ಚಿತ್ರ ಕೃಪೆ :ಧರ್ಮ ಚಾವಡಿ ನಮ್ಮ ತುಳುನಾಡು
ಮಾನವ ಸಹಜ ಅಲಂಕಾರದಲ್ಲಿರುವ ಕುಂಟಲ್ದಾಯ ಬಹಳ ಅಪರೂಪದ ದೈವತ .ಎಲ್ಲ ಭೂತಗಳಿಗೆ ಇರುವಂತೆ ತೆಂಗಿನ ತಿರಿಯ ಅಲಂಕಾರವಾಗಲಿ ಮುಡಿ ಜಕ್ಕೆಲಣಿ ಗಳಾಗಲಿ ಈ ದೈವಕ್ಕೆ ಇರುವುದಿಲ್ಲ .ಮುಗವೂ ಇಲ್ಲ .ಆಯುಧ ಇರುಸುವ ಭಂಡಾರ ,ಮಾಡ ಕೂಡಾ ಇಲ್ಲ .ಬೇರೆ ಪ್ರಧಾನ ದೈವದ ಸೇರಿಗೆ ದೈವವಾಗಿ ಆರಾಧನೆ ಹೊಂದುವುದಾದರು ಬಹಳ ಕಾರಣಿಕ ಎಂಬ ನಂಬಿಕೆ ಜನರದ್ದು
(C).ಡಾ.ಲಕ್ಷ್ಮೀ ಜಿ ಪ್ರಸಾದ
ಈ ದೈವಕ್ಕೆ ಮೂರ್ತೆದಾರರ ಕತ್ತಿಯೇ ಆಯುಧ .ಇದು ಆತನ ಮಾನವ ಮೂಲದ ವೃತ್ತಿಯನ್ನು ಸೂಚಿಸುತ್ತದೆ.ಮೂಲತಃ ಈತ ಮೂರ್ತೆದಾರ ಎಂದರೆ ಬೈದ್ಯ ಸಮುದಾಯಕ್ಕೆ ಸೇರಿದ ಅನಾಥ ಬಾಲಕ
ಸಾಮನ್ಯವಾಗಿ ವಾರ್ಷಿಕ ಕೋಲ ಈತನಿಗೆ ಎಲ್ಲೂ ಇರುವುದಿಲ್ಲ .ಕೆಲವೆಡೆ ಈತನನ್ನು ಹನ್ನೆರಡು ವರ್ಷಗಳಿಗೊಮ್ಮೆ ಕೋಲ ಕೊಟ್ಟು ಆರಾಧಿಸಿದರೆ ಕೆಲವೆಡೆ ಐದು ವರ್ಷಕ್ಕೊಮ್ಮೆ ಆರಾಧನೆ ಇದೆ ಬಂಟ್ವಾಳ ,ಪುತ್ತೂರು ತಾಲೂಕುಗಳಲ್ಲಿ ಒಂದೆರಡು ಕಡೆ ಮಾತ್ರ ಈತನಿಗೆ ಆರಾಧನೆ ಇದೆ
ಈತನ ಕೋಲದಲ್ಲಿ ದೈವವು ಕತ್ತಿಯಲ್ಲಿ ಕೈಕಾಲು ಮೈಗೆ ಕಡಿದು ಕೊಂಡು ಮೈಯಿಡೀ ಗಾಯ ಮಾಡಿಕೊಳ್ಳುವ ಸಂಪ್ರದಾಯವಿದೆ .ಇದು ಮೂಲತಃ ಸಾತ್ರ ನಾಡು ಎಂಬ ಅನಾಥ ಬಾಲಕನಿಗೆ ಆತನ ಅತ್ತೆ ಮಾವ ಬಡಿದು ಹೊಡೆದು ಹಿಂಸೆ ಕೊಟ್ಟಿರುವುದರ ಪ್ರತೀಕ
