Tuesday 3 June 2014

ಸಾವಿರದೊಂದು ಗುರಿಯೆಡೆಗೆ:104 -ಕನ್ನಲಾಯ ಭೂತ © Dr.LAKSHMI G PRASAD

                                              
                                                               ©copy rights reserved
ದಕ್ಷಿಣ ಕನ್ನಡ ಜಿಲ್ಲೆಯ ಅಗರಿಯಲ್ಲಿ  ಕನ್ನಲಾಯ ಭೂತಕ್ಕೆ ಆರಾಧನೆ ಇದೆ .ಅಗರಿಯಲ್ಲಿ ಕನ್ನಲಾಯ/ಕಣ್ಣಲಾಯ/ಕನ್ನಲ್ಲಾಯ/ಕನ್ನೆಲಾಯ ದೈವದ ಗುಡಿಯೂ ಇದೆ .
ಕನ್ನಲ್ಲಾಯಯ ಜುಮಾದಿಯ ಸೇರಿಗೆಗೆ ಸಂದ ದೈವ .ಮೂಲತಃ ಈತ ಘಟ್ಟದ ಮೇಲಿನ ಕನ್ನಡ ಪರಿಸರದ ಕೋಣಗಳ ಮಾರಾಟ ಮಾಡುವ ವ್ಯಾಪಾರಿ .
ಗುರು ಸರೊಪೊಳಿ ನಾಯಕನಿಗೆ ನಾಲ್ಕು ಜನ ಮಕ್ಕಳು .ಅವರು ಚಿಕ್ಕಂದಿನಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ .ನಂತರ ಹಡಗಿನ ಮೂಲಕ ವ್ಯಾಪಾರ ಮಾಡುತ್ತಾರೆ .ಸಂಭಾರ ಜೀನಸು ,ಗೋಧಿ ,ಬೇಳೆ,ಅಕ್ಕಿ,ಸಾಮೆ,ಬಟ್ಟೆ ಮೊದಲಾದ ವಸ್ತುಗಳ ವ್ಯಾಪಾರ ಮಾಡುತ್ತಾರೆ .
ಮುಂದೆ ಅವರು ಕೋಣಗಳನ್ನು ಕೊಂಡು ಕೊಳ್ಳುವುದಕ್ಕಾಗಿ ಘಟ್ಟದ ಮೇಲೆ ಹೋಗುತ್ತಾರೆ.ಅಲ್ಲಿ ಎಲ್ಲಪ್ಪ ಗೌಡ ಎಂಬಾತ ಎತ್ತು ಕೋಣಗಳನ್ನುಸಾಕಿ ಮಾರುತ್ತಾ ಇರುತ್ತಾನೆ.
ಅವನು ಈ ನಾಲ್ಕು ಶೆಟ್ಟಿಗಳ ಪರಿಚಯ ಮಾಡಿಕೊಳ್ಳುತ್ತಾನೆ.ಅವನಿಗೆ ಮುನ್ನೂರು ರುಪಾಯಿಗಳನ್ನು ಕೊಟ್ಟು ಅವನ ಎಲ್ಲ ಎತ್ತು/ಕೋಣಗಳನ್ನೂ ಇವರು ಕೊಂಡುಕೊಳ್ಳುತ್ತಾರೆ.ಆತನನ್ನು ಎತ್ತು/ಕೋಣಗಳ ಉಸ್ತುವಾರಿ ನೋಡಿಕೊಳ್ಳುವ ಸಲುವಾಗಿ ತಮ್ಮೊಂದಿಗೆ ಕರೆ ತರುತ್ತಾರೆ.
ಮುಂದೆ ಈ ನಾಲ್ಕು ಜನ ಸಹೋದರರಿಗೆ ಸ್ವಾಮಿ ನಂದೇದಿ ಎಂಬ ಹುಡುಗಿಯ ಪರಿಚಯವಾಗುತ್ತದೆ.ಅವಳಲ್ಲಿ ಈ ನಾಲ್ಕು ಜನ ಸಹೋದರರು ಆಕೆಯ ಬಳಿ ಅಡುಗೆ ಮಾಡಿಕೊಳ್ಳಲು ಪಾತ್ರೆಗಳನ್ನು ಕೇಳುತ್ತಾರೆ.ಆಗ ಆಕೆ ತಾನೇ ಅದೀಗೆ ಮಾಡಿ ಕೊಡುವುದಾಗಿ ಹೇಳುತ್ತಾಳೆ.
ಕೊನೆಯಲ್ಲಿ ಅವಳು ಅವರ ನಾಲ್ಕು ಸಾವಿರ ಕೋಣಗಳನ್ನು ನೋಡುವ ಆಸೆ ವ್ಯಕ್ತ ಪಡಿಸುತ್ತಾಳೆ.ಆಕೆ ಸುಂದರವಾದ ಉಡುಗೆ ತೊಟ್ಟು ಚಿಕ್ಕ ಬೆಳ್ಳಿಯ ಚಾಕು ಹಿಡಿದು ತತ್ರ ಹಿಡಿದುಕೊಂಡು ಮೈದಾನಕ್ಕೆ ಬರುತ್ತಾಳೆ.ಅಲ್ಲಿನ ಕೋಣಗಳ ಸೌನ್ದಯಕ್ಕೆ ಮನ ಸೋತು ಒಂದು ಜೊತೆ ಸುಂದರವಾದ ಕೋಣಗಳನ್ನು ಖರೀದಿಸಲು ಬಯಸುತ್ತಾಳೆ.
ಇಲ್ಲಿ ಕೋಣಗಳ ಬೆಲೆಯ ವಿಚಾರದಲ್ಲಿ ಆ ಹುಡುಗಿ ಮತ್ತು ನಾಲ್ಕು ಜನ ಸಹೋದರರ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತದೆ .ಅವರೊಳಗೆ ವಿವಾದ ಉಂಟಾಗುತ್ತದೆ.ಅವಳು ಕೇಳಿದ ಬೆಲೆಗೆ ಅವರು ಕೋಣಗಳನ್ನು ಕೊಡಲು ಒಪ್ಪುವುದಿಲ್ಲ.

