Monday, 10 March 2025

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ರಾಧಾಕೃಷ್ಣ ಉಳಿಯತ್ತಡ್ಕ,ಹಿರಿಯ ವಿದ್ವಾಂಸರು ,


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ನಮಗೆ ಅತ್ಯಪರೂಪದ ದೆಸಿಲು ಮತ್ತು ಕಿಲಮರಿತ್ತಾಯ ದೈವಗಳ ಚಂದದ ಫೋಟೋ ಒದಗಿಸಿದ್ದಲ್ಲದೆ ನಿರಂತರ ಬೆಂಬಲ ನೀಡುತ್ತಿರುವ ಗೋಪು ಗೋಖಲೆ ಶಿಶಿಲ,ಛಾಯಾಗ್ರಾಹಕರು


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ಕೇದಿಗೆ ಅರವಿಂದ ರಾವ್


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು -ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ - ಡಾ.ಲಕ್ಷ್ಮೀ ಜಿ ಪ್ರಸಾದ್ ಸಾವಿರದೊಂದು ದೈವಗಳು ಡಾ.ಅರವಿಂದ್ ಎನ್ ಪಿ ಸಿರ್ಸಿ


 

Sunday, 9 March 2025

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕಕ್ಕೆ ಯಾವುದೇ ಅಪೇಕ್ಷೆ ಇಲ್ಲದೆ ಬಹಳ ಪ್ರೀತಿ ಅಭಿಮಾನದಿಂದ ಮುಖಪುಟ ವಿನ್ಯಾಸ ಮಾಡಿ ಕೊಟ್ಟ ಶ್ರೀವತ್ಸ ಪಿವಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಇವರು ಕಳೆದ ವರ್ಷ ಪ್ರಕಟಿತ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ತಗೊಂಡಿದ್ದು ಸೆಲ್ಫಿನಲ್ಲಿ ಚಂದಕ್ಕೆ ಜೋಡಿಸಿಟ್ಟಿರುವಲ್ಲಿ ಅವರ ಪುಸ್ತಕ ಪ್ರೀತಿ ಅಭಿಮಾನ ಎದ್ದು ಕಾಣ್ತಿದೆ


 

ನಮ್ಮ ಹೆಮ್ಮೆಯ ಓದುಗರು ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು: ದಯಾನಂದಸ್ವಾಮಿ ಬಿಎಂಎಸ್

 ನನ್ನ  ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು


ಪುಸ್ತಕದ ಬಗ್ಗೆ ಎರಡು ಒಳ್ಳೆ ಮಾತು ಬರೆದು ಶುಭ ಹಾರೈಸಿದ ನಮ್ಮ‌ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದಯಾನಂದ ಸ್ವಾಮಿ ಬಿ ಎಂ ಎಸ್ ಅವರಿಗೆ ಇಂದು ಪುಸ್ತಕದ ಪ್ರತಿ ನೀಡಿದೆ 


ತಮ್ಮ ಸಹೋದ್ಯೋಗಿಗಳ ಏಳಿಗೆಯನ್ನು ಬಹುತೇಕರು ಸಹಿಸುವುದಿಲ್ಲ.ಮತ್ಸರದಿಂದ  ಬಹಳಷ್ಟು ಕಿರುಕುಳ ಕೊಡುವ ಮೇಲಧಿಕಾರಿಗಳು ಅನೇಕರಿದ್ದಾರೆ ..ಕೆಲವರು ಕಿರುಕುಳ ಕೊಡದೆ ಸುಮ್ಮನಿರುವವರೂ ಇರಬಹುದು.ಆದರೆ ಬೆಂಬಲ ಕೊಡುವವರು ಬಹಳ ಅಪರೂಪಕ್ಕೆ ಸಿಗುತ್ತಾರೆ.ಈ ನಿಟ್ಟಿನಲ್ಲಿ ನಿಮ್ಮ ಕಾಲೇಜು ಪ್ರಾಂಶುಪಾಲರು ಅಭಿನಂದನಾರ್ಹರು ಎಂದು ನನ್ನ ಪುಸ್ತಕದಲ್ಲಿ ಇವರ ಮಾತನ್ನು ಓದಿದ ಈ ಪುಸ್ತಕ ಬಿಡುಗಡೆ ಮಾಡಿದ್ದ ಡಾ.ಈಶ್ವರ ದೈತೋಟರು ಹೇಳಿದ್ದರು

