ಡಾ.ಲಕ್ಷ್ಮೀ ಜಿ ಪ್ರಸಾದ
ಹೆಸರು: ಡಾ ಲಕ್ಷ್ಮೀ ವಿ
ಕಾವ್ಯನಾಮ -ಡಾ.ಲಕ್ಷ್ಮೀ ಜಿ ಪ್ರಸಾದ]
ಜನನ ದಿನಾಂಕ : 29-10-1972,
ಜನ್ಮ ಸ್ಥಳ :ಕೋಳ್ಯೂರು ಕಾಸರಗೋಡು ಜಿಲ್ಲೆ ವೃತ್ತಿ :ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿಪೂರ್ವ ಕಾಲೇಜ್ ನೆಲಮಂಗಲ ಬೆಂಗಳೂರು ಗ್ರಾಮಂತರ ಜಿಲ್ಲೆ
ತಂದೆ ತಾಯಿ: ವೇದಮೂರ್ತಿ ನಾರಾಯಣ ಭಟ್ಟ ವಾರಣಾಸಿ ಮತ್ತು ಸರಸ್ವತಿ ಅಮ್ಮ ವಾರಣಾಸಿ
ಪತಿ: ಗೋವಿಂದ ಪ್ರಸಾದ ಪಂಜಿಗದ್ದೆ
ಮಗ: ಅರವಿಂದ ಭಟ್
E mail : samagramahithi@gmail.com
Mobile 9480516684
blogs:-
1 ಭೂತಗಳ ಅದ್ಭುತ ಜಗತ್ತು - 2,60,000 ಕ್ಕಿಂತ ಹೆಚ್ಚಿನ ಓದುಗರಿದ್ದಾರೆ
2 ಶಿಕ್ಷಣ ಲೋಕ
3 ಗಿಳಿ ಬಾಗಿಲು ( ಹವ್ಯಕ ಕನ್ನಡ ಭಾಷೆಯ ಬ್ಲಾಗ್)
ಶೈಕ್ಷಣಿಕ ಅರ್ಹತೆಗಳು;
೧ ಬಿಎ.ಸ್ಸಿ-ಎಸ್ ಡಿಎಮ್ ಕಾಲೇಜು ಉಜಿರೆ
೨ ಎಂ.ಎ[ಕನ್ನಡ] ನಾಲ್ಕನೇ RANK ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ
೩ ಎಂ.ಎ[ಸಂಸ್ಕøತ] ಪ್ರಥಮ RANK ಮಂಗಳೂರು ವಿಶ್ವ ವಿದ್ಯಾಲಯ
೪ ಎಂಎ[ಹಿಂದಿ] ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ
೫ ಎಂ.ಫಿಲ್[ವಿಷಯ:ಈಜೋ ಮಂಜೊಟ್ಟಿ ಗೋಣ-ಒಂದು -ವಿಶ್ಲೇಷಣಾತ್ಮಕ ಅಧ್ಯಯನ]ವಿ ಎಮ್ ಯುನಿವರ್ಸಿಟಿ
೬ ಪಿಹೆಚ್.ಡಿ[ವಿಷಯ:ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ )ಹಂಪಿ ಕನ್ನಡ ವಿಶ್ವ ವಿದ್ಯಾಲಯ
೬ ಎರಡನೆಯ ಪಿಹೆಚ್.ಡಿ ಪದವಿ [ವಿಷಯ‘ಪಾಡ್ದನಗಳಲ್ಲಿ ತುಳುವ ಸಂಸ್ಕøತಿಯ ಅಭಿವ್ಯಕ್ತಿ’] ದ್ರಾವಿಡ ವಿಶ್ವ ವಿದ್ಯಾಲಯ
೮ .ಎನ್.ಇ.ಟಿ-ಯುಜಿಸಿ
9 ರಾಷ್ಟ್ರ ಭಾಷಾ ಪ್ರವೀಣ( ಮೊದಲ ರ್ಯಾಂಕ್)
1೦ ಶಾಸನ ಮತ್ತು ಲಿಪಿ ಶಾಸ್ತ್ರ ಡಿಪ್ಲೊಮಾ ( ಮೊದಲ ರ್ಯಾಂಕ್)
11 ಕನ್ನಡ ,ತುಳು ,ಹಿಂದಿ ,ಇಂಗ್ಲಿಷ್ ,ಸಂಸ್ಕ್ರತ , ,ಹವಿಗನ್ನಡ ,ಗೌಡ ಕನ್ನಡ ಮಲೆಯಾಳ ಹೀಗೆ ಒಟ್ಟು 8 ಭಾಷೆಗಳ ತಿಳುವಳಿಕೆ
12 ರಾಷ್ಟ್ರೀಯ /ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮತ್ತು ಭಾಗವಹಿಸುವಿಕೆ- 200 ಕ್ಕಿಂತ ಹೆಚ್ಚು
ಪ್ರಶಸ್ತಿ-ಪುರಸ್ಕಾರಗಳು
1 .ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಮಹಿಳಾ ರತ್ನ-ಬಸವನ ಗುಡಿ ಫೌಂಡೇಶನ್,ಬೆಂಗಳೂರು
2 .ಕರ್ನಾಟಕ ಭೂಷಣ –ಜನತಾ ಸೈನಿಕ ದಳ ಸಾಂಸ್ಕೃತಿಕ ಪ್ರತಿಷ್ಠಾನ
3.ಕಲಾ ಜ್ಯೋತಿ –ಪದ್ಮ ಶ್ರೀ ಕಲಾ ಸಂಘ
4.ತುಳುವೆರೆ ಆಯನೋ 2009[ಸಂಶೋಧನಾ ವಿಭಾಗ]-ತುಳುವೆರ ಆಯನೋ ಕೂಟ ,ಬದಿಯಡ್ಕ
5.ಕಾವ್ಯಶ್ರೀ ಪುರಸ್ಕಾರ[ಕಥಾ ವಿಭಾಗ] .ಕಾಸರಗೋಡು ಸಾಂಸ್ಕೃತಿಕ ಪ್ರತಿಷ್ಠಾನ
6 OUTSTANDING TEACHER AWARD -2013-ಎ ಶಾಮ್ ರಾವ್ ಫೌಂಡೇಶನ್
7 ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ -2015-ಕರ್ನಾಟಕ ಕನ್ನಡ ಕಾವಲು ಪಡೆ
8 ಪುಲಕೇಶಿ ಪ್ರಶಸ್ತಿ -2015-ಪರಮೇಶ್ವರ ಪುಲಕೇಶಿ ಪ್ರತಿಷ್ಠಾನ
9 ಬಲಿಯೇಂದ್ರ ಪುರಸ್ಕಾರ - 2016 ತುಳುವರೆಂಕುಲು ಸಂಘಟನೆ
10 ಕರಾವಳಿ ರತ್ನ -2017 ದಕ್ಷಿಣ ಕನ್ನಡಿಗರ ಸಂಘ
11 ಕನ್ನಡ ಜಾನಪದ ಪರಿಷತ್ ಪ್ರಶಸ್ತಿ- 2017
12 ಕರ್ನಾಟಕ ಜಾನಪದ ರತ್ನ - 2014 ಅಖಿಲ ಭಾರತ ಬೆಳದಿಂಗಳ ಸಾಹಿತ್ಯ ಸಮ್ಮೇಳನ
13 ಸಾಧನಾ ಪ್ರಶಸ್ತಿ -2018 ಕರ್ನಾಟಕ ಯುವ ವೇದಿಕೆ.
14 ಹವಿಗನ್ನಡದ ಮೊದಲ ನಾಟಕಗಾರ್ತಿ ಎಂಬ ಚಾರಿತ್ರಿಕ ದಾಖಲೆ
15 ತುಳು ಸಂಸ್ಕೃತಿ ಕುರಿತು ಅಧ್ಯಯನ ಮಾಡಿ ಎರಡು ಡಾಕ್ಟರೇಟ್ ಪದವಿ ಪಡೆದ ಮೊದಲ ವ್ಯಕ್ತಿ.
16 ಹವ್ಯಕ ಭಾಷೆಯ ಬ್ಲಾಗ್ ತೆರೆದ ಮೊದಲ ಮಹಿಳೆ.17 ಎರಡೂವರೆ ಲಕ್ಷಕ್ಕಿಂತ ಹೆಚ್ಚಿನ ಓದುಗರನ್ನು ಪಡೆದ ಕರ್ನಾಟಕದ ಮೊದಲ ಮಹಿಳಾ ಬ್ಲಾಗರ್
18 ಮೂರು ಸ್ನಾತಕೋತ್ತರ ಪದವಿ, ಎಂಫಿಲ್ ಮತ್ತು ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದ ಮೊದಲ ಹವ್ಯಕ ಮಹಿಳೆ ಬಹುಶಃ ಮೊದಲ ವ್ಯಕ್ತಿ ಕೂಡ( ಹವ್ಯಕ ಅಧ್ಯಯನ ಕೇಂದ್ರದ ನಿರ್ದೇಶಕರು ತಿಳಿಸಿದಂತೆ)
19 ಗ್ರಂಥ ಗೌರವ: ಅಪೂರ್ವ ತುಳು ಸಂಶೋಧಕಿ - ಡಾ.ಲಕ್ಷ್ಮೀ ಜಿ ಪ್ರಸಾದ- ಪ್ರಧಾನ ಸಂಪಾದಕರು : ಎಚ್ ಬಿ ಎಲ್ ರಾವ್,
ಮುಂಬಯಿ ಸಾಹಿತ್ಯ ಬಳಗ
ಸಂಶೋಧನಾ ಕೃತಿಗಳು-25
1 ತುಂಡು ಭೂತಗಳು-ಒಂದು ಅಧ್ಯಯನ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-0-1
2 ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು ಹೇಮಾಂಶು ಪ್ರಕಾಶನ ಮಂಗಳೂರು 81-86670-73
3 ಬೆಳಕಿನೆಡೆಗೆ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-5-6
4 ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-2-5
5 ತುಳು ಪಾಡ್ದನಗಳಲ್ಲಿ ಸ್ತ್ರೀ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-4-9
6 ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-1-8
7 ತುಳು ಜನಪದ ಕವಿತೆಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-6-3
8 ಪಾಡ್ದನ ಸಂಪುಟ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-3-2
9 ಕಂಬಳ ಕೋರಿ ನೇಮ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-7-6
10 ತುಳು ನಾಡಿನ ಅಪೂರ್ವ ಭೂತಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-8-7
11 ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಪಾಡ್ದನಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-9-4
12 ದೈವಿಕ ಕಂಬಳ ಕೋಣ ಹರೀಶ ಎಂಟರ್ಪ್ರೈಸಸ್ ಬೆಂಗಳೂರ
13 ಅರಿವಿನಂಗಳದ ಸುತ್ತ ಮಾತೃಶ್ರೀ ಪ್ರಕಾಶನ ಬೆಂಗಳೂರು
14 ಮನೆಯಂಗಳದಿ ಹೂ ಮಾತೃಶ್ರೀ ಪ್ರಕಾಶನ ಬೆಂಗಳೂರು
15 ನಾಗ ಬ್ರಹ್ಮ ಆರಾಧನೆ –ಒಂದು ವಿಶ್ಲೇಷಣಾತ್ಮಕ ಅಧ್ಯಯನ ಪ್ರಚೇತ ಬುಕ್ ಹೌಸ್ ,ಬೆಂಗಳೂರು
16 ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು ಪ್ರಚೇತ ಬುಕ್ ಹೌಸ್ ,ಬೆಂಗಳೂರು
17 ಭೂತಗಳ ಅದ್ಭುತ ಜಗತ್ತಿನಲ್ಲಿ ಪ್ರಚೇತ ಬುಕ್ ಹೌಸ್ ,ಬೆಂಗಳೂರು
18 ಶಾರದಾ ಜಿ ಬಂಗೇರರ ಮೌಖಿಕ ಜಾನಪದ ಪ್ರಚೇತ ಬುಕ್ ಹೌಸ್ ,ಬೆಂಗಳೂರು
19 ಬಂಗಲೆ ಗುಡ್ಡ ಸಣ್ಣಕ್ಕ ನ ಮೌಖಿಕ ಜಾನಪದ ಪ್ರಚೇತ ಬುಕ್ ಹೌಸ್ ,ಬೆಂಗಳೂರು
20 ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು
21 ಶಿಕ್ಷಣ ಲೋಕ.
22 ಭೂತಗಳ ಅದ್ಭುತ ಜಗತ್ತು ಭಾಗ ಎರಡು
23 ದೇವೆರೆ ದಾಸಿಮಯ್ಯೆರ ವಚನೊಳು
24 ಹವ್ಯಕ ನುಡಿಗಟ್ಟುಗಳು( ಅಚ್ಚಿನಲ್ಲಿದೆ)
25 ಕಾರಣಿಕದ ದೈವೊಲು
ಅಪೂರ್ವ ತುಳು ಸಂಶೋಧಕಿ ಡಾ.ಲಕ್ಷ್ಮೀ ಜಿ ಪ್ರಸಾದ
ಪ್ರಕಟಿತ ಸಂಶೋಧನಾ ಲೇಖನಗಳು -ವಿದ್ವತ್ ಪತ್ರಿಕೆಗಳಲ್ಲಿ ಸುಮಾರು ನೂರರಷ್ಟು ಪ್ರಕಟ ವಾಗಿವೆ ,ಇತರೆ ಬರಹಗಳು ಸುಮಾರು ಐದುನೂರರಷ್ಟು ಪ್ರಕಟವಾಗಿವೆ
1 .ತುಳು ಪಾಡ್ದನಗಳಲ್ಲಿ ಸ್ತ್ರೀ ಸಾಧನೆ- ಬೆಂಗಳೂರು ವಿಶ್ವ ವಿದ್ಯಾಲಯ ಜುಲೈ-ಡಿಸೆಂಬರ್2009
2 ಕನ್ನಡ ಮತ್ತು ತುಳು ಭಾಷಾ ಸಾದೃಶ್ಯಗಳು- ಕರ್ನ್ನಾಟಕ ಲೋಚನ ಬಿಎಂ ಶ್ರೀ ಪ್ರತಿಷ್ಠಾನ ಜನವರಿ-ಡಸೆಂಬರ್2010
3 ತುಳು ನಾಡಿನ ನಾಗ ಕೋಲ- ಲೋಚನ ಬಿಎಂ ಶ್ರೀ ಪ್ರತಿಷ್ಠಾನ
4 ಕೆರೆಗೆ ಹಾರ ಹುಳಿಯಾರಿನ ಕೆಂಚವ್ವ ಮತ್ತು ಬಾಲೆ ಮಾಡೆದಿ ಪಾಡ್ದನ- ಕರ್ನ್ನಾಟಕ ಲೋಚನ ಬಿಎಂ ಶ್ರೀ ಪ್ರತಿಷ್ಠಾನ
5 ಕುಲೆ ಭೂತಗಳು -ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಜುಲೈ-ಡಿಸೆಂಬರ್2008 2250/1614
6 ಕೆಲವು ತುಂಡು ಭೂತಗಳು -ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಜನವರಿ-ಜೂನ್2010 2250/1614
7 ವಿಶಿಷ್ಟ ಉಪ ದೈವಗಳು -ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಜನವರಿ-ಜೂನ್2009 2250/1614
8 ಬೈಲ ಮಾರಿ ನಲಿಕೆ -ಜಾನಪದ ಕರ್ನಾಟಕ ಹಂಪಿ ಕನ್ನಡ ವಿಶ್ವ
