ಆಗಿರಬಹುದಾದುದನ್ನು ಗುರುತಿಸುವ ಕೆಲಸ ಆಗಬೇಕಾಗಿದೆ.
ಮಹಾಬಲಿಬಲೀಂದ್ರಮಹಿಷಾಸುರಭರಮಸುಬ್ರಹ್ಮಣ್ಯಸುಬ್ಬಯಕಾಡ್ಯನಾಟದ ಸ್ವಾಮಿಮಡಿಕೆಯಲ್ಲಿ ಬೆರ್ಮೆರ್ಕಾಳಭೈರವ,  ಕುಂಡೋದರ  ಭೂತತುಳುನಾಡನ್ನು ಆಳಿದ ಪ್ರಾಚೀನ ಅರಸಪೆರುಮಾಳಪುರಾತನ ಹಿರಿಯಬೆರ್ಮೆರ್ ರಾಜನಾಗಿದ್ದನೇ ?, ‘ಒಂಜಿಕುಂದು ನಲ್ಪಸಾರತ್ತೊಂಜಿ ದೈವೊಲು ಇದೊಂದು ನೆಲೆಸ್ತರಪರಿಪೂರ್ಣತೆಯ ಹಂತ. ಅದು 39 ಏಕೆ? 1001 ಏಕೆಅಧ್ಯಯನ ಆಗಬೇಕು.
ಡಾ. ಲಕ್ಷ್ಮೀ  ವಿ. ತಮ್ಮ ಅಧ್ಯಯನದ ಕ್ಷೇತ್ರಕಾರ್ಯ ವಿವರಗಳನ್ನು ಸಮಗ್ರವಾಗಿ ನೀಡಿದ್ದಾರೆ. ವಿಸ್ತೃತ ಓದಿನ ಆಕರ ಸೂಚಿಯನ್ನು ಮುಂದಿಟ್ಟಿದ್ದಾರೆ. ಸಾಕಷ್ಟು ನೆರಳು ಬೆಳಕಿನ ವರ್ಣಚಿತ್ರಗಳನ್ನು ಹಾಗೂ 38 ಆಚರಣೆಗಳ ಆಡಿಯೋ-ವೀಡಿಯೋ ಸಂಗ್ರಹ ಮಾಹಿತಿ ಒದಗಿಸಿದ್ದಾರೆ. ನಾಗ ಬೆರ್ಮೆರ್ ಪಾಡ್ದನದ ಮೂರು ಪಾಠಗಳನ್ನು ಹಾಗು ಕಂಬಳ ಸಂಬಂಧಿ ಈಜೊ ಮಂಜೊಟ್ಟಿ ಗೋಣಪಾಡ್ದನಪಠ್ಯ ಸಂಗ್ರಹಿಸಿ ಅದರ ಕನ್ನಡ ಅನುವಾದವನ್ನೂ ಕೊಟ್ಟಿದ್ದಾರೆ. ಪೂಕರೆ ನೇಮ ಒಂದೆಡೆಯಲ್ಲ ಕೋಳ್ಯೂರುನಡಿಬೈಲುಅನಂತಾಡಿಬಂಟ್ವಾಳದ ಬೀರೂರುಕೊಡ್ಲಮೊಗರು,ಅರಿಬೈಲುಕಾಸರಗೋಡಿನ ಚೌಕಾರು(ಅದೂ ಮೂರು ದಿನಗಳಲ್ಲಿ ಒಂದೇ ಊರಲ್ಲಿ).  ಹಾಗೆಯೇ ನಿಡಿಗಲ್ ಲೋಕನಾಡು ಮೊದಲಾದ ಹತ್ತು ಹದಿನಾಲ್ಕು ಬ್ರಹ್ಮ ಆಲಡೆಗಳನ್ನು ಸಂದರ್ಶನ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಹತ್ತಾರು ಗರೊಡಿಗಳನ್ನು ಭೇಟಿಮಾಡಿದ್ದಾರೆ. ಹೀಗೆ ಆಸಕ್ತಿ,ಕುತೂಹಲ ಮತ್ತು ಹುಡುಕಾಟದ ಬೆನ್ನು ಹತ್ತುವ ಚಪಲದ ನೆಲೆಗಳನ್ನು ಮೀರಿ ಡಾ. ಲಕ್ಷ್ಮೀ  ಅವರು ತಮ್ಮ ಅಧ್ಯಯನದ ಒಳನೋಟಗಳನ್ನು ನೀಡುವ ಪ್ರಯತ್ನ ನಡೆಸಿದ್ದಾರೆ.
ಅರಸು ಆರಾಧನೆಪಿತೃ ಆರಾಧನೆಭೂತಾರಾಧನೆನಾಗಾರಾಧನೆಯಕ್ಷಾರಾಧನೆ ಹಾಗೂ ಬಲೀಂದ್ರ ಅರಾಧನೆಗಳ ಸಮನ್ವಯ ನಾಗಾರಾಧನೆಯಲ್ಲಿ ಕಾಣಿಸುತ್ತದೆ ಎನ್ನುವ ನಿಲುವು ತಳೆದಿದ್ದಾರೆ. ಇಲ್ಲೆಲ್ಲ ಎಲ್ಲೂ ಬೆರ್ಮೆರ್ ಯಾರು ಏನುನಾಗ ಬೆರ್ಮೆರ್ ಯಾರುಭೂತಗಳ ಅಧಿಪತಿಯೇ ಎಂದೆಲ್ಲ ಅಂತಿಮ ನಿಲುವಿಗೆ ಅವರು ಬಂದಿಲ್ಲ. ಅದು ದೋಷ ಅಲ್ಲಸಂಶೋಧನೆಯ ಗುಣ.ಅವಸರಿಸದಿರುವುದು  ಚರ್ಚೆಗಳಿಗೆ ಆಹ್ವಾನ ನೀಡಿದಂತೆ. ಜನಪದ ಸಂಸ್ಕೃತಿಯ ಅಧ್ಯಯನಾಂಶಗಳನ್ನು ಸೋಜಿಗಪಡುವ ಹಾಗೆ ಒಂದೆಡೆ ರಾಶಿ ಹಾಕಿ ಸಂಶೋಧನಾ ಸಾಧ್ಯತೆಗಳನ್ನು ತೆರೆದು ತೋರಿಸಿದ್ದಾರೆ.ಇದೇ ಕಾಲಕ್ಕೆ ಇಲ್ಲಿ ಡಾ. ಲಕ್ಷ್ಮೀ  ಅವರಿಗೆ ತಮ್ಮ ಸಂಪ್ರಬಂಧದ ಸಂರಚನೆಗೆ ಬೇಕಾದ ಚೌಕಟ್ಟು ಈ ಮೊದಲೇ ಸಿದ್ಧವಾಗಿತ್ತು ಎನ್ನುವ ಇನ್ನೊಂದು ಬಹು ಮುಖ್ಯವಾದ ಅಂಶದ ಕಡೆಗೆ ಗಮನ ಕೊಡಬೇಕಾಗಿದೆ.
ನೂರಕ್ಕೂ ಹೆಚ್ಚು ಕಥೆವೈಚಾರಿಕ ಲೇಖನಗಳುಅಂಕಣ ಬರಹಗಳು ಮೊದಲಾದ ಸಾಹಿತ್ಯ ಮತ್ತು ಸಂಶೋಧನ ಪ್ರವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಲಕ್ಷ್ಮಿ ವಿ. ಅವರು ಅರಿವಿನಂಗಳದ ಸುತ್ತ(ಶೈಕ್ಷಣಿಕ ಬರೆಹಗಳು)ಮನೆಯಂಗಳದಿ ಹೂ(ಕಥಾಸಂಕಲನ)ದೈವಿಕ ಕಂಬಳ ಕೋಣ (ತುಳು ಜಾನಪದ ಸಂಶೋಧನೆ)ಸುಬ್ಬಿ ಇಂಗ್ಲೀಷ್ ಕಲ್ತದು(ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ)ತುಂಡುಭೂತಗಳು: ಒಂದು ಅಧ್ಯಯನಕನ್ನಡ-ತುಳು ಜನಪದ ಕಾವ್ಯಗಳಗಳಲ್ಲಿ ಸಮಾನ ಆಶಯಗಳುತುಳು ಪಾಡ್ದನಗಳಲ್ಲಿ ಸ್ತ್ರೀಪಾಡ್ದನಸಂಪುಟ,  ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ಎಂಬ ಐದು ಕೃತಿಗಳನ್ನು ಏಕಕಾಲಕ್ಕೆ ಪ್ರಕಟಿಸುವ ಸಾಹಸ ಮಾಡಿದವರು. 
