Thursday, 13 April 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 343 ಕರಣಿಕ ದೈವ ©ಡಾ.ಲಕ್ಷ್ಮೀ ಜಿ ಪ್ರಸಾದ

ದೈವತ್ವ ಪಡೆದು ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ.ಇಲ್ಲಿ ಯಾರು ಯಾವಾಗ ಯಾಗೆ ಹೇಗೆ ದೈವತ್ವ ಪಡೆಯುತ್ತಾರೆಂದು ಹೇಳುವುದಕ್ಕೆ ಇದಮಿತ್ಥಂ ಎಂಬ ಸಿದ್ದಾಂತವಿಲ್ಲ.
ಸಾಮಾನ್ಯವಾಗಿ ಮಾನವರಾಗಿ ಹುಟ್ಟಿ ಅತಿ ಮಾನುಷ ಸಾಹಸ‌ಮೆರೆದವರು ,ಅನ್ಯಾಯವನ್ನು ಪ್ರಶ್ನಿಸಿದವರು ವಿಧಿ ನಿಷೇಧ ಗಳನ್ನು ಮೀರಿ ದುರಂತವನ್ನಪ್ಪಿದವರು ದೈವತ್ವ ಪಡೆದು ದೈವಗಳಾಗಿ ನೆಲೆ ನಿಂತು ಆರಾಧನೆ ಪಡೆಯುತ್ತಾರೆ .ಪ್ರಧಾನ ಭೂತಗಳ ಅನುಗ್ರಹಕ್ಕೆ ಪಾತ್ರರಾದವರು ಕೂಡ ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುವುದು ಅನೇಕ ಕಡೆಗಳಲ್ಲಿ ಕಾಣಿಸುತ್ತದೆ.ಅಂತೆಯೇ ದೈವಕ್ಕೆ ದ್ರೋಹ ಮಾಡಿ ದುರಂತವನ್ನಪ್ಪಿದವರೂ ಅದೇ ದೈವದ ಸೇರಿಗೆಗೆ ಸಂದು ದೈವಗಳಾಗಿ ನೆಲೆ ನಿಂತಿರುವ ವಿಶಿಷ್ಟ ವಿದ್ಯಮಾನ ಕೆಲವೆಡೆ ನಡೆದಿರುವುದು ಕಂಡು ಬರುತ್ತಿದೆ .
ಕಾರ್ಯಸ್ಥನ್ / ಕರಣಿಕ ದೈವ ಕೂಡಾ ಈ ರೀತಿಯಲ್ಲಿ ದೈವತ್ವ ಪಡೆದ ಶಕ್ತಿ .
ಕಾರ್ಯಸ್ಥನ ಮೂಲತಃ ನಂಬೂದಿರಿ ಬ್ರಾಹ್ಮಣ.ದೈವಸ್ಥಾನದಲ್ಲಿ ಕರಣಿಕನಾಗಿ ಕೆಲಸ ಮಾಡುತ್ತಿರುತ್ತಾನೆ .ಒಂದು ದಿನ ಸುಳ್ಳು ಲೆಕ್ಕ ಬರೆದು ವಂಚನೆ ಮಾಡುತ್ತಾನೆ .ಆಗ ದೈವವು‌ ಮುನಿದು ಆತನನ್ನು ಮಾಯ ಮಾಡುತ್ತದೆ.ನಂತರ ಆತ ದೈವದ ಸೇರಿಗೆಗೆ ಸಂದು ಕರಣಿಕ/ ಕಾರ್ಯಸ್ಥನ್ ದೈವವಾಗಿ ಆರಾಧನೆ ಪಡೆಯುತ್ತಾನೆ ಆ ದೈವ ತೆಂಗಿನ ಒಲಿಯಲ್ಲಿ ಲೆಕ್ಕ  ಬರೆಯುವ ಅಭಿನಯವನ್ನು ಮಾಡುತ್ತಿದ್ದು ಆತ ಮೂಲತಃ ಕರಣಿಕನಾಗಿದ್ದು ಅತನ ವೃತ್ತಿಯನ್ನು ಸೂಚಿಸುತ್ತದೆ .ಈ ದೈವಕ್ಕೆ ಕುಂಬಳೆ ಸಮೀಪ ಆರಿಕ್ಕಾಡಿಯಲ್ಲಿ ಆರಾಧನೆ ಇದೆ ವೇಟಕರಿಮುಗನ್ ದೈವದ ಜೊತೆ ಆರಾಧನೆ ಇದೆ ©ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ನೀಡಿದ ಶ್ರೀಮತಿ ಪ್ರೇಮಲತಾ ಹಾಗೂ ಸುಕ್ಅತ ಫೋಟೋ ನೀಡಿದ ಮನೋಜ್ ಕುಂಬಳೆ ಅ
ವರಿಗೆ ಹೃತ್ಪೂರ್ವಕ ಧನ್ಯವಾದಗಳು 

ಸಾವಿರದೊಂದು ಗುರಿಯೆಡೆಗೆ 341-342 ಕರೊಟ್ಟಿ ಮತ್ತು ಕುಂಮಲುನ್ನಿ © ಡಾ.ಲಕ್ಷ್ಮೀ ಜಿ ಪ್ರಸಾದ



ತುಳುನಾಡಿನ ದೈವಗಳಲ್ಲಿ ಹೆಚ್ಚಿನವರು ಮಾನವ ಮೂಲವನ್ನು ಹೊಂದಿದ್ದಾರೆ.ಕೋಟಿ ಚೆನ್ನಯರು,ಮುದ್ದ ಕಳಲ,ಬಸ್ತಿ ನಾಯಕ, ತಿಮ್ಮಣ್ಣ ನಾಯಕ,ಬಚ್ಚನಾಯಕ ಕೋಟಿನಾಯಕ,ಕೋಟೆದ ಬಬ್ಬು,ಕೊರಗತನಿಯ ಮೊದಲಾದವರು ಅಸಾಧಾರಣ ಸಾಹಸ ಮೆರೆದು ಕಾಲಾಂತರದಲ್ಲಿ ದೈವತ್ವ ಪಡೆದ ಐತಿಹಾಸಿಕ ಪುರುಷರೇ ಆಗಿದ್ದಾರೆ .ಇಂತಹ ಮಾನವ ಮೂಲ ದೈವಗಳಲ್ಲಿ ಅನೇಕ ಬ್ರಾಹ್ಮಣ ಮೂಲದ ವ್ಯಕ್ತಿಗಳು ಇದ್ದಾರೆ.ಬ್ರಾಹ್ಮಣತಿ ಭೂತ,ಮುಕಾಂಬಿ ಗುಳಿಗ,ಕೆರೆ ಚಾಮುಂಡಿ, ಮುಂಡೆ ಬ್ರಾಂದಿ,ಇಲ್ಲತ್ತಮ್ಮ ಕುಮಾರಿ,ನಾರಳತ್ತಾಯ,ಕಾರಿಂಜೆತ್ತಾಯ,ಅಡ್ಕತ್ತಾಯ ,ನಾರಾಯಣ ಮಾಣಿಲು,ಅಯ್ಯರ ಕೋಲ ಮೊದಲಾದವರು ಬ್ರಾಹ್ಮಣ ಮೂಲದ ದೈವಗಳು.
ಒಂದು ಕುಂದ ನಲವತ್ತು ಭೂತಗಳು,ನೂರೊಂದು ಮಲೆ ಭೂತಗಳು ,ಸಾವಿರದೊಂದು ಭೂತಗಳು ಮೊದಲಾಗಿ ಸಮೂಹ ಆರಾಧನೆ ನಡೆಯುವಲ್ಲಿ ನಡು ನಡುವೆ ಹಾಸ್ಯವನ್ನು ಅಭಿವ್ಯಕ್ತಿ ಮಾಡಿ ನಗಿಸುವ ವಿದೂಷಕ ನನ್ನು ಹೋಲುವ ದೈವಗಳಿವೆ ನಾರಾಯಣ ಮಾಣಿಲು,ಎರು ಶೆಟ್ಟಿ ,ಬ್ರಾಣ ಭೂತ ಮತ್ತು ಮಾಣಿ ಭೂತ ಅಯ್ಯರ ಕೋಲ ಮೊದಲಾದವುಗಳಲ್ಲಿ ಹಾಸ್ಯವಿದೆ .ಇದು‌ ಮಲೆಯಾಳ ಪರಂಪರೆಯ ಭೂತಾರಾಧನೆ ತೆಯ್ಯಂ ನಲ್ಲಿ ಕೂಡ ಇದೆ ಪೀಯಾಯಿ ತೆಯ್ಯಂ ಹಾಸ್ಯಕ್ಕೆ ಪ್ರಸಿದ್ಧಿ ಪಡೆದಿದೆ.
ಇದೇ ರೀತಿ ಕೆಲವೆಡೆ ಕರೊಟ್ಟಿ ಮತ್ತು ಕುಮ್ಮುಲುನ್ನಿ ಎಂಬ ಎರಡು ಬ್ರಾಹ್ಮಣ ತೆಯ್ಯಂ ಗಳಿಗೆ ಆರಾಧನೆ ಇರುವ ಬಗ್ಗೆ ಮನೋಜ್ ಕುಂಬಳೆ ಅವರು ಮಾಹಿತಿ ನೀಡಿದ್ದಾರೆ..ಬ್ರಾಹ್ಮಣನೊಬ್ಬ ಹಾಸ್ಯ ಮಾಡಿಕೊಂಡು ಊಟ ಮಾಡುವ ಅಭಿನಯವನ್ನು ಕುಮ್ಮುಲುನ್ನಿ ದೈವ ಮಾಡುತ್ತದೆ .ಊಟ ಕೇಳಿಕೊಂಡು ಬರುವ ಅಭಿನಯವನ್ನು ಕರೊಟ್ಟಿ ದೈವ ಮಾಡುತ್ತದೆ .ಈ ದೈವಗಳ ವೇಷ ಭೂಷಣ ಬ್ರಾಹ್ಮಣ ರನ್ನು ಹೋಲುತ್ತದೆ .ಅವರಾಡುವ ಮಾತು ಕೂಡ ಮಲೆಯಾಳ ಬ್ರಾಹ್ಮಣರ ಆಡು ಭಾಷೆ ಎಂದು ಮನೋಜ್ ಅವರು ತಿಳಿಸಿದ್ದಾರೆ

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 339-40 ಪಟ್ಟದ ಮುಗೇರ ಮತ್ತು ಬಡಜ ದೈವಗಳು ©ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 339-40 ಪಟ್ಟದ ಮುಗೇರ ಮತ್ತು ಬಡಜ ದೈವಗಳು ©ಡಾ.ಲಕ್ಷ್ಮೀ ಜಿ ಪ್ರಸಾದ
ತುಂಬಾ ದಿನಗಳ ನಂತರ ತುಳುನಾಡ ದೈವಗಳ ಸರಣಿ ಮುಂದುವರಿಸುತ್ತಿರುವೆ .ಕಾಸರಗೋಡು ಜಿಲ್ಲೆಯ ಹೊಸಂಗಡಿ ಮೀಯಪದವು ರಸ್ತೆಯಲ್ಲಿ ಮೂಡಂಬೈಲು ಬಳಿ ಸ್ವಲ್ಪ ಒಳಗೆ ಪಟ್ಟದ ಮುಗರು ಎಂಬ ಗುತ್ತಿನ ಮನೆ ಇದೆ ಪಟ್ಟಾಭಿಷೇಕ ವಾದ ಮುಗೇರ ನಾಯಕನ ಹೆಸರಿನಿಂದಾಗಿ ಈ ಗುತ್ತಿಗೆ ಪಟ್ಟದ ಮುಗರು ಎಂಬ ಹೆಸರು ಬಂದಿದೆ .ಇಲಗಲಿ ಪಟ್ಟವಾದ ಮುಗೇರ ಸಮುದಾಯದ ಇಬ್ಬರು ದೈವತ್ವ ಪಡೆದು ಆರಾಧನೆ ಹೊಂದುತ್ತಿದ್ದಾರೆ .ಇವರಲ್ಲಿ ಹಿರಿಯಾತನ ಹೆಸರು ಬಡಜ ಎಂದು .ಈತ ಈಗಿನ ಬಡಾಜೆ ಪರಿಸರದಲ್ಲಿ ನೆಲೆ ನಿಂತು ಆಡಳಿತ ನಡೆಸಿದ್ದಾನೆ ಈತನ ಹೆಸರಿನ ಕಾರಣಕ್ಕೆ ಆ ಪರಿಸರಕ್ಕೆ ಬಡಾಜೆ ಎಂದು ಹೆಸರು ಬಂತು ಎಂದು ಸ್ಥಳ ಐತಿಹ್ಯ ಪ್ರಚಲಿತವಿದೆ
ಇವರು ಮುಗೇರ ಸಮುದಾಯಕ್ಕೆ ಸೇರಿದ್ದು ತಮ್ಮ ನಿಗೆ ಈಗಿನ ಪಟ್ಟದ ಮುಗೇರು ಎಂಬಲ್ಲಿ ಪಟ್ಟಾಭಿಷೇಕ ವಾಯಿತು .
ಈ ಪರಿಸರವನ್ನು ಆಳುತ್ತಿದ್ದ ಮಂಜೇಶ್ವರದ ಬಂಗ ಅರಸರ ಮೇಲೆ ಶತ್ರುಗಳು ದಾಳಿ ಮಾಡಿದಾಗ ಯುದ್ದದಲ್ಲಿ ಸೋಲುವ ಹಂತ ತಲುಪುತ್ತದೆ .ಈಗಿನ ಪಟ್ಟದ ಮುಗರು‌ಪರಿಸರದಲ್ಲಿ ಅರುವತ್ತು ಎಪ್ಪತ್ತು ಮುಗೇರರ ಮನೆಗಳಿದ್ದವು ಇವರೆ ಬಿಲ್ಜಾಣರಾಗಿದ್ದು ವೀರರಾಗಿದ್ದರು .ಬಂಗರಸ ಇವರ ಸಹಾಯ ಯಾಚಿಸಿ ಶತ್ರುಗಳನ್ನು ಹಿಮ್ಮೆಟ್ಟಿಸಿದರೆ ನಿಮಗೆ ಮೂವತ್ತನಾಲ್ಕು ಗ್ರಾಮಗಳನ್ನು ನೀಡುತ್ತೇನೆ ಎಂದು ವಾಗ್ದಾನ ಮಾಡುತ್ತಾನೆ ..ಈ ಮುಗೇರ ಸಹೋದರರು ಯುದ್ದವನ್ನು ಗೆದ್ದು ಕೊಡುತ್ತಾರೆ ಹಾಗೆ ಬಂಗರಸ ಮುವತ್ತನಾಲ್ಕು ಗ್ರಾಮಗಳ ಒಂದು ‌ಮಾಗಣೆಯನ್ನು ಇವರಿಗೆ ಕೊಡುತ್ತಾನೆ . ಹೀಗೆ ಮಾಗಣೆಯ ಹಕ್ಕನ್ನು ಪಡೆದು ಆಡಳಿತ ನಡೆಸುವ ಸಂದರ್ಭದಲ್ಲಿ ಬ್ರಾಹ್ಮಣ ಹುಡುಗಿಯೊಬ್ಬಳನ್ನು ತನಗೆ ಮದುವೆ ಮಾಡಿ ಕೊಡಬೇಕು ಎಂದು ಪಟ್ಟವಾದ ಮುಗೇರ ನಾಯಕ ಬಲವಂತ ಮಾಡುತ್ತಾನೆ .ಆಗ ಅ ಬ್ರಾಹ್ಮಣ ಹುಡುಗಿಯ ಸಂಬಂಧಿಕರು ಅವನನ್ನು ಉಪಾಯವಾಗಿ ಉಪ್ಪಳ ಸಮೀಪದ ಕೋರಿಕ್ಕೋಡು ಎಂಬ ಕಾಡಿಗೆ ಕರೆದು ಕೊಂಡು ಹೋಗಿ ಕೊಲ್ಲುತ್ತಾರೆ ಹೀಗೆ ಅಸಮಾನ್ಯ ಸಾಹಸ ಮೆರೆದು ಪಟಮಾಗಣೆಯ ಅಧಿಕಾರ ವನ್ನು ಪಡೆದು ಪಟ್ಟವಾದ ಮುಗೇರ ನಾಯಕ ದುರಂತವನ್ನಪ್ಪುತ್ತಾನೆ .ದುರಂತ‌ಮತ್ತು ದೈವತ್ವ ತುಳುನಾಡಿನ ವಿಶಿಷ್ಟ ಸಂಸ್ಕೃತಿ.ಅಂತೆಯೇ ಪಟ್ಟದ ಮುಗೇರ ಹಾಗೂ ಆತನ ಸಹೋದರ ಬಡಜ ದೈವಗಳಾಗಿ ಆರಾಧನೆ ಹೊಂದುತ್ತಾರೆ ©ಡಾ.ಲಕ್ಷ್ಮೀ ಜಿ‌ಪ್ರಸಾದ .ಪಟ್ಟದ ಮುಗರು ಪಾಡಾಂಗಾರೆ ಭಗವತಿಗೆ ನೇಮವಾಗುವಾಗ ಈ ಎರಡು ದೈವಗಳಿಗೆ ಸಾಂಕೇತಿಕವಾಗಿ ಆರಾಧನೆ ಮಾಡುತ್ತಾರೆ
ಇನ್ನೊಂದು ಪ್ರಚಲಿತ ಐತಿಹ್ಯ ಪ್ರಕಾರ ಮಯೂರವರ್ಮ ಕುಂಬಳೆಗೆ ಬಂದಾಗ ಆತನ ಮಗಳು ಸುಶೀಲೆ ಅಸ್ವಸ್ಥಳಾಗುತ್ತಾಳೆ.ಅವಲಿಗೆ ಚಿಕಿತ್ಸೆ ನೀಡಿ ಗುಣ ಪಡಿಸಿದ ಬ್ರಾಹ್ಮಣ ನಿಗೆ ಅವಳನ್ನು ಕೊಟ್ಟು ‌ಮದುವೆ‌ಮಾಡಿ ಒಂದು ಮಾಗಣೆಯನ್ನು ಕೊಡುತ್ತಾನೆ .ಅವಳ ಮಗ ಜಯಸಿಂಹ ವೀರ ಧೀರನಾಗಿದ್ದು ಕುಂಬಳೆಯಲ್ಲಿ ಅರಮನೆ ಕಟ್ಟಿ ಸುತ್ತು ಮುತ್ತಲಿನ ಪ್ರದೇಶ ವನ್ನು ವಶಪಡಿಸಿಕೊಂಡು ಆಡಳಿತ ನಡೆಸುತ್ತಾನೆ .ಒಂದು ದಿನ ಬೇಟೆಯಾಡುವಾಗ ಆತ ಬಿಟ್ಟ ಬಾಣ ತಪ್ಪಿ ಬ್ರಾಹ್ಮಣ ನೊಬ್ಬನಿಗೆ ತಗುಲಿ ಅತ ಪ್ರಾಣಬಿಡುತ್ತಾನೆ ಇದರಿಂದ ನೊಂದ ಜಯಸಿಂಹ ರಾಜ್ಯ ಬಿಟ್ಟು ಹೊರಗಡೆ ಇರುತ್ತಾನೆ
 ಆಗ ಸ್ಥಳೀಯ ನಾದ ಮುಗೇರನೊಬ್ಬ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡು ಪಟ್ಟವಾಗುತ್ತಾನೆ .ಪ್ರಜೆಗಳನ್ನು ಹಿಂಸಿಸುತ್ತಾನೆ ಆಗ ಶಂಕರ ಭಟ್ಟ ಎಂಬ ಬ್ರಾಹ್ಮಣ ದೇವಿಯನ್ನು ಪ್ರಾರ್ಥನೆ ಮಾಡಿದಾಗ ದುಂಬಿಗಳು ಬಂದು ಆಕ್ರಮಣ ಮಾಡುತ್ತವೆ ಕೋರಿಕ್ಕಾರು ಎಂಬ ಸಮೀಪದ ಕಾಡಿನಲ್ಲಿ ‌ಮಾರಣ ಹೋಮ‌ ನಡೆದು ಮುಗೇರ ನಾಯಕ ಹತನಾಗುತ್ತಾನೆ .ಬಡಜ ಈತನ ಸಮೀಪದ ಸಂಬಂಧಿ ಎಂದು ಈ ಐತಿಹ್ಯ ವು ತಿಳಿಸುತ್ತದೆ .
ಆದರೆ ಈ ಐತಿಹ್ಯ ಗಳ
 ಕೇವಲ ಕಟ್ಟು ಕಥೆಯಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಪಟ್ಟದ ಮುಗರಿನಲ್ಲಿ ಇರುವ ಅರಮನೆಯ ಕುರುಹುಗಳು ಇವೆ ಅರಮನೆ ಇದೆ ನ್ಯಾಯ ತೀರ್ಮಾನ ಮಾಡುತ್ತಿದ್ದ ಚಾವಡಿ ಅಲ್ಲಿದೆ .ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ©ಡಾ.ಲಕ್ಷ್ಮೀ ಜಿ ಪ್ರಸಾದ