9 ಅಜ್ಜಿ ಭೂತ ಮತ್ತು ಕೂಜಿಲು= ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ
10 ಉರವ ಮತ್ತು ಎರು ಬಂಟ ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ
11 ಬೆಳ್ಳಾರೆಯ ಅಧ್ಯಯನ ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ
12 ಎಣ್ಮೂರು ಗುತ್ತಿನ ಬಾಲೆ ದೈಯಕ್ಕು ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ
13 ಅಬ್ಬೆ ಜಲಾಯ ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ
14 ತುಳುನಾಡಿನ ನಾಗ ಭೂತಗಳು ಕಣಿಪುರ ಫೆಬ್ರುವರಿ2012
15 ತುಳು ಜನಪದರ ಸಿರಿ ಕೃಷ್ಣ ತುಳುವ ಉಡುಪಿ
16 ತುಳುನಾಡಿನ ನಾಗ ಭೂತಗಳು ಕಣಿಪುರ ಫೆಬ್ರುವರಿ2012
17 ಕಿರಿಯೋಳು ಹಿರಿದಿಮ್ಮವ್ವ ಮತ್ತು ಪರತಿ
18 ವಾಸ್ತವಿಕ ನೆಲೆಯಲ್ಲಿ ತುಂಡು ಭೂತಗಳು ಕನ್ನಡ ನಾಡು ನುಡಿ ಕನ್ನಡ ಸಾಹಿತ್ಯ ಪರಿಷತ್
ಆರು ನೂರಕ್ಕಿಂತ ಹೆಚ್ಚಿನ ಪ್ರಕಟಿತ ಲೇಖನಗಳು-(ಶೈಕ್ಷಣಿಕ/ವೈಚಾರಿಕ/ಸಂಶೋಧನಾತ್ಮಕ)
1 ವಿಜಯ ಕರ್ನಾಟಕ ಅಬ್ಬೆ ಜಲಾಯ 8-10-2011
2 ತುಳು ನಾಡಿನ ನಾಗ ಭೂತಗಳು ಉದಯ ವಾಣಿ 5-8-2011
3 ಕನ್ನಡ ಮಾಧ್ಯಮದಲ್ಲಿ ವಿಜ್ಞಾನದ ಶಿಕ್ಷಣ ವಿಜಯ ಕರ್ನಾಟಕ 25-7-2006
4 ಪ್ರಾಥಮಿಕ ಶಿಕ್ಷಣಕ್ಕೆ ಶಾಲೆ ವಿಜಯ ಕರ್ನಾಟಕ
5 ಅವನತಿಯ ಹಾದಿಯಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ ವಿಜಯ ಕರ್ನಾಟಕ 15-3-2002
6 ಉಪನ್ಯಾಸಕರ ಅರ್ಹತೆಗೊಂದು ಮಾನದಂಡ ವಿಜಯ ಕರ್ನಾಟಕ 19-10-2006
7 ದಾರಿ ಯಾವುದಯ್ಯ ಕಾಯಕದ ಕೈಲಾಸಕ್ಕೆ ವಿಜಯ ಕರ್ನಾಟಕ 11-12002
8 ಪರೀಕ್ಷಗಳು ಬರುತ್ತಿವೆ ವಿಜಯ ಕರ್ನಾಟಕ 1-3-2002
9 ಮಕ್ಕಳ ಗಣತಿ ಶಿಕ್ಷಕರಿಗೆ ಪಚೀತಿ ವಿಜಯ ಕರ್ನಾಟಕ 14-3-2003 10 ಶಿಕ್ಶಕ ಈಗ ಲಾಟರಿ ಮಾರಾಟಗಾರ ವಿಜಯ ಕರ್ನಾಟಕ 27-12-2002
11 ಸ್ತ್ರೀ ಲೋಲುಪನೀತ ಸಿರಿ ಕೃಷ್ಣ ಉದಯ ವಾಣಿ 20-8-2011
12 ನಳ ಭೀಮರನ್ನು ನೋಡಿ ಕಲಿಯಿರಿ ಉದಯ ವಾಣಿ
13 ಸಾಮಾನ್ಯ ಪರೀಕ್ಷೆ ಸಾಮಾನ್ಯರಿಗಲ್ಲ ವಿಜಯ ಕಿರಣ
14 ಮಕ್ಕಳ ಗಣತಿಗೆ ಬಂದಾಗ ವಿಜಯ ಕಿರಣ
15 ಬಗೆಹರಿಯದ ಸಿಇಟಿ ಗೊಂದಲ ವಿಜಯ ಕಿರಣ
16 ಕ್ರಿಕೆಟ್ ಮಾತ್ರ ಕ್ರೀಡೆಯಲ್ಲ ವಿಜಯ ಕಿರಣ
17 ಸಾಧಿಸುವ ಛಲವೊಂದದ್ದರೆ ಸಾಕು ವಿಜಯ ಕಿರಣ
18 ಕೋಲಾರದ ಗಣಿ ಇನ್ನೆಸ್ಟು ದಿನ ನಮ್ಮದು ವಿಜಯ ಕಿರಣ
19 ಸಂದರ್ಶನವೆಂಬ ನಾಟಕದಲ್ಲಿ ವಿಜಯ ಕಿರಣ
20 ಪರೀಕ್ಷಗಳು ಬರುತ್ತಿವೆ ವಿಜಯ ಕಿರಣ
21 ಸ್ತ್ರೀಯರಿಗೇನು ಬೇಕು ವಿಜಯ ಕಿರಣ
22 ಮಾತಿಗೆ ಬಡತನವಿಲ ್ಲ ವಿಜಯ ಕಿರಣ
23 ದೂರದ ಫ್ಲ್ಯಾಟ್ ನುಣ್ಣಗೆ ವಿಜಯ ಕರ್ನಾಟಕ
24 ಮಧ್ಯಮ ವರ್ಗಕ್ಕೆ ನಿತ್ಯವೂ ಮೂರ್ಖರ ದಿನ ವಿಜಯ ಕರ್ನಾಟಕ 1-4-2005
25 ಮಲೇರಿಯ ನಿರ್ಮೂಲನೆ ವಿಜಯ ಕಿರಣ
26 ಜಾಣ ಕಿವುಡು ವಿಜಯ ಕರ್ನಾಟಕ
27 ಶಿಕ್ಷಕರ ಜವಾಬ್ದಾರಿ ವಿಜಯ ಕರ್ನಾಟಕ
28 ಹೊರಲಾರದ ಮಲ್ಲಿಗೆಯ ಹೊರೆ ಹೊಸ ದಿಗಂತ
29 ದಡವರಿಯದ ಅಲೆಗಳು ಹೊಸ ದಿಗಂತ
30 ನಿಮಗೆಂಥ ಶಿÀಕ್ಷಕರು ಬೇಕು? ಹೊಸ ದಿಗಂತ 5-9-2001
31 ತುಳುವರ ಬಲೀಂದ್ರ ಜ್ಞಾನ ಪಯಸ್ವಿನಿ 2-1-2011
32 ಪಾಡ್ದನಗಳ ಸ್ವರೂಪ ಜ್ಞಾನ ಪಯಸ್ವಿನಿ 16-11-211
33 ಜಾನಪದ ಪರಿಕಲ್ಪನೆ ಜ್ಞಾನ ಪಯಸ್ವಿನಿ 1-12-2011
34 ತುಳು ಪಾಡ್ದನಗಳಲ್ಲಿ ಸ್ತ್ರೀ ಜ್ಞಾನ ಪಯಸ್ವಿನಿ 7-12-2011
35 ಬಾಲ ಜೇವು ಮಾಣಿಗ ಜ್ಞಾನ ಪಯಸ್ವಿನಿ 14-12-2011
36 ಬಾಲೆ ಮಧುರಗೆ ಜ್ಞಾನ ಪಯಸ್ವಿನಿ 21-12-2011
37 ತುಳುವ ಸಂಸ್ಕಾರಗಳು ಜ್ಞಾನ ಪಯಸ್ವಿನಿ 6-12012
38 ಪೆರುವಾಜೆಯಲ್ಲಿ ಅಪರೂಪದ ಬುದ್ಧನ ಮೂರ್ತ ಪತ್ತೆ ಪ್ರಜಾವಾಣಿ 30-3-2012
39 ಪಾಜಪಳ್ಳ ಕಲಾವಿದರು ಜ್ಞಾನ ಪಯಸ್ವಿನಿ 20-2-2012
40 ಪೆರುವಾಜೆಯಲ್ಲಿ ಬುದ್ಧನ ಮೂರ್ತಿಪತ್ತೆ ಜ್ಞಾನ ಪಯಸ್ವಿನಿ 13-1-2012
41 ಶಿಕ್ಷಕರಿಂದೇನು ಮಾಡಲು ಸಾಧ್ಯ? ಸುಳ್ಯ ಸುದ್ದಿ ಬಿಡುಗಡೆ 3-9-2012
42 ನಮ್ಮ ಮಕ್ಕಳನ್ನು ರಕ್ಷಸಿ ಕೊಳ್ಳೋಣ ಸುಳ್ಯ ಸುದ್ದಿ ಬಿಡುಗಡೆ 15-10-2012
43 ಬೆಳ್ಳಾರೆಯ ಸಾಂಸ್ಕøತಿಕ ಅಧ್ಯಯನ ಸುಳ್ಯ ಸುದ್ದಿ ಬಿಡುಗಡೆ 15-8-2011
44 ಕೆಮ್ಮಲೆಯ ನಾಗ ಬ್ರಹ್ಮ ಸುಳ್ಯ ಸುದ್ದಿ ಬಿಡುಗಡೆ 25-7-2011
45 ದ್ವಿಚಕ್ರ ವಾಹನ ಮಹಿಳಗೆ ವರದಾನ ಮಂಗಳಾ ವಾರ ಪತ್ರಿಕೆ
46 ಸಂಸ್ಕøತಿಗೆ ಆಶಾ ಕಿರಣ ಮಂಗಳಾ ವಾರ ಪತ್ರಿಕೆ
47 ಸಂಶೋಧನೆಯ ಹೊಸ ಸಾಧ್ಯತೆಗಳು ಪ್ರಣವ ಸ್ಮøತಿ
48 ಅನೇಕ ದೇವತಾ ತತ್ವದಿಂದ ಏಕ ದೇವತಾ ತತ್ವ ತ್ರಿಮೂರ್ತಿ ಕೌಸ್ತುಭ
49 ಕುಲೆ ಭೂತಗಳು ¸ಸ್ಮರಣ ಸಂಚಿಕೆ ದೇವರ ಕಾನ ಶಾಲೆ
50 ಕನ್ನಡ ತುಳು ಭಾಷಾ ಸಾದೃಶ್ಯಗಳು ¸ಸ್ಮರಣ ಸಂಚಿಕೆ ದೇ ವರ ಕಾನ ಶಾಲೆ
51 ಹೊರಲಾರದ ಮಲ್ಲಿಗೆ ಹೊಸ ದಿಗಂತ
52 ಸಂಸ್ಕøತಾಧ್ಯಯನದ ಪ್ರಸ್ತುತತೆ ಸ್ಮರಣ ಸಂಚಿಕೆ ಸಂಸ್ಕøತ ಸಂಘ ಮಂಗಳೂರು
53 ಯುಜಿಸಿ ನಿಯಮ ಲೆಕ್ಕಕ್ಕ್ಕಿಲ್ಲ ಏತಕ್ಕಿಲ್ಲ ಕ್ರಮ ,ಕನ್ನಡ ಪ್ರಭ
54 ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆಯ ಬೆಲೆ ಎಷ್ಟು ?ಕನ್ನಡ ಪ್ರಭ
55 ಬಿಗಿ ನಿಯಮಗಳಿರದೆ ಸಂಶೋಧನೆಗಿರದು ಬೆಲೆ ಕನ್ನಡ ಪ್ರಭ
56 ಗಂಡನ ಚಿತೆಯೊಂದಿಗೆ ಬೆಂದು ಹೋದವರೆಷ್ಟೋ ಕನ್ನಡ ಪ್ರಭ
57 ಭಾರತದ ಜನಪದರಲ್ಲಿ ಲೈಂಗಿಕ ಶಿಕ್ಷಣವಿತ್ತೆ ಕನ್ನಡ ಪ್ರಭ
58 ಪ್ಲಾಸ್ಟಿಕ್ ಎಂಬ ಬಹುವಿಧ ಮಾರಿ ನಿಷೇಧ ವೆ ಸರಿಯಾದ ದಾರಿ ಕನ್ನಡ ಪ್ರಭ
59 ಉಪನ್ಯಾಸಕರ ಬಿಎಡ್ ಬವಣೆ ಕನ್ನಡ ಪ್ರಭ
60 ದುಡ್ಡು ಗಳಿಸುವ ಮಾರ್ಗದಲ್ಲಿ ರೋಗಿಗಳ ಕಾಳಜಿಯೆಲ್ಲಿಕನ್ನಡ ಪ್ರಭ
61 ದಡವರಿಯದ ಮಕ್ಕಳಿಗೆ ಬೇಕು ಮಾರ್ಗ ದರ್ಶನ ಕನ್ನಡ ಪ್ರಭ
62 ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ ಕನ್ನಡ ಪ್ರಭ
63 ಫೇಸ್ ಬುಕ್ ಗಳಲ್ಲಿ ಹೆಣ್ಣುಮಕ್ಕಳ ಫೇಸ್ ಗಳು ಉದಯವಾಣಿ
64 ಹದಗೆಟ್ಟ ಶಿಕ್ಷಣದ ಮನೆಯಲ್ಲಿ ವಿದ್ಯಾರ್ಥಿಯ ಬಾಳು ಹಸನಾದೀತೇ ,ಕನ್ನಡ ಪ್ರಭ
65 ಪಾಠದಲ್ಲಿ ರುವುದನ್ನು ಬೋಧಿಸುವುದಷ್ಟೇ ಶಿಕ್ಷಕರ ಕೆಲಸವೇ ?,ಕನ್ನಡ ಪ್ರಭ
66 ಚರಿತ್ರೆಯ ಗರ್ಭ :ಬೆಳ್ಳಾರೆಯ ಇತಿಹಾಸ ತಿಳಿಯುವುದೇ ?
67 ಸರ್ಪರಾಧನೆ ,ಬಾಕುಡರ ಕುಲ ದೈವ -ಕನ್ನಡ ಪ್ರಭ
68 ಕೊನೆಯ ಓಟ ?ಕಂಬಳದ ಕಳದಲ್ಲಿ ಕಳವಳ -ಕನ್ನಡ ಪ್ರಭ
69 ಮುಂದೆ ಬೆಟ್ಟವಾಗಬಹುದು ಈ ಪುಟ್ಟ ವಿಚಾರಗಳು - ಕನ್ನಡ ಪ್ರಭ
69 ಕನ್ನಡೊಡು ನುಡಿಕೊರ್ಪುನ ಕನ್ನಡ ಯಾನೆ ಪುರುಷ ಭೂತ
70 ಅತಿಕಾರೆ ಬುಳೆನ್ ತುಳುನಾಡುಗ್ ಕೊನೊಂದು ಬತ್ತಿನ ಬೀರೆರ್ :ಕಾನದ- ಕಟದೆರ್
71 ಸ್ವಾಮಿ ನಿಷ್ಠೆ ಮೆರೆಯಿನ ಪರವ ಭೂತ
72 ಕಲ್ಲೆಂಬಿ ಬೂಡುದ ಒರು ಬಾಣಿಯೆತ್ತಿ –ನೆಲ್ಲೂರಾಯ ದೈವೊಲು
73 ದಾರು –ಕುಂದಯ
74 ಗುಟ್ಟು ಬುಡ್ದು ಕೊರಂದಿನ ಅಬ್ಬೆ ಜಲಾಯ ಭೂತ-ವಿಜಯಕರ್ನಾಟಕ
75 ನಂಬಿಗೆದ ಕಲೊಟ್ಟು ಅರಬ್ಬಿ ಭೂತ ಚೀನೀ ದೈವ-ವಿಜಯಕರ್ನಾಟಕ
76 ಪಗೆಕ್ ಬಲಿಯಾಯಳು ಮರ್ಲು ಮಯ್ಯೊಂದಿ-ವಿಜಯಕರ್ನಾಟಕ
77 ಅಜ್ಜಿ ಭೂತ ಬುಕ್ಕ ಕೂಜಿಲು-ವಿಜಯಕರ್ನಾಟಕ 78 ಉರವ ಬುಕ್ಕ ಎರು ಬಂಟ-ವಿಜಯಕರ್ನಾಟಕ
ಇತ್ಯಾದಿ

ವಜ್ರ ಎಲ್ಲಿದ್ದರೂ ಪ್ರಕಾಶಿಸುವಂತೆ ಪ್ರತಿಭೆ ಕೂಡ ಎಲ್ಲಿದ್ದರೂ ಪ್ರಕಾಶಿಸುತ್ತದೆ,ಡಾ.ಲಕ್ಶ್ಮಿ ಜಿ ಪ್ರಸಾದ ಕೂಡ ಓರ್ವ ಇಂತಹ ಅಸಾಧಾರಣ ಪ್ರತಿಭೆ- ಸ್ವಂತಿಕೆ, ಸ್ವಾಭಿಮಾನಗಳಿಂದ ಕೂಡಿದ ವಿಶಿಷ್ಟ ಮಹಿಳೆ,ಅಲ್ಲದೆ ದಕ್ಷತೆ,ಶ್ರಧ್ಧೆ,ನಿರಂತರ ಅಧ್ಯಯನ ಇವುಗಳಿಂದ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ, ತನ್ಮೂಲಕ ಸಮಾಜದಲ್ಲಿ ಗುರುತಿಸಲ್ಪಟ್ಟಿರುವ, ಸಮಾಜದಿಂದ ಗೌರವಿಸಲ್ಪಟ್ಟಿರುವ ಶಿಕ್ಷಕಿ-ಬರಹಗಾರ್ತಿ-ಸಂಶೋಧಕಿ ಲಕ್ಷ್ಮಿಯವರ ಹುಟ್ಟೂರು ಗಡಿನಾಡು ಕಾಸರಗೋಡು ಜಿಲ್ಲೆಯ ಕೋಳ್ಯೂರು ಎಂಬ ಪುಟ್ಟ ಗ್ರಾಮ.
ವೇದಮೂರ್ತಿ ನಾರಾಯಣ ಭಟ್ ವಾರಣಾಸಿ ಮತ್ತು ಸರಸ್ವತಿ ಅಮ್ಮ ವಾರಣಾಸಿ ದಂಪತಿಗಳ ಎರಡನೆಯ ಮಗಳಾಗಿ ಹುಟ್ಟಿದ ಲಕ್ಷ್ಮೀ ಯವರ ಮನೆಯಲ್ಲಿ ಕರೆಯುವ ಹೆಸರು ವಿದ್ಯಾ .ಹೆಸರಿಗೆ ಅನ್ವರ್ಥವಾಗಿ ಕಲಿತ ಇವರ ಛಲ ಯಾರೂ ಕೂಡ ಮೆಚ್ಚುವಂತಹದ್ದು.
ಡಾ.ಲಕ್ಷ್ಮಿಯವರು ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ,.
