ಚಿತ್ರ ಕೃಪೆ :ಮಹೇಶ್ ಮೈಸೆ
©boloorgarodi@gmail.com
ನೀರೆ ಗರೊಡಿಯಲ್ಲಿ ಮಾಯಂದಾಲ್ ಪಕ್ಕ ಇರುವ ಬಾಲಕನ ಮೂರ್ತಿಗೆ ಗುದ್ದೊಲಿ ಮೀರಾ ಎಂದು ಹೆಸರು ಇದೆ .ಇಲ್ಲಿ ಆರಾಧಿಸಲ್ಪಡುವ ಗುದ್ದೊಲಿ ಮೀರಾ ಎಂಬ ಆರಾಧ್ಯ ಶಕ್ತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ .ತುಳುನಾಡಿನ ಗರೊಡಿಗಳ ಬಗ್ಗೆ ಸಚಿತ್ರ ಮಾಹಿತಿ ಸಂಗ್ರಹಿಸಿರುವ ಮಹೇಶ ಅವರು ಈ ಬಗ್ಗೆ ಹೀಗೆ ಹೇಳಿದ್ದಾರೆ
"ನೀರೆ ಬೈಲೂರಿನ ಗರೋಡಿಯಲ್ಲಿ ಮಯಾಂದಾಲ್ ಮೂರ್ತಿಯ ಎಡಬದಿಯಲ್ಲಿ “ಗುದ್ದೊಲಿ ಮೀರಾ” ಎಂದು ಇಲ್ಲಿನ ಜನರು ಕರೆಯುವ, ನಿಂತ ಭಂಗಿಯಲ್ಲಿ ಬಾಲಕನ ಮರದ ಮೂರ್ತಿ ಇದೆ. ಇದು ಇತರ ಕಡೆ “ಕುಮಾರ” ಎಂಬ ನಾಮದಿಂದ ಕರೆಯಲ್ಪಡುತ್ತದೆ. ಕಳೆದುಹೋದ ವಸ್ತುಗಳನ್ನು ಹಾಗೂ ತಾನು ಮರೆತು ಹೋಗಿ ವಸ್ತುಗಳನ್ನು ಎಲ್ಲಿ ಇಟ್ಟಿದ್ದೇನೆ ಎಂಬುದು ಗೊತ್ತಾಗದೆ ಇದ್ದಾಗ ಇಲ್ಲಿಯ ಜನರು ಗುದ್ದೆಲ್ ಮೀರಾನ ಕೈಯಲ್ಲಿ ಬಾಳೆಹಣ್ಣು ಕೊಡುತ್ತೇನೆ, ಹುಡುಕಿಕೊಡು ಎಂದು ಹರಕೆ ಹೇಳುವ ಪದ್ದತಿ ಇಲ್ಲಿದೆ. (ಮಾಹಿತಿ ಕೃಪೆ: ನೀರೆ ಗರಡಿ ಇತಿಹಾಸ. ಸಂ: ಪ್ರೋ. ಕೆ ನಾರಾಯಣ ಶೆಟ್ಟಿ) -ಚಿತ್ರ: ಮಹೇಶ್- ಮೈಸೆ ©boloorgarodi@gmail.com"
ತುಳುನಾಡಿನ ಗರೊಡಿಗಳಲ್ಲಿ ಮಾಯಂದಾಲ್ ಎಂಬ ಸ್ತ್ರೀ ದೈವತಕ್ಕೆ ಆರಾಧನೆ ಇದೆ .ಅವಳ ಒಂದು ಮೂರ್ತಿ ಕೂಡ ಗರೊಡಿಗಳಲ್ಲಿ ಇವೆ
.ಮಾಯಂದಾಲ್ ಎಂದರೆ ಮಾಯವಾದವಳು ಎಂದರ್ಥ. ಪಾಂಗುಲ್ಲ ಬನ್ನಾರರ ಬೀಡಿಗೆ ಒಂದು ದೈವ ಬಂದು ‘ಕೋಲತಜುಮಾದಿ’ ಎಂದು ಆರಾಧನೆ ಪಡೆಯುತ್ತದೆ. ಆಗ ಪಾಂಗುಲ್ಲ ಬನ್ನಾರರು ದೈವಕ್ಕೆ ಕೊಡಬೇಕಾದ ಸಿರಿ ಬಾಳೆ,ಸೀಯಾಳಗಳನ್ನು ಕೊಡುವುದಿಲ್ಲ copy rights reserved (c)Dr.Laxmi g Prasad. ಆಗ
ಪಾಂಗುಲ್ಲ ಬನ್ನಾರರ ಸೋದರ ಸೊಸೆ ಹತ್ತುದಿನದ ಬಾಣಂತಿಯಗಿದ್ದಳು .
