ಡಾ| ಲಕ್ಷ್ಮೀ ಪ್ರಸಾದ್ ನಿಮಗೆ ಮಾಡುವ ನಮಸ್ಕಾರ.
ನಿಮ್ಮ ಸಂಶೋಧನಾ ಕೃತಿ - ಕರಾವಳಿಯ ಸಾವಿರದ ಒಂದು ದೈವಗಳು - ಎಂಬ ವಿಸ್ತಾರವಾದ ಗ್ರಂಥವನ್ನು ಕೊಂಡು, ಕಣ್ಣು ಹಾಯಿಸುವ ಕೆಲಸ ಮಾಡಿದ್ದೇನೆ. ನಿಧಾನವಾಗಿ ವಿವರವಾಗಿ ಓದುವ ಕೆಲಸ ಇನ್ನು ಆಗಬೇಕಿದೆ.
ನಾನು ವೃತ್ತಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕ. ಈಗ ನಿವೃತ್ತ. ಜೈನ ಪುರೋಹಿತ ವರ್ಗದಲ್ಲಿ ಜನಿಸಿದ ನಾನು ಹಿರಿಯವರಿಂದ ಬಂದ ಜ್ಯೋತಿಷ್ಯ ಮತ್ತು ವಾಸ್ತು ವಿಷಯಗಳನ್ನು ತಿಳಿದು ನಾಡಿನ ಬಸದಿಗಳ ನಿರ್ಮಾಣ ಹಾಗೂ ಜೀರ್ಣೋದ್ಧಾರದ ಸಂದರ್ಭದಲ್ಲಿ, ಸಲಹೆ ಹಾಗೂ ಮಾರ್ಗದರ್ಶನ ನೀಡುವ ಕಾರ್ಯಗಳನ್ನು ಮಾಡುತ್ತಿದ್ದೇನೆ.
ದೈವಾರಾಧನೆಗೆ ಸಂಬಂಧಿಸಿದಂತೆ ಅನೇಕ ಪ್ರಾಥಮಿಕ ವಿಚಾರಗಳನ್ನು ತಿಳಿಸುವ ಬೃಹತ್ ಕಾರ್ಯ ನಿಮ್ಮಿಂದ ಆಗಿದೆ. ಜನಪದರ ಪರಂಪರೆಯ ಮಾಹಿತಿಗಳು ಆಲಯಗಳ ಜೀರ್ಣೋದ್ಧಾರದ ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತದೆ.
ಬ್ರಹ್ಮ/ ಬೆರ್ಮರ್ ಇವರ ಕುರಿತಾದ ವಿಶ್ಲೇಷಣೆ ನಿಮ್ಮ ಕೃತಿಯಲ್ಲಿದೆ. ಜೈನ ಪರಂಪರೆಯಲ್ಲಿ ಬರುವ ಬ್ರಹ್ಮನ ಮಾಹಿತಿ, ನಿಮ್ಮ ಮುಂದಿನ ಸಂಶೋಧನೆಗಳಿಗೆ ನೆರವಾದೀತು.
ಡಾ. ಸುದರ್ಶನ ಕುಮಾರ್
ವಿಶ್ರಾಂತ ಪ್ರಾಂಶುಪಾಲರು,
"ಚಾರಿತ್ರ", ಬಡಗ ಬಸದಿ ಬಳಿ, ಅಲಂಗಾರು ರಸ್ತೆ,
ಮೂಡುಬಿದಿರೆ - 574227
**
ನಿಮ್ಮ ಅಭಿಮಾನ ಮಾತುಗಳಿಗೆ ಧನ್ಯವಾದಗಳು ಸರ್
ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್
ಮೊಬೈಲ್ 9480516684

No comments:
Post a Comment