ತಂದೆ ತಾಯಿಯ ರನ್ನು ಕಳೆದು ಕೊಂಡ ಅನಾಥ ಮಗು ಸಾತ್ರ ನಾಡುವನ್ನು ಸೋದರ ಮಾವ ಪ್ರೀತಿಯಿಂದಲೇ ಸಾಕುತ್ತಾನೆ .ಆದರೆ ಹೆಂಡತಿಯ ಚಾಡಿ ಮಾತುಗಳನ್ನು ಕೇಳಿದ ಮಾವ ಒಂದಿನ ಮರ ಹತ್ತಿದ ಅಳಿಯ ಸಾತ್ರ ನಾಡುವನ್ನು ಹಿಡಿದು ಕೆಳಗೆಳೆದು ಕೆಡವುತ್ತಾನೆ .ಹೀಗೆ ದುರಂತವನ್ನಪ್ಪಿದ ಸಾತ್ರ ನಾಡು ಮುಂದೆ ದೈವತ್ವ ಪಡೆದು ಕುಂಟಲ್ದಾಯ ದೈವವಾಗಿ ನೆಲೆ ನಿಲ್ಲುತ್ತಾನೆ .(C).ಡಾ.ಲಕ್ಷ್ಮೀ ಜಿ ಪ್ರಸಾದ

ಅನಾಥ ಮಕ್ಕಳ ಬಗ್ಗೆ ಈ ದೈವಕ್ಕೆ ಅಪಾರ ಕರುಣೆ .ಬಿದ್ದು ಕೈಕಾಲು ಮುರಿದು ,ಉಳುಕು
ಬಿದ್ದವರು ಈ ದೈವಕ್ಕೆ ಜಾರಿಕೆ ಹೇಳಿಕೊಂಡರೆ ಬೇಗ
ಗುಣವಾಗುತ್ತದೆ ಎಂಬ ನಂಬಿಕೆ ಇದೆ ಅದೇ ರೀತಿ ವಾತ, ಪಕ್ಷವಾತ ಆದಾಗ
ಕೂಡ ಈ ದೈವಕ್ಕೆ ಹರಿಕೆ ಹೇಳಿ ನಡೆದು ಕೊಳ್ಳುತ್ತಾರೆ
ಈತ ಮರ ಹತ್ತಿದಾಗ ಎಳೆದು ಹಾಕಿರುವುದರ ಸೂಚಕವಾಗಿ ಇಂದಿಗೂ ಈ ದೈವ ಒಂದು ತಾಳೆ ಮರ ಹತ್ತುವ ಸಂಪ್ರದಾಯ ವಿದೆ
ಈ ಬಗ್ಗೆ ನವೀನ ಕುಮಾರ್ ಮರಿಕೆ ಅವರು ಸಾಕಷ್ಟು ಅಧ್ಯಯನ ಮಾಡಿದ್ದು ಈ ದೈವದ ಪೂರ್ಣ ಪಾಡ್ದನ ಸಂಗ್ರಹ ಮಾಡಿದ್ದಾರೆ ,ಅವರ ಕತ್ತಲಿನಿಂದ ಎಂಬ ಕೃತಿಯಲ್ಲಿ ಈ ದೈವದ ಬಗ್ಗೆ ವಿಸ್ತೃತ ಮಾಹಿತಿ ಇದೆ

ಡಾ.ಲಕ್ಷ್ಮೀ ಜಿ ಪ್ರಸಾದ
ಸಂಶೋಧಕರು ಮತ್ತು ಉಪನ್ಯಾಸಕರು
ಸರ್ಕಾರಿ ಪದವಿಪೂರ್ವ ಕಾಲೇಜ್, ಬೆಳ್ಳಾರೆ
ಸುಳ್ಯ ತಾ ,ದಕ್ಷಿಣ ಕನ್ನಡ ಜಿಲ್ಲೆ
No comments:
Post a Comment