ಕಾರವಾರದಿಂದ ಕಣ್ಣನ್ನೂರು ತನಕದ ಕೊಡಗು ಸೇರಿದಂತೆ ಕನ್ನಡ ತುಳು ಮಲೆಯಾಳ ಕೊಡವ ಪರಿಸರದ 1207 ದೈವಗಳ ಮಾಹಿತಿ ಇರುವ ,ಭೂತಾರಾಧನೆ ಕುರಿತು ಸಮಗ್ರ ಎನ್ನ ಬಹುದಾದ ಕರಾವಳಿಯ ಸಾವಿರದೊಂದು ದೈವಗಳು ಕೃತಿಗಾಗಿಡಾ. ಲಕ್ಷ್ಮೀ ಜಿ ಪ್ರಸಾದ್ 9480516684 ಗೆ ಕರೆ/ ಮೆಸೇಜ್ ಮಾಡಿ
ಕಾರವಾರದಿಂದ ಕಣ್ಣನ್ನೂರು ತನಕದ ಕೊಡಗು ಸೇರಿದಂತೆ ಕನ್ನಡ ತುಳು ಮಲೆಯಾಳ ಕೊಡವ ಪರಿಸರದ 1207 ದೈವಗಳ ಮಾಹಿತಿ ಇರುವ ,ಭೂತಾರಾಧನೆ ಕುರಿತು ಸಮಗ್ರ ಎನ್ನ ಬಹುದಾದ ಕರಾವಳಿಯ ಸಾವಿರದೊಂದು ದೈವಗಳು ಕೃತಿಗಾಗಿಡಾ. ಲಕ್ಷ್ಮೀ ಜಿ ಪ್ರಸಾದ್ 9480516684 ಗೆ ಕರೆ/ ಮೆಸೇಜ್ ಮಾಡಿ
ತುಳುವರ ಭೂತ ಕನ್ನಡದ ಭೂತವಲ್ಲ.ತುಳುವಿನ ಭೂತ ಪದಕ್ಕೆ ಕನ್ನಡದ ಭೂತ ಎಂಬ ಪದಕೆ ಇರುವಂತೆ ಭೂತ ಪ್ರೇತ ಪಿಶಾಚಿ ಎಂಬ ಕೆಟ್ಟ ಅರ್ಥವಿಲ್ಲ.ತುಳುವರ ಭೂತಗಳು ಜನರನ್ನು ಹೆದರಿಸಿ ಬೆದರಿಸಿ ಕಾಡುವ ಕೆಟ್ಟ ,ಕ್ಷುದ್ರ ಶಕ್ತಿಗಳಲ್ಲ .ತುಳುವರ ಭೂತ ಪದ ದೇವತಾ ವಾಚಿ ಪದ .ದುಷ್ಟ ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಸತ್ಯದ ಶಕ್ತಿಗಳು ಇವು.
The Tulu word bhuta may be orginated from Sanskrit word
‘putam’, which means purified. In Hindu mythology, Lord Vishnu is also
referred as ‘putam’. So, one interpretation could be that over centuries
the word ‘putam’ changed into ‘puto’, then to ‘buto’, and finally
become ‘bhuta’.
In Tulu tradition, there is no fixed path to become a bhuta
or daiva. Most of the bhutas are basically humans who — blessed with
extraordinary powers or having done remarkable work, like questioning
social evils — transform into bhutas after death. Ordinary people can
also become a bhuta, if they happen to be blessed by their bhuta.
Bhuta kola is a devine spirit worship is an ancient ritual form of worship of Tuluvas in Tulunadu (undivided dakshina kannada district including udupi and kasaragodu ) which having singing paddana and a special devine dance .Theyyam in kerala and Bhuta kola in Tulunadu are the same type of purified spirit worship /devine worship
ಸಂಸ್ಕೃತ ಮೂಲದ ಪೂತಮ್ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ವರ್ಣ ವ್ಯತ್ಯಯ ಗೊಂಡು ಸಂಸ್ಕೃತೀಕರಣಕ್ಕೊಳಗಾಗಿ ಬೂತೊ>ಭೂತೋ>ಭೂತ ಆಗಿರಬಹುದು .ಕೊಡವರು ಇಂದಿಗೂ ಭೂತವನ್ನು ಪೂದ ಎಂದೇ ಕರೆಯುತ್ತಾರೆ.ತುಳುವಿನಲ್ಲಿ ಪೂ >ಭೂ ಆದರೆ ಕೊಡವರಲ್ಲಿ ತ>ದ ಆಗಿ ವರ್ಣ ಬದಲಾವಣೆ ಆಗಿದೆ ಇದೆ.ಅಥವ ತುಳು ಭೂತಗಳಲ್ಲಿ ಹೆಚ್ಚಿನವರು ಅಸಾಮಾನ್ಯ ಸಾಹಸ ಮರೆದು ದುರಂತವನ್ನಪ್ಪಿ ಮಾಯವಾಗಿ ದೈವತ್ವ ಪಡೆದ ಸಾಂಸ್ಕೃತಿಕ ನಾಯಕರೇ ಆಗಿದ್ದಾರೆ.ಆದ್ದರಿಂದ ಹಿಂದೆ ಇದ್ದವರು ಎಂಬ ಅರ್ಥದಲ್ಲಿಯೂ ಭೂತ ಪದ ಬಳಕೆಗೆ ಬಂದಿರುವ ಸಾಧ್ಯತೆ ಇದೆ
ಇತಿಹಾಸ, ರಾಜಕೀಯ, ಸಂಸ್ಕøತಿ, ಸಾಮಾಜಿಕ, ಜಾನಪದ ಸೇರಿದಂತೆ ಎಲ್ಲ ವಿಚಾರಗಳು ಕೂಡ ತುಳುನಾಡಿನಲ್ಲಿ ದುರಂತ ಮತ್ತು ದೈವತ್ವದೊಂದಿಗೆ ತಳುಕು ಹಾಕಿಕೊಂಡಿದೆ.
.ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಯಾವುದೇ ಜಾತಿ ಭೇದ ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೊಕ್ಕೊಟು ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ ಅವರು ತಿಳಿಸಿದ್ದಾರ copy rights reserved (c)Dr Lakshmi G Prasad
ಇಲ್ಲಿ ಬ್ರಾಹ್ಮಣರೂ ಭೂತವಾಗಿದ್ದಾರೆ.ಚಾಮುಂಡಿ,ಭಟ್ಟಿ ಭೂತ ,ಕಚ್ಚೆ ಭಟ್ಟ , ನಾರಳತ್ತಾಯ ಮೊದಲಾದ ಭೂತ ಗಳು ಬ್ರಾಹ್ಮಣ ಮೂಲದ ದೈವತಗಳು .
ನೆಲ್ಲಿತ್ತಾಯ
ರಾಮ ಶೆಟ್ಟಿ ಎಂಬ ವೀರ ಶೈವ ಲಿಂಗಾಯತ ವ್ಯಕ್ತಿ ನೆತ್ತರು ಮುಗಳಿ ಎಂಬ ಭೂತವಾಗಿದ್ದಾನೆ .
ನೈದಾಲ ಪಾಂಡಿ ಕೂಡ ಮೂಲತಃ ಲಿಂಗಾಯತನಾಗಿ ಪರಿವರ್ತಿತನಾದ ರಾಜ ಕುಮಾರ . . ಅಚ್ಚುಬಂಗೇತಿ, ಅಕ್ಕಚ್ಚು ಭೂತ, ಬೊಟ್ಟಿ ಭೂತಗಳು ಮೂಲತಃ ಜೈನ ಧರ್ಮದವರಾಗಿದ್ದಾರೆ.
copy rights reserved (c)Dr Lakshmi G Prasad
ಕ್ರಿಶ್ಚಿಯನ್ ತೆಯ್ಯಂಗೆ ಆರಾಧನೆ ಇರುವ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರು ತಿಳಿಸಿದ್ದಾರೆ . ಅಂತೆಯೇ ತುಳುನಾಡಿನ ಅನೇಕ ಮುಸ್ಲಿಂ ಮೂಲದ ವ್ಯಕ್ತಿಗಳು ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ.
ಆಲಿ ಭೂತ
ಬಬ್ಬರ್ಯ, ,ಬ್ಯಾರ್ದಿ ಭೂತ, ಬ್ಯಾರಿ ಭೂತ,ಮಾಪುಲೇ ಮಾಪುಳ್ತಿ ಭೂತೊಳು ,ಮಾಪುಳ್ತಿ ಧೂಮಾವತಿ ಮೊದಲಾದವರು ಮುಸ್ಲಿಂ ಮೂಲದ ದೈವತಗಳು. ಹೀಗೆ ಆಲಿ ಭೂತ ಕೂಡಾ ಮುಸ್ಲಿಂ ಮೂಲದ ದೈವ .ಭೂತಗಳಾದ ನಂತರ ಇವರು ಹಿಂದೆ ಯಾರಾಗಿದ್ದರು ಎಂಬ ಪ್ರಶ್ನೆಯೇ ಇರುವುದಿಲ್ಲ .ಎಲ್ಲ ದೈವಗಳೂ ಸಮಾನ .ಎಲ್ಲ ದೈವಗಳಿಗೂ ಒಂದೇ ರೀತಿಯ ಗೌರವ ,ಭಕ್ತಿಯ ನೆಲೆ .ಇದು ತುಳು ನಾಡಿನ ವೈಶಿಷ್ಟ್ಯ .
copy rights reserved (c)Dr Lakshmi G Prasad
ಕನ್ನಡ ಬೀರ -ತುಳುವರ ದೈವವಾದ ಬ್ರಿಟಿಶ್ ಸುಬೇದಾರ
ಕನ್ನಡ ಭೂತ
ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. ಅನೇಕ ಕನ್ನಡ ಮೂಲದ ವ್ಯಕ್ತಿಗಳು. ತುಳುನಾಡಿನಲ್ಲಿ ಭೂತ ಗಳಾಗಿ ಆರಾಧಿಸಲ್ಪಡುತ್ತಿದ್ದಾರೆ ಕನ್ನಡ ಬೀರ, ಬಚ್ಚನಾಯಕ, ಬೈಸು ನಾಯಕ, ಕರಿಯಣ್ಣ ನಾಯಕ, ಕಚ್ಚೆ ಭಟ್ಟ, ಕನ್ನಡ ಭೂತ, ಕನ್ನಡ ಭೂತ ಯಾನೆ ಪುರುಷ ಭೂತ,ಕನ್ನಡಿಗ ಭೂತ ಮೊದಲಾದವರು ಮೂಲತಃ ಕನ್ನಡ ಭಾಷಿಗರು ಆಗಿದ್ದವರು
ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ, ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದು. ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ
ತುಳುನಾಡಿನ ಲ್ಲಿ ಎಷ್ಟು ಭೂತಗಳಿಗೆ ಆರಾಧನೆ ಇದೆ ಎಂಬ ಬಗ್ಗೆ ಇಷ್ಟೇ ಎಂಬ ಇದಮಿತ್ಥಂ ಉತ್ತರಿಸಲು ಸಾಧ್ಯವಿಲ್ಲ
ಈ ಬಗ್ಗೆ ಡಾ.ಚಿನ್ನಪ್ಪ ಗೌಡು ಸುಮಾರು ನಾನ್ನೂರು ಭೂತ ಗಳಿಗೆ ಅರಾಧನೆ ಇದೆ ಎಂದಿದ್ದಾರೆ ಅವರು ಸುಮಾರು ಮುನ್ನೂರು ಭೂತಗಳ ಹೆಸರನ್ನು ಸಂಗ್ರಹಿಸಿದ್ದಾರೆ
copy rights reserved (c)Dr Lakshmi G Prasad
ಅದರೆ ನನಗೆ ಸಾವಿರದ ಇನ್ನೂರ ಇಪ್ಪತ್ತು ಭೂತಗಳ ಹೆಸರುಗಳು ಸಿಕ್ಕಿವೆ, ನಾನ್ನೂರಕ್ಕೂ ಹೆಚ್ಚು ದೈವಗಳ ಮಾಹಿತಿ ಸಿಕ್ಕಿದ್ದು ಮುನ್ನೂರ ಇಪ್ಪತ್ತೈದು ಭೂತಗಳ ನಗ್ಗೆ ಈಗಾಗಾಲೇ ಬ್ಲಾಗ್ ನಲ್ಲಿ ಬರೆದಿದಗದೇನೆ
ಹಾಗಾಗಿ ದಕ್ಷಿಣ ಕನ್ನಡ ಉಡುಪಿ ಕಾಸರಗೋಡು ಕೊಡಗು ಪರಿಸರದಲ್ಲಿ ಆರಾದನೆ ಗೊಳ್ಳುವ ಎಲ್ಲ ಭೂತಗಳನ್ಮು ಲೆಕ್ಕ ಹಾಕಿದರೆ ಸಾವಿರಕ್ಕೂ ಹೆಚ್ಚು ಭೂತ ಗಳಿಗೆ ಆರಾಧನೆ ಇದೆ ಎಂದು ನಿಶ್ಚಿತವಾಗಿ ಹೇಳಬಹುದು .(c)ಡಾ.ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಮತ್ತು ಸಂಶೋಧಕರು ಸರ್ಕಾರಿ ಪದವಿಪೂರ್ವ ಕಾಲೆಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ
ಭೂತ ಕೋಲ
ಅಯಾಯ ಭೂತಗಳ ಪಾಡ್ದನ ರೂಪದಲ್ಲಿ ಕತೆಯನ್ನು ಹಾಡುತ್ತಾ ಮುಖಕ್ಕೆ ಅರದಳ ಹಾಕಿ ವಿಶಿಷ್ಟ ಚಿಹ್ನೆ ಗಳನ್ನು ಹಾಕಿ ತೆಂಗಿನ ತಿರಿಯ ಅಲಂಕಾರ ಮಾಡಿ ಆವೇಶ ಗೊಂಡು ನರ್ತಿಸಿ ಭೂತ ಗಳನ್ನು ಆರಾಧಿಸುವ ಪದ್ಧತಿಗೆ ಭೂತ ಕೋಲಎಂದುಕರೆಯುತ್ತಾರೆ
ಮೆಚ್ಚಿ ,ದೊಂಪದ ಬಲಿ ಜಾಲಾಟ,ನೇಮ,ನಡಾವಳಿ ಕಂಬಳ ಕೋರಿ ನೇಮ ಮೊದಲಾದ ಅನೇಕ ಪ್ರಕಾರಗಳು ಇದರಲ್ಲಿವೆ
ಪಾಡ್ದನಗಳು ತುಳುವರ ಭೂತಗಳ ಹುಟ್ಟು, ಪ್ರಸರಣ, ಕಾರಣಿಕವನ್ನು ಹೇಳುವ ಹಾಡಿನ ರೂಪದ ಕಥನಕವನಗಳು. ಪಾಡ್ದನಕ್ಕೆ ತುಳುವರು ಪಾರ್ತನ ,ಸಂದ್, ಬೀರ ಹೀಗೆ ಬೇರೆ ಬೇರೆ ಪದಗಳನ್ನು ಮಾಡುತ್ತಾರೆ.
ಭೂತಾರಾಧನೆ ಪ್ರಾಚೀನತೆ
ಕ್ರಿ.ಶ, ೧೩೭೯ರಲ್ಲಿ ಕಾರ್ಕಳ ತಾಲೂಕಿನ ಕಾಂತೇಶ್ವರ ದೇವಾಲಯ ದಲ್ಲಿ ಸಿಕ್ಕಿರುವ ಶಾಸನ ಆಧಾರ. ಈ ಶಾಸನದಲ್ಲಿ ದೈವಕ್ಕೆ ತಪ್ಪಿದವರು ಎಂಬ ಪದದ ಬಳಕೆಯಿದೆ.'
ಕಾರ್ಕಳ ತಾಲೂಕಿನ ಉದ್ಯಾವರದಲ್ಲಿ ಕ್ರಿ.ಶ. ೧೫೪೩ರಲ್ಲಿ ದೊರೆತಿರುವ ಶಾಸನದಲ್ಲಿ ನಂದಳಿಕೆ ದೈವದ ಪದದ ಉಲ್ಲೇಖವಿದೆ.
ಕ್ರಿ.ಶ.೧೪೯೯ಡ್ ಉಡುಪಿಯ ಕಾಪು ಶಾಸನದಲ್ಲಿ ನಂದಳಿಕೆ ದೈವದ ಪ್ರಸ್ತಾಪವಿದೆ.
ಕ್ರಿ.ಶ.೧೪೪೬ರಲ್ಲಿ ದೊರೆತ ಬಸ್ರೂ ರೂ ಶಾಸನದಲ್ಲಿ ಮತ್ತು ಕ್ರಿ.ಶ.೧೫೬೬ರಲ್ಲಿ ದೊರೆತ ಬಾರಕೂರು ಶಾಸನದಲ್ಲಿ ಬೊಬ್ಬರ್ಯ ಭೂತದ ಹೆಸರಿದೆ.
ಕ್ರಿ.ಶ. ೧೪೩೨ರಲ್ಲಿ ದೊರೆತ ಸುಳ್ಯ ದ ಎಡಮಂಗಿಲ ಶಾಸನದಲ್ಲಿ ಸಿ ರಾ ಡಿ ದೈವ ಕ್ಕೆ ಪ್ರಸಾದ ತುಪ್ಪದೊಳುಎಂಬ ಪದದ ಬಳಕೆಯಿದೆ.
ಭೂತ ಕಟ್ಟುವ ಕಲಾವಿದರು:
ನಲಿಕೆಯವರು,ಪರವರು,ಪಂಬದರು,ಪಾಣಾರರು,ಕೋಪಾಳರು,ಫಣಿಕ್ಕರ್ ರು ಭೂತ ಕಟ್ಟಿ ಕುಣಿದು ಭೂತ ಕೋಲವನ್ನು ನಿರೂಪಿಸುತ್ತಾರೆ.
ಭೂತಾರಾಧನೆ ಮತ್ತು ದೈವಾರಾಧನೆ ಬೇರೆ ಬೇರೆಯಲ್ಲ ಎರಡೂ ಒಂದೇ
ಪ್ರದೇಶದಿಂದ ಪ್ರದೇಶ ಕ್ಕೆ ಭೂತ ಕೋಲದಲ್ಲಿ ಭೂತದ ವೇಶ ಭೂಷಣ ಕುಣಿತಗಳಲ್ಲಿ ಭಿನ್ನತೆ ಕಾಣಿಸುತ್ತದೆ
ಭೂತಗಳ ಭಾಷೆ:
ತುಳುನಾಡಿನ ಭೂತಗಳ ಅಧಿಕೃತ ಭಾಷೆ ತುಳು ಆದರೂ ತುಳುನಾಡಿನ ಕನ್ನಡ ಪರಿಸರದಲ್ಲಿ ಭೂತಗಳು
ಕನ್ನಡ ದಲ್ಲಿ ನುಡಿಯುತ್ತವೆ.ಕಾಸರಗೋಡಿನ ಸುತ್ತ ಮುತ್ತ ಮಲೆಯಾಳ ಭಾಷೆ ಇರುದರಿಂದ ಭೂತಗಳ
ಭಾಷೆ ಇಲ್ಲಿ ಮಲೆಯಾಳವಾಗಿದೆ.ಮಲೆಯಾಳ ದಲ್ಲಿ ಭೂತಗಳಿಗೆ ತೆಯ್ಯಂ ಎಂದು ಕರೆಯುತ್ತಾರೆ.
ವಾದ್ಯಗಳು
ಪಾಡ್ದನ ಹಾಡುವಾಗ ತೆಂಬರೆ ಎಂಬ ಚರ್ಮ ವಾದ್ಯವನ್ನು ಬಳಸುತ್ತಾರೆ. ಈಗ ವಾದ್ಯ ಮೇಳಗಳ ಬಳಕೆ ಇದೆ ಕೊಳಲನ್ನು ಕೂಡ ಇತ್ತೀಚಿಗೆ ಬಳಸಿದ್ದಾರೆ.
ಕೇರಳದಲ್ಲಿ ಚೆಂಡೆಯ ಬಳಕೆ ಇದೆ.
ಕುಣಿತದ ವಿಧಗಳು:
ಭೂತ ಕಾಲದಲ್ಲಿ ಭೂತ ಕಲಾವಿದರು ತೆಂಬರೆಯ ಸದ್ದಿಗೆ ಅನುಗುಣವಾಗಿ ಕಿಣಿಯುತ್ತಾರೆ.ಅಡ್ಡನಲಿಕೆ ನೀಟ ನಲಿಕೆಇತ್ಯಾದಿಯಾಗಿ ಎಂಟು ವಿಧದ ಕುಣಿತಗಳಿವೆ.
ಮದಿಪು:
ಭೂತಗಳಿಗೆ ಅರಿಕೆ ಮಾಡುವುದಕ್ಕೆ ಮದಿಪು ಎನ್ನುತ್ತಾರೆ
ನುಡಿ :
ಭೂತಗಳು ಕೊನೆಯಲ್ಲಿ ಗಂಧಪ್ರಸಾದ ಕೊಟ್ಟು ಆಶಿರ್ವಾದ ರೂಪದ ಭರವಸೆಯ ಮಾತುಗಳನ್ನು ನೀಡುವುದನ್ನು ನುಡಿ ಕೊಡುವುದು ಎಂದು ಕರೆಯುತ್ತಾರೆ
ಭೂತ ಕೋಲದ ವಿಧಿ ವಿಧಾನಗಳು
ಕುದಿ ದೀಪುನೆ :
ಆರಂಭದಲ್ಲಿ ಭೂತಕೋಲಕ್ಕೆ ಒಂದು ದಿನ ನಿಗದಿ ಪಡಿಸುತ್ತಾರೆ .ಆ ದಿನಮನೆ ಯಜಮಾನ
ಸ್ನಾನಮಾಡಿ ಶುದ್ಧನಾಗಿ ಭೂತದ ಕೊಟ್ಯಕ್ಕೆ ತುಪ್ಪದ ದೀಪ ಹಚ್ಚಿ ಬಂದು ಪ್ರಾರ್ಥನೆ
ಮಾಡಿ ಕೋಲಕ್ಕೆ ದಿನ ನಿಗದಿ ಪಡಿಸಿದ ಬಗ್ಗೆ ವಿಜ್ನಾಪನೆ ಮಾಡಿ ಸಾಂಗವಾಗಿ ನಡೆಸಿ
ಕೊಡಬೇಕು ಎಂದು ಅರಿಕೆ ಮಾಡಿ ಕೊಳ್ಳುತ್ತಾನೆ ಗ್ರಾಮ ದೈವದ ನೇಮ ಆಗಿದ್ದರೆ ಕುದಿ
ಇಟ್ಟಲ್ಲಿಂದ ನೇಮ ಮುಗಿಯುವ ವರೆಗೆ ಯಾರೂ ಗ್ರಾಮದ ಹೊರಗೆ ಹೋಗಬಾರದು ಒಂದೊಮ್ಮೆ ಹೋದರೆ
ರಾತ್ರಿ ಒಳಗೆ ಬರಬೇಕು, ಈ ಅವದಿಯಲ್ಲಿ ಮದುವೆ ಆಗಬಾರದು ಇತ್ಯಾದಿ ವಿಧಿನಿಷೇಧಗಳಿವೆ
ಕೈಲು ಕಡ್ಪುನೆ :
ಭೂತ ಕೋಲಕ್ಕೆ ಒಂದು ವಾರ ಇರುವಾಗ ತೋಟದಿಂದ ಒಂದು ಬಾಳೆಗೊನೆ ಕಡಿದು ತಂದು ದೈವದ ಮುಂದೆ
ಇರಿಸಿ ಕೊಲಕ್ಕೆ ಗೊನೆ ಕಡಿದಾಗಿದೆ .ಮುಂದೆ ಯಾವುದೇ ತೊಂದರೆ ಉಂಟಾಗದಂತೆ ನಡೆಸಿ
ಕೊಡಬೇಕು ಎಂದು ಪ್ರಾರ್ಥಿಸುತ್ತಾನೆ .ಈ ಬಾಳೆಗೊನೆಯಲ್ಲಿ ಯಾವುದೇ ಒಂದು ಕಾಯಿಗೆ ಹಾನಿ
ಆಗಿರಬಾರದು,ಬಾವಲಿ ,ಅಳಿಲು ಮೊದಲಾದ ಪ್ರಾಣಿ ಪಕ್ಷಿಗಳು ಬಾಯಿ ಹಾಕಿರಬಾರದು ಎಂಬ
ನಿಯಮವಿದೆ .copy rights reserved (c)Dr Lakshmi G Prasad
ಡೋಲ ಲೆಪ್ಪು :
ಕಂಬಳ ಕೋರಿ ನೇಮಅಥವಾ ಗ್ರಾಮ ಅಥವಾ ಮಾಗಣೆ ಅಥವಾ ಸೀಮೆ ದೈವಗಳ ನೇಮವಾದರೆ
ನೇಮದ ಹಿಂದಿನ ದಿನ ಕೊರಗ ಸಮುದಾಯದ ದೈವ ಚಾಕರಿಯ ಜನರು ಮನೆ ಮನೆಗ ಡೋಲು ಬಾರಿಸಿ ಕೊಂಡು ಹೋಗಿ ಹೇಳಿಕೆಕೊಟ್ಟು ಬರುತ್ತಾರೆ.
