Sunday 26 April 2015

ಡಾ.ವಿಜಯ ಸುಬ್ಬರಾಜ್ ದತ್ತಿ ನಿಧಿ "ಗಣ್ಯ ಲೇಖಕಿ "ಪುರಸ್ಕಾರ

 ಇಂದು ದಿನಾಂಕ 26/04 /2015 ರಂದು ಬೆಳಗ್ಗೆ ಬೆಂಗಳೂರಿನ ಎನ್ ಆರ್ ಕಾಲೋನಿ ಯಲ್ಲಿರುವ ಬಿ.ಎಂ ಶ್ರೀ ಪ್ರತಿಷ್ಠಾನದ ಡಾ.ವಿಜಯ ಸುಬ್ಬರಾಜ್ ದತ್ತಿ ನಿಧಿ ಗಣ್ಯ ಲೇಖಕಿ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಿತು .ಖ್ಯಾತ ಕತೆಗಾರ್ತಿ ಸುನಂದಾ ಕಡಮೆಯರಿಗೆ ಗಣ್ಯ ಲೇಖಕಿ ಪುರಸ್ಕಾರವನ್ನು ಚೆನ್ನೈ ದೂರ ದರ್ಶನ  ಕೇಂದ್ರದ ನಿರ್ದೇಶಕರಾಗಿರುವ ಸಿ ಎನ್ ರಾಮ ಚಂದ್ರ ಅವರು ನೀಡಿದರು .
ವಿಮರ್ಶಕ ರಾಮ ರಾವ್ ಕುಲಕರ್ಣಿ ಅವರು ಸುನಂದಾ ಕಡಮೆಯವರ ಕೃತಿಗಳ ಬಗ್ಗೆ ಮಾತನಾಡಿದರು ,ವಿಜಯ ಸುಬ್ಬರಾಜ್ ಅವರು ಎಲೆ ಮರೆಯ ಕಾಯಿಯಂತೆ ಇದ್ದು ಮಹತ್ತರ ಸಾಹಿತ್ಯ ಸಂಶೋಧನೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಇರುವವರನ್ನು ಗುರುತಿಸುವುದು ತಮ್ಮ ಉದ್ದೇಶ ಎಂದು ತಾವು ದತ್ತು ನಿಧಿ ಸ್ಥಾಪಿಸಿದುದರ ಬಗ್ಗೆ ತಮ್ಮ ಆಶಯವನ್ನು ತಿಳಿಸಿದರು.
ಸಿ ಎನ್ ರಾಮಚಂದ್ರ ಅವರು ಸುನಂದಾ ಕಡಮೆಯವರ ಕೃತಿಗಳನ್ನು ವಿಮರ್ಶಿಸುತ್ತಾ ,ಪುರಸ್ಕಾರದ ಅಗತ್ಯ ಹಾಗೂ ಮಹತ್ವದ ಬಗ್ಗೆ ಮಾತನಾಡಿದರು.
ಬಿ ಎಂ ಶ್ರೀ ಪ್ರತಿಷ್ಥಾನದ ಅಧ್ಯಕ್ಷರಾಗಿರುವ ಪಿ ವಿ ನಾರಾಯಣ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು,ಕಾರ್ಯದರ್ಶಿಗಳಾದ ರವೀಂದ್ರ ಅವರು ಧನ್ಯವಾದ ಅರ್ಪಿಸಿದರು .ಇನ್ನೋರ್ವ ಕಾರ್ಯದರ್ಶಿಗಳಾದ ಪ್ರೊ.ಅಬ್ದುಲ್ ಬಷೀರ್ ಅವರು ಕಾರ್ಯಕ್ರಮ ನಿರ್ವಹಿಸಿದರು

ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ನೋಂದಣಿಗೊಂಡಿರುವ ಬಿ ಎಂ ಶ್ರೀ ಪ್ರತಿಷ್ಠಾನ ,ಎಂ ವಿ ಸೀ ಸ್ನಾತಕೋತ್ತರ ಸಂಶೋಧನಾ ಕೇಂದ್ರದ ಮೂಲಕ ನಾನು ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ವಿಷಯದಲ್ಲಿ ನನ್ನ ಮೊದಲ ಪಿಎಚ್ ಡಿ ಪದವಿಯನ್ನು ಪಡೆದಿದ್ದು ,ಈ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಹಾಗೂ ಸದಸ್ಯೆ ಕೂಡ ಆಗಿರುತ್ತೇನೆ ,ನನ್ನ ಸಂಶೋಧನಾ ಅಧ್ಯಯನ ಹಾಗೂ ಮೌಖಿಕ ಪರೀಕ್ಷೆ ಸಂದರ್ಭದಲ್ಲಿ ಡಾ.ವಿಜಯ ಸುಬ್ಬರಾಜ್ ಅವರು ನಮಗೆ ಪೂರ್ಣ ಬೆಂಬಲ ನೀಡಿ ಆತ್ಮ ವಿಶ್ವಾಸ ತುಂಬಿದ್ದನ್ನು ನಾನು ಮರೆಯಲಾರೆ .

ಎಲ್ಲರ ಮಾತುಗಳನ್ನು ಆಲಿಸಲು ಕೆಳಗೆ ಕ್ಲಿಕ್ ಮಾಡಿ
Vocaroo Voice Message



-ಲಕ್ಷ್ಮೀ ಜಿ ಪ್ರಸಾದ ,
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜ್
ಬೆಳ್ಳಾರೆ ,ಸುಳ್ಯ ,ದ.ಕ ಜಿಲ್ಲೆ









No comments:

Post a Comment