Friday, 12 April 2013

ಸುಬ್ಬಿ ಇಂಗ್ಲೀಷ್ ಕಲ್ತದು : ಮಹಿಳೆ(ಡಾ. ಲಕ್ಷ್ಮಿ ಜಿ ಪ್ರಸಾದ ) ಬರೆದ ಮೊದಲ ಹವಿಗನ್ನಡ ನಾಟಕ

                                 

ಸುಬ್ಬಿ ಇಂಗ್ಲೀಷ್ ಕಲ್ತದು  ಇದು ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ . ಇದನ್ನು ರಚಿಸಿದವರು ಯಾರು ಗೊತ್ತೇ ?! ಇಲ್ಲ ಅವರ  ಹೆಸರು ಯಾರಿಗೂ ಗೊತ್ತಿರುವ ಸಾಧ್ಯತೆ ಇಲ್ಲ  ಯಾಕೆಂದರೆ ಆ ನಾಟಕವನ್ನು ನಾನೇ ಬರೆದದ್ದು . ನಾನು ೭ ನೆಯ ತರಗತಿಯಲ್ಲಿದ್ದಾಗ ಮನೆಯಲ್ಲಿ ಮಕ್ಕಳ ಆಟಕ್ಕಾಗಿ ರಚಿಸಿದ ನಾಟಕ ಇದು .ನಾವು ಅಜ್ಜನಮನೆಯಲ್ಲಿ ೧ ಮಕ್ಕಳು ಸೇರಿ ಯಕ್ಷ ಗಾನ  ನಾಟಕ ಅದು ಇದು ಮಾಡಿ ಗಮ್ಮತ್ತು ಮಾಡು ತ್ತಿದ್ದೆವು. ನಮ್ಮ  ನೆರೆಕರೆಯವರೊಬ್ಬರು ನಮ್ಮ ಅಜ್ಜಿ ದೊಡ್ಡಮ್ಮನವರ ಹತ್ತಿರ ಅದು ಇದು ಮಾತಾಡುತ್ತ ಅವರ ಸಂಬಂಧಿಕರ ಮಗ    ಮಗ ಇಂಜಿನಿಯರ್  ಆಗಿದ್ದು   ಪ್ರಾಥಮಿಕ ಶಾಲೆ ಮಾತ್ರ ಓದಿದ್ದ ತನ್ನ ಅತ್ತೆಯ ಮಗಳನ್ನು ಮದುವೆಯಾದದ್ದು ಅವಳಿಗೆ ಇಂಗ್ಲಿಷ್ ಬಾರದೆ ಇವ  ಪೇಚಾಡುತ್ತಿದ್ದುದು  ಅದೇ ವಿಷಯದಲ್ಲಿ ಜಗಳ ಆಗುತ್ತಿದ್ದುದನ್ನು ಮಾತಿನ ಮಧ್ಯದಲ್ಲಿ  ಹೇಳಿದ್ದನ್ನು ಕೇಳಿಸಿಕೊಂಡಿದ್ದೆ ಇದಕ್ಕೆ ಎಲ್ಲೋ ಕೇಳಿದ  ಜೋಕೆ ಅನ್ನು ಸೇರಿಸಿ ಒಂದು  ನಾಟಕದ ರೂಪ ಕೊಟ್ಟಿದ್ದೆ .ಇದನ್ನು  ನಮ್ಮ ಮನೆ ಮಾತು ಹವ್ಯಕ ಭಾಷೆಯಲ್ಲಿ  ರಚಿಸಿದ್ದೆ . ಇದನ್ನು ನಾನು ೯ ನೆಯ ತರಗತಿ ಓದುತ್ತಿದ್ದಾಗ  ಶ್ರೀ ವಾಣಿ ವಿಜಯ ಪ್ರೌಢ ಶಾಲೆಯಲ್ಲಿ ಅಭಿನಯಿಸಿ ಪ್ರಥಮ ಬಹುಮಾನ ಪಡೆದಿದ್ದೆವು ಈ ನಾಟಕ ವನ್ನು ತುಸು ಪರಿವರ್ತನೆ ಮಾಡಿಕೊಂಡು ನನ್ನ ತಂಗಿ ರಾಜೇಶ್ವರಿ ಹಾಗು ಅವಳ ಸಹಪಾಟಿಗಳು  ಕನ್ನಡ ಭಾಷೆಯಲ್ಲಿ ಈ ನಾಟಕ ಅಭಿನಯಿಸಿ ಅಲ್ಲೂ ಬಹುಮಾನ ಪಡೆದಿದ್ದರು .