ಹಾಗೆಯೇ ಮುಂದಿನ ಸರದಿಯಲ್ಲಿತುಳುನಾಡಿನ ಅಪೂರ್ವ ಭೂತಗಳುಬೆಳಕಿನೆಡೆಗೆ ಸಂಶೋಧನಾ ಲೇಖನಗಳು. ತುಳು ಜನಪದ ಕವಿತೆಗಳು ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳುಕಂಬಳ ಕೋರಿ ನೇಮ(ತುಳು ಜಾನಪದ ಸಂಶೋಧನೆ)  ಮತ್ತೊಂದು ಕಂತಿನ ಐದು ಪುಸ್ತಕಗಳನ್ನು ಪ್ರಕಟಿಸುವ ಧೈರ್ಯ ಮಾಡಿದವರು. ಹೀಗೆ ಒಟ್ಟು  ಹದಿನಾಲ್ಕು  ಕೃತಿಗಳು (ಮತ್ತೆ ಐದು ಕೃತಿಗಳು ಅಚ್ಚಿನಲ್ಲಿವೆ)  ಇವರ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷನಾತ್ಮಕ ಅಧ್ಯಯನಕ್ಕೆ ದೊಡ್ಡ ಗಂಟಿನ ಮೊದಲ ಬೌದ್ಧಿಕ ಬಂಡವಾಳವಾಗಿರುವುದು ನಿಜ.
 ವಾಸ್ತವವಾಗಿ ಭೌತಿಕ ಶರೀರಕ್ಕೆ ಎರಡೆರಡು ಕೈಕಾಲುಗಳು ಹೇಗೋಹಾಗೆ ಇವರು ಗಟ್ಟಿಯಾಗಿದ್ದಾರೆ.  ಹಾಗೆಯೇ ಅಂಗೈಗೆ ಐದು ಬೆರಳುಗಳ ಹಾಗೆ ಒಂದು ಹಿಡಿಗೆ ಹದವಾಗಿದ್ದಾರೆ. ಹೇಗೆ ಅಂಗೈಗೆ ಐದು ಬೆರಳುಗಳ ಸಂಯೋಜನೆಯ ಸಹಕಾರ ಒಂದು ಹಿಡಿತಕ್ಕೆ ಕಾರಣವಾಗುವುದೋ ಹಾಗೆ  ಇಲ್ಲಿ ಒಂದೊಂದು ಹಿಡಿಯಷ್ಟು ಕೆಲಸಗಳು ಸಾಧ್ಯವಾಗಿದೆ. ಇದು ನಿಜಕ್ಕೂ ಈ ಹೆಣ್ಣುಮಗಳ ಸಾಹಸವೇ ಸರಿ. ಇಂತಹ ಸಂಶೋಧನೆಯ ಮತ್ತು ಗ್ರಂಥಗಳ ಪ್ರಕಟಣೆಯ ಕೆಲಸಗಳಿಗೆ ಕೇವಲ ಅಧ್ಯಯನ ಆಸಕ್ತಿ ಮಾತ್ರ ಇದ್ದರೆ ಸಾಕಾಗುವುದಿಲ್ಲ  ಜೊತೆಗೆ ಉತ್ಸಾಹ ಮತ್ತು ಛಲಗಳ ಮನೋಧರ್ಮದ ದೃಢ ಸಂಕಲ್ಪವೂ ಬೇಕು. ಜೊತೆಗೆ ಧೈರ್ಯವೂ ಬೇಕು. ಇರುವ ಮತ್ತು ಸಿಗುವ ಅವಕಾಶಗಳ ಸದುಪಯೋಗಕ್ಕಾಗಿ ಅವರ ಮನಸ್ಸು ಸದಾ ತುಡಿಯುತ್ತಲೂ ಇರಬೇಕು. ಇಲ್ಲದೆ ಹೋದರೆ ಬೌದ್ಧಿಕ ರಂಗದಲ್ಲಿ ಅಧ್ಯಯನ ಸಾಧನೆಯ ಉತ್ಪನ್ನಗಳುಸಾರಸ್ವತಲೋಕದಲ್ಲಿ ಸಾಧನೆಗಳು ಲಭ್ಯವಿರುವುದಿಲ್ಲ. 
ತರಗತಿಯಲ್ಲಿ ಕಲಿಸುವ ಜೊತೆಯಲ್ಲೇ ಅಧ್ಯಾಪನ. ಪ್ರಾಧ್ಯಾಪನ ಕಾಯಕದಲ್ಲಿ ಕಲಿಯುವ ಅವಕಾಶಗಳೂ ಹೇರಳ. ಇಂತಹ ಸಂದರ್ಭಗಳನ್ನು ಹಗುರವಾಗಿ ಕಾಣದೆ ಲಕ್ಷ್ಮೀಯಂತಹವರು ಗಂಭೀರವಾಗಿ ತೆಗೆದುಕೊಳ್ಳವುದರಿಂದಲೇ ಈ ತರದ ಕೆಲಸಗಳು ಸಾಧನೆಯಾಗಿ ಪರಿವರ್ತನೆಗೊಳ್ಳುತ್ತವೆ. ಇಲ್ಲಿ ಕೆಲಸ ಮತ್ತು ಬಿಡುವು ಪರಸ್ಪರ ಹೊಂದಾಣಿಕೆಯಲ್ಲೇ ಸಾಗುತ್ತಿರುತ್ತವೆ. ಹಾಗಿದ್ದಾಗಲೇ ಕಟ್ಟುವ ಕೆಲಸ ನಡೆದು ಉತ್ಪನ್ನದ ಸಾಧನೆಯಾಗಿ ಸಿದ್ಧಿಸುತ್ತದೆ. ಹೀಗೆ ಒಂದೊಂದು ಹಂತಗಳಲ್ಲಿ ಒಂದೊಂದು ಹಿಡಿಯಷ್ಟು ಹೊತ್ತಗೆಗಳನ್ನು ಪ್ರಕಟಿಸಿ ಇವರು ನಿಜ ಅರ್ಥದಲ್ಲಿ ಪ್ರಕಟವಾಗಿದ್ದಾರೆ ಮತ್ತು ಈ ವರೆಗೆ ಅಧ್ಯಯನ ನಡೆಯದ ಕ್ಷೇತ್ರಗಳಲ್ಲಿ ಸಾಕಷ್ಟು ಕೈಯಾಡಿಸಿದ್ದಾರೆ.
ಯಾವಾಗ ಇಂತಹ ಕೈಯಾಡಿಸುವ ಕೆಲಸ ಸಾಧ್ಯವಾಗುತ್ತದೆ ಎಂದರೆ ಅಲ್ಲೆಲ್ಲ ಹಾಗೆಯೇ ಅಧ್ಯಯನ - ಸಂಶೋಧನ ಕ್ಷೇತ್ರಕಾರ್ಯಗಳಲ್ಲಿ ಕಾಲಾಡಿಸುವ ಕಾಯಕವೂ ನಡೆಯುತ್ತಿರಬೇಕಾಗುತ್ತದೆ.  ಇದು ಇವರಿಂದ ಬಹುಪಾಲು ಸಾಧ್ಯವಾಗಿದೆ.
