Friday 6 September 2024

ಎದುರು ನೋಡುತ್ತಿದ್ದ ಗ್ರಂಥ ಕೈ ಸೇರಿದಾಗ- ಕರಾವಳಿಯ ಸಾವಿರದೊಂದು ದೈವಗಳು

 


ನಾನು ಒಂದೇ ಸಮನೆ ಎದುರು ನೋಡುತ್ತಿದ್ದ ನಿಮ್ಮ ಹೆಮ್ಮೆಯ ಗ್ರಂಥ ಸುಸ್ಥಿತಿಯಲ್ಲಿ  ಶಿಕ್ಷಕರ ದಿನಾಚರಣೆಯ ಶುಭ ಗುರುವಾರ ದ ದಿನವಾದ ಇಂದು ನನ್ನ ಕೈಸೇರಿತು, 

ಗ್ರಂಥದ ಅಗಾಧತೆಯನ್ನು ಮೇಲ್ನೋಟಕ್ಕೆ ನೋಡಿದ ತಕ್ಷಣ ಅದಕ್ಕಾಗಿ ನೀವು ಪಟ್ಟಿರುವ ಶ್ರಮ ಕಳೆದ ಸಮಯ, ಸಂಪತ್ತಿನ ತ್ಯಾಗಗಳು ಎಷ್ಟಿರಬಹುದು ಎಂದು ಯೋಚಿಸಿಯೇ ನಿಮ್ಮ ಬಗ್ಗೆ ಅಪಾರವಾದ ಗೌರವ ಉಂಟಾಗಿ ನಿಜವಾಗಿಯೂ  ಕಣ್ಣುಗಳು ತುಂಬಿ ಬಂದವು, ನಿಮಗೆ ತಾಯಿ  ಮೂಕಾಂಬಿಕೆಯು ಉತ್ತಮ ಆರೋಗ್ಯ, ನೆಮ್ಮದಿ ಹಾಗೂ ಗೌರವ, ಸಂಪತ್ತನ್ನು ನೀಡಿ ನಿಮ್ಮ ಕನಸುಗಳನ್ನು ನನಸು ಮಾಡಲಿ ಎಂದು  ಪ್ರಾರ್ಥಿಸುತ್ತೇನೆ, ಕೆಲ ಮಾನವರು ಉತ್ತಮ ಕಾರ್ಯಗಳಿಂದ ನಮ್ಮ ನಾಡಿನಲ್ಲಿ ದೈವದ ಸ್ಥಾನ ಪಡೆದುಕೊಳುತ್ತಿದ್ದರು, ನೀವು ಮುಂದಿನ ಪೀಳಿಗೆಗೆ ನಮ್ಮ ದೈವಗಳ ಮಾಹಿತಿಯನ್ನು  ಶ್ರಮಿಸಿ ಸಂಗ್ರಹಿಸಿ ಪ್ರತ್ಯಕ್ಷ ದೈವವಾಗಿಯೇ ಕಾಣುತ್ತಿದ್ದೀರಿ , ನಿಮ್ಮ ಜ್ಞಾನ ಹಾಗೂ ಸಂಕಲ್ಪ ದೈವತ್ವದಷ್ಟೇ ಶ್ರೇಷ್ಠವಾದದು ಅಂದರೆ ಅತಿಶಯೋಕ್ತಿಯಲ್ಲದ ಸತ್ಯ

ಪುಸ್ತಕದ ಓದನ್ನು ಇಂದಿನಿಂದಲೇ ಪ್ರಾರಂಬಿಸುತ್ತೆನೆ. 

ನಿಮ್ಮ ಪಾದಗಳಿಗೆ ತುಂಬ ಹೃದಯದಿಂದ ನಮಸ್ಕಾರಿಸುತ್ತಾ ನಿಮ್ಮ ಆಶೀರ್ವಾದವನ್ನು ಬೇಡುತ್ತೇನೆ - ಅವಿನಾಶ್ ಬಿ ಆರ್ ಕಡೂರು.