ಇದು ನಿಜಕ್ಕೂ ನೂರಕ್ಕೆ ನೂರರಷ್ಟು ಸತ್ಯದ ಮಾತು..


ನಾನೇ ಸ್ವತಃ ಬೆಳ್ಳಾರೆ ಕಾಲೇಜಿನಲ್ಲಿದ್ದಾಗ  ಪ್ರಿನ್ಸಿಪಾಲರಾಗಿದ್ದ ಈಗ ದಿವಂಗತರಾಗಿರುವ ಸುಬ್ರಾಯ ಗೌಡರಿಂದ ದ್ವೇಷ ಮತ್ಸರದ ಜಾತಿ ಬೇಧ ಲಿಂಗ ತಾರತಮ್ಯದ ಬಿಸಿಯನ್ನು ಅನುಭವಿಸಿದ್ದೆನಲ್ಲ..


ಇಂಥಹವರ ನಡುವೆ ನಮ್ಮ‌ಬ್ಯಾಟರಾಯನಪುರ ಕಾಲೇಜಿನ ದಯಾನಂದ ಸ್ವಾಮಿಯಂಥಹವರು ನಿಜಕ್ಕೂ ವಿಶಿಷ್ಟರೆನಿಸುತ್ತಾರೆ..


ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ಭಡ್ತಿಪಡೆದು ಈಗ ನಮ್ಮ‌ಪದವಿ ಪೂರ್ವ ಶಿಕ್ಷಣ ಇಲಾಖೆಯ  ಸಹ ನಿರ್ದೇಶಕರಾಗಿರುವ ಶೈಲಜಾ ಮೇಡಂ ಅವರು ಕೂಡ ನನಗೆ ತುಂಬು ಬೆಂಬಲವನ್ನು ನೀಡಿದ್ದನ್ನು ಕೂಡ ನಾನೆಂದಿಗೂ ಮರೆಯಲಾರೆ

ನಮ್ಮ ಹೆಮ್ಮೆಯ ಓದುಗರು # ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು- ರಾಘು ಪೂಜಾರಿ ಕಲ್ಮಂಜೆ

 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

# ಮಾಯ ಮತ್ತು ಜೋಗದ ಬೆಳಕಿನಲ್ಲಿ  ಕರಾವಳಿಯ ಸಾವಿರದೊಂದು ದೈವಗಳು



 

ನಮ್ಮ ಆತ್ಮೀಯರಾದ ಸುಭಾಶ್ ಅವರು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ಮಜೂರು ಗರೊಡಿಯ ಕೋಟಿ ಭೈದ್ಯರ ಪಾತ್ರಿಯಾಗಿರುವ ಹಿರಿಯರಾದ ರಾಘು ಪೂಜಾರಿ‌ ಕಲ್ಮಂಜೆಯವರಿಗೆ ಕಾಣಿಕೆಯಾಗಿ ನೀಡಿದ್ದಾರೆ .ಕಲ್ಕುಡ ದೈವದ ಮಧ್ಯಸ್ಥರೂ ಆಗಿರುವ  ಈ ಪುಸ್ತಕವನ್ನು ಮೆಚ್ಚಿದ ರಾಘು ಪೂಜಾರಿಯವರ ಅಂತರಂಗದ ಒಲುಮೆಯ ಮಾತುಗಳನ್ನು ಇಲ್ಲಿ ಕೇಳಬಹುದು ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು