ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ತುಳುನಾಡಿನ ಭೂತಾರಾಧನೆ/ ಭೂತ ಕೋಲ/ ದೈವಾರಾಧನೆ ಬಗ್ಗೆ ಮಾಹಿತಿ- ಡಾ.ಲಕ್ಷ್ಮೀ ಜಿ ಪ್ರಸಾದ್ Information about bhootaradhane daivas of Tulunadu
Tuesday, 24 June 2014
Thursday, 19 June 2014
Friday, 13 June 2014
ಅಪರೂಪದ ಚಂದಕ್ಕು ನಲಿಕೆ-ಡಾ.ಲಕ್ಷ್ಮೀ ಜಿ ಪ್ರಸಾದ
copy rights reserved
ದುಡಿ ಕುಣಿತಗಳಲ್ಲಿ ಇದು ಕೂಡ ಒಂದು ,ಇಷ್ಟರ ತನಕ ಜನಪದ ಅಧ್ಯಯನಕಾರರ ಗಮನಕ್ಕೆ ಬಾರದೆ ಇರುವ ಒಂದು ಅಪರೂಪದ ತುಳು ಜನ ಪದ ಕುಣಿತವಿದು.ಬಾಳಿಲ ಮಂಜುನಾಥ ಜನಪದ ಕಲಾ ಸಂಘದವರು ಅಭಿವ್ಯಕ್ತಿಸಿದ ಚಂದಕ್ಕು ನಲಿಕೆ ,ಶ್ರೀ ಬಾಬು ಅಜಲರ ಹಾಡು ಮತ್ತು ಜನಪದ ಕಲಾ ಸಂಘದ ಮಹಿಳಾ ಸದಸ್ಯರ ಜನಪದ ನೃತ್ಯ ಬಹಳ ಸೊಗಸಾಗಿದೆ ನೃತ್ಯದ ಹೆಜ್ಜೆಗಳಲ್ಲಿ ತುಸು ಆಧುನಿಕತೆಯ ಪ್ರಭಾವ ಇದೆ. ಆದರೂ ಮೂಲದ ಕುಣಿತದ ಹೆಜ್ಜೆ ,ಸೊಗಸು ಕೂಡ ಉಳಿದುಕೊಂಡಿದೆ
Vocarchanda baari raadhe gopala paddhana by Smt sharada g bangera ,maninalkur Vocaroo Voice Messageoo Voice Message
Vocaroo Voice Message pls click here to listen paaddana
ಚಂದ ಬಾರಿ ರಾಧೆ ಗೋಪಾಲ ಪಾಡ್ದನ -ಹಾಡಿದವರು ಶ್ರೀಮತಿ ಶಾರದ ಜಿ ಬಂಗೇರ ಮಣಿನಾಲ್ಕೂರು ,ಬಂಟ್ವಾಳ
copy rights reserved @Dr Laxmi G Prasad
,,ದಾಸವರೇಣ್ಯರ ನಿಂದಾಸ್ತುತಿ ಗಳಂತೆ ಇದು ಕೂಡ ತುಳು ಜನಪದರ ನಿಂದಾ ಸ್ತುತಿಯ ವಿಶಿಷ್ಟ ಅಭಿವ್ಯಕ್ತಿ ಇರಬಹುದು .
