ವೃತ್ತಿಯಲ್ಲಿ ದಕ್ಷ ಶಿಕ್ಷಕರಾಗಿರುವ ಯಕ್ಷಗಾನ ಕಲಾವಿದರೂ ವಿದ್ವಾಂಸರೂ ಅಗಿರುವ ನಮ್ಮ ಊರಿನ ಆತ್ಮೀಯರಾದ ಯೋಗೀಶ ರಾವ್ ಚಿಗುರುಪಾದೆ ಅವರ ಅಭಿಪ್ರಾಯ ಇಲ್ಲಿದೆ
ಡಾ.ಲಕ್ಷ್ಮೀ.ಜಿ.ಪ್ರಸಾದ್ ಅವರ ಕರಾವಳಿಯ ಸಾವಿರದೊಂದು ದೈವಗಳು ಕೃತಿ ದೈವಗಳಬಗ್ಗೆ ಅಧ್ಯಯನಾಸಕ್ತರಿಗೆ ಮಹತ್ವದ ಕೃತಿ.
ಸಾವಿರದ ಇನ್ನೂರ ಇಪ್ಪತ್ತೆಂಟು ದೈವಗಳ ಮಾಹಿತಿಯುಳ್ಳ ಹೊತ್ತಗೆ. ಅಧ್ಯಯನಾಸಕ್ತರು ಈ ಕೃತಿಯ ಬೆಳಕಿನ ಆಧಾರದಲ್ಲಿ ಇನ್ನಷ್ಟು ಅಧ್ಯಯನ ಕೈ ಗೊಳ್ಳಬಹುದು. ಓರ್ವ ಮಹಿಳೆ ಸ್ವತಹ ಕ್ಷೇತ್ರ ಕಾರ್ಯಮಾಡಿ ಇಷ್ಟು ಮಾಹಿತಿಯನ್ನು ಕಲೆಹಾಕಿದ್ದು ಅತೀ ಸವಾಲಿನ ಕಾರ್ಯ . ಪ್ರಶಂಸಾರ್ಹ. ಒಂದು ಎರಡು ದಿನದಲ್ಲಿ ಓದಿ ಮುಗಿಸಬಹುದಾದ ಕೃತಿ ಇದಲ್ಲ. ಪ್ರತೀ ಮನೆಯ ಪುಸ್ತಕ ಭಂಡಾರದಲ್ಲಿ ಮಾತ್ರವಲ್ಲ ವಿದ್ಯಾಸಂಸ್ಥೆಗಳ ಪುಸ್ತಕ ಭಂಡಾರದಲ್ಲಿ ಕಾಪಿಡಬೇಕಾದ ಪುಸ್ತಕ. ಅಗತ್ಯಕ್ಕನುಗುಣವಾಗಿ ಮಾಹಿತಿ ಬಳಸಿ ಕೊಳ್ಳಬಹುದು. ಒಂದರ್ಥದಲ್ಲಿ ದೈವಗಳ ಅಧ್ಯಯನಕ್ಕೆ ಇದೊಂದು ವಿಶ್ವಕೋಶ ವಿದ್ದಹಾಗೆ. ಮುಂದಿನ ದೈವಾರಾಧನೆಯ ಅಧ್ಯಯನ ಕಾರರು ಈ ಗ್ರಂಥವನ್ನು ಬಳಸಿಕೊಳ್ಳದಿದ್ದಲ್ಲಿ ಅಧ್ಯಯನ ಅಪೂರ್ಣವೇ ಸರಿ. ಕೃತಿ ಕಾರರರಿಗೆ ಅಭಿನಂದನೆಗಳು.- ಯೋಗೀಸ್ ರಾವ್ ಚಿಗುರುಪಾದೆ
No comments:
Post a Comment