ಕರಾವಳಿಯ ಸಾವಿರದೊಂದು ದೈವಗಳು -ಡಾ.ಲಕ್ಷ್ಮೀ ಜಿ ಪ್ರಸಾದ್,ಮೊಬೈಲ್ 9480516684 ತುಳುನಾಡಿನ ಭೂತಾರಾಧನೆ/ ಭೂತ ಕೋಲ/ ದೈವಾರಾಧನೆ ಬಗ್ಗೆ ಮಾಹಿತಿಗಾಗಿ ಡಾ..ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 Information about bhootaradhane daivas of Tulunadu
Thursday, 30 October 2025
Wednesday, 29 October 2025
Tuesday, 28 October 2025
197 ನಮ್ಮ ಹೆಮ್ಮೆಯ ಪುಸ್ತಕಮಿತ್ರರು: ಡಾ.ಸುದರ್ಶನ ಚಿಪ್ಲುನ್ಕರ್ : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684
ಶ್ರೀಮತೀ ಡಾ.ಲಕ್ಷ್ಮೀ ಜಿ. ಪ್ರಸಾದ್ ರವರ ಸಂಶೋಧನಾ ಪರಿಶ್ರಮದ ಫಲವಾಗಿ, ಸಾರಸ್ವತ ಕುಸುಮಾಂಜಲಿಯಾಗಿ ಮೂಡಿಬಂದ *ಕರಾವಳಿಯ ಸಾವಿರದೊಂದು ದೈವಗಳು* ಅನ್ನುವ ಉದ್ಗ್ರಂಥವು ಸರಸ್ವತೀ ಸಮಾರಾಧಕರಿಗೊಂದು ಅತ್ಯಮೂಲ್ಯ ಪ್ರಸಾದ. ನನ್ನ ಅನಿಸಿಕೆಯ ಪ್ರಕಾರ ದೇವರು, ದೈವಗಳು ಇತ್ಯಾದಿಯಾಗಿ ಎಲ್ಲವೂ ನಮ್ಮ ಜೊತೆಯಾಗಿದ್ದು ನಮ್ಮನ್ನು ಪೊರೆಯುವ ಒಂದು ಅಲೌಕಿಕ ಶಕ್ತಿ. ಈ ಕೆಲವೊಂದಷ್ಟು ವಿಚಾರಗಳಲ್ಲಿ ಯಾಕೆ? ಏನು? ಹೇಗೆ ಇತ್ಯಾದಿ ತರ್ಕ ವಿತರ್ಕಗಳು ಅನುಚಿತ. ಭಾರತೀಯರ ಭಾವತಂತುವೇ ಈ ಶಕ್ತಿಯ ವಿರಾಟ್ ಸ್ವರೂಪದ ಮೂಲಾಧಾರ. ಈ ಶಕ್ತಿಯ ಆರಾಧನೆಯಲ್ಲಿ ಸಗುಣಾರಾಧನೆ ಹಾಗೂ ನಿರ್ಗುಣಾರಾಧನೆ ಎಂಬೆರಡು ಪ್ರಧಾನ ಮಾರ್ಗಗಳು. ಇವೆರಡರಲ್ಲಿ ಹೆಚ್ಚಿನವರು ಆಶ್ರಯಿಸುವುದು ಸಗುಣಾರಾಧನೆಯನ್ನು. ವೇದಮೂಲವಾಗಿ ಹೊರಹೊಮ್ಮಿದ ಪುರಾಣಾದಿ ಅನೇಕ ವಾಙ್ಮಯಗಳ ಮೂಲಕ ಶ್ರೀರಾಮ, ಕೃಷ್ಣರೇ ಮೊದಲಾದ ದೇವತೆಗಳನ್ನು ವಿಗ್ರಹರೂಪವಾಗಿಯೋ ಚಿತ್ರರೂಪವಾಗಿಯೋ ತಮ್ಮದೇ ನೆಲೆಯಲ್ಲಿ ಕಂಡುಕೊಳ್ಳುವ ಕಲೆ ಭಾರತೀಯರಾದ ನಮಗೆ ಸಹಜಸಿದ್ಧ. ಆದರೆ ಪ್ರಾಂತೀಯವಾಗಿ ಅಸ್ತಿತ್ವದಲ್ಲಿರುವ, ನಿತ್ಯಸತ್ಯವಾದ ದೈವಗಳ ಪ್ರಪಂಚವು ನೆಲೆಯಾಗಿರುವುದು ಸತ್ಯ, ಧರ್ಮ, ನ್ಯಾಯ, ನೀತಿಗಳ ಮೂಲಕವಾಗಿ. ಪೂರ್ಣಪ್ರಮಾಣದ ಸಗುಣಾರಾಧನೆಯೂ ಇಲ್ಲದೆ ನಿರ್ಗುಣಾರಾಧನೆಯೂ ಆಗಿರದೆ ದೈವಗಳು ಆರಾಧ್ಯವಾಗಿರುವುದು ಅನುಭವವೇದ್ಯ. ಹಾಗಾಗಿ ಕಾಲ ಬದಲಾದಂತೆ ದೈವಗಳ ಕುರಿತಾಗಿ ಪ್ರಶ್ನೆ ಎತ್ತುವುದು ದೂರದ ಮಾತಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚಿನವರು ಜೀವನೋಪಾಯಗಳನ್ನು ಕಂಡುಕೊಳ್ಳುತ್ತಾ ದೂರದೂರುಗಳನ್ನು ಸೇರಿಕೊಂಡಾಗ ದೈವಾರಾಧನೆಯು ತಮ್ಮ ಮೂಲಸ್ಥಾನದಲ್ಲಿ ಮಾತ್ರವೇ ಆರಾಧನೆಯಾಗಿ ಉಳಿದಾಗ ಸಹಜವಾಗಿಯೇ ಮುಂದಿನ ತಲೆಮಾರಿಗೆ ದೈವಗಳ ಸತ್ತ್ವ, ಚೌಕಟ್ಟುಗಳು ಅಜ್ಞಾತವಾಗಿಯೇ ಉಳಿಯುವುದರಲ್ಲಿ ಆಶ್ಚರ್ಯವಿಲ್ಲ. ಆ ನಿಟ್ಟಿನಲ್ಲಿ ಮುಂದಿನ ತಲೆಮಾರಿಗೆ ಈ ಉದ್ಗ್ರಂಥವು ದಾರಿದೀಪ! ಸತ್ಯ, ಧರ್ಮಗಳಲ್ಲಿ ನಡೆದು ದೈವಗಳ ಸ್ವರೂಪ ಸಾಕ್ಷಾತ್ಕಾರಗೊಳಿಸುವಲ್ಲಿ ಅತ್ಯಮೂಲ್ಯ ಕಾಣಿಕೆ!
✍🏻 *ಡಾ.ಎಂ.ಸುದರ್ಶನ ಚಿಪಳೂಣಕರ್, ಮಾವಿನಮಲೆ, ದುರ್ಗ, ಕಾರ್ಕಳ*
*ಅಸೋಸಿಯೇಟ್ ಪ್ರೊಫೆಸರ್, ಚಿನ್ಮಯ ವಿಶ್ವವಿದ್ಯಾಪೀಠ, ಕೇರಳ*
197 ನಮ್ಮ ಹೆಮ್ಮೆಯ ಪುಸ್ತಕಮಿತ್ರರು: ಡಾ. ರಾಜೇಶ್ ರಾವ್ ಕೆಳರ್ಕಳಬೆಟ್ಟು ಉಡುಪಿ : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684
ಹುಡುಕುವ ಬಳ್ಳಿ ಕಾಲಿಗೆ ಎಡರಿದಂತೆ ನಿಮ್ಮ ಪುಸ್ತಕವು ಬಹಳ ಚೆನ್ನಾಗಿದೆ ನಮಗೆ ಉಪಯುಕ್ತವಾದ ಮಾಹಿತಿ ಇದರಿಂದ ಸಿಕ್ಕಿದೆ ಇದರ ಪ್ರಸ್ತಾವನೆ ಬಾರಿ ಒಳ್ಳೆ ರೀತಿಯಲ್ಲಿ ಬಂದಿದೆ ನಮಗೆ ಬಹಳ ಉಪಯುಕ್ತವಾದ ಮಾಹಿತಿ ನಾವು ಬಹಳ ಸಮಯದಿಂದ ಈ ಪುಸ್ತಕಕ್ಕಾಗಿ ಹುಡುಕ್ತಾ ಇದ್ದೆವು ಡಾಕ್ಟರ್ ಉಪಾಧ್ಯಾಯರು ತೀರಿ ಹೋದ ಬಳಿಕ ನಮಗೆ ದೈವಗಳ ಬಗ್ಗೆ ಮಾಹಿತಿ ಕೊಡುವವರು ಯಾರು ಇರಲಿಲ್ಲ. ನಿಮ್ಮಿಂದ ಇಂತಹ ಇನ್ನೂ ಅನೇಕ ಕೃತಿಗಳು ಬರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ- ಡಾ
ರಾಜೇಶ್ ರಾವ್ ಕೆಳರ್ಕಳಬೆಟ್ಟು ಉಡುಪಿ
195 ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು : ಸುರೇಶ್ ಕೊಡಗು ದೈವಾರಾಧಕರು : ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684