ಮಾಹಿತಿ ನೀಡಿದ ಯೋಗೀಶ್ ,ಗೋಪಾಲ ಕೃಷ್ಣ   ಭಟ್  ಅರಂತಾಡಿ, ರಾಮಪ್ಪ ಆಳ್ವ ,ರತ್ನಮ್ಮ ಪಟ್ಟದ ಮುಗರು ಗುತ್ತು ಇವರುಗಳಿಗೆ ಹೃತ್ಪೂರ್ವಕ   ಧನ್ಯವಾದಗಳು 

Monday, 20 March 2017

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು-

. "ವೈದಿಕೇತರ ತುಳುವರ ಪರಿಕಲ್ಪನೆಯಲ್ಲಿ ಸತ್ತ ತರುವಾಯದ ಜಗತ್ತಿನಲ್ಲಿ ಕುಲೆ ಮತ್ತು ಪ್ರೇತಾತ್ಮರು ಒಂದೆ ಅಲ್ಲ. ಅವರ ಪ್ರಕಾರ ಸತ್ತವರು ಸಂಸಾರ ಕರ್ಮಗಳಿಂದ ಸಂಸ್ಕರಿಸಲ್ಪಡದಿದ್ದರೆ ಅವರು ಪ್ರೇತಾತ್ಮರು. ಸಂಸ್ಕರಿಸಲ್ಪಟ್ಟು ಸದ್ಗತಿ ಹೊಂದಿದರೂ ಕೂಡಾ ಅವರು ನಮ್ಮೊಂದಿಗಿದ್ದು ನಮ್ಮ ಸಕಲಕ್ಕೂ ಕಾರಣಕರ್ತರಾಗಿರುವ ಆ ಹಿರಿಯರು ಗುರುಕಾರ್ಣೂರರು ಅಥವಾ ಕುಲೆಗಳಾಗಿರುತ್ತಾರೆ. ಇವರಿಗೆ ವಾರ್ಷಿಕಾವರ್ತನದಲ್ಲಿ ಅಗೆಲು ಕೊಟ್ಟು ಆರಾಧಿಸುವ ಕ್ರಮ, ದೈವಾರಾಧನೆಯ ಉಪಾಂಗವಾಗಿ ಪ್ರತ್ಯೇಕವಿದೆ." ಎಂದು ಡಾ| ಪೂವಪ್ಪ ಕಣಿಯೂರು ಹೇಳಿದ್ದಾರೆ. (ಮೌಖಿಕ ಸಂಕಥನ ೨೦೦೯, ತರಂಗಿಣಿ ಪ್ರಕಾಶನ ಸುಳ್ಯ, ಪುಟ ೫೮, ಡಾ| ಪೂವಪ್ಪ ಕಣಿಯೂರು).
ತುಂಡು ಭೂತಗಳ ಕುರಿತು ಚರ್ಚಿಸುತ್ತಾ "ಉಡುಗೆ ತೊಡುಗೆ ಕ್ರಿಯೆ ಇತ್ಯಾದಿಗಳನು ಲಕ್ಷಿಸಿದರೆ ತುಂಡು ಭೂತಗಳಲ್ಲಿ ಕೆಲವು ಭೂತಗಳೆಂಬ ಸ್ಥಾನಮಾನಕ್ಕೆ ಏರದೆ ಇನ್ನೂ ಕುಲೆ'ಯ ಸ್ಥಿತಿಯಲ್ಲಿ ಇರುವಂತೆ ತೋರುತ್ತದೆ. ಪ್ರೇತಾರಾಧನೆಗೂ ಭೂತಾರಾಧನೆಗೂ ಸಂಬಂಧವಿದ್ದು ಅನೇಕ ಭೂತಗಳು ಕುಲೆ'ಯ ಸ್ಥಿತಿಯನ್ನು ದಾಟಿದ ಬಳಿಕವೇ ಭೂತತ್ವವನ್ನು ಹೊಂದಿರುವುದಾಗಿದೆ. ಇಂದು ಭೂತಗಳ ವಿಕಾಸಪಥದ ಒಂದು ಅವಸ್ಥೆಯೂ ಅಹುದು. ಕೆಲವು ಕುಲೆಗಳು ಭೂತಸ್ಥಿತಿಗೆ ದಾಟದೆ ಇನ್ನೂ ಕುಲೆಯ ರೂಪದಲ್ಲೆ ಕಾಣಿಸಿಕೊಳ್ಳುತ್ತದೆ. ಕುಲೆಮಾಣಿಗ, ಕುಲೆ ಬಂಟೆತ್ತಿ, ಜತೆಕುಲೆ, ಬ್ರಾಣ ಕುಲೆ, ಗುರು ಕಾರ್ನೂರು ಮೊದಲಾದ ಕುಲೆಗಳು ಪರಿಷ್ಕೃತ ಪ್ರೇತಗಳೇ ಆಗಿವೆ' ಎಂದು ಡಾ|| ಅಮೃತ ಸೋಮೇಶ್ವರರು ಅಭಿಪ್ರಾಯಪಟ್ಟಿದ್ದಾರೆ.ಕೆಲೆವಡೆ ಪ್ರೇತ ಕೋಲ ಎಂಬ ಆರಾಧನ ಪದ್ಧತಿ ಪ್ರಚಲಿತವಿದೆ .

 ಗತಿಸಿದ ಹಿರಿಯ ಆತ್ಮಗಳನ್ನು ಕಾರ್ಣವೆರ್, ಕಾರ್ನವೆರ್, ಕಾರ್ನೂರು ಎಂದು ಕರೆಯುತ್ತಾರೆ. ವರ್ಷಕ್ಕೊಮ್ಮೆ ಈ ಹಿರಿಯ ಆತ್ಮಗಳಿಗೆ ಎಡೆ ಹಾಕಿ ಬಡಿಸುವ ಮೂಲಕ ಆರಾಧಿಸುವ ಪದ್ಧತಿ ತುಳುನಾಡಿನಲ್ಲಿದೆ. ಗೌಡ ಜನಾಂಗದವರು ಆರಾಧಿಸಲ್ಪಡುವ ಹಿರಿಯರ ಆತ್ಮವನ್ನು ಗುರು ಕಾರ್ನೂರು' ಎಂದು ಕರೆಯುತ್ತಾರೆ. ಗುರು ಕಾರ್ನೂರರಿಗೆ ಅಗೆಲು ಬಡಿಸುವುದು ಮಾತ್ರವಲ್ಲದೆ ನೇಮ ನೀಡಿ ಆರಾಧಿಸುವ ಪದ್ಧತಿ ಕೂಡ ಪ್ರಚಲಿತವಿದೆ. ಗುರುಕಾರ್ನೂರು ಭೂತದ ವೇಷಭೂಷಣ ಮಾನವ ಸಹಜ ಅಲಂಕಾರವನ್ನು ಹೋಲುತ್ತದೆ. ಮುಖಕ್ಕೆ ಬಿಳಿ ಬಣ್ಣ, ಹಣೆಗೊಂದು ಕುಂಕುಮದ ಬೊಟ್ಟು, ಮೈಗೆ ಕೆಂಪು ಪಟ್ಟೆಯ ಉತ್ತರೀಯ ಹಾಗೂ ಬಿಳಿ ಬಟ್ಟೆಯ ಕಚ್ಚೆ ಇರುತ್ತದೆ. ಕಾಲಿಗೆ ಗಗ್ಗರ ಕಟ್ಟುತ್ತಾರೆ.