ಎಣ್ಣಿ ಬೂಳ್ಯ :
ಭೂತ ಕೋಲದ ದಿನ ಭೂತಕಟ್ಟುವ ಕಲಾವಿದರು ಪಡಿಯಕ್ಕಿ ಪಡೆದು ಅಡಿಗೆ ಮಾಡಿ ಊಟ ಮಾಡಿ ಕೋಲ
ಕಟ್ಟಲು ಸಿದ್ಧತೆ ಮಾಡಿಕೊಳ್ಳುತ್ತಾರೆ .ತೋಟಕ್ಕೆ ಹೋಗಿ ತೆಂಗಿನ ಮರ ಹತ್ತಿ ತೆಂಗಿನ
ಎಳೆಯ ಎಲೆ ಗಳನ್ನು ಕೊಯ್ದು ತಂದು ಮುಡಿ ಜಕ್ಕೆಲಣಿ ಮೊದಲಾದ ಅಲಂಕಾರಿಕ ಸಾಮಗ್ರಿಗಳನ್ನು
ಸಿದ್ಧ ಪಡಿಸುತ್ತಾರೆ.ನಂತರ ಯಜಮಾನ ಎಣ್ಣೆ ಕೊಟ್ಟು ಕೋಲ ಕಟ್ಟಲು ಅನುಮತಿ
ನೀಡುತ್ತಾನೆ.ಆಗ ಭೂತ ಮಾಧ್ಯಮ/ಕಲಾವಿದರು ದೈವದ ಕಥಾನಕವನ್ನು ಸಂಕ್ಷಿಪ್ತ
ವಾಗಿನುಡಿಯಲ್ಲಿ ಹೇಳಿ ಭೂತ ಕಟ್ಟಲು ಎಣ್ಣೆ ಬೂಳ್ಯ ಹಿಡಿಯುವೆ ಎಂದು ಹೇಳಿ ನೆಲಕ್ಕೆ
ಎರಡು ಬಿಂದು ಎಣ್ಣೆ ಹಾಕಿ ಅದನ್ನು ಮೈಗೆ ಹಚ್ಚಿ ಸ್ನಾನ ಮಾಡಿ ಭೂತ ಕಟ್ಟಲು
ಶುದ್ಧರಾಗಿ ಬರುತ್ತಾರೆ .ಈ ವಿಧಿಯನ್ನು ಎಣ್ಣೆ ಬೂಳ್ಯ ಎಂದು ಕರೆಯುತ್ತಾರೆ
ಅರದಳ ಪಾಡುನೆ:
ಮುಖಕ್ಕೆ ಬಣ್ಣ ಹಚ್ಚಿ ವಿನ್ಯಾಸ ಬರೆಯುದಕ್ಕೆ ಅರದಳ ಪಾಡುನೆ/ಅರದಳ ಹಾಕುವುದು ಎಂದು ಕರೆಯುತ್ತಾರೆ
ಇದೊಂದು ಬಹಳ ಕಲಾತ್ಮಕವಾದ ಸೂಕ್ಷ್ಮ ಕೆಲಸ.
ಒಂದು ದೀಪ ಹಚ್ಚಿ ಇಟ್ಟು ಕನ್ನಡಿ ಹಿಡಿದುಕೊಂಡು ಆಯಾಯ ಭೂತ ಗಳ ಮುಖವರ್ಣಿಕೆಯನ್ನು
ಮುಖಕ್ಕೆ ಹಾಕುತ್ತಾರೆ. ಇದು ಚೌಕಿಯಲ್ಲಿ ಯಕ್ಷಗಾನ ಕಲಾವಿದರು ಮುಖಕ್ಕೆ ಬಣ್ಣ ಹಚ್ಚಿ
ಕೊಳ್ಲುವುದನ್ನು ಹೋಲುತ್ತದೆ .ಬೇರೆ ಬೇರೆ ಭೂತಗಳಿಗೆ ಬೇರೆ ಬೇರೆ ಮುಖವರ್ಣಿಕೆ
ಇರುತ್ತದೆ.
ಕೊರಗ ತನಿಯ.ಕೊರತಿ,ಕುರವ ಮೊದಲಾದ ದೈವಗಳ ಮುಖಕ್ಕೆ ಕಪ್ಪು ಬಣ್ಣ ಹಚ್ಚಿ ಅದರ ಮೇಲೆ ಬಿಳಿ ಬಣ್ಣದ ಸರಳ ಚಿತ್ತಾರ ಗಳನ್ನು ಬಿಡಿಸುತ್ತಾರೆ.
ಜುಮಾದಿ ಜಾರಂದಾಯ ಅರಸು ಗಿಳಿರಾಮ ಮೊದಲಾದ ಭೂತ ಗಳಿಗೆ ಹಳದಿ ಬಣ್ಣ ಹಚ್ಚಿ ನಂತರ ವಿವಿಧ
ವಿನ್ಯಾಸ ಗಳನ್ನು ಬರೆಯುತ್ತಾರೆ. ಬಿಳಿ ಕಪ್ಪು ಕೆಂಪು ಬಣ್ಣಗಳ ಮುದ್ರೆಯನ್ನು
ನಾಮಗಳನ್ನು ಹಾಕುತ್ತಾರೆ
ಕೆಲವು ದೈವಗಳಿಗೆ ಕೈ ಭುಜ ಎದೆ ಬೆನ್ನುಗಳಿಗೂ ಬಣ್ಣ ಹಾಕುತ್ತಾರೆ.
ಜಟಾಧಾರಿ,ವಿಷ್ಣು ಮೂರ್ತಿ, ಜಂಗ ಬಂಟ,ಪುರುಷ ಭೂತಗಳ ಎದೆ ಬೆನ್ನು ತೋಳುಗಳಿಗೆ ಅಕ್ಕಿ ಹಿಟ್ಟಿನ್ನುಕಲಸಿ ಬಣ್ಣವಾಗಿ ಹಾಕುತ್ತಾರೆ.
ಹನುಮಂತ ಭೂತ ಎಂದು ಕರೆಯಲ್ಪಡುವ ಸಾರ ಪುಳ್ಳೆದಾರ್ ದೈವಕ್ಕೆ ಹೆಸರೇ ಹೇಳುವಂತೆ ಮೈ ಇಡೀ
ಬಿಳಿ ಚುಕ್ಕೆ ಗಳನ್ನು ಇಡುತ್ತಾರೆ .copy rights reserved (c)Dr Lakshmi G
Prasad
ಮುಖವರ್ಣಿಕೆಯಲ್ಲಿ ಸಾಮಾನ್ಯವಾಗಿ ಎರಡು ರೀತಿಯ ಗೆರೆಗಳು ಇರುತ್ತವೆ. ನೇರವಾಗಿ ಹಾಕುವ
ಸರಳ ರೇಖೆಗಳು ಹಾಗು ವಕ್ರವಾಗಿರುವ ಬಾಗಿದ ರೇಖೆಗಳು. ಅರ್ಧ ಚಂದ್ರಾಕಾರಗಳು ಇರುತ್ತವೆ.
ಭೂತ ಕಟ್ಟುವ ಜನರು ತಮ್ಮ ಮುಖವನ್ನು ಹಾಳೆಯೆಂದು ಪರಿಗಣಿಸಿ ಚಿತ್ರಗಾರ ಬೇರೆ ಬೇರೆ
ಚಿತ್ರ ರಚಿಸುವಂತೆ ಬೇರೆ ಬೇರೆ ಭೂತಗಳ ಹಾವ ಭಾವ ಚಿತ್ತಾರಗಳನ್ನು
ಚಿತ್ರಿಸುತ್ತಾರೆ.ಬಣ್ಣ ಗೆರೆ,ಚಿತ್ತಾರಗಳ ಮುಲಕ ಆಯಾಯ ದೈವದ ಸ್ವಭಾವವನ್ನು ಮೂಲವನ್ನು
ಅಭಿವ್ಯಕ್ತಿ ಸುತ್ತಾರೆ.
ಉಗ್ರ ವಾದ ಭೂತಗಳಿಗೆ ಗಾಢ ಬಣ್ಣ ಹಾಗೂ ವಕ್ರ ರೇಖೆಗಳ ಚಿತ್ತಾರವಿದ್ದರೆ ಸಮಾಧಾನಿ ದೈವಗಳಿಗೆ ತೆಳುವಾದ ಬಣ್ಣ ಹಾಗೂ ನೇರ ರೇಖೆಗಳ ವಿನ್ಯಾಸ ಹಾಕುತ್ತಾರೆ.
ಹಣೆಗೆ ನಾಮ ಮತ್ತು ಕೆಂಪು ಬಿಳಿಚುಕ್ಕಿಗಳ ಅಲಂಕಾರ ಮಾಡುತ್ತಾರೆ.ನಾಮದ ತುದಿಗೆ
ಕೆಂಪುಬಣ್ಣ ಹಚ್ಚುತ್ತಾರೆ.ಕಣ್ಣಿನ ಸುತ್ತ ಕಪ್ಪು ಬಣ್ಣ ಗದ್ದದಲ್ಲಿ ನಕ್ಷತ್ರ ಹಾಗು
ತ್ರಿಕೋನಾಕಾರದ ಚಿತ್ತಾರ ಗಳಿರುತ್ತವೆ.
ಹೀಗೆ ಬಣ್ಣ ಹಾಕಿ ಅಲಂಕಾರ ಅಗುವಾಗ ಆಯಾಯ ಭೂತಗಳ ಕತೆಯನ್ನು ಪಾಡ್ದನದ ಮೂಲಕ
ಹಾಡುತ್ತಾರೆ.ದೈವಗಳ ಮಾನವ ಮೂಲದ ಸ್ವಭಾವ ಗಳಾದ. ಉತ್ಸಾಹ,ಶೌರ್ಯ,ಸಾಹಸ,ಉಗ್ರತೆ,ಪ್ರತಿಭಟನೆ
ಮೊದಲಾದವುಗಳನ್ನು ಹಳದಿ ಬಣ್ಣ ದ್ಯೋತಿಸುತ್ತದೆ.ಹಳದಿ ಬಣ್ಣವನ್ನು ಪೂರ್ತಿಯಾಗಿ ಹಚ್ಚಿ
ಕೊಳ್ಳುವದರಿಂದ ಭೂತಗಳ ಅತಿಮಾನುಷ ಅಸಾದಾರಣ ವ್ಯಕ್ತಿತ್ವ್ವ ಬಿಂಬಿತವಾಗುತ್ತದೆ ಎಂದು
ಡಾ.ಚಿನ್ನಪ್ಪ ಗೌಡ ಅವರು ಹೇಳಿದ್ದಾರೆ.
ಕಪ್ಪು ಬಣ್ಣ ಮಾಂತ್ರಿಕ ಶಕ್ತಿಯ ಅಭಿವ್ಯಕ್ತಿ ಗೆ ಸಹಾಯಕವಾಗುತ್ತದೆ
ಗಗ್ಗರದೆಚ್ಚಿ:
ಬಣ್ಣ ಹಾಕಿ ಅಲಂಕಾರ ವಾದ ನಂತರ ಗಗ್ಗರ ಎಂಬ ಗೆಜ್ಜೆಯಂತೆ ಸದ್ದು ಮಾಡುವ ಕಡಗದ ಆಕಾರದ
ಕಾಲಿನ ಆವರಣವನ್ನು ಕಾಲಿಗೆ ಹಾಕುತ್ತಾರೆ ಆಗ ವಿಶಿಷ್ಠವಾದ ನರ್ತನ ಆವೇಶಗಳು ಇರುತ್ತವೆ.
ನಂತರ ಭೂತ ಎದ್ದು ನಿಲ್ಲುತ್ತದೆ ಆವೇಶಗೊಂಡು ಕೋಲ ಕುಣಿಯಲು ಆರಂಬಿಸುತ್ತದೆ .copy rights reserved (c)Dr
Lakshmi G Prasad
ತುಳುನಾಡ ದೈವಗಳು
(ನನ್ನ ಸಂಗ್ರಹಕ್ಕೆ ಸಿಕ್ಕಿದ ತುಳುನಾಡಿನ 460 + ..ದೈವಗಳ ಹೆಸರುಗಳು© ಡಾ.ಲಕ್ಷ್ಮೀ ಜಿ ಪ್ರಸಾದ)
ಪರಿಷ್ಕೃತ ಪಟ್ಟಿ :ಇಲ್ಲಿನ ದೈವ ಗಳ ಹೆರುಗಳ ಪಟ್ಟಿ ಅಥವಾ ಲೇಖನ ಭಾಗವನ್ನು ಇಲ್ಲಿದ್ದಂತೆ ಶೇರ್ ಮಾಡಿ ಎಡಿಟ್ ಮಾಡಿ copy right reserved©ಡಾ.ಲಕ್ಷ್ಮೀ ಜಿಪ್ರಸಾದ ಎಂಬುದನ್ನು ಅಳಿಸಿ ಎಲ್ಲೋ ಕೊನೆಯಲ್ಲಿಅಥವಾ ಆರಂಭದಲ್ಲಿ ಹಾಕಿ ಬಳಸಬೇಡಿ ಉದ್ದೇಶ ಪುರ್ವಕವಾಗಿಯೇ ನಡು ನಡುವೆ ನನ್ನ ಹೆಸರನ್ನು ಹಾಕಿರುವೆ ಇಲ್ಲಿನ ಮಾಹಿತಿ ಕೊಟ್ಟ ವರ ಹೆಸರನ್ನು ಅಲ್ಲಲ್ಲಿ ಉಲ್ಲೇಖಿಸಿರುವೆ ಉಳಿದಂತೆ ಹೆಚ್ಚಿನವುಗಳದು ನನ್ನ ಅದಧ್ಯನದಲ್ಲಿ ಸಿಕ್ಕವು ಅಲ್ಲೆಲ್ಕ ನನ್ನ ಹೆಸರು ಹಾಕಿದರೆ ಇಡೀ ಪಟ್ಟಿಯಲ್ಲಿ ನನ್ನ ಹೆಸರೇ ತುಂಬು ತ್ತದೆ ಹಾಗಾಗಿ ನಾನುನಡುನಡುವೆ copy Right ಹಾಕಿ ನನ್ನ ಹೆಸರು ಹಾಕಿರುವೆ ಇದು ಇಷ್ಟ ವಾಗದವರು ಶೇರ ಮಾಡಬೇಡಿ ತುಳು ಸಂಸ್ಕೃತಿ ಬಗ್ಗೆ ಅಭಿಮಾನದಿಂದ ಶೇರ್ ಮಾಡುವವರು ಇಲ್ಲಿಂದ್ದಂತೆ ಶೇರ್ ಮಾಡಿ ಯಾವುದೇ ಭಾವವನ್ನು ಎಡಿಟ್ ಮಾಡಿ ಎಲ್ಲಿಯೂ ಹಾಕಬೇಡಿ ) ತುಳುನಾಡಿನ 632+ ..ದೈವಗಳ ಹೆಸರುಗಳು : ಈಗ ಸಾವಿರದ ಇನ್ನೂರ ಇಪ್ಪತ್ತು ಹೆಸರುಗಳು ಸಿಕ್ಕಿವೆ ,ಸದ್ಯದಲ್ಲಿಯೇ ಅನುಕ್ರಮವಾಗಿ ಜೋಡಿಸಿ ಹಾಕುವೆ © ಡಾ.ಲಕ್ಷ್ಮೀ ಜಿ ಪ್ರಸಾದ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
1 ಅಕ್ಕಚ್ಚು
2 ಅಕ್ಕಮ್ಮ ದೈಯಾರು
3 ಅಕ್ಕೆರಸು
4 ಅಕ್ಕೆರಸು ಪೂಂಜೆದಿ
5 ಅಕ್ಕೆರ್ಲು
6 ಅಕ್ಕ ಬೋಳಾರಿಗೆ
6 ಅಚ್ಚು ಬಂಗೇತಿ
7 ಅಜ್ಜ ಬೊಲಯ
8 ಅಜ್ಜಿ ಭೂತ
9 ಅಟ್ಟೋಡಾಯೆ
10 ಅಡಿಮಣಿತ್ತಾಯ
11 ಅಡಿಮರಾಂಡಿ
12 ಅಣ್ಣಪ್ಪ
13ಅಬ್ಬೆರ್ಲು
14 ಅಡ್ಕದ ಭಗವತಿ
15ಅತ್ತಾವರ ದೆಯ್ಯೊಂಗುಳು
16 ಅಡ್ಡೋಲ್ತಾಯೆ
17 ಅಡ್ಕತ್ತಾಯ
18 ಅಡ್ಯಲಾಯೆ
19 ಅಡ್ಯಂತಾಯ
20 ಅಬ್ಬಗ
21 ಅಬ್ಬೆ ಜಲಾಯ
22 ಅರಬ್ಬೀ ಭೂತ
23 ಅರಸಂಕುಳು
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
24 ಅರಸು ಭೂತ
25 ಅನ್ನರ ಕಲ್ಲುಡೆ
26 ಅಗ್ನಿ ಚಾಮುಂಡಿ ಗುಳಿಗ (ಮುಕಾಂಬಿ ಗುಳಿಗ )
27 ಆಚಾರಿ ಭೂತ
28 ಆನೆ ಕಟ್ನಾಯೆ
29 ಆಲಿ
30 ಆಟಿ ಕಳಂಜೆ ?!