ಈಗಿನ ಕಾಸರಗೋಡು ಜಿಲ್ಲೆಯ ಕೋಳ್ಯೂರು ಎಂಬ ಸಾಂಸ್ಕೃತಿಕ ಹಳ್ಳಿಯಲ್ಲಿ ಹುಟ್ಟಿಬಳೆದ ಇವರು ಬಾಲ್ಯದಿಂದಲೇ ಸ್ಥಳೀಯ ಸಂಸ್ಕೃತಿಯ ಸೊಗಡಿನ ಜಾಡಿನಲ್ಲಿ ಅನುಭವಗಳನ್ನು ಮೈಗೂಡಿಸಿಕೊಂಡವರು. ವಿಜ್ಞಾನ ಪದವೀಧರೆಯಾಗಿ  ಮುಂದಿನ ಅಧ್ಯಯನಗಳಲ್ಲಿ ಸಂಸ್ಕೃತಕನ್ನಡಹಿಂದಿ ಹೀಗೆ ಮೂರು ಸ್ನಾತಕೋತ್ತರ ಪದವಿಗಳನ್ನು ಹೇಗೆ ಮತ್ತು ಏಕೆ ಪಡೆಯಲು ಸಾಧ್ಯವಾಯಿತುಅಷ್ಟು ಮಾತ್ರವಲ್ಲರಾಷ್ಟ್ರಭಾಷಾ ಪ್ರವೀಣಎಂ.ಫಿಲ್ಪಿಎಚ್.ಡಿ. ಕನ್ನಡದಲ್ಲಿ ಎರಡನೆಯ ಪಿಹೆಚ್. ಡಿ.  ಮುಂದೆ ಎನ್.ಇ. ಟಿ(ಕನ್ನಡ) ಯು.ಜಿ.ಸಿ.ಗಳಂತಹ ಶೈಕ್ಷಣಿಕ ಅರ್ಹತೆಗಳನ್ನು ಪಡೆದುಕೊಳ್ಳವ ದಾರಿಗಳನ್ನೂ ಹೇಗೆ ಏಕೆ ಕಂಡುಕೊಂಡರು ಎಂಬುದು ಕುತೂಹಲದ ವಿಷಯವಾಗಿದೆ. ಇವರಿಗೆ ತಮ್ಮ ಅಪೇಕ್ಷೆಯ ಗುರಿಯೆಡೆಗೆ ತುಡಿಯುವ ಹಾಗೆ ಮುಂದೆ ಸಾಗುವ ಜ್ಞಾನದಾಹದ ಅದಮ್ಯ ಉತ್ಸಾಹದ ಜೊತೆಯಲ್ಲೇ ಚೈತನ್ಯದ ಸಿದ್ಧಿಯೂ ಇರುವುದು ಇಲ್ಲಿ ಸ್ಪಷ್ಟವಿದೆ. ಅರಿವಿನಂಗಳದ ಸುತ್ತ’ ಮತ್ತು ಮನೆಯಂಗಳದಿ ಹೂ’ ಎನ್ನುವ ಮೊದಲ ಎರಡು ಕೃತಿಗಳ ಶೀರ್ಷಿಗಳೇ ಇವರ ಮುನ್ನೋಟದ ಸುಳುಹುಗಳನ್ನು ಮೂಡಿಸುತ್ತವೆ.
ಜನಪದ ಸಂಸ್ಕೃತಿಯಲ್ಲಿ ಅಧ್ಯಯನ ಮಾಡಬಹುದಾದ  ಜನಪದ ಅಂಶ(ಈoಟಞ  Iems)ಗಳಿರುತ್ತವೆ. ಅವನ್ನು ಗಮನಿಸಿ ಗುರುತಿಸಿಕೊಳ್ಳುವ ಮನಸ್ಸು ಅಧ್ಯಯನಕಾರರಿಗೆ ಇರಬೇಕಾಗುತ್ತದೆ. ಹಾಗೆ ನೋಡಿದಾಗ ಗಮನಿಸುವುದು ಮತ್ತು ಗುರುತಿಸುವುದಕ್ಕೆ ಬಹಳಷ್ಟು ಅಂತರವಿರುತ್ತದೆ. ಸಾಮಾನ್ಯವಾಗಿ ಅಂತಹ ಅಂಶಗಳನ್ನು ಎಲ್ಲರೂ ಗಮನಿಸುತ್ತಾರೆ. ಆದರೆ ಗುರುತಿಸುವ ಮನಸ್ಸು ಎಲ್ಲರಿಗಿರುವುದಿಲ್ಲ. ಸಂಶೋಧಕನೊಬ್ಬನ ಕಣ್ಣಿಗೆ ಅಂತಹ ಆಂಶವೊಂದು ಬಿದ್ದಾಗ ಅದು ಅಧ್ಯಯನ ವಸ್ತುವಾಗುತ್ತದೆ. ಮನಸ್ಸಿದ್ದರೆ ಮಾರ್ಗ’ ಎನ್ನುವ ಹಾಗೆ ಇಂತಹ ಜನಪದ ಅಂಶಗಳು ಸಂಶೋಧಕರಿಗೆ ಅಧ್ಯಯನ ವಸ್ತುಗಳಾಗಿ ಆ ಕುರಿತು ಮತ್ತೆ ಆ ಕಡೆಗೆ ಆಸಕ್ತಿ ತಳೆದು ಆಯಾ ವಿಷಯಗಳ ಕುರಿತು ಮಾಹಿತಿ ಪಡೆಯುವ ಸಂಗ್ರಹಕಾರ್ಯ ಮೊದಲಾಗುತ್ತದೆ.  
ಜಾತೆರಯಂತಹ ಸಂದರ್ಭದಲ್ಲಿ ಪಲ್ಲಕಿ’ ಒಂದು ಜನಪದ ಅಂಶವಾದರೆ ಅಡ್ಡಪಲ್ಲಕಿ’ ಎನ್ನುವುದು ಇನ್ನೊಂದು ಜನಪದ ಅಂಶವಾಗುವುದು. ನಮ್ಮನ್ನು ನಾವು ಗಂಭೀರವಾಗಿ ತೊಡಗಿಸಿಕೊಳ್ಳಬೇಕಾದ್ದೇ ಇಲ್ಲಿ.
ಹಾಗಾಗಿ ಡಾ. ಲಕ್ಷ್ಮೀ  ವಿ. ಅವರ ಬರವಣಿಗೆಯಲ್ಲಿ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಕಾಣಲು ಸಾಧ್ಯವಾಗುತ್ತದೆ. ದಾರಿಯಲ್ಲಿ ಹೋಗಿಬರುತ್ತಿರಬೇಕಾದರೆ ಗಮನಕ್ಕೆ ಬರುವ ಒಂದು ಕಲ್ಲು ಅವರಿಗೆ ಜನಪದ ಅಂಶವಾಗಿ ಅಧ್ಯಯನಾಸಕ್ತಿಗೆ ಕಾರಣವಾಗುತ್ತದೆ.
 ಹಾಗಾಗಿಯೇ ತುಳುವರ ಆರಾಧನೆಯ ಸಾರತ್ತೊಂಜಿ ದೈವಗಳಿಗೆ(ಸಾವಿರದೊಂದು ದೈವಗಳಿಗೆ) ಹೊಸ ಭಾಷ್ಯ ಬರೆಯಲು ಅರ್ಹತೆಗಳಿಸಿಕೊಂಡಿದ್ದಾರೆ. ಎ. ಮೇನ್ನರ್(1897) ನೀಡಿರುವ ಭೂತಗಳ ಸಂಖ್ಯೆ: 133. ಡಾ. ಬಿ. ಎ. ವಿವೇಕ ರೈ(1885) ನೀಡಿರುವ ಸಂಖ್ಯೆ: 274, ಡಾ.ಕೆ. ಚಿನ್ನಪ್ಪ ಗೌಡರು(1990) ನೀಡಿರುವ ಪರಿಷ್ಕೃತ ಪಟ್ಟಿಯಂತೆ: 360 ರಘುನಾಥ ಎಂ. ವರ್ಕಾಡಿ(2011) ಅವರ ಕಡಂಬಾರ ಮಲ್ರಾಯೆ’ ಕೃತಿಯಲ್ಲಿ ಪುನಾರಚಿಸಿದ ಹೊಸ ಪಟ್ಟಿಯಲ್ಲಿ 407 ದೈವಗಳನ್ನು ಹೆಸರಿಸಿದ್ದಾರೆ. 
