Saturday, 9 August 2014

ಸಂಸ್ಕೃತವೆಂದರೆ ಬರಿಯ ಭಾಷೆಯಲ್ಲ -ಡಾ ಲಕ್ಷ್ಮೀ ಜಿ ಪ್ರಸಾದ

ಹೌದು ನನ್ನ ಪಾಲಿಗೆ ಸಂಸ್ಕೃತವೆಂದರೆ ಬರಿಯ ಭಾಷೆಯಲ್ಲ ,ನನಗೆ ಬದುಕಿಗೆ ಪ್ರೇರಣೆ ,ನನ್ನದೇ ಆದ ಸಿದ್ಧಾಂತಗಳೊಂದಿಗೆ ಬದುಕಲು ಅಡಿಪಾಯ ಹಾಕಿ ಕೊಟ್ಟ ಸಂಸ್ಕೃತವನ್ನು ನಾನೆಂತು ಮರೆಯಲಿ ?
ಇಂದು ಕನ್ನಡ ಉಪನ್ಯಾಸಕಿಯಾಗಿದ್ದರೂ ಶುದ್ಧ ಭಾಷಾ ಜ್ಞಾನ ,ವ್ಯಾಕರಣ ಜ್ಞಾನ ,ಛಂದಸ್ ,ಕಾವ್ಯ ಶಾಸ್ತ್ರಗಳ ಜ್ಞಾನ ವನ್ನು ನಾನು ಸಂಸ್ಕೃತದಿಂದಲೇ ಪಡೆದೆ.ಒಳ್ಳೆಯ ವಾಗ್ಮಿಯಾಗಲೂ ಸಂಸ್ಕೃತವೇ ಕಾರಣ ಎಲ್ಲಕ್ಕಿಂತ ಹೆಚ್ಚಾಗಿ ಬದುಕಿಗೆ ಮಾರ್ಗ ದರ್ಶನ ಮಾಡುವ ಸಂಸ್ಕೃತವನ್ನು ಹೇಗೆ ಮರೆಯಲಿ


 ಸ್ಕಾಲರ್ ಶಿಪ್ ಕೊಟ್ಟು ಸಂಸ್ಕೃತ ಎಂ ಎ ಗೆ ಕಟೀಲಿನ ಸಂಸ್ಕೃತ ಕಾಲೇಜಿನಲ್ಲಿ  ಅಡ್ಮಿಷನ್ ಮಾಡಿಕೊಂಡ ಪ್ರಿನ್ಸಿಪಾಲ ರಾದ ಡಾ.ಜಿ ಎನ್ ಭಟ್ ರ ಆತ್ಮೀಯತೆ ಹಾಗೂ  ಗುರಿಯೆಡೆಗೆ ಸಾಗುವ ಅಚಲ ನಿರ್ಧಾರ , ಜ್ಞಾನ ಭಂಡಾರವಾಗಿದ್ದ ಡಾ.ಕೆ ನಾರಾಯಣ ಭಟ್ಟರ ಕಂಚಿನ ಕಂಠದ ಪಾಠ ಕಷ್ಟ ಕಾಲದಲ್ಲಿ ನೆರವಾದ ಅವರ ಸಹೃದಯತೆ .ಪದ್ಮನಾಭ ಮರಾಟೆಯವರು ಆಗಿನ್ನೂ ಅನನುಭವಿಗಳಾಗಿದ್ದರೂ ಮಾಡಿದ ವಿದ್ವತ್ ಪೂರ್ಣ ಪಾಠ ,ಎರಡು ವರ್ಷ ಇರಲು ಸೂರು ಕೊಟ್ಟ ಎಕ್ಕಾರಿನ ನಾಗವೇಣಿ ಅಮ್ಮ .ಎರಡು ವರ್ಷ ಪುಷ್ಕಳವಾಗಿ ಉಂಡ  ಕಟೀಲು ಭ್ರಮರಾಂಭ ದೇವಿಯ ಪ್ರಸಾದ ರೂಪದ ಊಟ ..ಜೊತೆಗೆ ಅಲ್ಲಿ ನ ಪಕ್ಷಪಾತ ಧೋರಣೆ ,ಗುಂಪು ಗಾರಿಕೆ.. ಕೊನೆಗೂ ಪ್ರಥಮ ರಾಂಕ್ ತೆಗೆದು ವಿಜಯದ ನಗು ಬೀರಿದ ಕ್ಷಣಗಳು ,ಚಿನ್ನದ ಪದಕಗಳನ್ನು ಸ್ವೀಕರಿಸಿದ ಸುವರ್ಣ ಗಳಿಗೆ ..
ಇವನ್ನೆಲ್ಲ ಹೇಗೆ ಮರೆಯಲಿ ..
ಇರಲಿ ಇಂದು ಸಂಸ್ಕೃತ ದಿನ  (ಶ್ರಾವಣ ಪಕ್ಷ ಹುಣ್ಣಿಮೆ )
2003ರಲ್ಲಿ ಮಂಗಳೂರು ಸಂಸ್ಕೃತ ಸಂಘದ ರಜತ ಮಹೋತ್ಸವನಡೆದಿದ್ದು ಆ ಸಂದರ್ಭದಲ್ಲಿ ಪ್ರಕಟಿಸಿದ ಸ್ಮರಣ ಸಂಚಿಕೆಯಲ್ಲಿ ನನ್ನ ಒಂದು ಲೇಖನ ಸೇರಿದಂತೆ ಅನೇಕರ ಅತ್ಯಪೂರ್ವ ಲೇಖನಗಳಿವೆ
ಅದರ scan copy ಯನ್ನು ಹಾಕಿದ್ದೇನೆ
ಸಂಸ್ಕೃತ ಅಭಿಮಾನಿಗಳು ಓದಬೇಕಾಗಿ ವಿನಂತಿ
No comments:

Post a Comment