ಆಗ ಕೋಪಿಸಿಕೊಂಡ ದೈವ .ಕೋಲತ ಜುಮಾದಿ ಅವಳಿರುವಲ್ಲಿಗೆ ಬಂದು ಅವಳನ್ನು, ಅವಳ ಮಗುವನ್ನು ಮಾಯ ಮಾಡುತ್ತದೆ. ಮಾಯವಾದ ಅವಳು ಗರಡಿಮನೆಯ ಬ್ರಹ್ಮನ ಸೇರಿಗೆಗೆ ಸಂದು, ದೈವವಾಗಿ ಆರಾಧನೆ ಹೊಂದುತ್ತಾಳೆ. ಮಾಯಂದಾಲ್ ಕೋಟಿಚೆನ್ನಯರ ಭಾವನಾತ್ಮಕ ತಂಗಿ ಎಂಬ ನಂಬುಗೆಯೂ ಇದೆ. ಪ್ರಸವದ ಸಮಯದಲ್ಲಿ ಈ ದೈವಕ್ಕೆ ತಾಯಿ ಮತ್ತು ಮಗುವಿನ ರಕ್ಷಣೆಗಾಗಿ ಹರಿಕೆ ಕೊಟ್ಟು ಆರಾಧಿಸುತ್ತಾರೆcopy rights reserved (c)Dr.Laxmi g Prasad.
ಇನ್ನೊಂದು ಪಾಡ್ದನ ಪಾಠದ ಪ್ರಕಾರ ಮಾಣಿಬಾಲೆಯನ್ನು ಸೋದರ ಮಾವನಾದ ಆಲಿಬಾಲಿ ನಾಯಕನು ರಜಪತಿ ಬೈದ್ಯನ ಮಗನೊಂದಿಗೆ ವಿಜೃಂಭಣೆಯಿಂದ ಮದುವೆ ಮಾಡಿಕೊಡುತ್ತಾನೆ. ಮದುವೆಯಾಗಿ ಕೆಲವು ವರ್ಷ ಕಳೆದರೂ ಸಂತಾನ ಭಾಗ್ಯ ಒದಗದಿರಲು ಬೆರ್ಮರಿಗೆ ಹರಕೆ ಹೇಳಿದ ಮೇರೆಗೆ ಆಕೆ ಗರ್ಭವತಿಯಾಗುತ್ತಾಳೆ. ಸಂಭ್ರಮದ ಸೀಮಂತ ನಡೆದ ಬಳಿಕ ಆಕೆ ಹೆರಿಗೆಗಾಗಿ ತನ್ನ ಸೋದರ ಮಾವನಾದ ಆಲಿಬಾಲಿ ನಾಯಕನ ಮನೆಗೆ ಬರುತ್ತಾಳೆ. ನವ ಮಾಸ ತುಂಬಿದ ಮಾಣಿಬಾಲೆ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಅದೇ ಮಾಗಣೆಗೆ ಸೇರಿದ ಗುಡ್ಡೆಯ ಮೂಡಂದಾಲ ಪಟ್ಟದ ಬೀಡಿನ ಪಾಂಗೊಲ್ಲ ಬನ್ನಾರ ಎಂಬ ಜೈನ ಜಮೀನ್ದಾರನು ಜುಮಾದಿ ಭೂತವನ್ನು ನಂಬಿಕೊಂಡು ಅದಕ್ಕೆ ಗುಡಿ ನಿರ್ಮಿಸಿ ಕೋಲಕ್ಕೆ ದಿನ ನಿಗದಿಪಡಿಸುತ್ತಾನೆ. ಊರಿನ ಜನರಿಂದ ಕೋಲಕ್ಕಾಗಿ ಸಿರಿ ಸೀಯಾಳ ಕೊಡಲು ಆಲಿ ಬಾಲಿ ನಾಯಕನಿಗೆ ಹೇಳಿ ಕಳುಹಿಸುತ್ತಾನೆ. ಆಲಿ ಬಾಲಿ ನಾಯಕ ಕೊಡುವುದಿಲ್ಲ ದಕ್ಕೆ ದೈವ ಅವನ ಸೊಸೆ ಮಾತು ಮಗುವನ್ನು ಮಾಯ ಮಾಡುತ್ತದೆ.ಮಾಯ ವಾದ ಅವರು ದೈವಗಳಗಿ ನೆಲೆ ನಿಲ್ಲುತ್ತಾರೆ
ತಮಗೆ ಸಲ್ಲ ಬೇಕಾದ ಸೇವೆಯನ್ನು ಸಲ್ಲಿಸದೆ ಇದ್ದಾಗ ದೈವಗಳು ಕೊಪಿಸ್ಕೊಂದು ಶಿಕ್ಷಿಸುವ ವಿಚಾರ ಅನೇಕ ಪಾದ್ದನಗಳಲ್ಲಿದೆ .ಇಲ್ಲಿ ಕೂಡ ಪಾಂಗುಲ್ಲ ಬಂನಾರಣ ಮೇಲಿನ ಕೋಪದಿಂದ ಅವನನ್ನು ಶಿಕ್ಷಿಸುವ ಸಲುವಾಗಿ ಅವನ ಸೋದರ ಸೊಸೆಯನ್ನು ಮಗುವನ್ನು ದೈವ ಮಾಡಿರಬಹುದು .copy rights reserved (c)Dr.Laxmi g Prasad.