ಇವರ ಸಾಹಿತ್ಯ ಸಂಶೋಧನಾ ಹಾಗೂ ಶೈಕ್ಷಣಿಕ ಸಾಧನೆಗಳಿಗೆ ಯಾರೇ ಆದರೂ ತಲೆಬಾಗಲೇ ಬೇಕು . ಡಾಕ್ಟರೇಟ್ ಪದವಿಯ ಕನಸು ಕಟ್ಟುವುದು ಸುಲಭ.ಆ ಕನಸನ್ನು ನನಸಾಗಿಸಲು ಅದನ್ನು ಈಡೇರಿಸುವ ಛಲ,ಪರಿಶ್ರಮ,ನಿರಂತರ ಬೇಕು. ಅಪಾರ ಸಾಧನೆ,ಅತೀ ಅಗತ್ಯ. ಅದರಲ್ಲೂ ಹೊರಗೆ ಕಛೇರಿಯಲ್ಲೋ ಸಂಸ್ಥೆಯಲ್ಲೋ ದುಡಿಯುವ ಮಹಿಳೆಯರಿಗೆ ಮನೆ ಜವಾಬ್ದಾರಿಯೊಂದಿಗೆ ಓದಿ ಮಹಾಪ್ರಬಂಧ ರಚಿಸಿ ಮಂಡಿಸುವುದು ಅಷ್ಟು ಸುಲಭದ ಕೆಲಸವಲ್ಲ.ಇಷ್ಟು ಮಾತ್ರವಲ್ಲ, ಇದರೊಂದಿಗೆ ಅನೇಕ ಸಾಹಿತ್ಯ ಕೃಷಿಯನ್ನೂ ಮಾಡುತ್ತಾ ಎಂ.ಎ (ಕನ್ನಡ) ನಾಲ್ಕನೆ ರ್ಯಾಂಕ್ , ಎಂ.ಎ(ಸಂಸ್ಕೃತ),ಮೊದಲ ರ್ಯಾಂಕ್ ನೊಂದಿಗೆ , ಎಂ.ಎ(ಹಿಂದಿ) ಹೀಗೆ ಮೂರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ , ತುಳು ಸಂಸ್ಕೃತಿ ಬಗ್ಗೆ ಒಂದು ಎಂ.ಫಿಲ್, ಹಾಗೂ ಎರಡು ಪಿ.ಹೆಚ್ ಡಿ ಪದವಿಗಳನ್ನು ಗಳಿಸಿದ ಸಾಧಕಿ ನಮ್ಮ ನಡುವೆ ಇದ್ದಾರೆ. ಅವರೇ ಶ್ರೀಮತಿ ಡಾ. ಲಕ್ಷ್ಮೀ ಜಿ ಪ್ರಸಾದ. ಕಾಸರಗೋಡು ಜಿಲ್ಲೆಯ ಕುಗ್ರಾಮ ಕೋಳ್ಯೂರಿನಲ್ಲಿ ವಾರಣಾಸಿ, ವೇದಮೂರ್ತಿ ನಾರಾಯಣಭಟ್ ಹಾಗೂ ಸರಸ್ವತಿ ಅಮ್ಮ ದಂಪತಿ ಮಗಳಾಗಿ ಹುಟ್ಟಿದ ಈಕೆ, ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಸೀನಿಯರ್ ಅಕೌಂಟ್ಸ್ ಮ್ಯಾನೇಜರ್ ಆಗಿರುವ ಪಂಜಿಗದ್ದೆ ಶ್ರೀಯುತ ಗೋವಿಂದ ಪ್ರಸಾದರ ಸಹ ಧರ್ಮಿಣಿ. ಎರಡನೇ ವಿಜ್ಞಾನ ಪದವಿಯಲ್ಲಿ ಓದುತ್ತಿರುವಾಗಲೇ ವಿವಾಹವಾದ ಇವರು ವಿವಾಹನಂತರವೂ ಓದನ್ನು ಮುಂದುವರಿಸಿ ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ ಅನನ್ಯವಾದುದು
.ಪ್ರಸ್ತುತ ಬೆಂಗಳೂರಿನಲ್ಲಿ ಕನ್ನಡ ಉಪನ್ಯಾಸಕಿ ಆಗಿ ದುಡಿಯುತ್ತಿರುವ ಇವರ ಸಂಶೋಧನೆಕಾರ್ಯವನ್ನು ಗಮನಿಸಿದರೆ; ಆಶ್ಚರ್ಯದಿಂದ ಕಣ್ಣರಳಿಸಿ ನೋಡುವಂತಾಗುತ್ತದೆ.
.ಲಕ್ಷ್ಮಿಯವರ ಜ್ಞಾನ ದಾಹ,ಅದಮ್ಯ ಉತ್ಸಾಹ,ಸಾಧಿಸುವ ಛಲ ಇವುಗಳಿಗೆ ಅವರು ಗಳಿಸಿರುವ ಶೈಕ್ಷಣಿಕ ಅರ್ಹತೆಗಳ ದೀರ್ಘ ಪಟ್ಟಿಯೇ ಸಾಕ್ಷಿ
ಉನ್ನತ ಶೈಕ್ಷಣಿಕ ಸಾಧನೆ :
ಕೋಳ್ಯೂರಿನ ಶ್ರೀ ಶಂಕರ ನಾರಾಯಣ ಪ್ರಾಥಮಿಕ ಶಾಲೆಯಲ್ಲಿ ಓದಿ ಮೀಯಪದವಿನ ಶ್ರೀ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು.ಲಕ್ಷ್ಮೀ ಯವರೇ ಹೇಳುವಂತೆ ಈ ಶಾಲೆಯ ಶಿಕ್ಷಕರು ಅವರ ಬದುಕಿನ ದಿಕ್ಕನ್ನು ಬದಲಾಯಿಸಿದರು.ಅತ್ಯುತ್ಸಾಹದ ಮುಂಗೋಪಿ ಹುಡುಗಿಯಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಿದರು .ನಂತರ ವಾಣಿವಿಜಯ ಪ್ರೌಢ ಶಾಲೆಯಲ್ಲಿ ಓದಿ ಮುಂದೆ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು.ನಂತರ ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಗಳಿಸಿದರು.
ಎರಡನೇ ವರ್ಷ ಬಿಎಸ್ಸಿ ಓದುತ್ತಿರುವಾಗಲೇ ಮದುವೆ ಆಯಿತು .ವಿವಾಹ ನಂತರವೂ ಅನೇಕ ಸವಾಲುಗಳನ್ನು ಎದುರಿಸಿಕೊಂಡೇ ಓದನ್ನು ಮುಂದುವರಿಸಿದರು .ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮೊದಲ ರಾಂಕ್ ನೊಂದಿಗೆ ಸಂಸ್ಕೃತ ಎಂ.ಎ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಾಲ್ಕನೇ ರಾಂಕ್ ನೊಂದಿಗೆ ಕನ್ನಡ ಎಂ.ಎ, ಹಾಗೂ ಹಿಂದಿ ಎಂ.ಎಪದವಿಗಳನ್ನು ಪಡೆದರು..ದಕ್ಷಿಣ ಭಾರತ ಹಿಂದಿ ಪ್ರಚಾರಸಭಾದ ಮೂಲಕ ರಾಷ್ಟ್ರಭಾಷಾ ಪ್ರವೀಣ , ಡಾ.ಸುರೇಶ ಪಾಟೀಲ್ ಅವರ ಮಾರ್ಗ ದರ್ಶದಲ್ಲಿ ಈಜೋ ಮಂಜೊಟ್ಟಿಗೋಣ –ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನಾ ಪ್ರಬಂಧವನ್ನು ರಚಿಸಿ ಸೇಲಂ ನ ವಿನಾಯಕ ಯುನಿವರ್ಸಿಟಿಗೆ ಸಲ್ಲಿಸಿ ಎಂ.ಫಿಲ್.ಪದವಿಯನ್ನು ಗಳಿಸಿ ನಂತರ ಡಾ.ಎಸ್ .ನಾಗರಾಜು ಅವರ ಮಾರ್ಗದರ್ಶನದಲ್ಲಿ “ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ-ವಿಶ್ಲೇಷಣಾತ್ಮಕ ಅಧ್ಯಯನ”ಎಂಬ ಸಂಶೋಧನಾ ಮಹಾ ಪ್ರಬಂಧವನ್ನು ರಚಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಗಳಿಸಿದ್ದಾರೆ.ಇವರ ಜ್ಞಾನ ದಾಹ ಇಲ್ಲಿಗೆ ತಣಿಯಲಿಲ್ಲ .
ಒಂದು ಪಿಎಚ್.ಡಿ ಪದವಿ ಗಳಿಕೆಯ ನಂತರವೂ “ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ” ಎಂಬ ಸಂಶೋಧನಾ ಮಹಾ ಪ್ರಬಂಧವನ್ನು ಡಾ.ಶಿವ ಕುಮಾರ್ ಭರಣ್ಯರ ಮಾರ್ಗ ದರ್ಶನದಲ್ಲಿ ಸಿದ್ಧ ಪಡಿಸಿ, ಆಂಧ್ರ ಪ್ರದೇಶದ ಕುಪ್ಪಂ ನಲ್ಲಿರುವ ದ್ರಾವಿಡ ವಿಶ್ವ ವಿದ್ಯಾಲಯದ ತುಳು ವಿಭಾಗಕ್ಕೆ ಸಲ್ಲಿಸಿ ಎರಡನೆಯ ಪಿ.ಹೆಚ್ ಡಿ ಯನ್ನು ಪಡೆದು ತುಳು ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡಿ ಎರಡು ಪಿ.ಎಚ್.ಡಿ ಪದವಿಗಳನ್ನು ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಇದರೆಡೆಯಲ್ಲಿ ಬಿಡುವು ಮಾಡಿಕೊಂಡು ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಶಾಸನ ಶಾಸ್ತ್ರ ಡಿಪ್ಲೋಮಾ ಪರೀಕ್ಷೆಯಲ್ಲಿ ಮೊದಲ ರಾಂಕ್ ಪಡೆದು ಮಾನ್ಯ ಶಿಕ್ಷಣ ಮಂತ್ರಿಗಳಾದ ಕಿಮ್ಮನೆ ರತ್ನಾಕರ ಅವರಿಂದ ಅಭಿನಂದನೆಯನ್ನು ಪಡೆದಿದ್ದಾರೆ.
ಸಾಹಿತ್ಯ ,ಸಂಶೋಧನಾ ಪ್ರತಿಭೆಃ-
ಸಾಹಿತಿ - ಲೇಖಕಿಯಾಗಿ ಲಕ್ಷ್ಮೀ ಜಿ ಪ್ರಸಾದ
ಆರಂಭಿಕ ದಿನಗಳಲ್ಲಿ ಕಥೆಗಳನ್ನು ಬರೆಯುತ್ತಿದ್ದ ಲಕ್ಷ್ಮೀ ಯವರ ಇಪ್ಪತ್ತಕ್ಕೂ ಹೆಚ್ಚಿನ ಕಥೆಗಳು ಹೊಸದಿಗಂತ ಮಂಗಳ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನರ ಮೆಚ್ಚುಗೆಯನ್ನು ಪಡೆದಿವೆ."ಮನೆಯಂಗಳದಿ ಹೂ" ಎಂಬ ಕಥಾ ಸಂಕಲನ ಕೂಡ ಪ್ರಕಟವಾಗಿದೆ. ನಿದಾನವಾಗಿ ತನ್ನ ಜ್ಞಾನದ ಹರವನ್ನು ವಿಸ್ತರಿಸುತ್ತಾ ವೈಚಾರಿಕ ಲೇಖನಗಳನ್ನು ಬರೆಯಲು ಆರಂಭಿಸಿದರು. ಇವರ ಇನ್ನೂರಕ್ಕೂ ಹೆಚ್ಚಿನ ವೈಚಾರಿಕ ಶೈಕ್ಷಣಿಕ ಬರಹಗಳು ವಿಜಯ ಕರ್ನಾಟಕ, ಹೊಸ ದಿಗಂತ,ಉದಯವಾಣಿ,ಕನ್ನಡ ಪ್ರಭ,ವಿಶ್ವವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ." ಅರಿವಿನಂಗಳದ ಸುತ್ತ"ಎಂಬ ಶೈಕ್ಷಣಿಕ ಬರಹಗಳ ಸಂಕಲನ ಕೂಡ ಪ್ರಕಟವಾಗಿದೆ.
ವೃತ್ತಿಯೊಂದಿಗೆ ಬರವಣಿಗೆಯನ್ನು ಮೈಗೂಡಿಸಿಕೊಂಡ ಲಕ್ಷ್ಮೀ ಯವರು ಕನ್ನಡ ಎಂ.ಎ ಓದುವಾಗ ಜಾನಪದ ಅದರಲ್ಲೂ ತುಳು ಜಾನಪದದತ್ತ ಆಕರ್ಷಿತರಾದ ಇವರು
ಅನೇಕ ಪಾಡ್ದನ ಗಳನ್ನು, ತುಳು ಜನಪದ ಕವಿತೆಗಳನ್ನು ಸಂಪಾದಿಸಿ ,ಅನುವಾದ ಮಾಡಿ ವಿಶ್ಲೇಷಣೆ ಮಾಡಿದ್ದಾರೆ
ಇವನ್ನು ಯುವಜನಾಂಗದೆಡೆಗೆ ತಲುಪಿಸುವ ಸಲುವಾಗಿ ಪಾಡ್ದನ ಸಂಪುಟ, ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಪಾಡ್ದನಗಳು ,ತುಳು ಜನಪದ ಕವಿತೆಗಳು ಎಂಬ ಕೃತಿಗಳನ್ನು ತನ್ನ ಸ್ವಂತ ಖರ್ಚಿನಲ್ಲಿ ಪ್ರಕಟಿಸಿದರು .
ಕೇವಲ ಪದವಿ ಗಳಿಕೆಗಾಗಿ ಸಂಶೋಧನೆ ಮಾಡದೆ ,ತಮ್ಮ ಸಂಶೋಧನೆಯ ಫಲಿತಗಳನ್ನು ಯುವ ಜನಾಂಗಕ್ಕೆ ತಲುಪಿಸುವ ಸಲುವಾಗಿ ಇಪ್ಪತ್ತು ಗ್ರಂಥಗಳನ್ನು ರಚಿಸಿ ಪ್ರಕಟಿಸಿದ್ದಾರೆ.ಪ್ರಸ್ತುತ ಐದು ಕೃತಿಗಳು ಅಚ್ಚಿನಲ್ಲಿವೆ .ಇವರು ಸಂಶೋಧನೆಯಲ್ಲದೆ ಕೆಲವು ಸಾಹಿತ್ಯ ಕೃತಿಗಳನ್ನೂ ರಚಿಸಿದ್ದಾರೆ .
ಇವರ ಪ್ರಕಟಿತ ಕೃತಿಗಳು
1.ಅರಿವಿನಂಗಳದ ಸುತ್ತ[ಶೈಕ್ಷಣಿಕ ಬರಹಗಳು],2.ಮನೆಯಂಗಳದಿ ಹೂ[ಕಥಾಸಂಕಲನ],
3.ದೈವಿಕ ಕಂಬಳ ಕೋಣ[ತುಳು ಜಾನಪದ ಸಂಶೋಧನೆ]
,4.ಸುಬ್ಬಿ ಇಂಗ್ಲಿಷ್ ಕಲ್ತದು[ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ]
,5ತುಂಡು ಭೂತಗಳು-ಒಂದು ಅಧ್ಯಯನ[ಸಂಶೋಧನೆ],
6 ಕನ್ನಡ-ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು[ತೌಲನಿಕ ಅಧ್ಯಯನ]
,7ತುಳು ಪಾಡ್ದನಗಳಲ್ಲಿ ಸ್ತ್ರೀ[ಸಂಶೋಧನಾತ್ಮಕ ಅಧ್ಯಯನ]
,8 ಪಾಡ್ದನ ಸಂಪುಟ[ಸಂಪಾದನೆ]
,9.ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು[ಸಂಸ್ಕೃತಿ ಸಂಶೋಧನೆ],
10.ತುಳುನಾಡಿನ ಅಪೂರ್ವ ಭೂತಗಳು[ಸಂಶೋಧನೆ],11.ಬೆಳಕಿನೆಡೆಗೆ [ಸಂಶೋಧನಾ ಲೇಖನಗಳು],
12 ತುಳು ಜನಪದ ಕವಿತೆಗಳು[ಸಂಪಾದನೆ],13.ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು[ಸಂಪಾದನೆ],
14.ಕಂಬಳ ಕೋರಿ ನೇಮ[ತುಳು ಜಾನಪದ ಸಂಶೋಧನೆ].
15 ತುಳು ಜಾನಪದ ಕಾವ್ಯಗಳಲ್ಲಿ ಕಾವ್ಯಾಂಶಗಳು
16 ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ
,17ಬಂಗ್ಲೆ ಗುಡ್ಡೆ ಸಣ್ಣಕ್ಕನ ಮೌಖಿಕ ಸಾಹಿತ್ಯ
18 ಭೂತಗಳ ಅದ್ಭುತ ಜಗತ್ತು
19 ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ (ಪಿಎಚ್.ಡಿ ಸಂಶೋಧನಾ ಮಹಾ ಪ್ರಬಂಧ )
20 ಬಸ್ತರ್ ಜಾನಪದ ಸಾಹಿತ್ಯ ( ಅಚ್ಚಿನಲ್ಲಿದೆ)
21 ಭೂತಗಳ ಅದ್ಭುತ ಜಗತ್ತು ಭಾಗ 2 ( ಅಚ್ಚಿನಲ್ಲಿದೆ)
22 ಶಿಕ್ಷಣ ಲೋಕ ( ಅಚ್ಚಿನಲ್ಲಿದೆ)
23 ಕಾರಣಿಕದ ದೈವೊಲು( ಅಚ್ಚಿನಲ್ಲಿದೆ)
ಹೀಗೆ ಇಪ್ಪತ್ತು ಕೃತಿಗಳನ್ನು ರಚಿಸಿದ್ದು ಇನ್ನೂ ಅನೇಕ ಕೃತಿಗಳನ್ನು ಪ್ರಕಟನೆಗೆ ಸಿದ್ಧಗೊಳಿಸುತ್ತಿದ್ದಾರೆ.ಇದಲ್ಲದೆ ಆರು ನೂರಕ್ಕೂ ಹೆಚ್ಚು ಕಥೆ,ವೈಚಾರಿಕ ಲೇಖನಗಳನ್ನು ಬರೆದಿದ್ದಾರೆ. ಅಷ್ಟು ಮಾತ್ರವಲ್ಲದೆ; ಜ್ಞಾನ ಪಯಸ್ವಿನಿ ಪತ್ರಿಕೆಗೆ “ತುಳು ಜಾನಪದ ಲೋಕ” ,ವಿಜಯ ಕಿರಣ ಪತ್ರಿಕೆಗೆ “ಸಾಮಾಜಿಕ ಕಳಕಳಿ” ಹಾಗೂ ವಿಜಯ ಕರ್ನಾಟಕ ಪತ್ರಿಕೆಯ “ತುಳು ಚಾವಡಿ” ವಿಭಾಗಕ್ಕೆ ಅಂಕಣ ಬರಹಗಳನ್ನು ಬರೆದ ಹೆಗ್ಗಳಿಕೆ ಇವರಿಗಿದೆ!ಪ್ರಸ್ತುತ ಕನ್ನಡ ಪ್ರಭಪತ್ರಿಕೆಯಲ್ಲಿ ಇವರ ಶೈಕ್ಷಣಿಕ ಲೇಖನಗಳು ನಿರಂತರವಾಗಿ ಪ್ರಕಟವಾಗುತ್ತಿದ್ದು ,ಕುಡ್ಲ ತುಳು ಪತ್ರಿಕೆಯಲ್ಲಿ “ಕಾರ್ಣಿಕದ ದೈವೊಲು” ಎಂಬ ಅಂಕಣ ಬರೆದಿದ್ದಾರೆ.ಬರವಣಿಗೆಯ ಮೂಲಕ ತಮ್ಮ ಸಂಶೋಧನೆಯ ಫಲವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.ಅಲ್ಲದೆ ತರಬೇತಿ ಶಿಬಿರ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಿಕೆ,ಅನೇಕ ರಾಷ್ಟ್ರ, ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮಾಡಿದ ಅಸಾಧಾರಣ ಸಂಶೋಧಕಿಯೂ ಶಿಕ್ಷಣ ತಜ್ಞೆಯಾಗಿಯೂ.ಲೇಖಕಿಯಾಗಿಯೂ ಸಮಾಜದಲ್ಲಿ ಅಪಾರ ಗೌರವವನ್ನು ಅಭಿಮಾನಿ ಬಳಗವನ್ನೂ ಪಡೆದಿದ್ದಾರೆ.