Wednesday 28 August 2024

ಬಳ್ಳಿ ಕಾಳ ಬೆಳ್ಳಿ ಕಾದಂಬರಿಯ ಪ್ರಮುಖ ಪಾತ್ರವಾಗಿ ಭೂತಾರಾಧನೆಯ ಲಕ್ಷ್ಮೀ - ಡಾ. ಕೆ ಎನ್ ಗಣೇಶಯ್ಯ

 ಬಳ್ಳಿ ಕಾಳ ಬೆಳ್ಳಿ ಕಾದಂಬರಿಯ ಪ್ರಮುಖ ಪಾತ್ರವಾಗಿ ಭೂತಾರಾಧನೆಯ  ಲಕ್ಷ್ಮೀ - ಡಾ. ಕೆ ಎನ್ ಗಣೇಶಯ್ಯ


ನಗರ ಬಸದಿ ಕೇರಿಯಲ್ಲಿರುವ ಜಟ್ಟಿಗರ ಪೂಜಾ ಮಂಟಪದ ಬಳಿ ನಡೆಯುವ ಪೂಜೆಯನ್ನು ಕಾದಂಬರಿಯ ಒಂದು ಪ್ರಮುಖ ವಸ್ತುವನ್ನಾಗಿಸಿಕೊಳ್ಳುವ ಉದ್ದೇಶದಿಂದ ವಿಷಯಕ್ಕಾಗಿ ಹುಡುಕಾಡುತ್ತಿದ್ದೆ.ಡಾ.ಲಕ್ಷ್ಮೀ ಜಿ ಪ್ರಸಾದರು ಬರೆದಿದ್ದ ಬ್ಲಾಗ್ ನಲ್ಲಿ ದೊರೆತ ಜಟ್ಟಿಗರ ಭೂತಾರಾಧನೆಯ ಬಗೆಗಿನ ವಿವರಗಳು ನಾನು ಕಲ್ಪಿಸಿಕೊಂಡಿದ್ದ ಕೊಂಡಿ ಕೇವಲ ಕಲ್ಪನೆಯಲ್ಲ ಸತ್ಯ ಎನ್ನುವುದಕ್ಕೆ  ಪ್ರಮುಖ ಆಧಾರ ಒದಗಿಸುವುದರ ಜೊತೆಗೆ ಭೂತಾರಾಧನೆಯನ್ನು ಚರಿತ್ರೆ ಹೇಳುವ ಮಾಧ್ಯಮವಾಗಿ ಉಪಯೋಗಿಸಲು ಅನುವು ಮಾಡಿಕೊಟ್ಟವು ಕೂಡ.

ತಕ್ಷಣವೇ ಭೂತಾರಾಧನೆಯ ಬಗ್ಗೆಯೇ ಎರಡರೆಡು ಪಿಎಚ್ ಡಿ ಮಾಡಿ ಹಲವು ಪುಸ್ತಕಗಳನ್ನೂ,ಅನೇಕ ಪ್ರಬಂಧಗಳನ್ನೂ ಬರೆದು ' ಭೂತಾರಾಧನೆಯ ಲಕ್ಷ್ಮೀ' ಎಂದೇ ಗುರುತಿಸಿಕೊಂಡಿರುವ ಡಾ.ಲಕ್ಷ್ಮೀ ಜಿ ಪ್ರಸಾದ ಅವರನ್ನು ಸಂಪರ್ಕಿಸಿ,ಹೆಚ್ಚಿನ ವಿವರಗಳನ್ನು ಚರ್ಚಿಸಲು ವಿವರ ಕೋರಿದಾಗ,ತಾವಾಗಿ ಮನೆಗೆ ಬಂದು ಸುಮಾರು ಮೂರು ಗಂಟೆಗಳ ಕಾಲ ನಮ್ಮ ಕುಟುಂಬದೊಂದಿಗೆ ಜೊತೆ ಬೆರೆತು ತಮ್ಮ ಸಂಶೋಧನೆಯ ಹತ್ತಾರು ಅನುಭವಗಳನ್ನು, ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದಂತೆ ಅವರೇ ಕಾದಂಬರಿಯ ಒಂದು ಪ್ರಮುಖವಾಗಿ ಪಾತ್ರವಾಗಿ ರೂಪುಗೊಳ್ಳಗಿದ್ದರು.ಹಾಗೆಂದೇ ಅವರು ಡಾ.ಲಕ್ಷ್ಮೀ ಪ್ರಸಾದ್ ಅವರ ಆಕರಗಳನ್ನು ಕಾದಂಬರಿಯಲ್ಲಿ ಲಕ್ಷ್ಮೀ ಪೊದ್ದಾರ್ ಉದಾಹರಿಸುವುದು ಓದುಗರಿಗೆ ವಿಚಿತ್ರವಾಗಿ ಕಾಣಬಹುದು. ನಂತರ ಅವರು ಹಲವಾರು ಸಲಹೆಗಳನ್ನು ,ಪಾಡ್ದನಗಳ ತುಳು ಮತ್ತು ಕನ್ನಡದ ಭಾಷಾಂತರವನ್ನೂ,ನೇತ್ರಾಣಿ ಜಟ್ಟಿಗನ ಚಿತ್ರವನ್ನೂ ಒದಗಿಸಿಕೊಟ್ಟಿದ್ದರಿಂದ ಕಾದಂಬರಿಗೆ ಹೊಸ ಆಯಾಮವೇ ದೊರೆಯಿತು. ಬಳ್ಳಿ ಕಾಳ ಕರಿ ಮೆಣಸು ಸಂಪೂರ್ಣವಾಗಿ ಪರಿಷ್ಕರಣೆ ಹೊಂದಿ ಬಿಳಿಯ ಮೆಣಸಾಯಿತು.