Tuesday, 29 November 2016

ತುಳು ನಾಡಿನ ಕಂಬಳ -ಪ್ರಾಚೀನತೆ ಮತ್ತು ಐತಿಹ್ಯಗಳು(c)ಡಾ.ಲಕ್ಷ್ಮೀ ಜಿ ಪ್ರಸಾದ



   
                             Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ                           ಚಿತ್ರ ಕೃಪೆ -ಶ್ರೀ ಮಧುಸೂದನ ಶೆಟ್ಟಿ

ತುಳುನಾಡಿನ ಜನಪದ ಆಚರಣೆಗಳಲ್ಲಿ ಕಂಬಳ ವಿಶಿಷ್ಟವಾದುದು. ತುಳುನಾಡು ಅಂದ ತಕ್ಷಣ ಎಲ್ಲರಿಗೆ   ನೆನಪಾಗುವುದು ಕಂಬಳದ  ವಿಚಾರ. ಸಾಮಾನ್ಯವಾಗಿ ಕೆಸರುಗದ್ದೆಯಲ್ಲಿ ಕೋಣಗಳ ಓಟದ ಸ್ಪರ್ಧೆಗೆ ಕಂಬಳ ಎನ್ನುತ್ತಾರೆ. ಆದರೆ ಇದು ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ. ಇದೊಂದು ಧಾರ್ಮಿಕ ಹಾಗೂ ಫಲವಂತಿಕೆಯ ಆಚರಣೆಯೂ ಆಗಿದೆ.ಇದರಲ್ಲಿ ನಾಗಾರಾಧನೆ ಮತ್ತು ಭೂತಾರಾಧನೆಗಳು ಸೇರಿಕೊಂಡಿವೆ.ಇದೊಂದು ವೈಭವದ ಆಚರಣೆ ಕೂಡ.ಕಂಬಳಕ್ಕೆ ಅದರದ್ದೇ ಆದ ಸಾಂಸ್ಕೃತಿಕ ,ಸಾಮಾಜಿಕ ,ಧಾರ್ಮಿಕ ಮಹತ್ವ ಇದೆ .ಕಂಬಳದಲ್ಲಿ ಕೋಣಗಳನ್ನು ಓಡಿಸುವುದು ಬಹುಮಾನ ಪಡೆಯುವುದು ಒಂದು ಪ್ರತಿಷ್ಠೆಯ ವಿಚಾರ ಕೂಡ  .ಕಂಬಳದ ಓಟದ ಕೋಣಗಳನ್ನು ಸಾಕುವುದು ಒಂದು ಘನತೆ ,ಅವುಗಳನ್ನು ಸಾಕಲು ಸಾಕಷ್ಟು ಆರ್ಥಿಕ ಬಲ ಕೂಡ ಬೇಕು .ನಾನು ಚಿಕ್ಕಂದಿನಲ್ಲೇ ಕಂಬಳವನ್ನು ನೋಡಿದ್ದೆ .ಅದೊಂದು ಬಹಳ ಆಕರ್ಷಕವಾದ ಕೋಣಗಳ ಓಟ .ಕೋಣಗಳನ್ನು ಚೆನ್ನಾಗಿ ಅಲಂಕರಿಸಿ  ಕೊಂಬು ವಾಲಗದೊಂದಿಗೆ ಮೆರವಣಿಗೆ ಮಾಡಿ ಕಂಬಳ ಗದ್ದೆಯ ಬಳಿ  ಕರೆ ತರುತ್ತಾರೆ .ಚೆನ್ನಾಗಿ ಎಳೆದ ಕೋಣಗಳ ಮೈ ಮಿರಮಿರನೆ ಮಿಂಚುತ್ತದೆ  Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ.ಅವುಗಳು ಕೂಡ ಅತ್ಯುತ್ಸಾಹದಿಂದ ಬದಿಯಲ್ಲಿರುವ ಮರವನ್ನು ಕೊಂಬಿನಿಂದ ತಿವಿಯುತ್ತವೆ .ನೆಲದ ಮಣ್ಣನ್ನು ಗೋರಿ ತಲೆ ಹಣೆಯ ಮೇಲೆ ಮೆತ್ತಿಕೊಳ್ಳುತ್ತವೆ ಇವುಗಳನ್ನು ಹಿಡಿತದಲ್ಲಿರಿಸುವುದು ಕೂಡ ಒಂದು ಕಲೆ .ಇವುಗಳ ಮೂಗಿಗೆ ಬಳ್ಳಿ ಸುರಿದು ಮೂಗು ದಾರ ಹಾಕುತ್ತಾರೆ .ಇಲ್ಲವಾದಲ್ಲಿ ಇವನ್ನು ಹಿಡಿತದಲ್ಲಿಟ್ಟು ಕೊಳ್ಳಲು ಸಾಧ್ಯವಿಲ್ಲ .ಕೋಣಗಳನ್ನು ಓಡಿಸುವಾತ ಕೂಡ ಕಿರುಗಚ್ಚೆ ಹಾಕಿ ತಲೆಗೆ ರುಮಾಲು ಸುತ್ತಿ ತಯಾರಾಗಿರುತ್ತಾರೆ ಕೋಣಗಳು ಓದಿಕೊಂಡು ಬರುವಾಗ ಜನರ ಬೊಬ್ಬೆ  ಕೇಕೆ ಆನಂದಗಳನ್ನು ನೋಡಿಯೇ ಸವಿಯಬೇಕು .ಕೆಲವೊಮ್ಮೆ ಓಡಿಸುವಾತನ ಹಿಡಿತಕ್ಕೆ ಸಿಕ್ಕದೆ ಯರ್ರಾಬಿರ್ರಿ ಓಡುವ ಕೋಣಗಳು ನೋಡಲು ಸೇರಿದ ಜನರ ಕಡೆ ಓಡಿ  ಬಂದು ಜನರನ್ನು ದಿಕ್ಕಾಪಾಲಾಗಿ ಓಡಿಸುವುದೂ ಕೂಡಾ ಉಂಟು!ಕೋಣಗಳು ಓಡುವಾಗ ನೀರು ಎತ್ತರಕ್ಕೆ ಚಿಮ್ಮುವುದನ್ನು ನೋಡುವುದು ಒಂದು ವಿಶಿಷ್ಟ ಅನುಭವನ್ನು ಕೊಡುತ್ತದೆ . ವಂಡಾರು ಕಂಬಳ ,ಪುತ್ತೂರು ದೇವರ ಕಂಬಳ ,ಕದ್ರಿ ಕಂಬಳ ,ಕೊಕ್ಕಡದ ಕಂಬಳ ಮೊದಲಾದ ಕಂಬಳಗಳ ಉಲ್ಲೇಖ ಅನೇಕ ತುಳು ಜಾನಪದ ಹಾಡುಗಳಲ್ಲಿ ದೊರೆಯುತ್ತದೆ ಅನೇಕ ಶಾಸನಗಳಲ್ಲೂ ಕಂಬಳದ ಉಲ್ಲೇಖಗಳಿವೆ  .ತುಳು ನಾಡಿನಲ್ಲಿ ಕಂಬಳದ ಆಚರಣೆ ಸುಮಾರು ೮೦೦-೯೦೦  ವರ್ಷಗಳ ಹಿಂದಿನಿಂದಲೇ ನಡೆದುಕೊಂಡು  ಬಂದಿದೆ Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
.1. ಕಂಬಳದ ಪ್ರಾಚೀನತೆ
. ತುಳುನಾಡಿನ ಕಂಬಳ ಹಾಗೂ ಕಂಬಳ ಗದ್ದೆಗಳ ಬಗ್ಗೆ ಅನೇಕ ಶಾಸನಗಳಲ್ಲಿ ಉಲ್ಲೇಖಗಳು ಸಿಗುತ್ತವೆ. 