 ನಂತರ ಇದನ್ನು ನಾನು MA  ಓದುತ್ತಿರುವಾಗ ಹವ್ಯಕ ಭಾಷೆಯಲ್ಲಿಯೇ ಈ ನಾಟಕವನ್ನು  ಕಾಲೇಜ್ ವಾರ್ಷಿಕೋತ್ಸವದಂದು ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದೆವು . ಇದಾದ ನಂತರ  ಮರು ವರ್ಷ ಅಂದರೆ ೧ ೯ ೯ ೬ ರಲ್ಲಿ ಮಂಗಳೂರು  ಹವ್ಯಕ ಮಹಾ ಸಭೆಯಲ್ಲಿ  ಹವ್ಯಕ ಮಹಿಳೆಯರಾದ ನಾವು (ಪುಷ್ಪ ಖಂಡಿಗೆ  ,ವಸಂತ ಲಕ್ಷ್ಮಿ ,ರಾಜೇಶ್ವರಿ  ರಾಜಿ ಬಾಲಕೃಷ್ಣ  ನಾನು(ಲಕ್ಷ್ಮಿ ಜಿ  ಪ್ರಸಾದ್ .. )ಈ  ನಾಟಕವನ್ನು ಹವ್ಯಕ ಭಾಷೆಯಲ್ಲಿ  ಅಭಿನಯಿಸಿ ಮೆಚ್ಚುಗೆ ಪಡೆದಿದ್ದೆವು  ಈ ಬಗ್ಗೆ ಹವ್ಯಕ  ವಾರ್ತೆ  ಪತ್ರಿಕೆಯಲ್ಲಿ "ಲಕ್ಷ್ಮಿ ಜಿ ಪ್ರಸಾದ್  ರಚಿಸಿ ನಿರ್ದೇಶಿಸಿರುವ  ಸುಬ್ಬಿ ಇಂಗ್ಲೀಷ್  ಕಲ್ತದು ಎಂಬ ಹವಿಗನ್ನಡ ನಾಟಕವನ್ನು ಹವ್ಯಕ ಸಭೆಯ ಸದಸ್ಯೆಯರು  ಅಭಿನಯಿಸಿದರು "ಎಂದು ವರದಿಯನ್ನು ಹಾಕಿದ್ದರು
ನಾನು ಚಿಕ್ಕಂದಿನಲ್ಲಿ (೧ ೯ ೮ ೪ )   ಮಕ್ಕಲಳಾಟಿಕೆಯಿಂದ  ರಚಿಸಿದ ನಾಟಕವೇ ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ .ನಾನು ಹವಿಗನ್ನಡದ  ಮೊದಲ ನಾಟಕಗಾರ್ತಿ  ಎಂಬುದು ನನಗೆ ೨ ೦ ೦ ೬ ನೇ ಇಸವಿ ತನಕ ಗೊತ್ತಿರಲಿಲ್ಲ . ೨ ೦ ೦ ೬  ರಲ್ಲಿ ಬೆಂಗಳೂರು ಹವ್ಯಕ  ಅದ್ಯಯನ ಕೇಂದ್ರದ  ನಾರಾಯಣ ಶಾನು ಭಾಗರು ಹೀಗೆ ಹಳೆಯ ಪತ್ರಿಕೆ ತಿರುವಿ ಹಾಕುತ್ತಿರುವಾಗ  ಹವ್ಯಕ ವಾರ್ತೆಯಲ್ಲಿ ವರದಿಯಾಗಿದ್ದ  