Saturday, 10 August 2013

ನಾಗ ಮಂಡಲ-ಒಂದು ವಿಶಿಷ್ಟ ನಾಗ ಸೇವೆ



 


ನಾನಿನ್ನೂ ಸಂಶೋಧನಾ ಕ್ಷೇತ್ರಕ್ಕೆ ಕಾಲಿರಿಸಿದ ಸಮಯ .ತೊಕ್ಕೊಟು ಸಮೀಪದ ಕುತ್ತಾರು ಪದವಿನಲ್ಲಿ ಭಾರಿ ವೈಭವದ ನಾಗ ಬ್ರಹ್ಮ ಮಂಡಲ ಏರ್ಪಾಟಾಗಿತ್ತು .ನಾಗ ಮಂಡಲದ ಹಿಂದಿನ ದಿನ ಸೌತೆಡ್ಕಕ್ಕೆ ಹೋಗಿ ಹಿಂದೆ ಬರುವಾಗ ನಾನು ನನ್ನ ತಾಯಿ ಮತ್ತು ಮಗ ಕುತ್ತಾರುಪದವಿಗೆ ಬಂದೆವು .ಮರು ದಿನ ನಡೆಯುವ ನಾಗ ಬ್ರಹ್ಮ ಮಂಡಲವನ್ನು ರೆಕಾರ್ಡ್ ಮಾಡಲು ಅನುಮತಿ ಹಾಗೂ ಸಹಕಾರ  ಕೇಳುವುದಕ್ಕಾಗಿ ನಾನು ಅಲ್ಲಿಗೆ ಹೋಗಿದ್ದೆ .ನಾಗಮಂದಲಕ್ಕೆ ಸಾವಿರಾರು ಜನ ಸೇರಿರುತ್ತಾರೆ .ಅದರ ವೇದಿಕೆ ಸಮೀಪ ಹೋಗಲು ಯಾರಿಗು ಅನುಮತಿ ಇರುವುದಿಲ್ಲ. ಅನೇಕ ವಿಧಿ ನಿಷೇಧಗಳು ಇಲ್ಲಿರುತ್ತವೆ .ಆದ್ದರಿಂದ ಮೊದಲೇ ಮಾತನಾಡಿ ಅನುಮತಿ ಪಡೆದುಕೊಂಡರೆ ಸುಲಭ ಎಂದು ನಾವಲ್ಲ್ಲಿಗೆಹಿಂದಿನ ದಿವಸವೇ  ಹೋದದ್ದು .ಅಲ್ಲಿ ಒಂದು ವಾರ ಹಿಂದಿನಿಂದ ಅನೇಕ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತ್ತಿದ್ದ್ದರು .ಆ ದಿವಸ ಸಂಜೆ ಕೂಡ ೬ ಗಂಟೆಯಿಂದ ಒಂದು ಸಭಾ ಕಾರ್ಯಕ್ರಮ ಏರ್ಪಾಟಾಗಿತ್ತು .ಅಂದು ಧಾರ್ಮಿಕ ಉಪನ್ಯಾಸ ನೀಡಲು ಮಂಗಳೂರಿನ ಖ್ಯಾತ ಉಪನ್ಯಾಸಕರಾದ  ಪ್ರಭಾ ಕಾಮತ್ ಬರುವವರಿದ್ದರು .

ನಾವು  ಅಲ್ಲಿಗೆ ತಲಪುವಾಗ ಸಂಜೆ ೫ ಗಂಟೆ ಆಗಿತ್ತು .ಅಲ್ಲಿನ ವ್ಯಸ್ಥಾಪಕರನ್ನು (ಅವರ ಹೆಸರು ಸರಿಯಾಗಿ ನೆನಪಿಲ್ಲ .. ಗಟ್ಟಿ ಎಂದು ನೆನಪು ) ನಾನು ಕಂಡು ನಾನು ಬಂದ ಉದ್ದೇಶವನ್ನು ತಿಳಿಸಿ ಮರುದಿನ ರೆಕಾರ್ಡ್ ಮಾಡುವ ಬಗ್ಗೆ ಅನುಮತಿ ಮತ್ತು ಸಹಕಾರ ಕೇಳಿದೆ .ಸಹೃದಯಿಗಳಾದ ಅವರು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು . ಅಲ್ಲಿಂದ ನಾನು ಹೊರಡುವಷ್ಟರಲ್ಲಿ ಅಂದಿನ ಕಾರ್ಯಕ್ರಮಕ್ಕೆ ಪ್ರಭಾ ಕಾಮತ್ ಅವ್ರಿಗೆ ಬರಲು ಆಗುತ್ತಿಲ್ಲ ಎಂಬ ಮಾಹಿತಿ ಗಟ್ಟಿಯವರಿಗೆ ಸಿಕ್ಕಿತು .ಆಗ ಅವ್ರು ನನ್ನಲ್ಲಿ  ಅವರ ಬದಲು  ಉಪನ್ಯಾಸ ನೀಡಲು ಕೇಳಿಕೊಂಡರು .ಸಂಶೋಧನಾ ಕ್ಷೇತ್ರದಲ್ಲಿ ಆಗ ತಾನೇ ಕಣ್ಣು ಬಿಡುತ್ತಿದ್ದ ನನಗೆ ಒಂದು ಕ್ಷಣ  ಏನು ಮಾಡುವುದು ಎಂದು ಗೊತ್ತಾಗಲಿಲ್ಲ!ಉಪನ್ಯಾಸಕಿಯಾಗಿದ್ದ ನನಗೆ ಭಾಷಣ ಮಾಡಿ ಅಭ್ಯಾಸ ಇತ್ತು .ಆದರೆ ಏನೂ ತಯಾರಿ ಇಲ್ಲದೆ ೨೦೦೦-೩೦೦೦ ಜನ ಸೇರಿದ ಅಷ್ಟು ದೊಡ್ಡ ಸಭೆಯಲ್ಲಿ ನಾಗಾರಾಧನೆ ಕುರಿತು ಧಾರ್ಮಿಕ ಉಪನ್ಯಾಸ ನೀಡುವುದು ಎಂದರೆ ಸಣ್ಣ ವಿಚಾರ ಅಲ್ಲ !ನನ್ನ ಗೊಂದಲವನ್ನು ಗಮನಿಸಿದ ಶ್ರೀಯುತ ಗಟ್ಟಿ ಯವರು “ನಿಮಗೆ ಭಾಷಣ ಮಾಡಿ ಅಭ್ಯಾಸ ಇಲ್ಲವೇ” ಎಂದು ಕೇಳಿದರು.ನಾನುತ್ತರಿಸುವ ಮೊದಲೇ ಅಲ್ಲೇ ಕುಳಿತಿದ್ದ ನನ್ನಮ್ಮ “ಅವಳಿಗೆ ಭಾಷಣ ಮಾಡಿ ಅಭ್ಯಾಸ ಉಂಟು ಚೆನ್ನಾಗಿ ಮಾತಾಡ್ತಾಳೆ “ಎಂದು ನುಡಿದರು ,ನನ್ನ ಅಮ್ಮನಿಗೆ ನನ್ನ ಬಗ್ಗೆ ವಿಪರೀತ ನಂಬಿಕೆ ,ತನ್ನ ಮಗಳು ಬಹಳ ಜಾಣೆ ಅಂತ ತಿಳ ಕೊಂಡಿದ್ದಾರೆ.ನನ್ನ ಸಂಗತಿ ನನಗೆ ಗೊತ್ತು ! ಅಮ್ಮನ ಬಗ್ಗೆ ತುಸು ಕೋಪ ಕೂಡ ಬಂತು ಆ ಘಳಿಗೆಯಲ್ಲಿ !ಅಮ್ಮನ ಮಾತು ಕೇಳಿದ ಗಟ್ಟಿ ಯವರು ಆ ದಿನದ ಧಾರ್ಮಿಕ ಉಪನ್ಯಾಸ ಮಾಡಲು ಹೇಳಿದರು .ಬೇರೆ ದಾರಿ ಇಲ್ಲದೆ ಒಪ್ಪಿಕೊಂಡೆ !ನಾನು ಆ ತನಕ ಓದಿದ ನಾಗ ಸಂಬಂಧಿ ಕಥೆಗಳನ್ನು,ವಿಚಾರಗಳನ್ನು  ನೆನಪಿಸಿಕೊಂಡು ವೇದಿಕೆ ಏರಿದೆ .ಸುಮಾರು ೪೫ -೫೦ ನಿಮಿಷಗಳ ಕಾಲ ನಿರರ್ಗಳವಾಗಿ ಮಾತನಾಡಿದೆ .೨೦೦೦-೩೦೦೦ ಜನ ಸೇರಿದ ಅಷ್ಟು ದೊಡ್ಡ ಸಭೆಯಲ್ಲಿ ನಾನು ಮೊದಲ ಭಾರಿಗೆ ಭಾಷಣ ಮಾಡಿದ್ದೆ .ಕೊನೆಯಲ್ಲಿ ಎಲ್ಲರು ಎದ್ದು ನಿಂತು ಹಾಕಿದ ಚಪ್ಪಾಳೆಯ ಸದ್ದು ಈಗ ಕೂಡ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ .ಅಂದಿನ ಆ ಒಂದು ಆಕಸ್ಮಿಕವಾಗಿ ಮಾಡಿದ ಭಾಷಣ ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ !

ಮರು ದಿನ ರೆಕಾರ್ಡ್ ಮಾಡಲು ಹೋದಾಗ ಹಿಂದಿನ ದಿನ ನನ್ನ ಮಾತನ್ನು ಕೇಳಿದ ಎಲ್ಲರಿಂದ ಮೆಚ್ಚುಗೆ ಮತ್ತು ಪೂರ್ಣ ಬೆಂಬಲ .ಅಂದು ನಾಗ ಬ್ರಹ್ಮ ಮಂಡಲಕ್ಕೆ ಸುಮಾರು ೨೦-೨೫ ಸಾವಿರ ಜನ ಸೇರಿದ್ದರು .ನಂಗೆ ವೇದಿಕೆಯ ಸಮೀಪ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿ ರೆಕಾರ್ಡ್ ಮಾಡಲು ಅನುವು ಮಾಡಿ ಕೊಟ್ಟಿದ್ದರು.ಇಲ್ಲಿ  ಶ್ರೀಯುತ ಗಟ್ಟಿ ಹಾಗೂ ಮಾಜಿ ಕೋರ್ಪರೆಟರ್  ಭಾಸ್ಕರ ರಾವ್ ಅವರು ನೀಡಿದ ಬೆಂಬಲವನ್ನು ನಾನು ಎಂದಿಗೂ ಮರೆಯಲಾರೆ.

ಮಂಡಲವನ್ನು ಬರೆಯುವ ಸಮಯದಲ್ಲ್ಲಿಯೇ ನಾನು ಅಲ್ಲಿಗೆ ಹೋಗಿ ಅಂದು ನಾಗ ನರ್ತನಕ್ಕೆ ಬಂದಿದ್ದ್ದ ನಟರಾಜ ವೈದ್ಯರನ್ನು(ಇವರು ನಮ್ಮ ದೂರದ ಸಂಬಂಧಿಕರು ಕೂಡಾ) ಭೇಟಿ ಮಾಡಿದೆ .ಅವರು ನನಗೆ ಬೇಕಾದ ಎಲ್ಲ ಮಾಹಿತಿಯನ್ನು ತಾಳ್ಮೆಯಿಂದ ನೀಡಿದ್ದಾರೆ .ಅಂದು ನಾಗ ಮಂಡಲಕ್ಕೆ ಮೊದಲು ಮಧ್ಯಾಹ್ನ ನಾಗ ದರ್ಶನ ಇತ್ತು .ನಾನು ಪ್ರಸಾದ ಸ್ವೀಕರಿಸಲು ಹೋದಾಗ ಅಂದಿನ ನಾಗ ಪಾತ್ರಿಗಳು  “ನೀವು ಇದೆ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ ಮಾತ್ರವಲ್ಲದೆ ಇನ್ನೊಂದು ಇದೆ ರೀತಿಯ ಪದವಿಯನ್ನ್ನು ಪಡೆಯುವಿರಿ “ಎಂದು ನುಡಿದಿದ್ದು ನನಗೆ ಇನ್ನು ಕಣ್ಣಿಗೆ ಕಟ್ಟಿದಂತೆ ಇದೆ .ಈಗ ನಾನು ಎರಡನೆಯ ಡಾಕ್ಟರೇಟ್ ಪದವಿಗಾಗಿ ಸಂಶೋಧನಾ ಪ್ರಬಂಧವನ್ನು ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿದ್ದೇನೆ .ಆದರೆ ಅಂದು” ನಾನು ಮೊದಲ ಡಾಕ್ಟರೇಟ್ ಪದವಿಯನ್ನ್ನು ಪೂರ್ಣ ಗೊಳಿಸಿಯೇನು” ಎಂಬ ನಂಬಿಕೆ ಕೂಡಾ ನನಗೆ ಇರಲಿಲ್ಲ (ಅದಕ್ಕೆ ಬೇರೆ ಕಾರಣಗಳಿವೆ !)

ಅಂತು ನಾಗ ಮಂಡಲವನ್ನು ನಾನು ರೆಕಾರ್ಡ್ ಮಾಡಿದೆ . ಸಾಕಷ್ಟು ಮಾಹಿತಿಯನ್ನೂ ಕಲೆ ಹಾಕಿದ್ದೇನೆ .      

ನಾಗಮಂಡಲ, ಢಕ್ಕೆಬಲಿ/ಬ್ರಹ್ಮಮಂಡಲಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿರುವ ವೈಭವದ ಆಚರಣೆ.ಇದೊಂದು ಸುಂದರವಾದ ನೃತ್ಯ ಸೇವೆ ಕೂಡಾ .ನಾಗ ಮಂಡಲದ ನೃತ್ಯ ಬಹಳ ಆಕರ್ಷಕವಾಗಿರುತ್ತದೆ .ಮತ್ತೆ ಮತ್ತೆ ನೋಡಬೇಕೆನಿ ಸುವಷ್ಟು ಚಂದದ ನೃತ್ಯ!ಇದರಲ್ಲಿ ನಾಗ ಪಾತ್ರಿ ಮತ್ತು ಅರ್ಧ ನಾರಿ ರೂಪದ ವೈದ್ಯ ರರು ಮಂಡಲದ ಸುತ್ತ ನರ್ತಿಸುತ್ತಾರೆ !ಸುತ್ತ ೫ ಜನರು ಹಾಡು ಹೇಳುತ್ತಾ ತಿರುಗುತ್ತಾರೆ .  ಮೂಲತಃ ಢಕ್ಕೆಬಲಿ, ನಾಗಮಂಡಲಗಳು ಒಂದೇ ಅಲ್ಲ. ಆದರೆ ಈಗ ಇವುಗಳ ಆಚರಣೆ ಹೆಚ್ಚು ಕಡಿಮೆ ಒಂದೇ ರೀತಿ ಇದೆ.

ದೇವರ ಆರಾಧನೆಯಲ್ಲಿ ಹನ್ನೊಂದು ಪ್ರತೀಕಗಳನ್ನು ಪುರಾಣಗಳಲ್ಲಿ ಹೇಳಿವೆ. ಅದರಲ್ಲಿ ಮಂಡಲ ಒಂದು ಪ್ರತೀಕ. ಮಂಡಲದ ಮಧ್ಯದಲ್ಲಿ ನಾಗನನ್ನು ಪೂಜಿಸುವುದು ನಾಗಮಂಡಲದ ಉದ್ದೇಶ. ಈ ಪೂಜಾವಿಧಿ ಯಾವಾಗಿನಿಂದ ಆರಂಭವಾಯಿತು ಎಂಬ ಬಗ್ಗೆ ಖಚಿತವಾದ ಆಧಾರವಿಲ್ಲ. ಕ್ರಿ.ಶ.1458ರ ಬಾರಕೂರಿನ ಶಾಸನದಲ್ಲಿ ಮಂಡಲ ಭಂಡಾರಿಎಂದು ಬರುತ್ತದೆ. ಬಹುಶಃ ನಾಗಮಂಡಲ ಸೇವೆಯನ್ನು ನಡೆಸಿಕೊಟ್ಟ ಭಂಡಾರಿಯನ್ನು ಕುರಿತು ಈ ಶಾಸನ ಪ್ರಸ್ತಾಪಿಸಿದ್ದಿರಬೇಕು. ಹೀಗಾಗಿ 500 ವರ್ಷಗಳಿಂದೀಚೆಗೆ ನಾಗಮಂಡಲ ನಡೆದುಬರುತ್ತಿದೆಎಂದು ಖಚಿತವಾಗಿ ಹೇಳಬಹುದು ಎಂದು ಪ್ರೊ. ಎ.ವಿ. ನಾವಡ ಹೇಳಿದ್ದಾರೆ.1

ನಾಗಮಂಡಲ ಸಂತಾನ ಬಯಕೆ ಹಾಗೂ ಕುಷ್ಟರೋಗ ನಿವಾರಣೆಗಾಗಿ ನಡೆಸುವ ಒಂದು ನಾಗಾರಾಧನಾ ಪದ್ಧತಿ, ಇದೊಂದು ಫಲವಂತಿಕೆಯ ಆಚರಣೆ.. ಇದು ತಂತ್ರ ಮೂಲದಿಂದ ಹುಟ್ಟಿಕೊಂಡ ಆರಾಧನೆ ಎಂದು ಕಾ.ವೆಂ. ರಾಜಗೋಪಾಲ ಅವರು ಅಭಿಪ್ರಾಯ ಪಟ್ಟಿದ್ದಾರೆ. ನಾಗಮಂಡಲಕ್ಕೆ ಪೂರ್ವಭಾವಿಯಾಗಿ ನಾಗತಂಬಿಲ, ಆಶ್ಲೇಷಾಬಲಿ, ಶಾಕಾಸಂಸ್ಕಾರ, ಹಾಲಿಟ್ಟು ಸೇವೆ, ನಾಗದರ್ಶನ ಮೊದಲಾದ ವಿಧಿಗಳನ್ನು ನೆರವೇರಿಸುತ್ತಾರೆ.ನಾಗ ಶಾಪದಿಂದ ಮುಕ್ತಿ ಪಡೆಯಲು ನಾಗನನ್ನು ಮಂಡಲಕ್ಕೆ ಆಹ್ವಾನಿಸಿ ಆರಾಧಿಸುವುದೇ ನಾಗ ಮಂಡಲ .ಇಲ್ಲಿ ನಾಗನೊಂದಿಗೆ ಅನೇಕ ಶಕ್ತಿಗಳಿಗೆ ಆರಾಧೆ ಇರುತ್ತದೆ .

.1. ನಾಗಮಂಡಲದ ರಂಗವೇದಿಕೆ

ಸಾಮಾನ್ಯವಾಗಿ ಬೆಟ್ಟು ಗದ್ದೆ ಅಥವಾ ಸಮತಟ್ಟಾದ ವಿಶಾಲವಾದ ಬಯಲು ಪ್ರದೇಶದ ಮಧ್ಯೆ ಸುಮಾರು 2-3 ಅಡಿ ಎತ್ತರದಲ್ಲಿ 20 ಕೋಲು ಚೌಕಾಕಾರದ ವೇದಿಕೆಯನ್ನು ನಿರ್ಮಿಸುತ್ತಾರೆ. ರಂಗದ ನಡುವೆ ಕಂಬ, ಅದರ ಸುತ್ತ ಚಪ್ಪರ, ಚಪ್ಪರದ ಸುತ್ತ ರೇಷ್ಮೆ ವಸ್ತ್ರದಿಂದ ಅಲಂಕರಿಸುತ್ತಾರೆ. ತಾವ್ರಿಮಿಟ್ಟಿ (ತಾವರೆ ಮೊಗ್ಗು), ತಾವರೆಹೂ, ಗಿಳಿ ಮುಂತಾದ ರಚನೆಗಳನ್ನು ಮೇಲ್‍ಗಟ್ಟಿನಿಂದ ನೇತು ಹಾಕುತ್ತಾರೆ.ಚಪ್ಪರವನ್ನು  ಅಡಿಕೆಯ ಹಿಂಗಾರದಿಂದ ,ಅಡಿಕೆಯ ಮಾಲೆಯಿಂದ ,ಬಾಳೆಗೊನೆ ಹಾಗೂ ಎಳನೀರಿನಿಂದ ಶೃಂಗರಿಸುತ್ತಾರೆ

ಜಂಗಮ ಸೊಪ್ಪಿನಿಂದ ತಯಾರಿಸಿದ ಹಸಿರು ಹುಡಿ, ಭತ್ತದ ಹೊಟ್ಟಿನ ಕರಿಯ ಕಪ್ಪು ಹುಡಿ, ಬೆಳ್ತಿಗೆ ಅಕ್ಕಿಯ ಹಡಿ, ಬಿಳಿ ಹುಡಿ, ಅರಸಿನ ಹಾಗೂ ಸುಣ್ಣದ ಮಿಶ್ರಣದಿಂದ ತಯಾರಿಸಿದ ಕುಂಕುಮ ಹಾಗೂ ಅರಸಿನ ಹುಡಿಗಳಿಂದ ಮಂಡಲದ ಮಧ್ಯಭಾಗದಲ್ಲಿ ಏಳು ಹೆಡೆಯ ಸರ್ಪ, ಮರಿನಾಗ, ಬ್ರಹ್ಮ, ಯಕ್ಷ, ಗಣಪತಿಯರನ್ನು ಬರೆಯುತ್ತಾರೆ. ಎಂಟು ಅಥವಾ ಹದಿನಾರು ಎತ್ತರದ ಕಾಲ್ದೀಪಗಳನ್ನು ಉರಿಸುತ್ತಾರೆ. ರಂಗದ ನಾಲ್ಕು ದಿಕ್ಕಿಗೆ ಎಣ್ಣೆಯ ದೊಂದಿಗಳನ್ನು ಕಟ್ಟುತ್ತಾರೆ. ಇದರ ಸುತ್ತ ನಾಗಪಾತ್ರಿ ಹಾಗೂ ವೈದ್ಯರು ನರ್ತಿಸುತ್ತಾರೆ.  

 ಮಂಡಲದ ವಿವಿಧ ಆಕೃತಿಗಳು

.1. ಕೊಳನಾಗ

ಏಳು ಹೆಡೆಯ ದೊಡ್ಡ ಸರ್ಪದ ಚಿತ್ರಣಕ್ಕೆ ಕೊಳನಾಗ, ಗುಳಿಕ, ಅಥವಾ ಕಾಡ್ಯ ಎನ್ನುತ್ತಾರೆ.

.2. ನಾಗಯಕ್ಷ

ಕೊಳನಾಗನ ಸಮೀಪದಲ್ಲಿಯೇ ಕೇವಲ ಹೆಡೆಯಂತೆ ಕಾಣುವ ಒಂದು ರೂಪಕ್ಕೆ ಎರಡು ಕಣ್ಣುಗಳನ್ನು ಚಿತ್ರಿಸುತ್ತಾರೆ. ಇದರ ಆಕಾರ ಶಂಖವನ್ನು ಹೋಲುತ್ತದೆ. ಇದನ್ನು ಕೆಲವರು ಮರಿನಾಗ ಎಂದರೆ ಕೆಲವರು ನಾಗಯಕ್ಷಿ (ಯಕ್ಷೆ) ಎನ್ನುತ್ತಾರೆ.

.3. ಬ್ರಹ್ಮ

ಕೊಳನಾಗನ ಎಡಭಾಗದಲ್ಲಿ ಕೆಳಗೆ ಒಂದು ವಿಶಿಷ್ಟ ಮಾನವಾಕೃತಿಯನ್ನು ಚಿತ್ರಿಸುತ್ತಾರೆ. ಇದಕ್ಕೆ ಕೈ ಕಾಲುಗಳಿಲ್ಲ. ಗಂಡುರೂಪ, ಮೀಸೆ ಇದೆ. ಹೊರಚಾಚಿದಂತಿರುವ ಹಲ್ಲುಗಳು, ಹಾಗೂ ಎರಡು ಕೋರೆ ಹಲ್ಲುಗಳಿವೆ. ತಲೆಗೆ ಚೂಪಾದ ಟೊಪ್ಪಿಗೆಯನ್ನು ಧರಿಸಿದಂತೆ ಕಾಣುತ್ತದೆ. ಇದನ್ನು ವೈದ್ಯರು ಬ್ರಹ್ಮಯಕ್ಷ ಎನ್ನುತ್ತಾರೆ. ತುಳುವರು ಬೆರ್ಮೆರ್ ಎನ್ನುತ್ತಾರೆ. (ಚ)

4.4. ತ್ರಿಶೂಲ

ನಾಗನ ಹೆಡೆಯ ಮೇಲುಭಾಗಕ್ಕೆ ಒಂದು ತ್ರಿಶೂಲವನ್ನು ಬರೆಯುತ್ತಾರೆ. ಇದರ ಕೆಳಭಾಗವು ಬಲಭಾಗಕ್ಕೆ ಸ್ವಲ್ಪ ಬಾಗಿರುತ್ತದೆ.

.5. ಗಣಪತಿ

ಬಲತುದಿಗೆ ಸೇರಿಕೊಂಡಂತೆ ತ್ರಿಕೋನಗಳಿಂದ ರಚಿತವಾದ ವೃತ್ತಾಕಾರವಿದೆ. ಇದು ಶ್ರೀಚಕ್ರವನ್ನು ಹೋಲುತ್ತದೆ. ಇದಕ್ಕೆ ಮಂಡಲವನ್ನು ರಚಿಸುವ ವೈದ್ಯರು ಗಣಪತಿ ಎನ್ನುತ್ತಾರೆ.

