Thursday 6 April 2023

ಪೆಟ್ಟಿಗೆ ಹೊತ್ತುಕೊಂಡು ನಡೆದೆ..ಕಮಟು ವಾಸನೆಯಿಂದ ಮುಕ್ತಿ ಪಡೆದೆ ..

 ನನಗೂ ಆತ್ಮವಿದೆ‌.ಅದಕೂ ಒಂದು ಕಥೆಯಿದೆ - 21 


ಪೆಟ್ಟಿಗೆ ಹೊತ್ತುಕೊಂಡು ನಡೆದೆ..ಕಮಟು ವಾಸನೆಯಿಂದ ಮುಕ್ತಿ ಪಡೆದೆ ..

ಒಂದನೆಯ ತರಗತಿಯನ್ನು ನಾನು ಮೀಯಪದವಿನ ವಿದ್ಯಾವರ್ಧಕ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೆ.ನನ್ನ ಅದೃಷ್ಟಕ್ಕೆ ಬಹಳ ಒಳ್ಳೆಯ ಶಿಕ್ಷಕಿ ವೇದವಲ್ಲಿ ಟೀಚರ್ ನನಗೆ ಸಿಕ್ಕಿದ್ದರು.ನಾನು ಅಕ್ಷರಗಳನ್ನು ಉಲ್ಟಾ ಬರೆಯುತ್ತಿದ್ದೆ.ಬಹುಶಃ ಈಗ ಅದನ್ನು ಡಿಸ್ ಲೆಕ್ಸಿಯ ಎಂದು ಗುರುತಿಸುತ್ತಿದ್ದರೋ ಏನೋ..ಯಾಕೆ ನನಗೆ ಅಕ್ಷರವನ್ನು ನೇರ ಬರೆಯಲಾಗುತ್ತಿರಲಿಲ್ಲ ಎಂದು ಗೊತ್ತಿಲ್ಲ.ಎಲ್ಲ ಅಕ್ಷರಗಳನ್ನು ಬರೆಯುತ್ತಿದ್ದೆ.ಆದರೆ ಎಲ್ಲವೂ ತಲೆಕೆಳಗಾಗಿ ಇರುತ್ತಿದ್ದವು


ಇದನ್ನು ಸರಿ ಪಡಿಸಲು ನನ್ನ ಅಮ್ಮ ದೊಡ್ಡಮ್ಮನ ಮಗಳು ಅಕ್ಕ( ಅಕ್ಕು ) ಬಹಳಷ್ಟು ಪ್ರಯಾಸಪಟ್ಟಿದ್ದರು.ಸಾಕಷ್ಟು ಪೆಟ್ಟು ಕೂಡ ಬಿದ್ದಿತ್ತು ನನಗೆ.ಈ ನಡುವೆ ನಮ್ಮ ಶಿಕ್ಷಕಿ ಒಂದು ಉಪಾಯ ಕಂಡು ಹಿಡಿದರು

ಅಕ್ಷರದ ಆರಂಭದ ಸುಳಿಹಾಕಿ ಕೊಡುತ್ತಿದ್ದರು

ನಂತರ ಅದನ್ನು ಮುಂದುವರಿಸಿ ಸರಿಯಾಗಿ ಬರೆಯಲು ನನಗೆ ಬರುತ್ತಿತ್ತು.ಈ ಬಗ್ಗೆ ನನಗೆ ಸಹಾಯ ಮಾಡುವಂತೆ ಓರ್ವ ಜಾಣ ವಿದ್ಯಾರ್ಥಿನಿ ಶಾರದೆಗೂ ಹೇಳಿಕೊಟ್ಟರು.ವೇದವಲ್ಲಿ ಟೀಚರ್ ಅಥವಾ ಶಾರದೆ ನನಗೆ ಎಲ್ಲ ಅಕ್ಷರಗಳ ಆರಂಭದ ಸುಳಿ ಹಾಕಿ ಕೊಡುತ್ತಿದ್ದರು.


ಅದನ್ನು ಮುಂದುವರೆಸಿ ಹೇಗೋ ವರ್ಷವಾಗುವಷ್ಟರಲ್ಲಿ ಎಲ್ಲ ಅಕ್ಷರಗಳನ್ನು ಕಾಗುಣಿತವನ್ನು ಬರೆಯಲು ಕಲಿತಿದ್ದೆ.ಉಳಿದಂತೆ ಕಲಿಕೆಯಲ್ಲಿ ನಾನು ಜಾಣೆ ಇದ್ದೆ ಎಂದು ಕಾಣುತ್ತದೆ.ಬರೆಯಲು ಮಾತ್ರ ಸಮಸ್ಯೆ ಇತ್ತೇ ಹೊರತು ಓದಲು ಇರಲಿಲ್ಲ.ಪಟ ಪಟನೆ ಓದಿ ಮೆಚ್ಚುಗೆ ಗಳಿಸುತ್ತಿದ್ದುದು ಈಗಲೂ ನನಗೆ ನೆನಪಿದೆ

ವೇದವಲ್ಲಿ ಟೀಚರ್ ಈ ಒಂದು ಉಪಾಯ ಕಂಡು ಹಿಡಿಯದೇ ಇದ್ದರೆ ಬರೆಯಲು ಬಾರದ ಶತ ದಡ್ಡ ಹುಡುಗಿಯಾಗಿ ಒಂದನೇ ತರಗತಿಯಲ್ಲಿಯೇ ಫೇಲ್ ಆಗಿ ಬಿಡುತ್ತಿದ್ದೆನೋ ಏನೋ..ಆಗ ಒಂದನೇ ತರಗತಿಯಲ್ಲಿ ಕೂಡ ಫೇಲ್ ಮಾಡುತ್ತಿದ್ದರು.

ಒಂದನೇ ತರಗತಿ ಮುಗಿಯುವಷ್ಟರಲ್ಲಿ ಅಮ್ಮ ಸಣ್ಣ ತಮ್ಮ ಗಣೇಶನನ್ನು ಹೆತ್ತು ಬಾಣಂತನ‌ ಮುಗಿಸಿ ಹೊಸತಾಗಿ ಕಟ್ಟಿದ ನಮ್ಮ ಮನೆಗೆ ಹಿಂತಿರುಗಿದ್ದರು.


ಎರಡನೆಯ ತರಗತಿಯನ್ನು ನಾನು ಅಜ್ಜನ ಮನೆಯಲ್ಲಿ ಇದ್ದುಕೊಂಡು ಮೀಯಪದವು ಶಾಲೆಯಲ್ಲಿಯೇ ಮುಂದುವರಿಯಬಹುದಿತ್ತು.ಆದರೆ ಅಮ್ಮ ,ಅಣ್ಣ ಅಕ್ಕ‌ತಮ್ಮಂದಿರ ಜೊತೆಗಿನ ಆಟದ ಸೆಳೆತ ನನಗಿತ್ತು ಕಾಣಬೇಕು‌.ನಾನೇ ಹಠ ಮಾಡಿ ತಂದೆ ಮನೆ ಸಮೀಪದ ಕೋಳ್ಯೂರು ಶಂಕರನಾರಾಯಣ ದೇವಸ್ಥಾನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೆಯ ತರಗತಿಗೆ ಸೇರಿದ್ದೆ.

ಬಹುಶಃ ವಾತಾವರಣ ಬದಲಾಗಿಯೋ‌ ಇನ್ನೇನು ಕಾರಣವೋ ಗೊತ್ತಿಲ್ಲ.ನಾನಿಲ್ಲಿ ಸರಿಯಾಗಿ ಹೊಂದಿಕೊಂಡಿಲ್ಲವೇನೋ.ದಿನಾಲು ಎರಡನೆ ತರಗತಿಯ ಕೊಮ್ಮೆ ಮಾಸ್ಟ್ರ ಕೈಯಿಂದ ಪೆಟ್ಟು ತಿನ್ನುತ್ತಿದ್ದೆನಂತೆ.ಪೆಟ್ಟು ಬೀಳಲು ಮುಖ್ಯ ಕಾರಣ ತಡವಾಗಿ ಬರುವುದು ಆಗಿತ್ತಂತೆ.ಅದೃಷ್ಟವಶಾತ್ ಈ ಪೆಟ್ಟು ತಿನ್ನುತ್ತಿದ್ದ ವಿಚಾರ ನನಗೆ ಒಂದಿನಿತೂ ನೆನಪಿಲ್ಲ.ಬಾಲ್ಯದ ಸಹಪಾಠಿ ಗೆಳತಿ ಯಶೋಧೆ ಹೇಳಿ ನನಗೀ ವಿಚಾರ ನಾನು ಎಂಎ ಓದಿ ಕೆಲಸಕ್ಕೆ ಸೇರಿದ ನಂತರ ಗೊತ್ತಾಗಿತ್ತು.

ತಡವಾಗಿ ಬರುವುದಕ್ಕೆ ಏನು ಕಾರಣ ಎಂದು ನನಗೆ ಗೊತ್ತಿಲ್ಲ.


ಅದೇನೇ ಇದ್ದರೂ ದಿನಾಲು ಆರೇಳು ವರ್ಷದ ಎಳೆಯ ಹುಡುಗಿಗೆ ಹೊಡೆಯುವ ಬದಲು ಆಗಾಗ ಸಿಗುತ್ತಿದ್ದ ನನ್ನ ತಂದೆಯವರಲ್ಲಿ ಹೇಳಬಹುದಿತ್ತು.ಅಥವಾ ಬಂದು ಭೇಟಿ ಆಗುವಂತೆ ತಂದೆಯವರಿಗೆ ಚೀಟಿ ಬರೆದು ಕಳುಹಿಸಬಹುದಿತ್ತು‌.ಕೊಮ್ಮೆ ಮಾಸ್ಟ್ರು ಹಾಗೆ ಮಾಡದೆ ದಿನಾಲು ನನಗೇಕೆ ಹೊಡೆದರು ಎಂದು ನನಗೆ ಈವತ್ತಿಗೂ ಗೊತ್ತಾಗುತ್ತಿಲ್ಲ.ಇಷ್ಟಾದರೂ ನಾನು ಶಾಲೆಗೆ ಹೋಗುವುದಿಲ್ಕ ಎಂದು ಹಠ ಮಾಡದ್ದು ನಿಜಕ್ಕೂ ಅಚ್ಚರಿಯ ವಿಷಯ..ಬಹುಶಃ ಶಾಲೆಯ ಸೆಳೆತ ನನಗೆ ತುಂಬಾ ಇದ್ದಿರಬೇಕು.ತಡವಾಗಿ ಬಂದದ್ದಕ್ಕೋ ಇನ್ನೇನಕ್ಕೋ ಹೊಡೆಯುತ್ತಿದ್ದರೂ ಕೊನೆಯ ಅವಧಿಯಲ್ಲಿ ಪ್ರತಿ ದಿನ ಕೊಮ್ಮೆ ಮಾಸ್ಟ್ರು ರಸವತ್ತಾಗಿ ಅಭಿನಯದ ಮೂಲಕ ಹೇಳುತ್ತಿದ್ದ ರಾಮಾಯಣದ ಕಥೆ ನನ್ನನ್ನು ದಿನಾಲು ಶಾಲೆಗೆ ಬರುವಂತೆ ಮಾಡಿರಬಹುದು ಎಂದು ನನಗನಿಸುತ್ತದೆ.


ಈಗಲೂ ಅವರು ರಾಮಾಯಣದ ಕಥೆ ಹೇಳುತ್ತಿದ್ದುದು ಕಣ್ಣಿಗೆ ಕಟ್ಟುತ್ತಿದೆ ನನಗೆ.ರಾವಣಬಂದು ಶಿಬ ಧನುಸ್ಸನ್ನು ಎತ್ತಲು ಹೋಗಿ ಅದರಡಿಯಲ್ಲಿ ಸಿಕ್ಕಾಕೊಂಡದ್ದು.ಅಂಗದ ಸಂಧಾನದ ಸಂದರ್ಭದಲ್ಲಿ ಅಂಗದ ಬಾಲವನ್ನೇ ಸುರುಳಿಯಾಗಿ ಸುತ್ತಿ ರಾವಣನ ಸಿಂಹಾಸನಕ್ಕೆ ಸಮವಾಗಿ ಎತ್ತರಿಸಿ ಕುಳಿತದ್ದು..ಹೀಗೆ ಎಲ್ಲ ಕಥಾನಗಳನ್ನೂ ಅಭಿನಯ ಸಹಿತ ವಿವರಿಸಿದ್ದು ಅದನ್ನು ತನ್ಮಯತೆಯಿಂದ ಕೇಳುತ್ತಿದ್ದುದು ,ಶಾಲೆಯ ಮನೆಗೆ ಹೋಗುವ ಗಂಟೆ ಆಗಬಾರದೆಂದು ನಾನು ಬಯಸುತ್ತಿದ್ದುದು ನನಗೆ ನೆನಪಿದೆ.


ಎರಡನೆಯ ತರಗತಿಗೆ ಬಂದಾಗ ವಿಪರೀತ ಪೆನ್ಸಿಲ್ ಕಳೆದು ಹೋಗುತ್ತಿತ್ತು .ಹೆಚ್ಚು ಕಡುಮೆ ದಿನ ನಿತ್ಯ ತಂದೆ ಅಣ್ಣ ಅಕ್ಕ ಹೊಸ ಪೆನ್ಸಿಲ್ ತಂದು ಮೂರು ಭಾಗ ಮಾಡಿ ಒಂದು ತುಂಡನ್ನು ಕೊಡುತ್ತಿದ್ದರು.ಮನೆಗೆ ಹೋಗುವಷ್ಟರಲ್ಕಿ ಅಥವಾ ಶಾಲೆಯ ಅವಧಿಯಲ್ಲಿಯೇ ಅದನ್ನು ಕಳೆದು ಹಾಕುತ್ತಿದ್ದೆ.ಹೇಗೆ ಕಳೆದು ಹೋಗುತ್ತಿತ್ತು ಎಂದು ನನಗೆ ಗೊತ್ತಿಲ್ಲ.ಇಂದಿಗೂ ಕರ ವಸ್ತ್ರ ಪೆನ್ ಮೊದಲಾದವುಗಳನ್ನು‌ ಗೊತ್ತಿಲ್ಕದೆ ಬೀಳಿಸಿಕೊಂಡು ಕಳೆದು ಹಾಕುವ ಅಭ್ಯಾಸ ನನಗಿದೆ.ಆದರೆ ಎರಡನೆಯ ತರಗತಿಯಲ್ಲಾದದ್ದು ಮಾತ್ರ ಬಹುವಿಚಿತ್ರ.ಬಹುಶಃ ನನ್ನ‌ಮೈ ಮರವೆಯನ್ನು ಅರಿತ ಯಾರೋ ಸಮೀಪ ಕುಳಿತಿರುತ್ತಿದ್ದ ವಿದ್ಯಾರ್ಥಿ ತೆಗೆದು ತನ್ನ ಚೀಲದೊಳಗೆ ಬಾಕ ಸಹಜ ಅಸೆಯಿಂದ ಇಡುತ್ತಿದ್ದಿರಬಹುದು ಎಂದು ನನಗೆ ಈಗ ಅನಿಸ್ತದೆ.ಇದನ್ನು ಕೂಡ ಮಾಸ್ಟ್ರಿಗೆ ಪತ್ತೆ ಮಾಡಲು ಅವಕಾಶವಿತ್ತು.ಕಳೆದು ಹಾಕುದಕ್ಕೆ ನನಗೆ ಹೊಡೆದು ಬಡಿದು ಮಾಡುತ್ತಿದ್ದರೇ ಹೊರತು‌ ತರಗತಿಯೊಳಗೆ ಎಲ್ಲಿ ಮಾಯವಾಗುತ್ತದೆ ಎಂದು ಪತ್ತೆ ಮಾಡಲು ಯತ್ನ ಮಾಡಿಲ್ಲ ಎಂದೆನಿಸ್ತದೆ.


ಆ ಸಣ್ಣ ವಯಸ್ಸಿಗೆ ದಿನ ನಿತ್ಯ ಪೆಟ್ಟು ತಿಂದಾಗ ನನ್ನ‌ ಮನಸ್ಥಿತಿ ಹೇಗಿತ್ತು ? ಖಂಡಿತವಾಗಿಯೂ ಇತರ ಮಕ್ಕಳ ಎದುರು ಅವಮಾನ ಆಗಿರ್ತದೆ.ನೋವಾಗಿರುತ್ತದೆ.ಹಾಗಾಗಿ ಮನಸ್ಸು ಕುಗ್ಗಿ ಹೋಗಿದ್ದಿರಬಹುದು.ನಾನು ಮನೆಯಲ್ಲಿ ಹೇಳಲಿಲ್ಲವೇಕೆ  ? ಇಂದಿಗೂ ನನಗೆ ಗೊತ್ತಾಗುತ್ತಿಲ್ಕ  ಬಹುಶಃ ನನ್ನ ಶಾರ್ಟ್ ಟೆಂಪರ್ ಗೆ ಈ ಕಟು ಅನುಭವವೇ ಕಾರಣ ಆಗಿದ್ದಿರಬಹುದಾ ? ಇರಲೂ ಬಹುದೆನಿಸ್ತದೆ.


ವಾಸ್ತವದಲ್ಲಿ ಕೊಮ್ಮೆ ಮಾಸ್ಟ್ರು ನನಗೆ ಇಂದಿಗೂ ಪ್ರಿಯರೇ..ಹೊಡೆದಿದ್ದರೂ ಅದನ್ನು ಮರೆಸುವಷ್ಟು ಒಲವನ್ನೂ ಅವರು ತೋರಿರಬಹುದು.ಇಲ್ಲವಾಗಿದ್ದರೆ ಅವರ ಮೇಲೆ ನನಗೆ ಪ್ರೀತಿಯ ಬದಲು ದ್ವೇಷ ಇರುತ್ತಿತ್ತು.ನನಗೆ ದೊಡ್ಡವಳಾದ ನಂತರ ಯಶೋದೆ ಹೇಳಿದಾಗ ಹೊಡೆತ ತಿನ್ನುತ್ತಿದ್ದುದು ಚೂರು ನೆನಪಾಯಿತೇ ಹೊರತು ಮಾಸ್ಟ್ರ ಬಗ್ಗೆ ಕೋಪ ಉಂಟಾಗಿರಲಿಲ್ಲ


ಮೂರನೆಯ ತರಗತಿಗೆ ಬಂದಾಗ ಈರೋಡಿಯ ಗಣಪತಿ ಭಟ್ ನಮಗೆ ಮಾಸ್ಟ್ರಾಗಿದ್ದರು.ನಾಲ್ಕನೆಯ ತರಗತಿಯಲ್ಲಿ ವೇದೋಡಿ ನಾರಾಯಣ ಭಟ್ಟರು ಮಾಸ್ಟ್ರಾಗಿದ್ದರು.ಇವರಿಬ್ಬರಿಂದ ಒಂದೇ ಒಂದು ಏಟನ್ನು ನಾನು ತಿಂದಿಲ್ಲ‌.ಬಹುಶಃ ಕಲಿಕೆಯಲ್ಲಿ ಮುಂದೆ ಇದ್ದುದರ ಜೊತೆಗೆ ಶಾಲೆಗೆ ಒಬ್ಬಳೇ ಬರಲು ಅಭ್ಯಾಸವಾಗಿ ಸಮಯಕ್ಕೆ ಸರಿಯಾಗಿ ಬಂದಿರಬಹುದು.

ಎರಡನೇ ತರಗತಿಗೆ ನಾನು ಹೊಸತಾಗಿ ಸೇರಿದ ಕಾರಣ ನನ್ನನ್ನು ಪಕ್ಕದ ಮನೆಯವರೋ ಅಥವಾ ಕೆಲಸದವರೋ ಕರೆದುಕೊಂಡು ಬರುತ್ತಿದ್ದರೆಂದು ನೆನಪು.ಹಾಗಾಗಿ ಅವರ ಸಮಯ ಕಾದು ಬರಬೇಕಾಗಿದ್ದ ಕಾರಣ ತಡವಾಗುತ್ತಿತ್ರೆಂದು ಕಾಣುತ್ತದೆ.ನಂತರ ಒಬ್ಬಳೇ ಬರಲು ಅಭ್ಯಾಸವಾಗಿ ಸಮಯಕ್ಕೆ ಸರಿಯಾಗಿ ಬಂದಿರಬಹುದು

ಈ ಸಮಯದಲ್ಲಿ ಕಾಡಿದ ಗಂಡಮಾಲೆ ಎಂಬ ಕ್ಯಾನ್ಸರ್ ಇರಬಹುದು ಎಂದು ನಮ್ಮ ಊರಿನ ವೈದ್ಯರಾದ ಬರೆ ಡಾಕ್ಟರು ಊಹಿಸಿದ್ದ ಖಾಯಿಲೆ ಮಾತ್ರ ಬಹಳ ಕಾಡಿತ್ತು ನನಗೆ‌

ಐದನೇ ತರಗತಿಗೆ ಮತ್ತೆ ನಾನು ಅಜ್ಜನ‌ಮನೆಯಲ್ಲಿ ಉಳಿದುಕೊಂಡು ಮೀಯಪದವಿನ ವಿದ್ಯಾವರ್ಧಕ ಶಾಲೆಗೆ ಸೇರಿದೆ.ಈ ಸಮಯಕ್ಕಾಗುವಾಗ ಆಯುರ್ವೇದ ವೈದ್ಯರಾದ ಕೊಡಂಗೆ ಭೀಮ ಭಟ್ಟರ ಚಿಕಿತ್ಸೆಯಲ್ಲಿ ಗಂಡ ಮಾಲೆ ಸಂಪೂರ್ಣ ಗುಣವಾಗಿತ್ತು.


ಇಲ್ಲಿಂದ ನನ್ನ ಬದುಕು ಬಣ್ಣಮಯವಾಯಿತು.ವಿದ್ಯಾರ್ಥಿಗಳನ್ನು ಬಹಳ ಪ್ರೀತಿಯಿಂದ ಕಾಣುವ ಶಿಕ್ಷಕ ವರ್ಗ ನನ್ನಲ್ಲಿ ಜೀವನೋತ್ಸಾಹ ಹುಟ್ಟಿಸಿರಬೇಕೆನಿಸ್ತದೆ.

ಬಹಳ ಅತ್ಯುತ್ಸಾಹ ನನಗಿತ್ತು.ಇದೇ ನನಗೆ ಮುಳುವಾಯಿತಾ ? ಸಂಸ್ಕೃತ ಎಂಎ ಯಲ್ಲಿ ಮೊದಲ ರ‌್ಯಾಂಕ್ ಗಳಿಸಿ ಕಟೀಲು ಕಾಲೇಜಿನ ವಾರ್ಷಿಕೋತ್ಸವದಲ್ಲಿ ವಿಠಲ ಆಚಾರ್ಯ ಸ್ಮಾರಕ ಚಿನ್ನದ ಪದಕವನ್ನು ಸ್ವೀಕರಿಸಿದ ಸಂದರ್ಭದಲ್ಲಿ ನನ್ನ ಸಂಕ್ಷಿಪ್ತ ಪರಿಚಯವನ್ನು ಮಾಡಿದ ನನ್ನ ಎಂಎ ತರಗತಿಯ ಗುರುಗಳಾಗಿದ್ದ ಪ್ರೊ ನಾಗರಾಜ ಭಟ್ ಅವರು ಕೊನೆಗೆ ಇವರ ಅತ್ಯುತ್ಸಾಹವೇ ಇವರಿಗೆ ಮುಳುವಾಗಬಹುದೋ ಏನೋ ಎಂಬ ಸಂದೇಹವನ್ನು ತೋರಿ ಉತ್ತಮ ನಾಗರಿಕತ್ವ ದೊರೆಯಲಿ ಎಂದು ಶುಭ ಹಾರೈಸಿದ್ದರು‌.ಆಗ ನನಗೂ 23 ರ ಸಣ್ಣ ವಯಸ್ಸು.ಹಾಗಾಗಿ ಅವರ ಹಾರೈಕೆಯಲ್ಲೂ ಕುಹಕವೇ ನನಗೆ ಕಾಣಿಸಿತ್ತು.ಮೊದಲೇ ಅಂತರ್ಮೌಲ್ಯ ಮಾಪನ ಅಂಕದ ವಿಷಯದಲ್ಲಿ ಅವರೊಂದಿಗೆ ತಗಾದೆ ಆದದ್ದೂ ಇದಕ್ಕೆ ಕಾರಣ ಇರಬಹುದು.

