Sunday, 25 May 2014

ಸಾವಿರದೊಂದು ಗುರಿಯೆಡೆಗೆ -88 ಕರಿ ಚಾಮುಂಡಿ ಭೂತ (Kari chamundi Bhuta)- © ಡಾ.ಲಕ್ಷ್ಮೀ ಜಿ ಪ್ರಸಾದ



                     KARI CHAMUNDI PHOTO COURTESY :B BHATH BHANDRI PUTURU  

 ಒಂದೇ ದೈವ ಚಾಮುಂಡಿಯ ಹೆಸರಿನಲ್ಲಿ ಅನೇಕ ಶಕ್ತಿಗಳಿಗೆ ಆರಧನೆಯಾಗುತ್ತಿರುವುದು ತುಳುನಾಡಿನಾದ್ಯಂತ ಕಾಣಿಸುತ್ತಿದೆ .ರುದ್ರ ಚಾಮುಂಡಿ, ಪಿಲಿ ಚಾಮುಂಡಿ, ಪಾಪೆಲು ಚಾಮುಂಡಿ, ಕೆರೆ ಚಾಮುಂಡಿ ,ಕೋಮಾರು ಚಾಮುಂಡಿ, ಕರಿ ಚಾಮುಂಡಿ,ಅಗ್ನಿಚಾಮುಂಡಿ,ನಾಗ ಚಾಮುಂಡಿ ಗಳು ಚಾಮುಂಡಿ ಹೆಸರಿನೊಂದಿಗೆ ಆರಾಧಿಸಲ್ಪಡುವ  ಬೇರೆ ಬೇರೆ ದೈವಗಳಾಗಿವೆ  

ಕರಿ ಚಾಮುಂಡಿ ದೈವವನ್ನು ಕರಿಚಾಂಡಿ ಎಂದೂ ಕರೆಯುತ್ತಾರೆ. ಕರಿಚಾಮುಂಡಿ ಯಾರೆಂಬ ಬಗ್ಗೆ ಸೂಕ್ತ ಮಾಹಿತಿ ಸಿಕ್ಕಿಲ್ಲ. ಆದರೆ ಮಡಪ್ಪಾಡಿಯಲ್ಲಿ ಕರಿಚಾಮುಂಡಿ ಭೂತಕ್ಕೆ ನೇಮ ಆಗುವಾಗ ಹೇಳಿದ ಪಾಡ್ದನದ ಕೆಲವು ಸಾಲುಗಳಲ್ಲಿ ಕರಿಚಾಮುಂಡಿಯ ತಂದೆ ಕಾನಕಲ್ಲಟೆ ದೇವರೆಂದೂ, ತಾಯಿ ನೆಲವುಲ್ಲ ಸಂಖ್ಯೆಎಂದೂ ಹೇಳಿದೆ.ಇನ್ನೊಂದು ಪಾಡ್ದನ ನಲ್ಲಿ ತಂದೆಯ ಹೆಸರನ್ನು ಗಾಳಭದ್ರರಾಯ ಎಂದು ಹೇಳಿದೆ © ಡಾ.ಲಕ್ಷ್ಮೀ ಜಿ ಪ್ರಸಾದ್
 ಕೊರಗ ತನಿಯ ತಾಯಿ ಮೈರೆಯ ತಂದೆ ತಾಯಿಯನ್ನು ಕಾನಕಲ್ಲಟೆ ದೇವರು, ನೆಲವುಲ್ಲ ಸಂಖ್ಯೆ ಎಂದು ಕೊರಗ ತನಿಯ ಪಾಡ್ದನದಲ್ಲಿ ಹೇಳಿದೆ.
 ಕಾಸರಗೋಡು, ಬಂಟ್ವಾಳ ಪರಿಸರದಲ್ಲಿ ಒಂಜಿ ಕುಂದ ನಲ್ಪ ದೈವೊಳ ನೇಮದಲ್ಲಿ ಪುದ ಎಂಬ ಭೂತಕ್ಕೆ ಆರಾಧನೆ ಇದೆ. ಕೊರಗ ತನಿಯನ ತಾಯಿ ಮೊದಲು ಪಾರಿವಾಳವಾಗಿದ್ದು ನಂತರ ಹೆಣ್ಣಾದವಳು ಎಂದು ಒಂದು ಪಾಡ್ದನದಲ್ಲಿ ಹೇಳಿರುವ ಬಗೆ ಡಾ. ಅಮೃತ ಸೋಮೇಶ್ವರರು ತಿಳಿಸಿದ್ದಾರೆ.ಆದ್ದರಿಂದ ಕೊರಗ ತನಿಯನ ತಾಯಿ ಮೈರೆಯೇ ಪುದ ಎಂದೂ, ಕರಿಚಾಮುಂಡಿ ಎಂದೂ ಆರಾಧನೆ ಹೊಂದಿರುವ ಸಾಧ್ಯತೆ ಇದೆ.

No comments:

Post a Comment