Sunday, 10 December 2023

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಧೀರೇನ್ ಅವರೊಂದಿಗೆವ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಪದ್ಮನಾಭ ಕೊಳಕೆ


 

ಕರಾವಳಿಯ ಸಾವಿರದೊಂದು ದೈವಗಳು: ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹ ನಿರ್ದೇಶಕರಾದ ಸಿ ಎಲ್ ಶೈಲಜಾ ಅವರೊಂದಿಗೆ

 

ಡಾ.ಲಕ್ಷ್ಮೀ ಜಿ ಪ್ರಸಾದರು ಕನ್ನಡ,ಸಂಸ್ಕೃತ,ಹಿಂದಿ ಈ ಮೂರು ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು,ತುಳು ಸಂಸ್ಕೃತಿ ಕುರಿತು ಎಂಫಿಲ್ ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಗಳಿಸಿದ್ದು  ಸಾಹಿತ್ಯ ಸಂಸ್ಕೃತಿ ಕುರಿತು ಅಪಾರ ಕಾಳಜಿಯನ್ನು ಹೊಂದಿದ್ದಾರೆ.ತುಳು ನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂಬ ಬಗ್ಗೆ ಅಧ್ಯಯನ ಮಾಡಿ ಕಾರವಾರದಿಂದ ಕಣ್ಣನ್ನೂರು ತನಕ ಆರಾದನೆ ಪಡೆವ  ಸಾವಿರದ ಇನ್ನೂರ ಏಳು ದೈವ ಮಾಹಿತಿ ಸಂಗ್ರಹಿಸಿ,ಕರಾವಳಿಯಲ್ಲಿ ಸಾವಿರಕ್ಕಿಂತ ಹೆಚ್ಚು ದೈವಗಳಿಗೆ ಆರಾಧನೆ ಇದೆ ಎಂಬ ಸ್ಪಷ್ಟ ಉತ್ತರ ನೀಡಿದ್ದಾರೆ .

ಮೊದಲಿಗೆ ಅವರ ಮನೆಯಲ್ಲಿ ಆರಾಧನೆಗೊಳ್ಳುವ ದೈವಗಳ ಅಧ್ಯಯನ‌ ಶುರುಮಾಡಿ ನಿರಂತರ ಇಪ್ಪತ್ತೊಂದು ವರ್ಷಗಳ ಕಾಲ ಸಂಶೋಧನೆ ಮಾಡಿ ಪುರುಷರೂ ಮಾಡಲು ಹಿಂದೇಟು ಹಾಕುವ ಕಾರ್ಯವನ್ನು   ಏಕಾಂಗಿಯಾಗಿ ಹೆಣ್ಣಿಗೆ  ಅಸಾಧ್ಯವೆನಿಸುವ   ಕಾರ್ಯವವನ್ನು ಮಾಡಿ   ಇತರರಿಗಿಂತ ಭಿನ್ನವೆನಿಸಿಕೊಂಡಿದ್ದಾರೆ.

 

ನೆಲ ,ಜಲ ಭಾಷೆ ನಮ್ಮದೆಂದು ಭಾವಿಸಿಕೊಂಡು ಸತ್ವ ಗುಣಗಳನ್ನು ಒಲಿಸಿಕೊಂಡು ವಾಸ್ತವಿಕತೆಯ ನೆಲಗಟ್ಟಿನಲ್ಲಿ ತುಳುನಾಡಿನ ದೈವಗಳ ವಿಸ್ಮಯ  ಜಗತ್ತನ್ನು ತೆರೆದಿಟ್ಟಿದ್ದಾರೆ

 

ಉತ್ಸಾಹ ಮತ್ತು ಉಲ್ಲಾಸದಿಂದ ಹಾಡುವ ಹಕ್ಕಿಯಂತೆ ಸದಾ ಕ್ರಿಯಾ ಶೀಲತೆಯಲ್ಲಿ ಸಂಭ್ರಮಿಸುವ ಇವರದು ಸೂಕ್ಷ್ಮ ಮನಸ್ಸು,ತೆರೆದ ಹೃದಯವಂತಿಕೆ,ಜೀವನೋತ್ಸಾಹ ಇವರ ವ್ಯಕ್ತಿತ್ವದ ಮೂಲ ಸೆಲೆಯಾಗಿದೆ ,

ವ್ಯವಹಾರ,ವೃತ್ತಿ ಪರಿಣತಿ ,ಆಚಾರ ವಿಚಾರ,ಜ್ಞಾನ ಮುಂತಾದವುಗಳನ್ನೆಲ್ಲ‌ ಅರಳಿಸಿಕೊಡುವ ಹಾಗೂ ಜಗತ್ತಿಗೆ ಪರಿಣಾಮಕಾರಿಯಾಗಿ ತಿಳಿಸಿಕೊಡುವ ಕಾರ್ಯ ಮಾಡಿದ್ದಾರೆ‌.ಈ ನಿಟ್ಟಿನಲ್ಲಿ ಇವರ ಕಾರ್ಯೋತ್ಸಾಹ ಮೆಚ್ಚುವಂತಹದ್ದು.

 

ವೃತ್ತಿ ಪರ ಸವಾಲುಗಳನ್ನು ಎದುರಿಸಿ,ಆರೋಗ್ಯ ಸಮಸ್ಯೆಗಳನ್ನು ಮೆಟ್ಟಿ ನಿಂತು ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ,ಸದಾ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಾ ,ಅಧ್ಯಯನ ,ಅಧ್ಯಾಪನ ಬರವಣಿಗೆ ಎಲ್ಲ‌ವನ್ನೂ ಹೊಂದಾಣಿಕೆ ಮಾಡಿ  ಬದುಕು ಸಾಗಿಸುತ್ತಿದ್ದಾರೆ.ಈ  ಬಹುಮುಖಿ‌ ಪ್ರತಿಭೆಯ ಹೂವನ್ನು ದೇವರು ಸದಾ ಹರ್ಷದಲ್ಲಿಟ್ಟಿರಲಿ ಎಂದು ಹಾರೈಸುತ್ತೇನೆ

ಶ್ರಿಮತಿ ಸಿ ಎಲ್  ಶೈಲಜಾ

ಉಪನಿರ್ದೇಶಕರು( ಪರೀಕ್ಷಾ ವಿಭಾಗ)

ಪದವಿ ಪೂರ್ವ ಶಿಕ್ಷಣ ಇಲಾಖೆ

ಕರ್ನಾಟಕ ರಾಜ್ಯ


ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಖ್ಯಾತ ಚಿತ್ರ ಕಲಾವಿದರಾದ ಚಿತ್ರಮಿತ್ರ ಮತ್ತು ಅನು ಪಾವಂಜೆ ದಂಪತಿಗಳು


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಚೇತನ್ ಕುಮಾರ್ ಪೂರ್ಣಿಮಾ ದಂಪತಿಗಳೊಂದಿಗೆ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಡಾ.ಆಶಾ ಅಭಿಕಾರ್ ಅವರೊಂದಿಗೆವ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಗಣೇಶ್ ಬೆಂಗಳೂರು