ಈಗ ಅವರು ಹೇಳಿದ್ದರಲ್ಲಿ ಸತ್ಯಾಂಶ ಇದೆ ಎಂದು ಕಾಣುತ್ತದೆ ನನಗೆ.


ನಾನು ಏಳನೆಯ ತರಗತಿ ಓದುತ್ತಿದ್ದಾಗ ನನ್ನ ಅಕ್ಕನಿಗೆ ಮದುವೆಯಾಯಿತು.ಹಾಗಾಗಿ ನಾನು ಎಂಟನೇ ತರಗತಿಯನ್ನು ತಂದೆ ಮನೆಯಲ್ಲಿ ಇದ್ದುಕೊಂಡು ವಾಣಿವಿಜಯ ಪ್ರೌಢ ಶಾಲೆಯಲ್ಲಿ ಓದುವುದು ಅನಿವಾರ್ಯ ಆಯಿತು.ಬಹಲ ಮಡಿ ಮೈಲಿಗೆ ಇದ್ದ ಕಾಲವದು.ಅಮ್ಮ ಮುಟ್ಟದಾಗ ಅಡಿಗೆ ಮತ್ತಿತರ ಕೆಲಸಕ್ಕೆ ನಾನು ತಂದೆ ಮನೆಯಲ್ಲಿರುವುದು ಅಗತ್ಯವಾಗಿತ್ತು.ತಮ್ಮಂದಿರು ಚಿಕ್ಕವರು.ಅಣ್ಣ ವೇದ ಕಲಿಕೆಗಾಗಿ ಕುಂಭ ಕೋಣಂ ವೇದ ಪಾಠ ಶಾಲೆಗೆ ಸೇರಿದ್ದ.ಅಕ್ಕ ಮದುವೆಯಾಗಿ ಗಂಡನ ಮನೆಗೆ ಹೋದಾಗ ಮನೆಯಲ್ಲಿ ನಾನೇ ಹಿರಿ ಮಗಳು.ಅದು ತನಕ ಅಜ್ಜನ‌ಮನೆಯಲ್ಲಿ ಸ್ವಚ್ಛಂದವಾಗಿದ್ದ ನನಗೆ ಅಮ್ಮ ಮುಟ್ಟಾದಾಗ ಅಡುಗೆ ಮಾಡಿ ಶಾಲೆಗೆ ಹೋಗಿ ಬರುವುದು ಬಹಳ ಕಷ್ಟ ಎನಿಸಿತ್ತು‌.ಜೊತೆಗೆ ಅಮದಮನಿಗೆ ಮುಟ್ಟಾದಾಗ ಕಾಡುತ್ತಿದ್ದ ತೀವ್ರ ತಲೆ ನೋವಿನ ಸಮಸ್ಯೆಯೂ ನನ್ನನ್ನು ತೀವ್ರ ಆತಂಕಕ್ಕೆ ಈಡು ಮಾಡಿತ್ತು.ಆಗ ಬರೆ ಡಾಕ್ಟ್ರೇ ನಮ್ಮ ಊರಿಗೆ ಧನ್ವಂತರಿ.ಅವರ ಮದ್ದಿನಲ್ಲಿ ಅಮ್ಮನಿಗೆ ತಲೆನೋವಿನ ಶಾಶ್ವತ ಪರಿಹಾರ ಸಿಕ್ಕಿರಲಿಲ್ಲ.ನಾನು ಪಿಯುಸಿ ಓದುವಾಗ ಮಂಗಳೂರಿನ ನರರೋಗ ತಜ್ಞ ಶಂಕರ ಭಟ್ ? ( ಹೆಸರು ಸರಿಯಾಗಿ ನೆನಪಿಲ್ಲ) ಬಳಿಗೆ ಅಮ್ಮನನ್ನು ಕರೆದುಕೊಂಡು ಹೋಗಿದ್ದೆ.ಅವರು ನೀಡಿದ ಟ್ಯಾಬ್ಲೆಟ್ ಒಂದು ದುಷ್ಪರಿಣಾಮದಿಂದ ಅಮ್ಮನಿಗೆ ಉಸಿರಾಟದ ತೊಂದರೆಯೂ ಕಾಡತೊಡಗಿತ್ತು.ಅಮ್ಮನಿಗೆ ಈ ತಲೆನೋವಿನ ಸಮಸ್ಯೆ ಗರ್ಭ ಕೋಶ ತೆಗೆದು ಹಾಕಿದ ನಂತರ ಹೊರಟು ಹೋಯಿತು.ಅಮ್ಮ ತನ್ನ ಹನ್ನೆರಡನೆಯ ವಯಸ್ಸಿನಿಂದ ಸುಮಾರು ಐವತ್ತೈದು ವಯಸ್ಸನವರೆಗೂ ತೀವ್ರ ತಲೆ ನೋವಿನ ಸಮಸ್ಯೆಯ ಜೊತೆಗೆ ಬದುಕಬೇಕಾಗಿ ಬಂದಿತ್ತು.ನಂತರ ಮೆನೋಪಾಝ್ ನ ಸಮಸ್ಯೆಗೊಳಗಾಗಿ ತೀವ್ರ ರಕ್ತಸ್ರಾವದ ಕಾರಣಕ್ಕೆ ಗರ್ಭ ಕೋಶವನ್ನು ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರಾದ ಡಾ.ಮಾಲತಿ ಭಟ್ ತೆಗೆದು ಹಾಕಿದ್ದರು.ನಂತರ ಅಮ್ಮನಿಗೆ ಮುಟ್ಟಿನ ಸಮಯದಲ್ಲಿ ಕಾಡುತ್ತಿದ್ದ ತೀವ್ರ ತಲೆನೋವಿನಿಂದ ಮುಕ್ತ ದೊರಕಿತ್ತು

ಅಕ್ಕನ ಮದುವೆಯ ನಂತರ ನಾನು ತಂದೆ ಮನೆಯಿಂದ ವಾಣಿವಿಜಯ ಪ್ರೌಢಶಾಲೆಯಲ್ಲಿ ಓದನ್ನು ಮುಂದುವರಿಸಿದೆ

ಇಲ್ಲಿ ಮೀಯಪದವು ಶಾಲೆಯಲ್ಲಿ ಸಿಕ್ಕಷ್ಟು ಪ್ರೋತ್ಸಾಹ ನನಗೆ ಸಿಗಲಿಲ್ಲ.

ಇಲ್ಲಿ ಆರನೇ ತರಗತಿಯಿಂದಲೇ ಓದುತ್ತಿದ್ದ ಜಾಣ ವಿದ್ಯಾರ್ಥಿಗಳಾದ ಸುಮಂಗಲ ನಿಶಾ,ವಿಜಯ,ಪ್ರಮೋದ್ ಸೂರ್ಯನಾರಾಯಣ ಮೊದಲಾದವರು ಸಹಜವಾಗಿಯೇ ಇಲ್ಲಿನ ಶಿಕ್ಷಕರಿಗೆ ಪ್ರೀತಿ ಪಾತ್ರರಾಗಿದ್ದರು.ಬಹುಶಃ ನನ್ನ ಅತ್ಯುತ್ಸಾಹ ಇಲ್ಲಿನ ಶಿಕ್ಷಕರಿಗೆ ಉದ್ಧಟತನದಂತೆ ಕಾಣಿಸಿರಬಹುದು.ಹಾಗಾಗಿ ನನ್ನ ಬಗ್ಗೆ ತುಸು ಇಲ್ಲಿನ ಶಿಕ್ಷಕರು ಪೂರ್ವಗ್ರಹದಿಂದ ವರ್ತಿಸುತ್ತಿದ್ದರೆಂದು ನನಗೆ ಅನಿಸ್ತದೆ.ಎಲ್ಲರೂ ಅಲ್ಲ.ಕೆಲವರು.

ಇಲ್ಲಿನ ಕನ್ನಡ ಟೀಚರ್ ಸುಲೋಚನ ನನಗೆ ಬಹಳ ಇಷ್ಟದವರಾಗಿದ್ದರು.ಆದರೆ ಒಂದು ನಾನು ಮಾಡಿರದ ತಪ್ಪಿನ ಆರೋಪ ನನ್ನ ಮೇಲೆ ಬಂತು.

ಅದು ಬಹುಶಃ ಒಂಬತ್ತನೇ ತರಗತಿಯ ಮಧ್ಯಾವಧಿ ಪರೀಕ್ಷೆ.

ಬೆಳಗ್ಗೆ ಚರಿತ್ರೆ ಪರೀಕ್ಷೆ ಇತ್ತು ಮಧ್ಯಾಹ್ನ ಮೇಲೆ ಭೂಗೋಳಶಾಸ್ತ್ರ ಪರೀಕ್ಷೆ ಇತ್ತು ( ಕೇರಳದಲ್ಲಿ ಒಟ್ಟು ಹನ್ನೆರಡುವಿಷಯಗಳ ಪರೀಕ್ಷೆ ಇತ್ತು.ವಿಜ್ಞಾನದಲ್ಲಿ ಭೌತಶಾಸ್ತ್ರ,ರಸಾಯನಶಾಸ್ತ್ರ ,ಜೀವ ಶಾಸ್ತ್ರ,ಸಮಾಜದಲ್ಲಿ ಚರಿತ್ರೆ ಮತ್ತು ಭೂಗೋಳ ಶಾಸ್ತ್ರ ,ಗಣಿತ ಎರಡು ಪತ್ರಿಕೆಗಳು ,ಇಂಗ್ಲಿಷ್ ಎರಡು ಪತ್ರಿಕೆ ಕನ್ನಡ ಎರಡು ಪತ್ರಿಕೆಗಳು,ಹಿಂದಿ ಭಾಷಾ ಪತ್ರಿಕೆ ಒಂದು ಹೀಗೆ ಒಟ್ಟು ಹನ್ನೆರಡು ಪರೀಕ್ಷೆಗಳಿದ್ದವು) 

ಭೂಗೋಳ ಪರೀಕ್ಷೆ ಆಗುವಾಗ ನನ್ನ ಒಂದು ನೋಟ್ಸ್ ಡೆಸ್ಕ್ ಒಳಗೆ ಉಳಿತ್ತು.ಬಹುಶಃ ನಾನು ಓದಿ ಕೆಳಗೆ ಇರಿಸಲು ಮರೆತಿದ್ದೆನೋ ಅಥವಾ ಬೇರೆ ಯಾರಾದರೂ ತಪ್ಪಿ ಓದಲೆಂದು ತೆರೆದು ಅದು ಅವರ ನೋಟ್ಸ್ ಅಲ್ಕವೆಂದು ವೆಂದು ಒಳಗೆ ಇರಿಸಿದ್ದರೋ,ಪರೀಕ್ಷೆಯ ದಿನ ನಮ್ಮ ಚೀಲ ಪುಸ್ತಕಗಳನ್ನೆಲ್ಲ ನಾವು ಕುಳಿತಿರುವಲ್ಲಿಯೇ ಬೆಂಚಿನ ಕೆಳಭಾಗ ಇರಿಸ್ತಿದ್ದೆವು.

ಕೊನೆಯ ಗಳಿಗೆಯ ಓದಿನಲ್ಲಿ ಗಡಿಬಿಡಿಯಾಗಿ ಒಂದು ನೋಟ್ಸು ಪುಸ್ತಕವಂತೂ ಡೆಸ್ಕ್ ಒಳಗೆ ಉಳಿದದ್ದು ಪರೀಕ್ಷೆ ಶುರುವಾಗುವ ಮೊದಲು ನನ್ನ ಗಮನಕ್ಕೆ ಬಂದಿರಲಿಲ್ಲ.

ಈ ನಡುವೆ ಒಂದು ಜಿರಳೆ ಮರಿ ನಾನು ಬರೆಯುತ್ತಿದ್ದ ಡೆಸ್ಕ್ ನ ಒಳಭಾಗ ಓಡಾಡುತ್ತಿತ್ತು.ನನಗೂ ಜಿರಳೆಗೂ ಆಜನ್ಮ ವೈರತ್ವ ಇದೆ.ನನಗೆ ಜಿರಳೆ ನೋಡಿದರಾಗದು.ನಾನು ಜಗತ್ತಿನಲ್ಲಿ ಹೆದರುವ ಒಂದೇ ಒಂದು ವಿಷಯ ಜಿರಳೆ.

ಈ ಜಿರಳೆ ಮರಿ ನನ್ನ‌ಮೈಗೆಲ್ಲಿ ಹತ್ತುತ್ತೋ ಎಂಬ ಆತಂಕದಲ್ಲಿ ನಾನು ಆಗಾಗ ಡೆಸ್ಕ್ ಒಳಗೆ ನೋಡುತ್ತಿದ್ದೆ.

ನನ್ನ ಈ ವರ್ತನೆ ಪಕ್ಕದ ಕೊಠಡಿಯಲ್ಲಿ ಇನ್ವಿಜಿಕೇಷನ್ ಮಾಡುತ್ತಿದ್ದ ಕೆಮೆಸ್ಟ್ರಿ ಮಾಸ್ಟ್ರು ಸುಬ್ರಹ್ಮಣ್ಯ ಭಟ್ ಗೆ ಸಂಶಯ ಉಂಟು ಮಾಡಿತು.ಅವರು ಪಕ್ಕದ ಕೊಠಡಿಯಲ್ಲಿದ್ದರೂ ಕೊಠಡಿಯನ್ನು ಬೇರ್ಪಡಿಸಿದ್ದ ತಡಿಕೆಯ ನಡುವಿನ ಸಣ್ಣ ತೂತಿನಲ್ಲಿ ನಮ್ಮ ಕೊಠಡಿಯನ ಮೇಲೆ ಕಣ್ಣಿರಿಸಿದ್ದರಂತೆ‌.ನಮ್ಮ‌ಕೊಠಡಿಯಲ್ಲಿ ಬಹಳ ಪಾಪದ ಮಾಸ್್ಟರೆಂದೇ ಹೆಸರಾದ ಕನ್ನಡ ಪಂಡಿತರೆಂಬ ಖ್ಯಾತಿಯ ವಿಘ್ನರಾಜ ಭಟ್ಟರಿದ್ದರಿದ್ದರು.ಬಹುಶಃ ನಡುವೆ ರಿಲೀವಿಂಗ್ ಗೆ ಬರಲಿದ್ದ ಸುಲೋಚನ ಟೀಚರ್ ಗೆ ಕೆಮೆಸ್ಟ್ರಿ ಮಾಸ್್ಟ್ರು ನನ್ನ ಡೆಸ್ಕ್ ತಪಾಸಣೆ ಮಾಡಲು ಸೂಚನೆ ಕೊಟ್ಟಿದ್ದರು.( ಇದೆಲ್ಲ ನಂತರ ನನಗೆ  ಗೊತ್ತಾಯಿತು) 

ಸುಲೋಚನ ಟೀಚರ್ ಬಂದು ನೋಡುವಾಗ ಡೆಸ್ಕ್ ಒಳಗೆ ಭೂಗೋಳ ಶಾಸ್ತ್ರ ಎಂಬ ಹೆಸರಿದ್ದ ನನ್ನ ನೋಟ್ಸ್ ಸಿಕ್ತು.

ಕೂಡಲೇ ನನ್ನನ್ನು ಅಲ್ಲಿಯೇ ಕಳ್ಳಿ ಸುಳ್ಳಿ ಇತ್ಯಾದಿ ಏನೇನೋ ಬೈದು ಹಂಗಿಸಿ ನನಗೆ ಎಲ್ಕರ ಎದುರು ಅವಮಾನ ಮಾಡಿದ್ದರು‌.ಪೆಟ್ಟು ಬಿದ್ದಿತ್ತೋ ಇಲ್ವೋ ನೆನಪಿಲ್ಲ.ಪೆಟ್ಟು ಕೊಟ್ಟಿದ್ದರೂ ನನಗೆ ಬೇಸರ ಇರಲಿಲ್ಲ..ಸತ್ಯಾಸತ್ಯತೆಯನ್ನು ವಿಚಾರಿಸದೆ ನೋಡಿ ಬರೆದಿದ್ದೇನೆಂಬ ಆರೋಪ ಮಾಡಿ ಕೇವಕ ಆ ವಿಷಯದಲ್ಲಿ ಬೈಯದೆ ಕಳ್ಳಿ ಸುಳ್ಳಿ ಕುಳ್ಳಿ ಇತ್ಯಾದಿ ಬೈದದ್ದು ಇದೆಯಲ್ಲ..ನನಗದು ಇಂದಿಗೂ ಮರೆಯಲಾಗದ ಅನುಭವ..

ಪರೀಕ್ಷೆ ಮುಗಿದ ನಂತರ ಸಮಾಜ ಶಾಸ್ತ್ರ ಪಾಠ ಮಾಡುತ್ತಿದ್ದ ನಾಗಪ್ಪ ಮಾಸ್್ಟರಲ್ಲಿ ಹೋಗಿ ಇರುವ ವಿಷಯ ಹೇಳಿದೆ.ಅವರಿಗೆ ವಿಷಯ ಮನದಟ್ಟಾದರೂ ಕಿರಿಯ ಶಿಕ್ಷಕರಾಗಿದ್ದವರಲ್ಲಿ ಮಾತನಾಡಲು ಅಳುಕಿರಬೇಕು.

ಅಲ್ಲಿ ಒಂದು ವಿಚಾರ ಇತ್ತು.ಆ ನೋಟ್ಸ್ನ ಹೊರ ಪುಟದಲ್ಲಿ ಭೂಗೋಳ ಶಾಸ್ತ್ರ ಎಂದು ಬರೆದಿದ್ದರೂ ಒಳಗೆ ಚರಿತ್ರೆಯ ನೋಟ್ಸ್ ಇತ್ತು‌ಭೂಗೋಳದ ನೋಟ್ಸ್ ಅದಾಗಿರಲಿಲ್ಲ.ಈ ವಿಷಯವನ್ನು ನಾನು ಹೇಳಿದಾಗ ಬೆಳಿಗ್ಗೆಯ ಚರಿತ್ರೆ ಪರೀಕ್ಷೆಗೆ ನೋಡಿ ಬರೆಯಲು ಇರಿಸಿದ ಪುಸ್ತಕ ,ಬೆಳಗ್ಗೆ ನೋಡಿ ಬರೆದಿದ್ದಿ ಎಂಬ ಆಧಾರ ರಹಿತ ವಿತ್ತಂಡವಾದ ಶಿಕ್ಷಕರಿಂದ ಶುರು ಆಯಿತು.

ಬಹುಶಃ ಜೀವನದಲ್ಲಿ ಮೊದಲ ಬಾರಿ ನನ್ನದಲ್ಲದ ತಪ್ಪಿಗೆ ತೀವ್ರ ಅವಮಾನಕ್ಕೀಡಾದೆ.ನನಗೆ ಈಗಲೂ ಅನಿಸುದು..ಒಂದೊಮ್ಮೆ ಅವರ ಗ್ರಹಿಕೆಯಂತೆ ಪರೀಕ್ಷೆಯಲ್ಲಿ ನೋಡಿ ಬರೆಯಲು ಯತ್ನ ಮಾಡಿದ್ದು ( ನೋಡಿ ಬರೆಯಲು ನೋಟ್ಸ್ ಅ ವಿಷಯದ್ದಾಗಿರಲಿಲ್ಲ‌ಹಾಗಾಗಿ ನೋಡಿ ಬರೆದಿಲ್ಲ ಎಂದವರೇ ಒಪ್ಪಿಕೊಂಡಿದ್ದರು) ಅಂತಹ ಅಕ್ಷಮ್ಯ ಅಪರಾಧವೇ? ಆ ವಿಷಯಕ್ಕೆ ಮಾತ್ರ ಬೈದು ಬುದ್ದಿ ಹೇಳಿದ್ದರೆ ಸಾಕಿತ್ತಲ್ಲವೇ ? ಕಳ್ಳಿ ಸುಳ್ಳಿ ಇತ್ಯಾದಿ ಹೀಯಾಳಿಸುವ ಅಗತ್ಯವಿತ್ತೇ? ಇಷ್ಟಕ್ಕೂ ಅದು ಪಬ್ಲಿಕ್ ಪರೀಕ್ಷೆಯಾಗಿರಲಿಲ್ಲ.ಅಂತಿಮ ಪರೀಕ್ಷೆಯೂ ಆಗಿರಲಿಲ್ಲ.ಮಧ್ಯಾವಧಿ ಪರೀಕ್ಷೆ ಆಗಿತ್ತದು.

ಇಲ್ಲಿಂದ ಈ ಶಾಲೆಯ ಶಿಕ್ಷಕರೆಲ್ಲರೂ ನನ್ನನ್ನು ಖಳನಾಯಕಿಯಂತೆ ಬಹು ದುಷ್ಟೆಯಂತೆ ಪರಿಗಣಿಸಿದರು.ನನಗೆ ಹೆಜ್ಜೆ ಹೆಜ್ಜೆಗೆ ಬೈದು ಅವಮಾನಿಸಿದ್ದರು.ಇದು ಎಷ್ಟೆಂದರೆ ವಿದ್ಯಾರ್ಥಿಗಳಲ್ಲೂ ನನ್ನ ಬಗ್ಗೆ ಹೀನಾಯಭಾವ ಉದಿಸಿರಬೇಕು

ಹತ್ತನೆಯ ತರಗತಿ ಮುಗಿಯುತ್ತಾ ಬಂದು ಪರೀಕ್ಷೆಗೆ ಒದಲು ರಜೆ ಕೊಡುವ ಮೊದಲು ಒಂದು ದಿನ ಕೆಮೆಸ್್ಟ್ರು ಮಾಸ್ಟ್ರು  ನಮ್ಮ ತರಗತಿಯಲ್ಲಿ ಯಾರೆಲ್ಲ ಹತ್ತನೆಯ ತರಗತಿಯಲ್ಲಿ ಪಾಸಾಗಬಹುದು ಎಂದು ಉಮಾ ಳಲ್ಲಿ ಕೇಳಿದರು.

ಅವಳು ಸುಮಂಗಲ, ವಿಜಯ ನಿಶ ಸೂರ್ಯ ನಾರಾಯಣ,ಪ್ರಮೋದ ಮೊದಲಾದ ತರಗತಿಯಲ್ಲಿ ಮೊದಲ ಹತ್ತು ರ‌್ಯಾಂಕ್ ಪಡೆಯುತ್ತಿದ್ದ ವಿದ್ಯಾರ್ಥಿಗಳ ಹೆಸರು ಹೇಳಿದ್ದಳು.ತರಗತಿಯಲ್ಲಿ ಸಾಮಾನ್ಯವಾಗಿ ಎರಡನೆಯ ಮೂರನೆಯ ರ‌್ಯಾಂಕ್ ತೆಗೆಯುತ್ತಿದ್ದ ನನ್ನ ಹೆಸರು ಹೇಳಿರಲಿಲ್ಲ.ಬಹುಶಃ ಆಗ ಕೆಮೆಸ್್ಟ್ರಿ ಮಾಸ್ಟ್ರಿಗೇ ಅಚ್ಚರಿ ಆಗಿಬೇಕು‌ನನ್ನಲ್ಲಿ ನೀನು ಪಾಸಾಗುವ ನಂಬಿಕೆ ಇಲ್ವ? ಎಂದು ನನ್ನಲ್ಲಿ ಕೇಳಿದ್ದರು.ನಾನು ಪಾಸಾಗ್ತೇನೆ ಎಂದು ಆತ್ಮ ವಿಶ್ವಾಸದಲ್ಲಿ ಹೇಳಿದ್ದೆ.

