.ಮೊನ್ನೆ ಫೇಸ್ ಬುಕ್ಕಿಲಿ ಎನ್ನ ಸಣ್ಣಾದಿಪ್ಪಗಣ ಗೆಳೆಯ(ನೆಂಟ್ರು ) ಸೂರ್ಯನಾರಾಯಣ ತೆಂಕ ಬೈಲು (ಈಗ ಅವ ದೇಲಂತ ಬೆಟ್ಟಿನ ದೊಡ್ಡ ಶಾಲೆ ಮಾಷ್ಟ್ರ ) ಹವ್ಯಕ ಭಾಷೆಲಿ ಬರೆ ಓದುಲೆ ಕೊಶಿ ಆವುತ್ತು ಹೇಳಿ ಸಲಹೆ ಕೊಟ್ಟ .ಸುಮಾರು ಸಮಯಂದ ಆನು ಹವ್ಯಕ ಭಾಷೇಲಿ ರಜ್ಜ ಏನಾರು ಎಂತಾದರು ಬರೆಯಕ್ಕು ಹೇಳಿ ಜಾನ್ಸಿಗೊಂಡು ಇತ್ತಿದೆ.ಅದಕ್ಕೆ ಸೂರ್ಯ ನಾರಾಯಣನ ಮಾತು ಬಲ ಕೊಟ್ಟತ್ತು ಹಾಂಗಾಗಿ ಹವ್ಯಕ ಭಾಷೆಲಿ ಬರವಲೆ ಸುರು ಮಾಡಿದ್ದೆ
ಆನು ನಾಲ್ಕು ವರ್ಷ ಮೊದಲು ಬೆಳ್ಳಾರೆ ಗವರ್ಮೆಂಟು ಕೋಲೇಜಿಲಿ ಕನ್ನಡ ಲೆಕ್ಚರು ಕೆಲಸಕ್ಕೆ ಸೇರಿದ ಒಂದೆರಡು ದಿನಂಗಳಲ್ಲಿಯೇ ಅಲ್ಯನೋ(ಣ) ರ ಹವ್ಯಕ ಭಾಷೆಗೂ ಎಂಗಳ ಹವ್ಯಕ ಭಾಷೆಗೂ ತುಂಬಾ ವ್ಯತ್ಯಾಸ ಇದ್ದು ಹೇಳಿ ಎನಗೆ ಗೊಂತಾತು .ಅಲ್ಯನೋರ ಹವ್ಯಕ ಭಾಷೇಲಿ ಕನ್ನಡದ ಪದಂಗ ಜಾಸ್ತಿ ಇದ್ದು .ಅದರ ಮೂಡ್ಲಾಗಿ (ಹವ್ಯಕ) ಭಾಷೆ ಹೇಳಿಹೇಳ್ತವು .ಅವು ಎನಗೆ ಹೇಳುದರ ಎನಿಗೆ ಹೇಳಿ ಹೇಳ್ತವು .ನಮ್ಮ ಉಂಡೆಯ ಅವು ಕಡುಬು ಹೇಳಿ ಹೇಳ್ತವು .ಹೀಂಗೆ ತುಂಬಾ ಕಡೆ ಅವರ ಭಾಷೆ ನಮ್ಮ ಭಾಷೆಂದ ಬೇರೆ ತರ ಇದ್ದು.ಪಡ್ಲಾಗಿ ಭಾಷೆಲಿದೆ ರಜ್ಜ ಬೇರೆ ತರ ಇಪ್ಪ ಹವ್ಯಕ ಭಾಷೆಯ ಒಂದು ವಿಧ ಅಲ್ಲಿನ ಕೆಲವು ಕುಟುಂಬಗಳಲ್ಲಿ ಅಲ್ಲಿ ಇದ್ದು .ಹೋವುಕೆ ಬರುಕೆ ಇತ್ಯಾದಿ ಪದಂಗ ಅದರಲ್ಲಿ ಇದ್ದು .ಅದು ರಜ್ಜ ಭೈರಂಗಳ ಕನ್ನಡ ಭಾಷೆಯ ಹಾಂಗೆ ಇದ್ದು .
