ಪುಸ್ತಕ ಸಂಭ್ರಮ
ಈವತ್ತು ಮಧ್ಯಾಹ್ನ ಊಟದ ಸಮಯದಲ್ಲಿ ಒಬ್ಬರ ಫೋನ್ ಬಂತು.ನೀವು ಲಕ್ಷ್ಮೀ ಜಿ ಪ್ರಸಾದರಾ? ನೀವು ಕಳುಹಿಸಿದ ಪಾರ್ಸೆಲ್ ಬಂದಿದೆ.ನಿಮಗೆ ನನ್ನ ವಿಳಾಸ ಯಾರು ಕೊಟ್ಟದ್ದು.ಈ ಪುಸ್ತಕ ನಮಗೆ ಬೇಕಾಗಿತ್ತು.ಆದರೆ ನಾನು ನಿಮಗೆ ಅಡ್ರೆಸ್ ಕೊಟ್ಟಿಲ್ಲ ,ನಿಮಗೆ ಹೇಗೆ ಪೇ ಮಾಡುದು ?" ಎಂದರು.ಆಗ ನನಗೆ ಅನೇಕರು ತಮ್ಮ ಹೆತ್ತವರಿಗಾಗಿ ಆತ್ಮೀಯರಿಗಾಗಿ ಪುಸ್ತಕಕ್ಕೆ ಪೇ ಮಾಡಿ ಅವರವರ ವಿಳಾಸ ನೀಡಿ ಕಳುಹಿಸುವಂತೆ ಹೇಳಿದ್ದು ನೆನಪಾಯಿತು
ಹಾಗೆ ನನಗೆ ಫೋನ್ ಮಾಡಿದ ಶ್ರೀಧರ್ ಅವರ ವಿಳಾಸ ತಗೊಂಡು ಚೆಕ್ ಮಾಡಿದೆ..
ಹೌದು..ನನ್ನ ಅಂದಾಜು ಸರಿ ಇತ್ರು
ಪ್ರಸ್ತುತ ಚೆನ್ನೈಯಲ್ಲಿ ಸೀನಿಯರ್ ಬ್ಯಾಂಕ್ ಮ್ಯಾನೇಜರ್ ಆಗಿರುವ ನನ್ನ ಹಳೆಯ ವಿದ್ಯಾರ್ಥಿನಿ ಅನರೂಪಾ ಕಳೆದ ವಾರ ನನ್ನನ್ನು ಸಂಪರ್ಕಿಸಿ ಪುಸ್ತಕಕ್ಕೆ 2000₹ ಪೂರ್ಣ ಬೆಲೆ ಪಾವತಿಸಿ ಅವರ ತಂದೆಯ ಹೆಸರು ವಿಳಾಸ ನೀಡಿದ್ದರು
ಹಾಗೆ ಮತ್ತೆ ಫೋನ್ ಮಾಡಿ ಶ್ರೀಧರ್ ಅವರಿಗೆ ಅವರ ಮಗಳ ಉಡುಗೊರೆ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಎಂದು ತಿಳಿಸಿದೆ.ಅವರಿಗೆ ತಮ್ಮ ಅಭಿರುಚಿ ಗಮನಿಸಿದ ಮಗಳು ಪುಸ್ತಕ ಉಡುಗೊರೆ ನೀಡಿದ ಬಗ್ಗೆ ತಿಳಿದು ಬಹಳ ಸಂತಸಪಟ್ಟರು
(ಮೂರು ವರ್ಷದ ಹಿಂದೆ)

No comments:
Post a Comment