31ಅಂಗಣತ್ತಾಯೆ
32 ಅಮ್ಬೆರ್ಲು
33 ಇಷ್ಟ ಜಾವದೆ
34 ಈರ ಭದ್ರೆ
35 ಈಸರ ಕುಮಾರೆ
ಉಮ್ಮಯೆ
36 ಉಮ್ಮಳಾಯ
37 ಉಮ್ಮಳಿ
38 ಉರಿ ಮರ್ತಿ
39 ಉರಿಯಡಿತ್ತಾಯ
40 ಉಳ್ಳಾಯ
41ಉಳ್ಳಾಲ್ತಿ
42 ಉಳಿಯತ್ತಾಯ
43 ಉಳ್ಳಾಕುಲು
44 ಉರವೆ
45 ಉರಿಮರ್ಲ
46 ಎಲ್ಯ ಉಳ್ಳಾಕುಳು
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
47 ಎರಿಯಜ್ಜ
48 ಎರು ಕನಡೆ
49 ಎರು ಕೋಪಾಳೆ
50 ಎರು ಬಂಟ
51 ಎರು ಶೆಟ್ಟಿ
52 ಎರು
53 ಎಲ್ಯಕ್ಕೆರ್
54 ಎಲ್ಯನ್ನೇರ್
55 ಒಕ್ಕು ಬಲ್ಲಾಳ
56 ಒಲಿ ಚಾಮುಂಡಿ
57 ಒಲಿಪ್ರಾಂಡಿ
58 ಒರು ಬಾಣಿಯೆತ್ತಿ
59 ಓಡಿಲ್ತಾಯ
60 ಒಂಜರೆ ಕಜ್ಜದಾಯೆ
61 ಒರ್ಮುಗೊತ್ತಾಯೆ
62 ಒರಿ ಉಲ್ಲಾಯೆ
63 ಒರ್ಮಲ್ತಾಯೆ
64 ಒರ್ಮುಲ್ಲಾಯೆ
65 ಒಲಿ ಮರ್ಲೆ
66 ಋಒಡ್ಡಮರಾಯ(ತಿಂಗಳೆ ಗರಡಿ)
67 ಓಪೆತ್ತಿ ಮದಿಮಾಲ್ /ವಾಪತ್ತಿ ಮದಿಮಾಲ್(ಮಾಹಿತಿ ಸಂಕೇತ ಪೂಜಾರಿ)
68 ಕಚ್ಚೆ ಭಟ್ಟ
69 ಕನ್ನಡ ಭೂತ
70 ಕನ್ನಡ ಬೀರ
71 ಕನ್ನಡಿಗ
72 ಕತ್ತಲೆ ಬೊಮ್ಮಯ
73 ಕಡಂಬಳಿತ್ತಾಯ
74 ಕರ್ಮಲೆ ಜುಮಾದಿ (ಬಿರ್ಮಣ ಬೈದ್ಯ)
75 ಕರ್ನಾಲ ದೈವ
76ಕಂಡದಾಯ© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
77 ಕನಪಡಿತ್ತಾಯ
78ಕನ್ನಡ ಯಾನೆ ಪುರುಷ ಭೂತ
79 ಕಲ್ಕುಡ
80 ಕಲ್ಲುರ್ಟಿ
81 ಕಂಟಿರಾಯೆ
82 ಕಡನ್ತಾಯೆ
83ಕನಲ್ಲಾಯೆ
84ಕನ್ಯಾಕುಮಾರಿ
85 ಕಬಿಲ
86ಕರಿಯನಾಯಕ
87 ಕರಿಯ ಮಲ್ಲ
88 ಕರಿ ಚಾಮುಂಡಿ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
89 ಕಾಲ ಭೈರವ
90 ಕಾಳ ರಾಹು
91 ಕಳರ್ಕಾಯಿ
92 ಕಲ್ಲೂರತ್ತಾಯೆ
93 ಕಲ್ಲೇರಿತ್ತಾಯ
94 ಕುರಿಯಾಡಿತ್ತಾಯ
95 ಕಾಳಮ್ಮ
96 ಕೆರೆ ಚಾಮುಂಡಿ
97 ಕಳಲ‘
98 ಕಳುವೆ
99 ಕಾಂಜವ
100 ಕಾಂತಾ ಬಾರೆ
102 ಕಾಂತು ನೆಕ್ರಿ
102 ಕಾಯರಡಿ ಬಂಟೆ
103 ಕಾರಿ
104 ಕಾಳರಾತ್ರಿ
105 ಕರಿಯಣ್ಣ ನಾಯಕ
106 ಕಾಜಿ ಮದಿಮ್ಮಾಲ್ ಕುಲೆ
107 ಕಾಡೆದಿ
108 ಕಾರಿಂಜೆತ್ತಾಯ
109 ಕಾರ್ಕಳತ್ತಾಯೇ
110 ಕಿನ್ನಿದಾರು
111 ಕಾಜು ಕುಜುಂಬ
112 ಕಿಲಮರಿತ್ತಾಯ
113ಕಾನಲ್ತಾಯ
114 ದೇಯಿ ಸುಜೀರ್ರ ಮಾಹಿತಿ ಶಂಕರ್ ಕುಂಜತುರು
115 ಕುಲೆ ಭೂತ
116ಕುಲೆ ಮಾಣಿಗ
117 ಕುಲೆ ಬಂಟೆತ್ತಿ
118 ಕುರವ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
119 ಕುರುವಾಯಿ (ಮಾಹಿತಿ ,ಬಾಲಕೃಷ್ಣ ಶಿಬರಾಯ )
120ಕುದುರೆ ಮುಖ ದೈವ /ಕುದುರೆತ್ತಾಯ (ಮಾಹಿತಿ Yenkey)
121 ಕುರೆ ಪೆರ್ಗಡೆ
122 ಕುಕ್ಕೆತ್ತಿ
123ಕುಕ್ಕಿನಂತಾಯ
124ಕುರ್ಕಲ್ಲಾಯೆ
125 ಕುಮಾರ ಸ್ವಾಮಿ
126 ಕುಂಞÂ ಭೂತ
127ಕುಂಜೂರಾಯ
128ಕುಂಜೂರಂಗಾರ - ಮಾಹಿತಿ ಕೆ ಎಲ್ ಕುಂಡಂತಾಯ
129ಕುಂಜಣಿಗೋ
130 ಕುಟ್ಟಿ ಚಾತು
131 ಕುಮಾರ
132ಕೂಜು
133 ಕೇತುರ್ಲಾಯೆ
134 ಕೊಟ್ಯದಾಯೆ
135 ಕೇಚರಾವುತ
136 ಕೆಂಜಳ್ತಾಯೆ
137 ಕೊಡನ್ಗೆತ್ತಾಯೆ
138 ಕೊರಗ
138ಕೊಲ್ಲುರಮ್ಮ
140 ಕೋಡಿದಜ್ಜೆ
141 ಕುಂಟುಕಾನ ಕೊರವ
142 ಕುಂಡ
143ಕುಂದಯ
144 ಕಿನ್ನಿ ಮಾಣಿ
145 ಕಿರಿಯಾಯೆ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
146 ಕೂಜಿಲು
147 ಕೊರಗ ತನಿಯ
148 ಕೊರತಿ
149 ಕೋರ್ದಬ್ಬು /ಕೋಟೆದ ಬಬ್ಬು ಸ್ವಾಮಿ
150 ಕೋಟಿ
151 ಕೋಮರಾಯ
152 ಕೋಮಾರು ಚಾಮುಂಡಿ
153 ಕೋಟೆತ್ತ ಕಲ್ಲಾಳ
154 ಕಂಡಿಗೆತ್ತಾಯ
155 ಕುಂಟಲ್ದಾಯ
156 ಕೋಟೆರಾಯ/ಕೋಟೆದಾರ್
157ಕಾನದ
158 ಕಟದ
159 ಗಂಡ ಗಣ
160 ಗಡಿರಾವುತೆ
161ಗಿಂಡೆ
162ಗಿರಾವು
163 ಗಿಳಿರಾಮ
164ಗಂಧರ್ವ -ಬೋಳಾರ್ ಗರೋಡಿ ಮರ್ನೆ
165 ಗುಳಿಗ
166 ಗುಮ್ಟೆ ಮಲ್ಲ
167 ಗುಳಿಗನ್ನಾಯ
168 ಗುರಮ್ಮ
169ಗುರಿಕ್ಕಾರ
170ಗೆಜ್ಜೆ ಮಲ್ಲೆ
171 ಗೋವಿಂದ
172ಗುರು ಕಾರ್ನೂರು
173ಗಂಗನಾಡಿ ಕುಮಾರ
174 ಚಿಕ್ಕ ಸದಾಯಿ
175ಚಾಮುಂಡಿ
176ಚೀನೀ ಭೂತಗಳು
177 ಚೆನ್ನಯ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
178 ಚೆನ್ನಿಗರಾಯ
179 ಚೇರಿತ್ತಾಯೆ
180 ಚೈಂಬೆರ್
181ಚಂಡಿ
182 ಜಮೆಯ - ಮಾಹಿತಿ ಶಂಕರ್ ಕುಂಜತ್ತೂರ್
183 ಜಮೇತಿ
184 ಜಂಗ ಬಂಟ
185 ಜಂದರ್ಗತ್ತಾಯೆ
186 ಜಗನ್ನಾಥ ಪುರುಷ
187 ಜಟ್ಟಿಗ
188 ಜಟಾ ಧಾರಿ
189 ಜಡೆತ್ತಾರ್
190 ಜದ್ರಾಯೆ
191 ಜಾವದೆ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
192 ಜೋಗಿ ಪುರುಷ
193 ಜಾಲಬೈಕಾಡ್ತಿ
194ಜಾರಂದಾಯ
195 ಜಾನು ನಾಯ್ಕ
196 ಜೂಂಬ್ರ
197 ಜತೆ ಕುಲೆ
198ಡೆಂಜಿ ಪುಕ್ಕೆ
199ತಡ್ಯದಜ್ಜೆ
200 ತುಳು ಭೂತ
201 ತೋಮಜ್ಜ
202 ತೋಡ ಕುಕ್ಕಿನಾರ್ /ವೈದ್ಯ ನಾಥ
203 ತನ್ನಿ ಮಾಣಿಗ, , ,
204ದಾರಗ
205 ದಾರು
206 ದಾಲ್ಸುರಾಯ
207 ದುಗ್ಗಲಾಯ
208 ಧೂಮಾವತಿ
209 ದೇವಾನು ಪಂಬೆದಿಯಮ್ಮ
210ದೈವನ ಮುಟ್ಟುನಾಯೆ,
211 ದೈವಸಾದಿಗೆ
212 ದೆಯ್ಯಾರ್
213 ದೆಯ್ಯಂಕುಳು
214ದೇಸಿಂಗ ಉಳ್ಳಾಕುಲು
215 ದಂಡೆ ರಾಜ
216 ದರ್ಗಂದಾಯ
217 ದುಗ್ಗಮ್ಮ ದೈಯಾರ್
218ದುಗ್ಗಮೆ
219 ದುರ್ಗಂತಾಯೆ
220 ದೂರ್ದುಮ
221 ದೇಯಿ ಬೈದ್ಯದಿ
222 ಕಂರ್ಭಿ ಬೈದ್ಯೆದಿ
223 ದೇವ ಪುರುಷ
224ದೇವು ಪುಂಜ
225 ದೇವು ಬೈದ್ಯ
226 ದರಮ್ ಬಲ್ಲಾಳ್ತಿ
227 ದಂಡ ನಾಯಕ
228 ದೀಪದ ಮಾಣಿ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
naraya(jeevith shetty)
229 ನಾಗಂತಾಯೆ
230 ನಾಗ ಚಾಮುಂಡಿ
231ನಾಗ ನಂದಿ
232 ನೀಚ /ಅಂಗಾರ ಬಾಕುಡ
233 ನಾಲ್ಕೈತ್ತಾಯ
234 ನಾರಪಾಡಿ ಪೊಸಕಲ್ಲಾಳೆ
235 ನಾರಳತ್ತಾಯ
236 ನಾಡ ದೈವ ,ಬೂಡು ಜಾಲು ನಿಡ್ಲೆ
237 ನಂದಿ ಗೋಣ
238ನೈದಾಲ ಪಾಂಡಿ
239ನೆತ್ತರು ಮುಗುಳಿ :
240 ನೇರಳತ್ತಾಯ
241 ನೆಲ್ಯಕ್ಕೇರ್
242ನೇಲ್ಯನ್ನೆರ್
243 ನೆಲ್ಲುರಾಯ
245 ನೆಲ್ಲಿತ್ತಾಯ
246ನಾಯರ್ ಭೂತ
247 ನಾರಂಬಡಿ
248 ನಾಲ್ಕೈ ಭದ್ರೆ
249 ನೇಲ್ಯ ರಾಯೆ
250ನೇಲ್ಯ ರಾಯ ಬವನೊ
251ನಂದಿ
252ನಾಗ ನಂದಿ
253 ನಡ್ದೊಡಿತ್ತಾಯ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
254 ಪಾಡಿರಾಯ
255 ಪಾಲಕತ್ತಾಯ
256 ಪಾಲೆತ್ತಾಯ
257 ಪರವ ಭೂತ
258 ಪರಿವಾರ ನಾಯಕ
259 ಪಟ್ಟಂತರಸು , ,
260 ಪಟ್ಟೋರಿತ್ತಾಯ
261 ಪತ್ತೊಕ್ಕೆಲು ಜನಾನುದೈವ
262 ಪಂಜುರ್ಲಿ
263 ಪಲ್ಲದ ಮುದ್ದ
264 ಪಂಚ ಜುಮಾದಿ
265 ಪಾಪೆಲು ಚಾಮುಂಡಿ
266 ಪಾಲಂದಾಯಿಕಣ್ಣ
267 ವಿಷ್ಣು ಮೂರ್ತಿ
268 ಪುದೆಲ್ ಪುಂಚ/ಕುಂರ್ಙ
269 ಪುದ
270 ಪುತ್ತು ಗಿರಾವು
271 ಪುರಲಾಯೆ
272 ಪೆಲದ್ಕತ್ತಾಯೆ
273 ಪೆರ್ದೊಳ್ಳು
274 ಪೊಟ್ಟೋಳು
275ಪೊಟ್ಟೋರಿತ್ತಾಯ
276 ಪೊಯ್ಯತ್ತಾಯ
277ಪೊಸಲ್ದಾಯೇ
278 ಪೊಸ ಮಾರಾಯೆ
279 ಪೊಸೊಳಿಗೆ ಅಮ್ಮ
280 ಪಡುವೆಟ್ನಾಯ
281 ಪಿಲಿ ಚಾಮುಂಡಿ
282ಪುದರುಚಿನ್ನ ಬಂಟ
283 ಪೂಮಾಣಿ
284 ಪೊಟ್ಟ ಪಂಜುರ್ಲಿ
285 ಪೋತಾಳ/ಪುದತ್ತಾಳ
286 ಪೊಯ್ಯೆತ್ತಾಯಿ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
287 ಪಿಲೆ
288 ಪೆಲತ್ತಿ
289 ಪೋಲಿಸ್ ಭೂತ(maahit Prkash maarpadi )
290ಪೋಲಿಸ್ ತೆಯ್ಯಂ
291ಪಡಕಣ್ಣಾಯ
292ಪಯ್ಯ ಬೈದ್ಯ
293ಪರಮೇಶಿ
294ಬನ್ನಡ್ಕತ್ತಾಯ(ಮಾಹಿತಿ ಧರ್ಮ ದೈವ -ನಾಗರಾಜ ಭಟ್ ,ಬಂಟ್ವಾಳ
295 ಬಲವಂಡಿ
296 ಬಳ್ಳು
297 ಬಚ್ಚ ನಾಯಕ
298 ಬಸ್ತಿ ನಾಯಕ
299ತಂಗಡಿ
300 belentengarjja
301 ಬಿರಣ
302ಬ್ಯಾರಿ ಭೂತ
303ಬ್ಯಾರ್ದಿ ಭೂತ
305 ಬೀರ್ನಾಚಾರಿ :
306 ಬಿರ್ಮಣಾಚಾರಿ :
307 ಬೀರ್ನಾಳ್ವ
308 ಬೆರ್ಮೆರ್
309ಬೇಡವ :
310 ಬಂಡಿರಾಮ
311 ಬಂಡಾರಿ
312 ಬಾಕುಡ
313 ಬಾಕುಡ್ತಿ
314 ಬಾಡುರಾಯೆ
315ಬಾಮ ಕುಮಾರ
316 ಭಂಡಾಸುರ ಗುಳಿಗ
317ಬಾಲ ಕುಮಾರ
318 ಬಿರ್ಮೆರಜ್ಜಿ
319 ಬಿಕ್ರ ಮೇಲಾಂತೆ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
320 ಬುದಾ ಬಾರೆ
321 ಬಾಲೆ ಬಾರಗ
322 ಬುದ್ಯಂತಾಯೆ
323 ಬಬ್ಬರ್ಯ
324 ಬಿಲ್ಲಾರ
325 ಬಿಲ್ಲಾರ್ತಿ
326ಬೂಡು ಬೊಮ್ಮಯ ಸ್ವಾಮಿ
327 ಬೈಸು ನಾಯಕ
328 ಬೈರಾಗಿ
329 ಬೊಂಟೆಗಾರೆರ್
330ಬೊಮ್ಮರ್ತಾಯೆ
331 ಬೊಲ್ತಾಯ್ತೋಲು
332 ಭಸ್ಮ ಮೂರ್ತಿ
333ಭೂತ ನಾಗ
334 ಭೂತ ರಾಜ
335 ಬೊಟ್ಟಿ ಭೂತ
336 ಬ್ರಾಣ ಭೂತ
337ಭಟ್ಟಿ ಭೂತ
338 ಬಂಗಾಡಿ ಮಾಣಿಕೊ
339 ಬಂಟ ಭೂತ
340ಬಂಟ ಜಾವದೆ
341 ಬಲ್ಲ ಮಂಜತ್ತಾಯ
342 ಬಂಟಾಮ್ಡಿ
343 ಬರಮಲ್ತಾಯೆ
344 ಮಲಾರ್ ಜುಮಾದಿ (ಕರ್ನಗೆ)
345 ಮಹಾ ಕಾಳಿ ,
346 ಮಾಯಂದಾಲ್
347 ಮರ್ಲು ಮೈಯೊಂದಿ
348 ಮರ್ಲು ಜುಮಾದಿ
349 ಮಂತ್ರ ದೇವತೆ
350 ಮಂಗಾರ ಮಾಣಿಗ
351 ಮಂಜ ನಾಗ
352 ಮಂಜ ಬೊಮ್ಮ
353 ಮಗ್ರಂದಾಯ
354 ಮಡಿಕತ್ತಾಯ(ಮಾಹಿತಿ :ದಿನೇಶ್ ವರ್ಕಾಡಿ )
355 ಮಡಳಾಯೆ
356 ಮದ್ದಡ್ಕತ್ತಾಯೆ
357 ಮಡೆನಾಗ
358 ಮಡ್ಯೋಳೆ
359 ಮಂತ್ರೊದಾಯೆ
360 ಮನ್ಸೆರ್ ಭೂತ
361 ಮಲೆಯಾಳ ಭೂತ
362 ಮಲೆ ಕೊರತಿ
363 ಮದಿಮಾಲ್
364ಮದಿಮ್ಮಾಯ
365 ಮಲೆರಾಯ
366 ಮಾಣಿ ಬಾಲೆ
367ಮಾಟಂತಾಯ (ಮಾಹಿತಿ ಸುಶ್ರುತ್ ಅಡ್ಡೂರು)
369ಮಾನೆಯಪ್ಪು (ಮಾಹಿತಿ ಸುಶ್ರುತ್ ಅಡ್ಡೂರು)
369ಮಾಯ್ಲೆರ್
370ಮಾಯಿಲ್ದಿ © ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
371ಮೇಲ್ಕಾರತ್ತಾಯಿ
372 ಮಾಂದಿ
373 ಮಲ್ಲು
374 ಮರ್ದ ಬಲ್ಲಾಳ್ತಿ
375 ಮಾಪುಳೆ ಭೂತ
376ಮಾಪುಳ್ತಿ ಭೂತ
377ಮಾಪುಳ್ತಿ ಧೂಮಾವತಿ
378ಮಾಪಿಲ್ಳೆ
379ಮಾಪುಳ್ಚಿ _ಮಾಹಿತಿ ಸಿವರಾಮ ಭಟ್
380ಮಾಲಿಂಗ ರಾಯ
381ಮಾಣಿ ಭೂತ
381ಮರ್ಲು ಮಾಣಿ
382ಮಾಣೆಚ್ಚಿ
383 ಮಾಯಿಲು
384ಮಾಯೊದ ಬಾಲೆ
385ಮಾರಂ ದೈವ
386ಮಾರಾವಂಡಿ
387ಮಾರಾಳಮ್ಮ್ಮ
388ಮಲ್ಲೋಡಿತ್ತಾಯೆ- ಮಾಹಿತಿ ಅಭಿಲಾಶ ಚೌಟ
389ಮಾರಿಯಮ್ಮ
390 ಮಿತ್ತಂತಾಯೆ
391 ಮುಕ್ಕಬ್ಬೆ
392 ಮುಡಿಲ್ತಾಯ
393 ಮುರ್ತುರಾಯ
394ಮುಕುಡಿತ್ತಾಯಿ
395 ಮೂಡಿ ಪಡಿತ್ತಾಯೆ
396ಮೂಡೋತ್ನಾಯೆ
397 ಮೂ ಜುಲ್ನಾಯ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
398 ಮೂರ್ತಿಲ್ಲಾಯ
399ಮುಪ್ಪಣ್ಣ ದೈವ ಶಿರ್ಲಾಲು
400 ಮಲೆ ಮುದ್ದ
401 ಮುಗೆರ್ಲು
402 ಮಂಗಳೆರ್
403 ಮುಕಾಂಬಿ
404 ಮುಂಡೆ ಬ್ರಾಂದಿ(maahiti sanket pujari )
405ಮುಡಿಪುನ್ನಾರ್
406 ಮುಸ್ಲಿಮರ ಮಕ್ಕಳು
_407 ಮೂವ
408 ಮೈಸಂದಾಯ
409 ಯಡಪಡಿತ್ತಾಯ
410 ಯರ್ಮುಂಜಾಯೆ
411 ಮೇಲ್ಕಾರ್ತಾಯೆ
412 ಮಲ್ಲ ರಾಯೆ
413ಯೇರ್ಮನ್ನಾಯೆ
414 ಮಣಿಕಂಟತ್ತಾಯ
415 ಮಲರಾಯ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
416 ಮದನಕೆ ದೈಯಾರ್
417ಮುಡಿತ್ತಾಯ
418ಮಾಯೊಲು-ಡಾ.ವಾಮನ ನಂದಾವರ
419ಮಂಜಿಷ್ಣಾರ್
420ಮನಿಯಂದಾಯ
421 ಮಣಿಯಾಲ್ತಾಯ
423ಉಮ್ಮು ಬೋವ
424ಉಮ್ಮಣ ಬೋವ
425ಎಲ್ಯ ಬೋವ
426ಎಲ್ಯಣ ಬೋವ
427ಕಪ್ಪಣ ಸ್ವಾಮಿ
428ಮಲೆ ಸಾಸಿರ ದೈವ
429ರಕ್ತೇಶ್ವರಿ
430 ರಾವು ಗುಳಿಗ
431 ರುದ್ರ ಚಾಮುಂಡಿ
432 ಶಗ್ರಿತ್ತಾಯ
433ಶಿವರಾಯ
434 ಶಂಕರ ಬಡವಣ
435 ಶಿರಾಡಿ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
436ಸರ್ವೆರ್
437ಸುಬ್ಬಣ್ಣ ಹೆಟ್ಯಾಳ್
438ಸುಬ್ಬಮ್ಮ
439 ಸೂ ಕತ್ತೆರಿ
440ದೊಂಬೆ ಕಾಳಿ
441ಮಾಂದಿಕೋಲ
442 ಪರ್ಪಂಕರಿಯತ್ತಾಯ
443 ಸೊನ್ನೆ
444 ಸ್ವಾಮಿ
445ಸೆಟ್ಟಿಗಾರ
446 ಸತ್ಯನ್ಗಳದ ಕೊರತಿ
447 ಸಂಪಿಗೆತ್ತಾಯ
448ಸನ್ಯಾಸಿ ಹಿರಿಯಾಯೆ
449ಸೇಮ ಕಲ್ಲ ಪಂಜುರ್ಲಿ
450ಸುಬ್ಬಿಯಮ್ಮ ಗುಳಿಗ
451ಸಾರ್ತ ಮಲ್ಲು
452ಶ್ರೀ ಮಂತಿ- ಮಾಹಿತಿ ವೆಂಕಟ್ರಾಜ ಕಬೆಕೋಡ್ಲು
453 ಹನುಮಂತ ಭೂತ
454 ಹಳ್ಳತ್ತಾಯ
454 ಹಳ್ಲತ್ತಾಯಿ/ಅಲ್ನತ್ತಾಯಿ
455ಹೊಸಮ್ಮ,
456 ಪಲ್ಲ ಧೂಮಾವತಿ
457ಜೆಡೆ ಕಲ್ಲು ಧೂಮಾವತಿ
458ಪದ್ದೆಯಿ ಧೂಮಾವತಿ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
459ರತೋಜುಮಾದಿ
460ಸಾರಾಳ ಜುಮಾದಿ
461ಕೈರ್ ಜುಮಾದಿ
462ಕಾಂತೆರಿ ಜುಮಾದಿ
463ಜುಮ್ರ ಜುಮಾದಿ
464ಕಾಂತು ನೆಕ್ರಿ ಜುಮಾದಿ
465 ಪಡು ಧೂಮಾವತಿ
466 ಕೊಮಾರು ಚಾಮುಂಡಿ
467ಪೊಲಮರದೆ ಚಾಮುಂಡಿ
468ಅಮ್ಮಂಗಲ್ಲು ಧೂಮಾವತಿ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
469ಮಂತ್ರ ಗುಳಿಗ
479ಪಾತಾಳ ಗುಳಿಗ
480ಒರಿ ಮಾಣಿ ಗುಳಿಗ
481ಆಕಾಸಗುಳಿಗೆ
482ಚಾಮುಂಡಿ ಗುಳಿಗ
483ರಾಜನ್ ಗುಳಿಗ
484 ಮಾರಣ ಗುಳಿಗ
485ಅಂತ್ರ ಗುಳಿಗ
486 ನೆತ್ತೆರ್ ಗುಳಿಗ
487 ಮುಳ್ಳು ಗುಳಿಗ
488 ಮಂತ್ರ ಗುಳಿಗ
489ಮಂತ್ರವಾದಿ ಗುಳಿಗ
490ಬಂಡಾರಿ ಗುಳಿಗ
491ಚೌಕಾರು ಗುಳಿಗ
492ನೆತ್ತರು ಗುಳಿಗ
493ಭೂಮಿ ಗುಳಿಗ
494ಸಂಕೊಲಿಗೆ ಗುಳಿಗ
495ಜೋಡು ಗುಳಿಗ
496 ಕಲಾಲ್ತ ಗುಳಿಗ
497ಜಾಗೆದ ಪಂಜುರ್ಲಿ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
498 ಉರಿ ಮರ್ಲೆ ಪಂಜುರ್ಲಿ
499 ವರ್ನರ ಪಂಜುರ್ಲಿ
500 ಒರಿ ಬಂಟೆ ಪಂಜುರ್ಲಿ
501ಕಡಬದ ಪಂಜುರ್ಲಿ
502 ಕಡೆಕ್ಕಾರ ಪಂಜುರ್ಲಿ
503 ಕಾಡಬೆಟ್ಟು ಪಂಜುರ್ಲಿ
504ಕುಂತಾಳ ಪಂಜುರ್ಲಿ
505 ಕುಡುಮೊದ ಪಂಜುರ್ಲಿ
506ಕುಪ್ಪೆ ಪಂಜುರ್ಲಿ
507 ಕುಪ್ಪೆಟ್ಟಿ ಪಂಜುರ್ಲಿ
508 ಕೂಳೂರು ಪಂಜುರ್ಲಿ
509 ಕೋರೆ ದಾಂಡ ಪಂಜುರ್ಲಿ
510 ಕೊಟ್ಯದ ಪಂಜುರ್ಲಿ
511 ಗೂಡು ಪಂಜುರ್ಲಿ
512 ಗ್ರಾಮ ಪಂಜುರ್ಲಿ
513 ಚಾವಡಿದ ಪಂಜುರ್ಲಿ
514 ನಾಡ ಪಂಜುರ್ಲಿ
515 ಪಂಜಣತ್ತಾಯ ಪಂಜುರ್ಲಿ
517 ಪಟ್ಟದ ಪಂಜುರ್ಲಿ
517 ಪಾರೆಂಕಿ ಪಂಜುರ್ಲಿ
518 ಜೋಡು ಪಂಜುರ್ಲಿ
519ರುದ್ರ ಪಂಜುರ್ಲಿ
520 ಮುಗೇರ ಪಂಜುರ್ಲಿ
521 ಒರ್ತೆ ಪಂಜುರ್ಲಿ
522 ಮನಿಪ್ಪನ ಪಂಜುರ್ಲಿ
522ಅಮ್ಬಟಾಡಿ ಪಂಜುರ್ಲಿ
523ಅಣ್ಣಪ್ಪ ಪಂಜುರ್ಲಿ
524 ಉದ್ಪಿದ ಪಂಜುರ್ಲಿ
525ಮೈಯಾರ್ಗೆ ಪಂಜುರ್ಲಿ (ಮಾಹಿತಿ :ಸಂತೋಷ್ ಕುಮಾರ )
526ಅಲೇರ ಪಂಜುರ್ಲಿ
527 ಜೋಡು ಕಲ್ಲುರ್ಟಿ
528ಹಾಡಿ ಕಲ್ಲುರ್ಟಿ
529ಒರ್ತೆ ಕಲ್ಲುರ್ಟಿ
530 ಪಾಷಾಣ ಮೂರ್ತಿ
531ರಾಜನ್ ಕಲ್ಕುಡ ...
.532ಉರಿ ಮರ್ತಿ
533 ಅಂಗಾರೆ ಕಲ್ಕುಡ
534ಸತ್ಯ ಕುಮಾರ
535ಸತ್ಯ ದೇವತೆ
536ಇಷ್ಟ ದೇವತೆ
537ಮಂತ್ರ ದೇವತೆ .
