Monday, 11 December 2023

ಕರಾವಳಿಯ ಸಾವಿರದೊಂದು ದೈವಗಳು : ದಯಾನಂದ ಸ್ವಾಮಿ


 

ಕರಾವಳಿಯ ಜಾನಪದ  ಅಧ್ಯಯನ ಕ್ಷೇತ್ರದಲ್ಲೊಂದು ಮೈಲುಗಲ್ಲು

- ದಯಾನಂದ ಸ್ವಾಮಿ 

ಡಾ.ಲಕ್ಷ್ಮೀ ಜಿ ಪ್ರಸಾದರು ವೃತ್ತಿಯಲ್ಲಿ ದಕ್ಷ ಸಮರ್ಥ  ಉಪನ್ಯಾಸಕರಾಗಿದ್ದುಕೊಂಡು  ಪ್ರವೃತ್ತಿಯಲ್ಲಿ ಸಂಶೋಧಕರು ಹಾಗೂ  ಲೇಖಕರು  ಆಗಿದ್ದಾರೆ  .ಇವರು  ಸರಳತೆ ,ಕ್ರಿಯಾಶೀಲತೆ ಹಾಗು ಕವಿ ಹೃದಯದ ಕಾಳಜಿ ಹೊಂದಿದ್ದು  ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಭರವಸೆಯ ಬರಹಗಾರರಾಗಿದ್ದಾರೆ

 ಕನ್ನಡ ,ಹಿಂದಿ ಮತ್ತು  ಸಂಸ್ಕೃತ ಈ ಮೂರು ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ರ‌್ಯಾಂಕ್ ಹಾಗೂ ಚಿನ್ನದ ಪದಕಗಳೊಂದಿಗೆ  ಪಡೆದು ,ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ ಎಂಫಿಲ್ ಮತ್ತು ಎರಡು ಡಾಕ್ಟರೇಟ್ ಪದವಿಗಳನ್ನು ಗಳಿಸಿಕೊಂಡ ಪ್ರತಿಭಾನ್ವಿತೆಯಾಗಿದ್ದಾರೆ

 

ಡಾ.ಲಕ್ಷ್ಮೀ ಜಿ ಪ್ರಸಾದರ ಮಾಯ ಮತ್ತು ಜೋಗದ ಬೆಳಕಿನಲ್ಲಿ "ಕರಾವಳಿಯ ಸಾವಿರದೊಂದು ದೈವಗಳು" ಎಂಬ  ಒಂದು ಸಾವಿರದ ಇನ್ನೂರ ಐವತ್ತೊಂದು ದೈವಗಳ ಮಾಹಿತಿ ಇರುವ , ಸಾವಿರಕ್ಕಿಂತ ಹೆಚ್ಚಿನ ಪುಟಗಳಿರುವ ಈ ಬೃಹತ್ ಗ್ರಂಥವು ಕನ್ನಡ-ತುಳು ಸಂಶೋಧನಾ ಕ್ಷೇತ್ರದಲ್ಲಿ ಅಪರೂಪದಲ್ಲಿ ಅಪರೂಪದ್ದಾಗಿದೆ

ಕನ್ನಡ ತುಳು ಮಲೆಯಾಳ ಕೊಡವ ಪರಿಸರದ ವಿವಿಧ ದೈವಗಳ ಸಮಗ್ರ ಚರಿತ್ರೆಯನ್ನು  ಅಧ್ಯಯನ ಮಾಡಿ ಈ ಗ್ರಂಥದಲ್ಲಿ  ಅತ್ಯಂತ ಮೌಲಿಕವಾಗಿ ಬರೆದಿದ್ದಾರೆ .ಇಲ್ಲಿ ತಿಮ್ಮಪ್ಪ ನಾಯಕ ಬಸಪ್ಪ ನಾಯಕ ಸೇರಿದಂತೆ  ಅನೇಕ ಐತಿಹಾಸಿಕ ಪುರುಷರು ದೈವತ್ವ ಪಡೆದು ಆರಾಧಿಸಲ್ಪಡುವ ಬಗ್ಗೆ ಸಚಿತ್ರ ಮಾಹಿತಿ ನೀಡಿದ್ದಾರೆ

 