ಉಡುಪಿ ತಾಲೂಕಿನ ಕೆಂಜೂರಿನ ಸಮೀಪದ ಕರ್ಜೆ ಎಂಬಲ್ಲಿ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂಧಿಸಿದ ಶಾಸನದಲ್ಲಿ ಕಂಬಳದ ಉಲ್ಲೇಖವಿದೆ. ಸುಗ್ಗಡಿಯ ಕಂಬಳಕ್ಕೆ ಎರಡು ಎತ್ತು ಕರೆತರಬಹುದುಎಂದು ಇದರಲ್ಲಿ ಉಲ್ಲೇಖವಿದೆ.1 ಇದರ ಕಾಲ ಕ್ರಿ.ಶ.1200 (ಶಕ ವರ್ಷ 1281). ಕಂಬಳ ಆಚರಣೆಯು ಸುಗ್ಗಿ ಬೆಳೆಯ ಬಿತ್ತನೆಯ ಸಮಯದಲ್ಲಿ ನಡೆಯುತ್ತದೆ. ಕುಂದಾಪುರ ಕನ್ನಡದಲ್ಲಿ ಸುಗ್ಗಿ ಅಗೇಡಿ ಎಂದರೆ ಸುಗ್ಗಿಯ ನೇಜಿ ಬಿತ್ತುವ ಜಾಗ. ಸುಗ್ಗಿ ಅಗೇಡಿ > ಸುಗ್ಗೇಡಿ > ಸುಗ್ಗಾಡಿ ಎಂದು ಪ್ರಯೋಗವಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕ್ರಿ.ಶ.ಹನ್ನೆರಡನೆಯ ಶತಮಾನದಲ್ಲಿಯೇ ಸುಗ್ಗಿಯ ಕಾಲದಲ್ಲಿ ಕಂಬಳ ನಡೆಯುತ್ತಿದ್ದದನ್ನು ಶಾಸನದ ಹೇಳಿಕೆ ಸಮರ್ಥಿಸುತ್ತದೆ. ಇದರಿಂದ ಕಂಬಳ ಕನಿಷ್ಠ ಎಂಟುನೂರು ವರ್ಷಗಳಿಂದ ಆಚರಿಸಲ್ಪಡುತ್ತಾ ಬಂದಿದೆ ಎಂದು ಸ್ಪಷ್ಟವಾಗುತ್ತದೆ. ಕ್ರಿ.ಶ.1402ರ ಬಾರಕೂರು ಶಾಸನದಲ್ಲಿ ಆ ಗದ್ದೆಯ ಕೆಳಗಿನ ಕಂಬಳ ಬಗ್ಗೆಎಂದು ಉಲ್ಲೇಖವಿದೆ.2 ಕ್ರಿ.ಶ.1421ರ ಬಾರಕೂರು ಶಾಸನದಲ್ಲಿ ದೇವರು ಸಾವಂತನ ಕಂಬಳ ಗದ್ದೆಯ ಮೇಲೆಎಂದು ಕಂಬಳಗದ್ದೆಯನ್ನು ಉಲ್ಲೇಖಿಸಲಾಗಿದೆ.3 ಕ್ರಿ.ಶ.1424ರ ಬಾರಕೂರು ಶಾಸನದಲ್ಲಿ ಹೊತ್ತಾಗಿ ಮಾಡಿದ ಕಂಬಳ ಗದ್ದೆಎಂದಿದೆ.4 ಕ್ರಿ.ಶ.1437ರ ಉಡುಪಿ ಶಾಸನವು ಮೂಲವಾಗಿ ಕೊಡಬಾಳು ಕಂಬಳ ಗದ್ದೆ ಕೊಯಿಲ್ ಹದಿನಾರುಎಂದಿದೆ.5 ಕ್ರಿ.ಶ.1482ರ ಕೊಲ್ಲೂರು ಶಾಸನದಲ್ಲಿ ಅವರಿಗೆ ಒಬ್ಬ ಬಾಳು ಕಂಬಳ ಗದ್ದೆಎಂದು ಉಲ್ಲೇಖವಿದೆ.6 ಕ್ರಿ.ಶ.1521ರ ಬಾರಕೂರು ಶಾಸನದಲ್ಲಿ ಕಂಬಳ ಗದ್ದೆಯಲಿ ನಡುಹುಣಿಎಂದು ಉಲ್ಲೇಖಿಸಿದೆ.7 ಕ್ರಿ.ಶ.1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಶಾಸನದಲ್ಲಿ ನನ್ನ ಕಂಬಲ ಗದ್ದೆಯಿಂದ ನಡೆಸಬಹುದುಎಂಬಲ್ಲಿ ಕಂಬಳಗದ್ದೆಯ ಉಲ್ಲೇಖವಿದೆ.87.2. ಕಂಬಳ ಪದದ ನಿಷ್ಪತ್ತಿ Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
ಕಂಪ ಎಂಬುದಕ್ಕೆ ಕೆಸರು ಎಂಬರ್ಥವಿದೆ. ಆದ್ದರಿಂದ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಪ+ಪೊಲ>ಕಂಬುಲ ಆಯಿತು ಎಂದು ಹೇಳುತ್ತಾರೆ.9 ಕಳ ಎಂಬುದಕ್ಕೆ ಸ್ಪರ್ಧೆಯ ವೇದಿಕೆ, ಕಣ ಎಂಬರ್ಥವಿರುವುದರಿಂದ ಕಂಪದ ಕಳ>ಕಂಬಳ ಆಗಿರಬಹುದು ಎಂದು ಅಮೃತ ಸೋಮೇಶ್ವರ ಹಾಗು ಬಿ.ಎ. ವಿವೇಕ ರೈ ಹೇಳಿದ್ದಾರೆ. ಕಂಬಳ ಗದ್ದೆಯಲ್ಲಿ ಕೊನೆಗೆ ಪೂಕರೆಎಂಬ ಕಂಬವನ್ನು ನೆಡುವುದರಿಂದ ಕಂಬದ ಕಳ>ಕಂಬಳ ಆಗಿರಬಹುದು ಎಂದು ಚಿತ್ತರಂಜನ ಶೆಟ್ಟಿಯವರು ಹೇಳಿದ್ದಾರೆ.
ಸಾಮಾನ್ಯವಾಗಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದ, ಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎನ್ನುತ್ತಾರೆ. ಕೊನೆಯಲ್ಲಿರುವ ಗದ್ದೆಯಾದ ಕಾರಣ ಇದರಲ್ಲಿ ಸಾಮಾನ್ಯವಾಗಿ ಕೆಸರು ಜಾಸ್ತಿ. ಆದ್ದರಿಂದ ತುಳುವಿನಲ್ಲಿ ಕಂಪದ ಕಂಡ (ತುಳುವಿನಲ್ಲಿ ಗದ್ದೆಗೆ ಕಂಡ ಎನ್ನುತ್ತಾರೆ) ಕಂಬಳ ಆಗಿರಬಹುದು. ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದಾಗ ಳ>ಡಗಳು ಹಲವೆಡೆ ಪರಸ್ಪರ ಬದಲಾಗಿರುವುದು ಕಂಡುಬರುತ್ತದೆ. ಉದಾ: ಇಡಾ>ಇಳಾ, ಮಾಡ>ಮಾಳ ತುಳುಕನ್ನಡದಲ್ಲಿ, ಉದಾ: ಕುಂಬಳ>ಕುಂಬುಡ, ಕೆಂಪು ಕುಂಬಳ>ಕೆಂಬುಡೆ. ಅದೇ ರೀತಿ ಎರಡನೇ ಪದದ ಮೊದಲ ಅಕ್ಷರ ಲುಪ್ತವಾಗುವುದು ಕೂಡ ಸಾಮಾನ್ಯ. ಉದಾ: ಗೆಜ್ಜೆ+ಕತ್ತಿ>ಗೆಜ್ಜೆತ್ತಿ. ಆದ್ದರಿಂದ ಕಂಪಕಂಡ>ಕಂಬಡ>ಕಂಬಳ ಎಂಬ ನಿಷ್ಪತ್ತಿ ಹೆಚ್ಚು ಹೊಂದುತ್ತದೆ ಎನ್ನಬಹುದು.
.3. ಕಂಬಳದ ಮಹತ್ವ Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
ತುಳುನಾಡಿನಲ್ಲಿ ಕಂಬಳ ಎನ್ನುವುದು ಘನತೆಯ ವಿಚಾರವಾಗಿತ್ತು. ಅರಸರು ನಡೆಸಲೇ ಬೇಕಾದ ಆಚರಣೆಯಾಗಿತ್ತು. ಕಂಬಳಕ್ಕೆ ಸಂಬಂಧಿಸಿದಂತೆ ಅನೇಕ ಹೋರಾಟಗಳು ನಡೆದಿವೆ ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆ.
ಸಾಮಾನ್ಯವಾಗಿ ಕಂಬಳಎಂದರೆ ಕೋಣಗಳ ಓಟದ ಸ್ಪರ್ಧೆಎಂದು ಜನರು ಭಾವಿಸುತ್ತಾರೆ. ಆದರೆ ಕಂಬಳ ಎಂದರೆ ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ ಕೇವಲ ಕೋಣಗಳ ಓಟದ ಸ್ಪರ್ಧೆ ಮಾತ್ರ ಅದಾಗಿದ್ದರೆ ಕಂಬಳಕ್ಕೆ ಇಷ್ಟು ಮಹತ್ವ ಇರುತ್ತಿರಲಿಲ್ಲ. ಕಂಬಳಕ್ಕೆ ಸಂಬಂಧಿಸಿದಂತೆ ಹೋರಾಡುವ ಅಗತ್ಯವೂ ಇರುತ್ತಿರಲಿಲ್ಲ.
