Sunday 7 July 2019

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು : 439 ಮಂತ್ರ ಮೂರ್ತಿ © ಡಾ.ಲಕ್ಷ್ಮೀ ಜಿ ಪ್ರಸಾದ

ಕಾಸರಗೋಡು ಕಣ್ಣನ್ನೂರು ಪರಿಸರದಲ್ಲಿ ಮಂತ್ರ ಮೂರ್ತಿ ದೈವ( ತೆಯ್ಯಂ) ಗೆ ಕೋಲ ಕಟ್ಟಿ ಆರಾಧನೆ ಇದೆ. ಆದರೆ ಮಂತ್ರ ಮೂರ್ತಿ ದೈವದ ಹಿನ್ನೆಲೆ ,ಕಥಾನಕ ತಿಳಿದಿರಲಿಲ್ಲ. ಈವತ್ತು ಮಾಪಿಳ್ಳೆ ತೆಯ್ಯಂ ( ಮುಸ್ಲಿಂ ಮೂಲದ ದೈವಗಳ) ಬಗ್ಗೆ ಮಾಹಿತಿಯನ್ನು ಮಲೆಯಾಳಿ ಬರಹಗಳಲ್ಲಿ ಹುಡುಕುತ್ತಾ ಇದ್ದೆ.ಆಗ ಆಲಿ ತೆಯ್ಯಂ ಬಗೆಗೂ ಮಾಹಿತಿ ಸಿಕ್ಕಿತು.ಆಲಿ ಭೂತದ ಬಗ್ಗೆ ಈ ಹಿಂದೆಯೇ ಬರೆದಿದ್ದೆ.
ಆಲಿ  ಬ್ಯಾರಿ  ಮುಸ್ಲಿಂ ಮಾಂತ್ರಿಕ ಶಕ್ತಿ ಇರುವ ವ್ಯಾಪಾರಿ ಕುಂಬಳೆ ಸಮೀಪದ  ಪಾರೆ ಸ್ಥಾನದ ಬಿಲ್ಲವ ಸಮುದಾಯದ ಕುಟುಂಬದ ಸಹಾಯ ಕೇಳುತ್ತಾನೆ.ಅವರು ಆತನಿಗೆ ಆಶ್ರಯ ನೀಡುತ್ತಾರೆ.ಆದರೆ ಆತ ಆ ಕುಟುಂಬದ ಹುಡುಗಿಯ ಮೇಲೆ ಕಣ್ಣು ಹಾಕುತ್ತಾನೆ.ಆ ಹುಡುಗಿಯನ್ನು ತನ್ನ. ಮಾಂತ್ರಿಕ. ಶಕ್ತಿಯಿಂದ ವಶಪಡಿಸಿಕೊಳ್ಳುತ್ತಾನೆ.ಆಗ ಮನೆ ಮಂದಿ ರಕ್ತೇಶ್ವರಿ ದೈವದ ಪ್ರಾರ್ಥನೆ ಮಾಡಿದಾಗ ,ಸುಂದರ ಹುಡುಗಿಯ ರೂಪ ಧರಿಸಿ ಕೊಳದಲ್ಲಿ ಆಟವಾಡಲು ಆಲಿಯನ್ನು ಆಹ್ವಾನಿಸಿ ಸಂಹಾರ ಮಾಡುತ್ತಾಳೆ.ನಂತರ ಆಲಿ ದೈವತ್ವ ಪಡೆದು ಆಲಿ ಭೂತವಾಗಿ ಆರಾಧನೆ ಪಡೆಯುತ್ತಾನೆ‌.ಇದು ನನಗೆ ಈ ಹಿಂದೆ ಸಿಕ್ಕ ಮಾಹಿತಿ ಆಗಿತ್ತು.
ಆದರೆ ಈ ಕಥೆಯ ಇನ್ನೊಂದು ಪಾಠದಲ್ಲಿ ಕಥೆ ಸ್ವಲ್ಪ ಭಿನ್ನವಾಗಿದೆ.ಆಲಿ ಆಶ್ರಯ ಪಡೆದ ಬಿಲ್ಲವರ ಕುಟುಂಬದ ಹುಡುಗಿ ನಂಗ ಕುಟ್ಟಿಗೆ ವಿವಾಹ ನಿಶ್ಚಯವಾಗುತ್ತದೆ.ಒಂದು ದಿನ ಅವಳು ಕೊಳದಲ್ಲಿ ಸ್ನಾನ. ಮಾಡಲು ಹೋಗುತ್ತಾಳೆ.ಅವಳನ್ನು ಹಿಂಬಾಲಿಸಿ ಬಂದ ಆಲಿ ಬ್ಯಾರಿ  ಮಾನ ಹಾನಿ ಮಾಡಲು ಯತ್ನ ಮಾಡುತ್ತಾನೆ.ಆಗ ಅವಳು ತನ್ನ ಬಳಿಯಿದ್ದ ಕಾಲ್ದೀಪವನ್ನು ಆಲಿಯ ಎದೆಗೆ ಇರಿದು ಅವನನ್ನು ಕೊಲ್ಲುತ್ತಾಳೆ.ನಂತರ ಲೋಕಾಪವಾದಕ್ಕೆ ಹೆದರಿ ಆತ್ಮಾಹುತಿ ಮಾಡಿಕೊಳ್ಳುತ್ತಾಳೆ.ನಂತರ ನಂಗ ಕುಟ್ಟಿ ಮಂತ್ರ ಮೂರ್ತಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಆರಾಧನೆ ಪಡೆಯುತ್ತಾಳೆ.ಆಲಿ ಕೂಡ ಆರಾಧನೆ ಪಡೆಯುತ್ತಾನೆ .© ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ಮೂಲ : ಮಲೆಯಾಳ ವಿಕಿಪೀಡಿಯ ಮತ್ತು ವಕ್ತೃಗಳು ನೀಡಿದ  ಪ್ರಚಲಿತ ಐತಿಹ್ಯಗಳು 

3 comments:

  1. ಇದು ಆಲಿ ಚಾಮುಂಡಿ ದೈವ ದ ಕಥೆ ಯ ರೀತಿಯೇ ಇದೆ

    ReplyDelete
    Replies
    1. ಇದು ಆಲಿ ಚಾಮುಂಡಿದೇ ಕಥೆ ಇಲ್ಲಿ ಆರಾಧನೆ ಆಗುವ ಮಂತ್ರಮೂರ್ತಿ ಯಾರು ಎಂದರೆ ಆತನಿಂದ ದೌರ್ಜನ್ಯ ಕ್ಕೊಳಗಾಗಿ ದುರಂತವನ್ನಪ್ಪಿ ದೈವತ್ವ ಪಡೆದು ಆರಾಧನೆ ಪಡೆವ ನಂಗ ಕುಟ್ಟಿ

      Delete
  2. ಇದು ಅಲಿಚಾಮುಂಡಿದೇ ಕಥೆ,ಆದರೆ ಇಲ್ಲಿ ಆರಾಧನೆ ಪಡೆವ ಮಂತ್ರಮೂರ್ತಿ ದೈವ ಅತನನ್ನು ಕೊಂದು ದುರಂತವನ್ನಪ್ಪಿ ದೈವತ್ವ ಪಡೆವ ನಂಗ ಕುಟ್ಟಿ

    ReplyDelete