Vocaroo Voice Message
ಬಸ್ತರ್ ಜಾನಪದ ತಜ್ಞೆ ಪ್ರೊ .ಉಮಾ ರಾಮ್ ಅವರೊಂದಿಗೆ ಮಾತು ಕತೆ
ಎತ್ತಣ ಮಾಮರ ಎತ್ತಣ ಕೋಗಿಲೆ !ಛತ್ತೀಸ್ ಘಡದ ಬಸ್ತರ್ ಜಿಲ್ಲೆಯ ಪ್ರದೇಶದ ಜಾನಪದ ತಜ್ಞ ರಾದ ಉಮಾ ರಾಮ್ ಮೂಲತ: ಇಂಗ್ಲಿಷ್ ಪ್ರೊಫೆಸರ್ .ಇವರ ಹುಟ್ಟೂರು ಮೈಸೂರು. ಅನೇಕ ವರ್ಷಗಳಿಂದ ಬಸ್ತರ್ ಜಿಲ್ಲೆಯ ಬುಡಕಟ್ಟು ಜನಾಂಗಗಳ ಜನರನ್ನು ಹತ್ತಿರ ದಿಂದ ಕಂಡು ಅವರೊಡನೆ ಒಡನಾಡಿಯಾಗಿ ಇದ್ದು ಅವರ ವಿಶ್ವಾಸ ಗಳಿಸಿ ಅವರಲ್ಲಿರುವ ಜಾನಪದ ಹಾಡುಗಳನ್ನು ಕಾವ್ಯಗಳನ್ನು ಸಂಗ್ರಹಿಸಿ ಸತತ ಅದ್ಯಯನ ನಡೆಸಿ Tribal songs Ballads and Oral epics of Bastar ಎಂಬ ಗ್ರಂಥ ವನ್ನು ಬರೆದು ಪ್ರಕಟಿಸಿದ್ದಾರೆ .ಇವರ ಪತಿ ಕೆ. ಎಸ ರಾಮ್ ಕೂಡಾ ಇದರಲ್ಲಿ ಸಹಭಾಗಿಯಾಗಿದ್ದಾರೆ . ಜನಪದ ಹಾಡು ಕಾವ್ಯಗಳ ಸಂಗ್ರಹದೊಂದಿಗೆ ಸಮಗ್ರ ವಿಮರ್ಶೆ ಯನ್ನು ಇದರಲ್ಲಿ ಮಾಡಿದ್ದಾರೆ . ಪ್ರಳಯಾನಂತರದ ಸೃಷ್ಟಿ ,ಅಣ್ಣ ತಂಗಿಯರು ಮುಂದೆ ಗಂಡ -ಹೆಂಡತಿಯರಾಗಿ ಸೃಷ್ಟಿ ಕಾರ್ಯವನ್ನು ಮಾಡುವುದು ಲಿಂಗೊ ಪೆನ್ ಎಂಬ ಅಲೌಕಿಕ ಶಕ್ತಿಯ ಪುರುಷ ಸಂಗೀತ ವನ್ನು ಸೃಜಿಸುವುದು, ಆತನನ್ನು ಕೊಲ್ಲಲೆಂದು ಭಾವಿಯಲ್ಲಿ ಭರ್ಜಿಯನ್ನು ಚುಚ್ಚಿ ಇಡುವುದು, ಆತ ಅಲೌಕಿಕ ಶಕ್ತಿಯಿಂದ ಪೂಜ್ಯನಾಗುವುದು ,ವಿವಿಧ ತರಕಾರಿಗಳಿಗೆ ನಮಸ್ಕಾರ(ಸಲ್ಯೂಟ್ ಟು ಬ್ರಿಂಜಾಲ್ } ಎಂಬ ಹಾಡು, ಕೊಕೆರೆಂಗ್ ಕೊರೆಂಗ್ ನೀನು ಯಾಕೆ ಹಾಡುವುದಿಲ್ಲ(ಕೊಕೆರೆಂಗ್ ಕೊರೆಂಗ್ ವಾಯ್ ವಿ ಆರ್ ನಾಟ್ ಸಿಂಗಿಂಗ್ } , ರಾಣಿಗೇನು ನೀ ತರುವಿ {ವಾಟ್ ಯೂ ಬ್ರಿಂಗ್ ಫಾರ್ ದಿ ರಾಣಿ }ಮೊದಲಾದ ಹಾಡುಗಳು ಇದರಲ್ಲಿ ಇವೆ ಇವು ತುಳು ಪಾಡ್ದನಗಳಲ್ಲಿ ವರ್ಣಿಸಿರುವ ಸೂರ್ಯ ನಾರಾಯಣ ದೇವರು ಮಾಡಿದ ಸೃಷ್ಟಿ ಅಣ್ಣತಂಗಿಯರಾಗಿದ್ದ ಕೇಂಜವ ಪಕ್ಷಿಗಳು ದೇವರ ಅನುಮತಿ ಪಡೆದು ಗಂಡ ಹೆಂಡತಿಯರಾಗಿ ಸೃಷ್ಟಿ ಕಾರ್ಯದಲ್ಲಿ ನೆರವಾಗುವುದು , ತುಳು ಜಾನಪದ ಹಾಡುಗಳಾದ ರಾವೋ ರಾವು ಕೊರೆಂಗೊ ,ಆಜಪ್ಪಾ ಮೂಜಿಮೂಡೆ .. ಬೊಳೀಯ ಲತ್ತಂಡೆ ಕರಿಯ ಲತ್ತಂಡೆ ಈಶ್ವರ ದೇವೇರೇ ಪಾದ ಕಾಣಿಕೆ ಮೊದಲಾದುವುಗಳನ್ನು ನೆನಪಿಸುತ್ತವೆ .ಈ ಬಗ್ಗೆ ತೌಲನಿಕ ಅಧ್ಯಯನ ನಡೆಯಬೇಕಾಗಿದೆ .

No comments:
Post a Comment