  ಕರ್ನಾಟಕ ಪಶ್ಚಿಮ‌ ಕರಾವಳಿಯಿಂದ ಕೇರಳದ ಕೊಟ್ಟಾಯಂ ತನಕ ,ಕೊಡಗು ಸೇರಿದಂತೆ  ದೈವಗಳ ಚರಿತ್ರೆಯನ್ನು  ಸುದೀರ್ಘ ಇಪ್ಪತ್ತೊಂದು ವರ್ಷಗಳ ಕಾಲ ಕ್ಷೇತ್ರ ಕಾರ್ಯ ಆಧರಿತವಾಗಿ ಸಮಗ್ರ  ಸಂಶೋಧನೆ  ಮಾಡಿ ಈ ಗ್ರಂಥವನ್ನು ಡಾ.ಲಕ್ಷ್ಮೀಯವರು   ರಚಿಸಿದ್ದು  ಇದು ಸೂಕ್ತ ವಿಶ್ಲೇಷಣೆಗಳೊಂದಿಗೆ   1253 ದೈವಗಳ ಮಾಹಿತಿಯನ್ನು   ಹೊಂದಿರುವ ದೈವಾರಾಧನೆಯ   ವಿಶ್ವಕೋಶ  ಎನ್ನಬಹುದಾದ ಗ್ರಂಥವಾಗಿದೆ.. ದೈವಾರಾಧನೆಯ ಮಾಹಿತಿ ಕಣಜವಾಗಿದೆ

ಇದೊಂದು  ಕರಾವಳಿಯ ಜಾನಪದ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ಒಂದು ಮೈಲುಗಲ್ಲಾಗಿದೆ

ಇಂಥಹ ಅಪಾರ ಪರಿಶ್ರಮ ಬೇಡುವ ಹಾಗೂ ಸಾಕಷ್ಟು ಖರ್ಚು ವೆಚ್ಚಗಳಿರುವ ಅಧ್ಯಯನವನ್ನು ಯಾವುದೇ ವಿಶ್ವವಿದ್ಯಾಲಯ ಅಕಾಡೆಮಿ ಸಂಘ ಸಂಸ್ಥೆಗಳ ಅನುದಾನವಿಲ್ಲದೆ  ತನ್ನ ವೇತನವನ್ನು ಇದಕ್ಕಾಗಿ ವ್ಯಯ ಮಾಡಿ  ಸ್ವತಃ ಪ್ರಕಟಿಸುತ್ತಿರುವ ಡಾ.ಲಕ್ಷ್ಮೀ ಜಿ ಪ್ರಸಾದರಿಗೆ  ಪೂರ್ಣ ಯಶಸ್ಸು ಸಿಗಲಿ ,ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹಾರೈಸುತ್ತೇನೆ

                           ದಯಾನಂದ ಸ್ವಾಮಿ ಬಿಎಮ್ ಎಸ್

                          ಪ್ರಾಂಶುಪಾಲರು ,ಸರ್ಕಾರಿ ಪಿಯು ಕಾಲೇಜು ,ಬ್ಯಾಟರಾಯನಪುರ ಬೆಂಗಳೂರು 


ಡಾ. ಲಕ್ಷ್ಮೀ ಜಿ. ಪ್ರಸಾದ್ ಇವರು ವೃತ್ತಿಯಿಂದ ಸಮರ್ಥ ಉಪನ್ಯಾಸಕರು.ವಿದ್ಯಾರ್ಥಿಗಳ ಮೇಲೆ ಅವರ ವೃತ್ತಿಪರ ಕಾಳಜಿ ಅಮೋಘ. ಸನ್ಮಾನಗಳಿಂದ ಬರುವ ಹಣವನ್ನು ತಮ್ಮ ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ ವಿತರಿಸುವ ಅವರ ಪ್ರಬುದ್ಧತೆ ಅದ್ಭುತವಾದುದು. ಪ್ರವೃತ್ತಿಯಲ್ಲಿ ಸ್ವತಃ ಸಂಶೋಧನೆ ಹಾಗೂ ಬರಹಗಳಿಂದ ಜನಮನಗಳಲ್ಲಿ ತಮ್ಮ ಅಸಾಧಾರಣ ಪ್ರತಿಭೆ, ಪಾಂಡಿತ್ಯಛಾಪು ಮೂಡಿಸಿದ್ದಾರೆ. ಪ್ರಸ್ತುತ ಅವರ "ಕರಾವಳಿಯ ಸಾವಿರದೊಂದು ದೈವಗಳು" ಒಂದು ಅದ್ಭುತ ಸಾಧನೆ.ಅವರಿಗೆ ನನ್ನ ಶುಭಾಶಯಗಳು.


 ಶ್ರೀಯುತ ದಯಾನಂದ ಸ್ವಾಮಿ ,ಪ್ರಾಂಶುಪಾಲರು ಸರ್ಕಾರಿ ಪಿಯು ಕಾಲೇಜು, ಬ್ಯಾಟರಾಯನಪುರ ಬೆಂಗಳೂರು 

No comments:

Post a Comment