ಇವೆಲ್ಲವನ್ನೂ ಮೀರಿ ನಿಲ್ಲುವ ಯಾದಿಯೊಂದು ಡಾ. ಲಕ್ಷ್ಮೀ  ವಿ. ಅವರಿಂದ ಸಾಧ್ಯವಾಗಿದೆ. ಇದರ ಸಾಧ್ಯತೆಗೆ ಎರಡು ಉದಾಹರಣೆಗಳನ್ನು  ಅವರ ಮಾಹಿತಿ ಕೋಶದಿಂದಲೇ ಎತ್ತಿಕೊಳ್ಳಬಹುದು. ಈ ಶೋಧಕಿ ಕಂಡುಕೊಂಡ ಉರವ’, ‘ಎರುಬಂಟೆ’, ‘ಅಕ್ಕ ಬೋಳಾಂಗ’, ‘ಅಜ್ಜ ಬಳಯ’ ಮೊದಲಾದ 50ರಷ್ಟು ಅಪೂರ್ವ ಭೂತಗಳು ಅವರ ಸಾಧನೆಯ ಫಲವಾಗಿವೆ. ಹಾಗೆಯೇ ಕುಕ್ಕೆತ್ತಿ-ಬಳ್ಳು’, ‘ಪರವ ಭೂತ’, ‘ಕನ್ನಡ ಬೀರ’, ‘ಕುಂಡ-ಮಲ್ಲು’, ‘ಕುಲೆಮಾಣಿಗ’, ‘ಅಚ್ಚು ಬಂಗೇತಿ’ ಮೊದಲಾದ 82ರಷ್ಟು ತುಂಡು  ಭೂತಗಳು ಈ ಸಾಧಕಿಯ ಸೇರಿಗೆಯಲ್ಲಿವೆ. ಇದು ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ಪಡಬೇಕಾಗಿಲ್ಲ. ಬಾಸೆಲ್ ಮಿಶನ್ ಪರಂಪರೆಯ ಬರ್ನೆಲ್ಮೇನ್ನರ್‍ಮೊದಲಾದವರು ತೋರಿಸಿಕೊಟ್ಟ ಹಾದಿಯಿದೆ.
1872, ಮಾರ್ಚ್ ತಿಂಗಳ23ನೆಯ ತಾರಿಕಿನಂದು ತೊಡಗಿ ನಾಲ್ಕು ದಿವಸ ಮಂಗಳೂರಿನ ದೂಮಪ್ಪ ಎಂಬವರ ಮನೆಯಲ್ಲಿನಡೆದ ಇಲ್ಲೆಚ್ಚಿದ ನೇಮ(ಮನೆಯಲ್ಲಿ ನಡೆಯುವ ವಿಶಿಷ್ಟ ದೈವಾರಾಧನೆ)ವನ್ನು ನೋಡಿ ಅಧ್ಯಯನ ಮಾಡಿರುವ ಪರಂಪರೆಯದು. ಹಾಗೆ ಎ.ಸಿ ಬರ್ನೆಲ್ ನಡೆಸಿದ ಅಧ್ಯಯನದ ಫಲವಾಗಿ ಖಿhe eviಟ ತಿoಡಿshiಠಿ oಜಿ  ಣhe ಖಿuuvಚಿs(ಎ.ಸಿ ಬರ್ನೆಲ್: 1894-1897) ಈ ಸಂಶೋಧನ ಪ್ರಬಂಧ ಮಾಲಿಕೆಯಲ್ಲಿ ಪ್ರಮುಖ ಭೂತಗಳ ಒಂದು ಪಟ್ಟಿಯಿದೆ. ಈ ಪಟ್ಟಿಯನ್ನು ಸಿದ್ಧಮಾಡಿ ಗ್ರಂಥದಲ್ಲಿ ಸೇರಿಸಿದವರು  ಎ. ಮೇನ್ನರ್. ಈ ಪಟ್ಟಿಯಲ್ಲಿ 133ಭೂತಗಳ ಹೆಸರುಗಳಿವೆ. ಡಾ. ಬಿ. ಎ. ವಿವೇಕ ರೈ(1985) ಅವರ ತುಳು ಜನಪದ ಸಾಹಿತ್ಯ’ ಕೃತಿಯಲ್ಲಿ274(ಪು.35-38)  ಭೂತಗಳ ಹೆಸರುಗಳಿವೆ. ಡಾ. ಕೆ. ಚಿನ್ನಪ್ಪ ಗೌಡ ಕೆ.(1990)ಅವರ ಭೂತಾರಾಧನೆ ಜಾನಪದೀಯ ಅಧ್ಯಯನ ಗ್ರಂಥದಲ್ಲಿ 360 ಭೂತಗಳ ಪರಿಷ್ಕೃತ ಪಟ್ಟಿಯಿದೆ(ಪು.34-39). ‘ಸಾವಿರದೊಂದು ಭೂತಗಳ ಬೆನ್ನು ಹಿಡಿದಾಗ’ ಎನ್ನುವ ಲೇಖನದಲ್ಲಿ ರಘುನಾಥ ಎಂ. ವರ್ಕಾಡಿ(2011, ಪು.65-79) ಅವರ ಕಡಂಬಾರ ಮಲ್ರಾಯೆ’ ಕೃತಿಯಲ್ಲಿ 407 ಭೂತಗಳ ಹೆಸರುಗಳು ದಾಖಲಾಗಿವೆ. ಈ ಲೆಕ್ಕಾಚಾರ ತೀರ ಈಚೆಗಿನದು.
 ನಾನು ನನ್ನ ಜನಪದ ಸುತ್ತಮುತ್ತ ಕೃತಿಯಲ್ಲಿ ದಾಖಲಿಸಿರುವಂತೆ ಮತ್ತು ಕಂಡುಕೊಂಡಂತೆ ಕಂಡಿಗೆತ್ತಾಯ’(ಬಜ್ಪೆ-ಕೊಳಂಬೆ),  ‘ನಡ್ಡೊಡಿತ್ತಾಯ’(ಕಾರಿಂಜೆ), ‘ಮುಕುಡಿತ್ತಾಯಿ’ ಈ ಮೂರು ಭೂತಗಳ  ಹೆಸರುಗಳು ಈಗಾಗಲೇ ಮಾಡಿರುವ ಪಟ್ಟಿಯಲ್ಲಿ ಇಲ್ಲ. ಹಾಗಾಗಿ ಅವು ಸೇರಿದಾಗ: 407+3=410 ಭೂತಗಳ ಲೆಕ್ಕ ಸಿಗುತ್ತದೆ.
ತುಳುವರು ಸಾವಿರದೊಂದು(ಸಾರತ್ತೊಂಜಿ) ಭೂತಗಳನ್ನು ನಂಬಿಕೊಂಡು ಬಂದ ಪರಂಪರೆಯವರು. ಇಲ್ಲೀಗ 133ಭೂತಗಳ ಈ ಸಂಖ್ಯೆ ಹೆಚ್ಚಾಗುತ್ತಿರುವುದೆಂದರೆ ಭೂತಗಳ ಸಂತಾನ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಒಂದಾನೊಂದು ಕಾಲದಲ್ಲಿ ಸಾವಿರದೊಂದು ದೈವಗಳನ್ನು ನಂಬಿಕೊಂಡು ಬರುತಿದ್ದರೂ ಕಾಲಕ್ರಮೇಣ ಈ ನಂಬಿಕೆ ಸಡಿಲಾಗಿ ಅವುಗಳ ಸಂಖ್ಯೆ ಜನಮಾನಸದ ನೆನಪಿನಲ್ಲಿ ಕಡಿಮೆಯಾಗಿರಬಹುದು. ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಅವುಗಳ ಹೆಸರುಗಳು ಮತ್ತೆ ಬೆಳಕಿಗೆ ಬಂದುವು. 
ಹಾಗೆ ಇದೀಗ ಡಾ. ಲಕ್ಷ್ಮೀ  ವಿ. ಅವರ ಈ ಸ್ವರೂಪದ ಶೋಧನೆಯಿಂದಾಗಿ 132 ದೈವಗಳು ನಮ್ಮ ತಿಳುವಳಿಕೆಯ ಮಜಲಿಗೆ ಬಂದಿವೆ. ಆಗ 410+132=542 ಎಂದಾಗುವುದು. ಇನ್ನು ಮುಂದೆ ಅವುಗಳ ಲೆಕ್ಕಕೊಡುವಾಗ 542ಕ್ಕಿಂತ ಕುಂದು ಬರಬಾರದು.  ಶೋಧನೆಗೆ ಇನ್ನೂ ಎಡೆಯಿದೆ. ಸಾವಿರದೊಂದು ಗುರಿಯೆಡೆಗೆ ಸಾಗುವ ಹಾದಿಯಿದೆ.
ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ವಿಷಯದಲ್ಲಿ   ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದ ತಮ್ಮ ಸಂಪ್ರಬಂಧವನ್ನು ಪರಿಷ್ಕರಿಸಿ ಪ್ರಕಟಿಸಿರುವ         ಡಾ. ಲಕ್ಷ್ಮೀ ವಿ. ಅವರನ್ನು ನಾನು ಹಾರ್ದಿಕವಾಗಿ ಅಭಿನಂದಿಸುತ್ತಿದ್ದೇನೆ.
                                                                ಡಾ. ವಾಮನ ನಂದಾವರಮಂಗಳೂರು,









ಲಕ್ಷ್ಮೀ ಜಿ ಪ್ರಸಾದರ ಕಿರು ಪರಿಚಯ
 
ಪಿ ಎಚ್ ಡಿ ಪದವಿ ಪುರಸ್ಕೃತ ಹಾಗೂ ಕನ್ನಡ ,ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಕಾಸರಗೋಡಿನ ಕೋಳ್ಯೂರು ಮೂಲದ ಗಡಿನಾಡ ಕನ್ನಡತಿ ಲಕ್ಷ್ಮೀ ಜಿ ಪ್ರಸಾದ ಅವರು ಮೀಯಪದವುನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮತ್ತು ಕೊಡ್ಲಮೊಗರಿನ ವಾಣಿವಿಜಯ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ತಮ್ಮ ಶಿಕ್ಶಣವನ್ನು ಪಡೆದರು. ಡಾ.ಲಕ್ಷ್ಮೀ ಜಿ ಪ್ರಸಾದ ಅವರು ಈಗ ತಮ್ಮ ಎರಡನೆಯ ಪಿಎಚ್.ಡಿ ಪದವಿಗಾಗಿ ಸಂಶೋಧನಾ ಮಹಾ ಪ್ರಬಂಧವನ್ನು ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ.
ನಾಡಿನ ಜಾನಪದ ಇತಿಹಾಸ ಸಂಸ್ಕೃತಿ ಕುರಿತು ಸಂಶೋಧನೆ ನಡೆಸಿದ ಡಾ.ಲಕ್ಷ್ಮೀ ಜಿ ಪ್ರಸಾದ ಅವರು ತುಳುನಾಡಿನ ಅಪೂರ್ವ ಭೂತಗಳು ,ಕನ್ನಡ ತುಳು ಜಾನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ,ದೈವಿಕ ಕಂಬಳ ಕೋಣ ,ತುಂಡು ಭೂತಗಳು -ಒಂದು ಅಧ್ಯಯನ ,ತುಳು ಪಾದ್ದನಗಳಲ್ಲಿ ಸ್ತ್ರೀ ,ಅರಿವಿನಂಗಳದ ಸುತ್ತ (ಶೈಕ್ಷಣಿಕ ಲೇಖನಗಳು ),ಕಂಬಳ ಕೋರಿ ನೇಮ ,ಬೆಳಕಿನೆಡೆಗೆ ,ಪಾಡ್ದನ ಸಂಪುಟ ,ತುಳು ಜನಪದ ಕವಿತೆಗಳು,ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ,ಭೂತಗಳ ಅದ್ಭುತ ಜಗತ್ತು ಮೊದಲಾದ 20 ಕೃತಿಗಳನ್ನು ರಚಿಸಿದ್ದಾರೆ.
------
ಪುಸ್ತಕದ ವಿವರ:
 
ಪುಸ್ತಕದ ಹೆಸರು :ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ (ಪಿಎಚ್.ಡಿ ಮಹಾ ಪ್ರಬಂಧ)
ಲೇಖಕರು : ಡಾ.ಲಕ್ಷ್ಮೀ ಜಿ ಪ್ರಸಾದ , 
                ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜ್ ಬೆಳ್ಳಾರೆ , 
ಸುಳ್ಯ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಪ್ರಕಾಶಕರು : ಪ್ರಚೇತ ಬುಕ್ ಹೌಸ್ , 
ಹೋಟೆಲ್ ಶಾಂತಿಸಾಗರ ನೆಲ ಮಾಳಿಗೆ,
ಬಸವನ ಗುಡಿ ರಸ್ತೆ ,ಬೆಂಗಳೂರು - 560 019 ,
ಫೋನ್ :080 26602530 , ಮೊಬೈಲ್ :94485 05732
ಮೊದಲ ಮುದ್ರಣ : 2013
ಪುಸ್ತಕದ ಅಳತೆ : 1/8 ಡೆಮ್ಮಿ , ಪುಟಗಳು : 336 ಪುಟ , ಮೌಲ್ಯ : ರೂಪಾಯಿ 300/=
ಕೃತಿ ಲಭ್ಯವಿರುವ ಪುಸ್ತಕ ಮಳಿಗೆಗಳು :1 ಪ್ರಚೇತ ಬುಕ್ ಹೌಸ್ ಬೆಂಗಳೂರು, 
2 ಸಾಹಿತ್ಯ ಕೇಂದ್ರ ಮಂಗಳೂರು , 
3 ಯುನಿವರ್ಸಲ್ ಬುಕ್ ಸೆಲ್ಲೆರ್ಸ್ ಉಡುಪಿ , 
4 ಸೀತಾ ಬುಕ್ ಹೌಸ್ ಉಡುಪಿ ಹಾಗೂ
                                                 5 ನವಕರ್ನಾಟಕ 
                                               6 ,ಸಪ್ನಾ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.