ಭೂತಾರಾಧನೆ ಮಾಹಿತಿ ಕಣಜ
ಭೂತಾರಾಧನೆಯ ಲಕ್ಷ್ಮೀ ಎಂದೇ ಗುರುತಿಸಲ್ಪಡುತ್ತಿರುವ ಡಾ.ಲಕ್ಷ್ಮೀ ಜಿ ಪ್ರಸಾದರು ಕ್ಷೇತ್ರ ಕಾರ್ಯದ ಮೂಲಕ ತುಳುನಾಡಿನ ನಾನ್ನೂರ ಐವತ್ತಕ್ಕೂ ಹೆಚ್ಚಿನ ದೈವಗಳ ಕುರಿತು ಮಾಹಿತಿ ಸಂಗ್ರಹಿಸಿ ವಿಶ್ಲೇಷಣೆ ಮಾಡಿದ್ದಾರೆ.ತುಳುನಾಡಿನ ಎಲ್ಲ ಸಂಶೋಧಕರ ಕೃತಿಗಳಲ್ಲಿನ ಮಾಹಿತಿಯನ್ನು ಒಟ್ಟು ಹಾಕಿದಾಗ ಸುಮಾರು ನೂರು ನೂರೈವತ್ತು ಭೂತಗಳ ಮಾಹಿತಿ ಸಿಗುತ್ತದೆ. ಆದರೆ ಲಕ್ಷ್ಮೀ ಯಾವುದೇ ಸಂಘ ಸಂಸ್ಥೆಗಳ, ವಿಶ್ವವಿದ್ಯಾಲಯಗಳ ಬೆಂಬಲವಿಲ್ಲದೆ ಏಕಾಂಗಿಯಾಗಿ ನಿರಂತರ ಅಧ್ಯಯನ ಮಾಡಿ ನಾನ್ನೂರೈವತ್ತಕ್ಕೂ ಹೆಚ್ಚಿನ ದೈವಗಳ ಕುರಿತು ಮಾಹಿತಿ ಸಂಗ್ರಹ ಮಾಡಿದ್ದಾರೆ.
ತುಳುನಾಡಿನಲ್ಲಿ ಎಷ್ಟು ಭೂತಗಳಿಗೆ ಆರಾಧನೆ ಇದೆ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ಇದಕ್ಕೆ ಇದಮಿತ್ಥಂ ಎಂಬ ಉತ್ತರವಿಲ್ಲ. ಡಾ.ಗಣನಾಥ ಶೆಟ್ಟಿ ಎಕ್ಕಾರು ,ಡಾ.ಚಿನ್ನಪ್ಪ ಗೌಡರು ಸೇರಿಮದಂತೆ ಅನೇಕ ತುಳುನಾಡಿನ ವಿದ್ವಾಂಸರು ತುಳುನಾಡಿನಲ್ಲಿ ನಾನ್ನೂರರಷ್ಟು ಭೂತಗಳಿಗೆ ಆರಾಧನೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದರು.ತುಳು ಸಂಸ್ಕೃತಿಯ ಕುರಿತಾದ ಅಧ್ಯಯನಕ್ಕೆ ಭದ್ರ ಬುನಾದಿಯನ್ನು ಹಾಕಿರುವ ಡಾ.ಬಿ.ಎ ವಿವೇಕ ರೈಗಳುಅವರ ಪಿ ಎಚ್ ಡಿ ಮಹಾ ಪ್ರಬಂಧ " ತುಳು ಜಾನಪದ " ದಲ್ಲಿ ಸುಮಾರು ಇನ್ನೂರ ಅರುವತ್ತು ಭೂತಗಳ ಹೆಸರಿನ ಪಟ್ಟಿಯನ್ನು ನೀಡಿದ್ದಾರೆ. ಇದನ್ನು ಪರಿಷ್ಕರಿಸಿ ಡಾ.ಚಿನ್ನಪ್ಪ ಗೌಡರು ತಮ್ಮ ಪಿ ಎಚ್ ಡಿ ಮಹಾ ಪ್ರಬಂಧ " ಭೂತಾರಾಧನೆ- ಒಂದು ಜಾನಪದೀಯ ಅಧ್ಯಯನದಲ್ಲಿ ಮುನ್ನೂರು ಭೂತಗಳ ಹೆಸರಿನ ಪಟ್ಟಿಯನ್ನು ಮಾಡಿದ್ದಾರೆ.ಡಾ.ಲಕ್ಷ್ಮೀ ಯವರು ತುಳು ನಾಡಿನಾದ್ಯಂತ ಕ್ಷೇತ್ರ ಕಾರ್ಯ ಮಾಡಿ ಸಾವಿರದ ಐನೂರಕ್ಕಿಂತ ಹೆಚ್ಚಿನ ಭೂತಗಳ ಹೆಸರನ್ನು ಸಂಗ್ರಹ ಮಾಡಿ ತುಳುವರಿಗೆ ವಿಶಿಷ್ಠವಾದ ಕೊಡುಗೆಯನ್ನು ನೀಡಿದ್ದಾರೆ.
ಭೂತಾರಾಧನೆ ಕುರಿತು ತುಂಡು ಭೂತಗಳು ಒಂದು ಅಧ್ಯಯನ, ದೈವಿಕ ಕಂಬಳ ಕೋಣ,ತುಳುನಾಡಿನ ಅಪೂರ್ವ ಭೂತಗಳು,ಭೂತಗಳ ಅದ್ಭುತ ಜಗತ್ತು ಎಂಬ ಇವರ ಗ್ರಂಥಗಳು ಪ್ರಕಟವಾಗಿವೆ.
ತುಳು ಸಂಸ್ಕೃತಿಯ ಬಗ್ಗೆ ಮಾಹಿತಿ ಇರುವ ತುಳುನಾಡಿನ ಸಂಸ್ಕಾರಗಳು ಮತ್ತು ವೃತ್ತಿಗಳು ಎಂಬ ಪುಸ್ತಕ ಪ್ರಕಟವಾಗಿದೆ .ಕನ್ನಡ ಮತ್ತು ತುಳು ಜನಪದ ಕಾವ್ಯಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ
ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ಎಂಬ ಕೃತಿಯನ್ನು ರಚಿಸಿದ್ದಾರೆ.
ಇವರ ಅನೇಕ ಸಂಶೋಧನಾ ಪ್ರಬಂಧಗಳು ಸಾಧನೆ,ದ್ರಾವಿಡ ಅಧ್ಯಯನ, ಜಾನಪದ ಅಧ್ಯಯನ, ತುಳುವ ,ಕರ್ನಾಟಕ ಲೋಚನ ಮೊದಲಾದ ವಿದ್ಯುತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನೂರಕ್ಕೂ ಹೆಚ್ಚು ಅಂತರರಾಷ್ಟ್ರೀಯ, ರಾಷ್ಟ್ರೀಯ, ಪ್ರಾದೇಶಿಕ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡನೆ ಮಾಡಿದ್ದಾರೆ.
ಭೂತ ಜಗತ್ತಿನ ಅದ್ಭುತ
ಭೂತಾರಾಧನೆ ಕುರಿತು ಅಧ್ಯಯನ ಮಾಡುವುದೆಂದರೆ ಸಾಮಾನ್ಯವಾದ ವಿಚಾರವಲ್ಲ .ನಡು ರಾತ್ರಿ ಹನ್ನೆರಡು ಗಂಟೆ ಮೇಲೆ ನಡೆಯುವ ಭೂತಾರಾಧನೆ ಬಗ್ಗೆ ರೆಕಾರ್ಡ್ ಮಾಡಿ ಹತ್ತಿರದಿಂದ ಮಾಹಿತಿ ಸಂಗ್ರಹಿಸಿ ಅಧ್ಯಯನ ಮಾಡುವುದು ನಿಜಕ್ಕೂ ಅತ್ಯಂತ ಪರಿಶ್ರಮ ಬೇಡುವ ವಿಚಾರ.
ಇವರ ಸಾಹಿತ್ಯ ಸಂಶೋಧನಾ ಸಾಧನೆಗಳ ಬಗ್ಗೆ ಬಗ್ಗೆ ನಾಡಿನ ಹಿರಿಯ ಸಂಶೋಧಕರೂ ,ಸಾಹಿತಿಗಳೂ .ಶಿಕ್ಷಣ ತಜ್ಞರೂ ಆಗಿರುವ ಡಾ.ಅಮೃತ ಸೋಮೇಶ್ವರ ಅವರು “ಅಧ್ಯಯನ ಕ್ಷೇತ್ರದಲ್ಲೂ ಕ್ಷೇತ್ರ ಕಾರ್ಯದಲ್ಲೂ ವಿಶೇಷ ಪರಿಶ್ರಮಿಸಲು ಹಿಂಜರಿಯತಕ್ಕ ಸಾಮಾನ್ಯ ಸಂಶೋಧಕರಿಗಿಂತ ಭಿನ್ನವಾಗಿ ಲಕ್ಷ್ಮೀ ಜಿ ಪ್ರಸಾದ ಅವರು ಬಹುಮಟ್ಟಿಗೆ ಸಂಕೀರ್ಣ ಹಾಗೂ ಕ್ಲೆಶಕರವಾದ ಭೂತಾರಾಧನಾ ರಂಗವನ್ನು ತಮ್ಮ ಅಧ್ಯಯನಕ್ಕೆ ಆರಿಸಿಕೊಂಡಿದ್ದಾರೆ.ಸಾಮಾನ್ಯವಾಗಿ ರಾತ್ರಿ ಕಾಲದಲ್ಲಿ ನಡೆಯುವ ,ವಿವಿಧ ವಿಧಿ ನಿಷೇಧಗಳಿಂದ ಕೂಡಿರುವ ಈ ಆರಾಧನಾ ಪದ್ಧತಿಯ ಕುರಿತಾದ ವಿವರಗಳನ್ನು ಸಮೀಪದಿಂದ ಕಲೆಹಾಕುವುದು ಮಹಿಳೆಯರಿಗಂತೂಕಷ್ಟ ಸಾಧ್ಯ ಕಾರ್ಯ .ಆದರೆ ಲಕ್ಷ್ಮಿಯವರು ಅಂಥ ಸಾಹಸದಲ್ಲಿ ಸಫಲತೆಯನ್ನು ಹೊಂದಿದ್ದಾರೆ.ತಮ್ಮ ಅಧ್ಯಾಪನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಲೇ ಅವರು ಸಂಶೋಧನಾ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ದುಡಿಯುತ್ತಾ ಬಂದಿದ್ದಾರೆ “ಎಂದು ಡಾ.ಲಕ್ಷ್ಮೀ ಜಿ ಪ್ರಸಾದರ ಸಾಧನೆ ಬಗ್ಗೆ ಮುಕ್ತವಾಗಿ ಪ್ರಶಂಸಿಸಿದ್ದಾರೆ.ಕೋಟಿ ಚೆನ್ನಯ ,ಪಂಜುರ್ಲಿ,ಕೋಟೆದ ಬಬ್ಬು ,ಕೊರಗ ತನಿಯ, ಬೀರ್ನಾಲ್ವ,ಮುಗೆರ್ಲು.ಆಲಿ ಭೂತ ಗುಳಿಗ ಮೊದಲಾದ ಪ್ರಸಿದ್ಧ ದೈವಗಳ ಬಗ್ಗೆ ಅದೇ ರೀತಿ ಅಜ್ಜಿ ಭೂತ, ಅರಬ್ಬೀ ಭೂತ,ಅಬ್ಬೆ ಜಲಾಯ,ಕನ್ನಡ ಬೀರ ,ಕುಕ್ಕೆತ್ತಿ -ಬಳ್ಳು ,ಕುಂಡ-ಮಲ್ಲು. ದಾರು -ಕುಂದಯ. ಹಳ್ಳತ್ತಾಯ,ಮಾಲಿಂಗರಾಯ.ದುಗ್ಗಲಾಯ, ದಾಲ್ಸೂರಾಯ,ಅಕ್ಕಚ್ಚು ,ಅಚ್ಚು ಬಂಗೇತಿ,ಬೆಲೆಟೆಂಗರಜ್ಜ,ಮೂವ,ಕೊಳ್ಳಿ ಕುಮಾರ ,ಬೋವ,ಕಪ್ಪಣ್ಣ ಸ್ವಾಮಿ ,ಮದನಕ್ಕೆ ದೈಯಾರು,ಅಕ್ಕ ಬೋಳಾರಿಗೆ,ಕುರೆ ಪೆರ್ಗಡೆ ,ಉರವ, ಎರು ಬಂಟ ,ಅದ್ಯಲಾಯ,ಅಡ್ಯಂತಾಯ,ಬೈಸುನಾಯಕ ,ಜಂಗ ಬಂಟ,ಚೆನ್ನಿಗ ರಾಯ ,ಕಾರಿಂಜೆತ್ತಾಯ.ದೆಸಿಲು ,ಕಿಲಮರಿತ್ತಾಯ,ಬಲ್ಲ ಮಂಜತ್ತಾಯ,ಮಾದ್ರಿತ್ತಾಯ.ಕುಂಜರಾಯ, ಅಜ್ಜ ಬೊಲಯ.ಕುರವ,ಪರವ ಭೂತ ಪರಿವಾರ ನಾಯಕ,ಉಗ್ಗೆದಲ್ತಾಯ,ಜತ್ತಿಂಗ ,ಒರು ಬಾಣಿಯೆತ್ತಿ-ನೆಲ್ಲೂರಾಯ .ಬವನೋ. ಮರ್ಲು ಮಾಣಿ ಕಡಂಬಳಿತ್ತಾಯ,ಮಾಪುಲೆ-ಮಾಪುಲ್ತಿ ಭೂತಗಳು,ಮಾಪುಲ್ತಿ ,ಧೂಮಾವತಿ,ಅಡ್ಕತ್ತಾಯ.ಸೀರಮ್ಬಲತ್ತಾ ಯ,ಭಟ್ಟಿ ಭೂತ,ಬ್ರಾಣ ಭೂತ .ಕಚ್ಚೆ ಭಟ್ಟ ಹನುಮಂತ ದೈವ ,ಕನ್ನಡ ಭೂತ .ಜಾನು ನಾಯ್ಕ ,ಬಂಡಿರಾಮ ,ಬಾಕುಡರ ಸರ್ಪಕೋಲ,ಕೃಷ್ಣ ಸರ್ಪ ಕೋಲ,ನಾಗ ಕೋಲ,ಮುಂತಾದ ಹೊರ ಜಗತ್ತು ಈ ತನಕ ಹೆಸರು ಕೂಡ ಕೇಳದ ವಿದ್ವಾಂಸರ ಪಟ್ಟಿಯಲ್ಲಿ ದಾಖಲಾಗದ ,ಈ ತನಕ ಅಧ್ಯಯನವಾಗದ ನಾನ್ನೂರೈವತ್ತಕ್ಕೂ ಹೆಚ್ಚಿನ ತುಳುನಾಡಿನ ದೈವಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ.
ಶಿಕ್ಷಕಿಯಾಗಿ ವೃತ್ತಿಯಲ್ಲಿ ಕೂಡ ಯಶಸ್ವಿ
ಸಾಹಿತ್ಯ , ಸಾಂಸ್ಕೃತಿಕ, ಸಂಶೋಧನಾ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ವ್ಯಕ್ತಿಗಳು ತಮ್ಮ ವೃತ್ತಿಯನ್ನು ನಿರ್ಲಕ್ಷ್ಯ ಮಾಡುತ್ತಾರೆ ಎಂಬ ಮಾತಿದೆ. ಆದರೆ ಲಕ್ಷ್ಮೀ ಯವರು ಇದಕ್ಕೆ ಅಪವಾದ.ನಿರಂತರವಾಗಿ ಉತ್ತಮ ಫಲಿತಾಂಶ ನೀಡುತ್ತಾ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಗೆಗಳಿಗೆ ಮಾರ್ಗ ದರ್ಶನ ನೀಡುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳಿಗೆ ನಾಟಕ ರಚನೆ,ಅಭಿನಯ,ಸಾಹಿತ್ಯ ರಚನೆ,ಭಾಷಣ,ಏಕಪಾತ್ರಾಭಿನಯ,ಸಂವಹನ ಮೊದಲಾದ ವಿಚಾರಗಳಿಗೆ ತರಬೇತಿ ನೀಡಿ ಬಹುಮಾನ ಪಡೆಯುವಂತೆ ತಯಾರು ಮಾಡುತ್ತಾರೆ.ಇವರ ವಿದ್ಯಾರ್ಥಿಗಳು ಜಿಲ್ಲಾ ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದಿದ್ದಾರೆ. ಡಿಡಿ ಒಂದು ಚಾನೆಲ್ ನಲ್ಲಿ ಖೇಲ್ ಖೇಲ್ ಮೇ ಬದಲೋ ದುನಿಯಾ ಎಂಬ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಸಿದ್ಧ ಪಡಿಸಿ ರಾಷ್ಟ್ರೀಯ ಚಾನೆಲ್ ನಲ್ಲಿ ಭಾಗವಹಿಸಿ ಬಹುಮಾನ ಪಡೆಯುವಂತೆ ಮಾಡಿದ್ದಾರೆ. ಇವರನ್ನು ಉತ್ತಮ ಶಿಕ್ಷಕಿಯಾಗಿ ಗುರುತಿಸಿ ಮಂಗಳೂರಿನ ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಯು ತನ್ನ ಇಪ್ಪತ್ತೈದನೇ ವರ್ಷದ ಸ್ಥಾಪಕರ ದಿನಾಚರಣೆಯಂದು OUTSTANDING TEAHER AWARD- 2013 ಅನ್ನು ನೀಡಿ ಗೌರವಿಸಿದೆ.ಕನ್ನಡ ಕಾವಲು ಪಡೆಯು ರಾಜ್ಯ ಆದರ್ಶ ಶಿಕ್ಷಕಿ ಪ್ರಶಸ್ತಿ- 2015 ಅನ್ನು ನೀಡಿ ಗೌರವಿಸಿದೆ.
