Sunday, 9 March 2025

ನಮ್ಮ ಹೆಮ್ಮೆಯ ಓದುಗರು ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು: ದಯಾನಂದಸ್ವಾಮಿ ಬಿಎಂಎಸ್

 ನನ್ನ  ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು


ಪುಸ್ತಕದ ಬಗ್ಗೆ ಎರಡು ಒಳ್ಳೆ ಮಾತು ಬರೆದು ಶುಭ ಹಾರೈಸಿದ ನಮ್ಮ‌ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದಯಾನಂದ ಸ್ವಾಮಿ ಬಿ ಎಂ ಎಸ್ ಅವರಿಗೆ ಇಂದು ಪುಸ್ತಕದ ಪ್ರತಿ ನೀಡಿದೆ 


ತಮ್ಮ ಸಹೋದ್ಯೋಗಿಗಳ ಏಳಿಗೆಯನ್ನು ಬಹುತೇಕರು ಸಹಿಸುವುದಿಲ್ಲ.ಮತ್ಸರದಿಂದ  ಬಹಳಷ್ಟು ಕಿರುಕುಳ ಕೊಡುವ ಮೇಲಧಿಕಾರಿಗಳು ಅನೇಕರಿದ್ದಾರೆ ..ಕೆಲವರು ಕಿರುಕುಳ ಕೊಡದೆ ಸುಮ್ಮನಿರುವವರೂ ಇರಬಹುದು.ಆದರೆ ಬೆಂಬಲ ಕೊಡುವವರು ಬಹಳ ಅಪರೂಪಕ್ಕೆ ಸಿಗುತ್ತಾರೆ.ಈ ನಿಟ್ಟಿನಲ್ಲಿ ನಿಮ್ಮ ಕಾಲೇಜು ಪ್ರಾಂಶುಪಾಲರು ಅಭಿನಂದನಾರ್ಹರು ಎಂದು ನನ್ನ ಪುಸ್ತಕದಲ್ಲಿ ಇವರ ಮಾತನ್ನು ಓದಿದ ಈ ಪುಸ್ತಕ ಬಿಡುಗಡೆ ಮಾಡಿದ್ದ ಡಾ.ಈಶ್ವರ ದೈತೋಟರು ಹೇಳಿದ್ದರು

ಇದು ನಿಜಕ್ಕೂ ನೂರಕ್ಕೆ ನೂರರಷ್ಟು ಸತ್ಯದ ಮಾತು..


ನಾನೇ ಸ್ವತಃ ಬೆಳ್ಳಾರೆ ಕಾಲೇಜಿನಲ್ಲಿದ್ದಾಗ  ಪ್ರಿನ್ಸಿಪಾಲರಾಗಿದ್ದ ಈಗ ದಿವಂಗತರಾಗಿರುವ ಸುಬ್ರಾಯ ಗೌಡರಿಂದ ದ್ವೇಷ ಮತ್ಸರದ ಜಾತಿ ಬೇಧ ಲಿಂಗ ತಾರತಮ್ಯದ ಬಿಸಿಯನ್ನು ಅನುಭವಿಸಿದ್ದೆನಲ್ಲ..


ಇಂಥಹವರ ನಡುವೆ ನಮ್ಮ‌ಬ್ಯಾಟರಾಯನಪುರ ಕಾಲೇಜಿನ ದಯಾನಂದ ಸ್ವಾಮಿಯಂಥಹವರು ನಿಜಕ್ಕೂ ವಿಶಿಷ್ಟರೆನಿಸುತ್ತಾರೆ..


ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ಭಡ್ತಿಪಡೆದು ಈಗ ನಮ್ಮ‌ಪದವಿ ಪೂರ್ವ ಶಿಕ್ಷಣ ಇಲಾಖೆಯ  ಸಹ ನಿರ್ದೇಶಕರಾಗಿರುವ ಶೈಲಜಾ ಮೇಡಂ ಅವರು ಕೂಡ ನನಗೆ ತುಂಬು ಬೆಂಬಲವನ್ನು ನೀಡಿದ್ದನ್ನು ಕೂಡ ನಾನೆಂದಿಗೂ ಮರೆಯಲಾರೆ

No comments:

Post a Comment