(ಕೃಪೆ : ಡಾ.ಕೆ ಎನ್ ಗಣೇಶಯ್ಯ ಅವರ ಬಳ್ಳಿ ಕಾಳ ಬೆಳ್ಳಿ ಕಾದಂಬರಿಯಲ್ಲಿ ಕೊನೆಯಲ್ಲಿ  ಅವರು ಬರೆದುಕೊಂಡ ಬರಹ )

ಕರಾವಳಿಯ ಸಾವಿರದೊಂದು ದೈವಗಳು

 ನನ್ನ  ಪ್ರಕಟವಾಗಲಿರುವ ಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಪರಿಚಯವನ್ನು ಕನ್ನಡ ಪ್ರಭ ಪತ್ರಿಕೆ ಮಾಡಿ ಬೆಂಬಲಿಸಿದೆ.


ಈ ಪುಸ್ತಕ ಬೇಕಾದವರು 9480516684 ಗೆ ವಾಟ್ಸಪ್ ಮೆಸೇಜ್ ಮಾಡಿ ಅಥವಾ ಕರೆ ಮಾಡಿ 


ಬಹಳ ಅಭಿಮಾನದಿಂದ   ಆತ್ಮ ಭೂಷಣ ಭಟ್ ಈ ಪುಸ್ತಕವನ್ನು ಪರಿಚಯಿಸಿದ್ದಾರೆ 

 ಕನ್ನಡ ಪ್ರಭ ಪತ್ರಿಕಾ ಬಳಗಕ್ಕೆ ಧನ್ಯವಾದಗಳು


ನ‌ಭೂತೋ ನ‌ಭವಿಷ್ಯತಿ - ಪವನ್ ಕುಮಾರ್


 ನ‌ಭೂತೋ ನ‌ಭವಿಷ್ಯತಿ

- ಪವನ್ ಕುಮಾರ್ 

ಪುಸ್ತಕ ಸಂಭ್ರಮ


ವಯಸಿನಲ್ಲಿ, ವಿದ್ಯೆಯಲ್ಲಿ, ನಾನು ತುಂಬಾ ಚಿಕ್ಕವ ಆದರೇ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ನಾ ಭೂತೋ, ನಾ ಭವಿಷ್ಯತಿ, ಅನ್ನುವಷ್ಟ ಸುಂದರವಾಗಿದೆ. ಪ್ರತಿ ಮನೆಯಲ್ಲಿ ರಾಮಾಯಣ, ಮಹಾಭಾರತ ಕಥೆ ಗ್ರಂಥ ಪುಸ್ತಕಗಳು ಹೇಗೆಯೋ, ಅದೇ ಸಾಲಿನಲ್ಲಿ ಸೇರುವ ಕೃತಿ. ಅಮ್ಮ ತಾವು ಮಾಡಿದ ಸಾಧನೆ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ, ಕೃತಿ ಚೋರ ಮಾಡುವವರಿಗೆ ಧಿಕ್ಕಾರ. ತಮಗೆ ಮಾತಾ ಸರಸ್ವತಿ ಸಂಪೂರ್ಣ ಒಲಿದ್ದಿದ್ದಾಳೆ. ತಾವು ದೈವಗಳ ಕುರಿತಾದ ಸಮಗ್ರ ಮಾಹಿತಿಯನ್ನು ಅತ್ಯಂತ ಸುಂದರವಾಗಿ ಸಾಮಾನ್ಯ ಜನರಿಗೆ ತಿಳಿಯುವ ಹಾಗೆ ಬರೆದಿದ್ದೀರಾ. ಇಂತಹ ಗ್ರಂಥ ಓದಲು ಪುಣ್ಯ ಮಾಡಿದ್ದೇವೆ ನಾವುಗಳು. ನಿಮ್ಮ ಸಾಧನೆ ದೊಡ್ಡದು. ಇಂತಹ ಗ್ರಂಥ ಬರೆದು ಸಮಾಜಕ್ಕೆ ಕೊಡುಗೆ ನೀಡಿದ ನಿಮಗೆ ನನ್ನ ನಮಸ್ಕಾರಗಳು 🙏🏻🙏🏻🙏🏻🙏🏻ನಿಮ್ಮ ಆಶೀರ್ವಾದ, ಪ್ರೀತಿ ಸದಾ ನಮ್ಮ ಮೇಲೆ ಇರಲಿ 🙏🏻🙏🏻🙏🏻🙏🏻🙏🏻

- ಪವನ್ ಭಟ್

Tuesday 30 July 2024

ಈ ಶತಮಾನದ ಸೋಜಿಗ: ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ


 

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ತುಳುವರ ಭೂತಗಳು ಮತ್ತು ದೈವರಾಧನೆಯ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೆ ರೆಡಿ ರೆಕನರ್ ಆಗಿ ಒದಗಿಬರುವ ಈ *ಕರಾವಳಿಯ ಸಾವಿರದೊಂದು ದೈವಗಳು* ಎಂಬ ಬೃಹತ್ ಕೃತಿಯು ಈ ಶತಮಾನದ ಸೋಜಿಗವೇ ಸರಿ!!

ಈ ಕೃತಿಯಿಂದ "ದೈವಗಳೆಂದರೆ - ಡಾ. ಲಕ್ಷ್ಮಿ ಜಿ. ಪ್ರಸಾದ್, ಲಕ್ಷ್ಮಿ ಜಿ. ಪ್ರಸಾದರೆಂದರೆ ದೈವಗಳು" ಎಂಬಷ್ಟು ವಿಶ್ವಾದಾದ್ಯoತ ಜನಪ್ರಿಯರಾಗಿದ್ದಾರೆ ನಮ್ಮ ಹೆಮ್ಮೆಯ ಡಾ. ಲಕ್ಷ್ಮೀ ಜಿ. ಪ್ರಸಾದರು.ಅವರ ಹೆಸರು ಇನ್ನೂ ಬಾನೆತ್ತರಕ್ಕೇರಲಿ!! 🙏
-ರಾಜಗೋಪಾಲ ಕನ್ಯಾನ .


Friday 14 June 2024

ನ‌ಭೂತೋ ನ‌ಭವಿಷ್ಯತಿ - ಪವನ್ ಕುಮಾರ್

 ನ‌ಭೂತೋ ನ‌ಭವಿಷ್ಯತಿ

- ಪವನ್ ಕುಮಾರ್


 

