Tuesday 12 December 2023

ಕರಾವಳಿಯ ಸಾವಿರದೊಂದು ದೈವಗಳು: ಹೆಮ್ಮೆಯ ಓದುಗರಾದ ದಿನೇಶ್ ಎಂ ಕಾರ್ಕಳ


 🚩🚩🚩ಮಾಯ ಮತ್ತು ಜೋಗದ ಬೆಳಕಿನಲ್ಲಿ.🚩🚩🚩

   🚩🚩🚩🚩ಕರಾವಳಿಯ ಸಾವಿರದೊಂದು ದೈವಗಳು.🚩🚩🚩🚩

        ಡಾ.ಲಕ್ಷ್ಮೀ ಜಿ.ಪ್ರಸಾದ್ ರವರ ಲೇಖನದಲ್ಲಿ   ಕೊಡಗು ಸೇರಿದಂತೆ ಕಾರವಾರದಿಂದ ಕೊಟ್ಟಾಯಂವರೆಗಿನ ತುಳು ˌಕನ್ನಡ ˌಮಲಯಾಳ ಪರಿಸರದ ಒಂದು ಸಾವಿರದ ಇನ್ನೂರ ಐವತ್ತಮೂರು ದೈವಗಳ ಮಾಹಿತಿಯುಳ್ಳ ಗ್ರಂಥ ಇಂದು ನನ್ನ ಕೈ ಸೇರಿದೆ.😍🎊🎊🎉- ದಿನೇಶ್ ಎಂ ಕಾರ್ಕಳ‌

Monday 11 December 2023

ಕರಾವಳಿಯ ಸಾವಿರದೊಂದು ದೈವಗಳು : ಹೆಮ್ಮೆಯ ಓದುಗರಾದ ಗುಣಾಜೆ ರಾಮಚಂದ್ರ ಭಟ್


 ನಮ್ಮ ಹೆಮ್ಮೆಯ ಓದುಗ ಬಂಧುಗಳು

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 

ನಮಗೆ ನಿರಂತರವಾಗಿ ಬೆಂಬಲ ನೀಡುತ್ತಿರುವ ಹಿರಿಯ ವಿದ್ವಾಂಸರೂ ಕವಿ ಸಾಹಿತಿಗಳೂ ಆಗಿರುವ ನಿವೃತ್ತ ಕನ್ನಡ ಅಧ್ಯಾಪಕರಾದ ರಾಮಚಂದ್ರ ಭಟ್ ಗುಣಾಜೆ

ಕರಾವಳಿಯ ಸಾವಿರದೊಂದು ದೈವಗಳು : ಪವರ್ ಟಿವಿಯ ಪ್ರದಾನ ಸಂಪಾದಕರಾದ ಚಂದನ್ ಶರಗಮಾರೊಂದಿಗೆ


 ಯಾರೇನೇ ಹೇಳಿದರೂ ಲೆಕ್ಕಿಸದೇ ಅಭಿಮಾನದಿಂದ ಕರೆದು ಪವರ್ ಟಿವಿಯಲ್ಲಿ ದೈವಾರಾಧನೆ ಕುರಿತಾದ ಚರ್ಚೆಗೆ ಆಹ್ವಾನಿಸಿ ಪ್ರಸಾರ ಮಾಡಿರುವ ಚಂದನ್ ಶರ್ಮಾರಿಗೆ ಕೃತಜ್ಞತೆ ಗಳು 

ಕರಾವಳಿಯ ಸಾವಿರದೊಂದು ದೈವಗಳು : ನಮ್ಮ ಹೆಮ್ನೆಯ ಓದುಗರಾದ ಅನಂತ ಪದ್ಮನಾಭ ಮೂಡತ್ತಾಯ


 

ಕರಾವಳಿಯ ಸಾವಿರದೊಂದು ದೈವಗಳು : ದಯಾನಂದ ಸ್ವಾಮಿ


 

ಕರಾವಳಿಯ ಜಾನಪದ  ಅಧ್ಯಯನ ಕ್ಷೇತ್ರದಲ್ಲೊಂದು ಮೈಲುಗಲ್ಲು

- ದಯಾನಂದ ಸ್ವಾಮಿ 

ಡಾ.ಲಕ್ಷ್ಮೀ ಜಿ ಪ್ರಸಾದರು ವೃತ್ತಿಯಲ್ಲಿ ದಕ್ಷ ಸಮರ್ಥ  ಉಪನ್ಯಾಸಕರಾಗಿದ್ದುಕೊಂಡು  ಪ್ರವೃತ್ತಿಯಲ್ಲಿ ಸಂಶೋಧಕರು ಹಾಗೂ  ಲೇಖಕರು  ಆಗಿದ್ದಾರೆ  .ಇವರು  ಸರಳತೆ ,ಕ್ರಿಯಾಶೀಲತೆ ಹಾಗು ಕವಿ ಹೃದಯದ ಕಾಳಜಿ ಹೊಂದಿದ್ದು  ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಭರವಸೆಯ ಬರಹಗಾರರಾಗಿದ್ದಾರೆ

 ಕನ್ನಡ ,ಹಿಂದಿ ಮತ್ತು  ಸಂಸ್ಕೃತ ಈ ಮೂರು ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ರ‌್ಯಾಂಕ್ ಹಾಗೂ ಚಿನ್ನದ ಪದಕಗಳೊಂದಿಗೆ  ಪಡೆದು ,ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ ಎಂಫಿಲ್ ಮತ್ತು ಎರಡು ಡಾಕ್ಟರೇಟ್ ಪದವಿಗಳನ್ನು ಗಳಿಸಿಕೊಂಡ ಪ್ರತಿಭಾನ್ವಿತೆಯಾಗಿದ್ದಾರೆ

 

ಡಾ.ಲಕ್ಷ್ಮೀ ಜಿ ಪ್ರಸಾದರ ಮಾಯ ಮತ್ತು ಜೋಗದ ಬೆಳಕಿನಲ್ಲಿ "ಕರಾವಳಿಯ ಸಾವಿರದೊಂದು ದೈವಗಳು" ಎಂಬ  ಒಂದು ಸಾವಿರದ ಇನ್ನೂರ ಐವತ್ತೊಂದು ದೈವಗಳ ಮಾಹಿತಿ ಇರುವ , ಸಾವಿರಕ್ಕಿಂತ ಹೆಚ್ಚಿನ ಪುಟಗಳಿರುವ ಈ ಬೃಹತ್ ಗ್ರಂಥವು ಕನ್ನಡ-ತುಳು ಸಂಶೋಧನಾ ಕ್ಷೇತ್ರದಲ್ಲಿ ಅಪರೂಪದಲ್ಲಿ ಅಪರೂಪದ್ದಾಗಿದೆ

ಕನ್ನಡ ತುಳು ಮಲೆಯಾಳ ಕೊಡವ ಪರಿಸರದ ವಿವಿಧ ದೈವಗಳ ಸಮಗ್ರ ಚರಿತ್ರೆಯನ್ನು  ಅಧ್ಯಯನ ಮಾಡಿ ಈ ಗ್ರಂಥದಲ್ಲಿ  ಅತ್ಯಂತ ಮೌಲಿಕವಾಗಿ ಬರೆದಿದ್ದಾರೆ .ಇಲ್ಲಿ ತಿಮ್ಮಪ್ಪ ನಾಯಕ ಬಸಪ್ಪ ನಾಯಕ ಸೇರಿದಂತೆ  ಅನೇಕ ಐತಿಹಾಸಿಕ ಪುರುಷರು ದೈವತ್ವ ಪಡೆದು ಆರಾಧಿಸಲ್ಪಡುವ ಬಗ್ಗೆ ಸಚಿತ್ರ ಮಾಹಿತಿ ನೀಡಿದ್ದಾರೆ

 

  ಕರ್ನಾಟಕ ಪಶ್ಚಿಮ‌ ಕರಾವಳಿಯಿಂದ ಕೇರಳದ ಕೊಟ್ಟಾಯಂ ತನಕ ,ಕೊಡಗು ಸೇರಿದಂತೆ  ದೈವಗಳ ಚರಿತ್ರೆಯನ್ನು  ಸುದೀರ್ಘ ಇಪ್ಪತ್ತೊಂದು ವರ್ಷಗಳ ಕಾಲ ಕ್ಷೇತ್ರ ಕಾರ್ಯ ಆಧರಿತವಾಗಿ ಸಮಗ್ರ  ಸಂಶೋಧನೆ  ಮಾಡಿ ಈ ಗ್ರಂಥವನ್ನು ಡಾ.ಲಕ್ಷ್ಮೀಯವರು   ರಚಿಸಿದ್ದು  ಇದು ಸೂಕ್ತ ವಿಶ್ಲೇಷಣೆಗಳೊಂದಿಗೆ   1253 ದೈವಗಳ ಮಾಹಿತಿಯನ್ನು   ಹೊಂದಿರುವ ದೈವಾರಾಧನೆಯ   ವಿಶ್ವಕೋಶ  ಎನ್ನಬಹುದಾದ ಗ್ರಂಥವಾಗಿದೆ.. ದೈವಾರಾಧನೆಯ ಮಾಹಿತಿ ಕಣಜವಾಗಿದೆ

