ಅಕ್ಕಾ ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ ನಿಮಗೆ ಬದುಕುದಕ್ಕಿಂತ ಸಾವು ಹೆಚ್ಚು ನೆಮ್ಮದಿ ಕೊಡುವುದಾದಾರೆ ಸಾಯಿರಿ ನಿಮಗೆ ಹೇಳುವಷ್ಟು ದೊಡ್ಡ ವರಲ್ಲ ಡೊಡ್ಡವರಿಗೆ ಬರುವ ಸಮಸ್ಯೆಗಳು ದೊಡ್ಡವೇ ಏನೋ ? ನಮಗೆ ಈ ಬಗ್ಗೆ ಗೊತ್ತಿಲ್ಲ ಆದರೆ ನೀವು ನಮ್ಮ ತುಳುನಾಡಿನ ಸಾವಿರದೊಂದು ಭೂತ. ದೈವಗಳ ಬಗ್ಗೆ ನಮಗೆ ತಿಳಿಸುತ್ತೀರಿ ಎಂದು ಪ್ರತಿ ದಿನ ನಿಮ್ಮ ಲೇಖನ ವನ್ನು ಎದುರು ನಾವು ಸಾವಿರಾರು ಮಂದಿ ಕಾಯುತ್ತಿರುತ್ತೇವೆ, ಕಳೆದು ಹೋದ ಮಾಹಿತಿಗಳನ್ನು ಹುಡುಕಿ ಬರೆದೇ ತೀರುತ್ತೀರಿ ಎಂಬ ನಂಬಿಕೆಯಿಂದ ಹಾಗಾಗಿ ಸಾಯುದೇ ಅದರೆ ಸಾವಿರದೊಂದು ಗುರಿ ತಲುಪಿದ ನಂತರ ಆ ಬಗ್ಗೆ ಯೋಚಿಸಿ ಎಂದು ನನಗೆ ಮೆಸೇಜ್ ಕಳುಹಿಸಿದವರು ಶ್ರೀಕಾಂತ್ ಶೆಟ್ಟಿ ಇದೇ ರೀತಿಯ ಭಾವ ಇರುವ ಸಂದೇಶಗಳನ್ನು ಕಳುಹಿಸಿದವರು ನೂರಾರು ಮಂದಿ ನಿಮ್ಮೆಲ್ಲರ ಅಭಿಮಾನ ನಂಬಿಕೆ ಪ್ರೀತಿ ವಿಶ್ವಾಸಗಳಿಗೆ ಏನೆನ್ನಬೇಕೋ ತಿಳಿಯುತ್ತಿಲ್ಲ ಬಹುಶ ಸಾವಿರದ ಒಂದು ದೈವಗಳ ಬಗ್ಗೆ ಮಾಹಿತಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ ಸಿಕ್ಕರೂ ಸಿಗಬಹುದು ಅದರೆ ಕಳೆದ ಹದಿನೈದು ಹದಿನಾರು ವರ್ಷಗಳ ಅಧ್ಯಯನ ದಲ್ಲಿ ನನಗೆ ಒಟ್ಟಾರೆ ಯಾಗಿ ಸುಮಾರು ನಾನ್ನೂರು ದೈವಗಳ ಮಾಹಿತಿ ಸಿಕ್ಕಿದೆ ಇದರಲ್ಲಿ ಈ ಹಿಂದೆ ಅದ್ಯಯನ ಮಾಡಿದ ಹಿರಿಯ ಕಿರಿಯ ಸಂಶೋಧಕರು ಮಾಹಿತಿ ಸಂಗ್ರಹಿಸಿದ ಸುಮಾರು ನೂರು ನೂರ ಹತ್ತು ದೈವಗಳ ಮಾಹಿತಿಯೂ ಸೇರಿದೆ ಹಾಗಾಗಿ ಒಂದೊಮ್ಮೆ ಸಾವಿರದೊಂದರ ಗುರಿ ಮುಟ್ಟ ಬೇಕಿದ್ದರೆ ನನಗೆ ಕನಿಷ್ಠ ಇನ್ನೂ ಇಪ್ಪತ್ತೈದು ಮೂವತ್ತು