.6. ಪ್ರೇತಯಕ್ಷ

ಇದೊಂದು ಎರಡು ಕಣ್ಣುಗಳುಳ್ಳ ವಿಶಿಷ್ಟ ಆಕೃತಿ

3. ನಾಗಮಂಡಲ ನೃತ್ಯ

ನಾಗಮಂಡಲದ ಸುತ್ತ ನೃತ್ಯದಲ್ಲಿ ಪ್ರಧಾನ ಪಾತ್ರ ವಹಿಸುವವರು ಇಬ್ಬರು, ಒಬ್ಬರು ನಾಗಪಾತ್ರಿ. ನಾಗಪಾತ್ರಿ ಮುಂಗೈಗೆ ಕಡಗ, ಮೈಗೆ ಕೆಂಪುಬಟ್ಟೆ, ಕೆದರಿದ ಕೂದಲು, ಕೊರಳಿನಲ್ಲಿ ನಾಗನ ಚಿಹ್ನೆಯ ಪದಕವಿರುವ ಹಾರವನ್ನು ಧರಿಸಿರುತ್ತಾರೆ. ಕೈ ತುಂಬ ಹಿಡಿದಿರುವ ಹಿಂಗಾರಗಳನ್ನು ಮುಖಕ್ಕೆ ಆಗಾಗ್ಗೆ ತಿಕ್ಕಿಕೊಳ್ಳುತ್ತಾ ಇರುತ್ತಾರೆ. ಇನ್ನೊಂದು ಪ್ರಧಾನ ಪಾತ್ರ ವೈದ್ಯರದು. ವೈದ್ಯರು ಅರ್ಧನಾರಿ ವೇಷವನ್ನು ಧರಿಸಿರುತ್ತಾರೆ. ಯಕ್ಷಗಾನ ಬಡಗುತಿಟ್ಟಿನ ಸ್ತ್ರೀವೇಷವನ್ನು ಹೋಲುವ ಇವರು ಕೆಂಪುಬಣ್ಣದ ಚೌಕುಳಿಸೀರೆ, ಕಾಲಿಗೆ ಗೆಜ್ಜೆ, ಎದೆಗೆ ತೋಳಿಲ್ಲದ ರವಿಕೆ, ಕೊರಳಿಗೆ ಗುಂಡುಸರ, ಸೊಂಟಕ್ಕೆ ಬೆಳ್ಳಿಪಟ್ಟಿ, ಕೈಗೆ ಚಿನ್ನದ ಕಡಗ, ತಲೆಗೆ ಮುಂಡಾಸು, ಜರಿರುಮಾಲು ಧರಿಸುತ್ತಾರೆ. ಹಾಡುವ ಹಿಮ್ಮೇಳದ ಮೂರು ಜನ ವೈದ್ಯರು ಬಿಳಿಧೋತರವನ್ನು ಕಚ್ಚೆ ಹಾಕಿ ಉಟ್ಟು, ಬಿಳಿ ಅಂಗಿ ತೊಟ್ಟಿರುತ್ತಾರೆ. ನಾಗಮಂಡಲದ ವೇದಿಕೆಯ ಮಧ್ಯಭಾಗದಲ್ಲಿ ರಚಿಸಿದ ಚಿತ್ತಾರದ ಸುತ್ತ ಪಾತ್ರಿ ಮತ್ತು ವೈದ್ಯರು ನರ್ತಿಸುತ್ತಾರೆ. ನಾಗನನ್ನು ಮೈತುಂಬಿಕೊಂಡ ಪಾತ್ರಿ ಕ್ರೋಧದಿಂದ ಸುತ್ತಿ ಸುಳಿದು ಮುಖವನ್ನು ಗಂಟಿಕ್ಕಿಕೊಂಡು ಹೂಂಕರಿಸುತ್ತ ನಾಗರ ಹಾವಿನಂತೆ ತಲೆಯನ್ನು ಹಿಂದೆಮುಂದೆ ಆಡಿಸುತ್ತಾ, ನಾಲಿಗೆಯನ್ನು ಆಗಾಗ ಹೊರಚಾಚುತ್ತಾ, ಬುಸುಗುಟ್ಟುತ್ತಾನೆ. ಅನಂತರ ಅರ್ಧನಾರಿರೂಪದಲ್ಲಿರುವ ವೈದ್ಯನ ಭಕ್ತಿಗೆ ಒಲಿದು ತಣಿದು ಮಣಿಯುತ್ತಾನೆ. ಈ ಕುಣಿತದಲ್ಲಿ ಅನೇಕ ಭಾವರಸಗಳ ಅಭಿವ್ಯಕ್ತಿ ಇದೆ. ಎಂಟು (8) ಬರೆದ ಆಕಾರದಲ್ಲಿ ನರ್ತಿಸುವ ಇವರ ದೇಹದ ಎಲ್ಲ ಭಾಗಕ್ಕೂ ಕೆಲಸವಿದೆ. ಬಡಗುತಿಟ್ಟು ಯಕ್ಷಗಾನದ ಕುಣಿತಗಳಂತಿರುವ ಮಂಡಿಯ ಮೇಲಿನ ನಡೆ ಕೂಡ ಇಲ್ಲಿರುತ್ತದೆ.

4. ನಾಗಮಂಡಲದಲ್ಲಿ ಆರಾಧನೆಗೊಳ್ಳುವ ದೈವಗಳು

1. ಬ್ರಹ್ಮರಾಯ

ನಾಗಪಾತ್ರಿಗೆ ದರ್ಶನ ಬರಿಸುವ ಸಂದರ್ಭದಲ್ಲಿ ಒಂದು ಸ್ತುತಿಯನ್ನು ಮಾಡುತ್ತಾರೆ. ಇಲ್ಲಿ ವಿಷ್ಣುವಿನಿಂದ ಆರಂಭಿಸಿ ಅನೇಕ ದೈವದೇವತೆಗಳನ್ನು ನೆನೆಯುತ್ತಾರೆ. ಅನಂತರ ಬ್ರಹ್ಮನನ್ನು ಮಂಡಲಕ್ಕೆ ಆಹ್ವಾನಿಸುತ್ತಾರೆ. ಅಲ್ಲಿ ಹೇಳುವ ಸ್ತುತಿ ಹೀಗಿದೆ: ಬ್ರಹ್ಮ ನಿನ್ನರಮನೆಗೆ ಮುನ್ನೂರು ಬಾಗಿಲುಗಳು | ಚಿನ್ನದಲ್ಲಿ ತೋರಣ ಎಡಬಿಡದೆ ಚತುರ್ಮುಖ ಕುಲಬ್ರಹ್ಮಸ್ವಾಮಿಯವರು | ಕಾಶ್ಮೀರದಿಂದ ಹೊರಟವನೆ ಹಾರುಕುದ್ರೆಯನ್ನೆ ಏರಿಕೊಳ್ಳುವಂತವರು | ಕುರುಕ್ಷೇತ್ರ ಗಯಕ್ಷೇತ್ರ, ಯಂಕ್ಟಾದ್ರಿ, ಶ್ರೀರಂಗ, ಮಲೆಯಾಳ ಕೇರಳ ಸ್ಥಾನಾಧಿಪತಿಗಳಾಗಿ | ವಾಸವಾಗಿ ನೆಲೆಗೊಂಡನೆಂಬಂಥ | ಚತುರ್ಮುಖ ಕುಲಬ್ರಹ್ಮ | ಅಜಬ್ರಹ್ಮ | ಮಾಂಶ ಬ್ರಹ್ಮ | ಜಡೆಬ್ರಹ್ಮ | ಕೊಡೆ ಬ್ರಹ್ಮ | ಕನಕ ಬ್ರಹ್ಮ | ಧೀರಬ್ರಹ್ಮ | ಸಂನ್ಯಾಸಿ ಬ್ರಹ್ಮರಾಯನ ಪರಿವಾರ ಸಹಿತನಾಗಿ ಈ ಹೊತ್ತಿನ ಮಂಡ್ಲಭೋಗಕ್ಕೆ ತೆರಳಿ ಬರುವಂಥಾ ಕಾಲದಲ್ಲೀ ||

ಇಲ್ಲಿ ಚತುರ್ಮುಖ ಕುಲಬ್ರಹ್ಮನೆಂದು ಹೇಳಿದ್ದರೂ ಕೂಡ ಇಲ್ಲಿಯ ಬ್ರಹ್ಮನಲ್ಲಿ ರಾಜನ ಪರಿಕಲ್ಪನೆಯಿದೆ. ಈತ ಅರಮನೆಯಲ್ಲಿರುವವನು. ಈತನಿಗೆ ಛತ್ರವಿದೆ ಎಂಬುದು ಕೊಡೆ ಬ್ರಹ್ಮ ಎಂಬಲ್ಲಿ ತಿಳಿದು ಬರುತ್ತದೆ. ಈತ ವೀರ. ಆದ್ದರಿಂದಲೇ ಈತನನ್ನು ಧೀರಬ್ರಹ್ಮನೆಂದು ಹೇಳಿದ್ದಾರೆ. ಈತ ಯೋಗಿಯಿರಬೇಕು. ಇಲ್ಲವಾದರೆ ಸಂನ್ಯಾಸಿ ಬ್ರಹ್ಮರಾಯ (ರಾಯ=ರಾಜ) ಎಂಬ ವಿಶೇಷಣವಿರುತ್ತಿರಲಿಲ್ಲ. ಕುದುರೆಯನ್ನು ಏರಿಕೊಂಡವನು ಮತ್ತು ಕಾಶ್ಮೀರದಿಂದ ಬಂದವನು ಎಂದಿಲ್ಲಿ ಹೇಳಲಾಗಿದೆ. ಈ ಸ್ತುತಿಯ ನಂತರ ನಾಗನನ್ನು ಮಂಡಲಕ್ಕೆ ಬರಮಾಡಿಕೊಳ್ಳುವ ಸ್ತುತಿ ಇದೆ. ಇದರಿಂದ ಇಲ್ಲಿ ನಾಗ ಮತ್ತು ಬ್ರಹ್ಮರು ಬೇರೆ ಬೇರೆ ಶಕ್ತಿಗಳು ಎಂದು ಸ್ಪಷ್ಟವಾಗುತ್ತದೆ. ಇಲ್ಲಿನ ಬ್ರಹ್ಮ ಅರಸು ಮತ್ತು ಕುದುರೆಯನ್ನೇರುವ ವೀರಯೋಧನಾಗಿದ್ದಾನೆ.

ಆದರೆ ಮುಂದೆ ಕರವು ಎಂಟು ನಿಮಗೆ ಶಿರವು ನಾಲ್ಕು | ಹಿರಿದಪ್ಪಂತ ದೇಹ ಬ್ರಹ್ಮರಾಯರೆ | ಹರಿದ ತಲÉ ನಿಮಗೆ ಮುರಿದ ಮೀಸೆ | ನಾಭಿಯಲ್ಲಿ ಚಕ್ರ ನಾಭಿಯಲ್ಲಿ ಪದ್ಮಎಂದು ತ್ರಿಮೂರ್ತಿಗಳಲ್ಲಿ ಒಬ್ಬನಾದ ಚತುರ್ಮುಖ ಬ್ರಹ್ಮನ ಚಿತ್ರಣ ನೀಡುತ್ತಾರೆ.

ಅದೇ ರೀತಿ ನಾಗದರ್ಶನ ಬರಿಸುವಲ್ಲಿ ಇಲ್ಲಿ ಶಾಸ್ತಾರದ ಕುಲಬ್ರಹ್ಮಸ್ವಾಮಿಯವರು ನೆನೆವ ಕಾರ್ಯಗಳೆಲ್ಲವ ಲೇಸು ಮಾಡಿರೋಎಂಬ ಮಾತು ಬರುತ್ತದೆ. ಮುಂದೆ ಬ್ರಹ್ಮಲಿಂಗನ ಕತೆಯಲ್ಲಿ “.... ಇವರೆಲ್ಲರ ಒಡನಾಟದಿಂದ ಶಾಸ್ತಾರ ಕುಲಬ್ರಹ್ಮ ದೇವ ತೆರಳಿ ಬನ್ನಿ” “ಕಾಶ್ಮೀರದಿಂದ ದೇವ ಹೊರ್ಡುತಲಿದ್ದ | ಹಾರುಕುದುರೆ ಬ್ರಹ್ಮದೇವ ಏರಿಕೊಂಡು ....” “.... ಕಣ್ಣಡವಳಾರವು ಚಂದ ಶಾಸ್ತಾರಗೆಎಂಬಲ್ಲಿ ಬ್ರಹ್ಮನ ಮಹಿಮೆಯನ್ನು ಅಂದಚಂದವನ್ನು ವರ್ಣಿಸುತ್ತಾ ಶಾಸ್ತಾರನ ಕಣ್ಣು ಅರಳುವುದು ಚಂದ ಎನ್ನುತ್ತಾರೆ. ಮುಂದೆ ಬ್ರಹ್ಮನ ಬೇರೆ ಬೇರೆ ಹೆಸರುಗಳನ್ನು ಹೇಳುತ್ತಾ ಶೂಲಿ ಬ್ರಹ್ಮಯ್ಯಎಂದು ವರ್ಣಿಸಲಾಗಿದೆ. ಮುಂದೆ. ಅಚ್ಚ ಬ್ರಹ್ಮನೇ ನಿಮ್ಮ ಅರಸಿಯರೊಡನಾಡಿ | ಶೂರತ್ವದಲಿ ಬಾರೋ ಭೋಗ ಸೇವೆಗೆಎಂದು ಹೇಳಲಾಗಿದೆ. ಇಲ್ಲಿ ಶೂಲಿ ಬ್ರಹ್ಮನೆಂದರೆ ಶೂಲಪಾಣಿಯಾಗಿರುವ ಶಾಸ್ತಾರ ಸುಬ್ರಹ್ಮಣ್ಯ ಸ್ವಾಮಿಯೇ ಇರಬೇಕು. ಆದರೆ ಇದೇ ಪದ್ಯದಲ್ಲಿ ಕರವು ಎಂಟು ನಿಮಗೆ ಶಿರವು ನಾಲ್ಕು ಹಿರಿದಪ್ಪಂತೆ ದೇಹ ಬ್ರಹ್ಮರಾಯರ | ಹರಿದ ತಲೆ ನಿಮಗೆ ಮುರಿದ ಮೀಸೆ | ನಾಭಿಯಲ್ಲಿ ಚಕ್ರ ಅರವಿಂದ ಪದ್ಮ ||” ಎಂದು ಸೃಷ್ಟಿಕರ್ತ ಚತುರ್ಮುಖ ಬ್ರಹ್ಮನೆಂಬಂತೆ ಬ್ರಹ್ಮರಾಯನನ್ನು ಸ್ತುತಿಸಲಾಗಿದೆ. ನಾಗಮಂಡಲದಲ್ಲಿ ಆರಾಧನೆಗೊಳ್ಳುವ ಬ್ರಹ್ಮ ಯಾರು? ಎಂಬ ಬಗ್ಗೆ ಸ್ತುತಿಗಾರರಿಗೆ ಗೊಂದಲವಿದೆಯೆಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಒಂದೆಡೆ ಬ್ರಹ್ಮನನ್ನು ಕಾಶ್ಮೀರದಿಂದ ಹೊರಟು ಕುದುರೆ ಏರಿ ಬಂದ ವೀರನೆಂದು ಹೇಳಿದರೆ ಇನ್ನೊಂದೆಡೆ ಸಂನ್ಯಾಸಿ ಬ್ರಹ್ಮರಾಯ ಎನ್ನಲಾಗಿದೆ. ಮತ್ತೊಂದೆಡೆ ಬ್ರಹ್ಮನಿಗೆ ಶಾಸ್ತಾರ, ಶೂಲಿ ಬ್ರಹ್ಮ ಎನ್ನಲಾಗಿದೆ. ಅಚ್ಚ, ಬ್ರಹ್ಮ ಎಂದರೆ (ಅಚ್ಚ=ಅರಸ) ಅರಸ ಬ್ರಹ್ಮ ಎನ್ನುತ್ತಾರೆ. ಅಚ್ಚ ಬ್ರಹ್ಮನೆನ್ನುತ್ತಾ ಅರಸಿಯರೊಡನೆ ಆಡಿ ಬಾ ಎಂದು ವರ್ಣಿಸಲಾಗಿದೆ. ಹೀಗೆ ಬ್ರಹ್ಮನ ಸ್ವರೂಪದ ಬಗೆಗೆ ಸ್ಪಷ್ಟ ನಿಲುವು ಇಲ್ಲದಿರುವುದು ಕಾಣಿಸುತ್ತದೆ. ಆದರೆ ನಾಗ ಮತ್ತು ಬ್ರಹ್ಮ ಒಂದೇ ಶಕ್ತಿ ಎಂಬಂತೆ ಇಲ್ಲಿನ ಬ್ರಹ್ಮ ಚಿತ್ರಿತನಾಗಿಲ್ಲ. ಆತನನ್ನು ಎಲ್ಲೂ ನಾಗಬ್ರಹ್ಮನೆಂದು ಹೇಳುವುದಿಲ್ಲ. ಇಲ್ಲಿನ ಬ್ರಹ್ಮ ಮತ್ತು ನಾಗಗಳು ಬೇರೆ ಬೇರೆಯೇ ಶಕ್ತಿಗಳು. ಮೊದಲಿಗೆ ಬ್ರಹ್ಮನನ್ನು ಮಂಡಲಕ್ಕೆ ಆಹ್ವಾನಿಸುತ್ತಾರೆ. ಅನಂತರ ನಾಗನನ್ನು ಆಹ್ವಾನಿಸುತ್ತಾರೆ.

.2. ನಾಗ

ನಾಗದರ್ಶನದ ಸಂದರ್ಭದಲ್ಲಿ ಬ್ರಹ್ಮನನ್ನು ಮಂಡಲಕ್ಕೆ ಆಹ್ವಾನಿಸಿದ ನಂತರ ನಾಗನನ್ನು ಆಹ್ವಾನಿಸಲಾಗುತ್ತದೆ. ನಾಗನನ್ನು ಪಾತಾಳದ ಮಹಾಸ್ವಾಮಿ ಎಂದೂ ಹೇಳಲಾಗಿದೆ. ಹೆಣಗಿನಾಗ, ಗೋಧಿನಾಗ, ಶಂಖಪಾಲಕ, ಗುಳಿಕ, ತಕ್ಷಕ, ಕನ್ನಾಗ, ಉನ್ನಾಗ, ಉನ್ನಂತ, ಮಣಿನಾಗ, ಬಿನ್ನಾಣಿ, ಕಾಳಿಂಗ, ಕಾರ್ಕೋಟಕ, ವಾಸುಕಿ, ಧೃತರಾಷ್ಟ್ರ, ಸರ್ಪ, ಶೇಷ, ಕಪಿಲ, ಭೂಧರ ಮೊದಲಾದ ಹೆಸರುಗಳನ್ನು ಹೇಳಿ ಪರಿವಾರ ಸಮೇತನಾಗಿ ಮಂಡಲಭೋಗಕ್ಕೆ ಆಹ್ವಾನಿಸುವ ಬಗ್ಗೆ ವರ್ಣನೆ ಇದೆ. ಅಂದು ಅರ್ಜುನ ಬಂದು ಖಾಂಡವವನಕ್ಕೆ ಬೆಂಕಿ ಹಾಕಿದಾಗ, ಸಾಯದ ನಾಗನೇ ತೆರಳಿ ಬಾಎಂದು ಖಾಂಡವವನದಲ್ಲಿ ಬದುಕುಳಿದ ನಾಗನನ್ನು ವರ್ಣಿಸುತ್ತಾರೆ. ಆತನನ್ನೇ ಸರ್ಪರಾಜನೆಂದೂ, ಮಹಾಶೇಷನೆಂದೂ, ಶಿವಕೊರಳಾಭರಣವೆಂದೂ ಜನನಿಯ ಶಾಪಕ್ಕೋಸ್ಕರ ತಪಸ್ಸು ಮಾಡಿ, ಬ್ರಹ್ಮನನ್ನು ಒಲಿಸಿಕೊಂಡವನೆಂದೂ, ಪಾತಾಳ ಲೋಕದ ರಾಜ ಮಹಾನಾಗನೆಂದೂ ವರ್ಣಿಸಿದ್ದಾರೆ. ಪಾತಾಳದರಮನೆಯಿಂದ ಭೂಮಿಗೆ ಬರಲೆಂದು ಮರಿಮೊಟ್ಟೆಗಳೊಂದಿಗೆ ನಾಗ ರಥವೇರಿ ಬರುವಾಗ ಭೂಕಾಂತೆ ಮಾರ್ಗವನ್ನು ಬಿಡದಿರಲು ಬಾಲದ ತುದಿಯನ್ನು ಪಾತಾಳಕ್ಕೆ ಊರಿ, ಹೆಡೆಯೆತ್ತಿ ಮೇಲೆ ನೋಡಲು ವಿಷ ಹೊರಗೆ ಬಂದು ಸುಡಲು, ವಿಷಜ್ವಾಲೆಯು ತಡೆಯದೆ ಭೂದೇವಿ ಕಂಬನಿ ಸುರಿಸಲು ಭೂದೇವಿಯನ್ನು ಕ್ಷಮಿಸಿ, ಹುತ್ತ ಸೇರಿದ ನಾಗನು ಕಾಳ್ಗಿಚ್ಚಿಗೆ ಸಿಕ್ಕಿ ಸಾಯುತ್ತಾನೆ. ಈ ರೀತಿಯಲ್ಲಿ ಮಡಿದ ಪರಿವಾರಕ್ಕೆ ಮೋಕ್ಷವಿಲ್ಲದಿರಲು, ಸುಬ್ರಹ್ಮಣ್ಯನ ಸಣ್ಣ ಪರಿವಾರದೊಡನೆ ಸೇರಲು, ಸುಬ್ರಹ್ಮಣ್ಯ ದುಷ್ಟಜನರ ಬಗ್ಗೆ ಕೋಪಿಸಿಕೊಂಡು ಕೊಳನಾಗನನ್ನು ಮುಂದಿಟ್ಟುಕೊಂಡು ಬಿಳಿಕುಷ್ಟ ಇತ್ಯಾದಿ ರೋಗಗಳನ್ನು ಉಂಟು ಮಾಡುತ್ತಾನೆ. ಆಗ ಜನರು ಪ್ರಶ್ನೆ ಇಡಿಸಲು ಕದ್ರು ಪುತ್ರರಿಗೆ ಭೋಗ ಕೊಡುವ ತನಕ ಉಪದ್ರ ಶಾಂತವಾಗದು ಎನ್ನುತ್ತಾರೆ. ಆಗ ಜನರು ಹಗಲಲ್ಲಿ, ಪೂಜೆಯನ್ನು ರಾತ್ರಿಯಲ್ಲಿ ಭೋಗಸೇವೆಯನ್ನು ಕೊಡುತ್ತಾರೆ ಎಂಬ ಕತೆಯನ್ನು ಹಾಡಿನ ರೂಪದಲ್ಲಿ ಹೇಳುತ್ತಾರೆ. ಅಷ್ಟಕುಲನಾಗರಾದ ಮಹಾನಾಗ, ಹೆಣಗಿ ನಾಗ, ಕೋನಾಗ, ಶಂಕಪಾಲಕ, ಗುಳಿಕ, ತಕ್ಷಕ, ಕನ್ನಾಗರನ್ನು ಮಂಡಲಕ್ಕೆ ಆಹ್ವಾನಿಸುತ್ತಾರೆ.

ಅಷ್ಟಕುಲ ನಾಗರು ಯಾರೆಂಬ ಬಗ್ಗೆ ಗೊಂದಲ ಕಾಣಿಸುತ್ತದೆ. ಮುಂದೆ ಬಿನ್ನಾಣಿ, ಕಾಳಿಂಗ, ಕಾರ್ಕೋಟಕ, ಧೃತರಾಷ್ಟ್ರ, ವಾಸುಕಿ, ಅನಂತ, ಪದ್ಮ ತೆರಳಿ ಬಾರೋಎಂದು ಹೇಳುತ್ತಾರೆ.

ಇಲ್ಲಿ ನಾಗನನ್ನು ಲಕ್ಷ್ಮಣರೂಪನೆ ಲಕ್ಷ್ಮಣನೆಎಂದು ವರ್ಣಿಸಿದ್ದಾರೆ. ಖಾಂಡವ ದಹನ, ಆಸ್ತೀಕನ ಕತೆಯನ್ನು ಸೂಕ್ಷ್ಮವಾಗಿ ಸೂಚಿಸುತ್ತಾರೆ. ಹರನ ಕರುಣೆಯಿಂದ ವೈರಿಯನ್ನು ಗೆದ್ದು, ಷಣ್ಮುಖನನ್ನು ಸೇರಿದವನೆಂದೂ, ಕುಮಾರ ಪರ್ವತದಲ್ಲಿ ಷಣ್ಮುಖನ ಜೊತೆ ಇರುವವನು ಎಂದು ನಾಗನ ಬಗ್ಗೆ ಹೇಳಿದೆ. ಆತನನ್ನು ವೀರವಾಸುಕಿ ಎಂದೂ ಹೇಳಿದೆ. ಆದರೆ ಇನ್ನೊಂದೆಡೆ ವಾಸುಕೀ ಸುಬ್ರಹ್ಮಣ್ಯ ಬಾರೋಎಂದು ನಾಗ ಮತ್ತು ಸುಬ್ರಹ್ಮಣ್ಯರ ತಾದಾತ್ಮ ್ಯವನ್ನು ಹೇಳಿದೆ.

.3. ಯಕ್ಷಿ

ಯಕ್ಷಿಯನ್ನು ದೇವಲೋಕದ ಹೆಣ್ಣೆಂದೂ ಹಾಲುವರ್ಣದವಳೆಂದೂ ಹೇಳಿದೆ. ಹೆಣ್ಣು ಯಕ್ಷಿ ಗಂಡುಯಕ್ಷಿ, ಭೂತಯಕ್ಷಿ, ಪ್ರೇತಯಕ್ಷಿ | ತಾಂಬೂಲಯಕ್ಷಿ, ನಾಗಯಕ್ಷಿ ನಲಿದಾಮೇಲೆ ಎಂಬಲ್ಲಿ ಯಕ್ಷಿಯ ಸ್ವರೂಪದ ಬಗೆಗೂ ಗೊಂದಲವಿರುವುದು ತಿಳಿಯತ್ತದೆ. ಇಲ್ಲಿ ಯಕ್ಷಿ ಎಂದರೆ ನಾಗಯಕ್ಷಿಯ? ಭೂತಯಕ್ಷಿಯೆ? ಪ್ರೇತ ಯಕ್ಷಿಯೇ? ಅಥವಾ ಇವರೆಲ್ಲ ಯಕ್ಷಿಯ ಪರಿವಾರದವರೇ ಎಂಬ ಬಗ್ಗೆ ಮಾಹಿತಿ ಸಿಗುವುದಿಲ್ಲ. ಯಕ್ಷಿಯ ಕತೆಯಲ್ಲಿ ದೇವಲೋಕದಲ್ಲಿರುವ ಯಕ್ಷಿಗೆ ಭೂಲೋಕದಲ್ಲಿ ಸೇವೆ ನಡೆಯುವಾಗ ಯಕ್ಷ ವಾದ್ಯವ ಹಿಡಿದು ಬಾರಿಸುವಾಗ, ಢಕ್ಕೆಯ ಧ್ವನಿ ಕೇಳಿ ನಿದ್ರೆ ಬಾರದಿರಲು ದೇವೇಂದ್ರನ ಬಳಿಗೆ ಹೋಗುತ್ತಾಳೆ. ದೇವೇಂದ್ರ ಗಮನಿಸದಿರಲು ಕೋಪಗೊಂಡು ನಂದಿಬಟ್ಟಲು ಹೂ ಕೊೈದು, ಮಾಲೆಯ ಧರಿಸಲು ದೇವಪೀಠ ತಲೆಕೆಳಗಾಯಿತು. ಆಗ ದೇವೇಂದ್ರ ದೇವಪೀಠವನ್ನೂ ತಂದುಕೊಟ್ಟು, ದೇವಾಭರಣವನ್ನು, ಹೆಣ್ಣಾನೆಯನ್ನು ಕೊಡುತ್ತಾನೆ. ಅವಳು ಗಂಡು ಯಕ್ಷನ ಕೈ ಹಿಡಿದುಕೊಂಡು, ಭೂಲೋಕಕ್ಕೆ ತೆರಳಿ ಅಶ್ವತ್ಥಮರದಡಿಯಲ್ಲಿ ಉಯ್ಯಾಲೆಯಾಡಿ ಮಂಡಲಕ್ಕೆ ಬರುತ್ತಾಳೆಎಂದು ಹೇಳಲಾಗಿದೆ.

