Tuesday, 28 October 2025

197 ನಮ್ಮ ಹೆಮ್ಮೆಯ ಪುಸ್ತಕ‌ಮಿತ್ರರು: ಡಾ. ರಾಜೇಶ್ ರಾವ್ ಕೆಳರ್ಕಳಬೆಟ್ಟು ಉಡುಪಿ : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ಹುಡುಕುವ ಬಳ್ಳಿ ಕಾಲಿಗೆ ಎಡರಿದಂತೆ ನಿಮ್ಮ ಪುಸ್ತಕವು ಬಹಳ ಚೆನ್ನಾಗಿದೆ ನಮಗೆ ಉಪಯುಕ್ತವಾದ ಮಾಹಿತಿ ಇದರಿಂದ ಸಿಕ್ಕಿದೆ ಇದರ ಪ್ರಸ್ತಾವನೆ ಬಾರಿ ಒಳ್ಳೆ ರೀತಿಯಲ್ಲಿ ಬಂದಿದೆ ನಮಗೆ ಬಹಳ ಉಪಯುಕ್ತವಾದ ಮಾಹಿತಿ ನಾವು ಬಹಳ ಸಮಯದಿಂದ ಈ ಪುಸ್ತಕಕ್ಕಾಗಿ ಹುಡುಕ್ತಾ ಇದ್ದೆವು  ಡಾಕ್ಟರ್ ಉಪಾಧ್ಯಾಯರು ತೀರಿ ಹೋದ ಬಳಿಕ ನಮಗೆ ದೈವಗಳ ಬಗ್ಗೆ ಮಾಹಿತಿ ಕೊಡುವವರು ಯಾರು ಇರಲಿಲ್ಲ. ನಿಮ್ಮಿಂದ ಇಂತಹ ಇನ್ನೂ ಅನೇಕ ಕೃತಿಗಳು ಬರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ- ಡಾ

ರಾಜೇಶ್ ರಾವ್ ಕೆಳರ್ಕಳಬೆಟ್ಟು ಉಡುಪಿ 

195 ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು : ಸುರೇಶ್ ಕೊಡಗು ದೈವಾರಾಧಕರು : ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ಮಾಯ ಮತ್ತು ಜೋಗದ ಬೆಳಕಿನಲ್ಲಿ, ಕರಾವಳಿಯ ಸಾವಿರದೊಂದು ದೈವಗಳು ಈ ಅದ್ಬುತ ಪುಸ್ತಕವನ್ನು ಅಧ್ಯಯನ ಮಾಡಿ ತುಂಬಾ ಭಯ ಭಕ್ತಿ  ಶ್ರದ್ಧೆಯಿಂದ ಶ್ರಮ ಪಟ್ಟು ಪುಸ್ತಕ ಮಿತ್ರರಿಗೆ ಅರ್ಪಿಸಿದ ಡಾ: ಲಕ್ಷ್ಮೀ ಜಿ ಪ್ರಸಾದ್ ರವರಿಗೆ ಹೃದಯ ತುಂಬಿದ ಧನ್ಯವಾದಗಳು, ಇನ್ನೂ ಹಲವಾರು ಪುಸ್ತಕಗಳು ನಿಮ್ಮಿಂದ ರಚನೆಯಾಗಲಿ ಎಂದು ಆಶಿಸುತ್ತೇನೆ, ನಾವು ನಂಬುವಂತಹ ದೈವ ದೇವರುಗಳು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.- ಸುರೇಶ್ ದೈವಾರಾಧಕರು,ಅಣ್ಣಪ್ಪ ಪಂಜುರ್ಲಿ ಪಾಷಾಣ ಮೂರ್ತಿ ದೈವ ಸ್ಥಾನ Heggala  ಕೊಡಗು 

Monday, 27 October 2025

194 ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು : ಅಮೃತ್ ಭಟ್ ಶಿವಮೊಗ್ಗ : ಕರಾವಳಿಯ ಸಾವಿರದೊಂದು ದೈವಗಳು