.538ಮಂದ್ರಾಯ
539ಮಿತ್ತ ಮೊಗರಾಯ
© ಡಾ.ಲಕ್ಷ್ಮೀ ಜಿ ಪ್ರಸಾದ
(
540ಮಾಡ್ಲಾಯ(ಮಾಹಿತಿ ಸಂಕೇತ್ ಕುಮಾರ್ )
541ಕತ್ತಲೆ ಕಾನದ ಗುಳಿಗ (ಸಂತೋಷ್ ಕುಮಾರ )
542 ಮರ್ಲ್ ರಕ್ತೇಶ್ವರಿ
543 ಶಗ್ರಿತ್ತಾಯ
544 ಕೊಂಕಣಿಭೂತ
545ಒಡ್ಡಮರಾಯ
545 ಮಣಿಕಂಠತ್ತಾಯ
546 ಮಿತ್ತಮೊಗರಾಯ
547 ಅಚ್ಚು ಬಂಗೇತಿ
548ಮಲೆಯಾಳ ಚಾಮುಂಡಿ
549ಪೀಯಾಯಿ
550 ಪಿಲಡ್ಕತ್ತಾಯ
551ಬನ್ನಡ್ಕತ್ತಾಯ (ಮಾಹಿತಿ ಧರ್ಮ ದೈವ )
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
552 ನೆಲ್ಲುರಾಯ
552ಒರು ಬಾಣಿಯೆತ್ತಿ
553ಮಲೆಸಾವಿರ ಭೂತ (ಮಾಹಿತಿ ಪ್ರಜ್ವಲ್ )
554 ಹರಿಹರ ಭೂತ (ಮಾಹಿತಿ ಗೀತ ನಾಯಕ್)
555ಸೀರಂಬಲ್ತಾಯ,(ಮಾಹಿತಿ ಶಂಕರ್ ಕುಂಜತ್ತೂರು )
556ಬೀರ ಮರ್ಲೆರ್ (ಮಾಹಿತಿ ಶಂಕರ್ ಕುಂಜತ್ತೂರು )
557ಕಡಂಗಲ್ಲಾಯ (ಮಾಹಿತಿ ಶಂಕರ್ ಕುಂಜತ್ತೂರು
558ಪರಂಬಲತ್ತಾಯ ,(ಮಾಹಿತಿ- ಶಂಕರ್ ಕುಂಜತ್ತೂರು )
559 ಕೋಚು ಗುಳಿಗ(ಮಾಹಿತಿ- ಶಂಕರ್ ಕುಂಜತ್ತೂರು ) ,
560 ಕಿನ್ನಿಲು , (ಮಾಹಿತಿ- ಶಂಕರ್ ಕುಂಜತ್ತೂರು )
561ಪೊಯಿ ಚಾಮುಂಡಿ(ಮಾಹಿತಿ- ಶಂಕರ್ ಕುಂಜತ್ತೂರು )
562ಕುಂಞಲ್ವ ಬಂಟ
563ಅಂಕೆ -ಡಾ.ವಾಮನ ನಂದಾವರ
564 ಉಮ್ಮಯೆ-
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
565 ಚೀನಿದಾರ್ -ಡಾ.ವಾಮನ ನಂದಾವರ
566 ನರಯ_ಮಾಹಿತಿ ಜಿವಿತ್ ಶೆಟ್ಟಿ
567ಉಮ್ಮಲ್ತಿ
568ಉರ್ಮಿತ್ತಾಯ
569 ಕುಡಂದರೆ
570ಅಡಿಮರಾಯ
571ಕೋಟೆ ಜಟ್ಟಿಗ
572ಅರಮನೆ ಜಟ್ಟಿಗ
573ಜೈನ ಜಟ್ಟಿಗ
574ನೇತ್ರಾಣಿ ಜಟ್ಟಿಗ
575ಜತ್ತಿಂಗ
576ಮೇಲ್ಕಾರತ್ತಾಯಿ
577ಅಡ್ಕದ ಚಕ್ರಪದಿ
578 ಪೆರ್ನು
579 ದೆಯ್ಯು
589ಸೇನವ
581ಪಟ್ಲೆರ್
582ಬಲಾಯಿ ಮಾರೆರ್
583ತಿಗಮಾರೆರ್
584 ಕುಂಡ್ಜು ಬಂಟ
585 ಬಂಕಿ ನಾಯ್ಕ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
586 ಕೆಂಚಣ್ಣ
587ಕೆಂಪಮ್ಮ
588 ಪಾಪಣ್ಣ
589 ದೇಬೆ
590ಪೀಲೆದಾಯೆ
591ಕಳ್ಳ (ಕಳುವೆ)
592ಕೋಟೆರಾಯ /ಕೋಟೆದಾರ್ (ಮಾಹಿತಿ ಮಹೆಂದ್ರನಾಥ್ )
593 ಓಪೆತ್ತಿ ಮದಿಮಾಲ್ /ವಾಪತ್ತಿ ಮದಿಮಾಲ್(ಮಾಹಿತಿ ಸಂಕೇತ ಪೂಜಾರಿ)ವಾಟೆಚಾರಾಯ (ಮಾಹಿತಿ ಸಂಕೇತ ಪೂಜಾರಿ )
594ವಜಲಾಯ (ಮಾಹಿತಿ ಸಂಕೇತ ಪೂಜಾರಿ )
595 ಕೆಮ್ಮ ಡೆ ಜುಮಾದಿ(ಮಾಹಿತಿ ಸಂಕೇತ ಪೂಜಾರಿ )
596ದಮಯಂತ(ಮಾಹಿತಿ ಪ್ರಕಾಶ್ ಮಾರ್ಪಾಡಿ )
597 ಸೇರೆಗಾರ್ (ಮಾಹಿತಿ ಪ್ರಕಾಶ್ ಮಾರ್ಪಾಡಿ )
598ಪಡ್ಕಂತಾಯ (ಮಾಹಿತಿ ಪ್ರಕಾಶ್ ಮಾರ್ಪಾಡಿ )
599ಕೊಡಕಲ್ಲಾಯ
600ಪಡಿಕಲ್ಲಾಯ
601ಪಡ್ಕಂತಾಯ-ಮಾಹಿತಿ ಜಿತೇಂದ್ರ ಪೈ
602ಗೆಂಡ ಕೇತುರಾಯ
© ಡಾ.ಲಕ್ಷ್ಮೀ ಜಿ ಪ್ರಸಾದ
603 ಅಮ್ಮಣ ಬನ್ನಾಯ (.ಮಾಹಿತಿ ವಾಮನ ನಂದಾವರ)
604ಪೆರಿಯಾಕುಳು
605 ಮುಪ್ಪಣ್ಣ ದೈವ
606ನಾಡ ದೈವ
607ಮಲೆಯಾಳಿ ದೈವ
608ಗಂಧರ್ವಬೋಳಾರ್ ಗರೋಡಿ ಮರ್ನೆ
609 ದೆಸಿಲು
610ಕಾನಲ್ತಾಯ- ಮಾಹಿತಿ ಶಶಾಮಕ್ ನೆಲ್ಲಿತ್ತಾಯ
611ಕುದುರೆ ಮುಖ ದೈವ (yenkey)
612ಕೊಲ್ಲಿ ಕುಮಾರ
613ಆಜಿ ಕೈತ್ತಾಯ ಮಾಹಿತಿ ಅಭಿಲಾಶ ಚೌಟ
614ಕಟ್ಟದಲ್ತಾಯ ""
615ಉಗ್ಗೆದಲ್ತಾಯ ಮಾಹಿತಿ ಶರಣ್ ಶೆಟ್ಟಿ
616ಹೊನ್ನಮ್ಮ
617ವೀರಮ್ಮ
618ವೀರಮ್ಮಾಳ್
619ತಿಮ್ಮ ನಾಯಕ
© ಡಾ.ಲಕ್ಷ್ಮೀ ಜಿ ಪ್ರಸಾದ
620ಹಸರ ತಿಮ್ಮ
621ಕೋಟೆರಾಯ
622 ಅರಸಂಕಲ
623 ಮೆಚ್ಚು ಬಂಗೇತಿ
624ಬಾಲಕಿ/ಬಾಲಜ್ಜಿ- ಮಾಹಿತಿ ಸುಬ್ರಹ್ಮಣ್ಯ ತಂತ್ರಿ
625 ಇಲ್ಲತ್ತಮ್ನ ಕುಮಾರಿ
626ಮಾದ್ರಿತ್ತಾಯ
627ಕಾಯರ್ತಾಯ
628 ಭಟ್ರು ನಾಯಕ
629ಅಣ್ಣು ಕುಂಜಿರಾಯ
630ಜನಾರ್ದನ ಕುಂಜಿರಾಯ
631ದೇವ ಕುಂಜಿರಾಯ
632ಅರಸು ಕುಂಜಿರಾಯ
632ಹೌಟಲ್ದಾಯ ಮಾಹಿತಿ ಉಮೇಶ ಭಟ್
633 ಅಚ್ಚು ಬಂಗೇತಿ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
ನನ್ನ ಸಂಗ್ರಹದ ಈ ತನಕ ಎಲ್ಲೂ ಹೆಸರು ದಾಖಲಾಗದ ಸುಮಾರು 150-200 ದೈವಗಳು
ಮತ್ತು ನಾನು ಅಧ್ಯಯನ ಮಾಡಿದ ,ಇತರೆಡೆಯೂ ಅಧ್ಯಯನ ವಾಗಿರುವ ಸುಮಾರು 90-95
ಹೀಗೆ ಸುಮಾರು 380 -400 ದೈವಗಳು ಮತ್ತು ಡಾ.ಚಿನ್ನಪ್ಪ ಗೌಡರ ಕೃತಿಯಲ್ಲಿ ಪಟ್ಟಿ ಮಾಡಿದ
ಭೂತಗಳ ಹೆಸರುಗಳನ್ನೂ ಸೇರಿಸಿ ಒಂದೇ ಭೂತದ ಬೇರೆ ಬೇರೆ ಹೆಸರು ಎನಿಸಿದ್ದನ್ನು ಕೈ
ಬಿಟ್ಟು ಈ ಪಟ್ಟಿಯನ್ನು ತಯಾರಿಸಿದ್ದೇನೆ ,ಕೊನೆಯಲ್ಲಿ ಒಂದೇ ಭೂತದ ಬೇರೆ ಬೇರೆ
ಹೆಸರುಗಳನ್ನೂ ಸೇರಿಸಿದ್ದೇನೆ ಇದರಲಿಇಲ್ಲದ ಭೂತಗಳ ಹೆಸರು ತಿಳಿದಿದ್ದರೆ ತಿಳಿಸಿ pls
ಮುಂದೆ ಅವನ್ನುಸೇರಿಸುತ್ತೇನೆ
ಇಲ್ಲಿರುವ ದೇಯಿ ,ಬುದ್ಯಂತಾಯೆ ,ದೇವು ಪುಂಜ ,ಆತ ಕಳೆಂಜ ಮೊದಲಾದ
ಕೆಲವು ಹೆಸರುಗಳನ್ನು ನಾನು ಡಾ. ಚಿನ್ನಪ್ಪ ಗೌಡರ ಭೂತಾರಾಧನೆ ಕೃತಿಯಲ್ಲಿನ ದೈವಗಳ
ಹೆಸರಿನ ಪಟ್ಟಿ ಯಲ್ಲಿರುವುದನ್ನುನೋಡಿ ಹಾಕಿದ್ದು ಇವರು ದೈವಗಳೇ ?ಇವರಿಗೆ ದೈವಗಳ
ನೆಲೆಯಲ್ಲಿ ಆರಾಧನೆ ಇದೆಯೇ ಎಂಬ ಬಗ್ಗೆ ನಂಗೂ ಸಂಶಯ ಇದೆ
‘ಕಂಡಿಗೆತ್ತಾಯ’(ಬಜ್ಪೆ-ಕೊಳಂಬೆ),
ಇದೀಗ ನನಗೆ ಸಾವಿರದ ಇನ್ನೂರು ಕ್ಕಿಂತ ಹೆಚ್ಚು ದೈವ ಗಳ ಹೆಸರು ಸಿಕ್ಕಿವೆ copy rights
reserved (c)Dr Lakshmi G Prasad,Tulu folklorist and Lecturer in
Kannada govt Pu college Nelamangala
ಬರ್ನೆಲ್ ಮೇನ್ನರ್ ತೋರಿಸಿದ ಹಾದಿಯಲ್ಲಿ ಸಾವಿರದೊಂದು ಗುರಿಯೆಡೆಗೆ-ಡಾ.ವಾಮನ ನಂದಾವರ ,
ಡಾ. ಲಕ್ಷ್ಮೀ ವಿ. ಅವರ ‘ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು
ವಿಶ್ಲೇಷಣಾತ್ಮಕ ಅಧ್ಯಯನ’ವು ಡಾ. ಎಸ್. ನಾಗರಾಜು ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ
ವಿಶ್ವ ವಿದ್ಯಾಲಯಕ್ಕೆ 2009ರ ಸಾಲಿನ ಪಿಎಚ್.ಡಿ. ಪದವಿಗಾಗಿ, ಬೆಂಗಳೂರಿನ ಬಿ. ಎಂ.
ಶ್ರೀ ಸ್ಮಾರಕ ಪ್ರತಿಷ್ಠಾನದ ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರದ ಮೂಲಕ
ಸಲ್ಲಿಸಿದ ಸಂಪ್ರಬಂಧವಾಗಿದೆ. ಜನಪದ ಸಂಸ್ಕೃತಿ ಸಂಶೋಧನೆಯಲ್ಲಿ ಇದೊಂದು ಮಹತ್ವದ ಮಹಾ
ಪ್ರಬಂಧವಾಗಿದ್ದು ಇದೀಗ ಅದು ಪ್ರಕಟವಾಗಿ ಬರುತ್ತಿರುವುದು ಅತ್ಯಂತ ಶ್ಲಾಘನೀಯವಾದುದು
ಇದರಲ್ಲಿ ಹತ್ತು ಅಧ್ಯಾಯಗಳು ಮತ್ತು ಅನುಬಂಧದ ಪುಟಗಳಿವೆ. ಪ್ರಸ್ತಾವನೆಯ ಮೊದಲನೆಯ
ಅಧ್ಯಾಯಲ್ಲಿ ತುಳುನಾಡಿನ ಭೌಗೋಳಿಕ ಎಲ್ಲೆಗಳ ಮತ್ತು ತುಳುನಾಡಿನ ಸಂಸ್ಕೃತಿಯ ಕುರಿತು
ಹೇಳಲಾಗಿದೆ. ಈ ಕ್ಷೇತ್ರದಲ್ಲಿ ಈ ತನಕ ನಡೆದಿರುವ ಕೆಲಸ, ಅಧ್ಯಯನದ ವ್ಯಾಪ್ತಿ, ಉದ್ದೇಶ,
ವಿಧಾನಗಳ ಕುರಿತು ತಿಳಿಸಲಾಗಿದೆ. ನಾಗಬ್ರಹ್ಮ ಪರಿಕಲ್ಪನೆಯ ಎರಡನೆಯ ಅಧ್ಯಾಯದಲ್ಲಿ
ತುಳುವರ ಆರಾಧ್ಯ ದೈವ ಬೆರ್ಮೆರ್ ಪ್ರಾಚೀನತೆ, ಸ್ವರೂಪ, ಮಹತ್ವ, ಬೆರ್ಮೆರ್ ಪದದ ಅರ್ಥ
ಪರಿಕಲ್ಪನೆ, ಬೆರ್ಮೆರ್ ಸೃಷ್ಟಿಯ ಮೂಲ ಮತ್ತು ವೈಶಿಷ್ಟ್ಯ, ಸೃಷ್ಟಿಕರ್ತ ಬೆರ್ಮೆರ್,
ಆಲಡೆ ಮತ್ತು ಗರಡಿ ಬೆರ್ಮೆರ್, ಭೂತಬ್ರಹ್ಮ, ಯಕ್ಷಬ್ರಹ್ಮ ಮತ್ತು ನಾಗಬ್ರಹ್ಮ
ಪರಿಕಲ್ಪನೆಯ ಮೂರ್ತಿಗಳು ಮೊದಲಾದುವುಗಳ ಕುರಿತು ಸಾಕಷ್ಟು ಅಧ್ಯಯನ ನಡೆದಿದೆ.
ಭೂತಾರಾಧನೆಯ ಪ್ರಾಚೀನತೆಗೆ ಕಾರ್ಕಳದ ಕಾಂತೇಶ್ವರ ದೇವಾಲಯದ ಕ್ರಿ.ಶ. 1379ರ
ಶಾಸನದಲ್ಲಿರುವ ‘ದೈವಕ್ಕೆ ತಪ್ಪಿದವರು’ ಎಂದಿರುವ ದಾಖಲೆಯನ್ನು ಅಧ್ಯಯನಕಾರರು ಇಲ್ಲಿ
ಉಲ್ಲೇಖಿಸಿದ್ದಾರೆ. ನಾಗಬ್ರಹ್ಮ ಸೇರಿಗೆಯ ಮೂರನೆಯ ಅಧ್ಯಾಯದಲ್ಲಿ ಆಲಡೆ ಸಂಕೀರ್ಣದ
ದೈವಗಳಾದ ಬ್ರಹ್ಮ ಲಿಂಗೇಶ್ವರ, ರಕ್ತೇಶ್ವರಿ, ನಾಗ, ನಂದಿಗೋಣ, ಉಲ್ಲಾಯ, ಖಡ್ಗೇಶ್ವರಿ,
ಸಿರಿಗಳು, ಕುಮಾರ, ಪಂಜುರ್ಲಿ, ಅಡ್ಕತ್ತಾಯ, ಧೂಮವತಿ, ಗೆಜ್ಜೆಕತ್ತಿರಾವಣ,
ಬ್ರಹ್ಮಸ್ಥಾನದಲ್ಲಿ ಆರಾಧನೆಗೊಳ್ಳುವ ದೈವಗಳಾದ ಬೆರ್ಮೆರ್, ನಂದಿಗೋಣ, ರಕ್ತೇಶ್ವರಿ,
ನಾಗ, ಭೈರವ, ಗರಡಿ ಸಂಕೀರ್ಣದ ದೈವಗಳಾದ ಬ್ರಹ್ಮ, ಕೋಟಿಚೆನ್ನಯ, ಕಿನ್ನಿದಾರು,
ಮಾಯಂದಾಲ್, ಕುಜುಂಬಕಾಂಜ, ಒಕ್ಕುಬಲ್ಲಾಳ, ಜೋಗಿಪುರುಷ, ಶಕ್ತಿ ದೇವತೆಗಳು, ಮುಗೇರ್ಲು
ಸಂಕೀರ್ಣ ದೈವಗಳಾದ ಎಣ್ಮೂರು ದೆಯ್ಯು, ಕೆಲತ ಪೆರ್ನಲೆ, ತನ್ನಿಮಾಣಿಗ ದೈವಗಳಬಗೆಗೆ
ಅಧ್ಯಯನ ನಡೆದಿದೆ. ಇಲ್ಲಿ ಡಾ. ಲಕ್ಷ್ಮೀ ವಿ. ಅವರು ಪ್ರಾದೇಶಿಕ ವ್ಯತ್ಯಾಸಗಳನ್ನು
ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಮುದ್ದ ಕಳಲ ಮತ್ತು ಮಾನ್ಯಲೆ ಪೆರ್ನಲೆ ಎನ್ನುವುದು
ಎಣ್ಮೂರು ದೆಯ್ಯು ವೀರರಿಗಿರುವ ಪ್ರಾದೇಶಿಕ ಹೆಸರುಗಳು. ನಾಗಬ್ರಹ್ಮ ಆರಾಧನಾ ಪ್ರಕಾರಗಳ
ನಾಲ್ಕನೆಯ ಅಧ್ಯಾಯದಲ್ಲಿ ವೈದಿಕ ಮೂಲ ಪ್ರಕಾರಗಳನ್ನು ಮತ್ತು ತಾಂತ್ರಿಕ ಮೂಲ
ಪ್ರಕಾರಗಳನ್ನು, ಜನಪದ ಮೂಲ ಪ್ರಕಾರಗಳನ್ನು ದಾಖಲಿಸುತ್ತಾ ಸರ್ಪ ಸಂಸ್ಕಾರ,
ನಾಗಪ್ರತಿಷ್ಟಾಪನೆ, ಬ್ರಹ್ಮ ಸಮಾರಾಧನೆ, ಸುಬ್ರಹ್ಮಣ್ಯ, ಮೂರಿಳು, ಸರ್ಪಂತುಳ್ಳಲ್,
ಸರ್ಪಂಕಳಿ ಮೊದಲಾದ ಮೂವತ್ತೊಂದು ವಿಧದ ಆರಾಧನಾ ವೈವಿಧ್ಯ ಲೋಕವನ್ನು ಪರಿಚಯಿಸಿರುವುದು ಈ
ಅಧ್ಯಯಯನದ ಹೆಚ್ಚುಗಾರಿಕೆ. ವೇದೇತಿಹಾಸ ಪುರಾಣಗಳ ನಾಗಬ್ರಹ್ಮ ಎಂಬ ಐದನೆಯ
ಅಧ್ಯಾಯದಲ್ಲಿ ನಾಗ-ಗರುಡಾವತಾರ, ಜರತ್ಕಾರು ವಿವಾಹ ಮೊದಲಾದುವುಗಳನ್ನು ಚರ್ಚಿಸಿದ್ದಾರೆ
ತುಳು ಜನಪದ ಸಾಹಿತ್ಯದ ನಾಗಬ್ರಹ್ಮ ಎನ್ನುವ ಆರನೆಯ ಅಧ್ಯಾಯದಲ್ಲಿ ಸಿರಿ ಪಾಡ್ದನದಲ್ಲಿ
ಬರುವ ಲಂಕೆ ಲೋಕನಾಡಿನ ಬೆರ್ಮೆರ್, ಕೋಟಿಚೆನ್ನಯ ಪಾಡ್ದನದಲ್ಲಿ ಬರುವ ಬೆರ್ಮೆರ್,
ಮುಗೇರ್ಲು ಪಾಡ್ದನದಲ್ಲಿ ಬರುವ ಬೆರ್ಮೆರ್ ಮೊದಲಾದ ಬ್ರಹ್ಮರ ಪರಿಕಲ್ಪನೆಗಳ ಕುರಿತು
ಅಧ್ಯಯನ ನಡೆಸಿದ್ದಾರೆ. ಅಧ್ಯಾಯ ಏಳರಲ್ಲಿ ಕಂಬಳದ ಪ್ರಾಚೀನತೆ, ಕಂಬಳ ಪದದ ನಿಷ್ಪತ್ತಿ,
ಕಂಬಳದ ಮಹತ್ವ ಮೌಖಿಕ ಪರಂಪರೆಯಲ್ಲಿ ಕಂಬಳ, ಕಂಬಳದ ಪ್ರಕಾರಗಳು, ಕಂಬಳದಲ್ಲಿ ದೈವಾರಾಧನೆ
ಮೊದಲಾದುವುಗಳ ಕುರಿತ ಅಧ್ಯಯನವಿದೆ. ಅಧ್ಯಾಯ ಎಂಟರಲ್ಲಿ ಕಂಬಳಕೋರಿ ನೇಮ ಮತ್ತು ಆ
ಹೊತ್ತು ಅಲ್ಲಿ ನಡೆಯುವ ‘ಒಂದು ಕುಂದು ನಲುವತ್ತು ದೈವಗಳು’, ಕಿನ್ನಿಮಾಣಿ ಪೂಮಾಣಿ,
ಕೋಮರಾಯ, ಬಬ್ಬರ್ಯ, ಪಂಜುರ್ಲಿ, ಕಲ್ಕುಡ-ಕಲ್ಲುರ್ಟಿ, ರಕ್ತೇಶ್ವರಿ ಮೊದಲಾದ ದೈವಗಳ
ವೈವಿಧ್ಯ ವೈಶಿಷ್ಟ್ಯಗಳ ನಿರೂಪಣೆಯಿದೆ. ಬೆರ್ಮೆರ್ ಆರಾಧನೆಯ ಮೇಲೆ ಇತರ ಸಂಪ್ರದಾಯಗಳ
ಪ್ರಭಾವ ಎನ್ನುವ ಒಂಬತ್ತನೆಯ ಅಧ್ಯಾಯದಲ್ಲಿ ಬೆರ್ಮೆರ್ ಆರಾಧನೆಯ ಮೇಲೆ ಯಕ್ಷಾರಾಧನೆಯ
ಪ್ರಭಾವ, ಬ್ರಹ್ಮಯಕ್ಷ-ಬೆರ್ಮೆರ್, ಅರಸು ಆರಾಧನೆ, ವೀರ ಆರಾಧನೆ, ನಾಥ ಸಂಪ್ರದಾಯ ಮತ್ತು
ನಾಗ ಬ್ರಹ್ಮ ಹಾಗು ಇವುಗಳ ಮೇಲೆ ಬೇರೆ ಬೇರೆ ಸಂಪ್ರದಾಯಗಳ ಪ್ರಭಾವಗಳ ವಿವರಗಳನ್ನು
ನೀಡಿದ್ದಾರೆ. ಹತ್ತನೆಯ ಅಧ್ಯ್ಯಾಯ ಉಪಸಂಹಾರದಲ್ಲಿ ತಮ್ಮ ಅಧ್ಯಯನದ ನಿಲುವನ್ನು ಮಂಡಿಸಿ
ಸಮರ್ಥನೆ ನೀಡಿದ್ದಾರೆ. ಪೆರಿಯಾರ್>ಬೆರ್ಮೆರ್> ಬೆರ್ಮೆ>ಬ್ರಮ್ಮೆ>ಬ್ರಹ್ಮ
ಆಗಿರಬಹುದಾದುದನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಮಹಾಬಲಿ, ಬಲೀಂದ್ರ, ಮಹಿಷಾಸುರ,
ಭರಮ, ಸುಬ್ರಹ್ಮಣ್ಯ, ಸುಬ್ಬಯ, ಕಾಡ್ಯನಾಟದ ಸ್ವಾಮಿ, ಮಡಿಕೆಯಲ್ಲಿ ಬೆರ್ಮೆರ್,
ಕಾಳಭೈರವ, ಕುಂಡೋದರ ಭೂತ, ತುಳುನಾಡನ್ನು ಆಳಿದ ಪ್ರಾಚೀನ ಅರಸ, ಪೆರುಮಾಳ, ಪುರಾತನ
ಹಿರಿಯ, ಬೆರ್ಮೆರ್ ರಾಜನಾಗಿದ್ದನೇ ?, ‘ಒಂಜಿಕುಂದು ನಲ್ಪ, ಸಾರತ್ತೊಂಜಿ ದೈವೊಲು
ಇದೊಂದು ನೆಲೆ, ಸ್ತರ, ಪರಿಪೂರ್ಣತೆಯ ಹಂತ. ಅದು 39 ಏಕೆ? 1001 ಏಕೆ? ಅಧ್ಯಯನ ಆಗಬೇಕು.
