ಸತ್ಯಮಾಗಣ್ತಿ ಮತ್ತು ಕರಿಕಲ್ಲು ದೈವಗಳು
ತುಳುವರ ಭೂತಾರಾಧನೆ ಬಹಳ ವಿಶಿಷ್ಠವಾದ ಆರಾಧನಾ ಪದ್ಧತಿ. ಇಲ್ಲಿ ಯಾರು ಯಾಕೆ ಹೇಗೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಒಂದು ಇತಮಿತ್ಥಂ ಎಂದು ಹೇಳುವ ಸಿದ್ಧ ಸೂತ್ರವಿಲ್ಲ.ಸಾಮಾನ್ಯವಾಗಿ ಅಸಾಧಾರಣ ಕಾರ್ಯ ಮಾಡಿದ ಅಸಹಜ ಮರಣವನ್ನಪ್ಪಿದವರು ದೈವಗಳಾಗಿ ನೆಲೆ ನಿಲ್ಲುತ್ತಾರೆ.ಅದೇ ರೀತಿಯಲ್ಲಿ ಪ್ರಧಾನ ದೈವದ ಅನುಗ್ರಹ ಅಥವಾ ಆಗ್ರಹಕ್ಕೆ ತುತ್ತಾಗಿ ಕೂಡ ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಹೊಂದುತ್ತಾರೆ.ಇವೆಲ್ಲಕ್ಕೂ ಮೀರಿ ಕೆಲವರು ದೈವ ಗಳಾಗಿ ಆರಾಧನೆ ಪಡೆಯುವುದು ಕಂಡು ಬರುತ್ತದೆ. ಇಂತಹ ಎರಡು ದೈವಗಳು ಸತಗಯಮಾಗಣ್ತಿ ಮತ್ತು ಕರಿಕಲ್ಲು ದೈವಗಳು.
ಪ್ರಚಲಿತ ಐತಿಹ್ಯದ ಪ್ರಕಾರ ಕುಂಬಳೆ ಪರಿಸರದಲ್ಲಿ ಒಂದು ಬ್ರಾಹ್ಮಣ ದಂಪತಿಗಳು ಇರುತ್ತಾರೆ.ಮಡತಿ ತುಂಬಾ ಸತ್ಯವತಿ, ಮಹಾನ್ ಪತವ್ರತೆಯಾಗಿದ್ದಳು.ಅವಳು ಗರ್ಭಿಣಿ ಆಗುತ್ತಾಳೆ
ಒಂದು ಶುಭ ಮುಹೂರ್ತದಲ್ಲಿ ಅವಳಿಗೆ ಸೀಮಂತ ಮಾಡಿ ಅವಳನ್ನು ಪ್ರಸವಕ್ಕಾಗಿ ತಂದೆಮನೆಗೆ ಬಿಡ್ಟು ಬರಲು ಗಂಡ ಹೊರಡುತ್ತಾನೆ.ಗಂಡ ಹೆಂಡತಿ ಇಬ್ಬರೂ ಕಾಲು ದಾರಿಯಲ್ಲಿ ತಂದೆಮನೆಗೆ ಹೋಗುತ್ತಾರೆ.ದಾರಿ ನಡುವೆ ಮಡದಿಯನ್ನು ಒಂದು ಮರದ ಅಡಿಯಲ್ಲಿ ಕುಳ್ಳಿರಿಸಿ ಈಗ ಬರುತ್ತೇನೆ ಎಂದು ಹೇಳಿ ಗಂಡ ಎಲ್ಲಿಗೋ ಹೋಗುತ್ತಾನೆ
ಸುಮಾರು ಹೊತ್ತು ಕಳೆದರೂ ಗಂಡ ಬರುವುದಿಲ್ಲ. ಆತಂಕಕ್ಕೆ ಒಳಗಾದ ತುಂಬು ಗರ್ಭಿಣಿ ಅಳತೊಡಗುತ್ತಾಳೆ.ಆಗ ಅಲ್ಲಿ ಸಮೀಪದ ಗುಡಿಸಲಿನಲ್ಲಿದ್ದ ಓರ್ವ ವೃದ್ಧ ದಲಿತಹಿಳೆ ಮಹಿಳೆ ಅವಳಿಗೆ ಅವಳ ಗಂಡನನ್ನು ತೋರಿಸಿತ್ತಾಳೆ.ಅವಳ ಗಂಡ ಓರ್ವ ಜೈವ ಹೆಂಗಸಿನೊಂದಿಗೆ ಸರಸವಾಡುತ್ರ ಇರುತ್ತಾನೆ.ಇದನ್ನು ನೋಡಿದ ಮುಗ್ಧೆ ಪತವ್ರತಾ ಹೆಣ್ಣಿಗೆ ಆಘಾತವಾಗುತ್ತದೆ
ಅವಳು ತನ್ನ ಹೊಟ್ಟೆಯಲ್ಲಿ ಇರುವ ಮಗುವಿನೊಂದಿಗೆ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ
ನಂತರ ದೈವತ್ವ ಪಡೆದು ಒಂಜಿ ಕುಂದು ನಲ್ಪ ದೈವಗಳೊಡನೆ ಸೇರಿಕೊಂಡು ಸತ್ಯ ಮಾಗಣ್ತಿ ( ಸತ್ಯ ಮಹಾಸತಿ?) ದೈವವಾಗಿ ಆರಾಧನೆ ಪಡೆಯುತ್ತಾಳೆ.ಇವರೊಂದಿಗೆ ಇವಳಿಗೆ ಸಹಾಯ ಮಾಡಿದ ಆ ದಲಿತ ಮಹಿಳೆ ಕೂಡ ಕರಿಕಲ್ಲು ದೈವವಾಗಿ ಆರಾಧನೆ ಪಡೆಯುತ್ತಾಳೆ.ಸತ್ಯ ಮಾಗಣ್ತಿ ದೈವಕ್ಕಳನ್ನು ಬಾಣಂತಿಯರನ್ನು ರಕ್ಷಿಸುವ ದೈವ ಹಾಗಾಗಿ ಬಾಣಂತಿ ದೈವ ಎಂದು ಕೂಡ ಕರೆಯುತ್ತಾರೆ
ಮಾಹಿತಿ ನೀಡಿದ ಶ್ರೀವತ್ಸ ಪ್ರದೀಪರಿಗೆ ಧನ್ಯವಾದಗಳು
© ಡಾ.ಲಕ್ಷ್ಮೀ ಜಿ ಪ್ರಸಾದ

No comments:
Post a Comment