.4. ರಕ್ತೇಶ್ವರಿ

ರಕ್ತೇಶ್ವರಿಯನ್ನು ಅಮ್ಮನವರು, ಹೊತ್ತಾರೆ ನೆರಿಯವಳು, ಹೊನ್ನೋಲೆ ಕಿವಿಯವಳು ಎಂದು ವರ್ಣಿಸಲಾಗಿದೆ. ಕೆಂಪುರಕ್ತೇಶ್ವರಿ, ಶಾಂತರಕ್ತೇಶ್ವರಿ, ಸಂಹಾರ ರಕ್ತೇಶ್ವರಿ, ರಕ್ತಾಕ್ಷಿ, ರಕ್ತಗಂಧಿ ಎಂಬ ಯೋಗಿನಿಗಣಗಳ ಪರಿವಾರವುಳ್ಳವಳು ಎಂದು ಹೇಳಿದೆ. ಮೂಕಾಸುರನನ್ನು ಕೊಂದು ಕೊಲ್ಲೂರಲ್ಲಿ ನೆಲೆನಿಂತವಳೂ, ಮಹಿಷಾಸುರನನ್ನು ಕೊಂದವಳು ಎಂದೂ ವರ್ಣಿಸಿದೆ.

.5. ಶಿವ

ಶಿವನನ್ನು ತಲೆಯಲ್ಲಿ ಗಂಗೆ ಹೊತ್ತವನೆಂದೂ, ಕೈಯಲ್ಲಿ ಕಪಾಲವ ಹಿಡಿದವನೆಂದೂ, ವಿಷಪಾನ ಮಾಡಿದವನೆಂದೂ ವರ್ಣಿಸಲಾಗಿದೆ. ಬ್ರಹ್ಮಲಿಂಗ, ಮಹಾನಾಗ, ಹೆಣ್ಣುಯಕ್ಷಿ, ರಕ್ತೇಶ್ವರಿ, ಹಿರೇನಂದಿ, ಮಳ್ಯಾಳ ಬಟ್ರು ಮೊದಲಾದ ಪರಿವಾರ ಗಣಗಳನ್ನು ಹೊಂದಿದವನೆಂದೂ ವರ್ಣಿಸಲಾಗಿದೆ.

.6. ಜೆಟ್ಟಿಗರಾಯ

ನೇತ್ರಣಿ ಜೆಟ್ಟಿಗರಾಯ, ವರಗದ ಜೆಟ್ಟಿಗರಾಯ, ಹಟ್ಟಿಯಂಗಡಿ ಜೆಟ್ಟಿಗರಾಯ ಎಂದೀತನನ್ನು ವರ್ಣಿಸಲಾಗಿದೆ.

.7. ನಂದಿ

ತಲೆಗೆ ಖಡ್ಗವನ್ನಿಟ್ಟವನು, ಉದರಗಂಟೆಯ ಕಟ್ಟಿ ಛಲದಂಕನಾದವನು ಎಂದು ನಂದಿಗೆ ಹೇಳಿದೆ. ಉಳ್ಳಾಳ ಎಂಬ ಸ್ಥಳದಲ್ಲಿ ಚಿನ್ನಮ್ಮ ಹುಟ್ಟಿ ಬಾಳುತ್ತಿದ್ದಳು. 16 ವರ್ಷ ತುಂಬಿತ್ತು. ಪುಷ್ಪಾಳಿಕೆಯೊಳೊಪ್ಪಿ ಬಾಳುವಾಗ ಚಿಕ್ಕಯ್ಯಶೆಟ್ಟಿ ಜೋಗಪ್ಪಶೆಟ್ಟಿ ಹುಟ್ಟಿದರು. 16 ವರ್ಷವಾಗುವಾಗ ದಾಯಾದ್ಯ ಮತ್ಸರದಿಂದ ರಣಕಾಳಗವಾಯಿತು. ಕಾಳಗದಲ್ಲಿ ಇಬ್ಬರೂ ಸತ್ತು ಹಿರೆನಂದಿ ಕಿರೆನಂದಿ ಎನಿಸಿಕೊಂಡು ಉಳ್ಳಾಲದಲ್ಲಿರಲು ಸಮುದ್ರರಾಜನು ಒತ್ತಿ ಬರಲು ಉಳ್ಳಾಲ ತೇಲಿ ಹೋಗಲು ಉತ್ತರದೇಶಕ್ಕೆ ಹೋಗಿ, ಇಲ್ಲಿಯೇ ಸ್ಥಳ ಒಳ್ಳೆಯದೆಂದು ಅಲ್ಲಲ್ಲಿ ಮನೆ ಕಟ್ಟಿಸಿಕೊಂಡು ಹಿರೆನಂದಿ ಕಿರೆನಂದಿಯರು ಭೇದವಿಲ್ಲದೆ ಆಡುತ್ತಾ ಇದ್ದರುಎಂಬ ಕಥೆಯನ್ನು ನಾಗಮಂಡಲ ಸಂದರ್ಭದಲ್ಲಿ ಹೇಳುತ್ತಾರೆ.







Saturday, 3 August 2013

ತುಳುವರ ಆಟಿ ಕಳೆಂಜ-ಒಂದು ತುಳು ಜಾನಪದ ಕುಣಿತ

Photo: ತುಳುವರ ಆಟಿ  ಕಳೆಂಜ
 ತುಳುನಾಡಿನಲ್ಲಿ ಆಟಿಕಳೆಂಜನ ಕುಣಿತ ಬಹಳ ಪ್ರಸಿದ್ಧವಾದುದು. ಇದು ಮುಗೇರರ ,ನಲಿಕೆಯವರ ಆಚರಣಾತ್ಮಕ ಕುಣಿತ. ಮುಗೇರರು ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಆಟಿಕಳೆಂಜದ ಪ್ರದರ್ಶನ ಮಾಡುತ್ತಾರೆ. ತುಳುನಾಡಿನ ಇತರ ಪ್ರದೇಶಗಳಲ್ಲಿ ನಲಿಕೆಯವರು ಆಟಿಕಳೆಂಜ ಪ್ರದರ್ಶನ ಮಾಡುತ್ತಾರೆ. ಹೆಸರೇ ಹೇಳುವಂತೆ ಇದು ಆಟಿ ತಿಂಗಳಿನಲ್ಲಿ ಮಾತ್ರ ಇರುವ ಕುಣಿತ. ಕಳೆಂಜನನ್ನು ಬೆರ್ಮೆರ್ ಮಾಣಿ ಎಂದೂ, ಕಲೆಂಜ ಬೆರ್ಮೆರ್ ಎಂದೂ, ಬೆರ್ಮೆರ್ ಎಂದೂ ಕರೆಯುತ್ತಾರೆ. ಈತನನ್ನು ಬೆರ್ಮೆರ್ನ ಪ್ರತಿನಿಧಿ ಎಂದೂ ಹೇಳುತ್ತಾರೆ. “ತುಳುನಾಡಿನ ಪ್ರಾಚೀನ ಆರಾಧ್ಯದೈವವಾದ ಬೆರ್ಮೆರ್ನ್ ಪ್ರತಿನಿಧಿಯಾದ ಕಳೆಂಜನು ಆಟಿತಿಂಗಳಿನಲ್ಲಿ ಊರಿಗೆ ಹಬ್ಬದ ಮಾರಿಬೀದಿಯನ್ನು ಕಳೆಯುವುದಕ್ಕಾಗಿಯೇ ಬರುವುದೇ ‘ಆಟಿ ಕಳೆಂಜ’ ಎಂದು ಗುರುತಿಸಬಹುದು” 
ಈತನಿಗೆ ಕೇಪುಲ ಗಿಡದ ಕೋಲಿನಿಂದ ಮಾಡಿದ ಮುಡಿ (ಕಿರೀಟ)ವಿದೆ. ಮೈಕೈಗಳಿಗೆ ಬಿಳಿಬಣ್ಣದ ಸೇಡಿಯನ್ನು ಬಳಿದು, ಕಿಬ್ಬೊಟ್ಟೆಯಿಂದ ಎದೆಯವರೆಗೆ ಕೆಂಪುಬಣ್ಣದಲ್ಲಿ ಗುಣಿಸು (x) ಚಿಹ್ನೆಯ ಆಕಾರವನ್ನು ಬಿಡಿಸುತ್ತಾರೆ. ಸೊಂಟಕ್ಕೆ ತೆಂಗಿನ ತಿರಿ, ಮುಖಕ್ಕೆ ತೆಂಗಿನ ನಾರಿನಲ್ಲಿ ಮಾಡಿದ ಮೀಸೆ ಮತ್ತು ಗಡ್ಡ ಇರುತ್ತದೆ. ಕೈಯಲ್ಲಿ ಉದ್ದದ ಪನೆಛತ್ರ ಮತ್ತು ದುಡಿ ಇರುತ್ತದೆ.  ಆತನ ರೂಪದ ವರ್ಣನೆ ಹೀಗಿದೆ:
ತುಳು: ಬಿರ್ಮರೆ ಮಾನಿಯಾಂಡ ಕಲೆಂಜ ಮುಡಿದೀವೊನು
 ಮುದಿ ದೀವೊನು ಕಲೆಂಜ ಸತ್ತಿಗೆ, ಪತ್ತೊನು
 ಸತ್ತಿಗೆ ಪತ್ತೊನು ಕಲೆಂಜ ಸವಲೆಯ ಬೀಜೆಮಾನು
 ಸವಲೋ ಬೀಜೋನು ಬೀರ ತಿತೊನು
 ಕಲೆಂಜ ಕಲೆಂಜ ಕಲೆಂಜ ಬೆರ್ಮರ್
ಕನ್ನಡ: ಬೆರ್ಮರ ಪ್ರತಿನಿಧಿಯಾದರೆ ಕಲೆಂಜ ಕಿರೀಟ ಇರಿಸಿಕೋ
 ಕಿರೀಟ ಇಟ್ಟುಕೋ ಕಲೆಂಜ ಛತ್ರ ಹಿಡಿದುಕೋ
 ಛತ್ರ ಹಿಡಿದುಕೋ ಕಲೆಂಜ ಚಾಮರ ಹಿಡಿದುಕೋ
 ಚಾಮರ ಬೀಸಿಕೋ ಕಲೆಂಜ ಬಿರುದು ಕರೆಸಿಕೋ
 ಕಲೆಂಜ ಕಲೆಂಜ ಕಲೆಂಜ ಕಲೆಂಜ ಬಿರ್ಮೆರ್
ಇಲ್ಲಿ ಕಲೆಂಜನನ್ನು ಬೆರ್ಮರ್ ಮಾಣಿ ಎಂದು ಹೇಳಿದ್ದರೂ ಕಿರೀಟ ಇಟ್ಟುಕೋ, ಸತ್ತಿಗೆ ಹಿಡಿ, ಚಾಮರ ಬೀಸಿಕೋ, ಇತ್ಯಾದಿ ಅರಸುವಿಗೆ ಉಚಿತವಾದ ವರ್ಣನೆಗಳನ್ನು ಮಾಡಿದೆ.
ಆಟಿಕಲೆಂಜನು ಋತುಮತಿಯಾಗದ ಹುಡುಗಿಯ ತಲೆಗೆ, ಗರ್ಭಿಣಿಯಾಗದ ಹೆಂಗಸಿನ ತಲೆಗೆ, ದನ ಕರು ಹಾಕದಿದ್ದರೆ ಅದರ ತಲೆಗೆ, ಮರ ಕಾಯಿ ಬಿಡದಿದ್ದರೆ ಅದರ ಬುಡಕ್ಕೆ ನೀರು ಹೊಯ್ಯುವ ಪದ್ಧತಿ ಇದೆ. ಇಲ್ಲಿ ಕಲೆಂಜ ಸಂತಾನವನ್ನು ನೀಡುವ ಶಕ್ತಿಯಾಗಿ ಕಾಣಿಸುತ್ತಾನೆ. ಬೆರ್ಮರ್ ಕೂಡ ಫಲೀಕರಣದ ದೇವತೆ. ಮುಗೇರ್ಲು ಕೋಲದ ಆರಂಭದಲ್ಲಿ ಬೆರ್ಮೆರ್ ಸಂಧಿಯನ್ನು ಹೇಳುತ್ತಾರೆ. ಆ ಸಂಧಿಯಲ್ಲಿ ವರ್ಣಿಸಿರುವಂತೆ ಬೆರ್ಮೆರ್ನ ಸತ್ತಿಗೆ, ಚಾಮರ, ಕಿರೀಟಗಳು ಇವೆ. ಈ ಬಗ್ಗೆ ಡಾ. ಅಭಯ ಕುಮಾರ ಕೌಕ್ರಾಡಿ ಅವರು “ಈ ಸಂಧಿ ಬೆರ್ಮೆರ್ ಸ್ವರೂಪವನ್ನು ತಿಳಿಸಿದರೂ, ಈ ರೀತಿಯ ಬಿರ್ಮೆರ್ ಮೂರ್ತಿಯನ್ನು ತುಳುನಾಡಿನಲ್ಲಿ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಆದರೆ ತುಳುನಾಡಿನ ಆಟಿತಿಂಗಳಿನಲ್ಲಿ ಬರುವ ಕಲೆಂಜನನ್ನು ಮುಗೇರರು ಬಿರ್ಮೆರ್ ಮಾನಿ ಎಂದು ಕರೆಯುತ್ತಾರೆ. ಅವನ ಸ್ವರೂಪವು ಸುಮಾರಾಗಿ ಈ ಸಂಧಿಯಲ್ಲಿ ಚಿತ್ರಿತವಾಗಿರುವಂತೆಯೇ ಕಂಡುಬರುತ್ತದೆ. ಹೀಗೆ ದಕ್ಷಿಣ ಕನ್ನಡದ ಒಂದು ವಿಶಿಷ್ಟ ಪ್ರಾಚೀನ ಆರಾಧನ ದೈವವೇ ಈ ಬಿರ್ಮೆರ್ ಎಂದು ನಿರ್ಧರಿಸಬಹುದಾಗಿದೆ” ಎಂದು ಹೇಳಿದ್ದಾರೆ.ಮಳೆಗಾಲದ ಆಟಿ  ತಿಂಗಳಿನಲ್ಲಿ ಮನೆ ಮನೆಗೆ ಬರುವ ಆತಿ ಕಳೆಂಜ ಕಾಡಿನಿಂದ ಜನರಿಗೆ ಬೇಕಾದ ಔಷಧ ಗಿಡಮೂಲಿಕೆಗಳನ್ನು ತಂದು ಕೊಡುತ್ತಾನೆ .ಆಟಿ ಕಳೆನಜನಿಗೆ ಮೆಣಸು ಉಪ್ಪು ಅಕ್ಕಿ ಮೊದಲಾದವುಗಳನ್ನು ನೀಡುತ್ತಾರೆ .ಮಳೆಗಾಲದ ಗದ್ದೆಯ ಕೆಲಸ ಎಲ್ಲ ಮುಗಿದ ನಂತರ ಮೂಲದ ಉಳುಮೆಗಾರ ಮೊದಲಾದವರಿಗೆ ಕೆಲಸ ಇರುವುದಿಲ್ಲ .ಮಳೆ ಬಂದು ಕಾಡಿನಲ್ಲಿ ಔಷಧ ಗಿಡ ಮೂಲಿಕೆಗಳು ಸಮೃದ್ಧವಾಗಿ ಸಿಗುವ ಕಾಲ ಆದ್ದರಿಂದ ಆಗ ಅವರು ಕಾಡಿಗೆ ಹೋಗಿ ಬೇಕಾದ ಗಿಡಮೂಲಿಕೆಗಳನ್ನು ತಂದು ಮನೆ ಮನೆಗೆ ಹೋಗಿ ಬೇಕಾದ ಔಷಧಗಳನ್ನು ನೀಡುವುದಕ್ಕಾಗಿ ಬರುವ ಸಾಧ್ಯತೆ ಇದೆ ಆಗ ಅವರಿಗೆ ಬೇಕಾದ ಆಹಾರ ಮೆಣಸು ಇತ್ಯಾದಿಗಳನ್ನು ಮನೆ ಮಂದಿ ನೀದುತ್ತಿದ್ದಿರಬಹುದು .ಈ ಸಂದರ್ಭದಲ್ಲಿ ಅವರು ಮನೋರಂಜನೆಗಾಗಿ ದುಡಿ ಬಡಿದು ನರ್ತಿಸುತ್ತಿದ್ದಿರುವ ಸಾಧ್ಯತೆ ಇದೆ .
ಏನೇ ಆದರೂ ಈಗ ನಾವು ಆಟಿ  ಕಲೆಂಜನನ್ನು ನೋಡ ಬೇಕಾದರೆ ಸುಲಭ ಇಲ್ಲ ಈಗ ಹೆಚ್ಚಿನವರು ಆಟಿ ಕಲೆಂಜ ಕಟ್ಟಿ ಮನೆ ಮನೆಗೆ ಬರುವುದನ್ನು ನಿಲ್ಲಿಸಿದ್ದಾರೆ .ಅವರಿಗೆ ಸೂಕ್ತ ಗೌರವ ಸಿಗದ್ದು ಇದಕ್ಕೆ ಮುಖ್ಯ ಕಾರಣ ಆಗಿದೆ ಆಟಿ ಕಳೆಂಜ ಸೋನದ ಜೋಗಿ ಮೊದಲಾದ ಕುಣಿತವಾಡುತ್ತಾ  ಬರುತ್ತಿದ್ದವರನ್ನು ನಮ್ಮ ತುಳು ಸಂಸ್ಕೃತಿಯ ಪ್ರವಾಹಕರೆಂದು ಗೌರವಿಸದೆ ಅವರನ್ನು ತಿರುಪೆಯವರನ್ನು ಕಾಣುವಂತೆ ಅವಜ್ಞೆಯಿಂದ ಕಂಡದ್ದೇ ಇದಕ್ಕೆ ಮುಖ್ಯ ಕಾರಣವಾಗಿದೆ
ತುಳುವರ ಆಟಿ ಕಳೆಂಜ-ಒಂದು ತುಳು ಜಾನಪದ ಕುಣಿತ ತುಳುನಾಡಿನಲ್ಲಿ ಆಟಿಕಳೆಂಜನ ಕುಣಿತ ಬಹಳ ಪ್ರಸಿದ್ಧವಾದುದು. copy rights reserved (C)Dr.laxmi g prasad ಇದು ಮುಗೇರರ ,ನಲಿಕೆಯವರ ಆಚರಣಾತ್ಮಕ ಕುಣಿತ. ಮುಗೇರರು ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಆಟಿಕಳೆಂಜದ ಪ್ರದರ್ಶನ ಮಾಡುತ್ತಾರೆ. ತುಳುನಾಡಿನ ಇತರ ಪ್ರದೇಶಗಳಲ್ಲಿ ನಲಿಕೆಯವರು ಆಟಿಕಳೆಂಜ ಪ್ರದರ್ಶನ ಮಾಡುತ್ತಾರೆ. ಹೆಸರೇ ಹೇಳುವಂತೆ ಇದು ಆಟಿ ತಿಂಗಳಿನಲ್ಲಿ ಮಾತ್ರ ಇರುವ ಕುಣಿತ. ಕಳೆಂಜನನ್ನು ಬೆರ್ಮೆರ್ ಮಾಣಿ ಎಂದೂ, ಕಲೆಂಜ ಬೆರ್ಮೆರ್ ಎಂದೂ, ಬೆರ್ಮೆರ್ ಎಂದೂ ಕರೆಯುತ್ತಾರೆ.copy rights reserved (C)Dr.laxmi g prasad ಈತನನ್ನು ಬೆರ್ಮೆರ್ನ ಪ್ರತಿನಿಧಿ ಎಂದೂ ಹೇಳುತ್ತಾರೆ. “ತುಳುನಾಡಿನ ಪ್ರಾಚೀನ ಆರಾಧ್ಯದೈವವಾದ ಬೆರ್ಮೆರ್ನ್ ಪ್ರತಿನಿಧಿಯಾದ ಕಳೆಂಜನು ಆಟಿತಿಂಗಳಿನಲ್ಲಿ ಊರಿಗೆ ಹಬ್ಬದ ಮಾರಿಬೀದಿಯನ್ನು ಕಳೆಯುವುದಕ್ಕಾಗಿಯೇ ಬರುವುದೇ ‘ಆಟಿ ಕಳೆಂಜ’ ಎಂದು ಗುರುತಿಸಬಹುದು”
ಈತನಿಗೆ ಕೇಪುಲ ಗಿಡದ ಕೋಲಿನಿಂದ ಮಾಡಿದ ಮುಡಿ (ಕಿರೀಟ)ವಿದೆ. ಮೈಕೈಗಳಿಗೆ ಬಿಳಿಬಣ್ಣದ ಸೇಡಿಯನ್ನು ಬಳಿದು, ಕಿಬ್ಬೊಟ್ಟೆಯಿಂದ ಎದೆಯವರೆಗೆ ಕೆಂಪುಬಣ್ಣದಲ್ಲಿ ಗುಣಿಸು (x) ಚಿಹ್ನೆಯ ಆಕಾರವನ್ನು ಬಿಡಿಸುತ್ತಾರೆ. ಸೊಂಟಕ್ಕೆ ತೆಂಗಿನ ತಿರಿ, ಮುಖಕ್ಕೆ ತೆಂಗಿನ ನಾರಿನಲ್ಲಿ ಮಾಡಿದ ಮೀಸೆ ಮತ್ತು ಗಡ್ಡ ಇರುತ್ತದೆ.
copy rights reserved (C)Dr.laxmi g prasad ಕೈಯಲ್ಲಿ ಉದ್ದದ ಪನೆಛತ್ರ ಮತ್ತು ದುಡಿ ಇರುತ್ತದೆ. ಆತನ ರೂಪದ ವರ್ಣನೆ ಹೀಗಿದೆ:
ತುಳು: ಬಿರ್ಮರೆ ಮಾನಿಯಾಂಡ ಕಲೆಂಜ ಮುಡಿದೀವೊನು
ಮುದಿ ದೀವೊನು ಕಲೆಂಜ ಸತ್ತಿಗೆ, ಪತ್ತೊನು
ಸತ್ತಿಗೆ ಪತ್ತೊನು ಕಲೆಂಜ ಸವಲೆಯ ಬೀಜೆಮಾನು
ಸವಲೋ ಬೀಜೋನು ಬೀರ ತಿತೊನು
ಕಲೆಂಜ ಕಲೆಂಜ ಕಲೆಂಜ ಬೆರ್ಮರ್
ಕನ್ನಡ: ಬೆರ್ಮರ ಪ್ರತಿನಿಧಿಯಾದರೆ ಕಲೆಂಜ ಕಿರೀಟ ಇರಿಸಿಕೋ
ಕಿರೀಟ ಇಟ್ಟುಕೋ ಕಲೆಂಜ ಛತ್ರ ಹಿಡಿದುಕೋ
ಛತ್ರ ಹಿಡಿದುಕೋ ಕಲೆಂಜ ಚಾಮರ ಹಿಡಿದುಕೋ
ಚಾಮರ ಬೀಸಿಕೋ ಕಲೆಂಜ ಬಿರುದು ಕರೆಸಿಕೋ
ಕಲೆಂಜ ಕಲೆಂಜ ಕಲೆಂಜ ಕಲೆಂಜ ಬಿರ್ಮೆರ್
ಇಲ್ಲಿ ಕಲೆಂಜನನ್ನು ಬೆರ್ಮರ್ ಮಾಣಿ ಎಂದು ಹೇಳಿದ್ದರೂ ಕಿರೀಟ ಇಟ್ಟುಕೋ, ಸತ್ತಿಗೆ ಹಿಡಿ, ಚಾಮರ ಬೀಸಿಕೋ, ಇತ್ಯಾದಿ ಅರಸುವಿಗೆ ಉಚಿತವಾದ ವರ್ಣನೆಗಳನ್ನು ಮಾಡಿದೆ.
ಆಟಿಕಲೆಂಜನು ಋತುಮತಿಯಾಗದ ಹುಡುಗಿಯ ತಲೆಗೆ, ಗರ್ಭಿಣಿಯಾಗದ ಹೆಂಗಸಿನ ತಲೆಗೆ, ದನ ಕರು ಹಾಕದಿದ್ದರೆ ಅದರ ತಲೆಗೆ, ಮರ ಕಾಯಿ ಬಿಡದಿದ್ದರೆ ಅದರ ಬುಡಕ್ಕೆ ನೀರು ಹೊಯ್ಯುವ ಪದ್ಧತಿ ಇದೆ.
copy rights reserved (C)Dr.laxmi g prasad ಇಲ್ಲಿ ಕಲೆಂಜ ಸಂತಾನವನ್ನು ನೀಡುವ ಶಕ್ತಿಯಾಗಿ ಕಾಣಿಸುತ್ತಾನೆ. ಬೆರ್ಮರ್ ಕೂಡ ಫಲೀಕರಣದ ದೇವತೆ. ಮುಗೇರ್ಲು ಕೋಲದ ಆರಂಭದಲ್ಲಿ ಬೆರ್ಮೆರ್ ಸಂಧಿಯನ್ನು ಹೇಳುತ್ತಾರೆ. ಆ ಸಂಧಿಯಲ್ಲಿ ವರ್ಣಿಸಿರುವಂತೆ ಬೆರ್ಮೆರ್ನ ಸತ್ತಿಗೆ, ಚಾಮರ, ಕಿರೀಟಗಳು ಇವೆ. copy rights reserved (C)Dr.laxmi g prasadಈ ಬಗ್ಗೆ ಡಾ. ಅಭಯ ಕುಮಾರ ಕೌಕ್ರಾಡಿ ಅವರು “ಈ ಸಂಧಿ ಬೆರ್ಮೆರ್ ಸ್ವರೂಪವನ್ನು ತಿಳಿಸಿದರೂ, ಈ ರೀತಿಯ ಬಿರ್ಮೆರ್ ಮೂರ್ತಿಯನ್ನು ತುಳುನಾಡಿನಲ್ಲಿ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಆದರೆ ತುಳುನಾಡಿನ ಆಟಿತಿಂಗಳಿನಲ್ಲಿ ಬರುವ ಕಲೆಂಜನನ್ನು ಮುಗೇರರು ಬಿರ್ಮೆರ್ ಮಾನಿ ಎಂದು ಕರೆಯುತ್ತಾರೆ. ಅವನ ಸ್ವರೂಪವು ಸುಮಾರಾಗಿ ಈ ಸಂಧಿಯಲ್ಲಿ ಚಿತ್ರಿತವಾಗಿರುವಂತೆಯೇ ಕಂಡುಬರುತ್ತದೆ. ಹೀಗೆ ದಕ್ಷಿಣ ಕನ್ನಡದ ಒಂದು ವಿಶಿಷ್ಟ ಪ್ರಾಚೀನ ಆರಾಧನ ದೈವವೇ ಈ ಬಿರ್ಮೆರ್ ಎಂದು ನಿರ್ಧರಿಸಬಹುದಾಗಿದೆ” ಎಂದು ಹೇಳಿದ್ದಾರೆ.ಮಳೆಗಾಲದ ಆಟಿ ತಿಂಗಳಿನಲ್ಲಿ ಮನೆ ಮನೆಗೆ ಬರುವ copy rights reserved (C)Dr.laxmi g prasadಆತಿ ಕಳೆಂಜ ಕಾಡಿನಿಂದ ಜನರಿಗೆ ಬೇಕಾದ ಔಷಧ ಗಿಡಮೂಲಿಕೆಗಳನ್ನು ತಂದು ಕೊಡುತ್ತಾನೆ .ಆಟಿ ಕಳೆನಜನಿಗೆ ಮೆಣಸು ಉಪ್ಪು ಅಕ್ಕಿ ಮೊದಲಾದವುಗಳನ್ನು ನೀಡುತ್ತಾರೆ .ಮಳೆಗಾಲದ ಗದ್ದೆಯ ಕೆಲಸ ಎಲ್ಲ ಮುಗಿದ ನಂತರ ಮೂಲದ ಉಳುಮೆಗಾರ ಮೊದಲಾದವರಿಗೆ ಕೆಲಸ ಇರುವುದಿಲ್ಲ .ಮಳೆ ಬಂದು ಕಾಡಿನಲ್ಲಿ ಔಷಧ ಗಿಡ ಮೂಲಿಕೆಗಳು ಸಮೃದ್ಧವಾಗಿ ಸಿಗುವ ಕಾಲ ಆದ್ದರಿಂದ ಆಗ ಅವರು ಕಾಡಿಗೆ ಹೋಗಿ ಬೇಕಾದ ಗಿಡಮೂಲಿಕೆಗಳನ್ನು ತಂದು ಮನೆ ಮನೆಗೆ ಹೋಗಿ ಬೇಕಾದ ಔಷಧಗಳನ್ನು ನೀಡುವುದಕ್ಕಾಗಿ ಬರುವ ಸಾಧ್ಯತೆ ಇದೆ ಆಗ ಅವರಿಗೆ ಬೇಕಾದ ಆಹಾರ ಮೆಣಸು ಇತ್ಯಾದಿಗಳನ್ನು ಮನೆ ಮಂದಿ ನೀದುತ್ತಿದ್ದಿರಬಹುದುcopy rights reserved (C)Dr.laxmi g prasad .ಈ ಸಂದರ್ಭದಲ್ಲಿ ಅವರು ಮನೋರಂಜನೆಗಾಗಿ ದುಡಿ ಬಡಿದು ನರ್ತಿಸುತ್ತಿದ್ದಿರುವ ಸಾಧ್ಯತೆ ಇದೆ .
ಏನೇ ಆದರೂ ಈಗ ನಾವು ಆಟಿ ಕಲೆಂಜನನ್ನು ನೋಡ ಬೇಕಾದರೆ ಸುಲಭ ಇಲ್ಲ ಈಗ ಹೆಚ್ಚಿನವರು ಆಟಿ ಕಲೆಂಜ ಕಟ್ಟಿ ಮನೆ ಮನೆಗೆ ಬರುವುದನ್ನು ನಿಲ್ಲಿಸಿದ್ದಾರೆ .ಅವರಿಗೆ ಸೂಕ್ತ ಗೌರವ ಸಿಗದ್ದು ಇದಕ್ಕೆ ಮುಖ್ಯ ಕಾರಣ ಆಗಿದೆ
copy rights reserved (C)Dr.laxmi g prasad ಆಟಿ ಕಳೆಂಜ ಸೋನದ ಜೋಗಿ ಮೊದಲಾದ ಕುಣಿತವಾಡುತ್ತಾ ಬರುತ್ತಿದ್ದವರನ್ನು ನಮ್ಮ ತುಳು ಸಂಸ್ಕೃತಿಯ ಪ್ರವಾಹಕರೆಂದು ಗೌರವಿಸದೆ ಕಲಾವಿದರೆಂದು ಗುರುತಿಸದೆ ಅವರನ್ನು ತಿರುಪೆಯವರನ್ನು ಕಾಣುವಂತೆ ಅವಜ್ಞೆಯಿಂದ ಕಂಡದ್ದೇ ಇದಕ್ಕೆ ಮುಖ್ಯ ಕಾರಣವಾಗಿದೆcopy rights reserved (C)Dr.laxmi g prasad