ಮಾಯ ಮತ್ತು ಜೋಗದ ಬೆಳಕಿನಲ್ಲಿ, ಕರಾವಳಿಯ ಸಾವಿರದೊಂದು ದೈವಗಳು ಈ ಅದ್ಬುತ ಪುಸ್ತಕವನ್ನು ಅಧ್ಯಯನ ಮಾಡಿ ತುಂಬಾ ಭಯ ಭಕ್ತಿ ಶ್ರದ್ಧೆಯಿಂದ ಶ್ರಮ ಪಟ್ಟು ಪುಸ್ತಕ ಮಿತ್ರರಿಗೆ ಅರ್ಪಿಸಿದ ಡಾ: ಲಕ್ಷ್ಮೀ ಜಿ ಪ್ರಸಾದ್ ರವರಿಗೆ ಹೃದಯ ತುಂಬಿದ ಧನ್ಯವಾದಗಳು, ಇನ್ನೂ ಹಲವಾರು ಪುಸ್ತಕಗಳು ನಿಮ್ಮಿಂದ ರಚನೆಯಾಗಲಿ ಎಂದು ಆಶಿಸುತ್ತೇನೆ, ನಾವು ನಂಬುವಂತಹ ದೈವ ದೇವರುಗಳು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.- ಸುರೇಶ್ ದೈವಾರಾಧಕರು,ಅಣ್ಣಪ್ಪ ಪಂಜುರ್ಲಿ ಪಾಷಾಣ ಮೂರ್ತಿ ದೈವ ಸ್ಥಾನ Heggala ಕೊಡಗು
Monday, 27 October 2025
194 ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು : ಅಮೃತ್ ಭಟ್ ಶಿವಮೊಗ್ಗ : ಕರಾವಳಿಯ ಸಾವಿರದೊಂದು ದೈವಗಳು
ಡಾ.ಲಕ್ಷ್ಮೀ ಜಿ ಪ್ರಸಾದ್ ಇವರ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಎನ್ನುವಂತಹ ಗ್ರಂಥ ಬರಿಯ ಗ್ರಂಥವಲ್ಲ ಇದೊಂದು ತುಳುನಾಡಿನ ಉಸಿರಾದ ಕಾರಣಿಕ ದೈವಗಳ ತಿಳಿಯ ಹೊರಟ ಎಲ್ಲಾ ಜಿಜ್ಞಾಸುಗಳಿಗೆ ಪವಿತ್ರ ದೀವಟಿಕೆ. ನ ಭೂತೋ ನ ಭವಿಷ್ಯತಿ ಎನ್ನುವಂತೆ ಹಿಂದೆ ಯಾರೂ ಮಾಡಿದ್ದಿಲ್ಲ ಮುಂದೆ ಯಾರು ಬಹುಶಃ ಇಂತಹ ಸಾಹಸ ಕಾರ್ಯ ಮಾಡಲಾರರು. ಈ ಗ್ರಂಥದಲ್ಲಿ ತುಳುನಾಡಿನಲ್ಲಿ ಹುಟ್ಟಿ ಮೆರೆದು ದೈವತ್ವಕ್ಕೇರಿದ ಅನೇಕ ಮಹಾಪುರುಷರ ಮತ್ತು ಸ್ತ್ರೀಯರ ಕಥಾನಕಗಳಿವೆ, ಪುಸ್ತಕ ತೆರೆದಷ್ಟು ಅನೇಕ ಆಶ್ಚರ್ಯಗಳಿವೆ. ಇಂತಹ ಹತ್ತು ಹಲವು ಮಾಹಿತಿಗಳನ್ನು ಒಳಗೊಂಡ ಈ ಗ್ರಂಥ ತುಳುನಾಡಿನ ದಾರಿದೀಪ ಎಂದರೆ ತಪ್ಪಾಗಲಾರದು. ಈ ಮಹತ್ಕಾರ್ಯವನ್ನು ತಪಸ್ಸೆನ್ನುವಂತೆ ಪುಸ್ತಕ ರೂಪವಾಗಿ ನೀಡಿದ ಡಾ. ಲಕ್ಷ್ಮೀ ಜಿ ಪ್ರಸಾದ್ ಇವರಿಂದ ಇನ್ನೂ ಹತ್ತು ಹಲವು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ನಾವು ಹಾರೈಸುತಿದ್ದೇವೆ.- ಅಮೃತ್ ಭಟ್ ಶಿವಮೊಗ್ಗ
Subscribe to:
Comments (Atom)