ಹತ್ತನೆಯ ಪಬ್ಲಿಕ್ ಪರೀಕ್ಷೆಯಲ್ಲಿ ಆ ಕಾಲಕ್ಕೆ ಉತ್ತಮ ಎನಿಸಿದ ಅಂಕಗಳನ್ನು ಗಳಿಸಿ ಶಾಲೆಗೆ ಎರಡನೆಯ  ಸ್ಥಾನ ಪಡೆದಿದ್ದೆ.ಮೊದಲ ಸ್ಥಾನ ಸುಮಂಗಲ ಗಳಿಸಿದ್ದಳು.

ಇದೊಂದು ವಿಚಾರ ಹೇಳಿದರೆ ಇಲ್ಲಿನ ನನ್ನ ಶಿಕ್ಷಕರಿಗೆ ಬೇಸರವಾಗಬಹುದೋ ಏನೋ ಆದರೆ ಈ ಶಿಕ್ಷಕರ ನಿರ್ಲಕ್ಷ್ಯ ಅವಜ್ಞೆಯನ್ನು ಮುಚ್ಚಿಟ್ಟು ಆತ್ಮ ಕಥೆಯನ್ನು ಬರೆಯುವುದು ವಂಚನೆ ಎಂದೆನಿಸಬಹುದು

ಇಲ್ಲಿ ನಮ್ಮನ್ನೆಲ್ಲ ನಾಲಾಯಕ್ ಗಳು ಎಂದು ಪರಿಗಣಿಸಿದ್ದಿರಬೇಕು.ಹಳ್ಳಿ ಹುಡುಗಿಯರಲ್ವೇ? ಪುರೋಹಿತರ ಇಲ್ಲವೇ ಅಡಿಗೆ ಭಟ್ರ ಅಥವಾ ಕೃಷಿಕನ ಮದುವೆಯಾಗಿ ನಾಲ್ಕು ಹೆತ್ತು ಮಕ್ಕಳನ್ನು ಸಾಕಲು ಮಾತ್ರ ನಾವು ಯೋಗ್ಯರೆಂದು ಭಾವಿಸಿದ್ದರೋ ಏನೋ..ಹುಡುಗರನ್ನೂ ಅಷ್ಟೇ ಅಡುಗೆ ಭಟ್ಟರಾಗಿಯೋ ಪುರೋಹಿತರಾಗಿಯೊಬಕೃಷಿಕರಾಗಿಯೋ ಬದುಕಲು ಯೋಗ್ಯರೆಂದು ಪರಿಗಣಿಸಿರಬೇಕು

ಯಾಕೆಂದರೆ ಹತ್ರನೆಯ ತರಗತಿ ನಂತರ ಏನು ಓದಿದರೆ ಒಳ್ಳೆಯದು.ಏನನ್ನು ಓದಿದರೆ ಏನೆಲ್ಲ ಅವಕಾಶಗಳಿವೆ ಇತ್ಯಾದಿ ಯಾವುದೇ ಒಂದು ಮಾಹಿತಿಯನ್ನು ನಮಗೆ ನೀಡಿರಲಿಲ್ಲ‌ಹೇಗೆ ಬದುಕಬೇಕೆಂಬ ಮಾರ್ಗದರ್ಶನದ ಮಾತುಗಳನ್ನುಹೇಳಿರಲಿಲ್ಲ.


2012 ನೆ ಇಸವಿಯಲ್ಲಿ ಮೀಯಪದವಿನ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥಾಪಕರ ಸಂಸ್ಮರಣಾ ದಿನದಂದು  ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿನಿಯಾಗಿ ನನ್ನನ್ನು ಗುರುತಿಸಿ ಸನ್ಮಾನ ಮಾಡಿದ್ದರು.ಈ ಕಾರ್ಯಕ್ರಮಕ್ಕೆ ಬಂದಿದ್ದ ವಾಣಿವಿಜಯ ಪ್ರೌಢಶಾಲೆಯಲ್ಲಿ ನನಗೆ ಇಂಗ್ಲಿಷ್ ಶಿಕ಼್ಕಕರಾಗಿದ್ದ  ತೊಟ್ಡೆತ್ತೋಡಿ ಮಾಸ್್ಟ್ರು ( ತೊಟ್ಟೆತ್ತೋಡಿ ನಾರಾಯಣ ಭಟ್) ಕಾರ್ಯಕ್ರಮದ ನಂತರ ನಾನು ತಮ್ಮನ ಜೊತೆಗೆ  ಕಾರು ಹತ್ತಿ ಹೊರಡುವಾಗ. ಸಿಕ್ಕಿ " ನಾವು ವಾಣಿವಿಜಯ ಪ್ರೌಢಶಾಲೆಯಲ್ಲಿ ನಿನಗೆ ಯಾವುದೇ ಬೆಂಬಲ ಕೊಟ್ಟಿಲ್ಲ ಎಂದು ಪ್ರಾಂಜಲವಾಗಿ ಒಪ್ಪಿಕೊಂಡು ಬಹಳ ಪ್ರೀತಿಯಿಂದ ಮಾತನಾಡಿಸಿದ್ದರು.ಇದವರ ದೊಡ್ಡ ಗುಣ.ಇವರು ನನಗೆ ಬೆಂಬಲ ಕೊಡದೇ ಇದ್ದಿದ್ದರೂ ಇತರ ಕೆಲವು ಶಿಕ್ಷಕರಂತೆ ನನ್ನನ್ನು ಪೂರ್ವಗ್ರಹದಿಂದ ಕಂಡು ಹೆಜ್ಜೆ ಹೆಜ್ಜೆಗೆ ಬೈದು ಅವಮಾನಿಸುತ್ತಿರಲಿಲ್ಲ.


ನಮಗೆ ಅನುದಾನಿತ ಶಾಲೆಯ ಹೊರತಾಗಿ ಸರ್ಕಾರಿ ಶಾಲೆ ಎಂಬುದೊಂದಿದೆ.ಅದಕ್ಕೆ ಶಿಕ್ಷಕರಾಗಲು ಟಿಸಿಎಚ್ ಅಥವಾಬಿಎಡ್  ಮಾಡಬೇಕು ಹತ್ತನೆಯ ತರಗತಿ ಆಗಿ ಆರು ತಿಂಗಳ ಟಿಸಿಎಚ್ ಮಾಡಿದರೆ ಹತ್ತನೆಯ ತರಗತಿ ಮತ್ತು ಟಿಸಿಎಚ್ ನಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಹುದ್ದೆ ದೊರೆಯುತ್ತದೆ.ನಂತರ ಖಾಸಗಿಯಾಗಿ ಪಿಯುಸಿ ,ಪದವಿ ಓದಿ ಬಿಎಡ್ ಎಂಎ ಮಾಡಿದರೆ ಹೈಸ್ಕೂಲು ಶಿಕ್ಷರಾಗಿ ಪಿಯು ಉಪನ್ಯಾಸಕರಾಗಿ ಪದೋನ್ನತಿ ಪಡೆಯಲು ಆಗುತ್ತದೆ ಎಂಬ ಸಂಗತಿಯೇ ನಮಗೆ ಗೊತ್ತಿರಲಿಲ್ಲ


.ನನ್ನ ಈಗಿನ ಅನೇಕ ಸಹೋದ್ಯೋಗಿಗಳು ಹೀಗೆ ಸರ್ಕಾರಿ ಶಾಲೆಯಲ್ಲಿ ಹದಿನೆಂಟು ವಯಸ್ಸಿಗೆ ಶಿಕ್ಷಕರಾಗಿ ಸೇರಿ ಪದೋನ್ನತಿ ಪಡೆದು ಪಿಯು ಉಪನ್ಯಾಸಕರಾಗಿದ್ದಾರೆ

ನಾನು ಉಪನ್ಯಾಸಕಿತಾದ ಮೇಲೆ ಈ ವಿಚಾರ ನನಗೆ ಗೊತ್ತಾಯಿತು.ಮಾಯಿಪ್ಪಾಡಿ ನಮಗೆ ತೀರಾ ದೂರದ ಊರಲ್ಲ‌.ಅಲ್ಲಿ ಟಿಸಿಎಚ್ ಕಾಲೇಜಿತ್ತು.ನನಗೆ ಸಿಕ್ಕ ಹತ್ತನೆಯ ತರಗತಿಯ ಮಾರ್ಕ್ಸ್ ಗೆ ಖಂಡಿತವಾಗಿಯೂ ಸೀಟು ಸಿಕ್ತಿತ್ತು.ಟಿಸಿಎಚ್ ಓದಿದ್ದರೆ ಅಲ್ಲೂ ಉತ್ತಮ ಅಂಕ ಗಳಿಸಿ ಹದಿನೆಂಟು ವಯಸ್ಸಿಗೇ ನನಗೆ ಸರ್ಕಾರಿ ಶಾಲೆ ಶಿಕ್ಷಕಿ ಯಾಗಬಹುದಿತ್ತು.


ಈ ಯಾವ ವಿಚಾರವೂ ಅರಿಯದ ನಾನು ಪಿಯುಸಿ ವಿಜ್ಞಾನ ತಗೊಂಡು ಇಂಗ್ಲಿಷ್ ಭಾಷೆಯ ಪಾಠ ಅರ್ಥವಾಗದೆ ಪೇಲಾಗಿ ಮತ್ತೆ ಹೇಗೋ ಮರು ಪರೀಕ್ಷೆಯಲ್ಲಿ  ಒದ್ದಾಡಿ ಪಾಸಾಗಿ ಮನೆಯಲ್ಲಿ ಒಂದು ವರ್ಷ ಇದ್ದೆ.ಡಿಗ್ರಿಗೆ ಆರ್ಟ್ಸ್ ತಗೊಳ್ಳಬೇಕೆಂದು ನಿರ್ಧರಿಸಿ ಕೆನರಾ ಕಾಲೇಜಿಗೆ ತಂದೆಯವರ ಜೊತೆಗೆ ಹೋಗಿ ಸೀಟು ಕೇಳಿದ್ದೆ.ಬಹುಶಃ ಫೇಲಾಗಿ ಮತ್ತೆ ಪಾಸಾದ ಕಾರಣವೋ ಏನೋ ಅಥವಾ ಅಲ್ಲಿ ದುಬಾರಿ ಡೊನೇಶನ್ ಎಲ್ಲರಿಗೂ ತಗೊಳ್ತಿದ್ದರೊ ಏನೊ ನಮಗೆ ಅಲ್ಲಿ ಇಪ್ಪತ್ತು ಸಾವಿರ ಡೊನೇಶನ್ ಕೇಳಿದ್ದರು.ಆಗ ನನ್ನ ತಂದೆಯವರು ನಾವು ಬಡವರು ನಮಗೆ ಎರಡು ಖಂಡಿ ಅಡಿಕೆ ಆಗುದು.ಡೊನೇಶನ್ ಕಡಿಮೆ ಮಾಡಿ ಎಂದು ನನಗಾಗಿ ಮೈ ಹಿಡಿ ಮಾಡಿಕೊಂಡು ಕೇಳಿದ್ದರು.ಆಗ ಅಲ್ಲಿನ ಪ್ರಿನ್ಸಿಪಾಲ್ ಎರಡು ಖಂಡಿಯೋ ಇಪ್ಪತ್ತು ಖಂಡಿಯೋ ಎಂದು ನನ್ನ ತಂದೆಯವರನ್ನು ಗದರಿಸಿ ದಟ್ಟಿಸಿ ಹೀನಾಯವಾಗಿ ಏನೇನೋ ಮಾತಾಡಿದ್ದರು

ನನ್ನ ತಂದೆಯವರು ಅವಮಾನವನ್ನು ಅವಡುಗಚ್ಚಿ ಸಹಿಸಿ ಆಗಬಹುದು ಅಷ್ಟು ಕೊಡ್ತೇವೆ ಎಂದು ಒಪ್ಪಿದ್ದರು

ಆದರೆ ನನ್ನ ತಂದೆಯವರನ್ನು ವಿನಾಕಾರಣ ದಟ್ಟಿಸಿ ಅವಮಾನಿಸಿದ ಕಾಲೇಜಲ್ಲಿ ಓದುವುದಿಲ್ಲ ಎಂದು ನಿರ್ಧರಿಸಿದ್ದೆ‌


ಮುಂದೇನು ? ನನಗೂ ಗೊತ್ತಿರಲಿಲ್ಲ

ಈ ಸಮಯಕ್ಕಾಗುವಾಗ ನನ್ನ ದೊಡ್ಡ ತಮ್ಮ ಈಶ್ವರ ಭಟ್ ನ ಎಸ್ ಎಸ್ ಎಲ್ ಸಿ ಪರೀಕ್ಷೆ ಆಗಿ ಫಲಿತಾಂಶ ಬಂತು‌ಒಳ್ಳೆಯ ಅಂಕಗಳು ಬಂದಿದ್ದವು.

ಉಜಿರೆ ಕಾಲೆಜಿನಲ್ಲಿ ನನ್ನ ತಂದೆಯವರ ಸೋದರತ್ತಿಗೆಯ ಮಗ ಭೀಮಗುಳಿಯ ಗಣಪಯ್ಯನವರು ಉಪನ್ಯಾಸಕರಾಗಿದ್ದರು.ಅಣ್ಣ ತಮ್ಮ ಈಶ್ವರರನನ್ನು ಉಜಿರೆ ಕಾಲೇಜಿಗೆ ಸೇರಿಸುವ ಸಲುವಾಗಿ ಸೀಡು ಕೊಡಿಸಲು ಆಗುತ್ತದಾ ಎಂದು ಗಣಪಯ್ಯನವರನ್ನು ಭೇಟಿ ಮಾಡಿ ಕೇಳಲು ಹೋಗಿದ್ದ.ತಮ್ಮ ಮನೆಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಸತ್ಕರಿಸಿದ ಗಣಪಯ್ಯನವರು ಅಣ್ಣನಲ್ಲಿ ನಮ್ಮ ಮನೆ ಮಂದಿಯ ಕ್ಷೇಮ ವಿಚಾರಿಸಿದ್ದರು.ಆಗ ಅಣ್ಣ ನಾನು ಪಿಯುಸಿ ಯಲ್ಲಿ ಪೇಲ್ ಆಗಿ ನಂತರ ಮರು ಪರೀಕ್ಷೆಯಲ್ಲಿ ಪಾಸಾಗಿ ಮನೆಯಲ್ಲಿದ್ದು ಪದವಿ ಓದಲು ಎಲ್ಲೂ ಸೀಟು ಸಿಕ್ಕಿಲ್ಲ ಎಂಬ ವಿಚಾರ ಅಣ್ಣ ಹೇಳಿದ್ದ.


ಆಗ ಗಣಪಯ್ಯನವರು ತಾವಾಗಿಯೇ ತಂಗಿಗೂ ಇಲ್ಲಿಯೇ ಬಿಎಸ್ಸಿಗೆ ಸೇರಿಸು ಸೀಟು ಕೊಡಿಸ್ತೇನೆ ಎಂದು ನುಡಿದಂತೆ ನನಗೆ ಸೀಟು ಕೊಡಿಸಿದ್ದರು.

ಒಳ್ಳೆಯ ಅಂಕ ಗಳಿಸಿದವರಿಗೆ ಮಾತ್ರ ಉಜಿರೆ ಹಾಸ್ಟೆಲಿನಲ್ಲಿ ಸೀಟು ಸಿಕ್ತಿತ್ತು.ನನಗೆ ಸಿಗಲು ಸಾಧ್ಯವಿರಲಿಲ್ಲ.ಆಗ ಗಣಪಯ್ಯನವರೇ ಉಜಿರೆಯಲ್ಲಿ ಹುಡುಗಿಯರ ಮೆಸ್ ನಡೆಸುತ್ತಿದ್ದ ಉಜಿರೆ ಶಾಲೆಯ ಮಾಸ್್ಟ್ರು ವೆಂಕಟರಮಣ ಭಟ್ರ ಪರಿಚಯ ಮಾಡಿಸಿ ಅಲ್ಲಿ ಉಳಿದುಕೊಂಡು ಓದಲು ಅನುವು ಮಾಡಿದ್ದರು.ತಮ್ಮ ಈಶ್ವರ ಕೂಡ ಊಟ ತಿಂಡಿಗೆ ಅಲ್ಲಿಗೆ ಬರುತ್ತಿದ್ದ.ಅಲ್ಲಿಗೇ ಸಮೀಪದ ವಸಂತಿ‌ಅಮ್ಮನವರ ಕಾಂಪೌಂಡಿನಲ್ಲಿ ಕಲಿಯುವ ಹುಡುಗರಿಗೆ ಉಳಿದುಕೊಳ್ಳಲು ನಾಲ್ಕಾರು ಕೊಠಡಿಗಳನ್ನು ಬಾಡಿಗೆಗೆ ಲಭ್ಯವಿತ್ತು‌ಒಂದರಲ್ಲಿ ಇವನಿಗೆ ವಸಂತಿ ಅಮ್ಮ ಜಾಗ ಕೊಟ್ಟರು.


ಅಗೆಲ್ಲ ಸೂಟು ಕೇಸ್ ಟ್ರಾವೆಲಿಂಗ್ ಬ್ಯಾಗ್ ಗಳೆಲ್ಲ ನಮ್ಮಮಥಹ ಕೆಳ ಮಧ್ಯಮ ವರ್ಗದವರಿಗೆ ನೋಡಿ ಕೂಡ ಗೊತ್ತಿರಲಿಲ್ಲ.ಮನೆಯಲ್ಲಿ ಒಂದು ಹಳೆಯ ಕಬ್ಬಿಣದ ತುಕ್ಕು ಹಿಡಿದ ಪೆಟ್ಟಿಗೆ ಇತ್ತು.ಅದಕ್ಕೆ ಪೈಂಟು ಬಳಿದು ಅದರಲ್ಲಿ ನಮ್ಮ ಬಟ್ಟೆ ಬರೆ ತುಂಬಿ ನಾನೂ ಈಶ್ವರ ಉಜಿರೆಗೆ ಹೊರಟೆವು.ಬಟ್ಟೆ ಬರೆ ಎನ್ನಲು ಹೆಚ್ಚೇನೂ ಇರಲಿಲ್ಲ.ಒಂದೆರಡು ಜೊತೆ ಲಂಗ ರವಿಕೆ ಒಂದೆರಡು ಬೈರಾಸು ,ಅಮ್ಮನ ಹಳೆಯ ಮಗ್ಗದ ಸೀರೆ ಹಾಸಿ ಹೊದೆಯಲು ತಗೊಂಡೆವು ಅಷ್ಟೇ..ಉಜಿರೆ ಪೇಟೆಯಿಂದ ಒಂದೊಂದು ತೆಳುವಾದ ಹಾಸಿಗೆ ತಗೊಂಡೆವು

ಒಂದು ವರ್ಷ ಮೆಸ್ಸಿನಲ್ಲಿ ಕಳೆದೆ.ಇಲ್ಲಿ ನಾವು ಏಳೆಂಟು ಹುಡುಗಿಯರಿದ್ದೆವು.ನಾನು.ವಿದ್ಯಾ,ಪೂರ್ಣಿಮ ವೀಣ,ಸುಮನ್,ಜಯ,ಸಂಧ್ಯಾ ಉಳುವಾನ ಸಲಿಲ ಇನ್ನಿಬ್ಬರು ಹೈಸ್ಕೂಕಿನ ಹುಡುಗಿಯರು ಇದ್ದೆವು.


ಊಟ ತಿಂಡಿ ಎಲ್ಲ ಇಲ್ಲಿ ಚೆನ್ನಾಗಿತ್ತು.ಮಾವ( ಶಿಕ್ಷಕರಾದ ವೆಂಕಟರಮಣ ಭಟ್ ) ಮತ್ತವರ ಹೆಂಡತಿ ಕಾವೇರಿ ಆಂಟಿ ನಮ್ಮನ್ನೆಲ್ಲ ಚೆನ್ನಾಗಿಯೇ ನೋಡಿಕೊಂಡಿದ್ದರು.ಇಷ್ಟು ಹುಡುಗಿಯರಲ್ಲಿ ನಾನೇ ಬಡವರ ಮನೆ ಹುಡುಗಿಯಾಗಿದ್ದೆ.ಇವರ್ಯಾರೂ ಸಿರಿವಂತರಲ್ಲದಿದ್ದರೂ ನಮಗಿಂತ ಬೆಟರ್ ಇದ್ದರು.ಹಾಗಾಗಿಯೋ ಏನೋ ನನಗಿಲ್ಲಿ ಒಂದಿನಿತು ಕೀಳರಿಮೆ ಕಾಡುತ್ತಿತ್ತು.

ನನ್ನ ಮತ್ತು ತಮ್ಮನ ಮೆಸ್ ಬಿಲ್ ಸಾಕಷ್ಟು ಬರುತ್ತಿತ್ತು ( ಎಷ್ಟೆಂದು ನನಗೆ ಈಗ ನೆನಪಿಲ್ಲ ) ಇದನ್ನು ಭರಿಸುದು ನಮ್ಮ ತಂದೆಯವರಿಗೆ ಕಷ್ಟವಾಗುತ್ತದೆ ಎಂಬ ಅರಿವಿತ್ತು ನಮಗೆ‌.ಇಲ್ಲಿ ಸ್ನಾಕ್ಕೆ ಬಿಸಿನೀರು ಬೇಕಿದ್ದರೆ ದಿನಕ್ಕೆ ಐವತ್ತು ಪೈಸೆ ಕೊಡಬೇಕಿತ್ತು.ಎಂದರೆ ತಿಂಗಳಿಗೆ ಹದಿನೈದು ರುಪಾಯಿ.ಅ ಕಾಲಕ್ಕೆ ನಮಗೆ ದೊಡ್ಡ ಮೊತ್ತವೇ.‌ಹಾಗಾಗಿ ನಾನು ಬಿಸಿನೀರು ಬೇಡವೆಂದೆ.ಉಜಿರೆಯಲ್ಲಿ ಚಳಿ ಬಹಲ ಜಾಸ್ತಿ.ತಣ್ಣೀರು ಸ್ನಾನ ನಿಜಕ್ಕೂ ದೊಡ್ಡ ಶಿಕ್ಷೆಯೇ..ತೀರ ಚಳಿ ಇದ್ದ ದಿನ ನಾನು ಸುಮ್ಮನೇ ನೀರು ಕಾಲಿಗೆ ಮುಖಕ್ಕೆ ಹಾಕಿ ಸ್ನಾನದ ನಾಟಕ ಮಾಡುತ್ತಿದ್ದುದೂ ಇದೆ.ತೀರಾ ಚಳಿ ಇದ್ದ ಕಾರಣ ಬೆವತು ನಾರುವ ಪ್ರಮೇಯ ಇರಲಿಲ್ಲ.ಆದರೆ ನನ್ನ ಈ ಸ್ನಾನದ ಕಳ್ಳಾಟ ಮೆಸ್ಸಿನ ಆಂಟಿ ಮತ್ತಿತರರಿಗೆ ಗೊತ್ತಾಗಿ ನಗೆ ಪಾಟಾಲಿಗೆ ಈಡಾಗಿದ್ದು ನೆನೆದರೆ ನನಗೆ ಈಗ ನಗು ಬರುತ್ತದೆ.