 ಡಾ.ಲಕ್ಷ್ಮೀ ಜಿ ಪ್ರಸಾದ್ ಇವರ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಎನ್ನುವಂತಹ ಗ್ರಂಥ ಬರಿಯ ಗ್ರಂಥವಲ್ಲ ಇದೊಂದು ತುಳುನಾಡಿನ ಉಸಿರಾದ ಕಾರಣಿಕ  ದೈವಗಳ ತಿಳಿಯ ಹೊರಟ ಎಲ್ಲಾ ಜಿಜ್ಞಾಸುಗಳಿಗೆ ಪವಿತ್ರ ದೀವಟಿಕೆ. ನ ಭೂತೋ ನ ಭವಿಷ್ಯತಿ ಎನ್ನುವಂತೆ ಹಿಂದೆ ಯಾರೂ ಮಾಡಿದ್ದಿಲ್ಲ ಮುಂದೆ ಯಾರು ಬಹುಶಃ ಇಂತಹ ಸಾಹಸ ಕಾರ್ಯ ಮಾಡಲಾರರು. ಈ ಗ್ರಂಥದಲ್ಲಿ ತುಳುನಾಡಿನಲ್ಲಿ ಹುಟ್ಟಿ ಮೆರೆದು ದೈವತ್ವಕ್ಕೇರಿದ ಅನೇಕ ಮಹಾಪುರುಷರ ಮತ್ತು ಸ್ತ್ರೀಯರ ಕಥಾನಕಗಳಿವೆ, ಪುಸ್ತಕ ತೆರೆದಷ್ಟು ಅನೇಕ ಆಶ್ಚರ್ಯಗಳಿವೆ. ಇಂತಹ ಹತ್ತು ಹಲವು ಮಾಹಿತಿಗಳನ್ನು ಒಳಗೊಂಡ ಈ ಗ್ರಂಥ ತುಳುನಾಡಿನ ದಾರಿದೀಪ ಎಂದರೆ ತಪ್ಪಾಗಲಾರದು. ಈ ಮಹತ್ಕಾರ್ಯವನ್ನು ತಪಸ್ಸೆನ್ನುವಂತೆ ಪುಸ್ತಕ ರೂಪವಾಗಿ ನೀಡಿದ ಡಾ. ಲಕ್ಷ್ಮೀ ಜಿ ಪ್ರಸಾದ್ ಇವರಿಂದ ಇನ್ನೂ ಹತ್ತು ಹಲವು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ನಾವು ಹಾರೈಸುತಿದ್ದೇವೆ.- ಅಮೃತ್ ಭಟ್ ಶಿವಮೊಗ್ಗ

193 ನಮ್ಮ‌ಹೆಮ್ನೆಯ ಪುಸ್ತಕ ಮಿತ್ರರು : ಪ್ರಜ್ಞೇಶ್ : ಕರಾವಳಿಯ ಸಾವಿರದೊಂದು ದೈವಗಳು


 ನಾನು “KOLA” ಎಂಬ ಡಾಕ್ಯುಮೆಂಟರಿ ನೋಡುತ್ತಿದ್ದಾಗ, ನೀವು ಅದರ ಬಗ್ಗೆ ವಿವರಿಸುತ್ತಿದ್ದುದು ಮತ್ತು ಪುಸ್ತಕದ ಕುರಿತೂ ಹೇಳಿದ್ದೀರಿ. ಆ ಡಾಕ್ಯುಮೆಂಟರಿಯಲ್ಲಿ ಕೊರಗಜ್ಜನ ಜನ್ಮಸ್ಥಳ ಹಾಗು ಇತರೆ ಕಥೆ ನಡೆದದು ಮುಳ್ಕಿಬೆಟ್ಟು/ಮೂಲ್ಕೋಟು ಎಂದು ಉಲ್ಲೇಖಿಸಿದೆ . ನಾವು ಕೂಡ ಬಾರ್ಕೆ ಮನೆಯವರು (ಮುಳ್ಕಿಬೆಟ್ಟು /ಮೂಲ್ಕೋಟು ಬಾರ್ಕೆ). ಕುತೂಹಲದಿಂದ ನಾನು ಆ ಪುಸ್ತಕವನ್ನು ಖರೀದಿಸಿ, ಕೆಲವು ಪುಟಗಳನ್ನು ಓದಿದ್ದೇನೆ — ತುಂಬಾ ಆಸಕ್ತಿದಾಯಕವಾಗಿದೆ. ನಮ್ಮಂತಹವರಿಗೆ ಆ ವಿಷಯವನ್ನು ಸುಲಭವಾಗಿ ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಮ್ಯಾಡಮ್.-ಪ್ರಜ್ಞೇಶ್ 

192 ನಮ್ಮ ಹೆಮ್ಮೆಯ ಪುಸ್ತಕ‌ಮಿತ್ರರು : ಯಶಸ್ವಿ ಪಿಎನ್ ಬೆಂಗಳೂರು : ಕರಾವಳಿಯ ಸಾವಿರದೊಂದು ದೈವಗಳು


 

191 ನಮ್ಮ ಹೆಮ್ಮೆಯ ಓದುಗ ಮಿತ್ರರು : ಶಿವ ಪ್ರಸಾದ್ ಬಿ ಬಬ್ಬಿಲಿ ಪುತ್ತೂರು : ಕರಾವಳಿಯ ಸಾವಿರದೊಂದು ದೈವಗಳು


 

190 ನಮ್ಮ ಪ್ರೀತಿಯ ಪುಸ್ತಕ‌ ಮಿತ್ರರು : ಎಸ್ ಬಿ ಐ ಬ್ಯಾಂಕ್ ಉದ್ಯೋಗಿಗಳಾಗಿರುವ ಶ್ರೀಮತಿ ಉಷಾ ಸತ್ಯನಾರಾಯಣ ಭಟ್ : ಕರಾವಳಿಯ ಸಾವಿರದೊಂದು ದೈವಗಳು