Monday, 27 October 2025

194 ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು : ಅಮೃತ್ ಭಟ್ ಶಿವಮೊಗ್ಗ : ಕರಾವಳಿಯ ಸಾವಿರದೊಂದು ದೈವಗಳು


 ಡಾ.ಲಕ್ಷ್ಮೀ ಜಿ ಪ್ರಸಾದ್ ಇವರ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಎನ್ನುವಂತಹ ಗ್ರಂಥ ಬರಿಯ ಗ್ರಂಥವಲ್ಲ ಇದೊಂದು ತುಳುನಾಡಿನ ಉಸಿರಾದ ಕಾರಣಿಕ  ದೈವಗಳ ತಿಳಿಯ ಹೊರಟ ಎಲ್ಲಾ ಜಿಜ್ಞಾಸುಗಳಿಗೆ ಪವಿತ್ರ ದೀವಟಿಕೆ. ನ ಭೂತೋ ನ ಭವಿಷ್ಯತಿ ಎನ್ನುವಂತೆ ಹಿಂದೆ ಯಾರೂ ಮಾಡಿದ್ದಿಲ್ಲ ಮುಂದೆ ಯಾರು ಬಹುಶಃ ಇಂತಹ ಸಾಹಸ ಕಾರ್ಯ ಮಾಡಲಾರರು. ಈ ಗ್ರಂಥದಲ್ಲಿ ತುಳುನಾಡಿನಲ್ಲಿ ಹುಟ್ಟಿ ಮೆರೆದು ದೈವತ್ವಕ್ಕೇರಿದ ಅನೇಕ ಮಹಾಪುರುಷರ ಮತ್ತು ಸ್ತ್ರೀಯರ ಕಥಾನಕಗಳಿವೆ, ಪುಸ್ತಕ ತೆರೆದಷ್ಟು ಅನೇಕ ಆಶ್ಚರ್ಯಗಳಿವೆ. ಇಂತಹ ಹತ್ತು ಹಲವು ಮಾಹಿತಿಗಳನ್ನು ಒಳಗೊಂಡ ಈ ಗ್ರಂಥ ತುಳುನಾಡಿನ ದಾರಿದೀಪ ಎಂದರೆ ತಪ್ಪಾಗಲಾರದು. ಈ ಮಹತ್ಕಾರ್ಯವನ್ನು ತಪಸ್ಸೆನ್ನುವಂತೆ ಪುಸ್ತಕ ರೂಪವಾಗಿ ನೀಡಿದ ಡಾ. ಲಕ್ಷ್ಮೀ ಜಿ ಪ್ರಸಾದ್ ಇವರಿಂದ ಇನ್ನೂ ಹತ್ತು ಹಲವು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ನಾವು ಹಾರೈಸುತಿದ್ದೇವೆ.- ಅಮೃತ್ ಭಟ್ ಶಿವಮೊಗ್ಗ

No comments:

Post a Comment