ಇಲ್ಲಿ ಇನ್ನೊಂದು ವಿಷಯ ಹೇಳಬೇಕಿದೆ.ಒದುಗರಿಗೆ ಮುಜುಗರ ಆಗಬಹುದೊ ಏನೋ..ಅದರೆ ನಾವು ಹೇಳದಿದ್ದರೆ ನಮ್ಮ ಹುಡುಗಿಯರ ಸಂಕಷ್ಟದ ಅರಿವು ಹೊರ ಜಗತ್ತಿಗೆ ತಿಳಿಯುವುದು ಹೇಗೆ?.

ಈ ಮೆಸ್ಸೆಂಬ ಮಾಸ್ಟ್ರ ಮನೆಯಲ್ಲಿ ನಮಗೆ ಹುಡುಗಿಯರಿಗಾಗಿ ಒಂದು ಸುಮಾರು 15×15 ಅಡಿಯ ಕೋಣೆ ಇತ್ತು‌‌.ಕುಳಿತುಕೊಳ್ಳಲು ಬೆಂಚು ಬರೆಯಲು ಡೆಸ್ಟ್ ಇತ್ತೆಂದು ನೆನಪು..

ಮಲಗಲು ಉಣ್ಣಲು  ಉದ್ದದ ಕೋಣೆ ಇತ್ತು ಅದರಲ್ಲಿ ಸಾಲಾಗಿ ಚಾಪೆ ಹಾಸಿಗೆ ಹಾಸಿ ಮಲಗುತ್ತಿದ್ದೆವು

ಬಟ್ಟೆ ಒಣಗಿಸಲು ಹೊರಗೆ ಬಳ್ಳಿ ಹಾಕಿ ವ್ಯವಸ್ಥೆ ಮಾಡಿದ್ದರು.ಅಗಿನ ಕಾಲ ಒಳ ಬಟ್ಟೆಯನ್ನು ಹುಡುಗಿಯರು ಹೊರಗೆ ಒಣ ಹಾಕವಂತರಲಿಲ್ಲ.ಎಲ್ಲರೂ ಒಳ ಬಟ್ಟೆಯನ್ನು ಇ ಕೋಣೆಯ ಲ್ಲಿಯೇ ಒಣಗಲು ಹಾಕಬೇಕಾಗಿತ್ರು .

.ನಾವೆಲ್ಲರೂ ಪ್ರಾಪ್ತ ವಯಸ್ಸಿನ ಹುಡುಗಿಯರು‌ ಪ್ರತಿ ತಿಂಗಳು ಮುಟ್ಟಾಗುದು ಸಹಜವಾದ ವಿಚಾರವೇ..ಅಗಿನ್ನೂ ಪ್ಯಾಡ್ ಗಳ ಬಳಕೆ ಇಷ್ಟು ಇರಲಿಲ್ಲ‌ನಾವೆಲ್ಲ ಅಮ್ಮನ ಹಳೆಯ ಸೀರೆಯ ತುಂಡನ್ನೇ ದಪ್ಪಕ್ಕೆ ಕಟ್ಟಿ ಬಳಸುತ್ತಿದ್ದೆವು.

ಎಷ್ಟೇ ಕ್ಲೀನಾಗಿ ತೊಳೆದಿದ್ದರೂ ತಕ್ಷಣವೇ ಒಣಗದೆ ಮಳೆಗಾಲ ಚಳಿಗಾಲದಲ್ಲಿ ಇದು ಕಮಟು ವಾಸನೆ ಬರುತ್ತಿತ್ತು.ತಿಂಗಳಿನ ಎಲ್ಲ ದಿನಗಳಲ್ಲೂ ಒಬ್ಬರಲ್ಲ ಒಬ್ಬರ ಮುಟ್ಟಿನ ಬಟ್ಟೆ ಇದ್ದೇ ಇರುತ್ತಿತ್ತು.ಇದರ ಅಸಹನೀಯ ವಾಸನೆಯ ನಡುವೆ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ನಮಗಿತ್ತು.ನಮ್ಮದೇ ಆಗಿದ್ದರೂ ವಾಸನೆ ವಾಸನೆಯೇ ಅಲ್ವೇ ? ಇದನ್ನು ಸಹಿಸುವುದು ನಮಗೆ ತೀರಾ ಕಷ್ಟ ಆಗಿತ್ತು 


ಹಾಗಾಗಿ ನಾವೆ ಅಡಿಗೆ ಮಾಡಿ ಇರುವಮತೆ ಸಣ್ಣ ಬಾಡಿಗೆ ಕೋಣೆಯನ್ನು ಎರಡನೆಯ ವರ್ಷಕ್ಕಾಗುವಾಗ ಹುಡುಕಿದೆವು.ಮೆಸ್ಸಿಗೆ ಸುಮಾರು ಎರಡು ಕಿಲೊಮೀಟರ್ ದೂರದಲ್ಲಿ ಪೆಜತ್ತಾಯರ ಮನೆಯಲ್ಲಿ ಒಂದು ಕೋಣೆ ಬಹಳ ಕಡಿಮೆ ಬಾಡಿಗೆಗೆ ನಮಗೆ ಸಿಕ್ತು .

ಮೆಸ್ಸಿನ ಲೆಕ್ಕ ಚುಕ್ತ ಮಾಡಿ  

ನಾನು ಮತ್ರು ತಮ್ನ ಈಶ್ವರ ಭಟ್  ನಮ್ಮ ಬಟ್ಟೆ ಬರೆಯನ್ನು ಹಳೆಯ ಪೆಟ್ಟಿಗೆಯಲ್ಲಿ ತುಂಬಿಸಿ ಹಾಸಿಗೆಯನ್ನು ಚಾಪೆ ಸಮೇತ ಸುರುಳಿ ಸುತ್ತಿ ತಲೆಯಲ್ಲಿ ಒಂದರ ಮೇಲೆ ಒಂದು ಇರಿಸಿಕೊಂಡು ಪೆಜತ್ತಾಯರ ಬಾಡಿಗೆ ಕೋಣೆಗೆ ನಡೆದೆವು.

ನಾವು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಬಾಡಿಗೆಗೆ ಕೋಣೆ ಸಿಕ್ಕಿದ ಕಾರಣ ಬಹಳ ಖುಷಿಯಲ್ಲಿ ಪೆಟ್ಟಿಗೆ ಹೊತ್ರು ಸಂಭ್ರಮದಿಂದ ನಡೆದಿದ್ದೆವು.

ಹಳ್ಳಿಯಲ್ಲಿ ಹುಟ್ಡಿ ಬೆಳೆದ ನಮಗೆ ಕಟ್ಟು ಹೊತ್ತು ಅಭ್ಯಸ ಇತ್ತು.ನಮ್ಮ‌ಮನೆ ತನಕ ರಸ್ತೆ ಆಗ ಇರಲಿಲ್ಲ‌ ಸುಮಾರು ಅರ್ಧ ಕಿಲೋ ಮೀಟರ್ ದೂರದಿಂದ ಗಸಂಡಿಯ ಕಾಲುದಾರಿಯಲ್ಲಿ( ನೀರು ಹರಿದು ಕೊರಕಲಾದ ಕಣಿಯ ದಾರಿ) ಮನೆಗೆ ಬೇಕಾದ ಎಲ್ಕ ವಸ್ತುಗಳನ್ನೂ ತಕೆ ಹೊರೆಯಲ್ಲಿಯೇ ತರಬೇಕಾಗಿತ್ತು.ಮನೆ ಕಟ್ಟುವ ಮುರಕಲ್ಲು ಓಡು,ಹೊಯಿಗೆ  ಬೈ ಹುಲ್ಲು ಹೀಗೆ ಎಲ್ಲ ವಸ್ತುಗಳನ್ನೂ ತಂದೆ ತಾಯಿಯರ ಜೊತೆಗೆ ನಾವು ಮಕ್ಕಳೂ ಹೊತ್ತು ತರುತ್ತಿದ್ದ ಕಾರಣ ನಮಗೆ ನಮ್ಮ ಹಾಸಿಗೆ ಬಟ್ಟೆ ಬರೆಯ ಪೆಟ್ಟಿಗೆಯ ಭಾರ ಹೊರುದೇನೂ ಕಷ್ಟದ್ದಾಗಿರಲಿಲ್ಲ.ಮೆಸ್ಸಿನ ಸಹಪಾಠಿಗಳ ಎದುರು ಹೊತ್ತು ಕೊಂಡು ಹೋಗುದು ಸ್ವಲ್ಪ ಅವಮಾನ ಎನಿಸಿತ್ತು ನನಗೆ.ಈಗಲಾದರೆ ನಾನು ಹೆಮ್ಮೆ ಪಡುತ್ತಿದ್ದೆ.ಅದು ಆಗಿನ‌ ಮನಸ್ಥಿತಿ.

ಮುಂದೆ ಸ್ವಂತ ಅಡುಗೆಯ ವೈಭವ ಶುರು ಆಯಿತು.ಅಗೆಲ್ಲ ಸೀಮೆ ಎಣ್ಣೆಯ ಸ್ಟೌ ಬಳಸುತ್ತಿದ್ದೆವು.ಅಕ್ಕಿಯನ್ನು ಚೆನ್ನಾಗಿ ಕುದಿ ಬರಿಸಿ ನಾವೇ ತಯಾರಿಸಿದ ಬೈ ಹುಲ್ಲಿನ ಪೆಟ್ಟಿಗೆಯಲ್ಲಿ ಮುಚ್ಚಿ ಇರಿಸುತ್ತಿದ್ದೆ.

ಒಂದು ಗಂಟೆ ಕಳೆವಾದ ಅಕ್ಕಿ ಬೆಂದು ಅನ್ನವಾಗಿರುತ್ತಿತ್ತು.ಪೆಜತ್ತಾಯರ ಮನೆಯ ಅಡಿಗೆ ಕೋಣೆಗೆ ಹೋಗಿ ಕೆರೆಮಣೆ( ಹೆರೆಮಣೆ) ಯಲ್ಲಿ ತೆಮಗಿನ ಕಾಯಿ ಕೆರೆದ( ಹೆರೆದು) ಅವರದೇ ಕಡೆಗಲ್ಲಿನಲ್ಲಿ ಕಡೆದು ತಂದು ಕೊದ್ದೆಲ್ ಮಾಡ್ತಿದ್ದೆ..

ಅಮ್ಮ ಮುಟ್ಟದಾಗ ಮನೆಯಲ್ಲಿ ಅಡುಗೆ ಮಾಡಿ ಗೊತ್ತಿತ್ತಲ್ವ ಹಾಗಾಗಿ ಅಡುಗೆ ಮಾಡುದೇನೂ ಕಷ್ಟವಾಗಲಿಲ್ಲ ನನಗೆ ಹಾಗೆ ನೋಡಿದರೆ ಸೌದೆ ಉರಿಯ ಒಲೆಗಿಂತ ಸಿಮೆ ಎಣ್ಣೆಯ ಸ್ಟೌ ವುನಲ್ಲಿ ಅಡುಗೆ ಮಾಡುದು ಸುಲಭ ಎನಿಸಿತ್ತು ನಮಗೆ.ನಾವು ಊರಿನಿಂದ ಸ್ಟೋರ್ ( ನ್ಯಾಬೆಲೆ ಅಂಗಡಿ) ಯಲ್ಲಿ ಕಡಿಮೆಗೆ ಸಿಗುತ್ತಿದ್ದ ಸೀಮೆ ಎಣ್ಣೆಯನ್ನು ತಗೊಂಡು ಹೋಗುತ್ತಿದ್ದೆವು

ಇದರಿಂದಾಗಿ  ನಮ್ಮ ಖರ್ಚು ಕಡಿಮೆ ಆಯಿತು.ನನಗಂತೂ ಆ ಕಮಟು ವಾಸನೆಯಿಂದ ಪಾರಾಗಿ ಮೋಕ್ಷ ಪಡೆದಷ್ಟು ಸಂತಸವಾಗಿತ್ತು.ಮೆಸ್ಸಿಗೆ ಸಂಬಂಧಿಸಿದಂತೆ ಇನ್ನೊಂದು ಮುಖ್ಯ ವಿಚಾರ ಹೇಳಲಿಕ್ಕಿದೆ .ಈಗ ಹೇಳಲು ಕಾಲ ಅಥವಾ ನಾನು ಪರಿಪಕ್ವವಾಗಿಲ್ಲ.ಅದನ್ನು ನಿರುಮ್ಮಳವಾಗಿ ಹೇಳುವಷ್ಡು ಪ್ರೌಢತೆಯನ್ನು ಹೊಂದಿಲ್ಲ..ಮುಂದೆ ಕಾಲ ಬಂದಾಗ ಹೇಳುವೆ

Tuesday 28 March 2023

ಆತ್ಮ ಕಥೆ

 ಲಕ್ಷ್ಮೀ ಜಿ ಪ್ರಸಾದ್ ನಿಮ್ಮ ತಾಯಿಗೆ ಗೊತ್ತಾ ನಿಮ್ಮ ಅಜ್ಜಿಗೆ ಗೊತ್ತಾ ..?


ಹೀಗೆ ಕೇಳದ್ದು ರಘುಪತಿ ತ್ಹಾಮಣ್ಕರರ ಪುಣ್ಯವೋ ಲಕ್ಷ್ಮೀ ಪ್ರಸಾದರ ಪುಣ್ಯವೋ‌  ಗೊತ್ತಿಲ್ಲ..


ಕೆಲವು ಸಮಯದ ಹಿಂದೆ ದೆಹಲಿಯ ದೊಡ್ಡ ಕನ್ನಡ ತುಳು ಅಭಿಮಾನಿ ಸಂಘಟಕರೊಬ್ಬರು ಯಾವುದೋ ಕಾರ್ಯಕ್ರಮದ ಬಗ್ಗೆ fb ಯಲ್ಲಿ ಹಾಕಿದ್ದರು.ಅದರಲ್ಲಿ ಯಾರನ್ನೋ ಉಪನ್ಯಾಸಕ್ಕೆ ಕರೆದಿದ್ದರು


ಆ ಸಂಘಟಕರ ಸ್ನೇಹಿತರಾದ ನಮಗೂ ಆತ್ಮೀಯರಾದ ನಿವೃತ್ತ ಬ್ಯಾಂಕ್ ಮ್ಯಾನೇಜರರೂ ಸಾಹಿತಿಗಳೂ ಗಾಯಕರೂ ಆಗಿರುವ ರಘುಪತಿ ತ್ಹಾಮಣ್ಕರ್ ಅವರು ಆ ಪೋಸ್ಟ್ ನ ಕಮೆಂಟ್ ನಲ್ಲಿ ಲಕ್ಷ್ಮೀ ಜಿ ಪ್ರಸಾದರನ್ನೂ ಕರೆಯಿರಿ ಎಂದು ಕಮೆಂಟ್ ಮಾಡಿ ನನ್ನನ್ನೂ ಟ್ಯಾಗ್ ಮಾಡಿದ್ದರು

ಅವರು ಟ್ಯಾಗ್ ಮಾಡಿದ ಕಾರಣ ಆ ಪೋಸ್ಟ್ ಗಮನಕ್ಕೆ ಬಂದು ನೋಡಿದೆ..ಅದರಲ್ಲಿ ಅನೇಕರು ಆ ಸಂಘಟಕರ ಒಳ್ಳೆಯ ಕಾರ್ಯವನ್ನು ಮೆಚ್ಚಿ ಅಭಿನಂದಿಸಿದ್ದರು.ಅದಕ್ಕೆಲ್ಲ ಅವರು ಪ್ರತಿಕ್ರಯಿಸಿ ಧನ್ಯವಾದ ಸೂಚಿಸಿದ್ದರು.ಆ ಸಂಘಟಕರು ನನಗೂ ಪರಿಚಿತರಾಗಿದ್ದು ನನ್ನ ಹಿತೈಷಿ ಎಂದೇ ನಾನು ಆ ತನಕ ಭಾವಿಸಿದ್ದೆ.ರಘುಪತಿ ತ್ಹಾಮಣ್ಕರರ ಕಮೆಂಟಿಗೆ ನನ್ನನ್ನು ಕರೆಸಕಾಗದ ಬಗ್ಗೆ ಏನಾದರೊಂದು ಸಮಜಾಯಿಸಿ ನೀಡಬಹುದೆಂದು ಭಾವಿಸಿದ್ದೆ..ಅವರ ಕಮೆಂಟಿಗೆ ಇವರದೊಂದು ನೋಡಿದ್ದರ ಸೂಚಕವಾಗಿ ಲೈಲ್ ಕೂಡ ಇರಲಿಲ್ಲ..


ಅದನ್ನು ಗಮನಿಸಿದ ಯಾರೋ ಈ ಬಗ್ಗೆ ಏನೋ ಆಕ್ಷೇಪಿಸಿ ಕಮೆಂಟಿಸಿದರು

ಆಗ ಅವರು ರಘುಪತಿ ತ್ಹಾಮಣ್ಕರರಿಗೆ ನೀವು ಕಾರ್ಯಕ್ರಮ ಸ್ಪಾನ್ಸರ್ ಮಾಡ್ತಿದ್ದರೆ ನಿಮ್ಮ ಕಮೆಂಟಿಗೆ ಪ್ರತಿಕ್ರಿಯೆ ನೀಡ್ತಿದ್ದೆ ಎಂದರು..

ಅವರ ಪ್ರತಿಕ್ರಿಯೆ ನೋಡಿ ನನಗೂ ಅಚ್ಚರಿ ಆಯಿತು.ಸಾಮಾನ್ಯವಾಗಿ ಯಾರಾದರೂ ಯಾರನ್ನಾದರೂ ರೆಫರ್ ಮಾಡಿದರೆ ಮುಂದೆ ಅವಕಾಶ ಸಿಕ್ಕಾಗ ಕರೆಸುತ್ತೇವೆ ಎಂದು ಹೇಳುದು ಸಜ್ಜನಿಕೆ...ಕರೆಸುದು ಬಿಡುದು ನಂತರದ್ದು..


ಆದರೆ  ಅಂತಹ ಸಜ್ಜನಿಕೆಯ ಮಾತುಗಳೂ ಅವರಿಂದ ಬಾರದ್ದು ನನಗೂ ಅಚ್ಚರಿ ಎನಿಸಿತ್ತು..ನನ್ನ ಹಿತೈಷಿಗಳೆಂದು ಭಾವಿಸಿದ್ದು ನನ್ನ ತಪ್ಪೆಂದು ನನಗೆ ಅರಿವಾಯಿತು..


ಇರಲಿ..


ರಾಘವೆಂದ್ರ ಹುಣಸೂರರಿಗಿಂತ ಇವರು ಬೆಟರ್..ಯಾಕೆಂದರೆ ರಘುಪತಿ ತ್ಹಾಮಣ್ಕರರಲ್ಲಿ ಲಕ್ಷ್ಮೀ ಜಿ ಪ್ರಸಾದ್ ನಿಮ್ಮ ತಾಯಿಗೆ ಗೊತ್ತಾ ? ಅಜ್ಜಿಗೆ ಗೊತ್ತಾ ? ಅವರು ಎಡಪಂಥದವರಿಗೆ ಗೊತ್ತಾ ? ನಾವು ಎಡಚರನ್ನು ಮಾತ್ರ ಕರೆಯುವುದೆಂದು ನಿಮಗೆ ಗೊತ್ತಿಲ್ವ ?ಬಲ ಪಂಥದವರನ್ನು ನಾವು ಹಾಗೆಲ್ಲ ಕರೆಯುವುದಿಲ್ಲ ಎಂದು ನಿನಗೆ ಗೊತ್ತಿಲ್ವ ?/ ಅವರಿಗೆ ಬಕೆಟ್ ಹಿಡಿಯಲು ಬರುತ್ತಾ ? ನಮ್ಮನ್ನು ಕರೆಸಿ ಅವರು ಹಾರ ತುರಾಯಿ ಹಾಕಿ ಇಂದ್ರ ಚಂಸ್ರ ಎಂದು ಹೊಗಳಿ ಆಕಾಶಕ್ಕೇರಿಸಿದ್ದಾರಾ ? ಎಂದು ಕೇಳಲಿಲ್ಲವಲ್ಲ..ಅದೇ ಪುಣ್ಯ..


ಇಷ್ಟಕ್ಕೂ ಯಾರೋ ಕರೆದು ನಾನು ಹೋಗಿ ಉಪನ್ಯಾಸ ನೀಡಿ ನಾನು ನಾನಾಗಿದ್ದಲ್ಲ..ನನ್ನ ಬರವಣಿಗೆ ಮತ್ತು ಓದುಗರ ಕೊಂಡಿಯಾಗಿ ಬಂದದ್ದು ಬ್ಲಾಗ್ fb ವಾಟ್ಸೊ್ ಮತ್ತು ಪುಸ್ತಕಗಳು..ಮೊದಲೊಂದು ಕಾಲವಿತ್ತು.ಯಾರೋ ಕರೆದು ಅವಕಾಶ ಕೊಟ್ಟರೆ ಮಾತ್ರ ತಮ್ಮ ಅಧ್ಯಯನದ ವಿಚಾರಗಳನ್ನು ಹೊರ ಜಗತ್ತಿಗೆ ತಿಳಿಸಲು ಸಾಧ್ಯವಿತ್ತು.ಈಗ ಹಾಗಲ್ಲ..ಬರಹಗಳನ್ನು ಚೆನ್ನಾಗಿದ್ದರೆ ದೇಶ ವಿದೇಶದ ಲಕ್ಷಾಂತರ ಓದುಗರನ್ನು ಕ್ಷಣ ಮಾತ್ರದಲ್ಲಿ ತಲುಪುತ್ತವೆ.ಹಾಗಾಗಿ ಇಂತಹವರಿಗೆ ಬಕೆಟ್ ಹಿಡಿಯುವ ಅಗತ್ಯ ನಮಗಿಲ್ಲ ಈಗ .ಜಾತಿ ರಾಜಕೀಯ ಸಣ್ಣತನ ಅಹಂಕಾರ ಕಾಲೆಳೆಯುವಿಕೆ ಇದೆಲ್ಲ ನಾನಿರುವ ತನಕ ಅವರಿರುವ ತನಕ ಮಾತ್ರ..ನಂತರ ನನ್ನ ಅಧ್ಯಯನ , ಪುಸ್ತಕಗಳೇ ಮಾತಾಡುತ್ತವೆ..

ಆದರೆ ಇಂತಹವರಿದ್ದರೆಂದು ತಿಳಿಸುವ ಸಲುವಾಗಿ ಆತ್ಮಕಥೆಯಲ್ಲಿದನ್ನು ಬರೆಯಬೇಕೆಂದಿದ್ದೆ.ಆದರೆ

ಈ ವಿಚಾರ ನನಗೆ ಮರೆತೇ ಹೋಗಿತ್ತು..ರಾಘವೇಂದ್ರ ಹುಣಸೂರರ ಕೃಪೆಯಿಂದ ನೆನಪಾಯಿತು..😁😁

ನೆನಪಾದ ಕಾರಣ ಈಗಲೇ ಬರೆದಿಡುವೆ..


ಅದು ಸರಿ..ಆ ವ್ಯಕ್ತಿ ಯಾರು ?....

.

.

.

.

.

.

.

.

.

.

.

.

.

.

.

.

ನನ್ನ ಆತ್ಮಕಥೆಯಲ್ಲಿ ತಿಳಿಸುತ್ತೇನೆ..ಈಗಲೇ ತಿಳಿಸಿದರೆ ಸ್ವಾರಸ್ಯವಿರುವುದಿಲ್ಲ.ಅಲ್ವ?

.