ಉತ್ತರ ಕನ್ನಡದೋರ ಹವ್ಯಕ ಭಾಷೆಗೂ ಎಂಗಳ ಭಾಷೆಗೂ ತುಂಬಾ ವ್ಯತ್ಯಾಸ ಇಪ್ಪದು ಎನಗೆ ಗೊಂತಿತ್ತು .ಬೆಳ್ಳಾರೆಗೆ ಹೋದ ಮೇಲೆ ಅಲ್ಯಣ ಮೂಡ್ಲಾಗಿ ಭಾಷೆ ಮತ್ತೆ ಅದರ ಇನ್ನೊಂದು ವಿಧ ಇಪ್ಪದು ಗೊಂತಾತು ಎನಗೆ .ಮತ್ತೆ ಕೊಡೆಯಾಲ ಕಾಸರಗೋಡು ವಿಟ್ಲ ಪುತ್ತೂರು ಮೊದಲಾದ ಜಾಗೆಗಳ ಹವ್ಯಕ ಭಾಷೆದೆ ಎಂಗಳ ಹವ್ಯಕ ಭಾಷೆ(ಕೋಳ್ಯೂರು ಸೀಮೆದು )ದೆ ಒಂದೇ ರೀತಿ ಇಕ್ಕು ಹೇಳಿ ಆನು ಗ್ರೇಶಿತ್ತಿದೆ.ಆದರೆ ಒಪ್ಪಣ್ಣನ ಒಪ್ಪಂಗೊ ಓದುತ್ತಾ ಇದ್ದಾಂಗೆ ಎಂಗಳ ಭಾಷೆಗೂ ಅಲ್ಲಿ ಇಪ್ಪ ಭಾಷೆಗೂ ತುಂಬ ವ್ಯತ್ಯಾಸ ಇಪ್ಪದರ ನೋಡಿ ಎಂಗಳ ಭಾಷೆ ರಜ್ಜ ಬೇರೆ ಹೇಳಿ ಗೊಂತಾತು ಎನಗೆ .ಅದರಲ್ಲಿ ಒ ಕಾರದ ಬಳಕೆ ಹೆಚ್ಚು ಇದ್ದು .ಅಭಿನಂದನೆಗೊ ,ಒಪ್ಪಂಗೊ ಮಂತ್ರಂಗೊ ,ಗಾದೆಗೊ ಇತ್ಯಾದಿ .ಎಂಗಳ ಭಾಷೆಲಿ ಇಂತ ಕಡೆ ಒ ಕಾರ ಇಲ್ಲೆ .ಅಭಿನಂದನೆಗ ಗಾದೆಗ ,ಮಂತ್ರಗ ಹೇಳಿ ಇರ್ತು .
ಮತ್ತೆ ಎಂಗಳ ಭಾಷೆಲಿ ಹೇತು ,ಹೇದು ಹೇದರೆ ಕೇಟವು ಇಂತ ಪದಂಗ ಇಲ್ಲೆ ಇದರ ಬದಲು .ಹೇಳಿತ್ತು ,ಹೇಳಿ ,ಹೇಳಿದರೆ ಕೇಳಿದವು ಹೇಳಿ ಇದ್ದು
ಆನು ಭಾಷಾ ತಜ್ಞೆ ಅಲ್ಲ . ಎನ್ನ ತಲೆಗೆ ಬಂದದರ ಇಲ್ಲಿ ಬರದ್ದೆ .ಇನ್ನು ಮುಂದಣ ದಿನಂಗಳಲ್ಲಿದೆ ಎನಗೆ ಬರೆಯಕ್ಕು ಹೇಳಿ ಎನ್ಸಿದ್ದರ ಎಂಗಳ ಹವ್ಯಕ ಭಾಷೆಲಿ ಬರೆತ್ತೆ .ನಿಂಗ ಎಲ್ಲ ತಿಳುದೋರು ಹಂಸ ಕ್ಷೀರ ನ್ಯಾಯದ ಹಾಂಗೆ (ನೀರು ಸೇರ್ಸಿದ ಹಾಲಿನ ಹಂಸದ ಎದುರು ಮಡುಗಿದರೆ ಅದು ಹಾಲಿನ ಮಾತ್ರ ಕುಡುದು ನೀರಿನ ಹಾಂಗೆ ಬಿಡ್ತಡ !ಇದೊಂದು ಕವಿ ಸಮಯ ) ಒಳ್ಳೆದರ ಮಾತ್ರ ತೆಕ್ಕೊಂಡು ಬೆನ್ನು ಕಟ್ಟಕ್ಕು ಹೇಳಿ ಕೇಳಿಗೊಂಡಿದೆ
ಇನ್ನೊಂದರಿ ಕಾಂಬ ನಮಸ್ಕಾರ
- ಡಾ.ಲಕ್ಷ್ಮಿ ಜಿ ಪ್ರಸಾದ