ಡಾ. ಲಕ್ಷ್ಮೀ ವಿ. ತಮ್ಮ ಅಧ್ಯಯನದ ಕ್ಷೇತ್ರಕಾರ್ಯ ವಿವರಗಳನ್ನು ಸಮಗ್ರವಾಗಿ
ನೀಡಿದ್ದಾರೆ. ವಿಸ್ತೃತ ಓದಿನ ಆಕರ ಸೂಚಿಯನ್ನು ಮುಂದಿಟ್ಟಿದ್ದಾರೆ. ಸಾಕಷ್ಟು ನೆರಳು
ಬೆಳಕಿನ ವರ್ಣಚಿತ್ರಗಳನ್ನು ಹಾಗೂ 38 ಆಚರಣೆಗಳ ಆಡಿಯೋ-ವೀಡಿಯೋ ಸಂಗ್ರಹ ಮಾಹಿತಿ
ಒದಗಿಸಿದ್ದಾರೆ. ನಾಗ ಬೆರ್ಮೆರ್ ಪಾಡ್ದನದ ಮೂರು ಪಾಠಗಳನ್ನು ಹಾಗು ಕಂಬಳ ಸಂಬಂಧಿ ‘ಈಜೊ
ಮಂಜೊಟ್ಟಿ ಗೋಣ’ಪಾಡ್ದನಪಠ್ಯ ಸಂಗ್ರಹಿಸಿ ಅದರ ಕನ್ನಡ ಅನುವಾದವನ್ನೂ ಕೊಟ್ಟಿದ್ದಾರೆ.
ಪೂಕರೆ ನೇಮ ಒಂದೆಡೆಯಲ್ಲ ಕೋಳ್ಯೂರು, ನಡಿಬೈಲು, ಅನಂತಾಡಿ, ಬಂಟ್ವಾಳದ ಬೀರೂರು,
ಕೊಡ್ಲಮೊಗರು, ಅರಿಬೈಲು, ಕಾಸರಗೋಡಿನ ಚೌಕಾರು(ಅದೂ ಮೂರು ದಿನಗಳಲ್ಲಿ ಒಂದೇ ಊರಲ್ಲಿ).
ಹಾಗೆಯೇ ನಿಡಿಗಲ್ ಲೋಕನಾಡು ಮೊದಲಾದ ಹತ್ತು ಹದಿನಾಲ್ಕು ಬ್ರಹ್ಮ ಆಲಡೆಗಳನ್ನು ಸಂದರ್ಶನ
ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಹತ್ತಾರು ಗರೊಡಿಗಳನ್ನು ಭೇಟಿಮಾಡಿದ್ದಾರೆ. ಹೀಗೆ
ಆಸಕ್ತಿ, ಕುತೂಹಲ ಮತ್ತು ಹುಡುಕಾಟದ ಬೆನ್ನು ಹತ್ತುವ ಚಪಲದ ನೆಲೆಗಳನ್ನು ಮೀರಿ ಡಾ.
ಲಕ್ಷ್ಮೀ ಅವರು ತಮ್ಮ ಅಧ್ಯಯನದ ಒಳನೋಟಗಳನ್ನು ನೀಡುವ ಪ್ರಯತ್ನ ನಡೆಸಿದ್ದಾರೆ. ಅರಸು
ಆರಾಧನೆ, ಪಿತೃ ಆರಾಧನೆ, ಭೂತಾರಾಧನೆ, ನಾಗಾರಾಧನೆ, ಯಕ್ಷಾರಾಧನೆ ಹಾಗೂ ಬಲೀಂದ್ರ
ಅರಾಧನೆಗಳ ಸಮನ್ವಯ ನಾಗಾರಾಧನೆಯಲ್ಲಿ ಕಾಣಿಸುತ್ತದೆ ಎನ್ನುವ ನಿಲುವು ತಳೆದಿದ್ದಾರೆ.
ಇಲ್ಲೆಲ್ಲ ಎಲ್ಲೂ ಬೆರ್ಮೆರ್ ಯಾರು ಏನು, ನಾಗ ಬೆರ್ಮೆರ್ ಯಾರು? ಭೂತಗಳ ಅಧಿಪತಿಯೇ ?
ಎಂದೆಲ್ಲ ಅಂತಿಮ ನಿಲುವಿಗೆ ಅವರು ಬಂದಿಲ್ಲ. ಅದು ದೋಷ ಅಲ್ಲ, ಸಂಶೋಧನೆಯ
ಗುಣ.ಅವಸರಿಸದಿರುವುದು ಚರ್ಚೆಗಳಿಗೆ ಆಹ್ವಾನ ನೀಡಿದಂತೆ. ಜನಪದ ಸಂಸ್ಕೃತಿಯ
ಅಧ್ಯಯನಾಂಶಗಳನ್ನು ಸೋಜಿಗಪಡುವ ಹಾಗೆ ಒಂದೆಡೆ ರಾಶಿ ಹಾಕಿ ಸಂಶೋಧನಾ ಸಾಧ್ಯತೆಗಳನ್ನು
ತೆರೆದು ತೋರಿಸಿದ್ದಾರೆ.ಇದೇ ಕಾಲಕ್ಕೆ ಇಲ್ಲಿ ಡಾ. ಲಕ್ಷ್ಮೀ ಅವರಿಗೆ ತಮ್ಮ ಸಂಪ್ರಬಂಧದ
ಸಂರಚನೆಗೆ ಬೇಕಾದ ಚೌಕಟ್ಟು ಈ ಮೊದಲೇ ಸಿದ್ಧವಾಗಿತ್ತು ಎನ್ನುವ ಇನ್ನೊಂದು ಬಹು
ಮುಖ್ಯವಾದ ಅಂಶದ ಕಡೆಗೆ ಗಮನ ಕೊಡಬೇಕಾಗಿದೆ. ನೂರಕ್ಕೂ ಹೆಚ್ಚು ಕಥೆ, ವೈಚಾರಿಕ
ಲೇಖನಗಳು, ಅಂಕಣ ಬರಹಗಳು ಮೊದಲಾದ ಸಾಹಿತ್ಯ ಮತ್ತು ಸಂಶೋಧನ ಪ್ರವೃತ್ತಿಯಲ್ಲಿ ತಮ್ಮನ್ನು
ತೊಡಗಿಸಿಕೊಂಡಿರುವ ಡಾ. ಲಕ್ಷ್ಮಿ ವಿ. ಅವರು ಅರಿವಿನಂಗಳದ ಸುತ್ತ(ಶೈಕ್ಷಣಿಕ
ಬರೆಹಗಳು), ಮನೆಯಂಗಳದಿ ಹೂ(ಕಥಾಸಂಕಲನ), ದೈವಿಕ ಕಂಬಳ ಕೋಣ (ತುಳು ಜಾನಪದ ಸಂಶೋಧನೆ),
ಸುಬ್ಬಿ ಇಂಗ್ಲೀಷ್ ಕಲ್ತದು(ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ), ತುಂಡುಭೂತಗಳು: ಒಂದು
ಅಧ್ಯಯನ, ಕನ್ನಡ-ತುಳು ಜನಪದ ಕಾವ್ಯಗಳಗಳಲ್ಲಿ ಸಮಾನ ಆಶಯಗಳು, ತುಳು ಪಾಡ್ದನಗಳಲ್ಲಿ
ಸ್ತ್ರೀ, ಪಾಡ್ದನಸಂಪುಟ, ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ಎಂಬ ಐದು ಕೃತಿಗಳನ್ನು
ಏಕಕಾಲಕ್ಕೆ ಪ್ರಕಟಿಸುವ ಸಾಹಸ ಮಾಡಿದವರು. ಹಾಗೆಯೇ ಮುಂದಿನ ಸರದಿಯಲ್ಲಿ, ತುಳುನಾಡಿನ
ಅಪೂರ್ವ ಭೂತಗಳು, ಬೆಳಕಿನೆಡೆಗೆ ಸಂಶೋಧನಾ ಲೇಖನಗಳು. ತುಳು ಜನಪದ ಕವಿತೆಗಳು ಚಂದಬಾರಿ
ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು, ಕಂಬಳ ಕೋರಿ ನೇಮ(ತುಳು ಜಾನಪದ ಸಂಶೋಧನೆ)
ಮತ್ತೊಂದು ಕಂತಿನ ಐದು ಪುಸ್ತಕಗಳನ್ನು ಪ್ರಕಟಿಸುವ ಧೈರ್ಯ ಮಾಡಿದವರು. ಹೀಗೆ ಒಟ್ಟು
ಹದಿನಾಲ್ಕು ಕೃತಿಗಳು (ಮತ್ತೆ ಐದು ಕೃತಿಗಳು ಅಚ್ಚಿನಲ್ಲಿವೆ) ಇವರ ತುಳುನಾಡಿನ ನಾಗ
ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷನಾತ್ಮಕ ಅಧ್ಯಯನಕ್ಕೆ ದೊಡ್ಡ ಗಂಟಿನ ಮೊದಲ
ಬೌದ್ಧಿಕ ಬಂಡವಾಳವಾಗಿರುವುದು ನಿಜ. ವಾಸ್ತವವಾಗಿ ಭೌತಿಕ ಶರೀರಕ್ಕೆ ಎರಡೆರಡು
ಕೈಕಾಲುಗಳು ಹೇಗೋ, ಹಾಗೆ ಇವರು ಗಟ್ಟಿಯಾಗಿದ್ದಾರೆ. ಹಾಗೆಯೇ ಅಂಗೈಗೆ ಐದು ಬೆರಳುಗಳ
ಹಾಗೆ ಒಂದು ಹಿಡಿಗೆ ಹದವಾಗಿದ್ದಾರೆ. ಹೇಗೆ ಅಂಗೈಗೆ ಐದು ಬೆರಳುಗಳ ಸಂಯೋಜನೆಯ ಸಹಕಾರ
ಒಂದು ಹಿಡಿತಕ್ಕೆ ಕಾರಣವಾಗುವುದೋ ಹಾಗೆ ಇಲ್ಲಿ ಒಂದೊಂದು ಹಿಡಿಯಷ್ಟು ಕೆಲಸಗಳು
ಸಾಧ್ಯವಾಗಿದೆ. ಇದು ನಿಜಕ್ಕೂ ಈ ಹೆಣ್ಣುಮಗಳ ಸಾಹಸವೇ ಸರಿ. ಇಂತಹ ಸಂಶೋಧನೆಯ ಮತ್ತು
ಗ್ರಂಥಗಳ ಪ್ರಕಟಣೆಯ ಕೆಲಸಗಳಿಗೆ ಕೇವಲ ಅಧ್ಯಯನ ಆಸಕ್ತಿ ಮಾತ್ರ ಇದ್ದರೆ ಸಾಕಾಗುವುದಿಲ್ಲ
ಜೊತೆಗೆ ಉತ್ಸಾಹ ಮತ್ತು ಛಲಗಳ ಮನೋಧರ್ಮದ ದೃಢ ಸಂಕಲ್ಪವೂ ಬೇಕು. ಜೊತೆಗೆ ಧೈರ್ಯವೂ
ಬೇಕು. ಇರುವ ಮತ್ತು ಸಿಗುವ ಅವಕಾಶಗಳ ಸದುಪಯೋಗಕ್ಕಾಗಿ ಅವರ ಮನಸ್ಸು ಸದಾ ತುಡಿಯುತ್ತಲೂ
ಇರಬೇಕು. ಇಲ್ಲದೆ ಹೋದರೆ ಬೌದ್ಧಿಕ ರಂಗದಲ್ಲಿ ಅಧ್ಯಯನ ಸಾಧನೆಯ ಉತ್ಪನ್ನಗಳು,
ಸಾರಸ್ವತಲೋಕದಲ್ಲಿ ಸಾಧನೆಗಳು ಲಭ್ಯವಿರುವುದಿಲ್ಲ. ತರಗತಿಯಲ್ಲಿ ಕಲಿಸುವ ಜೊತೆಯಲ್ಲೇ
ಅಧ್ಯಾಪನ. ಪ್ರಾಧ್ಯಾಪನ ಕಾಯಕದಲ್ಲಿ ಕಲಿಯುವ ಅವಕಾಶಗಳೂ ಹೇರಳ. ಇಂತಹ ಸಂದರ್ಭಗಳನ್ನು
ಹಗುರವಾಗಿ ಕಾಣದೆ ಲಕ್ಷ್ಮೀಯಂತಹವರು ಗಂಭೀರವಾಗಿ ತೆಗೆದುಕೊಳ್ಳವುದರಿಂದಲೇ ಈ ತರದ
ಕೆಲಸಗಳು ಸಾಧನೆಯಾಗಿ ಪರಿವರ್ತನೆಗೊಳ್ಳುತ್ತವೆ. ಇಲ್ಲಿ ಕೆಲಸ ಮತ್ತು ಬಿಡುವು ಪರಸ್ಪರ
ಹೊಂದಾಣಿಕೆಯಲ್ಲೇ ಸಾಗುತ್ತಿರುತ್ತವೆ. ಹಾಗಿದ್ದಾಗಲೇ ಕಟ್ಟುವ ಕೆಲಸ ನಡೆದು ಉತ್ಪನ್ನದ
ಸಾಧನೆಯಾಗಿ ಸಿದ್ಧಿಸುತ್ತದೆ. ಹೀಗೆ ಒಂದೊಂದು ಹಂತಗಳಲ್ಲಿ ಒಂದೊಂದು ಹಿಡಿಯಷ್ಟು
ಹೊತ್ತಗೆಗಳನ್ನು ಪ್ರಕಟಿಸಿ ಇವರು ನಿಜ ಅರ್ಥದಲ್ಲಿ ಪ್ರಕಟವಾಗಿದ್ದಾರೆ ಮತ್ತು ಈ ವರೆಗೆ
ಅಧ್ಯಯನ ನಡೆಯದ ಕ್ಷೇತ್ರಗಳಲ್ಲಿ ಸಾಕಷ್ಟು ಕೈಯಾಡಿಸಿದ್ದಾರೆ. ಯಾವಾಗ ಇಂತಹ ಕೈಯಾಡಿಸುವ
ಕೆಲಸ ಸಾಧ್ಯವಾಗುತ್ತದೆ ಎಂದರೆ ಅಲ್ಲೆಲ್ಲ ಹಾಗೆಯೇ ಅಧ್ಯಯನ - ಸಂಶೋಧನ
ಕ್ಷೇತ್ರಕಾರ್ಯಗಳಲ್ಲಿ ಕಾಲಾಡಿಸುವ ಕಾಯಕವೂ ನಡೆಯುತ್ತಿರಬೇಕಾಗುತ್ತದೆ. ಇದು ಇವರಿಂದ
ಬಹುಪಾಲು ಸಾಧ್ಯವಾಗಿದೆ. ಈಗಿನ ಕಾಸರಗೋಡು ಜಿಲ್ಲೆಯ ಕೋಳ್ಯೂರು ಎಂಬ ಸಾಂಸ್ಕೃತಿಕ
ಹಳ್ಳಿಯಲ್ಲಿ ಹುಟ್ಟಿಬಳೆದ ಇವರು ಬಾಲ್ಯದಿಂದಲೇ ಸ್ಥಳೀಯ ಸಂಸ್ಕೃತಿಯ ಸೊಗಡಿನ ಜಾಡಿನಲ್ಲಿ
ಅನುಭವಗಳನ್ನು ಮೈಗೂಡಿಸಿಕೊಂಡವರು. ವಿಜ್ಞಾನ ಪದವೀಧರೆಯಾಗಿ ಮುಂದಿನ ಅಧ್ಯಯನಗಳಲ್ಲಿ
ಸಂಸ್ಕೃತ, ಕನ್ನಡ, ಹಿಂದಿ ಹೀಗೆ ಮೂರು ಸ್ನಾತಕೋತ್ತರ ಪದವಿಗಳನ್ನು ಹೇಗೆ ಮತ್ತು ಏಕೆ
ಪಡೆಯಲು ಸಾಧ್ಯವಾಯಿತು? ಅಷ್ಟು ಮಾತ್ರವಲ್ಲ, ರಾಷ್ಟ್ರಭಾಷಾ ಪ್ರವೀಣ, ಎಂ.ಫಿಲ್,
ಪಿಎಚ್.ಡಿ. ಕನ್ನಡದಲ್ಲಿ ಎರಡನೆಯ ಪಿಹೆಚ್. ಡಿ. ಮುಂದೆ ಎನ್.ಇ. ಟಿ(ಕನ್ನಡ)
ಯು.ಜಿ.ಸಿ.ಗಳಂತಹ ಶೈಕ್ಷಣಿಕ ಅರ್ಹತೆಗಳನ್ನು ಪಡೆದುಕೊಳ್ಳವ ದಾರಿಗಳನ್ನೂ ಹೇಗೆ ಏಕೆ
ಕಂಡುಕೊಂಡರು ಎಂಬುದು ಕುತೂಹಲದ ವಿಷಯವಾಗಿದೆ. ಇವರಿಗೆ ತಮ್ಮ ಅಪೇಕ್ಷೆಯ ಗುರಿಯೆಡೆಗೆ
ತುಡಿಯುವ ಹಾಗೆ ಮುಂದೆ ಸಾಗುವ ಜ್ಞಾನದಾಹದ ಅದಮ್ಯ ಉತ್ಸಾಹದ ಜೊತೆಯಲ್ಲೇ ಚೈತನ್ಯದ
ಸಿದ್ಧಿಯೂ ಇರುವುದು ಇಲ್ಲಿ ಸ್ಪಷ್ಟವಿದೆ. ‘ಅರಿವಿನಂಗಳದ ಸುತ್ತ’ ಮತ್ತು ‘ಮನೆಯಂಗಳದಿ
ಹೂ’ ಎನ್ನುವ ಮೊದಲ ಎರಡು ಕೃತಿಗಳ ಶೀರ್ಷಿಗಳೇ ಇವರ ಮುನ್ನೋಟದ ಸುಳುಹುಗಳನ್ನು
ಮೂಡಿಸುತ್ತವೆ. ಜನಪದ ಸಂಸ್ಕೃತಿಯಲ್ಲಿ ಅಧ್ಯಯನ ಮಾಡಬಹುದಾದ ಜನಪದ ಅಂಶ(ಈoಟಞ
Iಣems)ಗಳಿರುತ್ತವೆ. ಅವನ್ನು ಗಮನಿಸಿ ಗುರುತಿಸಿಕೊಳ್ಳುವ ಮನಸ್ಸು ಅಧ್ಯಯನಕಾರರಿಗೆ
ಇರಬೇಕಾಗುತ್ತದೆ. ಹಾಗೆ ನೋಡಿದಾಗ ಗಮನಿಸುವುದು ಮತ್ತು ಗುರುತಿಸುವುದಕ್ಕೆ ಬಹಳಷ್ಟು
ಅಂತರವಿರುತ್ತದೆ. ಸಾಮಾನ್ಯವಾಗಿ ಅಂತಹ ಅಂಶಗಳನ್ನು ಎಲ್ಲರೂ ಗಮನಿಸುತ್ತಾರೆ. ಆದರೆ
ಗುರುತಿಸುವ ಮನಸ್ಸು ಎಲ್ಲರಿಗಿರುವುದಿಲ್ಲ. ಸಂಶೋಧಕನೊಬ್ಬನ ಕಣ್ಣಿಗೆ ಅಂತಹ ಆಂಶವೊಂದು
ಬಿದ್ದಾಗ ಅದು ಅಧ್ಯಯನ ವಸ್ತುವಾಗುತ್ತದೆ. ‘ಮನಸ್ಸಿದ್ದರೆ ಮಾರ್ಗ’ ಎನ್ನುವ ಹಾಗೆ ಇಂತಹ
ಜನಪದ ಅಂಶಗಳು ಸಂಶೋಧಕರಿಗೆ ಅಧ್ಯಯನ ವಸ್ತುಗಳಾಗಿ ಆ ಕುರಿತು ಮತ್ತೆ ಆ ಕಡೆಗೆ ಆಸಕ್ತಿ
ತಳೆದು ಆಯಾ ವಿಷಯಗಳ ಕುರಿತು ಮಾಹಿತಿ ಪಡೆಯುವ ಸಂಗ್ರಹಕಾರ್ಯ ಮೊದಲಾಗುತ್ತದೆ.
‘ಜಾತೆ’ರಯಂತಹ ಸಂದರ್ಭದಲ್ಲಿ ‘ಪಲ್ಲಕಿ’ ಒಂದು ಜನಪದ ಅಂಶವಾದರೆ ‘ಅಡ್ಡಪಲ್ಲಕಿ’
ಎನ್ನುವುದು ಇನ್ನೊಂದು ಜನಪದ ಅಂಶವಾಗುವುದು. ನಮ್ಮನ್ನು ನಾವು ಗಂಭೀರವಾಗಿ
ತೊಡಗಿಸಿಕೊಳ್ಳಬೇಕಾದ್ದೇ ಇಲ್ಲಿ. ಹಾಗಾಗಿ ಡಾ. ಲಕ್ಷ್ಮೀ ವಿ. ಅವರ ಬರವಣಿಗೆಯಲ್ಲಿ
ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಕಾಣಲು ಸಾಧ್ಯವಾಗುತ್ತದೆ. ದಾರಿಯಲ್ಲಿ
ಹೋಗಿಬರುತ್ತಿರಬೇಕಾದರೆ ಗಮನಕ್ಕೆ ಬರುವ ಒಂದು ಕಲ್ಲು ಅವರಿಗೆ ಜನಪದ ಅಂಶವಾಗಿ
ಅಧ್ಯಯನಾಸಕ್ತಿಗೆ ಕಾರಣವಾಗುತ್ತದೆ. ಹಾಗಾಗಿಯೇ ತುಳುವರ ಆರಾಧನೆಯ ಸಾರತ್ತೊಂಜಿ
ದೈವಗಳಿಗೆ(ಸಾವಿರದೊಂದು ದೈವಗಳಿಗೆ) ಹೊಸ ಭಾಷ್ಯ ಬರೆಯಲು ಅರ್ಹತೆಗಳಿಸಿಕೊಂಡಿದ್ದಾರೆ.
