Saturday 9 February 2013

A blade company- Rich lands agro ltd

                                ರಿಚ್ ಲ್ಯಾಂಡ್ಸ್ ಎಂಬ ಬ್ಲೇಡ್ ಕಂಪೆನಿ ಬಗ್ಗೆ ಎಚ್ಚರ!
  ನಮ್ಮ ರಾಜ್ಯದಲ್ಲಿ ಈ ಹಿಂದೆಯೇ  ವಿನಿವಿಂಕ್  ದಯೋತೆಕ್ ಸಹಾರ ಪರ್ಲ್ಸ್ ಮ್ಯಾಗ್ನೆಟ್ ಬೆಡ್ ಕ್ವನ್ತಂ ಕೆದಿಯ ಇನ್ಫೋಟೆಕ್ ಮೊದಲಾದ ಅನೇಕ ಬ್ಲೇಡ್ ಕಂಪನಿಗಳು ಬಂದು ಜನರನ್ನು ದೋಚಿವೆ  ಮುಕಂಬಿಕ ,ಆದಿತ್ಯ ಫೈನಾನ್ಸ್  ಮೊದಲಾದ ಅನೇಕ ಫೈನಾನ್ಸ್ ಗಳೂ  ಜನರಿಗೆ ಅಧಿಕ ಬಡ್ಡಿಯ ಆಮಿಷ್  ತೋರಿ ವಂಚಿಸಿವೆ .ಈಗ ಇಂಥ್ಹಾದ್ದೆ ಒಂದು ಬ್ಲೇಡ್ ಕಂಪನಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸುಳ್ಯ ಪುತ್ತೂರು ಗಳಲ್ಲಿ ಹಾಸನ ಅರಸೀಕೆರೆ ಬೆಂಗಳೂರು ಗಳಲ್ಲಿ ಜನರನ್ನು ದೋಚುತ್ತಿದೆ . ಚೆನ್ನೈ ಯ  ರಿಚ್ ಲ್ಯಾಂಡ್ಸ್ ಎಂಬ ಬ್ಲೇಡ್ ಕಂಪನಿಯ ಪ್ರತಿನಿಧಿಗಳು ಜನರಿಗೆ  ಮೂ ರುವರ್ಷದಲ್ಲಿ  ಮೂ ರು ಪಟ್ಟು ದುಡ್ಡು ಕೊಡುತ್ತೇವೆ ದುಡ್ಡು ಕಟ್ಟಿದ ಮರು ತಿಂಗಳಿ ನಿಂದ ೩೬ ತಿಂಗಳು ಕಾಲ ದುಡ್ಡು ಕೊಡುತ್ತೇವೆ ಎಂದು ಆಮಿಷ ಒಡ್ಡಿ ಲಕ್ಷಾಂತರ ದುಡ್ಡನ್ನು ದೋಚುತ್ತಿದ್ದಾರೆ ಕಂಪೆನಿ ಕೊಡುವ ಕಮಿಶಂಗಾಗಿ ಹೀಗೆ ಮಾಡುತ್ತಿದ್ದಾರೆ ಆತ್ಮೀಯರೊಬ್ಬರ ದಾಕ್ಷಿಣ್ಯಕ್ಕೆ ಸಿಲುಕಿ ನಾನು ಕೂಡ ಸ್ವಲ್ಪ ದುಡ್ಡು ಇದರಲ್ಲಿ ಹಾಕಿದ್ದು ನನಗೆ ೪-೫ ತಿಂಗಳು ಮಾತ್ರ ದುಡ್ಡು ಬಂದಿದ್ದು ಈಗ ೨-೩ ತಿಂಗಳಿನಿಂದ ದುಡ್ಡು ಬಂದಿಲ್ಲ ಕಂಪೆನಿಗೆ ಫೋನ್ ಮಾಡಿದರೆ ಯಾರೂ ರಿಸೀವ್ ಮಾಡುವುದಿಲ್ಲ ಈಮೈಲ್ ಮಾಡಿದರೆ ಅದಕ್ಕೂ ಉತ್ತರ ಬಂದಿಲ್ಲ ನನ್ನಿಂದ ದುಡ್ಡು ಕಟ್ಟಿಸಿದ ಪ್ರತಿನಿಧಿ ಗೋವಿಂದ ಪ್ರಸಾದ್   ಪುತ್ತೂರು ಎಂಬಾತನಿಗೆ  ಫೋನ್ ಮಾಡಿದರೆ ಈ ಬಗ್ಗೆಪೊಲೀಸರಿಗೆ ಅಥವಾ ಬೇರೆ  ಯಾರಿಗಾದರೂ ತಿಳಿಸಿದರೆ ಹುಷಾರ್ ಎಂದು ನನಗೆ ರೋಪ್ ಹಾಕಿದ್ದಾರೆ ಬೇರೆಯವರಿಂದ ಇನ್ನು ಕೂಡ ಲಕ್ಷಾಂತರ ದುಡ್ಡು ಕಟ್ಟಿಸುತ್ತಿದ್ದಾರೆ ಅದ್ದರಿಂದ ರಿಚ್ ಲ್ಯಾಂಡ್ಸ್  ಪ್ರತಿನಿಧಿಗಳು ನಿಮ್ಮಲ್ಲಿಗೆ  ಬಂದ್ರೆ ಎಚ್ಚತ್ತು ಗೊಳ್ಳಿ ಸಮೀಪದ ಪೊಲೀಸರಿಗೆ ತಿಳಿಸಿ ಜಾಗ್ರತೆ ನಿಮ್ಮ ದುಡ್ಡನ್ನು ಕಳೆದು ಕೊಳ್ಳ ಬೇಡಿ ನನ್ನಂತೆ! 