ಮಣಿನಾಲ್ಕೂರು ಅಂಗನವಾಡಿಯ ಸಹಾಯಕರಾಗಿರುವ ಶಾರದಾ ಬಂಗೆರರಿಗೆ ಅನೇಕ ಪಾಡ್ದನಗಳು,
ತುಳು ಜನಪದ ಹಾಡುಗಳು ತಿಳಿದಿದ್ದು ಅವನ್ನು ಸುಮಧುರವಾಗಿ ಹಾಡುತ್ತಾರೆ
ಚಂದ ಬಾರಿ ರಾಧೆ ಗೋಪಾಲ ಪಾಡ್ದನ -ಹಾಡಿದವರು ಶ್ರೀಮತಿ ಶಾರದ ಜಿ ಬಂಗೇರ ಮಣಿನಾಲ್ಕೂರು ,ಬಂಟ್ವಾಳ
copy rights reserved @Dr Laxmi G Prasad
,,ದಾಸವರೇಣ್ಯರ ನಿಂದಾಸ್ತುತಿ ಗಳಂತೆ ಇದು ಕೂಡ ತುಳು ಜನಪದರ ನಿಂದಾ ಸ್ತುತಿಯ ವಿಶಿಷ್ಟ ಅಭಿವ್ಯಕ್ತಿ ಇರಬಹುದು .
ಮಣಿನಾಲ್ಕೂರು ಅಂಗನವಾಡಿಯ ಸಹಾಯಕರಾಗಿರುವ ಶಾರದಾ ಬಂಗೆರರಿಗೆ ಅನೇಕ ಪಾಡ್ದನಗಳು,
ತುಳು ಜನಪದ ಹಾಡುಗಳು ತಿಳಿದಿದ್ದು ಅವನ್ನು ಸುಮಧುರವಾಗಿ ಹಾಡುತ್ತಾರೆ
Wednesday, 4 June 2014
ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು-105-106 ಕಾನದ ಕಟದ -ಡಾ.ಲಕ್ಷ್ಮೀ ಜಿ ಪ್ರಸಾದ
ಕರಂಗೋಲುಕುಣಿತ ಚಿತ್ರ ಕೃಪೆ :ಕೃಷ್ಣ ಮೋಹನ ಪೆರ್ಲ
copy rights reserved
ಭತ್ತದ ನೈಸರ್ಗಿಕ ಬೇಸಾಯದ ಒಂದು ಹುಲ್ಲಿನ ಕ್ರಾಂತಿ ಖ್ಯಾತಿಯ ಜಪಾನಿನ ವಿಜ್ಞಾನಿ ಮಸನೋಬ ಪುಕುವೋಕ ಅಜ್ಜನನ್ನು ನೆನಪಿಸುವ ಕಾನದ ಮತ್ತು ಕಟದರು ಘಟ್ಟದ ಮೇಲಿಂದ ಕರಂಗೋಲು/ಭತ್ತದ ಅತಿಕಾರೆ ಬೆಳೆಯನ್ನು ತುಳುನಾಡಿಗೆ ತಂದ ಸಾಂಸ್ಕೃತಿಕ ವೀರರು .ಕರಂಗೋಲು ಕುಣಿತ ಇವರ ನೆನಪಿನಲ್ಲಿ ನಡೆಯುವ ತುಳು ಆರಾಧನಾ ಜನಪದ ಕುಣಿತ .
ಬೊಮ್ಮಿ ಎಂಬ ಒಂದು ಗುತ್ತಿನಲ್ಲಿ ಸುಬ್ಬಿ ಎಂಬ ಹೆಸರಿನ ಹುಡುಗಿ ಇದ್ದಳು.ಅವಳು ಒಂದು ದಿನ ಗುಡ್ಡದಲ್ಲಿ ಸೊಪ್ಪು ಹೆರೆಯುವಾಗ ಅವಳಿಗೆ ಒಂದು ಮಗು ಸಿಗುತ್ತದೆ .ಅದನ್ನು ಮಡಿಲಲ್ಲಿ ಕಟ್ಟಿಕೊಂಡು ಬಂದು ತನ್ನ ಒಡೆಯನಿಗೆ ಅವಳು ತಂದುಕೊಡುತ್ತಾಳೆ.ಇನ್ನು ಮದುವೆಯಾಗದೆ ಬ್ರಹ್ಮಚಾರಿಯಾಗಿದ್ದ ಆತ ಆ ಮಗುವನ್ನು ಅವಳೇ ಸಾಕುವಂತೆ ವ್ಯವಸ್ಥೆ ಮಾಡುತ್ತಾನೆ.