ಎ. ಮೇನ್ನರ್(1897) ನೀಡಿರುವ ಭೂತಗಳ ಸಂಖ್ಯೆ: 133. ಡಾ. ಬಿ. ಎ. ವಿವೇಕ ರೈ(1885)
ನೀಡಿರುವ ಸಂಖ್ಯೆ: 274, ಡಾ.ಕೆ. ಚಿನ್ನಪ್ಪ ಗೌಡರು(1990) ನೀಡಿರುವ ಪರಿಷ್ಕೃತ
ಪಟ್ಟಿಯಂತೆ: 360 ರಘುನಾಥ ಎಂ. ವರ್ಕಾಡಿ(2011) ಅವರ ‘ಕಡಂಬಾರ ಮಲ್ರಾಯೆ’ ಕೃತಿಯಲ್ಲಿ
ಪುನಾರಚಿಸಿದ ಹೊಸ ಪಟ್ಟಿಯಲ್ಲಿ 407 ದೈವಗಳನ್ನು ಹೆಸರಿಸಿದ್ದಾರೆ. ಇವೆಲ್ಲವನ್ನೂ ಮೀರಿ
ನಿಲ್ಲುವ ಯಾದಿಯೊಂದು ಡಾ. ಲಕ್ಷ್ಮೀ ವಿ. ಅವರಿಂದ ಸಾಧ್ಯವಾಗಿದೆ. ಇದರ ಸಾಧ್ಯತೆಗೆ ಎರಡು
ಉದಾಹರಣೆಗಳನ್ನು ಅವರ ಮಾಹಿತಿ ಕೋಶದಿಂದಲೇ ಎತ್ತಿಕೊಳ್ಳಬಹುದು. ಈ ಶೋಧಕಿ ಕಂಡುಕೊಂಡ
‘ಉರವ’, ‘ಎರುಬಂಟೆ’, ‘ಅಕ್ಕ ಬೋಳಾಂಗ’, ‘ಅಜ್ಜ ಬಳಯ’ ಮೊದಲಾದ 50ರಷ್ಟು ಅಪೂರ್ವ ಭೂತಗಳು
ಅವರ ಸಾಧನೆಯ ಫಲವಾಗಿವೆ. ಹಾಗೆಯೇ ‘ಕುಕ್ಕೆತ್ತಿ-ಬಳ್ಳು’, ‘ಪರವ ಭೂತ’, ‘ಕನ್ನಡ ಬೀರ’,
‘ಕುಂಡ-ಮಲ್ಲು’, ‘ಕುಲೆಮಾಣಿಗ’, ‘ಅಚ್ಚು ಬಂಗೇತಿ’ ಮೊದಲಾದ 82ರಷ್ಟು ತುಂಡು ಭೂತಗಳು ಈ
ಸಾಧಕಿಯ ಸೇರಿಗೆಯಲ್ಲಿವೆ. ಇದು ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ಪಡಬೇಕಾಗಿಲ್ಲ.
ಬಾಸೆಲ್ ಮಿಶನ್ ಪರಂಪರೆಯ ಬರ್ನೆಲ್, ಮೇನ್ನರ್ಮೊದದಲಾದವರು ತೋರಿಸಿಕೊಟ್ಟ ಹಾದಿಯಿದೆ.
1872, ಮಾರ್ಚ್ ತಿಂಗಳ23ನೆಯ ತಾರಿಕಿನಂದು ತೊಡಗಿ ನಾಲ್ಕು ದಿವಸ ಮಂಗಳೂರಿನ ದೂಮಪ್ಪ
ಎಂಬವರ ಮನೆಯಲ್ಲಿನಡೆದ ಇಲ್ಲೆಚ್ಚಿದ ನೇಮ(ಮನೆಯಲ್ಲಿ ನಡೆಯುವ ವಿಶಿಷ್ಟ
ದೈವಾರಾಧನೆ)ವನ್ನು ನೋಡಿ ಅಧ್ಯಯನ ಮಾಡಿರುವ ಪರಂಪರೆಯದು. ಹಾಗೆ ಎ.ಸಿ ಬರ್ನೆಲ್ ನಡೆಸಿದ
ಅಧ್ಯಯನದ ಫಲವಾಗಿ ಖಿhe ಆeviಟ ತಿoಡಿshiಠಿ oಜಿ ಣhe ಖಿuಟuvಚಿs(ಎ.ಸಿ ಬರ್ನೆಲ್:
1894-1897) ಈ ಸಂಶೋಧನ ಪ್ರಬಂಧ ಮಾಲಿಕೆಯಲ್ಲಿ ಪ್ರಮುಖ ಭೂತಗಳ ಒಂದು ಪಟ್ಟಿಯಿದೆ. ಈ
ಪಟ್ಟಿಯನ್ನು ಸಿದ್ಧಮಾಡಿ ಗ್ರಂಥದಲ್ಲಿ ಸೇರಿಸಿದವರು ಎ. ಮೇನ್ನರ್. ಈ ಪಟ್ಟಿಯಲ್ಲಿ 133
ಭೂತಗಳ ಹೆಸರುಗಳಿವೆ. ಡಾ. ಬಿ. ಎ. ವಿವೇಕ ರೈ(1985) ಅವರ ‘ತುಳು ಜನಪದ ಸಾಹಿತ್ಯ’
ಕೃತಿಯಲ್ಲಿ274(ಪು.35-38) ಭೂತಗಳ ಹೆಸರುಗಳಿವೆ. ಡಾ. ಕೆ. ಚಿನ್ನಪ್ಪ ಗೌಡ
ಕೆ.(1990)ಅವರ ಭೂತಾರಾಧನೆ ಜಾನಪದೀಯ ಅಧ್ಯಯನ ಗ್ರಂಥದಲ್ಲಿ 360 ಭೂತಗಳ ಪರಿಷ್ಕೃತ
ಪಟ್ಟಿಯಿದೆ(ಪು.34-39). ‘ಸಾವಿರದೊಂದು ಭೂತಗಳ ಬೆನ್ನು ಹಿಡಿದಾಗ’ ಎನ್ನುವ ಲೇಖನದಲ್ಲಿ
ರಘುನಾಥ ಎಂ. ವರ್ಕಾಡಿ(2011, ಪು.65-79) ಅವರ ‘ಕಡಂಬಾರ ಮಲ್ರಾಯೆ’ ಕೃತಿಯಲ್ಲಿ 407
ಭೂತಗಳ ಹೆಸರುಗಳು ದಾಖಲಾಗಿವೆ. ಈ ಲೆಕ್ಕಾಚಾರ ತೀರ ಈಚೆಗಿನದು. ನಾನು ನನ್ನ ಜನಪದ
ಸುತ್ತಮುತ್ತ ಕೃತಿಯಲ್ಲಿ ದಾಖಲಿಸಿರುವಂತೆ ಮತ್ತು ಕಂಡುಕೊಂಡಂತೆ
‘ಕಂಡಿಗೆತ್ತಾಯ’(ಬಜ್ಪೆ-ಕೊಳಂಬೆ), ‘ನಡ್ಡೊಡಿತ್ತಾಯ’(ಕಾರಿಂಜೆ), ‘ಮುಕುಡಿತ್ತಾಯಿ’ ಈ
ಮೂರು ಭೂತಗಳ ಹೆಸರುಗಳು ಈಗಾಗಲೇ ಮಾಡಿರುವ ಪಟ್ಟಿಯಲ್ಲಿ ಇಲ್ಲ. ಹಾಗಾಗಿ ಅವು ಸೇರಿದಾಗ:
407+3=410 ಭೂತಗಳ ಲೆಕ್ಕ ಸಿಗುತ್ತದೆ. ತುಳುವರು ಸಾವಿರದೊಂದು(ಸಾರತ್ತೊಂಜಿ)
ಭೂತಗಳನ್ನು ನಂಬಿಕೊಂಡು ಬಂದ ಪರಂಪರೆಯವರು. ಇಲ್ಲೀಗ 133 ಭೂತಗಳ ಈ ಸಂಖ್ಯೆ
ಹೆಚ್ಚಾಗುತ್ತಿರುವುದೆಂದರೆ ಭೂತಗಳ ಸಂತಾನ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಒಂದಾನೊಂದು
ಕಾಲದಲ್ಲಿ ಸಾವಿರದೊಂದು ದೈವಗಳನ್ನು ನಂಬಿಕೊಂಡು ಬರುತಿದ್ದರೂ ಕಾಲಕ್ರಮೇಣ ಈ ನಂಬಿಕೆ
ಸಡಿಲಾಗಿ ಅವುಗಳ ಸಂಖ್ಯೆ ಜನಮಾನಸದ ನೆನಪಿನಲ್ಲಿ ಕಡಿಮೆಯಾಗಿರಬಹುದು. ಅಧ್ಯಯನ ಮತ್ತು
ಸಂಶೋಧನೆಗಳಿಂದಾಗಿ ಅವುಗಳ ಹೆಸರುಗಳು ಮತ್ತೆ ಬೆಳಕಿಗೆ ಬಂದುವು. ಹಾಗೆ ಇದೀಗ ಡಾ.
ಲಕ್ಷ್ಮೀ ವಿ. ಅವರ ಈ ಸ್ವರೂಪದ ಶೋಧನೆಯಿಂದಾಗಿ 132 ದೈವಗಳು ನಮ್ಮ ತಿಳುವಳಿಕೆಯ ಮಜಲಿಗೆ
ಬಂದಿವೆ. ಆಗ 410+132=542 ಎಂದಾಗುವುದು. ಇನ್ನು ಮುಂದೆ ಅವುಗಳ ಲೆಕ್ಕಕೊಡುವಾಗ
542ಕ್ಕಿಂತ ಕುಂದು ಬರಬಾರದು. ಶೋಧನೆಗೆ ಇನ್ನೂ ಎಡೆಯಿದೆ. ಸಾವಿರದೊಂದು ಗುರಿಯೆಡೆಗೆ
ಸಾಗುವ ಹಾದಿಯಿದೆ. ‘ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ
ಅಧ್ಯಯನ’ ವಿಷಯದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದ ತಮ್ಮ ಸಂಪ್ರಬಂಧವನ್ನು
ಪರಿಷ್ಕರಿಸಿ ಪ್ರಕಟಿಸಿರುವ ಡಾ. ಲಕ್ಷ್ಮೀ ವಿ. ಅವರನ್ನು ನಾನು ಹಾರ್ದಿಕವಾಗಿ
ಅಭಿನಂದಿಸುತ್ತಿದ್ದೇನೆ. ಡಾ. ವಾಮನ ನಂದಾವರ, ಮಂಗಳೂರು,
http://laxmipras.blogspot.in/2014/02/blog-post_2591.html
ನನ್ನ ಬಗ್ಗೆ ...ವಿ ಕೆ ಕಡಬ ಹಾಕಿರುವ ಲೇಖನ
ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿಳೆಮಾತ್ರವಲ್ಲ ಮೊದಲ ವ್ಯಕ್ತಿ ಕೂಡ-ಡಾ.ಲಕ್ಷ್ಮೀ ಜಿ ಪ್ರಸಾದ
sampada.in
Submitted by VK KADABA on May 22, 2015 - 1:59pm
ಹೆಣ್ಣು
ತನ್ನ ಕುಟು೦ಬದ ವ್ಯಾಪ್ತಿಯಲ್ಲಿ ತನ್ನ ಸ್ವತತ್ರ ಬದುಕಿಗಾಗಿ ಪ್ರಶ್ನೆ ಮಾಡಿದಾಗ ಒ೦ದು
ಹೊಸ ಬದುಕಿನ ದಾರಿ ತೆರೆದು ಕೊಳ್ಳುತ್ತದೆ.ನಮ್ಮ ಮನೆಯ ಆವರಣದಲ್ಲೇ ಹೆಣ್ಣಿಗೆ ಅನೇಕ
ಜವಾಬ್ದಾರಿ ಗಳ ಜೊತೆಗೆ ಮನೆ ಕೆಲಸಕ್ಕೆ ಸೀಮಿತಗೊಲ್ಲಬೇಕೆ೦ಬ ಬಯಕೆ ಹೆತ್ತವರದು.ಇ೦ಥ
ವಿಚಾರಗಳ ನಡುವೆ ಸಮಾಜದಲ್ಲಿನ ಕೆಲವು ಕಟ್ಟು ಪಾಡುಗಳನ್ನು ದಾಟಿ ಮು೦ದೆ ಬ೦ದವರಲ್ಲಿ
ಲಕ್ಷ್ಮೀ ಜಿ ಪ್ರಸಾದರು ಒಬ್ಬರು. “ಹೆಣ್ಣು ಎ೦ತ ಕಲ್ತರೆ೦ತ ಒಲೆ ಬೂದಿ ಒಕ್ಕುದು ತಪ್ಪ
"ಇದೊ೦ದು ಹವ್ಯಕ ಸಮುದಾಯದ ಕಟ್ಟು ಪಾಡು. ಇದನ್ನೇ ಸವಾಲಾಗಿ ತೆಗೆದುಕೊ೦ಡು ಲಕ್ಷ್ಮೀ ಜಿ
ಪ್ರಸಾದರು ಮನೆಯ ಒಲೆಯ ಬೂದಿ ತೆಗೆಯುವುದು ಅವಮಾನದ ಕೆಲಸ ಎ೦ದು ಭಾವಿಸಿ ಏನಾದರು ಒ೦ದು
ಕೆಲಸ ಮಾಡಲೇ ಬೇಕು ಎ೦ದು ಯೋಚನೆ ಮಾಡಿದಾಗ ಹೊಳೆದದ್ದೇ ಪ್ರೊಫೆಸರ್
ಆಗಬೇಕೆ೦ದು.ಅದಕ್ಕಾಗಿ ಬಿ.ಎಸ್ಸಿ ಡಿಗ್ರಿ ಮಾಡಿದರು.ಆದ್ರೆ ವಿಜ್ಞಾನದ ಪಾಠ ಗಳು ಅವರಿಗೆ
ಹಿಡಿಸಲಿಲ್ಲ. ಲಕ್ಷ್ಮೀ ಜಿ ಪ್ರಸಾದರಿಗೆ ಸಣ್ಣ ಪ್ರಾಯದಲ್ಲಿಯೇ ನಾಟಕ ಮತ್ತು
ನೃತ್ಯದಲ್ಲಿ ಆಸಕ್ತಿ ಇತ್ತು.ತಾನು ಮಾಡಿದ ಬಿ.ಎಸ್ಸಿ ಡಿಗ್ರಿ ತಮ್ಮ ದಾರಿಗೆ ಸೂಕ್ತವಲ್ಲ
ಎಂದು ಭಾವಿಸಿದಾಗ ತಮ್ಮ ಪತಿ ಗೋವಿ೦ದ ಪ್ರಸಾದರು ಎಂ.ಎ ಮಾಡುವಂತೆ ಸೂಚಿಸಿದರು . ಮೊದಲ
ರಾಂಕಿನೊಂದಿಗೆ ಸ೦ಸ್ಕೃತ ದಲ್ಲಿ ಎ೦. ಎ ಮುಗಿಸಿದರು .ನಂತರ ಹಿಂದಿ ಎಂ ಎ ಪದವಿ ಪಡೆದರು
ನಂತರ ಕನ್ನಡ ಎಂಎ ಪದವಿಯನ್ನು ನಾಲ್ಕನೇ ರಾಂಕಿನೊಂದಿಗೆ ಪಡೆದರು ಹೀಗೆ ಮೂರು ಎ೦. ಎ
ಪದವಿಗಳನ್ನು ಪಡೆದರು
ಕನ್ನಡದಲ್ಲಿ ಇವರಿಗೆ ಜಾನಪದ ಸಾಹಿತ್ಯ ಇಷ್ಟ
ಆಯ್ತು.ನ೦ತರ ಬೆ೦ಗಳೂರಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ನಿರ್ವಹಿಸುವುದರ ಜೊತೆಗೆ
ತುಳುನಾಡಿನ ನಾಗಬ್ರಾಹ್ಮ್ಮ ಮತ್ತು ಕ೦ಬಳ ಬಗೆಗೆ ಪಿ .ಎಚ್ .ಡಿ ಯನ್ನು ಪಡೆದರು.ಇವರ
ಜ್ನಾನ ದಾಹ ಎರಡನೆಯ ಪಿಎಚ್ ಡಿ ಪದವಿ ಪಡೆಯಲು ಪ್ರೇರೇಪಣೆ ನಿಡಿತು ಹಾಗಾಗಿಯೇ ಇವರು
ಪಾಡ್ಡನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ ಎಂಬ ಸಂಶೋಧನಾ ಮಹಾ ಪ್ರಬಂಧ ರಚಿಸಿ
ಕುಪ್ಪಂ ನ ದ್ರಾವಿಡ ವಿಶ್ವವಿದ್ಯಾಲಯ ಕ್ಕೆ ಸಲ್ಲಿಸಿ ಎರಡನೆಯ ಡಾಕ್ಟರೇಟ್ ಪಡೆದರು ತುಳು
ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ ಎರಡು ಡಾಕ್ಟರೇಟ್ ಪಡೆದ ಪ್ರಥಮ ವ್ಯಕ್ತಿ ಎಂಬ
ದಾಖಲೆಯನ್ನು ಹೊಂದಿದರು
ಪ್ರಸ್ತುತ ಇವರು ಬೆಂಗಳುರಿನ ನೆಲಮಂಗಲದ
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೀವೆಸಲ್ಲಿಸುತ್ತಿದ್ದಾರೆ
. ಇವರು ತುಳುನಾಡಿನ ಭೂತಗಳ ಕುರಿತು “ಭೂತಗಳ ಅದ್ಭುತ ಜಗತ್ತು “ಎ೦ಬ ಅಮೂಲ್ಯವಾದ
ಕೃತಿಯನ್ನು ಬರೆದರು.ಮು೦ದೆ ಇದೇ ಹೆಸರಿನಲ್ಲಿ ಒ೦ದು ಬ್ಲಾಗನ್ನು ತೆರೆದರು.ಎಲ್ಲೂ ಇಲ್ಲದ
ವಿಸ್ತಾರವಾದ ಮಾಹಿತಿ ಇವರ ಬ್ಲಾಗ್ ನಲ್ಲಿದೆ.ಇವರ ಬ್ಲಾಗ್ ವಿಳಾಸ :-ಭೂತಗಳ ಅದ್ಭುತ
ಜಗತ್ತು (link is external) ನಾನ್ನುರಕ್ಕೂ ಹೆಚ್ಚು ಈ ತನಕ ಅದ್ಯಯನವಾಗದ ದೈವಗಳ
ಬಗ್ಗೆ ತುಳುನಾಡಿನ ಸಂಸ್ಕೃತಿ ಬಗ್ಗೆ ಇದರಲ್ಲಿ ಮಾಹಿತಿಯನ್ನು ನೀಡಿದ್ದಾನೆ ಒಂದೂವರೆ
ಲಕ್ಷಕ್ಕಿಂತ ಹೆಚ್ಚು ಮಂದಿ ಓದುಗರಿದ್ದಾರೆ ಅಕ್ಕಚ್ಚು ,ಅಚ್ಚು ಬಂಗೇತಿ,ಅಕ್ಕಮ್ಮ
ದೈಯಾರ್ ,ಅಂಬೆರ್ಲು ಅಕ್ಕೆರ್ಲು ,ಕನ್ನಡ ಬೀರ ,ಕನ್ನಡ ಭೂತ,ಕಪ್ಪಣ್ಣ ಸ್ವಾಮಿ,
ಬೆಲೆಟೆಂಗರಜ್ಜ,ತಂಗಡಿ ,ದಾರು,ಕುಂದಯ,ಮಲ್ಯಾಳ ಭಟ್ರು,ಬಟ್ಟಿ ಭೂತ,ನೆಲ್ಲೂರಾಯ ಒರು
ಬಾಣಿಯೆತ್ತಿ,ಭಟ್ಟ ಭೂತ,ಕಚ್ಚೆ ಭಟ್ಟ,ಕಾನಲ್ತಾಯ,ಕೊಲ್ಲಿ ಕುಮಾರ
,ಬವನೊ,ಜತ್ತಿಂಗ,ಜಟ್ಟಿಗ, ಜಾಲ್ಸೂರಾಯ,ಮಾಲಿಂಗರಾಯ,ಹಳ್ಳತ್ತಾಯ,ದುಗಲಾಯ,ಉಮ್ಮು ಬೋವ
ಉಮ್ಮಣ ಬೋವ ,ಜೊಗಿ ಪುರುಷ,ಕಾಂಬೊಡಿಯ ಪುರ್ಸ ದೈವ,ಉಗ್ಗೆದಲ್ತಾಯ ,ಬಚ್ಚನಾಯಕ
ಬೈಸುನಾಯಕ,ಅಜ್ಜಿ ಭೂತ,ಸಬ್ಬಡ್ತೆರ್,ನಾರಳತ್ತಾಯ,ನೇರಳತ್ತಾಯ,ನೈದಾಲ ಪಾಂಡಿ,ಅರಬ್ಬಿ
ಭೂತ, ಬ್ರಾಹ್ಮಣತಿ,ಮುಂಡೆ ಬ್ರಾಂದಿ,ಓಪೆತ್ತಿ ಮದಿಮಾಲ್,ಮುಸ್ಲಿಮರ ಮಕ್ಕಳು,ಜೋಕುಳು
ದೈವೊಳು,ಕುಂಜೂರಾಂಗಾರ ,ಕುರವ,ಕುಂಟಲ್ದಾಯ,ಹಸರ ತಿಮ್ಮ,ತಿಮ್ಮಣ್ಣ ನಾಯಕ,ಪಾಪೆಲು
ಚಾಮುಂಡಿ, ನಾಗ ಚಾಮುಂಡಿ, ಬೊಟ್ಟಿ ಭೂತ,ಮೂವ,ಅಗ್ನಿ ಚಾಮುಂಡಿ ಗುಳಿಗ ,ಕಾನದ,ಕಟದ,,ದೀಪದ
ಮಾಣಿ,ಮಾಪುಳೆ ಮಾಪುಳ್ತಿ ,ಮಾಪಿಳ್ಲೆ,ಮಾಪುಲ್ಚಿ,ಮಾಪುಲ್ತಿ ಧೂಮಾವತಿ,ಕುರೆ
ಪೆರ್ಗಡೆ,ಉರವ,ಎರು ಬಂಟ,ಅಡ್ಯಂತಾಯ,ಅಡ್ಯಲಾಯ,ಅಕ್ಕ ಬೋಳಾರಿಗೆ,ಮದನಕ್ಕೆ ದೈಯಾರ್,ನಾರಾಯಣ
ಮಾಣಿಲು,ಆಲಿ ಭೂತ, ಅಡಿಮಣಿತ್ತಾಯ,ಮಂಡೆಕರ ಕಲ್ಲುರ್ಟಿ,ಅಬ್ಬೆ
ಜಲಾಯ,ಶಿರಾಡಿ,ರುದ್ರಾಂಡಿ,ಪುದ,ಪುದತ್ತಾಳ,ಉಮ್ಮಳ್ತಿ,ಉಮ್ಮಚ್ಚಿ,ಐಸಾಬಿ,ಅಜ್ಜೆರ್
,ಅಜ್ಜೆರ್ ಭಟ್ಟೆರ್,ಪೊಲೀಸ್ ಭೂತ, ಸೇನವ ಪಟೇಲ ದೈವಗಳು ಕಳುವೆ/ಕಳ್ಳ ಭೂತ,ಗುರಿಕ್ಕಾರ
,ಮೊದಲಾದ ಈ ಹಿಂದೆ ಎಲ್ಲೂ ಹೆಸರು ಕೂಡ ದಾಖಲಾಗದ ಮುನ್ನೂರಕ್ಕೂ ಹೆಚ್ಚಿನ ದೈವಗಳ ಬಗ್ಗೆ
ಅಧ್ಯಯನ ಮಾಡಿ ಮಾಹಿತಿಯನ್ನು ನೀಡಿದ್ದಾರೆ ,ಸಾವಿರದ ಇನ್ನೂರ ಇಪ್ಪತ್ತೈದಕ್ಕೂ ಹೆಚ್ಚಿನ
ತುಳುನಾಡಿನ ದೈವ ಗಳ ಹೆಸರನ್ನು ಸಂಗ್ರಹಿಸಿ ನೀಡಿದ್ದಾರೆ ನಾಗ ಬ್ರಹ್ಮ ಆರಾಧನೆ ಬಗ್ಗೆ
ಸಮಗ್ರ ಮಾಹಿತಿ ಇವರಲ್ಲಿದೆ .ಅನೇಕ ಇತಿಹಾಸ ಕ್ಕೆ ಸಂಬಂಧಿಸಿದ ಸಂಶೋಧನೆ ಗಳನ್ನು
ಮಾಡಿದ್ದಾರೆ
ಸಂಶೋಧನೆ ಯಲ್ಲದೆ ಶಿಕ್ಷಣ ತಜ್ಞ ರಾಗಿಯೂ ಗುರುತಿಸಿಕೊಂಡಿರುವ
ಲಕ್ಷ್ಮೀ ಯವರ ಅನೇಕ ಶೈಕ್ಷಣಿಕ ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ
.ಜೊತೆಗೆ ಉತ್ತಮ ಶಿಕ್ಷಕಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಇವರನ್ನು ಹೊಟ್ಟೆ
ಕಿಚ್ಚಿನಿಂದ ಕಾಲೆಳೆದು ಅವಮಾನಿಸಿದವರೂ ಇದ್ದಾರೆ ,ಕೆಲಸ ಮಾಡುವಲ್ಲಿ ಇವರಿಗೆ ಬೆಂಬಲದ
ಬದಲು ಕಿರುಕುಳ ವನ್ನೂ ನೀಡಿದ್ದಾರೆ. ಇವೆಲ್ಲದರ ನಡುವೆಯೂ ತುಳುನಾಡಿನ ಸಾವಿರದೊಂದು
ದೈವಗಳ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿ ತಮ್ಮ ಭೂತಗಳ ಅದ್ಭುತ ಜಗತ್ತು ಬ್ಲಾಗ್ ನಲ್ಲಿ
ಹಾಕಿ ಎಲ್ಲರಿಗೆ ಹಂಚುವ ಕನಸನ್ನು ಹೊಂದಿದ್ದಾರೆ .ಒಂದು ತುಳು ಅದ್ಯಯನ ಕೇಂದ್ರ ವನ್ನು
ಸ್ಥಾಪಿಸುವ ಮೂಲಕ ತುಳು ಭಾಷೆ ಸಂಸ್ಕೃತಿ ಅಧ್ಯಯನಕ್ಕೆ ಒಂದು ಬಲವಾದ ಗಳ ಕಾಯ
ಹಾಕಬೇಕೆಂಬ ಹಂಬಲವೂ ಇವರಿಗಿದೆ
ಡಾ.