Wednesday 21 December 2022

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು Saviradondu daivagalu online bookng or purchase started pls contact Dr Lakshmi prasad 9480516684








ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು 
Karavaliya saviradondu daivagalu by Dr Lakshmi G prasad 

ಪುಟಗಳು 1036 

ಬೆಲೆ 2000₹


 Saviradondu daivagalu online bookng started pls contact Dr Lakshmi prasad 9480516684 Dr Laxmi prasad / Dr lakshmi G prasad 

book price 2000₹

pages : 1036 

Size A4 crown 

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕಕ್ಕಾಗಿ ಸಂಪರ್ಕಿಸಿ ಡಾ.ಲಕ್ಷ್ಮೀ ಜಿ ಪ್ರಸಾದ್  9480516684 

now you can online purchase  karavaliya saviradondu daivagalu book pls contact 9480516684 


ನಮಸ್ಕಾರ 

ನಾನು ಡಾ.ಲಕ್ಷ್ಮೀ ಜಿ ಪ್ರಸಾದ್ ,ಕನ್ನಡ ಉಪನ್ಯಾಸಕಿ ಸರ್ಕಾರಿ ಪಿಯು ಕಾಲೇಜು ಬೆಂಗಳೂರು  ಮೊಬೈಲ್ 9480516684 

ನಾನು ,ಮೂಲತಃ ಕಾಸರಗೋಡಿನ ಪುಟ್ಟ ಗ್ರಾಮ ಕೊಳ್ಯೂರಿನ ವಾರಣಾಸಿಯವಳು ,ಗಂಡನ ಮನೆ ಕೋಡಪದವು ಬಂಟ್ವಾಳ  ತಾಲೂಕು

ಚಿಕ್ಕಂದಿನಿಂದಲೇ ದೈವಾರಾಧನೆ ಬಗ್ಗೆ ಆಸಕ್ತಿ ಹೊಂದಿದ್ದು,ಎಂಎ(ಸಂಸ್ಕೃತ)  ಮೊದಲ ರ‌್ಯಾಂಕ್  ಎಂಎ ( ಹಿಂದಿ)   ಎಂಎ( ಕನ್ನಡ)ಮೂರನೆಯ ರ‌್ಯಾಂಕಿನೊಂದಿಗೆ  ಮೂರು ಸ್ಪನಾತಕೋತ್ತ ಪದವಿಗಳನ್ನು  ಗಳಿಸಿ ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ   ಎಂಫಿಲ್ ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದಿರುವೆ.25 ಪುಸ್ತಕಗಳು ಹಾಗೂ ಆರುನೂರಕ್ಕಿಂತ ಹೆಚ್ಚಿನ ಬರಹಗಳು ಪ್ರಕಟವಾಗಿದೆ

ಇದರಲ್ಲಿ ಇತ್ತೀಚೆಗೆ ಪ್ರಕಟಿತ ಕರಾವಳಿಯ ಸಾವಿರದೊಂದು ದೈವಗಳು ಎಂಬ 1036 ಪುಟಗಳ A4 ಗಾತ್ರದ ಬೃಹತ್ ಗ್ರಂಥದಲ್ಲಿ  ಕಾರವಾರದಿಂದ ಹಿಡಿದು ಕಣ್ಣಾನ್ನೂರು ತನಕ ಆರಾಧನೆಗೊಳ್ಳುವ ಕನ್ನಡ ತುಳು ಕೊಡವ ಮಲೆಯಾಳ ಪರಿಸರದ 1253 ದೈವಗಳ ಮಾಹಿತಿ ಇದೆ  

ಅದನ್ನು ತೆರೆದಾಗಲೆಲ್ಲ  ನನಗನಿಸುವದ್ದು ಇದೇ ಭಾವ..ಈ ಪುಸ್ತಕವನ್ನು ನಾನು ಬರೆದೆನೇ ? ಎಂದು ಸೋಜಿಗ ಆಗುತ್ತದೆ.

ಇಲ್ಲ..ನನ್ನಂಥಹ ಸಾಮಾನ್ಯ ಮಹಿಳೆಗೆ ಯಾವುದೇ ಸಂಘ ಸಂಸ್ಥೆಗಳ ಅಕಾಡೆಮಿಯ ಯೂನಿವರ್ಸಿಟಿಯ ಅನುದಾನ ಸಹಾಯವಿಲ್ಲದೆ 1253 ದೈವಗಳ ಮಾಹಿತಿ ಸಂಗ್ರಹ ,ವಿಶ್ಲೇಷಣೆ ಅಸಾಧ್ಯವಾದ ವಿಚಾರ..ದೈವ ದೇವರುಗಳೇ ಮಾಹಿತಿ ಒದಗಿಸಿ ವಿಚಕ್ಷಣಾ ಬುದ್ಧಿಯನ್ನು ಕೊಟ್ಟು ಕೈ ಹಿಡಿದು ಬರೆಸಿದ್ದಾರೆ ಎಂದಷ್ಟೇ ಹೇಳಬಲ್ಲೆ.ಇದರಲ್ಲಿ ಅನೇಕರ ಸಹಕಾರ  ಇದೆ .ಅದನ್ನೆಂದಿಗೂ ಮರೆಯಲಾರೆ 

ಈ ಗ್ರಂಥದ ಮಾಹಿತಿಯನ್ನು ಡಾ.ನಾ ಮೊಗಸಾಲೆ ಅವರ ಮಾತಿನೊಂದಿಗೆ ಕೆಳಗೆ ನೀಡಿರುವೆ

ಇದನ್ನು ನೀವು ತಮ್ಮ ವೈಯುಕ್ತಿಕ ಬಳಕೆಗೆ ಹಾಗೂ ಗಣ್ಯರಿಗೆ ಉಡುಗೊರೆ ಹಾಗೂ ಶಾಲಾ ಕಾಲೇಜುಗಳ ಗ್ರಂಥಾಲಯಕ್ಕೆ ನೀಡುವುದಕ್ಕಾಗಿ ಖರೀದಿಸಬೇಕಾಗಿ ಕೋರುತ್ತೇನೆ.ಎರಡು ದಶಕಗಳ ಕಾಲ ಕ್ಷೇತ್ರ ಕಾರ್ಯ ಅಧ್ಯಯನ ಹಾಗೂ ಪ್ರಕಟಣೆಗೆ ನನಗೆ ಅರುವತ್ತು- ಎಪ್ಪತ್ತು  ಲಕ್ಷಕ್ಕಿಂತ ಹೆಚ್ಚು ದುಡ್ಡು ಖರ್ಚಾಗಿದೆ  . ,ನಾನು ಇದನ್ನು ನನ್ನ ಸ್ವಂತ ದುಡ್ಡಿನಲ್ಲಿ ಮಾಡಿರುವೆ.ಯಾವುದೇ ಸಂಘ ಸಂಸ್ಥೆಗಳ ಯೂನಿವರ್ಸಿಟಿಯ ಅನುದಾನ ನನಗೆ ಲಭಿಸಿರುವುದಿಲ್ಲ .ಹಾಗಾಗಿ ಗೌರವ ಪ್ರತಿ ನೀಡಲು ಅಸಾಧ್ಯ .ಆದರೆ ನಿಮ್ಮಂತಹವರು ಈ ಪುಸ್ತಕ ಓದಬೇಕು  ಎಲ್ಲೆಡೆ ಈ ಪುಸ್ತಕ ಜನರಿಗೆ  ಮಾಹಿತಿಗಾಗಿ ಲಭ್ಯವಾಗಬೇಕು ಎಂಬ ಆಶಯ ನನಗುದೆ  ಹಾಗಾಗಿ ಪುಸ್ತಕದ ಪ್ರತಿಗಳನ್ಮು  ಖರೀದಿಸುವಂತೆ ಮನವಿ ಮಾಡಿರುವೆ .ಡಾ.ವೀರೇಂದ್ರ ಹೆಗ್ಗಡೆ, ಬೆಂಗಳೂರು ಯೂನಿವರ್ಸಿಟಿ ಪ್ರೊಫೆಸರ್.ರಾಜಪ್ಪ ದಳವಾಯಿ ,ಕ್ರೈಸ್ಟ್ ಕಾಲೇಜು ,, ಮಂಗಳೂರು ಯೂನಿವರ್ಸಿಟಿ ವಿ ಸಿ ಡಾ.ಪಿ ಎಸ್ ಯಡಪಡಿತ್ತಾಯ ಮೊದಲಾದವರು ಖರೀದಿಸಿ ಓದಿ ಮೆಚ್ಚಿದ್ದಾರೆ 

ಪುಸ್ತಕ ಖರೀದಿಸುವುದಾದರೆ ರಿಜಿಸ್ಟರ್ ಪೋಸ್ಟ್‌ ಮೂಲಕ ಕಳುಹಿಸಿ ಕೊಡುವ ವ್ಯವಸ್ಥೆ ನಮ್ಮಲ್ಲಿದೆ.ನಿಮ್ಮ ಪೂರ್ಣ ಬೆಂಬಲವನ್ನು ಅಪೇಕ್ಷಿಸುತ್ತೇನೆ 

ಧನ್ಯವಾದಗಳು

ಡಾ.ಲಕ್ಷ್ಮೀ ಜಿ ಪ್ರಸಾದ್

#5 ನಂದನತೋಟ

ಮಂಗನಹಳ್ಳಿ ಕ್ರಾಸ್

ಉಳ್ಳಾಲು ಮುಖ್ಯ ರಸ್ತೆ.

ಬೆಂಗಳೂರು :560110

ಮೊಬೈಲ್ : 9480516684 






ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ

- ಡಾ.ನಾ ಮೊಗಸಾಲೆ 

ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು .ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು  ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು. 


ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು  ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು  ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.


ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು  ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ  ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು , ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) ನಾಲ್ಕು ನೂರ ಏಳು ದೈವಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.


ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ಇನ್ನೂರ ಮೂವತ್ತು   ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.


ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು  ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ. 


ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ! 

ಡಾ. ಲಕ್ಷ್ಮೀ ಪ್ರಸಾದರು ಸಂಸ್ಕೃತ( ಮೊದಲನೆಯ ರ‌್ಯಾಂಕ್) ಹಿಂದಿ ಮತ್ತು ಕನ್ನಡ( ನಾಲ್ಕನೆಯ ರ‌್ಯಾಂಕ್), ದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು  ಎಂ.ಫಿಲ್ ಪದವಿ  ಹಾಗೂ ಎರಡು ಪಿ.ಹೆಚ್.ಡಿ ಪದವಿಗಳ‌ ಗರಿಯೂ ಅವರ ಸಾಧನೆಗೆ ದಕ್ಕಿದೆ. 


ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ  ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ   ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ.


ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ  ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಆಧಾರಿತ ಅಧ್ಯಯನ ಅಪರೂಪದಲ್ಲಿ ಅಪರೂಪದ್ದು.


 ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟು ವಿಶ್ಲೇಷಿಸಲ್ಪಟ್ಟ ಅವರ ಸಂಶೋಧನೆಯ  ಆಯ್ದ ಸಾವಿರದ ಇನ್ನೂರ ಐವತ್ತಮೂರು   ದೈವ(1253)ಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ. 


ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.


ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.


ಸ್ಥಳ : ಕಾಂತಾವರ           ಡಾ.ನಾ.ಮೊಗಸಾಲೆ

 ದಿ: 01.08.2021          ಕನ್ನಡ ಸಂಘ, ಕಾಂತಾವರ


 ಕರಾವಳಿಯ ಸಾವಿರದೊಂದು ದೈವಗಳು

ಅನುಕ್ರಮಣಿಕೆ 315  ಅಧ್ಯಾಯಗಳು

1 ಅಕ್ಕಚ್ಚು

2- ಅಕ್ಕ ಬೋಳಾರಿಗೆ

3-4ಅಕ್ಕೆರ್ಲು- ಅಂಬೆರ್ಲು

5-6 ಅಚ್ಚು ಮತ್ತು ಮೆಚ್ಚು ಬಂಗೇತಿಯರು

7 ಅಗ್ನಿ ಕೊರತಿ

8-13  ಅಗ್ನಿ ಭೈರವನ್ ಮತ್ತು ಪರಿವಾರ 

13- 15 ಅಜ್ಜ ಬಳಯ  ಮತ್ತು ಮಾಮಿ ಕುಲೆ

15-17 ಅಜ್ಜಮ್ಮ ದೇವರು ಮತ್ತು ಪರಿವಾರ 

18-26 ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು

27  ಅಜ್ಜಿ ಬೆರೆಂತೊಲು

28-29 ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ

30 ಅಡ್ಯಲಾಯ

31   ಅಡ್ಯಂತಾಯ

32-33 ಅಡಿ ಮಣಿತ್ತಾಯ ಮತ್ತು ಅಡಿಮರಾಂಡಿ

34-35  ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು

36-37  ಅಣ್ಣೋಡಿ ಕುಮಾರ- ಕಿನ್ಯಂಬು

38  ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ

39 -40 ಅರಬ್ಬಿ ಮತ್ತು ಬ್ರಾಂದಿ 

41-44 ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು

45 ಅಸುರಾಳನ್/ ಅಸುಳಾನುಂ ಮಕ್ಕಳು

46-47 ಅಂಗಕ್ಕಾರನ್ ಮರುಟೋಳನ್

48 ಅಂಗಾರ ಬಾಕುಡ

49 ಅಂಮಣ ಬನ್ನಾಯ

50-51 ಅಂಕೆ- ಉಮ್ಮಯ

52  ಆಚಾರಿ ಭೂತ

53 ಆಟಕಾರ್ತಿ

54  ಆಟಿ ಕಳೆಂಜ

55-57 ಆದಿ ವೇಡನ್ ಮತ್ತು ಪರಿವಾರ 

58 ಇಷ್ಟಜಾವದೆ 

59 ಉಗ್ಗೆದಲ್ತಾಯ 

60 ಉಮ್ಮಲ್ತಿ 

61-62 ಉಪ್ರಝಾಸ್ಸಿ ಮತ್ತು ಉಚ್ಚಬಲಿ ತೆಯ್ಯಂ

63-64 ಉರವ ಎರುಬಂಟ

65-88 ಉಳ್ಳಾಕುಲು   ಮತ್ತು ಉಳ್ಳಾಲ್ತಿ ದೈವಗಳು

89-90 ಎರು ಶೆಟ್ಟಿ( ಮಲೆ ಮುದ್ದ)

91-92  ಎಂಬ್ರಾನ್ ದೇವ- ಐಪ್ಪಳ್ಳಿ

93-99 ಏಲುವೆರ್ ಸಿರಿಕುಲು

100 ಒಕ್ಕು ಬಲ್ಲಾಳ

101-102 ಒರುಬಾಣಿಯೆತ್ತಿ ,ನೆಲ್ಲೂರಾಯ 

 103- 105 ಓಣಂ ದೈವಗಳು

106 ಓಟೆಚರಾಯ

107: ಕಟ್ಟು ಎಡ್ತುನ್ ಕುಟ್ಟಿ

‌108 ಕಟ್ಟದಲ್ತಾಯ

‌109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ

111-112 ಕಡಂಬಳಿತ್ತಾಯ,ಕೊಡಂಬಿಲ್ತಾಯ

113-114 ಕನಪಾಡಿತ್ತಾಯ ಮತ್ತು ಮಗ್ರಂದಾಯ

115  ಕನ್ನಡ ಕಲ್ಕುಡ

116  ಕನ್ನಡ ಬೀರ

117 ಕನ್ನಡ ಭೂತ

118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ

120 ಕನಿಯತಿ

121  ಕಪ್ಪಣ್ಣಣಿಕ/ ಕಾರ್ಯಸ್ಥನ್ 

 123-124 ಕರಿಯಣ್ಣ ನಾಯಕ ಮತ್ತು ಕೋಟಿ ನಾಯಕ 

125 ಕರಿಯ ಮಲ್ಲಯ್ಯ

  126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು 

134 -135 ಕರ್ನಗೆ ಮತ್ತು ಮಲಾರ್ ಜುಮಾದಿ

136-137  ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು

138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು 

140  ಕಂಡನಾರ ಕೇಳನ್

141  ಕಂರ್ಭಿ ಬೈದ್ಯೆದಿ

142  ಕಾಜಿಗಾರ್ತಿ

143-153  ಕಾಡ್ಯನಾಟದ ದೈವಗಳು 

154- 155  ಕಾಡೆದಿ  ಮತ್ತು ಕಾಡ್ತಿಯಮ್ನ

156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು

158-160 ಕಾನಲ್ತಾಯ ಮತ್ತು ಪರಿವಾರ ದೈವಗಳು

161-162 ಕಾಯರ್ತಾಯ ಮಾದ್ರಿತ್ತಾಯ

163-167 ಕಾರಿ ಕಬಿಲ ದೈವಗಳು 

168 ಕಾಳರಾತ್ರಿ 

169-172 ಧರ್ಮಸ್ಥಳದಲ್ಲಿ ನೆಲೆಸಿದ ದೈವಗಳು ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ‌ ಕನ್ಯಾಕುಮಾರಿ 

173-178  ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು 

 179 ಕಾಂತು ನೆಕ್ರಿ ಭೂತ

180  ಕಿನ್ನಿದಾರು

181 ಕೀಳು ದೈವ

183-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು 

184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ  ದೈವಗಳು

186-190 ಕುಟ್ಟಿಚ್ಚಾತ್ತನ್ ,ಪಮ್ಮಚ್ಚು ಮತ್ತು ಸೇರಿಗೆ ದೈವಗಳು 

191 ಕುಡಿ ವೀರನ್ 

192 ಕುದುರೆತ್ತಾಯ / ಕುದುರೆ ಮುಖ ದೈವ

‌ 193-194 ಕುರವ ಮತ್ತು ಸತ್ಯಂಗಳದ ಕೊರತಿ

195 ಕುರುವಾಯಿ ದೈವ

‌196-203 ಕುಲೆ ಭೂತಗಳು - ತುಳುನಾಡಿನ ವಿಶಿಷ್ಟ ದೈವಗಳು

‌204   ಕುಂಞಮ್ಮ ಆಚಾರ್ದಿ

‌205  ಕುಂಞಾಳ್ವ ಬಂಟ

‌206 ಕುಂಞಿ ಭೂತ

‌207 ಕುಂಞಿ ರಾಮ ಕುರಿಕ್ಕಳ್

208 - 212 ಕುಂಜಿರಾಯ ದೈವಗಳು

213-214 ಕುಂಜಿ ಮತ್ತು ಅಂಗಾರ ದೈವಗಳು 

215  ಕುಂಜೂರಂಗಾರ

‌216 ಕುಂಟಲ್ದಾಯ

‌217 ಕುಂಟುಕಾನ ಕೊರವ

‌218-219 ಕುಂಡ - ಮಲ್ಲು ದೈವಗಳು 

220  ಕುಂಡೋದರ

221-224 ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ

225-226 ಕೇಚ ರಾವುತ ಮತ್ತು ರೇವಂತ 

‌227   ಕೇತುರ್ಲಾಯ

228-231 ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು

 232 ಕೊಟ್ಟೆದಲ್ತಾಯ

‌233 ಕೊನ್ನೊಟ್ಟು ಕಡ್ತ

‌234  ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ 

‌235 ಕೊರತಿ 

‌236 -237  ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ

238-239 ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ

240 ಅಪ್ರತಿಮ ವೀರ ಕೋಚು ಮಲ್ಲಿ 

241 242 ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು

‌243-244 ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ

‌245 ಕೋಟ್ರ ಗುತ್ತಿನ ಬಬ್ಬು 

‌246-247  ಕೋಟೆರಾಯ ಮತ್ತು ಕೋಟೇಶ್ವರ ದೈವಗಳು

248 ಕೋರಚ್ಚನ್ 

‌249 ಕೋಲು ಭಂಡಾರಿ

250   ಕೋಳೆಯಾರ ಮಾಮ

251ಗಣಪತಿ ಕೋಲ

252  ಗಂಗೆ ನಾಡಿ ಕುಮಾರ ,( ಓಡಿಲ್ತಾಯ)

253-254 ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ 

255-256 ಗಂಧರ್ವ ದೈವಗಳು

257   ಗಿಳಿರಾಮ

258  ಗಿಡಿರಾವಂತ

259 -260 ಗಿರಾವು ಮತ್ತು ಕೊಡೆಕಲ್ಲಾಯ

261 ಗುರು ಕಾರ್ನವೆರ್ 

262 ಗುರುನಾಥನ್ 

263-275 ಗುಳಿಗ ಮತ್ತು ಸೇರಿಗೆ  ದೈವಗಳು

( ಒರಿ ಮಾಣಿ ಗುಳಿಗ ,ಮಂತ್ರವಾದಿ ಗುಳಿಗ,ಸನ್ಯಾಸಿ ಗುಳಿಗ ,ತಂರ್ಜಿ ಗುತ್ತಿನ ಗುಳಿಗ ,ಮುಕಾಂಬಿ ಗುಳಿಗ,ಸಂಕೊಲಿಗ ಗುಳಿಗ,ಶಾಂತಿ ಗುಳಿಗ,ಸುಬ್ಬಿಯಮ್ಮ ಗುಳಿಗ,ಕಲಾಲ್ತಾಯ ಗುಳಿಗ ,ಜಾಗೆದ ಖಾವಂದೆರಾವು ಗುಳಿಗ,ಕಲಿಚ್ಚಿ,ಕಾಲನ್ ಗುಳಿಗ ) 

 276-300 ಚಾಮುಂಡಿ ಮತ್ತು ಸೇರಿಗೆದೈವಗಳು 

ಅಗ್ನಿ ಚಾಮುಂಡಿ ಗುಳಿಗ, ಕರಿ ಚಾಮುಂಡಿ,ಕೆರೆ ಚಾಮುಂಡಿ,ಚೌಂಡಿ,ಗುಡ್ಡೆ ಚಾಮುಂಡಿ ಅರದರೆ ಚಾಮುಂಡಿ ,ಅಸಗಲ ಚಾಮುಂಡಿ,ನಾಗ ಚಾಮುಂಡಿ,ಪಾಪೆಲು ಚಾಮುಂಡಿ, ನೆತ್ರಾಂಡಿ ,ಮನದಲಾತ್ ಚಾಮುಂಡಿ,ಮಾಪಿಳ್ಳ ಚಾಮುಂಡಿ ಕೋಮಾರು ಚಾಮುಂಡಿ ಇತ್ಯಾದಿ)

301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ 

303-314  ಚಿಕ್ಕು/ ಚಿಕ್ಕಮ್ಮ  ಪರಿವಾರ ದೈವಗಳು

 315 ಚಿನಿಕಾರ/ ಚೀನೀ ಬೂತಗಳು

316 ಚೆನ್ನಿಗರಾಯ

317-319 ಚೆಮ್ಮರತಿ,ಪಡುವೀರನ್ ದೈವಗಳು

320 ಚೆಂಬರ್ಪುನ್ನಾಯ

321-322 ಜಟಾಧಾರಿ ಮತ್ತು  ಶಾಂತ ದುರ್ಗೆ 

323 -334'  ಜಟ್ಟಿಗ  ದೈವಗಳು

(ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಮಾಣಿ ಬೀರ ಜಟ್ಟಿಗಮಾಣಿಭದ್ರ ಜಟ್ಟಿಗ ಇತ್ಯಾದಿ) 