Friday 8 February 2013

A pecuiliar statue head


                                                ಪೆರುವಾಜೆಯ  ವಿಶಿಷ್ಟ ತಲೆ
ಸುಳ್ಯ ತಾಲೂಕಿನ ಪೆರುವಾಜೆ ಗುತ್ತಿನ ತರವಾಡು  ಮನೆಗೆ ಸೇರಿದ ಭೂತ ಸ್ಥಾನಕ್ಕೆ ತಲೆಗೆ ಪ್ರತಿಯಾಗಿ ತಲೆ ಹರಿಕೆಯಾಗಿ ಬಂದಿದೆ ಎಂದು ನಂಬಲಾಗಿರುವ ವಿಶಿಷ್ಟ ವಾದ ಕಂಚಿನ ಮೂರ್ತಿ  




Wednesday 6 February 2013

Bellareya maasti (maha sati) vigrahagalu

                             ಬೆಳ್ಳಾರೆಯ ಮಾಸ್ತಿ ಹಾಗೂ ಇತರ ವಿಗ್ರಹಗಳು 
                                     ಬೆಳ್ಳಾರೆ ಬೀಡಿನ ಮಾಸ್ತಿ ವಿಗ್ರಹ -೧ 
                                                                    ಕಂಚಿನ ಕರಡಿಗೆಗಳು 

                                                                    ಹಸುವಿನ ವಿಗ್ರಹ 
                                                                     ಹಂದಿಯ ಮೂರ್ತಿ 
                                                                    ಮಾಸ್ತಿ ವಿಗ್ರಹ -೨
ಬೆಳ್ಳಾರೆ ಬೀಡಿನ ಪಟ್ಟದ ಚಾವಡಿಯ ಬಳಿಯಲ್ಲಿರುವ ಅಡ್ಯಂತಾಯ  ಭೂತಸ್ಥಾನದಲ್ಲಿ  ಭೂತದ ಮೊಗ ಆಯುಧಗಳೊಂದಿಗೆ  ಕೆಲವು ಅಪೂರ್ವ ವಿಗ್ರಹಗಳಿವೆ.ಇಲ್ಲಿ ಎರಡು ಕಂಚಿನಿಂದ ತಯಾರಿಸಿದ ಮಾಸ್ತಿ ಮೂರ್ತಿಗಳಿವೆ .ಒಂದು ಹಸುವಿನ ಮೂರ್ತಿ ಇದೆ .ಇದರ ಬೆನ್ನಿನ ಮೇಲೆ ಚಿಕ್ಕದಾದ ನಂದಿಯ ವಿಗ್ರಹ ಇದೆ.ಹಾಲನ್ನು ಕುಡಿಯುವ ಕರು ಕೂಡ ಜೊತೆಗೆ ಇದೆ.ಮೂರು ಕಂಚಿನ ಕರಡಿಗೆಗಳಿದ್ದು ಇದರ ಅಕ್ಕರ ವಿಶಿಷ್ಟ ವಾಗಿದೆ ಇದು ಸ್ತ್ರೀಯ  ಹಾಗೆ  ತೋರುತ್ತದೆ ಪಕ್ಷಿಯ ಹಾಗೆಯೂ ಕಾಣಿಸುತ್ತದೆ 

Tuesday 5 February 2013

Bhuta kola of Naaralattaaya bhuta












Ondu aparupada gode baraha

                            ಒಂದು ಅಪರೂಪದ ಗೋಡೆ ಬರಹ 









ಈಗ ಕಾಸರಗೋಡು ಜಿಲ್ಲೆಗೆ ಸೇರಿದ ಮೀಂಜ ಗ್ರಾಮದ ಮೀಯಪದವಿನಲ್ಲಿರುವ ಹಳೆಯೆ ಚಿಕ್ಕ ಕಟ್ಟಡದ ಗೋಡೆಯ ಮೇಲೆ  ಸುಮಾರು ೪೦ ವರ್ಷಗಳ ಹಿಂದೆ ಕರ್ಫ್ಯು ಅನ್ನು ವಿರೋಧಿಸಿ ಬರೆದ ಬರಹ ಇನ್ನೂ ಅಳಿಯದೆ ಇದೆ.ಅಭಿವ್ಯಕ್ತಿ  ಸ್ವಾತಂತ್ರ್ಯದ ಕುರುಹಾಗಿ ಉಳಿದಿದೆ ".ಪತ್ರಿಕಾ ಸ್ವಾತಂತ್ರ್ಯ ಉಳಿಯಲಿ ರಾಜ್ಯಾಂಗ ಮತ್ತು ನ್ಯಾಯಾಂಗದ ಪಾವಿತ್ರ್ಯ  ಉಳಿಯಲಿ ತುರ್ತು ಪರಿಸ್ಥಿತಿ ರದ್ದಾಗಲಿ  ಬಂಧಿತ ರಾಷ್ಟ್ರ ನಾಯಕರ ಬಿಡುಗಡೆಯಾಗಲಿ" ಎಂದು ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ ಬರೆದಿರುವುನ್ನು ಈಗ ಕೂಡ  ಸ್ಪಷ್ಟವಾಗಿ ಓದಬಹುದು.

Sunday 3 February 2013

MY BOOKS





                                                                 ಶೈಕ್ಷಣಿಕ ಲೇಖನಗಳು


                                                                      ಕಥಾ ಸಂಕಲನ