ಅವಳು ತನ್ನ ಅಣ್ಣಂದಿರಾದ ಪಾಂಬಲಜ್ಜ ಪೂಂಬಲ ಕರಿಯರ ಸಹಾಯದಿಂದ ಆ ಹೆಣ್ಣು ಮಗುವನ್ನು ಸಾಕುತ್ತಾಳೆ .ಬೆಳ್ಳನೆ ಹೊಳೆಯುತ್ತಾ ಇದ್ದ ಆ ಮಗುವಿಗೆ ಬೊಳ್ಳೆ ಎಂದು ಹೆಸರು ಹಿಡಿದು ಕರೆಯುತ್ತಾರೆ.
ಮುಂದೆ ಅವಳನ್ನು ಕಂಗು ಹಿತ್ತಿಲು ಕಾಂತಣ ಬೈದ್ಯನ ಹೆಂಡತಿ ದೇಯಿ ಸಾಕುತ್ತಾಳೆ.ತುಸು ದೊಡ್ಡವಳಾದ ಮೇಲೆ ಮದುವೆ ಮಾಡುತ್ತಾರೆ .
ಬೊಳ್ಳೆ ಮತ್ತು ದೇಯಿ ಇಬ್ಬರೂ ಒಂದೇ ದಿನ ಋತುಮತಿಯರಾಗುತ್ತಾರೆ.ಇಬ್ಬರೂ ತೊಟ್ಟಿಲ ಕೆರೆಯಲ್ಲಿ ಸ್ನಾನ ಮಾಡುತ್ತಾರೆ .ಪೆರುವೆಲ್ ಮೀನುಗಳಿಗೆ ಬೆಳ್ತಿಗೆ ಅಕ್ಕಿ ಹಾಕುತ್ತಾರೆ.ಹರಕೆ ಹೇಳುತ್ತಾರೆ.ಇದರಿಂದಾಗಿ ಗರ್ಭವತಿಯರಾಗುತ್ತಾರೆ. ದೇಯಿ ಹೆಣ್ಣು ಮಗು ಹಡೆಯುತ್ತಾಳೆ .ಅವಳೇ ಕೋಟಿ ಚೆನ್ನಯರ ಅಕ್ಕ ಕಿನ್ನಿದಾರು .
ಬೊಳ್ಳೆ ಅವಳಿ ಮಕ್ಕಳನ್ನು ಪ್ರಸವಿಸುತ್ತಾಳೆ.ಅವರಿಗೆ ಕಾನದ ,ಕಟದ ಎಂದು ಹೆಸರಿಡುತ್ತಾರೆ.ಮುಂಡೆ ಇವರು ಬೆಳೆದು ವಿದ್ಯೆ ಕಲಿತು ಅಸಮಾನ್ಯ ವೀರರಾಗುತ್ತಾರೆ.
ಮುಂದೆ ಮುದ್ದ ಕಳಲರನ್ನು ಭೇಟಿಯಾಗುತ್ತಾರೆ .ಅಲ್ಲಿ ಹೋರಾಡಿ ಕಾರಣಿಕ ತೋರುತ್ತಾರೆ.
ಮುಂಡೆ ಘಟ್ಟದ ಮೇಲಿನಿಂದ ಕರಂಗೋಲು .ಅತಿಕಾರೆ ಭತ್ತದ ತಳಿಯನ್ನು ತಂದು ತುಳುನಾಡಿನಲ್ಲಿ ಬೇಸಾಯ ಮಾಡಲು ಹೊರಡುತ್ತಾರೆ.