Tuesday, 30 July 2013

ಭೂತಗಳ ಅದ್ಭುತ ಜಗತ್ತಿನಲ್ಲಿ -ತುಳುನಾಡನ್ನು ಬೆಳಗಿದ ಅವಳಿ ವೀರರು-ಕೋಟಿ ಚೆನ್ನಯರು (c)ಡಾ.ಲಕ್ಷ್ಮೀ ಜಿ ಪ್ರಸಾದ




 ಜೋಡು ನಂದಾ ದೀಪ ಬೆಳಗುನು ತುಳುವ ನಾಡುದ ಗುಂಡೊಡು ..ಹೌದು !ಡಾ .ಅಮೃತ ಸೋಮೆಶ್ವರರು ರಚಿಸಿದ ಹಾಡು ಇದು .ಇದು ಕೇವಲ ಹಾಡಲ್ಲ .ತುಳುವರ ಹೃದಯದ ಮಿಡಿತವಿದು !ಕೋಟಿ ಚೆನ್ನಯರೆಂಬ ಜೋಡು  ನಂದಾ ದೀಪಗಳು ತುಳುವರ ಮನೆ ಮನಗಳಲ್ಲಿ ಸದಾ ಬೆಳಗುತ್ತಿದೆ .ತುಳುನಾಡಿನ ಈ ಅಪ್ರತಿಮ ವೀರರ ಕುರಿತು ಸಮಗ್ರವಾಗಿ ಬರೆಯ ಹೊರಟರೆ ಅದು ದೊಡ್ಡ ಗ್ರಂಥವಾಗಿ ಬಿಡಬಹುದು !ಕೋಟಿ ಚೆನ್ನಯರ ಜೀವನ ಗಾಥೆ ಒಂದು ಮಹಾ ಕಾವ್ಯ. ಅದೊಂದು ಲಾವಣಿ ಚಕ್ರ. ಅದನ್ನು ಸಂಕ್ಷಿಪ್ತ ವಾಗಿ ಬರೆಯುವುದೂ ಒಂದು ಸವಾಲು! .ಕೋಟಿ ಚೆನ್ನಯರದು ಕೇವಲ ಕಟ್ಟು ಕಥೆಯಲ್ಲ ಅದು ತುಳುನಾಡಿನಲ್ಲಿ ನಡೆದ ವೀರರ ಕಥೆ. ಅವರ ಸ್ವಾಭಿಮಾನ, ಸ್ವಂತ ವ್ಯವಸಾಯ ಮಾಡುವ ಹಂಬಲ, ಶೌರ್ಯ ಸಾಹಸವನ್ನು ನೆನೆದಾಗ ಮನದುಂಬಿ ಬರುತ್ತದೆ.ಒಟ್ಟಿಗೆ  ಹುಟ್ಟಿ ಬೆಳೆದು ಅಸಾಮಾನ್ಯ ಸಾಹಸ ಮೆರೆದು ,ಎರಡು ಗುತ್ತು ಗಳ ಒಡೆತನ ಪಡೆದು ,ತಮ್ಮ ಆಶ್ರಯದಾತನಿಗೆ ಯುದ್ಧದಲ್ಲಿ ವಿಜಯವನ್ನು ತಂದು ಕೊಟ್ಟು   ಒಟ್ಟಿಗೆ  ಪರ ಲೋಕವನ್ನು ಸೇರಿ  ತುಳುವರ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲಸಿದ ಪರಿ ಅನನ್ಯವಾದುದು copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

.ನಾನು ನನ್ನ ಪಿ ಎಚ್ ಡಿ ಸಂಶೋಧನಾ ಕ್ಷೆತ್ರ ಕಾರ್ಯಕ್ಕಾಗಿ ಪಂಜ ,ಪಡುಮಲೆ, ಎಣ್ಮೂರು, ಎಡಮಂಗಲ ಮೊದಲಾದ ಪ್ರದೇಶಗಳಲ್ಲಿ ಸುತ್ತುತ್ತಿದ್ದಾಗ ನಂಗೆ ಕೋಟಿ ಚೆನ್ನಯರದೆ ಗುನುಗು! .ಅರಸೊತ್ತಿಗೆಯ ಆ  ಕಾಲದಲ್ಲಿ ಅವರು ಅನ್ಯಾಯದ ವಿರುದ್ಧ ತೋರಿದ ಪ್ರತಿಭಟನೆ ,ಸ್ವಾಭಿಮಾನ ಸಾಹಸ ನೆನಪಾಗುತ್ತಿತ್ತು .”ತುಳುನಾಡ ಅವಳಿ ವೀರರು ಓಡಾಡಿದ ನೆಲ ಇದು” ಎಂದು ರೋಮಾಂಚನಗೊಂಡಿದ್ದೇನೆ . ಕೋಟಿ ಚೆನ್ನಯರ ಗರೋಡಿಗಳ ಫೋಟೋ ತೆಗೆಯುತ್ತಿದ್ದಾಗ ಉಂಟಾಗುತ್ತಿದ್ದ ಸಂತಸ ಅವರ ಸಮಾಧಿಯ ಫೋಟೋ  ತೆಗೆಯುವಾಗ ಇರಲಿಲ್ಲ . ಸಮಾಧಿಯ ಫೋಟೋ ತೆಗೆಯುವಾಗ ಏನೋ ದುಗುಡ ಕಾಡುತ್ತಿದ್ದುದು ಮಾತ್ರ ಸತ್ಯ.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
  
ಕೋಟಿ ಚೆನ್ನಯರ ಮೂಲವನ್ನು ಅಲೌಕಿಕ ಜಗತ್ತಿಗೆ ಜೋಡಿಸುವ  ಕೋಟಿಚೆನ್ನಯ ಪಾಡ್ದನವು ಡೆಂನ-ಡೆಂನಾನ ಎಂಬ ಸೊಲ್ಲಿನ ನಂತರ ಬೆರ್ಮೆರ್ ಪುಟ್ಟಿನಾ ನಾಡ್, ಬೆರ್ಮರೆಬೆರಿಯೇ ...’ ‘ಬೆರ್ಮೆರ್ ಹುಟ್ಟಿದ ನಾಡು ಬೆರ್ಮೆರ ಶಕ್ತಿಯನ್ನು ಹೊಂದಿದ ನಾಡು, ಇದು ಬೈದ್ಯ ವೀರರು ಹುಟ್ಟಿದ ನಾಡುಎಂದು ತುಳುನಾಡಿನ ಬಗ್ಗೆ ಹೇಳುತ್ತದೆ. ಅನಂತರ ಬೆರ್ಮೆರ್ಉದಿಸಿದ ವಿಚಾರವನ್ನು ಈ ಪಾಡ್ದನ ವರ್ಣಿಸುತ್ತದೆ. ಬೆರ್ಮೆರ್ ಪುಟ್ಟಿನಾ ನಾಡ್‍ವುಂದ್ ಏಳ್ ಗಂಗೆದ ನಡುಟು ...”, “ಬೆರ್ಮೆರ್ ಹುಟ್ಟಿದ ನಾಡು ಇದು ಏಳು ಗಂಗೆಯ ನಡುವಿನಲ್ಲಿಎಂಬಲ್ಲಿ ನೀರು ಸುತ್ತಮುತ್ತ ಆವೃತವಾಗಿರುವ ಭೂಭಾಗದಲ್ಲಿ ಬೆರ್ಮೆರ್ಹುಟ್ಟಿದ ನಾಡು ಇದೆ ಎಂಬ ಸೂಚನೆ ಸಿಗುತ್ತದೆ. ಏಳು ಗಂಗೆಯ ನಡುವೆ ಎಮಲಗುಂಡ 10 ಇದೆ. ಏಳು ಅಂತಸ್ತಿನ ಎಮಲಗುಂಡದಲ್ಲಿ ಬೆರ್ಮೆರ್‍ಗೆ ಏಳು ಅಂಕಣದ ಸತ್ತಿಗೆ, ಭುಜಗಳಲ್ಲಿ ಮೂರು ಅಂತಸ್ತಿನಸತ್ತಿಗೆ ಇದೆ. copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ ಬಲಭಾಗದಲ್ಲಿ ಬಂಗಾರದ ಜನಿವಾರ, ಎಡಭಾಗದಲ್ಲಿ ಬೆಳ್ಳಿಯ ಜನಿವಾರ, ಒಂದಾಳು ಉದ್ದದ ಹೂವಿನ ಜಲ್ಲಿ, ಗೇಣುದ್ದ ಬೀಸಣಿಗೆ, ಕುತ್ತಿಗೆಯಷ್ಟು ಉದ್ದದ ಕೇದಗೆ ಹೂವಿನ ಅಲಂಕಾರವಿದೆ. ಕಿವಿಗೆ ಕೇಂಜವ ಹಕ್ಕಿಯ ಆಕಾರದ ಆಭರಣ ಇದೆ. ಎದೆಯಲ್ಲಿ ಅಮೃತ ಕಲಶವಿದೆ. ಹೊಟ್ಟೆಯಲ್ಲಿ ಬಾಸಿಂಗವಿದೆ. ಬೆನ್ನಲ್ಲಿ ಭೀಮಾರ್ಜುನರನ್ನು ಹೊಂದಿದ್ದಾರೆ. ಮೊಣಕಾಲಿನವರೆಗೆ ಕಾವೇರಿ ಹರಿಯುವ ಇಂದ್ರಪರ್ವತ ಬೆರ್ಮೆರ್ಗೆ ಆಸನವಾಗಿದೆ. ಸೊಂಟದ ಸುತ್ತ ಸರ್ಪಾಭರಣ ಪಾದದಲ್ಲಿ ಪದ್ಮರೇಖೆಇದೆ. ಬೆರ್ಮೆರ್ ಅಣಿಗಂಗೆ, ಮಣಿಗಂಗೆ, ಪೇರುಗಂಗೆ, ಮಿಂಚಿಗಂಗೆ, ನೀರುಗಂಗೆ, ಬೆಳ್ಳಿಗಂಗೆ, ಕಂಚುಗಂಗೆ ಎಂಬ ಏಳು ಗಂಗೆಯನ್ನು, ನಾಲ್ಕು ಸಮುದ್ರವನ್ನು ನಿರ್ಮಿಸಿದರು.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಬೆರ್ಮೆರ್‍ನ ಏಳು ಅಂಕಣ ಛತ್ರದ, ಒಂದು ಧ್ವಜದ ನೆರಳಿನಲ್ಲಿ ಹನ್ನೆರಡು ಬ್ರಹ್ಮಚಾರಿಗಳು ಹನ್ನೆರಡು ಕನ್ಯೆಯರು ಚಾಮರಾದಿ ಸೇವೆಗಳನ್ನು ಮಾಡುತ್ತಿದ್ದರು. ಬೆಳ್ಳಿಯ ಬೀಸಣಿಗೆ ಹಿಡಿದು ಗಾಳಿ ಹಾಕುತ್ತಿದ್ದರು. ಹೀಗೆ ವೈಭವದಿಂದ ಕಾಲ ಕಳೆಯುತ್ತಿರಲು ಬಾರದಂಥ ಬಿಸಿಲು ಬಂದು, ಭೀಕರವಾಗಿ ಮಳೆ ಬಂದು ನಿರ್ಮಾಣವಾಗಿದ್ದ ಹುಲ್ಲು, ಪೊದರು, ಮನುಷ್ಯ, ಪ್ರಾಣಿಗಳು ಎಲ್ಲರು ಕೊಚ್ಚಿಕೊಂಡು ಹೋದರು. ಆಗ ಸೂರ್ಯನಾರಾಯಣದೇವರು ಪುನಃ ಸೃಷ್ಟಿಗೆ ತೊಡಗುತ್ತಾರೆ.

ದಿಕ್ಪಾಲಕರನ್ನು ನೆನೆದು ಸೃಷ್ಟಿ ಜಪ ಮಾಡಲು ಆರಂಭಿಸುತ್ತಾರೆ. ದೇವರ ಎಡಭಾಗದಲ್ಲಿ ಎರಡು ಕೇಂಜವ ಹಕ್ಕಿಗಳನ್ನು ನಿರ್ಮಿಸಿದರು. ಕಲ್ಲು, ಹುಲ್ಲು, ಬೈಹುಲ್ಲಿನ ಗೂಡು, ಬಿದಿರು, ಮುಳ್ಳು ಎಲ್ಲವನ್ನು ಸೃಷ್ಟಿಸಿದರು. ಅಣ್ಣ-ತಂಗಿಯರಂತಿದ್ದ ಕೇಂಜವ ಪಕ್ಷಿಗಳು ಸಂತಾನದ ವರವನ್ನು ಸೂರ್ಯನಾರಾಯಣ ದೇವರಲ್ಲಿ ಕೇಳುತ್ತವೆ. ದೇವರ ಅನುಮತಿಯಂತೆ ಸತಿ-ಪತಿಗಳಾಗುತ್ತಾರೆ. ದೇವರ ಆಣತಿಯಂತೆ ಬಡಗು ದಿಕ್ಕಿನಲ್ಲಿರುವ ಸಾಗರದಲ್ಲಿ ಮಲ್ಲಿಗೆಯಿಂದ ಆವೃತವಾದ ಕೆರೆಯ ಮಧ್ಯದಲ್ಲಿರುವ ಅತ್ತಿಯಮರದ ಹೂವಿನ ಮಕರಂದವನ್ನು ತರಲು ಹೋಯಿತು. ಸೂರ್ಯ ಮುಳುಗುವ ಹೊತ್ತಿಗೆ ಮಕರಂದವನ್ನು ಹೀರಲು ಕೊಕ್ಕು ಹಾಕಿತು. ಸೂರ್ಯ ಮುಳುಗಿದ ಕ್ಷಣದಲ್ಲಿ ಹೂವು ಮುಚ್ಚಿಕೊಂಡಿತು. ಕೊಕ್ಕು ಹೂವಿನಲ್ಲಿ ಸಿಕ್ಕಿ ಹಾಕಿಕೊಂಡಿತು. copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ ಇತ್ತ ಹೆಣ್ಣು ಕೇಂಜವ ಹಕ್ಕಿ ಕೇಂಜವ ಬಾರದಿರಲು ಚಿಂತೆಯಾಗಿ ತನ್ನ ಪತಿ ಕ್ಷೇಮವಾಗಿ ಬಂದರೆ, ತಾನು ಇಡುವ ಮೊದಲ ಮೊಟ್ಟೆಯನ್ನು ನಮ್ಮನ್ನು ಸೃಷ್ಟಿಸಿದ ಸೂರ್ಯನಾರಾಯಣದೇವರಿಗೆ ನೀಡುತ್ತೇವೆಎಂದು ಹರಕೆ ಹೇಳಿಕೊಳ್ಳುತ್ತಾಳೆ.

 ಕೇಂಜವ ತಂದ ಮಕರಂದವನ್ನು ಸ್ವೀಕರಿಸಿದ ಕೇಂಜವದಿ ಗರ್ಭ ಧರಿಸುತ್ತದೆ. ಗರ್ಭಧಾರಣೆಯ ಹತ್ತನೆಯ ತಿಂಗಳಿನಲ್ಲಿ ಆನೆಯ ತಲೆಗಿಂತ ಚಿಕ್ಕದಾದ, ಕುದುರೆಯ ತಲೆಗಿಂತ ದೊಡ್ಡದಾದ ಮೊಟ್ಟೆಯನ್ನು ಇಡುತ್ತದೆ. ಆ ಮೊಟ್ಟೆಯನ್ನು ಹೇಳಿಕೊಂಡ ಹರಕೆಯಂತೆ ದೇವರಿಗೆ ಅರ್ಪಿಸುತ್ತಾರೆ. ದೇವರು ಅದನ್ನು ದಿಂಬಿನಂತೆ ಇರಲಿ ಎಂದು ಬದಿಗೆ ಇಟ್ಟು ಗಾಳಿ ರಥವೇರಿ ಸವಾರಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಹೊಂಚು ಹಾಕುತ್ತಿದ್ದ ನಾಗಗಳು ಮೊಟ್ಟೆಗೆ ನೋಟ ಇಟ್ಟು ಸ್ಪರ್ಶಿಸಿದಾಗ ಮೊಟ್ಟೆ ಒಡೆಯುತ್ತದೆ. ಸಿಡಿದ ತುಂಡುಗಳು ಮೇಲೆ ಆಕಾಶಕ್ಕೆ, ಕೆಳಗೆ ಪಾತಾಳಕ್ಕೆ ಉತ್ತರ ದಿಕ್ಕಿನಲ್ಲಿ ಜರ್ದೊರಿಯ ಮಗ ಜಂಬೂರಿಕುಮಾರನ ಮಡಿಲಿಗೆ ಬೀಳುತ್ತದೆ. ಅದು ಮುತ್ತು ಮಾಣಿಕ್ಯವಾಗಿ ಕಾಣಿಸುತ್ತದೆ. ಅದನ್ನು ಅವನು ಕಿವಿಯಲ್ಲಿಧರಿಸುತ್ತಾನೆ. ಸವಾರಿಗೆ ಹೋದ ದೇವರು ಹಿಂದಿರುಗಿ ಬಂದಾಗ, ಮೊಟ್ಟೆ ಒಡೆದ ವಿಚಾರ ತಿಳಿದು ಅದೆಲ್ಲಿದೆ ಎಂದು ಹುಡುಕುತ್ತಾರೆ.

 ಆಗ ಜಂಬೂರಿಕುಮಾರನ ಕಿವಿಯಲ್ಲಿದ್ದ ಮಾಣಿಕ್ಯ ಪುನಃ ಸಿಡಿದು ಮಣ್ಣಮುದ್ದೆಯಾಗಿ ಸಮುದ್ರಕ್ಕೆ ಬಿದ್ದು ಸಪ್ತಗಿರಿ ಪರ್ವತಕ್ಕಿಂತ ಹೆಚ್ಚು ಚಂದವಾಯಿತು. ತೆಂಕುದಿಕ್ಕಿನಲ್ಲಿ ಶೋಭಿಸುವ ಹೊಳೆಯಾಯಿತು. ಮಧ್ಯದಲ್ಲಿ ದ್ವೀಪ ಆಯಿತು. ಮೂಡುದಿಕ್ಕಿನಲ್ಲಿ ಘಟ್ಟ, ಪಡುವಣದಲ್ಲಿ ಸಮುದ್ರದ ನಡುವಿನ ಈ ಭಾಗವೇ ತುಳುನಾಡು.ಇದೇ ತುಳುನಾಡಿನಲ್ಲಿ ಕೋಟಿ ಚೆನ್ನಯರು ಮೆರೆದಾಡಿದ್ದಾರೆ

ಕೇಂಜವ ಪಕ್ಷಿಗಳು  ಇಟ್ಟ ಎರಡನೆಯ ಮೊಟ್ಟೆ ಸಮುದ್ರಕ್ಕೆ ಜಾರಿ ಬೀಳುತ್ತದೆ .ಅದು ನಿಂಬೆ ಹಣ್ಣಾಗಿ  ತೇಲಿಕೊಂಡು ಬರುವಾಗ ಸಂಕಮಲೆಯ ಪೆಜನಾರ ಎಂಬ ಬ್ರಾಹ್ಮಣನ ಕೈಗೆ ಸಿಗುತ್ತದೆ .ಅದನ್ನು ಮನೆಗೆ ಕೊಂಡು ಹೋಗಿ ಇಡುವಾಗ ಒಂದು ಹೆಣ್ಣು ಮಗುವಾಗಿ ಅಳುತ್ತದೆ .ಮಕ್ಕಳಿಲ್ಲದ ಓಪೆತ್ತಿ- ಪೆಜನಾರ ದಂಪತಿಗಳು ಈ ಹೆಣ್ಣು ಮಗುವನ್ನು ಕೇದಗೆ ಎಂಬ ಹೆಅಸರಿತ್ತು ಮುದ್ದಿನಿಂದ ಸಾಕುತ್ತಾರೆ .ಇವಳು ೮-೧೦ ವರ್ಷವಾಗುತ್ತಾ ಬರಲು ಅವಳು ಋತುಮತಿಯಾಗುತ್ತಾಳೆ. ಆಗ ಬ್ರಾಹ್ಮಣರಲ್ಲಿ ವಿವಾಹಕ್ಕೆ ಮೊದಲು ಹುಡುಗಿ ಋತು ಮತಿಯರಾದರೆ ಅವರನ್ನು ಕಣ್ಣು ಕಟ್ಟಿ ಬೆತ್ತಲಾಗಿಸಿ ಕಾಡಿನಲ್ಲಿ ಬಿಟ್ಟು ಬರುವ ಸಂಪ್ರದಾಯವಿತ್ತು .ಆದ್ದರಿಂದ ಪೆಜನಾರ್ ಕದಾ ತಾವು ಮುದ್ದಿನಿಂದ ಸಾಕಿದ ಮಗಳನ್ನು ಬೇರೆ ದಾರಿ ತೋಚದೆ ಸಂಬಂಧಿ ಕರ ಮದುವೆಗೆ ಹೋಗೋಣ ಎಂದು ನಂಬಿಸಿ ಕಾಡಿನಲ್ಲಿ ಬಿಟ್ಟು ಬರುತ್ತಾರೆ.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಸಂಕ ಮಲೆತ್ ತೊಟಕ ಬೆರನ್ದೀನ್ ಮದಿಮಾಲ್ ಆಯಿನೆಕ್ಕ್
ಕಣ್ಣುಗ್ ಕುಂಟು ಕಟ್ದು ಕಾದ್ಗು ಬುಡ್ತೆರ್
ಅಪಗ ಸಾಯಿನ ಬೈದ್ಯೆ ಇನ್ಪಿನಾಯೆ ಈನ್ದುದ ಬೇಲೆಗ್  ಪೋತೆ