ಇದೊಂದು  ಕರಾವಳಿಯ ಜಾನಪದ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ಒಂದು ಮೈಲುಗಲ್ಲಾಗಿದೆ

ಇಂಥಹ ಅಪಾರ ಪರಿಶ್ರಮ ಬೇಡುವ ಹಾಗೂ ಸಾಕಷ್ಟು ಖರ್ಚು ವೆಚ್ಚಗಳಿರುವ ಅಧ್ಯಯನವನ್ನು ಯಾವುದೇ ವಿಶ್ವವಿದ್ಯಾಲಯ ಅಕಾಡೆಮಿ ಸಂಘ ಸಂಸ್ಥೆಗಳ ಅನುದಾನವಿಲ್ಲದೆ  ತನ್ನ ವೇತನವನ್ನು ಇದಕ್ಕಾಗಿ ವ್ಯಯ ಮಾಡಿ  ಸ್ವತಃ ಪ್ರಕಟಿಸುತ್ತಿರುವ ಡಾ.ಲಕ್ಷ್ಮೀ ಜಿ ಪ್ರಸಾದರಿಗೆ  ಪೂರ್ಣ ಯಶಸ್ಸು ಸಿಗಲಿ ,ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹಾರೈಸುತ್ತೇನೆ

                           ದಯಾನಂದ ಸ್ವಾಮಿ ಬಿಎಮ್ ಎಸ್

                          ಪ್ರಾಂಶುಪಾಲರು ,ಸರ್ಕಾರಿ ಪಿಯು ಕಾಲೇಜು ,ಬ್ಯಾಟರಾಯನಪುರ ಬೆಂಗಳೂರು 


ಡಾ. ಲಕ್ಷ್ಮೀ ಜಿ. ಪ್ರಸಾದ್ ಇವರು ವೃತ್ತಿಯಿಂದ ಸಮರ್ಥ ಉಪನ್ಯಾಸಕರು.ವಿದ್ಯಾರ್ಥಿಗಳ ಮೇಲೆ ಅವರ ವೃತ್ತಿಪರ ಕಾಳಜಿ ಅಮೋಘ. ಸನ್ಮಾನಗಳಿಂದ ಬರುವ ಹಣವನ್ನು ತಮ್ಮ ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ ವಿತರಿಸುವ ಅವರ ಪ್ರಬುದ್ಧತೆ ಅದ್ಭುತವಾದುದು. ಪ್ರವೃತ್ತಿಯಲ್ಲಿ ಸ್ವತಃ ಸಂಶೋಧನೆ ಹಾಗೂ ಬರಹಗಳಿಂದ ಜನಮನಗಳಲ್ಲಿ ತಮ್ಮ ಅಸಾಧಾರಣ ಪ್ರತಿಭೆ, ಪಾಂಡಿತ್ಯಛಾಪು ಮೂಡಿಸಿದ್ದಾರೆ. ಪ್ರಸ್ತುತ ಅವರ "ಕರಾವಳಿಯ ಸಾವಿರದೊಂದು ದೈವಗಳು" ಒಂದು ಅದ್ಭುತ ಸಾಧನೆ.ಅವರಿಗೆ ನನ್ನ ಶುಭಾಶಯಗಳು.