ಘಟ್ಟದ ಮೇಲಿನಿಂದ ಅತಿಕಾರೆ ಭತ್ತವನ್ನು ತರುವಾಗ ಚಾಮುಂಡಿ ತಡೆಯುತ್ತಾಳೆ.ಅವಳ ಜೊತೆ ಹೋರಾಡಿ ಗೆಲ್ಲುತ್ತಾರೆ.ಅವರ ಶೌರ್ಯಕ್ಕೆ ಮೆಚ್ಚಿ ಚಾಮುಂಡಿ ಅವರಿಗೆ ಯೋಧ ಕತ್ತಿಗಳನ್ನು ನೀಡುತ್ತಾಳೆ,
ಮುಂದೆ ಅವರು ಎನ್ಮೂರಿಗೆ ಬಂದು ಕೋಟಿ ಚೆನ್ನಯರಲ್ಲಿ ಹೋರಾಡುತ್ತಾರೆ.ಮುಂದೆ ನಾಲ್ವರೂ ಸಾಹಸಿಗಳು ರಾಜಿ ಮಾಡಿ ಕೊಳ್ಳುತ್ತಾರೆ .ಒಟ್ಟಾಗಿ ಸಂಚರಿಸುವಾಗ ಮುದ್ದ ಕಳಲ ರನ್ನೂ ಭೇಟಿ ಮಾಡುತ್ತಾರೆ .ಕಾನದ ಕಟದ ತಮ್ಮ ಸಾಮರ್ಥ್ಯದಿಂದ ಕಲ್ಲಿನ ಸೆಲೆಯಿಂದ ನೀರು ತೆಗೆದು ಕಾರಣಿಕ ತೋರುತ್ತಾರೆ.
ಒಂದು ದಿನ ಕಾನದ ಕಟದ ಹೊಳೆಯಲ್ಲಿ ಮೀನು ಹಿಡಿಯಲು ಹೋಗುತ್ತಾರೆ.ಮೀನು ಹಿಡಿಯುವ ಉತ್ಸಾಹದಲ್ಲಿ ಅಣ್ಣ ನೀರಿಗೆ ಹಾರುತ್ತಾನೆ .ಅಣ್ಣ ಬಾರದೆ ಇರುವುದನ್ನು ಗಮನಿಸಿದ ತಮ್ಮನೂ ನೀರಿಗೆ ಹಾರುತ್ತಾನೆ .ಇಬ್ಬರೂ ದುರಂತವನ್ನಪ್ಪುತ್ತಾರೆ .ನೀರಿನಿಂದ ಪಂಜುರ್ಲಿ ಭೂತ ಎದ್ದು ಬರುತ್ತದೆ ಪಂಜುರ್ಲಿಯ ಜೊತೆ ಕಾನದ ಕಟದ ಋ ಮಾಯವಾಗುತ್ತಾರೆ .
ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ಒಂದು ವೈಶಿಷ್ಟ್ಯತೆ .ವೀರಾರಾಧನೆ ತುಳು ನಾಡಿನಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಪ್ರಚಲಿತವಿರುವ ವಿದ್ಯಮಾನ .ಸಾಹಸಿಗಳಾದ ಕಾನದ ಕಟದರ ಆಕಸ್ಮಿಕ ಅಥವಾ ಉದ್ದೇಶ ಪೂರ್ವಕವಾದ ಕುತಂತ್ರದಿಂದಾದ ದುರಂತ ವನ್ನಪ್ಪಿ ಮುಂಡೆ ಜನಮಾನಸದಲ್ಲಿ ನೆಲೆಸಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.