ಆ ಹೊತ್ತಿನಲ್ಲಿ ಸಾಯನ ಬೈದ್ಯ ಮುರ್ತೆಯ ಕೆಲಸಕ್ಕಾಗಿ ಕಾಡಿಗೆ ಬರುತ್ತಾನೆ .ಇನ್ನು ಬೆಳಕು ಸರಿಯಾಗಿ ಮೂಡಿರಲಿಲ್ಲ . ಅವನು ಮರ ಹತ್ತಿ ಕೊಯ್ಯುವಾಗ ಅದರ ಕಸ ಈ ಹುಡುಗಿಯ ತಲೆ ಮೇಲೆ ಬೀಳುತ್ತದೆ .ಆಗ ಅವಳು ನೀನು ಗಂಡಸಾದರೆ ನನ್ನ ಅಣ್ಣ ಹೆಂಗಸಾದರೆ ನನ್ನ ಅಕ್ಕ ಎಂದು ಹೇಳುತ್ತಾಳೆ . ಈ ಎಳೆಯ ಹುಡುಗಿಯನ್ನು ನೋಡುವಾಗ ಸಾಯನ ಬೈದ್ಯನಿಗೆ ತನ್ನ ಮುದ್ದಿನ ತಂಗಿ ದೇಯಿ ಬೈದ್ಯೆತಿಯ ನೆನಪಾಗುತ್ತದೆ . ದೇಯಿ ಬೈದ್ಯೆತಿಯನ್ನು ಸಂನದರಲ್ಲಿಯೇ ಕಾಂತ ಬೈದ್ಯನಿಗೆ ಮಾಡುವೆ ಮಾಡಿ ಕೊಟ್ಟಿರುತ್ತಾನೆ ಅಣ್ಣ ಸಾಯನ ಬೈದ್ಯ .ಆದರೆ ಅವಳು ಚಿಕ್ಕ ವಯಸ್ಸಿನಲ್ಲಿಯೇ ಹೆರಿಗೆ ಸಮಯದಲ್ಲಿ ಮರನವನ್ನಪ್ಪಿರುತ್ತಾಳೆ .ಕಣ್ಣು ಕಟ್ಟಿ ಕಾಡಿಗೆ ಬಿಟ್ಟ ಈ ಹುಡುಗಿ ಕೇದಗೆಯ ಮೇಲೆ ಅನುಕಂಪ ಪ್ರೀತಿ ಹುಟ್ಟಿ ಸಾಯನ ಬೈದ್ಯ ಅವಳ ಕೈಕಾಲು ಕಣ್ಣು ಬಿಚ್ಚಿ ತನ್ನ ಮುಂಡಾಸಿನ ಬಟ್ಟೆಯನ್ನು ಅವಳಿಗೆ ಹೊದೆಸಿ  ತನ್ನ ಮನೆಗೆ ಕರೆದೊಯ್ಯುತ್ತಾನೆ .ತನ್ನ ತಂಗಿಯ ಹೆಸರಿತ್ತು ಅವಳನ್ನು ಸಾಕಿ ಸಲಹುತ್ತಾನೆ .ಕಾಡಿನಿಂದ ತಂದ ಅನಾಥ ಹುದುಗಿಯನ್ನ್ನು ಯಾರೂ ಮದುವೆಯಾಗಲು ಮುಂದೆ ಬರಲಿಲ್ಲವೋ ಏನೋ !ವಯಸ್ಸಾಗಿರುವ ತನ್ನ ತಂಗಿಯ ಗಂಡ ಕಾಂತು ಬೈದ್ಯನಿಗೆ ಇವಳನ್ನು ಮಾಡುವೆ ಮಾಡಿ ಕೊಡುತ್ತಾನೆ .ಅವನು ಮದುವೆಯಾಗುವಾಗಲೇ ತನಗೆ ವಯಸ್ಸಾಯಿತು ಮುಂದೆ ಹುಟ್ಟುವ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ?ಎಂದು ಕೇಳಿದಾಗ ಆ ಜವಾಬ್ದಾರಿ ನನಗಿರಲಿ ಎಂದು ಹೇಳಿ ಆತನನ್ನು ಒಪ್ಪಿಸುತ್ತಾನೆ ಸಾಯನ ಬೈದ್ಯ !ಆದ್ದರಿಂದಲೇ ಇಡೀ ತುಳುಜನಪದ  ಸಾಹಿತ್ಯದಲ್ಲಿ ಸಾಯನ ಬೈದ್ಯನ ಪಾತ್ರ ಸದಾ ದೇದೀಪ್ಯಮಾನವಾಗಿದೆ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಮುಂದೆ ದೇವಿ ಬೈದ್ಯೆತಿ ಗರ್ಭಿಣಿಯಾಗುತ್ತಾಳೆ
ಇತ್ತ ಪಡುಮಲೆ ಬಲ್ಲಾಳರಿಗೆ ಬೇಟೆಗೆ ಹೋಗುವ ಕನಸು ಬೀಳುತ್ತದೆ .ಅದರಂತೆ ಅವರು ನಾಗ ಬ್ರಹ್ಮರನ್ನು ನೆನೆದು ಕಾಣಿಕೆ ತೆಗೆದು ಇಟ್ಟು ಬೇಟೆಗೆ ಹೋಗುತ್ತಾರೆ ಅನೇಕ ಪ್ರಾಣಿಗಳನ್ನು ಬೇಟೆಯಾಡಿ ಅವುಗಳನ್ನು ಸಲ್ಲ ಬೇಕಾದವರಿಗೆ ಅವರವರ ಸ್ಥಾನ ಮರ್ಯಾದೆಗನುಗುಣವಾಗಿ ಹಂಚುತ್ತಾರೆ.ಬೇಟೆಯಾಡಿ ಹಿಂದೆ ಬರುವಾಗ ಬಲ್ಲಾಳರ ಕಾಲಿಗೆ ಕಾಸರಕನ ಮುಳ್ಳು ತಾಗುತ್ತದೆ
ಕಾವೆರುದ ಮುಳ್ಳು ಕಂತುಂಡು ನಚ್ಚೋ ಬೆನ್ನಗ
ರಾಮ ರಾಮ ಕಾಲನೆ ...ಯೇ ..
ಏರ್ ಯಾ ಮಂದೆ ಯಾನ್ ಬಾಲೂಜಿ ಬದುಕುಜಿ
ಅಂದ ಮಂದೆ ಕೆನ್ದೆರೋ ....ಯೇ

ಯಾತನೆಯಿಂದ ಬಲ್ಲಾಳರು ನಾನು ಸತ್ತು ಹೋಗುವೆ ಬದುಕಲಾಲ್ರೆ ಎಂದು ನೋವಿನಿಂದ ಕೂಗಿ ನರಳುತ್ತಾರೆ . ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಕೊಂಡು ಸೇವಕರು ಅರಮನೆಗೆ ಕರೆತರುತ್ತಾರೆ .ಅರಮನೆಯ ವೈದ್ಯರು ಊರ ಪರ ಊರ ವೈದ್ಯರು ಔಷಧ ಉಪಚಾರ ಮಾಡುತಾರೆ .ಆದರೆ ಬಲ್ಲಾಳರ ಕಾಲಿಗಾದ ಗಾಯ ನಂಜು ಏರಿ ಇಡಿ ಶರೀರ ವ್ಯಾಪಿಸಿ ಅವರು ಬದುಕುಳಿಯುವುದು  ಕಷ್ಟ ಎಂಬ ಹಂತಕ್ಕೆ ತಲಪುತ್ತಾರೆ . ಆಗ ಅಲ್ಲಿ ಯಾರೋ ದೇಯಿ ಬೈದ್ಯೆತಿ ಒಳ್ಳೆಯ ಮದ್ದು ಕೊಡುತ್ತಾಳೆ ಎಂದು ಅರಸ ಬಲ್ಲಾಳನಿಗೆ ಹೇಳುತ್ತಾರೆ .ಬಲ್ಲಾಳ ಕೂಡಲೇ ದೇಯಿ ಬೈದ್ಯೆತಿಯನ್ನು ಬರಹೇಳುತ್ತಾನೆ.ಆಗ ಅವಳು ಏಳು ತಿಂಗಳು ತುಂಬಿದ ಗರ್ಭಿಣಿ .ಮೊದಲು ಬರಲು ಒಪ್ಪ ದಿದ್ದರು ನಂತರ ಅರಸನ ನೋವನ್ನು ದೀನ ಅವಸ್ಥೆಯನ್ನೂ ನೋಡಿ ಔಷಧ ಕೊಡಲು ಒಪ್ಪುತ್ತಾಳೆ .

ಏಲ್ ಪೊರ್ತುಗು  ಕಾಡದಾಲ್ ಏಲ್ ಕೊಡಿ ಮರ್ದು
ದೇಯಿ ತರ್ಪದೋಲು ..ಯೇ ..
ಕಲ್ಲುದಾ ಗುರಿಟ್ಟು ಪಾದಿಯೋಲೆ ಮರ್ದು ಕುತ್ತುದು ಪೊಡಿ ಮಲ್ದೋಲೆ
ಬೋಲ್ಲಿದಾ ಕರಡಿಗೆಡ್ ...ಯೇ ..copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಬೆಳಗ್ಗಿನ ಜಾವ ಏಳು ಮಲೆಗೆ ಜನರನ್ನು ಕಳುಹಿಸಿ ದೇಯಿ ಬೈದ್ಯೆತಿ ಏಳು ಮುಷ್ಟಿಯಷ್ಟು ಔಷಧದ ಗಿಡದ ಚಿಗುರನ್ನು ತರಿಸಿ ಕುಟ್ಟಿ ಪುಡಿ ಮಾಡಿ ಬೆಳ್ಳಿ ಕರಡಿಗೆಗೆ ತುಂಬಿ ದಂಡಿಗೆ ಏರಿ ಅರಮನೆಗೆ ಬರುತ್ತಾಳೆ .ಒಳ ಬರಲು ಅಳುಕಿದ ಅವಳಲ್ಲಿ “ನೀನು ಕೊಟ್ಟ ಮದ್ದಿನಿಂದ ನಾನು ಬದುಕಿದರೆ ಇನ್ನು ಹತ್ತು ಹದಿನಾರು ಕಾಲ ಪಟ್ಟವನ್ನು ಆಳುವೆ ,ಸಲ್ಲುವ ಕಾಣಿಕೆಯನ್ನು ನಿನಗೆ ಕೊಡುವೆ ಎಂದು ಹೇಳುವರು . ದೇಯಿ ಬೈದ್ಯೆತಿ ಅನೇಕ ದಿನಗಳ ತನಕ ಅಲ್ಲಿದ್ದುಕೊಂಡು ಬಲ್ಲಾಳನ ಕಾಲಿನ ಗಾಯಕ್ಕೆ ಔಷಧಿ ಹಾಕಿ ಉಪಚಾರ ಮಾಡುತ್ತಾಳೆ .ನಿಧಾನವಾಗಿ ಗಾಯ ಮಾಗಿ ಅರಸ ಗುಣ ಮುಖನಾಗುತ್ತಾನೆ .ಆಗ ದೇಯಿ ಬೈದ್ಯೆತಿ ತನ್ನ ಮನೆಗೆ ಹೊರಡುತ್ತಾಳೆ .ತನಗೆ ಬರಬೇಕಾದ ಕಾಣಿಕೆಯನ್ನು ನೆನಪಿಸುತ್ತಾಳೆ .

ಆಗ ಅರಸ ನೋವಿನ ಭರದಲ್ಲಿ ನಾನು ಏನೋ ಹೇಳಿರಬಹುದು .ಈಗ ಏನಾದರು ಕೊಡಬೇಕಾದರೆ ಮಂತ್ರಿ ಬುದ್ಯಂತ ಬರಬೇಕು ಎಂದು ಹೇಳಿದನು ಆಗ ಕೋಪಗೊಂಡ ದೇಯಿ ಬೈದ್ಯೆತಿ ಏನು ಬೇಡ ಎಂದು ಹೇಳಿ ಹೊರಡುತ್ತಾಳೆ ಆಗ ರಾಜನ ಕಾಲಿನ ಗಾಯ ಮತ್ತೆ ಉಲ್ಬಣಿಸುತ್ತದೆ .ಆಗ ರಾಣಿ ಬಂದು ಪ್ರಾರ್ಥಿಸಲು ದೇಯಿ ಬೈದ್ಯೆತಿ ಮತ್ತೆ ಅವನನ್ನು ಗುಣಪಡಿಸುತ್ತಾಳೆ .ಆಗ ಬಲ್ಲಾಳರು ದೇಯಿ ಬೈದ್ಯೆತಿಗೆ ಆಭರಣಗಳನ್ನು ಪತ್ತೆ ಸೀರೆ ರವಕೆ ,ಸೊಂಟದ ಪಟ್ಟಿ ಮೊದಲಾದವುಗಳನ್ನು ನೀಡಿ “ಇನ್ನು ಉಳಿದದ್ದನ್ನು ನಿನ್ನ ಗರ್ಭದಲ್ಲಿರುವ ಮಗುವಿಗೆ ಕೊಡುವೆನು ಹೆಣ್ಣು ಹುಟ್ಟಿದರೆ ಅವಳಿಗೆ ಚಿನ್ನ ಬೆಳ್ಳಿ ಬೇಕಾದ್ದನ್ನು ಕೊಡುವೆನು ಗಂಡು ಮಗು ಹುಟ್ಟಿದರೆ ಅವರು ವಿದ್ಯೆ ಕಲ್ತು ದುಡಿದು ತಿನ್ನಲು ನನ್ನ ಬೀಡಿಗೆ ಬಂದರೆ ವ್ಯವಸಾಯ ಮಾಡಲು ಕಂಬಳ ಗದ್ದೆ ನೀಡುವೆನು “ಎಂದು ಮಾತು ಕೊಡುತ್ತಾರೆ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಪೊನ್ನ ಬಾಲೆ ಈ ಪೆದಿಯಾಂದ ಈ
ನಿಕ್ಕು ಕಾರಿನ ನಡವಳಿಕೆ ಕೊರ್ಪೆಯಾನ್
ಆಣ್ ಬಾಲೆನ್ ಪೆದ್ದಿಯಾಂದ ಈ
ಬೆನ್ದುನ್ಪಿ ಯಿದ್ದೋ ಬುದ್ದಿಲ ತೆರಿನ್ದಾದೆ ...ಯೇ
ಎನ ಬೂಡುಗು ಬತ್ತೆರಾದ್ ಡಾದೇ
ಬೆನೆರೆ ಕಂಬುಲ ಯಾನ್ ಕೊರ್ಪೆನ್ದೆರ್ ..ಯೇ..

ಮುನೇ ಒಂದೆರಡು ದಿನಗಳಲ್ಲಿಯೇ ದೇಯಿ ಬೈದ್ಯೆ ತಿ ಎರಡು ಗಂಡು ಮಕ್ಕಳಿಗೆ ಜನ್ಮ ಕೊಡುತ್ತಾಳೆ . ಈ ಅವಳಿ ಮಕ್ಕಳೇ ಮುಂದೆ ತುಳುನಾಡಿನ ವೀರರಾಗಿ ನಾಡನ್ನು ಬೆಳಗುವರು ಬಲ್ಲಾಳರು ಹುಟ್ಟಿದ ಮಕ್ಕಳಿಗೆ ಕೋಟೇಶ್ವರ ದೇವರನ್ನು ನೆಂದು ಕೋಟಿ ಎಂದು ಚೆನ್ನ ಕೇಶವನನ್ನು ನೆನೆದು ಚೆನ್ನಯ ಎಂದು ಹೆಸರಿಡುವರು .ಮಕ್ಕಳು ತಾಯಿಯ ಹಾಲು ಕುಡಿವ ಕಾಲದಲ್ಲಿಯೇ ತಾಯಿ ದೇಯಿ ಬೈದ್ಯೆತಿ ಸಾಯುತ್ತಾಳೆ .ಮಕ್ಕಳು ಬಟ್ಟಲಿನಲ್ಲಿ ಅಣ್ಣ ತಿನ್ನುವ ವಯಸ್ಸಿನಲ್ಲಿ ತಂದೆ ಕಾಂತನ ಬೈದ್ಯ ಸಾಯುತ್ತಾನೆ . ಈ ಮಕ್ಕಳನ್ನು ಸೋದರ ಮಾವ ಸಾಯನ ಬೈದ್ಯ ಸಾಕಿ ಸಲಹುತ್ತಾರೆ . ಪರಾಕ್ರಮಿಗಳಾಗಿ ಬೆಳೆವ ಇವರು ಅಂಗ ಸಾಧನೆಗಾಗಿ ಗುರುಗಳನ್ನು ಹುಡುಕಿಕೊಂಡು ನಾನಯರ ಗರೋದಿಗೆ ಹೋಗಿ ನಾನ ವಿಧದ ವಿದ್ಯೆಯನ್ನು ಕಲಿಯುತ್ತಾರೆ .ಆತ ಆಡುವಾಗ ಮಂತ್ರಿ ಬುದ್ಯಂತನ ಮಕ್ಕಳನ್ನು ಸೋಲಿಸುತ್ತಾರೆ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ದೊಡ್ದವರಾಗಳು ಬಲ್ಲಾಳನಲ್ಲಿಗೆ ಹೋಗಿ ತಮ್ಮ ತಾಯಿಗೆ ಕೊಟ್ಟ ಮಾತಿನಂತೆ ಕಂಬಳ ಗದ್ದೆಯನ್ನು ಕೊಡುವಂತೆ ಕೇಳುತ್ತಾರೆ .ಆಗ ರಾಜ ಮಾತ್ರಿ ಬುದ್ಯಂತನಲ್ಲಿ ಕೇಳಿ ಎಂದು ಹೇಳುತ್ತಾನೆ . ಇವರು ಬರುವುದನ್ನು ದೂರದಿಂದ ನೋಡಿದ ಬುದ್ಯಂತ ಕಾರಣವನ್ನು ಊಹಿಸಿ ಅಡಗಿ ಕುಳಿತು ತಾನು ಇಲ್ಲ ಎಂದು ಹೇಳಲು ಮಡದಿಗೆ ತಿಳಿಸಿದರು .ಮಾಡಿ ಹಾಗೇ ಹೇಳುತ್ತಾಳೆ ಆಗ ಕೋಟಿ ಚೆನ್ನಯರು ಬುದ್ಯಂತರು ಬಂದಾಗ “ಕೋಟಿ ಚೆನ್ನಯರು ಕಂಬಳಕ್ಕೆ ಪ್ರಥಮ ಕಾಣಿಕೆ ಇಟ್ಟಿದ್ದಾರೆ ಎಂದು ಹೇಳಲು ಹೇಳಿ ಕಾಣಿ ಇಟ್ಟು ಬರುತ್ತಾರೆ .ಆ ತನಕ ತಾನು ಅನುಭವಿಸುತ್ತಿದ್ದ ಕಂಬಳ ಗದ್ದೆ ಇನ್ನು ಕೋಟಿ ಚೆನ್ನಯರ ಪಾಲಾಗುತ್ತದೆ ಎಂದು ಹೊಟ್ಟೆ ಕಿಚ್ಚಿನಿಂದ ಅವರು ಇಟ್ಟ ಕಾಣಿಕೆಯನ್ನು ಎಸೆದು ಕೆಟ್ಟ ಮಾತು ಆಡುತ್ತಾರೆ .ನಂತರ ಪೆರ್ಮಲೆ ಬಲ್ಲಾಳ ಇವರಿಗೆ ಕೆಳಗಿನ ಕಂಬಳಗದ್ದೆಯನ್ನು ಕೊಡುತ್ತಾರೆ . ಇವರು ವ್ಯವಸಾಯಕ್ಕೆ ಬೇಕಾದ ಎಲ್ಲ ಸಲಕರಣೆಗಳ ಸಿದ್ಧ ಮಾಡುತ್ತಾರೆ .ಇವರ ಗದ್ದೆ ಉಳುಮೆ ಆಗದಂತೆ ,ಕಂಬಳ ಕೋರಿ ಆಗದಂತೆ ತಡೆಯಲು ಬುದ್ಯಂತ ನಾನ ಷದ್ಯಂತ್ರಗಳನ್ನು ಮಾಡುತ್ತಾನೆ .ಬುದ್ಯಂತರು ಕಂಬಳ ಕೋರಿ ಮಾಡುವಂದೆ ಇವರು ಕೂಡಾ ಮಾಡಲು ನಿರ್ಧರಿಸುತ್ತಾರೆ .ಆಗ ಆ ದಿನ ಕಂಬಳ ಮಾಡಿದರೆ ಜಾಗ್ರತೆ ಎಂದು ಇವರನ್ನು ಬುದ್ಯಂತ ಹೆದರಿಸುತ್ತಾನೆ .

 ಅವನ ಬೆದರಿಕೆಕೆ ಸೊಪ್ಪು ಕಾಕದ ಕೋಟಿ ಚೆನ್ನಯರು ಅದೇ ದಿನ ಕಂಬಳ ಕೋರಿಗೆ ಸಿದ್ಧತೆ ನಡೆಸುತ್ತಾರೆ . ಆ ದಿನ ಕೋಟಿ ಚೆನ್ನಯರ ಗದ್ದೆಗೆ ಕೋಣಗಳನ್ನು ಇಳಿಸಿದಾಗ ಬುದ್ಯಂತರು ಅವರ ಕಂಬಳ ಗದ್ದೆಗೆ ಹಾರಿ ಗದ್ದೆಯಲ್ಲಿ ಹುತಿದ್ದ ದರಿಗುಂಟ ವನ್ನು ಕಿತ್ತು ಕೋಣದ ನೆತ್ತಿಗೆ ಹೊಡೆಯಲು ಹೋಗುವರು. ಕೋಟಿಚೆನ್ನಯರು “ಒಡೆಯ ಬುದ್ಯನ್ತಾರೆ ಕೋಣಗಳಿಗೆ ಹೊಡೆಯಬೇಡಿ ಪಡುಮಲೆ ರಾಜ್ಯದಲ್ಲಿ ಕಾಡಿ ಬೇಡಿ ತಂದಿದ್ದೇವೆ ,ನಿಮಗೆ ಕೋಪ ಇದ್ದಾರೆ ನಮ್ಮ ಮೇಲೆ ತೀರಿಸಿ “ಎಂದು ಹೇಳಿ ತಡೆಯುತ್ತಾರೆ .ನಂತರ ಬುದ್ಯಂತ ಮತ್ತು ಕೋಟಿ ಚೆನ್ನಯರ ಎರಡೂ ಕಂಬಳ ಗದ್ದೆಗಳಿಗೆ ಬಿತ್ತನೆ ಕಾರ್ಯ ನಡೆಯುತ್ತದೆ copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ .ಬುದ್ಯಂತರು ಬಿತ್ತನೆ ಮಾಡಿ ಮೂರನೇ ದಿನ ನೀರು ಬಿಡಿಸಲೆಂದು ಬೆಳಗ್ಗಿನ ಜಾವ ಕಂಬಳ ಗದ್ದೆಗೆ ಬರುತ್ತಾರೆ , ಆಗ ಅವ್ರಿಗೆ ಕೋಟಿ ಚೆನ್ನಯರ ಗದ್ದೆಯಲ್ಲಿ ಬೀಜ ಚೆನ್ನಾಗಿ ಮೊಳೆತದ್ದು ಕಾಣಿಸುತ್ತದೆ .ಅವರ ಮೇಲೆ ಅಸೂಯೆಯಿಂದ ಆ ಗದ್ದೆಯ ಬೆಲೆಯನ್ನು ನಾಶ ಮಾಡಲೆಂದು ಕಾಡಿನಿಂದ ಬಬದಿಯಲ್ಲ್ಲಿ ಹರಿದು ಹೋಗುವ ನೀರಿಗೆ ಒದ್ಡು  ಕಟ್ಟಿ ಕೋಟಿ ಚೆನ್ನಯರ ಗದ್ದೆಗೆ ರಭಸದಿಂದ ಹರಿಯುವಾಗೆ ಮಾಡಿ ಆಗ ತಾನೇ ಮೊಳಕೆ ಯೋಡೆದಿದ್ದ ಬತ್ತದ ಬೀಜ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಹಾಗೆ ಮಾಡಿದರು

ಕಾಡ್ ದ ಬೊಲ್ಲೊಗು ಅಡ್ಡ ಕಟ್ ದೇರ್ ,ನೀರ್ ಪೋಪಿ ಸರದ್ ನ್
ಬುಡ್ತೆರ್ ನಡುಪುನಿ ಆನೆ ಬರಕೆದ ಕಣಿ ಕಡ್ತೆರ್ ಕಂಬಳಗ್ ಒಡ ದೇರ್ –ಅಯ್ಯಲ
ಬಿತ್ತು ಬುರುನಾಡೆಗ್ ಮುವಳ ಬಿತ್ತು ಬೂರುನಾಡೆ ಪಾರು ಪೊಯ್ಯ  ಗುರಿ ಗುಂಪು
ಮುಟ್ಟದೆರ್ ಬುಲೆ ಸೇಟ್ಟ ದೆರ್ ಗಾಸಿ ಮಲ್ತೆರ್ 
ಪದ್ಮ ಕಟ್ಟೆಡು ಕುಲ್ಲುದೆರ್ ಗೆಂದಾರೆಗ್ ಒರಗ್ ದೇರ್ (ಸಂ :ದಾಮೋದರ ಕಲ್ಮಾಡಿ )

ಅಲ್ಲಿಗೆ ಕೋಟಿ   ಬಂದು ಬುದ್ಯಂತ  ಬೆಳೆ  ನಾಶಮಾಡಿದ್ದನ್ನೂ ನೋಡಿ ಕೋಪದಿಂದ”ನಮ್ಮ ಬೆಲೆಯನ್ನು ಹಾಳು ಮಾಡಿದ್ದೀರಿ ,ಮಳೆಗಾಲದಲ್ಲಿ ಉಣ್ಣಬೇಕಾದ ಅನ್ನವನ್ನು ಹಾಲು ಮಾಡಿದ್ದೀರಿ ,ನಾನಾಗಿದ್ದಕ್ಕೆ ಇಷ್ಟು ಸಹಿಸಿಕೊಂಡೆ ನನ್ನ ತಮ್ಮ ಬಂದಿದ್ದರೆ ಅನಾಹುತವಾಗುತ್ತಿತ್ತು “ಎಂದು ಹೇಳುತ್ತಾನೆ . ಆಗ ಬುದ್ಯಂತ ಅವರನ್ನು ಹೀನಾಯಮಾನವಾಗಿ ನಿಂದಿಸುತ್ತಾನೆ .ಆಗ ಅಲ್ಲಿಗೆ ಬಂದ ಚೆನ್ನಯ ವಂದಿಸಿ ಗೌರವ  ಸೂಚಿಸಿದಾಗಲೂ ಅವನಿಗೆ ಅವಮಾನ ಮಾಡುತ್ತಾನೆ ಬುದ್ಯಂತ .ಅವನ ಮೇಲೆ ಆವೇಶದಿಂದ ಹಾರಿ ಹೊಡೆಯಲು ಹೋಗುವಾಗ ಬುದ್ಯಂತ ಓಡಿ ಹೋಗುತ್ತಾನೆ .ಅವನನ್ನು ಅದ್ದ ಕಟ್ಟಿದ ಕೋಟಿ  ಹಿಡಿದು ನಿಲ್ಲಿಸುತ್ತಾನೆ .ಅವರೊಳಗೆ ಹೋರಾಟ ಆಗಿ ಬುದ್ಯನ ಕಂಬಳದ ನೀರಿಗೆ ಮಗುಚಿ ಬೀಳುತ್ತಾನೆ .ಅವನನ್ನು ಬಡಿದು ಸಾಯಿಸಿ ಅವನೇ ಮಾಡಿದ ನೀರ ಹೋದಕ್ಕೆ ಅಡ್ಡ ಮಲಗಿಸಿ ಬುದ್ಯಂತರ ಮನೆಗೆ ಹೋಗಿ ಅವನ ಹೆಂಡತಿಯಲ್ಲಿ ಗದ್ದೆಗೆ ಹೋಗಿ ನೋಡುವಂತೆ ತಿಳಿಸುತ್ತಾರೆ

ಮನೆಗೆ ಬಂದಾಗ ಮಾವ ಸಾಯನ ಬೈದ್ಯನಿಗೆ ಎಲ್ಲವು ಅರ್ಥವಾಗುತ್ತದೆ .ಇನ್ನು ಆ ಉರಿನಲ್ಲಿರುವುದು ಅವರಿರುವುದು ಅಪಾಯ ಎಂದರಿತ ಮಾವ ಸಾಯ ಬೈದ್ಯ “ನೀವು ಬಲ್ಲಾಳನಿಗೆ ಕೊಡಲು ಸಾಧ್ಯವಾಗದಂತಹ ವಸ್ತು ಗಳನ್ನು ಕೇಳಿ.ಕೊಡದಿದ್ದಾಗ ಅದೇ ನೆಪ ಮಾಡಿ ದೂರ ಹೊರತು ಹೋಗಿ “ಎಂದು  ಸೂಚಿಸುತ್ತಾರೆ .ಅಂತೆಯೇ ಕೋಟಿ ಚೆನ್ನಯರು ಬಲ್ಲಳನಲ್ಲಿಗೆ ಹೋಗಿ “ನೀವು ಕಂಬಳ ಗದ್ದೆ ಕೊಟ್ಟಿದ್ದೀರಿ ಆದರೆ ಬೇಕಾದ ಸಲಕರಣೆಗಳನ್ನು ಕೊಟ್ಟಿಲ್ಲ ಎಂದು ಹೇಳಿದರು copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ ಆಗ ಬಲ್ಲಾಳ್ ನಿಮಗೆ ಏನು ಬೇಕು ಎಂದು ಕೇಳುತ್ತಾನೆ ಆಗ “ಬೀಡಿನ ಮುಮ್ಬಾಗದಲ್ಲಿರುವ ಸಣ್ಣ ಗೆಂದ ದೊಡ್ಡ ಗೆಂದ ತೆಂಗಿನ ಮರಗಳಲ್ಲಿ ಒಂದನ್ನು ಕೊಡಿ ಎಂದು ಕೇಳುವರು ಅದನ್ನು ಬಿಟ್ಟು ಬೇರೆ ಕೇಳಿ ಎಂದು ಬಲ್ಲಾಳ ಹೇಳಿದಾಗ ಸಣ್ಣ ತುಂಬಾ ದೊಡ್ಡ ತುಂಬಾ ಮಜಲು ಗದ್ದೆಗಳಲ್ಲಿ ಒಂದನ್ನು ಕೇಳುತ್ತಾರೆ .ಅದನ್ನು ಬಲ್ಲಾಳ ಕೊಡುವುದಿಲ್ಲ .ಆಗ “ಬೀಡಿನ ಹಟ್ಟಿಯಲ್ಲಿರುವ ಕಿನ್ನಿ ಕಾಳಿ ದೊಡ್ಡ ಕಾಳಿ ಹಸುಗಳಲ್ಲಿ ಒಂದನ್ನು ಕೊಡಿ” ಎಂದು ಕೋಟಿ ಚೆನ್ನಯರು ಕೇಳಿದರು   ಆಗ ಬಲ್ಲಾಳ “ನೀವು ನನ್ನ ಸ್ವಾರ್ಥಕ್ಕಾಗಿ ಆಶ್ರಯದಲ್ಲಿದ್ದೀರಿ ಪ್ರೀತಿಯಿಂದ ಸಾಕಿದೆ .ಆದರೆ ಅದಕ್ಕಾಗಿ ನನ್ನ ಹನ್ನೆರಡು ರಾಣಿಯರಲ್ಲಿ ಇಬ್ಬರನ್ನು ಕೊಡಬೇಕೆಂದರೆ ಕೊಡಲು ಸಾಧ್ಯವೇ ?ಎಂದು ಬಲ್ಲಾಳರು ಹೇಳಿದಾಗ ಕೋಟಿ ಚೆನ್ನಯರು “ತಾಯಿಯನ್ತಿರುವ ರಾಣಿಯರನ್ನು ನಮಗೆ ಕಟ್ಟುತ್ತೀರಲ್ಲ್ಲ .ಇಂದಿಗೆ ನಾವು ನೀವು ಎರಡಾಯಿತು ಸಂಬಂಧ ಕಡಿಯಿತು “ಎಂದು ಹೇಳಿ ೫ ವೀಳ್ಯದೆಲೆ ಇಟ್ಟು  ಬಂದರು   

ಆ ಹೊತ್ತಿಗೆ ಬುದ್ಯಂತ ಸಾವಿನ ಸಮಾಚಾರವು ಬಲ್ಲಾಳನಿಗೆ ತಿಳಿಯಿತು .ಬುದ್ಯಂತ ಸತ್ತರೆ ಸಾಯಲಿ ನೀವು ಹೋಗ ಬೇಡಿ ಎಂದು ಬಲ್ಲಾಳ ಕೋಟಿ ಚೆನ್ನಯರಲ್ಲಿ ಕೇಳಿಕೊಳ್ಳುತ್ತಾನೆ .ಆದರೆ ಕೋಟಿ ಚೆನ್ನಯರು ಹಿಂದೆ ತಿರುಗಿ ನೋಡೆ ಚಾವಡಿ ಇಳಿದು ಹೋಗುತ್ತಾರೆ .
              
