Friday, 8 November 2013

ಪಾತಾಳ ಗರಡಿ- ನಮ್ಮ ಹಿರಿಯರ ಅಪರೂಪದ ಸಾಧನ




   



                                                ಚಿತ್ರ  ಕೃಪೆ-ಶ್ರೀ  ಕೆ.ವೆಂಕಟೇಶ ಶರ್ಮ


ಇದೊಂದು ಅಪರೂಪದ ಪ್ರಾಚೀನ  ಸಾಧನ.ನಮ್ಮ ಹಿರಿಯರ ಜ್ಞಾನ ಪರಿಧಿಯನು ಅನಾವರಣ ಗೊಳಿಸುವ ಒಂದು ಸಾಧನ  .ಈಗೆಲ್ಲಿಯೂ ನಮಗೆ ಇದು ಕಾಣ ಸಿಗುವುದು ಬಹು ದುಸ್ತರ .  .ಒಂದು ವೃತ್ತಾಕಾರದ ಕಬ್ಬಿಣ ದ ದಪ್ಪವಾದ ಉಂಗುರ,ಅದಕ್ಕೆ ಅನೇಕ ಕಬ್ಬಿಣದ ಕೊಕ್ಕೆಗಳು ,ಆ ಕೊಕ್ಕೆಗಳಿಗೆ ನೇತು ಹಾಕಿದ ಇನ್ನೊಂದಷ್ಟು ಕೊಕ್ಕೆಗಳು .ನೋಡುವಾಗ ಇದರಲ್ಲೇನಿದೆ ಅಂತಹ ಮಹತ್ವ ಅನ್ನಿಸುವಂತಿತೆ,ಆದರೆ ಇದರ ಕಾರ್ಯ ಕ್ಷಮತೆ ಮಾತ್ರ ಅದ್ಭುತವಾದದ್ದು .
ಹಿಂದೆ ನಮ್ಮ ಹಳ್ಳಿಗಳಲ್ಲಿ ಕೆರೆ ಬಾವಿಗಳಿಂದ ನೀರೆತ್ತಲು ಪಂಪು ಇರಲಿಲ್ಲ . ಕೊಡಪಾನ ,ಪಾತ್ರೆಗಳಿಗೆ ಹಗ್ಗ ಕಟ್ಟಿ ನೇರವಾಗಿ  ಅಥವಾ ರಾಟೆಯಸಹಾಯದಿಂದ  ಕೆರೆ ಬಾವಿಗಳಿಂದ ನೀರೆತ್ತುತ್ತಿದ್ದರು ,ಆಗ ಹಗ್ಗ ಹರಿದು ಇಲ್ಲವೇ ಸಡಿಲಾಗಿ ಕೊಡಪಾನ,ಪಾತ್ರೆಗಳು ಕೆರೆಬಾವಿಗೆ ಬೀಳುತ್ತಿತ್ತುದು ಸಾಮಾನ್ಯ.
ಜೊತೆಗೆ ಮನೆಯ ಪುಟ್ಟ ಪೋರರು/ ಮಕ್ಕಳು ಪಾತ್ರಗಳನ್ನು ಬಾವಿ ನೀರಿಗೆ ಎಸೆದು ಪೋಕರಿತನದಲ್ಲಿ ಆಟವಾಡುವಾಗ ಕೂಡಾ ಅನೇಕ ಪಾತ್ರಗಳು ನೀರಿಗೆ ಬೀಳುತ್ತಿದ್ದವು.ಹೀಗೆ ಕೆರೆ ಭಾವಿಯ ನೀರಿಗೆ ಬಿದ್ದ ಪಾತ್ರೆ ಕೊಡಪಾನಗಳನ್ನು ತೆಗೆಯಲು ನಮ್ಮ ಹಿರಿಯರು ಕಂಡು ಕೊಂಡ ಅತ್ಯಪೂರ್ವ ಸಾಧನ ಪಾತಾಳ ಗರಡಿ .
ಈ ಸಾಧನದ ಉಂಗುರದ ಭಾಗಕ್ಕೆ ಹಗ್ಗ ಕಟ್ಟಿ ಬಾವಿಗೆ/ಕೆರೆಗೆ ಇಳಿಸುತ್ತಿದ್ದರು.ಇದು ಕಬ್ಬಿಣದ ಭಾರದ ಸಾಧನ ಆದ ಕಾರಣ  ನೀರಿನಲ್ಲಿ ಮುಳುಗುತ್ತಿತ್ತು .ಮೇಲಿನಿಂದ ಹಗ್ಗ ಅಲುಗಾಡಿಸಿ ಇಲ್ಲವೇ ಉದ್ದದ ಕೋಲನ್ನು ಬಳಸಿ ಇದ್ದನ್ನು ಆ ಕಡೆ ಈ ಕಡೆ ಸುತ್ತ ಮುತ್ತ ನೀರಿನ ಆಳ ಭಾಗದಲ್ಲಿ ಅಲುಗಾಡಿಸುತ್ತಿದ್ದರು.
ಆಗ ಇದರಲ್ಲಿನ ಕೊಕ್ಕೆಗಳಿಗೆ ಅಲ್ಲಿ ಬಿದ್ದ ಪಾತ್ರೆ /ಕೊದಪಾನಗಳು ಸಿಕ್ಕಿ ಹಾಕಿಕೊಳ್ಳುತ್ತಿದ್ದವು.ನಂತರ ಪಾತಾಳ ಗರಡಿಯನ್ನು  ಮೇಲಕ್ಕೆ  ಎಳೆದು ಅದಕ್ಕೆ ಸಿಕ್ಕಿ ಹಾಕಿಕೊಂಡ ಪಾತ್ರೆಗಳನ್ನು ತೆಗೆದು ಮನೆ ಮಂದಿಗೆ ಕೊಡುತ್ತಿದ್ದರು.ಅದು ಪಾತಾಳದಲ್ಲಿ ಬಿದ್ದ ಪಾತ್ರೆಯನ್ನು ಎತ್ತಿ ತರಬಲ್ಲುದು ಎಂಬ ಅರ್ಥದಲ್ಲಿ ಅದಕ್ಕೆ ಪಾತಾಳ ಗರಡಿ ಎಂಬ ಸಾರ್ಥಕ ನಾಮ ಬಂದಿದೆ .ಇದಕ್ಕೆ ಪಾತಾಳ ಗರುಡಿ,ಗರುಡಿ ಪಾತಾಳ ಇತ್ಯಾದಿ ಹೆಸರುಗಳು ಕನ್ನಡದಲ್ಲಿ ಬಳಕೆ ಇದೆ.ಇದಕ್ಕೆ ಚೆನ್ನೈ ಪರಿಸರದಲ್ಲಿ ಪಾತಳಗೊಲುಸು(ತಮಿಳು ?!) ಹೇಳುವ ಪದ ಬಳಕೆ ಇರುವುದನ್ನು ಚೆನ್ನೈಯಾ ರಾಮಕೃಷ್ಣ ಭಟ್  ತಿಳಿಸಿದ್ದಾರೆ .

ದಕ್ಷಿಣ ಕನ್ನಡ ಜಿಲ್ಲೆ ಹಾಗೂ  ಕಾಸರಗೋಡು ಪರಿಸರದಲ್ಲಿ ಹವ್ಯಕ ಭಾಷೆಯಲ್ಲಿ ಪಾತಾಳ ಗರಡಿ ಎಂಬುದು ವಿಶಿಷ್ಟ ನುಡಿಗಟ್ಟಾಗಿ ಕೂಡಾ ಬಳಕೆಯಲ್ಲಿ





ಅವ° ಮಹಾ ಪಾತಾಳ ಗರಡಿ, ಅವನ ಬಾಯಿಗೆ ಬೀಳದ್ದಾಂಗೆ, ಕಣ್ಣಿಂಗೆ ಕಾಣದ್ದಾ೦ಗೆ, ಕೆಮಿಗೆ ಬೀಳದ್ದಾಂಗೆ,ಯಾವುದನ್ನೂ ಮಡುಗುಲೇ ಎಡಿಯಪ್ಪ ! ಎಲ್ಲಿಂದ ಹೇಗಾದರೂ ಆ ಸಂಗತಿಯ ಕಂಡು ಹಿಡಿಯದ್ದೆ ಬಿಡ°” ಅಥವಾ ಅದಕ್ಕೆ ಬೇಡದ್ದ ವಿಚಾರ ಇಲ್ಲೆ ,ಮತ್ತೆ ಮತ್ತೆ ತೊಳಚ್ಚಿ ತೊಳಚ್ಚಿ ತಲೆ ತಿಂತು ,ಅದು ಮಹಾ ಪಾತಾಳ ಗರಡಿ ,ಅದರತ್ತರೆ ಯಾವುದೂ ಗುಟ್ಟು ಮಾಡುಲೆ ಎಡಿಯಹೇಳಿ ಹೇಳುವ ಮಾತುಗಳನ್ನು  ನಮ್ಮ  ಹವ್ಯಕ ಭಾಷೆಯಲ್ಲಿ  ಸಂದರ್ಭಕ್ಕನುಗುಣವಾಗಿ ಬಳಕೆ ಬಳಕೆ ಮಾಡುತ್ತಾರೆ ..
ಆದರೆ ಅವ°/ಅದು ಪಾತಾಳ ಗರಡಿಹೇಳುವ ರೂಪಕ ನಮ್ಮ ಭಾಷೆಲಿ ವಿಶಿಷ್ಟವಾಗಿ ಬಳಕೆ ಆವುತ್ತು . ಪಾತಾಳ ಗರಡಿ ಹೇಗಾದರೂ ಮಾಡಿ ಬಾವಿಗೆ ಕೆರೆಗೆ ಬಿದ್ದ ಕೊಡಪಾನ ,ಪಾತ್ರಗಳನ್ನು  ತನ್ನ ಕೊಕ್ಕೆಗೆ ಸಿಕ್ಕುಸಿ ಹಹೊರ ತೆಗದು ಮೇಲೆ ತರುತ್ತದೆ .ಹಾಗಾಗಿ ಪಾತಾಳ ಗರಡಿಯ ರೀತಿಲಿ ಹೇಗಾರೂ ಮಾಡಿ ಇನ್ನೊಬ್ಬರ ವಿಚಾರವನ್ನು  ಪತ್ತೆ ಹಚ್ಚಿ ತೆಗವ ಸ್ವಭಾವದವರಿಗೆ  ಕೋಳ್ಯೂರು ಕಡೆ  ಹವ್ಯಕ  ಭಾಷೆಯಲ್ಲಿ   ಪಾತಾಳ ಗರಡಿ ಎಂದು ಹೇಳುತ್ತಾರೆ .
ಅವ°/ಅದು ಪಾತಾಳ ಗರಡಿ ಅವನ/ಅದರ ಹಿಡಿಪ್ಪಿಂದ ತಪ್ಪಿಸಿಕೊಂಬಲೆ ಎಡಿಯಪ್ಪಹೇಳುವ ಮಾತು ಕೂಡಾ  ಬಳಕೆಯಲ್ಲ್ಲಿ  ದೆ .”ಆವ° /ಅದು ಪಾತಾಳ ಗರಡಿಹೇಳುದು ಒಂದು ರೀತಿ ದೂಷಣೆ /ಬೈಗಳು .ಆದರೆ ಪಾತಾಳ ಗರಡಿ ನಿಜವಾಗಿಯೂ ಒಂದು ಬಹು ಉಪಯುಕ್ತ ಸಾಧನ ,ಆದರೆ ನುಡಿಗಟ್ಟಾಗಿ ಬಳಸುವಗ  ಹವ್ಯಕ ಭಾಷೆಯಲ್ಲಿ ಪಾತಾಳ ಗರಡಿ ಹೇಳುದು ಬೈಗಳಾಗಿ /ದೂಷಣೆಯ ಮಾತಾಗಿ ಬದಲಾಗುತ್ತದೆ ..