ಹಿಂದಿನ ಕಾಲದಲ್ಲಿ ಬೇಸಾಯ ಮಾಡಲು ಎಲ್ಲರಿಗೆ ಅವಕಾಶ ಇರಲಿಲ್ಲ .ಈ ಸಾಹಸಿ ಸಹೋದರರು ಅದಕ್ಕಾಗಿ ಘಟ್ಟದಿಂದ ಭತ್ತದ ಬೀಜವನ್ನು ತಂದು ಕಾಡು ಕಡಿದು ಗದ್ದೆ ಮಾಡಿ ಸಾಹಸದಿಂದ ಬೇಸಾಯ ಮಾಡಿದ್ದಿರಬೇಕು.ಈ ಸಂದರ್ಭದಲ್ಲಿ ಅವರು ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿರಬೇಕು .ಚಾಮುಂಡಿ ದೈವ ತಡೆಯಿತು ಎಂಬಲ್ಲಿ ಈ ಬಗ್ಗೆ ಸುಳಿವು ಸಿಗುತ್ತದೆ .
ಹಾಗಾಗಿ ಅವರನ್ನು ಉದ್ದೇಶಪೂರ್ವಕವಾಗಿ ಯಾರಾದರೂ ದುರಂತವನ್ನಪ್ಪುವಂತೆ ಮಾಡಿರಬಹುದು .ಅಥವಾ ಹೊಳೆಯಲ್ಲಿ ಮುಳುಗಿ ಆಕಸ್ಮಿಕವಾಗಿ ಮರಣನ್ನಪ್ಪಿರಬಹುದು.
ಇದಕ್ಕೆ ಮುಂದೆ ಪಂಜುರ್ಲಿ ದೈವದ ಕಾರಣಿಕ ಸೇರಿ ಅವರು ಪಂಜುರ್ಲಿ ದೈವದ ಸೇರಿಗೆಗೆ ಸಂದು ಮಾಯವಾಗಿ ದೈವತ್ವ ಪಡೆದರು ಎಂಬ ಕಥಾನಕ ಸೇರಿರಬಹುದು.
ಅದು ಏನೇ ಇದ್ದರೂ ಅತಿಕಾರೆ ಭತ್ತದ ಬೆಳೆಯನ್ನು ತುಳುನಾಡಿಗೆ ಪರಿಚಯಿಸಿ ತುಳುನಾಡಿನಲ್ಲಿ ಭತ್ತದ ಬೇಸಾಯದ ಪ್ರವರ್ತಕರಾಗಿರುವ ಕಾನದ ಕಟದರು ಪ್ರಾತಃ ಸ್ಮರಣೀಯರಾಗಿದ್ದಾರೆ ಎಂಬುದಂತೂ ಎಲ್ಲರೂ ಒಪ್ಪಲೇ ಬೇಕಾದ ವಿಚಾರವಾಗಿದೆ .
ಇವರ ನೆನಪಿನಲ್ಲಿಯೇ ಕರಂಗೋಲು ಕುಣಿತ ತುಳುನಾಡಿನಲ್ಲಿ ಬಳಕೆಗೆ ಬಂದಿದೆ.ಕರಂಗೋಲು ಮತ್ತು ಕಂಗೀಲು ಎರಡು ಕೂಡಾ ಸುಗ್ಗಿಯ ಭತ್ತದ ಬೇಸಾಯಕ್ಕೆ ಸಂಬಂಧಿಸಿದ್ದಾಗಿದೆ
ಕಂಗೀಲು ಕುಣಿತ ಚಿತ್ರ ಕೃಪೆ :ಪ್ರಚೇತ ಶೆಟ್ಟಿ
ಆಧಾರ ಗ್ರಂಥ :ಡಾ.ವಾಮನ ನಂದಾವರ -ಕೋಟಿ ಚೆನ್ನಯ -ಒಂದು ಜಾನಪದೀಯ ಅಧ್ಯಯನ (ಪಿಎಚ್.ಡಿ ಸಂಶೋಧನಾ ಮಹಾ ಪ್ರಬಂಧ ).