ಸುಬ್ಬಿ ಇಂಗ್ಲೀಷ್ ಕಲ್ತದು ಎಂಬ ನಾಟಕ ಅವರ ಗಮನಕ್ಕೆ ಬಂದು  ಇದರ ಕರ್ತೃ ಲಕ್ಷ್ಮಿ ಜಿ ಪ್ರಸಾದ್ ಯಾರೆಂದು ಮಂಗಳೂರು ಹವ್ಯಕ ಸಭೆಯವರಲ್ಲಿ ಕೇಳಿದಾಗ ನಾವು ಬೆಂಗಳೂರಿಗೆ  ಬಂದು ನೆಲೆಸಿದ ವಿಚಾರ ಅಲ್ಲಿ ತಿಳಿಸಿದರು . ನಾನು ಎಲ್ಲಿದ್ದೇನೆ ಎಂದು ಪತ್ತೆ ಮಾಡುವ ಜವಾಬ್ಧಾರಿಯನ್ನು ಅವರು ರಾಜಗೋಪಾಲ ಕನ್ಯಾನ ಅವರಿಗೆ ವಹಿಸಿದರು
ಬಿ ಎಂ ಶ್ರೀ  ಪ್ರತಿಷ್ಠಾನದ  ಗೀತಾಚಾರ್ಯ  ಅವರಲ್ಲಿ  ಕೇಳಿದಾಗ "ನಮ್ಮಲ್ಲಿ ಲಕ್ಷ್ಮಿ ವಿ  ಅಂತ ಓರ್ವ ಸಂಶೋಧನಾ ವಿದ್ಯಾರ್ಥಿನಿ  ಇದ್ದಾರೆ  ಲಕ್ಷ್ಮಿ ಜಿ ಪ್ರಸಾದ್ ಅಂತ ಯಾರು ಇಲ್ಲ ಆದರು ಕೇಳಿ ನೋಡಿ ಅಂತ ನನ್ನ ಫೋನ್ ನಂಬರನ್ನು ರಾಜ ಗೋಪಾಲ ಕನ್ಯಾನ ಅವರಿಗೆ ಕೊಟ್ಟರು. ನನ್ನ ರೆಕಾರ್ಡ್ಸ್ ನಲ್ಲಿ ಲಕ್ಷ್ಮಿ ವಿ  ಎಂಬ ಹೆಸರು ಇದೆ . ನನ್ನ ಪೆನ್ ನೇಮ್  ಲಕ್ಷ್ಮಿ ಜಿ ಪ್ರಸಾದ್  ಎಂಬುದು  . ಮಂಗಳೂರು ಹವ್ಯಕ ಸಭೆಯವರಿಗೆ ನನಗೆ ಲಕ್ಷ್ಮಿ ವಿ ಎಂಬ ಹೆಸರಿರುವುದು  ಗೊತ್ತಿಲ್ಲ  . ಬೆಂಗಳೂರಿನಲ್ಲಿ ಯಾರಿಗೂ ನನಗೆ ಲಕ್ಷ್ಮಿ ಜಿ ಪ್ರಸಾದ್ ಎಂಬ ಹೆಸರಿರುವುದು ಗೊತ್ತಿಲ್ಲ ಇದರಿಂದಾಗಿ ನನ್ನನ್ನು  ಪತ್ತೆ ಹಚ್ಚುವುದು ಭಾರೀ ಕಷ್ಟ ಆಯಿತು ಎಂಬ ವಿಚಾರ ನನಗೆ ನಂತರ ತಿಳಿಯಿತು