ಇದಲ್ಲದೆ ಇವರ ಶಿಕ್ಷಣ ಸೇವೆಯನ್ನು ಗುರುತಿಸಿ ಬಸವನಗುಡಿ ಪೌಂಡೇಶನ್ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಮಹಿಳಾ ರತ್ನ ಪ್ರಶಸ್ತಿ ನೀಡಿದೆ.ಜನತಾ ಸೈನಿಕ ದಳ ಸಾಂಸ್ಕೃತಿಕ ಪ್ರತಿಷ್ಠಾನವು ಕರ್ನಾಟಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.ಪದ್ಮಶ್ರೀ ಕಲಾ ಸಂಘವು ಕಲಾ ಜ್ಯೋತಿ ಪುರಸ್ಕಾರ ನೀಡಿದೆ.ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕೊಡಮಾಡುವ ಪರಮೇಶ್ವರ ಪುಲಕೇಶಿ ಪುರಸ್ಕಾರವು 2015ರಲ್ಲಿ ದೊರೆತಿದೆ.
ಎಣ್ಣೆಹೊಳೆಯಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಜಾನಪದ ರತ್ನ ಪುರಸ್ಕಾರ ನೀಡಿ ಗೌರವಿಸಿದ್ದಾರೆ.ತುಳುವರೆಂಕುಲು ಬೆಂಗಳೂರು ಇವರು ಬಲಿಯೇಂದ್ರ ಪುರಸ್ಕಾರ- 2016 ಅನ್ನು ನೀಡಿ ಇವರ ತುಳು ಸಂಶೋಧನೆಗೆ ಗೌರವ ನೀಡಿದ್ದಾರೆ.ಕನ್ನಡ ಜಾನಪದ ಪರಿಷತ್ ಜಾನಪದ ವಿದ್ವಾಂಸರಿಗೆ ಕೊಡಮಾಡುವ ಜಾನಪದ ಪ್ರಪಂಚ- 2017 ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಬೆಂಗಳೂರಿನ ದಕ್ಷಿಣ ಕನ್ನಡಿಗರ ಸಂಘವು ತುಳು ಭಾಷೆ ಮತ್ತು ಸಂಸ್ಕೃತಿ ಕುರಿತಾದ ಇವರ ಸಂಶೋಧನೆಯನ್ನು ಗುರುತಿಸಿ ಕರಾವಳಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ .ಕರ್ನಾಟಕ ಯುವ ರಕ್ಷಣಾ ವೇದಿಕೆಯು 2018 ರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ಲಕ್ಷ್ಮೀ ಜಿ ಪ್ರಸಾದರ ಶೈಕ್ಷಣಿಕ ಸೇವೆ ಹಾಗೂ ತುಳು ಭಾಷೆ ಸಂಸ್ಕೃತಿಗೆ ನೀಡಿದ ಕೊಡುಗೆಗಾಗಿ ಕಯುವೇ ಸಾಧನಾ ಪ್ರಶಸ್ತಿ- 2018 ನೀಡಿ ಗೌರವಿಸಿದೆ.
ವಿವಾಹಾನಂತರವೂ ಓದು ಮುಂದುವರಿಸಿದ ಧೀರೆ.
ಲಕ್ಷ್ಮೀ ಯವರ ಸಾಧನೆ ನೋಡಿದರೆ ಯಾರಿಗಾದರೂ ಅಚ್ಚರಿಯಾಗುತ್ತದೆ.ಇವರ ಸಾಧನೆಯ ಹಿಂದೆ ಪತಿ ಗೋವಿಂದ ಪ್ರಸಾದ, ಮಗ ಅರವಿಂದ ತಂದೆ ತಾಯಿ,ಸಹೋದರ ಸಹೋದರಿಯರ ನಿರಂತರ ಬೆಂಬಲವಿದೆ.
ಎರಡನೆಯ ವಿಜ್ಞಾನ ಪದವಿ ಓದುತ್ತಾ ಇರುವಾಗಲೇ ಲಕ್ಷ್ಮೀ ಯವರನ್ನು ಮೆಚ್ಚಿ ಗೋವಿಂದ ಪ್ರಸಾದರು ಮದುವೆಯಾದರು.ವಿವಾಹಕ್ಕೆ ಮೊದಲೇ ಲಕ್ಷ್ಮೀ ಯವರ ಹೆತ್ತವರು " ತಮ್ಮ ಮಗಳು ಓದುವುದರಲ್ಲಿ ಮುಂದಿದ್ದಾಳೆ,ಅವಳನ್ನು ಮುಂದೆ ಓದಿಸಬೇಕು" ಎಂಬ ನಿರ್ಬಂಧ ಹೇರಿದ್ದರು.ಇದಕ್ಕೆ ಒಪ್ಪಿದ ಗೋವಿಂದ ಪ್ರಸಾದರ ಹಿರಿಯರು ನಂತರ " ಹೆಣ್ಣು ಮಕ್ಕಳು ಪರಿಸ್ಥಿತಿಗೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕು" ಎಂದು ವಿತ್ತಂಡವಾದ ಮಾಡುತ್ತಾ ಮುಂದಕ್ಕೆ ಓದಿಸಲು ನಿರಾಕರಿಸಿದರು.
ಇಲ್ಲಿಂದ ತನ್ನ ಓದಿಗಾಗಿ ಮನೆ ಮಂದಿಯನ್ನು ಎದುರು ಹಾಕಿಕೊಳ್ಳಬೇಕಾಯಿತು.ಮನೆಯವರ ತಿರಸ್ಕಾರದಿಂದ ನೊಂದು ಪತಿ ಗೋವಿಂದ ಪ್ರಸಾದರೊಂದಿಗೆ ಕೆಟ್ಟು ಪಟ್ಟಣ ಸೇರು ಎಂಬಂತೆ ಮನೆ ಬಿಟ್ಟು ಹೊರನಡೆದರು.
ಅಮವಾಸ್ಯೆಯ ದಿನ ಕೂಡ ಶುಭಗಳಿಗೆಯೇ ಅಯಿತು!
ಅಂದು ಬೆಳಗ್ಗೆ ಗೋವಿಂದ ಪ್ರಸಾದರೊಂದಿಗೆ ಮನೆ ಬಿಟ್ಟು ಹೊರಟಾಗ ಅಮವಾಸ್ಯೆಯಂತೆ.ಹಿಂದಿನ ದಿನ ಬಿಎಸ್ ಸಿ ಯ ಅಂಕ ಪಟ್ಟಿ ತರುವುದಕ್ಕಾಗಿ ಉಜಿರೆಗೆ ಹೋಗಿದ್ದರು.ಅರ್ಧ ದಾರಿ ಬಿಸಿರೋಡು ತನಕ ಗೋವಿಂದ ಪ್ರಸಾದರು ಬಂದು ಬಸ್ಸು ಹತ್ತಿಸಿ ಮಂಗಳೂರು ಕಡೆಗೆ ಹೋಗಿದ್ದರು.
ಉಜಿರೆಯ ಎಸ್ ಡಿ ಎಂ ಕಾಲೇಜಿಗೆ ಹೋಗಿ ಅಂಕ ಪಟ್ಟಿ ಪಡೆದು ಹಿಂದಿರುಗುವಷ್ಟರಲ್ಲಿ ಕತ್ತಲಾಗಿತ್ತು.ಅಕಾಲಿಕವಾಗಿ ಮಳೆ ಬಂದು ಜೋರಾಗಿ ಸುರಿಯುತ್ತಾ ಇತ್ತು.ಸುರಿವ ಮಳೆಯಲ್ಲಿ ಮನೆಯ ಒಳಗೆ ಬರಲು ಬಿಡದೆ "ಯಾರನ್ನು ಕೇಳಿ ಹೋದೆ ? ಎಂದು ದಬಾಯಿಸಿದ ಲಕ್ಷ್ಮೀ ಯವರ ಅತ್ತೆ ಮಾವ ಅಂಗಳದಲ್ಲಿಯೇ ನಿಲ್ಲಿಸಿದ್ದರು!
ಸುಮಾರು ಎರಡು ಗಂಟೆಯ ಕಾಲ ಮಳೆಯಲ್ಲಿ ಒದ್ದೆಯಾಗಿ ಚಳಿಯಲ್ಲಿ ನಡುಗುತ್ತಾ ನಿಂತಾಗ ಮಂಗಳೂರಿಗೆ ಹೋದ ಪತಿ ಗೋವಿಂದ ಪ್ರಸಾದರಯ ಹಿಂತಿರುಗಿದರು.ಅವರನ್ನು ಕೂಡ ಒಳಬರದಂತೆ ತಡೆದಾಗ ತಂದೆ ತಾಯಿ ಮಕ್ಕಳ ನಡುವಿನ ಸಹಜ ಸಲುಗೆಯಿಂದ ಒಳಗೆ ತಳ್ಳಿ ಲಕ್ಷ್ಮೀ ಯವರ ಕೈಹಿಡಿದು ಒಳಗೆ ಕರೆತಂದು ಮೈ ಒರಸಿಕೊಳ್ಳಲು ಬಟ್ಟೆ ನೀಡಿ,ಹಾಕಿಕೊಳ್ಳಲು ಒಣಗಿದ ಬಟ್ಟೆಗಳನ್ನು ನೀಡಿದರು.ಎರಡು ಗಂಟೆಗಲ ಕಾಲ ಮಳೆಯಲ್ಲಿ ನೆನೆದ ಪ್ರಭಾವವೋ ಏನೋ ಲಕ್ಷ್ಮೀ ಗೆ ತೀವ್ರ ಜ್ವರ! ಮನೆಯೊಳಗೆ ರಾತ್ರಿಯಿಂದ ಬೆಳಗಿನ ತನಕ ಅಪ್ಪ ಮಕ್ಕಳ ನಡುವೆ ಜಗಳ.
ಬೆಳಗಾಗುತ್ತಲೇ " ನೋಡು ನಾನು ದುಡಿದು ಎರಡು ಹೊತ್ತು ಊಟ ಹಾಕಿಸಬಲ್ಲೆ,ನನ್ನೊಂದಿಗೆ ಬರುವುದಾದರೆ ಬಾ,ಮುಂದೆ ಓದು.ಅಥವಾ ಇವರ ಶ್ರೀಮಂತಿಕೆಯನ್ನು ಅನುಭವಿಸುತ್ತಾ ಗುಲಾಮಳಂತೆ ಇರು,ಆಯ್ಕೆ ನಿನ್ನದು ಎಂದಾಗ ಪತಿ ಗೋವಿಂದ ಪ್ರಸಾದರೊಂದಿಗೆ ಖಾಲಿ ಕೈಯಲ್ಲಿ ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ಕಟೀಲಿಗೆ ಬಂದು ಸಂಸ್ಕೃತ ಎಂ.ಎ ಪದವಿಗೆ ಸೇರಿದರು. ಗೋವಿಂದ ಪ್ರಸಾದರು ಮಂಗಳೂರಿನ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸಕ್ಕೆ ಸೇರಿದರು.ಇವರು ಮನೆ ಬಿಟ್ಟು ಹೊರಗೆ ನಡೆದ ದಿನ ಅಮವಾಸ್ಯೆಯ ದಿನವಂತೆ.ಮನೆ ಬಿಟ್ಟು ಹೊರಗೆ ನಡೆದಾಗ ದೀರ್ಘ ಕಾಲ ಮನೆ ಮಂದಿ ಇವರ ಸಂಪರ್ಕವನ್ನು ಬಿಟ್ಟಿದ್ದರು.ನಂತರ ರಾಜಿಯಾದ ಸಂದರ್ಭದಲ್ಲಿ ಅತ್ತೆಯವರು ಲಕ್ಷ್ಮೀ ಗೆ ಈ ವಿಚಾರವನ್ನು ತಿಳಿಸಿದ್ದರು.ಒಳ್ಳೆಯ ಕಾರ್ಯಕ್ಕೆ ಹೊರಟಾಗ ಕೆಟ್ಟ ಗಳಿಗೆ ಕೂಡ ಶುಭವನ್ನೇ ಮಾಡುತ್ತದೆ ಎಂಬುದಕ್ಕೆ ಲಕ್ಷ್ಮೀ ಸಾಕ್ಷಿಯಾದರು.
ಮೋಟು ಗೋಡೆಯ ಒಂದು ಕೊಠಡಿಯ ವಾಸವೂ ಹಿಮ್ಮೆಟ್ಟಿಸಲಿಲ್ಲ
ಲಕ್ಷ್ಮೀ ಯವರ ಹೆತ್ತವರು ಕೋಟ್ಯಧಿಪತಿಗಳು ಅಲ್ಲದಿದ್ದರೂ ಹೊಟ್ಟೆಗೆ ಬಟ್ಟೆಗೆ ಕೊರತೆ ಇರಲಿಲ್ಲ.ಬಡತನದ ಬೇಗೆ ಮಕ್ಕಳಿಗೆ ತಾಗದಂತೆ ಹೆತ್ತವರು ಜಾಗ್ರತೆ ವಹಿಸಿದ್ದರು. ಕಟೀಲು ಸಮೀಪದ ಎಕ್ಕಾರಿನಲ್ಲಿ ಒಂದು ಕೋಣೆಯ ಗೆದ್ದಲು ಹಿಡಿದ ಮೋಟು ಗೋಡೆಯ ಮನೆಯಲ್ಲಿ ಬದುಕುವುದು ಲಕ್ಷ್ಮೀ ಮತ್ತು ಗೋವಿಂದ ಪ್ರಸಾದ ದಂಪತಿಗಳಿಗೆ ಕಷ್ಟವೆನಿಸಲಿಲ್ಲ .ದಂಪತಿಗಳ ನಡುವಿನ ಮಧುರ ಸ್ನೇಹ ಮತ್ತು ಸಾಧನೆಯ ತುಡಿತದ ಎದುರು ಕಷ್ಟಗಳು ದೊಡ್ಡದಾಗಿ ಕಾಣಿಸಲಿಲ್ಲ .ಬದುಕನ್ನು ಸವಾಲಾಗಿ ಎದುರಿಸಿದರು.
ಗ್ರಹಗತಿಗೇ ಸವಾಲು ಹಾಕಿದರು!
1996 ರಲ್ಲಿಯೇ ಸಂಸ್ಕೃತ ಎಂ.ಎ ಪದವಿಯನ್ನು ಮೊದಲ ರ್ಯಾಂಕಿನೊಂದಿಗೆ ಪಡೆದರೂ ಇವರಿಗೆ ಸುಲಭದಲ್ಲಿ ಸರ್ಕಾರಿ ಉದ್ಯೋಗ ದೊರೆಯಲಿಲ್ಲ. ಓದು ಮುಗಿದ ತಕ್ಷಣವೇ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಸಿಕ್ಕಿತಾದರೂ ಅದು ಅರೆ ಕಾಲಿಕ ಕೆಲಸವಾಗಿತ್ತು. ಎಲ್ಲಿ ಹುಡುಕಿದರೂ ಸಂಸ್ಕೃತಕ್ಕೆ ಪೂರ್ಣಕಾಲಿಕ ಖಾಯಂ ಕೆಲಸವಿಲ್ಲ.ಆಗ ಸಂತ ಅಲೋಶಿಯಸ್ ಕಾಲೇಜಿನ ಹಿಂದಿ ಉಪನ್ಯಾಸಕಿ ಹಿಂದೆ ಎಂ ಎ ಓದುವಂತೆ ಸಲಹೆ ನೀಡಿದರು. ಅದಕ್ಕೂ ಮೊದಲೇ ಲಕ್ಷ್ಮೀ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ನಡೆಸುವ ರಾಷ್ಟ್ರ ಭಾಷಾ ಪ್ರವೀಣ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.ಹಾಗಾಗಿ ಹಿಂದೆ ಎಂಎ ಓದುವುದು ಇವರಿಗೆ ಅಷ್ಟೊಂದು ಕಷ್ಟವೆನಿಸಲಿಲ್ಲ.ಕೆಲಸ ಮಾಡುತ್ತಲೇ ಪುಟ್ಟ ಮಗ ಅರವಿಂದನ ಲಾಲನೆ ಪಾಲನೆ ಮಾಡುತ್ತಲೇ ಖಾಸಗಿಯಾಗಿ ಹಿಂದಿ ಎಂಎ ಗೆ ಕಟ್ಟಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರು .ಅಂಕಗಳೇನೋ ಬಂತು.ಆದರೆ ಹಿಂದಿ ಭಾಷೆ ಸಾಹಿತ್ಯ ಅವರನ್ನು ಆಕರ್ಷಿಸಲಿಲ್ಲ.ಅಸಕ್ತಿ ಇಲ್ಲದ ಕ್ಷೇತ್ರದಲ್ಲಿ ದುಡಿಯುತ್ತಾ ಬದುಕು ಕಳೆಯುವುದು ಲಕ್ಷ್ಮೀ ಗೆ ಸಮ್ಮತವಾಗಲಿಲ್ಲ.ಸಹೋದರ ಗಣೇಶ ಭಟ್ ಸಲಹೆಯಂತೆ ಮತ್ತೆ ಪುನಃ ಕನ್ನಡ ಎಂ.ಎ ಗೆ ಕಟ್ಟಿದರು.ಇಲ್ಲಿ ಇವರು ತನ್ನ ಆಸಕ್ತಿಯ ಕ್ಷೇತ್ರ ಜಾನಪದವನ್ನು ಆಯ್ಕೆ ಮಾಡಿಕೊಂಡರು.ಇಲ್ಲಿಂದ ಇವರ ಬದುಕಿನ ದಿಕ್ಕು ಬದಲಾಯಿತು. ತುಳು ಸಂಸ್ಕೃತಿ ಜಾನಪದ ಇವರ ಅಧ್ಯಯನದ ವಿಚಾರವಾಯಿತು. ಮೂರು ಎಂಎ ಪದವಿಗಳನ್ನು ಎಂಫಿಲ್ ಮತ್ತು ಡಾಕ್ಟರೇಟ್ ಪದವಿಗಳನ್ನೂ ಪಡೆದರೂ ಇವರಿಗೆ ಜಾತಿ ದುಡ್ಡು ಪ್ರಭಾವಗಳ ವ್ಯವಸ್ಥೆಯ ನಡುವೆ ಸರ್ಕಾರಿ ಉದ್ಯೋಗ ದೊರೆಯಲಿಲ್ಲ. ವಯಸ್ಸು ನಿಲ್ಲುವುದಿಲ್ಲ.
