ಕರಾವಳಿಯ ಸಾವಿರದೊಂದು ದೈವಗಳು -ಡಾ.ಲಕ್ಷ್ಮೀ ಜಿ ಪ್ರಸಾದ್,ಮೊಬೈಲ್ 9480516684 ತುಳುನಾಡಿನ ಭೂತಾರಾಧನೆ/ ಭೂತ ಕೋಲ/ ದೈವಾರಾಧನೆ ಬಗ್ಗೆ ಮಾಹಿತಿಗಾಗಿ ಡಾ..ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 Information about bhootaradhane daivas of Tulunadu
Tuesday, 28 October 2025
195 ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು : ಸುರೇಶ್ ಕೊಡಗು ದೈವಾರಾಧಕರು : ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684
ಮಾಯ ಮತ್ತು ಜೋಗದ ಬೆಳಕಿನಲ್ಲಿ, ಕರಾವಳಿಯ ಸಾವಿರದೊಂದು ದೈವಗಳು ಈ ಅದ್ಬುತ ಪುಸ್ತಕವನ್ನು ಅಧ್ಯಯನ ಮಾಡಿ ತುಂಬಾ ಭಯ ಭಕ್ತಿ ಶ್ರದ್ಧೆಯಿಂದ ಶ್ರಮ ಪಟ್ಟು ಪುಸ್ತಕ ಮಿತ್ರರಿಗೆ ಅರ್ಪಿಸಿದ ಡಾ: ಲಕ್ಷ್ಮೀ ಜಿ ಪ್ರಸಾದ್ ರವರಿಗೆ ಹೃದಯ ತುಂಬಿದ ಧನ್ಯವಾದಗಳು, ಇನ್ನೂ ಹಲವಾರು ಪುಸ್ತಕಗಳು ನಿಮ್ಮಿಂದ ರಚನೆಯಾಗಲಿ ಎಂದು ಆಶಿಸುತ್ತೇನೆ, ನಾವು ನಂಬುವಂತಹ ದೈವ ದೇವರುಗಳು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.- ಸುರೇಶ್ ದೈವಾರಾಧಕರು,ಅಣ್ಣಪ್ಪ ಪಂಜುರ್ಲಿ ಪಾಷಾಣ ಮೂರ್ತಿ ದೈವ ಸ್ಥಾನ Heggala ಕೊಡಗು
Monday, 27 October 2025
194 ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು : ಅಮೃತ್ ಭಟ್ ಶಿವಮೊಗ್ಗ : ಕರಾವಳಿಯ ಸಾವಿರದೊಂದು ದೈವಗಳು
ಡಾ.ಲಕ್ಷ್ಮೀ ಜಿ ಪ್ರಸಾದ್ ಇವರ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಎನ್ನುವಂತಹ ಗ್ರಂಥ ಬರಿಯ ಗ್ರಂಥವಲ್ಲ ಇದೊಂದು ತುಳುನಾಡಿನ ಉಸಿರಾದ ಕಾರಣಿಕ ದೈವಗಳ ತಿಳಿಯ ಹೊರಟ ಎಲ್ಲಾ ಜಿಜ್ಞಾಸುಗಳಿಗೆ ಪವಿತ್ರ ದೀವಟಿಕೆ. ನ ಭೂತೋ ನ ಭವಿಷ್ಯತಿ ಎನ್ನುವಂತೆ ಹಿಂದೆ ಯಾರೂ ಮಾಡಿದ್ದಿಲ್ಲ ಮುಂದೆ ಯಾರು ಬಹುಶಃ ಇಂತಹ ಸಾಹಸ ಕಾರ್ಯ ಮಾಡಲಾರರು. ಈ ಗ್ರಂಥದಲ್ಲಿ ತುಳುನಾಡಿನಲ್ಲಿ ಹುಟ್ಟಿ ಮೆರೆದು ದೈವತ್ವಕ್ಕೇರಿದ ಅನೇಕ ಮಹಾಪುರುಷರ ಮತ್ತು ಸ್ತ್ರೀಯರ ಕಥಾನಕಗಳಿವೆ, ಪುಸ್ತಕ ತೆರೆದಷ್ಟು ಅನೇಕ ಆಶ್ಚರ್ಯಗಳಿವೆ. ಇಂತಹ ಹತ್ತು ಹಲವು ಮಾಹಿತಿಗಳನ್ನು ಒಳಗೊಂಡ ಈ ಗ್ರಂಥ ತುಳುನಾಡಿನ ದಾರಿದೀಪ ಎಂದರೆ ತಪ್ಪಾಗಲಾರದು. ಈ ಮಹತ್ಕಾರ್ಯವನ್ನು ತಪಸ್ಸೆನ್ನುವಂತೆ ಪುಸ್ತಕ ರೂಪವಾಗಿ ನೀಡಿದ ಡಾ. ಲಕ್ಷ್ಮೀ ಜಿ ಪ್ರಸಾದ್ ಇವರಿಂದ ಇನ್ನೂ ಹತ್ತು ಹಲವು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ನಾವು ಹಾರೈಸುತಿದ್ದೇವೆ.- ಅಮೃತ್ ಭಟ್ ಶಿವಮೊಗ್ಗ
193 ನಮ್ಮಹೆಮ್ನೆಯ ಪುಸ್ತಕ ಮಿತ್ರರು : ಪ್ರಜ್ಞೇಶ್ : ಕರಾವಳಿಯ ಸಾವಿರದೊಂದು ದೈವಗಳು
ನಾನು “KOLA” ಎಂಬ ಡಾಕ್ಯುಮೆಂಟರಿ ನೋಡುತ್ತಿದ್ದಾಗ, ನೀವು ಅದರ ಬಗ್ಗೆ ವಿವರಿಸುತ್ತಿದ್ದುದು ಮತ್ತು ಪುಸ್ತಕದ ಕುರಿತೂ ಹೇಳಿದ್ದೀರಿ. ಆ ಡಾಕ್ಯುಮೆಂಟರಿಯಲ್ಲಿ ಕೊರಗಜ್ಜನ ಜನ್ಮಸ್ಥಳ ಹಾಗು ಇತರೆ ಕಥೆ ನಡೆದದು ಮುಳ್ಕಿಬೆಟ್ಟು/ಮೂಲ್ಕೋಟು ಎಂದು ಉಲ್ಲೇಖಿಸಿದೆ . ನಾವು ಕೂಡ ಬಾರ್ಕೆ ಮನೆಯವರು (ಮುಳ್ಕಿಬೆಟ್ಟು /ಮೂಲ್ಕೋಟು ಬಾರ್ಕೆ). ಕುತೂಹಲದಿಂದ ನಾನು ಆ ಪುಸ್ತಕವನ್ನು ಖರೀದಿಸಿ, ಕೆಲವು ಪುಟಗಳನ್ನು ಓದಿದ್ದೇನೆ — ತುಂಬಾ ಆಸಕ್ತಿದಾಯಕವಾಗಿದೆ. ನಮ್ಮಂತಹವರಿಗೆ ಆ ವಿಷಯವನ್ನು ಸುಲಭವಾಗಿ ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಮ್ಯಾಡಮ್.-ಪ್ರಜ್ಞೇಶ್
189 ನಮ್ಮಹೆಮ್ಮೆಯ ಪುಸ್ತಕ ಮಿತ್ರರು ಶ್ರೀ ಟಿ ಕೆ ಶೆಣೈ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್
86 ವಯಸ್ಸಿನ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಹಿರಿಯರಾದ ಟಿ ಕೆ ಶೆಣೈ ಅವರು ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಪುಸ್ತಕವನ್ನು ಓದಿರುವುದು ನಿಜಕ್ಕೂ ಹೆಮ್ಮೆಯ ವಿಷಯ
https://laxmipras.blogspot.com/2025/10/189.html?m=1
Subscribe to:
Comments (Atom)

 