ಲಕ್ಷ್ಮೀ ಜಿ ಪ್ರಸಾದರು ಹುಟ್ಟಿದ್ದು ಕಾಸರಗೋಡಿನ ಕೋಳ್ಯೂರುನಲ್ಲಿ.ಇವರ ತಾಯಿಯ ಹೆಸರು
ವಾರಣಾಸಿ ಶ್ರೀ ಮತಿ ಸರಸ್ವತಿ ಅಮ್ಮ .ತ೦ದೆ ವೇ.ಮೂ ದಿ. ನಾರಾಯಣ .ಭಟ್ ವಾರಣಾಸಿ ಇವರ
ಪತಿಯ ಹೆಸರು ಗೋವಿ೦ದ ಪ್ರಸಾದ ಮಗ ಅರವಿ೦ದ.ಇವರ ಮೂಲ ಹೆಸರು( ಡಾ. ಲಕ್ಷ್ಮೀ ವಿ).
ಸುಬ್ಬಿ
ಇ೦ಗ್ಲಿಷು ಕಲ್ತದ್ದು ಇವರು ಹವಿಗನ್ನಡದಲ್ಲಿ ರಚಿಸಿದ ನಾಟಕ ಇದು ಮಹಿಳೆ ರಚಿಸಿದ ಮೊದಲ
ಹವಿಗನ್ನಡ ನಾಟಕವಾಗಿದ್ದು ಹವಿಗನ್ನಡದ ಮೊದಲ ನಾಟಕಗಾರ್ತಿ ಎಂಬ ಹೆಗ್ಗಳಿಕೆಯನ್ನು
ಲಕ್ಷ್ಮಿಯವರು ಪಡೆ್ಇದ್ದಾರೆ ಹವ್ಯಕ ಅಧ್ಯಯನ ಕೇ೦ದ್ರದ ಪ್ರಧಾನ ನಿರ್ದೇಶಕರಾದ ಶ್ರೀ
ನಾರಾಯಣ ಶಾನುಭಾಗರು ಇವರ ನಾಟಕದ ಹಸ್ತ ಪ್ರತಿಯನ್ನು ಸ೦ಗ್ರಹಿಸಿದರು.
ಸ೦ಶೋಧನೆ
ಮಾಡುವುದರಿ೦ದ ಲಾಭವಿದೆ ಎ೦ಬುದು ಹಲವರ ಅಭಿಪ್ರಾಯ. ಆದ್ರೆ ಇದರಿ೦ದ ನಷ್ಟ
ಆಗಿರುವುದನ್ನು ಇವರು ಗಟ್ಟಿಧ್ವನಿಯಲ್ಲಿ ಹೇಳುತ್ತಾರೆ.ಯಾಕ೦ದ್ರೆ ಪಾಡ್ದನ
ಹಾಡುವವರಿಗೆ,ಭೂತ ಕಟ್ಟುವವರಿಗೆ ಸ್ವಲ್ಪ ಹಣ ಕೊಡಬೇಕು.ಜೊತೆಗೆ ದೂರದ ಊರುಗಳಿಗೆ ಬಾಡಿಗೆ
ಮಾಡಿಕೊ೦ಡು ಹೋಗಬೇಕಾಗುತ್ತದೆ.ನಷ್ಟಗಿ೦ತಲೂ ಆಸಕ್ತಿ ಮುಖ್ಯವೆನ್ನುತ್ತಾರೆ.ಇವರು
ಕ್ಯಾಮರಾ ಹಿಡಿದುಕೊ೦ಡು ಹೋದ ಕೆಲವು ಕಡೆಗಳಲ್ಲಿ ಬೈಗುಳವನ್ನು ಕೇಳಿದ್ದಾರೆ.ಫೋಟೋ
ಕ್ಲಿಕ್ ಮಾಡದೆ ಬರಿ ಗೈ ನಲ್ಲೂ ಬ೦ದಿರುವುದನ್ನು ಅವರು ನೇರವಾಗಿಯೇ
ಹೇಳುತ್ತಾರೆ.ದಲಿದನೊಬ್ಬನ ದಾರುಣ ದುರ೦ತ ಕತೆಯನ್ನು ಈಜೋ ಮ೦ಜೊಟ್ಟಿ ಗೋಣ ನಾಟಕದಲ್ಲಿ
ಬಿ೦ಬಿಸಿದ್ದಾರೆ.ಸದಾ ಹೊಸತನದ ವಿಚಾರಗಳನ್ನು ಬರೆಯುತ್ತಲೇ ಇರುತ್ತಾರೆ.ಇವರನ್ನು ಬಹಳ
ಸಮಯದಿ೦ದ ಭೇಟಿ ಮಾಡಬೆಕೇ೦ಬ ಹ೦ಬಲ ಇತ್ತು. ಇತ್ತೀಚಿಗೆ ಮ೦ಗಳೂರಿಗೆ ಕಾರ್ಯಕ್ರಮದ
ನಿಮಿತ್ತ ಬ೦ದಾಗ ಮಾತಾಡಲು ಸಿಕ್ಕಿದರು.
ಇವರ ವಿವರ ಸಾಧನೆಗಳ ಪಟ್ಟಿ ನೋಡಿದರೆ
ಯಾರಿಗಾದರೂ ಆಶ್ಚರ್ಯ ಅಗುತ್ತದೆ ನಮ್ಮೊಂದಿಗೆ ಇಷ್ಟು ಸರಳ ಸಜ್ಜನಿಕೆಯ ಹೆಣ್ಣು
ಮಗಳೊಬ್ಬಳು ಇಂಥ ಸಾಧನೆಯ ಶಿಖರವನ್ನು ಹೇಗೆ ಏರಿದರು ? ಅವರ ಛಲ ಪ್ರತಿಭೆ ಪರಿಶ್ರಮಕ್ಕೆ
ಅವರು ಗಳಿಸಿದ ಪದವಿಗಳು ಹಾಗೂ ಬರೆಹಗಳು ಸಾಕ್ಷಿಯಾಗಿ ಅಚ್ಚರಿ ಮೂಡಿಸಿವೆ ಅವರ
ಸಾದನೆಯನ್ನು ಹೀಗೆ ಪಟ್ಟಿ ಮಾಡಿದ್ದೇನೆ
1 ಹೆಸರು: ಡಾ ಲಕ್ಷ್ಮೀ ವಿ [ಡಾ.ಲಕ್ಷ್ಮೀ ಜಿ ಪ್ರಸಾದ]
2 ಜನ್ಮ ದಿನಾಂಕ:29-10-1972
3 ಜನ್ಮ ಸ್ಥಳ: ಕೋಳ್ಯೂರು, ಕಾಸರಗೋಡು ಜಿಲ್ಲೆ
4 ಗಂಡನ ಹೆಸರು: ಗೋವಿಂದ ಪ್ರಸಾದ
5 ವೃತ್ತಿ: ಕನ್ನಡ ಉಪನ್ಯಾಸಕಿ
ಸರಕಾರಿ ಪದವಿ ಪೂರ್ವ ಕಾಲೇಜು
ನೆಲಮಂಗಲ,ಬೆಂಗಳೂರು ಗ್ರಾಮಾಂತರ ಜಿಲ್ಲೆ
6 ವೃತ್ತಿ ಅನುಭವ:17 ವರ್ಷ
7 ದೂರವಾಣಿ; 94805166845
Email samagramahithi@gmail.com
Blogs http://laxmipras.blogspot.com
Blog2 http://shikshanaloka.blogspot.com
Blog3 http://laxmihavyaka.blogspot.com
8 ವಿಳಾಸ ನಂ -೫ ನಂದನ ತೋಟ ಮನೆ ಮಂಗನ ಹಳ್ಳಿ ಕ್ರಾಸ್ ,ಉಲ್ಲಾಳು ಮುಖ್ಯ ರಸ್ತೆ ,ಜ್ಞಾನ ಭಾರತಿ ಅಂಚೆ ,ಬೆಂಗಳೂರು
9 ಶೈಕ್ಷಣಿಕ ಅರ್ಹತೆಗಳು;
1 ಬಿಎ.ಸ್ಸಿಳ-ಎಸ್ ಡಿಎಮ್ ಕಾಲೇಜು ಉಜಿರೆ
2 ಎಂ.ಎ[ಕನ್ನಡ] ನಾಲ್ಕನೇ ರಾಂಕ್ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ
3 ಎಂ.ಎ[ಸಂಸ್ಕøತ] ಪ್ರಥಮ ರಾಂಕ್ ಮಂಗಳೂರು ವಿಶ್ವ ವಿದ್ಯಾಲಯ
4 ಎಂಎ[ಹಿಂದಿ] ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ
5 ಎಂ.ಫಿಲ್[ವಿಷಯ:ಈಜೋ ಮಂಜೊಟ್ಟಿ ಗೋಣ-ಒಂದು -ವಿಶ್ಲೇಷಣಾತ್ಮಕ ಅಧ್ಯಯನ]ವಿ ಎಮ್ ಯುನಿವರ್ಸಿಟಿ
6 ಪಿಹೆಚ್.ಡಿ[ವಿಷಯ:ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ)ಹಂಪಿ ಕನ್ನಡ ವಿಶ್ವ ವಿದ್ಯಾಲಯ
7 ಎರಡನೆಯ ಪಿಹೆಚ್.ಡಿ ವಿಷಯ (ಪಾಡ್ದನಗಳಲ್ಲಿ ತುಳುವ ಸಂಸ್ಕøತಿಯ ಅಭಿವ್ಯಕ್ತಿ’ )ದ್ರಾವಿಡ ವಿಶ್ವ ವಿದ್ಯಾಲಯ
8 .ಎನ್.ಇ.ಟಿ-ಯುಜಿಸಿ
9 ಕರ್ನಾಟಕ ಶಾಸನ ಮತ್ತು ಲಿಪಿ ಶಾಸ್ತ್ರ ಡಿಪ್ಲೋಮಾ ಮೊದಲ ರಾಂಕ್
10 ಬಿ ಎಡ್ (ವಿಶಿಷ್ಟ ಶ್ರೇಣಿ )
ಪ್ರಕಟಿತ ಜಾನಪದ ಸಂಶೋಧನಾ ಕೃತಿಗಳು :21
ಪ್ರಕಟಿತ ಲೇಖನಗಳು =200 ಕ್ಕೂ ಹೆಚ್ಚು
ರಾಷ್ಟ್ರೀಯ /ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ,ರಾಜ್ಯ /ಪ್ರಾದೇಶಿಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ=105
ಕನ್ನಡ ,ತುಳು ,ಹಿಂದಿ ,ಇಂಗ್ಲಿಷ್ ,ಸಂಸ್ಕ್ರತ ,ಮಲಯಾಳ ,ಹವಿಗನ್ನಡ ,ಗೌಡ ಕನ್ನಡ ಹೀಗೆ ಒಟ್ಟು ೮ ಭಾಷೆಗಳ ತಿಳುವಳಿಕೆ
ಪ್ರಶಸ್ತಿ-ಪುರಸ್ಕಾರಗಳು
1 .ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಮಹಿಳಾ ರತ್ನ
2 .ಕರ್ನಾಟಕ ಭೂಷಣ
3.ಕಲಾ ಜ್ಯೋತಿ
4.ತುಳುವೆರೆ ಆಯನೋ 2009[ಸಂಶೋಧನಾ ವಿಭಾಗ]
5.ಕಾವ್ಯಶ್ರೀ ಪುರಸ್ಕಾರ[ಕಥಾ ವಿಭಾಗ]
6 Outstanding teacher award -2013
7ರಾಜ್ಯ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ -2015
8 ಪರಮೇಶ್ವರ ಪುಲಕೇಶಿ ಪ್ರಶಸ್ತಿ -2015
9 ಕರ್ನಾಟಕ ಜಾನಪದ ರತ್ನ -2014
10 ಹವಿಗನ್ನಡದ ಮೊದಲ ನಾಟಕಗಾರ್ತಿ ಎಂಬ ಚಾರಿತ್ರಿಕ ದಾಖಲೆ
ಸುಮಾರು 70-80 ಅಂತರಾಷ್ಟ್ರೀಯ ರಾಷ್ಟ್ರೀಯ ವಿಚಾರ ಸಂಕಿರಣ ಗಳಲ್ಲಿ ಸಂಶೋಧನಾ
ಪ್ರಬಂಧ ಮಂಡಿಸಿ ವಿದ್ವತ್ ಮನ್ನಣೆ ಗಳಿಸಿದ್ದಾರೆ ಪ್ರಕಟಿತ ಸಾಹಿತ್ಯಿಕ ಹಾಗೂ ಜಾನಪದ
ಸಂಶೋಧನಾ ಕೃತಿಗಳು
1
ತುಂಡು ಭೂತಗಳು-ಒಂದು ಅಧ್ಯಯನ
ಮಾತೃಶ್ರೀ ಪ್ರಕಾಶನ ಬೆಂಗಳೂರು
978-81-920519-0-1
2
ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು
ಹೇಮಾಂಶು ಪ್ರಕಾಶನ ಮಂಗಳೂರು
81-86670-73
3
ಬೆಳಕಿನೆಡೆಗೆ
ಮಾತೃಶ್ರೀ ಪ್ರಕಾಶನ ಬೆಂಗಳೂರು
978-81-920519-5-6
4
ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು
ಮಾತೃಶ್ರೀ ಪ್ರಕಾಶನ ಬೆಂಗಳೂರು
978-81-920519-2-5
5
ತುಳು ಪಾಡ್ದನಗಳಲ್ಲಿ ಸ್ತ್ರೀ
ಮಾತೃಶ್ರೀ ಪ್ರಕಾಶನ ಬೆಂಗಳೂರು
978-81-920519-4-9
6
ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು
ಮಾತೃಶ್ರೀ ಪ್ರಕಾಶನ ಬೆಂಗಳೂರು
978-81-920519-1-8
7
ತುಳು ಜನಪದ ಕವಿತೆಗಳು
ಮಾತೃಶ್ರೀ ಪ್ರಕಾಶನ ಬೆಂಗಳೂರು
978-81-920519-6-3
8
ಪಾಡ್ದನ ಸಂಪುಟ
ಮಾತೃಶ್ರೀ ಪ್ರಕಾಶನ ಬೆಂಗಳೂರು
978-81-920519-3-2
9
ಕಂಬಳ ಕೋರಿ ನೇಮ
ಮಾತೃಶ್ರೀ ಪ್ರಕಾಶನ ಬೆಂಗಳೂರು
978-81-920519-7-6
10
ತುಳು ನಾಡಿನ ಅಪೂರ್ವ ಭೂತಗಳು
ಮಾತೃಶ್ರೀ ಪ್ರಕಾಶನ ಬೆಂಗಳೂರು
978-81-920519-8-7
11
ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಪಾಡ್ದನಗಳು
ಮಾತೃಶ್ರೀ ಪ್ರಕಾಶನ ಬೆಂಗಳೂರು
978-81-920519-9-4
12
ದೈವಿಕ ಕಂಬಳ ಕೋಣ
ಹರೀಶ ಎಂಟರ್ಪ್ರೈಸಸ್ ಬೆಂಗಳೂರ
13
ಅರಿವಿನಂಗಳದ ಸುತ್ತ
ಮಾತೃಶ್ರೀ ಪ್ರಕಾಶನ ಬೆಂಗಳೂರು
14
ಮನೆಯಂಗಳದಿ ಹೂ
ಮಾತೃಶ್ರೀ ಪ್ರಕಾಶನ ಬೆಂಗಳೂರು
15 ನಾಗ ಬ್ರಹ್ಮ ಆರಾಧನೆ –ಒಂದು ವಿಶ್ಲೇಷಣಾತ್ಮಕ ಅಧ್ಯಯನ
16 ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು
17 ಭೂತಗಳ ಅದ್ಭುತ ಜಗತ್ತು
18 ಬಸ್ತರ್ ಜಾನಪದ ಸಾಹಿತ್ಯ(ಅಚ್ಚಿನಲ್ಲಿ )
19 ಶಾರದಾ ಜಿ ಬಂಗೇರರ ಮೌಖಿಕ ಜಾನಪದ
20 ಬಂಗಲೆ ಗುಡ್ಡ ಸಣ್ಣಕ್ಕ ನ ಮೌಖಿಕ ಜಾನಪದ
21 ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು
22 ದೇವೆರೆ ದಾಸಿಮಯ್ಯೆರೆ ವಚನೊಳು (ಅಚ್ಚಿನಲ್ಲಿದೆ)
ಪ್ರಕಟಿತ ಸಂಶೋಧನಾ ಲೇಖನಗಳು -ವಿದ್ವತ್ ಪತ್ರಿಕೆಗಳು
1
.ತುಳು ಪಾಡ್ದನಗಳಲ್ಲಿ ಸ್ತ್ರೀ
ಸಾಧನೆ ಬೆಂಗಳೂರು ವಿಶ್ವ ವಿದ್ಯಾಲಯ
ಜುಲೈ-ಡಿಸೆಂಬರ್2009
2
ಕನ್ನಡ ಮತ್ತು ತುಳು ಭಾಷಾ ಸಾದೃಶ್ಯಗಳು ಕರ್ನ್ನಾಟಕ ಲೋಚನ ಬಿಎಂ ಶ್ರೀ ಪ್ರತಿಷ್ಠಾನಜನವರಿಡಸೆಂಬರ್2010
3
ತುಳು ನಾಡಿನ ನಾಗ ಕೋಲ
ಕರ್ನ್ನಾಟಕ ಲೋಚನ ಬಿಎಂ ಶ್ರೀ ಪ್ರತಿಷ್ಠಾನ
4
ಕೆರೆಗೆ ಹಾರ ಹುಳಿಯಾರಿನ ಕೆಂಚವ್ವ ಮತ್ತು ಬಾಲೆ ಮಾಡೆದಿ ಪಾಡ್ದನ
ಕರ್ನ್ನಾಟಕ ಲೋಚನ ಬಿಎಂ ಶ್ರೀ ಪ್ರತಿಷ್ಠಾನ
5
ಕುಲೆ ಭೂತಗಳು
ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯಜುಲೈ-ಡಿಸೆಂಬರ್2008
2250/1614
6 ಕೆಲವು ತುಂಡು ಭೂತಗಳು
ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವವಿದ್ಯಾಲಯಜನವರಿ-ಜೂನ್20102250/1614
7 ವಿಶಿಷ್ಟ ಉಪ ದೈವಗಳು ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯಜನವರಿ-ಜೂನ್2009 2250/1614
8 ಬೈಲ ಮಾರಿ ನಲಿಕೆ ಜಾನಪದ ಕರ್ನಾಟಕ ಹಂಪಿ ಕನ್ನಡ ವಿಶ್ವ ವಿದ್ಯಾಲಯಜನವರಿ-ಜೂನ್2010 2250/1703
ಜುಲೈ-ಸೆಪ್ಟೆಂಬರ್2011
ಕೆಎಆರೆಎಂಯುಎಲ್00355/10/2010-ಟಿಸಿ
ಅಕ್ಟೋಬರ್-ಡಿಸೆಂಬರ್2011
ಕೆಎಆರೆಎಂಯುಎಲ್00355/10/2010-ಟಿಸಿ
ಜನವರಿ-ಮಾರ್ಚಿ2012
ಕೆಎಆರೆಎಂಯುಎಲ್00355/10/2010-ಟಿಸಿ
ಎಪ್ರಿಲ್-ಜೂನ್2012
ಕೆಎಆರೆಎಂಯುಎಲ್00355/10/2010-ಟಿಸಿ
ಜುಲೈ-ಸೆಪ್ಟೆಂಬರ್2012
ಕೆಎಆರೆಎಂಯುಎಲ್00355/10/2010-ಟಿಸಿ
14
ತುಳುನಾಡಿನ ನಾಗ ಭೂತಗಳು
ಕಣಿಪುರ
ಫೆಬ್ರುವರಿ2012
15
ಕಿರಿಯೋಳು ಹಿರಿದಿಮ್ಮವ್ವ ಮತ್ತು ಪರತಿ ಕರ್ನ್ನಾಟಕ ಲೋಚನ ಬಿಎಂ ಶ್ರೀ ಪ್ರತಿಷ್ಠಾನ
16
ವಾಸ್ತವಿಕ ನೆಲೆಯಲ್ಲಿ ತುಂಡು ಭೂತಗಳು
ಕನ್ನಡ ನಾಡು ನುಡಿ ಕನ್ನಡ ಸಾಹಿತ್ಯ ಪರಿಷತ್
17 ಬೆಳ್ಳಾರೆ ಪ್ರಾಚ್ಯಾವಶೇಷಗಳು ಇತಿಹಾಸ ದರ್ಶನ
18 ಪೆರುವಜೆಯಲ್ಲಿ ಪತ್ತೆಯಾದ ಬುದ್ಧ ಮೂರ್ತಿ ಮತ್ತು ಇತರ ಪ್ರಾಚ್ಯಾವಶೇಷಗಳು
19 ಕೋಳ್ಯೂರಿನ ಅಪ್ರಕಟಿತ ಶಾಸನ ಮತ್ತು ಇತರ ಐತಿಹಾಸಿಕ ವಿಚಾರಗಳು
20 ಮಂಗಳೂರಿನ ಅರಬ್ ಮತ್ತು ಚೀನೀ ಭೂತಗಳ ಆರಾಧನೆ
21 ಕಿರಿಯೋಳು ಹಿರಿದಿಮ್ಮವ್ವ ಮತ್ತು ಪ್ರತಿ ಮಂಗನೆ ಪಾಡ್ದನ
ಪ್ರಕಟಿತ ಲೇಖನಗಳು-ಶೈಕ್ಷಣಿಕ/ವೈಚಾರಿಕ/ಸಂಶೋಧನಾತ್ಮಕ
1
ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಯ ವಿಜಯ ಕರ್ನಾಟಕ
8-102011
2
ತುಳು ನಾಡಿನ ನಾಗ ಭೂತಗಳು
ಉದಯ ವಾಣಿ
5-82011
3 ಕನ್ನಡ ಮಾಧ್ಯಮದಲ್ಲಿ ವಿಜ್ಞಾನದ ಶಿಕ್ಷಣ
ವಿಜಯ ಕರ್ನಾಟಕ
25-72006
4
ಪ್ರಾಥಮಿಕ ಶಿಕ್ಷಣಕ್ಕೆ ಶಾಲೆ ವಿಜಯ ಕರ್ನಾಟಕ
6-42006
5
ಅವನತಿಯ ಹಾದಿಯಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ
ವಿಜಯ ಕರ್ನಾಟಕ
15-32002
6
ಉಪನ್ಯಾಸಕರ ಅರ್ಹತೆಗೊಂದು ಮಾನದಂಡ
ವಿಜಯ ಕರ್ನಾಟಕ
19-10-2006
7
ದಾರಿ ಯಾವುದಯ್ಯ ಕಾಯಕದ ಕೈಲಾಸಕ್ಕೆ
ವಿಜಯ ಕರ್ನಾಟಕ
11-12002
8
ಪರೀಕ್ಷಗಳು ಬರುತ್ತಿವೆ
ವಿಜಯ ಕರ್ನಾಟಕ
1-32002
9
ಮಕ್ಕಳ ಗಣತಿ ಶಿಕ್ಷಕರಿಗೆ ಪಚೀತಿ
ವಿಜಯ ಕರ್ನಾಟಕ
14-3-2003
10
ಶಿಕ್ಶಕ ಈಗ ಲಾಟರಿ ಮಾರಾಟಗಾರ
ವಿಜಯ ಕರ್ನಾಟಕ
27-12-2002
11
ಸ್ತ್ರೀ ಲೋಲುಪನೀತ ಸಿರಿ ಕೃಷ್ಣ
ಉದಯ ವಾಣಿ
20-8-2011
12
ನಳ ಭೀಮರನ್ನು ನೋಡಿ ಕಲಿಯಿರಿ
ಉದಯ ವಾಣಿ
13
ಸಾಮಾನ್ಯ ಪರೀಕ್ಷೆ ಸಾಮಾನ್ಯರಿಗಲ್ಲ
ವಿಜಯ ಕಿರಣ
14
ಮಕ್ಕಳ ಗಣತಿಗೆ ಬಂದಾಗ
ವಿಜಯ ಕಿರಣ
15
ಬಗೆಹರಿಯದ ಸಿಇಟಿ ಗೊಂದಲ
ವಿಜಯ ಕಿರಣ
16
ಕ್ರಿಕೆಟ್ ಮಾತ್ರ ಕ್ರೀಡೆಯಲ್ಲ
ವಿಜಯ ಕಿರಣ
17
ಸಾಧಿಸುವ ಛಲವೊಂದದ್ದರೆ ಸಾಕು
ವಿಜಯ ಕಿರಣ
18
ಕೋಲಾರದ ಗಣಿ ಇನ್ನೆಸ್ಟು ದಿನ ನಮ್ಮದು
ವಿಜಯ ಕಿರಣ
19
ಸಂದರ್ಶನವೆಂಬ ನಾಟಕದಲ್ಲಿ
ವಿಜಯ ಕಿರಣ
20
ಪರೀಕ್ಷಗಳು ಬರುತ್ತಿವೆ
ವಿಜಯ ಕಿರಣ
21
ಸ್ತ್ರೀಯರಿಗೇನು ಬೇಕು
ವಿಜಯ ಕಿರಣ
22
ಮಾತಿಗೆ ಬಡತನವಿ ವಿಜಯ ಕಿರಣ
23
ದೂರದ ಫ್ಲ್ಯಾಟ್ ನುಣ್ಣಗೆ
ವಿಜಯ ಕರ್ನಾಟಕ
24
ಮಧ್ಯಮ ವರ್ಗಕ್ಕೆ ನಿತ್ಯವೂ ಮೂರ್ಖರ ದಿನ
ವಿಜಯ ಕರ್ನಾಟಕ
1-4-2005
25
ಮಲೇರಿಯ ನಿರ್ಮೂಲನೆ
ವಿಜಯ ಕಿರಣ
26
ಜಾಣ ಕಿವುಡು
ವಿಜಯ ಕರ್ನಾಟಕ
27
ಶಿಕ್ಷಕರ ಜವಾಬ್ದಾರಿ
ವಿಜಯ ಕರ್ನಾಟಕ
28
ಹೊರಲಾರದ ಮಲ್ಲಿಗೆಯ ಹೊರೆ
ಹೊಸ ದಿಗಂತ
29
ದಡವರಿಯದ ಅಲೆಗಳು
ಹೊಸ ದಿಗಂತ
30
ನಿಮಗೆಂಥ ಶಿÀಕ್ಷಕರು ಬೇಕು?