1995 ರಲ್ಲಿ ಇವರು ಎರಡನೇ ವರ್ಷದ ಎಂಎ ಓದುತ್ತಿರುವಾಗ ಸರ್ಕಾರಿ ಪದವಿ ಪೂರ್ವ ಕಾಲೆಜುಗಳ ಉಪನ್ಯಾಸಕ ಹುದ್ದೆಗೆ ಅರ್ಜಿ ಅಹ್ವಾನಿಸಿದ್ದರು.ಅದಾಗಿ ಯಾವುದೋ ಸಮಸ್ಯೆಯಿಂದಾಗಿ ಹತ್ತು ವರ್ಷಗಳ ಕಾಲ ಅರ್ಜಿ ಅಹ್ವಾನಿಸಿರಲಿಲ್ಲ.ಮತ್ತೆ 2006 ರಲ್ಲಿ ಅರ್ಜಿ ಅಹ್ವಾನಿಸಿದಾಗ ಲಕ್ಷ್ಮೀಯವರಿಗೆ ಗರಿಷ್ಠ ವಯೋಮಿತಿ 33 ವರ್ಷ ದಾಟಿತ್ತು.ಆರಂಭದಲ್ಲಿ ತುಂಬಾ ಹತಾಶೆಗೆ ಒಳಗಾದ ಇವರು ಮತ್ತೆ ಆತ್ಮವಿಶ್ವಾಸವನ್ನು ಬಿಡದೆ ಆಗ ಶಿಕ್ಷಣ ಸಚಿವರಾದ ಬಸವರಾಜ ಹೊರಟ್ಟಿಯವರನ್ನು ಭೇಟಿಯಾದರು .ಅದಾಗಲೇ ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ಗರಿಷ್ಠ ವಯೋಮಿತಿ 40 ವರ್ಷಕ್ಕೆ ನಿಗಧಿತವಾಗಿತ್ತು.ಪದವಿ ಕಾಲೇಜುಗಳಿಗೆ 35 ವರ್ಷಗಳು ಗರಿಷ್ಠ ವಯೋಮಿತಿಯಾಗಿತ್ತು ಶಿಕ್ಷಣ ಸಚಿವರಿಗೆ ಇದನ್ನು ಮನವರಿಕೆ ಮಾಡಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಕೂಡ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸುವಂತೆ ಮನವಿ ಮಾಡಿದರು.ಅದರಂತೆ ಶಿಕ್ಷಣ ಸಚಿವರು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಇರುವಂತೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಕೂಡ ಗರಿಷ್ಠ ವಯೋಮಿತಿ 40 ವರ್ಷಗಳನ್ನು ನಿಗಧಿಪಡಿಸಿದರು.
2006 ರಲ್ಲಿ ಅರ್ಜಿ ಅಹ್ವಾನಿಸಿದಾಗ ಒಂದೇ ಒಂದು ಸಂಸ್ಕೃತ ಉಪನ್ಯಾಸಕ ಹುದ್ದೆ ಇರಲಿಲ್ಲ .ಕನ್ನಡ ಉಪನ್ಯಾಸಕ ಹುದ್ದೆಗೆ ಇವರಿಗೆ ಸಂದರ್ಶನಕ್ಕೇ ಬರಲಿಲ್ಲ.
ಈಗ ಇವರ ಹೆತ್ತವರು ಇವರ ಜಾತಕ ತೋರಿಸಿ ಅನೇಕ ಜ್ಯೋತಿಷಿಗಳಲ್ಲಿ ಇವರಿಗೆ ಸರ್ಕಾರಿ ಹುದ್ದೆ ದೊರೆಯುತ್ತದೆಯೇ ಎಂದು ಕೇಳಿದರು.ಇವರ ಜಾತಕ ನೋಡಿದ ಎಲ್ಲರೂ ಇವರಿಗೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಇಲ್ಲವೆಂದೇ ಹೇಳಿದರು.ಲಕ್ಷ್ಮೀ ಆಗಲೂ ಕೂಡ ತನ್ನ ಪ್ರಯತ್ನ ಬಿಡಲಿಲ್ಲ. ಮನೋ ಬಲದ ಮುಂದೆ ಯಾವ ಗ್ರಹಗತಿಯೂ ನಿಲ್ಲುವುದಿಲ್ಲ ಎಂದು ಮನಸ್ಸು ಗಟ್ಟಿ ಮಾಡಿಕೊಂಡರು!
ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ ಪ್ರೌಢಶಾಲಾ ಶಿಕ್ಷಕರಿಗೆ ಇರುವಂತೆ ಲಿಖಿತ ಪರೀಕ್ಷೆಯ ಮೂಲಕ ನೇಮಕಾತಿ ನಡೆಸುವಂತೆ ಮನವಿ ಮಾಡಿದರು. ಈ ಬಗ್ಗೆ ಪತ್ರಾಂದೋಲನ ಮಾಡಿದರು.ಸಂದರ್ಶನದ ಮೂಲಕ ಆಯ್ಕೆ ಮಾಡುವಾಗ ಜಾತಿ ದುಡ್ಡು ಪ್ರಭಾವವೇ ಕೆಲಸ ಮಾಡುತ್ತದೆ.ಭ್ರಷ್ಟಾಚಾರದ ಕಾರಣದಿಂದ ದುಡ್ಡು ಕೊಡಲು ಅಸಮರ್ಥರಾಗುವ ,ಇನ್ಫ್ಲೂಯೆನ್ಸ್ ಇಲ್ಲದೆ ಇರುವ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಾರೆ.ಹಾಗಾಗಿ ಅನೇಕರು ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಬೇಕೆಂದು ಹೋರಾಟ ಮಾಡಿದರು.ಅದರ ಪರಿಣಾಮವಾಗಿ 2008 ರಲ್ಲಿ ಮತ್ತೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಅರ್ಜಿ ಅಹ್ವಾನಿಸಿದಾಗ ಮಾಡಿದಾಗ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡುವುದೆಂದು ತೀರ್ಮಾನವಾಯಿತು. ಅರ್ಜಿ ಆಹ್ವಾನಿಸಿದ ತಕ್ಷಣವೇ ಹಗಲು ರಾತ್ರಿ ಅಧ್ಯಯನ ಮಾಡಿದ ಲಕ್ಷ್ಮೀ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದರು. ಯಾವುದೇ ಪ್ರಭಾವ ದುಡ್ಡು ರಾಜಕೀಯವಿಲ್ಲದೆ ಪ್ರಾಮಾಣಿಕವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು.ಲಕ್ಷ್ಮೀ ವಿಷಗಳಿಗೆಯಲ್ಲಿ ಹುಟ್ಟಿದ್ದರಂತೆ.ಇವರ ಪ್ರಾಮಣಿಕ ಪ್ರಯತ್ನಕ್ಕೆ ವಿಷ ಗಳಿಗೆ ಕೂಡ ಅಮೃತದ ಫಲವನ್ನೇ ನೀಡಿತು.
ವಿಶ್ವವಿದ್ಯಾಲಯದ ಭ್ರಷ್ಟ ಆಯ್ಕೆಗೇ ಸವಾಲು ಹಾಕಿದ ಧೀರೆ
2013 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಹಾಯಕ ಉಪನ್ಯಾಸಕ ಹುದ್ದೆಗೆ ಅರ್ಜಿ ಅಹ್ವಾನಿಸಿದರು.ಅದಾಗಲೇ ಇಪ್ಪತ್ತು ಸಂಶೋಧನಾ ಕೃತಿಗಳನ್ನು, ನೂರಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ,ನೂರಕ್ಕೂ ಹೆಚ್ಚು ಅಂತರಾಷ್ಟ್ರೀಯ, ರಾಷ್ಟ್ರೀಯ, ಪ್ರಾದೇಶಿಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮಾಡಿ ವಿದ್ವಜ್ಜನರಿಂದ ಮೆಚ್ಚುಗೆ ಪಡೆದಿದ್ದ ಲಕ್ಷ್ಮೀ ಸಹಾಯಕ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದರು. ಅದಾಗಲೇ ಅವರು ಎರಡನೇ ಡಾಕ್ಟರೇಟ್ ಪದವಿಗೆ ಮಹಾಪ್ರಬಂಧ ಸಲ್ಲಿಸಿದ್ದರು.ಅರ್ಜಿ ಸಲ್ಲಿಸಿದವರಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ಮಾಡಿರುವ ಹತ್ತು ಜನರು ಸಂದರ್ಶನಕ್ಕೆ ಅಯ್ಕೆ ಆದರು.ಆ ಹತ್ತು ಜನರಲ್ಲಿ ಒಬ್ಬರಾದ ಲಕ್ಷ್ಮೀ ಯವರಿಗೆ ಉಳಿದ ಅಭ್ಯರ್ಥಿಗಳಿಗಿಂತ ತುಂಬಾ ಹೆಚ್ಚು ಶೈಕ್ಷಣಿಕ ನಿರ್ವಹಣಾಂಕಗಳು ಇದ್ದವು.ಹಾಗಾಗಿ ಅವರಲ್ಲಿ ಪ್ರಥಮರಾದ ಇವರನ್ನು ಮೊದಲಿಗೆ ಸಂದರ್ಶನಕ್ಕೆ ಒಳಗೆ ಕರೆದರು.ಉತ್ತಮವಾಗಿ ಸಂದರ್ಶನದಲ್ಲಿ ಉತ್ತರಿಸಿದರು ಕೂಡ. ಆದರೆ ಮತ್ತೆ ದುಡ್ಡು ಸ್ವಕೀಯ ಪ್ರಭಾವಿ ರಾಜಕೀಯದಿಂದ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಹುದ್ದೆ ದೊರೆಯಲಿಲ್ಲ. ಆದರೆ ಇವರು ಕೈ ಕಟ್ಟಿ ಕೂರಲಿಲ್ಲ.ಉಪನ್ಯಾಸಕ ಹುದ್ದೆಯ ಆಯ್ಕೆಯಲ್ಲಿ ತಾರತಮ್ಯ ನಡೆದು ತನಗೆ ಅನ್ಯಾಯವಾದ ಬಗ್ಗೆ ನ್ಯಾಯಾಲಯದ ಮೂಲಕ ಹೋರಾಟ ನಡೆಸುತ್ತಿದ್ದಾರೆ.ನ್ಯಾಯ ದೇವತೆಯ ನ್ಯಾಯಯುತವಾದ ತೀರ್ಪಿಗೆ ಕಾಯುತ್ತಿದ್ದಾರೆ.
ಸಂಘ ಸಂಸ್ಥೆಗಳು ಮಾಡಬೆಕಾದ ಕೆಲಸವನ್ನು ಏಕಾಂಗಿಯಾಗಿ ಮಾಡಿದ ದಿಟ್ಟೆ.
ತುಳು ಸಂಸ್ಕೃತಿ ,ಜಾನಪದದ ಬಗ್ಗೆ ಆಸಕ್ತಿ ಹೊಂದಿದ ಇವರಿಗೆ ತುಳು ಅಕಾಡೆಮಿ ಸೇರಿದಂತೆ ಯಾವುದೇ ಸಂಘ ಸಂಸ್ಥೆಗಳ ,ಯುನಿವರ್ಸಿಟಿ ಗಳ ಬೆಂಬಲ ದೊರೆಯಲಿಲ್ಲ. ಯಾವುದೇ ಫೆಲೋಶಿಪ್ ಬರಲಿಲ್ಲ. ಆದರೆ ಇವರು ಅದಕ್ಕಾಗಿ ಕೈಚಾಚಿ ಕೂರದೆ ಸ್ವಂತ ದುಡ್ಡಿನಲ್ಲಿ ನಿರಂತರ ಕ್ಷೇತ್ರ ಕಾರ್ಯ ಮಾಡುತ್ತಾ ತುಳುನಾಡಿನ ಭೂತಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅಧ್ಯಯನ ಮಾಡುತ್ತಾ ಸಾಗಿದರು.ನಾನ್ನೂರೈವತ್ತಕ್ಕೂ ಹೆಚ್ಚಿನ ತುಳುನಾಡಿನ ದೈವಗಳ ಕುರಿತು ಮಾಹಿತಿ ಸಂಗ್ರಹಿಸಿ ಬ್ಲಾಗ್ ಮೂಲಕ ಆಸಕ್ತರಿಗೆ ತಲುಪಿಸಿದರು.ಸಾವಿರ ಐದುನೂರಕ್ಕಿಂತ ಹೆಚ್ಚಿನ ದೈವಗಳ ಹೆಸರನ್ನು ಸಂಗ್ರಹಿಸಿ ಭೂತಾರಾಧನೆಯ ಲಕ್ಷ್ಮೀ ಎಂದೇ ಗುರುತಿಸಿಕೊಂಡರು.
2010 ರಲ್ಲಿ ತುಳು ಅಕಾಡೆಮಿಯ ಲಕ್ಷ್ಮೀ ಅವರು ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಬೆಳ್ಳಾರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸುಳ್ಯ ತಾಲೂಕು ಮಟ್ಟದ ತುಳು ಮಿನದನ ಎಂಬ ಕಾರ್ಯ ಏರ್ಪಡಿಸಿತ್ತು.ಅದರಲ್ಲಿ ಒಂದು ಪ್ರಬಂಧ ಮಂಡನೆಗೆ ಅವಕಾಶವನ್ನು ನೀಡುವಂತೆ ವಿನಂತಿಸಿದಾಗ
ತುಳು ಅಕಾಡೆಮಿ ಅಧ್ಯಕ್ಷರು ಸ್ಥಳೀಯರಿಗೆ ಅವಕಾಶವಿಲ್ಲ ಎಂಬ ವಿತ್ತಂಡವಾದ ಮಾಡಿದರು.ಆಗ ಸ್ಥಳೀಯರಾದ ಡಾ.ನರೇಂದ್ರ ರೈ ದೇರ್ಲರಿಗೆ ಅವಕಾಶ ನೀಡಿದ್ದೀರಲ್ಲ ಎಂದಾಗ " ಅವರೆಲ್ಲಿ ನೀವೆಲ್ಲಿ? ಅವರು ಇಪ್ಪತ್ತು ಪುಸ್ತಕ ಪ್ರಕಟಿಸಿದ್ದಾರೆ, ನಿಮಗೆ ಹೆಂಗಸರಿಗೆ ರೇಷ್ಮೆ ಸೀರೆ ಉಟ್ಟು ಮೆರೆಯಲು ಸ್ಟೇಜ್ ಬೇಕು " ಎಂದು ತಿರಸ್ಕಾರದಿಂದ ಉತ್ತರಿಸಿದಾಗ ಕೂಡ " ಸರಿ ನಾನು ಡಾ.ನರೇಂದ್ರ ರೈ ದೇರ್ಲರಷ್ಟು ದೊಡ್ಡವಳಲ್ಲ,ಅವರ ವಿದ್ವತ್ ಬಗ್ಗೆ ನನಗೆ ಯಾವುದೇ ಆಕ್ಷೇಪವಿಲ್ಲ,ಆದರೆ ಈಗಾಗಲೇ ನನ್ನ ಏಳು ಪುಸ್ತಕಗಳು ಪ್ರಕಟವಾಗಿವೆ,ಮೊದಲ ಡಾಕ್ಟರೇಟ್ ಪಡೆದಿದ್ದು ತುಳು ಸಂಸ್ಕೃತಿ ಕುರಿತು ಎರಡನೇ ಡಾಕ್ಟರೇಟ್ ಪದವಿಗಾಗಿ ಅಧ್ಯಯನ ಮಾಡುತ್ತಿದ್ದೇನೆ.ಹಾಗಾಗಿ ಇಲ್ಲಿ ನಡೆಯಲಿರುವ ತಾಲೂಕುಮಟ್ಟದ ತುಳು ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲು ನನ್ನ ಅರ್ಹತೆ ಸಾಕು.ಇಷ್ಟ ಇದ್ದರೆ ಅವಕಾಶ ಕೊಡಿ,ಇನ್ನು ಐದು ವರ್ಷಗಳ ಸಮಯಾವಕಾಶ ಕೊಡಿ,ನಾನು ಕೂಡ ಇಪ್ಪತ್ತು ಪುಸ್ತಕಗಳನ್ನು ರಚಿಸಿ ಪ್ರಕಟಿಸುತ್ತೇನೆ,ಆಗ ನೀವು ಅಧ್ಯಕ್ಷರಾಗಿರುತ್ತೀರಾ? ನಾನು ಕೆಲಸ ಮಾಡುವ ಕಾಲೇಜು ಸಭಾಂಗಣದಲ್ಲಿ ಮತ್ತೊಮ್ಮೆ ತುಳು ಸಮ್ಮೇಳನ ಮಾಡುತ್ತೀರಾ ? ಎಂದು ದಿಟ್ಟವಾಗಿ ನುಡಿದು ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದರು.ಐದು ವರ್ಷಗಳ ಸಮಯ ತೆಗೆದುಕೊಳ್ಳಲಿಲ್ಲ,ಕೇವಲ ಮೂರು ವರ್ಷಗಳ ಒಳಗೆ ಇಪ್ಪತ್ತು ಪುಸ್ತಕಗಳನ್ನು ರಚಿಸಿ ಪ್ರಕಟಿಸಿ ತಾನು ಹೇಳಿದ ಮಾತನ್ನು ಉಳಿಸಿಕೊಂಡರು.ಇಂದು ಬ್ಲಾಗ್ ಮೂಲಕ ಪ್ರಸಿದ್ಧಿ ಪಡೆದಿರುವ ಲಕ್ಷ್ಮೀಯವರನ್ನು ನೂರಾರು ಸಂಘ ಸಂಸ್ಥೆಗಳು, ಅನೇಕ ಯುನಿವರ್ಸಿಟಿ ಗಳು ಕನ್ನಡ ತುಳು ಸಂಸ್ಕೃತಿ, ಜಾನಪದ ಭೂತಾರಾಧನೆ ಕುರಿತು ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸುತ್ತಿವೆ.ತಿರಸ್ಕಾರಕ್ಕೆ ನೊಂದು ಮುದುಡಿ ಹೋಗುವ ಬದಲು ಸವಾಲಾಗಿ ಸ್ವೀಕರಿಸಿ ಗೆದ್ದ ಲಕ್ಷ್ಮೀ ಸಾಹಸ ನಿಜಕ್ಕೂ ಶ್ಲಾಘನೀಯ
ಶಾಸನ ಮತ್ತು ಲಿಪಿ ಶಾಸ್ತ್ರದೆಡೆಗೆ ಒಲವು
ಲಕ್ಷ್ಮೀಯವರ ಜ್ಞಾನ ದಾಹ ಅದಮ್ಯವಾದುದು.2013 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಜೆ ಹೊತ್ತು ನಡೆಸುವ ಕನ್ನಡ ಶಾಸನ ಮತ್ತು ಲಿಪಿ ಶಾಸ್ತ್ರ ಕುರಿತಾದ ಡಿಪ್ಲೊಮಾ ತರಗತಿಗೆ ಹಾಜರಾಗಿ ಶಾಸನ ಮತ್ತು ಲಿಪಿಗಳ ಕುರಿತು ಪರಿಣತಿ ಪಡೆದರು.ಶಾಸನ ಮತ್ತು ಲಿಪಿ ಶಾಸ್ತ್ರ ಡಿಪ್ಲೊಮಾದಲ್ಲಿ ಪ್ರಥಮ ರ್ಯಾಂಕ್ ಪಡೆದು ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಅವರಿಂದ ಅಭಿನಂದನೆ ಪಡೆದಿದ್ದಾರೆ.
ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ
ಲಿಪಿ ಶಾಸ್ತ್ರ ಅಧ್ಯಯನವನ್ನು ಮಾಡುತ್ತಾ ತಿಗಳಾರಿ ಲಿಪಿಯ ಬಗ್ಗೆ ಹೆಚ್ಚಿನ ಗಮನವನ್ನು ನೀಡಿದರು.ತಿಗಳಾರಿ ಲಿಪಿಯನ್ನು ದಕ್ಷಿಣ ಕನ್ನಡ ಉಡುಪಿಯ ಕೆಲವೆಡೆ ತುಳು ಲಿಪಿ ಎಂದು ಕೂಡ ಕರೆಯುತ್ತಾರೆ. ಈ ತಿಗಳಾರಿ ಲಿಪಿಯಲ್ಲಿ ಹದಿನೈದು ಸಾವಿರದಷ್ಟು ಸಂಸ್ಕೃತ ಭಾಷೆಯ ಕೃತಿಗಳು, ಹದಿನೈದು ಹದಿನಾರು ಕನ್ನಡ ಭಾಷೆಯ ಕೃತಿಗಳು ಹಾಗೂ ಆರು ತುಳು ಭಾಷೆಯ ಕೃತಿಗಳು ರಚಿಸಲ್ಪಟ್ಟಿವೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿರುವ ಲಕ್ಷ್ಮೀಯವರು ತಿಗಳಾರಿ ಲಿಪಿ ಮತ್ತು ತುಳು ಲಿಪಿಗಳ ನಡುವಿನ ಗೊಂದಲವನ್ನು ಪರಿಹರಿಸಿದ್ದಾರೆ.ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ,ಇದು ಮೂಲತಃ ಸಂಸ್ಕೃತ ಭಾಷೆಯನ್ನು ಬರೆಯಲು ತಮಿಳು ಬ್ರಾಹ್ಮಣರು ಬಳಕೆಗೆ ತಂದ ಗ್ರಂಥ ಲಿಪಿಯಿಂದ ಆವಿಷ್ಕಾರ ಗೊಂಡ ಲಿಪಿ .ಇದು ತುಳು ಭಾಷೆಯ ಬರವಣಿಗೆಗಾಗಿ ಬಳಕೆಗೆ ಬಂದ ಲಿಪಿಯಲ್ಲ ,ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಬಳಕೆಗೆ ತಂದ ಲಿಪಿ " ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಇತಿಹಾಸಜ್ಞರು, ಲಿಪಿ ತಜ್ಞರ ಮುಂದೆ ಪ್ರಬಂಧ ಮಂಡಿಸಿ ಅಧಾರ ಸಹಿತವಾಗಿ ಸಿದ್ಧ ಪಡಿಸಿದ್ದಾರೆ. ಆಧಾರ ಸಹಿತವಾಗಿ ಸಾಧಿಸಿದಾಗ ಅದನ್ನು ಅಲ್ಲಗಳೆಯಲು ಸಾಧ್ಯವಾಗದೆ ,ಕೆಲವರು ಹಿಂದಿನಿಂದ ಇವರ ತೇಜೋವಧೆಗೆ ಯತ್ನ ಮಾಡಿದ್ದರೂ ಇವರು ಅದನ್ನು ನಿರ್ಲಕ್ಷ್ಯ ಮಾಡಿದ್ದಾರೆ .ವಿದ್ವಾಂಸರು ಇವರ ಸಿದ್ಧಾಂತವನ್ನು ಒಪ್ಪಿದ್ದಾರೆ.
ಉಚಿತವಾಗಿ ತುಳು ಕಲಿಸುವ ಉಪನ್ಯಾಸಕಿ
ಬೆಂಗಳೂರಿಗೆ ಮಾತ್ರವಲ್ಲ ಇತರರಿಗೂ ಕೂಡ ಅಲ್ಲಲ್ಲಿ ಉಚಿತ ತುಳು ಸಂಭಾಷಣಾ ಶಿಬಿರಗಳನ್ನು ಆಯೋಜಿಸಿ
ತುಳು ಭಾಷೆಯನ್ನು ಕಲಿಸುತ್ತಾ ತನ್ನ ಮಣ್ಣಿನ ಋಣವನ್ನು ತೀರಿಸುವ ಸ್ತುತ್ಯರ್ಹ ಕಾರ್ಯ ಮಾಡುತ್ತಿದ್ದಾರೆ.ವಾಟ್ಸಪ್ ಗ್ರೂಪುಗಳ ಮೂಲಕವೂ ತುಳು ಭಾಷೆಯನ್ನು ಕಲಿಸುತ್ತಾರೆ.
ಕಾದಂಬರಿಯ ಪ್ರಧಾನ ಪಾತ್ರವಾಗಿ ಲಕ್ಷ್ಮೀ
ಭೂತಾರಾಧನೆಯ ಕುರಿತು ಅಪಾರ ಮಾಹಿತಿ ಇರುವ ಕಾರಣದಿಂದ ಕನ್ನಡದ ಪ್ರಸಿದ್ಧ ಕಾದಂಬರಿಗಾರ ಡಾ.ಕೆ ಎನ್ ಗಣೇಶಯ್ಯ ಅವರ "ಬಳ್ಳಿ ಕಾಳಬೆಳ್ಳಿ" ಎಂಬ ಕಾದಂಬರಿಯಲ್ಲಿ ,ತುಳು ಸಂಶೋಧಕಿಯಾಗಿ ಡಾ.ಲಕ್ಷ್ಮೀ ಪೋದ್ದಾರ್ ಎಂಬ ಹೆಸರಿನಲ್ಲಿ ಒಂದು ಮುಖ್ಯ ಪಾತ್ರವಾಗಿ ಬಂದಿದ್ದಾರೆ.ಇದು ಅವರ ನಿರಂತರ ಅಧ್ಯಯನ ಫಲವಾಗಿದೆ
ಪ್ರಸಿದ್ಧ ಬ್ಲಾಗರ್ ಆಗಿ ಲಕ್ಷ್ಮೀ ಜಿ ಪ್ರಸಾದ
ತುಳು ಸಂಸ್ಕೃತಿಯ ಕುರಿತಾದ ಅಧ್ಯಯನದ ಫಲವನ್ನು ದೇಶ ವಿದೇಶಗಳ ಆಸಕ್ತ ಜನರಿಗೆ ತಲುಪಿಸುವ ಸಲುವಾಗಿ ಭೂತಗಳ ಅದ್ಭುತ ಜಗತ್ತು ( http://laxmipras.blogspot.com) ಎಂಬ ಬ್ಲಾಗ್ ಅನ್ನು ತೆರೆದಿದ್ದಾರೆ.ಈ ಬ್ಲಾಗ್ ತುಂಬಾ ಪ್ರಸಿದ್ಧಿ ಪಡೆದಿದ್ದು ದೇಶ ವಿದೇಶಗಳ ಎರಡೂವರೆ ಲಕ್ಷಕ್ಕಿಂತ ಹೆಚ್ಚಿನ ಓದುಗರನ್ನು ಪಡೆದಿದೆ .ಈ ಬ್ಲಾಗ್ ಲಕ್ಷ್ಮೀ ಯವರಿಗೆ ಕನ್ನಡದ ಖ್ಯಾತ ಬ್ಲಾಗರ್ ಎಂಬ ಖ್ಯಾತಿಯನ್ನು ತಂದುಕೊಟ್ಟಿದೆ. ಇದರಲ್ಲಿ ತುಳು ಭಾಷೆ ಸಂಸ್ಕೃತಿ, ಭೂತಾರಾಧನೆಗೆ ಸಂಬಂಧಿಸಿದ ಆರುನೂರಕ್ಕಿಂತ ಹೆಚ್ಚಿನ ಸಂಶೋಧನಾತ್ಮಕ ಬರಹಗಳಿವೆ. ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಲೋಕ ಎಂಬ ಬ್ಲಾಗ್ ಅನ್ನು ಬರೆಯುತ್ತಾರೆ.ಜೊತೆಗೆ ಹವ್ಯಕ ಕನ್ನಡದ ಅಪರೂಪದ ನುಡಿಗಟ್ಟುಗಳನ್ನು ಸಂಗ್ರಹಿಸಿ ವಿಶ್ಲೇಷಿಸಿ ಗಿಳಿ ಬಾಗಿಲು ಎಂಬ ಬ್ಲಾಗ್ ನಲ್ಲಿ ಬರೆಯುತ್ತಾರೆ.( ಈ ಕುರಿತು ಪುನೀತ್
ಸಿದ್ದಕಟ್ಟೆಯವರು ವಿಜಯ ಕರ್ನಾಟಕ ದಲ್ಲಿ ಬರೆದ ಲೇಖನವನ್ನು ಮುಂದೆ ನೀಡಿದೆ)
ಹಲವು ಪ್ರಥಮಗಳ ಒಡತಿ
ಹುಟ್ಟಿದ ಊರು ಕೋಳ್ಯೂರು ಹಾಗೂ ಮದುವೆಯಾಗಿ ಬಂದ ವಿಟ್ಲ ಪಡ್ನೂರು ಗ್ರಾಮಗಳಲ್ಲಿ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದು. ಮೂರು ಸ್ನಾತಕೋತ್ತರ ಪದವಿಗಳೊಂದಿಗೆ
ತುಳು ಸಂಸ್ಕೃತಿ ಕುರಿತು ಅಧ್ಯಯನ ಮಾಡಿ ಎಂ.ಫಿಲ್ ಮತ್ತು ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದ ಮೊದಲ ಮಹಿಳೆ ಮಾತ್ರವಲ್ಲ ಮೊದಲ ವ್ಯಕ್ತಿ ಕೂಡ ಎಂಬ ದಾಖಲೆಯನ್ನು ಹೊಂದಿದ್ದಾರೆ.ಈ ಸಾಧನೆಯನ್ನು ಮಾಡಿದ ಮೊದಲ ಹವ್ಯಕ ಬ್ರಾಹ್ಮಣ ಮಹಿಳೆ ಕೂಡ ಆಗಿದ್ದಾರೆ.
ಹವ್ಯಜ ಕನ್ನಡದ ಮೊದಲ ನಾಟಕಗಾರ್ತಿ
ಲಕ್ಷ್ಮೀಯವರಿಗೆ ಚಿಕ್ಕಂದಿನಿಂದಲೇ ಬರೆಯುವ ಹವ್ಯಾಸವಿತ್ತು.ಇವರು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ರಚಿಸಿದ ' ಸುಬ್ಬಿ ಇಂಗ್ಲಿಷ್ ಕಲ್ತದು'
ಎಂಬ ನಾಟಕ ಮಹಿಳೆ ರಚಿಸಿದ ಮೊದಲ ಹವ್ಯಕ ಕನ್ನಡದ ನಾಟಕವಾಗಿದೆ.ಈ ನಾಟಕ ಇವರಿಗೆ ಹವ್ಯಕ ಕನ್ನಡದ ಮೊದಲ ನಾಟಕಗಾರ್ತಿ ಎಂಬ ಚಾರಿತ್ರಿಕ ಮನ್ನಣೆಯನ್ನು ತಂದು ಕೊಟ್ಟಿದೆ.ಈ ನಾಟಕವನ್ನು ಇವರು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಯುವಜನೋತ್ಸವದಲ್ಲಿ ಸ್ವತಃ ತಂಡ ಕಟ್ಟಿ,ನಿರ್ದೇಶಿಸಿ ಅಭಿನಯಿಸಿ ಮೊದಲ ಬಹುಮಾನವನ್ನು ಗಳಿಸಿದ್ದಾರೆ.ನಾಟಕದ ನಾಯಕ ಸುಬ್ಬನ ಪಾತ್ರ ಮಾಡಿದ ಇವರ ಉತ್ಸಾಹ,ಆತ್ಮವಿಶ್ವಾಸ,ಕ್ರಿಯಾಶೀಲತೆ ಯನ್ನು ನೋಡಿದ ಯುವಜನೋತ್ಸವಕ್ಕೆ ಅತಿಥಿಗಳಾಗಿ ಬಂದಿದ್ದ ವಾಣಿವಿಜಯ ಪ್ರೌಢ ಶಾಲೆಯ ಹಿಂದಿ ಉಪನ್ಯಾಸಕರಾದ ಕವಿ,ಸಾಹಿತಿ ವಿಶ್ವೇಶ್ವರ ಭಟ್ಟರು " ಸುಬ್ಬನ ಪಾತ್ರವನ್ನು ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ" ಎಂದು ಮೂವತ್ತು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು.ಅವರು ಹೇಳಿದ ಮಾತು ಸತ್ಯವಾಗಿ ಇಂದು ಹಳ್ಳಿಯ ಹುಡುಗಿ ಲಕ್ಷ್ಮೀ ಪ್ರಸಿದ್ಧ ತುಳು ಸಂಶೋಧಕರಾಗಿ ಡಾ.ಲಕ್ಷ್ಮೀ ಜಿ ಪ್ರಸಾದರಾಗಿ ನಮ್ಮ ಮುಂದೆ ನಿಂತಿದ್ದಾರೆ.