335-337 ಜಮೆಯ- ಜಮಯತಿ ,ಬಡೆದಿ ದೈವಗಳು

338  ಜಂಗ ಬಂಟ

339-340  ಜಾನು ನಾಯ್ಕ ಮತ್ತು ಬಂಡಿರಾಮ 

341  ಜಾರಂದಾಯ

342  ಜಾಲ ಬೈಕಾಡ್ತಿ

343   ಪನ್ನೆ ಬೀಡಿನ ಜಾಲ್ಸೂರಾಯ

344 ಜೋಕುಲು ದೈವೊಲು

345-346 ಜೈನ ಗುಜ್ಜಾರ್ಲು ಮತ್ತು ಜೈನ ಭೂತ 

347 ತಪ್ಪೇದಿ

348 ತನ್ನಿಮಾಣಿಗ 

 349-351 ತಂತ್ರಿಗಣಗಳು

352 ತಿಮ್ಮಣ್ಣ ನಾಯಕ

353-355 ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ

356 ತೋಡ ಕುಕ್ಕಿನಾರ್ 

357 ದಾರಮ್ಮ ಬಳ್ಳಾಲ್ತಿ 

358-361 ದಾರು ಕುಂದಯ ದೈವಗಳು 

362   ದೀಪದ ಮಾಣಿ

363   ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ 

364  ದೂಮ

365 ದೂಧುರ್ಮ / ದೂರ್ದುಮ 

366-367 ದೆಸಿಲು ಮತ್ತು ಕಿಲಮರತ್ತಾಯ

368 ದೇಬೆ ದೈವ,

369-370  ದೇರೆ ಮತ್ತು  ಮಾನಿ ದೈವಗಳು

371ದೇವಾನು ಪಂಬೆದಿಯಮ್ಮ

372 ದೇಯಿ ಬೈದೆತಿ

373-374 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್

 375-378 ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ

379  ದೈವಂತಿ

380-400 ಧೂಮಾವತಿ ಮತ್ತು ಸೇರಿಗೆ ದೈವಗಳು 

ಕಾಂತೇರಿ ಜುಮಾದಿ,ಬಂಟ,ಮರ್ಲು ಜುಮಾದಿ,ಕರ್ಮಲೆ ಜುಮಾದಿ ,ದುರ್ಗಲ್ಲ ಜುಮಾದಿ,ಮಾಪುಳ್ತಿ ಧೂಮಾವತಿ ,ಪಡಿಂಞರೆ ಧೂಮಾವತಿ, ಧೂಮಹಾಸ್ತಿಯಮ್ಮ ,ಮಲಾರ್ ಜುಮಾದಿ ಮತ್ತು ಕರ್ನಗೆ ಇತ್ಯಾದಿ) 

401-404 ನಂದಿ ಹೆಸರಿನ ದೈವಗಳು ( ಹಿರೇ ನಂದಿ ಕಿರರ ನಂದಿ ,ಜೋಗಪ್ಪ ಶೆಟ್ಟಿ ,ನಂದಿಕೇಶ್ವರ ,ನಂದಿ ಗೋಣ) 

405-408  ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು 

409 ನಂದಿಗೆನ್ನಾಯ

410-412  ನಾಗ ಕನ್ನಿಕೆ  ಮತ್ತು ನಾಗರಾಜರು 

413 ನಾಗ ದೈವ/ಭೂತ

414   ನಾಗ ಬ್ರಹ್ಮ 

415   ನಾಗ ಬ್ರಹ್ಮ ಮಂಡಲದ ದೈವಗಳು

416-417 ನಾರಳ್ತಾಯ ಮತ್ತು ಭೂತರಾಜ 

418 ನಾಲ್ಕೈತಾಯ

419-420  ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ 

421-422  ನುರ್ಗಿ‌ಮದಿಮಾಲ್ ಮತ್ತು ದುರ್ಗಿ ಮದಿಮಾಲ್ 

423-424  ನೆತ್ತರು ಮುಗುಳಿ ಮತ್ತು ಭೈರವ 

425   ನೇರಳತ್ತಾಯ

426 -428  ನೈದಾಲ ಪಾಂಡಿ  ,ಪೂವತ್ತಿಮಾರ್ ಮತ್ತು ಮಹೇಶ್ವರನ್ ದೈವಗಳು

429 ಪಟ್ಟಾರ್ ತೆಯ್ಯಂ

430 ಪಟ್ಟೋರಿತ್ತಾಯ

431 ಪಡೆ ಬೀರ ಕಣ್ಣಂಡ ದೊಡ್ಡಯ್ಯ 

432-433 ಪಡ್ಕಂತಾಯ ಮತ್ತು  ಗೆಂಡಕೇತ್ರಾಯ

434 ಪತ್ತೊಕ್ಕೆಲು ಜನನಂದ ದೈವ

435-436:ಪನಯಾರ್  ಮತ್ತು ಸಂಪ್ರದಾಯ ದೈವ

437:ಪಯ್ಯ ಬೈದ್ಯ

438-443'ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ನ ಮತ್ತು ಪರಿವಾರ

444-445  ಪರವ  ಮತ್ತು ಪರಿವಾರ ನಾಯಕ

446 ಪಂಜಿ ಭೂತ

 447  -462 ಪಂಜುರ್ಲಿ ಮತ್ತು ಸೇರಿಗೆ ದೈವಗಳು

ಅಂಗಣತ್ತಾಯ ಪಂಜುರ್ಲಿ ಅಟ್ಟೊಡಾಯೆ ಪಂಜುರ್ಲಿ 

ಅಣ್ಣಪ್ಪ ಪಂಜುರ್ಲಿ ಅಲೇರ ಪಂಜುರ್ಲಿ‌

ಉಂರ್ದರ ಪಂಜುರ್ಲು ,ಒರಿ ಮರ್ಲೆ ಪಂಜುರ್ಲಿ

ಕಟ್ಟದಲ್ತಾಯ ಪಂಜುರ್ಲಿ ,ಕೆಂಪರ್ನ ಪಂಜುರ್ಲಿ ‌,ಕುಪ್ಪೆ ಪಂಜುರ್ಲಿ,ಕುಪ್ಪೆಟ್ಟು ಪಂಜುರ್ಲಿ

ಗಣಾಮಣಿ ಪಂಜುರ್ಲಿ,ಜುಂಬುರ್ಲಿ ,ತೆಲ್ಲಾರ್  ಪಂಜುರ್ಲಿ ದಾಸಪ್ಪ ಪಂಜುರ್ಲಿ

ದೆಂದೂರ ಪಂಜುರ್ಲಿ

ದೇವರ ಪೂಜಾರಿ ಪಂಜುರ್ಲಿ 

ಪಂಜಣತ್ತಾಯ ಪಂಜುರ್ಲಿ‌

ಬಗ್ಗು ಪಂಜುರ್ಲಿ,

ಬಗ್ಗು ಮೊಯ್ಲಿದಿ 

ವರ್ಣಾರ ಪಂಜುರ್ಲಿ 

ಸೇಮಿಕಲ್ಲ ಪಂಜುರ್ಲಿ 

468 ಪಾಣರಾಟ

469 ಪಿಲಿ ಭೂತ 

470 -471  ಪುದರ್ ಚಿನ್ನ ಬಂಟ ಮತ್ತು  ಪಿಲೆ ಪೆಲತ್ತಿ ದೈವಗಳು

472  ಪುದ  ಮತ್ತು ಪೋತಾಳ

473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು

491-500ತುಳುನಾಡಿನ ಪುರುಷ ಭೂತಗಳು 

501  ಪುಲಂದಾಯ ಬಂಟ

502 ಪುಲಿಮರಂಞ ತೊಂಡನ್ 

503 -510  ಪುಲಿಯೂರ್ ಕಾಳಿ  ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು

511  ಪೆರಿಯಾಟ್ ಕಂಡನ್ 

512  ಪೆರುಂಬಳಯಚ್ಚನ್

513  ಪೊಟ್ಟನ್ 

514  520 ಪೊನ್ನಂಗಾಲತಮ್ಮೆ  ಮತ್ತು ಆರು  ಸಹೋದರರು

521 ಪೊನ್ವಾನ್ ತೊಂಡಚ್ಚನ್

522-525:ಪೊಸಮಹರಾಯ ,ಉಳ್ಳಾಲ್ತಿಯರುಮತ್ತು ಮಾಡ್ಲಾಯಿ 

526 -536 ಪೋಲೀಸ್,  ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ, ಸೇನವ ದೈವಗಳು

537 ಪೋಲೀಸ್ ತೆಯ್ಯಂ

 538-539 ಬಚ್ಚನಾಯಕ ಮತ್ತು ಮಂಞಣ ನಾಯಕ‌

540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು 

545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ

549  ಬಲ್ಲ ಮಂಜತ್ತಾಯ

550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು

556 ಬಲೀಂದ್ರ 

557  ಬಸ್ತಿನಾಯಕ

558 ಬಂಕಿ ನಾಯ್ಕ 

559-562 ಬಂಟಜಾವದೆ ಮತ್ತು ಉಳ್ಳಾಲ್ತಿ  ಪಡಿಕಲ್ಲಾಯ

562 ಬಾಕುಡತಿ

563 ಬಾಲೆ ಕನ್ಯಾಪು

564 -605 ಬ್ರಾಹ್ಮಣ ಮೂಲದ ದೈವಗಳು

606 ಬಿರ್ಮಣಾಚಾರಿ 

607 -608  ಬಿಲ್ಲಾರ ಬಿಲ್ಲಾರ್ತಿ ದೈವಗಳು

609 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ

610  ಬೀರ್ನಾಚಾರಿ

611-613 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು

 614-616:ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು 

617-618 ಬೆಲೆಟಂಗರಜ್ಜ ಮತ್ತು ತಂಗಡಿ

619-620 ಬೇಡವ ಮತ್ತು ಬೇಟೆಗಾರ ದೈವಗಳು

621 ಬೊಟ್ಟಿ ಭೂತ

622 -625:ಬೋವ ದೈವಗಳು .

626 ಬೈನಾಟಿ 

627   ಬೈಸು ನಾಯಕ

628-690 ಭಗವತಿ ದೈವಗಳು

 692-694   ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ

695 - 696  ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ 

697-698 ಭಂಡಾರಿ ಮತ್ತು ಪಿಲಡ್ಕತ್ತಾಯ‌

699 ಮಡಿಕತ್ತಾಯ

700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು

702-703'  ಮದಂಗಲ್ಲಾಯ ಕಡಂಗಲ್ಲಾಯ 

704-705 ಮದಿಮಾಯ ಮದಿಮಾಲ್

706ಮನಕ್ಕಡನ್ ಗುರುಕ್ಕಳ್ 

707 ಮನಕ್ಕೊಟ್ಟ ಅಮ್ಮ

708- 726 ಮನ್ಸರ  ದೈವಗಳು

717 ಮರಾಂಗಣೆ

718;ಮರುತಿಯೋಡನ್ ಕುರಿಕ್ಕಳ್

719-720  ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು 

721 ಮಲರಾಯ

722  ಮಲೆಕುಡಿಯರ ಅಯ್ಯಪ್ಪ 

723-726: ಮಲೆ ತಮ್ಮಚ್ಚ ಮತ್ತು ಪರಿವಾರ 

727-730 ಮಲೆರಾಯ ಮತ್ತು ಪರಿವಾರ 

 731 ಮಲೆಸಾವಿರ ದೈವ

732-733:ಮಂಗಳೆರ್ ಮತ್ತು  ಗುರು ಮಂಗೞೆರ್ 

734 -736:ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು

737 ಮಂದ್ರಾಯ

738-739 ಮಹಾಕಾಳಿ ಮತ್ತು ಮಾಂಕಾಳಿ ದೈವಗಳು

740-745 ಮಾಯಂದಾಲ್ ಮತ್ತು ಪರಿವಾರ  

746-747 ಮಾಯೊಲು ಮಾಯೊಲಜ್ಜಿ.

748-760 ಮಾರಿ ಭೂತಗಳು

761 -763 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು‌

764 ಮಾಸ್ತಿಯಮ್ಮ 

765-766 ಮಿತ್ತೂರು ನಾಯರ್ ದೈವಗಳು


768-782 ಮುಗೇರ ದೈವಗಳು 

783 ಮುಡದೇರ್ ಕಾಳ ಭೈರವ 

784-786  ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ

787  ಮುತ್ತು ಮಾರಿಯಮ್ಮ  

788 ಮುನಿಸ್ವಾಮಿ ದೈವ

789 ಮುವ್ವೆ ಮೂವ,ಮೂವಿಗೆ ವಾತೆ 

790 - 816ಮುಸ್ಲಿಂ ಮೂಲದ ದೈವಗಳು 

817 ಮೂಜಿಲ್ನಾಯ 

818-819 ಮೂಡೊಟ್ನಾರ್,ಪಡುವೆಟ್ನಾರ್ 

820 ಮೂರಿಲು

821 ಮೂರ್ತಿಲ್ಲಾಯ

822- 900 ಮೂಲ ಪುರುಷ ದೈವಗಳು 

901 ಮೆಕ್ಕೆ ಕಟ್ಟಿನ ಉರುಗಳು 

902-903  ಮೇರ ಮೇತಿಯರು

904 ಮೇಲಂಟಾಯ 

905 ಮೈಯೊಂದಿ

906  ಮೈಸಂದಾಯ

907 ಮೋಂದಿ ಕೋಲ‌

908 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ  ಯಕುಮ ಕೋಲ‌ 

909 -910  ರಕ್ತೇಶ್ವರಿ ಮತ್ತು ಬವನೊ

911 ರಾಜನ್ ದೈವಗಳು

912 -914 ವಣ್ಣಾತನ್ ವಯನಾಡು ಕುಲವನ್,ಕಣ್ಣನ್ 

915 ವಡ್ಡಮರಾಯ

916 ವಿದೇಶೀ ಕಾಫ್ರೀ ದೈವಗಳು

917 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್

919 - 920 ವೀರಭದ್ರ/ ವೈರಜಾತ್,ವೀರನ್ 

921-924 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್

925 ವೆಳ್ಳು ಕುರಿಕ್ಕಳ್

926 ವೇಟಕ್ಕೊರುಮಗನ್

927 ವೈದ್ಯಾಚಾರ್ಯ/ ವೈದ್ಯರಾಜನ್ 

928 ಶಗ್ರಿತ್ತಾಯ ದೈವ 

929 ಶಂಕರ ಬಡವಣ

930 -932 ಶಾಸ್ತಾವು,ಕರಿ ಭೂತ,ಕೋಮಾಳಿ

933 ಶಿರಾಡಿ ಭೂತ.

934 ಶಿವರಾಯ 

935 ಶ್ರೀಮಂತಿ ದೈವ

936-937 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ 

938 -942 ಬಾಕುಡರ ಸರ್ಪಕೋಲದ ದೈವಗಳು

943 ಸರ್ಪಂಕಳಿ

944 ಸರ್ಪಂತುಳ್ಳಲ್

945 ಸಂನ್ಯಾಸಿ ಮಂತ್ರ ದೇವತೆ

946 ಸಾದಿಕರಾಯ ಮತ್ತು ಹಾದಿಕಾರಾಯ 

947 ಸಾರ ಮಾಂಕಾಳಿ

948 ಸ್ವಾಮಿ ದೈವ 

949-956 ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ

957: ಸುಬ್ಬರಾಯ

958 ಸೋಣದ ಜೋಗಿ

959 ಹನುಮಂತ/ ಸಾರ ಪುಲ್ಲಿದಾರ್ ದೈವ

960 -961ಹಳ್ಳತ್ತಾಯ ಮತ್ತು ಅಲ್ನತ್ತಾಯ 

962 ಹಳೆಯಮ್ಮ

963 -973 ಹಾಯ್ಗುಳಿ ಮತ್ತು ಪರಿವಾರ 

ಮೂಕ ಹಾಯ್ಗುಳಿ,ಕೆಪ್ಪ ಹಾಯ್ಗುಳಿ,ತಾತ್ರಯ್ಯ,ಅಕ್ಸಾಲಿ ,ಮೂಡೂರ್ ಹಾಯ್ಗುಳಿ ,ನೆತ್ರ ಹಾಯ್ಗುಳಿ ಇತ್ಯಾದಿ )

974 -995 ಹಿರಿಯಾಯ ದೈವಗಳು

( ಆನೆ ಬೈದ್ಯ,ಸಿದ್ದ ಮರ್ದ ಬೈದ್ಯ,ಬಗ್ಗ ಪೂಜಾರಿ, ನಾಡು ಬೈದ್ಯ, ಬೊಲ್ಲ ಬೈದ್ಯ,ದೇರೆ ಬೈದ್ಯ ,ಚೆನ್ನಪ್ಪ ಪೂಜಾರಿ ,ಸಿದ್ದ ಬೈದ್ಯ,ಕೊರಗ ಬೈದ್ಯ ಇತ್ಯಾದಿ );

996-997 ಹುಲಿ ಮತ್ತು ಹಸರ ತಿಮ್ಮ 

998 -1000 ಹೊಸಮ್ಮ ,ಹೊಸಳಿಗಮ್ಮ ಮತ್ತು ಕುಲೆ ಮಾಣಿಕೊ

1001 ಹೌಟಲ್ದಾಯ ಮತ್ತು ಮಾಳದ ಕೊರಗ 

ಅಧ್ಯಯನಾತ್ಮಕ ಗ್ರಂಥ   ಸಂಗ್ರಹ-© ಡಾ.ಲಕ್ಷ್ಮೀ ಜಿ ಪ್ರಸಾದ್

mobile 9480516684




 

Saturday 16 April 2022

ನನಗೂ ಆತ್ಮವಿದೆ .ಅದಕ್ಕೂ ಒಂದು ಕಥೆ ಇದೆ ಆ ಒಂದು ತೀರ್ಪಿನ ಬಗ್ಗೆ ನನಗೆ ಈವತ್ತಿಗೂ ಪಶ್ಚಾತ್ತಾಪವಿದೆ

 ನನಗೂ ಆತ್ಮವಿದೆ .ಅದಕ್ಕೂ ಒಂದು ಕಥೆ ಇದೆ

ಆ ಒಂದು ತೀರ್ಪಿನ ಬಗ್ಗೆ ನನಗೆ ಈವತ್ತಿಗೂ ಪಶ್ಚಾತ್ತಾಪವಿದೆ 

ನಾನು ಚಿಕ್ಕಂದಿನಲ್ಲಿ ಹೈಪರ್ ಆಕ್ಟೀವ್.ಎಲ್ಲ ಸ್ಪರ್ದೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದೆ.ಬಹುಮಾನಗಳನ್ನೂ ಪಡೆದು ಸ್ವರ್ಗ ಸಿಕ್ಕಂತೆ ಸಂಭ್ರಮಿಸುತ್ತಿದ್ದೆ.ಮನೆಗೆ ಬಂದವರಿಗೆ ಹೊಓದವರಿಗೆ ಎಲ್ಲರಿಗೂ ಸರ್ಟಿಫಿಕೇಟ್ ಗಳನ್ನು ತೋರಿಸಿ ಅವರಿಂದ ಮೆಚ್ಚುಗೆ ಮಾತುಗಳನ್ನು ಪಡೆದು(ಬಲವಂತವಾಗಿ ?ನನ್ನ  ಕಿರಿ ಕಿರಿ ತಾಳಲಾಗದೇ )  ಬಹಳ ಖುಷಿ ಪಡುತ್ತಿದ್ದೆ.

ಬಹುಮಾನವನ್ನು ಪಡೆಯಲು ವೇದಿಕೆ ಏರುವಾಗ ನನಗೆ ಚಂದ್ರಲೋಕಕ್ಕೆ ಹೋಗುವಷ್ಟು ಉತ್ಸಾಹ ಇರುತ್ತಿತ್ತು.ನಂತರ ಬಹುಮಾನ ಪಡೆದು ಸಭೆಯಿಂದ ಚಪ್ಪಾಳೆ ಸದ್ದನ್ನು ಕೇಳಿ ಬಹಳ ನಲಿವಿನಿಂದ ಇಳಿದು ಬರುತ್ತಿದ್ದೆ

ವಿದ್ಯಾರ್ಥಿ ಜೀವನದಿಂದ ವೃತ್ತಿ ಜೀವನಕ್ಕೆ ಬಂದಾಗ ನಾನು ಶಿಕ್ಷಕಿಯಾದೆ.ಸಹಜವಾಗಿ ನಾನಾ ಸ್ಪರ್ಧೆಗಳಿಗೆ ತೀರ್ಪುಗಾರಳಾಗಿ ಭಾಗಹಿಸಿದೆ

ಅಲ್ಲೆಲ್ಲ ನಾನು ಬಹಳ ಎಚ್ಚರಿಕೆಯಿಂದ ನಿಷ್ಪಾಕ್ಷಿಕವಾಗಿ ತೀರ್ಪು ನೀಡಿರುವೆ.

ಆದರೆ ಒಂದೆಡೆ ಮಾತ್ರ ನಾನು ತುಸು ತಪ್ಪು ಮಾಡಿ ಒಂದು ವಿದ್ಯಾರ್ಥಿನಿಯ ಪರ ಹೆಚ್ಚು ಅಂಕ ನೀಡಿ ಗೆಲ್ಲಿಸಬೇಕಿತ್ತು ಎನಿಸಿತ್ತು.ಹಾಗೆ ಮಾಡದ್ದಕ್ಕೆ ನನಗೆ ಇಂದಿಗೂ ಪಶ್ಚಾತ್ತಾಪವಿದೆ.

ಸಮಾನತೆಗೆ ಭಿನ್ನ ಭಿನ್ನವಾದ ಮಾನದಂಡಗಳಿವೆ.ಒಂದು ತಾಯಿ ತನ್ನ ಎರಡು ವರ್ಷದ ಮಗುವಿಗೆ ಒಂದು ರೊಟ್ಟಿಯನ್ನೂ ಎಂಟು ವರ್ಷದ ಮಗುವಿಗೆ ಎರಡು ರೊಟ್ಟಿಗಳನ್ನೂ ಕೊಡುತ್ತಾಳೆ.ಅದುಮಕ್ಕಳ ನಡುವೆ ಅಸಮಾನತೆ ತೋರಿದಂತೆ ಆಗುವುದಿಲ್ಲ.