ಕರಂಗೋಲು ಎರಡೂ ಅತಿಕಾರ ಬೆಳೆಯನ್ನು ತುಳುನಾಡಿಗೆ ತಂದ ಕಾನದ ಕಟದರ ನೆನಪಿನಲ್ಲಿ ಭಿನ್ನ ಭಿನ್ನ ಸಮುದಾಯದವರು ಮಾಡುವ ಕುಣಿತ ,ನೆಕ್ಕಿ ಸೊಪ್ಪನ್ನು ಕೈಯಲ್ಲಿ ಹಿಡಿದು ಮೈಗೆ ಬಿ ಳಿ ಚುಕ್ಕೆ ಹಾಕಿ ,x ಗುರುತು ಅಡ್ಡ ಗೆರೆಗೆರೆ ತಲೆಗೆ ಮುಂಡಾಸು ಕಟ್ಟಿ ಕರಂಗೋಲು ನೃತ್ಯವನ್ನು ಮಾಡುವುದು ಸಂಪ್ರದಾಯ .ಈಗ ವೇಷ ಭೂಷಣ ಕುಣಿತ ಹಾಡುಗಳಲ್ಲಿ ಪ್ರಾದೇಶಿಕವಾಗಿ ಅನೇಕ ಭಿನ್ನತೆಗಳಿವೆ ಕರಂಗೋಲು ಚಿತ್ರ ಹಾಕಿದ್ದಕ್ಕೆ ಧನ್ಯವಾದಗಳು Krishnamohan Perla ಈ ಬಗ್ಗೆ ಹೆಚ್ಚಿನ ಮಾಹಿತಿಗೆ http://suddinews.com/sullia/2012/12/18/25702/
Tuesday, 3 June 2014
ಸಾವಿರದೊಂದು ಗುರಿಯೆಡೆಗೆ:104 -ಕನ್ನಲಾಯ ಭೂತ © Dr.LAKSHMI G PRASAD
©copy rights reserved
ದಕ್ಷಿಣ ಕನ್ನಡ ಜಿಲ್ಲೆಯ ಅಗರಿಯಲ್ಲಿ ಕನ್ನಲಾಯ ಭೂತಕ್ಕೆ ಆರಾಧನೆ ಇದೆ .ಅಗರಿಯಲ್ಲಿ ಕನ್ನಲಾಯ/ಕಣ್ಣಲಾಯ/ಕನ್ನಲ್ಲಾಯ/ಕನ್ನೆಲಾಯ ದೈವದ ಗುಡಿಯೂ ಇದೆ .
ಕನ್ನಲ್ಲಾಯಯ ಜುಮಾದಿಯ ಸೇರಿಗೆಗೆ ಸಂದ ದೈವ .ಮೂಲತಃ ಈತ ಘಟ್ಟದ ಮೇಲಿನ ಕನ್ನಡ ಪರಿಸರದ ಕೋಣಗಳ ಮಾರಾಟ ಮಾಡುವ ವ್ಯಾಪಾರಿ .
ಗುರು ಸರೊಪೊಳಿ ನಾಯಕನಿಗೆ ನಾಲ್ಕು ಜನ ಮಕ್ಕಳು .ಅವರು ಚಿಕ್ಕಂದಿನಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ .ನಂತರ ಹಡಗಿನ ಮೂಲಕ ವ್ಯಾಪಾರ ಮಾಡುತ್ತಾರೆ .ಸಂಭಾರ ಜೀನಸು ,ಗೋಧಿ ,ಬೇಳೆ,ಅಕ್ಕಿ,ಸಾಮೆ,ಬಟ್ಟೆ ಮೊದಲಾದ ವಸ್ತುಗಳ ವ್ಯಾಪಾರ ಮಾಡುತ್ತಾರೆ .
ಮುಂದೆ ಅವರು ಕೋಣಗಳನ್ನು ಕೊಂಡು ಕೊಳ್ಳುವುದಕ್ಕಾಗಿ ಘಟ್ಟದ ಮೇಲೆ ಹೋಗುತ್ತಾರೆ.ಅಲ್ಲಿ ಎಲ್ಲಪ್ಪ ಗೌಡ ಎಂಬಾತ ಎತ್ತು ಕೋಣಗಳನ್ನುಸಾಕಿ ಮಾರುತ್ತಾ ಇರುತ್ತಾನೆ.