No comments:



Copy rights reserved
ಸುಮಾರು ಮೂರು ವರ್ಷ ಎಂಟು ತಿಂಗಳ ಮೊದಲು ನಾನು ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು ಸರಣಿ ಆರಂಭಿಸಿದೆ.ತುಳು ವಿದ್ವಾಂಸರ ಕೃತಿ ಗಳನ್ನು ಒಟ್ಟು ಹಾಕಿ ಹುಡುಕಿದಾಗ ಸುಮಾರು ನೂರು ನೂರೈವತ್ತು ದೈವಗಳ ಮಾಹಿತಿ ಸಿಕ್ಕವು.ನನ್ನ ಕ್ಷೇತ್ರ ಕಾರ್ಯದಲ್ಲಿ ಸುಮಾರು ನೂರ ಐವತ್ತು ನೂರೆಂಬತ್ತು ದೈವಗಳ ಮಾಹಿತಿ ಸಿಕ್ಕಿದ್ದವು.ಹಾಗಾಗಿ ಇನ್ನೂರೈವತ್ತು ದೈವಗಳ ಬಗ್ಗೆ ಬರೆಯಲು ಸಾಧ್ಯವಾಗಬಹುದು ಎಂದು ಭಾವಿಸಿದ್ದೆ ಬರೆಯುತ್ತಾ ಹೋದಂತೆಲ್ಲ  ಅನೇಕ ದೈವಗಳ ಮಾಹಿತಿ ಸಿಕ್ಕವು.ಈಗ ಒಟ್ಟು ನಾನ್ನೂರ ಹದಿನೈದು ದೈವಗಳ ಬಗ್ಗೆ ಬ್ಲಾಗ್ ನಲ್ಲಿ ಬರೆದೆ.ಇನ್ನೂ ಐವತ್ತು ಅರುವತ್ತು ದೈವಗಳ ಬಗ್ಗೆ ಬರೆಯಲು ಬಾಕಿ ಇದೆ ಸಮಯ ಸಿಕ್ಕಾಗ ಬರೆಯುತ್ತೇನೆ .ಕಾಪಿ ಮಾಡುವ ಕೃತಿಚೋರರ ಹಾವಳಿಯಿಂದಾಗಿ ಹೆಚ್ಚಿನ ಬರಹಗಳನ್ನು ಹಿಂದೆ ತೆಗೆದಿರುವೆ.ಈ ದೈವಗಳ ಕುರಿತಾಗಿ ಮಾಹಿತಿಗಾಗಿ ಆಸಕ್ತರು ಸಂಪರ್ಕಿಸಿದರೆ ನನ್ನಲ್ಲಿ ಇರುವ ಮಾಹಿತಿಯನ್ನು ಕೊಡುತ್ತೇನೆ. ಒಟ್ಟು ಒಂದು ಸಾವಿರದ ಐದುನೂರ ಹನ್ನೆರಡು ದೈವಗಳ ಹೆಸರುಗಳು ಸಿಕ್ಕಿವೆ.ನನ್ನ ಸಂಗ್ರಹದ   ಸಾವಿರದ ನಾನ್ನೂರ ಮೂವತ್ತೈದು ಹೆಸರುಗಳು ಅಣಿ ಅರದಲ ಸಿರಿ ಸಿಂಗಾರ ಗ್ರಂಥದಲ್ಲಿ ಪ್ರಕಟವಾಗಿವೆ .ಆಸಕ್ತರು ನೋಡಬಹುದು.ಮಾಹಿತಿ ಸಂಗ್ರಹದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು
ನಾನು ಮಾಹಿತಿ ಸಂಗ್ರಹಿಸಿದ 415 ದೈವಗಳು ©ಡಾ.ಲಕ್ಷ್ಮೀ ಜಿ ಪ್ರಸಾದ
1 ಅಕ್ಕಚ್ಚು
2 ಅಕ್ಕ ಬೋಳಾರಿಗೆ
3 ಅಕ್ಕೆರಸು
4 ಅಕ್ಕೆರಸು ಪೂನ್ಜೆದಿ
5 ಅಕ್ಕೆರ್ಲು
6 ಅಂಬೆರ್ಲು
7 ಅಗ್ನಿ  ಚಾಮುಂಡಿ ಗುಳಿಗ
8 ಅಚ್ಚು ಬಂಗೇತಿ
9 ಅಜ್ಜ ಬೊಳಯ
10 ಅಜ್ಜಿ ಕುಲೆ
11ಅಜ್ಜಿ ಭೂತ
12ಅಜ್ಜಿ ಬೆರೆಂತೊಲು
13ಅಜ್ಜೆರ್
14ಅಜ್ಜೆರ್ ಭಟ್ರು
15ಅಟ್ಟೋಡಾಯೆ
16ಅಡ್ಯಲಾಯ
17 ಅಡ್ಯಂತಾಯ
18ಅಡಿಮಣಿತ್ತಾಯ
19 ಅಡ್ದೊಲ್ತಾಯ,
20 ದೈವ ಸಾದಿಗೆ ,
21ದೈವನ ಮುಟ್ಟುನಾಯೆ
22ಒಲಿಪ್ರಾಂಡಿ
23ಅಣ್ಣಪ್ಪ
24ಅಣ್ಣೋಡಿ ಕುಮಾರ
25ಕಿನ್ಯಂಬು
 26ಅತ್ತಾವರ ದೆಯ್ಯೊಂಗುಳು
 27ಅಮಣ ಬನ್ನಾಯ
28ಅಮೆತೋಡು ಆನೆ ಬೈದ್ಯ
29 ಅಬ್ಬಗೆ
30 ದಾರಗೆ
31ಸೊನ್ನೆ
32ಗಿಂಡೆ
33ಸಿರಿ
34ಕುಮಾರ
35ಸಾಮು
36ಅಬ್ಬೆ ಜಲಾಯ
37 ಅಯ್ಯೆರ್ ಬಂಟೆರ್
38ಅರಬ್ ಭೂತ
39ಬ್ರಾಂದಿ ಭೂತ
40 ಅರಸಂಕಲ
41 ಅರಮನೆ ಜಟ್ಟಿಗ
42ನೇತ್ರಾಣಿ ಜಟ್ಟಿಗ
43ಹೊಗೆವಡ್ಡಿ ಜಟ್ಟಿಗ
44 ಅಸುರಾಳನ್
45 ಅಂಕೆ
46 ಉಮ್ಮಯ
47 ಅಂಗಾರ ಬಾಕುಡ
48ಅಂತ ಬೈದ್ಯ
49ಆಚಾರಿ ಭೂತ
50ಆಟಕಾರ್ತಿ
 51ಆಲಿ ಭೂತ
52ಇಷ್ಟ ಜಾವದೆ
53ಇಲ್ಲತ್ತಮ್ಮ ಕುಮಾರಿ
54ಉಗ್ಗೆದಲ್ತಾಯ
55 ಉಮ್ಮಚ್ಚಿ/ ಐಸಾಬಿ
56ಉಮ್ಮಲ್ತಿ
57ಉಮ್ಮು ಬೋವ
58 ಉಮ್ಮಣ ಬೋವ
58ಎಲ್ಲು ಬೋವ
60 ಎಲ್ಯಣ ಬೋವ
61ಉರವ
62ಎರು ಬಂಟ
63ಎಂಬ್ರಾನ್ ದೇವ
64ಓಣಂ ಪೊಟ್ಟನ್
65ಉಳ್ಳಾಲ್ತಿ
66ಉಳ್ಳಾಯ
67 ಉರವ
68 ಎರುಬಂಟ
69ಉರಿ ಮರ್ಲ
70 ಎಲ್ಯಕ್ಕ
71 ಮಲ್ಲಕ್ಕ
72ಎರು
73 ಶೆಟ್ಟಿ
74ಎಲ್ಯಕ್ಕೇರ್
75 ನೇಲ್ಯಕ್ಕೆರ್
76ಎಲ್ಯನ್ನೇರ್
77ನೇಲ್ಯನ್ನೆರ್
78ಎರಿಯಜ್ಜ
79ಒಕ್ಕು ಬಲ್ಲಾಳ
80ಒರು ಬಾಣಿಯೆತ್ತಿ
81 ನೆಲ್ಲೂರಾಯ
82 ಓಟೆಚಾರಾಯ
83 ಓಣಂ ಪೊಟ್ಟನ್
84ಓಪೆತ್ತಿ ಮದಿಮಾಲ್
85 ಕಚ್ಚೂರ ಮಾಲ್ಡಿ
86 ಕೋಟೆದ ಬಬ್ಬು
87 ಕಚ್ಚೆ ಭಟ್ಟ
88 ಕಟದ
89 ಕಾನದ
90 ಕಟ್ಟು ಎಡ್ತುನ್ ಕುಟ್ಟಿ
©ಡಾ.ಲಕ್ಷ್ಮೀ ಜಿ ಪ್ರಸಾದ
91ಕಟ್ಟೆದಲ್ತಾಯ
92 ಕಡವಿನ‌ ಕುಂಞ
93 ಕಡಂಗಲ್ಲಾಯ
94ಮದಂಗಲ್ಲಾಯ
94ಕಡಂಬಳಿತ್ತಾಯ
96ಕಣ್ಣಗಿ ಭಗವತಿ
