ಇಂದಿಗೆ ನನ್ನ ಬ್ಲಾಗ್ (ಭೂತಗಳ ಅದ್ಭುತ ಜಗತ್ತು )ಓದುಗರ ಸಂಖ್ಯೆ 75,000 ತಲುಪಿದೆ ಹಾಗೂ ನನ್ನ ಪೇಜ್ Bhutagala Adbhuta Jagattu 4,000 ಓದುಗರನ್ನು ಪಡೆದಿದೆ.
ಎರಡು ವರ್ಷ ಮೂರು ತಿಂಗಳ ಮೊದಲು ಪ್ರೊ.ಮುರಳೀಧರ ಉಪಾಧ್ಯರ ಸಹಾಯದಿಂದ ನಾನು ಬ್ಲಾಗ್ ತೆರೆದೆ,ಆರಂಭದಲ್ಲಿ ,ನನಗೆ ಯೂನಿಕೋಡ್ ತಂತ್ರಜ್ಞಾನ ತಿಳಿಯದ ಕಾರಣ ಬ್ಲಾಗ್ ನಲ್ಲಿ ಬರೆಯುದು ಕಷ್ಟಕರ ಆಗಿತ್ತು ಹಾಗಾಗಿ ಭೂತಗಳ ಚಿತ್ರ ಮಾತ್ರ ಬ್ಲಾಗ್ ಗೆ ಹಾಕುತ್ತಿದ್ದೆ
ಇಂದಿಗೆ ಸರಿಯಾಗಿ ಎರಡು ವರ್ಷ (21-04-2013)ಮೊದಲು ಅಬ್ದುಲ್ ರಶೀದ್ ಅವರ ಪ್ರೇರಣೆಯಿಂದ ಕೆಂಡ ಸಂಪಿಗೆಗಾಗಿ ಭೂತಗಳ ಅದ್ಭುತ ಜಗತ್ತಿನಲ್ಲಿ ಎಂಬ ಅಂಕಣ ಬರೆಯಲು ಆರಂಭಿಸಿದೆ .ಆಗ ನನಗೆ Aravinda VK ಅವರು ಸಂಶೋಧಿಸಿದ aravinda vk converter (github.com//aravindavk/ascii2unicode) ಮೂಲಕ ನುಡಿ ಬರಹದಲ್ಲಿ ಬರೆದಿರುವುದನ್ನು ಯೂನಿಕೋಡ್ ಗೆ ಬದಲಾಯಿಸಲು ಕಲಿತಿದ್ದೆ .ಜೊತೆಗೆ ಬ್ಲಾಗ್ ಲೇಖನಗಳನ್ನು ಫೇಸ್ ಬುಕ್ ಹಾಗೂ ಇತರ ಗುಂಪುಗಳಿಗೆ share ಮಾಡುವುದನ್ನು ಪದ್ಯಾಣ ರಾಮಚಂದ್ರಣ್ಣ ಅವರ ಸಹಾಯದಿಂದ ಕಲಿತೆ
ನಂತರ 20 ವಾರಗಳ ಕಾಲ ಕೆಂಡ ಸಂಪಿಗೆಗೆ ತುಳುನಾಡಿನ ಅಪರೂಪದ ಭೂತಗಳ ಬಗ್ಗೆ ಬರೆದೆ.ನಂತರ ಅದು ನಿಂತು ಹೋಯಿತು
ಈ ನಡುವೆ ನನ್ನ ಲೇಖನಗಳನ್ನು ಓದಿದ ಅನೇಕ ಸ್ನೇಹಿತರು ಬೇರೆ ಬೇರೆ ಭೂತಗಳ ಕುರಿತು ಮಾಹಿತಿ ಕೇಳುತ್ತಿದ್ದರು ,ಅವರಿಗಾಗಿ ನಾನು ಮಾಹಿತಿ ಸಂಗ್ರಹಿಸಿ ನೀಡುತ್ತ ಇದ್ದೆ
.ಇದಕ್ಕೂ ಮೊದಲೇ ನನ್ನ ತುಂಡು ಭೂತಗಳು -ಒಂದು ಅಧ್ಯಯನ ,ಹಾಗೂ ತುಳುನಾಡಿನ ಅಪ್ರುವ ಭೂತಗಳು ಕೃತಿ ಪ್ರಕಟವಾಗಿತ್ತು .ಇದರಲ್ಲಿ ಅನೇಕ ಅಪರೂಪದ ಹೆಸರು ಕೂಡ ದಾಖಲಾಗಿಲ್ಲದ ಭೂತಗಳ ಬಗ್ಗೆ ಬರೆದಿದ್ದೆ
ಹಾಗಾಗಿ ಡಾ.ವಾಮನ ನಂದಾವರ ಅವರ ಪ್ರೇರಣೆಯಿಂದ ಸ್ನೇಹಿತರ ಬೆಂಬಲದೊಂದಿಗೆ ನಾನು ಒಂದು ವರ್ಷ ಮೊದಲು (21-02-2014) ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು ಎಂಬ ಸರಣಿಯನ್ನು ಆರಂಭಿಸಿದೆ .ಈಗ ಅದು 190 ಆನ್ನು ತಲುಪಿದೆ .ಜೊತೆಗೆ ಎಪ್ಪತ್ತೈದು ಸಾವಿರ ಓದುಗರನು ತಲುಪಿದೆ,ಇಲ್ಲಿರುವ ಹೆಚ್ಚ್ಚಿನ ದೈವಗಳ ಮಾಹಿತಿ ನನ್ನ ಸ್ವಂತದ್ದು,ನಾನು ಕ್ಷೇತ್ರ ಕಾರ್ಯ ಮಾಡಿ ಪಡೆದುಕೊಂಡ ಮಾಹಿತಿಗಳು .ಸುಮಾರು 50-60 ದೈವಗಳ ಮಾಹಿತಿಯು ಡಾ.ಚಿನ್ನಪ್ಪ ಗೌಡ ,ಡಾ,viveka ರೈ ,ಡಾ.ಅಮೃತ ಸೋಮೇಶ್ವರ ,ಡಾ,ಬನ್ನಂಜೆ ಬಾಬು ಅಮೀನ್ ಅವರ ಕೃತಿಗಳಲ್ಲಿವೆ .ಉಳಿದವೆಲ್ಲ ನನ್ನ ಸ್ವಂತ ಅಧ್ಯಯನದ ಫಲಿತಗಳು ಆಗಿವೆ .
ಈ ನಡುವೆ ದೀಕ್ಷಿತ್ ರೈ ಎನ್ಮೂರು ಅವರ ಸಹಾಯದಿಂದಒಂದು ವರ್ಷದ Bhutagala Adbhuta Jagattu ಎಂಬ page ಆನ್ನೂ ತೆರದೆ
.ಅದೂ ಇಂದಿಗೆ 4000 like ಎಂದರೆ ಓದುಗರನ್ನು ಪಡೆಯಿತು
ಇದೆಲ್ಲ ಮುಖ ಪುಸ್ತಕ ಬಂಧುಗಳ ನಿರಂತರ ಪ್ರೋತ್ಸಾಹ ಕಾರಣವಾಗಿದೆ .ಆದರಿಂದ ಎಲ್ಲ ಸ್ನೇಹಿತರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ
ನನ್ನ ಬ್ಲಾಗ್ http://laxmipras.blogspot.com
ನನ್ನ page https://www.facebook.com/pages/Bhutagala-Adbhuta-Jagattu/729560787088596?fref=photo
No comments:
Post a Comment