Monday, 3 November 2025

224 ಶಾಂಭವಿ ಧರಣೀಶ್ ನಮ್ಮ‌ಪ್ರೀತಿಯ ಪುಸ್ತಕ‌ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ಈ ಯಾಂತ್ರಿಕ ಜಗತ್ತಿನಲ್ಲಿ ಜನರು ಗುರಿಯಿಲ್ಲದೆ ಸಾಗುತ್ತಿರುವ ಸಮಯದಲ್ಲಿ, ಡಾ. ಲಕ್ಷ್ಮಿ ಅವರ ಕರಾವಳಿಯ ಸಾವಿರದೊಂದು ದೈವಗಳು ಕೃತಿ ಓದುಗರನ್ನು ಆಧ್ಯಾತ್ಮಿಕ ಚಿಂತನೆಗಳ ದಾರಿಯಲ್ಲಿ ಸಾಗಿಸುವ ದೀಪದಂತಿದೆ.
ಕರಾವಳಿಯ ನಂಬಿಕೆಗಳು, ದೈವಸಂಸ್ಕೃತಿ ಮತ್ತು ಮಾನವ ಬದುಕಿನ ಅಂತರಂಗವನ್ನು ಅವರು ಅದ್ಭುತವಾಗಿ ಹೆಣೆದಿದ್ದಾರೆ. ಧರ್ಮ ಮತ್ತು ಜೀವನದ ನಿಜವಾದ ಅರ್ಥವನ್ನು ಹುಡುಕುವ ಈ ಕೃತಿ, ಓದುಗರ ಮನದಲ್ಲಿ ಶಾಂತಿ, ಭಕ್ತಿ ಮತ್ತು ಚಿಂತನೆಗೆ ಸ್ಪೂರ್ತಿ ನೀಡುತ್ತದೆ.

ಲೇಖಕಿ ದೇವರು ಎಷ್ಟು ನಿಜವೋ ಅಷ್ಟೇ ನಿಜ ದೈವಗಳು ಎಂಬ ಸತ್ಯವನ್ನು ನಾಜೂಕಾಗಿ ಅನಾವರಣಗೊಳಿಸಿದ್ದಾರೆ. ಪ್ರತಿಯೊಬ್ಬ ಮಾನವನ ಬದುಕು ಅರ್ಥಪೂರ್ಣವಾಗಬೇಕೆಂಬ ಸಂದೇಶವನ್ನು ಈ ಕೃತಿ ನಿಜವಾದ ಭಾವದೊಂದಿಗೆ ಸಾರುತ್ತದೆ. ಮೌಲ್ಯಗಳು ಕ್ಷೀಣಿಸುತ್ತಿರುವ ಇಂದಿನ ಯುಗದಲ್ಲಿ, ಕರಾವಳಿಯ ಸಾವಿರದೊಂದು ದೈವಗಳು ಓದುಗರಿಗೆ ಆತ್ಮಶಾಂತಿ ಮತ್ತು ಧಾರ್ಮಿಕ ಪ್ರಜ್ಞೆಯ ಹೊಸ ಬೆಳಕನ್ನು ತರುತ್ತದೆ.- ಶಾಂಭವಿ ಧರಣೀಶ್ 

No comments:

Post a Comment