ವರ್ಷಗಳು ಬೇಕು ಜೊತೆಗೆ ನಿಮ್ಮೆಲ್ಲರ ಬೆಂಬಲವು ಬೇಕು ನೀವೆಲ್ಲ ನನ್ನ ಮೇಲೆ ಇಟ್ಟ ಭರವಸೆಯ ನ್ನು ಉಳಿಸಿಕೊಳ್ಳುವ ಯತ್ನ ಮಾಡುವೆ ಜೊತೆಗೆ ನನಗಾದ ಅನ್ಯಾಯದ ವಿರುದ್ಧ ವೂ ಹೋರಾಡುವೆ ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಬೆಂಬಲ ಕೋರುವೆ
ಎಲ್ಲೂ ಧೃತಿಗೆಡದೆ,ಯಶಸ್ಸು ನೀಡುವಂತೆ ,ಸಾವಿರದೊಂದು ಗುರಿ ತಲುಪುವಂತೆ ಕೃಪೆ ತೋರಲು ದೈವಗಳಲ್ಲೇ ಕೈ ಮುಗಿದು ಪ್ರಾರ್ಥಿಸಿ ಇಂದು ಮತ್ತೆ ಬರೆಯಲು ಕೂತಿರುವೆ ತುಳುನಾಡ ದೈವಗಳು 321 ಸನ್ಯಾಸಿ ಮಂತ್ರ ದೇವತೆ (c)ಡಾ.ಲಕ್ಷ್ಮೀ ಜಿ ಪ್ರಸಾದ
ತುಳುನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆಯೆಂದು ಹೇಳುವುದು ತುಂಬಾ ಕಷ್ಟದ ವಿಚಾರ ,ಇಲ್ಲಿ ಕೆಲವು ದೈವಗಳು
ಚಿತ್ರ ಕೃಪೆ :ಪ್ರವೀಣ್ ಸಾಲಿಯಾನ್
ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರಿನಲ್ಲಿ ಆರಾಧಿಸಲ್ಪಡುತ್ತಾರೆ,ಅಂತೆಯೇ ಇನ್ನು ಕೆಲವು ಬೇರೆ ಬೇರೆ ದೈವಗಳು ಒಂದು ಹೆಸರಿನಲ್ಲಿ ಆರಾಧಿಸಲ್ಪಡುತ್ತಾರೆ.ಉದಾಹರಣೆಗೆ ಹೇಳುವುದಾದರೆ ರಕ್ತ ಚಾಮುಂಡಿ ಕೆರೆ ಚಾಮುಂಡಿ ಗುಡ ಚಾಮುಂಡಿ ರುದ್ರ ಚಾಮುಂಡಿಅಗ್ನಿ ಚಾಮುಂಡಿ ಗುಳಿಗರ ಹೆಸರು ಚಾಮುಂಡಿ ಎಂದು ಇರುವುದಾದರೂ ಇವು ಬೇರೆ ಬೇರೆಯೇ ಶಕ್ತಿಗಳು 'ರುದ್ರ ಚಾಮುಂಡಿ ನೆತ್ತೆರ್ ಚಾಮುಂಡಿಗುಡ ಚಾಮುಂಡಿಗಳು ಸ್ತ್ರೀ ದೈವತಗಳಲ್ಲ,ಮೂಲತ ಇವರು ಪುರುಷರು ಕಾರಣಾಂತರಗಳಿಂದ ಪ್ರಧಾನ ದೈವ ಚಾಮುಂಡಿಯ ಸನ್ನಿಧಿಗೆ ಸೇರಿ ಚಾಮುಂಡಿ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ (c)ಡಾ.ಲಕ್ಷ್ಮೀ ಜಿ ಪ್ರಸಾದ .