ಅವನು ಈ ನಾಲ್ಕು ಶೆಟ್ಟಿಗಳ ಪರಿಚಯ ಮಾಡಿಕೊಳ್ಳುತ್ತಾನೆ.ಅವನಿಗೆ ಮುನ್ನೂರು ರುಪಾಯಿಗಳನ್ನು ಕೊಟ್ಟು ಅವನ ಎಲ್ಲ ಎತ್ತು/ಕೋಣಗಳನ್ನೂ ಇವರು ಕೊಂಡುಕೊಳ್ಳುತ್ತಾರೆ.ಆತನನ್ನು ಎತ್ತು/ಕೋಣಗಳ ಉಸ್ತುವಾರಿ ನೋಡಿಕೊಳ್ಳುವ ಸಲುವಾಗಿ ತಮ್ಮೊಂದಿಗೆ ಕರೆ ತರುತ್ತಾರೆ.
ಮುಂದೆ ಈ ನಾಲ್ಕು ಜನ ಸಹೋದರರಿಗೆ ಸ್ವಾಮಿ ನಂದೇದಿ ಎಂಬ ಹುಡುಗಿಯ ಪರಿಚಯವಾಗುತ್ತದೆ.ಅವಳಲ್ಲಿ ಈ ನಾಲ್ಕು ಜನ ಸಹೋದರರು ಆಕೆಯ ಬಳಿ ಅಡುಗೆ ಮಾಡಿಕೊಳ್ಳಲು ಪಾತ್ರೆಗಳನ್ನು ಕೇಳುತ್ತಾರೆ.ಆಗ ಆಕೆ ತಾನೇ ಅದೀಗೆ ಮಾಡಿ ಕೊಡುವುದಾಗಿ ಹೇಳುತ್ತಾಳೆ.
ಕೊನೆಯಲ್ಲಿ ಅವಳು ಅವರ ನಾಲ್ಕು ಸಾವಿರ ಕೋಣಗಳನ್ನು ನೋಡುವ ಆಸೆ ವ್ಯಕ್ತ ಪಡಿಸುತ್ತಾಳೆ.ಆಕೆ ಸುಂದರವಾದ ಉಡುಗೆ ತೊಟ್ಟು ಚಿಕ್ಕ ಬೆಳ್ಳಿಯ ಚಾಕು ಹಿಡಿದು ತತ್ರ ಹಿಡಿದುಕೊಂಡು ಮೈದಾನಕ್ಕೆ ಬರುತ್ತಾಳೆ.ಅಲ್ಲಿನ ಕೋಣಗಳ ಸೌನ್ದಯಕ್ಕೆ ಮನ ಸೋತು ಒಂದು ಜೊತೆ ಸುಂದರವಾದ ಕೋಣಗಳನ್ನು ಖರೀದಿಸಲು ಬಯಸುತ್ತಾಳೆ.
ಇಲ್ಲಿ ಕೋಣಗಳ ಬೆಲೆಯ ವಿಚಾರದಲ್ಲಿ ಆ ಹುಡುಗಿ ಮತ್ತು ನಾಲ್ಕು ಜನ ಸಹೋದರರ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತದೆ .ಅವರೊಳಗೆ ವಿವಾದ ಉಂಟಾಗುತ್ತದೆ.ಅವಳು ಕೇಳಿದ ಬೆಲೆಗೆ ಅವರು ಕೋಣಗಳನ್ನು ಕೊಡಲು ಒಪ್ಪುವುದಿಲ್ಲ.
ಇದರಿಂದ ನೊಂದು ಕೊಂಡ ಅವಳು ತನ್ನ ಗುತ್ತಿಗೆ ಹಿಂದಿರುಗುವಾಗ ತನ್ನ ಆರಾಧ್ಯ ದೈವ ಜುಮಾದಿಗೆ ಹರಿಕೆ ಹೇಳುತ್ತಾಳೆ.