 ಶ್ರೀಯುತ ದಯಾನಂದ ಸ್ವಾಮಿ ,ಪ್ರಾಂಶುಪಾಲರು ಸರ್ಕಾರಿ ಪಿಯು ಕಾಲೇಜು, ಬ್ಯಾಟರಾಯನಪುರ ಬೆಂಗಳೂರು 

ಕರಾವಳಿಯ ಸಾವಿರದೊಂದು ದೈವಗಳು : ಉಪನ್ಯಾಸಕಿ ಮಂಜುಳಾ ಭಾರದ್ವಾಜ್ ಅವರೊಂದಿಗೆ


ಈ ಪುಸ್ತಕದ ರೂವಾರಿ ನನ್ನ ಸಹೋದ್ಯೋಗಿ....ಅವರ ಅವಿರತ ಪರಿಶ್ರಮದ ಫಲವಿದು.ಈ ಪುಸ್ತಕವು ದೈವಗಳ ಬಗೆಗಿನ encyclopaedia ಆಗಿದೆ.ಇವರ ಸಾಹಿತ್ಯ ಸೇವೆ ಹೀಗೆ ಮುಂದುವರೆದು ವಿಶ್ವದಾದ್ಯಂತ ದೈವಗಳ ಕಂಪು ಪಸರಿಸಲಿ ಮತ್ತು ಕನ್ನಡದ ಕ��ಪು ಮೊಳಗಲಿ...ಶುಭವಾಗಲಿ ಗೆಳತಿ.- ಮಂಜುಳಾ ಭಾರದ್ವಾಜ್ ,ಗಣಿತ ಉಪನ್ಯಾಸಕರು ಸರ್ಕಾರಿ ಪಿಯು ಕಾಲೇಜು ಬ್ಯಾಟರಾಯನಪುರ ಬೆಂಗಳೂರು 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ನೆಯ ಓದುಗರಾದ ಯೋಗೀಶ್ ರಾವ್ ಚಿಗುರುಪಾದೆ


 

ವೃತ್ತಿಯಲ್ಲಿ ದಕ್ಷ ಶಿಕ್ಷಕರಾಗಿರುವ ಯಕ್ಷಗಾನ ಕಲಾವಿದರೂ ವಿದ್ವಾಂಸರೂ ಅಗಿರುವ ನಮ್ಮ ಊರಿನ ಆತ್ಮೀಯರಾದ ಯೋಗೀಶ ರಾವ್ ಚಿಗುರುಪಾದೆ ಅವರ ಅಭಿಪ್ರಾಯ ಇಲ್ಲಿದೆ  

ಡಾ.ಲಕ್ಷ್ಮೀ.ಜಿ.ಪ್ರಸಾದ್ ಅವರ ಕರಾವಳಿಯ ಸಾವಿರದೊಂದು ದೈವಗಳು ಕೃತಿ ದೈವಗಳಬಗ್ಗೆ ಅಧ್ಯಯನಾಸಕ್ತರಿಗೆ ಮಹತ್ವದ ಕೃತಿ.

ಸಾವಿರದ ಇನ್ನೂರ ಇಪ್ಪತ್ತೆಂಟು ದೈವಗಳ ಮಾಹಿತಿಯುಳ್ಳ ಹೊತ್ತಗೆ. ಅಧ್ಯಯನಾಸಕ್ತರು ಈ ಕೃತಿಯ ಬೆಳಕಿನ ಆಧಾರದಲ್ಲಿ ಇನ್ನಷ್ಟು ಅಧ್ಯಯನ ಕೈ ಗೊಳ್ಳಬಹುದು. ಓರ್ವ ಮಹಿಳೆ ಸ್ವತಹ ಕ್ಷೇತ್ರ ಕಾರ್ಯಮಾಡಿ ಇಷ್ಟು ಮಾಹಿತಿಯನ್ನು ಕಲೆಹಾಕಿದ್ದು ಅತೀ ಸವಾಲಿನ ಕಾರ್ಯ . ಪ್ರಶಂಸಾರ್ಹ. ಒಂದು ಎರಡು ದಿನದಲ್ಲಿ ಓದಿ ಮುಗಿಸಬಹುದಾದ ಕೃತಿ ಇದಲ್ಲ. ಪ್ರತೀ ಮನೆಯ ಪುಸ್ತಕ ಭಂಡಾರದಲ್ಲಿ ಮಾತ್ರವಲ್ಲ ವಿದ್ಯಾಸಂಸ್ಥೆಗಳ ಪುಸ್ತಕ ಭಂಡಾರದಲ್ಲಿ ಕಾಪಿಡಬೇಕಾದ ಪುಸ್ತಕ. ಅಗತ್ಯಕ್ಕನುಗುಣವಾಗಿ ಮಾಹಿತಿ ಬಳಸಿ ಕೊಳ್ಳಬಹುದು. ಒಂದರ್ಥದಲ್ಲಿ ದೈವಗಳ ಅಧ್ಯಯನಕ್ಕೆ ಇದೊಂದು ವಿಶ್ವಕೋಶ ವಿದ್ದಹಾಗೆ. ಮುಂದಿನ ದೈವಾರಾಧನೆಯ ಅಧ್ಯಯನ ಕಾರರು ಈ ಗ್ರಂಥವನ್ನು ಬಳಸಿಕೊಳ್ಳದಿದ್ದಲ್ಲಿ ಅಧ್ಯಯನ ಅಪೂರ್ಣವೇ ಸರಿ. ಕೃತಿ ಕಾರರರಿಗೆ ಅಭಿನಂದನೆಗಳು.- ಯೋಗೀಸ್ ರಾವ್ ಚಿಗುರುಪಾದೆ