97ಕತ್ತಲೆ ಬೊಮ್ಮಯ
98 ಕನ್ನಡ ಬೀರ
99 ಕನ್ನಡ ಭೂತ
100 ಕನ್ಯಾಕುಮಾರಿ
101ಕಪ್ಪಣ ಸ್ವಾಮಿ
102ಕಬಿಲ
103 ಕಾರಿ
104 ಕರ್ನಗೆ
105 ಕರಣಿಕ
106ಕರಿಮಲೆ ಜುಮಾದಿ
107 ಕರಿಯಣ್ಣ
108 ಕೆಂಚಣ್ಣ
109ಪಾಪಣ್ಣ
110ಲಕ್ಷ್ಮೀ ನರಸಿಂಹ
111ಕರಿಯಣ್ಣ ನಾಯಕ
112ಕರೊಟ್ಟಿ
113 ಕುಮ್ಮಲುನ್ನಿ
114ಕಲೆಂಬಿತ್ತಾಯ
115ಭಟ್ರು ನಾಯಕ
116 ಕಲಿಯಾಟ ಅಜ್ಜಪ್ಪ
117 ಕಾಟಾಳ ಬೊಲ್ತು
118ಕಲ್ಕುಡ
119 ಕಲ್ಲುರ್ಟಿ
120ಕಳ್ಳ
121 ಪೋಲಿಸ್
©ಡಾ.ಲಕ್ಷ್ಮೀ ಜಿ ಪ್ರಸಾದ
122 ಸೇನವ
123 ಪಟ್ಲೆರ್
124ಬಲಾಯಿ ಮಾರೆರ್
125 ತಿಗ ಮಾರೆರ್
126 ಶಾನುಭೋಗ
127 ಕಂಡನಾರ ಕೇಳನ್
128ಕಂರ್ಭಿ ಬೈದ್ಯೆದಿ
129 ಕಾಜಿ ಮದಿಮಾಲ್ ಕುಲೆ
130 ಕಾಡೆದಿ
131 ಕಾಂತಬಾರೆ
132 ಬೂದಬಾರೆ
133 ಕಾಂತೇರಿ ಜುಮಾದಿ ಬಂಟ
134 ಕಾನಲ್ತಾಯ
135  ಕಾರಿಂಜೆತ್ತಾಯ
136 ಕಾಳರಾತ್ರಿ
137 ಕಿನ್ನಿದಾರು
138ಕಿನ್ನಿಮಾಣಿ
139 ಪೂಮಾನಿ
140ಕಿಲಮರತ್ತಾಯ
141ದೆಸಿಲು
142ಕುಕ್ಕೆತ್ತಿ
143 ಬಳ್ಳು ಭೂತ
 144ಕುಜುಂಬ ಕಾಂಜವೆರ್
145ಕುದುರೆತ್ತಾಯ
146 ಕುರವ
147ಕುರೆ ಪೆರ್ಗಡೆ
148 ಕುಲ ಮಹಾ ಸ್ತ್ರೀ
149 ಅಜ್ಜಮ್ಮ
150. ಹಸಲ
151 ಕುಲೆ ಮಾನಿಗ
152ಕುಲೆ ಭೂತ
153 ಕುಂಞಮ್ಮ ಆಚಾರ್ದಿ
154 ಕುಂಞಾಳ್ವ ಬಂಟ
155 ಕುಂಞಿ ಭೂತ
156 ಕುಂಞಿರಾಮ ಕುರಿಕ್ಕಳ್
157  ಕುಂಜ‌ಕುಂಜರಾಯ
158 ಅರಸು ಕುಂಜರಾಯ
159 ದೇವ ಕುಂಜರಾಯ
160ಅಣ್ಣು ಕುಂಜರಾಯ
161 ಜನಾರ್ದನ ಕುಂಜರಾಯ
162ಕುಂಜೂರಂಗಾರ
163 ಕುಂಡ
164 ಮಲ್ಲು
165 ಕುಂಟಲ್ದಾಯ
166 ಕುಂಟಿಕಾನ ಕೊರವ
167 ಕೂಜಿಲು
168 ಕೊನ್ನೋಟು ಕಡ್ತ
169ಕೊರಗ ತನಿಯ
170 ಕೊರತಿ
171 ಸತ್ಯಂಗಳದ ಕೊರತಿ
172 ಕೊಲ್ಲಿ‌ಕುಮಾರ
173ಕೋಟಿ
174ಚೆನ್ನಯ
175ಕೋಟೆರಾಯ
176 ಕೋರಚ್ಚನ್
177 ಕೋಲು ಭಂಡಾರಿ
178 ಗಣಪತಿ ಕೋಲ
179 ಗಂಗಮ್ಮ
180 ಗಂಡಗಣಗಳು
181 ಗಂಧರ್ವ
182 ಗಿಡಿರಾವಂತ
183 ಗಿಳಿರಾಮ
184 ಗಿರಾವು
185 ಗುದ್ದೊಲಿ‌ಮೀರಾ
186 ಗುರು ಕಾರ್ನೂರು
187 ಗುಳಿಗ
188  ರಾವು ಗುಳಿಗ
189 ಸುಬ್ಬಿಯಮ್ಮ ಗುಳಿಗ
190  ಮುಕಾಂಬಿ ಗುಳಿಗ
ಚಾಮುಂಡಿ
191ಕರಿ ಚಾಮುಂಡಿ
192ಕೆರೆ ಚಾಮುಂಡಿ
193 ನಾಗ ಚಾಮುಂಡಿ
194 ರಕ್ತ/ ಪಾಪೆಲು ಚಾಮುಂಡಿ
195 ರುದ್ರ ಚಾಮುಂಡಿ
196ಗುಡಚಾಮುಂಡಿ
197 ಪಿಲಿ ಚಾಮುಂಡಿ
198 ಕೊಮಾರು ಚಾಮುಂಡಿ
ಚಿಕ್ಕು©ಡಾ.ಲಕ್ಷ್ಮೀ ಜಿ ಪ್ರಸಾದ
199 ದೊಟ್ಟೆಕಾಲು ಚಿಕ್ಕು
200 ಮರ್ಲು ಚಿಕ್ಕು
201 ಬಗ್ಗು ಚಿಕ್ಕು
202 ಬಾಲು ಚಿಕ್ಕು
203 ಚೆನ್ನಿಗರಾಯ
204ಚೆಂಬಿಲೋಟ್ ಭಗವತಿ
205 ಚೆಂಬುರ್ಪುನ್ನಾರ್
206ಚೊನ್ನಮ್ಮ ಭಗವತಿ
207  ಜತ್ತಿಂಗ
208 ಜತೆ ಕುಲೆ
209 ಜಮೆಯ
210 ಜಮೇಯತಿ
211 ಜಂಗ ಬಂಟ
212ಜಾನು ನಾಯಕ
213 ಜಾಲ ಬೈಕಾಡ್ತಿ
214 ಜೋಕುಲು ದೈವಗಳು
215 ಡೆಂಜಿ ಪುಕ್ಕ
216 ತಪ್ಪೇದಿ
217 ತಣ್ಣಿ ಮಾನಿಗ
218 ತಂತ್ರಿಗಣ
219 ತಿಮ್ಮಣ್ಣ ನಾಯಕ
220 ತಿಪ್ಪೀಸಾಬ್
221 ತೋಡಕುಕ್ಕಿನಾರ್
222 ದಾರು-1
223 ಕುಂದಯ-1
224 ದಾರು -2
225 ಕುಂದಯ-2
226 ದಾರಂ ಬಳ್ಳಾಲ್ತಿ
227 ದೀಪದ ಮಾಣಿ
228 ದುಗ್ಗಲಾಯ
229 ದೇಬೆ-1
230 ದೇಬೆ -2
231 ದೇವಾನು ಪಂಬೆದಿಯಮ್ಮ
232 ದೇಯಿ ಬೈದ್ಯೆದಿ-1
233 ದೇಯಿ ಬೈದ್ಯೆದಿ-2
234ದೇಸಿಂಗ ಉಳ್ಳಾಕುಲು
235 ನಾಗ ಕನ್ನಿಕೆ
236  ನಾಗ ಭೂತ
237-38ನಾರಾಯಣ ಮಾಣಿಲು
239ನಾರಳತ್ತಾಯ
240 ನುರ್ಗಿ ಮದಿಮಾಲ್
241 ನೆತ್ರಾಂಡಿ
242 ನೇರಳತ್ತಾಯ
243ನೈದಾಲ ಪಾಂಡಿ
244 ಪಟ್ಟೋರಿತ್ತಾಯ
245 ಪಡವೀರನ್
2446ಪತ್ತೊಕ್ಕೆಲು ಜನಾನು ದೈವ
247 ಪರವ
248. ಪರಿವಾರ ನಾಯಕ
249 ಪಂಜುರ್ಲಿ