. ಹೀಗೆ ನಮ್ಮ ಮನೆಗೆ ನನ್ನನ್ನು ಹುದುಕಿಗೊಂದು ಬಂದ  ರಾಜ ಗೋಪಾಲ ಕನ್ಯಾನ ಅವರು  ನನಗೆ ನೀವು ಬರೆದ ಸುಬ್ಬಿ ಕಲ್ತದು ಅನ್ನುವ ನಾಟಕವೇ  ಮಹಿಳೆ ಬರೆದಮೊದಲ  ಹವಿಗನ್ನಡ ನಾಟಕ . ಒಂದೋ ಹವಿಗನ್ನಡ ನಾಟಕ ಸಂಕಲನ ತರುತ್ತಿದ್ದೇವೆ . ನಿಮ್ಮ ನಾಟಕ ಕೊಡಿ ಎಂದು ನನ್ನ ಆ ನಾಟಕದ ಹಸ್ತಪ್ರತಿಯನ್ನು ತೆಗೆದುಕೊಂಡು ಹೋದರು ಅನಂತರ ಆ ನಾಟಕ ಪ್ರಕಟ ವಾಯಿತೆ ಎಂದು ಕೇಳ್ತಾನೆ ಇದ್ದೆ ಆಗುತ್ತಾ ಇದೆ ಎಂದು ಹೇಳಿದ್ದರು ಮತ್ತೊಮ್ಮೆ ಕೇಳುವಾಗ ನಾರಾಯಣ ಕಂಗಿಲ ಅವರಿಗೆ ವಹಿಸಿದ್ದೇವೆ ಎಂದು ಹೇಳಿ ಅವರ ಮೊಬೈಲ್  ಸಂಖ್ಯೆ ಕೊಟ್ಟರು . ನಾನು ಅವರಿಗೆ ಕೇಳಿದಾಗ ನಿಮ್ಮ ನಾಟಕ ಇದೆಯಾ ಅಂತ ಸಂಕಲನದಲ್ಲಿ ನೋಡಿ ಹೇಳ್ಬೇಕಷ್ಟೇ  ಅಂತ ಹೇಳಿದರು ೩ -೪  - ದಿವಸ ಬಿಟ್ಟು ನಿಮ್ಮ ನಾಟಕ ಸಂಕಲನದಲ್ಲಿ ಇದೆ ಪ್ರಕಟವಾಗುತ್ತಿದೆ ಎಂದು ನನ್ನ ಮೊಬೈಲ್ ಗೆ   ಮೆಸೇಜ್ ಮಾದಿದರು. (ಅದು ಇನ್ನು ನನ್ನ ಮೊಬೈಲ್ ನಲ್ಲಿ ಇದೆ )  ನಂತರ ಸುಮಾರು ದಿನ ಕಳೆದು  ಪುಟ ಜಾಸ್ತಿ ಆಗ್ತಿದೆ  ಆದ್ದರಿಂದ ಎಲ್ಲ ನಾಟಕಗಳನ್ನು ಪ್ರಕಟಿಸಲು ಆಗಲಿಲ್ಲ ನಿಮ್ಮ ನಾಟಕ ಸಂಕಲನದಿಂದ ಬಿಟ್ಟಿದ್ದೇವೆ ಎಂದು ತಿಳಿಸಿದರು  . ಇನ್ನೊಂದೆಡೆ  ನನ್ನ ಗೆಳತಿಯೊಬ್ಬರಿಗೆ  ಹೇಳಿ ನಾಟಕ ಬರೆಯಿಸಿ ಸಂಕಲನದಲ್ಲಿ ಹಾಕಿದ್ದಾರೆ .ನಾಲ್ಕು ಜನರ ಎರಡೆರಡು ನಾಟಕಗಳನ್ನು ಹಾಕಿದ್ದಾರೆ