 ಕಿನ್ನ್ನಿದಾರುವಿನ ಮನೆ ,ದೋಲ
ಅಲ್ಲಿಂದ ಅವರು ತಮ್ಮ ಅಕ್ಕ ಕಿನ್ನಿದಾರುವನ್ನು ಭೇಟಿ ಮಾಡುತ್ತಾರೆ .ಮುಂದೆ ಚಂದುಗಿದಿಯ ಕುತಂತ್ರದಿಂದಾಗಿ ಪಂಜದ ಕೇಮರ ಬಲ್ಲಾಳ ಅವರನ್ನು ಬಂಧಿಸುತ್ತಾನೆ .ಅಲ್ಲಿಂದ ಅವರು ಬೆರ್ಮೆರ್ ಸಹಾಯದಿಂದ ತಪ್ಪಿಸಿಕೊಂಡು ಎನ್ಮೂರಿಗೆ ಬಂದು ಅಲ್ಲಿನ ಬಲ್ಲಾಳನ ಆಶ್ರಯದಲ್ಲಿ ಎರಡು ಗುತ್ತುಗಳು ಅಂದರೆ  ಕರ್ಮಿಲಜೆ ಮತ್ತು ನೆಕ್ಕಿಲಜೆಗುತ್ತುಗಳನ್ನು ಪಡೆದು ವ್ಯವಸಾಯ ಮಾಡಿಕೊಂಡು   ಇರುತ್ತಾರೆ  .ಅವರು ಕೇಮಲಕ್ಕೆ ಹೋಗಿ ತಾಯಿ ಬೆರ್ಮೆರ್ ಗೆ ಹೇಳಿದ ಹರಿಕೆಯನ್ನು    ತೀರಿಸುತ್ತಾರೆ.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಒಂದು ದಿನ ಅವರು ಬೇಟೆಗೆ ಹೋಗುತ್ತಾರೆ ಕೋಟಿ  ಒಂದು ಹಂದಿಗೆ ಬಾಣ ಬಿಟ್ಟ ಆ ಹಂದಿ  ಪಂಜ-ಎನ್ಮೂರುಗಳ ಗಾಡಿಯಲ್ಲಿ ಸತ್ತು ಬೀಳುತ್ತದೆ .ಇದರಿಂದ ವಿವಾದ ಉಂಟಾಗಿ ಪಂಜದ ಬಲ್ಲಾಳರು ಯುದ್ಧಕ್ಕೆ ಬರುತ್ತಾರೆ .ಘೋರ ಯುದ್ಧ ನಡೆಯುತ್ತದೆ ಚಂದುಗಿಡಿ ಬಿಟ್ಟ ಬಾಣ ಒಂದು ಚೆನ್ನಯನ  ಕಾಲಿಗೆ ತಾಗುತ್ತದೆ.ಅವನು ಅಣ್ಣನಲ್ಲಿ “ಪಂಜದ ಪಡೆ ನಾಯಿ ಒಂದು ಕಾಲಿಗೆ ಕಚ್ಚಿತು ಎಂದು ಹೇಳುತ್ತಾನೆ .ಆಗ ಕೋಟಿಯು “ಕಣ್ಣಿಂದ ನೋಡ ಬೇಡ ಕೈಯಿಂದ ಹಿಡಿಯಬೇಡ ಒಳಗಿನಿಂದ ತೆಗೆದು ಹೊರಗೆ ಕೊಡಹು ಎಂದು ಹೇಳುತ್ತಾನೆ .ಅದರಂತೆ ಚೆನ್ನಯ ಕಾಲನ್ನು ಕೊದಹಿದಾಗ ಒಂದು ಗದ್ದೆಯ ಜನ ಪೂರ್ತಿ ನಾಶವಾದರು .

ಯುದ್ಧದಲ್ಲಿ ಕೋಟಿ ಚೆನ್ನಯರು ಚಂದು ಗಿಡಿಯನ್ನು ಕೊಲ್ಲುತ್ತಾರೆ .ಆಗ ಪಂಜದ ಸೈನ್ಯ ಸೋತು ಶರಣಾಗುತ್ತದೆ . ಈ ಸಂದರ್ಭದಲ್ಲ್ಲಿ ಪಂಜದ ಕೆಮರ ಬಲ್ಲಾಳನ ಜುಟ್ಟು ಹಿಡಿದು ಕೋಟಿ ಬಗ್ಗಿಸುತ್ತಾನೆ ಆಗ ಕೋಟಿಯ ಬಲ ಮರ್ಮಾಂಗಕ್ಕೆ ಬಾಣ ಒಂದು ಬಂದು ನಾಟಿತು .ಅದನ್ನು ಪಡುಮಲೆ ಬಲ್ಲಾಳನೆ ಬಿಟ್ಟಿರುತ್ತಾನೆ

ಮರ್ಮಾಂಗಕ್ಕೆ ಬಾಣ ನಾಟಿರುವುದರಿಂದ ತನ್ನ ಅಂತ್ಯ ಸಮೀಪಿಸಿದೆ ಎಂದು ಕೋಟಿಗೆ ತಿಳಿಯಿತು .ಅಣ್ಣನನ್ನು ಅಪ್ಪಿಕೊಂಡ ಚೆನ್ನಯ “ಹುಟ್ಟಿನ ಅಮೇ ಒಂದಾಗಿರುವಾಗ ನಮಗೆ ಸಾವಿನ ಸೂತಕ ಎರಡಾಗುವುದೇ ?! ಎಂದು ಉದ್ಗರಿಸಿದನು ಕೋಟಿ ಯು   ತಮ್ಮನ್ನು ಸಾಕಿದ ಬಲ್ಲಾ ಳನೆಡೆಗೆ ನೋಡಿ “ತಮಗೆ ಜಾತಿ ಭೇದ ನೋಡದೆ ಗರೋಡಿ ಕಟ್ಟಿ ಆರಾಧಿಸುತ್ತಾ ಬನ್ನಿ ನಿಮಗೆ ರಕ್ಷನ ಕೊಡುತ್ತೇವೆ,ನೆನೆಸಿದಲ್ಲಿ ನೆಲೆಯಾಗುತ್ತೇವೆ ,ನ್ಯಾಯಕ್ಕೆ ಇಂಬು ಕೊಡುತ್ತೇವೆ ,ಬೆಳೆಗೆ ರಕ್ಷಣ ಕೊಡುತ್ತೇವೆ “ಎಂದು ಹೇಳಿ ವೀರ ಮರಣವನ್ನಪ್ಪುತ್ತಾನೆ .ಆಗ ಚೆನ್ನಯ “ನಮಗೆ ಹೆತ್ತ ಸೂತಕ ಒಂದೇ ಆಗಿತ್ತು ಈಗ ಸತ್ತ ಸೂತಕ ಎರಡಾಗ ಬೇಕೇ ನಾನು ಕೂಡ ನಿನ್ನ ಜೊತೆ ಬರುತ್ತೇನೆ “ಎಂದು ಹೇಳಿ ದಂಬೆ ಕಲ್ಲಿಗೆ ತಲೆಯನ್ನು ಅಪ್ಪಳಿಸಿ ಅಣ್ಣನನ್ನು ಅನುಸರಿಸುತ್ತಾನೆ .ಹೀಗೆ ವೀರ ಮರಣ ವನ್ನಪ್ಪುವ ಸ್ವಾಭಿಮಾನಿಗಳೂ ಅತುಲ ಪರಾಕ್ರಮಿಗಲೂ ಆದ ಅವಳಿ ಸಹೋದರರಾದ ಕೋಟಿ ಚೆನ್ನಯರು ಆರಾಧ್ಯ    ಶಕ್ತಿಗಳಾಗಿ ತುಳುನಾಡನ್ನು ಬೆಳಗುತ್ತಿದ್ದಾರೆ .
  
ಇತಿಹಾಸದ ದೃಷ್ಟಿಯಿಂದ   ಪಂಜದ ಕೆಮರ ಬಲ್ಲಾಳ .ಪಡುಮಲೆ ಬಲ್ಲಾಳರ ಉಲ್ಲೇಖ  ಇಲ್ಲಿ ಬಹಳ ಮುಖ್ಯವಾದುದು .ಈ ಆಧಾರಗಳಿಂದ ಕೋಟಿ ಚೆನ್ನಯರ ಕಾಲವನ್ನು ಸುಮಾರು ೧೬ ನೆ ಶತಮಾನ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆcopy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಪಂಜದ ಕೂತ್ಕುಂಜದಲ್ಲಿರುವ ಗೆಳತಿ ಮಂಗಳ ಗೌರಿಯ ಅಣ್ಣ ನಮ್ಮನ್ನು ಕೋಟಿ ಚೆನ್ನಯರ ಆದಿ ಗರೋಡಿ ಹಾಗು ಸಮಾಧಿ ಇರುವೆಡೆಗೆ ಕರೆದುಕೊಂಡು ಹೋಗಿದ್ದರು .ಎತ್ತರದ ಗುಡ್ಡದ ತುದಿಯಲ್ಲಿ ಆದಿ ಗರೋಡಿ ಇದೆ ತುಸು ದೂರದಲ್ಲಿ ಕೋಟಿ ಚೆನ್ನಯರ ಸಮಾಧಿ ಇದೆ .ಕೋಟಿ ಚೆನ್ನಯರ ಸುರಿಯವನ್ನು ಹಾಕಿರುವ ಒಂದು ಮುಚ್ಚಿದ ಬಾವಿ ಅಲ್ಲಿದೆ.ಸುತ್ತ ಮುತ್ತ ಕಾಡು ಇರುವ ನಿರ್ಜನ ತಾಣ  ಇದು.  ಹೋಗುವಾಗ ನಾವೆಲ್ಲಾ ಬಹಳ ಸಂಭ್ರಮದಲ್ಲಿ ಹೋಗಿದ್ದೆವು .ಹೋಗುತ್ತಾ ಕೋಟಿ ಚೆನ್ನಯರ ವೀರ ಗಾಥೆಯನ್ನು ನಾನು ಹೇಳಿದೆ .ಕೋಟಿ ಚೆನ್ನಯರ ಸಮಾಧಿ ನೋಡಿ ಹಿಂದೆ ಬರುವಾಗ ಏಕೋ ಏನೋ ನಮ್ಮೆ ಲ್ಲರ ಕಣ್ಣಂಚು ತೇವಗೊಂಡಿತ್ತು .ಮನಸ್ಸು ಭಾರವಾಗಿತ್ತು. 



 


                                     

                       
                               Photo: <3 ''  Koti -Chennaya  ''

'' Nambinakleg  embu korpa 
Sathya gendaad Korpa '' <3
                                     (ಚಿತ್ರ ಕೃಪೆ :ತುಳುನಾಡು .ಫೇಸ್ ಬುಕ್ )ಕೋಟಿಚೆನ್ನಯರ ನೇಮ
 
                     