250 ಸೇಮಕಲ್ಲ ಪಂಜುರ್ಲಿ
251ಬಗ್ಗು ಪಂಜುರ್ಲಿ
252 ಅಲೇರ ಪಂಜುರ್ಲಿ
253ಕುಪ್ಪೆಟ್ಟಿ ಪಂಜುರ್ಲಿ
254 ಪುದ
255ಪುದಿಯ ಭಗವತಿ
2556ಪಾಡಾಂಗರ್ ಕುಂಞರ ವೀರನ್
257ಪುದರ್ಚಿನ್ನ ಬಂಟ
2578ಪುಲಿಮರಂಞತೊಂಡನ್
259 ಪೂಂಕಣಿ ಮಾಲಾ ಭಗವತಿ
260ಬಪ್ಪಿರಿಯನ್
264 ಸಹೋದರರು
265ಪೆರಿಯಾಟ್
266  ಪೆರುಂಬಳಯಚ್ಚನ್
ಪುರುಷ ಭೂತ
267 ಕನ್ನಡ ಯಾನೆ ಪುರುಷ ಭೂತ
268ಕಾಂಬೋಡಿದ ಪುರ್ಷ ಭೂತ
269  ಗರೊಡಿದ ಪುರುಷರಾಯ
 270-77 ಪುಲಿಯೂರ್ ಕಾಳಿ
ಪುಳ್ಳಿಕರಂಕಾಳಿ
ಕರಿಂತಿರಿ ನಾಯರ್
 ಐವರು ಹುಲಿ ದೈವಗಳು
278 ಪೆಲಡ್ಕತ್ತಾಯ
279 ಪೆರುಂಬಳಯಚ್ಚನ್
280 ಪೊಟ್ಟ
281ಬ್ರಾಹ್ಮಣತಿ
282-88ಪೊನ್ನಂಗಾಲತಮ್ಮೆ ಮತ್ತು ಸಹೋದರರು
289 ಪೊಸಮಹರಾಯ
290ಮಾಡ್ಲಾಯಿ
291 ಪೋತಾಳ
292 ಪೋಲಿಸ್ ತೆಯ್ಯಂ
293 ಫುಲಂದಾಯ ಬಂಟ
294 ಬಗ್ಗ ಪೂಜಾರಿ
295 ಬಚ್ಚನಾಯಕ
296 ಕೋಟಿನಾಯಕ
297  ಬೈಸುನಾಯಕ
298   ಬಬ್ಬರ್ಯ-1
299 ಬಬ್ಬರ್ಯ- 2
300  ಬಲವಾಂಡಿ
301ಬಲ್ಲಮಂಜತ್ತಾಯ
302  ಮಂಗಾರದ ಅರಸು
303ಬವನೊ
304 ಬಸ್ತಿ ನಾಯಕ
305 ಬಂಟ ಜಾವದೆ
306 ಬಂಡಿರಾಮ
307 ಬ್ರಾಣ ಕುಲೆ
308 ಬಿಲ್ಲಾರ
309  ಬಿಲ್ಲಾರ್ತಿ
310  ಬಿರಣ ಕೋಲ
311ಬಿರ್ಮಣಾಚಾರಿ
312 ಬೀರಣ್ಣಾಳ್ವ
313ಬೀರ್ನಾಚಾರಿ
314 ಬೆರ್ಮೆರ್
315 ಬೆಲೆಟೆಂಗರಜ್ಜ
316ತಂಗಡಿ
317 ಬೇಡವ
318 ಬೊಲ್ಲ ಬೈದ್ಯ
319  ಭಟ್ರು ಭೂತ
320 ಮಾಣಿ ಭೂತ
321 ಭದ್ರಕಾಳಿ
322 ವಣ್ಣಾತಿ
323  ಭೂತರಾಜ
324 ಮಡಿಕತ್ತಾಯ
325 ಮದನಕ್ಕೆ ದೈಯಾರ್
326  ಮದ್ಮಾಲ್
327  ಮದಿಮ್ಮಾಯ
328 ಮದಿಮ್ಮಾಲ್
329  ಮನವಾಟ್ಟಿ ಅಮ್ಮ
330  ಮನಕೋಟ್ ಅಮ್ಮ
331 ಮರುತಿಯೋಡನ್
332 ಮರ್ಲು ಜುಮಾದಿ
333ಮರ್ಲು ಮಾಣಿ
334 ಮರ್ಲು ಮೈಯೊಂದಿ
335 ಮಲ್ಯಾಳ ಭಟ್ರು
336 ಮಂಡೆಕ್ಕಾರ ಕಲ್ಲುರ್ಟಿ
337 ಮಂತ್ರ ದೇವತೆ
338 ಮಂದ್ರಾಯ
339ಮಾಕ್ಕಂ ಭಗವತಿ,
340 ಚಾತು
341  ಚೀರು
342 ಮಾದ್ರಿತ್ತಾಯ
343ಕಾಯರ್ತಾಯ
344 ಮಾಪುಲ್ತಿ ಧೂಮಾವತಿ
345 ಮಾಪುಳೆ -1
346 ಮಾಪುಲ್ತಿ-1
347ಮಾಪುಳೆ -2
348  ಮಾಪುಲ್ತಿ-2
349  ಮಾಯಂದಾಲ್
359 ಮಾಣಿ ಬಾಲೆ
351 ದುಗ್ಗಮೆ
352ತನ್ನಿಮಾಣಿಗ -2
353 ಮಾಲಿಂಗರಾಯ
354 ಮಾಯೊಲು
355 ಮಾಯೊಲಜ್ಜಿ
356 ಮಾಸ್ತಿಯಮ್ಮ
357ಮಿತ್ತ ಮೊಗರಾಯ
358  ಪಟ್ಟದ ಮುಗೇರ
359 ಬಡಜ
ಮಿತ್ತೂರು ನಾಯರ್ ದೈವಗಳು
360 ಚಾತು
361ಚಾಂದು
362ಭಂಡಾರಿ
363 ಮುಕ್ರಿಪೋಕ್ಕನ್ನಾರ್
364 ಮುಗೇರ ಕಾಳು
365 ಮುಚ್ಚಿಲೋಟ್ ಭಗವತಿ
366 ಮುತ್ತು ಮಾರಿಯಮ್ಮ
367-68ಮುಸ್ಲಿಮರ ಮಕ್ಕಳು
369 ಮುಂಡಂತಾಯ
370 ಮೂಡೊಟ್ನಾರ್
371 ಪಡ್ವೆಟ್ನಾರ್
372ಮೂಲಂಪೆತ್ತಮ್ಮ
373ಮುತ್ತಪ್ಪನ್
374ಮೂವ
375 ಮೇಲಂಟಾಯ
376  ಮೈರೆ
377  ಮೈಸಂದಾಯ
378 ಯಕ್ಷಿ
379 ಯೋಗ್ಯೆರ್ ನಂಬೆಡಿ
380ರಕ್ತೇಶ್ವರಿ
381 ವಡ್ಡಮರಾಯ
382 ವಯನಾಟ್ ಕುಲವನ್
©ಡಾ.ಲಕ್ಷ್ಮೀ ಜಿ ಪ್ರಸಾದ
383ವಿಷ್ಣು ಮೂರ್ತಿ
384 ಪಾಲಂದಾಯ ಕಣ್ಣನ್
385 ವೆಳ್ಳು ಕುರಿಕ್ಕಳ್
386  ಶಗ್ರಿತ್ತಾಯ
387  ಶಂಕರ ಬಡವಣ
388  ಶಿರಾಡಿ ಭೂತ
389 ಸುತ್ತುಕೋಟೆ ಚಾಮುಂಡಿ
390 ಸಂನ್ಯಾಸಿ ಗುಳಿಗ
391 ಸಂನ್ಯಾಸಿ ಮಂತ್ರದೇವತೆ
392 ಸಂಪ್ರದಾಯ
393 ಪನಯಾರ್
394 ಸೀರಂಬಲತ್ತಾಯ
395 ಹನುಮಂತ
396ಹಸರ ತಿಮ್ಮ
397 ಹುಲಿ
398ಹಳ್ಳತ್ತಾಯ
399-409ಹಾಯ್ಗುಳಿ
ಮತ್ತು ಪರಿವಾರ ದೈವಗಳು
410ಹಿರೇ ನಂದಿ
411 ಕಿರೇ ನಂದಿ
412ಹೊಸಮ್ಮ
413ಕುಲೆಬಂಟೆತ್ತಿ
414 ಕ್ಷೇತ್ರ ಉಳ್ಳಾಯ
415 ಕುಪ್ಪೆಟ್ಟಿ ಪಂಜುರ್ಲಿ
© ಡಾ.ಲಕ್ಷ್ಮೀ ಜಿ ಪ್ರಸಾದ
Copy rights reserved