ಅವ° ಪಾತಾಳ ಗರಡಿ ,ಎಲ್ಲಿಂದಾದರೂ ಹೇಂಗಾದರೂ ಅವ° ವಿಷಯ ಪತ್ತೆ ಮಾಡದ್ದೆ ಬಿಡ° ಹೇಳುವಲ್ಲಿ , ಅವ° ಮಹಾ ಪಾತಾಳ ಗರಡಿಹೇಳುವಲ್ಲಿ ತುಸು ದೂಷಣೆ ಒಟ್ಟಿಗೆ ಅವ° ತುಂಬಾ ಚಾಣಾಕ್ಷ ,ಕುಶಾಗ್ರಮತಿಹೇಳುವ ಭಾವ ಕೂಡಾ  ದೆ, ಅದೇ ರೀತಿ ಅದಕ್ಕೆ ಬೇಡದ್ದ ವಿಚಾರ ಇಲ್ಲೆ ,ಮತ್ತೆ ಮತ್ತೆ ತೊಳಚ್ಚಿ ತೊಳಚ್ಚಿ ತಲೆ ತಿಂತು ,ಅದು ಮಹಾ ಪಾತಾಳ ಗರಡಿ ,ಅದರತ್ತರೆ ಯಾವುದೂ ಗುಟ್ಟು ಮಾಡುಲೆ ಎಡಿಯಹೇಳಿ ಹೇಳುವ ಮಾತಿನಲ್ಲಿ ಅವರು  ಬೇರೆಯರ ವಿಷಯಲ್ಲಿ ಅನಗತ್ಯ ಆಸಕ್ತಿ ವಹಿಸುತ್ತಾರೆ, ಅನಗತ್ಯವಾಗಿ ಬೇರೆಯರ ವಿಷಯವ ಒಕ್ಕಿ ಹೊರ  ಸ್ವಭಾವ ಎಂಬರ್ಥದಲ್ಲಿ ಇದು ಬಳಕೆಯಲ್ಲಿದೆ
 ತಮ್ಮ ಪಕ್ಕದ ಮನೆಯ ವನಜಕ್ಕ ಅವರ ಮನೆಯಲ್ಲಿರುವ (ವನ ದುರ್ಗಾ ದೇವಸ್ಥಾನ ದ ಪಕ್ಕ ,ಸುಬ್ರಹ್ಮಣ್ಯ ) ಪಾತಾಳ ಗರಡಿಯ ಅಪರೂಪದ ಚಿತ್ರಂಗಳ ಕಳುಹಿಸಿ ಕೊಟ್ಟ ವೆಂಕಟೇಶಣ್ಣ (ಕೆ.ವೆಂಕಟೇಶ ಶರ್ಮ )ಅವರಿಗೆ ಕೃತಜ್ಞತೆಗಳು



No comments:

Post a Comment