ಪುಸ್ತಕ ಸಂಭ್ರಮ


ವಯಸಿನಲ್ಲಿ, ವಿದ್ಯೆಯಲ್ಲಿ, ನಾನು ತುಂಬಾ ಚಿಕ್ಕವ ಆದರೇ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ನಾ ಭೂತೋ, ನಾ ಭವಿಷ್ಯತಿ, ಅನ್ನುವಷ್ಟ ಸುಂದರವಾಗಿದೆ. ಪ್ರತಿ ಮನೆಯಲ್ಲಿ ರಾಮಾಯಣ, ಮಹಾಭಾರತ ಕಥೆ ಗ್ರಂಥ ಪುಸ್ತಕಗಳು ಹೇಗೆಯೋ, ಅದೇ ಸಾಲಿನಲ್ಲಿ ಸೇರುವ ಕೃತಿ. ಅಮ್ಮ ತಾವು ಮಾಡಿದ ಸಾಧನೆ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ, ಕೃತಿ ಚೋರ ಮಾಡುವವರಿಗೆ ಧಿಕ್ಕಾರ. ತಮಗೆ ಮಾತಾ ಸರಸ್ವತಿ ಸಂಪೂರ್ಣ ಒಲಿದ್ದಿದ್ದಾಳೆ. ತಾವು ದೈವಗಳ ಕುರಿತಾದ ಸಮಗ್ರ ಮಾಹಿತಿಯನ್ನು ಅತ್ಯಂತ ಸುಂದರವಾಗಿ ಸಾಮಾನ್ಯ ಜನರಿಗೆ ತಿಳಿಯುವ ಹಾಗೆ ಬರೆದಿದ್ದೀರಾ. ಇಂತಹ ಗ್ರಂಥ ಓದಲು ಪುಣ್ಯ ಮಾಡಿದ್ದೇವೆ ನಾವುಗಳು. ನಿಮ್ಮ ಸಾಧನೆ ದೊಡ್ಡದು. ಇಂತಹ ಗ್ರಂಥ ಬರೆದು ಸಮಾಜಕ್ಕೆ ಕೊಡುಗೆ ನೀಡಿದ ನಿಮಗೆ ನನ್ನ ನಮಸ್ಕಾರಗಳು 🙏🏻🙏🏻🙏🏻🙏🏻ನಿಮ್ಮ ಆಶೀರ್ವಾದ, ಪ್ರೀತಿ ಸದಾ ನಮ್ಮ ಮೇಲೆ ಇರಲಿ 🙏🏻🙏🏻🙏🏻🙏🏻🙏🏻

- ಪವನ್ ಭಟ್

Wednesday 13 March 2024

ಕರಾವಳಿಯ ಸಾವಿರದೊಂದು ದೈವಗಳು


 


#ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 


-ನಾಗೇಶ್ ಪೂಜಾರಿ,ವಸಾಯಿ ಪಾಲ್ಘರ್ ಮಹಾರಾಷ್ಟ್ರ

*ಡಾ. ಲಕ್ಷ್ಮಿ ಜಿ ಪ್ರಸಾದ್* ಅವರು ಬರೆದ


ಕೊಡಗು, ಕಾರವಾರದಿಂದ  ಕೊಟ್ಟಯಂವರೆಗಿನ ತುಳು, ಕನ್ನಡ, ಮಲಯಾಳ, ಕೊಡವ ಪರಿಸರದ ಸಾವಿರದ ಇನ್ನೂರ ಇಪ್ಪತ್ತೆಂಟು ದೈವಗಳ ಮಾಹಿತಿಯುಳ್ಳ ಗ್ರಂಥ

*ಕರಾವಳಿಯ ಸಾವಿರದೊಂದು ದೈವಗಳು* ಪುಸ್ತಕ ಓದಿದೆ...... ಓದುತ್ತಾ ಓದುತ್ತಾ ಹೋಗುತ್ತಿರುವಾಗ ಬಹಳಷ್ಟು ವಿಸ್ಮಯ ವಿಚಾರಗಳು ತಿಳಿಯಿತು.....ರೋಮಾಂಚನ ವಾಯಿತು.......ತುಂಬಾ ತುಂಬಾ ಧನ್ಯವಾದಗಳು.....🙏🙏


ನಾಗೇಶ್ ಪೂಜಾರಿ

Vasai, Palghar, Maharashtra.


ಧನ್ಯವಾದಗಳು ಸರ್ ನಿಮಗೆ 🙏