ಸಮಾಜ ಸೇವಕಿ ಲಕ್ಷ್ಮೀ
ಮೇಲ್ನೋಟಕ್ಕೆ ನಿಷ್ಠುರವಾಗಿ ಕಾಣುವ ನೇರ ಮಾತಿನ ಲಕ್ಷ್ಮೀ ಯವರ ಮನಸ್ಸು ಬಹಳ ಉದಾರವಾದುದು.ಅನೇಕ ಬಡ ಮಕ್ಕಳ ಓದಿಗೆ ಸಹಾಯ ಮಾಡಿದ್ದಾರೆ.ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದಾರೆ. ಮಾನವ ಹಕ್ಕು ಗ್ರಾಹಕ ಹಕ್ಕುಗಳ ಕುರಿತಾಗಿಯೂ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ
ಶ್ರೀಮತಿ ವಿಜಯಾ ಸುಬ್ರಹ್ಮಣ್ಯ
ಗಣೇಶ ಭಟ್
ಪ್ರಕಟಿತ ಸಂಶೋಧನಾ ಲೇಖನಗಳು -ವಿದ್ವತ್ ಪತ್ರಿಕೆಗಳಲ್ಲಿ ಸುಮಾರು ನೂರರಷ್ಟು ಪ್ರಕಟ ವಾಗಿವೆ ,ಇತರೆ ಬರಹಗಳು ಸುಮಾರು ಐದುನೂರರಷ್ಟು ಪ್ರಕಟವಾಗಿವೆ
1 .ತುಳು ಪಾಡ್ದನಗಳಲ್ಲಿ ಸ್ತ್ರೀ ಸಾಧನೆ- ಬೆಂಗಳೂರು ವಿಶ್ವ ವಿದ್ಯಾಲಯ ಜುಲೈ-ಡಿಸೆಂಬರ್2009
2 ಕನ್ನಡ ಮತ್ತು ತುಳು ಭಾಷಾ ಸಾದೃಶ್ಯಗಳು- ಕರ್ನ್ನಾಟಕ ಲೋಚನ ಬಿಎಂ ಶ್ರೀ ಪ್ರತಿಷ್ಠಾನ ಜನವರಿ-ಡಸೆಂಬರ್2010
3 ತುಳು ನಾಡಿನ ನಾಗ ಕೋಲ- ಲೋಚನ ಬಿಎಂ ಶ್ರೀ ಪ್ರತಿಷ್ಠಾನ
4 ಕೆರೆಗೆ ಹಾರ ಹುಳಿಯಾರಿನ ಕೆಂಚವ್ವ ಮತ್ತು ಬಾಲೆ ಮಾಡೆದಿ ಪಾಡ್ದನ- ಕರ್ನ್ನಾಟಕ ಲೋಚನ ಬಿಎಂ ಶ್ರೀ ಪ್ರತಿಷ್ಠಾನ
5 ಕುಲೆ ಭೂತಗಳು -ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಜುಲೈ-ಡಿಸೆಂಬರ್2008 2250/1614
6 ಕೆಲವು ತುಂಡು ಭೂತಗಳು -ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಜನವರಿ-ಜೂನ್2010 2250/1614
7 ವಿಶಿಷ್ಟ ಉಪ ದೈವಗಳು -ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಜನವರಿ-ಜೂನ್2009 2250/1614
8 ಬೈಲ ಮಾರಿ ನಲಿಕೆ -ಜಾನಪದ ಕರ್ನಾಟಕ ಹಂಪಿ ಕನ್ನಡ ವಿಶ್ವ
9 ಅಜ್ಜಿ ಭೂತ ಮತ್ತು ಕೂಜಿಲು= ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ
10 ಉರವ ಮತ್ತು ಎರು ಬಂಟ ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ
11 ಬೆಳ್ಳಾರೆಯ ಅಧ್ಯಯನ ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ
12 ಎಣ್ಮೂರು ಗುತ್ತಿನ ಬಾಲೆ ದೈಯಕ್ಕು ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ
13 ಅಬ್ಬೆ ಜಲಾಯ ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ
14 ತುಳುನಾಡಿನ ನಾಗ ಭೂತಗಳು ಕಣಿಪುರ ಫೆಬ್ರುವರಿ2012
15 ತುಳು ಜನಪದರ ಸಿರಿ ಕೃಷ್ಣ ತುಳುವ ಉಡುಪಿ
16 ತುಳುನಾಡಿನ ನಾಗ ಭೂತಗಳು ಕಣಿಪುರ ಫೆಬ್ರುವರಿ2012
17 ಕಿರಿಯೋಳು ಹಿರಿದಿಮ್ಮವ್ವ ಮತ್ತು ಪರತಿ
18 ವಾಸ್ತವಿಕ ನೆಲೆಯಲ್ಲಿ ತುಂಡು ಭೂತಗಳು ಕನ್ನಡ ನಾಡು ನುಡಿ ಕನ್ನಡ ಸಾಹಿತ್ಯ ಪರಿಷತ್
ಆರು ನೂರಕ್ಕಿಂತ ಹೆಚ್ಚಿನ ಪ್ರಕಟಿತ ಲೇಖನಗಳು-(ಶೈಕ್ಷಣಿಕ/ವೈಚಾರಿಕ/ಸಂಶೋಧನಾತ್ಮಕ)
1 ವಿಜಯ ಕರ್ನಾಟಕ ಅಬ್ಬೆ ಜಲಾಯ 8-10-2011
2 ತುಳು ನಾಡಿನ ನಾಗ ಭೂತಗಳು ಉದಯ ವಾಣಿ 5-8-2011
3 ಕನ್ನಡ ಮಾಧ್ಯಮದಲ್ಲಿ ವಿಜ್ಞಾನದ ಶಿಕ್ಷಣ ವಿಜಯ ಕರ್ನಾಟಕ 25-7-2006
4 ಪ್ರಾಥಮಿಕ ಶಿಕ್ಷಣಕ್ಕೆ ಶಾಲೆ ವಿಜಯ ಕರ್ನಾಟಕ
5 ಅವನತಿಯ ಹಾದಿಯಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ ವಿಜಯ ಕರ್ನಾಟಕ 15-3-2002
6 ಉಪನ್ಯಾಸಕರ ಅರ್ಹತೆಗೊಂದು ಮಾನದಂಡ ವಿಜಯ ಕರ್ನಾಟಕ 19-10-2006
7 ದಾರಿ ಯಾವುದಯ್ಯ ಕಾಯಕದ ಕೈಲಾಸಕ್ಕೆ ವಿಜಯ ಕರ್ನಾಟಕ 11-12002
8 ಪರೀಕ್ಷಗಳು ಬರುತ್ತಿವೆ ವಿಜಯ ಕರ್ನಾಟಕ 1-3-2002
9 ಮಕ್ಕಳ ಗಣತಿ ಶಿಕ್ಷಕರಿಗೆ ಪಚೀತಿ ವಿಜಯ ಕರ್ನಾಟಕ 14-3-2003 10 ಶಿಕ್ಶಕ ಈಗ ಲಾಟರಿ ಮಾರಾಟಗಾರ ವಿಜಯ ಕರ್ನಾಟಕ 27-12-2002
11 ಸ್ತ್ರೀ ಲೋಲುಪನೀತ ಸಿರಿ ಕೃಷ್ಣ ಉದಯ ವಾಣಿ 20-8-2011
12 ನಳ ಭೀಮರನ್ನು ನೋಡಿ ಕಲಿಯಿರಿ ಉದಯ ವಾಣಿ
13 ಸಾಮಾನ್ಯ ಪರೀಕ್ಷೆ ಸಾಮಾನ್ಯರಿಗಲ್ಲ ವಿಜಯ ಕಿರಣ
14 ಮಕ್ಕಳ ಗಣತಿಗೆ ಬಂದಾಗ ವಿಜಯ ಕಿರಣ
15 ಬಗೆಹರಿಯದ ಸಿಇಟಿ ಗೊಂದಲ ವಿಜಯ ಕಿರಣ
16 ಕ್ರಿಕೆಟ್ ಮಾತ್ರ ಕ್ರೀಡೆಯಲ್ಲ ವಿಜಯ ಕಿರಣ
17 ಸಾಧಿಸುವ ಛಲವೊಂದದ್ದರೆ ಸಾಕು ವಿಜಯ ಕಿರಣ
18 ಕೋಲಾರದ ಗಣಿ ಇನ್ನೆಸ್ಟು ದಿನ ನಮ್ಮದು ವಿಜಯ ಕಿರಣ
19 ಸಂದರ್ಶನವೆಂಬ ನಾಟಕದಲ್ಲಿ ವಿಜಯ ಕಿರಣ
20 ಪರೀಕ್ಷಗಳು ಬರುತ್ತಿವೆ ವಿಜಯ ಕಿರಣ
21 ಸ್ತ್ರೀಯರಿಗೇನು ಬೇಕು ವಿಜಯ ಕಿರಣ
22 ಮಾತಿಗೆ ಬಡತನವಿಲ ್ಲ ವಿಜಯ ಕಿರಣ
23 ದೂರದ ಫ್ಲ್ಯಾಟ್ ನುಣ್ಣಗೆ ವಿಜಯ ಕರ್ನಾಟಕ
24 ಮಧ್ಯಮ ವರ್ಗಕ್ಕೆ ನಿತ್ಯವೂ ಮೂರ್ಖರ ದಿನ ವಿಜಯ ಕರ್ನಾಟಕ 1-4-2005
25 ಮಲೇರಿಯ ನಿರ್ಮೂಲನೆ ವಿಜಯ ಕಿರಣ
26 ಜಾಣ ಕಿವುಡು ವಿಜಯ ಕರ್ನಾಟಕ
27 ಶಿಕ್ಷಕರ ಜವಾಬ್ದಾರಿ ವಿಜಯ ಕರ್ನಾಟಕ
28 ಹೊರಲಾರದ ಮಲ್ಲಿಗೆಯ ಹೊರೆ ಹೊಸ ದಿಗಂತ
29 ದಡವರಿಯದ ಅಲೆಗಳು ಹೊಸ ದಿಗಂತ
30 ನಿಮಗೆಂಥ ಶಿÀಕ್ಷಕರು ಬೇಕು? ಹೊಸ ದಿಗಂತ 5-9-2001
31 ತುಳುವರ ಬಲೀಂದ್ರ ಜ್ಞಾನ ಪಯಸ್ವಿನಿ 2-1-2011
32 ಪಾಡ್ದನಗಳ ಸ್ವರೂಪ ಜ್ಞಾನ ಪಯಸ್ವಿನಿ 16-11-211
33 ಜಾನಪದ ಪರಿಕಲ್ಪನೆ ಜ್ಞಾನ ಪಯಸ್ವಿನಿ 1-12-2011
34 ತುಳು ಪಾಡ್ದನಗಳಲ್ಲಿ ಸ್ತ್ರೀ ಜ್ಞಾನ ಪಯಸ್ವಿನಿ 7-12-2011
35 ಬಾಲ ಜೇವು ಮಾಣಿಗ ಜ್ಞಾನ ಪಯಸ್ವಿನಿ 14-12-2011
36 ಬಾಲೆ ಮಧುರಗೆ ಜ್ಞಾನ ಪಯಸ್ವಿನಿ 21-12-2011
37 ತುಳುವ ಸಂಸ್ಕಾರಗಳು ಜ್ಞಾನ ಪಯಸ್ವಿನಿ 6-12012
38 ಪೆರುವಾಜೆಯಲ್ಲಿ ಅಪರೂಪದ ಬುದ್ಧನ ಮೂರ್ತ ಪತ್ತೆ ಪ್ರಜಾವಾಣಿ 30-3-2012
39 ಪಾಜಪಳ್ಳ ಕಲಾವಿದರು ಜ್ಞಾನ ಪಯಸ್ವಿನಿ 20-2-2012
40 ಪೆರುವಾಜೆಯಲ್ಲಿ ಬುದ್ಧನ ಮೂರ್ತಿಪತ್ತೆ ಜ್ಞಾನ ಪಯಸ್ವಿನಿ 13-1-2012
41 ಶಿಕ್ಷಕರಿಂದೇನು ಮಾಡಲು ಸಾಧ್ಯ? ಸುಳ್ಯ ಸುದ್ದಿ ಬಿಡುಗಡೆ 3-9-2012
42 ನಮ್ಮ ಮಕ್ಕಳನ್ನು ರಕ್ಷಸಿ ಕೊಳ್ಳೋಣ ಸುಳ್ಯ ಸುದ್ದಿ ಬಿಡುಗಡೆ 15-10-2012
43 ಬೆಳ್ಳಾರೆಯ ಸಾಂಸ್ಕøತಿಕ ಅಧ್ಯಯನ ಸುಳ್ಯ ಸುದ್ದಿ ಬಿಡುಗಡೆ 15-8-2011
44 ಕೆಮ್ಮಲೆಯ ನಾಗ ಬ್ರಹ್ಮ ಸುಳ್ಯ ಸುದ್ದಿ ಬಿಡುಗಡೆ 25-7-2011
45 ದ್ವಿಚಕ್ರ ವಾಹನ ಮಹಿಳಗೆ ವರದಾನ ಮಂಗಳಾ ವಾರ ಪತ್ರಿಕೆ
46 ಸಂಸ್ಕøತಿಗೆ ಆಶಾ ಕಿರಣ ಮಂಗಳಾ ವಾರ ಪತ್ರಿಕೆ
47 ಸಂಶೋಧನೆಯ ಹೊಸ ಸಾಧ್ಯತೆಗಳು ಪ್ರಣವ ಸ್ಮøತಿ
48 ಅನೇಕ ದೇವತಾ ತತ್ವದಿಂದ ಏಕ ದೇವತಾ ತತ್ವ ತ್ರಿಮೂರ್ತಿ ಕೌಸ್ತುಭ
49 ಕುಲೆ ಭೂತಗಳು ¸ಸ್ಮರಣ ಸಂಚಿಕೆ ದೇವರ ಕಾನ ಶಾಲೆ
50 ಕನ್ನಡ ತುಳು ಭಾಷಾ ಸಾದೃಶ್ಯಗಳು ¸ಸ್ಮರಣ ಸಂಚಿಕೆ ದೇ ವರ ಕಾನ ಶಾಲೆ
51 ಹೊರಲಾರದ ಮಲ್ಲಿಗೆ ಹೊಸ ದಿಗಂತ
52 ಸಂಸ್ಕøತಾಧ್ಯಯನದ ಪ್ರಸ್ತುತತೆ ಸ್ಮರಣ ಸಂಚಿಕೆ ಸಂಸ್ಕøತ ಸಂಘ ಮಂಗಳೂರು
53 ಯುಜಿಸಿ ನಿಯಮ ಲೆಕ್ಕಕ್ಕ್ಕಿಲ್ಲ ಏತಕ್ಕಿಲ್ಲ ಕ್ರಮ ,ಕನ್ನಡ ಪ್ರಭ
54 ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆಯ ಬೆಲೆ ಎಷ್ಟು ?ಕನ್ನಡ ಪ್ರಭ
55 ಬಿಗಿ ನಿಯಮಗಳಿರದೆ ಸಂಶೋಧನೆಗಿರದು ಬೆಲೆ ಕನ್ನಡ ಪ್ರಭ
56 ಗಂಡನ ಚಿತೆಯೊಂದಿಗೆ ಬೆಂದು ಹೋದವರೆಷ್ಟೋ ಕನ್ನಡ ಪ್ರಭ
57 ಭಾರತದ ಜನಪದರಲ್ಲಿ ಲೈಂಗಿಕ ಶಿಕ್ಷಣವಿತ್ತೆ ಕನ್ನಡ ಪ್ರಭ
58 ಪ್ಲಾಸ್ಟಿಕ್ ಎಂಬ ಬಹುವಿಧ ಮಾರಿ ನಿಷೇಧ ವೆ ಸರಿಯಾದ ದಾರಿ ಕನ್ನಡ ಪ್ರಭ
59 ಉಪನ್ಯಾಸಕರ ಬಿಎಡ್ ಬವಣೆ ಕನ್ನಡ ಪ್ರಭ
60 ದುಡ್ಡು ಗಳಿಸುವ ಮಾರ್ಗದಲ್ಲಿ ರೋಗಿಗಳ ಕಾಳಜಿಯೆಲ್ಲಿಕನ್ನಡ ಪ್ರಭ
61 ದಡವರಿಯದ ಮಕ್ಕಳಿಗೆ ಬೇಕು ಮಾರ್ಗ ದರ್ಶನ ಕನ್ನಡ ಪ್ರಭ
62 ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ ಕನ್ನಡ ಪ್ರಭ
63 ಫೇಸ್ ಬುಕ್ ಗಳಲ್ಲಿ ಹೆಣ್ಣುಮಕ್ಕಳ ಫೇಸ್ ಗಳು ಉದಯವಾಣಿ
64 ಹದಗೆಟ್ಟ ಶಿಕ್ಷಣದ ಮನೆಯಲ್ಲಿ ವಿದ್ಯಾರ್ಥಿಯ ಬಾಳು ಹಸನಾದೀತೇ ,ಕನ್ನಡ ಪ್ರಭ
65 ಪಾಠದಲ್ಲಿ ರುವುದನ್ನು ಬೋಧಿಸುವುದಷ್ಟೇ ಶಿಕ್ಷಕರ ಕೆಲಸವೇ ?,ಕನ್ನಡ ಪ್ರಭ
66 ಚರಿತ್ರೆಯ ಗರ್ಭ :ಬೆಳ್ಳಾರೆಯ ಇತಿಹಾಸ ತಿಳಿಯುವುದೇ ?
67 ಸರ್ಪರಾಧನೆ ,ಬಾಕುಡರ ಕುಲ ದೈವ -ಕನ್ನಡ ಪ್ರಭ
68 ಕೊನೆಯ ಓಟ ?ಕಂಬಳದ ಕಳದಲ್ಲಿ ಕಳವಳ -ಕನ್ನಡ ಪ್ರಭ
69 ಮುಂದೆ ಬೆಟ್ಟವಾಗಬಹುದು ಈ ಪುಟ್ಟ ವಿಚಾರಗಳು - ಕನ್ನಡ ಪ್ರಭ
69 ಕನ್ನಡೊಡು ನುಡಿಕೊರ್ಪುನ ಕನ್ನಡ ಯಾನೆ ಪುರುಷ ಭೂತ
70 ಅತಿಕಾರೆ ಬುಳೆನ್ ತುಳುನಾಡುಗ್ ಕೊನೊಂದು ಬತ್ತಿನ ಬೀರೆರ್ :ಕಾನದ- ಕಟದೆರ್
71 ಸ್ವಾಮಿ ನಿಷ್ಠೆ ಮೆರೆಯಿನ ಪರವ ಭೂತ
72 ಕಲ್ಲೆಂಬಿ ಬೂಡುದ ಒರು ಬಾಣಿಯೆತ್ತಿ –ನೆಲ್ಲೂರಾಯ ದೈವೊಲು
73 ದಾರು –ಕುಂದಯ
74 ಗುಟ್ಟು ಬುಡ್ದು ಕೊರಂದಿನ ಅಬ್ಬೆ ಜಲಾಯ ಭೂತ-ವಿಜಯಕರ್ನಾಟಕ
75 ನಂಬಿಗೆದ ಕಲೊಟ್ಟು ಅರಬ್ಬಿ ಭೂತ ಚೀನೀ ದೈವ-ವಿಜಯಕರ್ನಾಟಕ
76 ಪಗೆಕ್ ಬಲಿಯಾಯಳು ಮರ್ಲು ಮಯ್ಯೊಂದಿ-ವಿಜಯಕರ್ನಾಟಕ
77 ಅಜ್ಜಿ ಭೂತ ಬುಕ್ಕ ಕೂಜಿಲು-ವಿಜಯಕರ್ನಾಟಕ 78 ಉರವ ಬುಕ್ಕ ಎರು ಬಂಟ-ವಿಜಯಕರ್ನಾಟಕ
ಇತ್ಯಾದಿ
ಕನ್ನಡವನ್ನು ಆಯ್ಕೆ ಮಾಡಿ
ReplyDeleteಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ... :pray:
ಕನ್ನಡವನ್ನು ಉಳಿಸಿ, ಬೆಳೆಸಿ..
..
https://Www.spn3187.blogspot.in
(already site viewed 1,33,487+)
and
https://T.me/spn3187
(already joined to this group 487+)
Share your friends & family also subcrib (join)
ಧನ್ಯವಾದಗಳು
Delete