ಅಂತೆಯೇ ಪುರುಷ ಭೂತ ಎಂಬ ಹೆಸರಿನಲ್ಲಿ ಈಗಾಗಲೇ ನಾಲ್ಕು ಬೇರೆ ಬೇರೆ ದೈವಗಳಿಗೆ ಆರಾಧನೆ ಇರುವುದು ಸ್ಪಷ್ಟವಾಗಿ ತಿಳಿದು ಬಂದಿದೆ /ಬಬ್ಬರ್ಯ ಎಂಬ ಹೆಸರಿನ ಎರಡು ದೈವಗಳು ಇರುವುದು ತಿಳಿದು ಬಂದಿದೆ
ಹಾಗೆಯೇ ಸನ್ಯಾಸಿ ಗುಳಿಗ ಎಂಬ ಹೆಸರಿನ ದೈವಕ್ಕೆ ಆರಾಧನೆ ಇರುವ ಬಗೆ ಈ ಹಿಂದೆ ಬರೆದಿದ್ದೆ ಗುಳಿಗನ ಸನ್ನಿಧಿಗೆ ಸೇರಿದ ಓರ್ವ ಸನ್ಯಾಸಿ ಈತ ಗುಳಿಗನ ಸೇರಿಗೆ ದೈವವಾಗಿ ಆರಾಧನೆ ಪಡೆಯುತ್ತಾನೆ .
ಅದೇ ಸಂದರ್ಭದಲ್ಲಿ ಸನ್ಯಾಸಿ ಮಂತ್ರ ದೇವತೆ ಎಂಬ ದೈವಕ್ಕೆ ಆರಾಧನೆ ಇರುವುದು ತಿಳಿಯಿತು ಮಾಹಿತಿ ಸಿಕ್ಕಿರಲಿಲ್ಲ ಹೆಚ್ಚಿನ ಮಾಹಿತಿ ಈಗಲೂ ಸಿಕ್ಕಿಲ್ಲ
ರಾಮ ಎಂಬ ಹೆಸರಿನ ನಾಥ ಸಂಪ್ರದಾಯಕ್ಕೆ ಸೇರಿದ ಒಬ್ಬ ಸನ್ಯಾಸಿ ಇದ್ದರು ಅವರನ್ನು ರಾಮ ಸನ್ಯಾಸಿ ಎಂದು ಕರೆಯುತ್ತಿದ್ದರು .ನಾಥ ಸಂಪ್ರದಾಯದ ಜೋಗಿಗಳಂತೆ ಅವರು ಜೋಳಿಗೆ ಹಿಡಿದು ಸನ್ಯಾಸಿಯಾಗಿ ಊರೂರು ಅಲೆದು ಬದುಕುತ್ತಿದ್ದರು (c)ಡಾ.ಲಕ್ಷ್ಮೀ ಜಿ ಪ್ರಸಾದ
ಅವರು ಮಂತ್ರ ದೇವತೆಯ ಅನನ್ಯ ಭಕ್ತರಾಗಿದ್ದರು ಹಾಗಾಗಿ ಕಾಲಾಂತರದಲ್ಲಿ ಮಂತ್ರ ದೇವತೆ ಅವರ ಭಕ್ತಿಗೆ ಒಲಿದು ಅವರನ್ನು ನ್ನು ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ ನಂತರ ದೈವತ್ವ ಪಡೆದು ಸನ್ಯಾಸಿ ಮಂತ್ರ ದೇವತೆ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ
ಈ ಸನ್ಯಾಸಿ ದತ್ತಾತ್ರೇಯ ಪೀಠದ ಸಾಧು ಎಂಬ ಅಭಿಪ್ರಾಯ ಕೂಡ ಇದೆ
ಸನ್ಯಾಸಿ ಮಂತ್ರ ದೇವತೆಗೆ ಕೋಲ ಕೊಡುವಾಗ ಭೂತ ಮಾಧ್ಯಮರು ಕೆಲವೆಡೆ ಸನ್ಯಾಸಿ ವೇಷ ಭೂಷಣವನ್ನು ಹಾಕುತ್ತಾರೆ.ಕೆಲವೆಡೆ ಮಂತ್ರ ದೇವತೆಯ ವೇಷ ಭೂಷಣವೇ ಇರುತ್ತದೆ
ಈ ಬಗ್ಗೆ ಹೆಚ್ಚ್ಚಿನ ಅಧ್ಯಯನಕ್ಕೆ ಅವಕಾಶವಿದೆ
No comments:
Post a Comment