ವಾಸ್ತವಿಕತೆಯ ನೆಲೆ ಗತ್ತಿನಲ್ಲಿ ಯೋಚಿಸಿದಾಗ ಬಾಣಂತಿ ಮಗು ಆಕಸ್ಮಿಕವಾಗಿ ಮರನವನ್ನ್ನಪ್ಪಿರಬಹುದು ಅದಕ್ಕೆ ದೈವದ ಕಾರಣಿಕದ ಕಥಾನಕ ಸೇರಿ, ಅವಳ ಮಗು ಮತ್ತು ಅವಳು ಕೂಡ ದೈವತ್ವ ಪಡೆದು ಆರಾಧಿಸಲ್ಪಟ್ಟಿರಬಹುದು
ಮಾಯಂದಾಲ್ ದೈವಕ್ಕೆ ಸ್ತ್ರೀ ಸಹಜ ವೇಷದಲ್ಲಿ ಭೂತ ಕಟ್ಟಿ ಕೋಲ ನೀಡುತ್ತಾರೆ .ತಾಯಿಯೊಂದಿಗೆ ಮಗುವಿಗೆ ಸಾಂಕೇತಿಕವಾಗಿ ಕೋಲ ನೀಡುತ್ತಾರೆ.ಈ ಮಗುವಿಗೆ ಗದ್ದುಗೆ ವೀರ(ಗದ್ದುಗೆ ಬೀರೆ) ಎಂದು ಹೆಸರಿದ್ದ ಬಗ್ಗೆ ಪಾದ್ದನಗಾರ್ತಿ ವಾರಿಜ ಅವರು ಹೇಳಿದ್ದಾರೆ .ಅಳಿಯ ಕಟ್ಟು ಇರುವಲ್ಲಿ ಮಾವನ ಗುತ್ತಿ ಯ ಅಧಿಕಾರ ಸೊಸೆಯ ಮಗನಿಗೆ ಬರುವುದು ಸಹಜವೇ .ಆ ಅರ್ಥದಲ್ಲಿ ಆತನಿಗೆ ಗದ್ದುಗೆ ಬೀರೆ ಎಂದು ಕರೆದಿರಬಹುದು .copy rights reserved (c)Dr.Laxmi g Prasad.
ಆದರೆ ಮಾಯಂದಾಲ್ ಮಗು ಮತ್ತು ಗುದ್ದೊಲಿ ಮೀರಾ ಒಂದೇ ಶಕ್ತಿಯೇ ಅಥವಾ ಬೇರೆ ಬೇರೆಯೇ ಎಂದು ತಿಳಿದು ಬಂದಿಲ್ಲ ,ಗದ್ದುಗೆ ವೀರ (ಗದ್ದುಗೆ ಬೀರೆ) ಎಂಬುದು ಆಡುಮಾತಿನಲ್ಲಿ ಗುದ್ದೊಲಿ ಮೀರಾ ಆಗಿರಬಹುದೇ ?ಅಥವಾ ಸ್ಥಳೀಯ ವೀರನೊಬ್ಬ ಆರಾಧನೆ ಹೊಂದಿ ಮಾಯಂದಾಲ್ ಮಗುವಿನೊಂದಿಗೆ ಗುದ್ದೊಲಿ ಮೀರಾ ಎಂಬ ಹೆಸರಿನಲ್ಲಿ ಸಮೀಕರಿಸಲ್ಪತ್ತಿರುವ ಸಾಧ್ಯತೆ ಕೂಡ ಇಲ್ಲದಿಲ್ಲ.ಬೇರೆಯೇ ಒಂದು ಶಕ್ತಿ ಇರಲೂ ಬಹುದು
ಈತನಿಗೆ ಬಾಳೆ ಹಣ್ಣು ಹರಿಕೆಯಾಗಿ ಅರ್ಪಿಸುವ ಕಾರಣ ಈತ ಮೂಲತಃ ವೀರ ಬಾಲಕನೇ ಆಗಿದ್ದಿರುವ ಸಾಧ್ಯತೆ ಇದೆ .ಈ ಬಗೆ ಹೆಚ್ಚಿನ ಅಧ್ಯಯನ ನಡೆದರೆ ವಾಸ್ತವ ಸಂಗತಿ ತಿಳಿದು ಬರಬಹುದುcopy rights reserved (c)Dr.Laxmi g Prasad.
ಗುದ್ದೊಲಿ ಮೀರಾ ನ ಬಗ್ಗೆ ಸಚಿತ್ರ ಮಾಹಿತಿ ನೀಡಿದ ಮಹೇಶ್ ಅವರಿಗೆ ಕೃತಜ್ಞತೆಗಳು