ತುಳುನಾಡಿನ ಅವಳಿ ವೀರರು - ಕೋಟಿಚೆನ್ನಯರು:-© ಡಾ.ಲಕ್ಷ್ಮೀ ಜಿ ಪ್ರಸಾದ



copy rights reserved-© ಡಾ.ಲಕ್ಷ್ಮೀ ಜಿ ಪ್ರಸಾದ





ಜೋಡು ನಂದಾ ದೀಪ ಬೆಳಗುನು ತುಳುವ ನಾಡುದ ಗುಂಡೊಡು ..ಹೌದು !ಡಾ .ಅಮೃತ ಸೋಮೆಶ್ವರರು ರಚಿಸಿದ ಹಾಡು ಇದು .ಇದು ಕೇವಲ ಹಾಡಲ್ಲ .ತುಳುವರ ಹೃದಯದ ಮಿಡಿತವಿದು !ಕೋಟಿ ಚೆನ್ನಯರೆಂಬ ಜೋಡು  ನಂದಾ ದೀಪಗಳು ತುಳುವರ ಮನೆ ಮನಗಳಲ್ಲಿ ಸದಾ ಬೆಳಗುತ್ತಿದೆ .ತುಳುನಾಡಿನ ಈ ಅಪ್ರತಿಮ ವೀರರ ಕುರಿತು ಸಮಗ್ರವಾಗಿ ಬರೆಯ ಹೊರಟರೆ ಅದು ದೊಡ್ಡ ಗ್ರಂಥವಾಗಿ ಬಿಡಬಹುದು !ಕೋಟಿ ಚೆನ್ನಯರ ಜೀವನ ಗಾಥೆ ಒಂದು ಮಹಾ ಕಾವ್ಯ. ಅದೊಂದು ಲಾವಣಿ ಚಕ್ರ. ಅದನ್ನು ಸಂಕ್ಷಿಪ್ತ ವಾಗಿ ಬರೆಯುವುದೂ ಒಂದು ಸವಾಲು! .ಕೋಟಿ ಚೆನ್ನಯರದು ಕೇವಲ ಕಟ್ಟು ಕಥೆಯಲ್ಲ ಅದು ತುಳುನಾಡಿನಲ್ಲಿ ನಡೆದ ವೀರರ ಕಥೆ. ಅವರ ಸ್ವಾಭಿಮಾನ, ಸ್ವಂತ ವ್ಯವಸಾಯ ಮಾಡುವ ಹಂಬಲ, ಶೌರ್ಯ ಸಾಹಸವನ್ನು ನೆನೆದಾಗ ಮನದುಂಬಿ ಬರುತ್ತದೆ.ಒಟ್ಟಿಗೆ  ಹುಟ್ಟಿ ಬೆಳೆದು ಅಸಾಮಾನ್ಯ ಸಾಹಸ ಮೆರೆದು, ಎರಡು ಗುತ್ತು ಗಳ ಒಡೆತನ ಪಡೆದು ,ತಮ್ಮ ಆಶ್ರಯದಾತನಿಗೆ ಯುದ್ಧದಲ್ಲಿ ವಿಜಯವನ್ನು ತಂದು ಕೊಟ್ಟು ಒಟ್ಟಿಗೆ  ಇಹಲೋಕವನ್ನು ತ್ಯಜಿಸಿ ತುಳುವರ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲಸಿದ ಪರಿ ಅನನ್ಯವಾದುದು !.ನಾನು ನನ್ನ ಪಿ ಎಚ್ ಡಿ ಸಂಶೋಧನಾ ಕ್ಷೇತ್ರ ಕಾರ್ಯಕ್ಕಾಗಿ ಪಂಜ ,ಪಡುಮಲೆ, ಎಣ್ಮೂರು, ಎಡಮಂಗಲ ಮೊದಲಾದ ಪ್ರದೇಶಗಳಲ್ಲಿ ಸುತ್ತುತ್ತಿದ್ದಾಗ ನಂಗೆ ಕೋಟಿ ಚೆನ್ನಯರದೆ ಗುನುಗು! .ಅರಸೊತ್ತಿಗೆಯ ಆ  ಕಾಲದಲ್ಲಿ ಅವರು ಅನ್ಯಾಯದ ವಿರುದ್ಧ ತೋರಿದ ಪ್ರತಿಭಟನೆ ,ಸ್ವಾಭಿಮಾನ ಸಾಹಸ ನೆನಪಾಗುತ್ತಿತ್ತು ."ತುಳುನಾಡ ಅವಳಿ ವೀರರು ಓಡಾಡಿದ ನೆಲ ಇದು" ಎಂದು ನೆನಪಾಗಿ ರೋಮಾಂಚನಗೊಂಡಿದ್ದೇನೆ . ಕೋಟಿ ಚೆನ್ನಯರ ಗರೋಡಿಗಳ ಫೋಟೋ ತೆಗೆಯುತ್ತಿದ್ದಾಗ ಉಂಟಾಗುತ್ತಿದ್ದ ಸಂತಸ ಅವರ ಸಮಾಧಿಯ ಫೋಟೋ  ತೆಗೆಯುವಾಗ ಇರಲಿಲ್ಲ . ಸಮಾಧಿಯ ಫೋಟೋ ತೆಗೆಯುವಾಗ ಏನೋ ದುಗುಡ ಕಾಡುತ್ತಿದ್ದುದು ಮಾತ್ರ ಸತ್ಯ. ಕೋಟಿ ಚೆನ್ನಯರ ಮೂಲವನ್ನು ಅಲೌಕಿಕ ಜಗತ್ತಿಗೆ ಜೋಡಿಸುವ  ಕೋಟಿಚೆನ್ನಯ ಪಾಡ್ದನವು ಡೆಂನ-ಡೆಂನಾನ ಎಂಬ ಸೊಲ್ಲಿನ ನಂತರ ‘ಬೆರ್ಮೆರ್ ಪುಟ್ಟಿನಾ ನಾಡ್, ಬೆರ್ಮರೆಬೆರಿಯೇ ...' ‘ಬೆರ್ಮೆರ್ ಹುಟ್ಟಿದ ನಾಡು ಬೆರ್ಮೆರ ಶಕ್ತಿಯನ್ನು ಹೊಂದಿದ ನಾಡು, ಇದು ಬೈದ್ಯ ವೀರರು ಹುಟ್ಟಿದ ನಾಡು' ಎಂದು ತುಳುನಾಡಿನ ಬಗ್ಗೆ ಹೇಳುತ್ತದೆ. ಅನಂತರ ‘ಬೆರ್ಮೆರ್' ಉದಿಸಿದ ವಿಚಾರವನ್ನು ಈ ಪಾಡ್ದನ ವರ್ಣಿಸುತ್ತದೆ. "ಬೆರ್ಮೆರ್ ಪುಟ್ಟಿನಾ ನಾಡ್‍ವುಂದ್ ಏಳ್ ಗಂಗೆದ ನಡುಟು ...", "ಬೆರ್ಮೆರ್ ಹುಟ್ಟಿದ ನಾಡು ಇದು ಏಳು ಗಂಗೆಯ ನಡುವಿನಲ್ಲಿ" ಎಂಬಲ್ಲಿ ನೀರು ಸುತ್ತಮುತ್ತ ಆವೃತವಾಗಿರುವ ಭೂಭಾಗದಲ್ಲಿ ‘ಬೆರ್ಮೆರ್' ಹುಟ್ಟಿದ ನಾಡು ಇದೆ ಎಂಬ ಸೂಚನೆ ಸಿಗುತ್ತದೆ. ಏಳು ಗಂಗೆಯ ನಡುವೆ ಎಮಲಗುಂಡ  ಇದೆ. ಏಳು ಅಂತಸ್ತಿನ ಎಮಲಗುಂಡದಲ್ಲಿ ಬೆರ್ಮೆರ್‍ಗೆ ಏಳು ಅಂಕಣದ ಸತ್ತಿಗೆ, ಭುಜಗಳಲ್ಲಿ ಮೂರು ಅಂತಸ್ತಿನಸತ್ತಿಗೆ ಇದೆ. ಬಲಭಾಗದಲ್ಲಿ ಬಂಗಾರದ ಜನಿವಾರ, ಎಡಭಾಗದಲ್ಲಿ ಬೆಳ್ಳಿಯ ಜನಿವಾರ, ಒಂದಾಳು ಉದ್ದದ ಹೂವಿನ ಜಲ್ಲಿ, ಗೇಣುದ್ದ ಬೀಸಣಿಗೆ, ಕುತ್ತಿಗೆಯಷ್ಟು ಉದ್ದದ ಕೇದಗೆ ಹೂವಿನ ಅಲಂಕಾರವಿದೆ. ಕಿವಿಗೆ ಕೇಂಜವ ಹಕ್ಕಿಯ ಆಕಾರದ ಆಭರಣ ಇದೆ. ಎದೆಯಲ್ಲಿ ಅಮೃತ ಕಲಶವಿದೆ. ಹೊಟ್ಟೆಯಲ್ಲಿ ಬಾಸಿಂಗವಿದೆ. ಬೆನ್ನಲ್ಲಿ ಭೀಮಾರ್ಜುನರನ್ನು ಹೊಂದಿದ್ದಾರೆ. ಮೊಣಕಾಲಿನವರೆಗೆ ಕಾವೇರಿ ಹರಿಯುವ ಇಂದ್ರಪರ್ವತ ‘ಬೆರ್ಮೆರ್'ಗೆ ಆಸನವಾಗಿದೆ. ಸೊಂಟದ ಸುತ್ತ ಸರ್ಪಾಭರಣ ಪಾದದಲ್ಲಿ ‘ಪದ್ಮರೇಖೆ' ಇದೆ. ಬೆರ್ಮೆರ್ ಅಣಿಗಂಗೆ, ಮಣಿಗಂಗೆ, ಪೇರುಗಂಗೆ, ಮಿಂಚಿಗಂಗೆ, ನೀರುಗಂಗೆ, ಬೆಳ್ಳಿಗಂಗೆ, ಕಂಚುಗಂಗೆ ಎಂಬ ಏಳು ಗಂಗೆಯನ್ನು, ನಾಲ್ಕು ಸಮುದ್ರವನ್ನು ನಿರ್ಮಿಸಿದರು.‘ಬೆರ್ಮೆರ್‍ನ ಏಳು ಅಂಕಣ ಛತ್ರದ, ಒಂದು ಧ್ವಜದ ನೆರಳಿನಲ್ಲಿ ಹನ್ನೆರಡು ಬ್ರಹ್ಮಚಾರಿಗಳು ಹನ್ನೆರಡು ಕನ್ಯೆಯರು ಚಾಮರಾದಿ ಸೇವೆಗಳನ್ನು ಮಾಡುತ್ತಿದ್ದರು. ಬೆಳ್ಳಿಯ ಬೀಸಣಿಗೆ ಹಿಡಿದು ಗಾಳಿ ಹಾಕುತ್ತಿದ್ದರು. ಹೀಗೆ ವೈಭವದಿಂದ ಕಾಲ ಕಳೆಯುತ್ತಿರಲು ಬಾರದಂಥ ಬಿಸಿಲು ಬಂದು, ಭೀಕರವಾಗಿ ಮಳೆ ಬಂದು ನಿರ್ಮಾಣವಾಗಿದ್ದ ಹುಲ್ಲು, ಪೊದರು, ಮನುಷ್ಯ, ಪ್ರಾಣಿಗಳು ಎಲ್ಲರು ಕೊಚ್ಚಿಕೊಂಡು ಹೋದರು. ಆಗ ಸೂರ್ಯನಾರಾಯಣದೇವರು ಪುನಃ ಸೃಷ್ಟಿಗೆ ತೊಡಗುತ್ತಾರೆ.
ದಿಕ್ಪಾಲಕರನ್ನು ನೆನೆದು ಸೃಷ್ಟಿ ಜಪ ಮಾಡಲು ಆರಂಭಿಸುತ್ತಾರೆ. ದೇವರ ಎಡಭಾಗದಲ್ಲಿ ಎರಡು ಕೇಂಜವ ಹಕ್ಕಿಗಳನ್ನು ನಿರ್ಮಿಸಿದರು. ಕಲ್ಲು, ಹುಲ್ಲು, ಬೈಹುಲ್ಲಿನ ಗೂಡು, ಬಿದಿರು, ಮುಳ್ಳು ಎಲ್ಲವನ್ನು ಸೃಷ್ಟಿಸಿದರು. ಅಣ್ಣ-ತಂಗಿಯರಂತಿದ್ದ ಕೇಂಜವ ಪಕ್ಷಿಗಳು ಸಂತಾನದ ವರವನ್ನು ಸೂರ್ಯನಾರಾಯಣ ದೇವರಲ್ಲಿ ಕೇಳುತ್ತವೆ. ದೇವರ ಅನುಮತಿಯಂತೆ ಸತಿ-ಪತಿಗಳಾಗುತ್ತಾರೆ. ದೇವರ ಆಣತಿಯಂತೆ ಬಡಗು ದಿಕ್ಕಿನಲ್ಲಿರುವ ಸಾಗರದಲ್ಲಿ ಮಲ್ಲಿಗೆಯಿಂದ ಆವೃತವಾದ ಕೆರೆಯ ಮಧ್ಯದಲ್ಲಿರುವ ಅತ್ತಿಯಮರದ ಹೂವಿನ ಮಕರಂದವನ್ನು ತರಲು ಹೋಯಿತು. ಸೂರ್ಯ ಮುಳುಗುವ ಹೊತ್ತಿಗೆ ಮಕರಂದವನ್ನು ಹೀರಲು ಕೊಕ್ಕು ಹಾಕಿತು. ಸೂರ್ಯ ಮುಳುಗಿದ ಕ್ಷಣದಲ್ಲಿ ಹೂವು ಮುಚ್ಚಿಕೊಂಡಿತು. ಕೊಕ್ಕು ಹೂವಿನಲ್ಲಿ ಸಿಕ್ಕಿ ಹಾಕಿಕೊಂಡಿತು. ಇತ್ತ ಹೆಣ್ಣು ಕೇಂಜವ ಹಕ್ಕಿ ಕೇಂಜವ ಬಾರದಿರಲು ಚಿಂತೆಯಾಗಿ "ತನ್ನ ಪತಿ ಕ್ಷೇಮವಾಗಿ ಬಂದರೆ, ತಾನು ಇಡುವ ಮೊದಲ ಮೊಟ್ಟೆಯನ್ನು ನಮ್ಮನ್ನು ಸೃಷ್ಟಿಸಿದ ಸೂರ್ಯನಾರಾಯಣದೇವರಿಗೆ ನೀಡುತ್ತೇವೆ" ಎಂದು ಹರಕೆ ಹೇಳಿಕೊಳ್ಳುತ್ತಾಳೆ. ಕೇಂಜವ ತಂದ ಮಕರಂದವನ್ನು ಸ್ವೀಕರಿಸಿದ ಕೇಂಜವದಿ ಗರ್ಭ ಧರಿಸುತ್ತದೆ. ಗರ್ಭಧಾರಣೆಯ ಹತ್ತನೆಯ ತಿಂಗಳಿನಲ್ಲಿ ಆನೆಯ ತಲೆಗಿಂತ ಚಿಕ್ಕದಾದ, ಕುದುರೆಯ ತಲೆಗಿಂತ ದೊಡ್ಡದಾದ ಮೊಟ್ಟೆಯನ್ನು ಇಡುತ್ತದೆ. ಆ ಮೊಟ್ಟೆಯನ್ನು ಹೇಳಿಕೊಂಡ ಹರಕೆಯಂತೆ ದೇವರಿಗೆ ಅರ್ಪಿಸುತ್ತಾರೆ. ದೇವರು ಅದನ್ನು ದಿಂಬಿನಂತೆ ಇರಲಿ ಎಂದು ಬದಿಗೆ ಇಟ್ಟು ಗಾಳಿ ರಥವೇರಿ ಸವಾರಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಹೊಂಚು ಹಾಕುತ್ತಿದ್ದ ನಾಗಗಳು ಮೊಟ್ಟೆಗೆ ನೋಟ ಇಟ್ಟು ಸ್ಪರ್ಶಿಸಿದಾಗ ಮೊಟ್ಟೆ ಒಡೆಯುತ್ತದೆ. ಸಿಡಿದ ತುಂಡುಗಳು ಮೇಲೆ ಆಕಾಶಕ್ಕೆ, ಕೆಳಗೆ ಪಾತಾಳಕ್ಕೆ ಉತ್ತರ ದಿಕ್ಕಿನಲ್ಲಿ ಜರ್ದೊರಿಯ ಮಗ ಜಂಬೂರಿಕುಮಾರನ ಮಡಿಲಿಗೆ ಬೀಳುತ್ತದೆ. ಅದು ಮುತ್ತು ಮಾಣಿಕ್ಯವಾಗಿ ಕಾಣಿಸುತ್ತದೆ. ಅದನ್ನು ಅವನು ಕಿವಿಯಲ್ಲಿಧರಿಸುತ್ತಾನೆ. ಸವಾರಿಗೆ ಹೋದ ದೇವರು ಹಿಂದಿರುಗಿ ಬಂದಾಗ, ಮೊಟ್ಟೆ ಒಡೆದ ವಿಚಾರ ತಿಳಿದು ಅದೆಲ್ಲಿದೆ ಎಂದು ಹುಡುಕುತ್ತಾರೆ. ಆಗ ಜಂಬೂರಿಕುಮಾರನ ಕಿವಿಯಲ್ಲಿದ್ದ ಮಾಣಿಕ್ಯ ಪುನಃ ಸಿಡಿದು ಮಣ್ಣಮುದ್ದೆಯಾಗಿ ಸಮುದ್ರಕ್ಕೆ ಬಿದ್ದು ಸಪ್ತಗಿರಿ ಪರ್ವತಕ್ಕಿಂತ ಹೆಚ್ಚು ಚಂದವಾಯಿತು. ತೆಂಕುದಿಕ್ಕಿನಲ್ಲಿ ಶೋಭಿಸುವ ಹೊಳೆಯಾಯಿತು. ಮಧ್ಯದಲ್ಲಿ ದ್ವೀಪ ಆಯಿತು. ಮೂಡುದಿಕ್ಕಿನಲ್ಲಿ ಘಟ್ಟ, ಪಡುವಣದಲ್ಲಿ ಸಮುದ್ರದ ನಡುವಿನ ಈ ಭಾಗವೇ ತುಳುನಾಡು.ಇದೇ ತುಳುನಾಡಿನಲ್ಲಿ ಕೋಟಿ ಚೆನ್ನಯರು ಮೆರೆದಾಡಿದ್ದಾರೆ ಕೇಂಜವ ಪಕ್ಷಿಗಳು  ಇಟ್ಟ ಎರಡನೆಯ ಮೊಟ್ಟೆ ಸಮುದ್ರಕ್ಕೆ ಜಾರಿ ಬೀಳುತ್ತದೆ .ಅದು ನಿಂಬೆ ಹಣ್ಣಾಗಿ  ತೇಲಿಕೊಂಡು ಬರುವಾಗ ಸಂಕಮಲೆಯ ಪೆಜನಾರ ಎಂಬ ಬ್ರಾಹ್ಮಣನ ಕೈಗೆ ಸಿಗುತ್ತದೆ .ಅದನ್ನು ಮನೆಗೆ ಕೊಂಡು ಹೋಗಿ ಇಡುವಾಗ ಒಂದು ಹೆಣ್ಣು ಮಗುವಾಗಿ ಅಳುತ್ತದೆ .ಮಕ್ಕಳಿಲ್ಲದ ಓಪೆತ್ತಿ- ಪೆಜನಾರ ದಂಪತಿಗಳು ಈ ಹೆಣ್ಣು ಮಗುವನ್ನು ಕೇದಗೆ ಎಂಬ ಹೆಅಸರಿತ್ತು ಮುದ್ದಿನಿಂದ ಸಾಕುತ್ತಾರೆ .ಇವಳು ೮-೧೦ ವರ್ಷವಾಗುತ್ತಾ ಬರಲು ಅವಳು ಋತುಮತಿಯಾಗುತ್ತಾಳೆ. ಆಗ ಬ್ರಾಹ್ಮಣರಲ್ಲಿ ವಿವಾಹಕ್ಕೆ ಮೊದಲು ಹುಡುಗಿ ಋತು ಮತಿಯರಾದರೆ ಅವರನ್ನು ಕಣ್ಣು ಕಟ್ಟಿ ಬೆತ್ತಲಾಗಿಸಿ ಕಾಡಿನಲ್ಲಿ ಬಿಟ್ಟು ಬರುವ ಸಂಪ್ರದಾಯವಿತ್ತು .ಆದ್ದರಿಂದ ಪೆಜನಾರ್ ಕದಾ ತಾವು ಮುದ್ದಿನಿಂದ ಸಾಕಿದ ಮಗಳನ್ನು ಬೇರೆ ದಾರಿ ತೋಚದೆ ಸಂಬಂಧಿಕರ ಮದುವೆಗೆ ಹೋಗೋಣ ಎಂದು ನಂಬಿಸಿ ಕಾಡಿನಲ್ಲಿ ಬಿಟ್ಟು ಬರುತ್ತಾರೆ.
"ಸಂಕ ಮಲೆತ್ ತೊಟಕ ಬೆರನ್ದೀನ್ ಮದಿಮಾಲ್ ಆಯಿನೆಕ್ಕ್ ಕಣ್ಣುಗ್ ಕುಂಟು ಕಟ್ದು ಕಾಡುಗು  ಬುಡ್ತೆರ್ ಅಪಗ ಸಾಯಿನ ಬೈದ್ಯೆ ಇನ್ಪಿನಾಯೆ ಈನ್ದುದ ಬೇಲೆಗ್  ಪೋತೆ", ಆ ಹೊತ್ತಿನಲ್ಲಿ ಸಾಯನ ಬೈದ್ಯ ಮುರ್ತೆಯ ಕೆಲಸಕ್ಕಾಗಿ ಕಾಡಿಗೆ ಬರುತ್ತಾನೆ .ಇನ್ನು ಬೆಳಕು ಸರಿಯಾಗಿ ಮೂಡಿರಲಿಲ್ಲ . ಅವನು ಮರ ಹತ್ತಿ ಕೊಯ್ಯುವಾಗ ಅದರ ಕಸ ಈ ಹುಡುಗಿಯ ತಲೆ ಮೇಲೆ ಬೀಳುತ್ತದೆ .ಆಗ ಅವಳು "ನೀನು ಗಂಡಸಾದರೆ ನನ್ನ ಅಣ್ಣ ಹೆಂಗಸಾದರೆ ನನ್ನ ಅಕ್ಕ" ಎಂದು ಹೇಳುತ್ತಾಳೆ . ಈ ಎಳೆಯ ಹುಡುಗಿಯನ್ನು ನೋಡುವಾಗ ಸಾಯನ ಬೈದ್ಯನಿಗೆ ತನ್ನ ಮುದ್ದಿನ ತಂಗಿ ದೇಯಿ ಬೈದ್ಯೆತಿಯ ನೆನಪಾಗುತ್ತದೆ . ದೇಯಿ ಬೈದ್ಯೆತಿಯನ್ನು ಸಣ್ಣದರಲ್ಲಿಯೇ ಕಾಂತನ  ಬೈದ್ಯನಿಗೆ ಮದುವೆ ಮಾಡಿ ಕೊಟ್ಟಿರುತ್ತಾನೆ ಅಣ್ಣ ಸಾಯನ ಬೈದ್ಯ .ಆದರೆ ಅವಳು ಚಿಕ್ಕ ವಯಸ್ಸಿನಲ್ಲಿಯೇ ಹೆರಿಗೆ ಸಮಯದಲ್ಲಿ ಮರಣ ನ್ನಪ್ಪಿರುತ್ತಾಳೆ .ಕಣ್ಣು ಕಟ್ಟಿ ಕಾಡಿಗೆ ಬಿಟ್ಟ ಈ ಹುಡುಗಿ ಕೇದಗೆಯ ಮೇಲೆ ಅನುಕಂಪ ಪ್ರೀತಿ ಹುಟ್ಟಿ ಸಾಯನ ಬೈದ್ಯ ಅವಳ ಕೈಕಾಲು ಕಣ್ಣು ಬಿಚ್ಚಿ ತನ್ನ ಮುಂಡಾಸಿನ ಬಟ್ಟೆಯನ್ನು ಅವಳಿಗೆ ಹೊದೆಸಿ  ತನ್ನ ಮನೆಗೆ ಕರೆದೊಯ್ಯುತ್ತಾನೆ .ತನ್ನ ತಂಗಿಯ ಹೆಸರಿತ್ತು ಅವಳನ್ನು ಸಾಕಿ ಸಲಹುತ್ತಾನೆ .ಕಾಡಿನಿಂದ ತಂದ ಅನಾಥ ಹುಡುಗಿಯನ್ನು ಯಾರೂ ಮದುವೆಯಾಗಲು ಮುಂದೆ ಬರಲಿಲ್ಲವೋ ಏನೋ !ವಯಸ್ಸಾಗಿರುವ ತನ್ನ ತಂಗಿಯ ಗಂಡ ಕಾಂತನ  ಬೈದ್ಯನಿಗೆ ಇವಳನ್ನು ಮದುವೆ ಮಾಡಿ ಕೊಡುತ್ತಾನೆ .ಅವನು ಮದುವೆಯಾಗುವಾಗಲೇ "ತನಗೆ ವಯಸ್ಸಾಯಿತು ಮುಂದೆ ಹುಟ್ಟುವ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ?"ಎಂದು ಕೇಳಿದಾಗ" ಆ ಜವಾಬ್ದಾರಿ ನನಗಿರಲಿ" ಎಂದು ಹೇಳಿ ಆತನನ್ನು ಒಪ್ಪಿಸುತ್ತಾನೆ ಸಾಯನ ಬೈದ್ಯ !ಆದ್ದರಿಂದಲೇ ಇಡೀ ತುಳುಜನಪದ  ಸಾಹಿತ್ಯದಲ್ಲಿ ಸಾಯನ ಬೈದ್ಯನ ಪಾತ್ರ ಸದಾ ದೇದೀಪ್ಯಮಾನವಾಗಿದೆ .ಮುಂದೆ ದೇವಿ ಬೈದ್ಯೆತಿ ಗರ್ಭಿಣಿಯಾಗುತ್ತಾಳೆ ಇತ್ತ ಪಡುಮಲೆ ಬಲ್ಲಾಳರಿಗೆ ಬೇಟೆಗೆ ಹೋಗುವ ಕನಸು ಬೀಳುತ್ತದೆ .ಅದರಂತೆ ಅವರು ನಾಗ ಬ್ರಹ್ಮರನ್ನು ನೆನೆದು ಕಾಣಿಕೆ ತೆಗೆದು ಇಟ್ಟು ಬೇಟೆಗೆ ಹೋಗುತ್ತಾರೆ ಅನೇಕ ಪ್ರಾಣಿಗಳನ್ನು ಬೇಟೆಯಾಡಿ ಅವುಗಳನ್ನು ಸಲ್ಲ ಬೇಕಾದವರಿಗೆ ಅವರವರ ಸ್ಥಾನ ಮರ್ಯಾದೆಗನುಗುಣವಾಗಿ ಹಂಚುತ್ತಾರೆ.ಬೇಟೆಯಾಡಿ ಹಿಂದೆ ಬರುವಾಗ ಬಲ್ಲಾಳರ ಕಾಲಿಗೆ ಕಾಸರಕನ ಮುಳ್ಳು ತಾಗುತ್ತದೆ. "ಕಾವೆರುದ ಮುಳ್ಳು ಕಂತುಂಡು ನಚ್ಚೋ ಬೆನ್ನಗ ರಾಮ ರಾಮ ಕಾಲನೆ ...ಯೇ ..ಏರ್ ಯಾ ಮಂದೆ ಯಾನ್ ಬಾಲೂಜಿ ಬದುಕುಜಿ ಅಂದ ಮಂದೆ ಕೆನ್ದೆರೋ ....ಯೇ" ಯಾತನೆಯಿಂದ ಬಲ್ಲಾಳರು ನಾನು ಸತ್ತು ಹೋಗುವೆ ಬದುಕಲಾರೆ ಎಂದು ನೋವಿನಿಂದ ಕೂಗಿ ನರಳುತ್ತಾರೆ . ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಕೊಂಡು ಸೇವಕರು ಅರಮನೆಗೆ ಕರೆತರುತ್ತಾರೆ .ಅರಮನೆಯ ವೈದ್ಯರು ಊರ ಪರ ಊರ ವೈದ್ಯರು ಔಷಧ ಉಪಚಾರ ಮಾಡುತಾರೆ .ಆದರೆ ಬಲ್ಲಾಳರ ಕಾಲಿಗಾದ ಗಾಯ ನಂಜು ಏರಿ ಇಡಿ ಶರೀರ ವ್ಯಾಪಿಸಿ ಅವರು ಬದುಕುಳಿಯುವುದು  ಕಷ್ಟ ಎಂಬ ಹಂತಕ್ಕೆ ತಲಪುತ್ತಾರೆ . ಆಗ ಅಲ್ಲಿ ಯಾರೋ ದೇಯಿ ಬೈದ್ಯೆತಿ ಒಳ್ಳೆಯ ಮದ್ದು ಕೊಡುತ್ತಾಳೆ ಎಂದು ಅರಸ ಬಲ್ಲಾಳನಿಗೆ ಹೇಳುತ್ತಾರೆ .ಬಲ್ಲಾಳ ಕೂಡಲೇ ದೇಯಿ ಬೈದ್ಯೆತಿಯನ್ನು ಬರಹೇಳುತ್ತಾನೆ.ಆಗ ಅವಳು ಏಳು ತಿಂಗಳು ತುಂಬಿದ ಗರ್ಭಿಣಿ .