ಹೊಸ ದಿಗಂತ
5-9-2001
31
ತುಳುವರ ಬಲೀಂದ್ರ
ಜ್ಞಾನ ಪಯಸ್ವಿನಿ
2-1-2011
32
ಪಾಡ್ದನಗಳ ಸ್ವರೂಪ
ಜ್ಞಾನ ಪಯಸ್ವಿನಿ
16-11-211
33
ಜಾನಪದ ಪರಿಕಲ್ಪನೆ
ಜ್ಞಾನ ಪಯಸ್ವಿನಿ
1-12-2011
34
ತುಳು ಪಾಡ್ದನಗಳಲ್ಲಿ ಸ್ತ್ರೀ
ಜ್ಞಾನ ಪಯಸ್ವಿನಿ
7-12-2011
35
ಬಾಲ ಜೇವು ಮಾಣಿಗ
ಜ್ಞಾನ ಪಯಸ್ವಿನಿ
14-12-2011
36
ಬಾಲೆ ಮಧುರಗೆ
ಜ್ಞಾನ ಪಯಸ್ವಿನಿ
21-12-2011
37
ತುಳುವ ಸಂಸ್ಕಾರಗಳು
ಜ್ಞಾನ ಪಯಸ್ವಿನಿ
6-12012
38
ಪೆರುವಾಜೆಯಲ್ಲಿ ಅಪರೂಪದ ಬುದ್ಧನ ಮೂರ್ತ ಪತ್ತೆ
ಪ್ರಜಾವಾಣಿ
30-3-2012
39
ಪಾಜಪಳ್ಳ ಕಲಾವಿದರು
ಜ್ಞಾನ ಪಯಸ್ವಿನಿ
20-2-2012
40
ಪೆರುವಾಜೆಯಲ್ಲಿ ಬುದ್ಧನ ಮೂರ್ತಿಪತ್ತೆ
ಜ್ಞಾನ ಪಯಸ್ವಿನಿ
13-1-2012
41
ಶಿಕ್ಷಕರಿಂದೇನು ಮಾಡಲು ಸಾಧ್ಯ?
ಸುಳ್ಯ ಸುದ್ದಿ ಬಿಡುಗಡೆ
3-9-2012
42
ನಮ್ಮ ಮಕ್ಕಳನ್ನು ರಕ್ಷಸಿ ಕೊಳ್ಳೋಣ
ಸುಳ್ಯ ಸುದ್ದಿ ಬಿಡುಗಡೆ
15-10-2012
43
ಬೆಳ್ಳಾರೆಯ ಸಾಂಸ್ಕøತಿಕ ಅಧ್ಯಯನ
ಸುಳ್ಯ ಸುದ್ದಿ ಬಿಡುಗಡೆ
15-8-2011
44
ಕೆಮ್ಮಲೆಯ ನಾಗ ಬ್ರಹ್ಮ
ಸುಳ್ಯ ಸುದ್ದಿ ಬಿಡುಗಡೆ
25-7-2011
45
ದ್ವಿಚಕ್ರ ವಾಹನ ಮಹಿಳಗೆ ವರದಾನ
ಮಂಗಳಾ ವಾರ ಪತ್ರಿಕೆ
46
ಸಂಸ್ಕøತಿಗೆ ಆಶಾ ಕಿರಣ
ಮಂಗಳಾ ವಾರ ಪತ್ರಿಕೆ
47
ಸಂಶೋಧನೆಯ ಹೊಸ ಸಾಧ್ಯತೆಗಳು
ಪ್ರಣವ ಸ್ಮøತಿ
48
ಅನೇಕ ದೇವತಾ ತತ್ವದಿಂದ ಏಕ ದೇವತಾ ತತ್ವ
ತ್ರಿಮೂರ್ತಿ ಕೌಸ್ತುಭ
49
ಕುಲೆ ಭೂತಗಳು
¸ಸ್ಮರಣ ಸಂಚಿಕೆ ದೇವರ ಕಾನ ಶಾಲೆ
50
ಕನ್ನಡ ತುಳು ಭಾಷಾ ಸಾದೃಶ್ಯಗಳು
¸ಸ್ಮರಣ ಸಂಚಿಕೆ ದೇವರ ಕಾನ ಶಾಲೆ
51
ಹೊರಲಾರದ ಮಲ್ಲಿಗೆ
ಹೊಸ ದಿಗಂತ
52
ಸಂಸ್ಕøತಾಧ್ಯಯನದ ಪ್ರಸ್ತುತತೆ
ಸ್ಮರಣ ಸಂಚಿಕೆ ಸಂಸ್ಕøತ ಸಂಘ ಮಂಗಳೂರು
53 ಯುಜಿಸಿ ನಿಯಮ ಲೆಕ್ಕಕ್ಕ್ಕಿಲ್ಲ ಏತಕ್ಕಿಲ್ಲ ಕ್ರಮ ,ಕನ್ನಡ ಪ್ರಭ
54 ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆಯ ಬೆಲೆ ಎಷ್ಟು ?ಕನ್ನಡ ಪ್ರಭ
55 ಬಿಗಿ ನಿಯಮಗಳಿರದೆ ಸಂಶೋಧನೆಗಿರದು ಬೆಲೆ ಕನ್ನಡ ಪ್ರಭ
56 ಗಂಡನ ಚಿತೆಯೊಂದಿಗೆ ಬೆಂದು ಹೋದವರೆಷ್ಟೋ ಕನ್ನಡ ಪ್ರಭ
57 ಭಾರತದ ಜನಪದರಲ್ಲಿ ಲೈಂಗಿಕ ಶಿಕ್ಷಣವಿತ್ತೆ ಕನ್ನಡ ಪ್ರಭ
58 ಪ್ಲಾಸ್ಟಿಕ್ ಎಂಬ ಬಹುವಿಧ ಮಾರಿ ನಿಷೇಧ ವೆ ಸರಿಯಾದ ದಾರಿ ಕನ್ನಡ ಪ್ರಭ
59 ಉಪನ್ಯಾಸಕರ ಬಿಎಡ್ ಬವಣೆ ಕನ್ನಡ ಪ್ರಭ
60 ದುಡ್ಡು ಗಳಿಸುವ ಮಾರ್ಗದಲ್ಲಿ ರೋಗಿಗಳ ಕಾಳಜಿಯೆಲ್ಲಿಕನ್ನಡ ಪ್ರಭ
61 ದಡವರಿಯದ ಮಕ್ಕಳಿಗೆ ಬೇಕು ಮಾರ್ಗ ದರ್ಶನ ಕನ್ನಡ ಪ್ರಭ
62 ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ ಕನ್ನಡ ಪ್ರಭ
63 ಫೇಸ್ ಬುಕ್ ಗಳಲ್ಲಿ ಹೆಣ್ಣುಮಕ್ಕಳ ಫೇಸ್ ಗಳು ಉದಯವಾಣಿ
64 ಹದಗೆಟ್ಟ ಶಿಕ್ಷಣದ ಮನೆಯಲ್ಲಿ ವಿದ್ಯಾರ್ಥಿಯ ಬಾಳು ಹಸನಾದೀತೇ ,ಕನ್ನಡ ಪ್ರಭ
65 ಪಾಠದಲ್ಲಿ ರುವುದನ್ನು ಬೋಧಿಸುವುದಷ್ಟೇ ಶಿಕ್ಷಕರ ಕೆಲಸವೇ ?,ಕನ್ನಡ ಪ್ರಭ
66 ಚರಿತ್ರೆಯ ಗರ್ಭ :ಬೆಳ್ಳಾರೆಯ ಇತಿಹಾಸ ತಿಳಿಯುವುದೇ ? ಕನ್ನಡ ಪ್ರಭ
67 ಸರ್ಪರಾಧನೆ ,ಬಾಕುಡರ ಕುಲ ದೈವ 68 ಕೊನೆಯ ಓಟ ?ಕಂಬಳದ ಕಳದಲ್ಲಿ ಕಳವಳ ಕನ್ನಡ ಪ್ರಭ
69 ಮುಂದೆ ಬೆಟ್ಟವಾಗಬಹುದು ಈ ಪುಟ್ಟ ವಿಚಾರಗಳು ಕನ್ನಡ ಪ್ರಭ
70 ವಿದ್ಯೆ ಕಲಿಸುವ ಗುರುವಿಗೇ ಮೋಸ ಮಾಡಬಹುದೇ ವಿಶ್ವವಾಣಿ
71 ಶಿಕ್ಷಕರನ್ನು ಪಾಠ ಮಾಡಿಕೊಂಡಿರಲು ಬಿಟ್ಟು ಬಿಡಿ
ಹೀಗೆ
ಇನ್ನೂರಕ್ಕೂ
ಹೆಚ್ಚಿನ ಲೇಖನಗಳು ವಿಜಯ ಕರ್ಣಾಟಕ ಹೊಸದಿಗಂತ ಪ್ರಜಾವಾಣಿ ಉದಯವಾಣಿ ಕನ್ನಡ ಪ್ರಭ
ಮೊದಲಾದ ದಿನ ಪತ್ರಿಕೆ ಹಾಗೂ ಸಾಧನೆ,ಜಾನಪದ ಲೋಕ ಕರ್ಣಾಟಕ ಲೋಚನ ತುಳುವ ಮೊದಲಾದ
ವಿದ್ವತ್ ಪತ್ರಿಕೆ ಗಳಲ್ಲಿ ಪ್ರಕಟವಾಗಿವೆ
ಇವರು ಇತ್ತಿಚ್ಜೆಗೆ
ಕುಡ್ಲ ತುಳು ವಾರ ಪತ್ರಿಕೆಯಲ್ಲಿ ಅ೦ಕಣವನ್ನೂ ಬರೆಯುತ್ತಿದ್ದಾರೆ. ಜೊತೆಗೆ ಕನ್ನಡ
ಪ್ರಭಾದಲ್ಲೂ ಲೇಖನ ಪ್ರಕಟವಾಗುತ್ತಿದೆ. 1225 ದೈವಗಳ ಹೆಸರುಗಳನ್ನು ಪತ್ತೆ ಹಚ್ಚಿ
ಪ್ರಕಟಿಸಿದ್ದಾರೆ.ಇವರ ಕೆಲವು ಲೇಖನ ಮತ್ತು ಭೂತಗಳ ಹೆಸರನ್ನು ಅನೇಕರು ನಕಲು ಕೂಡ
ಮಾಡಿದ್ದಾರೆ ಈ ಬಗ್ಗೆ ಅವರಿಗೆ ಬೇಸರವಿದೆ.
ಇವರಿಗೆ ಅನೇಕ
ಪ್ರಶಸ್ತಿ -ಪುರಸ್ಕಾರಗಳು ಸ೦ದಿವೆ .ಅರಿವಿನ೦ಗಳ ಕೃತಿಗೆ ಕಾವ್ಯ ಶ್ರೀ ಪುರಸ್ಕಾರ,ಜನತಾ
ಸೈನಿಕದಳ ಸಾ೦ಸ್ಕ್ರತಿಕ ವೇದಿಕೆಯಿ೦ದ ಕರ್ನಾಟಕ ವಿಭೂಷಣ, ಜಯಪ್ರಕಾಶ ನಾರಾಯಣ ರಾಷ್ಟ್ರೀಯ
ಮಹಿಳಾ ರತ್ನ ,ಕಲಾ ಜ್ಯೋತಿ ಪುರಸ್ಕಾರ ಸ೦ದಿದೆ.ತುಳು ನಾಡಿನ ದೈವಗಳ ಬಗೆಗೆ ಆಳವಾದ
ಅಧ್ಯಯನ ಮಾಡಿರುವ ಇವರನ್ನು ತುಳುನಾಡಿನಲ್ಲಿ ಯಾರು ಕೂಡ ಗುರುತಿಸಲಿಲ್ಲ ಎನ್ನುವುದು
ಬೇಸರ.ದ ಸಂಗತಿ ಶ್ರೀ ಮತಿ ಡಾ. ಲಕ್ಷ್ಮೀ ಜಿ ರವರು ತುಳು ವಿದ್ವಾ೦ಸರ ಸಾಲಿನಲ್ಲಿ
ಮುಂಚೂಣಿಯ ಲ್ಲಿ ದ್ದಾರೆ
ತುಳು ಸಾಹಿತ್ಯ ಲೋಕದ ವಜ್ರ ಡಾ.ಲಕ್ಷ್ಮಿ.ಜಿ ಪ್ರಸಾದ
...
ತುಳು ಸಾಹಿತ್ಯ ಲೋಕದ ವಜ್ರ ಡಾ.ಲಕ್ಷ್ಮಿ.ಜಿ.ಪ್ರಸಾದ್ (c) ರಂಜಿತ್ ಕುಮಾರ್
ನಮಗೆ
ತುಳುವರಿಗೆ ಏಕೋ ಸಾಹಿತ್ಯದಲ್ಲಿ ಆಸಕ್ತಿ ಕಡಿಮೆ ಅನಿಸುತ್ತದೆ. ಇಲ್ಲ ಸಲ್ಲದ
ವಿಷಯಗಳಲ್ಲಿ ಸುಖಾಸುಮ್ಮನೆ ಸಮಯ ಕಲೆಯುತ್ತ ಇರುತ್ತೇವೆ ನಮ್ಮ ತುಳುನಾಡಿನ ಶ್ರೀಮಂತ
ಪರಂಪರೆ, ಭೂತಾರಾಧನೆ ಮತ್ತು ಅವುಗಳ ಇತಿಹಾಸದ ಕಡೆ ಇಣುಕಿ ಕೂಡ ನೋಡುವುದಿಲ್ಲ.
ಅಂತಹುದರಲ್ಲಿ ತುಳು ಅಕಾಡೆಮಿ ಒಂದು ಇದೆ ಅನ್ನೋದು ಕೂಡ ಹೆಚ್ಚಿನವರಿಗೆ
ಗೊತ್ತಿರಲಿಕ್ಕಿಲ್ಲ. ತುಳು ಭಾಷೆ, ಸಂಸ್ಕ್ರತಿ, ಜಾನಪದಗಳ ಅಭಿವೃದ್ಧಿಯೆ ಮೂಲ ಆಶಯವಾಗಿ
ಇಟ್ಟುಕೊಂಡು ಉದಯಿಸಿರುವುದೇ ತುಳು ಅಕಾಡೆಮಿ, ಇರಲಿ ನಾನು ಹೇಳಬೇಕೆಂದಿರುವ ವಿಷಯ ಅದು
ಅಲ್ಲ. ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು ಎಂಬ ಲೇಖನ ಮಾಲೆಯನ್ನು ತಮ್ಮ
ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವ ಡಾ.ಲಕ್ಷ್ಮಿ.ಜಿ.ಪ್ರಸಾದ್, ಎಂಬ ಲೇಖಕಿ(ಸಂಶೋಧಕಿ
ಅಂದರೆ ಹೆಚ್ಚು ಸೂಕ್ತ) ಸಾಮಾಜಿಕ ಜಾಲ ತಾಣಗಳಲ್ಲಿ ತುಳುವಿನ ಬಗ್ಗೆ
ತಡಕಾಡುತ್ತಿರುವವರಿಗೆ ಚಿರ ಪರಿಚಿತ. ಈ ಲೇಖನ ಮಾಲೆಯು ತುಳುನಾಡಿನ ಶ್ರೀಮಂತ
ಸಂಸ್ಕ್ರತಿಯ ಅನಾವರಣ ಅಂದರೆ ಅತಿಶಯೋಕ್ತಿಯಾಗಲಾರದು. ಅದೆಷ್ಟೋ ವಿದ್ವಾಂಸರುಗಳು
ತುಳುನಾಡಿನ ದೈವರಾಧನೆಯ ಬಗ್ಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ದೊರಕದ
ಮಾಹಿತಿಗಳನ್ನು ಸ್ವಪ್ರಯತ್ನದಿಂದಲೇ ಕಲೆ ಹಾಕಿ ತಾನು ಯಾವ ತುಳು ವಿಧ್ವಾಂಸರಿಗೂ ಕಡಿಮೆ
ಇಲ್ಲ ಎಂದು ತನ್ನನ್ನು ಮಹಿಳೆ ಎಂಬ ಕಾರಣಕ್ಕೋ ಅಥವಾ ಇನ್ಯಾರದೋ ಮತ್ಸರದ ಒತ್ತಡಕ್ಕೋ
ಮಣಿದು ಅವಮಾನಿಸಿದವರಿಗೆ ಸಾಧನೆಯಿಂದಲೆ ಉತ್ತರಿಸಿದ ಛಲವಂತೆ.ಈಜೋ ಮಂಜೊಟ್ಟಿಗೋಣ ಎಂಬ
ಪ್ರಬಂಧ ಮಂಡಿಸಿ ಎಂಫಿಲ್ ಪದವಿ ಹಾಗೂ ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ ಎಂಬ
ವಿಷಯಕ್ಕೆ ಪಿ.ಹೆಚ್.ಡಿ ಪಡೆದು ಎರಡೆರಡು ಡಾಕ್ಟರೇಟ್ ಗಳನ್ನು ತನ್ನ ಮಡಿಲಿಗೆ ಹಾಕಿಕೊಂಡ
ತುಳುನಾಡಿನ ಪ್ರಥಮ ಅಪ್ರತಿಮ ಸಂಶೋಧಕಿ, ಬರಹಗಾರ್ತಿ. ಹತ್ತು ಹಲವಾರು ಬಿರುದು
ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಸಾಧಕಿ.
ವಿಪರ್ಯಾಸವೆಂದರೆ ತುಳುನಾಡಿಗೆ
ಸಂಬಂಧಪಟ್ಟಂತೆ ಎರಡೆರಡು ಡಾಕ್ಟರೇಟ್ ಪಡೆದರೂ ತುಳುನಾಡಿನ ಇತಿಹಾಸಗಳನ್ನು ಅಧ್ಯಯನ
ನಡೆಸಿ ಪ್ರಕಟಿಸಿರುವ ಈ ಅಪ್ರತಿಮ ಸಾಧಕಿ ತುಳು ಅಕಾಡೆಮಿಯ ಪ್ರಕಾರ ಇನ್ನೂ ತುಳು
ಸಂಶೋಧಕಿಯಲ್ಲವಂತೆ.......! ತುಳು ಅಕಾಡೆಮಿಯಲ್ಲಿರುವವರು ಸಾಮಾನ್ಯರೆನಲ್ಲ
ಒಂದಿಲ್ಲೊಂದು ವಿಷಯದಲ್ಲಿ ಪಾಂಡಿತ್ಯವನ್ನು ಹೊಂದಿರುವ ತುಳು ಪಂಡಿತರು. ಇಂತಹ ಅಕಾಡಮಿಯೇ
ಲಿಂಗತಾರತಮ್ಯ ಕಿಚ್ಚು ಮತ್ಸರಗಳು ಒಬ್ಬ ಸಾಧಕಿಯನ್ನು ಬಲಿಪಶುವನ್ನಾಗಿ ಮಾಡಿದೆ ಅಂದರೆ
ಬೇಸರವಾಗುತ್ತದೆ - ರಂಜಿತ್ ಕುಮಾರ್