ಕಂಬಳ ಒಂದು ವಿಶಿಷ್ಟ ಜನಪದ ಆಚರಣೆ. ತುಳುನಾಡಿನಲ್ಲಿ ತುಂಬ ಮಹತ್ವವನ್ನು ಪಡೆದ ಆಚರಣೆಯಾಗಿದೆ. ಈ ಬಗ್ಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಬಳ ಕೇವಲ ಓಟದ ಕೋಣಗಳ ಸ್ಪರ್ಧೆಯೂ ಅಲ್ಲ. ಜನಪದರ ಮನೋರಂಜನೆಯ ಸಾಮಾಗ್ರಿಯೂ ಅಲ್ಲ. ಬದಲಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮವುಳ್ಳ ಫಲವಂತಿಕೆಯ ಆಚರಣೆ ಎಂಬುದು ಖಚಿತವಾಗುತ್ತದೆಎಂದು ಹೇಳಿದ್ದಾರೆ.10
4. ಮೌಖಿಕ ಪರಂಪರೆ ಹಾಗೂ ಐತಿಹ್ಯಗಳು
ಅನೇಕ ತುಳು ಪಾಡ್ದನಗಳಲ್ಲಿ ಕೂಡ ಕಂಬಳದ ಉಲ್ಲೇಖಗಳಿವೆ. ಕಂಬಳಕ್ಕೆ ಸಂಬಂಧಿಸಿದಂತೆ ಈಜೋ ಮಂಜೊಟ್ಟಿಗೋಣವೆಂಬ ಪಾಡ್ದನ ತುಳುನಾಡಿನಲ್ಲಿ ಪ್ರಚಲಿತವಿದೆ. ಬಲಿಯೇಂದ್ರ ಪಾಡ್ದನದಲ್ಲಿಯೂ ಕಂಬಳದ ಉಲ್ಲೇಖವಿದೆ. ಧೂಮಾವತಿ ದೈವದ ಪಾಡ್ದನದಲ್ಲಿ ಗಿಡಾವು ಗೋಣ ಕಂಜಿಲುಎಂದು ಕಂಬಳದಲ್ಲಿ ಓಡಿಸುವ ಕೋಣಗಳ ಬಗ್ಗೆ ವಿವರಣೆ ಇದೆ. ಕೋಟಿ-ಚೆನ್ನಯ ಮತ್ತು ಮಂತ್ರಿ ಬುದ್ಯಂತನ ನಡುವೆ ದ್ವೇಷ ಬೆಳೆಯಲು ಕಂಬಳ ಆಚರಣೆಯ ವಿವಾದವೇ ಮೂಲಕಾರಣ ಆಗಿರುವುದನ್ನು ಕೋಟಿ-ಚೆನ್ನಯ್ಯ ಪಾಡ್ದನ ತಿಳಿಸುತ್ತದೆ. ಕಾಸರಗೋಡಿನ ಪುಳ್ಕೂರು ಬಾಚ ಎಂಬ ಜಟ್ಟಿ ಕಂಬಳಕೋಣಗಳೊಂದಿಗೆ ಏಕಾಂಗಿಯಾಗಿ ಹೋರಾಡಿ, ಕೋಣಗಳನ್ನು ಹಿಡಿತಕ್ಕೆ ತೆಗೆದುಕೊಂಡು ಜನರನ್ನು ರಕ್ಷಿಸಿದನೆಂಬ ಕಥೆ ಪ್ರಚಲಿತವಿದೆ. ಕಾಂತಾಬಾರೆ-ಬೂದಾಬಾರೆ ಎಂಬ ವೀರರು ಕಟಪಾಡಿ ಕಂಬಳವನ್ನು ಕಾಲಿನಿಂದ ಒದ್ದು ವಕ್ರಗೊಳಿಸಿದರೆಂಬ ಸ್ಥಳೀಯ ಐತಿಹ್ಯವಿದೆ. Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
ಪೂಕರೆ ಕಂಬದ ವಿಚಾರದಲ್ಲಿ ಯುದ್ಧವಾಗುತ್ತಿದ್ದಿರುವಂತೆ ತೋರುತ್ತದೆ. ದಂಡಿಗೆ ಹೋದ ಒಡೆಯರು ಗೆದ್ದು ಬರುವಾಗ ಪೂಕರೆ ಕಂಬವನ್ನು ತಂದರೆಂದು ಹೇಳುವ ಉರಲ್ ಒಂದನ್ನು ಸುಂದರ ಕೇನಾಜೆಯವರು ಸಂಗ್ರಹಿಸಿದ್ದಾರೆ.
        ಉರಲ್ (ತುಳು)
ನಮೊನ ಉಲ್ಲಾಯ ದಂಡ್‍ಗು ಪೋತೆರ್
ದಂಡ್‍ಡ್ದ್ ಬನ್ನಗ ಗಿಂಡೆದ ನೀರು
ಕುಡ್ಪುಡು ಕಾಯಿ
ಬಟ್ಟಲ್ಡ್ ಪೇರು
ಕೊರೈಡ್ ಸುಣ್ಣೋ
ಬಂಡಿಡ್ ಪೂಕರೆ
ಕೊಂಡೊದು ಬರ್ವೆರೆ ಉಲ್ಲಾಯೆ
ಆಯೆರ್‍ಗ್ ಪೋನಗ ಆಜಿಕಟ್ಟು ಬಡು
ಈಯೆರೆಗ್ ಬನ್ನಗ ಮೂಜಿಕಟ್ಟು ಬಡು
ಕಂಪಕಂಡೊಡು ಗುಂಪು ಬಲಿಪಡ
ಪೊಯ್ಯಕಂಡೊಡು ಪೊಯ್ಯ ಬಲಿಪಡ
ಮೆಲ್ಲಪೋ ಮೆಲ್ಲ ಬಲ
                       ಓ ... ಓ ... ಓ...
ಕನ್ನಡ ಅನುವಾದ
ನಮ್ಮ ಯಜಮಾನರು ದಂಡಿಗೆ ಹೋಗಿದ್ದಾರೆ
ದಂಡಿನಿಂದ ಬರುವಾಗ ಗಿಂಡೆಯಲ್ಲಿ ನೀರು
ಎಸರು ತಟ್ಟೆಯಲ್ಲಿ ಕಾಯಿ
ಬಟ್ಟಲಿನಲ್ಲಿ ಹಾಲು
ಮರಿಗೆಯಲ್ಲಿ ಸುಣ್ಣ
ಬಂಡಿಯಲ್ಲಿ ಪೂಕರೆ
ತೆಗೆದುಕೊಂಡು ಬರುತ್ತಾರೆ
ಆ ಕಡೆ ಹೋಗುವಾಗ ಆರು ಕಟ್ಟು ಬೆತ್ತ
ಈ ಕಡೆ ಬರುವಾಗ ಮೂರು ಕಟ್ಟು ಬೆತ್ತ
ಕೆಸರುಗದ್ದೆಯಲ್ಲಿ ಗುಂಪು ಓಡಬೇಡ
ಹೊಯ್ಗೆ ಗದ್ದೆಯಲ್ಲಿ ಹೊಯ್ಯೋ (?) ಓಡಬೇಡ
ಮೆಲ್ಲಗೆ ಹೋಗು ಮೆಲ್ಲಗೆ ಬಾ
ಓ .... ಓ .... ಓ ....
ಒಡೆಯನ ಅಂತಸ್ತಿಗೆ ಅನುಗುಣವಾಗಿ ಗಣೆ ಹಾಕುವುದು ಕೂಡ ಪೂಕರೆ ಒಡೆತನದ ಸೂಚಕವಾಗಿದೆ ಎಂಬುದನ್ನು ಸಮರ್ಥಿಸುತ್ತದೆ. Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
ಪಣಂಬೂರಿನ ಪೂಕರೆ ಕಂಬಳ ತರಲು ಮುಲ್ಕಿಯಿಂದ ಹೋದ ಪ್ರಸಂಗ ಹಾಗೂ ಮಂಜಣ್ಣ ಪೂಕರೆ ಕಂಬವನ್ನು ಕಿತ್ತು ತಂದ ಐತಿಹ್ಯವು ಅಗೋಳಿ ಮಂಜಣ್ಣಎಂಬ ಹೆಸರಿನಲ್ಲಿ ಪ್ರಚಲಿತವಿದೆ. ಪೇರೂರಿನಲ್ಲಿ ಪೂಕರೆ ಕಂಬ ಕಳೆದುಹೋದ ಮೇಲೆ ಪೂಕರೆ ಕಂಬ ಹಾಕುವ ಆಚರಣೆ ನಿಂತುಹೋಯಿತು ಎಂಬ ಐತಿಹ್ಯವಿದೆ. ಕೋಳ್ಯೂರು ಮತ್ತು ಕಳಿಯೂರು, ಕಾಸರಗೋಡು ಜಿಲ್ಲೆಯ ಅಕ್ಕಪಕ್ಕದ ಎರಡು ಗ್ರಾಮಗಳು. ಕಳಿಯೂರಿನಲ್ಲಿ ಪೂಕರೆ ಕಂಬಳವೂ, ಕೋಳ್ಯೂರಿನಲ್ಲಿ ಬಾಳೆ ಕಂಬಳವೂ ನಡೆಯುತ್ತಿತ್ತು. ಒಂದು ವರ್ಷ ಕೋಳ್ಯೂರು ಕಂಬಳದಲ್ಲಿ ಮೂಲದ ಮಾಣಿ ಕೋಣಗಳನ್ನು ಅಡ್ಡಕ್ಕೆ ಓಡಿಸುವ ಬದಲು ನೀಟಕ್ಕೆ ಓಡಿಸುತ್ತಾನೆ. ಆಗ ಕೋಣಗಳು ಅಲ್ಲಿಯೇ ಮಾಯವಾಗುತ್ತವೆ. ಮೂಲದ ಮಾಣಿ ಓಡಿ ಹೋಗಿ ಗದ್ದೆಯ ಬದಿಯ ತೊರೆಗೆ ಹಾರುತ್ತಾನೆ. ಆ ಜಾಗಕ್ಕೆ ರೆಂಜೆಗುಂಡಿಎನ್ನುತ್ತಾರೆ. ಓಡುವಾಗ ಆತನ ಮುಟ್ಟಾಳೆ ಒಂದು ಕಡೆ ಬೀಳುತ್ತದೆ. ಆ ಜಾಗವನ್ನು ಮುಟ್ಟಾಳೆಕಲ್ಲು ಎನ್ನುತ್ತಾರೆ. ಕೋಣಗಳು ಮಾಯವಾದ ಜಾಗ ಎಂಬಲ್ಲಿ ಕೋಣಗಳು ಮಲಗಿರುವಂತೆ ಕಾಣುವ ಎರಡು ಬಂಡೆಗಲ್ಲುಗಳಿವೆ. ಈ ಕಲ್ಲನ್ನು ಎರುಮಾಜಿನಕಲ್ಲು (ಕೋಣ ಮಾಯವಾದ ಕಲ್ಲು) ಎನ್ನುತ್ತಾರೆ. ಕಂಬಳಸಂಬಂಧಿ ಈಜೋಮಂಜೊಟ್ಟಿಗೋಣ ಪಾಡ್ದನವು ಸತ್ಯದ ಕಂಬಳಕ್ಕೆ ಇಳಿದ ರೆಂಜಲಡಿಬರಿಕೆಯ ಮೂಲದ ಮಾನಿ ಬಬ್ಬು ಹಾಗೂ ಕೋಣಗಳು ಮಾಯವಾದಕಥೆಯನ್ನು ಹೇಳುತ್ತವೆ. ಹೀಗೆ ಕೋಣಗಳು ಮಾಯವಾದ ಮರುದಿವಸ ನೋಡುವಾಗ ಕಳಿಯೂರಿನ ಪೂಕರೆ ಕಂಬ ಕೋಳ್ಯೂರು ಕಂಬಳಗದ್ದೆಯಲ್ಲಿ ಬಂದು ಬಿದ್ದಿತ್ತು. ಅಂದಿನಿಂದ ಕೋಳ್ಯೂರು ಕಂಬಳಗದ್ದೆಯಲ್ಲಿ ಬಾಳೆ ಹಾಗೂ ಪೂಕರೆ ಕಂಬ ಎರಡೂ ಹಾಕುವ ಪದ್ಧತಿ ಬಂತು ಎಂಬ ಐತಿಹ್ಯವಿದೆ. ಅಂದಿನಿಂದ ಕೋಳ್ಯೂರು ಕಂಬಳದಂದು ಗದ್ದೆಗೆ ಕೋಣಗಳನ್ನು ಇಳಿಸುವುದಿಲ್ಲ. ಬದಲಿಗೆ ಎತ್ತುಗಳನ್ನು ಇಳಿಸುತ್ತಾರೆ. ಕೊಕ್ಕಡ ಕಂಬಳಕ್ಕೆ ಸೆಗಣಿ ಹಾಕಬಾರದು ಎಂದಿದೆ. ಅರಿಬೈಲು ಕಂಬಳ ಗದ್ದೆಯಲ್ಲಿ ಜೊಳ್ಳು ಭತ್ತ ಬಿತ್ತಿದರೂ ಬೆಳೆ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ವಂಡಾರು ಕಂಬಳ ಗದ್ದೆಯ ಸುತ್ತ ಬದುವಿನ ಸುತ್ತ ಬೆಳ್ತಿಗೆ ಅಕ್ಕಿ ಉದುರಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ವಂಡಾರು ಕಂಬಳದ ದಿನ ಕೋಟೇಶ್ವರದ ನೀರು ಕೆಂಪಗಾಗುತ್ತಿತ್ತು ಎಂಬ ಸ್ಥಳ ಐತಿಹ್ಯವಿದೆ.  Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದವಂಡಾರು ಕಂಬಳದಲ್ಲಿ ಹಿಂದೆ ನರಬಲಿ ಕೊಡುವ ಪದ್ಧತಿ ಇತ್ತೆಂಬ ಬಗ್ಗೆ ಒಂದು ಐತಿಹ್ಯ ಪ್ರಚಲಿತವಿದೆ: ಪೂಕರೆ ಕಂಬಳದ ಹಿಂದಿನ ದಿವಸವೇ ಊರವರು ನೆಂಟರಿಷ್ಟರು ಬಂದಿರುತ್ತಾರೆ. ರಾತ್ರಿ ಮಲಗಿದಾಗ ನೆಂಟರ ಹುಡುಗರಲ್ಲಿ ಇಬ್ಬರ ಕಾಲಿಗೆ ಬಳ್ಳಿ ಕಟ್ಟುತ್ತಿದ್ದರು. ಕಾಲಿಗೆ ಬಳ್ಳಿ ಕಟ್ಟಿರುವ ಹುಡುಗರಿಬ್ಬರನ್ನು ಎತ್ತಿ ತೆಗೆದುಕೊಂಡು ಹೋಗಿ ಕಂಬಳ ಗದ್ದೆಯ ಸಮೀಪದ ಬಾವಿಗೆ ಹಾಕುತ್ತಿದ್ದರು. ಒಂದು ವರ್ಷ ತನ್ನ ಕಾಲಿಗೆ ಕಟ್ಟಿದ್ದ ಬಳ್ಳಿಯನ್ನು ಬಿಚ್ಚಿ ಆ ಮನೆಯ ಯಜಮಾನನ ಮಗನ ಕಾಲಿಗೆ ಒಬ್ಬ ಹುಡುಗ ಕಟ್ಟುತ್ತಾನೆ. ರಾತ್ರಿಯಲ್ಲಿ ಇದು ತಿಳಿಯದ ಕೆಲಸದವರು ಬಳ್ಳಿ ಕಟ್ಟಿದ್ದ ಯಜಮಾನನ ಮಗನನ್ನೇ ಹೊತ್ತುಕೊಂಡು ಹೋಗಿ ಬಾವಿಗೆ ಹಾಕುತ್ತಾರೆ. ಮರುದಿವಸ ಬೆಳಗ್ಗೆ ಮನೆಯ ಯಜಮಾನನಿಗೆ ಈ ವಿಚಾರ ಗೊತ್ತಾಗುತ್ತದೆ. ಅಂದಿನಿಂದ ನರಬಲಿಯ ಬದಲು ಕೋಳಿಯನ್ನು ಬಲಿ ಕೊಡುತ್ತಿದ್ದರು ಎಂಬ ಐತಿಹ್ಯವಿದೆ. ಈಗ ಸಾಂಕೇತಿಕವಾಗಿ ಕುರ್ದಿನೀರನ್ನು ಗದ್ದೆಗೆ ಎರೆಯುತ್ತಾರೆ. ಆ ಬಾವಿಯ ಮೇಲೆ ಕಲ್ಲಿನ ಚಪ್ಪಡಿಯನ್ನು ಎಳೆದಿದ್ದಾರೆ. ಆ ಬಾವಿಯನ್ನೇ ಸಿರಿಗಳ ಬಾವಿಎಂದು ಕರೆಯುತ್ತಾರೆ. ಕಂಬಳಗಳಲ್ಲಿ ಅತಿದೊಡ್ಡ ಕಂಬಳ ಗದ್ದೆ ಇದಾಗಿದೆ. ಎರಡು ಮೂರು ದಶಕಗಳ ಹಿಂದೆ ಇಲ್ಲಿ ವಾರಗಟ್ಟಲೆ ಕೋಣಗಳ ಓಟದ ಸ್ಪರ್ಧೆ ನಡೆಯುತ್ತಿತ್ತು. ಹೆಚ್ಚಿನ ಎಲ್ಲಾ ಪೂಕರೆ ಕಂಬಳ ಗದ್ದೆಗೆ ಸಂಬಂಧಿಸಿದಂತೆ ಒಂದು ಸಮಾನ ಆಶಯವುಳ್ಳ ಐತಿಹ್ಯ ಪ್ರಚಲಿತವಿದೆ. ಕಂಬಳ ಕೋರಿಯ ಮೊದಲು ಈ ಗದ್ದೆಗಳಲ್ಲಿ ಕುರುಂಟು ಎಳೆಯುವುದಿಲ್ಲ. ರಾತ್ರಿ ಸಂಕಪಾಲನೆಂಬ ಸರ್ಪ ಬಂದು ಈ ಕೆಲಸ ಮಾಡುತ್ತದೆ ಎಂಬ ಐತಿಹ್ಯ ಹೆಚ್ಚಿನ ಗದ್ದೆಗಳಲ್ಲಿ ಪ್ರಚಲಿತವಿದೆ.
ಕಂಬಳದ ಆಚರಣೆಯಲ್ಲಿ ಮೂರು ಮುಖ್ಯ ಅಂಶಗಳಿವೆ. ಮೊದಲನೆಯದು ಕೋಣಗಳ ಓಟದ ಸ್ಪರ್ಧೆಗೆ ಸಂಬಂಧಿಸಿದ ಅಂಶ. ಎರಡನೆಯದು ಫಲವಂತಿಕೆಯ ಆಚರಣೆಗೆ ಸಂಬಂಧಿಸಿದೆ. ಮೂರನೆಯದು ನಾಗ ಹಾಗೂ ಇತರ ದೈವಗಳ ಆರಾಧನೆಗೆ ಸಂಬಂಧಿಸಿದೆ. Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ

Sunday, 20 November 2016

ಭೂತಾರಾಧನೆಗೊಂದು ಸಮೃದ್ಧ ಬ್ಲಾಗ್ --ಭೂತಗಳ ಅದ್ಭುತ‌ ಜಗತ್ತು - ಪುನೀತ್ ಸಿದ್ಧ ಕಟ್ಟೆ

ಪುನೀತ್‌ ಎಂ.ಸಿದ್ದಕಟ್ಟೆ ತುಳುನಾಡಿನ ಸಂಸ್ಕೃತಿ ಮಾಹಿತಿ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡಿದಾಗ ಮಾಹಿತಿ ಸಿಗುವುದು ಬಹು ಕಡಿಮೆ. ಈ ಕೊರತೆ ನೀಗಿಸಲು ಭೂತಾರಾಧನೆಯ ಅದ್ಭುತ ಜಗತ್ತಿನ ಬ್ಲಾಗ್‌ ತುಳು ಸಂಸ್ಕೃತಿಯಲ್ಲಿನ ಸಾಕಷ್ಟು ವಿಚಾರ ಅನಾವರಣಗೊಳಿಸಿದೆ. ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ 2 ಡಾಕ್ಟರೇಟ್‌ ಪಡೆದ ಡಾ.ಲಕ್ಷ್ಮೀ ಜಿ.ಪ್ರಸಾದ್‌ ಈ ಅತ್ಯಪರೂಪದ ಬ್ಲಾಗ್‌ನ ರೂವಾರಿ. ಹಲವು ವರ್ಷಗಳಿಂದ ತುಳು ನಾಡಿನ ಭೂತಗಳ ಇತಿಹಾಸ, ಹಿನ್ನೆಲೆ, ಆರಾಧನೆ ಸ್ವರೂಪ ಒಳಗೊಂಡ ವಿಚಾರ ನಿರಂತರ ಸಂಶೋಧನೆ ಮಾಡಿ, ಭೂತಾರಾಧನೆ ಮಾಹಿತಿ ಹಾಗೂ ಸಂಬಂಧಿಸಿದ ವಿಚಾರಗಳ 590 ಬರಹÜ ಬ್ಲಾಗ್‌ನಲ್ಲಿವೆ. ಈ ಸಂಶೋಧನಾ ಬ್ಲಾಗ್‌ ಜನಪ್ರಿಯವಾಗಿದ್ದು, ತುಳುನಾಡಿನ ಜನತೆಗೆ ಮಾತ್ರ ಸೀಮಿತವಾಗಿಲ್ಲ. ದೇಶ-ವಿದೇಶಗಳ 1.70 ಲಕ್ಷ ಕ್ಕಿಂತ ಹೆಚ್ಚಿನ ಬ್ಲಾಗ್‌ ಓದುಗರನ್ನು ಹೊಂದಿದೆ!. ಇಂಗ್ಲಿಷ್‌ನಲ್ಲೂ ಮಾಹಿತಿ: ಭೂತಾರಾಧನೆಯ ಉಪಯುಕ್ತ ಮಾಹಿತಿಯೊಂದಿಗೆ ಸಂಬಂಧಿಸಿದ ಫೋಟೊ, ಜಾನಪದ, ಮಹಿಳೆಯರ ಬದುಕು, ನಾನಾ ಭಾಷೆಯ ಸಾಹಿತ್ಯಗಳ ಬರಹ ಬ್ಲಾಗ್‌ನಲ್ಲಿದೆ. ದೇಶ-ವಿದೇಶಗಳ ಅನೇಕ ಸಂಶೋಧಕರು, ಅಧ್ಯಯನಕಾರರು ಮಾಹಿತಿ ಪಡೆದಿದ್ದಾರೆ. ಅನೇಕ ಕನ್ನಡೇತರ ವಿದ್ವಾಂಸರ, ಜನರ ಕೋರಿಕೆಯಂತೆ ಇತ್ತೀಚೆಗೆ ತುಳುನಾಡಿನ ಭೂತಾರಾಧನೆ ಕುರಿತ ಲೇಖನಗಳನ್ನು ಇಂಗ್ಲಿಷ್‌ನಲ್ಲಿ ಕೂಡ ಆರಂಭಿಸಿದ್ದಾರೆ. ಡಾ.ಲಕ್ಷ್ಮಿ ಜಿ.ಪ್ರಸಾದ್‌ ಸಂಶೋಧನೆಯಲ್ಲಿ ಕಂಡುಕೊಂಡ ಅಪರೂಪದ ವಿಚಾರಗಳನ್ನು ಜನಸಾಮಾನ್ಯರಿಗೂ ಭೂತಗಳ ಅದ್ಭುತ ಜಗತ್ತು ಬ್ಲಾಗ್‌ ಮೂಲಕ ತಿಳಿಸುವಂತೆ ಮಾಡುತ್ತಿದ್ದು, ಭೂತಾರಾಧನೆಯಲ್ಲಿ ಅಡಕವಾಗಿರುವ ಇತಿಹಾಸದ ಎಳೆಗಳನ್ನು ಪತ್ತೆ ಮಾಡಿದ್ದಾರೆ. ಈ ತನಕ ಗೊತ್ತಿರದ 400ಕ್ಕೂ ಹೆಚ್ಚಿನ ದೈವಗಳ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇಂತಹ ಹಲವಾರು ವಿಚಾರಗಳು ಬ್ಲಾಗ್‌ನಲ್ಲಿದೆ. ತುಳುನಾಡಿನ ಸಂಸ್ಕೃತಿ ಖಜಾನೆ: ಡಾ. ಲಕ್ಷ್ಮೀ ಜಿ.ಪ್ರಸಾದ್‌ ಮೂಲತಃ ಕಾಸರಗೋಡಿನ ಕೋಳ್ಯೂರಿನವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸರಕಾರಿ ಪಪೂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ. ಇವರ ಸುಮಾರು 20ಕ್ಕೂ ಅಧಿಕ ಪ್ರಕಟಿತ ಪುಸ್ತಕಗಳು, 200ಕ್ಕೂ ಅಧಿಕ ಶೈಕ್ಷ ಣಿಕ,ವೈಚಾರಿಕ, ಸಂಶೋಧನ್ಮಾಕ ಬರಹಗಳು ರಾಜ್ಯದ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಡಾ. ಲಕ್ಷ್ಮೀ ಜಿ.ಪ್ರಸಾದ್‌ ಕನ್ನಡ, ಸಂಸ್ಕೃತಿ ಮತ್ತು ಹಿಂದಿ ಎಂಎ ಪದವಿ ಪಡೆದಿದ್ದಾರೆ. ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ -ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನೆ ಮಹಾಪ್ರಬಂಧ ರಚಿಸಿ ಹಂಪಿ ಕನ್ನಡ ವಿವಿಯಲ್ಲಿ ಡಾಕ್ಟರೇಟ್‌ ಗಳಿಸಿದ್ದಾರೆ. ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ದ್ರಾವಿಡ ವಿವಿಯಿಂದ 2ನೇ ಡಾಕ್ಟರೇಟ್‌ ಗಳಿಸಿದ್ದಾರೆ. 150 ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ರಾಜ್ಯ, ಪ್ರಾದೇಶಿಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದು, ಹಲವಾರು ರಾಜ್ಯ, ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಬ್ಲಾಗ್‌ ಬರಹಗಳು ಕನ್ನಡ, ಇಂಗ್ಲಿಷ್‌ನಲ್ಲಿವೆ. 590 ಲೇಖನಗಳಿವೆ. ಕನ್ನಡ ಜನಪ್ರಿಯ ಬ್ಲಾಗ್‌ಗಳಲ್ಲಿ ಮುಂಚೂಣಿಯಲ್ಲಿದೆ. ಮಹಿಳೆಯರ ಬದುಕು, ಜಾನಪದ, ನಾನಾ ಭಾಷೆ ಸಾಹಿತ್ಯಗಳ ಬರಹಗಳೂ ಇದೆ. ಈ ಬ್ಲಾಗ್‌ ಮೂಲಕ ತುಳುನಾಡಿನ ಭೂತಾರಾಧನೆ ಮಾಹಿತಿ ಹಾಗೂ ಸಂಬಂಧಿಸಿದ ಹಲವಾರು ವಿಚಾರ ಪಡೆಯಬಹುದು. ಬ್ಲಾಗ್‌ ಬರಹಗಳು ತನ್ನದೇ ಆದ ಓದುಗರನ್ನು ಹೊಂದಿದೆ. -ಡಾ. ಲಕ್ಷ್ಮೀ ಜಿ.ಪ್ರಸಾದ್‌

Saturday, 29 October 2016

Urava and Eru banta daivas of kolyuru (c)Dr Lakshmi G prasad

Tulunadu is a riot of colours during Deepavali. Homes are saturated in festive atmosphere, there is devotion in the air, while Kambala Kori worship begins in agricultural lands.
On the day of Pattanaaje (10th day of Tulu month Besha which falls on the third or fourth week of May) all deities of Tulunadu retreat to their place of worship, remove their gaggara (an ornament used only at the time of kolam), and keep it aside to have some rest
. Copy rights reserved (c)Dr Lakshmi G Prasad

Kambala is not just a race but also a form of tradition and a fertility cult. According to Dr.Purushottama Bilimale, “Kambala is not just a buffalo race and pure entertainment. It is a fertility cult which has socio-economic and political dimensions.”
There are three aspects to Kambala:
             1. Buffalo race
             2. Fertility cult     
             3. The worship of Naga (serpents) and bhutas (deities).
Soon after Deepavali, there is a custom known as Pookare Kambala, which takes place every year in my father’s home (Kolyooru Kambala house), where Nagabramha Daiva and Urava Daiva are worshipped. Strangely, scholars have not been able to document the Urava bhuta.
The rituals observed during ploughing of the land are known as 'kandada kori' in Tulu. Before sowing is undertaken, it’s a custom to place a pillar (known as 'pookare kamba') in the middle of the field. The placing of the stone pillar symbolises marriage, with land being the bride and pillar/pole, the groom.
During this ritual, deities such as Urava, Erubanta, Nagabhoota and Bermer are invoked and worshipped.     Copy rights reserved (c)Dr Lakshmi G Prasad
Urava
         
NagaBermer is a prominent god of Kambala tradition. The coming together of bhutas ‘Naga’ and ‘Bermer’ led to the creation of NagaBermer. Urava and Erubanta are from the same family and known as sub-deities of NagaBermer.Copy rights reserved (c)Dr Lakshmi G Prasad
During the ritual, right after the main deities are worshipped, the makeup is altered slightly to make way for the worship of the sub-deities. Later, the actors start chanting folk verses known as ‘paddana’.
In the Kolam of Urava and Erubanta, there is no related ‘paddana’ available. But a related ‘paddana’ named 'Ijo Manjatti Gona' is available.Copy rights reserved (c)Dr Lakshmi G Prasad
According to 'Ijo Manjatti Gona', a man named Manjunaalva, from the house of Renjaladi, leaves for Subramanya to purchase a pair of bulls. He takes a worker named Babbu along with him.
Eru bantaCopy rights reserved (c)Dr Lakshmi G Prasad

On the way, they come across a temple of Oridaiyya Dhoomavathi, where Manjanaalva makes a pledge that if he finds a pair of fine bulls, he would start Kolam (a form of worship) preparations.
After finding a pair of good bulls, Manjanaalva and Babbu halt at the same temple. On noticing a jackfruit tree, Manjanaalva commands Babbu to pluck some jackfruits. Babbu tries to dissuade Manjanaalva from the act but Manjanaalva forces him to pluck the fruit.
With no other option, Babbu does as he is told. Soon, they start eating the fruits and throw the leftovers to the bulls. This act angers the god who curses them.
Later, Manjanaalva gets a call to plough a particular piece of land. On arriving at the site, he is unable to perform the task as the bulls become unruly. To control them, a low caste worker, who is barred from stepping into the field, enters the field; and when he does so, he and the bulls are turned into stone.
It’s a common fact that one who dies for supernatural reasons are worshipped as deities. According to Tulu-English dictionary, Urave means a 'man who ploughs' and Eru means a 'bull'. So now we know the reason behind the worship.Copy rights reserved (c)Dr Lakshmi G Prasad
In Kasargod, Bantwal, Puttur and Sullia, people worship Urava and Erubanta during Kambala Kori Nema.
In Kasargod district’s Kolyooru and Bantwal’s Birooru, the stone pillar symbolising the worker and the bulls are planted in fields. In Kolyooru, they call the stone pillar as 'Eru Maajina Kallu' (stone resembling the bull’s disappearance). Near it, there is another stone known as 'Muttale Kallu', which refers to the cap worn by the worker. A deep depression in the field, where rainwater accumulates, is known as 'Renji Gundi'.                                                              
According to Varanasi Narayana Bhat, “It is called as Renji Gundi since the person punished was from the Renjiladi family. Later, it turned into Renje Gundi.”
This account hints at the possibility of a rivalry between two parties.Copy rights reserved (c)Dr Lakshmi G Prasad