ಮೊದಲು ಬರಲು ಒಪ್ಪದಿದ್ದರು ನಂತರ ಅರಸನ ನೋವನ್ನು ದೀನ ಅವಸ್ಥೆಯನ್ನೂ ನೋಡಿ ಔಷಧ ಕೊಡಲು ಒಪ್ಪುತ್ತಾಳೆ. "ಏಲ್ ಪೊರ್ತುಗು  ಕಾಡದಾಲ್ ಏಲ್ ಕೊಡಿ ಮರ್ದುದೇಯಿ ತರ್ಪದೋಲು ..ಯೇ ..ಕಲ್ಲುದಾ ಗುರಿಟ್ಟು ಪಾದಿಯೋಲೆ ಮರ್ದು ಕುತ್ತುದು ಪೊಡಿ ಮಲ್ದೋಲೆ ಬೋಲ್ಲಿದಾ ಕರಡಿಗೆಡ್ ...ಯೇ .." ಬೆಳಗ್ಗಿನ ಜಾವ ಏಳು ಮಲೆಗೆ ಜನರನ್ನು ಕಳುಹಿಸಿ ದೇಯಿ ಬೈದ್ಯೆತಿ ಏಳು ಮುಷ್ಟಿಯಷ್ಟು ಔಷಧದ ಗಿಡದ ಚಿಗುರನ್ನು ತರಿಸಿ ಕುಟ್ಟಿ ಪುಡಿ ಮಾಡಿ ಬೆಳ್ಳಿ ಕರಡಿಗೆಗೆ ತುಂಬಿ ದಂಡಿಗೆ ಏರಿ ಅರಮನೆಗೆ ಬರುತ್ತಾಳೆ .ಒಳ ಬರಲು ಅಳುಕಿದ ಅವಳಲ್ಲಿ "ನೀನು ಕೊಟ್ಟ ಮದ್ದಿನಿಂದ ನಾನು ಬದುಕಿದರೆ ಇನ್ನು ಹತ್ತು ಹದಿನಾರು ಕಾಲ ಪಟ್ಟವನ್ನು ಆಳುವೆ ,ಸಲ್ಲುವ ಕಾಣಿಕೆಯನ್ನು ನಿನಗೆ ಕೊಡುವೆ ಎಂದು ಹೇಳುವರು . ದೇಯಿ ಬೈದ್ಯೆತಿ ಅನೇಕ ದಿನಗಳ ತನಕ ಅಲ್ಲಿದ್ದುಕೊಂಡು ಬಲ್ಲಾಳನ ಕಾಲಿನ ಗಾಯಕ್ಕೆ ಔಷಧಿ ಹಾಕಿ ಉಪಚಾರ ಮಾಡುತ್ತಾಳೆ .ನಿಧಾನವಾಗಿ ಗಾಯ ಮಾಗಿ ಅರಸ ಗುಣ ಮುಖನಾಗುತ್ತಾನೆ .ಆಗ ದೇಯಿ ಬೈದ್ಯೆತಿ ತನ್ನ ಮನೆಗೆ ಹೊರಡುತ್ತಾಳೆ .ತನಗೆ ಬರಬೇಕಾದ ಕಾಣಿಕೆಯನ್ನು ನೆನಪಿಸುತ್ತಾಳೆ .ಆಗ ಅರಸ ನೋವಿನ ಭರದಲ್ಲಿ ನಾನು ಏನೋ ಹೇಳಿರಬಹುದು .ಈಗ ಏನಾದರು ಕೊಡಬೇಕಾದರೆ ಮಂತ್ರಿ ಬುದ್ಯಂತ ಬರಬೇಕು ಎಂದು ಹೇಳಿದನು. ಆಗ ಕೋಪಗೊಂಡ ದೇಯಿ ಬೈದ್ಯೆತಿ ಏನು ಬೇಡ ಎಂದು ಹೇಳಿ ಹೊರಡುತ್ತಾಳೆ ಆಗ ರಾಜನ ಕಾಲಿನ ಗಾಯ ಮತ್ತೆ ಉಲ್ಬಣಿಸುತ್ತದೆ .ಆಗ ರಾಣಿ ಬಂದು ಪ್ರಾರ್ಥಿಸಲು ದೇಯಿ ಬೈದ್ಯೆತಿ ಮತ್ತೆ ಅವನನ್ನು ಗುಣಪಡಿಸುತ್ತಾಳೆ .ಆಗ ಬಲ್ಲಾಳರು ದೇಯಿ ಬೈದ್ಯೆತಿಗೆ ಆಭರಣಗಳನ್ನು ಪತ್ತೆ ಸೀರೆ ರವಕೆ ,ಸೊಂಟದ ಪಟ್ಟಿ ಮೊದಲಾದವುಗಳನ್ನು ನೀಡಿ "ಇನ್ನು ಉಳಿದದ್ದನ್ನು ನಿನ್ನ ಗರ್ಭದಲ್ಲಿರುವ ಮಗುವಿಗೆ ಕೊಡುವೆನು ಹೆಣ್ಣು ಹುಟ್ಟಿದರೆ ಅವಳಿಗೆ ಚಿನ್ನ ಬೆಳ್ಳಿ ಬೇಕಾದ್ದನ್ನು ಕೊಡುವೆನು ಗಂಡು ಮಗು ಹುಟ್ಟಿದರೆ ಅವರು ವಿದ್ಯೆ ಕಲ್ತು ದುಡಿದು ತಿನ್ನಲು ನನ್ನ ಬೀಡಿಗೆ ಬಂದರೆ ವ್ಯವಸಾಯ ಮಾಡಲು ಕಂಬಳ ಗದ್ದೆ ನೀಡುವೆನು "ಎಂದು ಮಾತು ಕೊಡುತ್ತಾರೆ. "ಪೊನ್ನ ಬಾಲೆ ಈ ಪೆದಿಯಾಂದ ಈ ನಿಕ್ಕು ಕಾರಿನ ನಡವಳಿಕೆ ಕೊರ್ಪೆಯಾನ್ ಆಣ್ ಬಾಲೆನ್ ಪೆದ್ದಿಯಾಂದ ಈ ಬೆನ್ದುನ್ಪಿ ಯಿದ್ದೋ ಬುದ್ದಿಲ ತೆರಿನ್ದಾದೆ ...ಯೇ ಎನ ಬೂಡುಗು ಬತ್ತೆರಾದ್ ಡಾದೇ ಬೆನೆರೆ ಕಂಬುಲ ಯಾನ್ ಕೊರ್ಪೆನ್ದೆರ್ ..ಯೇ.." ಮುಂದೆ  ಒಂದೆರಡು ದಿನಗಳಲ್ಲಿಯೇ ದೇಯಿ ಬೈದ್ಯೆ ತಿಬಲ್ಲಾಳನ ಅರಮನೆಯಲ್ಲಿಯೇ  ಎರಡು ಗಂಡು ಮಕ್ಕಳಿಗೆ ಜನ್ಮ ಕೊಡುತ್ತಾಳೆ . ಈ ಅವಳಿ ಮಕ್ಕಳೇ ಮುಂದೆ ತುಳುನಾಡಿನ ವೀರರಾಗಿ ನಾಡನ್ನು ಬೆಳಗುವರು. ಬಲ್ಲಾಳರು ಹುಟ್ಟಿದ ಮಕ್ಕಳಿಗೆ ಕೋಟೇಶ್ವರ ದೇವರನ್ನು ನೆನೆದು ಕೋಟಿ ಎಂದು, ಚೆನ್ನ ಕೇಶವನನ್ನು ನೆನೆದು ಚೆನ್ನಯ ಎಂದು ಹೆಸರಿಡುವರು .ಮಕ್ಕಳು ತಾಯಿಯ ಹಾಲು ಕುಡಿವ ಕಾಲದಲ್ಲಿಯೇ ತಾಯಿ ದೇಯಿ ಬೈದ್ಯೆತಿ ಸಾಯುತ್ತಾಳೆ .ಮಕ್ಕಳು ಬಟ್ಟಲಿನಲ್ಲಿ ಅನ್ನ ತಿನ್ನುವ ವಯಸ್ಸಿನಲ್ಲಿ ತಂದೆ ಕಾಂತನ ಬೈದ್ಯ ಸಾಯುತ್ತಾನೆ . ಈ ಮಕ್ಕಳನ್ನು ಸೋದರ ಮಾವ ಸಾಯನ ಬೈದ್ಯ ಸಾಕಿ ಸಲಹುತ್ತಾರೆ .
ಪರಾಕ್ರಮಿಗಳಾಗಿ ಬೆಳೆವ ಇವರು ಅಂಗ ಸಾಧನೆಗಾಗಿ ಗುರುಗಳನ್ನು ಹುಡುಕಿಕೊಂಡು ನಾನಯರ ಗರೋಡಿಗೆ ಹೋಗಿ ನಾನ ವಿಧದ ವಿದ್ಯೆಯನ್ನು ಕಲಿಯುತ್ತಾರೆ .ಆಟ  ಆಡುವಾಗ ಮಂತ್ರಿ ಬುದ್ಯಂತನ ಮಕ್ಕಳನ್ನು ಸೋಲಿಸುತ್ತಾರೆ .ದೊಡ್ದವರಾಗಲು ಬಲ್ಲಾಳನಲ್ಲಿಗೆ ಹೋಗಿ ತಮ್ಮ ತಾಯಿಗೆ ಕೊಟ್ಟ ಮಾತಿನಂತೆ ಕಂಬಳ ಗದ್ದೆಯನ್ನು ಕೊಡುವಂತೆ ಕೇಳುತ್ತಾರೆ .ಆಗ ರಾಜ ಮಂತ್ರಿ  ಬುದ್ಯಂತನಲ್ಲಿ ಕೇಳಿ ಎಂದು ಹೇಳುತ್ತಾನೆ . ಇವರು ಬರುವುದನ್ನು ದೂರದಿಂದ ನೋಡಿದ ಬುದ್ಯಂತ ಕಾರಣವನ್ನು ಊಹಿಸಿ ಅಡಗಿ ಕುಳಿತು ತಾನು ಇಲ್ಲ ಎಂದು ಹೇಳಲು ಮಡದಿಗೆ ತಿಳಿಸಿದರು .ಮಾಡಿ ಹಾಗೇ ಹೇಳುತ್ತಾಳೆ. ಆಗ ಕೋಟಿ ಚೆನ್ನಯರು ಬುದ್ಯಂತರು ಬಂದಾಗ "ಕೋಟಿ ಚೆನ್ನಯರು ಕಂಬಳಕ್ಕೆ ಪ್ರಥಮ ಕಾಣಿಕೆ ಇಟ್ಟಿದ್ದಾರೆ ಎಂದು ಹೇಳಲು ಹೇಳಿ ಕಾಣಿ ಇಟ್ಟು ಬರುತ್ತಾರೆ .ಆ ತನಕ ತಾನು ಅನುಭವಿಸುತ್ತಿದ್ದ ಕಂಬಳ ಗದ್ದೆ ಇನ್ನು ಕೋಟಿ ಚೆನ್ನಯರ ಪಾಲಾಗುತ್ತದೆ ಎಂದು ಹೊಟ್ಟೆ ಕಿಚ್ಚಿನಿಂದ ಅವರು ಇಟ್ಟ ಕಾಣಿಕೆಯನ್ನು ಎಸೆದು ಕೆಟ್ಟ ಮಾತು ಆಡುತ್ತಾರೆ .ನಂತರ ಪೆರ್ಮಲೆ ಬಲ್ಲಾಳ ಇವರಿಗೆ ಕೆಳಗಿನ ಕಂಬಳಗದ್ದೆಯನ್ನು ಕೊಡುತ್ತಾರೆ . ಇವರು ವ್ಯವಸಾಯಕ್ಕೆ ಬೇಕಾದ ಎಲ್ಲ ಸಲಕರಣೆಗಳ ಸಿದ್ಧತೆ  ಮಾಡುತ್ತಾರೆ .ಇವರ ಗದ್ದೆ ಉಳುಮೆ ಆಗದಂತೆ ,ಕಂಬಳ ಕೋರಿ ಆಗದಂತೆ ತಡೆಯಲು ಬುದ್ಯಂತ ಷಡ್ಯಂತ್ರಗಳನ್ನು ಮಾಡುತ್ತಾನೆ .ಬುದ್ಯಂತರು ಕಂಬಳ ಕೋರಿ ಮಾಡುವಂದೆ ಇವರು ಕೂಡಾ ಮಾಡಲು ನಿರ್ಧರಿಸುತ್ತಾರೆ .ಆಗ ಆ ದಿನ ಕಂಬಳ ಮಾಡಿದರೆ ಜಾಗ್ರತೆ ಎಂದು ಇವರನ್ನು ಬುದ್ಯಂತ ಹೆದರಿಸುತ್ತಾನೆ . ಅವನ ಬೆದರಿಕೆಕೆ ಸೊಪ್ಪು ಕಾಕದ ಕೋಟಿ ಚೆನ್ನಯರು ಅದೇ ದಿನ ಕಂಬಳ ಕೋರಿಗೆ ಸಿದ್ಧತೆ ನಡೆಸುತ್ತಾರೆ . ಆ ದಿನ ಕೋಟಿ ಚೆನ್ನಯರ ಗದ್ದೆಗೆ ಕೋಣಗಳನ್ನು ಇಳಿಸಿದಾಗ ಬುದ್ಯಂತರು ಅವರ ಕಂಬಳ ಗದ್ದೆಗೆ ಹಾರಿ ಗದ್ದೆಯಲ್ಲಿ ಹುತಿದ್ದ ದರಿಗುಂಟನ್ನು ಕಿತ್ತು ಕೋಣದ ನೆತ್ತಿಗೆ ಹೊಡೆಯಲು ಹೋಗುವರು. ಕೋಟಿಚೆನ್ನಯರು "ಒಡೆಯ ಬುದ್ಯನ್ತಾರೆ ಕೋಣಗಳಿಗೆ ಹೊಡೆಯಬೇಡಿ ಪಡುಮಲೆ ರಾಜ್ಯದಲ್ಲಿ ಕಾಡಿ ಬೇಡಿ ತಂದಿದ್ದೇವೆ ,ನಿಮಗೆ ಕೋಪ ಇದ್ದಾರೆ ನಮ್ಮ ಮೇಲೆ ತೀರಿಸಿ "ಎಂದು ಹೇಳಿ ತಡೆಯುತ್ತಾರೆ .ನಂತರ ಬುದ್ಯಂತ ಮತ್ತು ಕೋಟಿ ಚೆನ್ನಯರ ಎರಡೂ ಕಂಬಳ ಗದ್ದೆಗಳಿಗೆ ಬಿತ್ತನೆ ಕಾರ್ಯ ನಡೆಯುತ್ತದೆ .ಬುದ್ಯಂತರು ಬಿತ್ತನೆ ಮಾಡಿ ಮೂರನೇ ದಿನ ನೀರು ಬಿಡಿಸಲೆಂದು ಬೆಳಗ್ಗಿನ ಜಾವ ಕಂಬಳ ಗದ್ದೆಗೆ ಬರುತ್ತಾರೆ , ಆಗ ಅವ್ರಿಗೆ ಕೋಟಿ ಚೆನ್ನಯರ ಗದ್ದೆಯಲ್ಲಿ ಬೀಜ ಚೆನ್ನಾಗಿ ಮೊಳೆತದ್ದು ಕಾಣಿಸುತ್ತದೆ .ಅವರ ಮೇಲೆ ಅಸೂಯೆಯಿಂದ ಆ ಗದ್ದೆಯ ಬೆಳೆಯನ್ನು ನಾಶ ಮಾಡಲೆಂದು ಕಾಡಿನಿಂದ ಬದಿಯಲ್ಲ್ಲಿ ಹರಿದು ಹೋಗುವ ನೀರಿಗೆ ಒದ್ಡು   ಕಟ್ಟಿ ಕೋಟಿ ಚೆನ್ನಯರ ಗದ್ದೆಗೆ ರಭಸದಿಂದ ಹರಿಯುವಾಗೆ ಮಾಡಿ ಆಗ ತಾನೇ ಮೊಳಕೆಯೊಡೆದಿದ್ದ ಬತ್ತದ ಬೀಜ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಹಾಗೆ ಮಾಡಿದರು ಕಾಡ್ ದ ಬೊಲ್ಲೊಗು ಅಡ್ಡ ಕಟ್ ದೇರ್ ,ನೀರ್ ಪೋಪಿ ಸರದ್ ನ್ ಬುಡ್ತೆರ್ ನಡುಪುನಿ ಆನೆ ಬರಕೆದ ಕಣಿ ಕಡ್ತೆರ್ ಕಂಬಳಗ್ ಒಡ ದೇರ್ -ಅಯ್ಯಲ ಬಿತ್ತು ಬುರುನಾಡೆಗ್ ಮುವಳ ಬಿತ್ತು ಬೂರುನಾಡೆ ಪಾರು ಪೊಯ್ಯ  ಗುರಿ ಗುಂಪು ಮುಟ್ಟದೆರ್ ಬುಲೆ ಸೇಟ್ಟ ದೆರ್ ಗಾಸಿ ಮಲ್ತೆರ್  ಪದ್ಮ ಕಟ್ಟೆಡು ಕುಲ್ಲುದೆರ್ ಗೆಂದಾರೆಗ್ ಒರಗ್ ದೇರ್ (ಸಂ :ದಾಮೋದರ ಕಲ್ಮಾಡಿ )ಅಲ್ಲಿಗೆ ಕೋಟಿ   ಬಂದು ಬುದ್ಯಂತ  ಬೆಳೆ  ನಾಶಮಾಡಿದ್ದನ್ನೂ ನೋಡಿ ಕೋಪದಿಂದ"ನಮ್ಮ ಬೆಳೆಯನ್ನು ಹಾಳು ಮಾಡಿದ್ದೀರಿ ,ಮಳೆಗಾಲದಲ್ಲಿ ಉಣ್ಣಬೇಕಾದ ಅನ್ನವನ್ನು ಹಾಳು ಮಾಡಿದ್ದೀರಿ ,ನಾನಾಗಿದ್ದಕ್ಕೆ ಇಷ್ಟು ಸಹಿಸಿಕೊಂಡೆ ನನ್ನ ತಮ್ಮ ಬಂದಿದ್ದರೆ ಅನಾಹುತವಾಗುತ್ತಿತ್ತು "ಎಂದು ಹೇಳುತ್ತಾನೆ . ಆಗ ಬುದ್ಯಂತ ಅವರನ್ನು ಹೀನಾಯಮಾನವಾಗಿ ನಿಂದಿಸುತ್ತಾನೆ .ಆಗ ಅಲ್ಲಿಗೆ ಬಂದ ಚೆನ್ನಯ ವಂದಿಸಿ ಗೌರವ  ಸೂಚಿಸಿದಾಗಲೂ ಅವನಿಗೆ ಅವಮಾನ ಮಾಡುತ್ತಾನೆ ಬುದ್ಯಂತ .ಅವನ ಮೇಲೆ ಆವೇಶದಿಂದ ಹಾರಿ ಹೊಡೆಯಲು ಹೋಗುವಾಗ ಬುದ್ಯಂತ ಓಡಿ ಹೋಗುತ್ತಾನೆ .ಅವನನ್ನು ಅದ್ದ ಕಟ್ಟಿದ ಕೋಟಿ  ಹಿಡಿದು ನಿಲ್ಲಿಸುತ್ತಾನೆ .ಅವರೊಳಗೆ ಹೋರಾಟ ಆಗಿ ಬುದ್ಯಂತ  ಕಂಬಳದ ನೀರಿಗೆ ಮಗುಚಿ ಬೀಳುತ್ತಾನೆ .ಅವನನ್ನು ಬಡಿದು ಸಾಯಿಸಿ ಅವನೇ ಮಾಡಿದ ನೀರ ಹೊಂಡಕ್ಕೆ ಅಡ್ಡ ಮಲಗಿಸಿ ,ಬುದ್ಯಂತರ ಮನೆಗೆ ಹೋಗಿ ಅವನ ಹೆಂಡತಿಯಲ್ಲಿ ಗದ್ದೆಗೆ ಹೋಗಿ ನೋಡುವಂತೆ ತಿಳಿಸುತ್ತಾರೆ ಮನೆಗೆ ಬಂದಾಗ ಮಾವ ಸಾಯನ ಬೈದ್ಯನಿಗೆ ಎಲ್ಲವು ಅರ್ಥವಾಗುತ್ತದೆ .
ಇನ್ನು ಆ ಊರಿನಲ್ಲಿರುವುದು ಅವರಿರುವುದು ಅಪಾಯ ಎಂದರಿತ ಮಾವ ಸಾಯ ಬೈದ್ಯ "ನೀವು ಬಲ್ಲಾಳನಿಗೆ ಕೊಡಲು ಸಾಧ್ಯವಾಗದಂತಹ ವಸ್ತು ಗಳನ್ನು ಕೇಳಿ.ಕೊಡದಿದ್ದಾಗ ಅದೇ ನೆಪ ಮಾಡಿ ದೂರ ಹೊರಟು ಹೋಗಿ "ಎಂದು  ಸೂಚಿಸುತ್ತಾರೆ .ಅಂತೆಯೇ ಕೋಟಿ ಚೆನ್ನಯರು ಬಲ್ಲಳನಲ್ಲಿಗೆ ಹೋಗಿ "ನೀವು ಕಂಬಳ ಗದ್ದೆ ಕೊಟ್ಟಿದ್ದೀರಿ ಆದರೆ ಬೇಕಾದ ಸಲಕರಣೆಗಳನ್ನು ಕೊಟ್ಟಿಲ್ಲ ಎಂದು ಹೇಳಿದರು ಆಗ ಬಲ್ಲಾಳ ನಿಮಗೆ ಏನು ಬೇಕು ಎಂದು ಕೇಳುತ್ತಾನೆ ಆಗ "ಬೀಡಿನ ಮುಮ್ಬಾಗದಲ್ಲಿರುವ ಸಣ್ಣಗೆಂದ ದೊಡ್ಡ ಗೆಂದ ತೆಂಗಿನ ಮರಗಳಲ್ಲಿ ಒಂದನ್ನು ಕೊಡಿ" ಎಂದು ಕೇಳುವರು. "ಅದನ್ನು ಬಿಟ್ಟು ಬೇರೆ ಕೇಳಿ" ಎಂದು ಬಲ್ಲಾಳ ಹೇಳಿದಾಗ ಸಣ್ಣ ತುಂಬಾ ದೊಡ್ಡ ತುಂಬಾ ಮಜಲು ಗದ್ದೆಗಳಲ್ಲಿ ಒಂದನ್ನು ಕೇಳುತ್ತಾರೆ .ಅದನ್ನು ಬಲ್ಲಾಳ ಕೊಡುವುದಿಲ್ಲ .ಆಗ "ಬೀಡಿನ ಹಟ್ಟಿಯಲ್ಲಿರುವ ಕಿನ್ನಿ ಕಾಳಿ ದೊಡ್ಡ ಕಾಳಿ ಹಸುಗಳಲ್ಲಿ ಒಂದನ್ನು ಕೊಡಿ" ಎಂದು ಕೋಟಿ ಚೆನ್ನಯರು ಕೇಳಿದರು   ಆಗ ಬಲ್ಲಾಳ "ನೀವು ನನ್ನ ಸ್ವಾರ್ಥಕ್ಕಾಗಿ ಆಶ್ರಯದಲ್ಲಿದ್ದೀರಿ ಪ್ರೀತಿಯಿಂದ ಸಾಕಿದೆ .ಆದರೆ ಅದಕ್ಕಾಗಿ ನನ್ನ ಹನ್ನೆರಡು ರಾಣಿಯರಲ್ಲಿ ಇಬ್ಬರನ್ನು ಕೊಡಬೇಕೆಂದರೆ ಕೊಡಲು ಸಾಧ್ಯವೇ ?ಎಂದು ಬಲ್ಲಾಳರು ಹೇಳಿದಾಗ ಕೋಟಿ ಚೆನ್ನಯರು "ತಾಯಿಯನ್ತಿರುವ ರಾಣಿಯರನ್ನು ನಮಗೆ ಕಟ್ಟುತ್ತೀರಲ್ಲ್ಲ .ಇಂದಿಗೆ ನಾವು ನೀವು ಎರಡಾಯಿತು ಸಂಬಂಧ ಕಡಿಯಿತು "ಎಂದು ಹೇಳಿ ೫ ವೀಳ್ಯದೆಲೆ ಇಟ್ಟು  ಬಂದರು   . ಆ ಹೊತ್ತಿಗೆ ಬುದ್ಯಂತ ಸಾವಿನ ಸಮಾಚಾರವು ಬಲ್ಲಾಳನಿಗೆ ತಿಳಿಯಿತು ."ಬುದ್ಯಂತ ಸತ್ತರೆ ಸಾಯಲಿ ನೀವು ಹೋಗ ಬೇಡಿ" ಎಂದು ಬಲ್ಲಾಳ ಕೋಟಿ ಚೆನ್ನಯರಲ್ಲಿ ಕೇಳಿಕೊಳ್ಳುತ್ತಾನೆ .ಆದರೆ ಕೋಟಿ ಚೆನ್ನಯರು ಹಿಂದೆ ತಿರುಗಿ ನೋಡೆ ಚಾವಡಿ ಇಳಿದು ಹೋಗುತ್ತಾರೆ .ಅಲ್ಲಿಂದ ಮುಂದೆ ಅವರು ತಮ್ಮ ಅಕ್ಕ ಕಿನ್ನಿದಾರುವನ್ನು ಭೇಟಿ ಮಾಡುತ್ತಾರೆ .ಮುಂದೆ ಚಂದುಗಿಡಿಯ ಕುತಂತ್ರದಿಂದಾಗಿ ಪಂಜದ ಕೇಮರ ಬಲ್ಲಾಳ ಅವರನ್ನು ಬಂಧಿಸುತ್ತಾನೆ .ಅಲ್ಲಿಂದ ಅವರು ಬೆರ್ಮೆರ್ ಸಹಾಯದಿಂದ ತಪ್ಪಿಸಿಕೊಂಡು ಎನ್ಮೂರಿಗೆ ಬಂದು ಅಲ್ಲಿನ ಬಲ್ಲಾಳನ ಆಶ್ರಯದಲ್ಲಿ ಎರಡು ಗುತ್ತುಗಳು ಅಂದರೆ  ಕರ್ಮಿಲಜೆ ಮತ್ತು ನೆಕ್ಕಿಲಜೆಗುತ್ತುಗಳನ್ನು ಪಡೆದು ವ್ಯವಸಾಯ ಮಾಡಿಕೊಂಡು   ಇರುತ್ತಾರೆ  .ಅವರು ಕೇಮಳ ಕ್ಕೆ ಹೋಗಿ ತಾಯಿ ಬೆರ್ಮೆರ್ ಗೆ ಹೇಳಿದ ಹರಿಕೆಯನ್ನು    ತೀರಿಸುತ್ತಾರೆ.ಒಂದು ದಿನ ಅವರು ಬೇಟೆಗೆ ಹೋಗುತ್ತಾರೆ ಕೋಟಿ  ಒಂದು ಹಂದಿಗೆ ಬಾಣ ಬಿಟ್ಟ ಆ ಹಂದಿ  ಪಂಜ-ಎನ್ಮೂರುಗಳ ಗಡಿಯಲ್ಲಿ ಸತ್ತು ಬೀಳುತ್ತದೆ .ಇದರಿಂದ ವಿವಾದ ಉಂಟಾಗಿ ಪಂಜದ ಬಲ್ಲಾಳರು ಯುದ್ಧಕ್ಕೆ ಬರುತ್ತಾರೆ .ಘೋರ ಯುದ್ಧ ನಡೆಯುತ್ತದೆ ಚಂದುಗಿಡಿ ಬಿಟ್ಟ ಬಾಣ ಒಂದು ಚೆನ್ನಯನ  ಕಾಲಿಗೆ ತಾಗುತ್ತದೆ.ಅವನು ಅಣ್ಣನಲ್ಲಿ "ಪಂಜದ ಪಡೆ ನಾಯಿ ಒಂದು ಕಾಲಿಗೆ ಕಚ್ಚಿತು" ಎಂದು ಹೇಳುತ್ತಾನೆ .ಆಗ ಕೋಟಿಯು "ಕಣ್ಣಿಂದ ನೋಡ ಬೇಡ ಕೈಯಿಂದ ಹಿಡಿಯಬೇಡ ಒಳಗಿನಿಂದ ತೆಗೆದು ಹೊರಗೆ ಕೊಡಹು" ಎಂದು ಹೇಳುತ್ತಾನೆ .ಅದರಂತೆ ಚೆನ್ನಯ ಕಾಲನ್ನು ಕೊಡಹಿದಾಗ ಒಂದು ಗದ್ದೆಯ ಜನ ಪೂರ್ತಿ ನಾಶವಾದರು .ಯುದ್ಧದಲ್ಲಿ ಕೋಟಿ ಚೆನ್ನಯರು ಚಂದು ಗಿಡಿಯನ್ನು ಕೊಲ್ಲುತ್ತಾರೆ .ಆಗ ಪಂಜದ ಸೈನ್ಯ ಸೋತು ಶರಣಾಗುತ್ತದೆ . ಈ ಸಂದರ್ಭದಲ್ಲ್ಲಿ ಪಂಜದ ಕೆಮರ ಬಲ್ಲಾಳನ ಜುಟ್ಟು ಹಿಡಿದು ಕೋಟಿ ಬಗ್ಗಿಸುತ್ತಾನೆ ಆಗ ಕೋಟಿಯ ಬಲ ಮರ್ಮಾಂಗಕ್ಕೆ ಬಾಣ ಒಂದು ಬಂದು ನಾಟಿತು .ಅದನ್ನು ಪಡುಮಲೆ ಬಲ್ಲಾಳನೆ ಬಿಟ್ಟಿರುತ್ತಾನೆ "ಮರ್ಮಾಂಗಕ್ಕೆ ಬಾಣ ನಾಟಿರುವುದರಿಂದ ತನ್ನ ಅಂತ್ಯ ಸಮೀಪಿಸಿದೆ" ಎಂದು ಕೋಟಿಗೆ ತಿಳಿಯಿತು .ಅಣ್ಣನನ್ನು ಅಪ್ಪಿಕೊಂಡ ಚೆನ್ನಯ "ಹುಟ್ಟಿನ ಅಮೇ ಒಂದಾಗಿರುವಾಗ ನಮಗೆ ಸಾವಿನ ಸೂತಕ ಎರಡಾಗುವುದೇ ?! ಎಂದು ಉದ್ಗರಿಸಿದನು ಕೋಟಿಯು   ತಮ್ಮನ್ನು ಸಾಕಿದ ಬಲ್ಲಾಳನೆಡೆಗೆ ನೋಡಿ "ತಮಗೆ ಜಾತಿ ಭೇದ ನೋಡದೆ ಗರೋಡಿ ಕಟ್ಟಿ ಆರಾಧಿಸುತ್ತಾ ಬನ್ನಿ ನಿಮಗೆ ರಕ್ಷನೆ ಕೊಡುತ್ತೇವೆ,ನೆನೆಸಿದಲ್ಲಿ ನೆಲೆಯಾಗುತ್ತೇವೆ ,ನ್ಯಾಯಕ್ಕೆ ಇಂಬು ಕೊಡುತ್ತೇವೆ ,ಬೆಳೆಗೆ ರಕ್ಷಣ ಕೊಡುತ್ತೇವೆ "ಎಂದು ಹೇಳಿ ವೀರ ಮರಣವನ್ನಪ್ಪುತ್ತಾನೆ .ಆಗ ಚೆನ್ನಯ "ನಮಗೆ ಹೆತ್ತ ಸೂತಕ ಒಂದೇ ಆಗಿತ್ತು ಈಗ ಸತ್ತ ಸೂತಕ ಎರಡಾಗ ಬೇಕೇ ನಾನು ಕೂಡ ನಿನ್ನ ಜೊತೆ ಬರುತ್ತೇನೆ "ಎಂದು ಹೇಳಿ ದಂಬೆ ಕಲ್ಲಿಗೆ ತಲೆಯನ್ನು ಅಪ್ಪಳಿಸಿ ಅಣ್ಣನನ್ನು ಅನುಸರಿಸುತ್ತಾನೆ .ಹೀಗೆ ವೀರ ಮರಣವನ್ನಪ್ಪುವ ಸ್ವಾಭಿಮಾನಿಗಳೂ ಅತುಲ ಪರಾಕ್ರಮಿಗಳೂ  ಆದ ಅವಳಿ ಸಹೋದರರಾದ ಕೋಟಿ ಚೆನ್ನಯರು ಆರಾಧ್ಯ   ಶಕ್ತಿಗಳಾಗಿ ತುಳುನಾಡನ್ನು ಬೆಳಗುತ್ತಿದ್ದಾರೆ . ಇತಿಹಾಸದ ದೃಷ್ಟಿಯಿಂದ   ಪಂಜದ ಕೇಮರ ಬಲ್ಲಾಳ .ಪಡುಮಲೆ ಬಲ್ಲಾಳ,ಎನ್ಮೂರು -ಪಂಜದ ಯುದ್ಧ ಗಳ  ಉಲ್ಲೇಖ  ಇಲ್ಲಿ ಬಹಳ ಮುಖ್ಯವಾದುದು .ಈ ಆಧಾರಗಳಿಂದ ಕೋಟಿ ಚೆನ್ನಯರ ಕಾಲವನ್ನು ಸುಮಾರು ೧೬ ನೆ ಶತಮಾನ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ
ಪಂಜದ ಕೂತ್ಕುಂಜದಲ್ಲಿರುವ ಗೆಳತಿ ಮಂಗಳ ಗೌರಿಯ ಅಣ್ಣ ಪರಮೇಶ್ವರ ಭಟ್ಟ್  ನಮ್ಮನ್ನು ಕೋಟಿ ಚೆನ್ನಯರ ಆದಿ ಗರೋಡಿ ಹಾಗು ಸಮಾಧಿ ಇರುವೆಡೆಗೆ ಕರೆದುಕೊಂಡು ಹೋಗಿದ್ದರು .ಮೊದಲು ನಾವು ಡಿ. ಜಿ. ನಡಕರ ಮನೆಗೆ ಹೋದೆವು .ಅಲ್ಲಿ ಕೋಟಿ  ಚೆನ್ನಯರ ಬಗ್ಗೆ  ಬಗ್ಗೆ ಹಿರಿಯ ವಿದ್ವಾಂಸರಾದ ಡಿ ಜಿ ನಡಕ ಅವರು ಸಾಕಷ್ಟು ಮಾಹಿತಿಯನ್ನು ನಮಗೆ ನೀಡಿದರು .ಎತ್ತರದ ಗುಡ್ಡದ ತುದಿಯಲ್ಲಿ ಆದಿ ಗರೋಡಿ ಇದೆ. ತುಸು ದೂರದಲ್ಲಿ ಕೋಟಿ ಚೆನ್ನಯರ ಸಮಾಧಿ ಇದೆ .ಕೋಟಿ ಚೆನ್ನಯರ ಸುರಿಯವನ್ನು ಹಾಕಿರುವ ಒಂದು ಮುಚ್ಚಿದ ಬಾವಿ ಅಲ್ಲಿದೆ.ಸುತ್ತ ಮುತ್ತ ಕಾಡು ಇರುವ ನಿರ್ಜನ ತಾಣ  ಇದು.  ಹೋಗುವಾಗ ನಾವೆಲ್ಲಾ ಬಹಳ ಸಂಭ್ರಮದಲ್ಲಿ ಹೋಗಿದ್ದೆವು .ಹೋಗುತ್ತಾ ಕೋಟಿ ಚೆನ್ನಯರ ವೀರ ಗಾಥೆಯನ್ನು ನಾನು ಹೇಳಿದೆ .ಕೋಟಿಚೆನ್ನಯರು  ಬೆಳೆದ ಅವರ ಮಾವ  ಸಾಯನ ಮನೆ ಗೆಜ್ಜೆ ಗಿರಿ ನಂದನ ಹಿತ್ತಿಲು ,ಪಡುಮಲೆ ಬಲ್ಲಾಳನ ಅರಮನೆಯ ಅವಶೇಷ ,ದೇಯಿ ಬೈದ್ಯೆತಿ ಹುಟ್ಟಿದ ಕೂವೆ ತೋಟ ಮನೆ ಮತ್ತು ಅದರ ವಾರಸುದಾರರು ಮತ್ತು ಅಕ್ಕ ಕಿನ್ನಿದಾರುವಿನ ದೋಲದ ಮನೆ ,ಕೋಟಿಚೆನ್ನಯರು ನೀರು ಕುಡಿದ ಬಾವಿ ,ಅವರ ಪ್ರತೀಕ ವಾಗಿರುವ ಎರಡು ತಾಳೆ ಮರಗಳು ಈಗ ಕೂಡ ಇವೆ ,ಕೋಟಿ ಚೆನ್ನಯರನ್ನು ಸಮಾಧಿ ಮಾಡಿದ ಜಾಗದಲ್ಲಿ ತುಸು ಎತ್ತರದ ಮಣ್ಣಿನ ದಿಬ್ಬ ಇತ್ತಂತೆ ,ಈಗ ಅಲ್ಲಿ ಅವರ ಸಮಾಧಿಯನ್ನು ನಿರ್ಮಿಸಿದ್ದಾರೆ .ಕೋಟಿ ಚೆನ್ನಯರ ಸಮಾಧಿ ನೋಡಿ ಹಿಂದೆ ಬರುವಾಗ ನಮಗೆ ಅರಿವಿಲ್ಲದಂತೆ ನಮ್ಮೆಲ್ಲರ  ಕಣ್ಣಂಚು ತೇವಗೊಂಡಿತ್ತು .ಮನಸ್ಸು ಭಾರವಾಗಿತ್ತು.
(ಮುಂದಿನವಾರ:ಭೂತವಾದ ಬೆಳ್ಳಾರೆಯ ರಾಜ ಕುಮಾರ)