Tuesday, 10 February 2026

250 ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು : ಡಾ.ಉದಯ ಕುಮಾರ್ ನೂಜಿ‌

 


ನಮ್ಮ‌ ಪ್ರೀತಿಯ ಡಾ.ಉದಯ ಕುಮಾರ್ ಭಟ್  ಸಾಯಿ ನಿಕೇತನ ದೈಗೋಳಿ 

Nooji Udaya Kumar

Sai Nikethan Sevashram Daigoli 


 ಸಾಯಿ ಬಾಬಾರ ಅನನ್ಯ ಭಕ್ತರಾದ ನಮ್ಮ ಊರಿನ ನೂಜಿ  ಡಾ.ಉದಯ ಕುಮಾರ್ ಮತ್ತು ಶಾರದಕ್ಕ ದಂಪತಿಗಳ ಸೇವೆ ಅನನ್ಯವಾದುದು 


ಎಲ್ಲೆಲ್ಲೋ ದಾರಿಯಲ್ಲಿ ಅನಾಥರಂತೆ ಬಿದ್ದವರನ್ನು ಕರೆ ತಂದು ಚಿಕಿತ್ಸೆ ಕೊಟ್ಟು  ಅವರ ಮನೆ ಮಂದಿಯನ್ನು ಪತ್ತೆ ಮಾಡಿ ಅವರಿಗೆ ತಲುಪಿಸುವ ಬಗ್ಗೆ ನೋಡುತ್ತಲೇ ಇದ್ದೇನೆ

ಇನ್ನು ಅನಾಥರಾಗಿರುವ ನೂರಾರು ಮಂದಿಗೆ ಆಶ್ರಯ ನೀಡಿದ್ದಾರೆ.

ಇದೀಗ  ತೀರ ಅಶಕ್ತರಾದವರ ಪುನಶ್ಚೇತನಕ್ಕೆ ಆರೈಕೆಗಾಗಿ ಯೋಜನೆ ಹಾಕಿದ್ದು ಕಟ್ಟಡ ನಿರ್ಮಾಣ ಆಗುತ್ತಿದೆ ಜೊತೆಗೆ ಗೋ ಧಾಮ ಕೂಡ ಇದೆ 


ಇಂಥಹ ಮಹತ್ಕಾರ್ಯ ಒಬ್ಬ ಮನುಷ್ಯನಿಗೆ ಸಾಧ್ಯವಾಗುವದ್ದಲ್ಲ.ಅದಕ್ಕೆ ದೈವ ಪ್ರೇರಣೆ ಇರಲೇಬೇಕು.ಆ ಶಕ್ತಿ ಅವರು ನಂಬುವ ಸಾಯಿ ಬಾಬಾರೇ ನೀಡಿದ್ದು ಇರಬಹುದು ಎಂದು ನನಗೆ  ಅನಿಸಿದೆ ,


ದೇವರಿಗೆ ಎಲ್ಲರನ್ನು ನೋಡಿಕೊಳ್ಳಲು ಆಗುವುದಿಲ್ಲ ಅದಕ್ಕಾಗಿ ಅಲ್ಲಲ್ಲಿ ತನ್ನವರನ್ನು ನೇಮಿಸುತ್ತಾನಂತೆ


ನಮ್ಮ ಊರಿನ ಡಾ.ಉದಯ ಕುಮಾರ್ ಶಾರದಕ್ಕ ಈ ರೀತಿ ಸೇವೆಗಾಗಿ ದೇವರಿಂದ ನೇಮಿಸಲ್ಪಟ್ಟವರು


ಇಂದಿನ ಕಾಲದಲ್ಲಿ ಅವರವರ ತಂದೆ ತಾಯಿಯರನ್ನೇ ನೋಡಿ ಕೊಳ್ಳುದು ಕಷ್ಟದಲ್ಲಿ, ವಯಸ್ಸಾದ ಮೇಲೆ ಇವರು ಭಾರ ಎಂದೇ ಮಕ್ಕಳಿಗೆ ಭಾಸವಾಗುತ್ತದೆ.


ಅಂತಹದ್ದರಲ್ಲಿ ಯಾರ್ಯಾರೋ ದಾರಿಯಲ್ಲಿ ಬಿದ್ದವರನ್ನು ತಂದು ಆರೈಕೆ ಮಾಡುದೆಂದರೆ ಸಾಮಾನ್ಯ ವಿಚಾರವಲ್ಲ


ದೇವರು ಮಾಡುವ ಕೆಲಸವನ್ನು ಮನುಷ್ಯ ಮಾಡಿದರೆ ಆ ಮನುಷ್ಯ ಕೂಡ ದೇವರೇ ಎಂಬುದು ನನ್ನ ದೃಢವಾದ ನಿಲುವು..