ಈ ಬಗ್ಗೆ ಕೇಳಿದರೆ ನಿಮ್ಮ ನಾಟಕದಲ್ಲಿ ಯಾವುದೇ ಸಾಹಿತ್ಯಿಕ ಮೌಲ್ಯ  ಇಲ್ಲ ಅದಕ್ಕೆ ಡ್ರಾಪ್ ಮಾಡಿದ್ದೇವೆ . ಎಂದು ಒಮ್ಮೆ   ಮತ್ತೊಮ್ಮೆ ಅದು ನಾವು ಆಯ್ಕೆ ಮಾಡಿದ್ದಲ್ಲ ಅದು ಪಬ್ಲಿಷೆರ್  ಮಾಡಿದ್ದು ಹೇಳುತ್ತಿದ್ದಾರೆ .ಪುಬ್ಲಿಷೆರಿಗೆ ನಾನು ಈ ಬಗ್ಗೆ ಕೇಳಿದಾಗ ಇಲ್ಲ ನಮಗೆ ಇದೆಲ್ಲ ಗೊತ್ತಿಲ್ಲ ನಮಗೆ ಕೊಟ್ಟಷ್ಟ ನ್ನು ನಾವು ಅದು ಇದ್ದ ಹಾಗೆಯೇ ಪ್ರಕಟಿಸಿದ್ದೇವೆ ಎಂದು ಹೇಳಿದ್ದಾರೆ  ನನ್ನ ನಾಟಕವನ್ನು ಯಾವ ವಿಮರ್ಶಕರಗೆ ತೋರಿಸಿ ಅಭಿಪ್ರಾಯ ಪಡೆದಿದ್ದಾರೆ  ಎಂದು ತಿಳಿದಿಲ್ಲ  ಇನ್ನು ನನಗೆ ತಿಳಿದಿರುವ ಮಟ್ಟಿಗೆ ನಾರಾಯಣ  ಕಂಗಿಲರಿಗೆ  ದೊಡ್ಡ ವಿಮರ್ಶಕರ ಸ್ಥಾನ ಏನು ಇಲ್ಲ. ಏನೇ ಆದರು ನನ್ನ ನಾಟಕಕ್ಕೆ ಮಹಿಳೆ ಬರೆದ  ಮೊದಲ ಹವಿಗನ್ನಡ ನಾಟಕ ಎಂಬ  ಚಾರಿತ್ರಿಕ  ಮೌಲ್ಯ  ಖಂಡಿತಾ ಇದೆ.  ಇಂಗ್ಲಿಷ್ ಭ್ರಮೆ ಬೇಡ ಕನ್ನಡ ಕಸ್ತೂರಿ  ಎಂಬ  ಅಮೂಲ್ಯ ಸಂದೇಶ ಅದರಲ್ಲಿದೆ . ಮುಖ ನೋಡಿ ಮಣೆ ಹಾಕುವ  ನಾರಾಯಣ ಕಂಗಿಲರಿಗೆ  ಇದನ್ನು ಗಮನಿಸುವ ಆಕಲು ಇರಲಿಲ್ಲ ಎಂಬುದು  ಮಾತ್ರ ಸತ್ಯ. ಒಟ್ಟಿನಲ್ಲಿ ಇವರ ರಾಜಕೀಯದಲ್ಲಿ  ಹವ್ಯಕ ನಾಟಕ ಸಂಕಲನದಲ್ಲಿ  ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ ಸುಬ್ಬಿ ಇಂಗ್ಲಿಷ್ ಕಲ್ತದು  ಸೇರಿಲ್ಲ . ಯಾವ ನಾಟಕದ  ಹಸ್ತಪ್ರತಿಗಾಗಿ  ನಾರಾಯಣ  ಶಾನುಭಾಗ  ಮತ್ತು ರಾಜಗೋಪಾಲ ಕನ್ಯಾನ  ಕಷ್ಟ ಪಟ್ಟು ಅಲ್ಲಿ ಇಲ್ಲಿ ಕೇಳಿ ಅಲೆದಾಡಿದ್ದರೋ ಅದು ಸಿಕ್ಕಿಯೂ  ಪ್ರಕಟವಾಗಲಿಲ್ಲ . !  

No comments:

Post a Comment