ನಾನು ಈ ವಿಧದ ಮಾನದಂಡವೊಂದನ್ನು ಅದೊಂದು ಸ್ಪರ್ಧೆಯಲ್ಲಿ ಅನುಸರಿಬೇಕಿತ್ತು 


ಅದು ನಾನು ಮೊದಲು ಕೆಲಸ ಮಾಡುತ್ತಿದ್ದ ಮಂಗಳೂರಿನ ಚಿನ್ಮಯ ಶಾಲೆಯಲ್ಲಿ ನಡೆದ ಘಟನೆ.ಆಗ ಚಿನ್ಮಯ ಶಾಲೆ ಮಂಗಳೂರಿನಲ್ಲಿ ಬಹಳ ಖ್ಯಾತಿಯನ್ನು ಪಡೆದಿತ್ತು.ಅಲ್ಲಿ ಸೀಟು ಸಿಗುವುದು ಸುಲಭದ್ದಾಗಿರಲಿಲ್ಲ.ಪಠ್ಯ ಮತ್ತು ಪಠ್ಯೇತರ ಚಟುವಟಿಗೆ ಎರಡರಲ್ಲೂ ಚಿನ್ಮಯ ವಿದ್ಯಾ ಸಂಸ್ಥೆ ಬಹಳ ಕ್ರಿಯಾಶೀಲವಾಗಿತ್ತು.ಬಹಳ ಕ್ರಿಯಾಶೀಲರಾದ ಶಿಕ್ಷಕರ ದಂಡು ಅಲ್ಲಿತ್ತು

ಒಂದು ವರ್ಷ ಒಂಬತ್ತನೆಯ ತರಗತಿಗೆ ಓರ್ವ ವಿಶಿಷ್ಟ ಚೇತನಳಾದ ವಿದ್ಯಾರ್ಥಿನಿಯ ದಾಖಲಾತಿ ಆಗಿತ್ತು.ಹುಟ್ಟಿನಿಂದ ಅವಳಿಗೆ ನ್ಯೂನತೆ ಇರಲಿಲ್ಲ.ಸುಮಾರು ಹತ್ತರ ವಯಸದಸಿನಲ್ಲಿ ಗಂಟಲಿನ ಮೈನರ್ ಸರ್ಜರಿ ಆದಾಗ ಸೋಂಕು ತಗುಲಿ ಅವಳಿಗೆ ವಾತ ( arthritis) ಉಂಟಾಗಿತ್ತು.ಬಹಳ ಜಾಣ ವಿದ್ಯಾರ್ಥಿನಿ

ಆದರೆ ವಾತದಿಂದಾಗಿ ಅಕ್ಷರಗಳು ಮುದ್ದಾಗಿರಲಿಲ್ಲ

ಇಡೀ ದೇಹದಲ್ಲಿ ಎಲ್ಲ ಗಂಟುಗಳಲ್ಲಿ ಅಪಾರವಾದ ನೋವಿತ್ತು ಅವಳಿಗೆ.ಹಾಗಾಗಿ ಬರೆಯುವುದೂ ಸಾಹಸದ ವಿಚಾರವೇ.ಅದರೆ ಅವಳು ತುಂಬಾ ಜಾಣೆ ಎಂದು ಗೊತ್ತಿದ್ದ ಕಾರಣ ಅವಳ ಬರವಣಿಗೆಯನ್ನು ಕೊರಕಲಾಗಿದ್ದರೂ ಓದಿ ಅಂಕ ಕೊಡುತ್ತಿದ್ದೆವು. ಹಾಗಾಗಿ ಉತ್ತಮ ಅಂಕಗಳು ಸಿಗುತ್ತಿತ್ತು.ಆದರೆ ಪಬ್ಲಿಕ್ ಪರೀಕ್ಷೆಯಲ್ಲಿ ಅವಳಿಗೆ ಒಳ್ಳೆಯ ಅಂಕಗಳು ಬರಲು ಕಷ್ಟವಿತ್ತು

ಅವಳು ಚಿನ್ಮಯ ಶಾಲೆಗೆ ಸೇರಿದ ವರ್ಷ ಅತವಾ ಮರು ವರ್ಷ  ಯಾವುದೋ ಸಂಘಟನೆಯೊಂದು ನಮ್ಮಲ್ಲಿ ಭಗವದ್ಗೀತೆ ? ಕುರಿತಾದ ಭಾಷಣ ಪ್ರಬಂಧ ಕಂಟಪಾಠ ಸ್ಪರ್ದೆ ಏರ್ಪಡಿಸಿತ್ತು.ಇಲ್ಲಿ ಪ್ರಥಮ ಸ್ಥಾನ ಬಂದವರು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಿದ್ದರು.ದ್ವಿತೀಯ ತೃತೀಯ ಸ್ತಾನ ಪಡೆದವರಿಗೆ ಒಂದು ಸಣ್ಣ ಬಹುಮಾನ ಮತ್ತು ಸರ್ಟಿಫಿಕೇಟ್ ಕೊಡುತ್ತೇವೆ ಎಂದಿದ್ದರು

ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ಆ ವಿದ್ಯಾರ್ಥಿನಿಯೂ ಭಾಗವಹಿಸಿದ್ದಳು.ಅವಳಿಗೆ ಶಾಲೆಯೊಳಗಿನ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಲು ಸಾಧ್ಯವಿತ್ತು.ಹೊರಗಡೆ ನಡೆಯುವ ಸ್ಪರ್ಧೆಗಳಿಗೆ ಹೋಗಲು ಅವಳ ಶಾರೀರಿಕ ಸಮಸ್ಯೆ ತೊಡಕಾಗಿತ್ತು.ಹಾಗಾಗಿ ಶಾಲೆಯಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದಳು

ಚಿನ್ಮಯ ಶಾಲೆ ನಾನು ಮೊದಲೇ ತಿಳಿಸಿದಂತೆ ಅಗಿನ ಕಾಲಕ್ಕೆ ಬಹಳ ಪ್ರಸಿದ್ದವಾದದ್ದು.ಬಹಳ ಪ್ರತಿಭಾವಂತ ವಿದ್ಯಾರ್ಥಿಗಳು ಇಲ್ಲಿದ್ದರು.ಇಲ್ಲಿನ ಮಕ್ಕಳು ತಾಲೂಕು,ಜಿಲ್ಲಾ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಬರುತ್ತಿದ್ದರು.ಹಾಗಾಗಿ ಶಾಲೆಯೊಳಗೆ ನಡೆಯುವ ಸ್ಪರ್ಧೆಗಳಲ್ಲಿ ಕೂಡ ಬಹುಮಾನ ಪಡೆಯುವದ್ದು ಸುಲಭದ್ದಾಗಿರಲಿಲ್ಲ.ಹಾಗಾಗಿ ಆ ವಿದ್ಯಾರ್ಥಿನಿಗೆ ಅದು ತನಕ ಬಹುಮಾನ ಬಂದಿರಲಿಲ್ಲ

ಆದಿನ  ಭಾಷಣ ಸ್ಪರ್ಧೆಗೆ ಮೂವರು ತೀರ್ಪುಗಾರರಲ್ಲಿ ನಾನೂ ಒಬ್ಬಳಾಗಿದ್ದೆ

ಆ ದಿನ ಈ ಹುಡುಗಿ ಕೂಡ ಚೆನ್ನಾಗಿ ಭಾಷಣ ಮಾಡಿದ್ದಳು.ನಾನು ನೀಡಿದ ತೀರ್ಪಿನಲ್ಲಿ ಇವಳಿಗೆ ಮೂರನೆಯ ಸ್ಥಾನವಿತ್ತು.ಮೂವರೂ ನೀಡಿದ ಅಂಕಗಳನ್ನು ಒಟ್ಟು ಮಾಡಿದಾಗ ಇವಳಿಗೆ ಮತ್ತು ಇನ್ನೊಬ್ಬಳಿಗೆ ಸಮಾನ ಅಂಕ ಬಂದು ಇಬ್ಬರಿಗೂ  ಮೂರನೆಯ ಸ್ಥಾನ ಬಂತು.

ಇಬ್ಬರಲ್ಲಿ ಒಬ್ಬಳನ್ನು ಆಯ್ಕೆ ಮಾಡಿ ತೃತೀಯ ಬಹುಮಾನ ಘೋಷಣೆ ಮಾಡಬೇಕಿತ್ತು.ಆಗ ನಾನು ಈ ವಿದ್ಯಾರ್ಥಿನಿಗೆ ತೃತೀಯ ಬಹುಮಾನ ಕೊಡುವ ಎಂದೆ.ಆದರೆ ಇನ್ನಿಬ್ಬರು ತೀರ್ಪುಗಾರರು " ಬೇಡ..ಇನ್ನೊಬ್ಬಳಿಗೆ ಕೊಡುವ ಎಂದರು.ಬಹುಮತಕ್ಕೆ ಮನ್ನಣೆ ಬಂತು.ನನಗೇನೂ ಮಾಡಲಾಗದ ಪರಿಸ್ಥಿತಿ

ಆ ಇನ್ನೊಬ್ಬಹುಡುಗಿ ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದವಳು.ಅದಕ್ಕೆ ಮೊದಲೇ ಅನೇಕ ಸ್ಪರ್ಧೆಗಳಲ್ಲಿ ಗೆದ್ದವಳೇ ಆಗಿದ್ದಳು

ಅವಳಿಗೆ ಇದೊಂದು ಬಹುಮಾನ ಬಾರದೇ ಇದ್ದಾಗ ಒಂದೆರಡು ದಿನ ಬರಲಿಲ್ಲ ಅನ್ನುವ ನೋವು ಕಾಡ್ತಿತ್ತು ಅಷ್ಟೇ

ಆ ಮೂರನೆಯ ಬಹುಮಾನವನ್ನು ನಾವು  ಶಾರೀರಿಕ  ಸಮಸ್ಯೆ ಇದ್ದ ವಿದ್ಯಾರ್ಥಿನಿಗೆ ಕೊಟ್ಟಿದ್ದರೆ ಆ ಬಹುಮಾನ ಪಡೆದು ಅವಳು ತುಂಬಾ ಸಂಭ್ರಮ ಪಡುತ್ತಿದ್ದಳು.ಬದುಕಿರುವ ತನಕವೂ ಆ ಸರ್ಟಿಫಿಕೇಟನ್ನು ನೋಡಿ ತನ್ನ ಗೆಲುವಿನ ರೋಮಾಂಚನವನ್ನು ಅನುಭವಿಸುತ್ತಿದ್ದಳು.ಅವಳು ಸದಾ ಸ್ಪರ್ಧೆಗಳಲ್ಲಿ ಗೆಲ್ಲುವವಳಾಗಿದ್ದು ಇದೂ ಬಂದಿದ್ದರೆ ಹತ್ತರಲ್ಲಿ ಹನ್ನೊಂದು ಆಗುತ್ತಿತ್ತು ಇನ್ನೊಬ್ಬಳಂತೆ

ಆದರೆ ನನಗೆ ತಿಳಿದಂತೆ ಅವಳಿಗೆ ಅದು ತನಕ ಯಾವುದರಲ್ಲೂ ಬಹುಮಾನ ಬಂದಿರಲಿಲ್ಲ.ಇಬ್ಬರಿಗೆ ಸಮಾನ ಅಂಕ ಬಂದು ಮೂರನೆಯ ಸ್ಥಾನ ಸಿಕ್ಕಾಗ ನಾವು ಇಬ್ಬರಿಗೂ ಬಹುಮಾನ ಪ್ರಮಾಣ ಪತ್ರ ನಿಡಬೇಕೆಂದು ಗಟ್ಟಿಯಾಗಿ ನಿಲ್ಲಬೇಕಿತ್ತು. ಅದೂ ಮಾಡಲಿಲ್ಲ

ಅಪರೂಪಕ್ಕೆ ತೃತೀಯ ಸ್ಥಾನ ಪಡೆದ ಮತ್ತು ಇತರೆಡೆ ಹೊಗಲಾಗದ ಈ ಹುಡುಗಿಗೇ ಆ ತೃತೀಯ ಬಹುಮಾನವನ್ನು ಕೊಡಿಸಬೇಕಿತ್ತು

ಎರಡೂ ಆಗದ ಬಗ್ಗೆ ನನಗೆ ನಂತರ ಬಹಳ ಕೊರಗು ಉಂಟಾಗಿತ್ತು

ಈಗಲೂ ನಾನಾ ಸಂಘ ಸಂಸ್ಥೆಗಳು ನನ್ನನ್ನು ನಾನಾ ಸ್ಪರ್ಧೆಗಳ ತೀರ್ಪುಗಾರಳಾಗಿ ಆಹ್ವಾನಿಸುತ್ತಿದ್ದು ನಾನು ತೀರ್ಪುಗಾರಳಾಗಿ ಬಾಗವಹಿಸುತ್ತೇನೆ.ಅತ್ಯಂತ ನಿಷ್ಪಾಕ್ಷಿಕವಾಗಿ ತೀರ್ಪು ನೀಡುತ್ತೇನೆ.ಕೆಲವಿಮ್ಮೆ ನಮ್ಮ ಆತ್ಮೀಯರೇ ಸ್ಪರ್ಧಿಗಳಾಗಿರುತ್ತಾರೆ. ಆಗಲೂ ನನ್ನ ತೀರ್ಪು ಪ್ರತಿಭೆಯ ಪರವೇ ಆಗಿರುತ್ತದೆ

ಆದರೆ ಆ ದಿನ ಚಿನ್ಮಯ ಶಾಲೆಯಲ್ಲಿ ನಾನು ಆ ವಿದ್ಯಾರ್ಥಿನಿಗೆ ತುಸು ಹೆಚ್ಚು ಅಂಕ ಕೊಡಬೇಕಿತ್ತೆನಿಸುತ್ತದೆ.

ಆಗ ಅವಳಿಗೆ ಮೂರನೆಯ ಬಹುಮಾನ ಬರುತ್ತಿತ್ತು ಎಂದೆನಿಸುತ್ತದೆ.ಆದರೆ ತೀರ್ಪುಗಾರಳಾಗಿ ನಾನು ಅವತ್ತು ಮಾಡಿದ್ದು ಸರಿ..ಅವಳಿಗಿಂತ ಚೆನ್ನಾಗಿ ಭಾಷಣ ಮಾಡಿದ ಇಬ್ಬರಿಗೆ ಇವಳಿಗಿಂತ ಹೆಚ್ಚು ಅಂಕ ನೀಡಿದ್ದೆ.ಅದು ಸರಿಯಾದುದೇ.ಆದರೆ ಇಬ್ಬರಿಗೆ ಮೂರನೆಯ ಬಹುಮಾನ ಕೊಡಲು ಅಸಾಧ್ಯ ಎಂದಾದಾಗ ನಾನು ಈ ಹುಡುಗಿಗೆ ತುಸು ಹೆಚ್ಚು ಅಂಕ ಕೊಡುತ್ತಿದ್ದರೆ ಅವಳಿಗೆ ಮುರನೆಯ ಬಹುಮಾನ ಬರ್ತಿತ್ತು ಇನ್ನೊಬ್ಬಳಿಗೆ ನಾಲ್ಕನೆಯ ಸ್ಥಾನ ಬರ್ತಿತ್ತು ಎಂದೆನಿಸಿತ್ತು

ಅಥವಾ ಇಬ್ಬರಿಗೂ ಸಮಾನ ಅಂಕ ಲಭಿಸಿದ ಮೂರನೆಯ ಸ್ಥಾನದಲ್ಲಿದ್ದ  ಕಾರಣ ಇಬ್ಬರಿಗೂ ತೃತೀಯ ಬಹುಮಾನ ಕೊಡಲೇಬೇಕೆಂದು ಪಟ್ಟು ಹಿಡಿಯಬೇಕಿತ್ತು ಎಂದೆನಿಸುತ್ತದೆ

ಅದರೇನು ಮಾಡಲಿ..ಅದು ಘಟಿಸಿ ಸುಮಾರು ಇಪ್ಪತ್ತು ವರ್ಷಗಳೇ ಕಳೆದವು.ಆ ಹುಡುಗಿಯ ಬದುಕಿನಲ್ಲಿ ಪವಾಡ ಸದೃಶ ಘಟನೆ ಸಂಭವಿಸಿ ಅವಳು ಪೂರ್ತಿ ಗುಣಮುಖಳಾಗಿ ಎಲ್ಲರಂತೆ ಓಡಾಡುತ್ತಾ ಸುಖವಾಗಿ ನೂರು ಕಾಲ ಬದುಕಲಿ ಎಂದು ಹಾರೈಸುವೆ.


Sunday 9 May 2021

 


ದೊಡ್ಡವರ ದಾರಿ 76 : ಡಾ.ಜನಾರ್ದನ ಭಟ್ Janardana Bhat

ಸೋಂಕು ತಗುಲಿದಾಗ ನಿಮಗೆ ಮೊದಲು ನೆನಪಿಗೆ ಬಂದದ್ದು ಯಾರು ? ಇದು ಅನೇಕರು ನನ್ನಲ್ಲಿ ಕೇಳಿದ ಪ್ರಶ್ನೆ

ಕೊರೊನಾ ಲಕ್ಷಣ ಕಾಣಿಸಿಕೊಂಡಾಗ ನನಗೆ ಮೊದಲು ನೆನಪಾದದ್ದು ಅಮ್ಮ.
ನನಗೇನಾದರೂ ಆದರೆ ಅಮ್ಮನಿಗೆ ತಡೆಯಲಾಗದು ಎನಿಸಿತು.
ಜೊತೆಗೆ ಇನ್ನೊಂದು ವಿಚಾರ ತಲೆಗೆ ಬಂತು
ಕಳೆದ ಇಪ್ಪತ್ತು ವರ್ಷಗಳಿಂದ ಕ್ಷೇತ್ರ ಕಾರ್ಯ ಅಧ್ಯಯನ ಮಾಡಿ ಸಾವಿರಕ್ಕು ಹೆಚ್ಚಿನ ದೈವಗಳ ಮಾಹಿತಿ ಸಂಗ್ರಹ ಮಾಡಿದ್ದೆ.ಪ್ರಕಟಿಸುವುದಕ್ಕಾಗಿ ಬರೆದು ಕೂಡ ಆಗಿದೆ.ಅದರೆ ಅದಕ್ಕೆ ಅದನ್ನು ತಿದ್ದಿ ವ್ಯವಸ್ಥಿತವಾಗಿ ಜೋಡಿಸಿ ಸೂಕ್ತ ಫೋಟೋಗಳನ್ನು ಹಾಕುವ ಕೆಲಸ ಉಳಿದಿತ್ತು
ಜೊತೆಗೆ A4size ನ ಸಾವಿರದಷ್ಟು ಪುಟಗಳುಳ್ಳ ಪುಸ್ತಕದ ಪ್ರಕಟಣೆಗೆ ಎಂಟು ಹತ್ತು ಲಕ್ಷ ಖರ್ಚಿದೆ‌.

ಒಂದೊಮ್ಮೆ ನಾನಿಲ್ಲವಾದರೆ
ಇವನ್ನೆಲ್ಲ ಮಾಡಲು ಮಗ ಅರವಿಂದನಿಂದ ಸಾಧ್ಯವಿಲ್ಲ.
ನನ್ನ ಇಷ್ಡು ಸಮಯದ ಅಧ್ಯಯನ  ಮುಂದಿನ ತಲೆಮಾರಿಗೆ ತಲುಪದೇ ವ್ಯರ್ಥವಾಗುತ್ತದಲ್ಲ ಎಂಬ ಚಿಂತೆ ಕಾಡಿತು.
ಯಾವುದಕ್ಕೂ ಇರಲಿ ಎಂದು ಬರೆದಿಟ್ಟಿರುವ ವರ್್ಡ್ ಫೈಲನ್ನು ಮಗನಿಗೆ ಇ ಮೇಲ್ ಮಾಡಿದೆ.
ಆಗ ನನಗೆ ನಾನಿಲ್ಲದಿದ್ದರೂ ಈ ಕೆಲಸವನ್ನು ನಿಸ್ವಾರ್ಥದಿಂದ ಸಮರ್ಪಕವಾಗಿ ಡಾ.ಜನಾರ್ಧನ ಭಟ್ ಅವರು ಮಾಡಬಲ್ಲರು ಎಂದೆನಿಸಿತು.
ಅವರೊಂದು ಅದ್ಭುತ ವ್ಯಕ್ತಿ.ಹೇಗೆ ಅಷ್ಟನ್ನು ಬರೆಯುವರೊ ನನಗೆ ಗೊತ್ತಾಗುದಿಲ್ಲ.ಕೆಲವರಿಗೆ ದೇವರು ಹೆಚ್ಚಿನ ಸಾಮರ್ಥ್ಯ ಕೊಟ್ಟಿರ್ತಾನೆ
ಹಾಗೆ ಹಾಸ್ಪಿಟಲ್ ಗೆ ದಾಖಲಾಗಲು ಹೋಗುವ ಮೊದಲು‌ಡಾ.ಜನಾರ್ದನ ಭಟ್ ರಿಗೆ ಕರೆ ಮಾಡಿ ನನಗೆ ಕೊರೊನಾ ಪಾಸಿಟಿವ್ ಬಂದಿದ್ದು ಅಸ್ಪತ್ರೆಗೆ ದಾಖಲಾಗಬೇಕಿರುವ ಬಗ್ಗೆ ತಿಳಿಸಿದೆ.ಅಲ್ಲಿ‌ಮೊಬೈಲ್ ತಗೊಂಡು ಹೋಗಲು ಬಿಡುವರೊ ಇಲ್ಲವೊ ಗೊತ್ತಿಲ್ಲ.ಹಾಗಾಗಿ ಈಗಲೇ ರಿಕ್ವೆಷ್ಟ್ ಮಾಡುವೆ ಸರಗ,ಒಂದೊಮ್ಮೆ ನಾನು ಆಸ್ಪತ್ರೆಯಿಂದ ಜೀವಂತ ಬಾರದೇ ಇದ್ದರೆ ನನ್ನ ಪುಸ್ತಕವನ್ನು ಎಡಿಟ್ ಮಾಡಿ  ದುಡ್ಡು ಹೊಂದಿಸಿ ಪ್ರಕಟಿಸುವಿರಾ ? ಎಂದು ಕೇಳಿದೆ..ನೀವು ಹುಷಾರಾಗಿ ಬರ್ತೀರಿ ಎಂದು ದೃಢವಾಗಿ ಹೇಳಿದರು  ,ಒಂದೊಮ್ಮೆ ಬಾರದಿದ್ದರೆ ಪ್ರಕಟಿಸುತ್ತೀರಾ ಕೇಳಿದೆ  ಎಂದು ಹೇಳಿದೆ.ಆಗ ಅಯಿತು ಖಂಡಿತಾ ಪ್ರಕಟಿಸುತ್ತೇನೆ ,ಆದರೆ ಹಾಗಾಗುದಿಲ್ಲ‌‌.ಹುಷಾರಾಗು ಬಂದು ನೀವೇ ಅದನ್ನು ಪ್ರಕಟಿಸುತ್ತೀರಿ ಎಂದರು
ಅಬ್ಬಾ.. ಭಾರ ಇಳಿಸಿದ ಅನುಭವ ಆಯಿತು
ಮನಸ್ಸು ನಿರಾಳವಾಯಿತು.
ನೆಮ್ಮದಿಯಿಂದ ಆಸ್ಪತ್ರೆಗೆ ಹೋಗಿ ದಾಖಲಾಗಿ ಚಿಕಿತ್ಸೆ ಪಡೆದು ಹುಷಾರಾಗಿ ಬಂದೆ
ಈಗ ಬರೆದದ್ದನ್ನು ತಂಗಿಯಂತೆ ಇರುವ ಸ್ನೇಹಿತೆ ಶ್ರೀನಿಧಿ ಕರೆಕ್ಷನ್ ಹಾಕುತ್ತಿದ್ದಾರೆ.
ನಾನು ಅಲ್ಲಲ್ಲಿ ಬಿಟ್ಟು ಹೋಗಿರುದನ್ನು ತುಂಬಿಸುತ್ತಿದ್ದೇನೆ ನಾಗರಾಜ ಭಟ್ ,ರಾಜೇಂದ್ರ ಕುಮಾರ್ ಜೈನ್ ಗೌತಮ್ ಜೈನ್ ,ವಿಜಯ್ ಮೊದಲಾದವರು ಅಪರೂಪದ ಪೋಟೋಗಳನ್ನು ಒದಗಿಸಿದ್ದಾರೆ‌.ಇನ್ನು ಕೆಲವರಲ್ಲಿ ಕೇಳಿರುವೆ
ಇದನ್ನಲ್ಲ ಜೋಡಿಸುವಾಗ ಈ ಪುಸ್ತಕವನ್ನು ನಾನು ಪ್ರಕಟಿಸುವ ಬದಲು ಜನಾರ್ದನ ಭಟ್ ಅವರು ಪ್ರಕಟಿಸಿದರೆ ತುಂಬಾ ಚೆನ್ನಾಗಿ ಬರ್ತಿತ್ತು ಎಂದು ನನಗೆ ಅನಿಸಿದೆ.ಅವರ ಅನುಭವ ,ಕೌಶಲ ಬಹಳ ಹೆಚ್ಚಿನದು.
ಅವರಲ್ಲಿ ಸಲಹೆ ಪಡೆಯುವೆ
ನನ್ನ ಅಧ್ಯಯನಾತ್ಮ ಸಂಗ್ರಹ ಸಾವಿರಕ್ಕಿಂತ ಹೆಚ್ಚಿನ ದೈವಗಳ ಮಾಹಿತಿ ಇರುವ ಪುಸ್ತಕ ಪ್ರಕಟಿಸುವ ಮುನ್ನವೇ ನಾನು ಸತ್ತರೆ ಇದನ್ನಾರು ಪ್ರಕಟಿಸುವರು ಎಂಬ ಆತಂಕ ಕಾಡಿದಾಗ ದೃಡವಾಗಿ ಪ್ರಕಟಿಸುವೆ ಎಂದು ಲಕ್ಷ ಗಟ್ಟಲೆ ಖರ್ಚಿನ ತಲೆನೋವಿನ ಜವಾಬ್ದಾರಿಯನ್ನು ಹೊರಲು ಸಿದ್ದರಾಗಿದ್ದ ಜನಾರ್ದನ ಭಟ್ಟರ ಔನ್ನತ್ಯಕ್ಕೆ ಹಿರಿತನಕ್ಕೆ ಸಹೃದಯತೆಗೆ ನಾನು ಆಭಾರಿಯಾಗಿದ್ದೇನೆ

Tuesday 20 April 2021

ಅಪರೂಪದ ಸ್ವಾಮಿ‌ದೈವ © ಡಾ.ಲಕ್ಷ್ಮೀ ಜಿ ಪ್ರಸಾದ್

 ಸ್ವಾಮಿ ಎಂಬ ದೈವದ ಬಗ್ಗೆ ಕೇಳಿದ್ದೀರ? 


ಉಡುಪಿ ಕುಂದಾಪುರದ ಸುತ್ತ ಮುತ್ತ ಸ್ವಾಮಿ ಎಂಬ ಜನಪ್ರಿಯ ದೈವದ ದರ್ಶನ,ಕೋಲ ಆಗುತ್ತದೆ.ಕಾಡ್ಯನಾಟದ ಭಾಗವಾಗಿ ಕೂಡ ಸ್ವಾಮಿ ಕೋಲವಿದೆ.ಮುದ್ದು‌ಮನೆಗಳಲ್ಲಿಯೂ ಇರ್ತದೆ


ಈ ದೈವದ ಕುರಿತು ಸಮರ್ಪಕ ಎನಿಸುವಂತಹ ಮಾಹಿತಿ ಸಿಕ್ಕಿರಲಿಲ್ಲ.ನಾಗಬ್ರಹ್ಮ ಎಂದು ಹಿರಿಯ ವಿದ್ವಾಂಸರಾದ ಎ.ವಿ ನಾವಡರು ಅಭಿಪ್ರಾಯ ಪಟ್ಟಿದ್ದರು.ಅದರೆ ನನಗೇನೂ ಸ್ವಾಮಿ‌ಎಂದರೆ  ನಾಗ ಬ್ರಹ್ಮನಲ್ಲ ಎಂದೆನಿಸಿತ್ತು.ಸ್ವಾಮಿಯ ಮಾನವ ಮೂಲವನ್ನು ದ್ಯೋತಿಸುವ ವೇಷ ಭೂಷಣ ,ಹಿರಿತನವನ್ನು ಸೂಚಿಸುವ ಭಾವ ,ಆತ ನಾಗ ಬ್ರಹ್ಮನಲ್ಲ ಎಂದು ಸೂಚಿಸುತ್ತಿತ್ತು‌.ನಾಗ ಬ್ರಹ್ಮನಲ್ಲದಿದ್ದರೆ ಇನ್ಯಾರು ಎಂಬುದಕ್ಕೆ ಉತ್ತರ ನನಗೆ ಸಿಕ್ಕಿರಲಿಲ್ಲ. ಹಾಗಾಗಿ ನಾನು ನನ್ನ ಪಿಎಚ್ ಡಿ ಥೀಸಿಸ್ ನಲ್ಲಿ ಹಾಗೆಯೇ ಬರೆದಿದ್ದೆ .


ಇತ್ತೀಚೆಗೆ ಹಾಯ್ಗುಳಿ ದೈವಗಳ ಮಾಹಿತಿಗಾಗಿ ಕುಂದಾಪುರ ಕಡೆಯ ಪಾತ್ರಿಯೊಬ್ಬರು   ಕರೆ ಮಾಡಿದ್ದು ಅವರಲ್ಲಿ  ಮಾತನಾಡುವಾಗ ಒಡೆಯನಿಗೆ ಪಾಣರು ಮೇರ ಸಮುದಾಯದವರು ಸ್ವಾಮಿ ಎಂದು ಸಂಬೋಧಿಸತ್ತಿದ್ದರು ಎಂದು ತಿಳಿಯಿತು..


ನಮ್ಮಲ್ಲಿ ಒಡೆಯನನನ್ನು ಉಳ್ಳಾಯ ಎಂದು ಸಂಬೋಧಿಸುತ್ತಿದ್ದರು..ನಮ್ಮ‌ಮನೆಗೆ ಕುರುವೆಗಳನ್ನು ಮಾಡಿ ತರುತ್ತಿದ್ದ ಮಾದಿರ ಎಂಬವರು ಮನೆ ಮೆಟ್ಟಿಲು ಏರುವಾಗಲೇ ಅಡ್ಡ ಬೂರ್ಯೆ ಉಳ್ಳಾಯ ಎನ್ನುತ್ತಿದ್ದರು ,ತಾಯಿಯವರಲ್ಲಿ ಉಪ್ಪಾಡು ಗಂಜಿ ಕೊರ್ಲೆ ದೆತ್ತಿ ಎನ್ನುತ್ತಿದ್ದರು..


ಸ್ವಾಮಿ ಎಂದರೆ ಒಡೆಯ..ಯಾವ ಒಡೆಯ ಯಾವ ಕಾರಣಕ್ಕಾಗಿ ದೈವತ್ವ ಪಡೆದು ಆರಾಧಿಲ್ಪಟ್ಟಿದ್ದಾರೆ ಎಂದು ಆಲೋಚಿಸುತ್ತಾ ಇದ್ದೆ‌.


ಈವತ್ತು ಕಾಡ್ಯನಾಟ ಮತ್ತು ಪಾಣರಾಟದ ಅಚರಣೆಯ ಅಂಗವಾಗಿ ನಡೆಯುವ ಭೂತ ಕೋಲಗಳ ಬಗ್ಗೆ ನನ್ನ ಸಾವಿರದೊಂದು ದೈವಗಳು ಪುಸ್ತಕಕ್ಕಾಗಿ ಬರೆಯುತ್ತಾ ಇದ್ದೆ‌.


ಕಾಡ್ಯನ ಹುಟ್ಟಿನ ಕಥೆ ಓದುತ್ತಿದ್ದಂತೆ ದೈವತ್ವ ಪಡೆದು ಸ್ವಾಮಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಿರುವ ಒಡೆಯ ಯಾರೆಂದು ತಿಳಿಯಿತು


.ಹೊನ್ನಿ ಅಲೌಕಿಕ ಶಕ್ತಿಯ ಹೆಣ್ಣುಮಗಳು.ಗಾಳಿರಾಯನ ಮಾಯೆಯಿಂದ ಏಳು ಮಕ್ಕಳಿಗೆ ಜನ್ಮ ಕೊಡುತ್ತಾಳೆ‌..ಆಗ ಎಂದೂ ಬಾರದ ಬರಗಾಲ ಬಂದು ಮಕ್ಕಳ ಹೊಟ್ಡೆತುಂಬಿಸುವುದು ಅವಳಿಗೆ ಕಷ್ಟವಾಯಿತು.ಆಗ ಆಕೆ ಒಡೆಯನಲ್ಲಿ ತನ್ನ ಕಷ್ಟವನ್ನು ಹೇಳಿಕೊಂಡಾಗ ಒಡೆಯ ಗದ್ದೆಯನ್ನು ಮತ್ತು ಅಂಗಡಿಗಳನ್ನು ಉಂಬಳಿ ಕೊಡುತ್ತಾನೆ‌.

ಮತ್ತೆ ಕಥೆ ಮೂಲ ಐತಿಹ್ಯಕ್ಕೆ ತಿರುಗುತ್ತದೆ‌.ಮೂರು ದಿಕ್ಕುಗಳಲ್ಲಿರುವ ಅಂಗಡಿಗಳನ್ನು ಕೊಡುವುದು ಬಹಳ ಕುತೂಹಲಕಾರಿಯಾಗಿದೆ.


ತುಳುನಾಡಿನ ಎಲ್ಲ ದೇವಾಲಯಗಳಿಗೂ ಇಲ್ಲಿನ ಮೂಲನಿವಾಸಿ ಸಮುದಾಯಗಳಿಗೂ ಸಂಬಂದವಿದೆ.ಮೂಲ ನಿವಾಸಿಗಳಿಗೆ ಉದ್ಭವ ಲಿಂಗ ಸಿಗುವುದು ರಕ್ತ ಬರುವುದು ಎಂಬ ವಿಚಾರ ಎಲ್ಲ ದೇವಾಲಯಗಳ ಐತಿಹ್ಯದಲ್ಲಿ ಕೂಡ ಕಾಣಸಿಗುತ್ತದೆ‌

ಅಂತೆಯೇ ಮೇರರ ಹುಡುಗಿ ಹೊನ್ನಿ ಕಾಡುಗೆಣಸನ್ನು ಒಕ್ಕುವಾಗ ಮೂರು ಕಲಶಗಳು ಸಿಗುತ್ತವೆ‌‌‌


.ಚಿನ್ನದ ಕಲಶವನ್ನು ಅಡಿಗಳಿಗೆ ತಾಮ್ರದ ಕಲಶವನ್ನು  ಒಡೆಯರಿಗೆ ಮಣ್ಣಿನ ಕಲಶ ಹೊನ್ನಿಗೆ ಎಂದು ನಿರ್ಧಾರವಸಗುತ್ತದೆ.ಅಡಿಗಳು ನಾಗ ದೇವತೆಗೆ ನಾಗ ಮಂಡಲವನ್ನೂ ಒಡೆಯರು ಬ್ರಹ್ಮ ಮಂಡಲ ವನ್ನು ಸ್ವಾಮಿಗೆ ? ಹೊನ್ನಿ ಕಾಡ್ಯನಾಟವನ್ನು ಕಾಡ್ಯನಿಗೆ ಮಾಡಿ ಆರಾಧನೆ ಮಾಡುತ್ತಾರೆ‌


ಕಾಡ್ಯನನ್ನು ಅವಳು ಒಡೆಯ ಕೊಟ್ಟ ಮೂಡಾಯಿ ಗದ್ದೆಯಲ್ಲಿ  ಇರು ಮಾಡುತ್ತಾಳೆ‌.ಕಾಡ್ಯನಾಟದ ಆರಂಭದಲ್ಲಿಯೇ ಸ್ವಾಮಿಯ ಆರಾಧನೆ ಇದೆ.ಮತ್ತು ಸ್ವಾಮಿಗೆ ಆರಾಧನೆ ಶುರು ಆದದ್ದು ಕಾಡ್ಯನಾಟದಲ್ಲಿ‌.ನಂತರ ಇತರೆಡೆಗೆ ಪ್ರಸರಣಗೊಂಡು  ಕೆಲವು ಕೊಂಕಣರ,ಬಂಟರ ಮನೆಗಳಲ್ಲಿ ಆರಾಧನೆ ಆರಂಭವಾಯಿತು.ಹೂ ನೀರು ಇಟ್ಟು ನಿತ್ಯವೂ ಆರಾಧಿಸುವ ಪದ್ದತಿ ಕೆಲವು ಮನೆಗಳಲ್ಲಿದೆ‌.ಸ್ವಾಮಿಗೆ ತಂಬಿಲ   ಕೋಲ ನೀಡಿಯೂ ಆರಾಧನೆ ಮಾಡುತ್ತಾರೆ.

ಹಾಗಾಗಿ ಸ್ವಾಮಿ ಎಂದರೆ ಮೇರರ ಹುಡುಗಿ ಹೊನ್ನಿಗೆ ಉಂಬಳಿ ಕೊಟ್ಟದ್ದಲ್ಲದೆ ಕಾಡ್ಯನಾಟ ಆಡಿಸಲು ಸಹಾಯ ಮಾಡಿದ ಒಡೆಯನೇ ನಂತರದ ದಿನಗಳಲ್ಲಿ ದೈವತ್ವ ಪಡೆದು ಸ್ವಾಮಿ ಎಂದು ಆರಾಧಿಸಲ್ಪಡುತ್ತಾನೆ‌


.ಈ ಬಗ್ಗೆ ವಿಸ್ತೃತ ಮಾಹಿತಿ ಪುಸ್ತಕದಲ್ಲಿ ನೀಡುವೆ.ಇದರ ಜೊತೆಗೆ ಶ್ರೀಲಂಕಾದ ಸನ್ನಿ ಯಕುಮಗಳನ್ನು ಹೋಲುವ ಜ್ವರನ ಕೋಲ,ಕೆಮ್ಮನ ಕೋಲ,ಉಬ್ಬಸದ ಕೋಲ,ವಾತದ ಕೋಲ ಗಳು ಯಕ್ಷಾರಾಧನೆಯ ಮೂಲದ ಬಗ್ಗೆ ಹೊಳಹನ್ನು ನೀಡಿವೆ‌‌.


ಕಾಡ್ಯನಾಟ ,ಪಾಣರಾಟ,ಸ್ವಾಮಿ ದೈವದ ಬಗ್ಗೆ ವಿಸ್ತೃತವ ಅಧ್ಯಯನ ಆಗಬೇಕಾದ ಅಗತ್ಯವಿದೆ..ಭೂತಾರಾಧನೆ ಎಷ್ಡು ಪ್ರಾಚೀನ ಎಂಬುದಕ್ಕೆ ಸರಿಯಾದ ಆಧಾರ ಇರಲಿಲ್ಲ.ಕಾಡ್ಯನಾಟದ ಜ್ವರದ ಕೋಲ,ಕೆಮ್ಮಿನ ಕೋಲ,ಉಬ್ಬಸದ ಕೋಲ,ವಾತ ಕೋಲಗಳು ಸನ್ನಿ ಯಕ್ಷೇಯಗಳ ಆರಾಧನೆಗೆ ಸಮೀಪವಾಗಿದೆ.

ನಮ್ಮಲ್ಲೂ ಸನ್ನಿ ಹಿಡಿಯುದು,ಬಾಣಂತಿ ಸನ್ನಿ ,ಕೆರೆ ಸಮೀಪ ಹೋದರೆ ಹಿಡಿವ ನೀರ ಸನ್ನಿ ಇತ್ಯಾದಿ ಉಪದ್ರ ಕೊಡುವ ಸನ್ನಿಗಳ ಪರಿಕಲ್ಪನೆ. ಇದೆ.ಇವೆರಡೂ ಒಂದೇ ಅಥವಾ ಎರಡರ ಮೂಲ ಒಂದೇ ಎಂದು ಆಧಾರ ಸಹಿತ ಸಿದ್ಧ ಮಾಡಿದರೆ ಭೂತಾರಾಧನೆಯು ಎರಡು ಸಾವಿರ ವರ್ಷಕ್ಕಿಂತ ಪ್ರಾಚೀನ ಎಂದು ಸಿದ್ದವಾಗುತ್ತದೆ

ಇನ್ನು ಹೊನ್ನಿಯ ಕಾಲ ಯಾವುದು ? ಸನ್ನಿ ಯಕುಮಗಳ ? ಜ್ವರ ಉಬ್ಬಸ ಕೋಲ ಆರಂಭವಾದ ಕಾಲ,ಹೊನ್ನಿಗೆ ಉಂಬಳಿ ಕೊಟ್ಟವರು ಯಾರು? ಮನೆ ಮುಂದಿನ  ಮಲಗದ್ದೆ,ತೆಂಕಣದ ಕಂಚುಗಾರನ ಅಂಗಡಿ,ಬಡಗದ ಬಳೆಗಾರನ ಅಂಗಡಿ,ಮೂಡು ದಿಕ್ಕಿನಲ್ಲಿ ಮುಗಿಲರನ ಅಂಗಡಿ,ಪಡುವಣದಲ್ಲಿ ಗಾಣಿಗನ ಉಂಬಳಿ ಕೊಟ್ಟ ಒಡೆಯ ಯಾರು?ಈ ಸ್ಥಳ ಎಲ್ಲಿದೆ ?  ಮೇರರ ಹುಡುಗಿ ಹೊನ್ನಿಗೆ ಇಷ್ಟು ದೊಡ್ಡ ಉಂಬಳಿ ಕೊಡಬೇಕಾದರೆ ಆ ಕಾಲದ ಸಾವುಕಾರನೇ ಇರಬೇಕು.ಅಲ್ಲಿನ ಸ್ಥಳೀಯ ಅರಸನೂ ಆಗಿರುವ ಸಾಧ್ಯತೆ ಇದೆ.ಜೊತೆಗೆ ಭೂತ ಬಲಿ ಮಂಡಲ ಎಂಬ ಆಚರಣೆ.ಇವೆಲ್ಲ ಅಧ್ಯಯನ ಯೋಗ್ಯ ವಿಚಾರಗಳು.

ಮೂರಿಲು

ನಾಗ ಸಾನ್ನಿಧ್ಯವಿರುವ ಮಣ್ಣಿನ‌ಮಡಿಕೆಗಳನ್ನು ಮೂರಿಲು/ ಮೂರ್ಲೆ ಎನ್ನುತ್ತಾರೆ.ಈ ಮೂರಿಲು ಎಂಬ ನಾಗ ಕನ್ನಿಕೆಯರ ಸಾನ್ನಿದ್ಯವಿರುವ ಮಡಿಕೆಗಳಿಗೆ ಸ್ವಲ್ಪ ನೀರು ಒಂದು ಮುಷ್ಟಿ ಬೆಳ್ತಿಗೆ ಅಕ್ಕಿ,ಸರೋಳಿ ಸೊಪ್ಪು ತುಂಬಿ ಆರಾದನೆ ಮಾಡುತ್ತಾರೆ.ಜಕ್ಕಿಣಿ ಕುಣಿತ ಅತವಾ ಅದನ್ನು ಹೋಲುವ ಕುಣಿತದ ಮೂಲಕ ಮೂರಿಲನ್ನು ಆರಾಧಿಸುತ್ತಾರೆ.ಕಾಡ್ಯನಾಟದಲ್ಲಿ ಕಾಡ್ಯನೆಂಬ ಮಣ್ಣಿನ ಕಲಶದ ಸುತ್ತ ಮಂಡಲ ಬರೆದು ನರ್ತಿಸುವಂತೆ ಇಲ್ಲಿ‌ ಕೂಡ ಮೂರಿಲು ಸುತ್ತ ಜಕ್ಕಿಣಿಯರ ಕುಣಿತವನ್ನು ಸಾಂಕೇತಿಕವಾಗಿ ಮಾಡುತ್ತಾರೆ.

ಕಾಡ್ಯ ಸ್ವಾಮಿ,ನಾಗದೇವತೆಗಳು ಮಣ್ಣಿನ ತಾಮ್ರದ ,ಚಿನ್ನದ ಕಲಶಗಳಲ್ಲಿ ಮೂಲಕ ತಮ್ಮ‌ಇರವನ್ನು ತೋರಿದವರು.ಹೊನ್ನಿಗೆ ಕಾಡಗೆಣಸು ಒಕ್ಕುವಾಗ ಮಣ್ಣಿನಡಿಯಲ್ಲಿ ಮೂರು ಕಲಶಗಳು ಸಿಗುತ್ತವೆ.ಈ ರೀತಿಯಾಗಿ ಕಲಶವನ್ನು  ಮೂರಿಲು ಎಂದು ಕರೆದು ಆರಾಧಿಸುವ ಪದ್ಧತಿ ತುಳುವರಲ್ಲಿ ಇದೆ.ಮೂರಿಲು, ಮೂರ್ಲೆ ಎಂದೂ ಹೇಳುತ್ತಾರೆ.

ಒಂದಿನ ದಿನ ಮಾಯದ ಮಳೆ ಬಂತು .ಆಗ ಏಳು ಮೂರಿಗಳು ತೇಲಿಕೊಂಡು ಬಂದು ಅಂಗಳದಲ್ಲಿ ಕಾಣಿಸಿಕೊಂಡವು.ಕೆಲವೆಡೆ ಗದ್ದೆಯಲ್ಲಿ ಕಾಣಿಸಿಕೊಂಡವು ಎಂಬ ನಂಬಿಕೆ ಇದೆ.ಕಾಸರಗೋಡು ಚೌಕಾರು ಗುತ್ತಿನಲ್ಲಿ ಮೂರಿಲು ಆರಾಧನೆ ಇದೆ.

ಇಲ್ಲಿ ಎರಡು ಮಣ್ಣಿನ ಮಡಿಕೆಯಲ್ಲಿ ಬೆಳ್ತಿಗೆ ಅಕ್ಕಿ ತುಂಬಿ ಮಾವಿನ ಎಲೆ,ಸರೋಳಿ ಎಲೆ ಹಾಕಿ  ತುಂಬಿ ಹಾಲು ಹಣ್ಣು ನೈವೇದ್ಯ ನೀಡಿ ಮೂರಿಲುವಿನ ಆರಾಧನೆ ಮಾಡುತ್ತಾರೆ.ಏಳು ಕಲಶಗಳು ಇದ್ದವು.ಈಗ ಎರಡು ಉಳಿದಿವೆ ,ಇವು ನಾಗ ಕನ್ನಿಕೆಯರು ಎಂದು ಚೌಕಾರು ಗುತ್ತಿನ ಹಿರಿಯರು ತಿಳಿಸಿದ್ದಾರೆ.ಈ ಮೂರಿಲು  ಕಾಡ್ಯನಾಟದ  ಇನ್ನೊಂದು ರೂಪವಾಗಿದೆ.ಇಲ್ಲಿ ಜಕಿಣಿಯರ ಕೋಲ/ ಕುಣಿತವಿದ್ದು ಅದು ಈ ಮೂರಿಲುಗಳಲ್ಲಿ ನೆಲೆಯಾದ ನಾಗ ಕನ್ನಿಕೆಯರಿಗೆ ಸಂಬಂಧಿಸಿದ್ದಾಗಿದೆ.


ಭೂತಾರಾಧನೆಗೆ ಕನಿಷ್ಟ ಎರಡು ಸಾವಿರದ ನೂರು ವರ್ಷಗಳ ಇತಿಹಾಸ ಸಿದ್ದವಾಯಿತು.ಭೂತಾರಾಧನೆ ಎರಡು ಸಾವಿರ ವರ್ಷಕ್ಕಿಂತ ಪ್ರಾಚೀನ ಎಂದು ಹೇಳಲು ಬಲವಾದ ಆಧಾರಗಳು ಸಿಕ್ಕವು.( ಈ ಬಗ್ಗೆಯೂ ವಿಸ್ತೃತ ಮಾಹಿತಿ ಪುಸ್ತಕದಲ್ಲಿ ನೀಡುವೆ) © ಡಾ.ಲಕ್ಷ್ಮೀ ಜಿ ಪ್ರಸಾದ್ 

ಈ ಸ್ವಾಮಿ ದೈವದ ಅಪರೂಪದ ಪೋಟೊವನ್ನು ಗಗ್ಗರ ಗ್ರೂಪಿನಲ್ಲಿ ಸಿಕ್ಕಿದೆ.ಅಪರೂಪದ ದೈವಗಳ ಕೋಲ ರೆಕಾರ್ಡ್ ಮಾಡಿ ಫೋಟೋ ಹಾಕುವ ಒಳ್ಳೆಯ ಕೆಲಸ ಮಾಡುತ್ತಿರುವ ಗಗ್ವರ ಗ್ರೂಪಿನ ಅಡ್ಮಿನ್ ಗೆ ಅಭಿನಂದನೆಗಳು 

ಸ್ವಾಮಿ ದೈವದ ಫೋಟೋ,ವಿಡಿಯೊ ಎರಡೂ ನನ್ನಲ್ಲಿ ಇದ್ದುದು ಕಂಪ್ಯೂಟರ್ ವೈರಸ್ ಬಂದು ನಾಶವಾಗಿದೆ‌‌.ನನ್ನ ಪುಸ್ತಕಕ್ಕೆ ಅಪರೂಪದ ಸ್ವಾಮಿ ದೈವದ ಫೋಟೋ ಬೇಕಾಗಿದೆ.ಯಾರಲ್ಲಾದರೂ ಇದ್ದರೆ ನನಗೆ ಕಳುಹಿಸಿಕೊಡಿ.ಫೋಟೊ ನೀಡಿದವರ ಹೆಸರು ಹಾಕಿ ಬಳಸುವೆ ನನ್ನ ಇ ಮೇಲ್ ವಿಳಾಸ samagramahithi@gmail.com 

ಡಾ.ಲಕ್ಷ್ಮೀ ಜಿ ಪ್ರಸಾದ್