ಇದರಿಂದ ನೊಂದು ಕೊಂಡ ಅವಳು ತನ್ನ ಗುತ್ತಿಗೆ ಹಿಂದಿರುಗುವಾಗ ತನ್ನ ಆರಾಧ್ಯ ದೈವ ಜುಮಾದಿಗೆ ಹರಿಕೆ ಹೇಳುತ್ತಾಳೆ.
ಆ ವೇಳೆಗೆ ಕೋಣಗಳನ್ನುನೋಡಿಕೊಳ್ಳುವಾತ ಕೋಣಗಳನ್ನು ನೀರು ಕುಡಿಸುವ ಸಲುವಾಗಿ ಕೆರೆಗೆ ಕರೆತರುತ್ತಾನೆ .ಆಗ ಜುಮಾದಿ ದೈವ ತನ್ನ ಕಾರಣಿಕದಿಂದ  ಆ ಕೋಣಗಳನ್ನು ಕಲ್ಲಾಗಿ ಪರಿವರ್ತಿಸುತ್ತದೆ .
ಆತ ಕೋಣಗಳು ಕಲ್ಲಾದಾಗ ದಿಗ್ಭ್ರಮೆ ಗೊಂಡು ಇನ್ನು ತನಗೇನು ಅಪ್ಪಣೆ ಎಂದು ದೈವ ಜುಮಾದಿಗೆ ಮೊರೆ ಇಡುತ್ತಾನೆ .ಆಗ ಜುಮಾದಿ  ಭೂತ ಆತನನ್ನು ತನ್ನ ಸೇರಿಗೆಯಲ್ಲಿ ಸಂದಾಯ ಮಾಡಿ ಆತನಿಗೆ ಒಂದು ಅಲೌಕಿಕ ನೆಲೆ ಕೊಡುತ್ತದೆ .
ವಾಸ್ತವದಲ್ಲಿ ಕೋಣಗಳ ವ್ಯಾಪಾರದಲ್ಲಿ ಚರ್ಚೆ ಬಂದು ದುರಂತಕ್ಕೀಡಾದ ವ್ಯಾಪಾರಿ ದೈವತ್ವ ಪಡೆದು ಅರಾಧಿಸಲ್ಪಡುತ್ತಿರಬೇಕು .
ಆತನ ದುರಂತ ಅಕಸ್ಮಿಕವಾಗಿಯೂ ಆಗಿರಬಹುದು .ಅಥವಾ ಉಂಟಾದ ವಿವಾದದಿಂದಲೂ  ಆಗಿರಬಹುದು .ದುರಂತಕ್ಕೆ ಜುಮಾದಿ ದೈವದ ಕಾರಣಿಕದ ಕಥಾನಕ ಸೇರಿಕೊಂಡಿರುವ ಸಾಧ್ಯತೆ ಇದೆ .

ಈ ಪಾಡ್ದನದ ಇನ್ನೊಂದು ಪಾಠ ದಲ್ಲಿ ನಾಲ್ಕು ಜನ ಶೆಟ್ಟಿಗಳು ಆಹಾರ ಕೇಳಿದಾಗ ಅವರ ಜಾತಿ ಕೇಳಿ ನೀರು ಕೊಡುತ್ತಾಳೆ.ಆಗ ಕಣ್ಣಲಾಯ ಭೂತ ಆಕೆಯನ್ನು ಮಾಯ ಮಾಡುತ್ತದೆ ಎಂಬ ಕಥೆಯೂ ಇದೆ.
ಆಧಾರ ಗ್ರಂಥಗಳು
1 ಡಾ.ಬಿ ಎ ವಿವೇಕ ರೈ -ತುಳು ಜನಪದ ಸಾಹಿತ್ಯ
2ಡಾ.ಹೈಡ್ರೂನ್ ಬ್ರೂಕ್ನರ್;ಒಳ ಸಂಬಂಧಗಳಿರುವ ಮೌಖಿಕ ಪರಂಪರೆಯಲ್ಲಿ  ಕನ್ನಲ್ಲಾಯ ಪಾಡ್ದನದ

No comments:

Post a Comment