ಹಾಗಾಗಿ ನನಗೆ ನಮ್ಮ ಊರಿನ ಉದಯ ಡಾಕ್ಟರ್ ಮತ್ತು ಶಾರದಾ ಡಾಕ್ಟರ್ ಬಗ್ಗೆ ವಿಶೇಷ ಅಭಿಮಾನ .ಇವರಿಂದಾಗಿ ನಮ್ಮ ಊರಿಗೆ ಒಂದು ಶೋಭೆ ಬಂದಿದೆ

ಕಳೆದ ವಾರ ಒಬ್ಬರು ಮೆಸೇಜ್ ಮಾಡಿ ಪುಸ್ತಕ ಬೇಕೆಂದಾಗ ಎಲ್ಲರಿಗೆ ಕಳುಹಿಸುವಂತೆ ವಿವರ ಕಳುಹಿಸಿದ್ದೆ

ಅವರು ಪೇ ಮಾಡಿ ಅಡ್ರೆಸ್ ಕೊಟ್ಟಾಗಲೇ ಇವರ ನಮ್ಮ ಉದಯ ಡಾಕ್ಟರ್ ಎಂದು ತಲೆಗೆ ಹೋದದ್ದು

ಸಾಮಾನ್ಯವಾಗಿ ಹವ್ಯಕರಿಗೆ ಭೂತಾರಾದನೆ ಬಗ್ಗೆ ಹೆಚ್ಚು ಆಸಕ್ತಿ ಇರುವುದು ಕಡಿಮೆ.

ಹಾಗಾಗಿ ಡಾ.ಉದಯ ಕುಮಾರ್ ಅವರು ಓದಲು ಆಶಿಸಿ ಪುಸ್ತಕಕ್ಕೆ ಆರ್ಡರ್ ಮಾಡಿದಾಗ ತುಸು ಅಚ್ಚರಿಯೂ ಆಯಿತು.


ನನ್ನ ಊರಿನಲ್ಲಿ ಕರೆಯುವ ನನ್ನ ಹೆಸರು ವಿದ್ಯಾ ಎಂದು‌ ಹಾಗಾಗಿ ನಮ್ಮ ಊರಿನ ಹೆಚ್ಚಿನವರಿಗೆ ನನಗೆ ಲಕ್ಷ್ಮೀ ಎಂಬ ಹೆಸರಿದೆ ಡಾ.ಲಕ್ಷ್ಮೀ ಜಿ ಪ್ರಸಾದ್ ಎಂದರೆ ನಾನು ಎಂದು ಗೊತ್ತಿಲ್ಲ.

.ಮುಖ ಪರಿಚಯ ಇರುವುದೂ ಸಂಶಯ ಯಾಕೆಂದರೆ ಚಿಕ್ಕಂದಿನಲ್ಲಿ ನಾನು ಅಜ್ಜನ ಮನೆಯಲ್ಲಿ ಬೆಳೆದೆ ನಂತರ ಹಾಸ್ಟೆಲ್ ನ ಓದು ,ದ್ವಿತೀಯ ವರ್ಷ ಬಿಎಸ್ಸಿ ಓದುತ್ತಿರುವಾಗಲೇ ಮದುವೆಯಾಗಿ ಊರಿಂದ ಹೊರಗಿನವಳಾದೆ 

ನಂತರವೂ ನಾನು ನನ್ನ ಓದು ಅಧ್ಯಯನದಲ್ಲಿ ಮುಳುಗಿದೆ.ಒಂದಷ್ಟು ಸಮಸ್ಯೆಗಳೂ ಬೆನ್ನತ್ತಿದವು.ಹಾಗಾಗಿ ಊರಿನ ಉಪನಯನ ಮದುವೆ ಮೊದಲಾದ  ಕಾರ್ಯಕ್ರಮಗಳಿಗೆ ಹೋದದ್ದೇ ತೀರ ಕಡಿಮೆ ಅಲ್ಲದೇ ನನಗೆ ಮಾತು ಕಡಿಮೆ ಇತ್ತು . ಈಗಿನಂತೆ ವಾಚಾಳಿ ಆಗಿರಲಿಲ್ಲ ಹಾಗಾಗಿ ನಮ್ಮ ಊರಲ್ಲಿ ಬಂಧು ಬಳಗದಲ್ಲಿ ಕೂಡ ನಾನು ಹೆಚ್ಚು ಪರಿಚಿತಳಲ್ಲ


ಹಾಗಾಗಿ ನೂಜಿ ಡಾ.ಉದಯ ಕುಮಾರ್ ಅವರಿಗೆ ನನ್ನ ಪರಿಚಯ ಇರಲಾದೆಂದು ಭಾವಿಸಿದ್ದೆ.ಈಗ್ಗೆ ಒಂದು ವರ್ಷದ ಮೊದಲು ಯಾವುದೊ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದಾಗ ಅವರಿಗೆ ನನ್ನ ಪರಿಚಯ ಇರುದು ತಿಳಿದಿತ್ತು


ಆದರೆ ನನ್ನ ತುಳು ಸಂಸ್ಕೃತಿ ಭೂತಾರಾಧನೆ / ದೈವಾರಾಧನೆ ಬಗ್ಗೆ ಆಸಕ್ತಿ ಇರಬಹುದು ಎಂದು ನುಜಕೆ ಯೋಚಿಸಿರಲಿಲ್ಲ

ಅವರು ನನ್ನ ಅಧ್ಯಯನ ಗ್ರಂಥ

ಕರಾವಳಿಯ ಸಾವಿರದೊಂದು ದೈವಗಳು ಅನ್ನು ಓದಲು ಆಶಿಸಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ..

ಧನ್ಯವಾದಗಳು ಸರ್

No comments:

Post a Comment