ಆ ವೇಳೆಗೆ ಕೋಣಗಳನ್ನುನೋಡಿಕೊಳ್ಳುವಾತ ಕೋಣಗಳನ್ನು ನೀರು ಕುಡಿಸುವ ಸಲುವಾಗಿ ಕೆರೆಗೆ ಕರೆತರುತ್ತಾನೆ .ಆಗ ಜುಮಾದಿ ದೈವ ತನ್ನ ಕಾರಣಿಕದಿಂದ ಆ ಕೋಣಗಳನ್ನು ಕಲ್ಲಾಗಿ ಪರಿವರ್ತಿಸುತ್ತದೆ .
ಆತ ಕೋಣಗಳು ಕಲ್ಲಾದಾಗ ದಿಗ್ಭ್ರಮೆ ಗೊಂಡು ಇನ್ನು ತನಗೇನು ಅಪ್ಪಣೆ ಎಂದು ದೈವ ಜುಮಾದಿಗೆ ಮೊರೆ ಇಡುತ್ತಾನೆ .ಆಗ ಜುಮಾದಿ ಭೂತ ಆತನನ್ನು ತನ್ನ ಸೇರಿಗೆಯಲ್ಲಿ ಸಂದಾಯ ಮಾಡಿ ಆತನಿಗೆ ಒಂದು ಅಲೌಕಿಕ ನೆಲೆ ಕೊಡುತ್ತದೆ .
ವಾಸ್ತವದಲ್ಲಿ ಕೋಣಗಳ ವ್ಯಾಪಾರದಲ್ಲಿ ಚರ್ಚೆ ಬಂದು ದುರಂತಕ್ಕೀಡಾದ ವ್ಯಾಪಾರಿ ದೈವತ್ವ ಪಡೆದು ಅರಾಧಿಸಲ್ಪಡುತ್ತಿರಬೇಕು .
ಆತನ ದುರಂತ ಅಕಸ್ಮಿಕವಾಗಿಯೂ ಆಗಿರಬಹುದು .ಅಥವಾ ಉಂಟಾದ ವಿವಾದದಿಂದಲೂ ಆಗಿರಬಹುದು .ದುರಂತಕ್ಕೆ ಜುಮಾದಿ ದೈವದ ಕಾರಣಿಕದ ಕಥಾನಕ ಸೇರಿಕೊಂಡಿರುವ ಸಾಧ್ಯತೆ ಇದೆ .
ಈ ಪಾಡ್ದನದ ಇನ್ನೊಂದು ಪಾಠ ದಲ್ಲಿ ನಾಲ್ಕು ಜನ ಶೆಟ್ಟಿಗಳು ಆಹಾರ ಕೇಳಿದಾಗ ಅವರ ಜಾತಿ ಕೇಳಿ ನೀರು ಕೊಡುತ್ತಾಳೆ.ಆಗ ಕಣ್ಣಲಾಯ ಭೂತ ಆಕೆಯನ್ನು ಮಾಯ ಮಾಡುತ್ತದೆ ಎಂಬ ಕಥೆಯೂ ಇದೆ.
ಆಧಾರ ಗ್ರಂಥಗಳು
1 ಡಾ.ಬಿ ಎ ವಿವೇಕ ರೈ -ತುಳು ಜನಪದ ಸಾಹಿತ್ಯ
2ಡಾ.ಹೈಡ್ರೂನ್ ಬ್ರೂಕ್ನರ್;ಒಳ ಸಂಬಂಧಗಳಿರುವ ಮೌಖಿಕ ಪರಂಪರೆಯಲ್ಲಿ ಕನ್ನಲ್ಲಾಯ ಪಾಡ್ದನದ
Subscribe to:
Posts (Atom)